ವಿಷಯಕ್ಕೆ ಹೋಗು

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 2004

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ವಿಧಾನ ಸಭೆ ಚುನಾವಣೆಗಳು
2004
ಭಾರತ
1999ಏಪ್ರಿಲ್ 20, 2004
ಏಪ್ರಿಲ್ 26, 2004
2008
ಎಲ್ಲಾ ವಿಧಾನಸಭಾ ಸ್ಥಾನಗಳಿಗೂ ಚುನಾವಣೆ
ಮೊದಲನೆಯ ಪಕ್ಷಎರಡನೆಯ ಪಕ್ಷಮೂರನೆಯ ಪಕ್ಷ
ನಾಯಕಬಿ.ಎಸ್. ಯಡಿಯೂರಪ್ಪಎಸ್ ಎಮ್ ಕೃಷ್ಣಸಿದ್ದರಾಮಯ್ಯ
ಪಕ್ಷ ಭಾಜಪಕಾಂಗ್ರೆಸ್ಜೆಡಿ (ಎಸ್)
ನಾಯಕನ ಕ್ಷೇತ್ರಶಿಕಾರಿಪುರಚಾಮರಾಜಪೇಟೆಚಾಮುಂಡೇಶ್ವರಿ
ಹಿಂದಿನ ಸ್ಥಾನಗಳು4413210
ಈಗ ಗೆದ್ದ ಸ್ಥಾನಗಳು796558
ಸ್ಥಾನ ಬದಲಾವಣೆIncrease35Decrease67Increase48
ಹಿಂದಿನ ಮುಖ್ಯಮಂತ್ರಿಚುನಾಯಿತ ಮುಖ್ಯಮಂತ್ರಿ
ಎಸ್ ಎಮ್ ಕೃಷ್ಣಧರಮ್ ಸಿಂಗ್

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 2004 ಏಪ್ರಿಲ್ 20 ಮತ್ತು ಏಪ್ರಿಲ್ 26, 2004ರಂದು ಎಲ್ಲಾ 224 ಕ್ಷೇತ್ರಗಳಿಗೂ ನಡೆಯಿತು ಮತ್ತು ಪಲಿತಾಂಶಗಳನ್ನು ಮೇ 13, 2004ರ ಎಣಿಕೆಯ ನಂತರ ಪ್ರಕಟಿಸಲಾಯಿತು. ಯಾವ ಪಕ್ಷಕ್ಕೂ ಸರಕಾರ ರಚಿಸಲು ಅಗತ್ಯ ಬಹುಮತ ಬರಲಿಲ್ಲ. ಭಾರತೀಯ ಜನತಾ ಪಕ್ಷ 79 ಸ್ಥಾನಗಳನ್ನು ಗಳಿಸುವ ಮೂಲಕ ಸ್ಥಾನಗಳಿಕೆಯಲ್ಲಿ ಮೊದಲು, 65 ಸ್ಥಾನ ಗಳಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎರಡನೆಯ ಸ್ಥಾನದಲ್ಲಿಯೂ ಮತ್ತು 58 ಸ್ಥಾನ ಗಳಿಸಿದ ಜನತಾ ದಳ (ಜಾತ್ಯಾತೀತ) ಮೂರನೆಯ ಸ್ಥಾನವನ್ನೂ ಪಡೆದವು. ಕರ್ನಾಟಕದ ಇತಿಹಾಸದಲ್ಲಿ ಮೊದಲ ಸಮಿಶ್ರ ಸರಕಾರ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಜನತಾ ದಳ (ಎಸ್) ನಡುವೆ ಏರ್ಪಟ್ಟು ಧರಮ್ ಸಿಂಗ್ 28 ಮೇ. 2004ರಂದು ಮುಖ್ಯಮಂತ್ರಿಯಾದರು.

ಪಕ್ಷಗಳು ಗಳಿಸಿದ ಸ್ಥಾನಗಳು ಮತ್ತು ಶೇಕಡವಾರು ಮತ

[ಬದಲಾಯಿಸಿ]

ಪಡೆದ ಸ್ಥಾನಗಳಲ್ಲಿ ಭಾಜಪ ಮುಂದಿದ್ದರೆ ಪಡೆದ ಶೇಕಡವಾರು ಮತಗಳಲ್ಲಿ ಕಾಂಗ್ರೆಸ್ ಮುಂದಿದೆ. ಹಿಂದಿನ ವಿಧಾನ ಸಭೆ ಚುನಾವಣೆಗಳಿಗೆ ಹೋಲಿಸಿದರೆ ಭಾಜಪ ಮತ್ತು ಜೆಡಿ (ಎಸ್) ತಮ್ಮ ಸ್ಥಾನಗಳನ್ನು ಹೆಚ್ಚಿಸಿಕೊಂಡರೆ ಕಾಂಗ್ರೆಸ್‌ನ ಸ್ಥಾನಗಳು ಕಡಿಮೆಯಾಗಿವೆ.

ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳುಸ್ಪರ್ದಿಸಿದ
ಸ್ಥಾನಗಳು
ಗೆಲುವುಠೇವಣಿ ನಷ್ಟಒಟ್ಟಾರೆ ಮತಗಳುಶೇಕಡವಾರು
ಮತಗಳು
ಭಾರತೀಯ ಜನತಾ ಪಕ್ಷ19879427 118 65828.33
ಭಾರತ ರಾಷ್ಟ್ರೀಯ ಕಾಂಗ್ರೆಸ್2246578 861 95935.27
ಜನತಾ ದಳ (ಜಾತ್ಯಾತೀತ)220581045 220 12120.77
ಜನತಾ ದಳ (ಯು)26914517 9042.06
ಕನ್ನಡ ನಾಡು ಪಕ್ಷ1881187330 5471.32
ಸಿಪಿಐ (ಎಂ)51392 0810.37
ಕನ್ನಡ ಚಳುವಳಿ ವಾಟಾಳ್ ಪಕ್ಷ51438 6870.15
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ31225 3790.10
ಬಹುಜನ ಸಮಾಜ ಪಕ್ಷ1020100437 5641.74
ಒಟ್ಟು ಇತರ ಪಕ್ಷಗಳು3070297761 6863.03
ಪಕ್ಷೇತರರು442134051724 4806.86
ಮೊತ್ತ1715224116525 129 066100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ನಂತರದ ಬೆಳವಣಿಗೆಗಳು

[ಬದಲಾಯಿಸಿ]

42 ವಿಧಾನ ಸಭಾ ಸದಸ್ಯರೊಂದಿಗೆ ಸಮಿಶ್ರ ಸರಕಾರದಿಂದ ಹೆಚ್ ಡಿ ಕುಮಾರಸ್ವಾಮಿ ಹೊರನಡೆಯುವದರೊಂದಿಗೆ ಧರಮ್ ಸಿಂಗ್ ನೇತೃತ್ವದ ಸರಕಾರ ಬೀಳುತ್ತದೆ. ರಾಜ್ಯಪಾಲ ಟಿ ಎನ್ ಚತುರ್ವೇದಿಯವರು ಹೆಚ್ ಡಿ ಕುಮಾರಸ್ವಾಮಿಯನ್ನು ತಾ 28 ಜನವರಿ, 2006ರಕ್ಕೆ ಆಹ್ವಾನಿಸುತ್ತಾರೆ. ಭಾಜಪ ಮತ್ತು ಜೆಡಿ(ಎಸ್) ನಡುವಿನ ಒಪ್ಪದವೇರ್ಪಟ್ಟು ಹೆಚ್‌ ಡಿ ಕುಮಾರಸ್ವಾಮಿ 4 ಫೆಬ್ರವರಿ, 2006 ರಿಂದ 9 ಅಕ್ಟೋಬರ್, 2007ರ ವರೆಗೂ ಮುಖ್ಯಮಂತ್ರಿಯಾಗುತ್ತಾರೆ. ಆದರೆ ಅವರ ಅವಧಿಯ 20 ತಿಂಗಳ ನಂತರ ಅಧಿಕಾರ ವರ್ಗಾವಣೆಗೆ ನಿರಾಕರಿಸುತ್ತಾರೆ. ನಂತರದಲ್ಲಿ ಮತ್ತೆ ಭಾಜಪದೊಂದಿಗೆ ಒಪ್ಪಂದಕ್ಕೆ ಬಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೂ ಅಧಿಕಾರ ಹಂಚಿಕೆಯ ಭಿನ್ನಾಭಿಪ್ರಾಯದಲ್ಲಿ ಜೆಡಿ (ಎಸ್) ಮತ್ತೆ ಬೆಂಬಲ ವಾಪಾಸು ಪಡೆಯುತ್ತದೆ.