ಕನ್ನಡ ಗಣಕ ಪರಿಷತ್ತು
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕನ್ನಡ ಗಣಕ ಪರಿಷತ್ತು ಒಂದು ಲಾಭರಹಿತ ಸ್ವಯಂಸೇವಾ ಸಂಸ್ಥೆ. ಇದು ಕನ್ನಡವನ್ನು ಗಣಕಗಳಲ್ಲಿ ಬಳಸುವುದರಲ್ಲಿ ಆಸಕ್ತಿ ಹೊಂದಿರುವ ಆಸಕ್ತರ ಗುಂಪಿನಿಂದ ೧೯೯೭ ರಲ್ಲಿ ಪ್ರಾರಂಭವಾಯಿತು. ಈ ಸಂಸ್ಥೆಯು ವಿವಿಧ ಸಂಗತಿಗಳ ಗಣಕೀಕರಣದ ಸಂದರ್ಭದಲ್ಲಿ ಕನ್ನಡವನ್ನು ಬಳಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಸಿದ್ಧಪಡಿಸಿದೆ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದೆ. ತುಂಬ ಮುಖ್ಯವಾಗಿ ಕರ್ನಾಟಕ ಸರ್ಕಾರದ ಆಡಳಿತದ ಗಣಕೀಕರಣದ ಸಂದರ್ಭದಲ್ಲೂ ಕನ್ನಡ ಭಾಷೆಯೇ ಮಾಧ್ಯಮವಾಗಿ ಮುಂದುವರೆಯಬೇಕೆಂದು ಪ್ರತಿಪಾದಿಸಿದೆ. ಈ ದಿಸೆಯಲ್ಲಿ ಒಂದು ಕನ್ನಡ ತಂತ್ರಾಂಶವು (ಸಾಫ಼್ಟ್ ವೇರ್) ನೀಡಬೇಕಾದ ಕನಿಷ್ಠ ಸೌಲಭ್ಯಗಳನ್ನು ಗುರುತಿಸಿ ಅದನ್ನು ಪ್ರಚುರಪಡಿಸಿ ಆ ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿದೆ.ಈಗ ಕರ್ನಾಟಕ ಸರ್ಕಾರ ಸ್ವಾಮ್ಯದಲ್ಲಿರುವ ಮತ್ತು ಉಚಿತವಾಗಿ ಲಭ್ಯವಿರುವ 'ನುಡಿ ತಂತ್ರಾಂಶ'ವು ಈ ಸಂಸ್ಥೆಯ ಕೊಡುಗೆ.
ಸಂಸ್ಥೆಯ ಧ್ಯೇಯೋದ್ದೇಶಗಳು
[ಬದಲಾಯಿಸಿ]- ಕನ್ನಡ ತಂತ್ರಾಂಶಗಳನ್ನು ಅಭಿವೃದ್ದಿಪಡಿಸಲು ನೆರವಾಗುವುದು.
- ಕನ್ನಡ ತಂತ್ರಾಂಶ ತಯಾರಕರ ಹಾಗೂ ಅದರ ಬಳಕೆದಾರರ ನಡುವಣ ಕೊಂಡಿಯಾಗಿ ಸಮನ್ವಯದಿಂದ ಒಟ್ಟಾರೆ ಕನ್ನಡ ತಂತ್ರಾಂಶಗಳಿಗೆ ಇರುವ ಅವಕಾಶಗಳನ್ನು ಹೆಚ್ಚಿಸುವುದು.
- ಬಳಕೆದಾರರಿಗೆ ಐಪಯುಕ್ತವಾದ ಏಕರೂಪತೆಯಿರುವ ಕೀಲಿಮಣೆಯನ್ನು ರೂಪಿಸುವುದು. ಧ್ವನಿಗ್ರಹಣ, ಅಕ್ಷರಗ್ರಹಣ ಮುಂತಾದ ತಂತ್ರಾಂಶಗಳನ್ನು ಕನ್ನಡಕ್ಕೆ ಅನ್ವಯವಾಗುವಂತೆ ಸಿದ್ಧಪಡಿಸಲು ವ್ಯವಸ್ಥಿತ ಯೋಜನೆಗಳನ್ನು ರೂಪಿಸುವುದು.
- ಕನ್ನಡದ ಕೆಲಸ ಮಾಡುತ್ತಿರುವ ಎಲ್ಲಾ ಸಂಸ್ಥೆಗಳನ್ನು ಒಂದು ಗಣಕ ಜಾಲಕ್ಕೆ ಜೋಡಿಸಿ ಮಾಹಿತಿ ವಿನಿಮಯಕ್ಕೆ ಅವಕಾಶ ಒದಗಿಸುವುದು.
- ಗಡಿನಾಡು, ಹೊರನಾಡು, ವಿದೇಶಿ ಕನ್ನಡಿಗರ ನಡುವೆ ಸಂಪರ್ಕ ವ್ಯವಸ್ಥೆಯೊಂದನ್ನು ಕಲ್ಪಿಸುವುದು.
- ಕನ್ನಡದ, ಕರ್ನಾಟಕದ ಕುರಿತು ಒಂದು ಬೃಹತ್ ಮಾಹಿತಿ ಕೇಂದ್ರವನ್ನು ಸ್ಥಾಪಿಸುವುದು. ಗಣಕಕ್ಕೆ ಸಂಬಂಧಿಸಿದಂತೆ ಒಂದು ಪಾರಿಭಾಷಿಕ ಪದಕೋಶವನ್ನು ಸಿದ್ಧಪಡಿಸುವುದು.
- ತನ್ನ ಆಡಳಿತದಲ್ಲಿ ಗಣಕಗಳ ಬಳಕೆಯ ಎಲ್ಲ ಸಂದರ್ಭಗಳಲ್ಲೂ ಸರ್ಕಾರವು ಕನ್ನಡವನ್ನು ಸಂರ್ಣವಾಗಿ ಬಳಸಬೇಕೆಂದು ಒತ್ತಾಯಿಸುವುದು.
- ಕನ್ನಡದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ, ಸಂಶೋಧನೆಗಳನ್ನು ನಡೆಸುತ್ತಿರುವವರಿಗೆ ಗಣಕದ ಮೂಲಕ ಹೆಚ್ಚಿನ ನೆರವು ನೀಡಿಕೆ.
- ಕನ್ನಡದ ಎಲ್ಲಾ ಸಾಹಿತ್ಯಕೃತಿಗಳನ್ನು ಅಡಕಮುದ್ರಿಕೆಗಳಲ್ಲಿ ಅಳವಡಿಸಿ ಅವು ಸುಲಭವಾಗಿ ದೊರೆಯುವಂತೆ ಮಾಡುವುದು.
- ಗಣಕಗಳಲ್ಲಿ ಕನ್ನಡವನ್ನು ಸಮಗ್ರವಾಗಿ ಬಳಸುವ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿಯನ್ನು ಮೂಡಿಸಿ ಮಾಹಿತಿ ಕ್ರಾಂತಿಯ ಪ್ರಯೋಜನ ಎಲ್ಲರಿಗೂ ದೊರೆಯುವಂತೆ ಮಾಡುವುದು.
- ಕನ್ನಡ ಹಾಗೂ ಕನ್ನಡ ಮಾಧ್ಯಮದ ಶಿಕ್ಷಣದಲ್ಲಿ ಗಣಕಗಳನ್ನು ಬಳಸಲು ಸೂಕ್ತವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು.
- ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಒಂದು ಮಾಹಿತಿ ಆಕರವನ್ನು ನಿರ್ಮಿಸುವುದು.
- ಕನ್ನಡದ ಎಲ್ಲಾ ನಿಂಟು, ವಿಶ್ವಕೋಶಗಳು ಮುಂತಾದವನ್ನು ಗಣಕಕ್ಕೆ ಅಳವಡಿಸಿ ಎಲ್ಲೆಡೆ ದೊರೆಯುವಂತೆ ಮಾಡುವುದು.
- ಅಂತರಜಾಲದಲ್ಲಿ ಕನ್ನಡದ ತಾಣಗಳನ್ನು ಹೆಚ್ಚಾಗಿ ಏರ್ಪಡಿಸಿ ಅಲ್ಲೆಲ್ಲಾ ಕನ್ನಡ ಮಾಹಿತಿ ದೊರೆಯಲು ಅನುವು ಮಾಡಿಕೊಡುವುದು.
- ಗಣಕದಲ್ಲಿ ಕನ್ನಡ ಬಳಕೆಯ ಕುರಿತಾದ ತರಬೇತಿಗೆ ವ್ಯವಸ್ಥೆಯನ್ನು ಮಾಡುವುದು.
- ಸರ್ಕಾರದ ಆಡಳಿತದಲ್ಲಿ ಕನ್ನಡವನ್ನು ಗಣಕದ ಮೂಲಕ ಬಳಸಲು ಅಗತ್ಯವಾದ ನೆರವನ್ನು ನೀಡುವುದು.
ಸಂಸ್ಥೆಯ ಕಾರ್ಯಯೋಜನೆಗಳು
[ಬದಲಾಯಿಸಿ]ತುರ್ತಾಗಿ ಕಾರ್ಯರೂಪಕ್ಕೆ ಬರಬೇಕಾದ ಕನ್ನಡ ಮತ್ತು ಗಣಕ ಸಂಬಂಧಿ ಯೋಜನೆಗಳು
- ವಿವಿಧ ಕ್ಷೇತ್ರಗಳು :
- ಸಂಶೋಧನೆ ಮತ್ತು ಅಭಿವೃದ್ಧಿ
- ತರಬೇತಿ
- ಶಿಕ್ಷಣ
- ಸಾಹಿತ್ಯ
- ಸಾಂಸ್ಕೃತಿಕ ಕ್ಷೇತ್ರ
- ಜಾಗೃತಿ, ಪ್ರಚಾರ ಇತ್ಯಾದಿ.
ಸಂಶೋಧನೆ ಮತ್ತು ಅಭಿವೃದ್ಧಿ
[ಬದಲಾಯಿಸಿ]1. ಆಸ್ಕಿ ಆಧಾರಿತ `ನುಡಿ' ಲಿಪಿ ತಂತ್ರಾಂಶವನ್ನು ಅಗತ್ಯಗಳಿಗೆ ತಕ್ಕಂತೆ ಬದಲಾವಣೆ, 2. ಹೆಚ್ಚಿನ ಅಕ್ಷರ ಶೈಲಿಗಳು (ಫಾಂಟ್ಗಳು)ನ್ನು ಸಿದ್ಧಪಡಿಸುವುದು. 3. ನುಡಿ ಲಿಪಿ ತಂತ್ರಾಂಶದ ಯೂನಿಕೋಡ್ ಆವೃತ್ತಿ (ವಿಂಡೋಸ್ಗೆ). 4. ನುಡಿ ಲಿಪಿ ತಂತ್ರಾಂಶದ ಯೂನಿಕೋಡ್ ಆವೃತ್ತಿ (ಲೈನೆಕ್ಸ್ ಗೆ). 5. ಪರಿವರ್ತಕ ತಂತ್ರಾಂಶಗಳು.
- (ಇಸ್ಕಿಯಿಂದ ಯೂನಿಕೋಡ್, ಯೂನಿಕೋಡ್ನಿಂದ ಇಸ್ಕಿ ಹಾಗೂ ಬೇರೆಬೇರೆ ಲಿಪಿ
- ತಂತ್ರಾಂಶ ಗಳಿಂದ ನುಡಿ ತಂತ್ರಾಂಶಕ್ಕೆ ಮಾಹಿತಿ ಸಂವಹನಕ್ಕಾಗಿ ಸೌಲಭ್ಯಗಳು).
6. `ಓಪನ್ ಆಫೀಸ್'ನ ಕನ್ನಡ ಆವೃತ್ತಿ (ಕನ್ನಡ ಆಫೀಸ್). 7. ಪದಪರೀಕ್ಷೆ, ಹುಡುಕು-ಬದಲಿಸು, ವ್ಯಾಕರಣ ಪರೀಕ್ಷೆ ಇತ್ಯಾದಿ ಸೌಲಭ್ಯಗಳು. 8. ಅಂಗೈ ಗಣಕ, ಮೊಬೈಲ್ ಫೋನ್ ಇತ್ಯಾದಿ ಉಪಕರಣಗಳಲ್ಲಿ ಕನ್ನಡದ ಅಳವಡಿಕೆ. 9. ಕೈಬರಹ ಅಕ್ಷರಜಾಣ* ಮತ್ತು ಮುದ್ರಿತಪಠ್ಯ ಅಕ್ಷರಜಾಣ. 10. ಧ್ವನಿಸಂಶ್ಲೇಷಣ* ಮತ್ತು ನುಡಿಜಾಣ*.
ತರಬೇತಿ
[ಬದಲಾಯಿಸಿ]1. ಸಾರ್ವಜನಿಕರಿಗೆ ಗಣಕಗಳಲ್ಲಿ ನುಡಿ ತಂತ್ರಾಂಶದ ಬಳಕೆಯ ಮೂಲ ತರಬೇತಿ. 2. ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳಿಗೆ ಗಣಕಗಳಲ್ಲಿ ನುಡಿ- ತಂತ್ರಾಂಶದ ಬಳಕೆಯ ಮೂಲ ತರಬೇತಿ. 3. ಅನ್ವಯ ತಂತ್ರಾಂಶಗಳಲ್ಲಿ ನುಡಿ ತಂತ್ರಾಂಶದ ಬಳಕೆ - ತರಬೇತಿದಾರರಿಗೆ ತರಬೇತಿ . 4. ಕನ್ನಡ ಅನ್ವಯ ತಂತ್ರಾಂಶ* ಅಭಿವೃದ್ಧಿ ಮಾಡುವವರಿಗೆ ತರಬೇತಿ. 5. ಶಿಕ್ಷಕ ತರಬೇತಿ ಶಿಬಿರ.
ಕನ್ನಡದಲ್ಲಿ ವಿಶ್ವಕೋಶಗಳು (ಬಹುಮಾಧ್ಯಮ ಸಿಡಿಗಳು)
[ಬದಲಾಯಿಸಿ]1. ಕನ್ನಡ ವಿಶ್ವಕೋಶ.
2. ವಿಜ್ಞಾನ ವಿಶ್ವಕೋಶ.
3 ಕಿರಿಯರ ವಿಶ್ವಕೋಶ.
4. ಕಿರಿಯರ ವಿಜ್ಞಾನ ವಿಶ್ವಕೋಶ.
5. `ಕಣಾದ' ವಿಶ್ವಕೋಶ ಇತ್ಯಾದಿ ಇನ್ನೂ ಅನೇಕ ವಿಶ್ವಕೋಶಗಳು.
ಶಿಕ್ಷಣ
[ಬದಲಾಯಿಸಿ]ಕನ್ನಡದಲ್ಲಿ ಗಣಕ ಶಿಕ್ಷಣ / ಗಣಕಗಳಲ್ಲಿ ಕನ್ನಡದ ಬಳಕೆ ಕುರಿತು ಶಿಕ್ಷಣ. 1. ಕನ್ನಡಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮಗಳು ಮತ್ತು ಪಠ್ಯಗಳು-(ಪ್ರಮಾಣ, ಭಾಷೆ, ತಾಂತ್ರಿಕ ಪದಗಳು ಇತ್ಯಾದಿ): 2. ಶಿಕ್ಷಣಕ್ಕಾಗಿ ಬಹುಮಾಧ್ಯಮ ಅಡಕಮುದ್ರಿಕೆಗಳು (ಸಿಡಿ).
ಕನ್ನಡ ಕಲಿ
[ಬದಲಾಯಿಸಿ]- ಅಕ್ಷರ ಕಲಿ ವ್ಯಾಕರಣ ಕಲಿ, ಗಣಿತ ಕಲಿ ಇತ್ಯಾದಿ.
- ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ತಾಂತ್ರಿಕ ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಮೂಲತತ್ವಗಳನ್ನು ಸರಳವಾಗಿ ತಿಳಿಸುವ ಮಾದರಿ
- ಕನ್ನಡದಲ್ಲಿ ಲೋಗೋ ತಂತ್ರಾಂಶ.
- ಮಕ್ಕಳಿಗೆ ಬಹುಮಾಧ್ಯಮ ರೂಪದ ಪದ್ಯಗಳು.
- ಮಕ್ಕಳಿಗೆ ಬಹುಮಾಧ್ಯಮ ರೂಪದ ಕಥೆಗಳು.
ನಿಘಂಟುಗಳು/ಗ್ರಂಥಸೂಚಿ
[ಬದಲಾಯಿಸಿ]- ಕನ್ನಡ-ಕನ್ನಡ ನಿಘಂಟು(ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟನೆ) ಅಡಕಮುದ್ರಿಕೆ (ಸಿಡಿ).
- ಇಂಗ್ಲಿಷ್-ಕನ್ನಡ ನಿಘಂಟು ಅಡಕ ಮುದ್ರಿಕೆ (ಸಿಡಿ).- (ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟನೆ).
- ಕನ್ನಡ ಗ್ರಂಥಸೂಚಿ ಅಡಕಮುದ್ರಿಕೆ(ಸಿಡಿ)- (ಮೈಸೂರು ವಿಶ್ವವಿದ್ಯಾನಿಲಯದ ಹಾಗೂ ಇತರ ಸಂಸ್ಥೆಗಳ ಪ್ರಕಟನೆಗಳು)
ಕನ್ನಡ ಸಾಹಿತ್ಯ ಕ್ಷೇತ್ರ- ವಿದ್ಯನ್ಮಾನ ರೂಪ
[ಬದಲಾಯಿಸಿ]- ಕನ್ನಡ ಭಾಷೆಯ ಉಗಮ ಮತ್ತು ವಿಕಾಸ.
- ಕನ್ನಡ ಸಾಹಿತ್ಯ ಚರಿತ್ರೆ..
- ಕನ್ನಡ ಗ್ರಂಥಸೂಚಿ.
- ಪ್ರಮುಖವಾದ ಹಾಗೂ ಅಲಭ್ಯ ಕನ್ನಡ ಕೃತಿಗಳ ಗಣಕೀಕೃತ ರೂಪ.
- ಸಾಹಿತ್ಯ ಪ್ರಕಾರಗಳ ಹಲವಾರು ರೀತಿಯ ಅಧ್ಯಯನ, ಪರಾಮರ್ಶನೆಗಳಿಗೆ ಸೂಕ್ತವಾದ
ವಿವಿಧ ತಂತ್ರಾಂಶಗಳು
[ಬದಲಾಯಿಸಿ]- ಸಾಹಿತ್ಯ ಕೃತಿಗಳ ವರ್ಗೀಕೃತ ದತ್ತ ಸಂಚಯ.
- ಸಾಹಿತಿಗಳನ್ನು ಕುರಿತ ಸಮಗ್ರ ಮಾಹಿತಿ ಸಂಚಯ.
- ಪ್ರಮುಖ ಸಾಹಿತಿಗಳನ್ನು ಕುರಿತ ಬಹುಮಾಧ್ಯಮ ಅಡಕ ಮುದ್ರಿಕೆಗಳು.
- ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕ ಸಾಹಿತ್ಯ ಕೃತಿಗಳ ಗಣಕೀಕೃತ ರೂಪ.
- ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕ ಸಾಹಿತ್ಯ ಕ್ಷೇತ್ರದ ಬರಹಗಾರರ ಮಾಹಿತಿ ಸಂಚಯ.
ಅಧಿಕೃತ ಅಂತರಜಾಲ ತಾಣ
[ಬದಲಾಯಿಸಿ]http://www.kagapa.in/kannada/ Archived 2018-11-05 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖ
[ಬದಲಾಯಿಸಿ]