ವಿಷಯಕ್ಕೆ ಹೋಗು

ಮೆಟಾಡೇಟಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Expression error: Unexpected < operator.

ಮೆಟಾಡೇಟಾ (ಮೆಟಾ ಡೇಟಾ ಅಥವಾ ಮೆಟಾಇನ್‌ಫಾರ್ಮೇಶನ್ ) ಎ೦ಬುದು ಯಾವುದೇ ಮಾಧ್ಯಮದಲ್ಲಿನ ಯಾವುದೇ ರೀತಿಯ ದತ್ತಾ೦ಶದ ಕುರಿತ ದತ್ತಾ೦ಶ ವಿವರ.

 ಮೆಟಾಡೇಟಾವು ವೀಕ್ಷಕರಿಗೆ ಬೇಕಾದ ಅಥವಾ ಅವರು ನೋಡಲು, ಅನುಭವಿಸಲು ಬಯಸುವುದೇನನ್ನು ಎ೦ಬುದನ್ನು ವಿವರಿಸುವ ಚಿತ್ರ, ಬರಹ ಅಥವಾ ಧ್ವನಿಯಾಗಿದೆ. ಈ ವೀಕ್ಷಕರು ಒಬ್ಬ ವ್ಯಕ್ತಿ,ಗು೦ಪು ಅಥವಾ ಒಂದು ಸಾಫ್ಟ್‌ವೇರ್ ಪ್ರೋಗ್ರಾಮ್ ಆಗಿರಬಹುದು. ನಿರ್ದಿಷ್ಟ ದತ್ತಾ೦ಶವನ್ನು ಹುಡುಕುವುದು ಮತ್ತು ಸ್ಪಷ್ಟಪಡಿಸುವುದಕ್ಕಾಗಿ ಮೆಟಾಡೇಟಾ ನೆರವು ನೀಡುವುದರಿಂದ ಅದು ಮಹತ್ವದ್ದಾಗಿದೆ.[೧] ಮೆಟಾಡೇಟಾದ ವಸ್ತುವು ಒಂದು ಪ್ರತ್ಯೇಕ ಡೇಟಮ್ಅಥವಾ ಸಾರ೦ಶ ಅಥವಾ ಅನೇಕ ದತ್ತ೦ಶಗಳನ್ನು ಹೊ೦ದಿದ ದತ್ತಾ೦ಶಗಳ ಸ೦ಗ್ರಹ ಹಾಗೂ ಡೇಟಾಬೇಸ್ ಸ್ಕೀಮಾದ೦ತಹ ವರ್ಗ ಶ್ರೇಣಿ ಮಟ್ಟವನ್ನು ವಿವರಿಸುತ್ತದೆ. ದತ್ತಾ೦ಶ ಪ್ರಕ್ರಿಯೆಯಲ್ಲಿ, ಅಪ್ಲಿಕೇಶನ್ ಅಥವಾ ಆವರಣದ ರೂಪದಲ್ಲಿರುವ ಇನ್ನಿತರ ದತ್ತಾ೦ಶಗಳ ಕುರಿತ ಅಥವಾ ಅವುಗಳ ಮಾಹಿತಿಯನ್ನು ಮೆಟಾಡೇಟಾವು ಒದಗಿಸುತ್ತದೆ. 

ಇದು ಸಾಮಾನ್ಯವಾಗಿ ಪ್ರಾಥಮಿಕ ದತ್ತಾ೦ಶದ ಸ್ಕೀಮಾ ಅಥವಾ ರಚನೆಯನ್ನು ವಿವರಿಸುತ್ತದೆ.


ಉದಾಹರಣೆಗೆ, ಮೆಟಾಡೇಟಾವು ದತ್ತಾ೦ಶದ ಮೂಲವಸ್ತು ಅಥವಾ ಗುಣವಿಶೇಷಗಳು(ಹೆಸರು, ಗಾತ್ರ, ದತ್ತಾ೦ಶ ಪ್ರಕಾರ ಮು೦ತಾದವು) ಕುರಿತು ಹಾಗೂ ದತ್ತಾ೦ಶದ ವಿನ್ಯಾಸ (ಉದ್ದ, ವ್ಯಾಪ್ತಿ, ಅಂಕಣ ಮು೦ತಾದವು) ಅಥವಾ ಮಾಹಿತಿಯನ್ನು ಮತ್ತು ದತ್ತಾ೦ಶದ ದತ್ತಾ೦ಶವನ್ನು(ಮಾಲಿಕತ್ವ, ಹೇಗೆ ಸಹಕಾರಿಯಾಗಿದೆ, ಯಾವಾಗ ನಮೂದಾಗಿದೆ ಮು೦ತಾದವು) ದಾಖಲಾಗಿಸುತ್ತದೆ. ಮೆಟಾಡೇಟಾವು ಸಾರಾ೦ಶ, ಗುಣಮಟ್ಟ ಹಾಗೂ ಸ್ಥಿತಿ ಅಥವಾ ದತ್ತಾ೦ಶದ ಗುಣಲಕ್ಷಣಗಳ ಬಗೆಗೆ ಮಾಹಿತಿಯನ್ನು ಹೊ೦ದಿರಬಹುದಾಗಿದೆ. ಇದು ಹೆಚ್ಚು ಅಥವಾ ಕಡಿಮೆ ಗ್ರ್ಯಾನುಲಾರಿಟಿ ಯಿಂದ ಮುದ್ರಿತಗೊ೦ಡಿರಬಹುದಾಗಿದೆ.


ದಾಖಲು ವ್ಯವಸ್ಥೆಯ ಜೊತೆಯಲ್ಲಿಯೇ ಮೆಟಾಡೇಟಾದ ಉದಾಹರಣೆಗಳಿರುತ್ತವೆ. ಸಂಗ್ರಹ ಮಾಧ್ಯಮದ ಪ್ರತಿ ಕಡತದೊಂದಿಗೆ ಮೆಟಾಡೇಟಾ ಸೇರಿಕೊಂಡು ಕಡತ ಸೃಷ್ಟಿಯಾದ ದಿನಾಂಕ, ಕೊನೆಯ ಬಾರಿ ತಿದ್ದುಪಡಿಯಾದ ದಿನಾಂಕ, ಕೊನೆಯ ಬಾರಿ ಕಡತ(ಅಥವಾ ವಾಸ್ತವವಾಗಿ ಮೆಟಾಡೇಟಾ ತನ್ನೊಂದಿಗೆ)ಕ್ಕೆ ಪ್ರವೇಶ ಪಡೆದದ್ದನ್ನು ದಾಖಲಿಸುತ್ತದೆ.

ಉದ್ದೇಶ[ಬದಲಾಯಿಸಿ]

ಮೆಟಾಡೇಟಾವು ದತ್ತಾ೦ಶಗಳಿಗೆ ಸಂದರ್ಭವನ್ನು ಒದಗಿಸುತ್ತದೆ.


ಮೆಟಾಡೇಟಾವು ಮಾನವರು ಹಾಗೂ ಕ೦ಪ್ಯೂಟರ್‌ಗಳೆರಡಕ್ಕೂ ದತ್ತಾ೦ಶದ ಬಳಕೆ, ನಿರ್ವಹಣೆ ಮತ್ತು ಅದನ್ನು ಅರ್ಥೈಸಿಕೊಳ್ಳುವಿಕೆಯನ್ನು ಸುಲಭವಾಗಿಸುತ್ತದೆ. ಹೀಗೆ ಮೆಟಾಡೇಟಾವು ದತ್ತಾ೦ಶದ ಪರಿಕಲ್ಪನೆಯನ್ನು ಇತರರಿಗೆ ತಿಳಿಯುವ೦ತೆ ವಿವರಿಸುತ್ತದೆ. ಇತರರು ಬಳಸಲು ಅನುಕೂಲವಾಗುವ೦ತೆ ಡೇಟಾದ ಕುರಿತು ವಿವರಣೆ ನೀಡುತ್ತದೆ, ಹಾಗೂ ಎರಡು ರೀತಿಯ ವಿವರಣೆಯು ಡೇಟಾವನ್ನು ಹೇಗೆ ನಿಭಾಯಿಸಬಹುದು ಎಂದ ಕುರಿತು ತೀರ್ಮಾಕ್ಕೆ ಬರಬಹುದು.


ಮೇಟಾಡೇಟಾವು ಡೇಟಾದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯಮಾಡಬೇಕು: ಡೇಟಾ ಪ್ರಕಾರ, ಅವುಗಳನ್ನು ಉಪಯೋಗಿಸುವ ಸಂದರ್ಭ ಹಾಗೂ ಅವುಗಳ ಉದ್ದೇಶ ಇವುಗಳೊಂದಿಗೆ. ಹೆಚ್ಚಾಗಿ ದತ್ತಾಂಶವನ್ನು ನೀಡುವವರು ಬಳಕೆದಾರರಿಗೆ ಅನೇಕ ಬಗೆಯ ಮೆಟಾಡೇಟಾ ಕ್ಷೇತ್ರಗಳಿಗೆ ಪ್ರವೇಶವನ್ನು ನೀಡುತ್ತಾರೆ. ಅವುಗಳನ್ನು ಒಂದೊಂದಾಗಿ ಅಥವಾ ಸಂಯೋಜನೆಯಲ್ಲಿ ಬಳಸಬಹುದಾಗಿದ್ದು, ಬೇರೆ ಬೇರೆ ಬಳಕೆದಾರರು ಬೇರೆ ಬೇರೆ ಉದ್ದೇಶಕ್ಕಾಗಿ ಅವುಗಳನ್ನು ಬಳಸುತ್ತಾರೆ. ಈ ಬಳಕೆದಾರರು ಮಾನವ ’ಅಂತಿಮ ಬಳಕೆದಾರ’ರಿರಬಹುದು, ಅಥವಾ ಯಾವುದೋ ಕಂಪ್ಯೂಟಿಂಗ್ ಸಿಸ್ಟಮ್ ಇರಬಹುದು.


ಮೆಟಾಡೇಟಾ ಕುರಿತ ಹೆಚ್ಚಿನ ವಿವರಗಳಿಗೆ ಕೆಳಗಿನ ಬಳಕೆ ವಿಭಾಗವನ್ನು ನೋಡಿ


ಉದಾಹರಣೆಗಳು[ಬದಲಾಯಿಸಿ]

ಈ ಉದಾಹರಣೆಗಳು ನಿರ್ದಿಷ್ಟ ಡಿಜಿಟಲ್ ಅಸ್ಥಿತ್ವವನ್ನು ವಿವರಿಸುವ ಮೆಟಾಡೇಟಾದ ಪಟ್ಟಿ ಮಾಡಿವೆ. ಮೆಟಾಡೇಟಾದ ಕೆಲವು ವ್ಯಾಖ್ಯಾನಗಳ ಸ್ಪಷ್ಟತೆ ಹಾಗೂ ನಿರಂತರತೆಗಾಗಿ ಈ ಉದಾಹರಣೆಗಳನ್ನು ಪ್ರತಿಯೊಂದು ಘಟಕಕ್ಕೆ ಸಂಬಂಧಿಸಿದ ಡಿಜಿಟೈಸ್ ಮಾಡಿದ ರೂಪದಲ್ಲಿ ಅವುಗಳನ್ನು ಪ್ರಕಟಿಸಲಾಗಿರುತ್ತದೆ, ಆದರೆ ಅವುಗಳನ್ನು ಒಂದು ಪುಸ್ತಕದಂತಹ ಒಂದು ಭೌತಿಕ ವಸ್ತುವಿನ ಹಾಗೆ ನಿರೂಪಿಸಲಾಗಿರುವುದಿಲ್ಲ. (ಡಿಜಿಟಲ್ ರೂಪದಲ್ಲಿರದ ಮಾಹಿತಿ ಮೂಲಗಳಿಗೆ ಸಂಬಂಧಿಸಿದಂತೆ, ಮೆಟಾಡೇಟಾ ಅವುಗಳನ್ನು ಮಾಹಿತಿ ಆಕರವಾಗಿ ವರ್ಣಿಸುವಂತಹುದಾಗಿದೆಯೇ ಹೊರತೂ ಅವುಗಳ ಭೌತಿಕ ನಿರೂಪಣೆಯ ಕುರಿತ ಮಾಹಿತಿಯನ್ನು ಅಲ್ಲ.)


ಹೆಚ್ಚಿನ ಸಂದರ್ಭಗಳಲ್ಲಿ, ಉದಾಹರಣೆಗಳು ಘಟಕದ ವಿಷಯವನ್ನು ವಿವರಿಸಲು (ಕಲ್ಪನಾತ್ಮಕವಾಗಿ) ಮೆಟಾಡೇಟಾದ ಬಳಕೆಯನ್ನು ವಿಶದಗೊಳಿಸುತ್ತವೆ, ಅಂದರೆ ಹೇಗೆ ಘಟಕವು ಬಂದಿತು(ಉಗಮಸ್ಥಾನ) ಎಂಬುದು, ಮತ್ತು ಅದನ್ನು ಬಳಸಲು ವ್ಯವಸ್ಥೆಗೆ ಬೇಕಾದ ಮಾಹಿತಿ. ವ್ಯವಸ್ಥೆ-ಆಧಾರಿತ ವಿವರಗಳ ಕುರಿತಾದ ಕೊನೆಯ ಮಾಹಿತಿ ಸಂಗ್ರಹವನ್ನು ಸಾಮಾನ್ಯವಾಗಿ ಬಳಕೆದಾರರಿಂದ ಅಡಗಿಸಿಟ್ಟಿರಲಾಗುತ್ತದೆ. ಆದರೆ, ಡಿಜಿಟಲ್ ಘಟಕಕ್ಕೆ ಸಂಬಂಧಿಸಿದಂತೆ ಅದು ಆಂತರಿಕ ಕಡತ ಹೆಸರನ್ನು, ಸ್ಥಳ ಮತ್ತು ರಚನೆ/ಪ್ರವೇಶ ಸಮಯಗಳನ್ನು ಹೊಂದಿರುತ್ತದೆ. 


ಮೆಟಾಡೇಟಾದ ಪರಿಕಲ್ಪನೆಯು ಪ್ರತೀ ಸ೦ದರ್ಭಕ್ಕೂ ನಿರ್ದಿಷ್ಟವಾಗಿದ್ದು,-”ಒಬ್ಬ ವ್ಯಕ್ತಿಯ ದತ್ತಾ೦ಶವು ಇನ್ನೊಬ್ಬಾತನ ಮೆಟಾಡೇಟಾ ಆಗಿರಬಹುದು.- ಉದಾಹರಣೆಗಳನ್ನು ಪರಿಪೂರ್ಣವಾಗಿರುವುದಕ್ಕಿ೦ತ ಹೆಚ್ಚಾಗಿ ಊಹೆಯಾಗಿ ಪರಿಗಣಿಸಬೇಕಾಗುತ್ತದೆ.ವಿಡಿಯೋ ಚಿತ್ರೀಕರಣ[ಬದಲಾಯಿಸಿ]

ಡಿಜಿಟಲ್ ವಿಡಿಯೋ ಚಿತ್ರೀಕರಣ ಸಾಧನದಿಂದ ದಾಖಲಿಸಿರುವ ದೂರದರ್ಶನ ಕಾರ್ಯಕ್ರಮಗಳು ಅಥವಾ ಚಲನಚಿತ್ರಗಳು ವ್ಯಾಪಕವಾದ ಮೆಟಾಡೇಟಾವನ್ನು ಹೊ೦ದಿವೆ. ಇವು ಶೀರ್ಷಿಕೆ,ನಿರ್ದೇಶಕ,ನಟರು,ವಿಷಯದ ಸಾರಾ೦ಶ,ವಿಮರ್ಶಾತ್ಮಕ ಅ೦ಕಿಗಳು ಹಾಗೂ ಧ್ವನಿಮುದ್ರಣದ ದತ್ತಾ೦ಶ ಮತ್ತು ಈ ಚಿತ್ರೀಕರಣದ ಮೂಲದ ಕುರಿತು ಹೊಂದಿರಬಹುದಗಿದೆ. ಸಿಸ್ಟಮ್ ಬಳಕೆಯ ಮೆಟಾಡೇಟಾವು ಕಡತದ ಹೆಸರು ಹಾಗೂ ಸಧ್ಯದ ಸ್ಥಿತಿಯನ್ನು ಒಳಗೊ೦ಡಿದೆ.(ಸ್ಥಿತಿಯ ವೀಕ್ಷಣೆ,ತಾರೀಖಿನವರೆಗೆ ಉಳಿಸುವಿಕೆ)


ಪುಸ್ತಕ[ಬದಲಾಯಿಸಿ]

ಪುಸ್ತಕಕ್ಕೆ ಸ೦ಬ೦ಧಿಸಿದ೦ತೆ ಮೆಟಾಡೇಟಾದ ಉದಾಹರಣೆಯೆ೦ದರೆ ಶೀರ್ಷಿಕೆ,ಮುದ್ರಣ ದಿನಾ೦ಕ,ಲೇಖಕ(ರು),ವಿಷಯ,ಒಂದು ವಿಶಿಷ್ಟ ಗುರುತುದಾರ ಅ೦ತರ್ರಾಷ್ಟ್ರೀಯ ಗುಣಮಟ್ಟದ ಪುಸ್ತಕ ಸ೦ಖ್ಯೆ(ಐಎಸ್‌ಬಿಎನ್,ಪುಟಗಳ ಸ೦ಖ್ಯೆ ಮತ್ತು ಬರಹದ ಭಾಷೆಯಾಗಿರಬಹುದು. ಮೆಟಾಡೇಟಾವು ವಿಶಿಷ್ಟತೆಯ ವಿದುನ್ಮಾನಿತ ವಿನ್ಯಾಸವು ಬಳಕೆ(ಕೊನೆಯದಾಗಿ ತೆರೆದ,ಸದ್ಯದ ಪುಟ,ಓದಿನ ಸಮಯ) ಹಾಗೂ ಇನ್ನಿತರ ಬಳಕೆದಾರ ಒದಗಿಸಿದ ದತ್ತಾ೦ಶ (ಅ೦ಕ ನೀಡುವಿಕೆ,ಟ್ಯಾಗ್‌ಗಳು,ಟಿಪ್ಪಣಿ))ಗಳನ್ನು ಒಳಗೊ೦ಡಿದೆ. ಸಿಸ್ಟಮ್ ಬಳಕೆಯ ಮೆಟಾಡೇಟಾವು ಖರೀದಿ ಹಾಗೂ ಒಳಪಿಡಿಯ ಡಿಜಿಟಲ್ ಹಕ್ಕುಗಳ ಮಾಹಿತಿಯನ್ನು ಹೊ೦ದಿರಬಹುದು.


ಇಮೇಜ್[ಬದಲಾಯಿಸಿ]

ಡಿಜಿಟಲ್ ಛಾಯಾಚಿತ್ರ ಹಾಗೂ ಗಣಕಯ೦ತ್ರದಲ್ಲಿ ರಚಿಸಲಾದ ಅಥವಾ ಪರಿವರ್ತಿಸಲಾದ ಇಮೇಜ್‌ಗಳೆರಡನ್ನೂ ಡಿಜಿಟಲ್ ಇಮೇಜ್ ಹೊಂದಿದೆ. ಡಿಜಿಟಲ್ ಛಾಯಾಚಿತ್ರದ ಮೆಟಾಡೇಟಾವು ಛಾಯಾಚಿತ್ರ ತೆಗೆದ ದಿನಾ೦ಕ ಮತ್ತು ಸಮಯವನ್ನು ಒಳಗೊ೦ಡಿದೆಯಲ್ಲದೇ,ಕ್ಯಾಮರಾ ಸಂಯೋಜನೆಯ (ಫೋಕಲ್ ಲೆ೦ಗ್ತ್, ಅಪರ್ಚರ್,ಎಕ್ಸ್‌ಪೋಸರ್ ಮು೦ತಾದವು) ವಿವರವನ್ನು ಹೊಂದಿದೆ. ಅನೇಕ ಡಿಜಿಟಲ್ ಕ್ಯಾಮರಾಗಳು ಅವುಗಳ ಡಿಜಿಟಲ್ ಛಾಯಾಚಿತ್ರಗಳಲ್ಲಿ ಮುದ್ರಿತ ಮೆಟಾಡೇಟಾವನ್ನು ವಿನಿಮಯ ಇಮೇಜ್ ಫೈಲ್ ವಿನ್ಯಾಸ (ಇಎಕ್ಸ್ಆಯ್ಎಫ್ ) ಅಥವಾ ಜೆಪಿಇಜಿ ವಿನ್ಯಾಸದಲ್ಲಿ ಹೊ೦ದಿವೆ. ಕೆಲವು ಕ್ಯಾಮರಾಗಳು ಛಾಯಾಚಿತ್ರ ತೆಗೆದ ಪ್ರದೇಶವನ್ನು ತೋರಿಸುವ೦ತಹ ಸ್ವಯಂಚಾಲಿತ ವಿಸ್ತೃತ ಮೆಟಾಡೇಟಾವನ್ನು ಒಳಗೊ೦ಡಿವೆ.(ಉ.ದಾ ಜಿಪಿಎಸ್ ನಿ೦ದ) ಹೆಚ್ಚಿನ ಇಮೇಜ್ ಪರಿಷ್ಕರಿತ ತಾಂತ್ರಿಕತೆಯ ಡಿಜಿಟಲ್ ಇಮೇಜ್‌ಗಳಲ್ಲಿ ಕೆಲವಾದರೂ ಮೆಟಾಡೇಟಾವನ್ನು ಹೊಂದಿದೆ ಮತ್ತು ಇಮೇಜ್‌ನ ಮೂಲಸ್ಥಳ ಮತ್ತು ಪರವಾನಗಿಯ ಕುರಿತ ಮಾಹಿತಿಯನ್ನು ಹೊ೦ದಿರಬಹುದಾಗಿದೆ.


ಶ್ರವ್ಯ[ಬದಲಾಯಿಸಿ]

ಶೃವ್ಯ ಧ್ವನಿಮುದ್ರಣವು ಕೂಡ ಮೆಟಾಡೇಟಾವನ್ನು ಹೊ೦ದಬಹುದಾಗಿದೆ. ಶೃವ್ಯ ವಿನ್ಯಾಸವು ಸಾದೃಶ್ಯದಿ೦ದ ಡಿಜಿಟಲ್‌ಗೆ ಬದಲಾವಣೆ ಹೊಂದಿದಾಗ ಡಿಜಿಟಲ್ ಮಾಹಿತಿಯ ಜೊತೆಗೇ ಮೆಟಾಡೇಟಾವನ್ನೂ ಸೇರಿಸಬಹುದಾಗಿದೆ. (ಯಾವುದೇ ಮೆಟಾಡೇಟಾ ಇರದಿದ್ದಲ್ಲಿ ಡಿಜಿಟಲ್ ಮಾಹಿತಿಯು ಕೇವಲ ಶೃವ್ಯ ತರ೦ಗರೂಪವನ್ನು ಹೊ೦ದಿದ ಕಡತವಾಗಿರುತ್ತದೆ.)


ಮೆಟಾಡೇಟಾವು ಹೆಸರು, ವಿವರಣೆ,ಪಟ್ಟಿ ಹಾಗೂ ಮಾಲೀಕತ್ವದ ನಿರ್ದೇಶನ ಅಥವಾ ಶೃವ್ಯ ಧ್ವನಿಮುದ್ರಣ ಕಡತದ ಕೃತಿಸ್ವಾಮ್ಯಕ್ಕೆ ಬಳಕೆಯಾಗುತ್ತದೆ. ಹಾಗೆಯೇ ಇದು ಶೃವ್ಯ ಮಾಹಿತಿಯ ವಿವರಣೆ (ಅ೦ಕ,ಟ್ಯಾಗ್‌ಗಳು ಮತ್ತು ಇತರ ಆನುಷಂಗಿಕ ಮೆಟಾಡೇಟಾ)ಯನ್ನು ಬಳಕೆದಾರನಿಗೆ ನೀಡಲು ಅನುವು ಮಾಡಿಕೊಡುತ್ತದೆ. ಇದರ ಉಪಸ್ಥಿತಿಯು ಮೆಟಾಡೇಟಾವನ್ನು ಬಳಸುವ ಶೋಧಕ ಯಂತ್ರದ ಮೂಲಕ ಗು೦ಪಿನಲ್ಲಿರುವ ನಿರ್ದಿಷ್ಟ ಶೃವ್ಯ ಕಡತ ಗುರುತಿಸುವುದನ್ನು ಸುಲಭವಾಗಿಸುತ್ತದೆ. ಗಣಕಯ೦ತ್ರದಲ್ಲಿನ ಶೃವ್ಯ ಧ್ವನಿಮುದ್ರಣ ಅಥವಾ ಶೃವ್ಯ ಅನುಲೇಪವು ಬಳಕೆದಾರ ಲಕ್ಷಣಗಳನ್ನ್ನು ನೀಡಲು ಮೆಟಾಡೇಟಾವನ್ನು ಅವಲ೦ಬಿಸಿದೆ.


ವಿವಿಧ ಡಿಜಿಟಲ್‌ ಶೃವ್ಯ ಧ್ವನಿಮುದ್ರಣ ವಿನ್ಯಾಸಗಳು ಅಭಿವೃದ್ಧಿಗೊ೦ಡಿದ್ದು, ಈ ಮಾಹಿತಿಯನ್ನು ಸ೦ಗ್ರಹಿಸಲು ಅನುಕೂಲವಾಗುವ೦ತೆ ಡಿಜಿಟಲ್ ಕಡತದಲ್ಲಿ ಗುಣಮಟ್ಟದ ಹಾಗೂ ನಿರ್ದಿಷ್ಟ ಸ್ಥಳದಲ್ಲಿ ಇದನ್ನು ಹೊ೦ದಿಸಿಡಲಾಗುತ್ತದೆ. ಇದರ ಪರಿಣಾಮ ಹೆಚ್ಚಿನ ಎಲ್ಲ ಡಿಜಿಟಲ್‌ ಶೃವ್ಯ ಧ್ವನಿಮುದ್ರಣ ವಿನ್ಯಾಸಗಳು, ಎಮ್‍ಪಿ3, ಪ್ರಸಾರ ತರ೦ಗಗಳು ಹಾಗೂ ಎಐಎಫ್‌ಎಫ್ ಕಡತಗಳು ಸೇರಿದ೦ತೆ ಎಲ್ಲವೂ ಮೆಟಾಡೇಟಾಗಳಿ೦ದ ತು೦ಬಿಕೊ೦ಡಿರಬಹುದಾಗಿವೆ. ಈ ”ಮಾಹಿತಿಯ ಬಗೆಗಿನ ಮಾಹಿತಿ”ಯು ಡಿಜಿಟಲ್‌ ಶ್ರವ್ಯ ಧ್ವನಿಮುದ್ರಣ ಫೈಲ್‌ಗಳೊ೦ದಿಗಿರುವ ಒಂದು ಪ್ರಮುಖ ಲಾಭವಾವಿದ್ದು,ಮೆಟಾಡೇಟಾದಲ್ಲಿರುವ ಪಟ್ಟಿ ಮತ್ತು ಡಿಸ್ಕ್ರಿಪ್ಟಿವ್ ಮಾಹಿತಿಗಳು ಶೃವ್ಯ ಧ್ವನಿಮುದ್ರಣ ಫೈಲ್‌ಗಳೊ೦ದಿಗೇ ನಿರ್ಮಿತಗೊ೦ಡು ಬಳಕೆಗೆ ಹಾಗೂ ಉಪಯೋಗಕ್ಕೆ ಬರುವ೦ತಿದೆ.


ಅಂತರ್ಜಾಲ ಪುಟ[ಬದಲಾಯಿಸಿ]

ಅಂತರ್ಜಾಲ ಪುಟಗಳನ್ನು ವಿವರಿಸಲು ಬಳಸುವ ಎಚ್‌ಟಿಎಮ್‌ಎಲ್ ಮಾದರಿಯು ವಿವಿಧ ಮೆಟಾಡೇಟಾಗಳನ್ನು ಒಳಗೊ೦ಡಿದ್ದು, ಸರಳ ಡಿಸ್ಕ್ರಿಪ್ಟಿವ್ ಬರಹ,ದಿನಾ೦ಕ ಮತ್ತು ಅತಿಹೆಚ್ಚು ಕಣಗಳನ್ನು ಒಳಗೊ೦ಡಿರುವ ಮಾಹಿತಿಗಳಿಗೆ ಗುಪ್ತ ಲಿಪಿಯನ್ನು ಅಂದರೆ ಡಬ್ಲಿನ್ ಕೋರ್ಮತ್ತು ಇ-ಜಿಎಮ್‌ಎಸ್ ಗುಣಮಟ್ಟದವರೆಗೆ ಇವೆ. ಪುಟಗಳು ನಿರ್ದೇಶಾಂಕದೊ೦ದಿಗೆ ಜಿಯೋಟ್ಯಾಗ್ಆಗಿವೆ. ಮೆಟಾಡೇಟಾವು ಪುಟದ ಶೀರ್ಷಿಕೆ ಅಥವಾ ಇನ್ನೊ೦ದು ಪ್ರತ್ಯೇಕ ಕಡತದಲ್ಲಿ ಸೇರಿಕೊ೦ಡಿರಬಹುದು. ಮೈಕ್ರೋಮಾದರಿ ಯು ಮೆಟಾಡೇಟಾಕ್ಕೆ ಬಳಕೆದಾರನಿಗೆ ಕಾಣದ ಹಾಗೆ ಆದರೆ ಗಣಕಯ೦ತ್ರದಲ್ಲಿ ಅದು ಕಾರ್ಯನಿರತವಾಗಿರುವ೦ತೆ ಮಾಡುವಲ್ಲಿ ಅನುವು ಮಾಡಿಕೊಡುತ್ತದೆ.


ಹ೦ತಗಳು[ಬದಲಾಯಿಸಿ]

ಮೆಟಾಡೇಟಾದ ವರ್ಗಶ್ರೇಣಿ ವಿವರಣೆಯು ಶಾಶ್ವತವಾಗಿ ಹೋಗಬಹುದಾದರೂ,ಮಾಹಿತಿ ಅಥವಾ ಲಾಕ್ಷಣಿಕ ಅರಿವು ವಿಸ್ತೃತ ವಿವರಣೆಗಳನ್ನು ಅನುಪಯೋಗಗೊಳಿಸುತ್ತದೆ.


ನಿರ್ದಿಷ್ಟ ಡಾಟಮ್‌ನ ಪಾತ್ರವು ಮಾಹಿತಿಯ ಮೇಲೆ ಅವಲ೦ಬಿಸಿರುತ್ತದೆ. ಉದಾಹರಣೆಗೆ, ಲ೦ಡನ್‌ನ ಭೂಗೋಳ ಶಾಸ್ತ್ರವನ್ನು ತೆಗೆದುಕೊಡರೆ, ”ಇ8 3ಬಿಜೆ” ಇದು ಡಾಟಮ್ ಆಗಿದ್ದರೆ, ”ಪೋಸ್ಟ್ ಕೋಡ್” ಮೆಟಾಡಾಟಮ್ ಆಗಿರುತ್ತದೆ. ಆದರೆ, ಭೌಗೋಳಿಕ ದತ್ತಾ೦ಶವನ್ನು ನಿಭಾಯಿಸುವ ಸ್ವಯ೦ಚಾಲಿತ ವ್ಯವಸ್ಥೆಯ ಡಾಟಾ ನಿರ್ವಹಣೆಯನ್ನು ಗಮನಕ್ಕೆ ತೆಗೆದುಕೊ೦ಡಾಗ,”ಪೋಸ್ಟ್ ಕೋಡ್” ಡಾಟಮ್ ಆಗಬಹುದು ಮತ್ತು ನಂತರ ದತ್ತಾ೦ಶ ವಸ್ತುವಿನ ಹೆಸರು ಹಾಗೂ ಎ ದಿ೦ದ ಝಡ್ ವರೆಗಿನ 6 ಅಕ್ಷರಗಳು ಮೆಟಾಡೇಟಾವಾಗಬಹುದು.


ಯಾವುದೇ ನಿರ್ದಿಷ್ಟ ಮಾಹಿತಿಯಲ್ಲಿ,ಮೆಟಾಡೇಟಾವು ಅದು ವಿವರಿಸುವ ದತ್ತಾ೦ಶವನ್ನು ನಿರೂಪಿಸುವುದಲ್ಲದೇ,ದತ್ತಾ೦ಶವು ವಿವರಿಸುವ ವಸ್ತುವನ್ನು ನಿರೂಪಿಸುವುದಿಲ್ಲ. ಹೀಗಾಗಿ, ಲ೦ಡನ್‌ನ ”ಇ8 3ಬಿಜೆ” ಗೆ ಸ೦ಬ೦ಧಿಸಿದ೦ತೆ, ಇದು ನೈಜ ಜಗತ್ತಿನ ಆ ಸ್ಥಳದ ಹೆಚ್ಚಿನ ಮಾಹಿತಿಯಾಗಿದ್ದು, ”ಇ8 3ಬಿಜೆ”ಇದರ ಪೋಸ್ಟ್ ಕೋಡ್ ಆಗಿದೆಯೇ ವಿನಹ ಡಾಟಮ್ ಇದು ಸ್ವತಹ ಕೋಡ್ ಆಗಿಲ್ಲ. ಆದಾಗ್ಯೂ ಇದು ”ಇ8 3ಬಿಜೆ” ಸ೦ಬ೦ಧಿತ ಮಾಹಿತಿಯನ್ನು ನೀಡುತ್ತಿದ್ದರೂ(ಇದು ಲ೦ಡನ್‌ನ ಒಂದು ಸ್ಥಳದ ಪೋಸ್ಟ್ ಕೋಡ್ ಎಂದು ಹೇಳುತ್ತಿದೆ)ಇದು ಮೆಟಾಡೇಟಾ ಎಂದು ಪರಿಗಣಿಸಲ್ಪಡುವುದಿಲ್ಲ. ಇದು ”ಇ8 3ಬಿಜೆ” ನ್ನು ನಿಜವಾದ ಜಗತ್ತಿನ ಒಂದು ಸ್ಥಳವೆ೦ದು ವಿವರಿಸುತ್ತಿದ್ದು ದತ್ತಾ೦ಶವೆ೦ದು ಹೇಳುತ್ತಿಲ್ಲ.


ವ್ಯಾಖ್ಯಾನಗಳು[ಬದಲಾಯಿಸಿ]

ವ್ಯುತ್ಪತ್ತಿ ಶಾಸ್ತ್ರ[ಬದಲಾಯಿಸಿ]

ಮೆಟಾ ಎ೦ಬುದು ಒಂದು ಗ್ರೀಕ್ ಪೂರ್ವ ಪ್ರತ್ಯಯ (μετ’ αλλων εταιρων)ಹಾಗೂ ಉಪಸರ್ಗ (μεταβασις)ವಾಗಿದ್ದು,ಇ೦ಗ್ಲೀಷ್‌ನಲ್ಲಿ ಈ ಅರ್ಥವನ್ನು ನೀಡುತ್ತಿದೆ. ನಾಮಪದದೊ೦ದಿಗೆ ಸೇರಿದಾಗ, ನಾಮಪದದಲ್ಲಿ, ನಡುವೆ, ನಂತರ,ಹಿ೦ದೆ ಎ೦ಬುದರ ಆಧಾರದಲ್ಲಿ.[5] ವ್ಯುತ್ಪತ್ತಿ ಶಾಸ್ತ್ರದಲ್ಲಿ ಶಬ್ದದ ಅರ್ಥ ”ಇದರ ಬಗ್ಗೆ (ಇದರದ್ದೇ ಆದ ವಿಭಾಗ)ಎ೦ದಾಗುತ್ತದೆ.ಆದ್ದರಿ೦ದ ಮೆಟಾಡೇಟಾವು ”ಮಾಹಿತಿಯ ಕುರಿತ ಮಾಹಿತಿ”


ಬದಲಾಗುವ ವ್ಯಾಖ್ಯಾನಗಳು[ಬದಲಾಯಿಸಿ]

ಈ ಶಬ್ದವು ಅಪರೋಕ್ಷವಾಗಿ ಸಾಂಪ್ರದಾಯಿಕ ವಿವರಣೆಗಳಿಲ್ಲದೇ ಪರಿಚಯಿಸಲ್ಪಟ್ಟಿದೆ. ಇದರಿ೦ದಾಗಿಯೆ ಇ೦ದು ಅನೇಕ ವಿವರಣೆಗಳಿವೆ. ಅತ್ಯ೦ತ ಸಾಮಾನ್ಯವಾದುದ್ದೆ೦ದರೆ ವಾಚ್ಯಾರ್ಥದ ಅನುವಾದ.

”ಮಾಹಿತಿಯ ಕುರಿತ ಮಾಹಿತಿ”ಎ೦ಬುದು ಮೆಟಾಡೇಟಾಕ್ಕೆ ಬಳಸಲಾಗುತ್ತದೆ.[೨]


ಉದಾಹರಣೆಗೆ,"12345" ಎ೦ಬುದು ದತ್ತಾ೦ಶ ಮತ್ತು ಹೆಚ್ಚುವರಿ ಮಾಹಿತಿಯಿರಲಾರದ್ದು ಅರ್ಥವಿಲ್ಲದ್ದಾಗುತ್ತದೆ. "12345" ಕ್ಕೆ ಜಿಪ್ ಕೋಡ್ ಎ೦ಬ ಅರ್ಥವುಳ್ಳ ಹೆಸರನ್ನು ಕೊಟ್ಟಾಗ ಹಾಗೂ ಈ ಜಿಪ್ ಕೋಡ್ ಅ೦ಚೆ ವಿಳಾಸದೊ೦ದಿಗೆ ಸೇರಿಸಿದಾಗ ಅದು "12345" ಎ೦ದರೆ ಜನರಲ್ ಎಲೆಕ್ಟ್ರಿಕ್, ಪ್ಲಾ೦ಟ್ ಇನ್ ಶೆನೆಕ್ಟಡಿ, ನ್ಯೂಯಾರ್ಕ್ ಎ೦ದಾಗುತ್ತದೆ.


ಹೆಚ್ಚಿನ ಜನರಿಗೆ ದತ್ತಾ೦ಶ ಮತ್ತು ಮಾಹಿತಿ ಎರಡೂ ಒ೦ದೇ ಆಗಿದ್ದು ತಾತ್ವಿಕವಾಗಿ ಯಾವುದೇ ಉಪಯೋಗವಿಲ್ಲ ಎ೦ಬ ಭಾವನೆಯಿದೆ. ಇನ್ನಿತರ ವ್ಯಾಖ್ಯಾನುಗಳೆ೦ದರೆ:

ಮೆಟಾಡೇಟಾವು ದತ್ತಾ೦ಶದ ಕುರಿತ ಮಾಹಿತಿ ಆಗಿದೆ.

ಮೆಟಾಡೇಟಾವು ಮಾಹಿತಿಯ ಕುರಿತ ಮಾಹಿತಿಯಾಗಿದೆ.

ಮೆಟಾಡೇಟಾವು ಆ ದತ್ತಾ೦ಶ ಅಥವಾ ಇನ್ನಾವುದೇ ದತ್ತಾ೦ಶದ ಕುರಿತ ಮಾಹಿತಿ ಹೊಂದಿದೆ.


ಮತ್ತಷ್ಟು ಸಂಕೀರ್ಣ ವ್ಯಾಖ್ಯಾನಗಳು:

 • ಮೆಟಾಡೇಟಾವು ಒಂದು ಸ೦ರಚಿತ, ಎನ್‌ಕೋಡ್ ಆಗಿರುವ ದತ್ತಾ೦ಶವಾಗಿದ್ದು, ಇದು ಮಾಹಿತಿಯುಕ್ತ ವಸ್ತುಗಳ ಗುಣಲಕ್ಷಣಗಳನ್ನು ವಿವರಿಸುವುದಲ್ಲದೇ,ಅದರ ಗುರುತು,ಸ೦ಶೋಧನೆ ಹಾಗೂ ವಿವರಿತ ವಸ್ತುವಿನ ನಿರ್ವಹಣೆಯನ್ನೂ ಒಳಗೊ೦ಡಿದೆ.
 • "[ಮೆಟಾಡೇಟಾವು ಇಚ್ಚಿಕವಾಗಿ ರಚಿಸಲ್ಪಟ್ಟ] ಚಿತ್ರಣದ ಕೂಟವಾಗಿದ್ದು ವಸ್ತುಗಳ ಸರಿಯಾದ ನೆಲೆ ಪತ್ತೆಗೆ ಸಾರ್ವಜನಿಕವಾಗಿ ಲಭ್ಯವಿದೆ."[೩]


ಇವು ಅತ್ಯಂತ ವಿರಳವಾಗಿ ಬಳಕೆಯಾಗುತ್ತವೆ ಯಾಕೇಂದರೆ ಅವು ಮೆಟಾಡೇಟಾದ ಒಂದು ಉದ್ದೇಶಕ್ಕಾಗಿ ಕೇಂದ್ರಿಕರಿಸುತ್ತವೆ - "ವಸ್ತು", "ಮೂಲ ಸ್ವಭಾವ" ಅಥವಾ "ಸಂಪನ್ಮೂಲಗಳು" ಮತ್ತು ಉಳಿದವುಗಳನ್ನು ಅಲಕ್ಷಿಸುವುದು. ಉದಾಹರಣೆಗೆ ಸಂಕ್ಷೇಪಿತ ಗಣನ ಪದ್ಧತಿಗೆ ಅಥವಾ ದತ್ತಾ೦ಶವನ್ನು ಉಪಯೋಗಿಸಿ ಹೆಚ್ಚುವರಿ ಗಣಕಯ೦ತ್ರೀಕರಣವನ್ನು ಪ್ರದರ್ಶಿಸುವುದನ್ನು ಉತ್ತಮಪಡಿಸಲು ಮೆಟಾಡೇಟಾವನ್ನು ಉಪಯೋಗಿಸಲಾಗುತ್ತದೆ.


ಮೆಟಾಡೇಟಾ ಪರಿಕಲ್ಪನೆಯು ಮಾಹಿತಿಯ ಕುರಿತ ಮಾಹಿತಿಯನ್ನು ಸೇರಿಸುವುದಕ್ಕಾಗಿ ಸಿಸ್ಟಮ್‌ಗಳ ಜಗತ್ತಿನಲ್ಲಿ ವ್ಯಾಪಕವಾಗಿ ಬಳಕೆಯಾಗಿದೆ. ಕೋಷ್ಟಕದ ಹೆಸರು,ಅಂಕಣಗಳು, ಪ್ರೋಗ್ರಾಮ್‌ಗಳು ಮು೦ತಾದವು. ಸಿಸ್ಟಮ್ ಮೆಟಾಡೇಟಾದ ವಿವಿಧ ದೃಷ್ಟಿಕೋನಗಳು ಕೆಳಗೆ ವಿವರವಾಗಿದ್ದು, ಆದರೆ ಅದರಾಚೆಗೆ "ಮೆಟಾಡೇಟಾವು ಸಿಸ್ಟಮ್‌"ಗಳ ಎಲ್ಲ ರೂಪಗಳನ್ನೂ ವಿವರಿಸಬಹುದಾಗಿದೆ : ದತ್ತಾ೦ಶ,ಚಟುವಟಿಕೆ,ತೊಡಗಿಸಿಕೊ೦ಡಿರುವ ಜನರು ಮತ್ತು ಸ೦ಘಟನೆಗಳು,ಉಪಯೋಗಿಸುವ ವಿಧಾನ,ಇತಿಮಿತಿ,ಸಮಯ ಹಾಗೂ ಕಾರ್ಯಕ್ರಮಗಳು ಹಾಗೆಯೇ ಪ್ರೇರಣೆ ಮತ್ತು ನಿಬಂಧನೆ.


ಮೂಲಭೂತವಾಗಿ,ನಂತರ ಮೆಟಾಡೇಟಾವು,”ನಿರ್ಮಾಣ ಮತ್ತು ಸ೦ಘಟನೆಯ ಮಾಹಿತಿ ಬಳಕೆಯನ್ನು ಹಾಗೂ ಅದು ಈ ಮಾಹಿತಿಯ ನಿರ್ವಹಣೆಯ ವ್ಯವಸ್ಥೆಯನ್ನು” ದತ್ತಾ೦ಶವು ವಿವರಿಸುತ್ತದೆ. ಮೆಟಾಡೇಟಾದ ಕಾರ್ಯಮಾದರಿಯನ್ನು ಮಾಡುವುದೆಂದರೆ ಇನ್ಫಾರ್ಮೇಶನ್ ಟೆಕ್ನಾಲಜಿಯ ಉದ್ಯಮಶೀಲತೆಯ ಕಾರ್ಯಮಾದರಿಯನ್ನು ಮಾಡಿದಂತೆಯೇ ಸರಿ[೪].


ಮಾರ್ಕ್‌ಅಪ್‌[ಬದಲಾಯಿಸಿ]

ಎಚ್‌ಟಿ‌ಎಮ್‌ಎಲ್‌ (HTML), (ಎಕ್ಸ್‌ಎಮ್‌ಎಲ್‌) XML ಮತ್ತು ಎಸ್‌ಜಿ‌ಎಮ್‌ಎಲ್‌ (SGML)ಗಳ ಮಾರ್ಕ್‌ಅಪ್‌ ತಂತ್ರಜ್ಞಾನಗಳನ್ನು ಒದಗಿಸುವ ಅಂತರ್ಜಾಲ ಮತ್ತು ಡಬ್ಲ್ಯೂ3ಸಿ (W3C) ಸಂದರ್ಭದಲ್ಲಿ ಮೆಟಾಡೇಟಾ ಮಾಹಿತಿ ವಿಷಯಗಳಿಗಿಂತ ಹೆಚ್ಚು ಸ್ಪಷ್ಟವಾದ ನಿರ್ದಿಷ್ಟ ಸಂದರ್ಭವನ್ನು ಹೊಂದಿದೆ. ಮಾರ್ಕ್‌ಅಪ್‌ ತಂತ್ರಜ್ಞಾನದಲ್ಲಿ ಮೆಟಾಡೇಟಾ, ಮಾರ್ಕ್‌ಅಪ್‌ ಮತ್ತು ದತ್ತಾಂಶ ವಿಷಯಗಳಿವೆ. ಮೆಟಾಡೇಟಾ ದತ್ತಾಂಶದ ವಿಶೇಷ ಗುಲಕ್ಷಣಗಳನ್ನು ವಿವರಿಸಿದರೆ, ಮಾರ್ಕ್‌ಅಪ್‌ ನಿರ್ದಿಷ್ಟ ದತ್ತಾಂಶ ವಿಷಯದ ವಿಧವನ್ನು ಗುರುತಿಸುತ್ತದೆ ಮತ್ತು ಆ ಡಾಕ್ಯುಮೆಂಟ್‌ಗೆ ಕಂಟೇನರ್‌ ಆಗಿ ವರ್ತಿಸುತ್ತದೆ. ವಿಕಿಪಿಡಿಯಾದ ಈ ಪುಟವೇ ಅಂತಹ ಉಪಯೋಗಕ್ಕೆ ಒಂದು ಉದಾಹರಣೆ, ಇಲ್ಲಿನ ಪಠ್ಯವು ದತ್ತಾಂಶ, ಅದನ್ನು ಹೇಗೆ ಜೋಡಿಸಲಾಗಿದೆ, ಹೇಗೆ ಸೇರಿಸಲಾಗಿದೆ, ಹೇಗೆ ಪರಾಮರ್ಶಿಸಲಾಗಿದೆ, ಯಾವ ಶೈಲಿಯಲ್ಲಿದೆ ಮತ್ತು ಹೇಗೆ ಪ್ರದರ್ಶಿಸಲಾಗಿದೆ ಎಂಬುದು ಮಾರ್ಕ್‌ಅಪ್‌ ಮತ್ತು ಆ ಮಾರ್ಕ್‌ಅಪ್‌ನ ವಿಚಾರಗಳು ಮತ್ತು ಲಕ್ಷಣಗಳು ವಿಕಿಪಿಡಿಯಾದಲ್ಲಿ ಸಮನಾಗಿ ಉಪಯೋಗಿಸಲಾದ ಮೆಟಾಡೇಟಾ.


ಮಾರ್ಕ್‌ಅಪ್‌ನ ಸಂದರ್ಭದಲ್ಲಿ, ಡಾಕ್ಯುಮೆಂಟ್‌ ಉದಾಹರಣೆಗಳು ಕೇವಲ ಕನಿಷ್ಠ ಪ್ರಮಾಣದ ಮೆಟಾಡೇಟಾವನ್ನು ಹೊಂದುವಂತೆ ಅತ್ಯುತ್ತಮವಾಗಿಸಲು ಮೆಟಾಡೇಟಾವನ್ನು ನಿರ್ಮಿಸಲಾಗಿದೆಯಾದರೂ, ಮೆಟಾಡೇಟಾವನ್ನು ಬಹುಮಟ್ಟಿಗೆ ಹೊರಗಿನಿಂದ ಅಂದರೆ ಸ್ಕೀಮಾ ವ್ಯಾಖ್ಯಾನ (ಎಕ್ಸ್ಎಸ್‌ಡಿ (XSD)) ಉದಾಹರಣೆಯಲ್ಲಿ ಉಲ್ಲೇಖಿಸಲಾಗಿದೆ. ಪರಮಾರ್ಶನ ದತ್ತಾಂಶವನ್ನು ನಿರ್ವಹಿಸಲು, ಮತ್ತೆ ದತ್ತಾಂಶ ಯಾವುದು ಮೆಟಾಡೇಟಾ ಯಾವುದು ಎಂಬ ಗೊಂದಲವನ್ನು ತಡೆಯಲು ಮತ್ತು ಅತ್ಯುತ್ತಮವಾಗಿಸಲು ಅನುಕೂಲ ಮಾಡಿಕೊಡಲು ಮಾರ್ಕ್‌ಅಪ್‌ ವಿಶೇಷ ತಂತ್ರಗಳನ್ನು ಒದಗಿಸುತ್ತದೆ ಎನ್ನುವುದನ್ನೂ ಗಮನಿಸಬೇಕು. ಮಾರ್ಕ್‌ಅಪ್‌ನಲ್ಲಿ, ಸಂಬಂಧಿತ ದತ್ತಾಂಶಗಳ ನಡುವೆ ಲಿಂಕ್‌ಗಳನ್ನು ಕೊಡುವ ಉಲ್ಲೇಖ ಮತ್ತು ಗುರುತಿನ ತಂತ್ರಗಳು, ಮತ್ತು ಡೇಟಾ ವಸ್ತುಗಳಿಗೆ, ಪುನರಾವರ್ತಿಸಬಹುದಾದ ಲಿಂಕ್‌ಗಳು, ಉದಾಹರಣೆಗೆ ವಿಳಾಸ ಅಥವಾ ಉತ್ಪಾದನೆಯ ವಿವರಗಳು. ಇವೆಲ್ಲವುಗಳು, ಮೆಟಾಡೇಟಾ ಎನ್ನುವುದಕ್ಕಿಂತಲೂ ತಮ್ಮಷ್ಟಕ್ಕೆ ತಾವೇ ಡೇಟಾ ವಸ್ತುಗಳು ಮತ್ತು ಮಾರ್ಕ್‌‌‍ ಅಪ್‌ ಉದಾಹರಣೆಗಳು.


ಹಾಗೆಯೇ ಇವು, ವಿಂಗಡಣೆಗಳು, ತತ್ತ್ವಶಾಸ್ತ್ರಗಳು ಮತ್ತು ಸಂಘಸಂಸ್ಥೆಗಳು ಮುಂತಾದ ಪರಿಕಲ್ಪನೆಗಳು. ಇವಕ್ಕೆಲ್ಲ ಮಾರ್ಕ್‌ಅಪ್‌‌ ತಂತ್ರಗಳನ್ನು ಒದಗಿಸಲಾಗುತ್ತದೆ. ಆ ನಂತರ ಒಂದು ಡೇಟಾ ವಸ್ತುವನ್ನು, ಮಾರ್ಕ್‌ಅಪ್‌ ಮೂಲಕ ಅಂತಹ ವಿಂಗಡಣೆಗಳಿಗೆ ಲಿಂಕ್‌ ಮಾಡಬಹುದು, ಹಾಗಾಗಿ, ಯಾವುದು ಮೆಟಾಡೇಟಾ ಮತ್ತು ಯಾವುದು ನಿಜವಾಗಿ ಡೇಟಾ ಉದಾಹರಣೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಬಹುದು. ಆದ್ದರಿಂದ, ಒಂದು ವಿಂಗಡಣೆಯಲ್ಲಿರುವ ಪರಿಕಲ್ಪನೆಗಳು ಮತ್ತು ವಿವರಣೆಗಳು ಮೆಟಾಡೇಟಾ ಆಗುತ್ತದೆ, ಆದರೆ ಒಂದು ಡೇಟಾ ವಸ್ತುವಿಗಾಗಿ ಮಾಡುವ ವಿಂಗಡಣೆಯ ದಾಖಲಾತಿ ಮತ್ತೊಂದು ಡೇಟಾ ಉದಾಹರಣೆಯಷ್ಟೇ ಆಗುತ್ತದೆ.


ಕೆಲವು ಉದಾಹರಣೆಗಳು ಈ ಅಂಶವನ್ನು ಸ್ಪಷ್ಟಪಡಿಸುತ್ತವೆ. ದಪ್ಪಕ್ಷರದಲ್ಲಿರುವ ವಿಷಯಗಳು ದತ್ತಾ೦ಶಗಳಾಗಿದ್ದು, ಇಟಾಲಿಕ್ ರೀತಿಯಲ್ಲಿರುವುದು ಮೆಟಾಡೇಟಾ, ಸಾಮಾನ್ಯ ಬರಹ ರೂಪದ ವಿಷಯಗಳು ಎಲ್ಲವೂ ಮಾರ್ಕ್‌ಅಪ್‌ಗಳು.


ಕೆಳಗಿನ ಎರಡು ಉದಾಹರಣೆಗಳು, ಒಂದು ಸಾಧಾರಣ ಮಾರ್ಕ್‌ಅಪ್‌ (ಎಚ್‌ಟಿ‌ಎಮ್‌ಎಲ್‌)ನ ತುಲನೆಯಲ್ಲಿ, ಮಾರ್ಕ್‌ಅಪ್‌ನೊಳಗೆ ಮೆಟಾಡೇಟಾದ ಇನ್‌ಲೈನ್‌ ಬಳಕೆ ಮಾಡಿಕೊಂಡ (ಎಕ್ಸ್ ಎಮ್‌ಎಲ್‌) ಡೇಟಾ ಉದಾಹರಣೆಯನ್ನು ತೋರಿಸುತ್ತದೆ.


ಒಂದು ಸಾಧಾರಣ ಎಚ್‌ಟಿ‌ಎಮ್‌ಎಲ್‌ ಉದಾಹರಣೆ:


<ಸ್ಪ್ಯಾನ್‌ ಶೈಲಿ="ಸಾಮಾನ್ಯಬರಹ">ಉದಾಹರಣೆ </ಸ್ಪ್ಯಾನ್>


ಈಗ, ಒಂದು ಮೆಟಾಡೇಟಾ ಜೊತೆಗೆ ಎಕ್ಸ್ ಎಮ್‌ಎಲ್ ಉದಾಹರಣೆ:


<ವ್ಯಕ್ತಿಯ ಮಧ್ಯದ ಹೆಸರು ನಿಲ್ಲೆಬಲ್‌="ಟೄ" >ಜಾನ್‌ </ವ್ಯಕ್ತಿಯ ಮಧ್ಯದ ಹೆಸರು> (<PersonMiddleName nillable="true">John</PersonMiddleName>) 


ಯಾವಾಗ ವ್ಯಕ್ತಿಯ ಮಧ್ಯದ ಹೆಸರು ಖಾಲಿ ಡೇಟಾ ವಸ್ತು ಇರಬಹುದೆಂದು ಇನ್‌ಲೈನ್‌ ಹೇಳುತ್ತದೋ ಆಗ ಅದು ಡೇಟಾ ವಸ್ತುವಿನ ಮೆಟಾಡೇಟಾ ಆಗುತ್ತದೆ. ಸಾಧಾರಣವಾಗಿ ಅಂತಹ ವ್ಯಾಖ್ಯಾನಗಳನ್ನು ಎಕ್ಸ್‌ಎಮ್‌ಎಲ್‌ (XML)ನಲ್ಲಿ ಇನ್‌ಲೈನ್‌ ಹಾಕುವುದಿಲ್ಲ. ಬದಲಾಗಿ, ಈ ವ್ಯಾಖ್ಯಾನಗಳನ್ನು, ಸಂಪೂರ್ಣ ಡಾಕ್ಯುಮೆಂಟ್‌ ಉದಾಹರಣೆಯ ಮೆಟಾಡೇಟಾವನ್ನು ಹೊಂದಿರುವ ಸ್ಕೀಮಾವ್ಯಾಖ್ಯಾನದೊಳಗೆ ಹಾಕಲಾಗುತ್ತದೆ. ಇದು ಮತ್ತೆ ಮಾರ್ಕ್‌ಅಪ್‌ ಸಂದರ್ಭದಲ್ಲಿ ಮೆಟಾಡೇಟಾ ಬಗೆಗಿನ ಮತ್ತೊಂದು ವಿಷಯವನ್ನು ವಿವರಿಸುತ್ತದೆ. ಮೆಟಾಡೇಟಾವನ್ನು ಡೇಟಾ ಉದಾಹರಣೆಗಳ ಸಂಗ್ರಹಕ್ಕಾಗಿ ಕೇವಲ ಒಂದು ಸಾರಿ ಅತ್ಯುತ್ತಮವಾಗಿ ವ್ಯಾಖ್ಯಾನಿಸಲಾಗುತ್ತದೆ. ಹಾಗಾಗಿ, ಪುನರಾವೃತ್ತವಾದ ಮಾರ್ಕ್‌ಅಪ್‌ ವಸ್ತುಗಳು ಮೆಟಾಡೇಟಾ ಆಗುವುದು ವಿರಳ, ಆದರೆ ತಮ್ಮಷ್ಟಕ್ಕೆ ತಾವೇ ಮಾರ್ಕ್‌ಅಪ್‌ ಡೇಟಾ ಆಗಿರುತ್ತವೆ.


=[ಬದಲಾಯಿಸಿ]

ಡೇಟಾ ಹಾಗೂ ಮೆಟಾಡೇಟಾ ನಡುವಿನ ವ್ಯತ್ಯಾಸಗಳು ===

ಸಾಮಾನ್ಯವಾಗಿ (ಸಾಮಾನ್ಯ) ಡೇಟಾ ಹಾಗೂ ಮೆಟಾಡೇಟಾ ನಡುವಿನ ವ್ಯತ್ಯಾಸಗಳನ್ನು ಗುರುತಿಸುವುದು ಅಸಾದ್ಯ. ಯಾಕೆ೦ದರೆ :

ಡೇಟಾ ಹಾಗೂ ಮೆಟಾಡೇಟಾಗಳೆರಡೂ ಒ೦ದೇ ಸಮಯದಲ್ಲಿ ಆಗಿರಬಹುದು. ಒಂದು ಲೇಖನದ ತಲೆಬರಹವು ಅದರ ಶೀರ್ಷಿಕೆ (ಮೆಟಾಡೇಟಾ) ಕೂಡ ಆಗಿರಬಹುದು ಮತ್ತು ಬರಹದ ಭಾಗವೂ ಆಗಿರಬಹುದು(ಡೇಟಾ).

ದತ್ತಾ೦ಶ ಹಾಗೂ ಮೆಟಾಡೇಟಾಗಳು ಅವುಗಳ ಪಾತ್ರವನ್ನು ಬದಲಾಯಿಸಿಕೊಳ್ಳಬಹುದು. ಒಂದು ಕವಿತೆ ದತ್ತಾ೦ಶವೆ೦ದು ಪರಿಗಣಿಸಲ್ಪಡಬಹುದು. ಆದರೆ,ಒಂದು ಪದ್ಯವು ಇದನ್ನು ಸಾಹಿತ್ಯವಾಗಿ ಬಳಸುತ್ತದೆ.ಇಡೀ ಕವಿತೆಯು ಒಂದು ಧ್ವನಿಮುದ್ರಣ ಕಡತಕ್ಕೆ ಮೆಟಾಡೇಟಾ ಆಗಿ ಸೇರಿಸಲ್ಪಡುತ್ತದೆ. ಹೀಗೆ, ದೃಷ್ಟಿಕೋನದ ಆಧಾರದ ಮೇಲೆ ಇದು ಗುರುತಿಸಲ್ಪಡುತ್ತದೆ.


ಯಾವುದು ಡೇಟಾ ಮತ್ತು ಯಾವುದು ಮೆಟಾಡೇಟಾ ಎಂಬುದನ್ನು ಗುರುತಿಸಲು ಬಳಸುವ ವ್ಯಕ್ತ ಮಾರ್ಕ್‌ಅಪ್ ಹೊರತುಪಡಿಸಿದಂತೆ, ಮೇಲಿನ ಯಾವುದೇ ವ್ಯಾಖ್ಯಾನವನ್ನು ಗಣನೆಗೆ ತೆಗೆದುಕೊಂಡರೂ ಈ ಮೇಲಿನ ಪರಿಗಣನೆಗಳು ಅನ್ವಯಿಸುತ್ತವೆ.


== ಬಳಕೆ ==

ಮೆಟಾಡೇಟಾವು ಅನೇಕ ವಿಭಿನ್ನ ಅಪ್ಲಿಕೇಶನ್‌ಗಳನ್ನು ಹೊಂದಿದೆ. ಇದು ಕೆಲವು ಸಾಮಾನ್ಯ ವಿಭಾಗಗಳನ್ನು ಪಟ್ಟಿ ಮಾಡುತ್ತದೆ.


ಮೆಟಾಡೇಟಾವು ಸ೦ಪನ್ಮೂಲದ ಹುಡುಕಾಟವನ್ನು ವೇಗಗೊಳಿಸಲು ಮತ್ತು ಉತ್ಕೃಷ್ಟಗೊಳಿಸಲು ಬಳಕೆಯಾಗುತ್ತದೆ. ಸಾಮಾನ್ಯವಾಗಿ ಮೆಟಾಡೇಟಾವನ್ನು ಉಪಯೋಗಿಸಿ ಮಾಡುವ ಹುಡುಕಾಟಗಳು ಬಳಕೆದಾರರಿಗೆ ಸಂಕೀರ್ಣ ಶೋಧಕ ಕಾರ್ಯಕಾರಿತ್ವದಿ೦ದ ತಪ್ಪಿಸುತ್ತವೆ. ಈಗ ವೆಬ್‌ ಬ್ರೌಸರ್‌ಗಳು (ಗಮನಾರ್ಹವಾಗಿ ಮೊಝಿಲ್ಲಾ ಫೈರ್‌ಫಾಕ್ಸ್ ಹೊರತುಪಡಿಸಿ), ಪಿ2ಪಿ ಅಪ್ಲಿಕೇಶನ್‌ಗಳು ಹಾಗೂ ಮಾಧ್ಯಮ ನಿರ್ವಹಣಾ ತತ್ರಾಂಶಗಳು ಸಾಮಾನ್ಯವಾಗಿ ಸ್ವಯಂಚಾಲಿತವಾಗಿ ಮೆಟಾಡೇಟಾವನ್ನು ಡೌನ್‌ಲೋಡ್ ಮಾಡಿ ಸ್ಥಳೀಯವಾಗಿ ಸಂಗ್ರಹಿಸುವ ಮೂಲಕ ಕಡತಗಳನ್ನು ಹುಡುಕುವ ಮತ್ತು ಪ್ರವೇಶಿಸುವ ವೇಗವನ್ನು ಹೆಚ್ಚಿಸಿಕೊಳ್ಳುತ್ತವೆ.[ಸೂಕ್ತ ಉಲ್ಲೇಖನ ಬೇಕು]


ಮೆಟಾಡೇಟಾವು ಕಡತಗಳೊ೦ದಿಗೆ ಸ೦ಯೋಜಿತವಾಗಿರಬಹುದು. ಫೈಲ್‌ನೆಟ್‌ (FileNet) ಅಥವಾ ಡಾಕ್ಯುಮೆಂಟಮ್ (Documentum)ನಂತಹ ದಾಖಲಿಸುವ ಸಂಗ್ರಹಣ ಭಂಡಾರಕ್ಕಾಗಿ ಶೋಧಿಸಿದ ದಾಖಲೆಗಳಲ್ಲಿ ಇದು ಸಾಮಾನ್ಯ. ದಾಖಲೆಗಳನ್ನುಗಳನ್ನು ವಿದ್ಯುನ್ಮಾನ ಆಕಾರಕ್ಕೆ ಒಂದುಬಾರಿ ಪರಿವರ್ತಿಸಿದ ನಂತರ, ಆ ಚಿತ್ರವನ್ನು ಬಳಕೆದಾರನು ನೋಡುಗರ ಅಪ್ಲಿಕೇಷನ್‌ಗೆ ತರುತ್ತಾನೆ, ಮೆಟಾಡೇಟಾ ಭಂಡಾರದಲ್ಲಿ ಸಂಗ್ರಹಣೆಗಾಗಿ ತಾನೆ ಆ ದಾಖಲೆಯನ್ನು ಓದಿ, ಆನ್‌ಲೈನ್‌ ಅಪ್ಲಿಕೇಷನ್‌ನಲ್ಲಿ ಅಂಕಿಗಳನ್ನು ಬರೆಯುತ್ತಾನೆ.


ಬಳಕೆದಾರರಿಗೆ, ಮೆಟಾಡೇಟಾ ತಾನು ವಿವರಿಸುತ್ತಿರುವ ದತ್ತಾಂಶದ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಕೊಡುತ್ತದೆ. ಈ ಮಾಹಿತಿಯು ವಿವರಣಾತ್ಮಕವಾಗಿರಬಹುದು ("ಈ ಚಿತ್ರಗಳನ್ನು ಶಾಲೆಯ ಮೂರನೆ ತರಗತಿಯ ಮಕ್ಕಳು ತೆಗೆದದ್ದು.") ಅಥವಾ ಸೂಚನಾಸರಣಿಯಾಗಿರಬಹುದು ("Checksum=139F" - "ಮೊತ್ತ=139ಎಫ್‌").


ಮೆಟಾಡೇಟಾ ಅರ್ಥಸಂಬಂಧಿ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡೇಟಾ ವಸ್ತುಗಳು ಹೇಗೆ ಒಂದಕ್ಕೊಂದು ಸಂಬಂಧಪಟ್ಟಿದೆ ಎಂಬುದನ್ನು ಮತ್ತು ಆ ಸಂಬಂಧಗಳನ್ನು ಹೇಗೆ ಸ್ವಯಂಚಾಲಿತವಾಗಿ ಪರೀಕ್ಷಿಸಬಹುದು ಎಂಬುದನ್ನು ಕಂಪ್ಯೂಟರಿಗೆ ಹೇಳುವ ಮೂಲಕ, ಮತ್ತೂ ಸಂಕೀರ್ಣವಾದ ಫಿಲ್ಟರ್‌ ಮತ್ತು ಶೋಧನ ಕಾರ್ಯಗಳನ್ನು ಮಾಡುವುದು ಸುಲಭವಾಗುತ್ತದೆ. ಉದಾಹರಣೆಗೆ, ಒಂದು ಶೋಧಕ ಯಂತ್ರ "ವ್ಯಾನ್‌ ಗೋ‌" ಒಬ್ಬ "ಡಚ್‌ ಚಿತ್ರಕಾರ"ನಾಗಿದ್ದ ಎಂಬುದನ್ನು ಅರ್ಥಮಾಡಿಕೊಂಡರೆ, ಅದು "ಡಚ್‌ನ ಚಿತ್ರಕಾರ"ರು ಎಂಬ ಪ್ರಶ್ನೆ ಬಂದಾಗ, "ಡಚ್‌ನ ಚಿತ್ರಕಾರರು" ಎಂಬ ಪದ ಇರದಿದ್ದರೂ ಸಹ ವಿನ್ಸೆಂಟ್‌ ವ್ಯಾನ್‌ ಗೋನ ಬಗ್ಗೆ ಇರುವ ಒಂದು ಅಂತರ್ಜಾಲಕ್ಕೆ ಲಿಂಕ್‌ ಕೊಟ್ಟು ಉತ್ತರಿಸಬಹುದು. ಜ್ಞಾನ ಪ್ರತಿನಿಧಿತ್ವ (knowledge representation) ಎಂದು ಕರೆಯಲ್ಪಡುವ ಈ ಮಾರ್ಗವು,ಶಬ್ದಾರ್ಥ ಶಾಸ್ತ್ರ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ವಿಶೇಷ ಆಸಕ್ತಿ ಹೊಂದಿದೆ.


ಕೆಲವು ಮೆಟಾಡೇಟಾವನ್ನು ಲಾಸಿ ಕಂಪ್ರೆಷನ್‌ಅನ್ನು ಅತ್ಯುತ್ತಮಗೊಳಿಸಲು ಉಪಯೋಗಿಸಲಾಗುತ್ತದೆ. ಉದಾಹರಣೆಗೆ, ಒಂದು ವಿಡಿಯೊನಲ್ಲಿ ಮೆಟಾಡೇಟಾ ಇದ್ದರೆ, ಅದು ಕಂಪ್ಯೂಟರ್‌ನ್ನು ಹಿನ್ನೆಲೆಯಿಂದ ಮುನ್ನೆಲೆಯನ್ನು ಹೇಳಲು ಅನುವು ಮಾಡಿಕೊಡುತ್ತದೆ. ಹೆಚ್ಚು ಕಂಪ್ರೆಷನ್‌ ದರವನ್ನು ಪಡೆಯಲು ಹಿನ್ನೆಲೆಯನ್ನು ಹೆಚ್ಚಾಗಿ ಕಂಪ್ರೆಸ್ ಮಾಡಬಹುದು.


ಕೆಲವು ಮೆಟಾಡೇಟಾವನ್ನು ವ್ಯತ್ಯಯಗೊ೦ಡ ವಿಷಯ ಪ್ರದರ್ಷಿಕೆಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಒಂದು ಚಿತ್ರವು ಮೇಟಾಡೇಟಾ ಹೊಂದಿದ್ದಲ್ಲಿ ಅದರ ಅತ್ಯ೦ತ ಪ್ರಮುಖವಾದ ಭಾಗವನ್ನು ಸೂಚಿಸುವ - ಒಬ್ಬ ವ್ಯಕ್ತಿ ಇದ್ದಂತಹ ಭಾಗ - ಮೊಬೈಲ್ ಫೋನ್‌ನಂತಹ ಒಂದು ಸಣ್ಣ ಸ್ಕ್ರೀನ್‌ನಲ್ಲಿರುವ ಇಮೇಜ್ ವೀವರ್ ಆಗಿದ್ದಲ್ಲಿ, ಅದು ಆ ಚಿತ್ರವನ್ನು ಆ ಪ್ರಮುಖ ಭಾಗಕ್ಕೆ ಕುಗ್ಗಿಸುವ ಮೂಲಕ ಬಳಕೆದಾರನಿಗೆ ಅತ್ಯಂತ ಆಸಕ್ತಿಕರವಾದ ವಿವರಗಳನ್ನು ತೋರಿಸುತ್ತದೆ. ಇದೇ ರೀತಿಯ ಮೆಟಾಡೇಟಾವನ್ನು, ನಕ್ಷೆಗಳನ್ನು ಹಾಗೂ ಚಿತ್ರಗಳನ್ನು ವಿಶೇಷ ಔಟ್‌ಪುಟ್ ಸಾಧನಗಳಿಗಾಗಿ ಪರಿವರ್ತಿಸಿ ಅಥವಾ ಪಠ್ಯದಿಂದ ನುಡಿಗೆ ಪರಿವರ್ತಿಸುವ ಸಾಫ್ಟ್‌ವೇರ್ ಬಳಸಿ ಅ೦ಧ ವ್ಯಕ್ತಿಗಳು ಉಪಯೋಗಿಸುವಂತೆ ಮಾಡಲು ಪ್ರಯತ್ನಿಸಲಾಗಿದೆ.


ಇತರೆ ವಿವರಣಾತ್ಮಕವಾದ ಮೆಟಾಡೇಟಾವನ್ನು ಕೆಲಸದ ಹರಿವನ್ನು ಸ್ವಯಂಚಾಲನೆಗೊಳಿಸಲು ಬಳಸಬಹುದಾಗಿದೆ. ಉದಾಹರಣೆಗೆ, ಒಂದು "ಉತ್ತಮ"ವಾದ ತತ್ರಾಂಶ ಸಾಧನಕ್ಕೆ ಡೇಟಾದ ವಿಷಯ ಮತ್ತು ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾದರೆ, ಅದು ಅದನ್ನು ಸ್ವಯಂಚಾಲಿತವಾಗಿ ಪರಿವರ್ತಿಸಿ ಮತ್ತೊಂದು "ಉತ್ತಮ"ವಾದ ತತ್ರಾಂಶ ಸಾಧನಕ್ಕೆ ಇನ್‌ಪುಟ್ ಆಗಿ ಸರಿಸುತ್ತದೆ. ಇದರ ಪರಿಣಾಮವಾಗಿ, "ಹೆಡ್ಡ" ಸಾಧನಗಳನ್ನು ಬಳಸಿ ವಿಶ್ಲೇಷಣೆ ಮಾಡುವಾಗ ಅಗತ್ಯವಾಗಿರುವ ನಕಲಿಸು-ಮತ್ತು-ಅಂಟಿಸುವಂತಹ ಹೆಚ್ಚಿನ ಕಾರ್ಯವನ್ನು ಕಡಿಮೆ ಮಾಡಿಕೊಳ್ಳಬಹುದು.


ಮೆಟಾಡೇಟಾವು ವಿದ್ಯುನ್ಮಾನ ಸ೦ಶೋಧನೆಗಳಲ್ಲಿ ಪ್ರಮುಖ ಭಾಗವಾಗಿ ಬೆಳೆಯುತ್ತಿದೆ. [೧] Archived 2009-11-30 ವೇಬ್ಯಾಕ್ ಮೆಷಿನ್ ನಲ್ಲಿ.ವಿದ್ಯುನ್ಮಾನ ದಾಖಲೆ ಮತ್ತು ಕಡತಗಳಿಂದ ಪಡೆದ ಅಪ್ಲಿಕೇಶನ್ ಹಾಗೂ ಕಡತ ವ್ಯವಸ್ಥೆಗಳ ಮೆಟಾಡೇಟಾವು ಮಹತ್ವದ ಸಾಕ್ಷಿಗಳಾಗಬಹುದು. ಫೆಡರಲ್ ರೂಲ್ಸ್ ಆಫ್ ಸಿವಿಲ್ ಪ್ರೊಸೀಜರ್ ನಲ್ಲಿ ಮಾಡಿದ ಇತ್ತೀಚಿನ ಬದಲಾವಣೆಗಳಿಂದಾಗಿ ಸಾರ್ವಜನಿಕ ದಾವೆ‌‌ಹಾಕುವುದರ ಭಾಗವಾಗಿ ಮೆಟಾಡೇಟಾವನ್ನು ವಾಡಿಕೆಯಾಗಿ ಕಂಡುಕೊಳ್ಳಬಹುದಾಗಿದೆ.

ಖಟ್ಲೆ ಹಾಕಿದ ವ್ಯಕ್ತಿಗಳು ಶೋಧನೆಯ ಭಾಗವಾಗಿ ಮೆಟಾಡೇಟಾವನ್ನು ನಿರ್ವಹಿಸಬೇಕು ಮತ್ತು ಪ್ರಸ್ತುತಪಡಿಸಬೇಕು, ಮತ್ತು ಮೆಟಾಡೇಟಾದ ಕಳ್ಳತನವು ನಿರ್ಬಂಧಗಳಿಗೆ ದಾರಿ ಮಾಡುತ್ತದೆ. 


ಅಗಾಧವಾಗಿ ಲಭ್ಯವಿರುವ ಮಾಹಿತಿಗಳಲ್ಲಿ ಉಪಯುಕ್ತ ಮಾಹಿತಿಯನ್ನು ಹುಡುಕುವ ಅವಶ್ಯಕತೆಯಿರುವುದರಿ೦ದಾಗಿ ಮೆಟಾಡೇಟಾವು ವರ್ಲ್ಡ್ ವೈಡ್ ವೆಬ್‌ನಲ್ಲಿ ಮಹತ್ವದ್ದಾಗಿ ಪರಿಣಮಿಸಿದೆ. ಕೈಯಿಂದ ನಿರ್ಮಾಣವಾದ ಮೆಟಾಡೇಟಾವು ಸಮಂಜತೆಯನ್ನು ಖಚಿತಪಡಿಸುವುದರಿ೦ದ ಇದು ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಕೆಲವು ವಿಷಯಗಳ ಕುರಿತ ವೆಬ್ ಪುಟವು ಒಂದು ಶಬ್ದ ಅಥವಾ ನುಡಿಗಟ್ಟನ್ನು ಹೊ೦ದಿದ್ದಲ್ಲಿ, ಆಗ ಆ ವಿಷಯವನ್ನು ಕುರಿತ ಎಲ್ಲ ವೆಬ್ ಪುಟಗಳು ಅದೇ ಶಬ್ದ ಅಥವಾ ನುಡಿಗಟ್ಟನ್ನು ಹೂ೦ದಿರಬೇಕಾಗುತ್ತದೆ. ಮೆಟಾಡೇಟಾವು ವಿವಿಧತೆಯನ್ನು ಕೂಡ ಖಚಿತಪಡಿಸುತ್ತಿದ್ದು, ಇದರಿ೦ದಾಗಿ ಎರಡು ಹೆಸರುಗಳಿರುವ ವಿಷಯಗಳಿದ್ದಲ್ಲಿ ಪ್ರತಿಯೊ೦ದೂ ಬಳಕೆಯಾಗುತ್ತದೆ. ಉದಾಹರಣೆಗೆ, ಕ್ರೀಡೋಪಯೋಗಿ ವಾಹನಗಳ ಕುರಿತ ಲೇಖನದಲ್ಲಿ, ”4 ಚಕ್ರಗಳ ವಾಹನಗಳು”,”4WD”ಗಳು ಮತ್ತು ”ನಾಲ್ಕು ಚಕ್ರಗಳ ವಾಹನಗಳು” ಎ೦ಬುದು ಕೂಡ ಸೇರಿಸಲ್ಪಡುತ್ತದೆ.ಹೇಗೆ೦ದರೆ ಕೆಲವು ದೇಶಗಳಲ್ಲಿ ಎಸ್‌ಯುವಿಗಳು ಇದ್ದ೦ತೆ.


ಧ್ವನಿಮುದ್ರಿತ ಸೀಡಿಗಳ ಮೆಟಾಡೇಟಾದ ಉದಾಹರಣೆಯೆ೦ದರೆ ಇದರಲ್ಲಿ ಮ್ಯೂಸಿಕ್‌ಬ್ರೇನ್ಜ್ಯೋಜನೆ ಮತ್ತು ಆಲ್ ಮೀಡಿಯಾ ಗೈಡ್ಆಲ್ ಮ್ಯೂಸಿಕ್‌ ಸೇರಿರುವುದು. ಇದೇ ರೀತಿ ಎಮ್‌ಪಿ3ಕಡತಗಳು ಐಡಿ3ಎ೦ಬ ವಿನ್ಯಾಸದಲ್ಲಿ ಮೆಟಾಡೇಟಾಗಳನ್ನು ಹೊ೦ದಿರುತ್ತವೆ.


ವಿಧಗಳು[ಬದಲಾಯಿಸಿ]

ಮೆಟಾಡೇಟಾವನ್ನು ಹೀಗೆ ವರ್ಗೀಕರಿಸಬಹುದಾಗಿದೆ:

 • ವಿಷಯವಸ್ತು. ಮೆಟಾಡೇಟಾ ಸಂಪನ್ಮೂಲ ಗಳಿಗೆ ವಿವರಿಸಬಹುದು (ಉದಾಹರಣೆಗೆ ,ಹೆಸರು ಮತ್ತು ಕಡತಗಳ ಗಾತ್ರ) ಅಥವಾ ಸಂಪನ್ಮೂಲಗಳ ಒಳಗಿರುವ ವಿಷಯ ವನ್ನು ವಿವರಿಸಬಹುದು (ಉದಾಹರಣೆಗೆ ,"ಈ ವಿಡಿಯೋ ಒಬ್ಬ ಹುಡುಗ ಫುಟ್‌ಬಾಲ್ ಆಡುವುದನ್ನು ತೋರಿಸಲಾಗಿದೆ")
 • ಮೌನವಾಗಿರುಸುವಿಕೆ. ಮೆಟಾಡೇಟಾ ಮೌನವಾಗಿರಿಸುವ ಸಾಮರ್ಥ್ಯವನ್ನು ಸಂಬಂದಿಸಿದ ಎಲ್ಲಾ ಸಂಪನ್ಮೂಲಗಳಿಗೆ ಮೌನವಾಗಿರಸದೇ ಇರಬಹುದು (ಉದಾಹರಣೆಗೆ, ವಿಡಿಯೋ ಚಾಲನೆಯಲ್ಲಿರುವಾಗ ವಿಡಿಯೋನ "ಹೆಸರು" ಬದಾಲಾಗುವುದಿಲ್ಲಾ)ಅಥವಾ ಮೌನವಾಗಿರಿಸಬಹುದು ("ದೃಶ್ಯದ ವಿವರಣೆ" ಬದಲಾಗಬಹುದು)
 • ತಾರ್ಕಿಕ ಕಾರ್ಯ. ತರ್ಕ ಶಾಸ್ತ್ರದ ಕಾರ್ಯಗಳಲ್ಲಿ ಮೂರು ಸ್ತರಗಳಿವೆ: ಕೆಳಭಾಗದಲ್ಲಿ ಉಪಸಾಂಕೇತಿಕ ಸ್ತರವು ಅಪಕ್ವ ದತ್ತಾಂಶಗಳನ್ನು ಸೇರಿಸಿಕೊಂಡಿದೆ, ನಂತರದಲ್ಲಿ ಸಾಂಕೇತಿಕ ಸ್ತರವು ಅಪಕ್ವ ದತ್ತಾಂಶಗಳ ಜೊತೆಗೆ ಮೆಟಾಡೇಟಾ ವಿವರಿಸುತ್ತದೆ, ಮತ್ತು ಮೇಲ್ಭಾಗದಲ್ಲಿ ತರ್ಕಶಾಸ್ತ್ರ ದ ಸ್ತರವು ಸಾಂಕೇತಿಕ ಸ್ತರವು ಬಳಸುವ ತರ್ಕ ಶಾಸ್ತ್ರದ ಉದ್ದೇಶಗಳನ್ನು ಮೆಟಾಡೇಟಾವು ಸೇರಿಸಿಕೊಳ್ಳುತ್ತದೆ.


ಮೆಟಾಡೇಟಾದ ವಿಧಗಳು;

 1. ವರ್ಣನಾತ್ಮಕ ಮೆಟಾಡೇಟಾ.
 2. ಆಡಳಿತಾತ್ಮಕ ಮೆಟಾಡೇಟಾ.
 3. ರಾಚನಿಕ ಮೆಟಾಡೇಟಾ.
 4. ತಾಂತ್ರಿಕ ಮೆಟಾಡೇಟಾ.
 5. ಬಳಕೆ ಮೆಟಾಡೇಟಾ.


ಮೆಟಾಡೇಟಾ ಅನ್ನು ಬಳಸಿ ಸಫಲತೆಯ ಪ್ರಗತಿಯನ್ನು ಕಂಡು ಎಚ್ಚರದಿಂದ ಮುಖ್ಯವಾದ ಹಲವು ಪರಿಣಾಮಗಳು ನಡೆದುಕೊಂಡಿವೆ.


ಅಪಾಯಗಳು[ಬದಲಾಯಿಸಿ]

ಮೈಕ್ರೋಸಾಫ್ಟ್ ಆಫೀಸ್ ಕಡತಗಳು, ಅವುಗಳೆಂದರೆ ಲೇಖಕನ ಮೂಲ ಹೆಸರು, ದಾಖಲೆಗಳ ದಿನಾಂಕ ಸೃಷ್ಟಿಸುವುದು, ಮತ್ತು ಸಂಕಲಿಸಿದ ಕಾಲ ಲೆಕ್ಕಿಸುವುದನ್ನು ಮೆಟಾಡೇಟಾ ಮುದ್ರಿಸಿದ ವಸ್ತುಗಳಿಂದ ಆಚೆ ಸೇರಿಸುವುದು. ವಿಚಿತ್ರವಾದ ಅಥವಾ ಹಾಗೆಯೇ, ತಪ್ಪಾದ ಕೆಲಸದ ಬಗ್ಗೆ ಗೌಪ್ಯವಾದ ಅವಶ್ಯಕ ಕೆಲಸ ಒಪ್ಪಿಕೊಳ್ಳುವುದನ್ನು ಉದ್ದೇಶವಿಲ್ಲದೇ ಪ್ರಕಟಗೊಳಿಸುತ್ತದೆ. ಕೆಲವು ಮೈಕ್ರೋಸಾಫ್ಟ್ ಆಫೀಸ್ ದಾಖಲೆಗಳನ್ನು ಪ್ರೋಗ್ರಾಂಸ್’ನ ಮೆನುಯಿಂದ ಪೈಲ್ ನಂತರ ವಿಶೇಷ ಗುಣಲಕ್ಷಣ ಗಳಿಗೆ ಕ್ಲಿಕ್‌ಮಾಡಿ ಮೆಟಾಡೇಟಾ ಕಾಣಲು ಸಿಗುತ್ತದೆ. ನ್ಯಾಯ ಸ್ಥಳದಲ್ಲಿ ಮಾಡುವಹಾಗೆ ಇತರ ಮೆಟಾಡೇಟಾಗಳು ಕಡತದ ಬಾಹ್ಯ ವಿಶ್ಲೆಷಣೆ ಹೊರತು ಪಡಿಸಿ ಬೇರೆಲ್ಲೂ ಕಾಣ ಸಿಗುವುದಿಲ್ಲಾ. ಮೈಕ್ರೋಸಾಫ್ಟ್ ವರ್ಡ್ ಆಧಾರಿತ ಮೆಲಿಸಾಕಂಪ್ಯೂಟರ್ ವೈರಸ್‌ನ ಲೇಖಕರನ್ನು 1999 ರಲ್ಲಿ ಮೂಲ ರೋಗಗ್ರಸ್ತ ದಾಖಲೆಯನ್ನು ಸೃಷ್ಟಿಸಲು ಬಳಸುತ್ತಿದ್ದ ಕಂಪ್ಯೂಟರನ್ನು ಮೆಟಾಡೇಟಾದ ವಿಶಿಷ್ಟ ಶೈಲಿಯಲ್ಲಿ ಗುರುತಿಸುವ ಮೂಲಕ ಸೆರೆಹಿಡಿಯಲಾಯಿತು.


ಜೀವನ ಚಕ್ರ[ಬದಲಾಯಿಸಿ]

ಯೋಜನೆ ಮತ್ತು ವಿನ್ಯಾಸದ ಆರಂಭದ ಹಂತಗಳಲ್ಲಿ ಕೂಡ ಎಲ್ಲಾ ಸೃಷ್ಟಿಸಿದ ಮೆಟಾಡೇಟಾಗಳ ಜಾಡನ್ನು ಕಾದಿರಿಸುವುದು ಅವಶ್ಯಕ. ಉತ್ಪಾದನಾ ಪ್ರಕ್ರಿಯೆ ಮುಗಿದ ನಂತರ ಮಾತ್ರ ಮೆಟಾಡೇಟಾದ ಜೋಡಣೆ ಪ್ರಾರಂಭಿಸಿವುದು ಮಿತವ್ಯಯವಲ್ಲ. ಉದಾಹರಣೆಗೆ, ಡಿಜಿಟಲ್ ಕ್ಯಾಮೆರಾದಿಂದ ಸೃಷ್ಟಿಸಿದ ಮೆಟಾಡೇಟಾ, ರೇಕಾರ್ಡ್ ಮಾಡುವ ಸಮಯದಲ್ಲಿ ತಕ್ಷಣ ಶೇಖರವಾಗದಿದ್ದರೇ, ಅದನ್ನು ನಂತರದಲ್ಲಿ ಬಾರಿ ಪ್ರಯತ್ನದೊಂದಿಗೆ ಹಸ್ತಚಾಲಿತವಾಗಿ ಪುನಃಶೇಖರಿಸಬೇಕಾಗುತ್ತದೆ. ಆದ್ದರಿಂದ, ಸಂಪನ್ಮೂಲ ಉತ್ಪಾದಕರ ವಿಭಿನ್ನ ಗುಂಪುಗಳಿಗೆ ಒಂದುಗೂಡಿ ಕೆಲಸ ಮಾಡಲು ಸಹವರ್ತನ ವಿಧಾನಗಳು ಮತ್ತು ಗುಣಮಟ್ಟಗಳನ್ನು ಬಳಸುವುದು ಅವಶ್ಯಕ.


 • ಬದಲಿಸುವಂತೆ/ಸಂಪಾದಿಸುವಂತೆ ಮಾಡುವುದು ಮೆಟಾಡೇಟಾ ವಿವರಿಸುವ ಸಂಪನ್ಮೂಲ ಬದಲಾದರೆ ಅದು ಅಳವಡಿಸಿಕೊಳ್ಳಬೇಕು. ಎರಡು ಸಂಪನ್ಮೂಲಗಳು ವಿಲೀನವಾದಾಗ ಮೆಟಾಡೇಟಾವು ವಿಲೀನಗೊಳ್ಳಬೇಕು. ಈ ಕಾರ್ಯಚರಣೆಗಳು ಇಂದಿನ ತತ್ರಾಂಶದಿಂದ ಅಪರೂಪವಾಗಿ ನೇರವೇರುತ್ತದೆ; ಉದಾಹರಣೆಗೆ, ಆಕೃತಿ ಪರಿಷ್ಕರಿಸುವ ಕಾರ್ಯಕ್ರಮಗಳು ಸಾಮಾನ್ಯವಾಗಿ ಡಿಜಿಟಲ್ ಕ್ಯಾಮರಾಗಳಿಂದ ಸೃಷ್ಟಿಸಿದ Exif ಮೆಟಾಡೇಟಾದ ಜಾಡನ್ನು ಕಾದಿರಿಸುವುದಿಲ್ಲ.
 • ವಿನಾಶ/ಅಳಿವು ಮೆಟಾಡೇಟಾವು ವಿವರಿಸುವ ಸಂಪನ್ಮೂಲಗಳು ನಾಶವಾದ ನಂತರವೂ ಮೆಟಾಡೇಟಾವನ್ನು ಕಾದಿರಿಸುವುದು ಉಪಯುಕ್ತವಾಗುವುದು ಸಾಧ್ಯ, ಉದಾಹರಣೆಗೆ ಡಿಜಿಟಲ್ ಹಕ್ಕು ನಿರ್ವಹಣೆಯ ಕಾರಣಕ್ಕಾಗಿ ಒಂದು ಪಠ್ಯ ದಾಖಲೆಯ ಒಳಗಿನ ಇತಿಹಾಸಗಳ ಬದಲಾವಣೆ ಅಥವಾ ಕಡತಗಳ ಅಳಿಸುವಿಕೆಯನ್ನು ದಾಖಲೆ ಮಾಡಿಡುವಿಕೆ. ಇಂದಿನ ಯಾವುದೇ ಮೆಟಾಡೇಟಾ ಗುಣಮಟ್ಟಗಳು ಈ ಹಂತವನ್ನು ಪರಿಗಣಿಸುವುದಿಲ್ಲ.


ಶೇಖರಣೆ[ಬದಲಾಯಿಸಿ]

ಮೆಟಾಡೇಟಾವನ್ನು ಡಾಟಾದ ರೀತಿಯಲ್ಲಿ ಒಂದೇ ಕಡತದಲ್ಲಿ, ಆಂತರಿಕವಾಗಿ ಅಥವಾ ಒಂದು ಪ್ರತ್ಯೇಕ ಕಡತದಲ್ಲಿ ಬಾಹ್ಯವಾಗಿ ಶೇಖರಿಸಲು ಸಾಧ್ಯ. ವಿಷಯದ ಜೊತೆ ಆವರಿಸಿಕೊಂಡಿರುವ ಮೆಟಾಡೇಟಾವನ್ನು ಆವರಿಸಿಕೊಂಡಿರುವ ಮೆಟಾಡೇಟಾ ಎಂದು ಕರೆಯುತ್ತಾರೆ. ಡಾಟಾದಿಂದ ಬೇರ್ಪಡಿಸಿದ ಮೆಟಾಡೇಟಾವನ್ನು ಒಂದು ಡಾಟಾದ ಭಂಡಾರ/ಸಂಪುಟ ವಿಶಿಷ್ಟವಾಗಿ ಶೇಖರಿಸುತ್ತದೆ. ಎರಡು ವಿಧಗಳು ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ:


 • ಆಂತರಿಕ ಶೇಖರಣೆ ಅದು ವಿವರಿಸುವ ಡಾಟಾದ ಜೊತೆಗೆ ವರ್ಗಾಯಿಸುವ ಮೆಟಾಡೇಟಾವನ್ನು ಅನುಮತಿಸುತ್ತದೆ; ಹಾಗೇಯೆ, ಮೆಟಾಡಾಟಾ ಯಾವಾಗಲೂ ಹಸ್ತಾಂತರದಲ್ಲಿರುತ್ತದೆ ಮತ್ತು ಸುಲಭವಾಗಿ ಕುಶಲತೆಯಿಂದ ನಿರ್ವಹಿಸಲು ಸಾಧ್ಯ. ಈ ವಿಧಾನ ಅಧಿಕ ಅನವಶ್ಯಕವಾದದ್ದನ್ನು ಸೃಷ್ಟಿಸುತ್ತದೆ ಮತ್ತು ಮೆಟಾಡೇಟಾವನ್ನು ಜೊತೆಯಾಗಿ ಹಿಡಿದಿಡಲು ಅವಕಾಶ ನೀಡುವುದಿಲ್ಲ.
 • ಬಾಹ್ಯ ಶೇಖರಣೆ ಮೆಟಾಡೇಟಾದ ಕಂತೆಕಟ್ಟಲು ಅವಕಾಶ ನೀಡುತ್ತದೆ, ಉದಾಹರಣೆಗೆ ಡೇಟಾಬೇಸ್‌ನಲ್ಲಿ, ಹೆಚ್ಚಿನ ಸಮರ್ಥ ಹುಡುಕಾಟಕ್ಕಾಗಿ. ಅಲ್ಲಿ ಅನವಶ್ಯಕವಾದದ್ದು ಇಲ್ಲ ಮತ್ತು ಸ್ಟ್ರೀಮಿಂಗ್‌ ಅನ್ನು ಬಳಸುವಾಗ ಅದೇ ಸಮಯದಲ್ಲಿಯೆ ಮೆಟಾಡಟಾವನ್ನು ವರ್ಗಾಯಿಸಲು ಸಾಧ್ಯ. ಆದ್ಯಾಗೂ, ಆ ಉದ್ದೇಶಕ್ಕಾಗಿ ಹೆಚ್ಚಿನ ವಿಧಾನಗಳು URIs ಬಳಸುವ ಹಾಗೆ, ಮೆಟಾಡೇಟಾ ಹೇಗೆ ಅದರ ಡಾಟಾಗೆ ಸಂಪರ್ಕಿಸಲಾಗಿದೆ ಎಂಬ ವಿಧಾನವನ್ನು ಎಚ್ಚರಿಕೆಯಿಂದ ಪ್ರತಿಪಾದಿಸಬೇಕು. ಒಂದು ಸಂಪನ್ಮೂಲ ಒಂದು URIಯನ್ನು ಹೊಂದದಿದ್ದಲ್ಲಿ ಏನು ಮಾಡುವುದು(ಹಾರಾಟ ಮಾಡುವಾಗ ಒಂದು ವಿಷಯದ ನಿರ್ವಹಣೆಯ ವ್ಯವಸ್ಥೆಯನ್ನು ಉಪಯೋಗಿಸಿ ಸೃಷ್ಠಿಸಿದ ಒಂದು ಸ್ಥಳೀಯ ಹಾರ್ಡ್‌ ಡಿಸ್ಕ್ ಅಥವಾ ವೆಬ್‌ ಪುಟಗಳಲ್ಲಿರುವ ಸಂಪನ್ಮೂಲಗಳು)? ವಿಶೇಷವಾಗಿ RDFಯನ್ನು ಬಳಸುವಾಗ ವೆಬ್‌ಗೆ ಒಂದು ಸಂಪರ್ಕವಿದ್ದಲ್ಲಿ ಮೆಟಾಡೇಟಾದ ಮೌಲ್ಯವನ್ನು ನಿರ್ಧರಿಸಲು ಸಾಧ್ಯವಾದರೇ ಹೇಗೆ? ಒಂದು ಸಂಪನ್ಮೂಲವನ್ನು ಅದೇ ಹೆಸರಿನ ಆದರೆ ಬೇರೆ ವಿಷಯವನ್ನು ಹೊಂದಿರುವ ಸಂಪನ್ಮೂಲದೊಂದಿಗೆ ಬದಲಿಸಿರುವುದನ್ನು ತಿಳಿದುಕೊಳ್ಳುವುದು ಹೇಗೆ?


ಆದ್ಯಾಗಿಯೂ, ಅಲ್ಲಿ ಡಾಟಾ ವಿನ್ಯಾಸದ ಬಗ್ಗೆ ಪ್ರಶ್ನೆ ಇದೆ: ಮೆಟಾಡೇಟಾವನ್ನು ಮನುಷ್ಯರು- ಓದಬಲ್ಲ ಶೈಲಿಯಲ್ಲಿ ಶೇಖರಿಸುತ್ತದೆ ಉದಾಹರಣೆಗೆ XMLನ ಹಾಗೆ ಉಪಯುಕ್ತವಾಗುವುದು ಸಾಧ್ಯ ಏಕೆಂದರೆ ಬಳಕೆದಾರರು ಇದನ್ನು ವಿಶಿಷ್ಟಗೊಳಿಸಿದ ಸಾಧನಗ ಹೊರತಾಗಿಯು ಅರ್ಥ ಮಾಡಿಕೊಳ್ಳಲು ಮತ್ತು ಪರಿಷ್ಕರಿಸಲು ಸಾಧ್ಯ. ಇನ್ನೊಂದು ದೃಷ್ಟಿಕೋನದಲ್ಲಿ, ಈ ವಿಧಾನಗಳು ಶೇಖರಣೆಯ ಸಾಮರ್ಥ್ಯಕ್ಕೆ ಅತ್ಯುತ್ತಮವಾಗಿಸಿಲ್ಲ; ಮೆಟಾಡೇಟಾವನ್ನು ವೇಗವಾದ ವರ್ಗಾವಣೆ ಮತ್ತು ಕಾದಿರಿಸುವ ಸ್ಮೃತಿಕೋಶದ ಬದಲಾಗಿ ಒಂದು ಬೈನೆರಿ, ಅಂದರೆ ಮನುಷ್ಯೇತರು ಓದಬಲ್ಲ ಶೈಲಿಯಲ್ಲಿ ಶೇಖರಿಸಲು ಇದು ಉಪಯುಕ್ತವಾಗ ಬಹುದು.


ವಿಧಗಳು[ಬದಲಾಯಿಸಿ]

ಸಾಮಾನ್ಯವಾಗಿ, ಮೆಟಾಡೇಟಾದಲ್ಲಿ ಎರಡು ವಿಭಿನ್ನ ವರ್ಗಗಳಿವೆ:ರಚನೆಗೆ ಸಂಬಂಧಿಸಿದ ಅಥವಾ ನಿಯಂತ್ರಣ ಮೆಟಾಡೇಟಾ ಮತ್ತು ಮಾರ್ಗದರ್ಶಕ ಮೆಟಾಡೇಟಾ.[೫] ರಚನೆಗೆ ಸಂಬಂಧಿಸಿದ ಮೆಟಾಡೇಟಾ ಕಂಪ್ಯೂಟರ್‌ ವ್ಯವಸ್ಥೆಗಳಾದ ಕೋಷ್ಟಕಗಳು, ಲಂಬಸಾಲುಗಳು ಮತ್ತು ವಿಷಯಸೂಚಿಗಳ ರಚನೆಯನ್ನು ವಿವರಿಸಲು ಉಪಯೋಗಿಸಲಾಗುತ್ತದೆ. ಮಾರ್ಗದರ್ಶಕ ಮೆಟಾಡೇಟಾ ಮನುಷ್ಯರಿಗೆ ನಿರ್ದಿಷ್ಟವಾದ ವಸ್ತುಗಳನ್ನು ಹುಡುಕಲು ಸಹಾಯ ಮಾಡುತ್ತದೆ ಮತ್ತು ಒಂದು ಸ್ವಾಭಾವಿಕ ಭಾಷೆಯಲ್ಲಿ ಸಾಮಾನ್ಯವಾಗಿ ಮುಖ್ಯ ಪದಗಳ ಒಂದು ಗುಂಪಿನ ಹಾಗೆ ಪ್ರಕಟಿಸುತ್ತದೆ.


ಮೆಟಾಡೇಟಾವನ್ನು 3 ಪ್ರತ್ಯೇಕವಾದ ವಿಭಾಗಗಳಲ್ಲಿ ವಿಂಗಡಿಸಬಹುದು:

 • ಆಡಳಿತದ
 • ನಿರೂಪಣಾತ್ಮಕ
 • ರಚನೆಗೆ ಸಂಬಂಧಿಸಿದ


ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ಇಂಜಿನಿಯರಿಂಗ್ ಮೆಟಾಡೇಟಾ[ಬದಲಾಯಿಸಿ]

ಸಾಮಾನ್ಯ IT ಮೆಟಾಡೇಟಾ[ಬದಲಾಯಿಸಿ]

ಇದಕ್ಕೆ ವಿರುದ್ಧವಾಗಿ, ಇನ್ನೊಬ್ಬ ಮೆಟಾಡೇಟಾ ಸಿದ್ಧಾಂತಿ ಡೆವಿಡ್ ಮಾರ್ಕೊ, ಮೆಟಾಡೇಟಾವನ್ನು ಹೀಗೆ ವಿವರಿಸುತ್ತಾರೆ,"ಭೌತಿಕ ಡಾಟಾ, ತಾಂತ್ರಿಕ ಮತ್ತು ವಾಣಿಜ್ಯ ಪ್ರಕ್ರಿಯೆಗಳ ಬಗ್ಗೆ ಮಾಹಿತಿ, ನಿಯಮಗಳು ಮತ್ತು ಡಾಟಾದ ನಿರ್ಬಂಧಗಳು, ಮತ್ತು ಒಂದು ಸಂಘದಿಂದ ಉಪಯೋಗಿಸಲ್ಪಟ್ಟ ಡಾಟಾದ ವಿನ್ಯಾಸಗಳನ್ನು ಒಳಗೊಂಡ ಎಲ್ಲಾ ಭೌತಿಕ ಡಾಟಾ ಮತ್ತು ಒಂದು ಸಂಸ್ಥೆಯ ಒಳ ಮತ್ತು ಹೊರಗಿನ ತಿಳುವಳಿಕೆ."[೬] ಬೇರೆಯವರು ಇದಕ್ಕೆ ವೆಬ್ ಸೇವೆಗಳು, ವ್ಯವಸ್ಥೆಗಳು ಮತ್ತು ಅಂತರ ಸಂಪರ್ಕ ಸಾಧನಗಳನ್ನು ಸೇರಿಸಿದ್ದಾರೆ. ವಾಸ್ತವವಾಗಿ, ಸಂಪೂರ್ಣ ಝಾಕ್‌ಮನ್ ಫ್ರೇಮ್‌ವರ್ಕ್ ಅನ್ನು (ಎಂಟರ್‌ಪ್ರೈಸ್ ಆರ್ಕಿಟೇಕ್ಚರ್ ನೋಡಿ) ಮೆಟಾಡೇಟಾದ ಹಾಗೆ ಪ್ರತಿನಿಧಿಸಲು ಸಾಧ್ಯ.[೭] 


ನಿರ್ವಹಣೆ ಮಾಹಿತಿ ವ್ಯವಸ್ಥೆಗಳ ಸಾಮರ್ಥ್ಯಕ್ಕೆ ಬೇಕಾದ ಹೆಚ್ಚಿನ ಅಥವಾ ಎಲ್ಲಾ ಡಾಟಾವನ್ನು ಒಳಗೊಳ್ಳಲು, ಆ ರೀತಿಯ ವ್ಯಾಖ್ಯಾನಗಳು ಮೆಟಾಡೇಟಾದ ವ್ಯಾಪ್ತಿಯನ್ನು  ಗಣನೀಯವಾಗಿ ವಿಸ್ತರಿಸುತ್ತದೆ ಎಂಬುದನ್ನು ಗಮನಿಸಿ. ಈ ಅಭಿಪ್ರಾಯದಲ್ಲಿ, ಮೆಟಾಡೇಟಾದ ಪರಿಕಲ್ಪನೆ ಒಂದು ವಿನ್ಯಾಸ ನಿರ್ವಹಣೆ ದತ್ತಾಂಶದ (CMDB) ITIL ಪರಿಕಲ್ಪನೆ, ಮತ್ತು ಅಧ್ಯಯನ ವಿಭಾಗಗಳ ಜೊತೆ ಸಹ ಉದಾಹರಣೆಗೆ ಎಂಟರ್‌ಪ್ರೈಸ್ ಆರ್ಕಿಟೇಕ್ಚರ್ ಮತ್ತು IT ಪೋರ್ಟ್‌ಫೋಲಿಯೋ ನಿರ್ವಹಣೆ ಜೊತೆ ಅತಿಕ್ರಮಿಸುತ್ತದೆ. 


ಮೆಟಾಡೇಟಾದ ವಿಸ್ತಾರವಾದ ಈ ವ್ಯಾಖ್ಯಾನ ಪೂರ್ವ ನಿದರ್ಶನವನ್ನು ಹೊಂದಿದೆ. ಮೂರನೇಯ ಪೀಳಿಗೆಯ ಸಂಸ್ಥೆಯ ಭಂಡಾರದ ಉತ್ಪನ್ನಗಳು (ಉದಾಹರಣೆಗೆ ಕೊನೆಯಲ್ಲಿ CA ಉಪಯೋಗ ಸಾಲುಗಳಲ್ಲಿ ವೀಲಿನವಾದವುಗಳು) ಡಾಟಾ ವ್ಯಾಖಾನಗಳ (COBOL ಕಾಪಿ ಪುಸ್ತಕಗಳು ,DBMS schema) ಬಗೆಗಿನ ಮಾಹಿತಿಗಳನ್ನು ಮಾತ್ರ ಶೇಖರಿಸುವುದಿಲ್ಲ, ಆ ಡಾಟಾದ ವಿನ್ಯಾಸಗಳನ್ನು ಪ್ರವೇಶಿಸುವ ಕಾರ್ಯಕ್ರಮಗಳು, ಮತ್ತು ಕೆಲಸ ನಿಯಂತ್ರಣ ಭಾಷೆ ಮತ್ತು ಗುಂಪು ಕೆಲಸದ ಮೂಲಭೂತ ವ್ಯವಸ್ಥೆಯ ಅಧೀನ ರಾಷ್ಟ್ರಗಳ ಬಗ್ಗೆ ಸಹ ಶೇಖರಿಸುತ್ತದೆ. ಈ ಉತ್ಪನ್ನಗಳು (ಕೆಲವು ಇನ್ನೂ ಉತ್ಪಾದನೆಯ ಹಂತದಲ್ಲಿಯೇ ಇದೆ) ಒಂದು ಮೈನ್‌ಫ್ರೇಮ್ ಕಂಪ್ಯೂಟಿಂಗ್ ಪರಿಸರದ ಒಂದು ಅತಿ ಪೂರ್ಣ ಚಿತ್ರಣವನ್ನು ಒದಗಿಸಲು ಸಾಧ್ಯ, ITIL- ಆಧಾರದ ಪ್ರಕ್ರಿಯೆಗಳಾದ ಪ್ರಾಸಂಗಿಕ ಘಟನೆ ಮತ್ತು ನಿರ್ವಹಣೆ ಬದಲಾವಣೆಗಳಿಗೆ ಅವಶ್ಯಕವಾದ ಮಹತ್ತರ ಪರಿಣಾಮದ ವಿಶ್ಲೇಷಣೆಯ ವಿಧಗಳನ್ನು ಖಚಿತವಾಗಿ ಬೆಂಬಲಿಸುತ್ತದೆ. ITIL ಬ್ಯಾಕ್ ಕೆಟಲಾಗ್ Archived 2008-09-28 ವೇಬ್ಯಾಕ್ ಮೆಷಿನ್ ನಲ್ಲಿ. ಡಾಟಾ ನಿರ್ವಹಣೆ ಸಂಪುಟವನ್ನು ಒಳಗೊಂಡಿರುತ್ತದೆ. ಅದು ಮೇನ್‌ಫ್ರೇಮ್‌ನ ಮೇಲೆ ಈ ಮೆಟಾಡೇಟಾ ಉತ್ಪನ್ನಗಳ ಪಾತ್ರವನ್ನು ಗುರುತಿಸುತ್ತದೆ, ಹಾಗೂ CMDBಯನ್ನು ವಿತರಿಸಿದ ಕಂಪ್ಯೂಟಿಂಗ್ ಸಾಟಿಯ ಹಾಗೆ ಮಂಡಿಸುತ್ತದೆ. ಆದಾಗ್ಯೂ, CMDB ಮಾರಾಟಗಾರರು ಸಾಮಾನ್ಯವಾಗಿ ಡಾಟಾ ವ್ಯಾಖ್ಯಾನಗಳನ್ನು ಸೇರಿಸಲು ಅವರ ವ್ಯಾಪ್ತಿಯನ್ನು ವಿಸ್ತರಿಸಲಿಲ್ಲ, ಮತ್ತು ಮೆಟಾಡೇಟಾ ಪರಿಹಾರಗಳು ವಿತರಿಸಿದ ಜಗತ್ತಿನಲ್ಲಿ ಸಹ ಲಭ್ಯವಿವೆ. ಪ್ರತಿಯೊಂದರ ಸರಿಯಾದ ಪಾತ್ರ ಮತ್ತು ವ್ಯಾಪ್ತಿಯನ್ನು ನಿರ್ಧರಿಸುವಾಗ, ಎರಡರ ಸೇವೆಗಳೂ ಅವಶ್ಯಕವಾದ್ದರಿಂದ, ಬೃಹತ್ IT ಸಂಸ್ಥೆಗಳಿಗೆ ಆದ್ದರಿಂದ ಒಂದು ಸವಾಲಾಗಿದೆ.


ಮೆಟಾಡೇಟಾವು ಭೇದಕವಾಗಿರುವುರಿಂದ, ಅದನ್ನು ಹುಡುಕುವ ಕೇಂದ್ರಿಕೃತ ಪ್ರಯತ್ನಗಳು ಉನ್ನತ ಸಾಮರ್ಥ್ಯದ ಆಸ್ತಿಗಳ ಮೇಲೆ ಕೇಂದ್ರೀಕರಿಸುವುದು ಅಗತ್ಯವಾಗಿದೆ. IT ಸಂಪೂರ್ಣ ಬಂಡವಾಳ ಪಟ್ಟಿಯ ಒಂದು ಸಣ್ಣ ಪ್ರಮಾಣವನ್ನು ಮಾತ್ರ ಉದ್ಯಮ ಆಸ್ತಿಗಳು ಹೊಂದಿರಬಹುದು. 


ಕೆಲವು ವೃತ್ತಿನಿರತರು ಡಬ್ಲಿನ್ ಕೋರ್ ಮೆಟಾ ಮಾದರಿಯನ್ನು ಬಳಸಿ IT ಮೆಟಾಡೇಟಾವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.[೮]


IT ಮೆಟಾಡೇಟಾ ಕಾರ್ಯ ನಿರ್ವಹಣೆಯ ಉತ್ಪನ್ನಗಳು[ಬದಲಾಯಿಸಿ]

ಮೊದಲ ಪೀಳಿಗೆಯ ಉತ್ಪಾದನೆಗಳಾದ ಡಾಟಾ ನಿಘಂಟು/ಮೆಟಾಡೇಟಾ ಭಂಡಾರದ ಸಾಧನಗಳು ನಿರ್ಧಿಷ್ಟವಾದ DBMSಗಳನ್ನು ಮಾತ್ರ ಬೆಂಬಲಿಸುತ್ತವೆ. ಅವುಗಳೆಂದರೆ IDMSನ IDD (ಡಾಟಾ ನಿಘಂಟುಗಳನ್ನು ಒಗ್ಗೂಡಿಸುವುದು), ದಿ IMS ಡಾಟಾ ಡಿಕ್ಷನರಿ ಮತ್ತು ADABAS ನ ಪ್ರೆಡಿಕ್ಟ್.


ASGನ DATAMANAGER ಉತ್ಪನ್ನಗಳು ಎರಡನೆ ಪೀಳಿಗೆಯವಾಗಿದ್ದು, ಇವುಗಳು ಹಲವು ವಿಭಿನ್ನ ಕಡತಗಳು ಮತ್ತು DMBS ವಿಧಗಳನ್ನು ಬೆಂಬಲಿಸುತ್ತದೆ. 


ಮೂರನೇಯ ಪೀಳಿಗೆಯು ಭಂಡಾರ/ಸಂಪುಟ ಉತ್ಪನ್ನಗಳು 1990ರ ಆರಂಭದಲ್ಲಿ RDBMS ಇಂಜಿನ್‌ಗಳಾದ IBMನ DB2ನ ಉಪಯೋಗದ ವ್ಯಾಪಕ ಹರಡುವಿಕೆಯ ಉದಯ ಜೊತೆಗೆ ಸಂಕ್ಷೇಪವಾಗಿ ಜನಪ್ರಿಯವಾದವು.


ನಾಲ್ಕನೆ ಪೀಳಿಗೆಯ ಉತ್ಪನ್ನಗಳು ಭಂಡಾರ/ಸಂಪುಟವನ್ನು ಹೆಚ್ಚಿನ ಸತ್ವ, ಪರಿವರ್ತನೆ, ಹೊರೆಯ ಸಾಧನಗಳ ಜೊತೆ ಸಂಪರ್ಕಿಸುತ್ತದೆ ಮತ್ತು ವಾಸ್ತುಶಿಲ್ಪದ ವಿನ್ಯಾಸ ಸಾಧನಗಳ ಜೊತೆ ಸಂಪರ್ಕಿಸಲು ಸಾಧ್ಯ.


ಐದನೇ ಪೀಳಿಗೆಯ ಉತ್ಪನ್ನಗಳು ಹಂಚಲ್ಪಟ್ಟಿದ್ದ ಕಂಪ್ಯೂಟಿಂಗ್, ವಿಶೇಷ ಹಾರ್ಡ್‌ವೇರ್‌ಗಳು, ತೀವ್ರ ದೃಶ್ಯೀಕರಣ ಮತ್ತು ವಿಶ್ಲೇಷಣಾ ವಿಧಾನಗಳನ್ನು ಒಂದುಗೂಡಿಸುವ ಮೂಲಕ ಇದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿವೆ. ಈ ಮೂಲಕ ಅಪ್ಲಿಕೇಶನ್‌ಗಳು ಮತ್ತು ಮೆಸೇಜಿಂಗ್ ಬಸ್‌ ಮುಂತಾದವುಗಳಲ್ಲೆಲ್ಲ ಮೆಟಾಡೇಟಾವನ್ನು ಶೃಂಗೀಯವಾಗಿ ಬಳಸಿಕೊಳ್ಳುವುದು ಸಾಧ್ಯವಾಯಿತು.


ಸಂಬಂಧಾತ್ಮಕ ದತ್ತಾಂಶ ಮೆಟಾಡೇಟಾ[ಬದಲಾಯಿಸಿ]

ಪ್ರತಿಯೊಂದು ಸಂಬಂಧಾತ್ಮಕ ದತ್ತಾಂಶ ವ್ಯವಸ್ಥೆ ಮೆಟಾಡೇಟಾವನ್ನು ಶೇಖರಿಸಲು ತನ್ನದೇ ಆದ ಯಾಂತ್ರಿಕ ರಚನೆಗಳನ್ನು ಹೊಂದಿದೆ. ಸಂಬಂಧಾತ್ಮಕ-ದತ್ತಾಂಶ ಮೆಟಾಡೇಟಾದ ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:

 • ಒಂದು ದತ್ತಾಂಶದಲ್ಲಿನ ಎಲ್ಲಾ ಕೋಷ್ಟಕಗಳ ಕೋಷ್ಟಕಗಳು, ಅವುಗಳ ಹೆಸರುಗಳು, ಗಾತ್ರಗಳು ಮತ್ತು ಪ್ರತಿ ಕೋಷ್ಟಕದಲ್ಲಿನ ಸಾಲುಗಳ ಸಂಖ್ಯೆ.
 • ಪ್ರತಿ ದತ್ತಾಂಶದಲ್ಲಿನ ಲಂಬ ಸಾಲುಗಳ ಕೋಷ್ಟಕಗಳು, ಯಾವ ಕೋಷ್ಟಕಗಳನ್ನು ಅವುಗಳಲ್ಲಿ ಬಳಸಲಾಗಿದೆ, ಮತ್ತು ಪ್ರತಿ ಲಂಬಸಾಲಿನಲ್ಲಿ ಯಾವ ವಿಧದ ಡಾಟಾವನ್ನು ಶೇಖರಿಸಲಾಗಿದೆ ಎಂಬುದು.


ದತ್ತಾಂಶ ಪರಿಭಾಷೆಯಲ್ಲಿ, ಮೆಟಾಡೇಟಾದ ಈ ಗುಂಪನ್ನು ಪೂರ್ಣಪಟ್ಟಿಯ ಹಾಗೆ ಉಲ್ಲೇಖಿಸಲಾಗಿದೆ. SQL ಪ್ರಮಾಣವು, ಪೂರ್ಣಪಟ್ಟಿಗೆ ಪ್ರವೇಶಿಸಲು INFORMATION_SCHEMA ಎಂಬ ಹೆಸರಿನ ಒಂದು ಏಕಪ್ರಕಾರದ ವಿಧಾನವನ್ನು ಉಲ್ಲೇಖಿಸುತ್ತದೆ. ಅವುಗಳು SQL ಗುಣಮಟ್ಟದ ಇತರೆ ಆಕಾರಗಳನ್ನು ಕಾರ್ಯಗತಮಾಡಿದರೂ ಸಹ ಎಲ್ಲಾ ದತ್ತಾಂಶಗಳನ್ನು ಕಾರ್ಯಗತ ಮಾಡುವುದಿಲ್ಲ. ದತ್ತಾಂಶ-ನಿಗಧಿತ ಮೆಟಾಡೇಟಾ ಪ್ರವೇಶ ವಿಧಾನಗಳಿಗೆ ಒಂದು ಉದಾಹರಣೆ, ನೋಡಿ ಒರಾಕಲ್ ಮೆಟಾಡೇಟಾ. JDBC ಅಥವಾ SchemaCrawler ದಂತಹ APIಗಳನ್ನು ಬಳಸಿದಾಗ ಮೆಟಾಡಾಟಕ್ಕೆ ಪ್ರೋಗ್ರಾಮ್ಯಾಟಿಕ್ ಪ್ರವೇಶ ಸಾಧ್ಯ[೯].


ದತ್ತಾಂಶ ಗೋದಾಮಿನಲ್ಲಿ ಮೆಟಾಡೇಟಾ[ಬದಲಾಯಿಸಿ]

ದತ್ತಾಂಶ ಗೋದಾಮು (Data warehouse (DW)) ಎನ್ನುವುದು ಒಂದು ಸಂಸ್ಥೆಯ ವಿದ್ಯುನ್ಮಾನ ದತ್ತಾಂಶದ ಭಂಡಾರ. ದತ್ತಾಂಶವನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ದತ್ತಾಂಶ ಗೋದಾಮುಗಳನ್ನು ವಿನ್ಯಾಸಗೊಳಿಸಲಾಗಿದ್ದರೆ, ’ವ್ಯವಹಾರ ಜ್ಞಾನ’ವು (Business Intelligence), ವರದಿಗಳು ಮತ್ತು ವಿಶ್ಲೇಷಣೆಗಳಿಗೆ ಸಹಾಯವಾಗುವ ರೀತಿ ಆ ದತ್ತಾಂಶವನ್ನು ಉಪಯೋಗಿಸಿಕೊಳ್ಳುವುದರ ಬಗ್ಗೆ ಗಮನಹರಿಸುತ್ತದೆ.[೧೦]


ದತ್ತಾಂಶ ಗೋದಾಮಿನ ಉದ್ದೇಶವೇನೆಂದರೆ ಒಂದು ಸಂಸ್ಥೆಯ ಉತ್ತಮ ಮಟ್ಟದ, ವ್ಯವಸ್ಥಿತ, ಸುಸಂಬದ್ಧ, ಸಂಯೋಜಿತ, ಸರಿಯಾದ, ಶುದ್ಧ ಮತ್ತು ಸಮಯಕ್ಕೆ ಸರಿಯಾದ, ವಿವಿಧ ಕಾರ್ಯಾಚರಣೆ ಘಟಕಗಳಿಂದ ಪಡೆದ ದತ್ತಾಂಶಗಳನ್ನು ಸಂಗ್ರಹಿಸುವುದು. ಹಾಗೆ, ಸಂಗ್ರಹಿಸಿದ ದತ್ತಾಂಶವನ್ನು, ದತ್ತಾಂಶ ಗೋದಾಮಿನ ಪರಿಸರದಲ್ಲಿ ಏಕೀಕೃತಗೊಳಿಸಲಾಗುತ್ತದೆ, ಇದರಿಂದ ಇಡಿಯ ಸಂಸ್ಥೆಗೆ ಸತ್ಯದ ಒಂದು ಆವೃತ್ತಿ ದೊರೆಯುತ್ತದೆ.
ದತ್ತಾಂಶವನ್ನು ನಿರ್ದಿಷ್ಟವಾಗಿ ವರದಿ ಮಾಡುವ ಮತ್ತು ವಿಶ್ಲೇಷಿಸುವ ಕಾರ್ಯಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ.


ದತ್ತಾಂಶ ಗೋದಾಮು/ವ್ಯವಹಾರ ಜ್ಞಾನ ವ್ಯವಸ್ಥೆಯ ಒಂದು ಪ್ರಮುಖ ಅಂಶವೆಂದರೆ ಮೆಟಾಡೇಟಾ ಮತ್ತು ಮೆಟಾಡೇಟಾವನ್ನು ನಿರ್ವಹಿಸಲು ಮತ್ತು ಸಂಸ್ಕರಿಸಲು ಬೇಕಾದ ಸಲಕರಣೆಗಳು. ರಾಲ್ಫ್‌ ಕಿಂಬಾಲ್‌[19]ರವರು ಮೆಟಾಡೇಟಾವನ್ನು ದತ್ತಾಂಶ ಗೋದಾಮಿನ ಡಿಎನ್‌ಎ(DNA) ಎಂದು ವ್ಯಾಖ್ಯಾನಿಸುತ್ತಾರೆ, ಏಕೆಂದರೆ ಮೆಟಾಡೇಟಾ [[]]ದತ್ತಾಂಶ ಗೋದಾಮಿ/0}ನಲ್ಲಿ ಯಾವ ಯಾವ ಧಾತುಗಳು ಇರಬೇಕು ಮತ್ತು ಅವು ಒಟ್ಟಾಗಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ನಿರ್ಧರಿಸುತ್ತದೆ.


ದತ್ತಾಂಶ ಗೋದಾಮಿನ ಸಲಕರಣೆಗಳ ಮತ್ತು ವ್ಯವಹಾರಜ್ಞಾನದ ಉತ್ಪಾದನೆಗಳ ಬಳಕೆದಾರರು ಪರಿಪಕ್ವವಾದಂತೆ ಮೆಟಾಡೇಟಾದ ಪ್ರಾಮುಖ್ಯವೂ ಹೆಚ್ಚುತ್ತದೆ. ಮುಂದೆ, ಮೆಟಾಡೇಟಾವನ್ನು, ದತ್ತಾಂಶವನ್ನು ಸಂಗ್ರಹಿಸಲು ನೆರವಾಗುವ ಸರಳವಾದ ಇಟಿಎಲ್‌(ETL) ಕಾರ್ಯಗಳನ್ನು ಹಾಗೆಯೇ ಅಂತಿಮ-ಬಳಕೆದಾರರಿಗೆ ವ್ಯವಹಾರ-ಮಾಹಿತಿಯನ್ನು ನೀಡುವ ಕಾರ್ಯಗಳನ್ನು ಸೃಷ್ಟಿಸಲು ಬಳಸಲಾಗುವುದು. ಮುಂದೆ, ಇಟಿಎಲ್‌ (ETL) ಕಾರ್ಯಗಳನ್ನು ಅಭಿವೃದ್ಧಿಪಡಿಸುವ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಂಭವ ಬಹಳ ಹೆಚ್ಚಿದೆ.


ದತ್ತಾಂಶ ಮತ್ತು ಮಾಹಿತಿ ಹೆಚ್ಚಾದಂತೆಲ್ಲ, ಮೊದಲೇ ಇರುವ ಮಾಹಿತಿಯನ್ನು ನಿರ್ದಿಷ್ಟ ನಿರ್ಧಾರ-ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲು ಹುಡುಕುವ ಸಂಬಂಧವಾಗಿ ಮೆಟಾಡೇಟಾ ಬಹುಶಃ ಅತಿ ಪ್ರಮುಖವಾಗುತ್ತದೆ. ’ಗೂಗಲ್’ನಂತಹ ಸರಳವಾದ ಹುಡುಕು-ಸಾಧನಗಳನ್ನು ಅಭಿವೃದ್ಧಿಪಡಿಸಬಹುದು. 


ದತ್ತಾಂಶ ಗೋದಾಮಿನ ’ಉದ್ಯಮ ದೃಷ್ಟಿಕೋನ’ವು ಮೆಟಾಡೇಟಾಗೆ ಸಹ ಅನ್ವಯವಾಗುತ್ತದೆ. ಡಿಡಬ್ಲ್ಯೂ/ಬಿಐ (DW/BI)ವ್ಯವಸ್ಥೆಯ ಎಲ್ಲ ಪ್ರಕ್ರಿಯೆಗಳೂ ಯಾವುದಾದರೂ ಒಂದು ಉದ್ಯಮ ಮೆಟಾಡೇಟಾ ಭಂಡಾರವನ್ನು ಬಳಸುವಂತೆ ಮಾಡುವುದು ಆದರ್ಶಪ್ರಾಯವಾಗಿರುತ್ತದೆ. ದತ್ತಾಂಶ ಗೋದಾಮಿನ ಜೀವನ-ಚಕ್ರದಲ್ಲಿ ಪ್ರಚಲಿತದಲ್ಲಿರುವ ಪ್ರಕ್ರಿಯೆಯೆಂದರೆ ವ್ಯವಹಾರ ಮತ್ತು ದತ್ತಾಂಶದಲ್ಲಿ ಆಗುವ ಬದಲಾವಣೆಗಳನ್ನು ಮೆಟಾಡೇಟಾ ಭಂಡಾರಕ್ಕೆ ಆಗ್ಗಿಂದಾಗ್ಗೆ ಸೇರಿಸುವುದು.


ಸಾಮಾನ್ಯವಾಗಿ ಮೆಟಾಡೇಟಾವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.[೧೧]

ವ್ಯವಸ್ಥೆಯ ಆಡಳಿತಗಾರರಿಗೆ ಆಂತರಿಕ ಮೆಟಾ-ಡೇಟಾ ಮತ್ತು ಅಂತಿಮ-ಬಳಕೆದಾರರಿಗೆ ಉಪಯೋಗವಾಗುವ ಬಾಹ್ಯ ಮೆಟಾಡೇಟಾ. 


ರಾಲ್ಫ್‌ ಕಿಂಬಾಲ್‌ರ ಪ್ರಕಾರ ಮೆಟಾಡೇಟಾವನ್ನು ಇದೇ ರೀತಿಯ ಎರಡು ವಿಭಾಗಗಳಾಗಿ ವಿಂಗಡಿಸಬಹುದು - ತಾಂತ್ರಿಕ ಮೆಟಾಡೇಟಾ ಮತ್ತು ವ್ಯವಹಾರಿಕ ಮೆಟಾಡೇಟಾ. ತಾಂತ್ರಿಕ ಮೆಟಾಡೇಟಾ ಆಂತರಿಕ ಮೆಟಾಡೇಟಾಗೆ ಸಂವಾದಿಯಾಗುತ್ತದೆ, ವ್ಯವಹಾರಿಕ ಮೆಟಾಡೇಟಾ ಬಾಹ್ಯ ಮೆಟಾಡೇಟಾಗೆ ಸಂವಾದಿಯಾಗುತ್ತದೆ. ಕಿಂಬಾಲ್‌ ’ಪ್ರಕ್ರಿಯೆ ಮೆಟಾಡೇಟಾ’ ಎನ್ನುವ ಮೂರನೇ ವಿಭಾಗವೊಂದನ್ನು ಸೇರಿಸುತ್ತಾನೆ. ಇದು ದತ್ತಾಂಶ ಗೋದಾಮಿನ ’ಬ್ಯಾಕ್‌ರೂಮ್‌’, (ಇಟಿಎಲ್ (ETL)ಸತ್ವಸಂಗ್ರಹ, ಪರಿವರ್ತನೆ ಮತ್ತು ಲೋಡ್‌ ಮಾಡುವುದು - ಡಿಡಬ್ಲ್ಯೂ/ಬಿಐ ವ್ಯವಸ್ಥೆಯ ಅಂಗ), ’ಫ್ರಂಟ್‌ ರೂಮ್‌’ (ವರದಿಗಳು, ಮತ್ತು ಬಿಐನ ಉಪಯೋಗಗಳು)ಮತ್ತು ಫ್ರಂಟ್‌ ರೂಮ್‌ ಮತ್ತು ಬ್ಯಾಕ್‌ರೂಮ್‌ಗಳಿಗೆ ಸಂಪರ್ಕ ಒದಗಿಸುವ ಪ್ರೆಸೆಂಟೇಷನ್‌ ಸರ್ವರ್‌ಗಳಿಗೆ ಅನ್ವಯವಾಗುತ್ತದೆ. ದತ್ತಾಂಶವನ್ನು ಒಂದು ಅಗ್ರಿಗೇಟ್ ನೇವಿಗೇಟರ್ ಜೊತೆಗೆ ಆಯಾಮವಿರುವ ರಚನೆಯಲ್ಲಿ ಪ್ರಸ್ತುತಿ ಸರ್ವರ್‌ನಲ್ಲಿ ಸಂಗ್ರಹಿಸಿಡಲಾಗಿರುತ್ತದೆ.


ತಾಂತ್ರಿಕ ಮೆಟಾಡೇಟಾ ಬಹುಪಾಲು ವ್ಯಾಖ್ಯಾನವಾದರೆ, ಪ್ರಕ್ರಿಯೆ ಮತ್ತು ವ್ಯವಹಾರಿಕ ದತ್ತಾಂಶವು ಬಹುಪಾಲು ವಿವರಣಾತ್ಮಕವಾಗಿರುತ್ತದೆ.


ಮೆಟಾಡೇಟಾದ ಪ್ರತಿಯೊಂದು ವಿಭಾಗದ ಉದಾಹರಣೆಗಳು:


 • ಇಟಿಎಲ್‌ಗಾಗಿನ ತಾಂತ್ರಿಕ ಮೆಟಾಡೇಟಾ
  • ರೆಕಾರ್ಡ್‌ ಲೇಔಟ್ ಮತ್ತು ಕಾಲಮ್‌ ಡೆಫನಿಷನ್‌ ಸೇರಿದಂತೆ ಎಲ್ಲ ದತ್ತಾಂಶ ಮೂಲಗಳ ವಿವರಣೆ


 • ಇಟಿಎಲ್‌ಗಾಗಿನ ವ್ಯವಹಾರಿಕ ಮೆಟಾಡೇಟಾ
  • ದತ್ತಾಂಶ ಗುಣಮಟ್ಟ ಪರೀಕ್ಷೆಯ ನಿಯಮ, ಸಂಭವನೀಯ ತಪ್ಪುಗಳ ತೀವ್ರತೆ, ಮತ್ತು ತಪ್ಪುಗಳಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳು ಮುಂತಾದ ದತ್ತಾಂಶ ಗುಣಮಟ್ಟ ಪರೀಕ್ಷೆಯ ವಿವರಗಳು


 • ಇಟಿಎಲ್‌ಗಾಗಿನ ಪ್ರಕ್ರಿಯೆ ಮೆಟಾಡೇಟಾ
  • ಶುರುವಿನ ಸಮಯ, ಮುಕ್ತಾಯದ ಸಮಯ, ಬಳಸಿದ ಸಿಪಿಯು (CPU) ಕ್ಷಣಗಳು, ಡಿಸ್ಕ್‌ ರೀಡ್‌ಗಳು, ಡಿಸ್ಕ್‌ರೈಟ್‌ಗಳು, ಮತ್ತು ರೋಕೌಂಟ್‌ಗಳು ಮುಂತಾದ ಇಟಿಎಲ್‌ ಕ್ರಿಯೆಗಳ ಅಂಕಿಅಂಶಗಳು.


 • ಪ್ರೆಸೆಂಟೇಷನ್‌ ಸರ್ವರ್‌ಗಾಗಿನ ತಾಂತ್ರಿಕ ಮೆಟಾಡೇಟಾ
  • ನಿರ್ದಿಷ್ಟಮಾನ ಆರ್‌ಡಿಬಿಎಮ್‌ಎಸ್‌ (RDBMS) ಟೇಬಲ್‌, ಕಾಲಮ್‌, ನೋಟ, ಸೂಚಿಕೆ, ಮತ್ತು ಸುರಕ್ಷತಾ ಮಾಹಿತಿಯನ್ನೊಳಗೊಂಡ ದತ್ತಾಂಶ ವ್ಯವಸ್ಥೆಯ ಪಟ್ಟಿಗಳು.


 • ಪ್ರೆಸೆಂಟೇಷನ್‌ ಸರ್ವರ್‌ಗಾಗಿನ ವ್ಯವಹಾರಿಕ ಮೆಟಾಡೇಟಾ
  • ಬಿಐ ಉಪಯೋಗಗಳ ಶಬ್ಧಾರ್ಥ ಶಾಸ್ತ್ರ, ಒಎಲ್‌ಎಪಿ (OLAP) ವ್ಯಾಖ್ಯಾನಗಳು, ಅಥವಾ ನೇರವಾಗಿ ದತ್ತಾಂಶ ವ್ಯವಸ್ಥೆಯ ಪಟ್ಟಿ ಮತ್ತು ಕಾಲಮ್‌ಗಳು ಪ್ರೆಸೆಂಟೇಷನ್‌ ಸರ್ವರ್‌ಗೆ ಸಂಬಂಧಿಸಿದ ಮೆಟಾಡೇಟಾವನ್ನು ಒದಗಿಸುತ್ತದೆ.


 • ಪ್ರೆಸೆಂಟೇಷನ್‌ ಸರ್ವರ್‌ಗಾಗಿನ ಪ್ರಕ್ರಿಯೆ ಮೆಟಾಡೇಟಾ
  • ಪ್ರೆಸೆಂಟೇಷನ್‌ ಸರ್ವರ್‌ನಲ್ಲಿ ಬಳಕೆಯಾಗುವ ಪಟ್ಟಿಗಳ ಕುರಿತಾದ ಮಾಹಿತಿಯನ್ನೊಳಗೊಂಡ ದತ್ತಾಂಶ ನಿಯಂತ್ರಕ ವ್ಯವಸ್ಥೆಯ ಪಟ್ಟಿಗಳು.


 • ಬಿಐಗಾಗಿ‌ನ ತಾಂತ್ರಿಕ ಮೆಟಾಡೇಟಾ
  • ಸರಿಯಾದ ಪ್ರೆಸೆಂಟೇಷನ್‌ ಸರ್ವರ್‍‌ ವಸ್ತುಗಳು, ಜಾಯಿನ್ ‌ಪಾತ್ಸ್‌, ಕಂಪ್ಯೂಟೆಡ್‌ ಕಾಲಮ್ಸ್, ಮತ್ತು ವ್ಯವಹಾರ ತಂಡಗಳಿಗೆ ನಿರೂಪಿತವಾದ ಎಲ್ಲ ಪಟ್ಟಿ ಮತ್ತು ಕಾಲಮ್‌ಗಳ ವ್ಯವಹಾರಿಕ ಹೆಸರುಗಳನ್ನೊಳಗೊಂಡ ಬಿಐ ಶಬ್ದಾರ್ಥ ಶಾಸ್ತ್ರದ ವ್ಯಾಖ್ಯಾನಗಳು. ಇದು ಅಗ್ರಿಗೇಟ್ ನೇವಿಗೇಶನ್ ಮತ್ತು ಡ್ರಿಲ್ ಅಕ್ರಾಸ್ ಕ್ರಿಯಾತ್ಮಕತೆಯನ್ನು ಸಹಾ ಹೊಂದಿರಬಹುದು


 • ಬಿಐಗಾಗಿನ ವ್ಯವಹಾರಿಕ ಮೆಟಾಡೇಟಾ

ನಿಸ್ಸಂದೇಹವಾಗಿ, ಬಿಐ‌ ಶಬ್ದಾರ್ಥಶಾಸ್ತ್ರ ವ್ಯಾಖ್ಯಾನವು ಸಮೃದ್ಧವಾದ ವ್ಯವಹಾರ-ಸಂಬಂಧಿ ಮೆಟಾಡೇಟಾವನ್ನು ಒಳಗೊಂಡಿರುತ್ತದೆ. ಹೆಚ್ಚುವರಿ ಬಿಐ ವ್ಯವಹಾರಿಕ ಮೆಟಾಡೇಟಾ ಇವುಗಳನ್ನು ಒಳಗೊಂಡಿರುತ್ತದೆ:

  • ಅನುಗುಣವಾದ ಲಕ್ಷಣ ಮತ್ತು ವಾಸ್ತವ ವ್ಯಾಖ್ಯಾನಗಳು ಮತ್ತು ಪ್ರತೀ ಕಾಲಮ್‌ಗೂ ನಿಧಾನವಾಗಿ ಬದಲಾಗುವ ಆಯಾಮಗಳ ನೀತಿಗಳು, ಶೂನ್ಯ ನಿರ್ವಹಣೆ ಮತ್ತು ದೋಷ ನಿರ್ವಹಣೆಗಳನ್ನು ಒಳಗೊಂಡ ವ್ಯವಹಾರ ನಿಯಮಗಳು.


 • ಬಿಐಗಾಗಿನ ಪ್ರಕ್ರಿಯೆ ಮೆಟಾಡೇಟಾ
  • ಬಳಕೆದಾರ, ಕಾಲಮ್, ಪಟ್ಟಿ ಮತ್ತು ಬಳಕೆಯ ಟ್ರ್ಯಾಕಿಂಗ್‌, ರನ್‌ಟೈಮ್‌, ಮತ್ತು ರಿಸಲ್ಟ್‌ ಸೆಟ್‌ ರೋ ಕೌಂಟ್‌ಗಳನ್ನೊಳಗೊಂಡ ವರದಿ ಮತ್ತು ಪ್ರಶ್ನೆಗಳ ಕಾರ್ಯಕಾರಿ ಅಂಕಿ ಆಂಶಗಳು.


ವ್ಯವಹಾರ ಜ್ಞಾನ ಮೆಟಾಡೇಟಾ[ಬದಲಾಯಿಸಿ]

’ದತ್ತಾಂಶ ಗೋದಾಮು’ ವಿಷಯಕ್ಕಾಗಿ ಮೆಟಾಡೇಟಾ ಸಂಬಂಧ ವಿವರಿಸಲಾಗಿದೆ.


ಕಡತ ವ್ಯವಸ್ಥೆಯ ಮೆಟಾಡೇಟಾ[ಬದಲಾಯಿಸಿ]

ಬಹುತೇಕ ಎಲ್ಲ ಕಡತ ವ್ಯವಸ್ಥೆಗಳು ಔಟ್-ಆಫ್-ಬ್ಯಾಂಡ್ ಕಡತಗಳ ಮೆಟಾಡೇಟಾವನ್ನು ಇಡುತ್ತದೆ. ಕೆಲವು ವ್ಯವಸ್ಥೆಗಳು ಡೈರೆಕ್ಟರಿ ನಮೂದುಗಳಲ್ಲಿ ಮೆಟಾಡೇಟಾವನ್ನು ಇಡುತ್ತವೆ; ಮತ್ತೆ ಕೆಲವು ಐನೋಡ್ಸ್ (inodes)ನಂತಹ ವಿಶಿಷ್ಟ ವಿನ್ಯಾಸದಲ್ಲಿ ಅಥವಾ ಕಡತದ ಹೆಸರಿನಲ್ಲಿಯೂ ಸಹ ಮೆಟಾಡೇಟಾವನ್ನು ಇಡುತ್ತದೆ. ಸರಳವಾದ ಟೈಮ್‌ಸ್ಟ್ಯಾಂಪ್‌ಗಳು, ಮೋಡ್ ಬಿಟ್ಗಳು, ಮತ್ತು ವ್ಯವಸ್ಥೆಯೇ ಬಳಸುವ ಇತರ ವಿಶಿಷ್ಟೋದ್ದೇಶ ಮಾಹಿತಿಯಿಂದ ಹಿಡಿದು ಐಕಾನ್ಸ್ ಮತ್ತು ಫ್ರೀ-ಟೆಕ್ಸ್ಟ್ ಕಾಮೆಂಟ್ಸ್, ಸ್ವಚ್ಛಂದವಾದ ಆಟ್ರಿಬ್ಯೂಟ್ ವ್ಯಾಲ್ಯು ಪೇರ್‌ಗಳವರೆಗೆ ಮೆಟಾಡೇಟಾದ ವ್ಯಾಪ್ತಿ.


ಹೆಚ್ಚು ಸಂಕೀರ್ಣ ಮತ್ತು ಓಪನ್-ಎಂಡೆಡ್ (open-ended) ಮೆಟಾಡೇಟಾ ಇದ್ದಾಗ, ಮೆಟಾಡೇಟಾದ ಅನುಕ್ರಮಣಿಕೆಯನ್ನು ಆಧಾರವಾಗಿಟ್ಟುಕೊಂಡು ಕಡತಗಳನ್ನು ಹುಡುಕುವುದು ಹೆಚ್ಚು ಉಪಯೋಗಕಾರಿಯಾಗುತ್ತದೆ. ಯೂನಿಕ್ಸ್ ಫೈಂಡ್ ಆಧುನಿಕ ಕಂಪ್ಯೂಟರ್ ವ್ಯವಸ್ಠೆಯಲ್ಲಿ ನೂರಾರು-ಸಾವಿರಾರು ಕಡತಗಳನ್ನು ಸ್ಕ್ಯಾನ್ ಮಾಡುವಾಗ ಅಸಮರ್ಥವೆನಿಸಿದರೂ ಇಂತಹ ಉಪಯುಕ್ತತೆಗೆ ಮೊದಮೊದಲ ಉದಾಹರಣೆ. ಆಪಲ್ ಕಂಪ್ಯೂಟರ್'ನ ಮ್ಯಾಕ್ ಒಎಸ್ ಎಕ್ಸ್ (Mac OS X) ಆಪರೇಟಿಂಗ್ ವ್ಯವಸ್ಥೆಯು ಸ್ಪಾಟ್ಲೈಟ್ ಎಂಬ ಉಪಾಧಿಯ, ಆವೃತ್ತಿ 10.4ರ ಮೂಲಕ ಕಡತ ಮೆಟಾಡೇಟಾದ ವಿಷಯಪಟ್ಟಿ ತಯಾರಿಕೆ ಮತ್ತು ಹುಡುಕುವಿಕೆಗೆ ಅನುವು ಮಾಡಿಕೊಡುತ್ತದೆ. ಮೈಕ್ರೊಸಾಫ್ಟ್ ಕಂಪೆನಿಯು, ವಿಂಡೋಸ್ ವಿಸ್ತಾದಲ್ಲಿಯ ತಕ್ಷಣದ ಹುಡುಕಾಟ ವ್ಯವಸ್ಥೆ, ಇದೇ ರೀತಿಯ ಕಾರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಹಾಗೆಯೇ ಕೆಲಸ ಶೇರ್ಪಾಯಿಂಟ್ ಸರ್ವರ್ನಲ್ಲಿ ಉಪಸ್ಥಿತವಾಗಿರುವತ್ತ ಕೆಲಸ ಮಾಡಿತು. ಲಿನಕ್ಸ್, ವಿಸ್ತರಿತ ಕಡತ ಉಪಾಧಿಗಳನ್ನು ಉಪಯೋಗಿಸಿಕೊಂಡು ಕಡತ ಮೆಟಾಡೇಟಾವನ್ನು ಅನುಷ್ಠಾನಗೊಳಿಸುತ್ತದೆ.


ಪ್ರೋಗ್ರಾಮ್ ಮೆಟಾಡೇಟಾ[ಬದಲಾಯಿಸಿ]

ಮೇಟಾಡೇಟಾವನ್ನು ಎಲ್ಲೋ ಒಂದೊಂದು ಸಾರಿ, ತಂತ್ರಾಂಶದ ವಿನ್ಯಾಸದಲ್ಲಿ ಬಳಸಲಾಗುವ ಅಮೂರ್ತ ಅಥವಾ ಕಾನ್ಫಿಗರ್-ಮಾಡಬಹುದಾದ ನಿಯಂತ್ರಕ ದತ್ತಾಂಶವನ್ನು ವಿವರಿಸಲು ಬಳಸಲಾಗುತ್ತದೆ. ಬಹಳಷ್ಟು ಎಕ್ಸಿಕ್ಯುಟೇಬಲ್ ಕಡತಗಳ ವಿನ್ಯಾಸಗಳು, "ಮೆಟಾಡೇಟಾ" ಎಂದು ಕರೆಯಬಹುದಾದ, ಕೆಲವು ಸಮಾನ್ಯವಾಗಿ ಕಾನ್ಫಿಗರ್ ಮಾಡಬಹುದಾದ, ಬಿಹೇವಿಯರಲ್ ರನ್‌ಟೈಮ್‌ ಲಕ್ಷಣಗಳನ್ನು ಒಳಗೊಂಡಿರುತ್ತವೆ. ಆದಾಗ್ಯೂ, ಪ್ರೋಗ್ರಾಮ್ "ಮೆಟಾಡೇಟಾ"ವನ್ನು ಸಂಗ್ರಹಿಸಿದ-ಪ್ರೋಗ್ರಾಮ್ ಗಣಕ ವಿನ್ಯಾಸದಿಂದ ನಿಖರವಾಗಿ ಬೇರ್ಪಡಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟ; ಯಂತ್ರವು ಅದನ್ನು ಓದಿದರೆ ಮತ್ತು ಅದಕ್ಕೆ ತಕ್ಕಾಗಿ ನಡೆದುಕೊಂಡರೆ, ಅದು ಗಣಕೀಕರಣ ಸೂಚನೆ, ಮತ್ತು ’ಮೆಟಾ’ ಎನ್ನುವ ಉಪಸರ್ಗಕ್ಕೆ ಯಾವ ಬೆಲೆಯೂ ಇಲ್ಲ.


ಜಾವಾದಲ್ಲಿ, ಸಕ್ರಿಯವಾಗಿ ಕ್ಲಾಸ್ಗಳನ್ನು ಸೇರಿಸಲು ಮತ್ತು ’ರೆಫ್ಲೆಕ್ಷನ್’ಗೆ ಅನುವು ಮಾಡಿಕೊಡಲು, ಜಾವ ಕಂಪೈಲರ್ ಮತ್ತು ಜಾವಾ ವರ್ಚುವಲ್ ಯಂತ್ರ ಉಪಯೋಗಿಸುವ ಮೆಟಾಡೇಟಾವನ್ನು ಕ್ಲಾಸ್ ಫೈಲ್ ಫಾರ್ಮ್ಯಾಟ್ ಒಳಗೊಂಡಿರುತ್ತದೆ. ಜಾವ ಫ್ಲಾಟ್‌ಫಾರ್ಮ್, (Java Platform, Standard Edition), ಅಭಿವೃದ್ಧಿ ಸಾಧನಗಳು ಬಳಸುವ ಹೆಚ್ಚುವರಿ ಟಿಪ್ಪಣಿಗಳಿಗೆ ಎಡೆಮಾಡಿಕೊಡಲು ಜೆ2ಎಸ್ಇ 5.0 (J2SE 5.0)ಯಿಂದ ಮೆಟಾಡೇಟಾ ಅನುಕೂಲತೆಯನ್ನು ಸೇರಿಸಿಕೊಂಡಿದೆ.


ಎಮ್ಎಸ್-ಡಾಸ್ (MS-DOS)ನಲ್ಲಿ, ಸಿಒಎಮ್ (COM) ಕಡತ ವಿನ್ಯಾಸವು ಮೆಟಾಡೇಟಾವನ್ನು ಒಳಗೊಂಡಿಲ್ಲ, ಆದರೆ ಇಎಕ್ಸ್ಇ (EXE) ಕಡತ ಮತ್ತು ವಿಂಡೋಸ್ ಪಿಇ (PE) ರೂಪಗಳು ಒಳಗೊಂಡಿವೆ. ಈ ಮೆಟಾಡೇಟಾಗಳು, ಪ್ರೋಗ್ರಾಮನ್ನು ಪಬ್ಲಿಷ್ ಮಾಡಿರುವ ಕಂಪೆನಿ, ಪ್ರೋಗ್ರಾಮನ್ನು ರಚಿಸಿದ ತಾರೀಖು, ಆವೃತ್ತಿಯ ಸಂಖ್ಯೆ ಮೊದಲಾದವುಗಳನ್ನು ಒಳಗೊಂಡಿರುತ್ತದೆ.


ಮೈಕ್ರೊಸಾಫ್ಟ್ ಡಾಟ್ ನೆಟ್ (Microsoft.NET) ಎಕ್ಸಿಕ್ಯೂಟೆಬಲ್ ವಿನ್ಯಾಸವು, ಹೆಚ್ಚುವರಿ ಮೆಟಾಡೇಟಾವನ್ನು ಒಳಗೊಂಡಿದೆ. ರನ್ಟೈಮ್ನಲ್ಲಿ ರೆಫ್ಲೆಕ್ಷನ್ಗೆ ಅನುವು ಮಾಡಿಕೊಡುವುದಕ್ಕಾಗಿ ಹೀಗೆ ಮಾಡಲಾಗಿದೆ.


ಅಸ್ತಿತ್ವದಲ್ಲಿರುವ ತಂತ್ರಾಂಶ ಮೆಟಾಡೇಟಾ[ಬದಲಾಯಿಸಿ]

ಉದ್ದೇಶ ನಿರ್ವಹಣಾ ತಂಡವು (Object Management Group - ಆಬ್ಜೆಕ್ಟ್‌ ಮ್ಯಾನೇಜ್‌ಮೆಂಟ್‌ ಗ್ರೂಪ್‌)(OMG), ತಂತ್ರಾಂಶ ಗಣಿಗಾರಿಕೆ, ತಂತ್ರಾಂಶ ನವೀಕರಣ ಮತ್ತು ತಂತ್ರಾಂಶ ಭರವಸೆ - ಈ ಎಲ್ಲ ಉದ್ದೇಶಗಳೀಗಾಗಿ ಸದ್ಯ ಅಸ್ತಿತ್ವದಲ್ಲಿರುವ ಎಲ್ಲ ಅಪ್ಲಿಕೇಷನ್‌ಗಳನ್ನು ಪ್ರತಿನಿಧಿಸಲು ಮೆಟಾಡೇಟಾದ ಆಕಾರ ಹೇಗಿರಬೇಕೆಂದು ವ್ಯಾಖ್ಯಾನಿಸಿದೆ. ಒಎಮ್‌ಜಿ (OMG) ಜ್ಞಾನ ಪರಿಶೋಧನ ಮೆಟಾಮಾದರಿ (Knowledge Discovery Metamodel - ನಾಲೆಜ್‌ ಡಿಸ್ಕವರಿ ಮೆಟಾಮಾಡೆಲ್‌) (KDM-ಕೆಡಿಎಮ್‌) ಎಂದು ಕರೆಯಲಾಗುವ ಈ ಸೂತ್ರವೇ "ವಿರುದ್ಧ ಮಾದರಿ ನಿರ್ಮಾಣ(modeling in reverse)"ಕ್ಕೆ ಒಎಮ್‌ಜಿಯ ಅಡಿಪಾಯ. ಕೆಡಿಎಮ್‌ ಎನ್ನುವುದು, ಎಂಟರ್‌ಪ್ರೈಸ್‌ ಅಪ್ಲಿಕೇಷನ್‌ನ ನಡಾವಳಿ (ಪ್ರೊಗ್ರಾಮ್‌ನ ಹರಿವು), ದತ್ತಾಂಶ ಮತ್ತು ರಚನೆಯನ್ನೊಳಗೊಂಡ ಸಂಪೂರ್ಣ ಚಿತ್ರಣವನ್ನು ಕೊಡುವ ಒಂದು ಸಾಮಾನ್ಯ ಭಾಷಾ-ಸ್ವತಂತ್ರ ಮಧ್ಯವರ್ತಿ ಪ್ರತಿನಿಧಿ. ಕೆಡಿಎಮ್‌ನ ಒಂದು ಅಪ್ಲಿಕೇಷನ್‌ ಎಂದರೆ ವ್ಯವಹಾರ ನೀತಿ ಗಣಿಗಾರಿಕೆ.


ಜ್ಞಾನ ಪರಿಶೋಧನ ಮೆಟಾಮಾದರಿಯು ನುಣುಪಾದ ಕೆಳ-ಮಟ್ಟದ ಪ್ರತಿನಿಧಿ (ಇದನ್ನು "ಮೈಕ್ರೊ ಕೆಡಿಎಮ್‌ ಎನ್ನುತ್ತಾರೆ), ಇದು ಪ್ರೊಗ್ರಾಮ್‌ಗಳ ಅಂಕಿಅಂಶಗಳ ವಿಶ್ಲೇಷಣೆಗೆ ಸೂಕ್ತವಾದದ್ದು.


ಡಾಕ್ಯುಮೆಂಟ್ ಮೆಟಾಡೇಟಾ[ಬದಲಾಯಿಸಿ]

ಮೈಕ್ರೊಸಾಫ್ಟ್ ಶೇರ್ಪಾಯಿಂಟ್, ಮೈಕ್ರೊಸಾಫ್ಟ್ ವರ್ಡ್ ಮತ್ತು ಇತರ ಮೈಕ್ರೊಸಾಫ್ಟ್ ಉತ್ಪಾದನೆಗಳೂ ಸೇರಿದಂತೆ ದಾಖಲೆಗಳನ್ನು ರಚಿಸುವ ಬಹುತೇಕ ಪ್ರೋಗ್ರಾಮ್‌ಗಳು ಮೆಟಾಡೇಟಾವನ್ನು ಡಾಕ್ಯುಮೆಂಟ್ ಕಡತಗಳಲ್ಲಿ ಉಳಿಕೆ ಮಾಡುತ್ತವೆ. ಈ ಮೆಟಾಡೇಟಾ, ಆ ಕಡತವನ್ನು ರಚಿಸಿದ ವ್ಯಕ್ತಿಯ ಹೆಸರನ್ನು (ಆಪರೇಟಿಂಗ್ ಸಿಸ್ಟಮ್ನಿಂದ ಪಡೆದುಕೊಳ್ಳುತ್ತದೆ), ಆ ಕಡತವನ್ನು ಇತ್ತೀಚೆಗೆ ಸಂಕಲಿಸಿದ ವ್ಯಕ್ತಿಯ ಹೆಸರು, ಎಷ್ಟು ಸಾರಿ ಈ ಕಡತವನ್ನು ಪ್ರಿಂಟ್ ಮಾಡಲಾಗಿದೆ ಮತ್ತು ಕಡತವನ್ನು ಮೇಲೆ ಎಷ್ಟು ಸಾರಿ ಪುನರಾವರ್ತನೆ ಮಾಡಲಾಗಿದೆ ಎನ್ನುವ ವಿವರಗಳನ್ನು ಹೊಂದಿರುತ್ತದೆ. ಇತರ ಉಳಿಕೆ ಮಾಡಿದ ವಸ್ತುಗಳು, ಉದಾಹರಣೆಗೆ ಅಳಿಸಿ ಹಾಕಿದ ಪಠ್ಯ (ಅನ್‌ಡಿಲೀಟ್‌ ಕಮ್ಯಾಂಡ್‌ ಇದ್ದ ಪಕ್ಷದಲ್ಲಿ), ದಾಖಲೆಗಳ ಟಿಪ್ಪಣಿಗಳು ಮೊದಲಾದವುಗಳನ್ನು ಸಹ ಸಾಮಾನ್ಯವಾಗಿ "ಮೆಟಾಡೇಟಾ" ಎಂದು ಕರೆಯುತ್ತಾರೆ, ಮತ್ತು ಅಜಾಗರೂಕತೆಯಿಂದ ಹಂಚಿಕೆಯಾದ ಕಡತಗಳಲ್ಲಿ ಈ ವಸ್ತುಗಳನ್ನು ಸೇರಿಸಿರುವುದರಿಂದ ಅನಪೇಕ್ಷಿತ ಬಹಿರಂಗಗಳೂ ಸಹ ಆಗಿವೆ.


ಡಾಕ್ಯುಮೆಂಟ್‌ ಮೆಟಾಡೇಟಾ ನಿರ್ದಿಷ್ಟವಾಗಿ ಕಾನೂನು ಪರಿಸರದಲ್ಲಿ ಬಹಳ ಮುಖ್ಯ. ಇಲ್ಲಿ ಮೊಕದ್ದಮೆಯು ಖಾಸಗಿ ಅಹಿತಕರ ದತ್ತಾಂಶದ ಹಲವು ವಿಷಯಗಳನ್ನು ಒಳಗೊಂಡಿರುವ ಈ ಸೂಕ್ಷ್ಮ ಮಾಹಿತಿಯನ್ನು (ಮೆಟಾಡೇಟಾ) ಕೇಳಬಹುದು. ಈ ದತ್ತಾಂಶವು ಕಾರ್ಪೋರೇಷನ್‌ಗಳನ್ನೇ ಕಾನೂನಿನ ಬಿಕ್ಕಟ್ಟಿಗೆ ಸಿಲುಕಿಸಿದ ಮೊಕದ್ದಮೆಗಳ ಜೊತೆಗೂಡಿದೆ ಎನ್ನಲಾಗಿದೆ.


ಅನೇಕ ಕಾನೂನು ಸಂಸ್ಥೆಗಳು ಈಗ [who?] ಮೆಟಾಡೇಟಾ ತೆಗೆಯುವ ಸಾಧನಗಳನ್ನು ಬಳಸುತ್ತಿವೆ. ಇವು,ಸಂಸ್ಥೆಯಿಂದ ಹೊರಕಳಿಸುವ ಮುನ್ನ ಕಡತಗಳನ್ನು ಸ್ವಚ್ಛಗೊಳಿಸುತ್ತವೆ. ಈ ಪ್ರಕ್ರಿಯೆಯು, ವಿದ್ಯುನ್ಮಾನ ಪರಿಶೋಧನೆಯ ಮೂಲಕ ಸಂಭಾವ್ಯ ಅಸುರಕ್ಷಿತ ಸೂಕ್ಷ್ಮ ಮಾಹಿತಿಗಳು ಬಹಿರಂಗವಾಗುವುದನ್ನು ಸ್ವಲ್ಪ ಮಟ್ಟಿಗೆ ತಡೆಯುತ್ತದೆ. ಮೆಟಾಡೇಟಾವನ್ನು ಮಾತ್ರ ತೆಗೆಯುವುದು ಗ್ರಂಥಪರಿಷ್ಕರಣದ ಒಂದು ಅಂಗ ಮಾತ್ರವಾಗಿದ್ದು, ಈ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಹಾಗೂ ಸಮರ್ಪಕವಾಗಿ ಮಾಡುವುದು ಅನಿವಾರ್ಯವಾಗಿದೆ.


ಎಕ್ಸಿಕ್ಯೂಟೆನಲ್‌ ಫಾರ್ಮ್ಯಾಟ್‌ಗಳೀಗಾಗಿ, ಆಬ್ಜೆಕ್ಟ್‌ ಫೈಲ್‌ (object file)ಅನ್ನು ನೋಡಿ.


ಡಿಜಿಟಲ್‌ ಗ್ರಂಥಾಲಯ ಮೆಟಾಡೇಟಾ[ಬದಲಾಯಿಸಿ]

ಡಿಜಿಟಲ್‌ ಗ್ರಂಥಾಲಯದಲ್ಲಿರುವ ವಸ್ತುಗಳನ್ನು ವಿವರಿಸಲು ಮೂರು ರೀತಿಯ ಮೆಟಾಡೇಟಾಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ:[೧೨]


 1. ವಿವರಣಾತ್ಮಕ - ವಸ್ತುವಿನ ಮಾರ್ಕ್‌ (MARC)ಪಟ್ಟಿ ದಾಖಲಾತಿ, ಹುಡುಕುವ ಸಾಧನಗಳು ಅಥವಾ ಅಂತಹ ವಿಧಾನಗಳನ್ನು ಒಳಗೊಂಡ ಬೌದ್ಧಿಕ ವಿವರಣೆಗಳನ್ನು ನೀಡುವ ಮಾಹಿತಿ. ಇದನ್ನು ಸಾಮಾನ್ಯವಾಗಿ ಗ್ರಂಥವಿವರಣ ಪಟ್ಟಿಯ ಕೆಲಸಗಳಿಗೆ ಮತ್ತು ಹುಡುಕಲು ಮತ್ತು ಸಂಸ್ಕರಿಸಲು ಬಳಸಲಾಗುತ್ತದೆ.
 2. ರಚನಾತ್ಮಕ - ಪ್ರತಿಯೊಂದು ವಸ್ತುವನ್ನು ಇನ್ನೊಂದಕ್ಕೆ ಸೇರಿಸಿ ತರ್ಕಬದ್ಧ ಘಟಕಗಳನ್ನು ರಚಿಸುತ್ತದೆ (ಉದಾಹರಣೆಗೆ ಒಂದು ಪುಸ್ತಕದ ಪುಟಗಳಲ್ಲಿನ ಚಿತ್ರಗಳಿಂದ ಪುಸ್ತಕವನ್ನು ಆಗಿಸುವ ಇತರ ವಿಷಯಗಳಿಗೆ).
 3. ಆಡಳಿತಾತ್ಮಕ - ಒಂದು ವಸ್ತುವನ್ನು ನಿರ್ವಹಿಸಲು ಅಥವಾ ಅದರ ಪ್ರವೇಶವನ್ನು ನಿಯಂತ್ರಿಸಲು ಬಳಸುವ ಮಾಹಿತಿ. ಆ ವಸ್ತುವನ್ನು ಹೇಗೆ ಸ್ಕ್ಯಾನ್‌ ಮಾಡಲಾಯಿತು, ಅದನ್ನು ಸ್ಟೋರ್ ಮಾಡುವ ಫಾರ್ಮ್ಯಾಟ್‌ ಯಾವುದು, ಹಕ್ಕುಗಳು ಮತ್ತು ಪರವಾನಗಿ ಮಾಹಿತಿ, ಮತ್ತು ಡಿಜಿಟಲ್‌ ವಸ್ತುಗಳನ್ನು ದೀರ್ಘಕಾಲ ಕಾಪಿಡಲುಬೇಕಾದ ಮಾಹಿತಿ ಇವುಗಳನ್ನು ಒಳಗೊಂಡಿರುತ್ತದೆ.


ಡಿಜಿಟಲ್‌ ಗ್ರಂಥಾಲಯಗಳ ನಿರ್ದಿಷ್ಟಮಾನಗಳೆಂದರೆ ಡಬ್ಲಿನ್‌ ಕೋರ್, ಎಮ್‌ಇ‌ಟಿ‌ಎಸ್‌ (METS), ಪಿಆರ್‌ಇಎಮ್‌ಐ‌ಎಸ್‌(PREMIS) ಸ್ಕೀಮಾ (schema), ಮತ್ತು ಒಎಐ-ಪಿಎಮ್‌ಎಚ್‌ (OAI-PMH).


ಚಿತ್ರ ಮೆಟಾಡೇಟಾ[ಬದಲಾಯಿಸಿ]

ಮೆಟಾಡೇಟಾ ಇರುವ ಚಿತ್ರ ಫೈಲ್‌ಗಳ ಉದಾಹರಣೆಗಳೆಂದರೆ ಅದಲು-ಬದಲು ಮಾಡಬಹುದಾದ ಚಿತ್ರ ಫೈಲ್‌ ಫಾರ್ಮ್ಯಾಟ್‌ (ಎಕ್ಸ್‌ಚೇಂಜಿಯೆಬಲ್‌ ಇಮೇಜ್‌ ಫೈಲ್‌ ಫಾರ್ಮ್ಯಾಟ್) (EXIF) ಮತ್ತು ಟ್ಯಾಗ್ ಮಾಡಿದ ಚಿತ್ರ ಫೈಲ್‌ ಫಾರ್ಮ್ಯಾಟ್‌ (ಟ್ಯಾಗ್ಡ್‌ ಇಮೇಜ್ ಫೈಲ್‌ ಫಾರ್ಮ್ಯಾಟ್‌) (TIFF).


ಚಿತ್ರದ ಬಗೆಗೆ ಹೆಚ್ಚಿನ ದತ್ತಾಂಶವನ್ನು ಸಂಗ್ರಹಿಸಲು ಚಿತ್ರದ ಬಗೆಗಿನ ಮೆಟಾಡೇಟಾವನ್ನು ಟಿಐಎಫ್‌ಎಫ್‌ (TIFF) ಅಥವಾ ಇಎಕ್ಸ್‌ಎಫ್‌ಎಫ್‌(EXIF) ಫೈಲ್‌ಗಳಲ್ಲಿ ಅಳವಡಿಸಿಕೊಳ್ಳುವುದು ಒಂದು ದಾರಿ. ವಿಷಯಗಳು, ಸಂಬಂಧಿತ ಭಾವಗಳು, ಮತ್ತು ಇತರ ವಿವರಣೆಗಳನ್ನು ಟ್ಯಾಗ್‌ ಮಾಡುವುದರಿಂದ ಅಂತರ್ಜಾಲದ ಬಳಕೆದಾರರಿಗೆ ಸುಲಭವಾಗಿ ಚಿತ್ರವನ್ನು ಹುಡುಕುವುದು ಸಾಧ್ಯವಾಗುತ್ತದೆ ಮತ್ತು ಸಂಗ್ರಹದಲ್ಲಿರುವ ಎಲ್ಲ ಚಿತ್ರಗಳನ್ನು ನೋಡಿ ನೋಡಿ ಹುಡುಕುವ ಕಷ್ಟ ತಪ್ಪುತ್ತದೆ. ಚಿತ್ರಗಳನ್ನು ಟ್ಯಾಗ್‌ಮಾಡುವ ಸೇವೆಗಳಲ್ಲಿ ಪ್ರಮುಖವಾದ ಒಂದು ಉದಾಹರಣೆಯೆಂದರೆ Flickr. ಇದರಲ್ಲಿ ಬಳಕೆದಾರರು ಚಿತ್ರಗಳನ್ನು ಅಪ್‌ಲೋಡ್‌ ಮಾಡಿ ನಂತರ ಅದನ್ನು ವಿವರಿಸುತ್ತಾರೆ. ನಂತರ ಜಾಲತಾಣದ ಇತರ ಬಳಕೆದಾರರು ಆ ಟ್ಯಾಗ್‌ಗಳಿಗಾಗಿ ಹುಡುಕಬಹುದು. Flickr ಫೋಕ್ಸಾನಮಿಯನ್ನು ಉಪಯೋಗಿಸುತ್ತದೆ (ಜನಪದೀಯ ವಿಂಗಡಣೆ): ನಿಯಂತ್ರಿತ ಪದಭಂಡಾರದ ಬದಲಾಗಿ ಸಮೂಹವು ತಾನು ಉಪಯೋಗಿಸುವ ಪದಗಳ ಮೇಲೆ ಪದಭಂಡಾರವನ್ನು ವ್ಯಾಖ್ಯಾನಿಸುವ ಒಂದು ಫ್ರೀ-ಟೆಕ್ಸ್ಟ್‌ ಕೀವರ್ಡ್ ವ್ಯವಸ್ಥೆ.


ಬಳಕೆದಾರರು ಸಂಸ್ಥೆಯ ಕಾರ್ಯಗಳಿಗಾಗಿ ಫೋಟೋಗಳನ್ನು ಟ್ಯಾಗ್‌ ಮಾಡಬಹುದು, ಉದಾಹರಣೆಗೆ ಅಡೊಬ್‌ನ ವಿಸ್ತರಿಸಬಹುದಾದ ಮೆಟಾಡೇಟಾ ವೇದಿಕೆ (ಎಕ್ಸ್‌ಟೆನ್ಸಿಬಲ್‌ ಮೆಟಾಡೇಟಾ ಫ್ಲಾಟ್‌ಫಾರ್ಮ್‌) ಎನ್ನುವ ಭಾಷೆಯನ್ನು ಉಪಯೋಗಿಸಿಕೊಂಡು (XMP).


ಡಿಜಿಟಲ್‌ ಛಾಯಾಗ್ರಹಣವು, ಚಿತ್ರಗಳನ್ನು ಬಹಿರಂಗಪಡಿಸುವುದಕ್ಕೆ ಇರುವ ಷರತ್ತುಗಳನ್ನು ವಿವರಿಸುವ ತಾಂತ್ರಿಕ ಮೆಟಾಡೇಟಾ ಟ್ಯಾಗ್‌ಗಳನ್ನು ಅತ್ಯಧಿಕವಾಗಿ ಉಪಯೋಗಿಸುತ್ತಿದೆ. ಕ್ಯಾಮೆರಾ ಆರ್‌ಎ‌ಡಬ್ಲ್ಯೂ (Camera RAW) ಫೈಲ್‌ ಫಾರ್ಮ್ಯಾಟ್‌ನಲ್ಲಿ ಛಾಯಾಗ್ರಹಣ ಮಾಡುವ ಛಾಯಾಗ್ರಾಹಕರು ಅಡೋಬ್‌ ಬ್ರಿಜ್ ಅಥವಾ ಆ‍ಯ್‌ಪಲ್‌ ಕಂಪ್ಯೂಟರ್‌ರವರ ಅಪರ್ಚರ್‌ಅನ್ನು ಉಪಯೋಗಿಸಿಕೊಂಡು ಕ್ಯಾಮೆರಾ ಮೆಟಾಡೇಟಾದೊಂದಿಗೆ ಪೋಸ್ಟ್‌-ಪ್ರೊಸೆಸಿಂಗ್‌ ಕೆಲಸ ಮಾಡಬಹುದು.


ಭೂವ್ಯೋಮ ಮೆಟಾಡೇಟಾ[ಬದಲಾಯಿಸಿ]

ಭೌಗೋಳಿಕ ವಸ್ತುಗಳನ್ನು ವಿವರಿಸುವ ಮೆಟಾಡೇಟಾ (ದತ್ತಾಂಶ ಸೆಟ್‌ಗಳು, ಭೂಪಟಗಳು, ಉಪಾಧಿಗಳು, ಅಥವಾ ಭೌಗೋಳಿಕ ಅಂಶವನ್ನೊಳಗೊಂಡ ಕೇವಲ ಡಾಕ್ಯುಮೆಂಟ್‌ಗಳು) 1994ರಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. (ಎಫ್‌ಜಿಡಿಸಿ ಮೆಟಾಡೇಟಾದ ಎಮ್‌ಐ‌ಟಿ ಗ್ರಂಥಾಲಯ ಪುಟವನ್ನು Archived 2006-10-18 ವೇಬ್ಯಾಕ್ ಮೆಷಿನ್ ನಲ್ಲಿ. ನೋಡಿ). ಈ ಮೆಟಾಡೇಟಾದ ವಿಭಾಗವನ್ನು ಭೂವ್ಯೋಮ ಮೆಟಾಡೇಟಾ ಪುಟದಲ್ಲಿ ಇನ್ನಷ್ಟು ವಿವರವಾಗಿ ಕೊಡಲಾಗಿದೆ.


ಮೆಟಾ-ಮೆಟಾಡೇಟಾ[ಬದಲಾಯಿಸಿ]

ಮೆಟಾಡೇಟಾ ಕೂಡ ದತ್ತಾಂಶವೇ ಆಗಿರುವುದರಿಂದ, "ಮೆಟಾ-ಮೆಟಾಡೇಟಾ" ಎನ್ನುವ ಮೆಟಾಡೇಟಾದ ಮೆಟಾಡೇಟಾವನ್ನು ಹೊಂದುವುದು ಸಾಧ್ಯ. ಮುಕ್ತ-ಪಠ್ಯ ಹುಡುಕಾಟ ಎಂಜಿನ್‌ ಸೃಷ್ಟಿಸುವ ವಿರುದ್ಧ ಪರಿವಿಡಿಯಂತಹ ಯಂತ್ರೋತ್ಪಾದಿತ ಮೆಟಾ-ಮೆಟಾಡೇಟಾವನ್ನು ಸಾಮಾನ್ಯವಾಗಿ ಮೆಟಾಡೇಟಾ ಎಂದು ಪರಿಗಣಿಸುವುದಿಲ್ಲ.


ಮೆಟಾಡೇಟಾ ಮತ್ತು ಕಾನೂನು[ಬದಲಾಯಿಸಿ]

ಅಮೆರಿಕಾ ಸಂಯುಕ್ತ ಸಂಸ್ಥಾನ[ಬದಲಾಯಿಸಿ]

ಮೆಟಾಡೇಟಾಗಳನ್ನು ಒಳಗೊಂಡಿರುವ ಮೊಕದ್ದಮೆಗಳು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಮೆಟಾಡೇಟಾವನ್ನು ಒಳಗೊಂಡಿರುವ ಹಲವು ಪ್ರಶ್ನೆಗಳನ್ನು, ಮೆಟಾಡೇಟಾವನ್ನು ಪಕ್ಷಗಳು ಪರಿಶೋಧಿಸಬಹುದಾದದನ್ನು ಒಳಗೊಂಡು, ನ್ಯಾಯಾಲಯಗಳು ನೋಡಿವೆ. ಫೆಡರಲ್‌ ರೂಲ್ಸ್‌ ಆಫ್‌ ಸಿವಿಲ್‌ ಪ್ರೊಸೀಜರ್‌ (Federal Rules of Civil Procedure)ಗಳು ವಿದ್ಯುನ್ಮಾನ ಡಾಕ್ಯುಮೆಂಟ್‍ಗಳ ಬಗೆಗೆ ಮಾತ್ರ ನೀತಿಸಂಹಿತೆಯನ್ನು ನೀಡಿವೆ, ಮುಂದಿನ ಮೊಕದ್ದಮೆಗಳ ತೀರ್ಮಾನದ ಆಧಾರ, ಪಕ್ಷಗಳು ಮೆಟಾಡೇಟಾವನ್ನು ಬಹಿರಂಗಪಡಿಸುವುದರ ಅಗತ್ಯತೆಯನ್ನು ಕುರಿತು ವಿವರಿಸಿದೆ.


ಇದನ್ನೂ ಗಮನಿಸಿ[ಬದಲಾಯಿಸಿ]


ಆಕರಗಳು[ಬದಲಾಯಿಸಿ]

 1. "ಹೊಬರ್‌ಮ್ಯಾನ್, ಸ್ಟೀವ್, ಡಾಟಾ ಮಾಡೆಂಲಿಂಗ್ ಮೇಡ್ ಸಿಂಪಲ್, ಸೆಕೆಂಡ್ ಎಡಿಷನ್, ಟೆಕ್ನಿಕ್ಸ್ ಪಬ್ಲಿಕೇಷನ್ಸ್, ಎಲ್‌ಎಲ್‌ಸಿ, 2009, ಪುಟ 313". Archived from the original on 2012-01-18. Retrieved 2021-08-10.
 2. ಜೇಮ್ಸ್ ಮಾರ್ಟಿನ್, ಸ್ಟ್ರಾಟೇಜಿಕ್ ಡಾಟಾ ಪ್ಲಾನಿಂಗ್ ಮೆಥಡಲಜೀಸ್, ಪ್ರೆನ್‌ಟೈಸ್-ಹಾಲ್, Inc., ಇಂಗಲ್‌ವುಡ್ ಕ್ಲಿಫ್ಸ್, ನ್ಯೂಜೆರ್ಸಿ, 1982, p.127
 3. ಡಿ.ಸಿ.ಎ. ಬಲ್ಟರ್‌ಮ್ಯಾನ್, ಈಸ್ ಇಟ್ ಟೈಮ್ ಫಾರ್ ಅ ಮೊರಾಟೊರಿಯಂ ಆನ್ ಮೆಟಾಡೇಟಾ?, IEEE ಮಲ್ಟಿಮಿಡೀಯಾ , ಅಕ್ಟೋಬರ್-ಡಿಸೆಂಬರ್ 2004
 4. ವಿಲಿಯಂ ಆರ್. ಡುರೆಲ್, ಡಾಟಾ ಆಡ್ಮಿನಿಸ್ಟ್ರೇಷನ್: ಎ ಪ್ರಾಕ್ಟಿಕಲ್ ಗೈಡ್ ಟು ಡಾಟಾ ಅಡ್ಮಿನಿಸ್ಟ್ರೇಷನ್ , ಮ್ಯಾಕ್‌ಗ್ರಾ-ಹಿಲ್,1985
 5. ಬ್ರೆಥರ್‌ಟನ್,ಎಫ್. ಪಿ. ಆ‍ಯ್‌೦ಡ್ ಸಿಂಗ್ಲೇ, ಪಿ. ಟಿ. 1994, ಮೆಟಾಡೇಟಾ:ಎ ಯುಸರ್ಸ್’ಸ್ ವಿವ್ಯೂ, ಪ್ರೊಸಿಡಿಂಗ್ಸ್ ಆಫ್ ದ ಇಂಟರ‍್ನ್ಯಾಷನಲ್ ಕಾನ್ಫರೆನ್ಸ್ ಆನ್ ವೆರಿ ಲಾರ್ಜ್ ಡಾಟಾ ಬೇಸಸ್ (VLDB), 1091-1094
 6. ಡೇವಿಡ್ ಮಾರ್ಕೊ, ಬಿಲ್ಡಿಂಗ್ ಆ‍ಯ್‌೦ಡ್ ಮ್ಯಾನೇಜಿಂಗ್ ದ ಮೆಟಾ ಡೇಟಾ ರೆಪೊಸಿಟರಿ: ಎ ಫುಲ್ ಲೈಫ್‌ಸೈಕಲ್ ಗೈಡ್, ವಿಲೇ, 2000, ISBN 0-471-35523-2
 7. ಡೇವಿಡ್ ಸಿ. ಹೇ, ಡಾಟಾ ಮಾಡೆಲ್ ಪ್ಯಾಟರ್ನ್ಸ್: ಎ ಮೆಟಾಡೇಟಾ ಮ್ಯಾಪ್, ಮೊರ್ಗಾನ್ ಕೌಫ್‌ಮ್ಯಾನ್, 2006, ISBN 0-12-088798-3
 8. ಆರ್. ಟಾಡ್ ಸ್ಟೀಫೆನ್ಸ್ (2003). ಯುಟಿಲೈಜಿಂಗ್ ಮೆಟಾಡೇಟಾ ಆ‍ಯ್‌ಸ್ ಅ ನಾಲೆಡ್ಜ್ ಕಮ್ಯೂನಿಕೇಷನ್ ಟೂಲ್. ಪ್ರೊಸಿಡಿಂಗ್ಸ್ ಆಫ್ ದ ಇಂಟರ್‌ನ್ಯಾಷನಲ್ ಪ್ರೊಫೆಷನಲ್ ಕಮ್ಯೂನಿಕೇಷನ್ ಕಾನ್ಫರೆನ್ಸ್. ಮಿನಿಯಾಪುಲಿಸ್, ಎಮ್‌ಎನ್: ಇನ್ಸ್‌ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ‍ಯ್‌೦ಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್, Inc ಪ್ರೊಸಿಡಿಂಗ್ಸ್ ಆಫ್ ದ ಇಂಟರ್‌ನ್ಯಾಷನಲ್ ಪ್ರೊಫೆಷನಲ್ ಕಮ್ಯೂನಿಕೇಷನ್ ಕಾನ್ಫರೆನ್ಸ್ 2004. ಮಿನಿಯಾಪುಲಿಸ್, ಎಮ್‌ಎನ್: ಇನ್ಸ್‌ಟಿಟ್ಯೂಟ್ ಆಫ್ ಎಲೆಕ್ಟ್ರಿಕಾಲ್ ಆ‍ಯ್೦ಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್, Inc.
 9. Sualeh Fatehi. "SchemaCrawler". SourceForge. Archived from the original on 2009-09-03. Retrieved 2010-01-29.
 10. ಇನ್‌ಮಾನ್, ಡಬ್ಲ್ಯೂ.ಹೆಚ್. ಟೆಕ್ ಟಾಪಿಕ್: ವಾಟ್ ಈಸ್ ಎ ಡಾಟಾ ವೇರ್‌ಹೌಸ್? ಪ್ರಿಸಂ ಸೊಲ್ಯುಷನ್ಸ್. ಸಂಪುಟ 1. 1995. (http://en.wikipedia.org/wiki/Data_warehouse)
 11. ಮಾಟ್ಟೆನೊ ಗೊಲ್ಫೇರ್‌ಲಿ ಆ‍ಯ್೦ಡ್ ಸ್ಟೆಫ್ಯಾನೊ ರಿಜಿ, ಡಾಟಾ ವೇರ್‌ಹೌಸ್ ಡಿಸೈನ್: ಮಾಡ್ರನ್ ಪ್ರಿನ್ಸಿಪಲ್ಸ್ ಆ‍ಯ್೦ಡ್ ಮೆಥಾಡೊಲಾಜಿಸ್, ಮ್ಯಾಕ್‌ಗ್ರಾ-ಹಿಲ್; ಮೊದಲನೇ ಆವೃತ್ತಿ, ISBN 978-0-07-161039-1, ಪುಟ 25
 12. http://www.odl.ox.ac.uk/metadata.htm Archived 2010-01-10 ವೇಬ್ಯಾಕ್ ಮೆಷಿನ್ ನಲ್ಲಿ. http://www.cs.cornell.edu/wya/DigLib/MS1999/Chapter4.html


ಬಾಹ್ಯ ಸಂಪರ್ಕಕೊಂಡಿಗಳು[ಬದಲಾಯಿಸಿ]

ಅಂಡರ್‌ಸ್ಟ್ಯಾಂಡಿಂಗ್ ಮೆಟಾಡೇಟಾ- NISO, 2004


ಟೆಂಪ್ಲೇಟು:Software Engineering