ರಥಸಪ್ತಮಿ (ಚಲನಚಿತ್ರ)
ಗೋಚರ
| ರಥಸಪ್ತಮಿ (ಚಲನಚಿತ್ರ) | |
|---|---|
| ರಥಸಪ್ತಮಿ | |
| ನಿರ್ದೇಶನ | ಎಂ.ಎಸ್.ರಾಜಶೇಖರ್ |
| ನಿರ್ಮಾಪಕ | ಎಸ್.ಎ.ಗೋವಿಂದರಾಜು |
| ಕಥೆ | ವಿದ್ಯುಲ್ಲತ ಸಾಸನೂರ್ |
| ಸಂಭಾಷಣೆ | ಚಿ.ಉದಯಶಂಕರ್ |
| ಪಾತ್ರವರ್ಗ | ಶಿವರಾಜಕುಮಾರ್ ಆಶಾರಾಣಿ ಅರವಿಂದ್, ಚಿ.ರವಿಶಂಕರ್, ಶ್ರೀನಾಥ್, ರೂಪಾದೇವಿ |
| ಸಂಗೀತ | ಉಪೇಂದ್ರಕುಮಾರ್ |
| ಛಾಯಾಗ್ರಹಣ | ವಿ.ಕೆ.ಕಣ್ಣನ್ |
| ಬಿಡುಗಡೆಯಾಗಿದ್ದು | ೧೯೮೬ |
| ಚಿತ್ರ ನಿರ್ಮಾಣ ಸಂಸ್ಥೆ | ಭಗವತಿ ಕಂಬೈನ್ಸ್ |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮೇಶ್, ವಾಣಿ ಜಯರಾಂ |
| ಇತರೆ ಮಾಹಿತಿ | ಕಾದಂಬರಿಗಾರ್ತಿ ವಿದ್ಯುಲ್ಲತ ಸಾಸನೂರ್ |
ರಥಸಪ್ತಮಿ ೧೯೮೬ರಲ್ಲಿ ಬಿಡುಗಡೆಯಾದ, ಎಂ.ಎಸ್.ರಾಜಶೇಖರ್ ನಿರ್ದೇಶನದ ಪ್ರೇಮಕಥಾ ಹಂದರದ ಚಿತ್ರ. ಎಸ್.ಎ.ಗೋವಿಂದರಾಜು ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ನಾಯಕರಾಗಿ ಶಿವರಾಜಕುಮಾರ್ ಮತ್ತು ನಾಯಕಿಯಾಗಿ ಆಶಾರಾಣಿ ಅಭಿನಯಿಸಿದ್ದಾರೆ.ಈ ಚಿತ್ರ ಕರ್ನಾಟಕ ರಾಜ್ಯಾದ್ಯಂತ ಯಶಸ್ವಿ ೨೫ ವಾರಗಳ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತು.