ನುಡಿ (ತಂತ್ರಾಂಶ)

ವಿಕಿಪೀಡಿಯ ಇಂದ
Jump to navigation Jump to search

ನುಡಿ ಕಂಪ್ಯೂಟರ್ ಪ್ರೊಗ್ರಾಮ್ ಮತ್ತು ಫಾಂಟ್-ಎನ್ಕೋಡಿಂಗ್ ಸ್ಟ್ಯಾಂಡರ್ಡ್. ಇದನ್ನು ಕನ್ನಡ ಲಿಪಿಯನ್ನು ನಿರ್ವಹಿಸಲು ಮತ್ತು ಪ್ರದರ್ಶಿಸಲು ಬಳಸಲಾಗುತ್ತದೆ. ನುಡಿ ತಂತ್ರಾಂಶ ಕರ್ನಾಟಕ ಸರ್ಕಾರದ ಸ್ವಾಮ್ಯದಲ್ಲಿದೆ ಮತ್ತು ಉಚಿತವಾಗಿ ಲಭ್ಯವಿದೆ. ಇದನ್ನುಲಾಭರಹಿತ ಸಂಸ್ಥೆಯಾದ ಕನ್ನಡ ಗಣಕ ಪರಿಷತ್ತು ಅಭಿವೃದ್ಧಿಪಡಿಸಿದೆ.[೧] ನುಡಿಯೊಂದಿಗೆ ಸೇರಿಸಲಾಗಿರುವ ಹೆಚ್ಚಿನ ಫಾಂಟ್ಗಳು ಡೈನಾಮಿಕ್ ಫಾಂಟ್ ಎಂಬೆಡಿಂಗ್ ಉದ್ದೇಶಗಳಿಗಾಗಿ ಬಳಸಬಹುದು.[೨]ಆದರೂ, ಫಾಂಟ್ಗಳು ಮತ್ತು ತಂತ್ರಾಂಶವು ಉಚಿತವಾಗಿ ಸಿಗುವುದರಿಂದ ಡೇಟಾಬೇಸ್ ನಿರ್ವಹಣೆ ಮುಂತಾದ ಇತರೆ ಸಂದರ್ಭಗಳಲ್ಲೂ ಬಳಸಬಹುದು.

ಇದು ಫಾಂಟ್-ಎನ್ಕೋಡಿಂಗ್ ಆಧಾರಿತ ಪ್ರಮಾಣಿತವಾಗಿದೆ (ಅಂದರೆ, ಇದು ಗ್ಲಿಫ್ಗಳನ್ನು ಶೇಖರಿಸಲು ASCII ಮೌಲ್ಯಗಳನ್ನು ಬಳಸುತ್ತದೆ).[೩] ನುಡಿ ಎಡಿಟರ್ ಯುನಿಕೋಡ್ನಲ್ಲಿ ಉಳಿಸುವಲ್ಲಿ ಮತ್ತು ನುಡಿ ಎಂಜಿನ್ ಯುನಿಕೋಡ್ನಲ್ಲಿ ದತ್ತವನ್ನು ಸೇರಿಸುವುದನ್ನು ಅನುವು ಮಾಡಿಕೊಡುವುದು, ಈ ವ್ಯವಸ್ಥೆಯು ಯೂನಿಕೋಡ್ಗೆ ಬೆಂಬಲವನ್ನು ಒದಗಿಸುತ್ತದೆ. ಅದರೆ ಇದು ವ್ಯವಸ್ಥೆ(system )ಯಲ್ಲಿ ಯುನಿಕೋಡ್ಗೆ ಬೆಂಬಲ ವಿದ್ದರೆ ಮತ್ತು ಮತ್ತು ವ್ಯವಸ್ಥೆ(system )ಯಲ್ಲಿ ಒಂದು ಮುಕ್ತ ಫಾಂಟ್ ಇದ್ದರೆ ಮಾತ್ರ ಸಾದ್ಯವಾಗುವುದು..

ನುಡಿ ಅಕ್ಸೆಸ್(Access), ಒರ್ಯಾಕಲ್(Oracle), ಎಸ್‍ಕ್ಯು‍ಎಲ‍್(SQL), ಡಿಬಿ೨(DB2) ಮುಂತಾದ ಬಹಳಷ್ಟು ವಿಂಡೋಸ್ ಆಧಾರಿತ ಡೇಟಾಬೇಸ್ ವ್ಯವಸ್ಥೆಗಳನ್ನು ಬೆಂಬಲಿಸುತ್ತದೆ.

ನುಡಿ ಕನ್ನಡ ಲಿಪಿ ತಂತ್ರಾಂಶ 5.0[ಬದಲಾಯಿಸಿ]

  • ಯೂನಿಕೋಡ್ ಮತ್ತು ಯುಟಿಎಫ್-8 ಶಿಷ್ಟತೆಗಳನ್ನು ಅಳವಡಿಸಲಾಗಿದೆ;
  • ಹೊಸ ಅಕ್ಷರ ಶೈಲಿಗಳು ಲಭ್ಯವಿವೆ;
  • ಎಂಎಸ್ವರ್ಡ್ನಲ್ಲಿ ಪದಪರೀಕ್ಷೆ, ನಮೂದಿಸುವಾಗಲೇ ಬದಲಾವಣೆ ಸೌಲಭ್ಯವನ್ನು ನೀಡಲಾಗಿದೆ.

ನೋಡಿ[ಬದಲಾಯಿಸಿ]

  • ಸಹಾಯ:ಲಿಪ್ಯಂತರ -ಅಲ್ಲಿ ವಿವರಕ್ಕೆ-> ಕಗಪ/ನುಡಿ-KGP/Nudi/KPRao- ಕೀಲಿಮಣೆ ಸಹಾಯ -ನುಡಿ ಲಿಪಿ ಉಪಯೋಗ ಕ್ರಮ

ಉಲ್ಲೇಖ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]