ವಿಷಯಕ್ಕೆ ಹೋಗು

ಡೇಟಾಬೇಸ್ ನಿರ್ವಹಣಾ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಡೇಟಾಬೇಸ್ ನಿರ್ವಹಣಾ ವ್ಯವಸ್ಥೆ (DBMS )ಯು ಕಂಪ್ಯೂಟರ್ ಪ್ರೋಗ್ರಾಂಗಳ ಒಂದು ಗುಂಪಾಗಿದ್ದು, ಅದು ರಚನೆ, ನಿರ್ವಹಣೆಯನ್ನು ನಿಭಾಯಿಸುತ್ತದೆ, ಮತ್ತು ಕಂಪ್ಯೂಟರಿನೊಂದಿಗಿನ ಡೇಟಾಬೇಸ್‌ನ ಬಳಕೆಯು ತನ್ನ ಅಂತಿಮ ಬಳಕೆದಾರರಿಗೆ ಒಂದು ವೇದಿಕೆ ಅಥವಾ ಸಂಘಟನೆಯಾಗಿದೆ. ಇದು ಡೇಟಾಬೇಸ್ ಆಡಳಿತಗಾರರ (DBAs) ಅಥವಾ ಇತರೆ ಪರಿಣಿತರ ಹಿಡಿತದಲ್ಲಿ ಸಂಘಟನಾ-ಡೇಟಾಬೇಸ್ ಅಭಿವೃದ್ಧಿ ನಿಯಂತ್ರಣವನ್ನು ಸ್ಥಳಾಂತರಿಸಲು ಸಂಘಟನೆಗಳಿಗೆ ಅನುಮತಿಸುತ್ತದೆ. DBMS ಇದು ಸಿಸ್ಟಮ್‌ ಸಾಫ್ಟ್‌ವೇರ್ ಪ್ಯಾಕೇಜ್‌ ಆಗಿದ್ದು, ದತ್ತಾಂಶ ದಾಖಲೆಗಳ ಸಮಗ್ರ ಸಂಗ್ರಹದ ಬಳಕೆ ಮತ್ತು ಡೇಟಾಬೇಸ್‌ ಎಂದು ಪರಿಚಿತವಾಗಿರುವ ಕಡತಗಳಿಗೆ ಸಹಾಯ ಮಾಡುತ್ತದೆ. ಇದು ವಿವಿಧ ಬಳಕೆದಾರ ಅಪ್ಲಿಕೇಷನ್ ಪ್ರೋಗ್ರಾಂಗಳಿಗೆ ಅದೇ ರೀತಿಯ ಡೇಟಾಬೇಸ್‌ ಅನ್ನು ಸುಲಭವಾಗಿ ಪ್ರವೇಶಿಸಲು ಅನುಮತಿ ನೀಡುತ್ತದೆ. DBMS ಯು ಡೇಟಾಬೇಸ್ ಮಾದರಿಗಳ ಯಾವುದೇ ವಿಧವನ್ನು ಬಳಸಬಹುದು, ಅವುಗಳೆಂದರೆ ನೆಟ್‌ವರ್ಕ್ ಮಾದರಿ ಅಥವಾ ಸಂಬಂಧಾತ್ಮಕ ಮಾದರಿ. ಬೃಹತ್ ವ್ಯವಸ್ಥೆಗಳಲ್ಲಿ, DBMS ತನ್ನ ಬಳಕೆದಾರರಿಗೆ ಮತ್ತು ಇತರೆ ಸಾಫ್ಟ್‌ವೇರ್‌ಗಳಿಗೆ ಒಂದು ವಿನ್ಯಾಸದ ಮಾದರಿಯಲ್ಲಿ ದತ್ತಾಂಶವನ್ನು ಸಂಗ್ರಹಿಸಲು ಮತ್ತು ಸರಿಪಡಿಸಿಕೊಳ್ಳಲು ಅನುಮತಿ ನೀಡುತ್ತದೆ. ಮಾಹಿತಿಗಳನ್ನು ಹೊರತೆಗೆಯಲು ಕಂಪ್ಯೂಟರ್ ಪ್ರೊಗ್ರಾಂಗಳನ್ನು ಬರೆಯುವ ಬದಲಾಗಿ ಬಳಕೆದಾರರು ವೈಚಾರಿಕ ಭಾಷೆಯಲ್ಲಿ ಸರಳ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಈ ಪ್ರಕಾರವಾಗಿ, ಹಲವಾರು DBMS ಪ್ಯಾಕೇಜ್‌ಗಳು ನಾಲ್ಕನೇ-ತಲೆಮಾರಿನ ಪ್ರೊಗ್ರಾಮಿಂಗ್ ಭಾಷೆಯನ್ನು (4GLs) ಮತ್ತು ಇತರ ಅಪ್ಲಿಕೇಷನ್ ಅಭಿವೃದ್ಧಿಯ ಲಕ್ಷಣಗಳನ್ನು ಒದಗಿಸುತ್ತವೆ. ಅದು ಡೇಟಾಬೇಸ್‌ಗಾಗಿ ತಾರ್ಕಿಕ ಸಂಘಟನೆಯನ್ನು ಖಚಿತವಾಗಿ ನಿರ್ಧರಿಸುವ ಮತ್ತು ಡೇಟಾಬೇಸ್‌ನೊಳಗೆ ಮಾಹಿತಿ ಪ್ರವೇಶ ಮತ್ತು ಬಳಕೆಯನ್ನು ನಿರೂಪಿಸಲು ಸಹಾಯ ಮಾಡುತ್ತದೆ. ಅದು ದತ್ತಾಂಶ ಬಳಕೆ‌ಯ ನಿಯಂತ್ರಣಕ್ಕೆ, ಕಡ್ಡಾಯವಾಗುತ್ತಿರುವ ದತ್ತಾಂಶ ಸಮಗ್ರತೆಗೆ, ಏಕಾಭಿಪ್ರಾಯ ನಿಯಂತ್ರಣ ನಿರ್ವಹಣೆಗೆ, ಡೇಟಾಬೇಸ್‌ ಮರು ಸಂಗ್ರಹಣೆಗಾಗಿ ಸೌಲಭ್ಯಗಳನ್ನು ಒದಗಿಸುತ್ತದೆ.

ಸ್ಥೂಲ ಅವಲೋಕನ[ಬದಲಾಯಿಸಿ]

DBMS ತಂತ್ರಾಂಶ ಪ್ರೊಗ್ರಾಂಗಳ ಸಾಧನವಾಗಿದ್ದು, ಅದು ಸಂಘಟನೆ, ಶೇಖರಣೆ, ನಿರ್ವಹಣೆ ಮತ್ತು ಡೇಟಾಬೇಸ್‌ನಲ್ಲಿ ಹಿಂದಕ್ಕೆ ಪಡೆಯಲ್ಪಟ್ಟ ಡೇಟಾವನ್ನು ನಿಯಂತ್ರಿಸುತ್ತದೆ. DBMSಗಳು ಅವುಗಳ ಡೇಟಾ ಸಂರಚನೆಗಳು ಅಥವಾ ವಿಧಗಳಿಂದಾಗಿ ವಿಭಾಗಿಸಲ್ಪಟ್ಟಿವೆ. DBMS ಅಪ್ಲಿಕೇಷನ್ ಪ್ರೊಗ್ರಾಂಗಳಿಂದ ದತ್ತಾಂಶಗಳ ಮನವಿಗಳನ್ನು ಒಪ್ಪಿಕೊಳ್ಳುತ್ತದೆ ಮತ್ತು ಕಾರ್ಯನಿರ್ವಾಹಣಾ ವ್ಯವಸ್ಥೆಗೆ ಸೂಕ್ತವಾದ ದತ್ತಾಂಶವನ್ನು ವರ್ಗಾಯಿಸುವಂತೆ ಸೂಚಿಸುತ್ತದೆ. ಒಂದು ಅಥವಾ ಒಂದಕ್ಕಿಂತ ಹೆಚ್ಚು ಅನ್ವಯಿಸುವ ಶಿಷ್ಟಾಚಾರಗಳನ್ನು ಅನುಸರಿಸುವ ಒಂದು ವಿನ್ಯಾಸದ ಪ್ರಕಾರ ಪ್ರಶ್ನಾವಳಿಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಸಲ್ಲಿಸುವಂತಿರಬೇಕು ಮತ್ತು ಪಡೆದುಕೊಳ್ಳುವಂತಿರಬೇಕು. DBMSಅನ್ನು ಬಳಸಲ್ಪಟ್ಟಾಗ, ಸಂಘಟನೆಗಳ ಮಾಹಿತಿಯ ಅಗತ್ಯತೆಗಳು ಬದಲಾದಂತೆ ಮಾಹಿತಿ ವ್ಯವಸ್ಥೆಯು ಕೂಡ ಅತ್ಯಂತ ಸುಲಭವಾಗಿ ಬದಲಾಗಬಹುದು. ಈಗ ಅಸ್ಥಿತ್ವದಲ್ಲಿರುವ ವ್ಯವಸ್ಥೆಗೆ ಭಂಗವುಂಟು ಮಾಡದಂತೆ ದತ್ತಾಂಶಗಳ ಹೊಸ ವಿಭಾಗಗಳನ್ನು ಡೇಟಾಬೇಸ್‌ಗೆ ಸೇರಿಸಬಹುದು.ಡೇಟಾಬೇಸ್ ಸರ್ವರ್‌ಗಳು, ಕೇವಲ DBMS ಮತ್ತು ಸಂಬಂಧಿತ ಸಾಫ್ಟ್‌ವೇರ್‌ಗಳನ್ನು ಮಾತ್ರ ಚಾಲನೆಗೊಳಿಸುವ ನೈಜ ಡೇಟಾಬೇಸ್‌‌ ಅನ್ನು ಒಳಗೊಂಡಿರುವ ಕಂಪ್ಯೂಟರ್‌ಗಳಾಗಿವೆ. ಡೇಟಾಬೇಸ್ ಸರ್ವರ್‌ಗಳು ಸಾಮಾನ್ಯವಾಗಿ ಯಥೇಚ್ಛವಾದ ಸ್ಮರಣೆಯನ್ನು ಮತ್ತು RAID ಡಿಸ್ಕ್ ವ್ಯೂಹಗಳನ್ನು ಹೊಂದಿರುವ ಮಲ್ಟಿಪ್ರೊಸೆಸರ್ ಕಂಪ್ಯೂಟರ್‌ಗಳಾಗಿದ್ದು, ಇವು ಸ್ಥಿರ ಶೇಖರಣೆಗಾಗಿ ಬಳಸಲ್ಪಡುತ್ತವೆ. ಹಾರ್ಡ್‌ವೇರ್ ಡೇಟಾಬೇಸ್ ಎಕ್ಸಲೇಟರ್‌ಗಳು ಅಧಿಕ-ವೇಗ ವಾಹಿನಿಗಳ ಮೂಲಕ ಒಂದು ಅಥವಾ ಹೆಚ್ಚಿನ ಸರ್ವರ್‌ಗಳನ್ನು ಸಂಪರ್ಕಿಸುತ್ತವೆ, ಅವು ಬೃಹತ್ ಸಂಪುಟ ವರ್ಗಾವಣಾ ಪ್ರಕ್ರಿಯೆ ಪರಿಸರಗಳಲ್ಲಿಯೂ ಸಹ ಬಳಸಲ್ಪಡುತ್ತವೆ. DBMS ಗಳು ಹೆಚ್ಚಾಗಿ ಡೇಟಾಬೇಸ್‌ ಅಪ್ಲಿಕೇಷನ್‌ಗಳ ಹೃದಯ ಭಾಗದಲ್ಲಿ ಸ್ಥಾಪಿತವಾಗಿವೆ. ಕೆಲವು ಸಮಯದಲ್ಲಿ DBMSಗಳು ನೆಟ್‌ವರ್ಕಿಂಗ್ ಬೆಂಬಲವಿರುವ ಖಾಸಗಿ ಮಲ್ಟಿಟಾಸ್ಕಿಂಗ್‌ ಕೆರ್ನಲ್‌ನಲ್ಲಿ ಆಂತರಿಕವಾಗಿ ರಚಿಸಲ್ಪಟ್ಟಿದೆ, ಆದರೂ ಇತ್ತೀಚಿನ ದಿನಗಳಲ್ಲಿ ಈ ಕಾರ್ಯಗಳನ್ನು ನಿರ್ವಹಣಾ ವ್ಯವಸ್ಥೆಯಿಂದ ತೆಗೆಯಲಾಗಿದೆ.

ಇತಿಹಾಸ[ಬದಲಾಯಿಸಿ]

ಡೇಟಾಬೇಸ್‌ಗಳು ವಿದ್ಯುನ್ಮಾನ ಗಣಕೀಕರಣದ ಆರಂಭದ ದಿನಗಳಿಂದಲೂ ಬಳಕೆಯಾಗುತ್ತಿವೆ. ಸಾಮ್ಯವಿಲ್ಲದ ಆಧುನಿಕ ಸಿಸ್ಟಮ್‌ಗಳು ವಿವಿಧ ಡೇಟಾ ಬೇಸ್‌ಗಳಿಗೆ ಮತ್ತು ಅಗತ್ಯತೆಗಳಿಗೆ ಬಹುವಿಸ್ತಾರವಾಗಿ ಅನ್ವಯಿಸಬಲ್ಲವು, ಪ್ರಮುಖವಾಗಿ ಹಳೆಯ ಸಿಸ್ಟಮ್‌ಗಳು ಹೊಂದಿಕೊಳ್ಳಬಹುದಾದ ವೆಚ್ಚದಲ್ಲಿ ವೇಗವನ್ನು ಪಡೆಯುವ ಕ್ರಮದಲ್ಲಿ ಕಸ್ಟಮ್ ಡೇಟಾಬೇಸ್‌ಗಳಿಗೆ ಸ್ಥಿರವಾಗಿ ಹೊಂದಿಕೊಂಡಿದ್ದವು. ಮೂಲತಹವಾಗಿ DBMSಗಳು ದೊಡ್ಡ ಡೇಟಾ ಸೆಟ್‌ಗಳನ್ನು ಬೆಂಬಲಿಸಲು ಅಗತ್ಯವಾಗಿದ್ದ ಕಂಪ್ಯೂಟರ್ ಹಾರ್ಡ್‌ವೇರ್‌ನೊಂದಿಗೆ ಬೃಹತ್ ಸಂಘಟನೆಗಳಲ್ಲಿ ಮಾತ್ರ ಸ್ಥಾಪಿಸಲ್ಪಟ್ಟಿವೆ.

1960ರ ನ್ಯಾವಿಗೇಷನಲ್ DBMS[ಬದಲಾಯಿಸಿ]

ಕಂಪ್ಯೂಟರ್‌ಗಳು ವೇಗದಲ್ಲಿ ಮತ್ತು ದಕ್ಷತೆಯಲ್ಲಿ ಬೆಳವಣಿಗೆಯನ್ನು ಹೊಂದಿದ್ದವು, ಅನೇಕ ಸಾಮಾನ್ಯ-ಉದ್ದೇಶವುಳ್ಳ ಡೇಟಾಬೇಸ್ ವ್ಯವಸ್ಥೆಗಳು ಉದಯಿಸಿದ್ದವು; 1960ರ ಮದ್ಯಭಾಗದಲ್ಲಿ ವಾಣಿಜ್ಯಿಕ ಬಳಕೆಯಲ್ಲಿದ್ದ ಕೆಲವು ಸಿಸ್ಟಮ್‌ಗಳಿದ್ದವು. ದಕ್ಷತೆಯ ಬಗೆಗಿನ ಕಾಳಜಿಯು ಬೆಳೆಯತೊಡಗಿತ್ತು ಮತ್ತು ಇಂಟಿಗ್ರೇಟೇಡ್‌ ಡೇಟಾ ಸ್ಟೋರ್‌ (IDS) ಎಂಬ ಉತ್ಪನ್ನದ ಬರಹಗಾರರಾದ ಚಾರ್ಲ್ಸ್‌ ಬಚ್‌ಮನ್‌ CODASYLನೊಳಗೆ "ಡೇಟಾಬೇಸ್‌ಟಾಸ್ಕ್ ಗ್ರೂಪ್" ಅನ್ನು ಸ್ಥಾಪಿಸಿದರು, ಈ ಗುಂಪು COBOLನ ಗುಣಮಟ್ಟೀಕರಣ ಮತ್ತು ರಚನೆಯ ಜವಾಬ್ದಾರಿಯನ್ನು ಹೊಂದಿತ್ತು. 1971ರಲ್ಲಿ ಅವರು ಅದರ ಗುಣಮಟ್ಟವನ್ನು ವಿತರಿಸಿದರು, ಅದು ಸಾಮಾನ್ಯವಾಗಿ " Codasyl ವಿಧಾನ‌" ಎಂದು ಪರಿಚಿತವಾಗಿತ್ತು, ಮತ್ತು ಇವು ಅತ್ಯಂತ ವೇಗದಲ್ಲಿ ಇದಕ್ಕೆ ಅವಲಂಬಿಸಿರುವಂತಹ ಅಸಂಖ್ಯ ವಾಣಿಜ್ಯಾತ್ಮಕ ವಸ್ತುಗಳ ಬೆಳವಣಿಗೆಗೆ ಕಾರಣವಾಯಿತು.Codasyl ವಿಧಾನ "ಮಾನವಿಕ" ನ್ಯಾವಿಗೇಶನ್‌ಗೆ ಹೊಂದಿಕೊಂಡಿರುವ ದೊಡ್ಡ ನೆಟ್‌ವರ್ಕ್‌ನಲ್ಲಿ ರಚನೆಗೊಂಡಿದ್ದ ಡೇಟಾ ಸೆಟ್‌ನ ಆಧಾರಿತವಾಗಿದೆ. ಡೇಟಾಬೇಸ್‌ ಮೊದಲಿಗೆ ಆರಂಭವಾದಾಗ, ಪ್ರೊಗ್ರಾಂ ಡೇಟಾಬೇಸ್‌ನಲ್ಲಿ ಪ್ರಥಮ ದಾಖಲೆಗೆ ಲಿಂಕ್‌ ಅನ್ನು ಹಿಂಪಡೆದಿತ್ತು. ಅದು ಇತರೆ ಡೇಟಾ ವಿಭಾಗಗಳಿಗೆ ಪಾಯಿಂಟರ್‌‌ಗಳನ್ನು ಸಹ ಒಳಗೊಂಡಿದೆ. ಯಾವುದೇ ನಿರ್ದಿಷ್ಟ ದಾಖಲೆಯನ್ನು ಹುಡುಕಲು ಪ್ರೊಗ್ರಾಮರ್, ಅಗತ್ಯವಾಗಿ ಬೇಕಾದ ದಾಖಲೆ ಹಿಂತಿರುಗುವವರೆಗೆ ಈ ಪಾಯಿಂಟರ್‌ಗಳ ಮೂಲಕ ಒಂದೇ ಸಮಯದಲ್ಲಿ ಹೆಜ್ಜೆ ಹಾಕಬೇಕಿತ್ತು. "ಎಲ್ಲಾ ವ್ಯಕ್ತಿಗಳನ್ನು ಭಾರತದಲ್ಲಿ ಹುಡುಕಿರಿ" ಎಂಬಂತಹ ಸರಳ ವಿಚಾರಗಳಿಗೂ ಕೂಡ ಎಲ್ಲಾ ಡೇಟಾ ಸೆಟ್ ಅನ್ನು ನಡೆಸುವ ಮತ್ತು ಹೊಂದಾಣಿಕೆಯ ಫಲಿತಾಂಶಗಳನ್ನು ಸಂಗ್ರಹಿಸುವ ಪ್ರೊಗ್ರಾಂ ಅಗತ್ಯವಾತ್ತು. ಅಲ್ಲಿ "ಹುಡುಕು" ಅಥವಾ "ಶೋಧಿಸು" ಎಂಬ ಕಲ್ಪನೆಗಳ ಅಗತ್ಯವಿರಲಿಲ್ಲ. ಇದು ಇಂದು ಗಂಭೀರವಾದ ಪ್ರತಿಬಂಧದಂತೆ ಭಾಸವಾಗುತ್ತಿದೆ, ಆದರೆ ಒಂದು ಕಾಲಮಾನದಲ್ಲಿ ದತ್ತಾಂಶಗಳನ್ನು ಹೆಚ್ಚಾಗಿ ಮ್ಯಾಗ್ನೆಟಿಕ್‌ ಟೇಪುಗಳಲ್ಲಿ ಸಂಗ್ರಹಿಸುತ್ತಿದ್ದಾಗ ಈ ರೀತಿಯ ಚಟುವಟಿಕೆಗಳನ್ನು ಪೂರ್ಣಗೊಳಿಸುವುದು ತುಂಬಾ ದುಬಾರಿಯಾಗಿತ್ತು.IBM ಕೂಡ 1968ರಲ್ಲಿ ತನ್ನದೇ ಆದ ಸ್ವಂತ IMS ಎಂಬ DBMs ವ್ಯವಸ್ಥೆಯನ್ನು ಹೊಂದಿತ್ತು, IMS ಇದು ಸಿಸ್ಟಮ್/360ನಲ್ಲಿನ ಅಪೊಲೊ ಪ್ರೊಗ್ರಾಂಗಾಗಿ ಬರೆಯಲ್ಪಟ್ಟ ಅಭಿವೃದ್ಧಿ ತಂತ್ರಾಂಶವಾಗಿತ್ತು. IMS ಸಾಮಾನ್ಯವಾಗಿ Codasylನ ಕಲ್ಪನೆಗೆ ಹೋಲಿಕೆಯಾಗುತ್ತಿತ್ತು, ಆದರೆ Codasylನ ನೆಟ್‌ವರ್ಕ್ ಮಾದರಿಯ ಬದಲಾಗಿ ಡೇಟಾ ನ್ಯಾವಿಗೇಶನ್‌‌ನ ಮಾದರಿಗಾಗಿ ಕಟ್ಟುನಿಟ್ಟಾದ ಕ್ರಮಾಗತ ವ್ಯವಸ್ಥೆಯನ್ನು ಬಳಸಲಾಗಿತ್ತು. ಎರಡೂ ಕಲ್ಪನೆಗಳು ತರುವಾಯ ದತ್ತಾಂಶಗಳನ್ನು ಬಳಸಿಕೊಂಡ ರೀತಿಯಿಂದಾಗಿ ನ್ಯಾವಿಗೇಶನಲ್ ಡೇಟಾಬೇಸ್‌ಗಳಾಗಿ ಪರಿಚಿತವಾದವು, ಮತ್ತು ಬ್ಯಾಚ್‌ಮನ್‌ನ 1973ರ ಟೂರಿಂಗ್ ಅವಾರ್ಡ್ ಪ್ರಶಸ್ತಿ ಸಮರ್ಪಣೆಯು ದ ಪ್ರೊಗ್ರಾಮರ್ ಆ‍ಯ್‌ಸ್ ದ ನಾವಿಗೇಟರ್ ಆಗಿತ್ತು. IMS ಇದು ಕ್ರಮಾಗತ ಡೇಟಾಬೇಸ್ ಆಗಿ ವರ್ಗೀಕೃತಗೊಂಡಿದೆ. IDS ಮತ್ತು IDMS, ಎರಡೂ CODASYL ಡೇಟಾಬೇಸ್‌ಗಳು, ಜೊತೆಗೆ CINCOMಗಳು, TOTAL ಡೇಟಾಬೇಸ್‌ಗಳು, ನೆಟ್‌ವರ್ಕ್ ಡೇಟಾಬೇಸ್‌ಗಳಾಗಿ ವರ್ಗೀಕೃತಗೊಂಡಿವೆ.

1970ರ ಸಂಬಂಧಿತ DBMS[ಬದಲಾಯಿಸಿ]

ಎಡ್ಗರ್ ಕೊಡ್, ಹಾರ್ಡ್ ಡಿಸ್ಕ್ ಸಿಸ್ಟಮ್ಸ್‌ನ ಅಭಿವೃದ್ಧಿಯಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದ ಮತ್ತು ಉಪಶಾಖೆ ಕಛೇರಿಗಳಲ್ಲಿ ಒಂದಾಗಿದ್ದ ಕ್ಯಾಲಿಪೊರ್ನಿಯಾದ ಸ್ಯಾನ್ ಜೋಸ್‌IBMನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು Codasyl ವಿಧಾನದ ನ್ಯಾವಿಗೇಶನಲ್ ಮಾದರಿಗೆ ಅದರಲ್ಲೂ ಪ್ರಮುಖವಾಗಿ ಹೆಚ್ಚು ಉಪಯೋಗಾರ್ಹವಾಗಿದ್ದ "ಶೋಧಿಸುವ" ಸೌಲಭ್ಯದ ಕೊರತೆಯಿಂದಾಗಿ ಅಸಂತೋಷ ವ್ಯಕ್ತಪಡಿಸಿದ್ದರು. 1970ರಲ್ಲಿ, ಹೊಸ ಡೇಟಾಬೇಸ್ ರಚನೆಯ ವಿಧಾನದ ಸ್ಥೂಲ ವಿವರಣೆಯನ್ನೊಳಗೊಂಡಿರುವ ಅನೇಕ ಲೇಖನಗಳನ್ನು ಬರೆದರು, ಅದು ಅಂತಿಮವಾಗಿ ಎ ರಿಲೇಷನಲ್ ಮಾಡೆಲ್ ಆಫ್ ಡೇಟಾ ಫಾರ್ ಲಾರ್ಜ್ ಶೇರ್ಡ್ ಡೇಟಾ ಬ್ಯಾಂಕ್ಸ್ ಎಂಬ ಗ್ರೌಂಡ್‌ಬ್ರೇಕಿಂಗ್‌ನಲ್ಲಿ ಸಮಾಪ್ತಿಯಾಯಿತು.[೧]ಈ ಲೇಖನದಲ್ಲಿ ಅವರು ದೊಡ್ಡ ಡೇಟಾಬೇಸ್‌ನೊಂದಿಗೆ ಶೇಖರಿಸುವ ಮತ್ತು ಕಾರ್ಯನಿರ್ವಹಿಸುವ ಹೊಸ ವ್ಯವಸ್ಥೆಯನ್ನು ವಿವರಿಸಿದ್ದಾರೆ. Codasylನಲ್ಲಿ ಮುಕ್ತ-ಸ್ವರೂಪದ ಸಂಯೋಜನಾ ಪಟ್ಟಿಯಲ್ಲಿ ಜೋಡಣೆಗೊಂಡ ದಾಖಲೆಗಳನ್ನು ಸಂಗ್ರಹಿಸುವ ಬದಲಾಗಿ ನಿಗದಿತ-ಉದ್ದದ ದಾಖಲೆಗಳ "ಕೋಷ್ಟಕ"ವನ್ನು ಬಳಸುವುದು ಕೊಡ್‌ನ ತಂತ್ರವಾಗಿತ್ತು. ಯಾವುದಾದರೊಂದು ರೆಕಾರ್ಡ್ ಖಾಲಿ ಮಾಡುವುದಕ್ಕಾಗಿ ಕೆಲವು ಡೇಟಾಗಳಿರುವಲ್ಲಿ "ವಿರಳ" ಡೇಟಾಬೇಸ್‌ಗಳನ್ನು ಶೇಖರಿಸುವ ಸಂದರ್ಭದಲ್ಲಿ ಸಂಯೋಜನಾ-ಪಟ್ಟಿಯ ವ್ಯವಸ್ಥೆಯು ಅಸಮರ್ಥವಾಗಿತ್ತು. ಸಂಬಂಧಿತ ಮಾದರಿಯು ಡೆಟಾಗಳನ್ನು ಸಾಮಾನ್ಯ ಕೋಷ್ಟಕಗಳ ಸರಣಿಯಲ್ಲಿ ವಿಭಜಿಸುವುದರ ಮೂಲಕ ಈ ಸಮಸ್ಯೆಯನ್ನು ಪರಿಹರಿಸುತ್ತದೆ, ಐಚ್ಛಿಕ ಅಂಶಗಳ ಜೊತೆಗೆ ಹೊರಕ್ಕೆ ತಳ್ಳಲ್ಪಟ್ಟ ಕೋಷ್ಟಕವನ್ನು ಅಗತ್ಯವಿದ್ದಾಗ ಮಾತ್ರ ಕೋಣೆಯೊಳಗೆ ತೆಗೆದುಕೊಳ್ಳಬಹುದಾಗಿತ್ತು.

ಸಂಬಂಧಿತ ಮಾದರಿಯಲ್ಲಿ, ಸಂಬಂಧಿಸಿದ ದಾಖಲೆಗಳು "ಕೀಲಿ" ಜೊತೆಗೆ ಹೊಂದಿಕೊಂಡಿವೆ.

ನಿದರ್ಶನವೆಂದರೆ, ಸಾಮಾನ್ಯ ಬಳಕೆಯ ಡೇಟಾಬೇಸ್ ಸಿಸ್ಟಮ್ ಬಳಕೆದಾರರ ಕುರಿತಾದ ಅವರ ಹೆಸರು, ಲಾಗಿನ್ ಮಾಹಿತಿ, ವಿವಿಧ ವಿಳಾಸಗಳು ಮತ್ತು ಪೋನ್ ನಂಬರುಗಳ ಪತ್ತೆಹಚ್ಚುವಿಕೆಯಾಗಿದೆ. ನ್ಯಾವಿಗೇಶನಲ್ ವಿಧಾನದಲ್ಲಿ ಈ ಎಲ್ಲಾ ದತ್ತಾಂಶವು ಕೇವಲ ಒಂದೇ ದಾಖಲೆಯಲ್ಲಿ ಅಡಕವಾಗಿವೆ, ಮತ್ತು ಬಳಕೆಯಾಗದ ವಿಷಯಗಳು ಡೇಟಾಬೇಸ್‌ನ ಯಾವುದೇ ಸ್ಥಾನವನ್ನು ಹೊಂದಿಲ್ಲ. ಸಂಬಂಧಿತ ವಿಧಾನದಲ್ಲಿ, ದತ್ತಾಂಶವು ಬಳಕೆದಾರನ ಕೋಷ್ಟಕ, ವಿಳಾಸ ಕೋಷ್ಟಕ ಮತ್ತು ಪೋನ್ ನಂಬರ್ ಕೋಷ್ಟಕದಲ್ಲಿ ಸಾಮಾನ್ಯೀಕರಣ ಗೊಳಿಸಲಾಗುತ್ತದೆ (ನಿದರ್ಶಕ್ಕಾಗಿ). ವಿಳಾಸ ಅಥವಾ ಪೋನ್ ನಂಬರ್‌ಗಳನ್ನು ನಿಜವಾಗಿಯೂ ಒದಗಿಸಲ್ಪಟ್ಟಿದ್ದರೆ ಮಾತ್ರ ಈ ಕೋಷ್ಟಕಗಳಲ್ಲಿ ದಾಖಲೆಗಳು ಸೃಷ್ಠಿಯಾಗುತ್ತವೆ. ಮಾಹಿತಿಯನ್ನು ಒಟ್ಟಿಗೆ ಹಿಂಪಡೆಯುವ ಸಂಯೋಜನೆಯು, ಈ ವ್ಯವಸ್ಥೆಯ ಕೀಲಿ ಆಗಿದೆ, ಸಂಬಂಧಿತ ಮಾದರಿಯಲ್ಲಿ, ನಿರ್ಧಿಷ್ಟವಾದ ದಾಖಲೆಯನ್ನು ಪ್ರತ್ಯೇಕವಾಗಿ ವರ್ಣಿಸುತ್ತ ಕೆಲವು ಸಣ್ಣ ಮಾಹಿತಿಗಳನ್ನು "ಕೀಲಿ"ಯನ್ನಾಗಿ ಬಳಸಲಾಗುತ್ತದೆ. ಬಳಕೆದಾರನ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿದಾಗ, ಈ ಕೀಲಿಯನ್ನು ಶೋಧಿಸುತ್ತಿರುವುವಾಗ ಐಚ್ಚಿಕ ಕೋಷ್ಟಕಗಳಲ್ಲಿ (ಅಥವಾ ಸಂಬಂಧಿತ ) ಸಂಗ್ರಹಗೊಂಡ ಮಾಹಿತಿಗಳು ಕಂಡುಹಿಡಿಯಲ್ಪಟ್ಟವು. ಉದಾಹರಣೆಗೆ, ಒಂದು ವೇಳೆ ಬಳಕೆದಾರನ ಲಾಗಿನ್ ಹೆಸರು ವಿಶಿಷ್ಟವಾಗಿದ್ದರೆ, ಆ ಬಳಕೆದಾರನ ವಿಳಾಸಗಳು ಮತ್ತು ಪೋನ್ ನಂಬರುಗಳು ಆತನ ಲಾಗಿನ್‌ ಹೆಸರನ್ನು ಕೀಲಿಯನ್ನಾಗಿ ದಾಖಲಿಸಿಕೊಳ್ಳುತ್ತವೆ. ಸಾಂಪ್ರದಾಯಿಕ ಕಂಪ್ಯೂಟರ್ ಭಾಷೆಗಳು ವಿನ್ಯಾಸಗೊಂಡಿಲ್ಲದ ಕಾರಣದಿಂದ ಸಂಬಂಧಿತ ದತ್ತಾಂಶಗಳ ಈ "ಮರು-ಸಂಯೋಜನೆ"ಯನ್ನು ಏಕ ಸಂಗ್ರಹಕ್ಕೆ ಹಿಂತಿರುಗಿಸಲಾಗಿದೆ. ನ್ಯಾವಿಗೇಶನಲ್ ವಿಧಾನದ ರೀತಿಯಂತೆ ದಾಖಲೆಗಳನ್ನು ಸಂಗ್ರಹಿಸಲು ಪ್ರೊಗ್ರಾಂಗಳು ಅಗತ್ಯವಾಗಿದೆ, ಯಾವುದಾದರೊಂದು ದಾಖಲೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಕೂಡ ಸಂಬಂಧಿತ ವಿಧಾನ ಅಗತ್ಯವಾಗಿದೆ. ಅಗತ್ಯ ಆವರ್ತನಕ್ಕೆ ಕೋಡ್‌ನ ಪರಿಹಾರವು ಸೆಟ್-ಅವಲಂಭಿತ ಭಾಷೆಯಾಗಿದ್ದು, ನಂತರದಲ್ಲಿ ಈ ಪರಿಹಾರವು ಎಲ್ಲೆಡೆಯೂ ಇರುವ SQLನ ಉಗಮಕ್ಕೆ ಕಾರಣವಾಯಿತು. ಟುಪಲ್ ಕ್ಯಾಲ್ಕಲಸ್ ಎಂದು ಪರಿಚಿತವಾಗಿರುವ ಗಣಿತಶಾಸ್ತ್ರ ಶಾಖೆಯನ್ನು ಬಳಸುವುದರ ಮೂಲಕ, ಈ ರೀತಿಯ ಸಿಸ್ಟಮ್‌‌ಗಳು ಸಾಮಾನ್ಯ ಡೇಟಾಬೇಸ್‌ಗಳ (ಅಳವಡಿಸುವಿಕೆ, ಶೇಖರಿಸುವಿಕೆ ಇತ್ಯಾದಿ) ಎಲ್ಲಾ ಕಾರ್ಯ ನಿರ್ವಹಣೆಗಳನ್ನು ಬೆಂಬಲಿಸಬಲ್ಲದು, ಹಾಗೆಯೇ ಏಕ ಕಾರ್ಯ ನಿರ್ವಹಣೆಯಲ್ಲಿ ದತ್ತಾಂಶ ಗುಂಪುಗಳ ನ್ನು ಹಿಂದಿರುಗಿಸುವುದಕ್ಕಾಗಿ ಮತ್ತು ಹುಡುಕುವುದಕ್ಕಾಗಿ ಸರಳ ವ್ಯವಸ್ಥೆಯನ್ನು ಒದಗಿಸುತ್ತದೆ ಎಂದು ಅವರು ರುಜುವಾತು ಪಡಿಸಿದ್ದಾರೆ. ಕೊಡ್‌ನ ಲೇಖನವು ಬರ್ಕೇಲಿಯಲ್ಲಿ ಯುಜೀನ್ ವಾಂಗ್ ಮತ್ತು ಮೈಕೆಲ್ ಸ್ಟೋನ್‌ಬ್ರಕರ್ ಎಂಬ ಇಬ್ಬರು ವ್ಯಕ್ತಿಗಳಿಂದ ಆಯ್ಕೆಗೊಂಡಿದೆ. ಅವರು ಭೌಗೋಳಿಕ ಡೇಟಾಬೇಸ್ ಯೋಜನೆಗೆ ಈಗಾಗಲೇ ಹಂಚಲ್ಪಟ್ಟಿದ್ದ ಹಣವನ್ನು ಬಳಸಿಕೊಳ್ಳಲು, ಮತ್ತು ಕೋಡ್‌ಅನ್ನು ಉತ್ಪಾದನೆ ಮಾಡಲು ವಿದ್ಯಾರ್ಥಿ ಪ್ರೊಗ್ರಾಮರುಗಳನ್ನು ಬಳಸಿಕೊಂಡು INGRES ಎಂದು ಪರಿಚಿತವಾಗಿರುವ ಯೋಜನೆಯನ್ನು ಆರಂಭಿಸಿದ್ದರು. 1973ರ ಆರಂಭದಲ್ಲಿ, INGRES ತನ್ನ ಪ್ರಥಮ ಪ್ರಯೋಗಿಕ ಉತ್ಪನ್ನಗಳನ್ನು ವಿತರಿಸಿತ್ತು, ಅವುಗಳು ಸಾಮಾನ್ಯವಾಗಿ 1979ರಲ್ಲಿ ವಿಸ್ಥಾರವಾಗಿ ಹರಡಿಕೊಳ್ಳಲು ಸಜ್ಜಾಗಿದ್ದವು. ಈ ಸಂದರ್ಭದಲ್ಲಿ, ಅನೇಕ ಜನರು ಆ ಗುಂಪಿನ "ಮೂಲಕ" ಮುನ್ನಡೆದರು-ಆದರೆ ಒಂದೇ ಸಮಯದಲ್ಲಿ ಐದು ಜನರಂತೆ ಸುಮಾರು 30ಜನರು ಈ ಯೋಜನೆಯಲ್ಲಿ ಕೆಲಸ ನಿರ್ವಹಿಸಿದರು. ದತ್ತಾಂಶ ಬಳಕೆಗಾಗಿ QUEL ಎಂದು ಪರಿಚಿತವಾಗಿರುವ "ಭಾಷೆ"ಯ ಬಳಕೆಯು ಸೇರಿದಂತೆ ಹಲವಾರು ವಿಧಾನಗಳಲ್ಲಿ INGRES ಸಿಸ್ಟಮ್ Rಗೆ ಹೋಲಿಕೆಯಾಗಿತ್ತು, ವಾಸ್ತವವಾಗಿ - QUEL ಸಂಬಂಧಿತವಾಗಿದೆ, ಮತ್ತು ಅದು ಕೊಡ್‌ನ ಸ್ವಂತ ಆಲ್ಫಾ ಭಾಷೆಯ ಆಧಾರಿತವಾಗಿದೆ, ಆದರೆ ಇಂದಿಗೂ ಅದನ್ನು ಅನುಸರಿಸುವುದು ಅಪ್ರಾಮಾಣಿಕವಾಗಿದೆ, ಹೀಗೆ ಸಂಬಂಧಿತ ಮಾದರಿಯ ಕಲ್ಪನೆಯ ರೀತಿಯಲ್ಲಿ SQL ತನ್ನಸ್ಟಕ್ಕೆ ಹಿಂಸಾತ್ಮಕವಾಗಿ ಉಳಿದುಕೊಂಡಿದೆ.ರಿಲೇಷನಲ್ ಮಾದರಿ PRTV ಕಾರ್ಯಗತಗೊಳಿಸುವಿಕೆಯ ಟೆಸ್ಟ್‌ವೊಂದನ್ನು ಮತ್ತು ಬ್ಯುಸಿನೆಸ್ ಸಿಸ್ಟಮ್ 12ನ ನಿರ್ಮಾಣವೊಂದನ್ನು IBM ತಾನಾಗಿಯೇ ಮಾಡಿದೆ ಮತ್ತು ಈಗ ಅವೆರಡನ್ನು ರದ್ದುಪಡಿಸಲಾಗಿದೆ. ಹನಿವೆಲ್ ಮಲ್ಟಿಕ್ಸ್‌ಗಾಗಿ MRDS ಅನ್ನು ಮಾಡಿತ್ತು ಮತ್ತು ಈಗ ಎರಡು ಹೊಸ ಕಾರ್ಯಗತಗೊಳಿಸುವಿಕೆಗಳಾಗಿವೆ: ಅವುಗಳೆಂದರೆ ಆಲ್ಫೋರಾ ಡೇಟಾಫರ್ ಮತ್ತು ರೆಲ್. ಸಾಮಾನ್ಯವಾಗಿ ರಿಲೇಷನಲ್ ಎಂದು ಕರೆಯಲಾಗುವ ಎಲ್ಲಾ DBMS ಕಾರ್ಯಗತಗೊಳಿಸುವಿಕೆಗಳೂ ವಾಸ್ತವಿಕವಾಗಿ SQL DBMSಗಳಾಗಿವೆ. 1968ರಲ್ಲಿ, ಮಿಚಿಗನ್ ವಿಶ್ವವಿದ್ಯಾಲಯವು ರಿಲೇಷನಲ್ ಡೇಟಾಬೇಸ್ ನಿರ್ವಹಣಾ ವ್ಯವಸ್ಥೆಯಾದ ಮೈಕ್ರೋ DBMS ಅಭಿವೃದ್ಧಿಯನ್ನು ಆರಂಭಿಸಿದೆ. ಇದನ್ನು USನ ಕಾರ್ಮಿಕ ಇಲಾಖೆಯಿಂದ, ಪರಿಸರ ರಕ್ಷಣಾ ಕಾರ್ಯಾಯ ಮತ್ತು ಆಲ್ಬರ್ಟಾ ವಿಶ್ವವಿದ್ಯಾಲಯದ ಸಂಶೋಧಕರಿಂದ, ಮಿಚಿಗನ್ ವಿಶ್ವವಿದ್ಯಾಲಯ ಮತ್ತು ವೇಯಿನ್ ಸ್ಟೇಟ್ ವಿಶ್ವವಿದ್ಯಾಲಯಗಳಿಂದ ಅತ್ಯಧಿಕ ದತ್ತಾಂಶ ಗುಂಪುಗಳನ್ನು ನಿರ್ವಹಿಸಲು ಬಳಸಲಾಗುತ್ತಿತ್ತಿ. ಇದು ಮಿಚಿಗನ್ ಟರ್ಮಿನಲ್ ಸಿಸ್ಟಮ್‌ ಬಳಕೆಯೊಂದಿಗೆ ಪ್ರಮುಖವಾದ ಕಂಪ್ಯೂಟರ್‌ಗಳಲ್ಲಿ ಚಲಿಸುತ್ತದೆ. ಈ ವ್ಯವಸ್ಥೆಯು 1996 ರವರೆಗೆ ನಿರ್ಮಾಣದಲ್ಲಿ ಉಳಿದುಕೊಂಡಿತ್ತು

1970ರ ಅಂತ್ಯದಲ್ಲಿ SQL DBMS[ಬದಲಾಯಿಸಿ]

1970ರ ಆರಂಭದಲ್ಲಿ ಕೊಡ್‌ನ ಕಲ್ಪನೆಗಳಿಗೆ ಸಡಿಲವಾಗಿ ಆಧರಿಸಿರುವ ಸಿಸ್ಟಮ್ ಆರ್ ಅನ್ನು ಪರೀಕ್ಷಣಾ ಮಾದರಿ ವ್ಯವಸ್ಥೆಯಲ್ಲಿ IBM ಕಾರ್ಯವನ್ನು ಆರಂಭಿಸಿತ್ತು.. ಪ್ರಥಮ ಆವೃತ್ತಿಯು 1974/5ರಲ್ಲಿ ಸಿದ್ಧಗೊಂಡಿತ್ತು ಮತ್ತು ಅಂದು ಕಾರ್ಯಗಳು ಎಲ್ಲಾ ದತ್ತಾಂಶವು ದಾಖಲೆಗಾಗಿ (ಅವು ಹಲವು ಬಾರಿ ಐಚ್ಚಿಕವಾಗಿರುತ್ತದೆ) ಕೇವಲ ಒಂದೇ ವಿಸ್ಥಾರವಾದ "ಚಂಕ್"ನಲ್ಲಿ ಶೇಖರಿಸಲ್ಪಡದಂತೆ, ದತ್ತಾಂಶಗಳನ್ನು ಬಹು-ಕೋಷ್ಟಕ ವ್ಯವಸ್ಥೆಗಳಲ್ಲಿ ವಿಭಜಿಸುವಂತೆ ಕಾರ್ಯಾರಂಭಗೊಂಡಿದ್ದವು. ಆನಂತರ ಬಹು-ಬಳಕೆದಾರ ಆವೃತ್ತಿಗಳು 1978 ಮತ್ತು 1979ರಲ್ಲಿ ಗ್ರಾಹಕರಿಂದ ಪರೀಕ್ಷಿಸಲ್ಪಟ್ಟವು, ಆ ಸಂದರ್ಭದಲ್ಲಿ ಪ್ರಮಾಣೀಕರಿಸಲ್ಪಟ್ಟ ವೈಚಾರಿಕ ಭಾಷೆಯಾದ SQLಅನ್ನು ಸೇರಿಸಲಾಗಿತ್ತು. Codasylಗೆ ಉನ್ನತವಾದ ಮತ್ತು ಕಾರ್ಯನಿರತ ಎರಡೂ ವಿಧಾನಗಳಲ್ಲಿ ತನ್ನನ್ನು ತಾನು ಬೆಳೆಸಿಕೊಳ್ಳಬೇಕು ಮತ್ತು ಪ್ರಥಮ ಹಂತಲ್ಲಿ SQL/DS ಎಂದು ನಂತರದಲ್ಲಿ Database 2 (DB2) ಎಂದು ಪರಿಚಿತವಾಗಿದ್ದ ನೈಜ ಉತ್ಪಾದ್ಧನಾ ವಿಧಾನವಾದ ಸಿಸ್ಟಮ್ Rಅನ್ನು ಅಭಿವೃದ್ಧಿಪಡಿಸಲು IBM ಅನ್ನು ಪ್ರೋತ್ಸಾಹಿಸಬೇಕು ಎಂಬುದು ಕೋಡ್‌ನ ವಿಚಾರವಾಗಿತ್ತು. ಅನೇಕ ಜನರು INGRESನೊಂದಿಗೆ ಸೇರಿಕೊಂಡು ಕೆಲವು ವ್ಯವಸ್ಥೆಗಳ ಭವಿಷ್ಯದ ವಾಣಿಜ್ಯಿಕ ಯಶಸ್ಸನ್ನು ಮನವರಿಕೆ ಮಾಡಿದರು ಮತ್ತು ಕೆಲಸವನ್ನು ವಾಣಿಜ್ಯಿಕರಣಗೊಳಿಸಲು ತಮ್ಮ ಸ್ವಂತ ಕಂಪನಿಗಳನ್ನು ತೆಗೆದರು, ಆದರೆ ಅವು SQLನ ಅಂತರ್ ಸಂಪರ್ಕ ಸಾಧನವಾಗಿದ್ದವು. ಸೈಬೇಸ್, ಇನ್‌ಫಾರ್ಮಿಕ್ಸ್, ನಾನ್‌ಸ್ಟಾಪ್ SQL ಮತ್ತು ಅಂತಿಮವಾಗಿ ಸ್ವತಹಇಂಗ್ರೆಸ್ ಎಲ್ಲವೂ 1980ರಲ್ಲಿ ಮೂಲ INGRESನ ಉತ್ಪನ್ನಕ್ಕೆ ಉಪಶಾಖೆಯಾಗಿ ಮಾರಾಟಗೊಂಡವು. ಮೈಕ್ರೋಸಾಫ್ಟ್ SQL ಸರ್ವರ್ ಸಹ ಸೈಬೇಸ್‌ನ ಮರು-ಸ್ಥಾಪಿಸಲ್ಪಟ್ಟ ಆವೃತ್ತಿಯಾಗಿದೆ, ಆ ರೀತಿ ಅದು INGRES ಆಗಿದೆ. ಲ್ಯಾರಿ ಎಲ್ಲಿಸನ್‌ಒರೆಕಲ್‌ಯು ವಿವಿಧ ಕೊಂಡಿಗಳ ಮೂಲಕ ಆರಂಭಗೊಂಡಿದೆ, ಅದು ಸಿಸ್ಟಮ್ ಆರ್‌ನಲ್ಲಿ IBMನ ಲೇಖನಗಳನ್ನು ಆಧರಿಸಿ ರಚನೆಗೊಂಡಿತ್ತು ಮತ್ತು 1978ರಲ್ಲಿ ಪ್ರಥಮ ಆವೃತ್ತಿ ಬಿಡುಗಡೆಯಾದಾಗ ಮಾರುಕಟ್ಟೆಯಲ್ಲಿ IBM ಅನ್ನು ಮೀರಿಸಿತ್ತು.ಸ್ಟೋನ್‌ಬ್ರೇಕರ್ ಹೊಸ ಡೇಟಾಬೇಸ್‌ ಆದ ಪೋಸ್ಟ್‌ಗ್ರೆಸ್ ಅನ್ನು ಅಭಿವೃದ್ದಿ ಪಡಿಸಲು INGRESನ ಪಠ್ಯಗಳನ್ನು ಗಮನಿಸಿದ್ದರು, ಅದು ಪೋಸ್ಟ್‌ಗ್ರೆಸ್‌SQL ಎಂದು ಈಗ ಚಿರಪರಿಚಿತವಾಗಿದೆ. ಪೋಸ್ಟ್‌ಗ್ರೆ‌SQL ಅನ್ನು ಜಾಗತಿಕ ಮಿಷನ್ನಿನ ಕ್ರಿಟಿಕಲ್ ಅಪ್ಲಿಕೇಶನ್‌ಗಳಿಗಾಗಿ ಪ್ರಾಥಮಿಕವಾಗಿ ಬಳಸಲಾಗಿದೆ(ದಿ.ಆರ್ಗ್ ಮತ್ತು .ಇನ್ಫೋ ಕಾರ್ಯಕ್ಷೇತ್ರದ ಹೆಸರಿನ ನೊಂದಣಿಗಳು ಅದನ್ನು ತಮ್ಮ ಪ್ರಾಥಮಿಕ ದತ್ತಾಂಶ ಶೇಖರಣೆಯಾಗಿ ಬಳಸುತ್ತಿವೆ, ಹಾಗೆ ಅನೇಕ ದೊಡ್ಡ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳು ಸಹ). ಕೊಡ್‌ನ ಲೇಖನವು ಸ್ವೀಡನ್‌ನಲ್ಲಿ ಸಹ ಓದಲ್ಪಟ್ಟಿತ್ತು ಮತ್ತು ಮೈಮರ್ SQL ವು ಉಪ್ಸಾಲಾ ವಿಶ್ವವಿದ್ಯಾಲಯದಲ್ಲಿ 70ರ-ಮಧ್ಯಭಾಗದಿಂದ ಅಭಿವೃದ್ಧಿ ಹೊಂದಿತ್ತು. 1984ರಲ್ಲಿ, ಈ ಯೋಜನೆಯು ಸ್ವತಂತ್ರ ಉದ್ಯಮವಾಗಿ ಸಂಘಟಿಸಲ್ಪಟ್ಟಿತು. 1980ರ ಆರಂಭದಲ್ಲಿ, ಮೈಮರ್ ಅಪ್ಲಿಕೇಷನ್‌ಗಳಲ್ಲಿ ಅಧಿಕ ಧೃಡಕಾಯತೆಗಾಗಿ ವ್ಯವಹಾರ ನಿರ್ವಹಿಸುವುದನ್ನು ಪರಿಚಯಿಸಿತು, ಆ ತಂತ್ರವು ತರುವಾಯ ಇನ್ನಿತರ DBMSಗಳಲ್ಲಿ ಕಾರ್ಯಗತಗೊಂಡಿತು.

DBMSನ ನಿರ್ಮಾಣದ ವಿಭಾಗಗಳು[ಬದಲಾಯಿಸಿ]

DBMS ನಾಲ್ಕು ಭಾಗಗಳನ್ನು ಒಳಗೊಂಡಿದೆ: ಮಾದರಿ ಭಾಷೆ, ಡೇಟಾ ರಚನೆ, ಡೇಟಾಬೇಸ್ ವೈಚಾರಿಕ ಭಾಷೆ ಮತ್ತು ವ್ಯವಹಾರ ಯಾಂತ್ರಿಕ ವ್ಯವಸ್ಥೆ:

DBMS ಘಟಕಗಳು[ಬದಲಾಯಿಸಿ]

  • DBMS ಇಂಜಿನ್ ವಿವಿಧ DBMS ಸಬ್‌ಸಿಸ್ಟಮ್‌ಗಳಿಂದ ಸಾಂಕೇತಿಕ ಮನವಿಗಳನ್ನು ಒಪ್ಪಿಕೊಳ್ಳುತ್ತದೆ, ಭೌತಿಕ ಪರಿಮಾಣದಲ್ಲಿ ಅವುಗಳನ್ನು ಪರಿವರ್ತಿಸುತ್ತದೆ ಮತ್ತು ವಾಸ್ತವಿಕವಾಗಿ ಡೇಟಾಬೇಸ್‌ಗಳನ್ನು ಅಕ್ಸೆಸ್‌ ಮಾಡುತ್ತದೆ ಮತ್ತು ಶೇಖರಣಾ ಸಾಧನದಲ್ಲಿ ಅವುಗಳು ನಿರ್ಗಮಿಸುವಂತೆ ದತ್ತಾಂಶ ನಿಘಂಟು ಇರುತ್ತದೆ.
  • ಡೇಟಾ ಡಿಫಿನಿಷನ್ ಸಬ್‌ಸಿಸ್ಟಮ್ ಡೇಟಾ ನಿಘಂಟನ್ನು ರಚಿಸಲು ಮತ್ತು ನಿಭಾಯಿಸಲು ಬಳಕೆದಾರನಿಗೆ ಸಹಾಯ ಮಾಡುತ್ತದೆ ಮತ್ತು ಡೇಟಾಬೇಸ್‌ನಲ್ಲಿ ಕಡತಗಳ ರಚನೆಯನ್ನು ವಿವರಿಸುತ್ತದೆ.
  • ಡೇಟಾ ಮ್ಯಾನ್ಯುಪುಲೇಷನ್ ಸಬ್‌ಸಿಸ್ಟಮ್ ಡೇಟಾಬೇಸ್‌ನಲ್ಲಿ ಮಾಹಿತಿಯನ್ನು ಸೇರಿಸಲು, ಬದಲಾಯಿಸಲು ಮತ್ತು ತೆಗೆದು ಹಾಕಲು ಸಹಾಯ ಮಾಡುತ್ತದೆ ಮತ್ತು ಮೌಲ್ಯಾರ್ಹ ಮಾಹಿತಿಗಾಗಿ ಅದನ್ನು ಪ್ರಶ್ನಿಸುತ್ತದೆ. ತಂತ್ರಾಂಶ ಸಾಧನಗಳು ಡೇಟಾ ಮ್ಯಾನಿಪುಲೇಷನ್‌ ಸಬ್‌ಸಿಸ್ಟಮ್‌ನೊಳಗೆ ಡೇಟಾಬೇಸ್‌ನಲ್ಲಿರುವ ಮಾಹಿತಿ ಮತ್ತು ಬಳಕೆದಾರನ ನಡುವೆ ಹಲವು ಬಾರಿ ಪ್ರಾಥಮಿಕ ಅಂತರ್ ಸಂಪರ್ಕ ಸಾಧನವಾಗಿವೆ. ಅದು ತನ್ನ ಸಾಂಕೇತಿಕ ಮಾಹಿತಿ ಅಗತ್ಯತೆಗಳನ್ನು ಗುರುತಿಸಲು ಬಳಕೆದಾರನಿಗೆ ಅನುಮತಿಸುತ್ತದೆ.
  • ಅಪ್ಲಿಕೇಷನ್ ಜೆನರೇಷನ್ ಸಬ್‌ಸಿಸ್ಟಮ್ ವ್ಯವಹಾರಗಳ-ಸಾಂದ್ರವಾದ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿ ಪಡಿಸಲು ಬಳದಾರರಿಗೆ ಸಹಾಯ ಮಾಡುವ ಸೌಲಭ್ಯಗಳನ್ನು ಒಳಗೊಂಡಿದೆ. ಅದು ವ್ಯವಹಾರವನ್ನು ಪ್ರಕ್ರಿಯೆಗೊಳಿಸುವ ಕಾರ್ಯಗಳ ವಿವರಿಸಲ್ಪಟ್ಟ ಸರಣಿಯನ್ನು ಬಳಕೆದಾರನಿಗೆ ಸಾಮಾನ್ಯವಾಗಿ ಅಗತ್ಯವಾಗಿಸುತ್ತದೆ. ಅದರ ಸೌಲಭ್ಯಗಳು ಡೇಟಾ ಎಂಟ್ರಿ ಸ್ಕ್ರೀನ್ಸ್, ಪ್ರೊಗ್ರಾಮಿಂಗ್ ಭಾಷೆಗಳು ಮತ್ತು ಅಂತರ್ ಸಂಪರ್ಕ ಸಾಧನಗಳನ್ನು ಬಳಸಲು ಸುಲಭವಾಗಿವೆ.
  • ಡೇಟಾ ಆಡ್ಮಿನಿಸ್ಟ್ರೇಷನ್ ಸಿಸ್ಟಮ್ ಬ್ಯಾಕ್‌ಅಪ್ ಮತ್ತು ರಿಕವರಿ, ಭದ್ರತಾ ನಿರ್ವಹಣೆ, ಅತಿಪ್ರಶಸ್ತವಾದ ವೈಚಾರಿಕತೆ, ಏಕಾಭಿಪ್ರಾಯ ನಿಯಂತ್ರಣ, ಮತ್ತು ಬದಲಾವಣೆಯ ನಿರ್ವಹಣೆಗಳಿಗೆ ಒದಗಿಸುತ್ತಿರುವ ಸೌಲಭ್ಯಗಳಿಂದ ಸಂಪೂರ್ಣ ಡೇಟಾಬೇಸ್ ಪರಿಸರವನ್ನು ನಿರ್ವಹಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಮಾದರಿ ಭಾಷೆ[ಬದಲಾಯಿಸಿ]

DBMS ಡೇಟಾಬೇಸ್ ಮಾದರಿಯ ಪ್ರಕಾರ, ದತ್ತಾಂಶ ಮಾದರಿ ಭಾಷೆಯು DBMSನಲ್ಲಿ ಪ್ರತಿ ಡೇಟಾಬೇಸ್‌ ರೂಪುರೇಷೆಯನ್ನು ವ್ಯಾಖ್ಯಾನಿಸುವ ದೊಡ್ಡ ಸಮೂಹವಾಗಿದೆ. ಈ ಮಾದರಿಗಳ ನಾಲ್ಕು ಸಾಮಾನ್ಯ ವಿಧಗಳೆಂದರೆ:

ತಿರುಗು ಮುರುಗಾದ ಪಟ್ಟಿಗಳು ಮತ್ತು ಇತರೆ ವಿಧಾನಗಳು ಸಹ ಬಳಸಲ್ಪಡುತ್ತವೆ. ಕೊಟ್ಟಿರುವ ಡೇಟಾಬೇಸ್ ನಿರ್ವಹಣಾ ವ್ಯವಸ್ಥೆಯು ನಾಲ್ಕು ಮಾದರಿಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನದನ್ನು ಒದಗಿಸಬಹುದು. ಉತ್ತಮಮವಾದ ರಚನೆಯು ಅಪ್ಲಿಕೇಷನ್ ದತ್ತಾಂಶದ ಸ್ವಾಭಾವಿಕ ಸಂಘಟನೆಯಲ್ಲಿ ಮತ್ತು ಅಪ್ಲಿಕೇಷನ್‌ನ ಅಗತ್ಯತೆಗಳಲ್ಲಿ (ಇದರಲ್ಲಿ ವ್ಯವಹಾರ ದರ (ವೇಗ), ನಂಬಲರ್ಹತೆ, ನಿಭಾಯಿಸುವ ಸಾಮರ್ಥ್ಯ, ಅರೋಹ್ಯತೆ ಮತ್ತು ಬೆಲೆ ಸೇರಿವೆ) ಅವಲಂಭಿತವಾಗಿದೆ.ಇಂದಿನ ಪ್ರಬಲ ಮಾದರಿ ಬಳಕೆಯು SQLನಲ್ಲಿ ಒಂದು ಹುದುಗಿಸಲ್ಪಟ್ಟ ವಿಶಿಷ್ಟ ಗುಣಲಕ್ಷಣವಾಗಿದೆ, ಆದಾಗ್ಯೂ ಈ ಮಾದರಿಯನ್ನು ನಂಬಿರುವ ಭಾಷಾಶುದ್ಧತಾವಾದಿಗಳ ಉದ್ದೇಶವು ಸಂಬಂಧಿತ ಮಾದರಿಯ ಭ್ರಷ್ಟತೆಯಾಗಿದೆ, ಪ್ರಯೋಗಶೀಲತೆ ಮತ್ತು ಸಾಮರ್ಥ್ಯದ ಉದ್ದೇಶಕ್ಕಾಗಿ ಅನೇಕ ಮೂಲಭೂತ ತತ್ವಗಳನ್ನು ಅದು ಉಲ್ಲಂಘಿಸುತ್ತದೆ. ಅನೇಕ DBMSಗಳು DBMS ಪ್ರವೇಶಿಸುವ ಪ್ರೊಗ್ರಾಮರ್‌ಗಳ ಗುಣಮಟ್ಟದ ಮಾರ್ಗವನ್ನು ಬೆಂಬಲಿಸುವಂಥಹ ಓಪನ್ ಡೇಟಾಬೇಸ್ ಕನೆಕ್ಟಿವಿಟಿ APIಯನ್ನು ಕೂಡ ಬೆಂಬಲಿಸುತ್ತವೆ. ಡೇಟಾಬೇಸ್ ನಿರ್ವಹಣಾ ವಿಧಾನಕ್ಕೂ ಮುಂಚೆ, ಸಂಘಟನೆಗಳು ಕಡತ ಪ್ರಕ್ರಿಯೆಗೊಳ್ಳುತ್ತಿರುವ ವ್ಯವಸ್ಥೆಗಳನ್ನು ಸಂಘಟಿಸುವ, ಶೇಖರಿಸುವ ಮತ್ತು ದತ್ತಾಂಶ ಕಡತಗಳನ್ನು ಪ್ರಕ್ರಿಯೆಗೊಳಿಸುವಿಕೆಯನ್ನು ನಂಬಿಕೊಂಡಿದ್ದರು. ಅಂತಿಮ ಬಳಕೆದಾರರು ಪ್ರಕ್ರಿಯೆಗೊಳ್ಳುತ್ತಿರುವ ಕಡತದ ವಿಧಾನದಿಂದ ಕೆರಳಿದರು, ಏಕೆಂದರೆ ದತ್ತಾಂಶವನ್ನು ಅನೇಕ ವಿವಿಧ ಕಡತಗಳಲ್ಲಿ ಶೇಖರಿಸಲಾಗಿತ್ತು ಮತ್ತು ಪ್ರತಿಯೊಂದನ್ನು ಬೇರೆ ಬೇರೆ ಮಾರ್ಗಗಳಲ್ಲಿ ಸಂಘಟಿಸಲಾಗಿತ್ತು. ಪ್ರತಿಯೊಂದು ಕಡತವು ನಿರ್ದಿಷ್ಟ ಅಪ್ಲಿಕೇಷನ್‌ಗಳಲ್ಲಿ ಬಳಸಲು ವೈಶಿಷ್ಟ್ಯತೆಯನ್ನು ಪಡೆದಿತ್ತು. ಹೇಳಲು ಅಗತ್ಯವಲ್ಲದ ರೀತಿಯಲ್ಲಿ, ಅಗತ್ಯ ದತ್ತಾಂಶವನ್ನು ನಿಖರವಾಗಿ ಮತ್ತು ಚುರುಕಾಗಿ ಪೂರೈಸಬೇಕಾದ ಸಮಯದಲ್ಲಿ ಕಡತದ ಪ್ರಕ್ರಿಯೆಯು ದೊಡ್ಡ ಪ್ರಮಾಣದಲ್ಲಿತ್ತು, ದುಬಾರಿ ಮತ್ತು ಹೊದಿಕೊಳ್ಳದ ರೀತಿಯಲ್ಲಿತ್ತು. ಅನಗತ್ಯ ದತ್ತಾಂಶವು ಕಡತ ಪ್ರಕ್ರಿಯೆ ವ್ಯವಸ್ಥೆಯ ಪ್ರಕರಣವಾಗಿದೆ, ಏಕೆಂದರೆ ಅಪ್‌ಡೇಟ್‌ಗಳು ಪ್ರತಿಯೊಂದು ಪ್ರತ್ಯೇಕ ಕಡತಕ್ಕೆ ಅಗತ್ಯವಾದಾಗ, ಸ್ವತಂತ್ರ ದತ್ತಾಂಶ ಕಡತಗಳು ನಕಲಿ ಡೇಟಾವನ್ನು ಉತ್ಪತ್ತಿ ಮಾಡುತ್ತವೆ. ಆ ಕಡತವು ಆಪ್‌ಡೇಟ್ ಮಾಡಲು ಅಗತ್ಯವಾಗಿರುತ್ತದೆ. ಮತ್ತೊಂದು ಪ್ರಕರಣವು ದತ್ತಾಂಶ ಅನುಕೂಲವನ್ನು ರದ್ದುಗೊಳಿಸಿರುವುದಾಗಿದೆ. ಒಂದು ದತ್ತಾಂಶವು ಸಂಘಟನೆಗೊಳ್ಳಲು ಮತ್ತು ಅದನ್ನು ಶೇಖರಿಸಲು ಮತ್ತೊಂದು ಡೇಟಾದ ಅವಲಂಬನೆಯನ್ನು ಹೊಂದಿದೆ. ಕೊನೆಯದಾಗಿ, ಅವು ಕಷ್ಟವನ್ನು ನಿಭಾಯಿಸುವಂತಹ ಕಡತ ಪ್ರಕ್ರಿಯೆ ವ್ಯವಸ್ಥೆಯಲ್ಲಿ ಡೇಟಾದ ಪ್ರಮಾಣೀಕರಣ ಅಥವಾ ಯಾವುದೇ ಸಾಮರಸ್ಯತೆಯಾಗಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ, ಡೇಟಾಬೇಸ್ ನಿರ್ವಹಣಾ ವಿಧಾನ ತಯಾರಿಸಲ್ಪಟ್ಟಿತು. ಡೇಟಾಬೇಸ್ ನಿರ್ವಹಣೆ ವ್ಯವಸ್ಥೆಗಳು (DBMS) ಐದು ಡೇಟಾಬೇಸ್‌ ರಚನೆಗಳಲ್ಲಿ ಒಂದನ್ನು ಬಳಸುವಂತೆ ವಿನ್ಯಾಸಗೊಂಡಿವೆ. ಅದು ಡೇಟಾಬೇಸ್‌ನಲ್ಲಿ ಮಾಹಿತಿಯನ್ನು ಶೇಖರಿಸುವ ಸರಳೀಕೃತ ಬಳಕೆಯನ್ನು ಒದಗಿದೆ. ಐದು ಡೇಟಾಬೇಸ್ ರಚನೆಗಳು ಕ್ರಮಾಗತ, ನೆಟ್‌ವರ್ಕ್, ರಿಲೇಷನಲ್, ಮಲ್ಟಿಡೈಮೆನ್ಷನಲ್ ಮತ್ತು ಉದ್ದೇಶ-ಕೇಂದ್ರಿಕೃತ ಮಾದರಿಗಳಾಗಿವೆ. ಮೊದಲ ಕ್ರಮಬದ್ದವಾದಂತಹ ವ್ಯವಸ್ಥೆಯಲ್ಲಿ DBMSನ ಹೊಸದಾದ ದಾಖಲೆಗಳ ಸಂಪರ್ಕವು ಒಂದು ಸರಳವಾದ ವ್ಯವಸ್ಥೆಯಲ್ಲಿ ಅಸಂಕೀರ್ಣವಾದ ಸಂಪರ್ಕವಾಗಿದೆ. ಹಲವಾರು ವಿನ್ಯಾಸಗಳನ್ನು ಮಾಡುವುದರ ಮುಖಾಂತರ ಸಂಪರ್ಕ ಸಾಧ್ಯತೆಯನ್ನು ಹೆಚ್ಚಿಸಬಹುದು ಮತ್ತು ಸುಲಬವಾದ ವಿಧಾನವನ್ನು ತಿಳಿಯಬಹುದು. IBMಗಳ IMS ವ್ಯವಸ್ಥೆ ಮತ್ತು RDM ಮೊಬೈಲ್‌ಗಳು ಬಹು ಕ್ರಮಬದ್ಧವಾದಂತಹ ಒಂದೇರೀತಿಯ ಉತ್ತಮ ದತ್ತಾಂಶಗಳೊಂದಿಗೆ ಕ್ರಮಬದ್ಧವಾದ ದತ್ತಾಂಶ ವ್ಯವಸ್ಥೆಗೆ ಉದಾಹರಣೆಯಾಗಿದೆ. RDM ಮೊಬೈಲ್ ಇದು ಮೊಬೈಲ್‌ ಕಂಪ್ಯೂಟರ್‌ ವ್ಯವಸ್ಥೆಗಾಗಿ ಹೊಸದಾಗಿ ವಿನ್ಯಾಸಗೊಳಿಸಲಾದ ಡೇಟಾಬೇಸ್ ಅಗಿದೆ. ಇಂದಿನ ದಿವಸಗಳಲ್ಲಿ ಬೌಗೋಳಿಕ ಮಾಹಿತಿಗಳನ್ನು ಮತ್ತು ಕಡತ ವ್ಯವಸ್ಥೆಯನ್ನು ಸಂಗ್ರಹಿಸಲು ಪ್ರಾಥಮಿಕವಾಗಿ ಕ್ರಮಾನುಗತ ವಿನ್ಯಾಸವನ್ನು ಬಳಸಲಾಗುತ್ತದೆ.ನೆಟ್‌ವರ್ಕ್‌ ವಿನ್ಯಾಸವು ಹೆಚ್ಚು ಸಂಕೀರ್ಣ ಸಂಬಂಧಗಳನ್ನು ಒಳಗೊಂಡಿರುತ್ತದೆ. ಕ್ರಮಬದ್ಧವಾದಂತ ವಿನ್ಯಾಸವಲ್ಲದೇ, ಇದನ್ನು ಇತರ ಹಲವಾರು ದಾಖಲೆಗಳಿಗೆ ಹೋಲಿಸಬಹುದು ಮತ್ತು ಹಲವಾರು ದಾರಿಗಳಲ್ಲಿ ಒಂದನ್ನು ಅನುಸರಿಸುವ ಮೂಲಕ ಅವುಗಳಿಗೆ ಯಶಸ್ಸನ್ನು ಒದಗಿಸಬಹುದು. ಇನ್ನೊಂದು ಅರ್ಥದಲ್ಲಿ ಈ ವಿನ್ಯಾಸವು ಹಲವಾರು ಸಂಬಂಧಗಳಿಗೆ ಅನುವುಮಾಡಿಕೊಡುತ್ತದೆ.ಸಂಬಂಧಾತ್ಮಕ ವಿನ್ಯಾಸಗಳು ಇಂದಿನ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಬಳಸಲ್ಪಡುತ್ತವೆ. ಇದು ಮೇನ್‌ಪ್ರೇಮ್‌, ಮದ್ಯಮದರ್ಜೆ ಮತ್ತು ಸೂಕ್ಷ್ಮ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಬಳಸಲ್ಪಡುತ್ತದೆ. ಇದು ದತ್ತಾಂಶಗಳನ್ನು ಸಂಗ್ರಹಿಸಲು ಎರಡು-ಮಾನದಂಡಗಳ ಅಡ್ಡಸಾಲು ಮತ್ತು ಲಂಬಸಾಲುಗಳನ್ನು ಬಳಸಿಕೊಳ್ಳುತ್ತದೆ. ದಾಖಲೆಗಳ ಕೋಷ್ಟಕಗಳನ್ನು ಸಾಮಾನ್ಯ ಕೀಲಿ ಮೌಲ್ಯಗಳ ಜೊತೆಗೆ ಜೋಡಿಸಬಹುದು. 1970ರಲ್ಲಿ IBM, EFನಲ್ಲಿ ಕಾರ್ಯನಿರ್ವಿಸುವಾಗ ಕೋಡ್‌ ಈ ರಚನೆಯನ್ನು ವಿನ್ಯಾಸಗೊಳಿಸಿದರು. ಕೊನೆಯ ಬಳಕೆದಾರರಿಗೆ ಹೊಸದಾಗಿ ಬಂದಂತಹ ಕಂಪ್ಯೂಟರ್ ಗಳಲ್ಲಿ ಅತಿ ಸುಲಭವಾಗಿ ವೈಚಾರಿಕತೆಯನ್ನು ಚಲಾಯಿಸಲು ಸಾದ್ಯವಿಲ್ಲ, ಏಕೇಂದರೆ ಅದಕ್ಕಾಗಿ ಸಂಕೀರ್ಣ ಸಂಯೋಜನೆಗಳ ಹಲವಾರು ಕೋಷ್ಟಕಗಳ ಅಗತ್ಯತೆಯಿದೆ.ಬಹುಪರಿಮಾಣಗಳ ವಿನ್ಯಾಸವು ಸಂಬಂಧಾತ್ಮಕ ಮಾದರಿಗೆ ಸಮಾನವಾಗಿದೆ. ಪರಿಮಾಣದ ಘನಾತ್ಮಕ ನೋಟದ ಮಾದರಿಯು ಪ್ರತಿಯೊಂದು ಸೆಲ್‌ನ ಉಪಕರಣಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಒಳಗೊಂಡಿದೆ. ದತ್ತಾಂಶ ವೀಕ್ಷಣೆಯಂತಹ ಸ್ಪ್ರೆಡ್‌ಶೀಟ್‌ಅನ್ನು ಈ ವಿನ್ಯಾಸವು ಒದಗಿಸುತ್ತದೆ. ಇದರ ವಿನ್ಯಾಸ ತುಂಬಾ ಸರಳವಾದದ್ದು, ಏಕೆಂದರೆ ಇದರಲ್ಲಿ ದಾಖಲೆಗಳನ್ನು ಹಿಡಿದಿಟ್ಟುಕೊಳ್ಳುವಂತಹ ಮೂಲಭೂತ ಅಂಶಗಳು ಇರುತ್ತವೆ, ಒಂದೇ ರೀತಿಯಲ್ಲಿ ಅವುಗಳು ಗೋಚರಿಸಲ್ಪಡುತ್ತವೆ ಮತ್ತು ಇದನ್ನು ತಿಳಿದುಕೊಳ್ಳುವುದು ಬಹಳ ಸುಲಭ. ಇದರ ಹೆಚ್ಚಿನ ಸಾಮರ್ಥ್ಯವು ಆನ್‌ಲೈನ್ ಆನಾಲಿಟಿಕಲ್ ಪ್ರೊಸೆಸಿಂಗ್ (OLAP) ಅನ್ನು ಸಾಧ್ಯವಾಗಿಸುತ್ತಿರುವ ವಿಷಯಕ್ಕೆ ಬಂದಾಗ ಇದು ಇದನ್ನು ಅತ್ಯಂತ ಪ್ರಸಿದ್ಧ ಡೇಟಾಬೇಸ್ ರಚನೆಯನ್ನಾಗಿ ಮಾಡಿದೆ.ಉದ್ದೇಶಾತ್ಮಕ ರಚನೆಯು ವರ್ಣಚಿತ್ರಗಳು, ಚಿತ್ರಗಳು, ಧ್ವನಿ ಮತ್ತು ಪಠ್ಯ, ಡೇಟಾ ವಿಧಗಳನ್ನು, ವಿಭಿನ್ನವಾದ ಇತರೆ ಡೇಟಾಬೇಸ್ ರಚನೆಗಳನ್ನು ಯಾವುದೇ ತೊಂದರೆಯಿಲ್ಲದೆ ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತದೆ. ಈ ರಚನೆಯು ಮಲ್ಟಿಮೀಡಿಯಾ ವೆಬ್-ಆಧಾರಿತ ಅಪ್ಲಿಕೇಷನ್‌ಗಳಿಗೆ ಜನಪ್ರಿಯವಾಗಿದೆ. ಇದು ಜಾವದಂಥ ಆಬ್ಜೆಕ್ಟ್-ಕೇಂದ್ರಿಕೃತ ಪ್ರೊಗ್ರಾಮಿಂಗ್‌ ಭಾಷೆಗಳನ್ನು ಕಾರ್ಯನಿರ್ವಹಿಸಲು ವಿನ್ಯಾಸಗೊಂಡಿದೆ.

ಡೇಟಾ ರಚನೆ[ಬದಲಾಯಿಸಿ]

ಡೇಟಾ ರಚನೆಗಳು (ವ್ಯಾಪ್ತಿ, ದಾಖಲೆಗಳು, ಕಡತಗಳು ಮತ್ತು ಉದ್ದೇಶಗಳು) ಶಾಶ್ವತ ಡೇಟಾ ಶೇಖರಣಾ ಸಾಧನದಲ್ಲಿ ಅತ್ಯಧಿಕ ಮೊತ್ತದ ಡೇಟಾದೊಂದಿಗೆ ವ್ಯವಹರಿಸಲು ಅತ್ಯುತ್ತಮವಾಗಿವೆ (ಸಂಬಂಧಾತ್ಮಕವಾಗಿ ಬಾಷ್ಪಶೀಲ ಪ್ರಮುಖ ಸ್ಮರಣೆಗೆ ಹೋಲಿಕೆಯಾಗುವ ನಿಧಾನಗತಿಯ ಪ್ರವೇಶವನ್ನು ಅವು ಪರೋಕ್ಷವಾಗಿ ಸೂಚಿಸುತ್ತವೆ).

ಡೇಟಾಬೇಸ್‌ನ ವೈಚಾರಿಕ ಭಾಷೆ[ಬದಲಾಯಿಸಿ]

ಡೇಟಾಬೇಸ್‌ನ ವೈಚಾರಿಕ ಭಾಷೆ ಮತ್ತು ವರದಿಗಾರ, ಡೇಟಾಬೇಸ್‌ ಅನ್ನು ಎಡೆಬಿಡದೆ ಪ್ರಶ್ನಿಸಲು ಪ್ರಭಾವ ಬೀರುವ ಬಳಕೆದಾರರನ್ನು ಅನುಮತಿಸುತ್ತಾರೆ, ಅದರ ಡೇಟಾವನ್ನು ವಿಶ್ಲೇಷಿಸುತ್ತಾರೆ ಮತ್ತು ಡೇಟಾದಲ್ಲಿನ ಬಳಕೆದಾರ ಸವಲತ್ತುಗಳ ಪ್ರಕಾರ ಅದನ್ನು ಅಪ್‌ಡೇಟ್‌ ಮಾಡುತ್ತಾರೆ. ಅದು ಡೇಟಾಬೇಸ್‌ನ ಭದ್ರತೆಯನ್ನು ಸಹ ನಿಯಂತ್ರಿಸುತ್ತದೆ. ಡೇಟಾ ಭದ್ರತೆಯು ಡೇಟಾಬೇಸ್‌ ಅನ್ನು ನೋಡುವುದರಿಂದ ಅಥವಾ ಅಪ್‌ಡೇಟ್‌ ಮಾಡುವುದರಿಂದ ಅನುಮತಿಯಿಲ್ಲದ ಬಳಕೆದಾರರನ್ನು ತಡೆಯುತ್ತದೆ. ಸಂಕೇತಪದಗಳನ್ನು ಬಳಸುವ ಬಳಕೆದಾರರು ಸಮಗ್ರ ಡೇಟಾಬೇಸ್‌ಗೆ ಅಥವಾ ಉಪಗುಂಪುಗಳೆಂದು ಕರೆಯಲ್ಪಡುವ ಉಪ ರೂಪುರೇಷೆಗಳಿ ಗೆ ಪ್ರವೇಶಿಸಲು ಅನುಮತಿಸಲ್ಪಡುತ್ತಾರೆ. ಉದಾಹರಣೆಗೆ, ಉದ್ಯೋಗಿ ಡೇಟಾಬೇಸ್ ಒಬ್ಬ ಉದ್ಯೋಗಿ ಬಗ್ಗೆ ಎಲ್ಲಾ ಡೇಟಾವನ್ನು ಒಳಗೊಂಡಿರುತ್ತದೆ, ಆದರೆ ಒಂದು ಗುಂಪಿನ ಬಳಕೆದಾರರು ಪಾವತಿಪಟ್ಟಿ ದತ್ತಾಂಶವನ್ನು ಮಾತ್ರ ನೋಡಲು ಅನುಮತಿ ಪಡೆಯಬಹುದು, ಆ ವೇಳೆಯಲ್ಲಿ ಬೇರೆಯವರು ಇತಿಹಾಸ ಮತ್ತು ವೈದ್ಯಕೀಯ ದತ್ತಾಂಶ ಕೆಲಸವನ್ನು ನಿರ್ವಹಿಸಲು ಮಾತ್ರ ಪ್ರವೇಶ ಪಡೆಯಬಹುದು. ಡೇಟಾಬೇಸ್‌ ಅನ್ನು ಅಪ್‌ಡೇಟ್‌ ಮಾಡುವ ಮತ್ತು ಪ್ರಭಾವಾತ್ಮಕವಾಗಿ ಪ್ರವೇಶಿಸುವ ಮಾರ್ಗವನ್ನು DBMS ಒದಗಿಸಿದ್ದರೆ, ಅದನ್ನು ಹಾಗೆಯೇ ಎಡೆಬಿಡದೆ ಪ್ರಶ್ನಿಸಲಾಗುತ್ತಿತ್ತು, ಈ ಸಾಮರ್ಥ್ಯತೆಯು ನಿಭಾಹಿಸುತ್ತಿರುವ ವೈಯಕ್ತಿಕ ಡೇಟಾಬೇಸ್‌ಗಳನ್ನು ಅನುಮತಿಸುತ್ತದೆ. ಆದಾಗ್ಯೂ, ಹೀಗೆ ಅದು ಕಾರ್ಯಚಟುವಟಿಕೆ ಜಾಡಿನ ಲೆಕ್ಕ ಪರಿಶೋಧನೆಯನ್ನು ಬಿಡುವುದಿಲ್ಲ ಅಥವಾ ಬಹು-ಬಳಕೆದಾರ ಸಂಘಟನೆಯಲ್ಲಿ ವಿವಿಧ ಅಗತ್ಯ ನಿಯಂತ್ರಣಗಳನ್ನು ಒದಗಿಸುತ್ತದೆ. ಅಪ್ಲಿಕೇಷನ್ ಪ್ರೊಗ್ರಾಮ್‌ಗಳ ಗುಂಪು ಪ್ರತಿ ಡೇಟಾವನ್ನು ನಮೂದಿಸುವ ಮತ್ತು ಕೆಲಸವನ್ನು ಅಪ್‌ಡೇಟ್‌ ಮಾಡುವುದಕ್ಕಾಗಿ ಗ್ರಾಹಕೀಯಗೊಳಿಸುವಾಗ ಮಾತ್ರ ಈ ನಿಯಂತ್ರಣಗಳು ಲಭ್ಯವಿರುತ್ತವೆ.

ವ್ಯವಹಾರದ ಯಾಂತ್ರಿಕ ವ್ಯವಸ್ಥೆ[ಬದಲಾಯಿಸಿ]

ಡೇಟಾಬೇಸ್ ವ್ಯವಹಾರ ಯಾಂತ್ರಿಕ ವ್ಯವಸ್ಥೆಯು ಮಾದರೀಯವಾಗಿ ಏಕಕಾಲೀನ ಬಳಕೆದಾರ ಬಳಕೆಗಳು (ಒಪ್ಪಂದ ನಿಯಂತ್ರಣ), ಮತ್ತು ದೋಷಗಳಿ(ದೋಷ ಸೈರಣೆ)ದ್ದರೂ ಡೇಟಾ ಸಮಗ್ರತೆಯನ್ನು ಖಚಿತಪಡಿಸಲು ಆಸಿಡ್(ACID) ಸ್ವತ್ತುಗಳನ್ನು ಸೂಕ್ತವಾಗಿ ಖಾತ್ರಿಪಡಿಸುತ್ತದೆ. ಅದು ಡೇಟಾಬೇಸ್‌ನಲ್ಲಿ ದತ್ತಾಂಶ ಸಮಗ್ರತೆಯನ್ನು ಸಹ ನಿಭಾಯಿಸುತ್ತದೆ. DBMS ಒಂದೇ ರೀತಿಯ ದಾಖಲೆಯನ್ನು ಒಂದೇ ಸಮಯದಲ್ಲಿ ಅಪ್‌ಡೇಟ್ ಮಾಡಲು ಒಬ್ಬ ಬಳಕೆದಾರನ ಹೊರತಾಗಿ ಇತರರಿಗೆ ಅನುಮತಿಯಿಲ್ಲವಾದ್ದರಿಂದ ಡೇಟಾಬೇಸ್‌ ಸಮಗ್ರತೆಯನ್ನು ನಿಭಾಯಿಸುತ್ತದೆ.DBMS ಏಕಮಾತ್ರ ಸೂಚ್ಯಂಕ ಕಡ್ಡಾಯಗಳ ಮುಖೇನ ನಕಲಿ ದಾಖಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ; ಉದಾಹರಣೆಗೆ, ಒಂದೇ ರೀತಿಯ ಗ್ರಾಹಕ ಸಂಖ್ಯೆಗಳನ್ನು (ಕೀ ಫೀಲ್ಡ್ಸ್) ಹೊಂದಿರುವ ಗ್ರಾಹಕರಲ್ಲದ ಇಬ್ಬರೂ ಡೇಟಾಬೇಸ್‌ ಅನ್ನು ಪ್ರವೇಶಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಸಿಡ್ {{0}ACID}ಸ್ವತ್ತನ್ನು ಗಮನಿಸಿ (ಅನವಶ್ಯಕ ನಿಯಂತ್ರಣ).

DBMS ವಿಷಯಗಳು[ಬದಲಾಯಿಸಿ]

ತಾರ್ಕಿಕ ಮತ್ತು ಭೌತಿಕ ನೋಟ[ಬದಲಾಯಿಸಿ]

ಡೇಟಾದ ಸಂಪ್ರದಾಯ ನೋಟ[೨]

ಡೇಟಾಬೇಸ್ ನಿರ್ವಹಣಾ ವ್ಯವಸ್ಥೆಯು ವಿವಿಧ ಬಳಕೆದಾರರು ದತ್ತಾಂಶವನ್ನು ಹಂಚಿಕೊಳ್ಳಲು ಮತ್ತು ಸಾಧನಗಳ ಕಾರ್ಯವಿಧಾನವನ್ನು ಶೇಖರಿಸುವುದಕ್ಕಾಗಿ ಸಾಮರ್ಥ್ಯವನ್ನು ಒದಗಿಸುತ್ತದೆ. ಆದರೆ ಅಲ್ಲಿ ಅನೇಕ ಬಳಕೆದಾರರಿರಬಹುದು, ಅಲ್ಲಿ ವಿವಿಧ ಡೇಟಾಬೇಸ್ ಅಗತ್ಯಗಳಿವೆ. ಈಗಿರುವ ಪ್ರಶ್ನೆಯೆನೆಂದರೆ: ಒಗ್ಗೂಡಿಸಲ್ಪಟ್ಟ ಒಂದು ಡೇಟಾಬೇಸ್ ಅನೇಕ ಬಳಕೆದಾರರ ವಿಭಿನ್ನ ಅಗತ್ಯಗಳನ್ನು ಹೇಗೆ ಪೂರೈಸುತ್ತದೆ? DBMS ಡೇಟಾಬೇಸ್‌ ದತ್ತಾಂಶ ಒದಗಿಸುವ ಎರಡು ದೃಷ್ಟಿಕೋನಗಳಿಂದ ಈ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ: ಅವುಗಳೆಂದರೆ ತಾರ್ಕಿಕ (ಬಾಹ್ಯ)ದೃಷ್ಟಿಕೋನ ಮತ್ತು ಭೌತಿಕ (ಆಂತರಿಕ)ದೃಷ್ಟಿಕೋನ. ಡೇಟಾಬೇಸ್ ಪ್ರೋಗ್ರಾಂನ ತಾರ್ಕಿಕ ದೃಷ್ಟಿಕೋನ/ಬಳಕೆದಾರನ ನೋಟವು ವ್ಯವಸ್ಥೆಯಲ್ಲಿನ ದತ್ತಾಂಶವನ್ನು ಪ್ರತಿನಿಧಿಸುತ್ತದೆ, ಅದು ಬಳಕೆದಾರನಿಗೆ ಮತ್ತು ಆ ದತ್ತಾಂಶಕ್ಕೆ ಮಾಹಿತಿ ಒದಗಿಸುವ ತಂತ್ರಾಂಶ ಪ್ರೋಗ್ರಾಂಗಳಿಗೆ ಅರ್ಥಪೂರ್ಣವಾಗಿದೆ. ಆ ತಾರ್ಕಿಕ ದೃಷ್ಟಿಕೋನವು ಡೇಟಾಬೇಸ್‌ನಲ್ಲಿ ಏನೇನು ಇದೆ ಎಂಬ ಬಳಕೆದಾರ ನಿಬಂಧನೆಯಲ್ಲಿ ಬಳಕೆದಾರನ ಬಗ್ಗೆ ಹೇಳುತ್ತದೆ. ಭೌತಿಕ ದೃಷ್ಟಿಕೋನವು ಡೈರೆಕ್ಟ್ ಆಕ್ಸೆಸ್ ಸ್ಟೋರೆಜ್ ಡಿವೈಸಸ್‌ (DASDs)ನಲ್ಲಿ ನಿರ್ದಿಷ್ಟ ಭೌತಿಕ ವ್ಯವಸ್ಥೆ ಮತ್ತು ದತ್ತಾಂಶ ನೆಲೆಯನ್ನು ವ್ಯವಹರಿಸುತ್ತದೆ. ಡೇಟಾಬೇಸ್ ಪರಿಣಿತರು ಭೌತಿಕ ನೋಟವನ್ನು ಶೇಖರಣೆಯ ಬಳಕೆ ಮತ್ತು ಪ್ರಕ್ರಿಯೆಗೊಳ್ಳುವ ಸಾಧನಗಳನ್ನು ಸಮರ್ಥವನ್ನಾಗಿಸಲು ಬಳಸುತ್ತಾರೆ. ತಾರ್ಕಿಕ ದೃಷ್ಟಿಕೋನವಿರುವ ಬಳಕೆದಾರರು ದತ್ತಾಂಶವನ್ನು ಅವು ಹೇಗೆ ಶೇಖರಿಸಲ್ಪಟ್ಟಿವೆ ಎಂದು ವಿಭಿನ್ನವಾಗಿ ಕಾಣಬಹುದು ಮತ್ತು ಅವರು ಭೌತಿಕ ಶೇಖರಣೆಯ ಎಲ್ಲಾ ತಾಂತ್ರಿಕ ವಿವರಗಳನ್ನು ತಿಳಿಯುವ ಅಗತ್ಯವಿರುವುದಿಲ್ಲ. ಎಲ್ಲಕ್ಕೂ ಮಿಗಿಲಾಗಿ, ವ್ಯಾಪಾರಿ ಬಳಕೆದಾರ ಪ್ರಾಥಮಿಕವಾಗಿ ಅದು ಹೇಗೆ ಶೇಖರಿಸಲ್ಪಟ್ಟಿದೆ ಎನ್ನುವುದಕ್ಕಿಂತ ಮಾಹಿತಿ ಬಳಕೆಯಲ್ಲಿ ಆಸಕ್ತಿ ಹೊಂದಿರುತ್ತಾನೆ. DBMSನ ಒಂದು ಸಾಮರ್ಥ್ಯವೆಂದರೆ ಲಾಕ್ಷಣಿಕವಾದ ದತ್ತಾಂಶದ ಒಂದು ಭೌತಿಕ ದೃಷ್ಟಿಕೋನ, ಅವು ವಿವಿಧ ತಾರ್ಕಿಕ ನೋಟಗಳ ಅನಂತ ಸಂಖ್ಯೆಯಾಗಿರಬಹುದು. ಈ ಲಕ್ಷಣವು ತಾಂತ್ರಿಕ ಪ್ರಕ್ರಿಯೆ ನೋಟದ ಬದಲಾಗಿ ಹೆಚ್ಚಿನ ವ್ಯವಹಾರ-ಸಂಬಂಧಿತ ಮಾರ್ಗದಲ್ಲಿ ಡೇಟಾಬೇಸ್ ಮಾಹಿತಿಯನ್ನು ನೋಡಲು ಬಳಕೆದಾರರಿಗೆ ಅನುಮತಿಸುತ್ತದೆ. ಈ ರೀತಿಯಾಗಿ ತಾರ್ಕಿಕ ನೋಟವು ಬಳಕೆದಾರ ನೋಟದ ದತ್ತಾಂಶವನ್ನು ಹೇಳುತ್ತದೆ, ಭೌತಿಕ ನೋಟವು ಡೇಟಾವನ್ನು ಭೌತಿಕವಾಗಿ ಶೇಖರಿಸಲಾಗಿದೆ ಮತ್ತು ಪ್ರಕ್ರಿಯೆಗೊಳಿಸಲಾಗಿದೆ ಎಂಬುದನ್ನು ತಿಳಿಸುತ್ತದೆ...

DBMS ಗುಣಲಕ್ಷಣಗಳು ಹಾಗೂ ಸಾಮರ್ಥ್ಯಗಳು[ಬದಲಾಯಿಸಿ]

ಪರ್ಯಾಯವಾಗಿ ಹಾಗೂ ವಿಶೇಷವಾಗಿ ಡೇಟಾಬೇಸ್‍ ನಿರ್ವಹಣೆಯ ಸಂಬಂಧಾತ್ಮಕ ಮಾದರಿಯ ಜೋಡಣೆಯಲ್ಲಿ, ಕೆಲವು ನಿರ್ಧಿಷ್ಟ ಡೊಮೆನ್‍ಗಳ ಗುಂಪಿನಿಂದ ಪಡೆದ ವೈಶಿಷ್ಟ್ಯಗಳ ನಡುವಿನ ಸಂಬಂಧವನ್ನು ಪ್ರಾಥಮಿಕವೆಂದು ನೋಡಬಹುದು. ಉದಾಹರಣೆಗೆ, ಡೇಟಾಬೇಸ್ ಸೂಚಿಸುವಂತೆ, ಒಂದು ಕಾರು ಆರಂಭದಲ್ಲಿ "ಕೆಂಪು" ಬಣ್ಣದ್ದಾಗಿ, ನಂತರ ಸಮಯ ಕಳೆದಂತೆ "ಗುಲಾಬಿ" ಬಣ್ಣಕ್ಕೆ ಮಾಸಿಹೋಗಬಹುದು, ಅದು ಒಂದು ನಿರ್ಧಿಷ್ಟ "ಉತ್ಪಾದನೆ"ಯಲ್ಲಿ ಕೆಳದರ್ಜೆಯ ಬಣ್ಣವನ್ನು ಬಳಸುವ ಮೂಲಕ ಒದಗಿಸಲಾಗಿದ್ದಿರಬಹುದು. ಇಂತಹ ಉತ್ತಮ ಅರಿಟಿ (ಒಂದು ಸಮಯದಲ್ಲಿ ಒಂದು ಕಾರ್ಯ ತೆಗೆದುಕೊಳ್ಳಬಹುದಾದ ವಾದಗಳ ಸಂಖ್ಯೆ) ಸಂಬಂಧಗಳು ಒಂದೇ ಸಮಯಕ್ಕೆ ಕೆಳಗಿರುವ ಎಲ್ಲಾ ಡೊಮೆನ್‍ಗಳ ಮಾಹಿತಿಯನ್ನು ನೀಡುತ್ತವೆ, ಯಾವುದೇ ಕಾರ್ಯವು ಬೇರೊಂದು ಕಾರ್ಯಕ್ಕಿಂತ ಹೆಚ್ಚು ಸೌಕರ್ಯ ಪಡೆದಿರುವುದಿಲ್ಲ. ಇಂದಿನ ಇತಿಹಾಸದವರೆಗೂ, ವಿಶಿಷ್ಟತೆಯ ಡೇಟಾಬೇಸ್‍ಗಳು ಬರಿ ವೈಜ್ಞಾನಿಕ, ಅಂತರಿಕ್ಷದ ಸಂಬಂಧ, ಆಕೃತಿಗಳ ತಯಾರಿಕೆ, ದಾಖಲೆಗಳನ್ನು ಸಂಗ್ರಹಿಸಲು ಹಾಗೂ ಇದೇ ತರಹದ ಬಳಕೆಗಳಿಗೆ ಮಾತ್ರ ಅಸ್ತಿತ್ವದಲ್ಲಿದೆ. ಇಂತಹ ಬಳಸುವಿಕೆಗಳಿಂದ ಪಡೆದ ಕಾರ್ಯಾತ್ಮಕತೆಗಳು, DBMSಗಳ ಮುಖ್ಯ ವಾಹಿನಿಯಲ್ಲಿ ಕೂಡ ತಡವಾಗಿ ಕಾಣಿಸಿಕೊಳ್ಳಲಾರಂಭಿಸಿದೆ. ಹೇಗಾದರು, ವ್ಯವಹಾರದ ಡೇಟಾ ಸಂಸ್ಕರಣೆಯು ಮಾರುಕಟ್ಟೆಯ ಮೇಲೆ ಗುರಿಯಿದ್ದಾಗ ಮುಖ್ಯವಾದ ಗಮನ ಇನ್ನು ಪುನರಾವರ್ತನೆಯ ನಮೂದಿತ ವಿನ್ಯಾಸಗಳ ವಿವರಣೆಯ ಗುಣಲಕ್ಷಣಗಳ ಮೇಲಿರುತ್ತದೆ. ಹೀಗಾಗಿ, ಇವತ್ತಿನ DBMSಗಳು ಹಲವು ಬಾರಿ-ಬೇಕಾಗುವ ಸೇವೆಗಳ ಅಥವಾ ವೈಶಿಷ್ಟ್ಯ ನಿರ್ವಹಣೆಯ ಗುಣಲಕ್ಷಣಗಳ ಒಗ್ಗೂಡಿಕೆಯಾಗಿವೆ. DBMSಗೆ ಇಂತಹ ಕಾರ್ಯಾತ್ಮಕತೆಯ ಹೊರಗೂಡಿಕೆಯಿಂದ, ಬಳಸುವಿಕೆಗಳು ವಾಸ್ತವಿಕವಾಗಿ ಪರಸ್ಪರ ಕೋಡ್‌ಗಳನ್ನು ಹಂಚಿಕೊಳ್ಳುತ್ತವೆ ಹಾಗೂ ಹೆಚ್ಚು ಆಂತರಿಕ ಜಟಿಲತೆಗಳಿಂದ ಮುಕ್ತವಾಗುತ್ತವೆ. ಡೇಟಾಬೇಸ್ ನಿರ್ವಹಣೆ ಪದ್ಧತಿಗಳಿಂದ ನೀಡಲಾದ ಸಾಮಾನ್ಯ ಗುಣಲಕ್ಷಣಗಳು ಈ ರೀತಿ ಇವೆ:

ವೈಚಾರಿಕ ಸಾಮರ್ಥ್ಯ
ಹಲವು ದೃಷ್ಟಿಕೋನಗಳ ಹಾಗೂ ಅಂಶಗಳ ಒಗ್ಗೂಡಿಕೆಗಳಿಂದ ಕೇಳಲಾ ವೈಶಿಷ್ಟ್ಯ ಮಾಹಿತಿಯ ಪ್ರಕ್ರಿಯೆಯನ್ನು ಪ್ರಶ್ನಿಸುವುದು ಎನ್ನುತ್ತಾರೆ. ಉದಾಹರಣೆ: "2-ಬಾಗಿಲುಗಳ ಕಾರುಗಳು ಟೆಕ್ಸಾಸ್‍ನಲ್ಲಿ ಎಷ್ಟಿವೆ?" ಒಂದು ಡೇಟಾಬೇಸ್ ವೈಚಾರಿಕ ಭಾಷೆ ಹಾಗೂ ವರದಿ ಬರಹಗಾರ ಬಳಕೆದಾರರಿಗೆ ಪರಸ್ಪರ ಪ್ರತಿಕ್ರಿಯಿಸಿ ಡೇಟಾಬೇಸ್‍ನ್ನು ಪ್ರಶ್ನಿಸಿ ಪರೀಕ್ಷಿಸಲು, ಅದರ ದತ್ತಾಂಶವನ್ನು ವಿಂಗಡಿಸಲು ಹಾಗೂ ದತ್ತಾಂಶದ ಮೇಲೆ ಬಳಕೆದಾರರ ಸೌಕರ್ಯದ ಅನುಗುಣವಾಗಿ ಆಧುನೀಕರಿಸಲು ಅನುಮತಿಸುತ್ತದೆ.
ಬ್ಯಾಕ್‍ಅಪ್ ಹಾಗೂ ಪ್ರತಿಕೃತಿ
ವೈಶಿಷ್ಟ್ಯಗಳ ಪ್ರತಿಗಳನ್ನು ನಿಯಮಿತವಾಗಿ ಮಾಡುತ್ತಿರಬೇಕು ಕಾರಣ ಪ್ರಾಥಮಿಕ ಡಿಸ್ಕ್‌ಗಳು ಅಥವಾ ಇತರ ಸಲಕರಣೆ ವಿಫಲವಾಗಬಹುದು. ಮೂಲವನ್ನು ಬಳಕೆಮಾಡಿಕೊಳ್ಳಲು ಸಿದ್ದವಿಲ್ಲದ ಕಾರಣದಿಂದ ದೂರದ ಸಂಸ್ಥೆಗಳಿಗಾಗಿ ನಿರ್ಧಿಷ್ಟ ಸಮಯಾಂತರದಲ್ಲಿ ವೈಶಿಷ್ಟ್ಯಗಳ ಒಂದು ಪ್ರತಿಯನ್ನು ತಯಾರಿಸಲಾಗುವುದು. DBMS ಸಾಮಾನ್ಯವಾಗಿ ವೈಶಿಷ್ಟ್ಯಗಳ ಗುಂಪನ್ನು ಹೊರ ತೆಗೆಯುವ ಹಾಗೂ ಪ್ರಚಾರ ಮಾಡುವ ಪ್ರಕ್ರೀಯೆಗೆ ಬೇಕಾಗುವ ಸೌಕರ್ಯಗಳನ್ನು ಒದಗಿಸುತ್ತದೆ. ಡೇಟಾ ಡೇಟಾಬೇಸ್ ಸರ್ವರ್‌ಗಳ ನಡುವೆ ಪ್ರತಿಕೃತಿಗೊಂಡಾಗ, ಮಾಹಿತಿ ಡೇಟಾಬೇಸ್ ಪದ್ಧತಿಯ ಉದ್ದಕೂ ಸ್ಥಿರವಾಗಿ ಉಳಿದು ಹಾಗೂ ಬಳಕೆದಾರರು DBMSನಲ್ಲಿ ಯಾವ ಸರ್ವರ್‌ ಬಳಸುತ್ತಿದ್ದಾರೆಂದು ತಮಗೆ ಹೇಳಲಾಗದಿದ್ದಾಗ ಅಥವಾ ತಿಳಿಯಲಾಗದಿದ್ದಾಗ, ಈ ಪದ್ಧತಿಯು ಪ್ರತಿಕೃತಿ ಪಾರದರ್ಶಕತೆಯನ್ನು ತೋರುತ್ತಿದೆ ಎಂದು ಹೇಳುತ್ತಾರೆ.
ನಿಯಮ ಹೊರಿಸುವಿಕೆ
ಹಲವು ಬಾರಿ ವೈಶಿಷ್ಟ್ಯಗಳ ಮೇಲೆ ಅವುಗಳು ಸ್ವಚ್ಛ ಹಾಗೂ ವಿಶ್ವಾಸಾರ್ಹವಾಗಿರ ಬೇಕೆಂದು ನಿಯಮ ಅನ್ವಯಿಸಲು ಕೆಲವರು ಆಸಕ್ತರಾಗಿರುತ್ತಾರೆ, . ಉದಾಹರಣೆಗೆ, ಪ್ರತಿ ಕಾರಿಗೆ ಒಂದೇ ಇಂಜಿನ್‍ ಸಹಕಾರಿಯಾಗಿರ ಬೇಕು (ಇಂಜಿನ್ ಸಂಖ್ಯದಿಂದ ಪರಿಚಿತವಾದ) ಎಂದು ನಮ್ಮಲ್ಲಿ ಒಂದು ನಿಯಮ ಇರಬಹುದು. ಯಾರಾದರೂ ಎರಡನೇಯ ಇಂಜಿನ್ ಕಾರಿನೊಂದಿಗೆ ಸಹಕಾರಿಯಾಗಿಸಲು ಪ್ರಯತ್ನಿಸಿದರೆ, DBMS ಅಂತಹ ಬೇಡಿಕೆಯನ್ನು ತಿರಸ್ಕರಿಸಬೇಕು ಹಾಗೂ ಒಂದು ದೋಷ ಸಂದೇಶವನ್ನು ಪ್ರದರ್ಶಿಸ ಬೇಕೆಂದು ನಮ್ಮ ಇಚ್ಛೆ. ಹೇಗಾದರು, ಮಾದರಿಯ ವಿನ್ಯಾಸದಲ್ಲಿ ಬದಲಾವಣೆಯಾದಲ್ಲಿ, ಮೇಲೆ ಕೊಟ್ಟಿರುವ ಉದಾಹರಣೆಯ ಅನ್ವಯ ಮಿಶ್ರತಳಿಯ ಗ್ಯಾಸ್-ಎಲೆಕ್ಟ್ರಿಕ್ ಕಾರುಗಳು, ಆವಾಗ ನಿಯಮಗಳನ್ನು ಬದಲಾಯಿಸಿಕೊಳ್ಳಬೇಕಾಗಬಹುದು. ಆದರ್ಶವಾಗಿ ಇಂತಹ ನಿಯಮಗಳು ಮುಖ್ಯ ದತ್ತಾಂಶ ವಿನ್ಯಾಸದ ಮರುರಚನೆ ಮಾಡದೆ ಬೇಕಾದಲ್ಲಿ ಸೇರಿಸಲು ಹಾಗೂ ತೆಗೆಯಲು ಸಮರ್ಥವಿರಬೇಕು.
ಭದ್ರತೆ
ಯಾವ ವೈಶಿಷ್ಟ್ಯಗಳನ್ನು ಅಥವಾ ವೈಶಿಷ್ಟ್ಯಗಳ ಗುಂಪನ್ನು ಯಾರು ನೋಡಬಹುದು ಅಥವಾ ಬದಲಾಯಿಸಬಹುದು ಎಂಬುದನ್ನು ನಿಯಂತ್ರಿಸುವುದು ಹಲವು ಬಾರಿ ಅಪೇಕ್ಷಿತವಿರುತ್ತದೆ. ಇದನ್ನು ನೇರವಾಗಿ ವ್ಯಕ್ತಿಗತವಾಗಿ ಅಥವಾ ವ್ಯಕ್ತಿಗತವಾದ ಕಾರ್ಯನಿಯೋಜನೆ ಮತ್ತು ಗುಂಪುಗಳ ಸೌಕರ್ಯಗಳು ಅಥವಾ (ಬಹು ವ್ಯಾಪಕವಾದ ಮಾದರಿಗಳಲ್ಲಿ) ವ್ಯಕ್ತಿಗತವಾದ ಕಾರ್ಯನಿಯೋಜನೆ ಹಾಗೂ ಆವಾಗ ಅನುಮತಿಸಿದ ಅಧಿಕಾರದ ಕರ್ತವ್ಯಗಳ ಗುಂಪುಗಳು ನಿರ್ವಹಿಸಬಹುದು.
ಗಣನೆ
ಎಣಿಕೆ, ಕೂಡುವಿಕೆ, ಸರಾಸರಿ ಕಂಡುಹಿಡಿಯುವಿಕೆ, ವಿಂಗಡಿಸುವಿಕೆ, ವರ್ಗೀಕರಿಸುವಿಕೆ, ವಿರುದ್ಧ-ಉಲ್ಲೇಖಗಳು ಹಾಗೂ ಇತರೆ ವೈಶಿಷ್ಟ್ಯಗಳ ಮೇಲೆ ಹಲವು ಸಾಮಾನ್ಯ ಗಣನೆಗಳ ಬೇಡಿಕೆಗಳಿವೆ. ಪ್ರತಿಯೊಂದು ಕಂಪ್ಯುಟರ್ ಬಳಸುವಿಕೆಯಲ್ಲಿ ಇವನ್ನು ಹೊಸದಾಗಿ ಕಾರ್ಯಗತ ಮಾಡುವ ಬದಲಿಗೆ, ಇಂತಹ ಗಣನೆಗಳನ್ನು ಒದಗಿಸುವುದಕ್ಕೆ ಅವರು DBMS ಮೇಲೆ ಅವಲಂಬಿತರಿರಬಹುದು.
ಬದಲಾವಣೆ ಮತ್ತು ಪ್ರವೇಶ ಲಾಗಿಂಗ್
ಯಾರು ಯಾವ ವೈಶಿಷ್ಟ್ಯಗಳನ್ನು ಪ್ರವೇಶಿಸಿದರು, ಏನು ಬದಲಾಯಿಸಲಾಯಿತು ಹಾಗೂ ಅದು ಯಾವಾಗ ಬದಲಾಯಿಸಲಾಗಿತ್ತು ಎಂದು ಕೆಲವರು ತಿಳಿಯಲು ಹಲವು ಬಾರಿ ಅಪೇಕ್ಷಿಸುತ್ತಾರೆ. ಪ್ರವೇಶ ಸಂಭಾವನೆಗಳ ಹಾಗೂ ಬದಲಾವಣೆಗಳ ದಾಖಲೆಯ ನಮೂದನೆಯಿಂದ ಲಾಗಿಂಗ್ ಸೇವೆಗಳು ಇದನ್ನು ಅನುಮತಿಸುತ್ತದೆ.
ಸ್ವಯಂ ಚಾಲನೆಯನ್ನು ಅತ್ಯುತ್ತಮವಾಗಿಸುವುದು
ಬಳಕೆಯ ವಿನ್ಯಾಸಗಳು ಅಥವಾ ಬೇಡಿಕೆಗಳು ಪುನರಾವರ್ತನೆಯಾಗಿ ಉಂಟಾದರೆ, ಕೆಲವು DBMS ಅಂತಹ ಪರಸ್ಪರ ಕ್ರಿಯೆಗಳ ವೇಗವನ್ನು ಉತ್ತಮಗೊಳಿಸಲು ತಮ್ಮನ್ನು ತಾನೆ ಹೊಂದಿಕೊಳ್ಳುತ್ತಾರೆ. ಕೆಲವು ಸಂಧರ್ಭಗಳಲ್ಲಿ DBMS ಬರೀ ಕಾರ್ಯ ನಿರ್ವಹಣೆಯನ್ನು ಪರಿವೀಕ್ಷಿಸಲು ಮಾತ್ರ ಸಲಕರಣೆಗಳನ್ನು ಒದಗಿಸುತ್ತದೆ, ಒಬ್ಬ ಮಾನವ ಪರಿಣಿತನು ಅಂಕಿ ಅಂಶಗಳನ್ನು ಪರಿಶೀಲಿಸಿದ ನಂತರ ಬೇಕಾದ ಹೊಂದಾಣಿಕೆ ಮಾಡಲು ಅನುಮತಿಸುತ್ತದೆ.

ಮೆಟಾ-ಡೇಟಾ ಭಂಡಾರ[ಬದಲಾಯಿಸಿ]

ಮೆಟಾಡೇಟಾ ಇದು ಒಂದು ದತ್ತಾಂಶವನ್ನು ವ್ಯಾಖ್ಯಾನಿಸುವ ಡೇಟಾ. ಉದಾಹರಣೆಗೆ, ಡೇಟಾ ಸೆಟ್‍ನಲ್ಲಿ ಯಾವ ವೈಶಿಷ್ಟ್ಯಗಳನ್ನು ಅನುಮತಿಸಬೇಕೆಂದು ವಿವರಿಸುವ ಪಟ್ಟಿಯನ್ನು "ಮೆಟಾ-ಮಾಹಿತಿ" ಎನ್ನುತ್ತಾರೆ.ಮೆಟಾ-ಡೇಟಾ ಅನ್ನು ದತ್ತಾಂಶದ ಡೇಟಾ ಎಂದು ಕೂಡ ತಿಳಿಯಬಹುದು.

ಪ್ರಸ್ತುತ ಪ್ರವೃತ್ತಿಗಳು[ಬದಲಾಯಿಸಿ]

1998ರಲ್ಲಿ, ಪ್ರಸ್ತುತ ಡೇಟಾಬೇಸ್ ನಿರ್ವಹಣೆಯ ತೊಡಕುಗಳನ್ನು ಪರಿಹರಿಸಲು ಡೇಟಾಬೇಸ್ ನಿರ್ವಹಣೆಗೆ ಒಂದು ಹೊಸ ಶೈಲಿಯ ಡೇಟಾಬೇಸ್‌ಗಳ ಅಗತ್ಯವಿತ್ತು. ಡೇಟಾಬೇಸ್ ನಿರ್ವಹಣೆಯ ಹಳೆಯ ಶೈಲಿಗಳು ಬಹಳ ಜಟಿಲಗೋಳುತ್ತಿವೆ ಮತ್ತು ಸ್ವಯಂ ಚಾಲಿತ ರೂಪುರೇಖೆಗಳ ಹಾಗೂ ನಿರ್ವಹಣೆಯ ಅಗತ್ಯವಿದೆ ಎಂದು ಸಂಶೋಧಕರು ಮನಗಣನೆ ಮಾಡಿಕೊಂಡರು.[೩] ಸುರ್ಜೀತ್‌ ಚೌಧರಿ, ಗೆರ್‌ಹಾರ್ಡ್ ವೀಯಕಮ್ ಹಾಗೂ ಮೈಕಲ್ ಸ್ಟೋನ್‍ಬ್ರೇಕರ್‌, ಇವರುಗಳು ಡೇಟಾಬೇಸ್ ನಿರ್ವಹಣೆ ಪ್ರಕ್ರಿಯೆಯ ಕಲ್ಪನೆಯ ಮೇಲೆ ಅನಿರೀಕ್ಷಿತವಾದ ಪ್ರಭಾವವನ್ನು ಬೀರಿದ ಪ್ರಥಮಾನ್ವೇಷಕರಾಗಿದ್ದರು. [೩] ಡೇಟಾಬೇಸ್ ನಿರ್ವಹಣೆಗೆ ಒಂದು ಹೆಚ್ಚು ವಿದ್ಯುನ್ಮಾನ ಕೋಶ ಪ್ರವೇಶದ ಅಗತ್ಯವಿದೆ ಮತ್ತು ಹಲವು ಬಳಕೆದಾರರಿಗೆ ಹಲವು ಬಗೆಯ ವಿನ್ಯಾಸಗಳ ಬೇಡಿಕೆಗಳಿವೆ ಎಂದು ಅವರು ನಂಬಿದ್ದರು[೩]. ಡೇಟಾಬೇಸ್‍ ನಿರ್ವಹಣೆಯ ಈ ಹೊಸ ಅಭಿವೃಧಿ ಪ್ರಕ್ರಿಯೆಯಿಂದ ಇಂದು ನಮಗೆ ಕೊನೆಯಿರದ ಸಾಧ್ಯತೆಗಳು ಲಭ್ಯವಿದೆ. ಡೇಟಾಬೇಸ್ ನಿರ್ವಹಣೆ ಇನ್ನು "ಏಕಶಿಲೆಯ ಘಟಕಗಳಾ"ಗಿ ಉಳಿದಿಲ್ಲ[೩]. ಬಳಕೆದಾರರ ವೈಯುಕ್ತಿಕ ಬೇಡಿಕೆಗಳನ್ನು ಪೂರೈಸಲು ಹಲವು ಪರಿಹಾರಗಳು ಅಭಿವೃದ್ಧಿಯಾಗಿವೆ. ಹಲವು ಡೇಟಾಬೇಸ್‍ ಆಯ್ಕೆಗಳ ಬೆಳವಣಿಗೆಯು ಡೇಟಾಬೇಸ್ ನಿರ್ವಹಣೆಯಲ್ಲಿ ಹೊಂದಿಕೊಳ್ಳುವ ಪರಿಹಾರಗಳನ್ನು ಸೃಷ್ಟಿಸಿದೆ. ನಮಗೆ ತಿಳಿದಂತೆ ತಂತ್ರಜ್ಞಾನ ಜಗತ್ತಿಗೆ ಇಂದು ಡೇಟಾಬೇಸ್ ನಿರ್ವಹಣೆಯು ಹಲವು ರೀತಿಯಲ್ಲಿ ಪ್ರಭಾವ ಬೀರಿದೆ. ಸಂಸ್ಥೆಗಳು ಬೆಳೆದಂತೆ ಸಂಸ್ಥೆಗಳ ವಿಷಯ ಕೈಪಿಡಿ ಸೇವೆಗಳಿಗೆ ಬೇಡಿಕೆಗಳು ಅತ್ಯಂತ ಆವಶ್ಯಕವಾಗಿವೆ. ಈಗ ವ್ಯವಾಹರಗಳು ವಿಷಯ ಕೈಪಿಡಿ ಸೇವೆಗಳ ಬಳಕೆಯನ್ನು ಮಾಡುತ್ತಾರೆ, ಅದು ಅವರ ಕಂಪನಿ ಮಾಹಿತಿಯನ್ನು ಚುರುಕಾಗಿ ಹುಡುಕಿ ನೀಡುತ್ತದೆ[೩]. ಮೊಬೈಲ್ ಸಾಧನಗಳು ಬರೀ ಬಳಕೆದಾರರ ಸಂಪರ್ಕಗಳ ಮಾಹಿತಿಯನ್ನು ಸಂಗ್ರಹಿಸುವುದಲ್ಲದೇ ಇನ್ನೂ ದೊಡ್ಡ ಸಾಮರ್ಥ್ಯಗಳಿಗೆ ಬೆಳೆದಿವೆ. ಮೊಬೈಲ್ ತಂತ್ರಜ್ಞ ಕಂಪ್ಯೂಟರ್‌ಗಳ ಬಳಕೆಗೆ ಹೆಚ್ಚು ಮಾಹಿತಿಯನ್ನು ಕ್ಯಾಶ್ ಮಾಡಿ ಇಡಬಲ್ಲದು ಮತ್ತು ಅದನ್ನು ಚಿಕ್ಕ ಸಾಧನಗಳಲ್ಲಿ ಪ್ರದರ್ಶಿಸಬಲ್ಲದು[೩]. ಅಂತರ್ಜಾಲದ ಶೋಧನೆಗಳು ಕೂಡ ಡೇಟಾಬೇಸ್ ನಿರ್ವಹಣೆಯಿಂದ ಪ್ರಭಾವಗೊಂಡಿವೆ. ಸರ್ಚ್‌ ಇಂಜಿನ್ ಪ್ರಶ್ನೆಗಳು ವರ್ಲ್ಡ್ ವೈಡ್ ವೆಬ್‍ನೊಳಗೆ ಡೇಟಾವನ್ನು ಪತ್ತೆ ಹಚ್ಚಲು ಸಶಕ್ತವಿರುತ್ತವೆ[೩]. ಡೇಟಾ ಉಗ್ರಾಣಿಕೆಯ ಅಭಿವೃದ್ಧಿಗಳಿಂದಾಗಿ ಚಿಲ್ಲರೆ ವ್ಯಾಪಾರಿಗಳು ಕೂಡ ಲಾಭ ಪಡೆದಿದ್ದಾರೆ. ಈ ಕಂಪನಿಗಳು ಅವರ ವ್ಯವಾಹಾರದ ಅಂತರ್ಗತದಲ್ಲಿ ಇದ್ದ ಗ್ರಾಹಕ ವಹಿವಾಟುಗಳನ್ನು ನಮೂದಿಸಲು ಸಶಕ್ತರಾಗಿರುತ್ತಾರೆ[೩]. ಈ-ವ್ಯವಹಾರದ ಜಗತ್ತಿನೊಂದಿಗೆ ಆನ್‍ಲೈನ್ ವಹಿವಾಟುಗಳು ಅದ್ಭುತವಾಗಿ ಜನಪ್ರಿಯವಾಗಿವೆ. ಗ್ರಾಹಕರು ಹಾಗೂ ವ್ಯಾಪಾರಗಳು ಸುರಕ್ಷಿತವಾಗಿ ಕಂಪನಿ ವೆಬ್‍ಸೈಟ್‍ಗಳ ಮೇಲೆ ಪಾವತಿಗಳನ್ನು ಸಲ್ಲಿಸಬಹುದು. ಡೇಟಾಬೇಸ್ ನಿರ್ವಹಣೆಯ ವಿಕಾಸವಿಲ್ಲದೇ ಯಾವುದೇ ಪ್ರಸ್ತುತ ಅಭಿವೃದ್ಧಿಗಳು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲ ಪ್ರಗತಿ ಹಾಗೂ ಡೇಟಾಬೇಸ್ ನಿರ್ವಹಣೆಯ ಪ್ರಸ್ತುತ ಪ್ರವೃತ್ತಿಗಳಿದ್ದರೂ ಸಹ, ಉಲ್ಲೇಖನಗಳು ಹಾಗೂ ಬೇಡಿಕೆಗಳು ಬೆಳೆದಂತೆ ಎಂದಿಗೂ ಹೊಸ ಅಭಿವೃದ್ಧಿಯ ಅಗತ್ಯವಿರುತ್ತದೆ.

ಉದಾಹರಣೆಗಳು[ಬದಲಾಯಿಸಿ]

ಇದನ್ನೂ ಗಮನಿಸಿ[ಬದಲಾಯಿಸಿ]


ಆಕರಗಳು[ಬದಲಾಯಿಸಿ]

  1. ಕೊಡ್, ಇ.ಎಫ್.(1970).[೧] Archived 2007-06-12 ವೇಬ್ಯಾಕ್ ಮೆಷಿನ್ ನಲ್ಲಿ."ಎ ರಿಲೇಷನಲ್ ಮಾಡೆಲ್ ಆಫ್ ಡೇಟಾ ಫಾರ್ ಲಾರ್ಜ್ ಶೇರ್ಡ್ ಡೇಟಾ ಬ್ಯಾಂಕ್ಸ್" Archived 2007-06-12 ವೇಬ್ಯಾಕ್ ಮೆಷಿನ್ ನಲ್ಲಿ.. ಇನ್: ಕಮ್ಯೂನಿಕೇಷನ್ಸ್ ಆಫ್ ದ ಎಸಿಎಮ್ 13 (6): 377–387.
  2. itl.nist.gov (1993)ಇಂಟೆಗ್ರೇಷನ್ ಡಿಫಿನಿಷನ್ ಫಾರ್ ಇನ್‌ಫಾರ್ಮೆಷನ್ ಮಾಡೆಲಿಂಗ್(IDEFIX). 21 ಡಿಸೆಂಬರ್ 1993.
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ ೩.೭ ಸೆಲ್ಟ್‌ಜರ್, ಎಮ್. (ಜುಲೈ 2008). ಬಿಯಾಂಡ್ ರಿಲೇಷನಲ್ ಡೇಟಾಬೇಸಸ್. ಕಮ್ಯೂನಿಕೇಷನ್ಸ್ ಆಫ್ ದ ಎಸಿಎಮ್ , 51(7), 52-58. ಬ್ಯುಸಿನೆಸ್ ಸೊರ್ಸ್ ಕಂಪ್ಲೀಟ್ ಡೇಟಾಬೇಸ್‌ನಿಂದ ಜುಲೈ 6, 2009ರಂದು ಪತ್ತೆಹಚ್ಚಲಾಗಿದೆ.

This article is based on material taken from the Free On-line Dictionary of Computing prior to 1 November 2008 and incorporated under the "relicensing" terms of the GFDL, version 1.3 or later.

ಟೆಂಪ್ಲೇಟು:Systems