ವಿಷಯಕ್ಕೆ ಹೋಗು

ವ್ಯಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೊಕದ್ದಮೆ ಇಂದ ಪುನರ್ನಿರ್ದೇಶಿತ)

ವ್ಯಾಜ್ಯವು (ಮೊಕದ್ದಮೆ) ಒಂದು ನ್ಯಾಯಾಲಯದಿಂದ ಅಥವಾ ಯಾವುದೋ ಸಮಾನವಾದ ಕಾನೂನು ಪ್ರಕ್ರಿಯೆಯಿಂದ ನಿರ್ಧರಿಸಲ್ಪಡುವ ವಿರೋಧಿ ಪಕ್ಷಗಳ ನಡುವಿನ ವಿವಾದ. ವ್ಯಾಜ್ಯವು ಸಿವಿಲ್ ಅಥವಾ ಕ್ರಿಮಿನಲ್ ಕಾನೂನಿಗೆ ಸಂಬಂಧಿಸಿರಬಹುದು. ಪ್ರತಿ ವ್ಯಾಜ್ಯದಲ್ಲಿ ಒಬ್ಬ ಆಪಾದಕ ಮತ್ತು ಒಬ್ಬರು ಅಥವಾ ಹೆಚ್ಚು ಪ್ರತಿವಾದಿಗಳಿರುತ್ತಾರೆ.

ಸಾಮಾನ್ಯವಾಗಿ ದಾವೆ ಅಥವಾ ಖಟ್ಲೆ ಎಂದು ಪರಿಚಿತವಾಗಿರುವ ಸಿವಿಲ್ ವ್ಯಾಜ್ಯವು ಒಬ್ಬ ವಾದಿಯು/ಫಿರ್ಯಾದಿಯು ನ್ಯಾಯಾಲಯದಲ್ಲಿ ದೂರು ಎಂದು ಕರೆಯಲ್ಪಡುವ ದಸ್ತಾವೇಜನ್ನು ದಾಖಲಿಸಿದಾಗ ಆರಂಭಗೊಳ್ಳುತ್ತದೆ. ಪ್ರತಿವಾದಿಯ ಕಾರಣದಿಂದ ವಾದಿಯು ಹೇಳಲಾದಂತೆ ಅನುಭವಿಸಿದ ತಪ್ಪನ್ನು ನ್ಯಾಯಾಲಕ್ಕೆ ತಿಳಿಸಲಾಗುತ್ತದೆ ಮತ್ತು ಪರಿಹಾರಕ್ಕಾಗಿ ವಿನಂತಿಸಲಾಗುತ್ತದೆ. ಕೇಳಲಾದ ಪರಿಹಾರವು ಹಣವಾಗಿರಬಹುದು, ಅಥವಾ ಪ್ರತಿವಾದಿಯು ಯಾವುದೋ ಕ್ರಿಯೆಯನ್ನು ಮಾಡದಿರುವಂತೆ ಅಥವಾ ಮಾಡುವಂತೆ ಹೇಳುವ ತಡೆಯಾಜ್ಞೆಯಾಗಿರಬಹುದು, ಅಥವಾ ವಾದಿಯು ಕೆಲವು ಕಾನೂನಾತ್ಮಕ ಹಕ್ಕುಗಳನ್ನು ಹೊಂದಿದ್ದಾನೆ ಎಂದು ತೀರ್ಮನಿಸುವ ಘೋಷಣಾತ್ಮಕ ತೀರ್ಪಾಗಿರಬಹುದು. ವಾದಿಯು ವ್ಯಾಜ್ಯವನ್ನು ಗೆದ್ದರೆ ಪರಿಹಾರವನ್ನು ನ್ಯಾಯಾಲಯವು ನಿಗದಿ ಮಾಡುತ್ತದೆ. ಸಿವಿಲ್ ವ್ಯಾಜ್ಯವನ್ನು ಮಧ್ಯಸ್ಥಿಕೆ ಮೂಲಕವೂ ನಿರ್ಣಯಿಸಬಹುದು. ಇದರಿಂದ ವಿಚಾರಣೆ ಮೂಲಕ ಹೋದಾಗ ಪಡೆಯಬಹುದಾಗಿರುವುದಕ್ಕಿಂತ ಫೈಸಲು ಬೇಗ ಆಗಬಹುದು ಮತ್ತು ಕಡಿಮೆ ವೆಚ್ಚವಾಗಬಹುದು.

ವಿಚ್ಛೇದನ, ಆಸ್ತಿ ವಿಭಜನೆ, ಜೀವನಾಂಶ ಅಥವಾ ಜೀವನಾಧಾರ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡ ವ್ಯಾಜ್ಯಗಳನ್ನು ವಿಭಿನ್ನ ಕಾನೂನುವ್ಯಾಪ್ತಿಗಳಲ್ಲಿ ಭಿನ್ನವಾಗಿ ನಿಭಾಯಿಸಲಾಗುತ್ತದೆ. ಹಲವುವೇಳೆ, ಕೌಟುಂಬಿಕ ವ್ಯಾಜ್ಯಗಳನ್ನು ನಿಭಾಯಿಸುವ ನ್ಯಾಯಾಲಯದ ಪ್ರಕ್ರಿಯೆಯು ಸಿವಿಲ್ ವ್ಯಾಜ್ಯದ ಪ್ರಕ್ರಿಯೆಯನ್ನು ಬಹಳವಾಗಿ ಹೋಲುತ್ತದೆ (ಅದಕ್ಕೆ ತಾಮೀಲು ಮತ್ತು ಪ್ರಕಟಣೆ ಬೇಕಾಗುತ್ತದೆ, ಮತ್ತು ತೀರ್ಪುಗಳನ್ನು ಪ್ರಕಟಿಸಲಾಗುತ್ತದೆ).

ಸಾಮಾನ್ಯ ಕಾನೂನಿನ ವ್ಯಾಪ್ತಿಗಳಲ್ಲಿ, ಕ್ರಿಮಿನಲ್ ಮೊಕದ್ದಮೆಯು ಅಪರಾಧವನ್ನು ಮಾಡಿದ್ದಾನೆಂದು ಆಪಾದಿತನಾದ ವ್ಯಕ್ತಿಯನ್ನು ನ್ಯಾಯದರ್ಶಿಗಳ ಮಹಾಮಂಡಲಿಯು ಅಭಿಯೋಗಿಸಿದಾಗ ಆರಂಭಗೊಳ್ಳುತ್ತದೆ ಅಥವಾ ಅಪರಾಧ ಮಾಡಿದ್ದಾನೆಂದು ಅಭಿಯೋಕ್ತ ಅಥವಾ ಜಿಲ್ಲಾ ನ್ಯಾಯವಾದಿ ಎಂದು ಕರೆಯಲ್ಪಡುವ ಒಬ್ಬ ಸರ್ಕಾರಿ ಅಧಿಕಾರಿಯು ಆಪಾದಿಸಿದಾಗ ಆರಂಭಗೊಳ್ಳುತ್ತದೆ.

ಸಿವಿಲ್ ಅಥವಾ ಕ್ರಿಮಿನಲ್ ಯಾವುದೇ ವ್ಯಾಜ್ಯಗಳಿರಲಿ ಕಾನೂನು ಪ್ರಕ್ರಿಯೆಯು ಅಸ್ತಿತ್ವದಲ್ಲಿದ್ದಾಗ ಒಂದು ವಿವಾದವನ್ನು ನ್ಯಾಯವಾಗಿ ಬಗೆಹರಿಸಲಾಗುವುದು ಎಂಬ ಕಲ್ಪನೆಯ ಮೇಲೆ ಆಧಾರಿತವಾಗಿರುತ್ತವೆ. ಈ ಕಾನೂನು ಪ್ರಕ್ರಿಯೆಯಿಂದ ವಿವಾದವನ್ನು ವ್ಯಾಜ್ಯದಲ್ಲಿ ಒಳಗೊಳ್ಳದ ವಾಸ್ತವಾಂಶ ಶೋಧಕನಲ್ಲಿಗೆ ತರಬಹುದು. ಇವನು ಅಪರಾಧ, ಪಾಪರಾಹಿತ್ಯ, ಬಾಧ್ಯತೆ ಅಥವಾ ದೋಷದ ಕೊರತೆಯ ವಿಷಯಗಳಿಗೆ ಸಂಬಂಧಿಸಿದ ಸತ್ಯವನ್ನು ನಿರ್ಧರಿಸಲು ಸಾಕ್ಷ್ಯಾಧಾರವನ್ನು ಮೌಲ್ಯಮಾಪಿಸಬಹುದು. ಪ್ರಕ್ರಿಯೆಯ ವಿವರಗಳು ವ್ಯಾಜ್ಯದ ಪ್ರಕಾರ ಅಥವಾ ವ್ಯಾಜ್ಯವನ್ನು ತರಲ್ಪಟ್ಟ ವ್ಯವಸ್ಥೆಯ ಪ್ರಕಾರ ಎರಡನ್ನೂ ಅವಲಂಬಿಸಬಹುದು - ಉದಾಹರಣೆಗೆ ಅದು ತನಿಖಾ ವ್ಯವಸ್ಥೆ ಅಥವಾ ಏಕಪ್ರಕರಣವೋ ಎಂಬುದನ್ನು ಅವಲಂಬಿಸಿ.[]


ಉಲ್ಲೇಖಗಳು

[ಬದಲಾಯಿಸಿ]
  1. The Oxford University Standard for Citation of Legal Authorities (4 ed.). Hart Publishers. 2012. ISBN 9781849463676. Archived from the original on 2015-09-06. Retrieved 2018-09-24.


"https://kn.wikipedia.org/w/index.php?title=ವ್ಯಾಜ್ಯ&oldid=1129867" ಇಂದ ಪಡೆಯಲ್ಪಟ್ಟಿದೆ