ಉಪ್ಪಿಮುಳ್ಳು
ಗೋಚರ
| Azima tetracantha | |
|---|---|
| Scientific classification | |
| ಸಾಮ್ರಾಜ್ಯ: | |
| (ಶ್ರೇಣಿಯಿಲ್ಲದ್ದು): | |
| (ಶ್ರೇಣಿಯಿಲ್ಲದ್ದು): | |
| (ಶ್ರೇಣಿಯಿಲ್ಲದ್ದು): | |
| ಗಣ: | |
| ಕುಟುಂಬ: | |
| ಕುಲ: | |
| ಪ್ರಜಾತಿ: | A. tetracantha |
| Binomial name | |
| Azima tetracantha | |
ಈ ಗಿಡವು ಕಳ್ಳಿ ಕುರುಚಲು ಸಸ್ಯಾವರಣದಲ್ಲಿ,ಊರಹೊರವಲಯದಲ್ಲಿ ಮತ್ತು ಪಾಳುಕೋಟೆಯ ಗೋಡೆಯ ಮೇಲೆ ಪೊದೆಯಂತೆ ಬೆಳೆಯುತ್ತದೆ. ಕೆಲವು ಕಡೆಗಳಲ್ಲಿ ಇದನ್ನು ಬೇಲಿಗಿಡವಾಗಿಯೂ ಸಹ ಬೆಳೆಸುತ್ತಾರೆ. ಗಿಡದ ಪ್ರತಿ ಗಿಣ್ಣಿನಲ್ಲಿ ೪ ಮುಳ್ಳುಗಳಿರುತ್ತವೆ ಮತ್ತು ಅವುಗಳ ಉದ್ದ ಸುಮಾರು ೩ಸೆ.ಮೀ.ನಷ್ಟಿರುತ್ತದೆ. ಅಂಡಾಕಾರದ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಮಾಸಲು ಬಿಳುಪಿನ ಅತಿ ಸಣ್ಣ ಹೂಗಳು ಸಾಮಾನ್ಯವಾಗಿ ಎಲೆಯ ಕಂಕುಳಿನಲ್ಲಿರುತ್ತವೆ. ಬಲಿತ ಹಣ್ಣುಗಳು ಬಿಳಿ ಮಣಿಗಳಂತಿದ್ದು ನೋಡಲು ಆಕರ್ಷಕವಾಗಿರುತ್ತವೆ. ಈ ಹಣ್ಣುಗಳನ್ನು ತಿನ್ನುತ್ತಾರೆ.
ವೈಜ್ಞಾನಿಕ ಹೆಸರು
[ಬದಲಾಯಿಸಿ]ಅಜೀಮ ಟೆಟ್ರಕ್ಯಾಂತ (Azima tetracantha Lamk.)[೧]
ಸಸ್ಯದ ಕುಟುಂಬ
[ಬದಲಾಯಿಸಿ]ಸಾಲ್ವಡೊರೇಸಿ (Salvadoraceae)[೨]
ಕನ್ನಡದ ಇತರ ಹೆಸರುಗಳು
[ಬದಲಾಯಿಸಿ]- ಇಜಂಗು
- ಉಪ್ಪುಗೋಜೆ
- ಎಗಚಿ
- ಎಸಗಳೆ ಮೋಟು
- ಬಿಳಿಉಪ್ಪಿಗಿಡ
- ಸಕಪತ
- ಹುಲ್ಲು ಸುಂಡೆ
ಇತರ ಭಾಷೆಯ ಹೆಸರುಗಳು
[ಬದಲಾಯಿಸಿ]ಉಪಯೋಗಗಳು
[ಬದಲಾಯಿಸಿ]- ಬೇರಿನ ರಸ ಅಥವಾ ಚೂರ್ಣವನ್ನು ಜೇನುತುಪ್ಪದೊಡನೆ ಕಲಸಿ ಇಲಿ ಕಡಿದವರಿಗೆ ಕುಡಿಸುತ್ತಾರೆ.
- ಬೇರನ್ನು ಅರೆದು ಅಕ್ಕಿ ತೊಳೆದ ನೀರಿನೊಡನೆ ಕುಡಿಸುವುದರಿಂದ ಅಧಿಕ ರಜಸ್ರಾವ ಕಡಿಮೆಯಾಗುತ್ತದೆ.
- ವಿಷ ಸೇವಿಸಿದಾಗ ವಾಂತಿ ಮಾಡಿಸಬೇಕಾಗಿ ಬಂದಾಗ ಬೇರನ್ನು ಅರೆದು ಬಿಸಿ ನೀರಿನೊಡನೆ ಕುಡಿಸುತ್ತಾರೆ.
- ಉಪ್ಪಿಮುಳ್ಳುಗಿಡದ ಬೇರು ಅಥವಾ ಕಾಂಡದ ತೊಗಟೆಯನ್ನು ಅರೆದು ಉಗುರು ಸುತ್ತಾಗಿರುವ ಬೆರಳಿಗೆ ಹಾಕಬೇಕು.
- ಬೇರು,ಎಲೆ ಮತ್ತು ತೊಗಟೆಯ ಕಷಾಯಕ್ಕೆ ಚೂರ್ಣಿಸಿದ ಬಜೆ, ಓಂಕಾಳು ಮತ್ತು ಉಪ್ಪು ಸೇರಿಸಿ ಕುಡಿಯುವುದರಿಂದ ಭೇದಿ ವಾಸಿಯಾಗುತ್ತದೆ.
- ಎಲೆಯ ಚೂರ್ಣ ಸೇವನೆಯಿಂದ ವಾತ ರೋಗಗಳು ವಾಸಿಯಾಗುತ್ತವೆ.
- ಎಲೆಯ ಕಷಾಯ ಅಥವಾ ಚೂರ್ಣ ಸೇವನೆಯಿಂದ ಕೆಮ್ಮು ಕಡಿಮೆಯಾಗುತ್ತದೆ.
- ಉಪ್ಪಿಮುಳ್ಳು ಗಿಡದ ಸ್ವರಸ ಕುಡಿಸುವುದರಿಂದ ಪಾದರಸ ಮತ್ತು ಬಿಳಿಪಾಷಾಣ ಸೇವಿಸಿದ ನಂಜು ಪರಿಹಾರವಾಗುತ್ತದೆ.
- ಉಪ್ಪಿಮುಳ್ಳಿನ ಸೊಪ್ಪನ್ನು ಸದಾಕಾಲ ತರಕಾರಿಯಂತೆ ಬಳಸುವುದರಿಂದ ಮೂಳೆಗೆ ಸಂಬಂಧಿಸಿದ ರೋಗಗಳು ಬರುವುದಿಲ್ಲ.
- ದದ್ದು-ಗಂಧೆ ಎದ್ದವರಿಗೆ ಬೆಳಿಗ್ಗೆ ರಾತ್ರಿ ಊಟದೊಡನೆ ಸೊಪ್ಪನ್ನು ಬೇಯಿಸಿ ತಿನ್ನಿಸಬೇಕು.
ಪಶುರೋಗ ಚಿಕಿತ್ಸೆಯಲ್ಲಿ
[ಬದಲಾಯಿಸಿ]ಉಪ್ಪಿಮುಳ್ಳಿನ ಸೊಪ್ಪು ಮುಕ್ಕಾಲು ತೊಲ, ಬಾಗೆಮರದ ಚಕ್ಕೆ ಮುಕ್ಕಾಲು ತೊಲ, ಕಾಡುಮೆಣಸಿನ ಸೊಪ್ಪು ಮುಕ್ಕಾಲು ತೊಲ, ಕರಿಮೆಣಸು ಎರಡು ತೊಲ, ಬೆಳ್ಳುಳ್ಳಿ ಒಂದು ತೊಲ ಇವುಗಳನ್ನು ಅರೆದು ಬಿಸಿನೀರಿನಲ್ಲಿ ದಿವಸಕ್ಕೊಮ್ಮೆ ಕುಡಿಸುವುದರಿಂದ ನರಡಿ (ಗುಲ್ಮರೋಗ) ವಾಸಿಯಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ http://tropical.theferns.info/viewtropical.php?id=Azima+tetracantha
- ↑ http://www.inaturalist.org/taxa/71616-Salvadoraceae
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |