ವಿಷಯಕ್ಕೆ ಹೋಗು

ಮಾಸ್ಟರ್‌ ಆಫ್‌ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಂ ಬಿ ಎ ಇಂದ ಪುನರ್ನಿರ್ದೇಶಿತ)

ಮಾಸ್ಟರ್‌ ಆಫ್‌ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌ (MBA ) ವ್ಯವಹಾರ ನಿರ್ವಹಣೆಸ್ನಾತಕೋತ್ತರ ಪದವಿಯಾಗಿದ್ದು, ಹಲವು ರೀತಿಯ ಶೈಕ್ಷಣಿಕ ವಿಭಾಗಗಳಿಂದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ, 19ನೇ ಶತಮಾನದ ಕೊನೆಯ ಭಾಗದಲ್ಲಿ, ದೇಶವು ಕೈಗಾರೀಕರಣಗೊಂಡು ಹಾಗೂ ಕಂಪನಿಗಳು ಆಡಳಿತ ನಿರ್ವಹಣೆಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡಿದ್ದರಿಂದಾಗಿ, ವೃತ್ತಿ ಆಧರಿತ MBA ಪ್ರಾರಂಭವಾಯಿತು. MBA ಶಿಕ್ಷಣದ ಮೂಲ ಕೋರ್ಸುಗಳು ವಿದ್ಯಾರ್ಥಿಗಳನ್ನು ವ್ಯವಹಾರಗಳಾದ ಕರಣಿಶಾಸ್ತ್ರ, ಜಾಹಿರಾತು ಪ್ರಚಾರ‌, ಮಾನವ ಸಂಪನ್ಮೂಲ, ಕಾರ್ಯಾಚರಣಾ ನಿರ್ವಹಣೆ, ಹಾಗೂ ಇನ್ನಿತರೆ ವಿಭಾಗಗಳಿಗೆ ಪರಿಚಯಿಸುವುದಾಗಿದೆ. MBA ಶಿಕ್ಷಣ‌ದಲ್ಲಿ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ದುಕೊಳ್ಳಬಹುದಾಗಿದ್ದು, ಆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಮೂರನೇ ಒಂದು ಭಾಗದಷ್ಟು ಗಮನವನ್ನು ಕೇಂದ್ರೀಕರಿಸಬೇಕಾಗುತ್ತದೆ.

ನಿರ್ದಿಷ್ಟವಾಗಿ MBA ಶಿಕ್ಷಣಕ್ಕೆಂದೇ ಕೆಲವು ನಿಯಂತ್ರಣ ಪ್ರಾಧಿಕಾರಗಳು ಹುಟ್ಟಿಕೊಂಡಿದ್ದು, ಅವುಗಳು ವ್ಯಾವಹಾರಿಕ ಸ್ನಾತಕೋತ್ತರ ಶಿಕ್ಷಣದ ಬದ್ಧತೆ ಹಾಗೂ ಗುಣಮಟ್ಟಗಳನ್ನು ಖಾತ್ರಿ ಪಡಿಸುತ್ತವೆ. ಹಲವು ದೇಶಗಳಲ್ಲಿ ವ್ಯಾವಹಾರಿಕ ಶಿಕ್ಷಣ ಸಂಸ್ಥೆಗಳು ಪೂರ್ಣಕಾಲಿಕ, ಅರೆಕಾಲಿಕ, ಕಾರ್ಯಕಾರಿ/ಕಾರ್ಯನಿರ್ವಾಹಕ, ಹಾಗೂ ದೂರ ಶಿಕ್ಷಣದಂತಹ MBA ಶಿಕ್ಷಣ‌ವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ತಮಗಿಷ್ಟವಾದದನ್ನು ಆಯ್ದುಕೊಳ್ಳಬಹುದು.

ಹಿನ್ನೆಲೆ

[ಬದಲಾಯಿಸಿ]

ಡಾರ್ಟ್‌ಮೌತ್ ಕಾಲೇಜಿನ ಅಂಗ ಸಂಸ್ಥೆಯಾದ ದಿ ಟಕ್ ಸ್ಕೂಲ್ ಆಫ್ ಬ್ಯುಸಿನೆಸ್‌, ಯುನೈಟೆಡ್ ಸ್ಟೇಟ್ಸ್‌ನ ಪ್ರಥಮ ವ್ಯಾವಹಾರಿಕ ಸ್ನಾತಕ ಶಾಲೆಯಾಗಿದೆ. 1900ರಲ್ಲಿ ಸ್ಥಾಪಿತವಾದ ಇದು, ವಾಣಿಜ್ಯ ಕ್ಷೇತ್ರ ಶಿಕ್ಷಣದಲ್ಲಿ ಮುಂದುವರೆದ ಸ್ನಾತಕ ಪದವಿಗಳನ್ನು (ಸ್ನಾತಕೋತ್ತರ) ನೀಡಿದ ಪ್ರಥಮ ಸಂಸ್ಥೆಯಾಗಿದೆ, ಅದರಲ್ಲಿಯೂ, ಆಧುನಿಕ MBA ಪದವಿಯ ಮೂಲವಾದ ಮಾಸ್ಟರ್‌ ಆಫ್‌ ಸೈನ್ಸ್ ಎಂಬ ವಾಣಿಜ್ಯ ಪದವಿಯನ್ನು ನೀಡಿತ್ತು.

ಹಾರ್ವರ್ಡ್‌ ವಿಶ್ವವಿದ್ಯಾಲಯವು, ದಿ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ (GSBA) ಅನ್ನು 1908ರಲ್ಲಿ ಪ್ರಾರಂಭಿಸಿತು; ಅದು ವಿಶ್ವದಲ್ಲಿಯೇ ಪ್ರಥಮ MBA ಶಿಕ್ಷಣ‌ ನೀಡಿತು, ಅದರಲ್ಲಿ 15 ಅಧ್ಯಾಪಕವರ್ಗದವರ ಜೊತೆಗೆ 33 ಸಾಮಾನ್ಯ ವಿದ್ಯಾರ್ಥಿಗಳು ಹಾಗೂ 47 ವಿಶೇಷ ವಿದ್ಯಾರ್ಥಿಗಳು ಇದ್ದರು.

ಯೂನಿವರ್ಸಿಟಿ ಆಫ್‌ ಷಿ/ಶಿಕಾಗೊ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ ಸಂಸ್ಥೆಯು 1940ರಲ್ಲಿ ಪ್ರಥಮ ಬಾರಿಗೆ ವೃತ್ತಿನಿರತ ಉದ್ಯೋಗಿಗಳಿಗೆ ಕಾರ್ಯಕಾರಿ/ಕಾರ್ಯನಿರ್ವಾಹಕ MBA (EMBA) ಶಿಕ್ಷಣ‌ ನೀಡಲು ಪ್ರಾರಂಭಿಸಿತು, ಹಾಗೂ ಇವತ್ತು ಈ ರೀತಿಯ ಶಿಕ್ಷಣ‌‌ಗಳನ್ನು ಹಲವಾರು ಉದ್ಯಮ ಶಾಲೆಗಳು ನೀಡುತ್ತಿವೆ.

ಯುನೈಟೆಡ್ ಸ್ಟೇಟ್ಸ್‌ಅನ್ನು ಹೊರತುಪಡಿಸಿದರೆ, 1950ರಲ್ಲಿ, ಕೆನಡಾವೆಸ್ಟ್ರನ್ ಒಂಟಾರಿಯೋ ವಿಶ್ವವಿದ್ಯಾಲಯವು ಪ್ರಥಮ ಬಾರಿಗೆ,[] ಹಾಗೂ ನಂತರ 1951ರಲ್ಲಿ ದಕ್ಷಿಣ ಆಫ್ರಿಕಾಪ್ರಿಟೋರಿಯಾ ವಿಶ್ವವಿದ್ಯಾಲಯವು MBA ಪದವಿಗಳನ್ನು ನೀಡಿತು.[] ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವ್ಹಾರ್ಟನ್ ಸ್ಕೂಲ್‌ ಸಂಸ್ಥೆಯು 1955ರಲ್ಲಿ ಏಷ್ಯಾದ ಪ್ರಥಮ ಆರ್ಥಿಕ ಶಾಲೆ ಪಾಕಿಸ್ತಾನಕರಾಚಿಯಲ್ಲಿನ ಇನ್‌ಸ್ಟಿಟ್ಯೂಟ್ ಆಫ್‌ ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್‌ ಸ್ಥಾಪನೆಯಾಯಿತು. 1957ರಲ್ಲಿ INSEAD ಸಂಸ್ಥೆಯು, MBA ಶಿಕ್ಷಣ‌ ನೀಡಿದ ಪ್ರಥಮ ಐರೋಪ್ಯ ಆರ್ಥಿಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.[ಸೂಕ್ತ ಉಲ್ಲೇಖನ ಬೇಕು]

MBA ಪದವಿಯನ್ನು ಪ್ರಪಂಚದ ಎಲ್ಲ ವಿಶ್ವವಿದ್ಯಾಲಯಗಳು ಅಳವಡಿಸಿಕೊಂಡಿವೆ, ಇವುಗಳಲ್ಲಿ ಮುಂದುವರಿದ ಹಾಗೂ ಮುಂದುವರಿಯುತ್ತಿರುವ ರಾಷ್ಟ್ರಗಳೂ ಸೇರಿವೆ.[]

ಮಾನ್ಯತೆ ನೀಡಿಕೆ

[ಬದಲಾಯಿಸಿ]

ಉದ್ಯಮ ಶಾಲೆಗಳು ಅಥವಾ MBA ಶಿಕ್ಷಣ‌ವು ಹೊರಗಿನ ಸಂಸ್ಥೆಗಳಿಂದ ಮಾನ್ಯತೆಯನ್ನು ಪಡೆಯಬೇಕಾಗಿದ್ದು, ಇದು ವಿದ್ಯಾರ್ಥಿಗಳಿಗೆ ಹಾಗೂ ನೌಕರಿ ನೀಡುವವರಿಗೆ ಒಂದು ಗುಣಮಟ್ಟದ ಬಗೆಗಿನ ಸ್ವತಂತ್ರ ಅಭಿಪ್ರಾಯ ಹೊಂದಲು ಹಾಗೂ ಶಾಲೆಗಳ ಪಠ್ಯಕ್ರಮಗಳು ನಿರ್ದಿಷ್ಟ ಗುಣಮಟ್ಟದ್ದಾಗಿದೆ ಎಂನ್ನುವ ಮಾಹಿತಿಯನ್ನು ನೀಡುತ್ತವೆ. ಯುನೈಟೆಡ್ ಸ್ಟೇಟ್ಸ್‌ನ ಮೂರು ಪ್ರಮುಖ ಮಾನ್ಯತಾ ಪ್ರಾಧಿಕಾರಗಳೆಂದರೆ, ಸಂಶೋಧನಾ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುವ ಅಸೋಸಿಯೇಷನ್ ಟು ಅಡ್ವಾನ್ಸ್ ಕಾಲೆಜಿಯೇಟ್ ಸ್ಕೂಲ್ಸ್ ಆಫ್ ಬ್ಯುಸಿನೆಸ್ (AACSB), ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಿಗೆ ಮಾನ್ಯತೆ ನೀಡುವ ಅಸೋಸಿಯೇಷನ್‌ ಆಫ್‌ ಕಾಲೆಜಿಯೇಟ್ ಆಫ್ ಬ್ಯುಸಿನೆಸ್ ಸ್ಕೂಲ್ಸ್ ಅಂಡ್ ಪ್ರೋಗ್ರಾಮ್ಸ್‌ (ACBSP),ಹಾಗೂ US ಹೊರಗಡೆ ಸ್ಥಾಪಿಸಲಾಗುವ ವಿದ್ಯಾಲಯಗಳಿಗೆ ಮಾನ್ಯತೆ ನೀಡುವ ಇಂಟರ್‌ನ್ಯಾಷನಲ್ ಅಸೆಂಬ್ಲಿ ಫಾರ್ ಕಾಲೆಜಿಯೇಟ್ ಬ್ಯುಸಿನೆಸ್ ಎಜ್ಯುಕೇಷನ್ (IACBE),[]. AACSB ಹಾಗೂ ACBSPಗಳು ಯುನೈಟೆಡ್ ಸ್ಟೇಟ್ಸ್‌ನ ಕೌನ್ಸಿಲ್ ಫಾರ್ ಹೈಯರ್ ಎಜ್ಯುಕೇಷನ್ ಅಕ್ರೆಡಿಟೇಷನ್‌ನಿಂದ (CHEA) ಮಾನ್ಯತೆ ಪಡೆಯುತ್ತವೆ.[] ವಿದ್ಯಾರ್ಥಿಗಳಿಗೆ ಆರೋಗ್ಯ ನಿರ್ವಹಣಾ ಕ್ಷೇತ್ರದಲ್ಲಿ ಪರಿಣಿತ ತರಬೇತಿ ನೀಡುವ MBA ಶಿಕ್ಷಣ‌ವೂ ಸಹ ಕಮಿಷನ್ ಆನ್ ದಿ ಅಕ್ರೆಡಿಟೇಷನ್ ಆಫ್ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಎಜ್ಯುಕೇಷನ್‌ನಿಂದ (CAHME) ಮಾನ್ಯತೆ ಪಡೆಯಲೂ ಅರ್ಹವಾಗಿರುತ್ತವೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಯಾವುದೇ ಒಂದು ಮಹಾವಿದ್ಯಾಲಯ ಅಥವಾ ವಿಶ್ವವಿದ್ಯಾಲಯ ಸಂಪೂರ್ಣವಾಗಿ ಮಾನ್ಯತೆ ಪಡೆದಿದ್ದರೆ ಮಾತ್ರ MBA ಶಿಕ್ಷಣ‌‌ದ ಮಾನ್ಯತೆಗೆ ಅರ್ಹವಾಗುತ್ತದೆ. ಶಿಕ್ಷಣ ಕೇಂದ್ರಗಳಿಗೆ ಸಂಪೂರ್ಣ ಮಾನ್ಯತೆ ನೀಡುವ ಪ್ರಾಧಿಕಾರಗಳೆಂದರೆ ಕೌನ್ಸಿಲ್ ಫಾರ್ ಹೈಯರ್ ಎಜ್ಯುಕೇಷನ್ ಅಕ್ರೆಡಿಟೇಷನ್‌(CHEA): ಮಿಡ್ಲ್ ಸ್ಟೇಟ್ಸ್ ಅಸೋಸಿಯೇಷನ್‌ ಆಫ್‌ ಕಾಲೇಜಸ್ ಅಂಡ್ ಸ್ಕೂಲ್ಸ್ (MSA), ನ್ಯೂ ಇಂಗ್ಲೆಂಡ್ ಅಸೋಸಿಯೇಷನ್‌ ಆಫ್‌ ಸ್ಕೂಲ್ಸ್ ಅಂಡ್ ಕಾಲೇಜಸ್ (NEASCSC), ಹೈಯರ್ ಲರ್ನಿಂಗ್ ಕಮಿಷನ್ ಅಫ್ ದಿ ನಾರ್ಥ್ ಸೆಂಟ್ರಲ್ ಅಸೋಸಿಯೇಷನ್‌ ಆಫ್‌ ಕಾಲೇಜಸ್ ಅಂಡ್ ಸ್ಕೂಲ್ಸ್ (HLC), ನಾರ್ತ್‌ವೆಸ್ಟ್ ಕಮಿಷನ್ ಆನ್ ಕಾಲೇಜಸ್ ಅಂಡ್ ಯೂನಿವರ್ಸಿಟೀಸ್ (NWCCU), ಸದರನ್ ಅಸೋಸಿಯೇಷನ್‌ ಆಫ್‌ ಕಾಲೇಜಸ್ ಅಂಡ್ ಸ್ಕೂಲ್ಸ್ (SACS), ಹಾಗೂ ವೆಸ್ಟ್ರನ್ ಅಸೋಸಿಯೇಷನ್‌ ಆಫ್‌ ಸ್ಕೂಲ್ಸ್ ಅಂಡ್ ಕಾಲೇಜಸ್ (WASC).[]

ಯುನೈಟೆಡ್ ಸ್ಟೇಟ್ಸ್‌ ಹೊರಗಡೆ ಮಾನ್ಯತೆ ನೀಡುವ ಕೇಂದ್ರಗಳೆಂದರೆ ಪ್ರಪಂಚದಾದ್ಯಂತ MBA, DBA ಹಾಗೂ MBM ಶಿಕ್ಷಣ‌‌ಗಳಿಗೆ ಮಾನ್ಯತೆ ನೀಡುವ UK ಮೂಲದ ಸಂಸ್ಥೆಯಾದ ಅಸೋಸಿಯೇಷನ್‌ ಆಫ್‌ MBAಗಳು (AMBA), ಭಾರತದಾದ್ಯಂತ MBA ಹಾಗೂ PGDM ಶಿಕ್ಷಣ‌‌ಗಳಿಗೆ ಮಾನ್ಯತೆ ನೀಡುವ ಸರ್ಕಾರಿ ಮಾನ್ಯತಾ ಪ್ರಾಧಿಕಾರಗಳಾದ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಷನ್‌ (AICTE), ದಕ್ಷಿಣ ಆಫ್ರಿಕಾದ ದಿ ಕೌನ್ಸಿಲ್ ಆನ್ ಹೈಯರ್ ಎಜ್ಯುಕೇಷನ್ (CHE), ಹಲವು ಯುರೋಪಿಯನ್ ಹಾಗೂ ಏಷ್ಯಾದ ಶಾಲೆಗಳಿಗೆ ಮಾನ್ಯತೆ ನೀಡುವ ಯುರೋಪಿಯನ್ ಕ್ವಾಲಿಟಿ ಇಂಪ್ರೂವ್‌ಮೆಂಟ್ ಸಿಸ್ಟಮ್ (EQUIS), ಹಾಗೂ ಯುರೋಪ್‌ನಲ್ಲಿನ ದಿ ಫೌಂಡೇಷನ್ ಫಾರ್ ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ ಅಕ್ರೆಡಿಟೇಷನ್ (FIBAA).

MBA ಶಿಕ್ಷಣ‌ದ ಮೂಲ ವಿಧಗಳು

[ಬದಲಾಯಿಸಿ]

ಎರಡು ವರ್ಷಗಳ (ಪೂರ್ಣಾವಧಿ) MBA ಶಿಕ್ಷಣ‌ವು ಸಾಮಾನ್ಯವಾಗಿ ಎರಡು ಶೈಕ್ಷಣಿಕ ವರ್ಷಗಳ ಕಾಲ ನಡೆಯುತ್ತದೆ (i.e. ಸರಿಸುಮಾರು 18 ತಿಂಗಳುಗಳ ಕಾಲಾವಧಿ). ಉದಾಹರಣೆಗೆ ಉತ್ತರ ಗೋಳಾರ್ಧ ಪ್ರದೇಶಗಳಲ್ಲಿ ವರ್ಷದ ಆಗಸ್ಟ್‌ ನಂತರ‌/ಸೆಪ್ಟೆಂಬರ್‌ ತಿಂಗಳಿನಲ್ಲಿ ಆರಂಭವಾಗಿ ಎರಡನೇ ವರ್ಷದ ಮೇ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ, ಹಾಗೂ ಮೊದಲನೆ ಮತ್ತು ಎರಡನೇ ವರ್ಷದ ನಡುವೆ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಬೇಸಿಗೆ ರಜೆಯನ್ನು ನೀಡಲಾಗುತ್ತದೆ. ಇದರ ವಿದ್ಯಾರ್ಥಿಗಳು ವಾಸ್ತವದ ವ್ಯಾವಹಾರಿಕ ಪ್ರಪಂಚದ ಬಗ್ಗೆ ಮುಂಚೆಯೇ ತಕ್ಕ ಮಟ್ಟಿನ ಕಾರ್ಯಾನುಭವವನ್ನು ಹೊಂದಿರುತ್ತಾರೆ ಹಾಗೂ ಇತರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಂತೆಯೇ ಅವರೂ ಕೂಡ ವಾರದ ದಿನಗಳಲ್ಲಿ ಬೋಧನಾ ತರಗತಿಗಳಿಗೆ ಹಾಜರಾಗಬೇಕು.

ತ್ವರಿತ MBA ಶಿಕ್ಷಣ‌ಗಳು ಎರಡು ವರ್ಷದ ಶಿಕ್ಷಣ‌‌ಗಳ ಮಾರ್ಪಾಡಾಗಿರುವ ಆವೃತ್ತಿಯಾಗಿದೆ. ಅವುಗಳು ಹೆಚ್ಚಿನ ಪಠ್ಯದ ಹೊರೆ ಜೊತೆಗೆ ಅತಿ ಹೆಚ್ಚಿನ ತರಗತಿ ಸಮಯಗಳು ಹಾಗೂ ಪರೀಕ್ಷೆಗಳನ್ನೂ ಹೊಂದಿವೆ. ಸಾಮಾನ್ಯವಾಗಿ ಅವುಗಳ ಶಿಕ್ಷಣ‌‌ದ ಅವಧಿಯ ನಡುವೆ ಹಾಗೂ ಸೆಮಿಸ್ಟರ್‌ಗಳ ನಡುವೆ, ಕಡಿಮೆ "ನಿಷ್ಕ್ರಿಯಾವಧಿ " ಹೊಂದಿರುತ್ತವೆ. ಉದಾಹರಣೆಗೆ, ಅದರಲ್ಲಿ ಮೂರರಿಂದ ನಾಲ್ಕು ತಿಂಗಳುಗಳ ಬೇಸಿಗೆ ರಜೆ ಇರುವುದಿಲ್ಲ, ಹಾಗೂ ಸೆಮಿಸ್ಟರ್‌ಗಳ ಮಧ್ಯದಲ್ಲಿ ಮೂರರಿಂದ ಐದು ವಾರಗಳ ಬದಲಿಗೆ ಕೇವಲ ಏಳರಿಂದ ಎಂಟು ದಿನಗಳ ರಜೆ ನೀಡಲಾಗುತ್ತದೆ.

ಅರೆಕಾಲಿಕ MBA ಶಿಕ್ಷಣ‌ಗಳು ಸಾಮಾನ್ಯವಾಗಿ ವಾರದ ದಿನಗಳ ಸಂಜೆಗಳಲ್ಲಿ, ಸಾಮಾನ್ಯ ಕಾರ್ಯಾವಧಿ ಮುಗಿದ ನಂತರ, ಅಥವಾ ವಾರಾಂತ್ಯದಲ್ಲಿ ನಡೆಸಲಾಗುತ್ತದೆ. ಅರೆಕಾಲಿಕ ಶಿಕ್ಷಣ‌ಗಳು ಸಾಮಾನ್ಯವಾಗಿ ಮೂರು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ನಡೆಯುತ್ತವೆ. ಈ ಶಿಕ್ಷಣ‌‌ಗಳ ವಿದ್ಯಾರ್ಥಿಗಳು ಬಹುತೇಕ ವೃತ್ತಿನಿರತರಾಗಿದ್ದು, ಪಠ್ಯವನ್ನು ಹಂತ ಹಂತವಾಗಿ ಹೆಚ್ಚು ಕಾಲ ಅಭ್ಯಾಸ ಮಾಡಿ ಪದವಿಯನ್ನು ಸಂಪಾದಿಸುತ್ತಾರೆ.

ಎಕ್ಸಿಕ್ಯುಟೀವ್ MBA (EMBA) ಶಿಕ್ಷಣ‌ಗಳು ನಿರ್ವಾಹಕರು ಹಾಗೂ ಕಾರ್ಯನಿರ್ವಾಹಕರಿಗೆ ಬೇಕಾದಂತಹ ವಿದ್ಯಾರ್ಹತೆಗಾಗಿ ಅಭಿವೃದ್ದಿ ಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಎರಡು ಅಥವಾ ಅದಕ್ಕಿಂತ ಕಡಿಮೆ ವರ್ಷದಲ್ಲಿ ತಮ್ಮ ಪೂರ್ಣಾವಧಿಯ ಕೆಲಸವನ್ನು ಮಾಡಿಕೊಂಡು MBA ಅಥವಾ ಇನ್ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದ ಪದವಿಯನ್ನು ಪಡೆಯಲು ಸಹಾಯಕವಾಗಿದೆ. ಅಭ್ಯರ್ಥಿಗಳು ಎಲ್ಲ ರೀತಿಯ ಹಾಗೂ ಗಾತ್ರದ ಸಂಸ್ಥೆಗಳಿಂದ ಬರುತ್ತಾರೆ– ಲಾಭದಾಯಕ, ಲಾಭನಿರಪೇಕ್ಷ, ಸರ್ಕಾರಿ — ಹಾಗೂ ಇನ್ನಿತರ ರೀತಿಯ ಉದ್ಯಮಗಳಿಂದ ಬರುತ್ತಾರೆ. ಇತರೆ MBA ವಿದ್ಯಾರ್ಥಿಗಳಿಗೆ ಹೋಲಿಸಿದರೆ, EMBA ವಿದ್ಯಾರ್ಥಿಗಳು ಕಾರ್ಯ ನಿರ್ವಹಣೆಯಲ್ಲಿ 10 ವರ್ಷಗಳು ಅಥವಾ ಅದಕ್ಕಿಂತ ಮೇಲ್ಪಟ್ಟು ಉನ್ನತ ಮಟ್ಟದ ಅನುಭವ ಹೊಂದಿರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ EMBA ಶಿಕ್ಷಣ‌‌ಗಳನ್ನು ನೀಡುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಹಾಗೂ ಕಾರ್ಯನಿರ್ವಾಹಕ ಶಿಕ್ಷಣವನ್ನು ಅಭಿವೃದ್ಧಿ ಪಡಿಸಲು, 1981ರಲ್ಲಿ ದಿ ಎಕ್ಸಿಕ್ಯುಟೀವ್ MBA ಕೌನ್ಸಿಲ್‌ಅನ್ನು ಸ್ಥಾಪಿಸಲಾಯಿತು.

ದೂರ ಶಿಕ್ಷಣ MBA ತರಗತಿಗಳನ್ನು ಶಿಕ್ಷಣ ಸಂಸ್ಥೆಯ ಆವರಣದ ಹೊರಗೆ ನಡೆಸಲಾಗುತ್ತದೆ. ಈ ಶಿಕ್ಷಣ‌ಗಳನ್ನು ವಿವಿಧ ರೀತಿಯಲ್ಲಿ ನೀಡಲಾಗುತ್ತಿದೆ: ಪಠ್ಯಕ್ರಮವನ್ನು ಅಂಚೆಯ ಮೂಲಕ ಕಳುಹಿಸುವ ಅಂಚೆ ತೆರಪಿನ ಶಿಕ್ಷಣ ಅಥವಾ ಮಿಂಚಂಚೆ/ಇಮೇಲ್‌, ಪರಸ್ಪರ ಸಂವಾದವಿಲ್ಲದ ವಿಡಿಯೋ ಬಿತ್ತರಣೆ, ಮೊದಲೇ ಚಿತ್ರಿಸಲಾದ ವಿಡಿಯೊ, ನೇರ ದೂರಸಂಪರ್ಕ ಗೋಷ್ಠಿ ಅಥವಾ ವಿಡಿಯೋ ಕಾನ್ಫರೆನ್ಸ್‌, ಆಫ್‌ಲೈನ್ ಅಥವಾ ಆನ್‌ಲೈನ್ ಗಣಕಗಳ ಕೋರ್ಸುಗಳು. ಹಲವು ಪ್ರತಿಷ್ಠಿತ ಶಾಲೆಗಳು ಈ ರೀತಿಯ ಶಿಕ್ಷಣ‌ಗಳನ್ನು ನೀಡುತ್ತವೆ; ಆದಾಗ್ಯೂ, ಅನೇಕ ಡಿಪ್ಲೋಮಾ ಕೇಂದ್ರಗಳು ಸಹಾ ಇದನ್ನೇ ಮಾಡುತ್ತಿವೆ.

ದ್ವಿಮುಖ MBA ಶಿಕ್ಷಣ‌ಗಳಲ್ಲಿ MBA ಪದವಿಯನ್ನು ಮತ್ತೊಂದರ ಜೊತೆಗೆ ಸೇರಿಸಿ ನೀಡಲಾಗುತ್ತದೆ (ಉದಾಹರಣೆಗೆ MS ಅಥವಾ J.D., etc) ಇದರಿಂದಾಗಿ ವಿದ್ಯಾರ್ಥಿಗಳಿಗೆ ವೆಚ್ಚ ಕಡಿತಗೊಳಿಸಿ (ಸಾಮಾನ್ಯವಾಗಿ ದ್ವಿಮುಖ ಶಿಕ್ಷಣಗಳಲ್ಲಿ 2 ಪದವಿಗಳನ್ನು ಬೇರೆಬೇರೆಯಾಗಿ ಅಧ್ಯಯನ ಮಾಡುವುದಕ್ಕಿಂತ ಕಡಿಮೆ ಖರ್ಚಾಗುತ್ತದೆ), ಶಿಕ್ಷಣಾಭ್ಯಾಸದ ಸಮಯವನ್ನು ಉಳಿತಾಯ ಮಾಡಲು ಹಾಗೂ ತಮಗೆ ಬೇಕಾದಂತಹ ಉದ್ಯಮ ಶಿಕ್ಷಣದ ಕೋರ್ಸುಗಳನ್ನು ಪಡೆಯಬಹುದಾಗಿದೆ. ಕೆಲವು ಉದ್ಯಮ ಶಾಲೆಗಳು ವಿದ್ಯಾರ್ಥಿಗಳಿಗೆ ಉದ್ಯಮ ನಿರ್ವಹಣೆಯಲ್ಲಿ ಸ್ನಾತಕ ಪದವಿ ಹಾಗೂ MBA ಶಿಕ್ಷಣ‌ಗಳನ್ನು ಜೊತೆಯಾಗಿ ಕೇವಲ ನಾಲ್ಕು ಅಥವಾ ಐದು ವರ್ಷಗಳಲ್ಲಿ ಮಾಡಬಹುದಾದಂತಹ ಅವಕಾಶಗಳನ್ನು ಒದಗಿಸುತ್ತಿವೆ.

ಪ್ರವೇಶಾತಿಯ ಮಾನದಂಡ

[ಬದಲಾಯಿಸಿ]

ಹಲವು ಶಿಕ್ಷಣಗಳಿಗೆ ಗ್ರಾಜ್ಯುಯೇಟ್ ಮ್ಯಾನೇಜ್‌ಮೆಂಟ್ ಅಡ್ಮಿಷನ್ ಟೆಸ್ಟ್‌ (GMAT) ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ, ಇದರಲ್ಲಿ ಕಾರ್ಯಕ್ಷೇತ್ರದ ಅನುಭವ, ಶೈಕ್ಷಣಿಕ ಅರ್ಹತೆಗಳು, ಪ್ರಬಂಧಗಳು, ಪ್ರಮಾಣೀಕರಣ ಅಥವಾ ಶಿಫಾರಸ್ಸು ಪತ್ರಗಳು ಹಾಗೂ ನೇರ ಸಂದರ್ಶನಗಳನ್ನು ಒಳಗೊಂಡಿದೆ. ಕೆಲವು ಶಿಕ್ಷಣಸಂಸ್ಥೆಗಳು GMATನಂತೆಯೇ ಗ್ರಾಜ್ಯುಯೇಟ್ ರೆಕಾರ್ಡ್ ಎಗ್ಸಾಮಿನೇಷನ್ (GRE) ಅನ್ನು ಕೂಡ ಅಂಗೀಕರಿಸುತ್ತವೆ.[] ವಿದ್ಯಾಲಯಗಳೂ ಸಹಾ ಪಠ್ಯೇತರ ಚಟುವಟಿಕೆಗಳಾದ ಸಾಂಘಿಕ ಸೇವಾ ಕ್ರಿಯೆಗಳಿಂದ ವಿದ್ಯಾರ್ಥಿ ಹೇಗೆ ತನ್ನ ವೈವಿಧ್ಯತೆಯನ್ನು ಹೆಚ್ಚಿಸಿಕೊಳ್ಳುತ್ತಾನೆ ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಯಾವ ರೀತಿಯಲ್ಲಿ ಪ್ರಯೋಜನವಾಗುತ್ತಾನೆ ಎಂಬುದರ ಬಗ್ಗೆ ಆಸಕ್ತಿ ಹೊಂದಿರುತ್ತವೆ. ಪ್ರವೇಶ ಬಯಸುವವರಿಗೆ ಈ ಎಲ್ಲ ಅರ್ಹತೆಗಳೂ ಇರಬೇಕಾಗುತ್ತದೆ; ಆದರೂ, ಕೆಲವು ಶಾಲೆಗಳು ಇತರೆ ಅಂಶಗಳಿಗೆ ಪ್ರಾಮುಖ್ಯತೆ ನೀಡುವಂತೆ GMAT ಅಂಕಗಳನ್ನು ಪುರಸ್ಕರಿಸುವುದಿಲ್ಲ. ವೈವಿಧ್ಯತೆ ಹೊಂದುವ ಸಲುವಾಗಿ, ಉದ್ಯಮ ಶಾಲೆಗಳು ಪುರುಷ ಹಾಗೂ ಮಹಿಳೆಯರ ಅನುಪಾತ ಮತ್ತು ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಅನುಪಾತಗಳನ್ನು ನೋಡುತ್ತವೆ.

ಶಿಕ್ಷಣ‌ದಲ್ಲಿರುವ ವಿಷಯಗಳು

[ಬದಲಾಯಿಸಿ]

ಹಲವು ಉನ್ನತ MBA ಶಿಕ್ಷಣಗಳು ತಮ್ಮ ಮೂಲ ಕೋರ್ಸುಗಳಿಗೆ ಅವಶ್ಯವಿರುವ ಬಹುತೇಕ ಒಂದೇ ರೀತಿಯ ವಿಷಯಗಳನ್ನು ಒಳಗೊಂಡಿವೆ. MBA ಶಿಕ್ಷಣ‌ದಲ್ಲಿ ಇರಬಹುದಾದ ಸಂಪೂರ್ಣ ಪಠ್ಯಕ್ರಮದ ಮಾಹಿತಿಗಾಗಿ, Wikiversity MBA ವಿಷಯ ಪುಟದಲ್ಲಿರುವ ಸ್ಥೂಲ ಸಮೀಕ್ಷೆಯನ್ನು ನೋಡಿರಿ. MBA ಶಿಕ್ಷಣಗಳು ಹಲವಾರು ವಿಷಯಗಳನ್ನು ಪರಿಚಯಿಸುವುದರಿಂದ ವಿದ್ಯಾರ್ಥಿಗಳಿಗೆ ತಾವು ಪರಿಣಿತಿ ಹೊಂದಲು ಬಯಸುವ ನಿರ್ದಿಷ್ಟ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸಹಾಯಕವಾಗಿದೆ. ಪ್ರಥಮ ವರ್ಷದ ಶಿಕ್ಷಣ‌ದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ವಿಷಯಗಳನ್ನು ವಿಸ್ತಾರವಾಗಿ ಅಭ್ಯಾಸ ಮಾಡುತ್ತಾರೆ, ಹಾಗೂ ಎರಡನೇ ವರ್ಷದಲ್ಲಿ ಪರಿಣಿತ ಕ್ಷೇತ್ರದ ವಿಷಯಗಳನ್ನು ಅಭ್ಯಾಸ ಮಾಡುತ್ತಾರೆ. ಪೂರ್ಣಾವಧಿಯ ವಿದ್ಯಾರ್ಥಿಗಳು ಮಧ್ಯಂತರ ಬಿಡುವಿನ ಅವಧಿಯಲ್ಲಿ ಹಂಗಾಮಿ ಉದ್ಯೋಗ ಮಾಡಬೇಕಾಗುತ್ತದೆ. ಪರಿಣಿತಿ ಹೊಂದಬಹುದಾದ ವಿಷಯಗಳೆಂದರೆ: ಕರಣಿಶಾಸ್ತ್ರ; ಅರ್ಥಶಾಸ್ತ್ರ; ವಾಣಿಜ್ಯೋದ್ಯಮ; ಹಣಕಾಸು‌; ಅಂತರರಾಷ್ಟ್ರೀಯ ಉದ್ಯಮ; ಕಾರ್ಯಾಚರಣೆ ನಿರ್ವಹಣೆ; ಸಾಂಸ್ಥಿಕ ನಡವಳಿಕೆ; ಜಾಹಿರಾತು ಪ್ರಚಾರ; ಸ್ಥಿರಾಸ್ತಿ ಮಾರಾಟ; ಹಾಗೂ ಕೌಶಲ್ಯಗಳು, ಸೇರಿದಂತೆ ಉಳಿದವುಗಳು.

ಯುರೋಪ್‌ನಲ್ಲಿ MBA ಪದವಿ

[ಬದಲಾಯಿಸಿ]

ಯುರೋಪಿನ ಇತಿಹಾಸದಲ್ಲಿ MBA

[ಬದಲಾಯಿಸಿ]

INSEAD ವಿಶ್ವವಿದ್ಯಾಲಯವು 1957ರಲ್ಲಿ, MBA ಪದವಿ ನೀಡಿದ ಪ್ರಥಮ ಐರೋಪ್ಯ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು, ಅನಂತರ 1964ರಲ್ಲಿ IESE (ಯುರೋಪಿನ ಪ್ರಥಮ ಸಂಪೂರ್ಣ ಎರಡು ವರ್ಷಗಳ ಶಿಕ್ಷಣ‌), ನಂತರ 1964ರಲ್ಲಿ UCD ಸ್ಮರ್‌ಫಿಟ್ ಬ್ಯುಸಿನೆಸ್ ಸ್ಕೂಲ್, ಮ್ಯಾಂಚೆಸ್ಟರ್ ಬ್ಯುಸಿನೆಸ್ ಸ್ಕೂಲ್ ಹಾಗೂ ಲಂಡನ್‌ ಬ್ಯುಸಿನೆಸ್ ಸ್ಕೂಲ್ 1965ರಲ್ಲಿ, ಡಬ್ಲಿನ್ ವಿಶ್ವವಿದ್ಯಾಲಯ (ಟ್ರಿನಿಟಿ ಕಾಲೇಜು), 1966ರಲ್ಲಿ ರೊಟ್ಟರ್‌ಡ್ಯಾಮ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, 1967ರ ಕ್ರಾನ್‌ಫೀಲ್ಡ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ 1969ರಲ್ಲಿ HEC ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ (ಫ್ರೆಂಚ್‌ನಲ್ಲಿ, École des Hautes Études Commerciales‌) ಹಾಗೂ Institut d'Etudes Politiques de Paris ಸಂಸ್ಥೆಗಳು ಈ ಶಿಕ್ಷಣವನ್ನು ನೀಡಲಾರಂಭಿಸಿದವು. ಪ್ರಥಮ ಬಾರಿಗೆ 1991ರಲ್ಲಿ, ಮಧ್ಯ ಹಾಗೂ ಪೂರ್ವಪ್ರಾಚ್ಯಗಳ ಪೂರ್ವ-ಸಮಾಜವಾದಿ ಬ್ಲಾಕ್‌ಗಳಲ್ಲಿ IEDC-ಬ್ಲೆಡ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯು MBA ಪದವಿಯನ್ನು ನೀಡಿತು. ಯುರೋಪ್‌ನ ಉದ್ಯಮ ಶಾಲೆಗಳ ಪಟ್ಟಿಯನ್ನು ನೋಡಿರಿ

ಬೊಲೊಗ್ನ/ಬೊಲೊನ್ಯ ಒಡಂಬಡಿಕೆ

[ಬದಲಾಯಿಸಿ]

ಯುರೋಪ್‌ನಲ್ಲಿ, ಇತ್ತೀಚಿನ ಬೊಲೊಗ್ನ/ಬೊಲೋನ್ಯ ಒಡಂಬಡಿಕೆಯು, ಉನ್ನತ ವ್ಯಾಸಂಗದ ಮೂರೂ ಹಂತಗಳಲ್ಲಿ ಏಕರೂಪತೆಯನ್ನು ತಂದಿತು: ಸ್ನಾತಕ (ಮೂರು ವರ್ಷಗಳು), ಸ್ನಾತಕೋತ್ತರ (ಮೂರು ಅಥವಾ ನಾಲ್ಕು ವರ್ಷಗಳ ಸ್ನಾತಕ ಪದವಿಯೊಂದಿಗೆ ಒಂದು ಅಥವಾ ಎರಡು ವರ್ಷಗಳು), ಹಾಗೂ ಡಾಕ್ಟರೇಟ್ (ಸ್ನಾತಕೋತ್ತರ ಪದವಿಯ ಜೊತೆಗೆ ಮತ್ತೆ ಮೂರು ಅಥವಾ ನಾಲ್ಕು ವರ್ಷಗಳು). ವಿದ್ಯಾರ್ಥಿಗಳು ಯಾವುದೇ ಐರೋಪ್ಯ ಸಂಸ್ಥೆಗಳಲ್ಲಿ ಪಡೆದ ಪ್ರಾರಂಭಿಕ ಸ್ನಾತಕ ಪದವಿಯ ನಂತರ ವೃತ್ತಿಪರ ಅನುಭವವನ್ನು ಹೊಂದಬಹುದಾಗಿದ್ದು ನಂತರದಲ್ಲಿ ಯೂರೋಪಿಯನ್‌‌ ಕ್ರೆಡಿಟ್ ಟ್ರಾನ್ಸ್‌ಫರ್ ಅಂಡ್ ಅಕ್ಯುಮಿಲೇಷನ್ ಸಿಸ್ಟಂನಿಂದಾಗಿ ಇನ್ನಿತರೆ ಯಾವುದೇ ಐರೋಪ್ಯ ಸಂಸ್ಥೆಯಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಮುಗಿಸಬಹುದಾಗಿದೆ. ಇದೇ ಕಾರಣಕ್ಕಾಗಿ ಐರೋಪ್ಯ ಮ್ಯಾನೇಜ್‌ಮೆಂಟ್ ಸ್ನಾತಕೋತ್ತರ ಪದವಿಯು ವೈಜ್ಞಾನಿಕ ವಿಷಯಗಳನ್ನೊಳಗೊಂಡ ಅಮೆರಿಕಾದ MBAಗೆ ಸರಿಸಮನಾಗಿದೆ; ಉದಾಹರಣೆಗೆ ಐರೋಪ್ಯ MBA ಸಾಮಾನ್ಯವಾಗಿ ಸ್ನಾತಕೋತ್ತರದ ಪ್ರೌಢ ಪ್ರಬಂಧವನ್ನು ಬರೆದು ಅದಕ್ಕೆ ಸರಿಯಾದ ಸಮರ್ಥನೆ ನೀಡಬೇಕಾಗುತ್ತದೆ.

ಮಾನ್ಯತಾ ಪ್ರಕ್ರಿಯೆ

[ಬದಲಾಯಿಸಿ]

ಯುರೋಪಿನಲ್ಲಿ ಮಾನ್ಯತಾ ಪ್ರಕ್ರಿಯೆಯ ಮಾನಕಗಳು ಏಕರೂಪದಲ್ಲಿಲ್ಲ. ಕೆಲವು ದೇಶಗಳಲ್ಲಿ ಮಾನ್ಯತೆ ಪಡೆಯಲು ಕಾನೂನಿನ ಅನ್ವಯ ಕೆಲವು ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ (e.g. ಜರ್ಮನ್ ದೇಶದ ಹಲವು ರಾಜ್ಯಗಳಲ್ಲಿ), ಮತ್ತೆ ಕೆಲವು ದೇಶಗಳಲ್ಲಿ, ಮಾನ್ಯತೆ ಪಡೆಯಲು ಕೆಲವು ರೀತಿಯ ವಿಶ್ವವಿದ್ಯಾಲಯಗಳು ಮಾತ್ರ ಕಾನೂನಿನ ಅನ್ವಯ ಕೆಲವು ಬೇಡಿಕೆಗಳನ್ನು ಪೂರೈಸಬೇಕಾಗಿದ್ದು (e.g. ಆಸ್ಟ್ರಿಯಾ), ಹಾಗೂ ಬೇರೆಡೆಗಳಲ್ಲಿ ಮಾನ್ಯತೆ ಪಡೆಯಲು ಯಾವುದೇ ರೀತಿಯ ಕಾನೂನುಗಳಿಲ್ಲ. ಯಾವುದೇ ರೀತಿಯ ಕಾನೂನುಗಳು ಇಲ್ಲದಿದ್ದ ಪ್ರದೇಶಗಳಲ್ಲಿಯೂ, ಹಲವು ಉದ್ಯಮ ಶಾಲೆಗಳು ತಮ್ಮ ಗುಣಮಟ್ಟಗಳನ್ನು ಕಾಯ್ದುಕೊಳ್ಳಲು ಸ್ವತಂತ್ರ ಪ್ರಾಧಿಕಾರಗಳಿಂದ ಮಾನ್ಯತೆ ಪಡೆದುಕೊಂಡಿವೆ.

ಯುನೈಟೆಡ್ ಕಿಂಗ್‌ಡಂ

[ಬದಲಾಯಿಸಿ]

UK ಮೂಲದ ಅಸೋಸಿಯೇಷನ್‌ ಆಫ್‌ MBAಗಳು (AMBA) ಸಂಸ್ಥೆಯು 1967ರಲ್ಲಿ ಸ್ಥಾಪನೆಯಾಗಿತ್ತು ಹಾಗೂ MBA ಪದವಿಗಳ ಕ್ರಿಯಾಶೀಲ ಸಲಹಾ ಮಂಡಳಿಯಾಗಿದೆ. ಅಂತರರಾಷ್ಟ್ರೀಯವಾಗಿ ಎಲ್ಲ ರೀತಿಯ MBA, DBA ಹಾಗೂ ಮಾಸ್ಟರ್ಸ್ ಇನ್ ಬ್ಯುಸಿನೆಸ್ ಅಂಡ್ ಮ್ಯಾನೇಜ್‌ಮೆಂಟ್ (MBM) ಶಿಕ್ಷಣ‌ಗಳಲ್ಲಿ ಈ ಒಕ್ಕೂಟದ ಮಾನ್ಯತಾ ಸೇವೆಯನ್ನು ಗುರುತಿಸಲಾಗಿದೆ. AMBAಯು ಕೇವಲ MBA ವಿದ್ಯಾರ್ಥಿಗಳು ಹಾಗೂ ಪದವೀಧರ ವೃತ್ತಿಪರ ಸದಸ್ಯರುಗಳ ಒಕ್ಕೂಟಕ್ಕೆ ಸೇರುವ ಅವಕಾಶಗಳನ್ನು ನೀಡುತ್ತದೆ. UKನ MBA ಶಿಕ್ಷಣ‌ಗಳಲ್ಲಿ ನಿರ್ದಿಷ್ಟ ಮಾದರಿಯ ಕೋರ್ಸುಗಳನ್ನು ಕಲಿಸುವ ಜೊತೆಗೆ ಪ್ರೌಢ ಪ್ರಬಂಧ ಅಥವಾ ಯೋಜನಾಕಾರ್ಯವನ್ನು ನೀಡಲಾಗುತ್ತದೆ.

ಜೆಕ್‌ ರಿಪಬ್ಲಿಕ್‌

[ಬದಲಾಯಿಸಿ]

"ಅಸೋಸಿಯೇಷನ್‌ ಆಫ್‌ ದಿ ಜೆಕ್ MBA ಸ್ಕೂಲ್ಸ್‌"ನ (CAMBA Archived 2010-05-16 ವೇಬ್ಯಾಕ್ ಮೆಷಿನ್ ನಲ್ಲಿ. ಗಳು) ಸಭೆಯನ್ನು 1998ರ ಜನವರಿಯಲ್ಲಿ ನಡೆಸಲಾಯಿತು. ಈ ಒಕ್ಕೂಟದ ಕಚೇರಿಯು ಪ್ರೇಗ್‌ನ UEPಯ ಡಾಕ್ಟರ್‌ ಪದವಿ ಹಾಗೂ ನಿರ್ವಹಣಾ ಅಧ್ಯಯನ ಕೇಂದ್ರದಲ್ಲಿದೆ. ಒಕ್ಕೂಟದಲ್ಲಿರುವ ಎಲ್ಲ ಸಂಸ್ಥಾಪಕ ಸದಸ್ಯರ ಸಂಸ್ಥೆಗಳ ಎಲ್ಲ ರೀತಿಯ MBA ಶಿಕ್ಷಣ‌ಗಳಿಗೂ ಗ್ರೇಟ್ ಬ್ರಿಟನ್ ಅಥವಾ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾದ ಸಹಭಾಗಿ ಸಂಸ್ಥೆಗಳಿಂದ ಮಾನ್ಯತೆ ಪಡೆದಿವೆ.

ಜರ್ಮನಿ ಹಾಗೂ ಆಸ್ಟ್ರಿಯಾ

[ಬದಲಾಯಿಸಿ]

MBA ಪದವಿಯನ್ನು ಅಳವಡಿಸಿಕೊಂಡ ಕೊನೆಯ ಪಾಶ್ಟಿಮಾತ್ಯ ದೇಶ ಎಂದರೆ ಜರ್ಮನಿ. 1998ರಲ್ಲಿ ಮಂಡಿಸಲಾದ Hochschulrahmengesetz (ಉನ್ನತ ಶಿಕ್ಷಣದ ರೂಪುರೇಷೆಗಳ ಕಾಯಿದೆ) ಜರ್ಮನಿಯ ಫೆಡರಲ್ ಕಾನೂನು, ವಿವಿಧ ಪದವಿಗಳು ಸೇರಿದಂತೆ ಉನ್ನತ ಶಿಕ್ಷಣವನ್ನು ನಿಯಂತ್ರಿಸುವ ಕಾಯಿದೆಗಳಿಗೆ ಬದಲಾವಣೆ ತಂದಿದ್ದು, ಜರ್ಮನಿಯ ವಿಶ್ವವಿದ್ಯಾಲಯಗಳು ಸ್ನಾತಕೋತ್ತರ ಪದವಿಗಳನ್ನು ನೀಡಲು ಅವಕಾಶ ಮಾಡಿಕೊಟ್ಟಿದೆ. ಉದ್ಯಮ ನಿರ್ವಹಣೆಯಲ್ಲಿ ಜರ್ಮನಿಯ ಸಾಂಪ್ರದಾಯಿಕ ಪದವಿ ಎಂದರೆ ಡಿಪ್ಲೋಮ ಆಗಿತ್ತು ಆದರೆ 1999ರ ನಂತರ, ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳು ಸಾಂಪ್ರದಾಯಿಕ ಡಿಪ್ಲೊಮವನ್ನು ತೆಗೆದುಹಾಕಿವೆ (ಬೊಲೊಗ್ನ/ಬೊಲೊನ್ಯ ಪ್ರಕ್ರಿಯೆಯನ್ನು ನೋಡಿರಿ). ಇಂದು ಜರ್ಮನಿಯ ಹಲವಾರು ಉದ್ಯಮ ಶಾಲೆಗಳಲ್ಲಿ MBA ಪದವಿಯನ್ನು ನೀಡಲಾಗುತ್ತದೆ. ಜರ್ಮನಿಯ ಹಲವಾರು ರಾಜ್ಯಗಳಲ್ಲಿ ಜರ್ಮನ್‌ Akkreditierungsrat ನಿಂದ (ಮಾನ್ಯತಾ ಸಮಿತಿ) ಗುರುತಿಸಲ್ಪಟ್ಟಿರುವ ಆರು ಮಾನ್ಯತಾ ಸಂಸ್ಥೆಗಳಲ್ಲಿ ಯಾವುದಾದರೂ ಒಂದರಿಂದ MBA ಪದವಿಯನ್ನು ಆರಂಭಿಸಲು ಮಾನ್ಯತೆ ಪಡೆಯಬೇಕಾಗುತ್ತದೆ, ಜರ್ಮನಿಯಲ್ಲಿನ US-ಅಮೆರಿಕನ್ CHEA ಪ್ರತಿರೂಪದಂತಿದೆ. ಈ ಆರು ನಿಯೋಗಗಳಲ್ಲಿ ಅತ್ಯಂತ ಪ್ರಮುಖವಾದುದೆಂದರೆ (MBA ಪದವಿಗಳಿಗೆ ಸಂಬಂಧಿಸಿದಂತೆ) ಫೌಂಡೇಷನ್ ಫಾರ್ ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್‌ ಅಕ್ರೆಡಿಟೇಷನ್ (FIBAA) ಸಂಸ್ಥೆ. ಎಲ್ಲ ವಿಶ್ವವಿದ್ಯಾಲಯಗಳೂ ತಮ್ಮ ರಾಜ್ಯ ಪ್ರಾಧಿಕಾರಗಳಿಂದ ಮಾನ್ಯತೆ ಪಡೆದಿರಬೇಕಾದ ಜವಾಬ್ದಾರಿ ಹೊಂದಿರುತ್ತವೆ(staatlich anerkannt ).

ಆಸ್ಟ್ರಿಯಾದಲ್ಲಿ, ಖಾಸಗೀ ವಿಶ್ವವಿದ್ಯಾಲಯಗಳ MBA ಶಿಕ್ಷಣಗಳು ಆಸ್ಟ್ರಿಯನ್ ಅಕ್ರೆಡಿಟೇಷನ್ ಕೌನ್ಸಿಲ್‌ನಿಂದ (Österreichischer Akkreditierungsrat ) ಮಾನ್ಯತೆ ಪಡೆಯಬೇಕಾಗುತ್ತದೆ. ಸರ್ಕಾರಗಳು ನಡೆಸುವ ವಿಶ್ವವಿದ್ಯಾಲಯಗಳಿಗೆ ಯಾವುದೇ ರೀತಿಯ ಮಾನ್ಯತಾ ನೀತಿಗಳು ಅನ್ವಯಿಸುವುದಿಲ್ಲವಾದ್ದರಿಂದ ಕೆಲವು ಸ್ವಯಂ ಪ್ರೇರಿತರಾಗಿ ಸ್ವತಂತ್ರ ಪ್ರಾಧಿಕಾರಗಳಿಂದ ಮಾನ್ಯತೆ ಪಡೆಯುತ್ತವೆ. ಮತ್ತೆ ಕೆಲವು ಶೈಕ್ಷಣಿಕವಲ್ಲದ ಉದ್ಯಮ ಶಾಲೆಗಳು MBA ಶಿಕ್ಷಣ‌ಗಳನ್ನು ನಡೆಸುತ್ತಿದ್ದು, ಅವರುಗಳು ಆಸ್ಟ್ರಿಯಾ ಸರ್ಕಾರದಿಂದ ಇಂತಹ ಶಿಕ್ಷಣ‌ಗಳನ್ನು 2010ರವರೆಗೆ ನಡೆಸಲು ಅನುಮತಿ ಪಡೆದಿವೆ (Lehrgang universitären Charakters ). ಕೆಲವು ಶೈಕ್ಷಣಿಕವಲ್ಲದ ಸಂಸ್ಥೆಗಳು ಸರ್ಕಾರೀ ವಿಶ್ವವಿದ್ಯಾಲಯಗಳ ಜೊತೆ ಒಪ್ಪಂದ ಮಾಡಿಕೊಂಡು ತಾವು ನೀಡುವ ಪದವಿಗಳನ್ನು ಕಾನೂನುಬದ್ಧಗೊಳಿಸಿಕೊಂಡಿವೆ.

ಫ್ರಾನ್ಸ್‌ ಹಾಗೂ ಫ್ರೆಂಚ್ ಭಾಷಿಕ ದೇಶಗಳು

[ಬದಲಾಯಿಸಿ]

ಫ್ರಾನ್ಸ್‌ನಲ್ಲಿ ಹಾಗೂ ಫ್ರೆಂಚ್‌ ಭಾಷಿಕ ದೇಶಗಳಾದ ಸ್ವಿಟ್ಜರ್ಲೆಂಡ್, ಮೊನಾಕೊ, ಬೆಲ್ಜಿಯಂ, ಹಾಗೂ ಕೆನಡಾಗಳಲ್ಲಿ (ಕ್ಯೂಬೆಕ್), ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಲಯಗಳಲ್ಲಿ ನೀಡುವ MBA ಪದವಿ ಶಿಕ್ಷಣಗಳು ಆಂಗ್ಲೊ-ಸ್ಯಾಕ್ಸನ್ ದೇಶಗಳಲ್ಲಿ ನೀಡುವ ಪದವಿಗಳಿಗೆ ಸಮಾನವಾಗಿದೆ. ಹಲವು ಫ್ರೆಂಚ್‌ ಉದ್ಯಮ ಶಾಲೆಗಳು Conférence des Grandes Écolesನಿಂದ ಮಾನ್ಯತೆ ಪಡೆಯುತ್ತವೆ, ಇದು ಸರ್ಕಾರಿ ವಿಶ್ವವಿದ್ಯಾಲಯ ವ್ಯವಸ್ಥೆಗಳಿಂದ ದೂರ ಉಳಿದಿರುವಂತಹಾ ಪ್ರವೇಶಾತಿಯ ಆಯ್ಕೆ ಪ್ರಕ್ರಿಯೆಯನ್ನು ಹೊಂದಿರುವ ಉನ್ನತ ಶಿಕ್ಷಣದ ಸ್ಥಾಪನಾ ಸಂಸ್ಥೆಯಾಗಿದೆ. ಆಂಗ್ಲವು ಪ್ರಮುಖ ಭಾಷೆಯಾಗಿದ್ದರೂ, ಕೆಲವು ಶಾಲೆಗಳಲ್ಲಿ ಪ್ರವೇಶ ಪಡೆಯಲು ಫ್ರೆಂಚ್ ಭಾಷೆಯೂ ಗೊತ್ತಿರಬೇಕಾಗುತ್ತದೆ.

ಇಟಲಿಯಲ್ಲಿ ಸರ್ಕಾರದಿಂದ ಮಾನ್ಯತೆ ಹೊಂದಿದ MBA ಶಿಕ್ಷಣಗಳನ್ನು ನೀಡುವ ಶಾಲೆಗಳು ಯುರೋಪಿನ ಇತರೆ ಭಾಗಗಳಲ್ಲಿ ನೀಡುವ ಶಿಕ್ಷಣಗಳಿಗೆ ಸಮನಾಗಿದೆ. ಇಟಲಿಯ ಉದ್ಯಮ ಶಾಲೆಗಳು EQUIS ಹಾಗೂ ASFORನಿಂದ ಮಾನ್ಯತೆ ಹೊಂದಿವೆ.

ಪೋಲೆಂಡ್‌

[ಬದಲಾಯಿಸಿ]

ಪೋಲೆಂಡಿನಲ್ಲಿ, 1990ನೇ ದಶಕದ ಪ್ರಾರಂಭದಲ್ಲಿ ಕಮ್ಯುನಿಸ್ಟರ ಆಳ್ವಿಕೆ ಕೊನೆಗೊಂಡು "ಮುಕ್ತ ಮಾರುಕಟ್ಟೆಯ" ನಿರ್ವಾಹಕರುಗಳಿಗೆ ಬೇಡಿಕೆ ಹೆಚ್ಚಿದುದರ ಪರಿಣಾಮವಾಗಿ ನಂತರ MBA ಶಿಕ್ಷಣದ ಲಭ್ಯತೆಯು ಹೊರಹೊಮ್ಮಿತು.

ಉಕ್ರೇನ್

[ಬದಲಾಯಿಸಿ]

ಇತ್ತೀಚೆಗೆ ಉಕ್ರೇನ್‌ನಲ್ಲಿ ಸಹ MBA ಶಿಕ್ಷಣ‌ಗಳನ್ನು ಆರಂಭಿಸಲಾಗಿದ್ದು ಸದ್ಯಕ್ಕೆ ಅಲ್ಲಿ ವೈವಿಧ್ಯಮಯ MBA ಶಿಕ್ಷಣ‌ಗಳನ್ನು ನೀಡುವ ಹತ್ತು ಉದ್ಯಮ ಶಾಲೆಗಳಿವೆ. ಇವುಗಳಲ್ಲಿ ಎರಡು ಮಾತ್ರ ಐರೋಪ್ಯ ಉದ್ಯಮ ಶಾಲೆಗಳ ಅಂಗಸಂಸ್ಥೆಗಳಾಗಿದ್ದು ಉಳಿದವುಗಳು ಸ್ವತಂತ್ರವಾಗಿವೆ.

ಆಸ್ಟ್ರೇಲಿಯಾ, ಆಫ್ರಿಕಾ ಹಾಗೂ ಏಷ್ಯಾಗಳಲ್ಲಿ MBA ಪದವಿ

[ಬದಲಾಯಿಸಿ]

ಈ ದಿನಗಳಲ್ಲಿ, MBA ಹಾಗೂ ಡಾಕ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ (DBA) ಹುದ್ದೆಗಳನ್ನು ಹಲವಾರು ದೇಶಗಳಲ್ಲಿ ಕಾಣಬಹುದಾಗಿದ್ದು ಆನ್-ಲೈನ್, ದೂರ ಶಿಕ್ಷಣ ಅಥವಾ e-ಲರ್ನಿಂಗ್‌ಗಳಿಂದಲೂ ಇವುಗಳನ್ನು ಪಡೆಯಬಹುದು. ಪ್ರಪಂಚದಾದ್ಯಂತ MBAಗಳ ಮಾನಕಗಳಲ್ಲಿ ಇರುವ ವ್ಯತ್ಯಾಸಗಳಿಂದಾಗಿ, ಹಲವು ಉದ್ಯಮ ಶಾಲೆಗಳು ಸ್ವತಂತ್ರ ಪ್ರಾಧಿಕಾರಗಳಿಂದ ಮಾನ್ಯತೆ ಪಡೆಯುತ್ತವೆ.

ಆಸ್ಟ್ರೇಲಿಯಾ

[ಬದಲಾಯಿಸಿ]

ಆಸ್ಟ್ರೇಲಿಯಾದ, 42 ಆಸ್ಟ್ರೇಲಿಯನ್‌ ಉದ್ಯಮ ಶಾಲೆಗಳಲ್ಲಿ MBA ಪದವಿಯನ್ನು ನೀಡಲಾಗುತ್ತದೆ. ಅಂತರರಾಷ್ಟ್ರೀಯ ಮಾನ್ಯತೆ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶ್ರೇಯಾಂಕವನ್ನು ಆಧರಿಸಿ ವಿಶ್ವವಿದ್ಯಾಲಯಗಳಲ್ಲಿ ವ್ಯತ್ಯಾಸ ಕಾಣಬಹುದಾಗಿದೆ. ಅವುಗಳಲ್ಲಿ ಹಲವು ಒಂದರಿಂದ ಎರಡು ವರ್ಷದ ಪೂರ್ಣಾವಧಿಯ MBAಗಳು. ಇಲ್ಲಿ ಕೊಂಚ ಮಟ್ಟಿಗೆ ಮಾತ್ರವೇ GMATನ ಪ್ರಯೋಜನವಿರುತ್ತದೆ, ಬದಲಿಗೆ, ಅದರಲ್ಲಿ ಪ್ರತಿ ಶಿಕ್ಷಣ ಕೇಂದ್ರವೂ ತನ್ನ ನಿರ್ದಿಷ್ಟ ಆವಶ್ಯಕತೆಗಳನ್ನು ಸೂಚಿಸುತ್ತದೆ ಹಾಗೂ ಇದರಲ್ಲಿ ಸಾಮಾನ್ಯವಾಗಿ ಉತ್ತಮ ಶೈಕ್ಷಣಿಕ ಅರ್ಹತೆಗಳ ಜೊತೆಯಲ್ಲಿಯೇ ಕೆಲವು ವರ್ಷಗಳ ಕಾಲ ನಿರ್ವಹಣಾ ಹಂತದಲ್ಲಿ ಹೊಂದಿರಬೇಕಾದ ಕಾರ್ಯಾನುಭವಗಳ ಅಗತ್ಯವೂ ಸೇರಿರುತ್ತದೆ.

ಆಸ್ಟ್ರೇಲಿಯಾದ MBAಗಳಿಗೆ ಗ್ರಾಜ್ಯುಯೇಟ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ ಆಫ್‌ ಆಸ್ಟ್ರೇಲಿಯಾದಿಂದ ಶ್ರೇಯಾಂಕಗಳನ್ನು ನೀಡಲಾಗುತ್ತದೆ, ಹಾಗೂ ಅದರೊಂದಿಗೆ ವಾರ್ಷಿಕ ಆಸ್ಟ್ರೇಲಿಯನ್‌ MBA ಸ್ಟಾರ್ ಶ್ರೇಯಾಂಕಗಳನ್ನು ಪ್ರಕಟಿಸಲಾಗುವುದು. ಆಸ್ಟ್ರೇಲಿಯಾದ ಉದ್ಯಮ ಶಾಲೆಗಳ ಪಟ್ಟಿಯನ್ನು ನೋಡಿರಿ.

ದಕ್ಷಿಣ ಆಫ್ರಿಕಾ

[ಬದಲಾಯಿಸಿ]

ದೇಶದಲ್ಲಿ MBA ಪದವಿಗಳನ್ನು ನೀಡುತ್ತಿರುವ ಶಾಲೆಗಳಿಗೆ ಬೃಹತ್‌ಪ್ರಮಾಣದಲ್ಲಿ ಪುನರ್ ಮಾನ್ಯತೆ ನೀಡುವ ಪ್ರಕ್ರಿಯೆಯನ್ನು 2004ರಲ್ಲಿ, ದಕ್ಷಿಣ ಆಫ್ರಿಕಾದ ಕೌನ್ಸಿಲ್ ಆನ್ ಹೈಯರ್ ಎಜ್ಯುಕೇಷನ್ (CHE) ಪೂರೈಸಿತು. ಶಾಸನ ಸಂಸ್ಥೆಯಿಂದ ಕೈಗೊಂಡ ಈ ಪ್ರಕ್ರಿಯೆ ವಿಶ್ವದಲ್ಲಿಯೇ ಈ ರೀತಿಯ ಪ್ರಥಮವಾಗಿದ್ದು, ಇಂತಹ ಮಾರ್ಪಾಟುಗಳಿಂದ ಪರಿಷ್ಕೃತ ಸ್ವರೂಪ ತಂದಿದ್ದು ವಿಶ್ವದೆಲ್ಲೆಡೆಯ ಪ್ರಸಾರ ಮಾಧ್ಯಮಗಳ ಗಮನವನ್ನು ತನ್ನತ್ತ ಆಕರ್ಷಿಸಿತು. ದಕ್ಷಿಣ ಆಫ್ರಿಕಾದ ಉದ್ಯಮ ಶಾಲೆಗಳ ಪಟ್ಟಿಯನ್ನು ನೋಡಿರಿ.

ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಉದ್ಯಮ ಶಾಲೆಗಳು ಹಲವು ರೀತಿಯ MBA ಶಿಕ್ಷಣಗಳನ್ನು ನಡೆಸುತ್ತಿವೆ. ಇದರ ಜೊತೆಗೆ, ಘಾನಾದಲ್ಲಿ ವಿದೇಶೀ ಮಾನ್ಯತೆ ಹೊಂದಿದ ಸಂಸ್ಥೆಗಳು ಸಹ MBA ಪದವಿಗಳನ್ನು ದೂರಶಿಕ್ಷಣದ ಮೂಲಕ ನೀಡುತ್ತಿವೆ.

ಭಾರತದಲ್ಲಿ, ವೃತ್ತಿಯಲ್ಲಿ ಯಾವುದೇ ರೀತಿಯ ಅನುಭವವಿರದ ಪದವೀಧರರನ್ನು ಗುರಿಯಾಗಿಸಿಕೊಂಡು ಎರಡು ವರ್ಷದ ಪೂರ್ಣಕಾಲಿಕ MBA ಶಿಕ್ಷಣಗಳನ್ನು ನೀಡುತ್ತಿರುವ 1600 ಉದ್ಯಮ ಶಾಲೆಗಳಿವೆ. ಭಾರತದ ನಿರ್ವಹಣಾ ಶಿಕ್ಷಣ ನೀಡುತ್ತಿರುವ ವಿದ್ಯಾಲಯಗಳಲ್ಲಿ, ಇಂಡಿಯನ್ ಇನ್ಸ್‌‌ಟಿಟ್ಯೂಟ್ಸ್‌ ಆಫ್ ಮ್ಯಾನೇಜ್‌ಮೆಂಟ್‌ಗಳು (IIM) ತುಂಬಾ ಹಳೆಯವು. ಯಾವುದೇ IIM ಶಾಲೆಗಳಲ್ಲಿ ಅಥವಾ ಇನ್ನಿತರೆ ಉದ್ಯಮ ಶಾಲೆಗಳಲ್ಲಿ ಪ್ರವೇಶ ಪಡೆಯಲು ಕಾಮನ್ ಅಡ್ಮಿಷನ್ ಟೆಸ್ಟ್‌ (CAT), XAT, GMAT, JMET ಅಥವಾ MATಗಳಲ್ಲಿ ಉತ್ತೀರ್ಣ ಆದವರು ಭಾರತದಲ್ಲಿರುವ ಯಾವುದೇ ನಿರ್ವಹಣಾ ಸಂಸ್ಥೆಗಳಿಗೆ ಸೇರಲು ಅರ್ಹರಾಗುತ್ತಾರೆ, ಪ್ರವೇಶಾತಿ ಪರೀಕ್ಷೆಯ ಹೊರತಾಗಿ ಕೆಲವು ಉದ್ಯಮ ಶಾಲೆಗಳು ತಮ್ಮಲ್ಲಿ ಪ್ರವೇಶ ಬಯಸುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಯೋಗ್ಯತಾ ಪರೀಕ್ಷೆಗಳನ್ನು ನಡೆಸಿ ಅದರ ಆಧಾರದ ಮೇಲೆ ಪ್ರವೇಶ ನೀಡುತ್ತವೆ. IIM ಹಾಗೂ ಇತರೆ ಸ್ವಾಯತ್ತ ಉದ್ಯಮ ಶಾಲೆಗಳು ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೋಮವನ್ನು (PGDM) ನೀಡಲಾಗುತ್ತಿದ್ದು ಭಾರತದಲ್ಲಿ ಅದಕ್ಕೆ MBA ಪದವಿಗೆ ಇರುವಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಸರ್ಕಾರಿ ಮಾನ್ಯತಾ ಪ್ರಾಧಿಕಾರಗಳಾದ AICTEಯ ನಿಯಮದ ಪ್ರಕಾರ ಸ್ವಾಯತ್ತತೆ ಹೊಂದಿದ ಉದ್ಯಮ ಶಾಲೆಗಳು ಕೇವಲ PGDMಗಳನ್ನು ನೀಡಬಹುದಾಗಿದ್ದು, ಆದರೆ ಸ್ನಾತಕೋತ್ತರ ಪದವಿಯನ್ನು ಮಾತ್ರ ವಿಶ್ವವಿದ್ಯಾಲಯದ ಆಡಳಿತಕ್ಕೆ ಒಳಪಡುವ ಕಾಲೇಜುಗಳು ಎರಡು ವರ್ಷಗಳ ಪೂರ್ಣಾವಧಿಯ ಶಿಕ್ಷಣ ರೀತಿಯಲ್ಲಿ ನೀಡಬೇಕಾಗುತ್ತದೆ. PGDM ಹಾಗೂ MBA ಪದವಿಗಳ ಪಠ್ಯಕ್ರಮಗಳು ಒಂದೇ ಆಗಿದ್ದರೂ, MBA ಪದವಿಯು ಪರೀಕ್ಷೆಯನ್ನು ಮುಖ್ಯವಾಗಿ ಪರಿಗಣಿಸಿದ್ದು ನಿರ್ವಹಣಾ ತತ್ವಗಳ ಮೇಲೆ ಗಮನ ಕೇಂದ್ರೀಕರಿಸಿದರೆ PGDMನಲ್ಲಿ ಉದ್ಯಮವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ ಹಾಗೂ ವ್ಯಕ್ತಿತ್ವ ಕೌಶಲ್ಯಗಳನ್ನು ಕಲಿಸುವತ್ತ ಗಮನ ಕೇಂದ್ರೀಕರಿಸಲಾಗುತ್ತದೆ. ಹಾಗಿದ್ದರೂ, PGDMಗಳಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲವಾದ್ದರಿಂದ PGDM ಪದವಿ ಹೊಂದಿದವರು Ph.D. ಮಾಡಲು ಸಾಧ್ಯವಿಲ್ಲ. ಭಾರತದಲ್ಲಿ ಸರ್ಕಾರೇತರ ಸಂಸ್ಥೆಗಳಿಂದ ಮಾನ್ಯತೆ ಪಡೆದ, ಒಂದು ವರ್ಷದ ತ್ವರಿತ ಗತಿಯ ಶಿಕ್ಷಣಗಳು, ಕೆಲಸದ ಅನುಭವ ಹೊಂದಿರುವ ವಿದ್ಯಾರ್ಥಿಗಳಿಗೆಂದೇ ಹುಟ್ಟಿಕೊಂಡಿವೆ. ಅವುಗಳನ್ನು ಸಾಮಾನ್ಯವಾಗಿ ಪೋಸ್ಟ್ ಗ್ರಾಜ್ಯುಯೇಟ್ ಪ್ರೋಗ್ರಾಂ (PGP) ಇನ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಎನ್ನಲಾಗುತ್ತದೆ. ಭಾರತದ ಉದ್ಯಮ ಶಾಲೆಗಳ ಪಟ್ಟಿಯನ್ನು ನೋಡಿರಿ.

ಏಷ್ಯಾದ ಉಳಿದ ಭಾಗಗಳು

[ಬದಲಾಯಿಸಿ]

ಏಷ್ಯಾದಲ್ಲಿ ಅಂತರರಾಷ್ಟ್ರೀಯ MBA ಶಿಕ್ಷಣಗಳು ಮೌಲ್ಯವನ್ನು ವೃದ್ಧಿಸಿಕೊಳ್ಳುತ್ತಿವೆ. ಉದಾಹರಣೆಗೆ, ಸಾಮಾನ್ಯವಾಗಿ ಫಿಲಿಪ್ಪೀನ್ಸ್‌ನ ವಿದೇಶೀ MBAಗಳು ಪ್ರಥಮ ಆಯ್ಕೆಯಾಗಿಯೇ ಉಳಿದಿದ್ದರೂ, ಹಲವು ವಿದ್ಯಾರ್ಥಿಗಳು ಈಗ ಆಂಗ್ಲ ಭಾಷೆಯ "ಗ್ಲೋಬಲ್‌ MBA"ಗಳು ನೀಡುತ್ತಿರುವ ಶಿಕ್ಷಣಗಳನ್ನು ಓದುತ್ತಿದ್ದಾರೆ. ಹಾಂಗ್ ಕಾಂಗ್‌, ಜಪಾನ್, ಮಲೇಷ್ಯಾ, ಪಾಕಿಸ್ತಾನ, ಸಿಂಗಪೂರ್, ದಕ್ಷಿಣ ಕೊರಿಯಾ, ತೈವಾನ್, ಹಾಗೂ ಥಾಯ್ಲೆಂಡ್‌ಗಳಲ್ಲಿ ಕೇವಲ ಆಂಗ್ಲದಲ್ಲಿ ಮಾತ್ರವೇ ನೀಡಲಾಗುವ MBA ಶಿಕ್ಷಣಗಳನ್ನು ಕೂಡಾ ನಡೆಸಲಾಗುತ್ತಿದೆ. ಏಷ್ಯಾದ ಹಲವು ಶಿಕ್ಷಣಸಂಸ್ಥೆಗಳು ಹೊಸ ರೀತಿಯ ಅನುಭವ ಹೊಂದಲು ಬಯಸುವ ಉತ್ತರ ಅಮೆರಿಕದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದ್ದು ಬೋಧನಾಶುಲ್ಕಗಳನ್ನೂ ಕಡಿತಗೊಳಿಸಿವೆ ಆ ಮೂಲಕ ತರಗತಿಗಳಲ್ಲಿ ಅಂತರರಾಷ್ಟ್ರೀಯ ಪರಿಸರ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿವೆ.

ಏಷ್ಯಾ Inc. ಎಂಬ ನಿಯತಕಾಲಿಕೆಯು ಏಷ್ಯಾ ಪೆಸಿಫಿಕ್‌ ಶಾಲೆಗಳಿಗೆ ಶ್ರೇಯಾಂಕಗಳನ್ನು ನೀಡುತ್ತದೆ ಇದು ಪ್ರಾದೇಶಿಕ ಉದ್ಯಮ ನಿಯತಕಾಲಿಕೆಯಾಗಿದ್ದು ವಿಶ್ವದಾದ್ಯಂತ ಪ್ರಸಾರ ಹೊಂದಿದೆ. ಚೀನಾದಲ್ಲಿಯೂ ಸಹ MBA ಶಿಕ್ಷಣವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ.[] ಏಷ್ಯಾದ ಉದ್ಯಮ ಶಾಲೆಗಳ ಪಟ್ಟಿಯನ್ನು ನೋಡಿರಿ.

MBA ಶಿಕ್ಷಣ‌ದ ಶ್ರೇಯಾಂಕಗಳು

[ಬದಲಾಯಿಸಿ]

ಪ್ರತಿ ವರ್ಷವೂ, ಸುಪ್ರಸಿದ್ಧ ಉದ್ಯಮ ಪ್ರಕಟಣೆಗಳಾದ US ನ್ಯೂಸ್ & ವರ್ಲ್ಡ್ ರಿಪೋರ್ಟ್ , ಬ್ಯುಸಿನೆಸ್ ವೀಕ್ , ಫೈನಾನ್ಸಿಯಲ್ ಟೈಮ್ಸ್ , ದಿ ಎಕನಾಮಿಸ್ಟ್ , ಹಾಗೂ ವಾಲ್ ಸ್ಟ್ರೀಟ್ ಜರ್ನಲ್‌ ಪ್ರಮುಖ MBA ಶಿಕ್ಷಣಗಳ ಶ್ರೇಯಾಂಕಗಳನ್ನು ಪ್ರಕಟಿಸುತ್ತವೆ, ಅವುಗಳ ವಿಶ್ಲೇಷಣೆಗಳು ವಿವಾದಾತ್ಮಕವಾಗಿದ್ದರೂ, ಹೆಚ್ಚಿನ ಶ್ರೇಯಾಂಕ ಗಳಿಸಲು ಸಹಾಯಕವಾದ ಶಾಲೆಗಳ ಘನತೆ ಹಾಗೂ ಗೌರವದ ಮೇಲೆ ನೇರ ಪರಿಣಾಮ ಬೀರಬಲ್ಲವು.

ಪ್ರಮುಖ ಸ್ನಾತಕೋತ್ತರ ಪದವಿಗಳಲ್ಲಿ MBA ಪದವಿಯೂ ಒಂದಾಗಿ ಮಾರ್ಪಟ್ಟಿದೆ. ಹೆಚ್ಚು ಹೆಚ್ಚು ವಿಶ್ವವಿದ್ಯಾಲಯಗಳು ಈ ಪದವಿಯನ್ನು ನೀಡಲು ಆರಂಭಿಸಿದ್ದರಿಂದಾಗಿ, ವಿದ್ಯಾಲಯಗಳ ಗುಣಮಟ್ಟ, ಬೋಧಕವರ್ಗ, ಹಾಗೂ ಕೋರ್ಸುಗಳಲ್ಲಿನ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ. ಸಾಮಾನ್ಯವಾಗಿ, ವಿದ್ಯಾರ್ಥಿಗಳು ಯಾವ ಕಡೆಗಳಲ್ಲಿ ಅರ್ಜಿ ಹಾಕಬೇಕು ಎಂಬುದನ್ನು ತಿಳಿಯಲು ಅನುಕೂಲವಾಗುವಂತೆ MBA ಶಿಕ್ಷಣಗಳ ಗುಣಮಟ್ಟವನ್ನು ಅಳೆಯಲು ಮಾನದಂಡಗಳನ್ನು ರೂಪಿಸಿಕೊಂಡಿರಬೇಕಾಗುತ್ತದೆ. MBA ಶಿಕ್ಷಣಗಳು ಹೆಚ್ಚಿದಂತೆಲ್ಲಾ, ಅವುಗಳ ಬಗ್ಗೆ ಮಾಹಿತಿಯನ್ನು ತಿಳಿಸುವ ಹಲವಾರು ಪ್ರಕಟಣೆಗಳು ಬಂದಿವೆ. ಇವುಗಳಲ್ಲಿ ಕೆಲವು, ವಿಶ್ವವಿದ್ಯಾಲಯಗಳು ನೀಡುತ್ತಿರುವ ಪದವಿಗಳ ಮಾಹಿತಿ ಪುಸ್ತಕಗಳಿಂದ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಸಾಮಾನ್ಯವಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತವೆ. ಅಂತಿಮವಾಗಿ ನಿಯತಕಾಲಿಕೆಗಳೂ ಸಹ MBA ಶಾಲೆಗಳ ಕುರಿತಾದ ಲೇಖನಗಳನ್ನು ಪ್ರಕಟಿಸಲು ಆರಂಭಿಸಿದವು ಹಾಗೂ ಅದರ ಜೊತೆಗೆ, ಪೂರ್ವನಿರ್ಧಾರಿತ ಗುಣಮಟ್ಟವನ್ನು ಆಧಾರವಾಗಿ ಇಟ್ಟುಕೊಂಡು ಶ್ರೇಯಾಂಕಗಳನ್ನೂ ನೀಡಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದುದು ಎಂದರೆ ಬ್ಯುಸಿನೆಸ್ ವೀಕ್ , ಪ್ರತೀ ಎರಡು ವರ್ಷಗಳಿಗೊಮ್ಮೆ MBA ಶಿಕ್ಷಣಗಳ ಶ್ರೇಯಾಂಕಗಳನ್ನು ಪ್ರಕಟಿಸುತ್ತದೆ.

MBA ಶಿಕ್ಷಣಗಳ ಶ್ರೇಯಾಂಕಗಳನ್ನು ವಿಭಿನ್ನ ಪ್ರಮಾಣಗಳನ್ನು ಗಣನೆಯಲ್ಲಿಟ್ಟುಕೊಂಡು ಹಲವಾರು ರೀತಿಯಲ್ಲಿ ನೀಡಲಾಗುತ್ತದೆ. ಉದಾಹರಣೆಗೆ ಗೌರ್ಮನ್ ವರದಿ , ಇದು ಶ್ರೇಯಾಂಕಗಳನ್ನು ನೀಡಲು ಬಳಸುವ ವಿಧಾನ ಅಥವಾ ರೀತಿಗಳನ್ನು ಗೌಪ್ಯವಾಗಿ ಇರಿಸಿದೆ,[] ಹಾಗೂ ಈ ವರದಿಗಳು ವಿದ್ಯಾಲಯಗಳ ನಡುವೆ ಯಾವುದೇ ರೀತಿಯ ವ್ಯತ್ಯಾಸ ಇಲ್ಲದಿರುವುದು, ಅಂಕಗಳಲ್ಲಿ ಅತ್ಯಲ್ಪ ವ್ಯತ್ಯಾಸವಿದ್ದು ಆ ವ್ಯತ್ಯಾಸಗಳೆಲ್ಲ ಒಂದೇ ಸಮನಾಗಿರುವುದು, ಹಾಗೂ ಇಲ್ಲದ ವಿಭಾಗಗಳನ್ನೂ ಗಣನೆಗೆ ತೆಗೆದುಕೊಂಡು ಶ್ರೇಯಾಂಕ ನೀಡುವುದು ಸೇರಿದಂತೆ ಸಂಖ್ಯಾಶಾಸ್ತ್ರದಲ್ಲಿ ಅಸಾಧ್ಯವಾದ ದತ್ತಗಳನ್ನು ಪರಿಗಣನೆ ಮಾಡುವುದರಿಂದ ವಿವಾದಕ್ಕೊಳಗಾಗಿದೆ.[೧೦] MBA ಶಿಕ್ಷಣಗಳ ಶ್ರೇಯಾಂಕಗಳನ್ನು 1977ರಲ್ಲಿ ಪ್ರಕಟಿಸಿದ ದಿ ಕಾರ್ಟರ್ ವರದಿ ಯು ಬೋಧಕವರ್ಗ ಪ್ರಕಟಿಸಿದ ಹಲವಾರು ಶೈಕ್ಷಣಿಕ ಲೇಖನಗಳನ್ನು ಆಧರಿಸಿದೆ. ನಿಯತಕಾಲಿಕೆಗಳು ಕಂಪನಿಗಳಿಗೆ MBA ಪದವೀಧರರನ್ನು ಅಯ್ಕೆ ಮಾಡಿಕೊಳ್ಳುವ ಜನರನ್ನು ಸಂದರ್ಶನ ಮಾಡಿ, MBA ಶಾಲೆಗಳ' ಪ್ರಾಂಶುಪಾಲರ ಸಮೀಕ್ಷೆಗಳು, ವಿದ್ಯಾರ್ಥಿಗಳ ಅಥವಾ ಬೋಧನಾ ವರ್ಗದವರಿಂದ ಅಭಿಪ್ರಾಯ ಸಂಗ್ರಹಣೆ, ಹಾಗೂ ಇನ್ನಿತರೆ ವಿಧಾನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಶ್ರೇಯಾಂಕಗಳನ್ನು ನೀಡುತ್ತಾರೆ. ಪ್ರಸಾರ ನಿಂತುಹೋದ MBA ಮ್ಯಾಗಜೀನ್‌ ‌ ಎಂಬ ನಿಯತಕಾಲಿಕೆಯೊಂದರಲ್ಲಿ ಪ್ರಾಂಶುಪಾಲರನ್ನು ಅವರ ಮೆಚ್ಚಿನ ಶಿಕ್ಷಣಗಳಿಗೆ ಮತ ಹಾಕಲು ಸೂಚಿಸಲಾಗಿತ್ತು. ಈ ರೀತಿ ಶ್ರೇಯಾಂಕಗಳನ್ನು ಪಡೆಯುವ ವಿಧಾನಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತವೆ. ಆರಂಭದಲ್ಲಿ, ಐವಿ ಲೀಗ್ ಎಂದೇ ಪ್ರಸಿದ್ಧವಾದ ದೊಡ್ಡ ಸರ್ಕಾರಿ ವಿದ್ಯಾಲಯಗಳು ಹಾಗೂ ಕೆಲವೇ ಕೆಲವು ವಿಶ್ವವಿದ್ಯಾಲಯಗಳು ಮಾತ್ರ ಶ್ರೇಯಾಂಕಗಳನ್ನು ನೀಡುತ್ತಿದ್ದವು. ವಿಶ್ವದ 100 ಅತ್ಯುನ್ನತ ಉದ್ಯಮ ಶಾಲೆಗಳೂ ಸೇರಿದಂತೆ ಹಲವು ಖಾಸಗೀ ಶಾಲೆಗಳ ಎಲ್ಲ ಶ್ರೇಯಾಂಕಗಳನ್ನು QS ಜಾಲವು ಸಂಗ್ರಹಿಸುತ್ತದೆ.

MBA ಶಿಕ್ಷಣಗಳ ಶ್ರೇಯಾಂಕಗಳನ್ನು ಲೇಖನಗಳಲ್ಲಿ ಹಾಗೂ ಶೈಕ್ಷಣಿಕ ಅಂತರಜಾಲ ತಾಣಗಳಲ್ಲಿ ವಿವರಿಸಲಾಗಿದೆ.[೧೧] ವಿಮರ್ಶಕರುಗಳ ಪ್ರಕಾರ ಶ್ರೇಯಾಂಕಗಳನ್ನು ನೀಡುವ ಪದ್ಧತಿಗಳು ವಿವಾದಾತ್ಮಕವಾಗಿದ್ದು, ಪ್ರಕಟಗೊಂಡ ಶ್ರೇಯಾಂಕಗಳನ್ನು ಕೆಳಕಂಡ ಕಾರಣಗಳಿಗಾಗಿ ಎಚ್ಚರಿಕೆಯಿಂದ ಗಮನಿಸಬೇಕು:[೧೨]

  • ಶ್ರೇಯಾಂಕಗಳು ನಿರ್ದಿಷ್ಟ ಸಂಖ್ಯೆಯ MBA ಶಿಕ್ಷಣಗಳನ್ನು ನೀಡುತ್ತಿರುವ ಶಾಲೆಗಳನ್ನು ಪರಿಗಣಿಸುವುದರಿಂದ ಗಣನಾವರ್ಗದ ಗಾತ್ರವನ್ನು ಕುಗ್ಗಿಸುವುದರಿಂದಾಗಿ ಉನ್ನತ ಅವಕಾಶಗಳನ್ನು ನೀಡುತ್ತಿರುವ ಎಷ್ಟೋ ಶಾಲೆಗಳನ್ನು ಕಡೆಗಣಿಸುತ್ತದೆ.
  • ಶ್ರೇಯಾಂಕಗಳ ವಿಧಗಳು ಬಹಳಷ್ಟು ಪೂರ್ವಾಗ್ರಹಗಳಿಂದ ಕೂಡಿದ್ದು ಸಂಖ್ಯಾಶಾಸ್ತ್ರದ ಹಲವಾರು ದೋಷಪೂರಿತ ವಿಧಾನಗಳನ್ನು ಬಳಸುತ್ತದೆ (ಅದರಲ್ಲಿಯೂ ನಿರ್ವಾಹಕರುಗಳನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಶನಗಳಲ್ಲಿ ಅನುಸರಿಸುವ ವಿಧಾನಗಳು).
  • ಶ್ರೇಯಾಂಕಗಳ ಪಟ್ಟಿಯಲ್ಲಿ ಅವೇ ಪ್ರಖ್ಯಾತ ವಿದ್ಯಾಲಯಗಳ ಪಟ್ಟಿಯನ್ನು ಕಾಣಬಹುದಾಗಿದೆ, ಇದರಿಂದಾಗಿ ವಿದ್ಯಾಲಯವೊಂದು ಪಟ್ಟಿಯಲ್ಲಿ 1ನೇ ಸ್ಥಾನದಲ್ಲಿದ್ದರೆ ಅದೇ ವಿದ್ಯಾಲಯವು ಬೇರೊಂದು ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿರುತ್ತದೆ.
  • ಶ್ರೇಯಾಂಕಗಳು ಸಾಮಾನ್ಯವಾಗಿ ನಿರ್ದಿಷ್ಟ ಶಾಲೆಯನ್ನು ಕೇಂದ್ರೀಕರಿಸಿರುತ್ತವೆ, ಆದರೆ MBA ಶಿಕ್ಷಣಗಳನ್ನು ನೀಡುತ್ತಿರುವ ಕೆಲವು ವಿದ್ಯಾಲಯಗಳಲ್ಲಿ ತಮ್ಮಲ್ಲೇ ವಿವಿಧ ಗುಣಮಟ್ಟಗಳನ್ನು ಹೊಂದಿರುತ್ತವೆ (e.g. ಒಂದು ವಿದ್ಯಾಲಯವು ಹಗಲಿನ ಶಿಕ್ಷಣಕ್ಕೆ ಅತ್ಯುತ್ತಮ ಬೋಧಕರನ್ನು ಹೊಂದಿದ್ದರೆ, ಸಂಜೆ ತರಗತಿಗಳಿಗೆ ಸಾಧಾರಣವಾದವರನ್ನು ಹೊಂದಿರುತ್ತವೆ).
  • ರಾಷ್ಟ್ರೀಯ ಪತ್ರಿಕೆಯಲ್ಲಿ ಉನ್ನತ ಶ್ರೇಯಾಂಕ ಪಡೆಯುವಿಕೆಯು ಸ್ವಯಂ-ನೆರವೇರಿಕೆಯ ಭವಿಷ್ಯಗಳಾಗಿ ಪರಿಣಮಿಸುವ ಸಾಧ್ಯತೆಯಾಗಿದೆ.
  • ಹಾರ್ವರ್ಡ್, INSEAD ಹಾಗೂ ವ್ಹಾರ್ಟನ್ ಸೇರಿದಂತೆ ಕೆಲವು ಪ್ರಖ್ಯಾತ ಉದ್ಯಮ ಶಾಲೆಗಳು ತಮ್ಮ ಶ್ರೇಯಾಂಕಗಳನ್ನು ದುರುಪಯೋಗ ಆಗಬಹುದು ಎನ್ನುವ ಕಾರಣಗಳನ್ನು ಮುಂದಿಟ್ಟುಕೊಂಡು ಶ್ರೇಯಾಂಕಗಳನ್ನು ಪ್ರಕಟಿಸುವ ಸಂಸ್ಥೆಗಳಿಗೆ ಸರಿಯಾದ ರೀತಿಯ ಸಹಕಾರ ನೀಡುವುದಿಲ್ಲ.[೧೩]

ಒಂದು ಅಧ್ಯಯನದಂತೆ ಪದವೀಧರರ ಪ್ರಾರಂಭಿಕ ಸಂಬಳ ಹಾಗೂ ಸಾಧಾರಣ ವಿದ್ಯಾರ್ಥಿಯ GMATನ ಅಂಕಗಳನ್ನು ಒಟ್ಟುಗೂಡಿಸಿ MBA ಶಿಕ್ಷಣಗಳಿಗೆ ವಸ್ತುನಿಷ್ಠ ಶ್ರೇಯಾಂಕಗಳನ್ನು ಪಡೆಯಲಾಗುತ್ತದೆ ಹಾಗೂ ಇವುಗಳು ರಾಷ್ಟ್ರೀಯ ಪ್ರಕಟಣೆಗಳ 20 ಅತ್ಯುನ್ನತ ಶಿಕ್ಷಣಗಳ ಪಟ್ಟಿಯ ನಕಲಾಗಿರಬಹುದಾಗಿದೆ.[೧೨] ಆ ಅಧ್ಯಯನವು ವಸ್ತುನಿಷ್ಠ ಶ್ರೇಯಾಂಕಗಳನ್ನು ಬಹುನಿರೀಕ್ಷಿತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕಗೊಳಿಸಬಹುದು ಎಂಬ ನಿರ್ಣಯಕ್ಕೆ ಬರುತ್ತದೆ.[೧೪] ರಾಷ್ಟ್ರೀಯ ನಿಯತಕಾಲಿಕೆಗಳು ಶ್ರೇಯಾಂಕಗಳ ಬೆಲೆಯನ್ನು ಅರಿತಿದ್ದು ಅವುಗಳನ್ನು ವಿವಿಧ ಮಾನದಂಡಗಳ ಮೇಲೆ ನೀಡಲಾಗುತ್ತದೆ, ಹಾಗೂ ಈಗ ಇವುಗಳನ್ನು ವಿವಿಧ ರೀತಿಗಳಲ್ಲಿ ನೀಡುತ್ತಿರುವ ಪಟ್ಟಿಯನ್ನು ಕಾಣಬಹುದು: ಸಂಬಳ, ವಿದ್ಯಾರ್ಥಿಗಳ GMAT ಅಂಕಗಳು, ಆಯ್ಕೆಗಳು ಹಾಗೂ ಇನ್ನಿತರೆ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಶ್ರೇಯಾಂಕಗಳು ಬಹಳ ಉಪಯುಕ್ತವಾಗಿದ್ದರೂ, ವೈಯಕ್ತಿಕ ಬೇಡಿಕೆಗಳಿಗೆ ಅನುಗುಣವಾಗಿಲ್ಲ, ಹಾಗೂ ಅವುಗಳು ಹೀಗೆಯೇ ಅನಿರ್ದಿಷ್ಟ ಸಂಖ್ಯೆಯ ಶಾಲೆಗಳನ್ನು ಪರಿಗಣಿಸಿ, ಪ್ರತಿ ವಿದ್ಯಾಲಯವೂ ನೀಡುತ್ತಿರುವ ವಿವಿಧ ರೀತಿಯ MBA ಶಿಕ್ಷಣಗಳನ್ನು ಅಥವಾ ಅವುಗಳ ವಸ್ತುನಿಷ್ಠ ಸಂದರ್ಶನಗಳನ್ನು ಪ್ರತ್ಯೇಕವಾಗಿಸಲು ವಿಫಲವಾದ್ದರಿಂದ ತಮ್ಮ ಬೆಲೆಯನ್ನೂ ಕಳೆದುಕೊಳ್ಳುತ್ತಿವೆ.

MBA ಪದವಿ ಹಾಗೂ ಪ್ರಚಲಿತ ಘಟನೆಗಳು

[ಬದಲಾಯಿಸಿ]

2007–2009ರ ನಡುವೆ ಉಂಟಾದ ಆರ್ಥಿಕ ಹಿಂಜರಿತವು MBA ಪದವಿಗೆ ಸವಾಲುಗಳನ್ನು ಹಾಗೂ ಪ್ರಶ್ನೆಗಳನ್ನು ಹಾಕಿದೆ. MBA ಶಿಕ್ಷಣಗಳ ಪದವೀಧರರು ಪದವಿ ಸ್ವೀಕರಿಸಿದ ತಕ್ಷಣವೇ ಹಣಕಾಸು ಉದ್ಯಮಕ್ಕೆ ಸೇರಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ.[೧೫] ಹಣಕಾಸು ಕ್ಷೇತ್ರವು ವಿಶ್ವದ ಆರ್ಥಿಕ ಇಳಿಮುಖಕ್ಕೆ ತುಂಬಾ ಸಮೀಪ ಸಂಪರ್ಕ ಹೊಂದಿರುವುದರಿಂದ, ಪದವೀಧರರು ಇತರೆ ಕ್ಷೇತ್ರಗಳತ್ತ ಸಾಗುತ್ತಿದ್ದಾರೆ ಎಂದು ಸಾಕ್ಷ್ಯಗಳು ತಿಳಿಸುತ್ತವೆ.[೧೬]

ಆರ್ಥಿಕ ಹಿಂಜರಿತದ ಕಾರಣದಿಂದಾಗಿ ಮಾಧ್ಯಮ ಹಾಗೂ ಸಾರ್ವಜನಿಕರಲ್ಲಿ MBA ಬಗ್ಗೆ ಇದ್ದ ಭಾವನೆ, ಕೊಂಚ ಮಟ್ಟಿಗೆ ಬದಲಾಯಿತು ಎಂಬುದನ್ನು ಅತ್ಯುನ್ನತ ಆರ್ಥಿಕ ಶಾಲೆಗಳ ಪ್ರಧಾನ ಶಿಕ್ಷಕರೇ ಒಪ್ಪಿಕೊಳ್ಳುತ್ತಾರೆ.[೧೭] ವಿದ್ಯಾರ್ಥಿಗಳು ತರಬೇತಿ ಸಮಯದಲ್ಲಿ ತಿಳಿದುಕೊಳ್ಳುವ[೧೫][೧೭], ಸಮಾಜದಲ್ಲಿ MBAಗಳ ಪಾತ್ರಗಳ ಬಗ್ಗೆ ಸಾಮಾನ್ಯ ಅವಲೋಕನ[೧೮] ಹಾಗೂ ಆರ್ಥಿಕ ಹಿಂಜರಿತಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಗ್ರಹಿಕೆ ಕುರಿತಾದ ಲೇಖನಗಳು ಪ್ರಕಟವಾಗಿವೆ.

ಇದನ್ನೂ ಗಮನಿಸಿ

[ಬದಲಾಯಿಸಿ]

ಸಾಮಾನ್ಯ ಮಾಹಿತಿ

[ಬದಲಾಯಿಸಿ]

ಇತರೆ ಉದ್ಯಮ ಪದವಿಗಳು ಹಾಗೂ ಪ್ರಮಾಣೀಕೃತ ಶಿಕ್ಷಣಗಳು

[ಬದಲಾಯಿಸಿ]

ಪ್ರಮಾಣೀಕೃತ ಶಿಕ್ಷಣಗಳು

ಸ್ನಾತಕಪೂರ್ವ ಪದವಿ

ಪದವಿ

ಡಾಕ್ಟರೇಟ್ ಪದವಿ

MBA ಮಾನ್ಯತೆ ನೀಡುವ ನಿಯೋಗಗಳು

[ಬದಲಾಯಿಸಿ]

ಆಕರಗಳು ಮತ್ತು ಟಿಪ್ಪಣಿಗಳು

[ಬದಲಾಯಿಸಿ]
  1. ರಿಚರ್ಡ್ ಐವಿ ಸ್ಕೂಲ್ ಆಫ್ ಬ್ಯುಸಿನೆಸ್‌ Archived 2010-05-15 ವೇಬ್ಯಾಕ್ ಮೆಷಿನ್ ನಲ್ಲಿ. ನ ಪ್ರಿಟೋರಿಯಾ ವಿಶ್ವವಿದ್ಯಾಲಯವು ಪದವಿ ಪ್ರದಾನ ಮಾಡುವುದಕ್ಕಿಂತ ಮುಂಚೆ ಅಂದರೆ 1950ರಲ್ಲಿ ಪ್ರಥಮ MBA ಪದವಿಯನ್ನು ಪ್ರದಾನ ಮಾಡುತ್ತಿರುವುದನ್ನು ತೋರಿಸುತ್ತಿರುವ ಪುಟ
  2. ಪ್ರಿಟೋರಿಯಾ ವಿಶ್ವವಿದ್ಯಾಲಯ Archived 2006-09-23 ವೇಬ್ಯಾಕ್ ಮೆಷಿನ್ ನಲ್ಲಿ. ದ ಅಮೇರಿಕಾದ ಹೊರಗಡೆ ಪ್ರಥಮವಾಗಿ MBA ಪದವಿ ಪ್ರದಾನವನ್ನು ತೋರಿಸುವ ಪುಟ
  3. ಮೆಕ್‌ಇನ್‌ಟೈರ್, ಜಾನ್‌ R. aಹಾಗೂ ಇಲನ್ ಅಲನ್, eds. (2005), ಬ್ಯುಸಿನೆಸ್ ಅಂಡ್ ಮ್ಯಾನೇಜ್‌ಮೆಂಟ್ ಎಜ್ಯುಕೇಷನ್ ಇನ್ ಟ್ರಾನ್ಸಿಷನಿಂಗ್ ಅಂಡ್ ಡೆವಲಪಿಂಗ್ ಕಂಟ್ರೀಸ್: ಎ ಹ್ಯಾಂಡ್‌ಬುಕ್, ಅರ್ಮಾಂಕ್, NY: ME ಶಾರ್ಪ್‌.
  4. "MBA ಮಾನ್ಯತಾ ಸಂಸ್ಥೆಗಳಲ್ಲಿ ಇರುವ ವ್ಯತ್ಯಾಸಗಳು". Archived from the original on 2010-04-14. Retrieved 2010-01-15.
  5. "2008-2009ರ ಸಾಲಿನ ಕ್ರಮಬದ್ಧವಾದ ಮಾನ್ಯತಾ ಸಂಸ್ಥೆಗಳು". Archived from the original on 2014-09-23. Retrieved 2010-01-15.
  6. Koenig, Ann (2004-09-18). "Higher Education Accreditation in the United States" (PDF). EAIE Conference. Archived from the original (PDF) on 2006-11-02. Retrieved 2010-01-15. {{cite web}}: Unknown parameter |coauthors= ignored (|author= suggested) (help)
  7. Ward, Barabara (31 July 2009). "GRE: Wharton joins the club". MBA Channel.
  8. ಅಲಾನ್, ಇಲನ್ ಹಾಗೂ ಜಾನ್‌ R. ಮೆಕ್‌ಇನ್‌ಟೈರ್, eds. (2005), ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಎಜ್ಯುಕೇಷನ್ ಇನ್ ಚೀನಾ: ಟ್ರಾನ್ಸಿಷನ್, ಪೆಡಾಗಾಜಿ ಅಂಡ್ ಟ್ರೈನಿಂಗ್, ಸಿಂಗಪೂರ್: ವರ್ಲ್ಡ್ ಸೈಂಟಿಫಿಕ್.
  9. ಸೆಲಿಂಗೊ, ಜೆಫ್ರಿ. ಎ ಸೆಲ್ಫ್-ಪಬ್ಲಿಷ್ಡ್‌ ಕಾಲೇಜ್ ಗೈಡ್ ಗೋಸ್ ಬಿಗ್-ಟೈಮ್, ಅಂಡ್ ಎಜ್ಯುಕೇಟರ್ಸ್‌ ಕ್ರೈ ಫೌಲ್. Archived 2007-12-15 ವೇಬ್ಯಾಕ್ ಮೆಷಿನ್ ನಲ್ಲಿ.. ಕ್ರಾನಿಕಲ್ ಆಫ್ ಹೈಯರ್ ಎಜ್ಯುಕೇಷನ್ (1997-11-07).
  10. ಬೆಡಿಯೆನ್, ಆರ್ಥರ್ G. ಕೇವಿಯಟ್ ಎಂಪ್ಟರ್: ದಿ ಗೌರ್ಮನ್ ರಿಪೋರ್ಟ್. ದಿ ಇಂಡಸ್ಟ್ರಿಯಲ್ ಆರ್ಗನೈಜೇಷನಲ್ ಸೈಕಾಲಜಿಸ್ಟ್ (ಜೂನ್ 2002).
  11. "Caution and Controversy". University of Illinois at Urbana-Champaign. Archived from the original on 2007-10-26. Retrieved 2005-09-06. {{cite web}}: Cite has empty unknown parameter: |coauthors= (help)
  12. ೧೨.೦ ೧೨.೧ Schatz, Martin (1993). "What's Wrong with MBA Ranking Surveys?". Management Research News. 16 (7): 15–18. doi:10.1108/eb028322. Archived from the original on 2013-04-12. Retrieved 2010-01-15. {{cite journal}}: Cite has empty unknown parameter: |coauthors= (help)
  13. Hemel, Daniel J (2004-04-12). "HBS Blocks Media Access to Students". The Harvard Crimson. Archived from the original on 2009-08-06. Retrieved 2008-01-29.
  14. ಅಫಿಶಿಯಲ್ MBA ಗೈಡ್ Archived 2010-06-12 ವೇಬ್ಯಾಕ್ ಮೆಷಿನ್ ನಲ್ಲಿ. ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಸಂಶೋಧಕರು ಹಲವಾರು ಅವಶ್ಯಕತೆಗಳು ಹಾಗೂ ಅವುಗಳನ್ನು ಒಗ್ಗೂಡಿಸಿ ದೊಡ್ಡ ಮಟ್ಟದಲ್ಲಿ ಹೆಚ್ಚಿನ MBA ಶಿಕ್ಷಣಗಳಿಗೆ ಶ್ರೇಯಾಂಕಗಳನ್ನು ನೀಡುತ್ತಾರೆ..
  15. ೧೫.೦ ೧೫.೧ Holland, Kelley (14 March 2009). "Is It Time to Retrain B-Schools?". The New York Times.
  16. Stossel, John (19 June 2009). "The New Normal". 20/20. ABC News.
  17. ೧೭.೦ ೧೭.೧ Bradshaw, Della (18 June 2009). "Deans fight crisis fires with MBA overhaul". Financial Times. Archived from the original on 1 ಜನವರಿ 2011. Retrieved 15 ಜನವರಿ 2010.
  18. Stewart, Matthew (25 March 2009). "RIP, MBA". Slate. Archived from the original on 9 ಫೆಬ್ರವರಿ 2010. Retrieved 15 ಜನವರಿ 2010.


ಹೊರಗಿನ ಕೊಂಡಿಗಳು

[ಬದಲಾಯಿಸಿ]

MBA ಶ್ರೇಯಾಂಕಗಳ ಮೂಲಗಳು

[ಬದಲಾಯಿಸಿ]

ಸಂಬಂಧಿತ ಮಾಹಿತಿ

[ಬದಲಾಯಿಸಿ]