ಕರುಣ್ ನಾಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರುಣ್ ನಾಯರ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಕರುಣ್ ಕಲಾಧರನ್ ನಾಯರ್
ಹುಟ್ಟು (1991-12-06) ೬ ಡಿಸೆಂಬರ್ ೧೯೯೧ (ವಯಸ್ಸು ೩೨)
ಜೋಧಪುರ, ರಾಜಸ್ಥಾನ, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಆಫ್ ಬ್ರೇಕ್
ಪಾತ್ರಬ್ಯಾಟ್ಸ್ಮನ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೨೮೭)೨೬ ನವೆಂಬರ್ ೨೦೧೬ v ಇಂಗ್ಲೆಂಡ್
ಕೊನೆಯ ಟೆಸ್ಟ್೨೫ ಮಾರ್ಚ್ ೨೦೧೭ v ಆಸ್ಟ್ರೇಲಿಯಾ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೨೧೨)೧೧ ಜೂನ್ ೨೦೧೬ v ಜಿಂಬಾಬ್ವೆ
ಕೊನೆಯ ಅಂ. ಏಕದಿನ​೧೩ ಜೂನ್ ೨೦೧೬ v ಜಿಂಬಾಬ್ವೆ
ಅಂ. ಏಕದಿನ​ ಅಂಗಿ ನಂ.೬೯
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೧೨-ಇಂದಿನವರೆಗೆಕರ್ನಾಟಕ
೨೦೧೨-೧೩ರಾಯಲ್ ಚಾಲೆಂಜರ್ಸ್ ಬೆಂಗಳೂರು (squad no. ೬೯)
೨೦೧೪-೧೫ರಾಜಸ್ಥಾನ ರಾಯಲ್ಸ್ (squad no. ೬೯)
೨೦೧೬-೧೭ಡೆಲ್ಲಿ ಡೇರ್ ಡೇವಿಲ್ಸ್ (squad no. ೬೯)
೨೦೧೮-ಇಂದಿನವರೆಗೆಕಿಂಗ್ಸ್ ಇಲೆವೆನ್ ಪಂಜಾಬ್ (squad no. ೬೯)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ಓಡಿಐ ಎಫ್ ಸಿ ಎಲ್ ಎ
ಪಂದ್ಯಗಳು ೪೧ ೪೯
ಗಳಿಸಿದ ರನ್ಗಳು ೩೭೪ ೪೬ ೩,೩೯೧ ೧,೩೫೮
ಬ್ಯಾಟಿಂಗ್ ಸರಾಸರಿ ೬೨.೩೩ ೨೩.೦೦ ೫೫.೦೧ ೩೬.೨೦
೧೦೦/೫೦ ೧/೦ ೦/೦ ೯/೧೩ ೧/೯
ಉನ್ನತ ಸ್ಕೋರ್ ೩೦೩* ೩೯ ೩೨೮ ೧೨೦
ಎಸೆತಗಳು ೧೨ ೮೯೧ ೬೨೪
ವಿಕೆಟ್‌ಗಳು ೧೨
ಬೌಲಿಂಗ್ ಸರಾಸರಿ ೫೭.೫೦ ೪೨.೩೩
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ n/a n/a
ಉನ್ನತ ಬೌಲಿಂಗ್ ೨/೧೧ ೨/೧೬
ಹಿಡಿತಗಳು/ ಸ್ಟಂಪಿಂಗ್‌ ೩/– ೦/– ೨೯/– ೧೬/–
ಮೂಲ: ESPNCricinfo, ೧ ಜೂನ್ ೨೦೧೭

ಕರುಣ್ ಕಲಾಧರಣ ನಾಯರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಮದ್ಯ ಕ್ರಮಾಂಕದ ಬ್ಯಾಟ್ಸಮಾನ್ ಹಾಗು ಬಲಗೈ ಆಫ್ ಸ್ಪಿನ್ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ಕರ್ನಾಟಕ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡದ ಪರ ಆಡುತ್ತಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಕರುಣ್ ನಾಯರ್ರವರು ಡಿಸೆಂಬರ್ ೦೬, ೧೯೯೧ ರಂದು ರಾಜಸ್ಥಾನಜೋಧಪುರ್ ನಗರದಲ್ಲಿ ಕಲಾಧರ್ ಹಾಗು ಪ್ರೇಮಾ ನಾಯರ್ ದಂಪತಿಗೆ ಜನಿಸಿದರು. ಇವರ ತಂದೆ ಕಲಾಧರ್ ಒರ್ವ ತಾಂತ್ರಿಕ ಇಂಜಿನಿಯರ್ ಹಾಗು ತಾಯಿ ಪ್ರೇಮಾ ನಾಯರ್ ಒರ್ವ ಶಿಕ್ಷಕಿ.೨೦೧೩-೧೪ರ ರಣಜಿ ಕ್ರಿಕೆಟ್ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಪಾದಾರ್ಪಣೆ ಮಾಡಿದರು. ೨೦೧೪-೧೫ರ ರಣಜಿ ಟ್ರೋಫೀ ಫೈನಲ್ ಪಂದ್ಯದಲ್ಲಿ ೩೨೮ ರನ್ ಕಲೆಹಾಕಿ ಕರ್ನಾಟಕದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಮೂಲಕ ತ್ರಿಶತಕ ಬಾರಿಸಿದ ಎರಡನೇ ಕನ್ನಡಿಗ ಹಾಗೂ ೧೯೪೬-೪೭ರಿಂದ ಫೈನಲ್‍ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪೈನಲ್‍ನಲ್ಲಿ ಓರ್ವ ಆಟಗಾರ ಗಳಿಸಿದ ಅತೀ ಹೆಚ್ಚು ರನ್ ಎಂಬ ದಾಖಲೆಯನ್ನು ಬರದಿದ್ದಾರೆ.[೨][೩][೪]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಏಪ್ರಿಲ್ ೦೪, ೨೦೧೩ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ೦೨ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.[೫]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಜೂನ್ ೧೧, ೨೦೧೬ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲನೇ ಏಕದಿನ ಪಂದ್ಯದ ಮೂಲಕ ಕರುಣ್‌‌ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ನವಂಬರ್ ೨೬, ೨೦೧೬ರಲ್ಲಿ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.[೬][೭]ಡಿಸೆಂಬರ್ ೧೬, ೨೦೧೬ರಲ್ಲಿ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿವ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌‍ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.[೮][೯][೧೦][೧೧][೧೨]

ಪಂದ್ಯಗಳು[ಬದಲಾಯಿಸಿ]

 • ಟೆಸ್ಟ್ ಕ್ರಿಕೆಟ್ : ೦೬ ಪಂದ್ಯಗಳು[೧೩][೧೪]
 • ಏಕದಿನ ಕ್ರಿಕೆಟ್ : ೦೨ ಪಂದ್ಯಗಳು
 • ಐಪಿಎಲ್ ಕ್ರಿಕೆಟ್ : ೬೮ ಪಂದ್ಯಗಳು


ದ್ವಿಶತಕಗಳು[ಬದಲಾಯಿಸಿ]

 • ಟೆಸ್ಟ್ ಪಂದ್ಯಗಳಲ್ಲಿ  : ೦೧


ಶತಕಗಳು[ಬದಲಾಯಿಸಿ]

 • ಟೆಸ್ಟ್ ಪಂದ್ಯಗಳಲ್ಲಿ : ೦೧


ಅರ್ಧ ಶತಕಗಳು[ಬದಲಾಯಿಸಿ]

 • ಐಪಿಎಲ್ ಪಂದ್ಯಗಳಲ್ಲಿ  : ೧೦

ಸಾಧನೆಗಳು[ಬದಲಾಯಿಸಿ]

 • ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌‍ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ.[೧೫]
 • ರಣಜಿ ಟ್ರೋಫೀಯಲ್ಲಿ ತ್ರಿಶತಕ ಬಾರಿಸಿದ ಎರಡನೇ ಕನ್ನಡಿಗ.
 • ೧೯೪೬-೪೭ರಿಂದ ರಣಜಿ ಟ್ರೋಫೀ ಫೈನಲ್‍ನಲ್ಲಿ ತ್ರಿಶತಕ ಬಾರಿಸಿದ ಮೊದಲ ಆಟಗಾರ.[೧೬]
 • ರಣಜಿ ಟ್ರೋಫೀ ಪೈನಲ್‍ನಲ್ಲಿ ಓರ್ವ ಆಟಗಾರ ಗಳಿಸಿದ ಅತೀ ಹೆಚ್ಚು ರನ್.[೧೭]

ಉಲ್ಲೇಖಗಳು[ಬದಲಾಯಿಸಿ]

 1. https://sports.ndtv.com/cricket/players/1708-karun-nair-playerprofile
 2. https://www.firstpost.com/firstcricket/sports-news/india-vs-england-karun-nairs-ability-to-play-the-ball-late-makes-him-an-integral-part-of-virat-kohlis-plans-4833351.html
 3. http://www.espncricinfo.com/series/8050/scorecard/776183/mysore-vs-tamil-nadu-final-ranji-trophy-2014-15
 4. https://www.indiatoday.in/sports/cricket/story/karun-nair-india-test-squad-vs-england-349798-2016-11-02
 5. https://www.cricbuzz.com/live-cricket-scorecard/11867/royal-challengers-bangalore-vs-mumbai-indians-2nd-match-indian-premier-league-2013
 6. https://www.cricbuzz.com/live-cricket-scorecard/16607/zimbabwe-vs-india-1st-odi-india-tour-of-zimbabwe-2016
 7. https://www.cricbuzz.com/live-cricket-scorecard/16870/india-vs-england-3rd-test-england-tour-of-india-2016-17
 8. https://www.cricbuzz.com/live-cricket-scorecard/16872/ind-vs-eng-5th-test-england-tour-of-india-2016-17
 9. https://www.news18.com/cricketnext/videos/karun-nair-second-indian-to-score-300-in-tests-1325040.html
 10. http://www.espncricinfo.com/story/_/id/18309739/karun-nair-joins-virender-sehwag-india-300-club
 11. https://www.mapsofindia.com/my-india/cricket/karun-nair-second-indian-cricketer-to-score-300
 12. https://www.theguardian.com/sport/2016/dec/19/india-england-fifth-test-day-four-match-report-karun-nair
 13. https://www.cricbuzz.com/profiles/8257/karun-nair
 14. http://www.espncricinfo.com/india/content/player/398439.html
 15. https://timesofindia.indiatimes.com/sports/cricket/england-in-india-2016/india-v-england-5th-test-karun-nair-becomes-second-indian-to-score-300-in-tests/articleshow/56065385.cms
 16. https://www.thehindu.com/sport/cricket/karun-nair-first-batsman-in-68-years-to-score-a-triple-century-in-ranji-final/article6978797.ece
 17. http://www.espncricinfo.com/magazine/content/story/149428.html