ವಿಷಯಕ್ಕೆ ಹೋಗು

ಏನೋ ಒಂಥರಾ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏನೋ ಒಂಥರಾ
ನಿರ್ದೇಶನ"ಮುಸ್ಸಂಜೆ" ಮಹೇಶ್
ನಿರ್ಮಾಪಕಎಂ. ಚಂದ್ರಶೇಖರ್
ಚಿತ್ರಕಥೆಮಹೇಶ್
ಕಥೆಎಸ್. ಜೆ. ಸೂರ್ಯ
ಪಾತ್ರವರ್ಗಗಣೇಶ್, ಪ್ರಿಯಾಮಣಿ, ಶರಣ್
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣಪಿ. ಕೆ. ಎಚ್. ದಾಸ್
ಸಂಕಲನದೀಪು ಎಸ್. ಕುಮಾರ್
ಸ್ಟುಡಿಯೋಉದಯಚಂದ್ರ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು2010 ನವೆಂಬರ್ 12
ಅವಧಿ158 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಏನೋ ಒಂಥರಾ 2010 ರ ಕನ್ನಡ ಭಾಷೆಯ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು "ಮುಸ್ಸಂಜೆ" ಮಹೇಶ್ ನಿರ್ದೇಶಿಸಿದ್ದು ಉದಯಚಂದ್ರ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಂ. ಚಂದ್ರಶೇಖರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಗಣೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಅವರು ಧ್ವನಿಮುದ್ರಿಕೆಯನ್ನು ರಚಿಸಿದ್ದಾರೆ. ಈ ಚಿತ್ರವು ಎಸ್ ಜೆ ಸೂರ್ಯ ನಿರ್ದೇಶಿಸಿದ ತಮಿಳಿನ ಕುಶಿ ಚಿತ್ರದ ರಿಮೇಕ್ ಆಗಿದೆ. [೧] [೨] ಆ ಚಿತ್ರವು ಈಗಾಗಲೇ ತೆಲುಗು ಮತ್ತು ಹಿಂದಿಯಲ್ಲಿ ರಿಮೇಕ್ ಆಗಿತ್ತು.

ಕಥಾವಸ್ತು

[ಬದಲಾಯಿಸಿ]

ಸೂರ್ಯ (ಗಣೇಶ್) ಮೈಸೂರಿನ ಕಾಲೇಜೊಂದರಲ್ಲಿ ವಿದ್ಯಾರ್ಥಿ. ಅವನು ತನ್ನ ಸಹಪಾಠಿ ಮಧುಮತಿ (ಪ್ರಿಯಾಮಣಿ)ಯ ಆತ್ಮವಿಶ್ವಾಸದ ಸ್ವಭಾವವನ್ನು ನೋಡಿ ಅವಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುತ್ತಾನೆ. ಆದರೆ ಅವರ ಅಹಂ ಕೇಂದ್ರಿತ ಸ್ವಭಾವವು ಅವರನ್ನು ಯಾವಾಗಲೂ ದೂರವಿರುವಂತೆ ಮಾಡುತ್ತದೆ. ಇಬ್ಬರೂ ಒಂದುಸಲ ಪರಸ್ಪರ ಪ್ರೀತಿಸುತ್ತಿರುವ ಅವರ ಸ್ನೇಹಿತರಾದ ಶಾಂತಿ ಮತ್ತು ಪ್ರಸಾದ್ ಅವರನ್ನು ಒಂದುಗೂಡಿಸಲು ಹೆಣಗಾಡುತ್ತಾರೆ. ಅವರ ಸ್ವಂತ ಪ್ರೇಮಕಥೆಗೆ ಏನಾಗುತ್ತದೆ ಎಂಬುದು ಚಿತ್ರದ ಕ್ಲೈಮ್ಯಾಕ್ಸ್ ಆಗಿದೆ.

ಪಾತ್ರವರ್ಗ

[ಬದಲಾಯಿಸಿ]

ಬಾಕ್ಸ್ ಆಫೀಸ್

[ಬದಲಾಯಿಸಿ]

ಏನೋ ಒಂಥರಾ ವಿಮರ್ಶಕರಿಂದ ಮಿಶ್ರ ಮತ್ತು ಋಣಾತ್ಮಕ ವಿಮರ್ಶೆಗಳನ್ನು ಪಡೆಯಿತು, ಅವರು ಚಲನಚಿತ್ರವನ್ನು "ಮೂಲಕ್ಕೆ ತುಂಬಾ ನಿಷ್ಠವಾಗಿದ್ದು ..ಮತ್ತು ಸಮಯ ಮೀರಿದುದು" ಎಂದು ಕರೆದರು, ಮೂಲ ಆವೃತ್ತಿಯು ಹತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿ [೩] ಫ್ಲಾಪ್ ಆಗಿತ್ತು.

ಧ್ವನಿಮುದ್ರಿಕೆ

[ಬದಲಾಯಿಸಿ]
ಟ್ರ್ಯಾಕ್ # ಹಾಡು ಗಾಯಕ(ರು) ಅವಧಿ
1 "ಗಂಡು ಮಕ್ಕಳು" ಜೆಸ್ಸಿ ಗಿಫ್ಟ್, ಅನುರಾಧ ಭಟ್ 04:18
2 "ದಿಲ್ಕುಶ್" ಸೋನು ನಿಗಮ್, ಶ್ವೇತಾ ಮೋಹನ್ 04:49
3 "ಬೂಮ್ ಬೂಮ್ ಪಾ" ರಂಜಿತ್ 04:19
4 "ಇಂತಿ ನಿನ್ನ ಪ್ರೀತಿಯ" ಸೋನು ನಿಗಮ್, ಶ್ರೇಯಾ ಘೋಷಾಲ್ 05:12
5 "ಅಂತರ ಹೀಗೇಕೆ" ಎಸ್ಪಿ ಬಾಲಸುಬ್ರಹ್ಮಣ್ಯಂ 05:10

ಹೋಮ್ ಮೀಡಿಯಾ

[ಬದಲಾಯಿಸಿ]

ಚಲನಚಿತ್ರವು ಡಿವಿಡಿಯಲ್ಲಿ 5.1 ಚಾನೆಲ್ ಸರೌಂಡ್ ಸೌಂಡ್ ಮತ್ತು ಇಂಗ್ಲಿಷ್ ಉಪಶೀರ್ಷಿಕೆಗಳು ಮತ್ತು ವಿಸಿಡಿಯೊಂದಿಗೆ ಬಿಡುಗಡೆಯಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. Hooli, Shekhar (2010-11-15). "Eno Onthara – Movie Review". Entertainment.oneindia.in. Archived from the original on 2014-08-10. Retrieved 2012-08-16.
  2. "Yeno Onthara Movie Review {3/5}: Critic Review of Yeno Onthara by Times of India". timesofindia.indiatimes.com. Archived from the original on 2022-01-20.
  3. "Eno Onthara: Too faithful to the original - Rediff.com Movies". Rediff.com. 2010-11-15. Retrieved 2012-08-16.