ವಿಷಯಕ್ಕೆ ಹೋಗು

ಕನ್ನಡ ಗಣಕ ಪರಿಷತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಗಣಕ ಪರಿಷತ್ತು ಒಂದು ಲಾಭರಹಿತ ಸ್ವಯಂಸೇವಾ ಸಂಸ್ಥೆ. ಇದು ಕನ್ನಡವನ್ನು ಗಣಕಗಳಲ್ಲಿ ಬಳಸುವುದರಲ್ಲಿ ಆಸಕ್ತಿ ಹೊಂದಿರುವ ಆಸಕ್ತರ ಗುಂಪಿನಿಂದ ೧೯೯೭ ರಲ್ಲಿ ಪ್ರಾರಂಭವಾಯಿತು. ಈ ಸಂಸ್ಥೆಯು ವಿವಿಧ ಸಂಗತಿಗಳ ಗಣಕೀಕರಣದ ಸಂದರ್ಭದಲ್ಲಿ ಕನ್ನಡವನ್ನು ಬಳಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಸಿದ್ಧಪಡಿಸಿದೆ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದೆ. ತುಂಬ ಮುಖ್ಯವಾಗಿ ಕರ್ನಾಟಕ ಸರ್ಕಾರದ ಆಡಳಿತದ ಗಣಕೀಕರಣದ ಸಂದರ್ಭದಲ್ಲೂ ಕನ್ನಡ ಭಾಷೆಯೇ ಮಾಧ್ಯಮವಾಗಿ ಮುಂದುವರೆಯಬೇಕೆಂದು ಪ್ರತಿಪಾದಿಸಿದೆ. ಈ ದಿಸೆಯಲ್ಲಿ ಒಂದು ಕನ್ನಡ ತಂತ್ರಾಂಶವು (ಸಾಫ಼್ಟ್ ವೇರ್) ನೀಡಬೇಕಾದ ಕನಿಷ್ಠ ಸೌಲಭ್ಯಗಳನ್ನು ಗುರುತಿಸಿ ಅದನ್ನು ಪ್ರಚುರಪಡಿಸಿ ಆ ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿದೆ.ಈಗ ಕರ್ನಾಟಕ ಸರ್ಕಾರ ಸ್ವಾಮ್ಯದಲ್ಲಿರುವ ಮತ್ತು ಉಚಿತವಾಗಿ ಲಭ್ಯವಿರುವ 'ನುಡಿ ತಂತ್ರಾಂಶ'ವು ಈ ಸಂಸ್ಥೆಯ ಕೊಡುಗೆ.

ಸಂಸ್ಥೆಯ ಧ್ಯೇಯೋದ್ದೇಶಗಳು

[ಬದಲಾಯಿಸಿ]
  1. ಕನ್ನಡ ತಂತ್ರಾಂಶಗಳನ್ನು ಅಭಿವೃದ್ದಿಪಡಿಸಲು ನೆರವಾಗುವುದು.
  2. ಕನ್ನಡ ತಂತ್ರಾಂಶ ತಯಾರಕರ ಹಾಗೂ ಅದರ ಬಳಕೆದಾರರ ನಡುವಣ ಕೊಂಡಿಯಾಗಿ ಸಮನ್ವಯದಿಂದ ಒಟ್ಟಾರೆ ಕನ್ನಡ ತಂತ್ರಾಂಶಗಳಿಗೆ ಇರುವ ಅವಕಾಶಗಳನ್ನು ಹೆಚ್ಚಿಸುವುದು.
  3. ಬಳಕೆದಾರರಿಗೆ ಐಪಯುಕ್ತವಾದ ಏಕರೂಪತೆಯಿರುವ ಕೀಲಿಮಣೆಯನ್ನು ರೂಪಿಸುವುದು. ಧ್ವನಿಗ್ರಹಣ, ಅಕ್ಷರಗ್ರಹಣ ಮುಂತಾದ ತಂತ್ರಾಂಶಗಳನ್ನು ಕನ್ನಡಕ್ಕೆ ಅನ್ವಯವಾಗುವಂತೆ ಸಿದ್ಧಪಡಿಸಲು ವ್ಯವಸ್ಥಿತ ಯೋಜನೆಗಳನ್ನು ರೂಪಿಸುವುದು.
  4. ಕನ್ನಡದ ಕೆಲಸ ಮಾಡುತ್ತಿರುವ ಎಲ್ಲಾ ಸಂಸ್ಥೆಗಳನ್ನು ಒಂದು ಗಣಕ ಜಾಲಕ್ಕೆ ಜೋಡಿಸಿ ಮಾಹಿತಿ ವಿನಿಮಯಕ್ಕೆ ಅವಕಾಶ ಒದಗಿಸುವುದು.
  5. ಗಡಿನಾಡು, ಹೊರನಾಡು, ವಿದೇಶಿ ಕನ್ನಡಿಗರ ನಡುವೆ ಸಂಪರ್ಕ ವ್ಯವಸ್ಥೆಯೊಂದನ್ನು ಕಲ್ಪಿಸುವುದು.
  6. ಕನ್ನಡದ, ಕರ್ನಾಟಕದ ಕುರಿತು ಒಂದು ಬೃಹತ್ ಮಾಹಿತಿ ಕೇಂದ್ರವನ್ನು ಸ್ಥಾಪಿಸುವುದು. ಗಣಕಕ್ಕೆ ಸಂಬಂಧಿಸಿದಂತೆ ಒಂದು ಪಾರಿಭಾಷಿಕ ಪದಕೋಶವನ್ನು ಸಿದ್ಧಪಡಿಸುವುದು.
  7. ತನ್ನ ಆಡಳಿತದಲ್ಲಿ ಗಣಕಗಳ ಬಳಕೆಯ ಎಲ್ಲ ಸಂದರ್ಭಗಳಲ್ಲೂ ಸರ್ಕಾರವು ಕನ್ನಡವನ್ನು ಸಂರ್ಣವಾಗಿ ಬಳಸಬೇಕೆಂದು ಒತ್ತಾಯಿಸುವುದು.
  8. ಕನ್ನಡದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ, ಸಂಶೋಧನೆಗಳನ್ನು ನಡೆಸುತ್ತಿರುವವರಿಗೆ ಗಣಕದ ಮೂಲಕ ಹೆಚ್ಚಿನ ನೆರವು ನೀಡಿಕೆ.
  9. ಕನ್ನಡದ ಎಲ್ಲಾ ಸಾಹಿತ್ಯಕೃತಿಗಳನ್ನು ಅಡಕಮುದ್ರಿಕೆಗಳಲ್ಲಿ ಅಳವಡಿಸಿ ಅವು ಸುಲಭವಾಗಿ ದೊರೆಯುವಂತೆ ಮಾಡುವುದು.
  10. ಗಣಕಗಳಲ್ಲಿ ಕನ್ನಡವನ್ನು ಸಮಗ್ರವಾಗಿ ಬಳಸುವ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿಯನ್ನು ಮೂಡಿಸಿ ಮಾಹಿತಿ ಕ್ರಾಂತಿಯ ಪ್ರಯೋಜನ ಎಲ್ಲರಿಗೂ ದೊರೆಯುವಂತೆ ಮಾಡುವುದು.
  11. ಕನ್ನಡ ಹಾಗೂ ಕನ್ನಡ ಮಾಧ್ಯಮದ ಶಿಕ್ಷಣದಲ್ಲಿ ಗಣಕಗಳನ್ನು ಬಳಸಲು ಸೂಕ್ತವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು.
  12. ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಒಂದು ಮಾಹಿತಿ ಆಕರವನ್ನು ನಿರ್ಮಿಸುವುದು.
  13. ಕನ್ನಡದ ಎಲ್ಲಾ ನಿಂಟು, ವಿಶ್ವಕೋಶಗಳು ಮುಂತಾದವನ್ನು ಗಣಕಕ್ಕೆ ಅಳವಡಿಸಿ ಎಲ್ಲೆಡೆ ದೊರೆಯುವಂತೆ ಮಾಡುವುದು.
  14. ಅಂತರಜಾಲದಲ್ಲಿ ಕನ್ನಡದ ತಾಣಗಳನ್ನು ಹೆಚ್ಚಾಗಿ ಏರ್ಪಡಿಸಿ ಅಲ್ಲೆಲ್ಲಾ ಕನ್ನಡ ಮಾಹಿತಿ ದೊರೆಯಲು ಅನುವು ಮಾಡಿಕೊಡುವುದು.
  15. ಗಣಕದಲ್ಲಿ ಕನ್ನಡ ಬಳಕೆಯ ಕುರಿತಾದ ತರಬೇತಿಗೆ ವ್ಯವಸ್ಥೆಯನ್ನು ಮಾಡುವುದು.
  16. ಸರ್ಕಾರದ ಆಡಳಿತದಲ್ಲಿ ಕನ್ನಡವನ್ನು ಗಣಕದ ಮೂಲಕ ಬಳಸಲು ಅಗತ್ಯವಾದ ನೆರವನ್ನು ನೀಡುವುದು.

ಸಂಸ್ಥೆಯ ಕಾರ್ಯಯೋಜನೆಗಳು

[ಬದಲಾಯಿಸಿ]

ತುರ್ತಾಗಿ ಕಾರ್ಯರೂಪಕ್ಕೆ ಬರಬೇಕಾದ ಕನ್ನಡ ಮತ್ತು ಗಣಕ ಸಂಬಂಧಿ ಯೋಜನೆಗಳು

  • ವಿವಿಧ ಕ್ಷೇತ್ರಗಳು :
  • ಸಂಶೋಧನೆ ಮತ್ತು ಅಭಿವೃದ್ಧಿ
  • ತರಬೇತಿ
  • ಶಿಕ್ಷಣ
  • ಸಾಹಿತ್ಯ
  • ಸಾಂಸ್ಕೃತಿಕ ಕ್ಷೇತ್ರ
  • ಜಾಗೃತಿ, ಪ್ರಚಾರ ಇತ್ಯಾದಿ.

ಸಂಶೋಧನೆ ಮತ್ತು ಅಭಿವೃದ್ಧಿ

[ಬದಲಾಯಿಸಿ]

1. ಆಸ್ಕಿ ಆಧಾರಿತ `ನುಡಿ' ಲಿಪಿ ತಂತ್ರಾಂಶವನ್ನು ಅಗತ್ಯಗಳಿಗೆ ತಕ್ಕಂತೆ ಬದಲಾವಣೆ, 2. ಹೆಚ್ಚಿನ ಅಕ್ಷರ ಶೈಲಿಗಳು (ಫಾಂಟ್ಗಳು)ನ್ನು ಸಿದ್ಧಪಡಿಸುವುದು. 3. ನುಡಿ ಲಿಪಿ ತಂತ್ರಾಂಶದ ಯೂನಿಕೋಡ್ ಆವೃತ್ತಿ (ವಿಂಡೋಸ್ಗೆ). 4. ನುಡಿ ಲಿಪಿ ತಂತ್ರಾಂಶದ ಯೂನಿಕೋಡ್ ಆವೃತ್ತಿ (ಲೈನೆಕ್ಸ್ ಗೆ). 5. ಪರಿವರ್ತಕ ತಂತ್ರಾಂಶಗಳು.

  • (ಇಸ್ಕಿಯಿಂದ ಯೂನಿಕೋಡ್, ಯೂನಿಕೋಡ್ನಿಂದ ಇಸ್ಕಿ ಹಾಗೂ ಬೇರೆಬೇರೆ ಲಿಪಿ
  • ತಂತ್ರಾಂಶ ಗಳಿಂದ ನುಡಿ ತಂತ್ರಾಂಶಕ್ಕೆ ಮಾಹಿತಿ ಸಂವಹನಕ್ಕಾಗಿ ಸೌಲಭ್ಯಗಳು).

6. `ಓಪನ್ ಆಫೀಸ್'ನ ಕನ್ನಡ ಆವೃತ್ತಿ (ಕನ್ನಡ ಆಫೀಸ್). 7. ಪದಪರೀಕ್ಷೆ, ಹುಡುಕು-ಬದಲಿಸು, ವ್ಯಾಕರಣ ಪರೀಕ್ಷೆ ಇತ್ಯಾದಿ ಸೌಲಭ್ಯಗಳು. 8. ಅಂಗೈ ಗಣಕ, ಮೊಬೈಲ್ ಫೋನ್ ಇತ್ಯಾದಿ ಉಪಕರಣಗಳಲ್ಲಿ ಕನ್ನಡದ ಅಳವಡಿಕೆ. 9. ಕೈಬರಹ ಅಕ್ಷರಜಾಣ* ಮತ್ತು ಮುದ್ರಿತಪಠ್ಯ ಅಕ್ಷರಜಾಣ. 10. ಧ್ವನಿಸಂಶ್ಲೇಷಣ* ಮತ್ತು ನುಡಿಜಾಣ*.

ತರಬೇತಿ

[ಬದಲಾಯಿಸಿ]

1. ಸಾರ್ವಜನಿಕರಿಗೆ ಗಣಕಗಳಲ್ಲಿ ನುಡಿ ತಂತ್ರಾಂಶದ ಬಳಕೆಯ ಮೂಲ ತರಬೇತಿ. 2. ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳಿಗೆ ಗಣಕಗಳಲ್ಲಿ ನುಡಿ- ತಂತ್ರಾಂಶದ ಬಳಕೆಯ ಮೂಲ ತರಬೇತಿ. 3. ಅನ್ವಯ ತಂತ್ರಾಂಶಗಳಲ್ಲಿ ನುಡಿ ತಂತ್ರಾಂಶದ ಬಳಕೆ - ತರಬೇತಿದಾರರಿಗೆ ತರಬೇತಿ . 4. ಕನ್ನಡ ಅನ್ವಯ ತಂತ್ರಾಂಶ* ಅಭಿವೃದ್ಧಿ ಮಾಡುವವರಿಗೆ ತರಬೇತಿ. 5. ಶಿಕ್ಷಕ ತರಬೇತಿ ಶಿಬಿರ.

ಕನ್ನಡದಲ್ಲಿ ವಿಶ್ವಕೋಶಗಳು (ಬಹುಮಾಧ್ಯಮ ಸಿಡಿಗಳು)

[ಬದಲಾಯಿಸಿ]

1. ಕನ್ನಡ ವಿಶ್ವಕೋಶ.

2. ವಿಜ್ಞಾನ ವಿಶ್ವಕೋಶ.

3 ಕಿರಿಯರ ವಿಶ್ವಕೋಶ.

4. ಕಿರಿಯರ ವಿಜ್ಞಾನ ವಿಶ್ವಕೋಶ.

5. `ಕಣಾದ' ವಿಶ್ವಕೋಶ ಇತ್ಯಾದಿ ಇನ್ನೂ ಅನೇಕ ವಿಶ್ವಕೋಶಗಳು.

ಶಿಕ್ಷಣ

[ಬದಲಾಯಿಸಿ]

ಕನ್ನಡದಲ್ಲಿ ಗಣಕ ಶಿಕ್ಷಣ / ಗಣಕಗಳಲ್ಲಿ ಕನ್ನಡದ ಬಳಕೆ ಕುರಿತು ಶಿಕ್ಷಣ. 1. ಕನ್ನಡಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮಗಳು ಮತ್ತು ಪಠ್ಯಗಳು-(ಪ್ರಮಾಣ, ಭಾಷೆ, ತಾಂತ್ರಿಕ ಪದಗಳು ಇತ್ಯಾದಿ): 2. ಶಿಕ್ಷಣಕ್ಕಾಗಿ ಬಹುಮಾಧ್ಯಮ ಅಡಕಮುದ್ರಿಕೆಗಳು (ಸಿಡಿ).

ಕನ್ನಡ ಕಲಿ

[ಬದಲಾಯಿಸಿ]
  1. ಅಕ್ಷರ ಕಲಿ ವ್ಯಾಕರಣ ಕಲಿ, ಗಣಿತ ಕಲಿ ಇತ್ಯಾದಿ.
  2. ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ತಾಂತ್ರಿಕ ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಮೂಲತತ್ವಗಳನ್ನು ಸರಳವಾಗಿ ತಿಳಿಸುವ ಮಾದರಿ
  3. ಕನ್ನಡದಲ್ಲಿ ಲೋಗೋ ತಂತ್ರಾಂಶ.
  4. ಮಕ್ಕಳಿಗೆ ಬಹುಮಾಧ್ಯಮ ರೂಪದ ಪದ್ಯಗಳು.
  5. ಮಕ್ಕಳಿಗೆ ಬಹುಮಾಧ್ಯಮ ರೂಪದ ಕಥೆಗಳು.

ನಿಘಂಟುಗಳು/ಗ್ರಂಥಸೂಚಿ

[ಬದಲಾಯಿಸಿ]
  1. ಕನ್ನಡ-ಕನ್ನಡ ನಿಘಂಟು(ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟನೆ) ಅಡಕಮುದ್ರಿಕೆ (ಸಿಡಿ).
  2. ಇಂಗ್ಲಿಷ್-ಕನ್ನಡ ನಿಘಂಟು ಅಡಕ ಮುದ್ರಿಕೆ (ಸಿಡಿ).- (ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟನೆ).
  3. ಕನ್ನಡ ಗ್ರಂಥಸೂಚಿ ಅಡಕಮುದ್ರಿಕೆ(ಸಿಡಿ)- (ಮೈಸೂರು ವಿಶ್ವವಿದ್ಯಾನಿಲಯದ ಹಾಗೂ ಇತರ ಸಂಸ್ಥೆಗಳ ಪ್ರಕಟನೆಗಳು)

ಕನ್ನಡ ಸಾಹಿತ್ಯ ಕ್ಷೇತ್ರ- ವಿದ್ಯನ್ಮಾನ ರೂಪ

[ಬದಲಾಯಿಸಿ]
  1. ಕನ್ನಡ ಭಾಷೆಯ ಉಗಮ ಮತ್ತು ವಿಕಾಸ.
  2. ಕನ್ನಡ ಸಾಹಿತ್ಯ ಚರಿತ್ರೆ..
  3. ಕನ್ನಡ ಗ್ರಂಥಸೂಚಿ.
  4. ಪ್ರಮುಖವಾದ ಹಾಗೂ ಅಲಭ್ಯ ಕನ್ನಡ ಕೃತಿಗಳ ಗಣಕೀಕೃತ ರೂಪ.
  5. ಸಾಹಿತ್ಯ ಪ್ರಕಾರಗಳ ಹಲವಾರು ರೀತಿಯ ಅಧ್ಯಯನ, ಪರಾಮರ್ಶನೆಗಳಿಗೆ ಸೂಕ್ತವಾದ

ವಿವಿಧ ತಂತ್ರಾಂಶಗಳು

[ಬದಲಾಯಿಸಿ]
  • ಸಾಹಿತ್ಯ ಕೃತಿಗಳ ವರ್ಗೀಕೃತ ದತ್ತ ಸಂಚಯ.
  • ಸಾಹಿತಿಗಳನ್ನು ಕುರಿತ ಸಮಗ್ರ ಮಾಹಿತಿ ಸಂಚಯ.
  • ಪ್ರಮುಖ ಸಾಹಿತಿಗಳನ್ನು ಕುರಿತ ಬಹುಮಾಧ್ಯಮ ಅಡಕ ಮುದ್ರಿಕೆಗಳು.
  • ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕ ಸಾಹಿತ್ಯ ಕೃತಿಗಳ ಗಣಕೀಕೃತ ರೂಪ.
  • ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕ ಸಾಹಿತ್ಯ ಕ್ಷೇತ್ರದ ಬರಹಗಾರರ ಮಾಹಿತಿ ಸಂಚಯ.

ಅಧಿಕೃತ ಅಂತರಜಾಲ ತಾಣ

[ಬದಲಾಯಿಸಿ]

http://www.kagapa.in/kannada/ Archived 2018-11-05 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]