ಈಜಿಪ್ತಿನ ಪುರಾತನ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುರಾತನ ಈಜಿಪ್ತ್‌ನ ಧರ್ಮ ವು ಬಹುದೇವತಾ ಸಿದ್ಧಾಂತದ ನಂಬಿಕೆಗಳು ಮತ್ತು ಪದ್ಧತಿಗಳ ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು, ಪುರಾತನ ಈಜಿಪ್ತ್‌‌ ಸಮಾಜದ ಒಂದು ಅವಿಭಾಜ್ಯ ಭಾಗವಾಗಿದೆ. ಇದು ಹಲವಾರು ದೇವತೆಗಳೊಂದಿಗೆ ಈಜಿಪ್ತಿಯನ್ನರ ಪಾರಸ್ಪರಿಕ ಕ್ರಿಯೆಯ ಮೇಲೆ ಕೇಂದ್ರಿತವಾಗಿದೆ. ಈ ದೇವತೆಗಳು ನಿಸರ್ಗದ ಶಕ್ತಿಗಳು ಮತ್ತು ಅಂಶಗಳಲ್ಲಿ ಇವೆ ಮತ್ತು ಅವುಗಳ ನಿಯಂತ್ರಣದಲ್ಲಿವೆ ಎಂದು ಅವರು ನಂಬಿದ್ದರು. ಈ ದೇವತೆಗಳ ಕುರಿತ ಪುರಾಣಗಳು, ಅವು ಪ್ರತಿನಿಧಿಸುವ ಶಕ್ತಿಗಳ ಹುಟ್ಟು ಮತ್ತು ವರ್ತನೆಯನ್ನು ವಿವರಿಸುವುದಕ್ಕಾಗಿ ಇವೆ ಮತ್ತು ಈಜಿಪ್ತ್‌‌ನ ಧರ್ಮದ ಪದ್ಧತಿಗಳು ದೇವರುಗಳ ವರಕ್ಕಾಗಿ ನಡೆಸಿದ ಪ್ರಯತ್ನಗಳಾಗಿವೆ. ಔಪಚಾರಿಕ ಧಾರ್ಮಿಕ ಪದ್ಧತಿಗಳು ಈಜಿಪ್ತ್‌‌ನ ರಾಜ, ಫೇರೋ ಮೇಲೆ ಕೇಂದ್ರಿತವಾಗಿವೆ. ಫೇರೋ ಮನುಷ್ಯನೇ ಆಗಿದ್ದರೂ, ಆತ ದೇವರ ವಂಶದವನು ಎಂದು ನಂಬಲಾಗಿತ್ತು. ಆತ ತನ್ನ ಜನರು ಮತ್ತು ದೇವರ ಮಧ್ಯೆ ಮಧ್ಯವರ್ತಿಯಾಗಿ ವರ್ತಿಸುತ್ತಿದ್ದನು. ಜೊತೆಗೆ ದೇವರು ವಿಶ್ವದಲ್ಲಿ ಸುವ್ಯವಸ್ಥೆಯನ್ನು ಕಾಪಾಡುವಂತೆ ಮಾಡಲು ಧಾರ್ಮಿಕ ವಿಧಿಗಳು ಮತ್ತು ಅರ್ಪಣೆಗಳ ಮೂಲಕ ದೇವರನ್ನು ಸತತವಾಗಿ ನೋಡಿಕೊಳ್ಳುವ ಬಾಧ್ಯತೆ ಹೊಂದಿದ್ದನು. ಆದ್ದರಿಂದಲೇ, ಪ್ರಭುತ್ವವು ಈ ಧಾರ್ಮಿಕ ವಿಧಿಗಳ ನಿರ್ವಹಣೆಗೆ ಮತ್ತು ಅವುಗಳನ್ನು ನಡೆಸುವ ದೇವಾಲಯಗಳ ನಿರ್ಮಾಣಕ್ಕೆ ಅಪಾರ ಸಂಪನ್ಮೂಲವನ್ನು ಕಾದಿರಿಸುತ್ತಿತ್ತು. ವ್ಯಕ್ತಿಗಳು ಕೂಡ ದೇವರೊಂದಿಗೆ ಸ್ವಂತ ಉದ್ದೇಶಗಳಿಗಾಗಿ ಸಂವಹನ ಮಾಡಬಹುದಿತ್ತು, ಪ್ರಾರ್ಥನೆಯ ಮೂಲಕ ಅಥವಾ ಏನಾದರೂ ಯಕ್ಷಿಣಿ ಮಾಡುವಂತೆ ಆಗ್ರಹಿಸುವ ಮೂಲಕ ಜನರು ತಮಗೆ ಸಹಾಯ ಮಾಡುವಂತೆ ದೇವರನ್ನು ಕೋರುತ್ತಿದ್ದರು. ಈ ಜನಪ್ರಿಯ ಧಾರ್ಮಿಕ ಪದ್ಧತಿಗಳು ಔಪಚಾರಿಕ ಧಾರ್ಮಿಕ ವಿಧಿಗಳು ಮತ್ತು ಸಂಸ್ಥೆಗಳಿಂದ ಭಿನ್ನವಿದ್ದವು, ಆದರೆ ಇವುಗಳೊಂದಿಗೆ ಹತ್ತಿರದ ಸಂಬಂಧ ಹೊಂದಿದ್ದವು. ಈಜಿಪ್ತ್‌‌ನ ಇತಿಹಾಸದಲ್ಲಿ ಫೇರೋನ ಸ್ಥಾನಮಾನ ಕುಸಿಯುತ್ತಿರುವಂತೆ ಜನಪ್ರಿಯ ಧಾರ್ಮಿಕ ಸಂಪ್ರದಾಯಗಳು ಕ್ರಮೇಣ ಅತ್ಯಂತ ಪ್ರಮುಖವಾಗಿ ಬೆಳೆಯಿತು. ಇವರ ಧರ್ಮದ ಇನ್ನೊಂದು ಮಹತ್ವದ ಅಂಶವೆಂದರೆ ಮರಣಾನಂತರದ ಬದುಕಿನಲ್ಲಿ ಮತ್ತು ಅಂತ್ಯಸಂಸ್ಕಾರ ಪದ್ಧತಿಗಳಲ್ಲಿ ಆಳವಾದ ನಂಬಿಕೆ ಬೆಳೆಸಿಕೊಂಡಿದ್ದು. ಈಜಿಪ್ತಿಯನ್ನರು ಮರಣಾನಂತರ ತಮ್ಮ ಆತ್ಮಗಳ ಬದುಕುಳಿಯುವಿಕೆಯನ್ನು ಖಚಿತಪಡಿಸಿಕೊಳ್ಳಲು ಬಹಳ ಪ್ರಯತ್ನಪಟ್ಟರು. ಗೋರಿಗಳ ನಿರ್ಮಾಣದೊಂದಿಗೆ ಮಸಣದಲ್ಲಿಡುವ ಸಾಮಗ್ರಿಗಳು ಮತ್ತು ಮರಣಿಸಿದ ವ್ಯಕ್ತಿಗಳ ದೇಹಗಳನ್ನು ಮತ್ತು ಚೈತನ್ಯವನ್ನು ಕಾಪಾಡಲು ಅರ್ಪಣೆಗಳನ್ನು ನೀಡಲು ಮಹತ್ವ ನೀಡಿದ್ದಾರೆ. ಧರ್ಮವು ಈಜಿಪ್ತ್‌‌ನ ಪೂರ್ವೇತಿಹಾಸದಲ್ಲಿ ಬೇರುಗಳನ್ನು ಹೊಂದಿದ್ದು, ಸುಮಾರು 3,000 ವರ್ಷಗಳಷ್ಟು ಹಿಂದಿನದಾಗಿದೆ. ಕಾಲಾಂತರದಲ್ಲಿ ನಿರ್ದಿಷ್ಟ ದೇವರುಗಳ ಮಹತ್ವವು ಏರುಪೇರಾದಂತೆ ಧಾರ್ಮಿಕ ನಂಬಿಕೆಗಳ ವಿವರಗಳು ಬದಲಾದವು ಮತ್ತು ಅವುಗಳೊಡನೆ ಇದ್ದ ಆಳವಾದ ಸಂಕೀರ್ಣ ಸಂಬಂಧಗಳು ಪಲ್ಲಟಗೊಂಡವು. ವಿವಿಧ ಕಾಲಘಟ್ಟದಲ್ಲಿ, ಸೂರ್ಯ ದೇವರಾದ ರಾ, ಸೃಷ್ಟಿಕರ್ತ ದೇವರಾದ ಅಮುನ್‌ ಮತ್ತು ಮಾತೃ ದೇವತೆ ಐಸಿಸ್‌ ಸೇರಿದಂತೆ ಕೆಲವು ದೇವರುಗಳು ಬೇರೆ ದೇವರುಗಳಿಗಿಂತ ಪ್ರಾಮುಖ್ಯತೆ ಪಡೆದುಕೊಂಡರು. ಕಿರು ಅವಧಿಯವರೆಗೆ ಫೇರೋ ಅಖೆನೇಟನ್‌ ಪ್ರಸಾರ ಮಾಡಿದ ಅಸ್ವಾಭಾವಿಕ ಮತಧರ್ಮದಲ್ಲಿ ಏಕ ದೇವರಾದ ಅಟೆನ್‌, ಸಾಂಪ್ರದಾಯಿಕ ದೇವತಾಗಣವನ್ನು ಪಲ್ಲಟಗೊಳಿಸಿತ್ತು. ಆದಾಗ್ಯೂ ಹಲವಾರು ಅವಧಿಯಲ್ಲಿ ವಿದೇಶೀ ಆಳ್ವಿಕೆಯಿದ್ದರೂ ಕ್ರಿಸ್ತಶಕ ಆರಂಭಿಕ ಶತಮಾನಗಳಲ್ಲಿ ಕ್ರೈಸ್ತಧರ್ಮ ಬರುವವರೆಗೂ ಒಟ್ಟಾರೆ ಈ ವ್ಯವಸ್ಥೆಯು ಅಸ್ತಿತ್ವದಲ್ಲಿತ್ತು. ಈ ವ್ಯವಸ್ಥೆಯ ಅಸಂಖ್ಯಾತ ಧಾರ್ಮಿಕ ಬರಹಗಳು ಮತ್ತು ಸ್ಮಾರಕಗಳನ್ನು ಉಳಿಸಿದೆ, ಜೊತೆಗೆ ಪುರಾತನ ಮತ್ತು ಆಧುನಿಕ ಸಂಸ್ಕೃತಿಯ ಮೇಲೆ ಮಹತ್ವದ ಪ್ರಭಾವ ಬೀರಿದೆ.

ದೇವತಾಶಾಸ್ತ್ರ[ಬದಲಾಯಿಸಿ]

ಧರ್ಮವು ಈಜಿಪ್ತಿಯನ್ನರ ಸಂಸ್ಕೃತಿಯ ಪ್ರತಿಯೊಂದು ಅಂಶವನ್ನು ಪ್ರಭಾವಿಸಿದ್ದರೂ, ಅವರು "ಧರ್ಮ"ಕ್ಕೆ ಬೇರೆ ಪ್ರತ್ಯೇಕ ಪದವನ್ನು ಹೊಂದಿರಲಿಲ್ಲ. ಅವರ ಧರ್ಮವು ಒಂದು ಅಖಂಡವಾದ ಸಂಸ್ಥೆಯಾಗಿರಲಿಲ್ಲ, ಆದರೆ ವಿವಿಧ ಬಗೆಯ ನಂಬಿಕೆಗಳು ಮತ್ತು ಪದ್ಧತಿಗಳನ್ನು ಹೊಂದಿದ್ದು, ಇವು ಮನುಷ್ಯರು ಮತ್ತು ದೈವಿಕ ಕ್ಷೇತ್ರದ ನಡುವಣ ಸಂವಹನದ ಮೇಲೆ ಅವರ ಸಾಮಾನ್ಯ ಲಕ್ಷ್ಯದೊಂದಿಗೆ ಸಂಬಂಧ ಹೊಂದಿದ್ದವು. ವಿಶ್ವದ ಕುರಿತಾದ ಈಜಿಪ್ತಿಯನ್ನರ ಅರ್ಥೈಸಿಕೊಳ್ಳುವಿಕೆಯೊಂದಿಗೆ ಈ ಕ್ಷೇತ್ರವನ್ನು ಆವರಿಸಿಕೊಂಡ ದೇವರುಗಳನ್ನು ಕೊಂಡಿಯಾಗಿಸಬಹುದು.[೧]

ದೇವತೆಗಳು[ಬದಲಾಯಿಸಿ]

ದೇವರುಗಳಾದ ಒಸಿರಿಸ್‌, ಅನುಬಿಸ್ ಮತ್ತು ಹೋರಸ್‌

ನಿಸರ್ಗದ ವಿದ್ಯಮಾನಗಳು ದೈವಿಕ ಶಕ್ತಿಯಲ್ಲಿವೆ ಮತ್ತು ಅವು ದೈವಿಕವಾದವು ಎಂದು ಈಜಿಪ್ತಿಯನ್ನರು ನಂಬಿದ್ದರು.[೨] ದೈವೀಕರಣಗೊಂಡ ಈ ಶಕ್ತಿಗಳು ಮೂಲವಸ್ತುಗಳು, ಪ್ರಾಣಿಗಳ ಲಕ್ಷಣಗಳು ಅಥವಾ ಅಮೂರ್ತ ಶಕ್ತಿಗಳನ್ನು ಒಳಗೊಂಡಿದ್ದವು. ಈಜಿಪ್ತಿಯನ್ನರು ದೇವತಾಗಣದಲ್ಲಿ ನಂಬಿಕೆ ಹೊಂದಿದ್ದರು, ಈ ಗಣಗಳು ನಿಸರ್ಗ ಮತ್ತು ಮಾನವ ಸಮಾಜದ ಎಲ್ಲ ಅಂಶಗಳನ್ನು ಒಳಗೊಂಡಿದ್ದವು. ಅವರ ಧಾರ್ಮಿಕ ಪದ್ಧತಿಗಳು ಈ ವಿದ್ಯಮಾನಗಳನ್ನು ಉಳಿಸಿಕೊಂಡು, ಅವನ್ನು ಶಾಂತಗೊಳಿಸುವ ಮತ್ತು ಮಾನವ ಅನುಕೂಲಕ್ಕಾಗಿ ಪರಿವರ್ತಿಸುವ ಪ್ರಯತ್ನಗಳಾಗಿದ್ದವು.[೩] ಈ ಬಹುದೇವತಾ ಸಿದ್ಧಾಂತದ ವ್ಯವಸ್ಥೆಯು ಬಹಳ ಸಂಕೀರ್ಣವಾಗಿತ್ತು, ಕೆಲವು ದೇವತೆಗಳು ಅನೇಕ ಭಿನ್ನ ರೀತಿಯಲ್ಲಿ ಮೈದೋರಿರುತ್ತವೆ ಎಂದು ನಂಬಲಾಗಿತ್ತು. ಅಲ್ಲದೇ ಕೆಲವು ದೇವರುಗಳು ಬಹುಮುಖಿ ಪುರಾಣದ ಪಾತ್ರಗಳನ್ನು ಹೊಂದಿದ್ದವು. ಇದಕ್ಕೆ ಪ್ರತಿಯಾಗಿ, ಸೂರ್ಯನಂತಹ ಅನೇಕ ಸ್ವಾಭಾವಿಕ ಶಕ್ತಿಗಳು ಬಹುಸಂಖ್ಯಾತ ದೇವತೆಗಳೊಂದಿಗೆ ಸಂಬಂಧ ಹೊಂದಿದ್ದವು. ವಿಶ್ವದಲ್ಲಿ ಬಹುಮುಖ್ಯ ಪಾತ್ರ ಹೊಂದಿದ್ದ ದೇವರುಗಳಿಂದ ನಗಣ್ಯವೆನ್ನಿಸುವ ದೇವತೆಗಳು ಅಥವಾ ಬಹಳ ಸೀಮಿತ ಅಥವಾ ಸ್ಥಳೀಯ ಕಾರ್ಯಗಳನ್ನು ಹೊಂದಿರುವ 'ರಾಕ್ಷಸ'ರವರೆಗೆ ದೇವತಾಗಣವು ವೈವಿಧ್ಯಮಯ ಶ್ರೇಣಿಯನ್ನು ಹೊಂದಿದ್ದಿತು.[೪] ವಿದೇಶೀ ಸಂಸ್ಕೃತಿಗಳಿಂದ ಅಳವಡಿಸಿಕೊಂಡ ದೇವರುಗಳನ್ನು, ಅಷ್ಟೇಕೆ ಕೆಲವೊಮ್ಮೆ ಮನುಷ್ಯರನ್ನೂ ಒಳಗೊಳ್ಳಬಹುದಿತ್ತು: ಮರಣಿಸಿದ ಫೇರೋನನ್ನು ದೈವಿಕ ಎಂದು ನಂಬಲಾಗಿತ್ತು, ಕೆಲವೊಮ್ಮೆ ದೈವೀಕರಿಸಲಾಗಿದ್ದ ಇಮ್ಹೊಟೆಪ್‌ ನಂತಹ ಸಾಮಾನ್ಯ ದೇವರಿಂದ ಅವರನ್ನು ಪ್ರತ್ಯೇಕಿಸಲಾಗುತ್ತಿತ್ತು.[೫] ಕಲೆಯಲ್ಲಿ ದೇವರ ಚಿತ್ರಣಗಳು ದೇವರು ಹೇಗೆ ಕಾಣಬಹುದು ಎಂಬುದರ ಅಕ್ಷರಶಃ ಪ್ರತಿನಿಧಿತ್ವಗಳಾಗಿರಲಿಲ್ಲ, ಏಕೆಂದರೆ ದೇವರ ನಿಜವಾದ ಲಕ್ಷಣಗಳು ನಿಗೂಢವೆಂದು ಭಾವಿಸಲಾಗಿತ್ತು. ಬದಲಿಗೆ, ಈ ಚಿತ್ರಣಗಳು ಪ್ರತಿ ದೇವತೆಗಳ ಲಕ್ಷಣಗಳನ್ನು ಸೂಚಿಸುವ ಸಂಕೇತಾತ್ಮಕ ಚಿತ್ರಣಗಳನ್ನು ಬಳಸಿಕೊಂಡು, ಅಮೂರ್ತ ದೇವತೆಗಳಿಗೆ ಗುರುತಿಸಬಲ್ಲ ಸ್ವರೂಪಗಳನ್ನು ನೀಡಿದವು.[೬] ಉದಾಹರಣೆಗೆ, ಅಂತ್ಯಸಂಸ್ಕಾರದ ದೇವರಾದ ಅನುಬಿಸ್ ಅನ್ನು ಗುಳ್ಳೆನರಿಯ ಹಾಗೆ ಚಿತ್ರಿಸಲಾಗಿದೆ, ಗುಳ್ಳೆನರಿಯ ಶವಗಳನ್ನು ಕಿತ್ತುತಿನ್ನುವ ಅಭ್ಯಾಸಗಳು ದೇಹದ ಸಂರಕ್ಷಣೆಗೆ ಅಪಾಯಕಾರಿ. ಈ ಅಪಾಯವನ್ನು ಎದುರಿಸಿ, ಅದನ್ನು ರಕ್ಷಣೆಗಾಗಿ ಅಳವಡಿಸಿಕೊಳ್ಳಲು ಗುಳ್ಳೆನರಿಯ ಚಿತ್ರವನ್ನು ಬಳಸಲಾಗಿದೆ. ನರಿಯ ಕಪ್ಪು ಚರ್ಮವು ಮಮ್ಮಿ ಮಾಡಲಾದ ಮಾಂಸದ ಬಣ್ಣ ಮತ್ತು ಫಲವತ್ತಾದ ಕಪ್ಪು ಮಣ್ಣಿನ ಸಂಕೇತವಾಗಿದ್ದು, ಈಜಿಪ್ತಿಯನ್ನರು ಅದನ್ನು ಪುನರ್ಜನ್ಮದ ಸಂಕೇತವಾಗಿ ನೋಡಿದ್ದಾರೆ. ಆದರೆ ಈ ಬಗೆಯ ಚಿತ್ರೀಕರಣವು ನಿಗದಿತವಾಗಿಯೇನೂ ಇರಲಿಲ್ಲ ಮತ್ತು ಅನೇಕ ದೇವತೆಗಳನ್ನು ಒಂದಕ್ಕಿಂತ ಹೆಚ್ಚು ವಿಧದಲ್ಲಿ ಚಿತ್ರಿಸಲಾಗಿದೆ.[೭] ಅನೇಕ ದೇವತೆಗಳು ಈಜಿಪ್ತ್‌‌ನ ನಿರ್ದಿಷ್ಟ ಪ್ರದೇಶದೊಂದಿಗೆ ಸಂಬಂಧ ಹೊಂದಿದ್ದು, ಅವುಗಳ ಆರಾಧನಾ ಪದ್ಧತಿಗಳು ಬಹುಮುಖ್ಯವಾಗಿವೆ. ಆದರೆ ಈ ಸಂಬಂಧಗಳು ಕಾಲಾಂತರದಲ್ಲಿ ಬದಲಾವಣೆ ಹೊಂದಿದವು ಮತ್ತು ಆ ಸ್ಥಳದೊಂದಿಗೆ ಸಂಬಂಧ ಹೊಂದಿದ ದೇವರು ಅಲ್ಲಿಂದಲೇ ಹುಟ್ಟಿದ್ದು ಎಂದೇನಿಲ್ಲ. ಉದಾಹರಣೆಗೆ, ಮೊಂಥು ದೇವರು ಥೀಬ್ಸ್‌ ನಗರದ ಮೂಲ ಪೋಷಕನಾಗಿದ್ದ. ಮಧ್ಯಕಾಲೀನ ಸಾಮ್ರಾಜ್ಯದ ಅವಧಿಯಲ್ಲಿ, ಆ ದೇವರ ಪಾತ್ರವನ್ನು ಅಮುನ್ ದೇವರು ಬಹಿಸಿದ, ಈ ದೇವರು ಮತ್ತೆಲ್ಲೋ ಮೂಲವನ್ನು ಹೊಂದಿದ್ದಿರಬಹುದು. ಪ್ರತಿ ದೇವರ ರಾಷ್ಟ್ರೀಯ ಜನಪ್ರಿಯತೆ ಮತ್ತು ಮಹತ್ವವು ಇದೇ ರೀತಿಯಾಗಿ ಏರಿಳಿತಗಳನ್ನು ಕಂಡಿದೆ.[೮]

ಅಮುನ್‌-ರಾ, ಅಮುನ್‌ ದೇವರ ಕೆಂಪು ಊದಾ ಬಣ್ಣದ ಶಿರೋಉಡುಗೆಯನ್ನು ಧರಿಸಿರುವುದು ಮತ್ತು ರಾ ದೇವರನ್ನು ಪ್ರತಿನಿಧಿಸುವ ಸೌರ ಫಲಕ/ತಟ್ಟೆ

ದೇವತೆಗಳ ನಡುವಣ ಸಂಬಂಧಗಳು[ಬದಲಾಯಿಸಿ]

ಈಜಿಪ್ತಿನ ದೇವರುಗಳು ಬಹಳ ಸಂಕೀರ್ಣವಾದ ಅಂತರ-ಸಂಬಂಧಗಳನ್ನು ಹೊಂದಿದ್ದು, ಅದು ಅವು ಪ್ರತಿನಿಧಿಸುವ ಶಕ್ತಿಗಳ ಪಾರಸ್ಪರಿಕ ಕ್ರಿಯೆಯನ್ನು ಭಾಗಶಃ ಪ್ರತಿಫಲಿಸುತ್ತವೆ. ಈಜಿಪ್ತಿಯನ್ನರು ಹೆಚ್ಚಿನ ವೇಳೆ ದೇವರುಗಳನ್ನು ಈ ಸಂಬಂಧಗಳು ಪ್ರತಿಬಿಂಬಿಸುವಂತೆ ಗುಂಪುಮಾಡಿದ್ದಾರೆ. ಕೆಲವು ಗುಂಪುಗಳ ದೇವತೆಗಳು ಮಧ್ಯ ಅವಧಿಯ ಸ್ತರದ ಗಾತ್ರಗಳನ್ನು ಹೊಂದಿದ್ದು, ಅವು ಒಂದೇ ಬಗೆಯ ಕಾರ್ಯಗಳಿಂದ ಜೊತೆಗೂಡಿವೆ. ಹೆಚ್ಚಿನ ವೇಳೆ ಇವುಗಳು ಹೆಚ್ಚೇನೂ ವೈಯಕ್ತಿಕ ಅಸ್ತಿತ್ವವಿಲ್ಲದ ಸ್ವಲ್ಪ ನಗಣ್ಯ ದೇವತೆಗಳನ್ನು ಹೊಂದಿರುತ್ತವೆ. ಬೇರೆ ಸಂಯೋಜನೆಗಳು ಸ್ವತಂತ್ರ ದೇವತೆಗಳನ್ನು ಈಜಿಪ್ತಿನ ಪುರಾಣ ಸಾಹಿತ್ಯದಲ್ಲಿ ಸಂಖ್ಯೆಗಳ ಸಾಂಕೇತಿಕ ಅರ್ಥವನ್ನು ಆಧರಿಸಿ ಸಂಬಂಧ ಕಲ್ಪಿಸಲಾಗುತ್ತದೆ; ಉದಾಹರಣೆಗೆ ವಿರುದ್ಧ ವಿದ್ಯಮಾನಗಳ ದ್ವಂದ್ವಗಳನ್ನು ಸಾಮಾನ್ಯವಾಗಿ ಪ್ರತಿನಿಧಿಸುವ ಜೋಡಿಗಳು. ಅತ್ಯಂತ ಸಾಮಾನ್ಯ ಸಂಯೋಜನೆಗಳಲ್ಲಿ ಒಂದು ಎಂದರೆ ತಂದೆ, ತಾಯಿ ಮತ್ತು ಮಗುವಿನ ಕೌಟುಂಬಿಕ ಮುಕ್ಕೂಟವಾಗಿದ್ದು, ಇವನ್ನು ಒಟ್ಟಾಗಿಯೇ ಪೂಜಿಸಲಾಗುತ್ತದೆ. ಕೆಲವು ಗುಂಪುಗಳು ವ್ಯಾಪಕ-ಶ್ರೇಣಿಯ ಮಹತ್ವವನ್ನು ಹೊಂದಿರುತ್ತವೆ. ಅಂತಹ ಗುಂಪು ಎಂದರೆ, ಒಂಬತ್ತು ದೇವತೆಗಳನ್ನು ದೇವತಾಶಾಸ್ತ್ರದ ವ್ಯವಸ್ಥೆಯಲ್ಲಿ ಜೋಡಿಸಿರುವ ಎನ್ನೀಡ್‌, ಇದು ಸೃಷ್ಟಿ, ರಾಜತ್ವ ಮತ್ತು ಮರಣೋತ್ತರದ ಬದುಕಿನ ಪೌರಾಣಿಕ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ.[೯] ದೇವತೆಗಳ ಮಧ್ಯದ ಸಂಬಧಂಗಳನ್ನು ಕೂಡ ವಿವಿಧ ಧಾರ್ಮಿಕ ಪಂಥಗಳ ಸಮನ್ವಯದ ಪ್ರಕ್ರಿಯೆಯಲ್ಲಿ ವ್ಯಕ್ತಪಡಿಸಲಾಗಿದೆ, ಇದರಲ್ಲಿ ಎರಡು ಅಥವಾ ಹೆಚ್ಚು ಭಿನ್ನ ದೇವರನ್ನು ಜೊತೆಗೂಡಿಸಿ, ಒಂದು ಸಂಯುಕ್ತ ದೈವವಾಗುವಂತೆ ಮಾಡಲಾಗಿದೆ. ಈ ಪ್ರಕ್ರಿಯೆಯು ಒಂದು ದೇವರು ಇನ್ನೊಂದರ "ಒಳಗೆ" ಇರುವುದರ ಗುರುತಿಸುವಿಕೆಯಾಗಿದ್ದು, ಎರಡನೆಯ ದೇವರು ಮೊದಲನೆಯದಕ್ಕೆ ಸೇರಿರುವ ಪಾತ್ರವನ್ನು ವಹಿಸುತ್ತದೆ. ಈ ದೈವಗಳ ನಡುವಣ ಕೊಂಡಿಗಳು ಸ್ಥಾಯಿಯಾಗಿರುವುದಿಲ್ಲ ಮತ್ತು ಎರಡು ದೇವರುಗಳು ಒಂದರೊಳಗೊಂದು ಶಾಶ್ವತವಾಗಿ ವಿಲೀನಗೊಳ್ಳುವುದನ್ನು ಪ್ರತಿನಿಧಿಸುವುದಿಲ್ಲ; ಆದ್ದರಿಂದ ಕೆಲವು ದೇವರುಗಳು ಒಂದಕ್ಕಿಂತ ಹೆಚ್ಚು ವಿಭಿನ್ನ ಧಾರ್ಮಿಕ ಪಂಥದ ಸಮನ್ವಯದ ಸಂಬಂಧಗಳನ್ನು ಹೊಂದಿವೆ.[೧೦] ಕೆಲವೊಮ್ಮೆ ಈ ಸಮನ್ವಯವು ಒಂದೇ ರೀತಿಯ ಗುಣಲಕ್ಷಣಗಳಿರುವ ದೇವತೆಗಳನ್ನು ಒಂದುಗೂಡಿಸುತ್ತಿತ್ತು. ಮತ್ತೆ ಕೆಲವೊಮ್ಮೆ ತುಂಬಾ ಭಿನ್ನವಾಗಿರುವ ದೇವರುಗಳನ್ನು ಸಂಯೋಜಿಸುತ್ತಿತ್ತು, ಉದಾಹರಣೆಗೆ ಅಡಗಿದ ಶಕ್ತಿಗಳ ದೇವರಾದ ಅಮುನ್‌ ದೇವರನ್ನು ಸೂರ್ಯ ದೇವತೆಯಾದ ರಾ ಜೊತೆ ಜೋಡಿಸಲಾಗಿದೆ. ಇದರ ಫಲಿತಾಂಶವಾದ ಅಮುನ್-ರಾ ದೇವರು, ಎಲ್ಲ ವಸ್ತುಗಳ ಹಿಂದಿರುವ ಶಕ್ತಿಯನ್ನು ನಿಸರ್ಗದಲ್ಲಿ ಅಗಾಧವಾದ, ಅತ್ಯಂತ ಗೋಚರ ಶಕ್ತಿಯೊಂದಿಗೆ ಒಗ್ಗೂಡಿಸುತ್ತಿತ್ತು.[೧೧]

ಒಗ್ಗೂಡಿಸುವ ಪ್ರವೃತ್ತಿಗಳು[ಬದಲಾಯಿಸಿ]

ಅನೇಕ ದೈವಗಳಿಗೆ ಅವು ಬೇರೆ ದೇವರುಗಳಿಂದ ಶ್ರೇಷ್ಠ ಎಂಬಂತೆ ಕಾಣುವ ಗುಣವಾಚಕಗಳನ್ನು ನೀಡಲಾಗುತ್ತಿತ್ತು, ನೈಸರ್ಗಿಕ ಶಕ್ತಿಗಳ ಬಾಹುಳ್ಯವು ಒಂದು ಬಗೆಯ ಒಗ್ಗೂಡುವಿಕೆಯ ಆಚೆಗಿದೆ ಎಂಬುದನ್ನು ಸೂಚಿಸುವಂತಿರುತ್ತಿತ್ತು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಈಜಿಪ್ತಿನ ಧರ್ಮದಲ್ಲಿ, ಇತಿಹಾಸದ ವಿಭಿನ್ನ ಕಾಲಘಟ್ಟದಲ್ಲಿ ಪರಮ ಮಹತ್ವವನ್ನು ಪಡೆದ ಕೆಲವು ದೇವರುಗಳ ವಿಚಾರದಲ್ಲಿ ಇದು ನಿಜವಾಗಿದೆ. ಹಾಗೆ ಅತಿ ಮಹತ್ವ ಪಡೆದ ದೇವರುಗಳಲ್ಲಿ ರಾಜತ್ವದ ಪೋಷಕ ಹೋರಸ್‌, ಸೂರ್ಯ ದೇವರಾದ ರಾ ಮತ್ತು ಮಾತೃ ದೇವತೆ ಐಸಿಸ್‌ ಸೇರಿವೆ.[೧೨] ಹೊಸ ಸಾಮ್ರಾಜ್ಯದಡಿಯಲ್ಲಿ, ಅಮುನ್‌ ಈ ಸ್ಥಾನವನ್ನು ಗಳಿಸಿತು. ಒಂದು ಕಾಲಘಟ್ಟದ ಮತಧರ್ಮಶಾಸ್ತ್ರವು ನಿರ್ದಿಷ್ಟ ವಿವರಣೆಗಳಲ್ಲಿ ಅಮುನ್‌ ದೈವವು ಎಲ್ಲದರಲ್ಲಿ ಅಸ್ತಿತ್ವದಲ್ಲಿದ್ದು, ಎಲ್ಲ ಸಂಗತಿಗಳನ್ನು ಆಳ್ವಿಕೆ ಮಾಡುವುದನ್ನು ವಿವರಿಸಿದೆ. ಈ ದೇವರು ಬೇರೆಲ್ಲ ದೈವಗಳಿಗಿಂತ ಹೆಚ್ಚು ದೈವಿಕತೆಯ ಸರ್ವವ್ಯಾಪಿ ಶಕ್ತಿಯನ್ನು ಮೈಗೂಡಿಸಿಕೊಂಡಿದೆ.[೧೩] ಈ ರೀತಿಯ ಮತಧರ್ಮಶಾಸ್ತ್ರದ ಹೇಳಿಕೆಗಳಿಂದಾಗಿ, ಸೈಗ್‌ಫ್ರೈಡ್ ಮೊರೆಂಜ್‌ ಅವರಂತಹ ಅನೇಕ ಹಿಂದಿನ ಈಜಿಪ್ತ್‌‌ ಅಧ್ಯಯನಕಾರರು ಈಜಿಪ್ತಿನ ಧರ್ಮದ ಬಹುದೇವತಾ ಪರಂಪರೆಯ ಅಡಿಯಲ್ಲಿ ಏಕದೇವತಾಸಿದ್ಧಾಂತದ ಸಾಗುವ, ದೈವಿಕತೆಯ ಐಕ್ಯತೆಯಲ್ಲಿ ನಂಬಿಕೆ ಹೆಚ್ಚುತ್ತ ಹೋಗಿರುವುದನ್ನು ಕಾಣಬಹುದು ಎಂದು ನಂಬುತ್ತಾರೆ. ಈಜಿಪ್ತಿನ ಸಾಹಿತ್ಯದಲ್ಲಿ "ದೇವರು" ಎಂಬ ಪದವು ಯಾವುದೇ ನಿರ್ದಿಷ್ಟ ದೈವಕ್ಕೆ ಸಂಬಂಧಿಸದೆಯೇ ಉಲ್ಲೇಖಗೊಂಡಿರುವ ಸಂದರ್ಭಗಳು ಈ ದೃಷ್ಟಿಕೋನಕ್ಕೆ ಹೆಚ್ಚಿನ ಮೌಲಿಕತೆಯನ್ನು ಸೇರಿಸುವಂತೆ ಕಾಣುತ್ತದೆ. ಬೇರೆ ದೇವರುಗಳು ಪ್ರಾಮುಖ್ಯತೆ ಪಡೆದಿದ್ದ ಕಾಲಘಟ್ಟದಲ್ಲಿಯೂ ಪರಮಶಕ್ತನ ವಿಶೇಷ ಗುಣಲಕ್ಷಣಗಳನ್ನು ಅನೇಕ ಭಿನ್ನ ದೇವತೆಗಳಿಗೆ ಇವೆ ಎಂದು ಭಾವಿಸಬಹುದು ಎಂದು 1971ರಲ್ಲಿ ಎರಿಕ್‌ ಹೊರ್ನುಂಗ್‌ ಪ್ರತಿಪಾದಿಸಿದರು. ಅಲ್ಲದೇ ನಿರ್ದಿಷ್ಟಪಡಿಸದೇ ಇರುವ "ದೇವರು" ಎಂಬುದರ ಉಲ್ಲೇಖವು ಯಾವುದೇ ದೈವಕ್ಕೆ ಸಂಬಂಧಿಸುವಷ್ಟು ನಮ್ಯವಾಗಿರುತ್ತದೆ ಎಂದು ಹೇಳಿದರು. ಹೀಗಾಗಿ ಏಕದೇವೋಪಾಸನೆಗಾಗಿ ಒಂದು ದೇವರನ್ನು ಪೂಜಿಸಲು ಕೆಲವು ವ್ಯಕ್ತಿಗಳು ಆಯ್ಕೆ ಮಾಡಿಕೊಂಡಿದ್ದರೂ, ಈಜಿಪ್ತಿನ ಧರ್ಮವು ಒಟ್ಟಾರೆಯಾಗಿ ಬಹುಸಂಖ್ಯಾತ ದೈವಗಳ ಆಚೆ ನಿಕಟದಲ್ಲಿಯೇ ಏಕ ದೈವದ ಯಾವುದೇ ಕಲ್ಪನೆಯನ್ನೂ ಹೊಂದಿರಲಿಲ್ಲ ಎಂದು ಆತ ಪ್ರತಿಪಾದಿಸಿದ್ದಾನೆ. ಇಷ್ಟಾಗಿಯೂ ಚರ್ಚೆಯು ಅಲ್ಲಿಗೇ ಕೊನೆಗೊಳ್ಳಲಿಲ್ಲ; ಜಾನ್ ಆಸ್‌ಮನ್‌ ಮತ್ತು ಜೇಮ್ಸ್‌ ಪಿ. ಅಲೆನ್‌ ಮೊದಲಿನಿಂದಲೂ ಈಜಿಪ್ತಿಯನ್ನರು ಏಕ ದೈವಿಕ ಶಕ್ತಿಯನ್ನು ಗುರುತಿಸಲು ಸಾಕಷ್ಟು ಹೆಣಗಿದ್ದಾರೆ ಎಂದು ಸಮರ್ಥಿಸಿದ್ದಾರೆ. ಅಲೆನ್‌ ಅವರ ದೃಷ್ಟಿಕೋನದಲ್ಲಿ, ಬಹುದೇವತಾ ಪರಂಪರೆಯಲ್ಲಿಯೇ ಅಂತರ್ಗತವಾಗಿ ಸಹಅಸ್ತಿತ್ವದಲ್ಲಿರುತ್ತದೆ. ಈಜಿಪ್ತಿನ ದೇವತಾಶಾಸ್ತ್ರಜ್ಞರು ಮಾತ್ರವೇ ಈ ಗುಪ್ತ ಐಕ್ಯತೆಯನ್ನು ಸಂಪೂರ್ಣವಾಗಿ ಗುರುತಿಸಿದ್ದಾರೆ, ಆದರೆ ಸಾಮಾನ್ಯ ಈಜಿಪ್ತಿಯನ್ನರು ಏಕ ದೇವರೊಂದಿಗೆ ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಏಕ ದೈವಿಕ ಶಕ್ತಿಯನ್ನು ಗುರುತಿಸಿದ್ದಾರೆ.[೧೪]

ಅಟನ್‌ವಾದ (ಅಟೆನಿಸಂ)[ಬದಲಾಯಿಸಿ]

ಈಜಿಪ್ತಿಯನ್ನರು ಹೊಸ ಸಾಮ್ರಾಜ್ಯದ ಅವಧಿಯಲ್ಲಿ ನಿಜವಾದ ಏಕದೇವತಾವಾದದ ಒಂದು ದಾರಿತಪ್ಪಿದ ಒಂದು ಅವಧಿಯನ್ನು ಹೊಂದಿದ್ದರು. ಈ ಅವಧಿಯಲ್ಲಿ ಫೇರೋ ಅಖೆನೆಟನ್‌ ಸೂರ್ಯ-ತಟ್ಟೆಯ ಹಾಗಿರುವ ಅಟೆನ್‌ ದೇವರನ್ನೇ ಪೂಜಿಸಬೇಕೆಂದು, ಇನ್ನುಳಿದ ದೇವರುಗಳ ಅಧಿಕೃತ ಪೂಜೆಯನ್ನು ನಿಷೇಧಿಸಿದ್ದ. ಇದನ್ನು ಇತಿಹಾಸದಲ್ಲಿ ಏಕದೇವತಾಶಾಸ್ತ್ರದ ಮೊದಲ ಘಟನೆ ಎಂದು ನೋಡಲಾಗುತ್ತದೆ, ಆದಾಗ್ಯೂ ಅಟೆನಿಸ್ಟ್‌ ದೇವತಾಶಾಸ್ತ್ರದ ವಿವರಗಳು ಇನ್ನೂ ಅಸ್ಪಷ್ಟ ಇವೆ. ಈಜಿಪ್ತಿನ ಸಂಪ್ರದಾಯದಿಂದ ಒಂದು ದೇವರನ್ನು ಹೊರತುಪಡಿಸಿ ಉಳಿದೆಲ್ಲ ದೇವರುಗಳು ಹೊರಗುಳಿದಿದ್ದು ಕ್ರಾಂತಿಕಾರಕ ನಿರ್ಗಮನ ಎನ್ನಬಹುದು. ಕೆಲವರು ಇದನ್ನು ಅಖೆನೆಟನ್‌ನನ್ನು ಏಕದೇವತಾವಾದದ ಬದಲಿಗೆ ಏಕ ದೈವಾರಾಧನೆ ಎಂದು ನೋಡುತ್ತಾರೆ,[೧೫][೧೬] , ಏಕೆಂದರೆ ಆತ ಇನ್ನುಳಿದ ದೇವರ ಅಸ್ತಿತ್ವವನ್ನು ಅಲ್ಲಗೆಳೆಯಲಿಲ್ಲ; ಆದರೆ ಅಟೆನ್‌ ಹೊರತುಪಡಿಸಿ ಬೇರೆ ದೇವರನ್ನು ಪೂಜಿಸುವುದನ್ನು ನಿರ್ಬಂಧಿಸಿದ ಅಷ್ಟೆ. ಅಖೆನೆಟನ್‌ನ ನಂತರದವವರ ಅಡಿಯಲ್ಲಿ ಈಜಿಪ್ತ್‌‌ ಪುನಾ ತನ್ನ ಪಾರಂಪರಿಕ ಧರ್ಮಕ್ಕೆ ಮರಳಿತು ಮತ್ತು ಅಖೆನೆಟನ್‌ ಒಬ್ಬ ಪಾಷಂಡಿ ಎಂದು ನಿಂದಿಸಲಾಯಿತು.[೧೭]

ಬೇರೆ ಪ್ರಮುಖ ಪರಿಕಲ್ಪನೆಗಳು[ಬದಲಾಯಿಸಿ]

ವಿಶ್ವೋತ್ಪತ್ತಿಶಾಸ್ತ್ರ[ಬದಲಾಯಿಸಿ]

ವಾಯು ದೇವತೆ 'ಶು'ಗೆ ಬೇರೆ ದೇವರು ಸಹಾಯ ಮಾಡುತ್ತಿರುವುದು, ನಟ್‌, ಆಕಾಶವನ್ನು ಗೆಬ್‌ ಆಗಿ ಎತ್ತಿಹಿಡಿದಿರುವುದು, ಕೆಳಗೆ ಇರುವುದು ಭೂಮಿ.

ವಿಶ್ವದ ಕುರಿತ ಈಜಿಪ್ತಿನ ಪರಿಕಲ್ಪನೆಯು ಮಾಟ್‌ ಮೇಲೆ ಕೇಂದ್ರಿತವಾಗಿದೆ, ಈ ಪದವು ಇಂಗ್ಲಿಷ್‌ನಲ್ಲಿ "ಸತ್ಯ", "ನ್ಯಾಯ" ಮತ್ತು "ಕ್ರಮ (ಶ್ರೇಣಿ) ಹೀಗೆ ಹಲವಾರು ಪರಿಕಲ್ಪನೆಗಳನ್ನು ಹೊಂದಿದೆ. ಅದು ವಿಶ್ವದ ನಿಗದಿಯಾದ, ಚಿರಂತನ ಕ್ರಮವಾಗಿದ್ದು, ಮನುಷ್ಯ ಸಮಾಜ ಮತ್ತು ಬ್ರಹ್ಮಾಂಡ ಎರಡಕ್ಕೂ ಅನ್ವಯಿಸುತ್ತದೆ. ಅದು ವಿಶ್ವವು ಸೃಷ್ಟಿಯಾದಾಗಿನಿಂದ ಇದೆ ಮತ್ತು ಅದಿಲ್ಲದೇ ವಿಶ್ವವು ತನ್ನ ಸುಸಂಯೋಜನೆಯನ್ನು ಕಳೆದುಕೊಳ್ಳುತ್ತದೆ. ಈಜಿಪ್ತಿನ ನಂಬಿಕೆಯಲ್ಲಿ, ಅವ್ಯವಸ್ಥೆಯ ಶಕ್ತಿಗಳಿಂದ ಮಾಟ್‌ಗೆ ನಿರಂತರವಾಗಿ ಬೆದರಿಕೆ ಇದೆ. ಆದ್ದರಿಂದ ಎಲ್ಲ ಸಮಾಜಗಳು ಇದನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಮಾನವರ ಹಂತದಲ್ಲಿ, ಇದರರ್ಥವೆಂದರೆ, ಸಮಾಜದ ಎಲ್ಲ ಸದಸ್ಯರು ಪರಸ್ಪರ ಸಹಕರಿಸಬೇಕು ಮತ್ತು ಸಹಬಾಳ್ವೆ ಮಾಡಬೇಕು; ಬ್ರಹ್ಮಾಂಡದ ಹಂತದಲ್ಲಿ ಇದರರ್ಥವೆಂದರೆ ನಿಸರ್ಗದ ಎಲ್ಲ ಶಕ್ತಿಗಳು ಸಮತೋಲನದಿಂದ ಕಾರ್ಯನಿರ್ವಹಿಸುವುದನ್ನು ಮುಂದುವರೆಸಬೇಕು.[೧೮] ಈ ಎರಡನೆಯ ಗುರಿಯು ಈಜಿಪ್ತಿನ ಧರ್ಮದ ಕೇಂದ್ರಬಿಂದುವಾಗಿತ್ತು. ಈಜಿಪ್ತಿಯನ್ನರು ದೇವರಿಗೆ ಅರ್ಪಣೆಗಳನ್ನು ನೀಡುವ ಮೂಲಕ ಮತ್ತು ಅವ್ಯವಸ್ಥೆಯನ್ನು ಅಳಿಸಿಹಾಕಿ, ನಿಸರ್ಗದ ಚಕ್ರವನ್ನು ಶಾಶ್ವತವಾಗಿ ಮುಂದುವರೆಸುವ ಧಾರ್ಮಿಕ ವಿಧಿಗಳನ್ನು ಮಾಡುವ ಮೂಲಕ ಬ್ರಹ್ಮಾಂಡದಲ್ಲಿ ಮಾಟ್‌ ಅನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದರು.[೧೯][೨೦] ಬ್ರಹ್ಮಾಂಡದ ಕುರಿತ ಈಜಿಪ್ತಿಯನ್ನರ ದೃಷ್ಟಿಕೋನದ ಅತ್ಯಂತ ಮಹತ್ವದ ಭಾಗ ಎಂದರೆ ಕಾಲದ ಕುರಿತ ಪರಿಕಲ್ಪನೆ, ಇದು ಮಾಟ್‌ಅನ್ನು ಉಳಿಸಿಕೊಂಡು ಬರುವುದಕ್ಕೆ ಅತ್ಯಧಿಕ ಸಂಬಂಧ ಹೊಂದಿದೆ. ಕಾಲದ ರೇಖಾತ್ಮಕ ಹರಿವಿನ ಉದ್ದಕ್ಕೂ, ಒಂದು ಚಕ್ರೀಯ ವಿನ್ಯಾಸ ಮರುಕಳಿಸಿದೆ. ಇದರಲ್ಲಿ ಮಾಟ್‌ ನಿಯತಕಾಲಿಕ ಘಟನೆಗಳಿಂದ ನವೀಕರಣಗೊಂಡಿದ್ದು, ಮೂಲ ಸೃಷ್ಟಿಯಿಂದ ಪ್ರತಿಧ್ವನಿತಗೊಂಡಿದೆ. ಈ ಘಟನೆಗಳಲ್ಲಿ, ವಾರ್ಷಿಕ ನೈಲ್‌ ನದಿಯ ಪ್ರವಾಹ ಮತ್ತು ಒಬ್ಬ ರಾಜನ ನಂತರ ಮತ್ತೊಬ್ಬ ರಾಜನ ಆಳ್ವಿಕೆ ಸೇರಿವೆ, ಆದರೆ ಎಲ್ಲಕ್ಕಿಂತ ಪ್ರಮುಖವಾಗಿದ್ದು ಎಂದರೆ ಸೂರ್ಯ ದೇವರಾದ 'ರಾ'ನ ದೈನಂದಿನ ಪ್ರಯಾಣ.[೨೧] ಬ್ರಹ್ಮಾಂಡದ ಆಕಾರದ ಕುರಿತು ಆಲೋಚಿಸುವಾಗ, ಈಜಿಪ್ತಿಯನ್ನರು ಭೂಮಿಯನ್ನು ಗೆಬ್‌ ದೇವರು ಮೂರ್ತೀಕರಣಗೊಂಡ ಚಪ್ಪಟೆಯಾದ ನೆಲ, ಇದರ ಮೇಲೆ ಬಾಗಿರುವ ಆಕಾಶ ದೇವತೆ ನಟ್‌ ಇದೆ ಎಂಬಂತೆ ಕಂಡಿದ್ದಾರೆ. ಈ ಎರಡನ್ನೂ ವಾಯು ದೇವರಾದ ಶೂ ಪ್ರತ್ಯೇಕಗೊಳಿಸಿದ್ದಾನೆ. ಭೂಮಿಯ ಕೆಳಗೆ ಸಮಾಂತರವಾಗಿ ಭೂಗತ ವಿಶ್ವ(ಪಾತಾಳ) ಮತ್ತು ಕೆಳಆಗಸ ಇದೆ; ಆಕಾಶಗಳ ಆಚೆ ಸೃಷ್ಟಿಗೆ ಮೊದಲು ಅಸ್ತಿತ್ವದಲ್ಲಿದ್ದ ಅವ್ಯವಸ್ಥೆಯ ಅನಂತ ವಿಸ್ತರಣೆಯಾದ ನು ಇದೆ.[೨೨] ಈಜಿಪ್ತಿಯನ್ನರು ಡ್ಯುಅಟ್ ಎಂದು ಕರೆಯಲಾಗುವ ಒಂದು ಸ್ಥಳದ ಕುರಿತು ನಂಬಿಕೆ ಹೊಂದಿದ್ದರು. ಇದು ಪಾತಾಳದಲ್ಲಿ ಅಥವಾ ಆಕಾಶದಲ್ಲಿ ಇದ್ದಿರಬಹುದಾದ ಸಾವು ಮತ್ತು ಪುನರ್ಜನ್ಮದೊಂದಿಗೆ ಸಂಬಂಧ ಹೊಂದಿದ ಒಂದು ನಿಗೂಢ ಪ್ರದೇಶವೆಂದು ಅವರು ನಂಬಿದ್ದರು. ಪ್ರತಿದಿನ, ರಾ ಆಕಾಶದ ಕೆಳಗಿನಿಂದ ಭೂಮಿಯ ಆದ್ಯಂತ ಪ್ರಯಾಣಿಸುತ್ತಾನೆ ಮತ್ತು ರಾತ್ರಿ ಆತ ಡ್ಯುಅಟ್‌ ಅನ್ನು ಹಾದು ಹೋಗಿ ಮುಂಜಾವಿನಲ್ಲಿ ಪುನಾಹುಟ್ಟುತ್ತಾನೆ ಎಂದು ಅವರು ಭಾವಿಸಿದ್ದರು.[೨೩] ಈಜಿಪ್ತಿನ ನಂಬಿಕೆಯಲ್ಲಿ, ಈ ಬ್ರಹ್ಮಾಂಡವು ಮೂರು ರೀತಿಯ ಸಚೇತನ ಜೀವಿಗಳಿಂದ ಆವರಿಸಿದೆ. ಒಂದು ದೇವರುಗಳು, ಇನ್ನೊಂದು ದೈವಿಕ ಕ್ಷೇತ್ರದಲ್ಲಿರುವ, ದೇವರ ಅಸಂಖ್ಯಾತ ಸಾಮರ್ಥ್ಯಗಳನ್ನು ಹೊಂದಿರುವ, ಮರಣಿಸಿದ ಮನುಷ್ಯರ ಆತ್ಮಗಳು. ಸಜೀವಿ ಮಾನವರದು ಮೂರನೇ ವರ್ಗ ಮತ್ತು ಅವರಲ್ಲಿ ಅತ್ಯಂತ ಪ್ರಮುಖರಾದವರು ಎಂದರೆ ಫೇರೋ, ಆತ ಮನುಷ್ಯರು ಮತ್ತು ದೈವಿಕ ಕ್ಷೇತ್ರದ ಮಧ್ಯೆ ಸೇತುವೆಯಾಗಿದ್ದಾನೆ.[೨೪]

ಫೇರೋ ರಾಮ್ಸೆಸ್‌ IIನ ದೈತ್ಯಾಕಾರದ ಪ್ರತಿಮೆ

ದೈವಿಕ ಫೇರೋ[ಬದಲಾಯಿಸಿ]

ಈಜಿಪ್ತ್‌‌ ಅಧ್ಯಯನಕಾರರು ಫೇರೋನನ್ನು ಎಷ್ಟರಮಟ್ಟಿಗೆ ದೇವರು ಎಂದು ಪರಿಗಣಿಸಬೇಕು ಬಹಳ ಹಿಂದಿನಿಂದ ಚರ್ಚಿಸಿದ್ದಾರೆ. ಈಜಿಪ್ತಿಯನ್ನರು ಎಲ್ಲ ರೀತಿಯ ರಾಜತ್ವದ ಪ್ರಾಧಿಕಾರಗಳನ್ನು ದೈವಿಕ ಶಕ್ತಿ ಎಂದು ನೋಡಿರುವ ಹಾಗೆ ಕಾಣಿಸುತ್ತದೆ. ಆದ್ದರಿಂದ ಈಜಿಪ್ತಿಯನ್ನರು ಫೇರೋ ಕೂಡ ಮನುಷ್ಯ ಮತ್ತು ಮನುಷ್ಯ ಸಹಜ ದೌರ್ಬಲ್ಯಗಳಿಗೆ ಈಡಾಗುತ್ತಾನೆ ಎಂದು ಗುರುತಿಸಿದ್ದರೂ, ಅದೇ ವೇಳೆ ಆತನನ್ನು ದೇವರು ಎಂದು ನೋಡಿದ್ದಾರೆ. ಏಕೆಂದರೆ ಅರಸುತನದ ದೈವಿಕ ಶಕ್ತಿಯು ಆತನಲ್ಲಿ ಮೈದಾಳಿದೆ ಎಂದು ಭಾವಿಸಿದ್ದರು. ಆದ್ದರಿಂದ ಈಜಿಪ್ತ್‌‌ನ ಜನರು ಮತ್ತು ದೇವರ ಮಧ್ಯೆ ಆತ ಮಧ್ಯವರ್ತಿಯಾಗಿದ್ದಾನೆ.[೨೫] ಆತ ಮಾಟ್‌ ಅನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ವ್ಯಕ್ತಿ. ಮನುಷ್ಯ ಸಮಾಜದಲ್ಲಿ ಸಾಮರಸ್ಯ ಹಾಗೂ ನ್ಯಾಯವನ್ನು ಕಾಯ್ದುಕೊಳ್ಳುವ ಮೂಲಕ ಮತ್ತು ದೇವಾಲಯಗಳು ಮತ್ತು ಅರ್ಪಣೆಗಳ ಮೂಲಕ ದೇವರನ್ನು ಉಳಿಸಿಕೊಳ್ಳುವ ಮೂಲಕ, ಎರಡೂ ರೀತಿಯಲ್ಲಿ ಹೀಗೆ ಮಾಡುತ್ತಾನೆ. ಈ ಕಾರಣಗಳಿಗಾಗಿ, ಆತ ಪ್ರಭುತ್ವದ ಎಲ್ಲ ಧಾರ್ಮಿಕ ಚಟುವಟಿಕೆಗಳ ನಿಗಾವಹಿಸಿದ್ದನು.[೨೬] ಆದಾಗ್ಯೂ, ಫೇರೋನ ನೈಜ-ಬದುಕಿನ ಪ್ರಭಾವ ಮತ್ತು ಘನತೆಯು ಅಧಿಕೃತ ಬರಹಗಳು ಮತ್ತು ಚಿತ್ರಣಗಳಲ್ಲಿ ನಿರೂಪಿತವಾಗಿದ್ದಕ್ಕಿಂತ ಭಿನ್ನವಾಗಿರಬಹುದಿತ್ತು. ಜೊತೆಗೆ ಹೊಸ ಸಾಮ್ರಾಜ್ಯದ ಅಂತ್ಯಕಾಲದ ಆರಂಭ ಘಟ್ಟದಲ್ಲಿ ಆತನ ಧಾರ್ಮಿಕ ಮಹತ್ವವು ಬಹಳಷ್ಟು ಕುಸಿಯಿತು.[೨೭] ರಾಜನು ಅನೇಕ ರೀತಿಯ ವಿಶೇಷ ದೈವಗಳೊಂದಿಗೆ ಸಂಪರ್ಕ ಹೊಂದಿದ್ದನು. ಆತನನ್ನು ಅರಸುತನವನ್ನೇ ಪ್ರತಿನಿಧಿಸುತ್ತಿದ್ದ ಹೋರಸ್‌ ಜೊತೆ ನೇರವಾಗಿ ಗುರುತಿಸಲಾಗುತ್ತಿತ್ತು, ಆತನನ್ನು ರಾ ದೇವರ ಮಗನಾಗಿ ಕಾಣಲಾಗುತ್ತಿತ್ತು, ಫೇರೋ ಸಮಾಜವನ್ನು ನಿಯಂತ್ರಿಸುತ್ತ, ಆಳ್ವಿಕೆ ನಡೆಸಿದಂತೆ ರಾ ದೇವರು ನಿಸರ್ಗವನ್ನು ನಿಯಂತ್ರಿಸಿ, ಆಳುತ್ತಾನೆ ಎಂದು ಭಾವಿಸಿದ್ದರು. ಹೊಸ ಸಾಮ್ರಾಜ್ಯದಲ್ಲಿ ಆತ ಬ್ರಹ್ಮಾಂಡದ ಪರಮೋಚ್ಚ ಶಕ್ತಿಯಾದ ಅಮುನ್‌ ಜೊತೆ ಸಂಬಂಧ ಹೊಂದಿದ್ದನು.[೨೮] ರಾಜನ ಮರಣದ ನಂತರ, ಆತನನ್ನು ಸಂಪೂರ್ಣವಾಗಿ ದೈವೀಕರಿಸಲಾಯಿತು. ಈ ಸ್ಥಿತಿಯಲ್ಲಿ, ಆತನನ್ನು ರಾ ದೇವರೊಂದಿಗೆ ನೇರವಾಗಿ ಗುರುತಿಸಲಾಗುತ್ತಿತ್ತು. ಅಲ್ಲದೇ ಮರಣ ಮತ್ತು ಪುನರ್ಜನ್ಮದ ದೇವರಾದ ಹಾಗೂ ಹೋರಸ್‌ನ ಪೌರಾಣಿಕ ತಂದೆಯಾದ ಒಸಿರಿಸ್‌ನೊಂದಿಗೂ ಆತನ ಸಂಬಂಧ ಕಲ್ಪಿಸಲಾಗಿತ್ತು.[೨೯] ಮರಣಿಸಿದ ಫೇರೋಗಳನ್ನು ದೇವರಂತೆ ಪೂಜಿಸಲು ಶವಾಗಾರ ದೇವಾಲಯಗಳನ್ನು ಮೀಸಲಾಗಿಡಲಾಗಿತ್ತು.[೨೦]

ಮರಣಾನಂತರದ ಜೀವನ[ಬದಲಾಯಿಸಿ]

ಈಜಿಪ್ತಿಯನ್ನರು ಸಾವು ಮತ್ತು ಮರಣಾನಂತರದ ಬದುಕಿನ ಕುರಿತು ವಿಶದವಾದ ನಂಬಿಕೆಗಳನ್ನು ಹೊಂದಿದ್ದರು. ಮನುಷ್ಯರು ಕಾ ಅಂದರೆ ಪ್ರಾಣಶಕ್ತಿಯನ್ನು ಹೊಂದಿದ್ದಾರೆ ಮತ್ತು ಮರಣದ ಸಂದರ್ಭದಲ್ಲಿ ಅದು ದೇಹವನ್ನು ಬಿಡುತ್ತದೆ ಎಂದು ಅವರು ನಂಬಿದ್ದರು. ಬದುಕಿದ್ದಾಗ, ಆಹಾರ ಮತ್ತು ಪಾನೀಯಗಳಿಂದ 'ಕಾ' ಪುಷ್ಟಿಯನ್ನು ಪಡೆಯುತ್ತದೆ, ಆದ್ದರಿಂದ ಮರಣಾನಂತರ ಉಳಿಯಲು 'ಕಾ' ಆಹಾರದ ಅರ್ಪಣೆಗಳನ್ನು ಸ್ವೀಕರಿಸುವುದು ಮುಂದುವರೆಯಬೇಕು ಮತ್ತು 'ಕಾ'ದ ಆಧ್ಯಾತ್ಮಿಕ ಸತ್ವವು ಇನ್ನೂ ಅದನ್ನು ಸೇವಿಸಬಹುದು ಎಂದು ಅವರು ನಂಬಿದ್ದರು. ಪ್ರತಿ ವ್ಯಕ್ತಿಯೂ ಒಂದು ಬಾ ಅಂದರೆ ಪ್ರತಿ ವ್ಯಕ್ತಿಗೂ ಅನನ್ಯವಾಗಿರುವ ಕೆಲವು ಆಧ್ಯಾತ್ಮಿಕ ಲಕ್ಷಣಗಳನ್ನು ಹೊಂದಿರುತ್ತಾರೆ.[೩೦] 'ಕಾ'ದ ಹಾಗೆಯೇ 'ಬಾ' ಕೂಡ ಮರಣಾನಂತರವೂ ದೇಹಕ್ಕೆ ಅಂಟಿಕೊಂಡೇ ಇರುತ್ತದೆ. ಈಜಿಪ್ತಿನ ಅಂತ್ಯಸಂಸ್ಕಾರದ ವಿಧಿಗಳು 'ಬಾ'ವನ್ನು ದೇಹದಿಂದ ಬಿಡುಗಡೆ ಮಾಡುವ ಉದ್ದೇಶ ಹೊಂದಿವೆ. ಆಗ ಅದು ಸ್ವತಂತ್ರವಾಗಿ ಚಲಿಸಬಹುದು ಮತ್ತು 'ಕಾ' ಜೊತೆ ಪುನಾಸೇರಿಕೊಂಡು, ಒಂದು ಅಖ್‌ ಆಗಿ ಜೀವಿಸಬಹುದು. ಆದರೆ ಮರಣದ ನಂತರ ಶವವನ್ನು ಸಂರಕ್ಷಿಸಿಡುವುದು ಕೂಡ ಅಷ್ಟೇ ಮಹತ್ವದ್ದು. ಪ್ರತೀ ರಾತ್ರಿ 'ಬಾ' ಹೊಸ ಬದುಕನ್ನು ಪಡೆಯಲು ತನ್ನ ದೇಹಕ್ಕೆ ಮರಳಿಬರುತ್ತದೆ ಮತ್ತು ಬೆಳಗ್ಗೆ ಒಂದು ಅಖ್‌ ಆಗಿ ಹೊರಹೊಮ್ಮುತ್ತದೆ ಎಂದು ಈಜಿಪ್ತಿಯನ್ನರು ನಂಬಿದ್ದರು.[೩೧] ಮೂಲದಲ್ಲಿ, ಈಜಿಪ್ತಿಯನ್ನರು ಕೇವಲ ಫೇರೋ ಮಾತ್ರ ಒಂದು 'ಬಾ' ಹೊಂದಿರುತ್ತಾನೆ,[೩೨] ಮತ್ತು ಆತನಷ್ಟೇ ದೇವರಲ್ಲೊಬ್ಬನಾಗಬಹುದು; ಮರಣಿಸಿದ ಸಾಮಾನ್ಯ ಜನರು ಬದುಕಿಗೆ ವಿರುದ್ಧವಾದುದನ್ನು ಪ್ರತಿನಿಧಿಸುವ ಕಪ್ಪು, ಹಾಳುಸುರಿಯುವ ಕ್ಷೇತ್ರಕ್ಕೆ ಹೋಗುತ್ತಾರೆ ಎಂದು ನಂಬಿದ್ದರು.[೩೩] ಶ್ರೇಷ್ಠ ವ್ಯಕ್ತಿಗಳಿಗೆ ಗೋರಿಗಳು ಮತ್ತು ಅವರನ್ನು ಸುಸ್ಥಿತಿಯಲ್ಲಿಡಲು ಅಗತ್ಯವಾದ ಸಾಮಗ್ರಿಗಳು ರಾಜನ ಉಡುಗೊರೆ ಎಂದು ದೊರೆಯುತ್ತಿದ್ದವು. ಮರಣಾನಂತರದ ಬದುಕಿಗೆ ಪ್ರವೇಶಿಸುವ ಅವರ ಸಾಮರ್ಥ್ಯವು ಅವರು ರಾಜವಂಶಕ್ಕೆ ಮಾಡಿದ ಸಹಾಯಗಳನ್ನು ಅವಲಂಬಿಸಿದೆ ಎಂದು ನಂಬಲಾಗಿತ್ತು.[೩೪] ಆರಂಭಿಕ ಕಾಲಘಟ್ಟದಲ್ಲಿ ಮರಣಿಸಿದ ಫೇರೋ ಆಕಾಶಕ್ಕೆ ಏರುತ್ತಾನೆ ಮತ್ತು ನಕ್ಷತ್ರಗಳಲ್ಲಿ ಒಂದಾಗಿ ನೆಲೆಸುತ್ತಾನೆ ಎಂದು ನಂಬಲಾಗಿತ್ತು.[೩೫] ಹಳೆಯ ಸಾಮ್ರಾಜ್ಯದ ಅವಧಿಯಲ್ಲಿ, ಆತ ರಾ ಸೂರ್ಯ ದೇವರ ದೈನಂದಿನ ಮರುಹುಟ್ಟಿನೊಂದಿಗೆ ಮತ್ತು ಪಾತಾಳ ಲೋಕವನ್ನು ಆಳುವ ಒಸಿರಿಸ್‌ನೊಂದಿಗೆ ಹೆಚ್ಚು ಸಂಬಂಧ ಹೊಂದಿದನು, ಏಕೆಂದರೆ ಆ ಸಮಯದಲ್ಲಿ ಈ ಎರಡೂ ದೈವಗಳ ಪ್ರಾಮುಖ್ಯ ವೃದ್ದಿಸಿತ್ತು.[೩೬] ಹಳೆಯ ಸಾಮ್ರಾಜ್ಯದ ಕೊನೆಯ ದಿನಗಳಲ್ಲಿ ಮತ್ತು ಮೊದಲ ಮಧ್ಯಂತರ ಅವಧಿಯಲ್ಲಿ, ಈಜಿಪ್ತಿಯನ್ನರು ಕ್ರಮೇಣ 'ಬಾ'ವನ್ನು ಹೊಂದುವುದು ಮತ್ತು ಮರಣಾ ನಂತರ ಸ್ವರ್ಗಾರ್ಹವಾಗುವುದು ಎಲ್ಲರಿಗೂ ವಿಸ್ತರಿತವಾಗಿದೆ ಎಂದು ನಂಬತೊಡಗಿದರು.[೩೨][೩೭] ಹೊಸ ಸಾಮ್ರಾಜ್ಯದಲ್ಲಿ ಪೂರ್ಣವಾಗಿ ಅಭಿವೃದ್ಧಿಗೊಂಡ ಮರಣಾನಂತರದ ನಂಬಿಕೆಗಳಲ್ಲಿ "ಹೃದಯವನ್ನು ತೂಗುವುದು' ಎಂದು ಕರೆಯಲಾಗುವ ಒಂದು ಅಂತಿಮ ನ್ಯಾಯಕ್ಕೆ ಒಳಗಾಗುವ ಮೊದಲು ಆತ್ಮವು ಡ್ಯುಅಟ್‌ನಲ್ಲಿ ಹಲವಾರು ರೀತಿಯ ಅತೀಂದ್ರಿಯ ಅಪಾಯಗಳಿಂದ ತಪ್ಪಿಸಿಕೊಳ್ಳುತ್ತದೆ ಎಂಬುದೂ ಒಂದಾಗಿತ್ತು. ಈ ತೀರ್ಪಿನಲ್ಲಿ, ಮರಣಿಸಿದವರು ಜೀವಂತವಿದ್ದಾಗ ಮಾಡಿದ ಕ್ರಿಯೆಗಳನ್ನು (ಹೃದಯದಿಂದ ಸಂಕೇತಿಸುವ) ಮಾಟ್‌ಗೆ ದೇವರು ಹೋಲಿಸುತ್ತಾನೆ, ಅವರು ಮಾಟ್‌ಗೆ ಅನುಗುಣವಾಗಿ ವರ್ತಿಸಿದ್ದಾರೆಯೇ ಎಂಬುದನ್ನು ನಿರ್ಣಯಿಸಲಾಗುತ್ತದೆ. ಮರಣಿಸಿದವರು ಅರ್ಹರು ಎಂದು ನಿರ್ಣಯಿಸಿದರೆ, ಅವರ 'ಕಾ' ಮತ್ತು 'ಬಾ' ಒಂದು ಅಖ್‌ನೊಂದಿಗೆ ಸೇರಿಕೊಳ್ಳುತ್ತದೆ.[೩೮] ಅನೇಕ ನಂಬಿಕೆಗಳು ಅಖ್‌ನ ಗಮ್ಯಸ್ಥಾನದ ಕುರಿತು ಸಹಅಸ್ತಿತ್ವದಲ್ಲಿದ್ದವು. ಮರಣಿಸಿದವರು ಪಾತಾಳದಲ್ಲಿರುವ ಸಮೃದ್ಧ ಮತ್ತು ಆಹ್ಲಾದಕರವಾದ ಭೂಮಿಯಾದ ಒಸಿರಿಸ್‌ನ ಕ್ಷೇತ್ರದಲ್ಲಿ ನೆಲೆಸುತ್ತಾರೆ ಎಂದು ಹೇಳಲಾಗುತ್ತಿತ್ತು.[೩೯] ಮರಣಾನಂತರದ ಬದುಕಿನ ಕುರಿತ ಸೌರ ದೃಷ್ಟಿಕೋನದಲ್ಲಿ, ಮರಣಿಸಿದವರ ಆತ್ಮವು ರಾ ದೇವರ ದೈನಂದಿನ ಪ್ರಯಾಣದಲ್ಲಿ ಆತನೊಂದಿಗೆ ಪ್ರಯಾಣಿಸುತ್ತದೆ ಮತ್ತು ಮುಖ್ಯವಾಗಿ ರಾಜತ್ವದೊಂದಿಗೆ ಇನ್ನೂ ಸಂಬಂಧ ಹೊಂದಿರುತ್ತದೆ, ಆದರೆ ಬೇರೆ ಜನರಿಗೂ ಇದನ್ನು ವಿಸ್ತರಿಸಬಹುದಾಗಿತ್ತು. ಮಧ್ಯದ ಮತ್ತು ಹೊಸ ಸಾಮ್ರಾಜ್ಯದ ಅವಧಿಯಲ್ಲಿ, ಅಖ್‌ ಕೂಡ ಸಜೀವಿ ಜಗತ್ತಿನಲ್ಲಿ ಪ್ರಯಾಣಿಸಬಹುದು ಎಂಬ ಭಾವನೆಯಿತ್ತು. ಜೊತೆಗೆ ಸ್ವಲ್ಪ ಮಟ್ಟಿಗೆ ಮಾಂತ್ರಿಕವೆನ್ನಬಹುದಾದ ಪರಿಣಾಮಗಳು ಹೆಚ್ಚು ಪ್ರಚಲಿತಕ್ಕೆ ಬಂದಿತು.[೪೦]

ಬರಹಗಳು[ಬದಲಾಯಿಸಿ]

ಈಜಿಪ್ತಿಯನ್ನರು ಯಾವುದೇ ರೀತಿಯ ಏಕೀಕೃತ ಧಾರ್ಮಿಕ ಗ್ರಂಥವನ್ನು ಹೊಂದಿರಲಿಲ್ಲವಾದರೂ, ಅವರು ವಿವಿಧ ಬಗೆಯ ಅನೇಕ ಧಾರ್ಮಿಕ ಸಾಹಿತ್ಯವನ್ನು ಬರೆದಿದ್ದಾರೆ. ಈ ಎಲ್ಲ ಪ್ರತ್ಯೇಕ ಗ್ರಂಥಗಳು ಒಟ್ಟಾಗಿ ಈಜಿಪ್ತಿನ ಧಾರ್ಮಿಕ ಪದ್ಧತಿಗಳ ಮತ್ತು ನಂಬಿಕೆಗಳ ಅಪೂರ್ಣವಾದರೂ, ಒಂದು ವ್ಯಾಪಕವಾದ ಅರ್ಥೈಸಿಕೊಳ್ಳುವಿಕೆಯನ್ನು ನೀಡುತ್ತವೆ.[೪೧]

ಪುರಾಣ ಸಾಹಿತ್ಯ[ಬದಲಾಯಿಸಿ]

ರಾ (ಕೇಂದ್ರದಲ್ಲಿ) ತನ್ನ ನಾವೆಯಲ್ಲಿ ಬೇರೆ ದೇವರುಗಳ ಜೊತೆಗೂಡಿ ಪಾತಾಳದ ಮೂಲಕ ಸಾಗುತ್ತಿರುವುದು

ಈಜಿಪ್ತಿನ ಪುರಾಣಗಳು ನಿಸರ್ಗದಲ್ಲಿ ದೇವರ ಕ್ರಿಯೆಗಳನ್ನು, ಪಾತ್ರಗಳನ್ನು ಚಿತ್ರಿಸುವ ಮತ್ತು ವಿವರಿಸುವ ರೂಪಕವಾದ ಕಥೆಗಳಾಗಿವೆ. ಅವರು ಎದುರಿಸಿದ ಘಟನೆಗಳ ವಿವರಗಳು, ಅವು ಅದೇ ಸಂಕೇತಿಕ ಅರ್ಥವನ್ನು ತಿಳಿಸುವವರೆಗೂ ಬದಲಾಗಬಹುದು, ಹೀಗಾಗಿ ಅನೇಕ ಪುರಾಣಗಳು ಭಿನ್ನವಾದ ಮತ್ತು ಪರಸ್ಪರ ವಿರುದ್ಧವಾದ ಆವೃತ್ತಿಗಳಲ್ಲಿ ಇವೆ.[೪೨] ಪೌರಾಣಿಕ ನಿರೂಪಣೆಗಳನ್ನು ಸಂಫೂರ್ಣವಾಗಿ ಬರೆದಿರುವುದು ಬಹಳ ಅಪರೂಪ ಮತ್ತು ಹೆಚ್ಚಿನ ವೇಳೆ ಗ್ರಂಥಗಳು ದೊಡ್ಡ ಪುರಾಣವೊಂದರಿಂದ ಉಪಕಥೆಗಳನ್ನು ಮಾತ್ರವೇ ಒಳಗೊಂಡಿರುತ್ತವೆ ಅಥವಾ ದೊಡ್ಡ ಪುರಾಣಗಳಿಗೆ ಪರೋಕ್ಷ ಪ್ರಸ್ತಾಪವನ್ನು ಮಾತ್ರ ಒಳಗೊಂಡಿರುತ್ತವೆ.[೪೩] ಆದ್ದರಿಂದಲೇ ಈಜಿಪ್ತಿನ ಪುರಾಣ ಸಾಹಿತ್ಯದ ಜ್ಞಾನವು ಹೆಚ್ಚಿನದಾಗಿ ಸ್ತೋತ್ರಗಳಿಂದ ವ್ಯುತ್ಪನ್ನಗೊಂಡಿವೆ. ಈ ಸ್ತೋತ್ರಗಳು ನಿರ್ದಿಷ್ಟ ದೈವಗಳ ಪಾತ್ರವನ್ನು ವಿವರಿಸುತ್ತವೆ, ಕ್ರಿಯಾವಿಧಿಗಳ ಮತ್ತು ಮಾಂತ್ರಿಕ ಗ್ರಂಥಗಳು ಪೌರಾಣಿಕ ಘಟನೆಗಳಿಗೆ ಸಂಬಂಧಿಸಿದ ಕ್ರಿಯೆಗಳನ್ನು ವಿವರಿಸುತ್ತವೆ. ಹಾಗೆಯೇ ಅಂತ್ಯಸಂಸ್ಕಾರದ ಗ್ರಂಥಗಳು ಮರಣಾನಂತರದ ಬದುಕಿನಲ್ಲಿ ಅನೇಕ ದೈವಗಳ ಪಾತ್ರವನ್ನು ಉಲ್ಲೇಖಿಸುತ್ತವೆ. ಮತಧರ್ಮಾತೀತ ಗ್ರಂಥಗಳಲ್ಲಿರುವ ಪರೋಕ್ಷ ಪ್ರಸ್ತಾಪಗಳಿಂದಲೂ ಕೆಲವು ಮಾಹಿತಿ ದೊರೆಯುತ್ತದೆ.[೪೧] ಅಂತಿಮವಾಗಿ, ಪ್ಲುಟಾರ್ಕ್‌ನಂತೆ ಇನ್ನಿತರ ಗ್ರೀಕರು ಮತ್ತು ರೋಮನ್ನರು ಈಜಿಪ್ತಿನ ಇತಿಹಾಸದ ನಂತರದ ಕಾಲಘಟ್ಟದ ಕೆಲವು ಪುರಾಣಗಳನ್ನು ದಾಖಲಿಸಿದ್ದಾರೆ.[೪೪] ಈಜಿಪ್ತಿನ ಮಹತ್ವದ ಪುರಾಣಗಳಲ್ಲಿ ಸೃಷ್ಟಿ ಪುರಾಣಗಳು ಒಂದಾಗಿವೆ. ಈ ಕಥೆಗಳ ಪ್ರಕಾರ, ಸೃಷ್ಟಿಪೂರ್ವ ಅವ್ಯವಸ್ಥೆ ಸ್ಥಿತಿಯ ಆದಿಮ ಸಮುದ್ರದಲ್ಲಿ ಶುಷ್ಕ ಸ್ಥಳಾವಕಾಶದ ಹಾಗೆ ವಿಶ್ವವು ಹೊರಹೊಮ್ಮಿತು. ಭೂಮಿಯ ಮೇಲಿನ ಬದುಕಿಗೆ ಸೂರ್ಯ ಅಗತ್ಯವಾಗಿದ್ದರಿಂದ, 'ರಾ' ಮೊದಲು ಹುಟ್ಟಿದ್ದು, ಈ ಹೊರಹೊಮ್ಮುವಿಕೆಯ ಕ್ಷಣವನ್ನು ಗುರುತಿಸುತ್ತದೆ. ವಿವಿಧ ಬಗೆಯ ಪುರಾಣಗಳು ಸೃಷ್ಟಿಯ ಪ್ರಕ್ರಿಯೆಯನ್ನು ವಿವಿಧ ರೀತಿಯಲ್ಲಿ ವಿವರಿಸುತ್ತವೆ: ಆದಿಮ ದೇವರಾದ ಆಟಮ್‌ ಮೂಲವಸ್ತುಗಳಾಗಿ ಪರಿವರ್ತನೆಗೊಂಡು ವಿಶ್ವವಾಗಿ ರೂಪುತಳೆಯಿತು, ಬೌದ್ಧಿಕ ದೇವತೆಯಾದ ಪ್ತಾನ ಸೃಷ್ಟಿಯ ಭಾಷಣದ ಹಾಗೆ ಮತ್ತು ಅಮುನ್‌ನ ಗುಪ್ತ ಶಕ್ತಿಯ ಕ್ರಿಯೆಯ ಹಾಗೆ ವಿಶ್ವ ರೂಪುಗೊಂಡಿತು.[೪೫] ಈ ವಿವಿಧ ಆವೃತ್ತಿಗಳು ಹೇಗೇ ಇದ್ದರೂ, ಸೃಷ್ಟಿ ಕ್ರಿಯೆಯು ಮಾಟ್‌ನ ಆರಂಭಿಕ ಸ್ಥಾಪನೆ ಮತ್ತು ಕಾಲ ಚಕ್ರಗಳ ತರುವಾಯದ ವಿನ್ಯಾಸಗಳನ್ನು ಪ್ರತಿನಿಧಿಸುತ್ತವೆ.[೨೦] ಈಜಿಪ್ತಿನ ಎಲ್ಲ ಪುರಾಣಗಳಲ್ಲಿ ಒಸಿರಿಸ್ ಮತ್ತು ಐಸಿಸ್‌ನ ಪುರಾಣಗಳು ಬಹಳ ಮುಖ್ಯವಾದವು.[೪೬] ಇದು ತನ್ನ ಅಸೂಯಾಪರ ಸಹೋದರ ಸೆಟ್‌ನಿಂದ ಕೊಲೆಗೀಡಾಗಿದ ದೈವಿಕ ರಾಜ ಒಸಿರಿಸ್‌ನ ಕುರಿತು ಹೇಳುತ್ತದೆ. ಸೆಟ್‌ ಸೃಷ್ಟಿಪೂರ್ವದ ಅವ್ಯವಸ್ಥೆಗೆ ಸಂಬಂಧಿಸಿದ ದೇವರು.[೪೭] ಒಸಿರಿಸ್‌ನ ಸಹೋದರಿ ಮತ್ತು ಹೆಂಡತಿ ಐಸಿಸ್‌ ಉತ್ತರಾಧಿಕಾರಿ ಹೋರಸ್‌ನನ್ನು ಹುಟ್ಟಿಸಲು ಸಾಧ್ಯವಾಗಲೆಂದು ಅವನು ಪುನರುತ್ಥಾನಗೊಳ್ಳುವಂತೆ ಮಾಡುತ್ತಾರೆ. ಆಗ ಒಸಿರಿಸ್‌ ಪಾತಾಳವನ್ನು ಪ್ರವೇಶಿಸುತ್ತಾನೆ ಮತ್ತು ಸತ್ತಿರುವವರ ರಾಜನಾಗುತ್ತಾನೆ. ಹೋರಸ್‌ ದೊಡ್ಡವನಾದ ನಂತರ, ಸೆಟ್‌ನನ್ನು ಸೋಲಿಸಿ, ತಾನೇ ರಾಜನಾಗುತ್ತಾನೆ.[೪೮] ಸೃಷ್ಟಿಪೂರ್ವ ಅವ್ಯವಸ್ಥೆದೊಂದಿಗೆ ಸೆಟ್‌ನ ಸಂಬಂಧ ಮತ್ತು ಒಸಿರಿಸ್‌ ಹಾಗೂ ಹೋರಸ್‌ರನ್ನು ಅರ್ಹರಾದ ರಾಜರೆಂದು ಗುರುತಿಸುವುದು ಫೇರೋಗಳ ಅನುಕ್ರಮಕ್ಕೆ ತಾರ್ಕಿಕತೆಯನ್ನು ಒದಗಿಸುತ್ತದೆ ಮತ್ತು ಫೇರೋಗಳು ವ್ಯವಸ್ಥೆಯನ್ನು ಎತ್ತಿಹಿಡಿಯುವವರು ಎಂಬಂತೆ ಚಿತ್ರಿಸುತ್ತದೆ. ಇದೇ ವೇಳೆಗೆ, ಒಸಿರಿಸ್‌ನ ಮರಣ ಮತ್ತು ಪುನರ್ಜನ್ಮವು ಈಜಿಪ್ತಿನ ಕೃಷಿ ಚಕ್ರದೊಂದಿಗೆ ಸಂಬಂಧ ಹೊಂದಿದೆ. ಇದು ನೈಲ್‌ ನದಿಯ ಪ್ರವಾಹದ ಹಿನ್ನೆಲೆಯಲ್ಲಿ ಬೆಳೆಗಳನ್ನು ಬೆಳಯುವುದಕ್ಕೆ ಸಂಬಂಧಿಸಿದ್ದು, ಮನುಷ್ಯರ ಆತ್ಮಗಳು ಮರಣಾನಂತರ ಪುನರುತ್ಥಾನಗೊಳ್ಳುವುದಕ್ಕೆ ಒಂದು ಮಾದರಿಯನ್ನು ಒದಗಿಸುತ್ತವೆ.[೪೯] ಇನ್ನೊಂದು ಬಹುಮುಖ್ಯವಾದ ಪೌರಾಣಿಕ ವಿಶಿಷ್ಟ ಲಕ್ಷಣ ಎಂದರೆ ಪ್ರತಿ ರಾತ್ರಿ ಡ್ಯುಅಟ್ ಮೂಲಕ ರಾ ದೇವರ ಪ್ರಯಾಣ. ಈ ಪ್ರಯಾಣದ ಅವಧಿಯಲ್ಲಿ, ಒಸಿರಿಸ್‌ನನ್ನು ರಾ ಭೇಟಿಯಾಗುತ್ತಾನೆ, ಬದುಕು ಪುನರುಜ್ಜೀವತಗೊಳ್ಳುವಂತೆ ಒಸಿರಿಸ್ ಪುನರ್ಜನ್ಮ ನೀಡುವ ವ್ಯಕ್ತಿಯಾಗಿ ಪಾತ್ರವಹಿಸುತ್ತಾನೆ. ಆತ ಪ್ರತಿ ರಾತ್ರಿಯೂ ಸೃಷ್ಟಿಪೂರ್ವದ ಅವ್ಯವಸ್ಥೆಯನ್ನು ಪ್ರತಿನಿಧಿಸುವ ಸರ್ಪ ದೇವರಾದ ಅಪೆಪ್‌ನೊಂದಿಗೆ ಹೋರಾಟ ಮಾಡುತ್ತಾನೆ. ಅಪೆಪ್‌ನ ಸೋಲು ಮತ್ತು ಒಸಿರಿಸ್‌ನೊಂದಿಗಿನ ಭೇಟಿಯು ಮರುದಿನ ಸೂರ್ಯ ಹುಟ್ಟುವುದನ್ನು ಖಾತ್ರಿಪಡಿಸುತ್ತದೆ; ಇದು ಪುನರ್ಜನ್ಮವನ್ನು ಮತ್ತು ಅವ್ಯವಸ್ಥೆಯ ಮೇಲೆ ಸುವ್ಯವಸ್ಥೆಯ ವಿಜಯವನ್ನು ಪ್ರತಿನಿಧಿಸುವ ಘಟನೆಯಾಗಿದೆ.[೫೦]

ಕ್ರಿಯಾವಿಧಿ ಮತ್ತು ಮಾಂತ್ರಿಕ ಗ್ರಂಥಗಳು[ಬದಲಾಯಿಸಿ]

ಧಾರ್ಮಿಕ ಕ್ರಿಯಾವಿಧಿಗಳ ಕಾರ್ಯವಿಧಾನಗಳನ್ನು ಪಪೈರಿ(ಜೊಂಡುಹುಲ್ಲಿನ ಕಾಗದ)ಯಲ್ಲಿ ಬರೆಯಲಾಗಿದೆ, ಅವನ್ನು ಕ್ರಿಯಾವಿಧಿಗಳನ್ನು ನಡೆಸುವವರಿಗೆ ಸೂಚನೆಗಳ ಹಾಗೆ ಬಳಸಲಾಗುತ್ತದೆ. ಈ ಕ್ರಿಯಾವಿಧಿಗಳ ಗ್ರಂಥಗಳನ್ನು ಮುಖ್ಯವಾಗಿ ದೇವಾಲಯಗಳ ಗ್ರಂಥಾಲಯದಲ್ಲಿ ಇಟ್ಟಿರುತ್ತಿದ್ದರು. ದೇವಾಲಯಗಳಲ್ಲಿಯೂ ಅಂತಹ ಗ್ರಂಥಗಳನ್ನು ಕೆತ್ತಿರುತ್ತಿದ್ದರು, ಹೆಚ್ಚಿನ ವೇಳೆ ಗ್ರಂಥದೊಂದಿಗೆ ಚಿತ್ರಗಳನ್ನೂ ಕೆತ್ತಿರುತ್ತಿದ್ದರು. ಪಪೈರಿ(ಜೊಂಡುಹುಲ್ಲು ಕಾಗದ)ಯ ಕ್ರಿಯಾವಿಧಿಯ ಹಾಗೆ ಅಲ್ಲದೇ, ಈ ಕೆತ್ತನೆಗಳು ಕೇವಲ ಸೂಚನೆ ನೀಡುವ ಉದ್ದೇಶವನ್ನು ಮಾತ್ರ ಹೊಂದಿರುತ್ತಿರಲಿಲ್ಲ, ಜನರು ಇವುಗಳನ್ನು ಆಚರಿಸುವುದನ್ನು ಕೈಬಿಟ್ಟರೂ, ಕ್ರಿಯಾವಿಧಿಗಳನ್ನು ಸಾಂಕೇತಿಕವಾಗಿ ಶಾಶ್ವತವಾಗಿಸುವ ಉದ್ದೇಶವಿರುತ್ತಿತ್ತು.[೫೧] ಮಾಂತ್ರಿಕ ಗ್ರಂಥಗಳು ಕ್ರಿಯಾವಿಧಿಗಳನ್ನು ವಿವರಿಸುತ್ತವೆ, ಆದಾಗ್ಯೂ ಈ ಕ್ರಿಯಾವಿಧಿಗಳು ದೈನಂದಿನ ಬದುಕಿನ ಕೆಲವು ನಿರ್ದಿಷ್ಟ ಗುರಿಗಳನ್ನು ಈಡೇರಿಸಿಕೊಳ್ಳಲು ಹೇಳುವುದರ ಭಾಗವಾಗಿರುತ್ತಿತ್ತು. ಅವುಗಳ ಪ್ರಾಪಂಚಿಕವಾದ ಉದ್ದೇಶಗಳ ಹೊರತಾಗಿಯೂ, ಇವುಗಳಲ್ಲಿ ಅನೇಕ ಗ್ರಂಥಗಳು ದೇವಾಲಯಗಳ ಗ್ರಂಥಾಲಯಗಳಲ್ಲಿ ರಚನೆಯಾದವು ಮತ್ತು ನಂತರ ಸಾಮಾನ್ಯ ಜನತೆಯಲ್ಲಿ ಪ್ರಸಾರಗೊಂಡವು.[೫೨]

ಸ್ತೋತ್ರಗಳು ಮತ್ತು ಪ್ರಾರ್ಥನೆಗಳು[ಬದಲಾಯಿಸಿ]

ಈಜಿಪ್ತಿಯನ್ನರು ಅಸಂಖ್ಯಾತ ಪ್ರಾರ್ಥನೆಗಳು ಮತ್ತು ಸ್ತೋತ್ರಗಳನ್ನು ರಚಿಸಿದರು ಮತ್ತು ಅವನ್ನು ಪ್ರಾರ್ಥನೆಯ ರೂಪದಲ್ಲಿ ಬರೆದಿದ್ದಾರೆ. ಸ್ತೋತ್ರಗಳು ಮತ್ತು ಪ್ರಾರ್ಥನೆಗಳು ಒಂದೇ ರೀತಿಯ ರಚನೆಯನ್ನು ಅನುಸರಿಸುತ್ತವೆ ಮತ್ತು ಅವುಗಳು ಯಾವ ಉದ್ದೇಶಕ್ಕೆ ಇವೆ ಎಂಬುದರಿಂದ ಅವನ್ನು ಪ್ರತ್ಯೇಕಿಸಬಹುದು. ಸ್ತೋತ್ರಗಳನ್ನು ನಿರ್ದಿಷ್ಟ ದೈವಗಳನ್ನು ಸ್ತುತಿಸಲು ಬರೆಯಲಾಗಿದೆ.[೫೩] ಕ್ರಿಯಾವಿಧಿಗಳ ಗ್ರಂಥಗಳಂತೆ, ಅವುಗಳನ್ನು ಪಪೈರಿಯಲ್ಲಿ (ಜೊಂಡುಹುಲ್ಲಿನ ಕಾಗದ) ಮತ್ತು ದೇವಾಲಯಗಳ ಬರೆದಿದ್ದಾರೆ. ಪ್ರಾಯಶಃ ಅವುಗಳನ್ನು ದೇವಾಲಯಗಳ ಗೋಡೆಗಳ ಮೇಲೆ ಕೆತ್ತಿರುವ ಬರಹಗಳೊಂದಿಗೆ ಕ್ರಿಯಾವಿಧಿಗಳ ಭಾಗವಾಗಿ ವಾಚಿಸಲಾಗುತ್ತಿತ್ತು.[೫೪] ಅವುಗಳಲ್ಲಿ ಬಹಳಷ್ಟನ್ನು ಒಂದಿಷ್ಟು ಸಾಹಿತ್ಯದ ಸೂತ್ರಗಳ ಪ್ರಕಾರ ರಚಿಸಲಾಗಿದೆ, ಜೊತೆಗೆ ಒಂದು ದೈವದ ಲಕ್ಷಣ, ಅಂಶಗಳು ಮತ್ತು ಪೌರಾಣಿಕ ಕಾರ್ಯಗಳನ್ನು ನಿರೂಪಿಸಲು ವಿನ್ಯಾಸಗೊಂಡಿವೆ.[೫೩] ಈಜಿಪ್ತಿನ ಬೇರೆ ಧಾರ್ಮಿಕ ಬರಹಗಳಿಗಿಂತ ಹೆಚ್ಚು ಮೂಲ ದೇವತಾಶಾಸ್ತ್ರದ ಕುರಿತು ಹೆಚ್ಚು ವಿಶದವಾಗಿ ಹೇಳುವ ಒಲವು ಹೊಂದಿವೆ ಮತ್ತು ಹೊಸ ಸಾಮ್ರಾಜ್ಯದಲ್ಲಿ ಇವು ವಿಶೇಷ ಪ್ರಾಮುಖ್ಯತೆ ಪಡೆದವು, ಈ ಸಾಮ್ರಾಜ್ಯದ ಅವಧಿಯು ವಿಶೇಷವಾಗಿ ಕ್ರಿಯಾಶೀಲ ದೇವತಾಶಾಸ್ತ್ರದ ಸಿದ್ಧಾಂತದ ಅವಧಿಯಾಗಿತ್ತು.[೫೫] ಪ್ರಾರ್ಥನೆಗಳು ಕೂಡ ಸ್ತೋತ್ರಗಳಂತೆಯೇ ಸಾಮಾನ್ಯ ಕ್ರಮವನ್ನು ಅನುಸರಿಸುತ್ತವೆ, ಆದರೆ ಸಂಬಂಧಿತ ದೇವರನ್ನು ಇನ್ನಷ್ಟು ವೈಯಕ್ತಿಕ ರೀತಿಯಲ್ಲಿ ಉದ್ದೇಶಿಸುತ್ತವೆ, ಆಶೀರ್ವಾದವನ್ನು, ಸಹಾಯವನ್ನು ಅಥವಾ ತಪ್ಪು ಮಾಡಿರುವುದಕ್ಕೆ ಕ್ಷಮೆಯನ್ನು ಕೋರುತ್ತವೆ. ಅಂತಹ ಪ್ರಾರ್ಥನೆಗಳು ಹೊಸ ಸಾಮ್ರಾಜ್ಯಕ್ಕಿಂತ ಮೊದಲು ಬಹಳ ಅಪರೂಪವಿದ್ದವು. ಹಿಂದಿನ ಕಾಲಘಟ್ಟಗಳಲ್ಲಿ ದೇವರೊಂದಿಗೆ ಅಂತಹ ನೇರ ವೈಯಕ್ತಿಕ ಸಂವಹನವು ಸಾಧ್ಯವಿರಲಿಲ್ಲ ಎಂದು ನಂಬಲಾಗಿತ್ತು ಅಥವಾ ಕೊನೇಪಕ್ಷ ಬರಹಗಳಲ್ಲಿ ಹಾಗೆ ಅಭಿವ್ಯಕ್ತಿಸುವ ಸಾಧ್ಯತೆ ಕಡಿಮೆ ಇತ್ತು ಎನ್ನುವುದನ್ನು ಇದು ಸೂಚಿಸುತ್ತದೆ. ಪವಿತ್ರ ಸ್ಥಳದಲ್ಲಿ ಕಂಡುಬರುವ ಪ್ರತಿಮೆಗಳ ಮೇಲಿನ ಕೆತ್ತೆನೆಗಳು ಮತ್ತು ಸ್ಟೀಲೆಗಳಲ್ಲಿ (ಇದು ಕಲ್ಲು ಅಥವಾ ಮರದ ಫಲಕ/ಸ್ತೂಪವಾಗಿದ್ದು, ಅಂತ್ಯಸಂಸ್ಕಾರದ ವೇಳೆ ಅಥವಾ ಸ್ಮರಾರ್ಥವಾಗಿ ಅದರ ಮೇಲೆ ವ್ಯಕ್ತಿಯ ಹೆಸರು, ಹುದ್ದೆ ಇತ್ಯಾದಿ ವಿವರಗಳನ್ನು ಕೆತ್ತಿರುತ್ತಾರೆ) ವೊಟಿವ್ ಅರ್ಪಣೆಗಳ ರೂಪದಲ್ಲಿ ಇವು ಕಾಣುತ್ತವೆ.[೫೬]

ಅಂತ್ಯಸಂಸ್ಕಾರದ ಗ್ರಂಥಗಳು[ಬದಲಾಯಿಸಿ]

ಬರಹಗಾರ ಹ್ಯುನೆಫರ್‌ನ ಬುಕ್‌ ಆಫ್‌ ದಿ ಡೆಡ್‌ ಕೃತಿಯ ಕೆಲವು ವಿಭಾಗ, ಇದು ಹೃದಯವನ್ನು ತೂಗುವ ದೃಶ್ಯವನ್ನು ಚಿತ್ರಿಸಿದೆ.

ಅತ್ಯಂತ ಮಹತ್ವದ ಮತ್ತು ವ್ಯಾಪಕವಾಗಿ ಸಂರಕ್ಷಿಸಲಾದ ಈಜಿಪ್ತಿನ ಬರಹಗಳಲ್ಲಿ ಅಂತ್ಯಸಂಸ್ಕಾರದ ಗ್ರಂಥಗಳು ಮರಣಿಸಿದವರ ಆತ್ಮಗಳು ಹಿತಕರವಾದ ಮರಣಾನಂತರದ ಬದುಕನ್ನು ಹೊಂದಲಿ ಎಂದು ಖಾತ್ರಿಪಡಿಸುವಂತೆ ವಿನ್ಯಾಸಪಡಿಸಲಾಗಿವೆ.[೫೭] ಇವುಗಳಲ್ಲಿ ಅತ್ಯಂತ ಹಿಂದಿನದು ಎಂದರೆ ಪಿರಾಮಿಡ್‌ ಗ್ರಂಥಗಳು, ಇವು ವಿಶ್ವದಲ್ಲಿಯೇ ಅತ್ಯಂತ ಹಳೆಯ ಧಾರ್ಮಿಕ ಬರಹಗಳಾಗಿವೆ.[೫೮] ಹಳೆಯ ಸಾಮ್ರಾಜ್ಯದ ಅವಧಿಯಲ್ಲಿ ರಾಜವಂಶದವರ ಪಿರಾಮಿಡ್‌ಗಳ ಗೋಡೆಯ ಮೇಲೆ ಕೆತ್ತಿರುವ ಮಂತ್ರಗಳ ನೂರಾರು ಬಿಡಿ ಸಂಗ್ರಹವನ್ನು ಕಾಣಬಹುದು. ಅವು ಮರಣಾನಂತರದ ಬದುಕಿನಲ್ಲಿ ದೇವರ ಸಂಗವನ್ನು ಸೇರಿಕೊಳ್ಳುವ ವಿಧಾನವನ್ನು ಮಾಂತ್ರಿಕ ರೀತಿಯಲ್ಲಿ ರಾಜರಿಗೆ ಒದಗಿಸುವ ಉದ್ದೇಶವನ್ನು ಹೊಂದಿದ್ದವು.[೫೯] ಮಂತ್ರಗಳು ಭಿನ್ನ ರೀತಿಯಲ್ಲಿ ಮತ್ತು ಭಿನ್ನ ಸಂಯೋಜನೆಯಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಅವುಗಳಲ್ಲಿ ಕೆಲವು ಎಲ್ಲ ಪಿರಾಮಿಡ್‌ಗಳ ಮೇಲೆಯೂ ಕಾಣಿಸುತ್ತವೆ.[೬೦] ಹಳೆಯ ಸಾಮ್ರಾಜ್ಯದ ಅಂತ್ಯದಲ್ಲಿ ಪಿರಾಮಿಡ್‌ ಗ್ರಂಥಗಳಿಂದ ಕೆಲವು ಸಾಹಿತ್ಯವನ್ನು ಸೇರಿಸಿದ ಅಂತ್ಯಸಂಸ್ಕಾರದ ಮಂತ್ರಗಳ ಹೊಸ ರಚನೆಯು ಗೋರಿಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದವು, ಅವನ್ನು ಮುಖ್ಯವಾಗಿ ಶವಸಂಪುಟದ ಮೇಲೆ ಕೆತ್ತಿರುತ್ತಿದ್ದರು. ಈ ಬರಹಗಳ ಸಂಗ್ರಹವನ್ನು ಶವಸಂಪುಟದ ಗ್ರಂಥಗಳು ಎನ್ನಲಾಗುತ್ತದೆ ಮತ್ತು ಇವು ರಾಜವಂಶದವರಿಗಾಗಿಯೇ ಮೀಸಲಾಗಿರಲಿಲ್ಲ. ಇವು ರಾಜವಂಶೀಯರಲ್ಲದ ಅಧಿಕಾರಿಗಳ ಗೋರಿಗಳ ಮೇಲೂ ಕಾಣಿಸುತ್ತವೆ.[೬೧] ಹೊಸ ಸಾಮ್ರಾಜ್ಯದಲ್ಲಿ, ಹಲವಾರು ಅಂತ್ಯಸಂಸ್ಕಾರದ ಹೊಸ ಗ್ರಂಥಗಳು ರಚನೆಯಾದವು, ಅವುಗಳಲ್ಲಿ ತುಂಬ ಹೆಸರಾಗಿರುವುದು ಎಂದರೆ ಬುಕ್ ಆಫ್‌ ದಿ ಡೆಡ್‌ (ಸತ್ತಿರುವವರ ಕೃತಿ). ಹಿಂದಿನ ಕೃತಿಗಳಂತಲ್ಲದೇ, ಇವು ಬಹಳಷ್ಟು ಚಿತ್ರಗಳನ್ನು ಅಥವಾ ವೀನ್ಯೆಟ್‌ಗಳನ್ನು ಹೊಂದಿರುತ್ತಿದ್ದವು.[೬೨] ಈ ಪುಸ್ತಕವನ್ನು ಪಪೈರಸ್ ಮೇಲೆ ಪ್ರತಿ ಮಾಡುತ್ತಿದ್ದರು ಮತ್ತು ಸಾಮಾನ್ಯ ಜನತೆಗೆ ಅವರ ಗೋರಿಗಳಲ್ಲಿಡಲು ಮಾರಲಾಗುತ್ತಿತ್ತು.[೬೩] ಶವಸಂಪುಟದ ಗ್ರಂಥಗಳು ಅಪಾಯವನ್ನು ಹೇಗೆ ಜಯಿಸಬೇಕು ಎಂಬುದರ ಕುರಿತ ಪಾತಾಳಲೋಕದ ವಿಶದವಾದ ವಿವರಣೆಗಳು ಮತ್ತು ಸೂಚನೆಗಳನ್ನು ಒಳಗೊಂಡಿರುತ್ತಿತ್ತು. ಹೊಸ ಸಾಮ್ರಾಜ್ಯದಲ್ಲಿ ಈ ಬರವಣಿಗೆಗಳು "ಅಧೋಲೋಕದ ಪುಸ್ತಕಗಳ ರಚನೆಗೆ ಕಾರಣವಾಯಿತು. ಇವುಗಳಲ್ಲಿ ಬುಕ್ ಆಫ್‌ ಗೇಟ್ಸ್, ಬುಕ್‌ ಕ್ಯಾವರ್ನ್ಸ್ ಮತ್ತು ಅಮುಡ್ಯುಅಟ್‌ ಸೇರಿವೆ.[೬೪] ಮಂತ್ರಗಳ ಬಿಡಿ ಸಂಗ್ರಹಗಳಂತೆ ಅಲ್ಲದೇ, ಈ ಅಧೋಲೋಕದ ಪುಸ್ತಕಗಳು ರಾ ದೇವರು ಡ್ಯುಅಟ್‌ ಮೂಲಕ ಸಾಗುವುದರ ಚಿತ್ರಣವನ್ನು ನೀಡುತ್ತವೆ ಮತ್ತು ಹೋಲಿಕೆಯಲ್ಲಿ, ಮರಣಿಸಿದ ವ್ಯಕ್ತಿಯ ಆತ್ಮವನ್ನು ಸತ್ತಿರುವ ಕ್ಷೇತ್ರದ ಮೂಲಕ ಸಾಗುವುದಕ್ಕೆ ಇದನ್ನು ಹೋಲಿಸಬಹುದು. ಇವುಗಳು ಮೊದಲು ಫೇರೋಗಳ ಗೋರಿಗಷ್ಟೇ ಸೀಮಿತವಾಗಿದ್ದವು, ಆದರೆ ಮೂರನೇ ಮಧ್ಯಂತರ ಅವಧಿಯಲ್ಲಿ ಅವು ಹೆಚ್ಚು ವ್ಯಾಪಕವಾಗಿ ಬಳಕೆಗೆ ಬಂದವು.[೬೫]

ಪದ್ಧತಿಗಳು ಅಥವಾ ಆಚರಣೆಗಳು[ಬದಲಾಯಿಸಿ]

ಮೊದಲ ಪೈಲೊನ್ ಮತ್ತು ಪೈಲೇದಲ್ಲಿರುವ ಐಸಿಸ್‌ ದೇವಾಲಯದ ಕಂಬಸಾಲು

ದೇವಾಲಯಗಳು[ಬದಲಾಯಿಸಿ]

ಈಜಿಪ್ತಿನ ಇತಿಹಾಸದ ಆರಂಭದಿಂದಲೂ ದೇವಾಲಯಗಳು ಅಸ್ತಿತ್ವದಲ್ಲಿದ್ದವು. ನಾಗರಿಕತೆಯ ಉತ್ತುಂಗದಲ್ಲಿ ಇವು ಅಲ್ಲಿನ ಹೆಚ್ಚಿನ ಎಲ್ಲ ಪಟ್ಟಣಗಳಲ್ಲಿದ್ದವು. ಮರಣಿಸಿದ ಫೇರೋಗಳ ಚೈತನ್ಯವನ್ನು ಕಾದಿಡಲು ನಿರ್ಮಿಸಿದ ಶವಾಗಾರದ ದೇವಾಲಯಗಳು ಮತ್ತು ಪೋಷಕ ದೇವರಿಗೆ ಮೀಸಲಾದ ದೇವಾಲಯಗಳು, ಹೀಗೆ ಎರಡೂ ರೀತಿಯವು ಇದ್ದವು. ಆದರೆ ಈ ಎರಡರ ಮಧ್ಯದ ಭಿನ್ನತೆ ಅಸ್ಪಷ್ಟವಿತ್ತು, ಏಕೆಂದರೆ ದೈವಿಕತೆ ಮತ್ತು ರಾಜತ್ವ, ಎರಡೂ ಬಹಳ ಆಪ್ತವಾಗಿ ತಳುಕುಹಾಕಿಕೊಂಡಿದ್ದವು.[೨೦] ಮೊದಲು ದೇವಾಲಯಗಳು ಸಾಮಾನ್ಯ ಜನತೆಗೆ ಪೂಜಿಸಲಿಕ್ಕೆಂದು ಇರಲಿಲ್ಲ ಮತ್ತು ಸಾಮಾನ್ಯ ಜನತೆ ಅವರದೇ ಆದ ಒಂದಿಷ್ಟು ಸಂಕೀರ್ಣ ಧಾರ್ಮಿಕ ಪದ್ಧತಿಗಳನ್ನು ಹೊಂದಿದ್ದರು. ಬದಲಿಗೆ, ಪ್ರಭುತ್ವವು ನಡೆಸುತ್ತಿದ್ದ ದೇವಾಲಯಗಳು ದೇವರ ನಿವಾಸಗಳಾಗಿದ್ದು, ಜನರ ಮಧ್ಯವರ್ತಿಗಳ ಪಾತ್ರ ವಹಿಸುತ್ತಿದ್ದ ಭೌತಿಕ ಮೂರ್ತಿಗಳನ್ನು ಅಲ್ಲಿಡಲಾಗಿತ್ತು ಮತ್ತು ಅವುಗಳಿಗೆ ಕಾಳಜಿಯಿಂದ ಅರ್ಪಣೆಗಳನ್ನು ಒದಗಿಸಲಾಗುತ್ತಿತ್ತು. ಈ ಸೇವೆಯು ದೇವರನ್ನು ಊರ್ಜಿತಗೊಳಿಸಲು ಅಗತ್ಯವಾಗಿದ್ದು, ಅದಕ್ಕೆ ಪ್ರತಿಯಾಗಿ ದೇವರು ವಿಶ್ವವನ್ನು ನಿರ್ವಹಿಸಲು ಸಾಧ್ಯವಾಗುತ್ತಿತ್ತು.[೬೬] ಹೀಗೆ ದೇವಾಲಯಗಳು ಈಜಿಪ್ತಿನ ಸಮಾಜಕ್ಕೆ ಕೇಂದ್ರಬಿಂದುವಾಗಿದ್ದವು ಮತ್ತು ದೇವಾಲಯಗಳನ್ನು ಸುಸ್ಥಿತಿಯಲ್ಲಿಡಲು ಅಪಾರ ಸಂಪನ್ಮೂಲವನ್ನು ಮೀಸಲಾಗಿಡುತ್ತಿದ್ದರು. ರಾಜಪ್ರಭುತ್ವದಿಂದ ಬರುವ ದೇಣಿಗೆ ಮತ್ತು ಅವುಗಳ ಸ್ವಂತ ಎಸ್ಟೇಟ್‌ಗಳಿಂದ ಬರುವ ಸಂಪನ್ಮೂಲವನ್ನು ಬಳಸುತ್ತಿದ್ದರು. ಹೆಚ್ಚಾಗಿ ಫೇರೋಗಳು ಅವುಗಳನ್ನು ದೇವರಿಗೆ ತಾವು ಸಲ್ಲಿಸುವ ಗೌರವದ ಬಾಧ್ಯತೆ ಎಂಬಂತೆ ವಿಸ್ತರಿಸಿದರು, ಹೀಗಾಗಿ ಕೆಲವು ಕಡೆಗಳಲ್ಲಿ ದೇವಾಲಯಗಳು ಅಗಾಧ ಗಾತ್ರದಲ್ಲಿ ಬೆಳೆಯಲು ಕಾರಣವಾಯಿತು.[೬೭] ಆದರೆ ಎಲ್ಲ ದೇವರಿಗೂ ಅವುಗಳದೇ ದೇವಾಲಯಗಳು ಇರಲಿಲ್ಲ. ಅಧಿಕೃತ ದೇವತಾಶಾಸ್ತ್ರದಲ್ಲಿ ಮುಖ್ಯವಾಗಿದ್ದ ದೇವರುಗಳಿಗೆ ಕನಿಷ್ಠ ಪೂಜೆ ಸಲ್ಲುತ್ತಿತ್ತು ಮತ್ತು ದೇವಸ್ಥಾನದ ಕ್ರಿಯಾವಿಧಿಗಳಿಗಿಂತ ಅನೇಕ ಗೃಹ ದೇವರುಗಳು ಅಪಾರ ಗೌರವದ ಕೇಂದ್ರವಾಗಿದ್ದವು.[೬೮] ಬಹಳ ಮೊದಲಿನ ಈಜಿಪ್ತಿನ ದೇವಾಲಯಗಳು ಚಿಕ್ಕವಿದ್ದವು, ಶಾಶ್ವತವಲ್ಲದ ಕಟ್ಟಡಗಳನ್ನು ಹೊಂದಿದ್ದವು, ಆದರೆ ಹಳೆಯ ಮತ್ತು ಮಧ್ಯ ಅವಧಿಯ ಸಾಮ್ರಾಜ್ಯದ ಅವಧಿಯಲ್ಲಿ ಅವುಗಳ ವಿನ್ಯಾಸಗಳು ಹೆಚ್ಚು ವಿಸ್ತಾರವಾಗಿ ಬೆಳೆದವು ಮತ್ತು ಅವುಗಳನ್ನು ಕಲ್ಲಿನಲ್ಲಿ ಕಟ್ಟುವುದು ಹೆಚ್ಚಾಯಿತು. ಹೊಸ ಸಾಮ್ರಾಜ್ಯದಲ್ಲಿ, ದೇವಾಲಯದ ಒಂದು ಮೂಲ ಅಡಿಪಾಯ ರೂಪುಗೊಂಡಿತು. ಅದು ಹಳೆಯ ಮತ್ತು ಮಧ್ಯ ಅವಧಿಯ ಸಾಮ್ರಾಜ್ಯದ ದೇವಾಲಯಗಳಿಂದ ಕೆಲವು ಸಾಮಾನ್ಯ ಅಂಶಗಳನ್ನು ತೆಗೆದುಕೊಂಡು, ರೂಪಿತವಾಗಿತ್ತು. ಕೆಲವು ರೂಪಾಂತರಗಳೊಡನೆ, ಈ ಯೋಜನೆಯನ್ನು ಸರಿಸುಮಾರು ನಂತರ ನಿರ್ಮಿಸಿದ ಎಲ್ಲ ದೇವಾಲಯಗಳ ನಿರ್ಮಾಣದಲ್ಲಿ ಬಳಸಿಕೊಳ್ಳಲಾಯಿತು. ಜೊತೆಗೆ ಇಂದು ಉಳಿದಿರುವ ಅನೇಕ ದೇವಾಲಯಗಳು ಆ ವಿನ್ಯಾಸ ಯೋಜನೆಗಳಿಗೇ ಅಂಟಿಕೊಂಡಿವೆ. ಈ ಒಂದು ಗುಣಮಟ್ಟದ ಯೋಜನೆಯಲ್ಲಿ, ದೇವಾಲಯಗಳಲ್ಲಿ ಅಂಕಣಗಳ ಮತ್ತು ಸಭಾಂಗಣಗಳ ಮೂಲಕ ಹಾದುಹೋಗುವ ಒಂದು ಕೇಂದ್ರೀಯ ಮೆರವಣಿಗೆಯ ದಾರಿ ಇರುತ್ತಿತ್ತು, ಅದು ದೇವಾಲಯದ ದೇವರ ಮೂರ್ತಿ ಇರುವ ಗರ್ಭಗುಡಿಗೆ ತಲುಪುತ್ತಿತ್ತು. ಅತ್ಯಂತ ಪವಿತ್ರವಾದ ಈ ಭಾಗಕ್ಕೆ ಫೇರೋ ಮತ್ತು ಅತ್ಯುನ್ನತ ಶ್ರೇಣಿಯ ಪೂಜಾರಿಗಳಿಗೆ ಮಾತ್ರವೇ ಪ್ರವೇಶವಿರುತ್ತಿತ್ತು. ದೇವಾಲಯದ ಪ್ರವೇಶದಿಂದ ಗರ್ಭಗುಡಿಗೆ ಸಾಗುವುದನ್ನು ಮಾನವ ಜಗತ್ತಿನಿಂದ ದೈವಿಕ ಕ್ಷೇತ್ರಕ್ಕೆ ಪಯಣ ಎಂದು ನೋಡಲಾಗುತ್ತಿತ್ತು. ದೇವಾಲಯದ ವಾಸ್ತುಶಿಲ್ಪದಲ್ಲಿ ಇರುತ್ತಿದ್ದ ಸಂಕೀರ್ಣ ಪೌರಾಣಿಕ ಸಾಂಕೇತಿಕತೆಯು ಇದನ್ನು ಸಮರ್ಥಿಸುತ್ತಿತ್ತು.[೬೯] ದೇವಾಲಯದ ಮುಖ್ಯ ಕಟ್ಟಡದ ಸಾಕಷ್ಟು ಆಚೆಗೆ ಅತ್ಯಂತ ಹೊರಗಿನ ಗೋಡೆಯು ಇರುತ್ತಿತ್ತು. ಈ ಎರಡರ ಮಧ್ಯದ ಸ್ಥಳದಲ್ಲಿ ಅನೇಕ ಪೂರಕ ಕಟ್ಟಡಗಳು ಇರುತ್ತಿದ್ದವು. ಅವುಗಳಲ್ಲಿ ದೇವಾಲಯದ ಅಗತ್ಯಗಳನ್ನು ಪೂರೈಸುವ ಕಾರ್ಯಾಗಾರಗಳು ಮತ್ತು ಸಂಗ್ರಹಣಾ ಪ್ರದೇಶಗಳು ಮತ್ತು ದೇವಾಲಯದ ಪವಿತ್ರ ಬರಹಗಳನ್ನು ಮತ್ತು ದೈನಂದಿನ ವ್ಯವಹಾರದ ದಾಖಲೆಗಳನ್ನು ಇಡಲಾಗುತ್ತಿದ್ದ ಗ್ರಂಥಾಲಯಗಳು ಇರುತ್ತಿದ್ದವು. ನಡುವಿನ ಈ ಸ್ಥಳಾವಕಾಶವು ಬಹುವಿಧದ ವಿಷಯಗಳ ಕುರಿತ ಕಲಿಕಾ ಕೇಂದ್ರವಾಗಿಯೂ ಇರುತ್ತಿತ್ತು.[೭೦] ಸೈದ್ಧಾಂತಿಕವಾಗಿ ದೇವಾಲಯದ ಕ್ರಿಯಾವಿಧಿಗಳನ್ನು ನಡೆಸುವುದು ಫೇರೋನ ಕರ್ತವ್ಯವಾಗಿತ್ತು, ಏಕೆಂದರೆ ಆತ ದೇವರಿಗೆ ಈಜಿಪ್ತ್‌‌ನ ಅಧಿಕೃತ ಪ್ರತಿನಿಧಿಯಾಗಿದ್ದ. ವಾಸ್ತವದಲ್ಲಿ, ಕ್ರಿಯಾವಿಧಿ ಕರ್ತವ್ಯಗಳನ್ನು ಬಹುತೇಕ ವೇಳೆ ಪೂಜಾರಿಗಳೇ ನಡೆಸುತ್ತಿದ್ದರು. ಹಳೆಯ ಮತ್ತು ಹೊಸ ಸಾಮ್ರಾಜ್ಯಗಳಲ್ಲಿ, ಪೂಜಾರಿಗಳ ಪ್ರತ್ಯೇಕ ವರ್ಗಗಳಿರಲಿಲ್ಲ; ಬದಲಿಗೆ ಅನೇಕ ಸರ್ಕಾರಿ ಅಧಿಕಾರಿಗಳು ಹಲವಾರು ತಿಂಗಳುವರೆಗೆ ಈ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು, ನಂತರವೇ ಅವರು ತಮ್ಮ ಮತಧರ್ಮಾತೀತ ಕರ್ತವ್ಯಗಳಿಗೆ ಮರಳುತ್ತಿದ್ದರು. ಹೊಸ ಸಾಮ್ರಾಜ್ಯದಲ್ಲಿ ಮಾತ್ರ ವೃತ್ತಿಪರ ಪೌರೋಹಿತ್ಯವು ವ್ಯಾಪಕವಾಯಿತು, ಆದರೂ ಬಹಳಷ್ಟು ಕೆಳಗಿನ ಶ್ರೇಣಿಯ ಪುರೋಹಿತರು ಇನ್ನೂ ಅರೆಕಾಲಿಕ ಸೇವೆಯಲ್ಲಿಯೇ ಇದ್ದರು. ಎಲ್ಲರೂ ಇನ್ನೂ ಪ್ರಭುತ್ವದಿಂದಲೇ ನೇಮಕಗೊಳ್ಳುತ್ತಿದ್ದರು ಮತ್ತು ಅವರ ನೇಮಕಾತಿಯಲ್ಲಿ ಫೇರೋನದೇ ಅಂತಿಮ ಹೇಳಿಕೆಯಾಗಿತ್ತು.[೭೧] ಆದರೆ ಕ್ರಮೇಣ ದೇವಾಲಯಗಳ ಸಂಪತ್ತು ವೃದ್ಧಿಸಿದಂತೆ, ಅವರ ಪೌರೋಹಿತ್ಯವು ಫೇರೋನಿಗೇ ಪ್ರತಿಸ್ಪರ್ಧಿಯಾಗುವಷ್ಟರ ಮಟ್ಟಿಗೆ ವೃದ್ಧಿಸಿತು. ಮೂರನೇ ಮಧ್ಯಂತರ ಅವಧಿಯ ರಾಜಕೀಯ ವಿಚ್ಛಿದ್ರೀಕರಣದಲ್ಲಿ, ಕರ್ನಕ್‌ದಲ್ಲಿದ್ದ ಅಮುನ್‌ನ ಉನ್ನತ ಪುರೋಹಿತರು ಮೇಲಿನ ಈಜಿಪ್ತ್‌‌ನ ಪ್ರಭಾವೀ ರಾಜರಾದರು.[೭೨] ದೇವಾಲಯದ ಸಿಬ್ಬಂದಿಗಳಲ್ಲಿ ಪುರೋಹಿತರಲ್ಲದ ಅನೇಕ ಜನರೂ ಇದ್ದರು, ಅವರಲ್ಲಿ ದೇವಾಲಯದ ವ್ರತಾಚರಣೆಗಳಲ್ಲಿ ಸಂಗೀತಗಾರರು ಮತ್ತು ಸ್ತೋತ್ರ ಪಠಿಸುವವರೂ ಸೇರಿದ್ದರು. ದೇವಾಲಯದ ಹೊರಗೆ ಕರಕುಶಲಗಾರರು ಮತ್ತು ಇತರೆ ಕಾರ್ಮಿಕರು ದೇವಾಲಯದ ಅಗತ್ಯಗಳನ್ನು ಪೂರೈಸುತ್ತಿದ್ದರು ಜೊತೆಗೆ ಅವರು ದೇವಾಲಯದ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರಿಗೂ ದೇವಾಲಯದ ಆದಾಯದ ಭಾಗವನ್ನು ಪಾವತಿಸಲಾಗುತ್ತಿತ್ತು. ಆದ್ದರಿಂದಲೇ ದೊಡ್ಡ ದೇವಾಲಯಗಳು ಆರ್ಥಿಕ ಚಟುವಟಿಕೆಗಳ ಬಹು ಮುಖ್ಯವಾದ ಕೇಂದ್ರಗಳಾಗಿದ್ದವು, ಕೆಲವೊಮ್ಮೆ ಇವು ಸಾವಿರಾರು ಜನರನ್ನು ನೇಮಿಸಿಕೊಳ್ಳುತ್ತಿದ್ದವು.[೭೩]

ಅಧಿಕೃತ ಕ್ರಿಯಾವಿಧಿಗಳು ಮತ್ತು ಉತ್ಸವಗಳು[ಬದಲಾಯಿಸಿ]

ಪ್ರಭುತ್ವದ ಧಾರ್ಮಿಕ ಆಚರಣೆಗಳು ದೈವವೊಂದರ ಆರಾಧನ ಪದ್ಧತಿಯಲ್ಲಿ ಒಳಗೊಂಡಿದ್ದ ದೇವಾಲಯದ ಕ್ರಿಯಾವಿಧಿಗಳು ಮತ್ತು ದೈವಿಕ ರಾಜತ್ವಕ್ಕೆ ಸಂಬಂಧಿಸಿದ ವ್ರತಾಚರಣೆ, ಈ ಎರಡನ್ನೂ ಒಳಗೊಂಡಿತ್ತು. ರಾಜತ್ವಕ್ಕೆ ಸಂಬಂಧಿಸಿದ ವ್ರತಾಚರಣೆಗಳಲ್ಲಿ ಪಟ್ಟಾಭಿಷೇಕ ವ್ರತಾಚರಣೆ ಮತ್ತು ಸೆಡ್ ಉತ್ಸವ ಸೇರಿತ್ತು. ಈ ಉತ್ಸವವನ್ನು ಫೇರೋನ ಬಲವನ್ನು ನವೀಕರಿಸಲು ಮಾಡಲಾಗುತ್ತಿದ್ದು, ಇದನ್ನು ಆತನ ಆಳ್ವಿಕೆಯಲ್ಲಿ ನಿಯತಕಾಲಿಕವಾಗಿ ನಡೆಸುತ್ತಿದ್ದರು.[೭೪] ಇದಲ್ಲದೇ ಅಸಂಖ್ಯಾತ ರೀತಿಯ ದೇವಾಲಯ ಕ್ರಿಯಾವಿಧಿಗಳು ಇರುತ್ತಿದ್ದವು. ಇವುಗಳಲ್ಲಿ ಕೆಲವು ಸಂಸ್ಕಾರಗಳನ್ನು ದೇಶಾದ್ಯಂತ ನಡೆಸಿದರೆ ಮತ್ತೆ ಕೆಲವು ಸಂಸ್ಕಾರಗಳು ಒಂದೇ ದೇವಾಲಯಕ್ಕೆ ಅಥವಾ ಒಂದೇ ದೇವರ ದೇವಾಲಯಗಳಿಗೆ ಸೀಮಿತವಾಗಿರುತ್ತಿದ್ದವು. ಕೆಲವನ್ನು ಪ್ರತಿದಿನ ಮಾಡುತ್ತಿದ್ದರು, ಮತ್ತೆ ಕೆಲವನ್ನು ವಾರ್ಷಿಕವಾಗಿ ಅಥವಾ ಅಪರೂಪದ ಸಂದರ್ಭಗಳಲ್ಲಿ ನಡೆಸುತ್ತಿದ್ದರು.[೭೫] ಅತ್ಯಂತ ಸಾಮಾನ್ಯವಾದ ದೇವಾಲಯದ ಕ್ರಿಯಾವಿಧಿ ಎಂದರೆ ಬೆಳಗಿನ ಅರ್ಪಣಾ ವ್ರತಾಚರಣೆ, ಇದನ್ನು ಈಜಿಪ್ತ್‌‌ನಾದ್ಯಂತ ದೇವಾಲಯಗಳಲ್ಲಿ ಪ್ರತಿದಿನ ನಡೆಸುತ್ತಿದ್ದರು. ಇದರಲ್ಲಿ, ಒಬ್ಬ ಉನ್ನತ ಶ್ರೇಣಿಯ ಪುರೋಹಿತ ಅಥವಾ ಕೆಲವೊಮ್ಮೆ ಫೇರೋ, ದೇವರ ಮೂರ್ತಿಯನ್ನು ತೊಳೆದು, ಲೇಪನಗಳನ್ನು ಹಚ್ಚಿ, ಬಹುವಾಗಿ ಅಲಂಕರಿಸಿ, ನಂತರ ನೈವೇದ್ಯಗಳನ್ನು ಅರ್ಪಿಸುತ್ತಿದ್ದರು. ದೇವರು ಅರ್ಪಣೆಗಳ ಆಧ್ಯಾತ್ಮಿಕ ಸಾರವನ್ನು ಸೇವಿಸಿದ ನಂತರ, ಆ ಪ್ರಸಾದವನ್ನು ಪುರೋಹಿತರೊಳಗೇ ವಿತರಿಸಲಾಗುತ್ತಿತ್ತು.[೭೪] ಆಗೊಮ್ಮೆ ಈಗೊಮ್ಮೆ ನಡೆಯುವ ಕ್ರಿಯಾವಿಧಿಗಳು ಅಥವಾ ಉತ್ಸವಗಳೂ ಸಾಕಷ್ಟಿದ್ದು, ಪ್ರತಿ ವರ್ಷ ಹತ್ತು ಹನ್ನೆರಡು ನಡೆಯುತ್ತಿದ್ದವು. ಈ ಹಬ್ಬಗಳು ದೇವರಿಗೆ ಸರಳ ಅರ್ಪಣೆಗಳನ್ನು ನೀಡುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತಿತ್ತು, ಜೊತೆಗೆ ಕೆಲವು ಪುರಾಣಗಳನ್ನು ಮರುಅಭಿನಯಿಸುವುದು ಅಥವಾ ಅವ್ಯವಸ್ಥೆಯ ಶಕ್ತಿಗಳ ಸಂಕೇತಿಕ ನಾಶ ಇವನ್ನು ಒಳಗೊಂಡಿರುತ್ತಿತ್ತು.[೭೬] ಇವುಗಳಲ್ಲಿ ಹೆಚ್ಚಿನ ಸನ್ನಿವೇಶಗಳನ್ನು ಪುರೋಹಿತರು ಮಾತ್ರವೇ ಆಚರಿಸುತ್ತಿದ್ದರು ಮತ್ತು ದೇವಾಲಯದ ಒಳಗೆ ಮಾತ್ರವೇ ನಡೆಯುತ್ತಿದ್ದವು.[೭೫] ಆದಾಗ್ಯೂ ಕಾರ್ನಕ್‌ನಲ್ಲಿ ಆಚರಿಸುತ್ತಿದ್ದ ಒಪೆಟ್‌ ಉತ್ಸವದಂತಹ ಅತ್ಯಂತ ಪ್ರಮುಖವಾದ ದೇವಾಲಯ ಉತ್ಸವವು ದೇವರ ಪ್ರತಿಮೆಯನ್ನು ಗರ್ಭಗುಡಿಯಿಂದ ಹೊರಗೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ, ಒಂದು ಮಾದರಿ ನಾವೆಯಲ್ಲಿ ಆ ದೈವಕ್ಕೆ ಸಂಬಂಧಿಸಿದ ಬೇರೆ ದೇವಾಲಯಗಳಂತಹ ಮಹತ್ವದ ಸ್ಥಳಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿರುತ್ತಿತ್ತು. ಸಾಮಾನ್ಯ ಜನತೆ ಈ ಮೆರವಣಿಗೆಯನ್ನು ನೋಡಲು ಒಟ್ಟುಸೇರುತ್ತಿದ್ದರು ಮತ್ತು ಕೆಲವೊಮ್ಮೆ ಈ ಸಂದರ್ಭಗಳಲ್ಲಿ ದೇವರಿಗೆ ನೀಡಲಾಗುತ್ತಿದ್ದ ಅರ್ಪಣೆಗಳಲ್ಲಿ ಸ್ವಲ್ಪ ಭಾಗವನ್ನು ಪಡೆಯುತ್ತಿದ್ದರು.[೭೭]

ಪ್ರಾಣಿ ಆರಾಧನೆ ಪದ್ಧತಿಗಳು[ಬದಲಾಯಿಸಿ]

ಏಪಿಸ್‌ ಹೋರಿ

ಅನೇಕ ಪವಿತ್ರ ಸ್ಥಳಗಳಲ್ಲಿ, ಈಜಿಪ್ತಿಯನ್ನರು ನಿರ್ದಿಷ್ಟ ದೈವಗಳ ಪ್ರಕಟಗೊಳ್ಳುವಿಕೆ ಎಂದು ಭಾವಿಸಿದ ವಿವಿಧ ಪ್ರಾಣಿಗಳನ್ನು ಪೂಜಿಸುತ್ತಿದ್ದರು. ಈ ಪ್ರಾಣಿಗಳನ್ನು ನಿರ್ದಿಷ್ಟ ಪವಿತ್ರ ಗುರುತುಗಳನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು, ಈ ಗುರುತುಗಳು ಅವು ಆ ಪಾತ್ರಕ್ಕೆ ಅರ್ಹರೇ ಎಂಬುದನ್ನು ಸೂಚಿಸುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು. ಈ ಕೆಲವು ಆರಾಧನಾ ಪದ್ಧತಿಗಳ ಪ್ರಾಣಿಗಳು ತಮ್ಮ ಬದುಕಿನ ಉಳಿದ ಆಯುಷ್ಯದಲ್ಲಿಯೂ ಅದೇ ಸ್ಥಾನವನ್ನು ಉಳಿಸಿಕೊಳ್ಳುತ್ತಿದ್ದವು. ಉದಾಹರಣೆಗೆ ಏಪಿಸ್ ಹೋರಿಯನ್ನು 'ಪ್ತಾ'ದ ಮೈದೋರುವಿಕೆ ಎಂದು ಮೆಂಫಿಸ್‌ನಲ್ಲಿ ಪೂಜಿಸಲಾಗುತ್ತಿತ್ತು. ಬೇರೆ ಕೆಲವು ಪ್ರಾಣಿಗಳನ್ನು ಕಿರು ಅವಧಿಗೂ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈ ಆರಾಧನಾ ಪದ್ಧತಿಗಳು ನಂತರದ ಕಾಲಘಟ್ಟದಲ್ಲಿ ಬಹಳ ಜನಪ್ರಿಯವಾದವು ಮತ್ತು ಅನೇಕ ದೇವಾಲಯಗಳು ಅಂತಹ ಪ್ರಾಣಿಗಳ ದೊಡ್ಡಿಯನ್ನೇ ಆರಂಭಿಸಿದರು, ಇವುಗಳಿಂದ ಹೊಸ ದೈವದ ಮೈದೋರುವಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.[೭೮] ಇಪ್ಪತ್ತಾರನೇ ರಾಜವಂಶದಲ್ಲಿ ಒಂದು ಪ್ರತ್ಯೇಕ ಪದ್ಧತಿ ಬೆಳೆಯಿತು, ಅದೆಂದರೆ ಜನರು ಯಾವುದೋ ಒಂದು ಪ್ರಾಣಿ ವರ್ಗಕ್ಕೆ ಸೇರಿದ ಒಂದು ಪ್ರಾಣಿಯನ್ನು, ಆ ವರ್ಗವನ್ನು ಪ್ರತಿನಿಧಿಸುವ ದೇವರಿಗೆ ಅರ್ಪಣೆ ಎಂದು ಮಮ್ಮಿ ಮಾಡಲಾರಂಭಿಸಿದರು. ಈಜಿಪ್ತಿನ ದೈವಗಳ ಗೌರವಾರ್ಥವಾಗಿ ದೇವಾಲಯಗಳಲ್ಲಿ ಮಮ್ಮಿ ಮಾಡಿದ ಲಕ್ಷಾಂತರ ಬೆಕ್ಕುಗಳು, ಹಕ್ಕಿಗಳು ಮತ್ತು ಇನ್ನಿತರ ಜೀವಿಗಳನ್ನು ಹೂಳಲಾಯಿತು.[೭೯][೮೦] ಒಂದು ನಿರ್ದಿಷ್ಟ ದೇವಕ್ಕೆ ಸೇರಿದ ಪುರೋಹಿತರಿಗೆ ಆ ದೈವದೊಂದಿಗೆ ಸಂಬಂಧಿಸಿದ ಪ್ರಾಣಿಯನ್ನು ಮಮ್ಮಿ ಮಾಡಲು ಮತ್ತು ಅದನ್ನು ಪಡೆದುಕೊಳ್ಳಲು ಪೂಜೆ ಮಾಡಿಸುವವರು ಹಣ ಪಾವತಿಸುತ್ತಿದ್ದರು ಮತ್ತು ಆ ದೇವರ ಆರಾಧನಾ ಪದ್ಧತಿಗಳ ಕೇಂದ್ರದ ಬಳಿ ಆ ಮಮ್ಮಿಯನ್ನು ಇಡುತ್ತಿದ್ದರು.

ಪ್ರಶ್ನಸ್ಥಾನಗಳು ಅಥವಾ ನಿಮಿತ್ತಸ್ಥಾನಗಳು[ಬದಲಾಯಿಸಿ]

ಈಜಿಪ್ತಿಯನ್ನರು ಪ್ರಶ್ನಸ್ಥಾನಗಳು ಅಥವಾ ನಿಮಿತ್ತಸ್ಥಾನಗಳನ್ನು ಜ್ಞಾನ ಅಥವಾ ಮಾರ್ಗದರ್ಶನಕ್ಕಾಗಿ ದೇವರನ್ನು ಕೇಳಲು ಬಳಸುತ್ತಿದ್ದರು. ಈಜಿಪ್ತಿನ ಪ್ರಶ್ನಸ್ಥಾನಗಳು ಅಥವಾ ನಿಮಿತ್ತಸ್ಥಾನಗಳು ಮೊದಲೇ ಇದ್ದಿರಬಹುದಾದರೂ, ಹೊಸ ಸಾಮ್ರಾಜ್ಯ ಮತ್ತು ನಂತರದ ಅವಧಿಯಿಂದ ಪರಿಚಿತವಾಗಿವೆ. ರಾಜರನ್ನೂ ಒಳಗೊಂಡಮತೆ, ಎಲ್ಲ ವರ್ಗದ ಜನತೆ ನಿಮಿತ್ತಸ್ಥಾನಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ವಿಶೇಷವಾಗಿ ಹೊಸ ಸಾಮ್ರಾಜ್ಯದ ಅಂತ್ಯಭಾಗದಲ್ಲಿ ನಿಮಿತ್ತಸ್ಥಾನದಲ್ಲಿ ಪಡೆದ ಉತ್ತರವನ್ನು ಕಾನೂನು ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅಥವಾ ರಾಜ ನಿರ್ಣಯಗಳನ್ನು ತಿಳಿಸಲು ಬಳಸುತ್ತಿದ್ದಿರಬಹುದು.[೮೧] ನಿಮಿತ್ತಸ್ಥಾನಗಳನ್ನು ಸಮಾಲೋಚಿಸುವ ಅತ್ಯಂತ ಸಾಮಾನ್ಯ ವಿಧಾನವೆಂದರೆ ದೈವವನ್ನು ಉತ್ಸವದಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ಮೂರ್ತಿಎದುರು ಒಂದು ಪ್ರಶ್ನೆಯನ್ನು ಇಡುವುದು ಮತ್ತು ನಾವೆಯ ಚಲನೆಗಳಿಂದ ಒಂದು ಉತ್ತರವನ್ನು ಗ್ರಹಿಸುವುದು ಆಗಿತ್ತು. ಇನ್ನಿತರ ವಿಧಾನಗಳು ಆರಾಧನಾ ಪದ್ಧತಿಯ ಪ್ರಾಣಿಗಳ ವರ್ತನೆಯನ್ನು ವ್ಯಾಖ್ಯಾನಿಸುವುದು, ಚೀಟಿ ಎತ್ತುವುದು ಅಥವಾ ಪ್ರತಿಮೆಗಳ ಎದುರು ಸಮಾಲೋಚಿಸುವುದು, ಇಲ್ಲಿ ಪುರೋಹಿತರೇ ಮಾತನಾಡುತ್ತಿದ್ದರು. ದೇವರನ್ನು ಗ್ರಹಿಸಬಲ್ಲ ವಿಧಾನಗಳು ಪುರೋಹಿತರಿಗೆ ಅಪಾರ ಪ್ರಭಾವವನ್ನು ಒದಗಿಸಿತು, ಅವರು ದೇವರ ಸಂದೇಶದ ಕುರಿತು ಮಾತನಾಡಿ, ಅವುಗಳ ಅರ್ಥವನ್ನು ವ್ಯಾಖ್ಯಾನಿಸುತ್ತಿದ್ದರು.[೮೨]

ಪ್ರಚಲಿತ ಧರ್ಮ[ಬದಲಾಯಿಸಿ]

ಪ್ರಭುತ್ವದ ಆರಾಧನಾ ಪದ್ಧತಿಗಳು ಈಜಿಪ್ತಿಯನ್ನರ ವಿಶ್ವದ ಸ್ಥಿರತೆಯನ್ನು ರಕ್ಷಿಸಲಿಕ್ಕಾಗಿ ಇದ್ದರೆ, ಸಾಮಾನ್ಯ ಜನರು ದೈನಂದಿನ ಬದುಕಿಗೆ ನೇರವಾಗಿ ಸಂಬಂಧ ಹೊಂದಿದ್ದ ತಮ್ಮದೇ ಆದ ಧಾರ್ಮಿಕ ಪದ್ಧತಿಗಳನ್ನು ಹೊಂದಿದ್ದರು.[೮೩] ಈ ಪ್ರಚಲಿತ ಧರ್ಮವು ಅಧಿಕೃತ ಆರಾಧನಾ ಪದ್ಧತಿಗಳಿಗಿಂತ ಕಡಿಮೆ ಪುರಾವೆಗಳನ್ನು ಉಳಿಸಿ ಮರೆಯಾಗಿದೆ. ಏಕೆಂದರೆ ಅಧಿಕೃತ ಆರಾಧನಾ ಪದ್ಧತಿಗಳ ಪುರಾವೆಗಳನ್ನು ಬಹುತೇಕವಾಗಿ ಈಜಿಪ್ತಿನ ಸಂಪದ್ಭರಿತ ಜನರು ಹುಟ್ಟುಹಾಕಿದ್ದು, ಅದು ಒಟ್ಟಾರೆ ಜನಸಮೂಹದ ಆಚರಣೆಗಳನ್ನು ಎಷ್ಟರಮಟ್ಟಿಗೆ ಪ್ರತಿಬಿಂಬಿಸುತ್ತದೆ ಎನ್ನುವುದು ಖಚಿತವಿಲ್ಲ.[೮೪] ಪ್ರಚಲಿತ ಧಾರ್ಮಿಕ ಪದ್ಧತಿಗಳು ಬದುಕಿನಲ್ಲಿ ಪ್ರಮುಖ ಸ್ಥಿತ್ಯಂತರಗಳನ್ನು ಗುರುತಿಸುವ ವ್ರತಾಚರಣೆಗಳನ್ನು ಒಳಗೊಂಡಿವೆ. ಇವು ಜನನ, ಏಕೆಂದರೆ ಆ ಪ್ರಕ್ರಿಯೆಯಲ್ಲಿ ಅಪಾಯವಿರುತ್ತದೆ ಎಂದು, ಮತ್ತು ನಾಮಕರಣ, ಏಕೆಂದರೆ ವ್ಯಕ್ತಿಯ ಸ್ವಂತಿಕೆಯ ಅತ್ಯಂತ ನಿರ್ಣಾಯಕ ಭಾಗ ಹೆಸರು ಎಂದು, ಈ ಎರಡಕ್ಕೆ ಸಂಬಂಧಿಸಿದ ವ್ರತಾಚರಣೆಯನ್ನೂ ಒಳಗೊಂಡಿದೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದವು ಎಂದರೆ ಸಾವಿನ ಸುತ್ತ ಇರುವ ವ್ರತಾಚರಣೆಗಳು. (ಕೆಳಗೆ ಇರುವ "ಅಂತ್ಯಸಂಸ್ಕಾರದ ಆಚರಣೆಗಳು" ನೋಡಿ.), ಏಕೆಂದರೆ ಇವು ಆತ್ಮವು ನಂತರವೂ ಉಳಿಯುವುದನ್ನು ಖಚಿತಪಡಿಸುತ್ತವೆ.[೮೫] ಬೇರೆ ಧಾರ್ಮಿಕ ಪದ್ಧತಿಗಳು ದೇವರ ಇಚ್ಛೆಯನ್ನು ಗ್ರಹಿಸಲು ಅಥವಾ ಅವರ ಜ್ಞಾನವನ್ನು ಅರಸಲು ಮಾಡಿದ ಪ್ರಯತ್ನಗಳಾಗಿದ್ದವು. ಇವುಗಳು ಕನಸುಗಳನ್ನು ವ್ಯಾಖ್ಯಾನಿಸುವುದು, ನಿಮಿತ್ತಸ್ಥಾನಗಳಲ್ಲಿ ಸಮಾಲೋಚಿಸುವುದನ್ನು ಒಳಗೊಂಡಿತ್ತು. ಕನಸುಗಳನ್ನು ದೈವಿಕ ಕ್ಷೇತ್ರದಿಂದ ಬಂದ ಸಂದೇಶಗಳು ಎಂಬಂತೆ ನೋಡಲಾಗುತ್ತಿತ್ತು. ಜನರು ಮಾಂತ್ರಿಕ ಕ್ರಿಯಾವಿಧಿಗಳ ಮೂಲಕ ಸ್ವಂತ ಅನುಕೂಲಕ್ಕೆ ದೇವರ ವರ್ತನೆಗಳನ್ನು ಪ್ರಭಾವಿಸಲು ಪ್ರಯತ್ನಿಸಿದರು (ಕೆಳಗಿರುವ 'ಮಂತ್ರವಿದ್ಯೆ'ಯನ್ನು ನೋಡಿ).[೮೬] ಈಜಿಪ್ತಿಯನ್ನರು ಒಬ್ಬೊಬ್ಬರೇ ಕೂಡ ದೇವರನ್ನು ಪ್ರಾರ್ಥಿಸುತ್ತಿದ್ದರು ಮತ್ತು ಖಾಸಗಿಯಾಗಿ ಅರ್ಪಣೆಗಳನ್ನು ಸಲ್ಲಿಸುತ್ತಿದ್ದರು. ಹೊಸ ಸಾಮ್ರಾಜ್ಯಕ್ಕಿಂತ ಪೂರ್ವದಲ್ಲಿ ಈ ಬಗೆಯ ವೈಯಕ್ತಿಕ ಧರ್ಮಶ್ರದ್ಧೆಯು ಬಹಳ ವಿರಳವಾಗಿತ್ತು. ಇದು ಪ್ರಾಯಶಃ ರಾಜವಂಶೀಯರಲ್ಲದವರು ಧಾರ್ಮಿಕ ಚಟುವಟಿಕೆಗಳನ್ನು ಅಭಿವ್ಯಕ್ತಿಸುವ ಮೇಲೆ ಹೇರಿದ ಸಾಂಸ್ಕೃತಿಕ ನಿರ್ಬಂಧಗಳಿಂದಾಗಿ ಇರಬಹುದು. ಈ ನಿರ್ಬಂಧವು ಮಧ್ಯ ಅವಧಿಯ ಮತ್ತು ಹೊಸ ಸಾಮ್ರಾಜ್ಯಗಳಡಿಯಲ್ಲಿ ಸ್ವಲ್ಪ ಸಡಿಲಗೊಂಡವು. ವೈಯಕ್ತಿಕ ಧರ್ಮಶ್ರದ್ಧೆಯು ಹೊಸ ಸಾಮ್ರಾಜ್ಯದ ಕೊನೆಯ ಕಾಲಘಟ್ಟದಲ್ಲಿ ಇನ್ನಷ್ಟು ಹೆಚ್ಚು ಪ್ರಾಮುಖ್ಯತೆ ಪಡೆಯಿತು, ಆಗ ದೇವರು ವ್ಯಕ್ತಿಗಳ ಬದುಕಿನಲ್ಲಿ ನೇರವಾಗಿ ಮಧ್ಯಸ್ತಿಕೆ ಮಾಡುತ್ತಾನೆ, ತಪ್ಪು ಮಾಡುವವರನ್ನು ಶಿಕ್ಷಿಸಿ, ಸಜ್ಜನರನ್ನು ಅಪಾಯಗಳಿಂದ ಉಳಿಸುತ್ತಾನೆ ಎಂಬ ನಂಬಿಕೆ ಅಧಿಕವಾಗಿತ್ತು.[೫೬] ಖಾಸಗಿ ಪ್ರಾರ್ಥನೆ ಮತ್ತು ಅರ್ಪಣೆಗಳನ್ನು ಸಲ್ಲಿಸಲು ಅಧಿಕೃತ ದೇವಾಲಯಗಳು ಪ್ರಮುಖವಾದ ಸ್ಥಳಗಳಾಗಿದ್ದವು, ಆದಾಗ್ಯೂ ದೇವಾಲಯಗಳ ಕೇಂದ್ರ ಚಟುವಟಿಕೆಗಳು ಸಾಮಾನ್ಯ ಜನತೆಯನ್ನು ದೂರವೇ ಇಟ್ಟಿದ್ದವು. ಈಜಿಪ್ತಿಯನ್ನರು ಆಗಾಗ ದೇವಾಲಯದ ದೈವಗಳಿಗೆ ಸಲ್ಲಿಸಲು ಸಾಮಗ್ರಿಗಳನ್ನು ದಾನ ಮಾಡುತ್ತಿದ್ದರು ಮತ್ತು ದೇವಾಲಯದ ಅಂಕಣಗಳಲ್ಲಿ ಇಡಲೆಂದು ಪ್ರಾರ್ಥನೆಗಳನ್ನು ಕೆತ್ತಿದ ವಸ್ತುಗಳನ್ನು ನೀಡುತ್ತಿದ್ದರು. ಅವರು ಹೆಚ್ಚಿನ ವೇಳೆ ವೈಯಕ್ತಿಕವಾಗಿ ದೇವಾಲಯದ ಮೂರ್ತಿಗಳ ಎದುರು ಅಥವಾ ಅವರ ಬಳಕೆಂದು ಪಕ್ಕದಲ್ಲಿ ಬೇರೆಯಾಗಿರುತ್ತಿದ್ದ ಪೂಜಾಗೃಹಗಳಲ್ಲಿ ಪ್ರಾರ್ಥಿಸುತ್ತಿದ್ದರು.[೮೪] ದೇವಾಲಯಗಳ ಜೊತೆಗೆ, ಸಾಮಾನ್ಯ ಜನರು ಸ್ಥಳೀಯ ದೇಗುಲಗಳನ್ನು ಬಳಸುತ್ತಿದ್ದರು, ಇವು ಚಿಕ್ಕವಿದ್ದರೂ ಸಾಮಾನ್ಯರಿಗೆ ಔಪಚಾರಿಕ ದೇವಾಲಯಗಳಿಗಿಂತ ಹೆಚ್ಚಿನ ಲಭ್ಯತೆ ಇರುತ್ತಿತ್ತು. ಈ ದೇಗುಲಗಳು ಅಪಾರ ಸಂಖ್ಯೆಯಲ್ಲಿದ್ದವು ಮತ್ತು ಪ್ರಾಯಶಃ ಸಮುದಾಯದ ಸದಸ್ಯರು ಇಲ್ಲಿ ಸಿಬ್ಬಂದಿಯಾಗಿರುತ್ತಿದ್ದರು.[೮೭] ಮನೆಗಳು ಕೂಡ, ಕೆಲವೊಮ್ಮೆ ತಮ್ಮದೇ ಸಣ್ಣ ಪೂಜಾಗೃಹಗಳನ್ನು ಹೊಂದಿದ್ದು, ದೇವರಿಗೆ ಅಥವಾ ಮರಣಿಸಿದ ಬಂಧುಗಳಿಗೆ ಅರ್ಪಣೆಗಳನ್ನು ಇಲ್ಲಿ ಸಲ್ಲಿಸುತ್ತಿದ್ದರು.[೮೮] ಈ ಸಂದರ್ಭಗಳಲ್ಲಿ ಆವಾಹಿಸಲಾದ ದೈವಗಳು ಪ್ರಭುತ್ವದ ಆರಾಧನಾ ಪದ್ಧತಿಗಳ ಕೇಂದ್ರಗಳಲ್ಲಿ ಮಾಡುತ್ತಿದ್ದಕ್ಕಿಂತ ಭಿನ್ನವಾಗಿರುತ್ತಿತ್ತು. ಫಲವಂತಿಕೆಯ ದೇವತೆಯಾದ ಟವೆರೆಟ್‌ ಮತ್ತು ಗೃಹ ರಕ್ಷಕ ದೈವವಾದ ಬೆಸ್‌ನ ಹಾಗೆ ಹಲವಾರು ಪ್ರಮುಖ ಜನಪ್ರಿಯ ದೈವಗಳಿಗೆ ತಮ್ಮದೇ ಆದ ದೇವಾಲಯಗಳು ಇರಲಿಲ್ಲ. ಆದರೆ ಅಮುನ್‌ ಮತ್ತು ಒಸಿರಿಸ್‌ನ ಹಾಗೆ ಬೇರೆ ಅನೇಕ ದೇವರುಗಳು ಜನಪ್ರಿಯತೆಯಲ್ಲಿ ಹಾಗೂ ಅಧಿಕೃತ ಧರ್ಮದಲ್ಲಿ ಬಹಳ ಪ್ರಮುಖವಾಗಿದ್ದವು.[೮೯] ಕೆಲವು ವ್ಯಕ್ತಿಗಳು ವಿಶೇಷವಾಗಿ ಏಕ ದೇವರಿಗೇ ಶ್ರದ್ಧೆ ಹೊಂದಿದ್ದಿರಬಹುದು. ಹೆಚ್ಚಿನ ವೇಳೆ ಅವರು ತಮ್ಮದೇ ಧರ್ಮ ಅಥವಾ ಬದುಕಿನಲ್ಲಿ ಅವುಗಳ ಪಾತ್ರಕ್ಕೆ ಸಂಬಂಧಿಸಿದ ದೈವಗಳ ಕುರಿತು ಒಲವು ಹೊಂದಿರುತ್ತಿದ್ದರು. ಉದಾಹರಣೆಗೆ ಪ್ತಾ ದೇವರು ತನ್ನ ಆರಾಧನಾ ಕೇಂದ್ರವಾದ ಮೆಂಫಿಸ್‌ನಲ್ಲಿ ವಿಶೇಷ ಪ್ರಾಮುಖ್ಯತೆ ಹೊಂದಿತ್ತು, ಆದರೆ ಕರಕುಶಲಿಗರ ಪೋಷಕನಾಗಿ ಈ ದೇವರಿಗೆ ಆ ವೃತ್ತಿಯಲ್ಲಿರುವ ಅನೇಕ ಜನರ ಆರಾಧನಾ ಭಾವವು ದೇಶಾದ್ಯಂತ ಸಲ್ಲುತ್ತಿತ್ತು.[೯೦]

ಮಂತ್ರವಿದ್ಯೆ[ಬದಲಾಯಿಸಿ]

"ಮಂತ್ರವಿದ್ಯೆ ಅಥವಾ ಮ್ಯಾಜಿಕ್" ಎಂಬ ಪದವನ್ನು ಈಜಿಪ್ತಿನ ಹೆಕಾ ಎಂಬ ಪದಕ್ಕೆ ಸಂವಾದಿಯಾಗಿ ಬಳಸಲಾಗುತ್ತದೆ. ಜೇಮ್ಸ್‌ ಪಿ ಅಲೆನ್‌ ಹೇಳುವಂತೆ ಇದರರ್ಥ, "ಪರೋಕ್ಷ ವಿಧಾನಗಳಿಂದ ಸಂಗತಿಗಳು ಜರುಗುವಂತೆ ಮಾಡುವುದು" ಎಂದು.[೯೧] ಹೆಕಾ ಒಂದು ಸ್ವಾಭಾವಿಕ ವಿದ್ಯಮಾನ ಎಂದು ನಂಬಲಾಗಿತ್ತು, ಇದು ವಿಶ್ವವನ್ನು ಸೃಷ್ಟಿಸಲು ಬಳಸಲಾದ ಶಕ್ತಿ ಮತ್ತು ದೇವರುಗಳು ತಮ್ಮ ಇಚ್ಛೆಯನ್ನು ಕಾರ್ಯಗತಗೊಳಿಸಲು ಬಳಸುತ್ತಿದ್ದ ಶಕ್ತಿ. ಆದರೆ ಮನುಷ್ಯರೂ ಕೂಡ ಇದನ್ನು ಬಳಸಬಹುದಿತ್ತು ಮತ್ತು ಮಾಂತ್ರಿಕ ಪದ್ಧತಿಗಳು ಧರ್ಮದೊಂದಿಗೆ ತಳುಕುಹಾಕಿಕೊಂಡಿತ್ತು. ನಿಜವೆಂದರೆ, ದೇವಾಲಯಗಳಲ್ಲಿ ನಡೆಸುತ್ತಿದ್ದ ನಿಯಮಿತವಾದ ಕ್ರಿಯಾವಿಧಿಗಳೂ ಕೂಡ ಮಾಂತ್ರಿಕ ಎಂದೇ ಲೆಕ್ಕಹಾಕಲಾಗುತ್ತಿತ್ತು.[೯೨] ವ್ಯಕ್ತಿಗಳು ಕೂಡ ಆಗೀಗ ವೈಯಕ್ತಿಕ ಉದ್ದೇಶಗಳಿಗಾಗಿ ಮಾಂತ್ರಿಕ ತಂತ್ರಗಳನ್ನು ಬಳಸುತ್ತಿದ್ದರು. ಇವುಗಳ ಅಂತ್ಯವು ಬೇರೆ ಜನರಿಗೆ ಹಾನಿಕಾರಕವಾಗಿದ್ದರೂ, ಯಾವುದೇ ರೂಪದ ಮಂತ್ರವಿದ್ಯೆಯು ತನ್ನಷ್ಟಕ್ಕೇ ಕೇಡು ಉಂಟುಮಾಡುವಂಥದು ಎಂದು ಪರಿಗಣಿತವಾಗಿರಲಿಲ್ಲ. ಬದಲಿಗೆ, ಮಂತ್ರವಿದ್ಯೆಯನ್ನು ಪ್ರಾಥಮಿಕವಾಗಿ ಮನುಷ್ಯರಿಗೆ ನಕಾರಾತ್ಮಕ ಘಟನೆಗಳನ್ನು ತಡೆಗಟ್ಟಲು ಅಥವಾ ಅವನ್ನು ಜಯಿಸಲು ಇರುವ ವಿಧಾನಗಳು ಎಂದು ಪರಿಗಣಿಸಲಾಗಿತ್ತು.[೯೩]

ಹೋರಸ್‌ನ ಕಣ್ಣಿನ ಆಕಾರದಲ್ಲಿರುವ ತಾಯಿತ, ಇದೊಂದು ಸಾಮಾನ್ಯ ಮಾಂತ್ರಿಕ ಚಿಹ್ನೆ.

ಮಂತ್ರಿವಿದ್ಯೆಯು ಪೌರೋಹಿತ್ಯದೊಂದಿಗೆ ಹತ್ತಿರದ ಸಂಬಂಧ ಹೊಂದಿತ್ತು. ಏಕೆಂದರೆ ದೇವಾಲಯದ ಗ್ರಂಥಾಲಯಗಳು ಅಸಂಖ್ಯಾತ ಮಂತ್ರವಿದ್ಯೆಯ ಗ್ರಂಥಗಳನ್ನು ಹೊಂದಿದ್ದವು, ಹೀಗಾಗಿ ಅಗಾಧವಾದ ಮಾಂತ್ರಿಕ ಜ್ಞಾನವು ಈ ಗ್ರಂಥಗಳನ್ನು ಅಧ್ಯಯನ ಮಾಡಿದ ವಾಚಕ ಪುರೋಹಿತರಿಗೆ ಇರುತ್ತಿತ್ತು. ಈ ಪುರೋಹಿತರು ಹೆಚ್ಚಾಗಿ ದೇವಾಲಯದ ಹೊರಗೆ ಕೆಲಸ ಮಾಡುತ್ತಿದ್ದರು, ಸಾಮಾನ್ಯ ಜನರಿಗೆ ತಮ್ಮ ಮಾಂತ್ರಿಕ ಸೇವೆಗಳನ್ನು ಪ್ರತಿಫಲ ತೆಗೆದುಕೊಂಡು ನೀಡುತ್ತಿದ್ದರು. ವೈದ್ಯರು, ಚೇಳು-ಮಾಟಗಾರರು ಮತ್ತು ಮಾಂತ್ರಿಕ ತಾಯಿತಗಳನ್ನು ಮಾಡುವವರು ಸೇರಿದಂತೆ ಬೇರೆ ವೃತ್ತಿಯವರೂ ಮಂತ್ರವಿದ್ಯೆಯನ್ನು ತಮ್ಮ ಕೆಲಸದ ಭಾಗವಾಗಿ ಅಳವಡಿಸಿಕೊಂಡಿದ್ದರು. ರೈತರು ತಮ್ಮದೇ ಉದ್ದೇಶಗಳಿಗಾಗಿ ಸರಳವಾದ ಮಂತ್ರವಿದ್ಯೆಯನ್ನು ಬಳಸಿರಬಹುದು, ಆದರೆ ಈ ಮಂತ್ರವಿದ್ಯೆಗಳು ಮೌಖಿಕವಾಗಿ ತಲೆಮಾರುಗಳಿಗೆ ಹರಿದುಬಂದಿದ್ದರಿಂದ ಈ ಕುರಿತು ಸೀಮಿತ ಸಾಕ್ಷ್ಯಗಳು ಇವೆ.[೯೪] ಭಾಷೆಯು ಹೇಕಾದೊಂದಿಗೆ ಹತ್ತಿರದ ಸಂಬಂಧ ಹೊಂದಿತ್ತು, ಎಷ್ಟರಮಟ್ಟಿಗೆ ಎಂದರೆ ದೇವರ ಬರಹ, ಥೊಹ್ತ್‌ ಅನ್ನು ಕೆಲವೊಮ್ಮೆ ಹೆಕಾದ ಶೋಧಕ ಎಂದು ಹೇಳಲಾಗುತ್ತಿತ್ತು.[೯೫] ಹೀಗಾಗಿ ಮಂತ್ರವಿದ್ಯೆಯು ಸಾಮಾನ್ಯವಾಗಿ ಕ್ರಿಯಾವಿಧಿಯ ಕಾರ್ಯಗಳ ಜೊತೆಗೂಡಿದ್ದರೂ, ಹೆಚ್ಚಿನ ವೇಳೆ ಮಂತ್ರವಿದ್ಯೆಯು ಲಿಖಿತ ಅಥವಾ ಮೌಖಿಕ ಮಂತ್ರಗಳನ್ನು ಒಳಗೊಂಡಿರುತ್ತಿತ್ತು. ಹೆಚ್ಚಿನವೇಳೆ ಈ ಕ್ರಿಯಾವಿಧಿಗಳು, 'ಹೇಕಾ'ದ ಅಧಿಕಾರವನ್ನು ಬಳಸಿಕೊಂಡು ಕಾರ್ಯನಿರ್ವಹಿಸುವಂತೆ ಬಲಾತ್ಕರಿಸಿ, ಅಪೇಕ್ಷಿತ ಕಾರ್ಯವನ್ನು ಮಾಡಲು ಅದಕ್ಕೆ ಸಂಬಂಧಿಸಿದ ದೇವತೆಯನ್ನು ಆವಾಹಿಸುತ್ತಿದ್ದವು. ಕೆಲವೊಮ್ಮೆ ಇದು ಪುರಾಣದ ಒಂದು ಪಾತ್ರವನ್ನು ವೃತ್ತಿಪರರು ಅಭಿನಯಿಸುವಂತೆ ಅಥವಾ ಕ್ರಿಯಾವಿಧಿಯ ವಸ್ತುವನ್ನು ಪುರಾಣದ ವ್ಯಕ್ತಿಯ ಪಾತ್ರದಲ್ಲಿ ವಹಿಸುವಂತೆ ಮಾಡಲಾಗುತ್ತು, ಹೀಗೆ ಪುರಾಣದಲ್ಲಿ ಇರುವಂತೆ ವ್ಯಕ್ತಿಯ ಕುರಿತಾಗಿ ದೇವರು ಕೆಲಸ ಮಾಡುವಂತೆ ಪ್ರೇರಿಸುತ್ತಿತ್ತು. ವಿಧಿಯ ವಸ್ತುವಿಗೆ ಹೋಲಿಕೆ ಇರುವ, ಮಾಂತ್ರಿಕವಾಗಿ ಮಹತ್ವವಿದೆ ಎಂದು ನಂಬಲಾದ ವಸ್ತುಗಳನ್ನು ಬಳಸಿಕೊಂಡು, ಕ್ರಿಯಾವಿಧಿಗಳು ಸಹಾನುಭೂತಿಯ ಮಂತ್ರವಿದ್ಯೆಯನ್ನು ಅಳವಡಿಸಿಕೊಂಡಿದ್ದವು. ಸ್ವಂತ ಹೇಕಾದಿಂದ ತುಂಬಿವೆ ಎಂದು ನಂಬಲಾದ ವಸ್ತುಗಳನ್ನು ಈಜಿಪ್ತಿಯನ್ನರು ಸಾಮಾನ್ಯವಾಗಿ ಬಳಸುತ್ತಿದ್ದರು, ಉದಾಹರಣೆಗೆ ಮಾಂತ್ರಿಕವಾಗಿ ರಕ್ಷಕ ರೀತಿಯಲ್ಲಿರುವ ತಾಯಿತವನ್ನು ಅಧಿಕ ಸಂಖ್ಯೆಯಲ್ಲಿ ಸಾಮಾನ್ಯ ಈಜಿಪ್ತಿಯನ್ನರು ಧರಿಸುತ್ತಿದ್ದರು.[೯೬]

ಅಂತ್ಯಸಂಸ್ಕಾರದ ಆಚರಣೆಗಳು[ಬದಲಾಯಿಸಿ]

ಆತ್ಮದ ಉಳಿಯುವಿಕೆಗೆ ಅಗತ್ಯವಿದೆ ಎಂದು ಪರಿಗಣಿಸಿದ್ದರಿಂದ, ಈಜಿಪ್ತಿನ ಅಂತ್ಯಸಂಸ್ಕಾರದ ಆಚರಣೆಗಳಲ್ಲಿ ದೇಹದ ಸಂರಕ್ಷಣೆಯು ಬಹಳ ಮುಖ್ಯವಾದ ಭಾಗವಾಗಿತ್ತು. ಮೂಲಭೂತವಾಗಿ ಈಜಿಪ್ತಿಯನ್ನರು ಶವಗಳನ್ನು ಮರುಭೂಮಿಯಲ್ಲಿ ಹೂಳುತ್ತಿದ್ದರು, ಮರುಭೂಮಿಯ ಶುಷ್ಕ ಸ್ಥಿತಿಗತಿಗಳು ದೇಹವನ್ನು ಸ್ವಾಭಾವಿಕವಾಗಿ ಮಮ್ಮಿ ಮಾಡುತ್ತಿತ್ತು. ಆರಂಭಿಕ ರಾಜವಂಶೀಯ ಅವಧಿಯಲ್ಲಿ, ಅವರು ಹೆಚ್ಚಿನ ರಕ್ಷಣೆಗೆ ಗೋರಿಗಳನ್ನು ಬಳಸಲು ಆರಂಭಿಸಿದರು ಮತ್ತು ದೇಹವು ಮರಳಿನ ಶುಷ್ಕಕಾರಕದ ಪರಿಣಾಮದಿಂದ ರಕ್ಷಿತವಾಗುತ್ತಿತ್ತು ಮತ್ತು ಸ್ವಾಭಾವಿಕವಾಗಿ ಕ್ಷಯಿಸುತ್ತಿತ್ತು. ಹೀಗೆ ಈಜಿಪ್ತಿಯನ್ನರು ವಿಶದವಾಗಿ ಕೆಡದಂತೆ ರಕ್ಷಿಸುವ ಪದ್ಧತಿಗಳಲ್ಲಿ ಶವವನ್ನು ಕೃತಕವಾಗಿ ಶುಷ್ಕಗೊಳಿಸಿ, ಸುತ್ತಿ, ಶವಸಂಪುಟದಲ್ಲಿಡುತ್ತಿದ್ದರು.[೯೭] ವೆಚ್ಚಕ್ಕೆ ಅನುಗುಣವಾಗಿ ಪ್ರಕ್ರಿಯೆಯ ಗುಣಮಟ್ಟವು ಬದಲಾಗುತ್ತಿತ್ತು. ಈ ಖರ್ಚನ್ನು ಭರಿಸಲು ಸಾಧ್ಯವಿಲ್ಲದವರು ಮರುಭೂಮಿಯ ಸ್ಮಶಾನಗಳಲ್ಲಿಯೇ ಹೂಳುತ್ತಿದ್ದರು.[೯೮]

ಗೋರಿಯ ಎದುರು ಮಾಡುವ 'ಬಾಯಿ ತೆರೆಯುವ ವ್ರತಾಚರಣೆ (ದಿ ಓಪೆನಿಂಗ್ ಆಫ್‌ ದಿ ಮೌತ್ ಸೆರಮನಿ)

ಒಮ್ಮೆ ಮಮ್ಮಿ ಮಾಡುವ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಮ್ಮಿಯನ್ನು ಮರಣಿಸಿದ ವ್ಯಕ್ತಿಯ ಮನೆಯಿಂದ ಗೋರಿಗೆ ಮೆರವಣಿಗೆಯಲ್ಲಿ ಕರೆದೊಯ್ಯುತ್ತಿದ್ದರು. ಮೆರವಣಿಗೆಯಲ್ಲಿ ಮರಣಿಸಿದ ವ್ಯಕ್ತಿಯಿಂದ ಗೆಳೆಯ/ತಿಯರು, ಬಂಧುಗಳು, ವಿವಿಧ ಪುರೋಹಿತರು ಭಾಗವಹಿಸುತ್ತಿದ್ದರು. ಹೂಳುವ ಮೊದಲು, ಪುರೋಹಿತರು ವ್ರತಾಚರಣೆಯ ಬಾಯಿಯನ್ನು ತೆರೆಯುವುದು ಸೇರಿದಂತೆ ಅರ್ಪಣೆಗಳನ್ನು ಸ್ವೀಕರಿಸಲು ಮೃತ ವ್ಯಕ್ತಿಯ ಇಂದ್ರಿಯಗಳನ್ನು ಉಳಿಸಿಕೊಳ್ಳುವ ಉದ್ದೇಶ ಹೊಂದಿದ ವಿಧಿಗಳೂ ಸೇರಿದಂತೆ ಹಲವಾರು ಕ್ರಿಯಾವಿಧಿಗಳನ್ನು ನಡೆಸುತ್ತಿದ್ದರು. ನಂತರ ಮಮ್ಮಿಯನ್ನು ಹೂಳುತ್ತಿದ್ದರು ಹಾಗೂ ಗೋರಿಯನ್ನು ಪೂರ್ಣವಾಗಿ ಮುಚ್ಚುತ್ತಿದ್ದರು.[೯೯] ನಂತರ, ಸಂಬಂಧಿಗಳು ಅಥವಾ ಪಾವತಿಸಲಾದ ಪುರೋಹಿತರು ಮರಣಿಸಿದ ವ್ಯಕ್ತಿಗೆ ಆಹಾರ ಅರ್ಪಣೆಗಳನ್ನು ಹತ್ತಿರದ ಶವಾಗಾರದ ದೇಗುಲದಲ್ಲಿ ನಿಯಮಿತ ಅವಧಿಯಲ್ಲಿ ನೀಡುತ್ತಿದ್ದರು. ಕಾಲಾಂತರದಲ್ಲಿ, ಕುಟುಂಬಗಳು ಬಹಳ ಹಿಂದೆ ಮರಣಿಸಿದ ಬಂಧುಗಳಿಗೆ ಅರ್ಪಣೆಗಳನ್ನು ಅನಿವಾರ್ಯವಾಗಿ ನಿರ್ಲಕ್ಷಿಸಿದರು. ಹೀಗಾಗಿ ಹೆಚ್ಚಿನ ಶವಾಗಾರದ ಆರಾಧನಾ ಪದ್ಧತಿಗಳು ಒಂದು ಅಥವಾ ಎರಡು ತಲೆಮಾರುಗಳವರೆಗೆ ಮಾತ್ರ ಇರುತ್ತಿತ್ತು.[೧೦೦] ಆದರೆ, ಆರಾಧನಾ ಪದ್ಧತಿಗಳು ಕೊನೆಗೊಂಡ ನಂತರ, ಜೀವಂತವಿರುವ ವ್ಯಕ್ತಿಗಳು ಕೆಲವೊಮ್ಮೆ ಮರಣಿಸಿದವರ ಬಂಧುಗಳಿಗೆ ಸಹಾಯಕ್ಕಾಗಿ ಕೇಳಿ ಪತ್ರಿಸುತ್ತಿದ್ದರು, ದೇವರು ಮಾಡಿದಂತೆ ಸತ್ತಿರುವವರು ಜೀವಿಸುವವರ ವಿಶ್ವವನ್ನು ಪ್ರಭಾವಿಸಬಹುದು ಎಂಬ ನಂಬಿಕೆಯಿರುತ್ತಿತ್ತು.[೧೦೧] ಮೊದಮೊದಲು ಈಜಿಪ್ತಿನ ಗೋರಿಗಳು ಮಸ್ತಬಾಗಳಾಗಿದ್ದವು, ಆಯತಾಕಾರದ ಇಟ್ಟಿಗೆಯ ಸಂರಚನೆಗಳಾಗಿದ್ದು, ರಾಜರು ಮತ್ತು ಶ್ರೀಮಂತರನ್ನು ಅಲ್ಲಿ ಹೂಳಲಾಗುತ್ತಿತ್ತು. ಅದರಲ್ಲಿ ಪ್ರತಿಯೊಂದೂ ನೆಲಡಿಯಲ್ಲಿ ಗೋರಿಯ ಕೊಠಡಿಗಳನ್ನು ಹೊಂದಿರುತ್ತಿದ್ದವು ಮತ್ತು ಒಂದು ಶವಾಗಾರದ ಕ್ರಿಯಾವಿಧಿಗಳಿಗಾಗಿ ಪ್ರತ್ಯೇಕವಾಗಿ ಭೂಮಿಯ ಮೇಲೆ ಪ್ರಾರ್ಥನಾ ಮಂದಿರವೊಂದು ಇರುತ್ತಿತ್ತು. ಹಳೆಯ ಸಾಮ್ರಾಜ್ಯದಲ್ಲಿ ಮಸ್ತಬಾಗಳನ್ನು ಪಿರಾಮಿಡ್‌ಗಳಾಗಿ ಅಭಿವೃದ್ಧಿಪಡಿಸಿದ್ದರು. ಅದು ಈಜಿಪ್ತಿನ ಪುರಾಣದ ಸೃಷ್ಟಿಯ ಆದಿ ಕಾಲದ ಸ್ವರ್ಣ ಗೋಲವನ್ನು ಸಂಕೇತಿಸುತ್ತಿತ್ತು. ಪಿರಾಮಿಡ್‌ಗಳು ರಾಜವಂಶದವರಿಗಾಗಿಯೇ ಮೀಸಲಾಗಿದ್ದವು ಮತ್ತು ಬಹುದೊಡ್ಡ ಶವಾಗಾರಗಳು ಅವುಗಳ ತಳಭಾಗದಲ್ಲಿರುತ್ತಿದ್ದವು. ಮಧ್ಯ ಅವಧಿಯ ಸಾಮ್ರಾಜ್ಯದ ಫೇರೋಗಳು ಪಿರಾಮಿಡ್‌ಗಳನ್ನು ನಿರ್ಮಿಸುವುದು ಮುಂದುವರೆಯಿತು, ಆದರೆ ಮಸ್ತಬಾಗಳ ಜನಪ್ರಿಯತೆ ಕ್ಷೀಣಿಸಿತು. ಸಾಕಷ್ಟು ಮಟ್ಟಿಗೆ ಆದಾಯವಿದ್ದ ಸಾಮಾನ್ಯ ಜನತೆಯು ಪ್ರತ್ಯೇಕ ಶವಾಗಾರದ ಪ್ರಾರ್ಥನಾ ಮಂದಿರಗಳೊಂದಿಗೆ ಬಂಡೆಗಲ್ಲಿನ ಗೋರಿಗಳಲ್ಲಿ ಹೂಳಲಾರಂಭಿಸುವುದು ಹೆಚ್ಚಿತು. ಇವು ಗೋರಿ ದರೋಡೆಗೆ ಹೆಚ್ಚು ಈಡಾಗುತ್ತಿರಲಿಲ್ಲ. ಹೊಸ ಸಾಮ್ರಾಜ್ಯದ ಆರಂಭದಲ್ಲಿ ಫೇರೋಗಳನ್ನು ಅಂತಹ ಗೋರಿಗಳಲ್ಲಿ ಹೂಳುತ್ತಿದ್ದರು ಮತ್ತು ಧರ್ಮವು ಸ್ವತಃ ಅವನತಿಯಾಗುವವರೆಗೂ ಅವುಗಳನ್ನು ಬಳಸುವುದು ಮುಂದುವರೆಯಿತು.[೧೦೨] ಗೋರಿಗಳು ವಿವಿಧ ರೀತಿಯ ಬೇರೆ ವಸ್ತುಗಳನ್ನು ಹೊಂದಿರುತ್ತಿದ್ದವು. ಇವುಗಳಲ್ಲಿ ದೇಹವು ಹಾನಿಗೊಂಡರೆ, ಅದರ ಬದಲಿಗೆ ಇರಲಿ ಎಂದು ಮರಣಿಸಿದವರ ಪ್ರತಿಮೆಯನ್ನು ಇಡುತ್ತಿದ್ದರು.[೧೦೩] ಏಕೆಂದರೆ ಮರಣಿಸಿದವರು ಬದುಕಿದ್ದಾಗ ಮಾಡುವಂತೆಯೇ, ಮರಣಾನಂತರದ ಬದುಕಿನಲ್ಲಿಯೂ ಕೆಲಸ ಮಾಡಬೇಕಾಗಿರುವುದರಿಂದ, ಮರಣಿಸಿದವರ ಸ್ಥಳದಲ್ಲಿ ಕೆಲಸ ಮಾಡಲು ಗೋರಿಗಳಲ್ಲಿ ಮನುಷ್ಯರ ಚಿಕ್ಕ ಮಾದರಿಗಳನ್ನು ಇಟ್ಟಿರುತ್ತಿದ್ದರು.[೧೦೪] ಶ್ರೀಮಂತ ವ್ಯಕ್ತಿಗಳ ಗೋರಿಗಳಲ್ಲಿ ಪೀಠೋಪಕರಣಗಳು, ಬಟ್ಟೆಬರೆ ಮತ್ತು ದೈನಂದಿನ ವಸ್ತುಗಳನ್ನು ಮರಣಾನಂತರದ ಬದುಕಿನಲ್ಲಿ ಬಳಸಲು ಇಟ್ಟಿರುತ್ತಿದ್ದರು; ಅದರೊಂದಿಗೆ ಆತ್ಮಗಳ ಜಗತ್ತಿನಲ್ಲಿ ಕೇಡುಗಳ ವಿರುದ್ಧ ಮಾಂತ್ರಿಕ ರಕ್ಷಣೆಗೆಂದು ತಾಯಿತಗಳು ಮತ್ತು ಇನ್ನಿತರ ವಸ್ತುಗಳನ್ನು ಇಟ್ಟಿರುತ್ತಿದ್ದರು.[೧೦೫] ಅಂತ್ಯಸಂಸ್ಕಾರದ ಗ್ರಂಥಗಳಿಂದ ದೊರೆಯುವ ಇನ್ನಷ್ಟು ರಕ್ಷಣೆಯೂ ಹೂಳುವುದರಲ್ಲಿ ಸೇರಿರುತ್ತಿತ್ತು. ಗೋರಿಯ ಗೋಡೆಗಳಲ್ಲಿಯೂ ಕಲಾಕುಸುರಿಯ ಕೆಲಸಗಳನ್ನು ಮಾಡಿರುತ್ತಿದ್ದರು. ಇವುಗಳಲ್ಲಿ ಮರಣಿಸಿದ ವ್ಯಕ್ತಿಯು ಆಹಾರವನ್ನು ತಿನ್ನುವ ಚಿತ್ರಗಳನ್ನು ಬಿಡಿಸಿರುತ್ತಿದ್ದರು, ಅವು ವ್ಯಕ್ತಿಗೆ ಶವಾಗಾರದ ಅರ್ಪಣೆಗಳನ್ನು ನೀಡುವುದನ್ನು ನಿಲ್ಲಿಸಿದ ನಂತರವೂ ಪುಷ್ಟಿಯನ್ನು ಮಾಂತ್ರಿಕವಾಗಿ ಪಡೆಯಲು ಆಸ್ಪದ ಕಲ್ಪಿಸುತ್ತದೆ ಎಂದು ಅವರು ನಂಬಿದ್ದರು.[೧೦೬]

ಇತಿಹಾಸ[ಬದಲಾಯಿಸಿ]

ರಾಜವಂಶಕ್ಕೆ ಪೂರ್ವದಲ್ಲಿ ಮತ್ತು ಆರಂಭಿಕ ರಾಜವಂಶದ ಅವಧಿ[ಬದಲಾಯಿಸಿ]

ನಾರ್ಮರ್‌, ರಾಜವಂಶ ಪೂರ್ವದ ರಾಜ, ವಿವಿಧ ಸ್ಥಳೀಯ ದೇವರ ಮಾನದಂಡಗಳನ್ನು ಒಯ್ಯುತ್ತಿರುವ ವ್ಯಕ್ತಿಗಳ ಜೊತೆಗೂಡಿ.

ಈಜಿಪ್ತಿನ ಧರ್ಮವು ಪೂರ್ವೇತಿಹಾಸಕ್ಕೆ ವಿಸ್ತರಿಸುತ್ತದೆ ಮತ್ತು ಈ ಕುರಿತ ಸಾಕ್ಷ್ಯವು ವಿರಳವಾದ ಹಾಗೂ ಸಂದಿಗ್ಧವಾದ ಪುರಾತತ್ವ ದಾಖಲೆಗಳಿಂದ ಮಾತ್ರವೇ ದೊರೆಯುತ್ತದೆ. ರಾಜವಂಶೀಯಕ್ಕೆ ಪೂರ್ವದ ಅವಧಿಯಲ್ಲಿ ಎಚ್ಚರಿಕೆಯಿಂದ ಮಾಡಿದ ಅಂತ್ಯಕ್ರಿಯೆಯು ಆ ಕಾಲದ ಜನರು ಯಾವುದೋ ರೀತಿಯ ಮರಣಾನಂತರದ ಬದುಕಿನಲ್ಲಿ ನಂಬಿಕೆ ಹೊಂದಿದ್ದರು ಎಂಬದನ್ನು ಸೂಚಿಸುತ್ತದೆ. ಇದೇ ವೇಳೆಗೆ, ಪ್ರಾಣಿಗಳನ್ನೂ ಕ್ರಿಯಾವಿಧಿಯ ಪ್ರಕಾರ ಹೂಳುತ್ತಿದ್ದರು. ಈ ಪದ್ಧತಿಯು ಪ್ರಾಣಿಗಳ ರೂಪಾಕಾರದಲ್ಲಿರುವ(ಜೂಮಾರ್ಫಿಕ್) ದೈವಗಳ ಬೆಳವಣಿಗೆಯನ್ನು ಪ್ರತಿಫಲಿಸಬಹುದು; ಇದೇ ಬಗೆಯ ದೈವಗಳು ನಂತರದ ಧರ್ಮದಲ್ಲಿಯೂ ಕಂಡುಬಂದಿವೆ.[೧೦೭] ಮನುಷ್ಯ ಸ್ವರೂಪದಲ್ಲಿರುವ ದೇವರ ಕುರಿತ ಸಾಕ್ಷ್ಯಗಳು ಹೆಚ್ಚು ಸ್ಪಷ್ಟವಿಲ್ಲ ಮತ್ತು ಪ್ರಾಣಿಗಳ ರೂಪದಲ್ಲಿರುವ ದೈವಗಳಿಗಿಂತ ಬಹಳ ನಿಧಾನವಾಗಿ ಈ ಬಗೆಯ ದೈವಗಳು ಹೊರಹೊಮ್ಮಿರಬಹುದು. ಈಜಿಪ್ತ್‌‌ನ ಪ್ರತಿ ಪ್ರಾಂತ್ಯವು ಮೂಲದಲ್ಲಿ ತನ್ನದೇ ಪೋಷಕ ದೈವವನ್ನು ಹೊಂದಿತ್ತು, ಆದರೆ ಈ ಸಣ್ಣ ಸಮುದಾಯಗಳು ಪರಸ್ಪರ ಒಂದರ ಮೇಲೊಂದು ಜಯಗಳಿಸಿದವು ಅಥವಾ ವಿಲೀನವಾದವು, ಸೋತ ಪ್ರಾಂತ್ಯದ ದೇವರು ವಿಜಯಿಯಾದ ಪ್ರಾಂತ್ಯದ ಇನ್ನೊಂದು ದೇವರ ಪುರಾಣದಲ್ಲಿ ಸೇರಿಕೊಂಡಿತು ಅಥವಾ ಪೂರ್ಣವಾಗಿ ಅದರಲ್ಲಿ ಅಂತರ್ಗತವಾಯಿತು. ಇದು ಒಂದು ಸಂಕೀರ್ಣವಾದ ಸ್ಮಾರಕಭವನ ನಿರ್ಮಿಸುವದಕ್ಕೆ ಕಾರಣವಾಯಿತು, ಇದರಲ್ಲಿ ಕೆಲವು ದೈವಗಳು ಮಾತ್ರವೇ ಸ್ಥಳೀಯವಾಗಿ ಪ್ರಾಮುಖ್ಯತೆ ಪಡೆದವು ಮತ್ತು ಇತರೆ ದೈವಗಳು ಹೆಚ್ಚು ಸಾರ್ವತ್ರಿಕ ಮಹತ್ವವನ್ನು ಪಡೆದುಕೊಂಡವು.[೧೦೮] ಕಾಲ ಬದಲಾದಂತೆ ಮತ್ತು ಮಧ್ಯ ಅವಧಿಯ ಸಾಮ್ರಾಜ್ಯ, ಹೊಸ ಸಾಮ್ರಾಜ್ಯ ಮತ್ತು ಹಳೆಯ ಸಾಮ್ರಾಜ್ಯ ಎಂದು ಸಾಮ್ರಾಜ್ಯಗಳು ಬದಲಾದಂತೆ, ಸಾಮಾನ್ಯವಾಗಿ ಆಗ ಪಾಲಿಸುತ್ತಿದ್ದ ಧರ್ಮವು ಆ ಪ್ರಾಂತದ ಒಳಗೇ ಉಳಿಯಿತು. ಆರಂಭಿಕ ರಾಜವಂಶದ ಅವಧಿಯು ಸುಮಾರು ಕ್ರಿ.ಪೂ. 3000ರ ಸುಮಾರಿಗೆ ಈಜಿಪ್ತ್‌‌ನ ಒಗ್ಗೂಡುವಿಕೆಯೊಂದಿಗೆ ಆರಂಭಗೊಂಡಿತು. ಈ ಘಟನೆಯು ಈಜಿಪ್ತಿನ ಧರ್ಮವನ್ನು ಪರಿವರ್ತಿಸಿತು, ಕೆಲವು ದೈವಗಳು ರಾಷ್ಟ್ರೀಯ ಮಹತ್ವವನ್ನು ಪಡೆದುಕೊಂಡವು ಮತ್ತು ದೈವಿಕ ಫೇರೋನ ಆರಾಧನಾ ಪದ್ಧತಿಯು ಧಾರ್ಮಿಕ ಚಟುವಟಿಕೆಗಳ ಮುಖ್ಯ ಕೇಂದ್ರವಾಯಿತು.[೧೦೯] ಹೋರಸ್‌ ದೇವರನ್ನು ರಾಜನ ಜೊತೆ ಗುರುತಿಸಲಾಗುತ್ತಿತ್ತು ಮತ್ತು ಆತನ ಆರಾಧನಾ ಪದ್ಧತಿಯ ಕೇಂದ್ರವು ಮೇಲಿನ ಈಜಿಪ್ತಿನ ನಗರವಾದ ನೆಖೆನ್‌ನಲ್ಲಿ ಆ ಕಾಲಘಟ್ಟದ ಧಾರ್ಮಿಕ ಸ್ಥಳಗಳಲ್ಲಿ ಅತ್ಯಂತ ಪ್ರಮುಖವಾದ ಒಂದು ಸ್ಥಳವಾಗಿತ್ತು. ಇನ್ನೊಂದು ಪ್ರಮುಖವಾದ ಕೇಂದ್ರವೆಂದರೆ ಅಬಿಡೊಸ್, ಇಲ್ಲಿ ಆರಂಭಿಕ ರಾಜರು ಬಹುದೊಡ್ಡ ಅಂತ್ಯಸಂಸ್ಕಾರದ ಸಂಕೀರ್ಣಗಳನ್ನು ನಿರ್ಮಿಸಿದರು.[೧೧೦]

ಹಳೆಯ ಮತ್ತು ಮಧ್ಯ ಅವಧಿಯ ಸಾಮ್ರಾಜ್ಯಗಳು[ಬದಲಾಯಿಸಿ]

ಹಳೆಯ ಸಾಮ್ರಾಜ್ಯದ ಅವಧಿಯಲ್ಲಿ ಪ್ರಮುಖ ದೈವಗಳ ಪೌರೋಹಿತ ವರ್ಗವು, ಸಂಕೀರ್ಣವಾದ ರಾಷ್ಟ್ರೀಯ ಸ್ಮಾರಕಭವನಗಳನ್ನು ಅವುಗಳ ಪೌರಾಣಿಕ ಸಾಹಿತ್ಯಕ್ಕೆ ಅನುಗುಣವಾಗಿ ಮತ್ತು ಒಂದೇ ಆರಾಧನಾ ಪದ್ಧತಿಯ ಕೇಂದ್ರದಲ್ಲಿ ಪೂಜಿಸುವಂತೆ ಗುಂಪುಗಳಾಗಿ ಸಂಘಟಿಸಲು ಪ್ರಯತ್ನಿಸಿದರು. ಹೆಲಿಯೊಪೊಲಿಸ್‌ನ ಎನ್ನೀಡ್‌ ಮಹತ್ವದ ದೈವಗಳಾದ ಆಟಮ್‌, ರಾ, ಒಸಿರಿಸ್‌, ಮತ್ತು ಸೆಟ್‌ರಂತಹ ಪ್ರಮುಖ ದೈವಗಳನ್ನು ಏಕ ಸೃಷ್ಟಿಯ ಪುರಾಣದಲ್ಲಿ ತಳಕುಹಾಕಿತು.[೧೧೧] ಇದೇ ವೇಳೆ ಬಹುದೊಡ್ಡ ಶವಾಗಾರ ದೇವಾಲಯಗಳ ಸಂಕೀರ್ಣಗಳನ್ನು ಒಳಗೊಂಡಿರುತ್ತಿದ್ದ ಪಿರಾಮಿಡ್‌ಗಳು, ಮಸ್ತಾಬಾಗಳ ಬದಲಿಗೆ ಫೇರೋನ ಗೋರಿಗಳಾದವು. ಪಿರಾಮಿಡ್‌ ಸಂಕೀರ್ಣಗಳ ಅಗಾಧ ಗಾತ್ರಕ್ಕೆ ಪ್ರತಿಯಾಗಿ ದೇವರ ದೇವಾಲಯಗಳು ತುಲನಾತ್ಮಕವಾಗಿ ಚಿಕ್ಕವಿದ್ದವು, ಈ ಅವಧಿಯಲ್ಲಿ ಅಧಿಕೃತ ಧರ್ಮವು ನೇರವಾಗಿ ದೈವಗಳನ್ನು ಪೂಜಿಸುವುದಕ್ಕಿಂತ ಹೆಚ್ಚು ದೈವಿಕ ದೊರೆಯ ಆರಾಧನಾ ಪದ್ಧತಿಗಳ ಮೇಲೆ ಹೆಚ್ಚು ಒತ್ತು ನೀಡಿರುವುದನ್ನು ಸೂಚಿಸುತ್ತದೆ. ಈ ಕಾಲದ ಅಂತ್ಯಸಂಸ್ಕಾರದ ಕ್ರಿಯಾವಿಧಿಗಳು ಮತ್ತು ವಾಸ್ತುಶಿಲ್ಪವು ನಂತರದ ಕಾಲದ ಹೆಚ್ಚು ವಿಸ್ತೃತವಾದ ದೇವಾಲಯಗಳು ಮತ್ತು ದೇವರನ್ನು ಪೂಜಿಸಲು ಬಳಸುತ್ತಿದ್ದ ಕ್ರಿಯಾವಿಧಿಗಳನ್ನು ಅಪಾರವಾಗಿ ಪ್ರಭಾವಿಸಿದವು.[೧೧೨]

ಜೆಡ್‌ಕರೆ ಐಸೆಸಿಯ ಪಿರಾಮಿಡ್‌ ಸಂಕೀರ್ಣ

ಹಳೆಯ ಸಾಮ್ರಾಜ್ಯದ ಆರಂಭದಲ್ಲಿ, 'ರಾ' ದೇವರು ಹೆಚ್ಚು ಪ್ರಭಾವ ಹೊಂದಿತ್ತು ಮತ್ತು ಹೆಲಿಯೋಪೊಲಿಸ್‌ನಲ್ಲಿದ್ದ ಆತನ ಆರಾಧನಾ ಪದ್ಧತಿಯ ಕೇಂದ್ರವು ರಾಷ್ಟ್ರದ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳವಾಯಿತು.[೧೧೩] ಐದನೇ ರಾಜವಂಶದ ಸುಮಾರಿಗೆ 'ರಾ' ಈಜಿಪ್ತ್‌‌ನಲ್ಲಿ ಅತ್ಯಂತ ಪ್ರಮುಖವಾದ ದೇವರಾಗಿತ್ತು ಮತ್ತು ರಾಜತ್ವದೊಂದಿಗೆ ಮತ್ತು ಮರಣಾನಂತರದ ಬದುಕಿನೊಂದಿಗೆ ಹತ್ತಿರದಿಂದ ತಳಕುಹಾಕಿಕೊಂಡಿದ್ದು, ಈಜಿಪ್ತಿನ ಇತಿಹಾಸದ ಇನ್ನುಳಿದ ಭಾಗದಲ್ಲಿ ಈ ದೇವರ ಪ್ರಭಾವ ಅಷ್ಟೇ ಗಾಢವಾಗಿ ಉಳಿದಿತ್ತು.[೧೧೪] ಸುಮಾರು ಇದೇ ವೇಳೆಗೆ, ಒಸಿರಿಸ್‌ ಮರಣಾನಂತರದ ಬದುಕಿನ ಪ್ರಮುಖ ದೈವವಾಯಿತು. ಈ ಕಾಲದಲ್ಲಿಯೇ ಮೊದಲ ಬಾರಿಗೆ ಪಿರಾಮಿಡ್‌ ಗ್ರಂಥಗಳನ್ನು ರಚಿಸಲಾಯಿತು. ಇವು ಬಹಳ ಹಳೆಯ ಪರಂಪರೆಯ ಅವಶೇಷಗಳನ್ನು ಕೂಡ ಹೊಂದಿದ್ದರೂ, ಮರಣಾನಂತರದ ಬದುಕಿನಲ್ಲಿ ಸೌರ ಮತ್ತು ಒಸಿರಿಯನ್ ಪರಿಕಲ್ಪನೆಗಳ ಪ್ರಾಮುಖ್ಯತೆಯನ್ನು ಪ್ರತಿಫಲಿಸುತ್ತದೆ.[೧೧೫] ಆದ್ದರಿಂದ ಈ ಗ್ರಂಥಗಳು ಆರಂಭಿಕ ಈಜಿಪ್ತಿನ ದೇವತಾಶಾಸ್ತ್ರವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅತ್ಯಂತ ಮಹತ್ವದ ಮೂಲವಾಗಿವೆ.[೧೧೬] ಕ್ರಿ.ಪೂ. 22ನೇ ಶತಮಾನದಲ್ಲಿ, ಹಳೆಯ ಸಾಮ್ರಾಜ್ಯವು ಅವನತಿ ಹೊಂದಿ, ಮೊದಲ ಮಧ್ಯಂತರ ಅವಧಿಯು ಆರಂಭಗೊಂಡಿತು, ಇದು ಈಜಿಪ್ತಿನ ಧರ್ಮದ ಮೇಲೆ ಮಹತ್ವದ ಪರಿಣಾಮಗಳನ್ನು ಬೀರಿದೆ. ಹಳೆಯ ಸಾಮ್ರಾಜ್ಯದ ಅಧಿಕಾರಿಗಳು ರಾಜವಂಶಕ್ಕಷ್ಟೇ ಸೀಮಿತವಾಗಿದ್ದ ಅಂತ್ಯಸಂಸ್ಕಾರದ ವಿಧಿಗಳನ್ನು ಅಳವಡಿಸಿಕೊಳ್ಳಲು ಆರಂಭಿಸಿದ್ದರು,[೩೭] ಆದರೆ ಈಗ ಸಾಮಾಜಿಕ ವರ್ಗಗಳ ನಡುವಣ ಕಟ್ಟುನಿಟ್ಟಾದ ಎಲ್ಲೆಗಳು ಸ್ವಲ್ಪ ಸಡಿಲಗೊಂಡು, ಈ ಪದ್ಧತಿಗಳು ಮತ್ತು ಇದರೊಂದಿಗೆ ಸಂಬಂಧವಿದ್ದ ನಂಬಿಕೆಗಳು ಕ್ರಮೇಣ ಎಲ್ಲ ಈಜಿಪ್ತಿಯನ್ನರಿಗೆ ವಿಸ್ತಾರಗೊಂಡಿತು, ಈ ಪ್ರಕ್ರಿಯೆಯನ್ನು 'ಮರಣಾನಂತರದ ಬದುಕಿನ ಪ್ರಜಾಪ್ರಭುತ್ವೀಕರಣ' ಎಂದು ಕರೆಯಲಾಗುತ್ತದೆ.[೧೧೭] ಮರಣಾನಂತರದ ಬದುಕಿನ ಕುರಿತ ಒಸಿರಿಯನ್ ದೃಷ್ಟಿಕೋನವು ಎಲ್ಲ ಸಾಮಾನ್ಯರ ಮೇಲೆ ಅಗಾಧ ಪ್ರಭಾವ ಬೀರಿತ್ತು. ಹೀಗೆ ಒಸಿರಿಸ್‌ ಒಂದು ಅತ್ಯಂತ ಪ್ರಮುಖವಾದ ದೇವರಾಯಿತು.[೧೧೮] ಸ್ವಾಭಾವಿಕವಾಗಿ ಥೀಬ್ಸ್‌ನ ರಾಜರು ಮಧ್ಯ ಅವಧಿಯ ಸಾಮ್ರಾಜ್ಯದಲ್ಲಿ ಈಜಿಪ್ತಿಯನ್ ರಾಷ್ಟ್ರವನ್ನು ಒಗ್ಗೂಡಿಸಿದರು. ಈ ಥೀಬನ್ನಿನ ಫೇರೋಗಳು ಆರಂಭದಲ್ಲಿ ತಮ್ಮ ಪೋಷಕ ದೇವರಾದ ಮೊಂಥು ರಾಷ್ಟ್ರೀಯ ಮಹತ್ವ ಪಡೆಯುವಂತೆ ಮಾಡಿದರು, ಆದರೆ ನಂತರದ ಮಧ್ಯ ಅವಧಿಯ ಸಾಮ್ರಾಜ್ಯದಲ್ಲಿ ಅಮುನ್‌ ದೇವರ ಜನಪ್ರಿಯತೆ ಹೆಚ್ಚ ತೊಡಗಿದ್ದರಿಂದ ಈ ದೇವರ ಪ್ರಭಾವ ಮಂಕಾಯಿತು.[೧೧೮] ಈ ಹೊಸ ಈಜಿಪ್ತ್ ರಾಷ್ಟ್ರದಲ್ಲಿ, ವೈಯಕ್ತಿಕ ಧರ್ಮಶ್ರದ್ಧೆಯು ಹೆಚ್ಚು ಮಹತ್ವ ಪಡೆಯಿತು ಮತ್ತು ಬರಹದಲ್ಲಿ ಹೆಚ್ಚು ಮುಕ್ತವಾಗಿ ಅಭಿವ್ಯಕ್ತಗೊಳ್ಳತೊಡಗಿತು, ಈ ಪ್ರವೃತ್ತಿಯು ಹೊಸ ಸಾಮ್ರಾಜ್ಯದಲ್ಲಿಯೂ ಮುಂದುವರೆಯಿತು.[೩೨]

ಹೊಸ ಸಾಮ್ರಾಜ್ಯ[ಬದಲಾಯಿಸಿ]

ಮಧ್ಯ ಅವಧಿಯ ಸಾಮ್ರಾಜ್ಯವು ಎರಡನೇ ಮಧ್ಯಂತರ ಅವಧಿಯಲ್ಲಿ ಕೊನೆಗೊಂಡಿತು, ಆದರೆ ರಾಷ್ಟ್ರವು ಥೀಬನ್‌ ರಾಜರಿಂದ ಪುನಾ ಒಗ್ಗೂಡಿತು, ಅವರು ಹೊಸ ಸಾಮ್ರಾಜ್ಯದ ಮೊದಲ ಫೇರೋಗಳಾದರು. ಹೊಸ ಆಳ್ವಿಕೆಯಡಿಯಲ್ಲಿ, ಅಮುನ್‌ ಪ್ರಭತ್ವದ ಪರಮೋಚ್ಚ ದೇವರಾಯಿತು. ಸುದೀರ್ಘಕಾಲದಿಂದ ಅರಸುತನದ ಪೋಷಕ ದೇವರಾಗಿದ್ದ ರಾ ಜೊತೆ ಆತನನ್ನು ಸಮನ್ವಯಗೊಳಿಸಲಾಯಿತು. ಅಲ್ಲದೇ ಆತನ ಥೀಬ್ಸ್‌ನ ಕರ್ನನ್‌ನಲ್ಲಿದ್ದ ದೇವಾಲಯವು ಈಜಿಪ್ತ್‌‌ನ ಅತ್ಯಂತ ಮಹತ್ವದ ಧಾರ್ಮಿಕ ಕೇಂದ್ರವಾಯಿತು. ಅಮುನ್‌ ದೇವರನ್ನು ಹೀಗೆ ಮೇಲೆತ್ತೆರಿಸಿದ್ದು ಭಾಗಶಃ ಥೀಬ್ಸ್‌ನ ಅತ್ಯಧಿಕ ಪ್ರಾಮುಖ್ಯತೆಯಿಂದಾಗಿ, ಆದರೆ ಹೆಚ್ಚುತ್ತಿದ್ದ ವೃತ್ತಿಪರ ಪುರೋಹಿತವರ್ಗದ ಕಾರಣದಿಂದಾಗಿಯೂ ಆಗಿತ್ತು. ಅವರ ಸುಸಂಸ್ಕೃತವಾದ ದೇವತಾಶಾಸ್ತ್ರದ ಚರ್ಚೆಗಳು ಅಮುನ್‌ನ ಸಾರ್ವತ್ರಿಕ ಶಕ್ತಿಯ ಕುರಿತು ವಿವರವಾದ ಚರ್ಚೆಗಳನ್ನು ಹುಟ್ಟುಹಾಕಿದವು.[೧೧೯] ಈ ಕಾಲಘಟ್ಟದಲ್ಲಿ ಹೊರಗಿನ ವ್ಯಕ್ತಿಗಳೊಂದಿಗೆ ಅಧಿಕಗೊಂಡ ಸಂಪರ್ಕವು ಅನೇಕ ಸಮೀಪ-ಪೂರ್ವದ ದೈವಗಳನ್ನು ಸ್ಮಾರಕಭವನಗಳಲ್ಲಿ ಸ್ವೀಕರಿಸುವಂತೆ ಮಾಡಿತು. ಇದೇ ವೇಳೆಗೆ, ಸೋಲನ್ನುಂಡ ನ್ಯುಬಿಯನ್ನರು ಈಜಿಪ್ತಿನ ಧಾರ್ಮಿಕ ನಂಬಿಕೆಗಳನ್ನು ತಮ್ಮದಾಗಿಸಿಕೊಂಡರು, ವಿಶೇಷವಾಗಿ ಅಮುನ್‌ ದೇವರನ್ನು ತಮ್ಮದಾಗಿ ಸ್ವೀಕರಿಸಿದರು.[೧೨೦]

ಅಟೆನ್‌ ದೇವರನ್ನು ಪೂಜಿಸುತ್ತಿರುವ ಅಖೆನಟೆನ್‌ ಮತ್ತು ಅವನ ಕುಟುಂಬ

ಅಖೆನಟೆನ್‌ ರಾಜನಾಗಿ ಅಧಿಕಾರಕ್ಕೆ ಬಂದ ನಂತರ, ಅಮುನ್‌ ದೇವರ ಬದಲಿಗೆ ಅಟೆನ್‌ ಪ್ರಭುತ್ವದ ದೇವರಾಯಿತು. ಆಗ ಹೊಸ ಸಾಮ್ರಾಜ್ಯದ ಧಾರ್ಮಿಕ ಶ್ರೇಣಿಯು ಛಿದ್ರಗೊಂಡಿತು. ಸಹಜವಾಗಿಯೇ ಆತ ಅನೇಕ ಬೇರೆ ದೇವರುಗಳ ಅಧಿಕೃತ ಪೂಜೆಯನ್ನು ತೊಡೆದುಹಾಕಿದ ಮತ್ತು ಈಜಿಪ್ತ್‌‌ನ ರಾಜಧಾನಿ ನಗರವನ್ನು ಅಮರ್ನದಲ್ಲಿರುವ ಹೊಸ ನಗರಕ್ಕೆ ಸ್ಥಳಾಂತರಿಸಿದ. ಈಜಿಪ್ತಿನ ಇತಿಹಾಸದ ಈ ಭಾಗವನ್ನು ಅಮರ್ನ ಅವಧಿ ಎಂದು ಹೆಸರಿಸಲಾಗಿದೆ. ಹೀಗೆ ಮಾಡುವಲ್ಲಿ, ಅಖೆನಟೆನ್‌ ತನಗೆ ಆಭೂತಪೂರ್ವ ಸ್ಥಾನವನ್ನು ಕೊಟ್ಟುಕೊಂಡ: ಆತ ಮಾತ್ರವೇ ಅಟೆನ್‌ ದೇವರನ್ನು ಪೂಜಿಸಬಹುದಿತ್ತು ಮತ್ತು ಸಾಮಾನ್ಯ ಜನತೆ ತಮ್ಮ ಪೂಜೆಯನ್ನು ಅವನತ್ತ ತಿರುಗಿಸಿದರು. ಅಟೆನಿಸ್ಟ್ ವ್ಯವಸ್ಥೆಯಲ್ಲಿ ಉತ್ತಮವಾಗಿ ಅಭಿವೃದ್ಧಿಗೊಂಡ ಪುರಾಣಸಾಹಿತ್ಯ ಮತ್ತು ಮರಣಾನಂತರದ ನಂಬಿಕೆಗಳ ಕೊರತೆ ಇತ್ತು. ಅಲ್ಲದೇ ಅಟೆನ್‌ ತನ್ನಷ್ಟಕ್ಕೇ ದೂರವುಳಿದು, ಅವೈಯಕ್ತಿಕವಾಗಿರುವಂತೆ ತೋರಿತು. ಹೀಗಾಗಿ ಈ ಹೊಸ ಶ್ರೇಣಿಯು ಅಷ್ಟಾಗಿ ಸಾಮಾನ್ಯ ಈಜಿಪ್ತಿಯನ್ನರ ಮನಮುಟ್ಟಲಿಲ್ಲ.[೧೨೧] ಹೀಗೆ, ಅನೇಕರು ಪ್ರಾಯಶಃ ಸಾಂಪ್ರದಾಯಿಕ ದೇವರನ್ನು ಖಾಸಗಿಯಾಗಿ ಪೂಜಿಸುವುದನ್ನು ಮುಂದುವರೆಸಿದರು. ಹಾಗಿಲ್ಲದಿದ್ದರೆ, ಬೇರೆ ದೇವರಿಗೆ ಪ್ರಭುತ್ವದ ಬೆಂಬಲವಿಲ್ಲದಿರುವುದು ಈಜಿಪ್ತಿನ ಸಮಾಜವನ್ನು ತೀವ್ರವಾಗಿ ಛಿದ್ರಗೊಳಿಸುತ್ತಿತ್ತು.[೧೨೨] ಅಖೆನಟೆನ್‌ನ ಉತ್ತರಾಧಿಕಾರಿಗಳು ಹೀಗಾಗಿ ಸಾಂಪ್ರದಾಯಿಕ ಧಾರ್ಮಿಕ ವ್ಯವಸ್ಥೆಯನ್ನು ಪುನಾ ಉಳಿಸಿಕೊಂಡರು ಮತ್ತು ಸಹಜವಾಗಿಯೇ ಅವರು ಎಲ್ಲ ಅಟೆನಿಸ್ಟ್‌ ಸ್ಮಾರಕಗಳನ್ನು ಕಿತ್ತುಹಾಕಿದರು.[೧೨೩] ಅಮರ್ನ ಅವಧಿಗಿಂತ ಪೂರ್ವದಲ್ಲಿ, ಪ್ರಚಲಿತ ಧರ್ಮವು ದೇವರು ಮತ್ತು ಆರಾಧಕರ ಮಧ್ಯೆ ಹೆಚ್ಚು ವೈಯಕ್ತಿಕ ಸಂಬಂಧದತ್ತ ಒಲವನ್ನು ಹೊಂದಿತ್ತು. ಈ ಪ್ರವೃತ್ತಿಯನ್ನು ಅಖೆನಟೆನ್‌ನ ಬದಲಾವಣೆಗಳು ತಿರುವುಮುರುವಾಗಿಸಿದವು. ಆದರೆ ಒಮ್ಮೆ ಸಾಂಪ್ರಾದಯಿಕ ಧರ್ಮವನ್ನು ಪುನಾಉಳಿಸಿಕೊಂಡ ನಂತರ, ಹಿಂದಿನ ವ್ಯವಸ್ಥೆ ಮರಳಿತು. ದೇವರು ನೇರವಾಗಿ ದೈನಂದಿನದ ಬದುಕಿನಲ್ಲಿ ಭಾಗಿಯಾಗಿದ್ದಾರೆ ಎಂದು ಸಾಮಾನ್ಯ ಜನತೆ ನಂಬಲರಾಂಭಿಸಿದರು. ಪರಮೋಚ್ಚ ದೇವರಾದ ಅಮುನ್‌ ಮನುಷ್ಯರ ವಿಧಿಯ ಅಂತಿಮ ತೀರ್ಪುಗಾರ, ಈಜಿಪ್ತ್‌‌ನ್ನು ನೈಜವಾಗಿ ಆಳುವವನು ಎಂಬಂತೆ ನೋಡಲಾಯಿತು. ಇದಕ್ಕೆ ಅನುಗುಣವಾಗಿ ಫೇರೋ ಹೆಚ್ಚು ಮಾನವೀಯವಾಗಿ, ಕಡಿಮೆ ದೈವಿಕವಾಗಿ ಇದ್ದ. ನಿರ್ಧಾರ-ರೂಪಿಸುವ ವಿಧಾನಗಳಾಗಿ ನಿಮಿತ್ತಸ್ಥಾನಗಳ ಮಹತ್ವ ಹೆಚ್ಚಿತು, ಹಾಗೆಯೇ ನಿಮಿತ್ತಗಳನ್ನು ವ್ಯಾಖ್ಯಾನಿಸುವವರ, ಪುರೋಹಿತವರ್ಗದ ಸಂಪತ್ತು ಹಾಗೂ ಪ್ರಭಾವವೂ ಅಧಿಕಗೊಂಡಿತು. ಈ ಪ್ರವೃತ್ತಿಗಳು ಸಮಾಜದ ಸಾಂಪ್ರದಾಯಿಕ ಸಂರಚನೆಯನ್ನು ಶಿಥಿಲಗೊಳಿಸಿದವು ಮತ್ತು ಹೊಸ ಸಾಮ್ರಾಜ್ಯದ ಪತನಕ್ಕೆ ಕಾರಣವಾದವು.[೧೨೪]

ನಂತರದ ಕಾಲಘಟ್ಟಗಳು[ಬದಲಾಯಿಸಿ]

ಕ್ರಿ.ಪೂ. ಮೊದಲನೇ ಶತಮಾನದಲ್ಲಿ ಈಜಿಪ್ತ್‌‌ ತನ್ನ ಮೊದಲಿನ ಕಾಲಕ್ಕಿಂತ ಗಣನೀಯವಾಗಿ ದುರ್ಬಲಗೊಂಡಿತ್ತು ಮತ್ತು ಹಲವು ಕಾಲಘಟ್ಟಗಳಲ್ಲಿ ವಿದೇಶೀಯರು ದೇಶವನ್ನು ಸ್ವಾದೀನಪಡಿಸಿಕೊಂಡರು ಹಾಗೂ ಫೇರೋನ ಸ್ಥಾನವನ್ನು ವಹಿಸಿಕೊಂಡಿದ್ದರು. ಫೇರೋನ ಮಹತ್ವವು ಕುಸಿಯುವುದು ಹಾಗೆಯೇ ಮುಂದುವರೆಯಿತು ಮತ್ತು ಜನಪ್ರಿಯ ಧರ್ಮಶ್ರದ್ಧೆಯ ಮೇಲೆ ಒತ್ತುನೀಡುವುದು ಮುಂದುವರೆಯಿತು. ಈಜಿಪ್ತಿನ ಪೂಜೆಯ ಸ್ವರೂಪದ ಒಂದು ಲಕ್ಷಣವಾದ ಪ್ರಾಣಿ ಆರಾಧನಾ ಪದ್ಧತಿಯು ಈ ಅವಧಿಯಲ್ಲಿ ಹೆಚ್ಚೆಚ್ಚು ಜನಪ್ರಿಯವಾಯಿತು. ಪ್ರಾಯಶಃ ಇದು ಅನಿಶ್ಚತೆತೆಗೆ ಮತ್ತು ಆ ಕಾಲದ ವಿದೇಶಿ ಪ್ರಭಾವಕ್ಕೆ ಒಂದು ಪ್ರತಿಕ್ರಿಯೆಯಾಗಿದ್ದಿತು.[೧೨೫] ರಕ್ಷಣೆ, ಮಂತ್ರವಿದ್ಯೆ ಮತ್ತು ವೈಯಕ್ತಿಕ ಮುಕ್ತಿಯ ದೇವತೆಯಾಗಿ ಐಸಿಸ್‌ ಹೆಚ್ಚು ಜನಪ್ರಿಯವಾಯಿತು ಮತ್ತು ಈಜಿಪ್ತ್‌ನಲ್ಲಿ ಅತ್ಯಂತ ಪ್ರಮುಖವಾದ ದೇವತೆಯಾಯಿತು.[೧೨೬]

ಸೆರಾಪಿಸ್

ಕ್ರಿ.ಪೂ. 4ನೇ ಶತಮಾನದಲ್ಲಿ, ಟಾಲೆಮೈಕ್ ರಾಜವಂಶದ ಅಡಿಯಲ್ಲಿ ಈಜಿಪ್ತ್‌‌ ಹೆಲೆನಿಸ್ಟಿಕ್ ಸಾಮ್ರಾಜ್ಯವಾಯಿತು, ಇದು ಫೆರೋನ ಪಾತ್ರ ವಹಿಸಿತು ಮತ್ತು ಪಾರಂಪರಿಕ ಧರ್ಮವನ್ನು ಮತ್ತು ಅನೇಕ ದೇವಾಲಯಗಳನ್ನು ಕಾಯ್ದುಕೊಳ್ಳುವುದು ಅಥವಾ ದೇವಾಲಯಗಳನ್ನು ಮರುನಿರ್ಮಾಣ ಮಾಡುವುದನ್ನು ಒಳಗೊಂಡಿತ್ತು. ಸಾಮ್ರಾಜ್ಯದ ಗ್ರೀಕ್ ಆಳುವ ವರ್ಗವು ಈಜಿಪ್ತಿನ ದೈವಗಳನ್ನು ತಮ್ಮ ದೈವಗಳೊಂದಿಗೆ ಗುರುತಿಸಿಕೊಂಡರು.[೧೨೭] ಈ ಬಗೆಯ ಅಡ್ಡ-ಸಾಂಸ್ಕೃತಿಕ ಸಮನ್ವಯವು ಒಸಿರಿಸ್‌ ಮತ್ತು ಎಪಿಸ್‌ರನ್ನು ಗ್ರೀಕ್ ದೈವಗಳ ಗುಣಲಕ್ಷಣಗಳೊಂದಿಗೆ ಒಂದುಗೂಡಿಸಿ ಸೆರಾಪಿಸ್‌ ಎಂಬ ದೇವರು ಹುಟ್ಟಲು ಕಾರಣವಾಯಿತು ಮತ್ತು ಈ ದೇವರು ಗ್ರೀಕ್‌ ಜನರ ಮಧ್ಯೆ ಬಹಳ ಜನಪ್ರಿಯವಾಯಿತು. ಹಾಗಿಲ್ಲದಿದ್ದರೆ, ಎರಡು ನಂಬಿಕೆಗಳ ವ್ಯವಸ್ಥೆಯ ಬಹುತೇಕ ಭಾಗವು ಪ್ರತ್ಯೇಕವಾಗಿ ಉಳಿಯುತ್ತಿತ್ತು ಮತ್ತು ಈಜಿಪ್ತಿನ ದೇವತೆಗಳು ಈಜಿಪ್ತಿಯನ್ ಆಗಿಯೇ ಉಳಿಯುತ್ತಿದ್ದವು.[೧೨೮] ಈಜಿಪ್ತ್‌‌ ರೋಮನ್ ಸಾಮ್ರಾಜ್ಯದ ಪ್ರಾಂತವಾದ ನಂತರ, ಟಾಲೆಮಿಕ್ ರಾಜರು ದೂರದ ಸಾಮ್ರಾಟರನ್ನು ಬದಲಿಸುವುದರೊಂದಿಗೆ ಟಾಲೆಮಿಕ್ ನಂಬಿಕೆಗಳು ಸ್ವಲ್ಪ ಮಟ್ಟಿಗೆ ಬದಲಾದವು.[೧೨೭] ಐಸಿಸ್‌ನ ಆರಾಧನಾ ಪದ್ಧತಿಗಳನ್ನು ಈಜಿಪ್ತ್‌‌ನ ಹೊರಗಿನ ಗ್ರೀಕರು ಮತ್ತು ರೋಮನ್ನರು ಕೂಡ ಇಷ್ಟಪಟ್ಟರು ಮತ್ತು ಹೆಲನೀಕೃತ ರೂಪದಲ್ಲಿ ಸಾಮ್ರಾಜ್ಯದ ಆಚೆಗೂ ಪ್ರಸರಿಸಿತು.[೧೨೯] ಈಜಿಪ್ತ್‌‌ನಲ್ಲಿಯೇ, ಸಾಮ್ರಾಜ್ಯವು ದುರ್ಬಲಗೊಳ್ಳುತ್ತಿದ್ದಂತೆ, ಅಧಿಕೃತ ದೇವಾಲಯಗಳು ಅವನತಿಗೊಳ್ಳಲಾರಂಭಿಸಿವು ಮತ್ತು ಅವುಗಳ ಕೇಂದ್ರೀಕೃತ ಪ್ರಭಾವವಿಲ್ಲದೇ ಧಾರ್ಮಿಕ ಪದ್ಧತಿಗಳು ವಿಚ್ಛಿದ್ರಗೊಂಡು, ಸ್ಥಳೀಯಗೊಳ್ಳತೊಡಗಿದವು.  ಇದೇ ವೇಳೆಗೆ ಕ್ರೈಸ್ತ ಧರ್ಮವು ಈಜಿಪ್ತ್‌‌ನಾದ್ಯಂತ ಹರಡಿತು ಮತ್ತು ಕ್ರಿ.ಶ. ಮೂರನೇ ಮತ್ತು ನಾಲ್ಕನೇ ಶತಮಾನದಲ್ಲಿ ಕ್ರೈಸ್ತ ದೊರೆಗಳ ರಾಜಾಜ್ಞೆಯಿಂದಾಗಿ ಮತ್ತು ಸ್ಥಳೀಯ ಕ್ರೈಸ್ತರಿಂದ ವಿಗ್ರಹಭಂಜನೆಯಿಂದಾಗಿ ಸಾಂಪ್ರದಾಯಿಕ ನಂಬಿಕೆಗಳು ಕ್ರಮೇಣ ಕ್ಷೀಣಿಸತೊಡಗಿತು. ಅದು ಜನಸಮೂಹದಲ್ಲಿ ಸ್ವಲ್ಪ ಕಾಲ ಉಳಿದಿದ್ದರೂ, ಈಜಿಪ್ತಿನ ಧರ್ಮವು ಕ್ರಮೇಣ ಮರೆಯಾಗತೊಡಗಿತು.[೧೩೦]

ಪರಂಪರೆ[ಬದಲಾಯಿಸಿ]

ಈಜಿಪ್ತಿನ ಧರ್ಮವು ದೇವಾಲಯಗಳ ಮತ್ತು ಗೋರಿಗಳ ನಿರ್ಮಾಣಕ್ಕೆ ಕಾರಣವಾಗಿದ್ದು, ಅದು ಪುರಾತನ ಈಜಿಪ್ತ್‌‌ನ ಅತ್ಯಂತ ತಾಳಿಕೆಯ ಸ್ಮಾರಕಗಳಾಗಿವೆ. ಅಷ್ಟೇ ಅಲ್ಲದೇ ಅದು ಬೇರೆ ಸಂಸ್ಕೃತಿಗಳ ಮೇಲೆಯೂ ಅಪಾರ ಪ್ರಭಾವವನ್ನು ಉಳಿಸಿದೆ. ಫೇರೋನಿಕ್ ಕಾಲದ ಸ್ಪಿಂಕ್ಸ್ ಮತ್ತು ರೆಕ್ಕೆಯಿರುವ ಸೌರ ಫಲಕ/ತಟ್ಟೆ ಇತ್ಯಾದಿ ಅನೇಕ ಸಂಕೇತಗಳು ಬೆಸ್‌ ಇತ್ಯಾದಿ ಕೆಲವು ದೈವಗಳ ಹಾಗೆಯೇ ಮೆಡಿಟರೇನಿಯನ್ ಮತ್ತು ಸಮೀಪ ಪ್ರಾಚ್ಯದಲ್ಲಿ ವ್ಯಾಪಕವಾಗಿ ಹರಡಿತು. ಈ ಕೆಲವು ಸಂಪರ್ಕಗಳನ್ನು ಪತ್ತೆ ಮಾಡುವುದು ಕಷ್ಟವಿದೆ. ಎಲಿಸಿಯುಂ ಕುರಿತ ಗ್ರೀಕರ ಪರಿಕಲ್ಪನೆಯು ಮರಣಾನಂತರದ ಬದುಕಿನ ಕುರಿತು ಈಜಿಪ್ತಿನ ದೃಷ್ಟಿಕೋನದಿಂದ ವ್ಯುತ್ಪನ್ನಗೊಂಡಿರಬಹುದು. ಸಿಗ್ಮಂಡ್ ಫ್ರಾಯ್ಡ್‌ನಿಂದ ಆರಂಭಗೊಂಡು ಹಲವಾರು ವಿದ್ವಾಂಸರು ಮತ್ತು ವೃತ್ತಿಪರರು ಹೀಬ್ರೂ ಏಕದೈವವಾದವು ಅಟೆನಿಸ್ಟ್‌ ಮೂಲವನ್ನು ಹೊಂದಿರಬಹುದು ಎಂದು ಊಹೆ ಮಾಡಿದ್ದಾರೆ.[೧೩೧] ಅಂತ್ಯ ಪುರಾತನದ ಕಾಲದಲ್ಲಿ, ನರಕದ ಕುರಿತ ಕ್ರೈಸ್ತ ಪರಿಕಲ್ಪನೆಯು ಡ್ಯುಅಟ್ ಕಲ್ಪನೆಯಿಂದ ಪ್ರಭಾವಿತಗೊಂಡಿರಬಹುದು. ಜೊತೆಗೆ ಮೇರಿಯ ಮೂರ್ತಿಚಿತ್ರಣವು ಐಸಿಸ್‌ನಿಂದ ಪ್ರಭಾವಿತವಾಗಿರಬಹುದು. ಈಜಿಪ್ತಿನ ನಂಬಿಕೆಗಳು ಹಲವಾರು ಎಸ್ಟೋರಿಕ್ ಅಥವಾ ಧೀಕ್ಷೆ ಪಡೆದವರಿಗೆ ಮಾತ್ರವೇ ಪ್ರವೇಶವಿರುವ ನಂಬಿಕೆಗಳ ವ್ಯವಸ್ಥೆಯನ್ನು ಪ್ರಭಾವಿಸಿದೆ ಅಥವಾ ಅಂಥ ವ್ಯವಸ್ಥೆಯ ಹುಟ್ಟಿಗೆ ಕಾರಣವಾಗಿದೆ. ಈ ನಂಬಿಕೆ ವ್ಯವಸ್ಥೆಯನ್ನು ಹುಟ್ಟುಹಾಕಿದ ಗ್ರೀಕರು ಮತ್ತು ರೋಮನ್ನರು ಈಜಿಪ್ತ್‌‌ ಅನ್ನು ನಿಗೂಢ ಜ್ಞಾನದ ಮೂಲ ಎಂಬಂತೆ ಕಂಡಿದ್ದಾರೆ. ಉದಾಹರಣೆಗೆ ರಹಸ್ಯವಿದ್ಯೆ(ಹೆರ್ಮಿಟಿಸಮ್‌)ಯು ಥೋತ್‌ ಜೊತೆ ಸಂಬಂಧವಿರುವ ರಹಸ್ಯ ಮಾಂತ್ರಿಕ ವಿದ್ಯೆಯ ಜ್ಞಾನದಿಂದ ವ್ಯುತ್ಪನ್ನಗೊಡಿದೆ.[೧೩೨] ಈಜಿಪ್ತಿನ ಜನಪದ ಪರಂಪರೆಯಲ್ಲಿ ಉಳಿದಿರುವ ಪುರಾತನ ನಂಬಿಕೆಯ ಕುರುಹುಗಳು ಆಧುನಿಕ ಕಾಲಘಟ್ಟಕ್ಕೂ ಬಂದಿವೆ. ಆದರೆ 1798ರಲ್ಲಿ ಈಜಿಪ್ತ್‌‌ ಮತ್ತು ಸಿರಿಯಾದಲ್ಲಿ ಫ್ರೆಂಚ್ ಆಂದೋಲನದೊಂದಿಗೆ ಆಧುನಿಕ ಸಮಾಜದ ಮೇಲೆ ಇದರ ಪ್ರಭಾವವು ಅಧಿಕಗೊಂಡಿತು. ಇದರ ಪರಿಣಾಮವಾಗಿ, ಪಾಶ್ಚಾತ್ಯರು ಈಜಿಪ್ತಿನ ನಂಬಿಕೆಗಳನ್ನು ನೇರವಾಗಿ ಅಧ್ಯಯನ ಮಾಡಲು ಆರಂಭಿಸಿದರು ಮತ್ತು ಈಜಿಪ್ತಿನ ಧಾರ್ಮಿಕ ವಿಶಿಷ್ಟ ಲಕ್ಷಣಗಳನ್ನು ಪಾಶ್ಚಾತ್ಯ ಕಲೆಯು ಸ್ವೀಕರಿಸಿತು.[೧೩೩] ಈಜಿಪ್ತಿನ ಧರ್ಮವು ಆಗಿನಿಂದಲೂ ಗಮನಾರ್ಹ ರೀತಿಯಲ್ಲಿ ಜನಪ್ರಿಯ ಸಂಸ್ಕೃತಿಯ ಮೇಲೆ ಪ್ರಭಾವವನ್ನು ಬೀರಿದೆ. ಈಜಿಪ್ತಿನ ನಂಬಿಕೆಯಲ್ಲಿ ಆಸಕ್ತಿಯು ಹೀಗೆಯೇ ಮುಂದುವರೆದ ಪರಿಣಾಮವಾಗಿ, 20ನೇ ಶತಮಾನದ ಕೊನೆಯಲ್ಲಿ ಹಲವಾರು ಧಾರ್ಮಿಕ ಗುಂಪುಗಳು ಪುರಾತನ ಈಜಿಪ್ತಿನ ಧರ್ಮದ ವಿವಿಧ ಪುನಾರಚನೆಗಳನ್ನು ಆಧರಿಸಿ ರೂಪುಗೊಂಡವು.[೧೩೪]

ಇವನ್ನೂ ಗಮನಿಸಿ‌[ಬದಲಾಯಿಸಿ]

 • ಈಜಿಪ್ತಿನ ಪೌರಾಣಿಕ ಅಧ್ಯಯನಗಳ ಪಟ್ಟಿ
 • ಈಜಿಪ್ತಿನ ಸ್ಮಾರಕಭವನಗಳು
 • ಕೆಮೆಟಿಸಮ್‌
 • ಪೂರ್ವೇತಿಹಾಸ ಧರ್ಮ
 • ಪುರಾತನ ಸಮೀಪ ಪ್ರಾಚ್ಯದ ಧರ್ಮಗಳು

ಉಲ್ಲೇಖಗಳು‌[ಬದಲಾಯಿಸಿ]

 1. ಆಸ್‌ಮನ್‌ 2001, ಪುಟಗಳು: 1–5, 80
 2. ಆಸ್‌ಮನ್‌ 2001, ಪುಟಗಳು: 63–64, 82
 3. ಅಲೆನ್‌ 2000, ಪುಟಗಳು: 43–44
 4. ವಿಲ್ಕಿನ್‌ಸನ್‌, 2003, ಪುಟಗಳು: 30, 32, 89
 5. ಸಿಲ್ವರ್‌ಮನ್‌, ಡೇವಿಡ್‌ ಪಿ., "ಡಿವೈನಿಟಿ ಆಂಡ್‌ ಡೈಟೀಸ್‌ ಇನ್ ಏನ್ಷಂಟ್‌ ಈಜಿಪ್ತ್‌‌",ಇನ್‌ ಶಫರ್‌ 1991, ಪುಟಗಳು: 55–58
 6. ಡೇವಿಡ್‌ 2002, ಪು. 53
 7. ವಿಲ್ಕಿನ್‌ಸನ್‌ 2003, ಪುಟಗಳು: 28, 187–189
 8. ಟೀಟರ್‌, ಎಮಿಲಿ, "ಕಲ್ಟ್ಸ್‌: ಡಿವೈನ್‌ ಕಲ್ಟ್ಸ್‌," ಇನ್‌ ರೆಡ್‌ಫೋರ್ಡ್‌ 2001, ಸಂಪುಟ. I, ಪುಟಗಳು: 340–344
 9. ವಿಲ್ಕಿನ್‌ಸನ್‌ 2003, ಪುಟಗಳು: 74–79
 10. ಡ್ಯುನಂಡ್‌ ಮತ್ತು ಝೈವೀ-ಕೊಶೆ 2005, ಪುಟಗಳು: 27–28
 11. ವಿಲ್ಕಿನ್‌ಸನ್‌ 2003, ಪುಟಗಳು: 33–35
 12. ವಿಲ್ಕಿನ್‌ಸನ್‌ 2003, ಪುಟಗಳು: 36, 67
 13. ಆಸ್‌ಮನ್‌ 2001, ಪುಟಗಳು: 189–192, 241–242
 14. ವಿಲ್ಕಿನ್‌ಸನ್‌ 2003, ಪುಟಗಳು: 36–39; ಆಸ್‌ಮನ್‌ 2001, ಪುಟಗಳು: 10–11
 15. ಡಾಮಿನಿಕ್ ಮೊಂಟೆಸೆರಟ್‌, ಅಖೆನಟೆನ್‌: ಹಿಸ್ಟರಿ, ಫ್ಯಾಂಟಸಿ ಆಂಡ್ ಏನ್ಷಂಟ್‌ ಈಜಿಪ್ತ್‌‌ , ರೂಟ್ಲೆಜ್‌ 2000, ಐಎಸ್‌ಬಿಎನ್‌ 0415185491, ಪುಟಗಳು:36ಎಫ್‌ಎಫ್‌.
 16. Najovits, Simson (2003). Egypt, trunk of the tree, Volume 2. Algora. pp. 131–144. ISBN 978-0-87586-256-9.
 17. ಡ್ಯುನಂಡ್‌ ಮತ್ತು ಝೈವೀ-ಕೊಶೆ2005, ಪು. 35; ಅಲೆನ್‌ 2000, ಪು. 198
 18. ಅಲೆನ್‌ 2000, ಪುಟಗಳು: 115–117
 19. ಆಸ್‌ಮನ್‌ 2001, ಪುಟಗಳು: 4–5
 20. ೨೦.೦ ೨೦.೧ ೨೦.೨ ೨೦.೩ ಶೇಫರ್‌ 1997, ಪುಟಗಳು: 2–4
 21. ಆಸ್‌ಮನ್‌ 2001, ಪುಟಗಳು: 68–79; ಅಲೆನ್‌ 2000, ಪುಟಗಳು: 104, 127
 22. ಲೆಸ್ಕೋ, ಲಿಯೊನಾರ್ಡ್‌ ಎಚ್‌, "ಏನ್ಷಂಟ್‌ ಈಜಿಪ್ತಿಯನ್ ಕಾಸ್ಮಾಲಜೀಸ್‌ ಆಂಡ್ ಕಾಸ್ಮಾಲಜಿ". ಇನ್‌ ಶೇಫರ್‌ 1991, ಪುಟಗಳು: 117–121; ಡ್ಯುನಂಡ್‌ ಮತ್ತು ಝೈವೀ-ಕೊಶೆ 2005, ಪುಟಗಳು: 45–46
 23. ಅಲೆನ್‌, ಜೇಮ್ಸ್‌ ಪಿ., "ದಿ ಕಾಸ್ಮಾಲೊಜಿ ಆಫ್‌ ದಿ ಪಿರಾಮಿಡ್‌ ಟೆಕ್ಸ್ಟ್", ಇನ್ ಸಿಂಪ್ಸನ್‌ 1989, ಪುಟಗಳು: 20–26
 24. ಅಲೆನ್‌ 2003 ಪು. 31
 25. ವಿಲ್ಕಿನ್‌ಸನ್‌ 2003, ಪುಟಗಳು: 54–56
 26. ಆಸ್‌ಮನ್‌ 2001, ಪುಟಗಳು: 5–6
 27. ವಿಲ್ಕಿನ್‌ಸನ್‌ 2003, ಪು. 55; ವ್ಯಾನ್‌ ಡಿಜ್ಕ್‌, ಜಾಕೊಬಸ್, ದಿ ಅಮರ್ನ ಪೀರಿಯೆಟ್ ಆಂಡ್ ದಿ ಲೇಟರ್‌ ನ್ಯೂ ಕಿಂಗ್‌ಡಮ್‌ ". ಇನ್‌ ಶಾ 2000, ಪುಟಗಳು: 311–312
 28. ಡೇವಿಡ್‌ 2002, ಪುಟಗಳು: 69, 95, 184
 29. ವಿಲ್ಕಿನ್‌ಸನ್‌ 2003, ಪುಟಗಳು: 60–63
 30. ಅಲೆನ್‌ 2000, ಪುಟಗಳು: 79–80
 31. ಅಲೆನ್‌ 2000, ಪುಟಗಳು: 94–95
 32. ೩೨.೦ ೩೨.೧ ೩೨.೨ ,ಕ್ಯಾಲೆಂಡರ್‌ ಗೀ, "ದಿ ಮಿಡಲ್‌ ಕಿಂಗ್‌ಡಮ್‌", ಇನ್‌ ಶಾ 2000, ಪುಟಗಳು: 180–181
 33. ಆಸ್‌ಮನ್‌ 2005, ಪುಟಗಳು: 121–128, 389–390
 34. ಡೇವಿಡ್‌ 2002, ಪು. 79
 35. ಟೇಲರ್ 2001, ಪು. 238.
 36. ಡೇವಿಡ್‌ 2002, ಪುಟಗಳು: 90, 94–95
 37. ೩೭.೦ ೩೭.೧ ಆಸ್‌ಮನ್‌ 2005, ಪುಟಗಳು: 389–391
 38. ಫ್ಲೆಮಿಂಗ್‌ ಆಂಡ್ ಲೋಥಿಯನ್ 1997, ಪು. 104
 39. ಡೇವಿಡ್‌ 2002, ಪುಟಗಳು: 160–161
 40. ಆಸ್‌ಮನ್‌ 2005, ಪುಟಗಳು: 209–210, 398–402
 41. ೪೧.೦ ೪೧.೧ ಟ್ರಾನೆಕರ್‌ 2001, ಪುಟಗಳು: 1–5
 42. ಟೊಬಿನ್‌, ವಿನ್ಸೆಂಟ್‌ ಅರಿಹ್, "ಮಿಥ್ಸ್‌: ಆನ್‌ ಓವರ್‌ವ್ಯೂ" ಇನ್‌ ರೆಡ್‌ಫೋರ್ಡ್‌ 2001, ಸಂಪುಟ. II, ಪುಟಗಳು: 464–468
 43. ಪಿಂಚ್‌ 1994, ಪು. 18
 44. ಫ್ಲೆಮಿಂಗ್‌ ಮತ್ತು ಲೋಥಿಯನ್ 1997, ಪು. 26
 45. ಅಲೆನ್‌ 2000, ಪುಟಗಳು: 143–145, 171–173, 182
 46. ಆಸ್‌ಮನ್‌ 2001, ಪು. 124
 47. ಫ್ಲೆಮಿಂಗ್‌ ಮತ್ತು ಲೋಥಿಯನ್ 1997, ಪುಟಗಳು: 76, 78
 48. ಕ್ವಿರ್ಕ್‌ ಮತ್ತು ಸ್ಪೆನ್ಸರ್‌ 1992, ಪು. 67
 49. ಫ್ಲೆಮಿಂಗ್‌ ಮತ್ತು ಲೋಥಿಯನ್ 1997, ಪುಟಗಳು: 84, 107–108
 50. ಫ್ಲೆಮಿಂಗ್‌ ಮತ್ತು ಲೋಥಿಯನ್ 1997, ಪುಟಗಳು: 33, 38–39
 51. ಡ್ಯುನಂಡ್‌ ಮತ್ತು ಝೈವೀ-ಕೊಶೆ 2005, ಪುಟಗಳು: 93–99
 52. ಪಿಂಚ್‌ 1995, ಪು. 63
 53. ೫೩.೦ ೫೩.೧ ಫೋಸ್ಟರ್‌, ಜಾನ್ ಎಲ್‌., "ಲಿರಿಕ್‌", ಇನ್‌ ರೆಡ್‌ಫೋರ್ಡ್‌ 2001, ಸಂಪುಟ. II, ಪುಟಗಳು: 312–317
 54. ಡ್ಯುನಂಡ್‌ ಮತ್ತು ಝೈವೀ-ಕೊಶೆ 2005, ಪು. 94
 55. ಆಸ್‌ಮನ್‌ 2001, ಪು. 166
 56. ೫೬.೦ ೫೬.೧ ಒಕಿಂಗ, ಬೊಯೊ, "ಪೈಟಿ", ಇನ್‌ ರೆಡ್‌ಫೋರ್ಡ್‌ 2001, ಸಂಪುಟ. III, ಪುಟಗಳು: 44–46
 57. ಅಲೆನ್‌, 2000 ಪುಟ 315
 58. ವಿಲ್ಕಿನ್‌ಸನ್‌ 2003, ಪು. 7
 59. ಹೊರ್ನುಂಗ್‌ 1999, ಪುಟಗಳು: 1–5
 60. ಡೇವಿಡ್‌ 2002, ಪು. 93
 61. ಟೇಲರ್‌ 2001, ಪುಟಗಳು: 194–195
 62. ಹೊರ್ನುಂಗ್‌ 1999, ಪುಟಗಳು: xvii, 14
 63. ಕ್ವಿರ್ಕ್‌ ಮತ್ತು ಸ್ಪೆನ್ಸರ್‌ 1992, ಪು. 98
 64. ಅಲೆನ್‌ 2000, ಪುಟಗಳು: 316–317
 65. ಹೊರ್ನುಂಗ್‌ 1999, ಪುಟಗಳು: 26–27, 30
 66. ವಿಲ್ಕಿನ್‌ಸನ್‌ 2003, ಪು. 42–44
 67. ವಿಲ್ಕಿನ್‌ಸನ್‌ 2000, ಪುಟಗಳು: 8–9, 50
 68. ವಿಲ್ಕಿನ್‌ಸನ್‌ 2000, ಪು. 82
 69. ಡ್ಯುನಂಡ್‌ ಮತ್ತು ಝೈವೀ-ಕೊಶೆ 2005, ಪುಟಗಳು: 72–82, 86–89
 70. ವಿಲ್ಕಿನ್‌ಸನ್‌ 2000, ಪುಟಗಳು: 72–75
 71. ಶೇಫರ್‌ 1997, ಪು. 9
 72. ವಿಲ್ಕಿನ್‌ಸನ್‌ 2000, ಪುಟಗಳು: 9, 25–26
 73. ವಿಲ್ಕಿನ್‌ಸನ್‌ 2000, ಪುಟಗಳು: 92–93
 74. ೭೪.೦ ೭೪.೧ ಥಾಂಪ್ಸನ್‌, ಸ್ಟೀಫನ್‌ ಇ., "ಕಲ್ಟ್ಸ್‌ : ಓವರ್‌ವ್ಯೂ", ಇನ್‌ ರೆಡ್‌ಫೋರ್ಡ್‌ 2001, ಸಂಪುಟ. I, 326–332
 75. ೭೫.೦ ೭೫.೧ ವಿಲ್ಕಿನ್‌ಸನ್‌ 2000, ಪು. 95
 76. ಡ್ಯುನಂಡ್‌ ಮತ್ತು ಝೈವೀ-ಕೊಶೆ, ಪುಟಗಳು: 93–95; ಶೇಫರ್‌ 1997, ಪು. 25
 77. ಶೇಫರ್‌ 1997, ಪುಟಗಳು: 27–28
 78. ಡ್ಯುನಂಡ್‌ ಮತ್ತು ಝೈವೀ-ಕೊಶೆ 2005, ಪುಟಗಳು: 21, 83
 79. ಕ್ವಿರ್ಕ್‌ ಮತ್ತು ಸ್ಪೆನ್ಸರ್‌ 1992, ಪುಟಗಳು: 78, 92–94
 80. Owen, James (2004). "Egyptian Animals Were Mummified Same Way as Humans". National Geographic News. Retrieved 2010-08-06.
 81. ಕ್ರುಶ್ಚೆನ್‌, ಜೀನ್‌-ಮಾರೀ, "ಒರಾಕಲ್ಸ್", ಇನ್‌ ರೆಡ್‌ಫೋರ್ಡ್‌ 2001, ಪುಟಗಳು: 609–611
 82. ಫ್ರಾಂಕ್‌ಫರ್ಟೆ 1998, ಪುಟಗಳು: 145–152
 83. ಸಡೆಕ್‌ 1988, ಪುಟಗಳು: 1–2
 84. ೮೪.೦ ೮೪.೧ ವಿಲ್ಕಿನ್‌ಸನ್‌ 2003, ಪುಟಗಳು: 46
 85. ಡ್ಯುನಂಡ್‌ ಮತ್ತು ಝೈವೀ-ಕೊಶೆ 2005, ಪುಟಗಳು: 128–131
 86. ಬೈನೆಸ್‌, ಇನ್ ಶೇಫರ್‌ 1991, ಪುಟಗಳು: 164–171
 87. ಲೆಸ್ಕೋ, ಬಾರ್ಬರಾ ಎಸ್‌. "ಕಲ್ಟ್ಸ್‌: ಪ್ರೈವೇಟ್‌ ಕಲ್ಟ್ಸ್‌", ಇನ್‌ ರೆಡ್‌ಫೋರ್ಡ್‌ 2001, ಸಂಪುಟ. I, ಪುಟಗಳು: 336–339
 88. ಸಡೆಕ್‌ 1988, ಪುಟಗಳು: 76–78
 89. ಡೇವಿಡ್‌ 2002, ಪುಟಗಳು: 273, 276–277
 90. ಟ್ರಾನೆಕರ್‌ 2001, ಪು. 98
 91. ಅಲೆನ್‌ 2000, ಪುಟಗಳು: 156–157
 92. ಪಿಂಚ್‌ 1995, ಪುಟಗಳು: 9–17
 93. ಬೈನೆಸ್‌, ಇನ್‌ ಶೇಫರ್‌ 1991, ಪು. 165
 94. ಪಿಂಚ್‌ 1995, ಪುಟಗಳು: 51–63
 95. ಪಿಂಚ್‌ 1995, ಪುಟಗಳು: 16, 28
 96. ಪಿಂಚ್‌ 1995, ಪುಟಗಳು: 73–78
 97. ಕ್ವಿರ್ಕ್‌ ಮತ್ತು ಸ್ಪೆನ್ಸರ್‌ 1992, ಪುಟಗಳು: 86–90
 98. ಡೇವಿಡ್‌ 2002, ಪುಟಗಳು: 300–301
 99. ಟೇಲರ್‌ 2001, ಪುಟಗಳು: 187–193
 100. ಟೇಲರ್ 2001, ಪು. 95,
 101. ಡೇವಿಡ್‌ 2002, ಪು. 282
 102. ಟೇಲರ್‌, ಪುಟಗಳು: 141–155
 103. ಫ್ಲೆಮಿಂಗ್‌ ಮತ್ತು ಲೋಥಿಯನ್ 1997, ಪುಟಗಳು: 100–101
 104. ಟೇಲರ್, 1993, ಪುಟಗಳು: 99–100.
 105. ಟೇಲರ್‌ 2001, ಪುಟಗಳು: 107–110, 200–213
 106. ಕ್ವಿರ್ಕ್‌ ಮತ್ತು ಸ್ಪೆನ್ಸರ್‌ 1992, ಪುಟಗಳು: 97–98, 112
 107. ವಿಲ್ಕಿನ್‌ಸನ್‌ 2003, ಪುಟಗಳು: 12–15
 108. ವಿಲ್ಕಿನ್‌ಸನ್‌ 2003, ಪು. 31; ಡೇವಿಡ್‌ 2002, ಪುಟಗಳು: 50–52
 109. ವಿಲ್ಕಿನ್‌ಸನ್‌, 2003, ಪು. 15
 110. ವಿಲ್ಕಿನ್‌ಸನ್‌ 2000, ಪುಟಗಳು: 17–19
 111. ಡೇವಿಡ್‌ 2002, ಪುಟಗಳು: 51, 81–85
 112. ಡ್ಯುನಂಡ್‌ ಮತ್ತು ಝೈವೀ-ಕೊಶೆ 2005, ಪುಟಗಳು: 78–79
 113. ಮಲೆಕ್‌, ಜರೊಮಿರ್‌, "ದಿ ಓಲ್ಡ್‌ ಕಿಂಗ್‌ಡಮ್‌", ಇನ್‌ ಶಾ 2000, ಪುಟಗಳು: 92–93, 108–109
 114. ಡೇವಿಡ್‌ 2002, ಪುಟಗಳು: 90–91, 112
 115. ಮಲೆಕ್‌ ಇನ್‌ ಶಾ 2000, ಪು. 113
 116. ಡೇವಿಡ್‌ 2002, ಪು. 92
 117. ಸೈಡ್‌ಮೆಯರ್‌, ಸ್ಟೀಫನ್‌, "ದಿ ಫರ್ಸ್ಟ್ ಇಂಟರ್‌ಮೀಡಿಯೆಟ್‌ ಪೀರಿಯೆಡ್". ಇನ್‌ ಶಾ 2000, ಪು. 124
 118. ೧೧೮.೦ ೧೧೮.೧ ಡೇವಿಡ್‌ 2002, ಪು. 154–156
 119. ಡೇವಿಡ್‌ 2002, ಪುಟಗಳು: 181–184, 186; ಆಸ್‌ಮನ್‌ 2001, ಪುಟಗಳು: 166, 191–192
 120. ಡೇವಿಡ್‌ 2002, ಪುಟಗಳು: 276, 304
 121. ಡೇವಿಡ್‌ 2002, ಪುಟಗಳು: 215–218, 238
 122. ವ್ಯಾನ್‌ ಡಿಕ್‌, ಜಾಕೋಬಸ್‌, "ದಿ ಅಮರ್ನ ಪೀರಿಯೆಡ್ ಆಂಡ್ ಲೇಟರ್‌ ನ್ಯೂ ಕಿಂಗ್‌ಡಮ್‌". ಇನ್‌ ಶಾ 2000, ಪುಟಗಳು: 287, 311
 123. ಡೇವಿಡ್‌ 2002, ಪುಟಗಳು: 238–239
 124. ವ್ಯಾನ್‌ ಡಿಕ್, ಇನ್‌ ಶಾ 2000, ಪುಟಗಳು: 289, 310–312; ಆಸ್‌ಮನ್‌ , ಇನ್‌ ಸಿಂಪ್ಸನ್‌ 1989, ಪುಟಗಳು: 72–79
 125. ಡೇವಿಡ್‌ 2002, ಪುಟಗಳು: 312–317
 126. ವಿಲ್ಕಿನ್‌ಸನ್‌ 2003, ಪುಟಗಳು: 51, 146–149
 127. ೧೨೭.೦ ೧೨೭.೧ ಪೀಕಾಕ್‌, ಡೇವಿಡ್‌ , "ದಿ ರೋಮನ್ ಪೀರಿಯೆಡ್", ಇನ್‌ ಶಾ 2000, ಪುಟಗಳು: 437–438
 128. ಡೇವಿಡ್‌ 2002, ಪುಟಗಳು: 325–328
 129. ಡೇವಿಡ್‌ 2002, ಪು. 326
 130. ಫ್ರಾಂಕ್‌ಫರ್ಟೆ 1998, ಪುಟಗಳು: 23–30
 131. ಆಸ್‌ಮನ್‌ 2001, ಪು. 392; ಹೊರ್ನುಂಗ್‌ 2001, ಪುಟಗಳು: 81, 195
 132. ಹೊರ್ನುಂಗ್‌ 2001, ಪುಟಗಳು: 1, 9–11, 73–75
 133. ಹೊರ್ನುಂಗ್‌ 2001, ಪು. 75; ಫ್ಲೆಮಿಂಗ್‌ ಮತ್ತು ಲೋಥಿಯನ್ 1997, ಪುಟಗಳು: 133–136
 134. ಮೆಲ್ಟನ್‌ 2009, ಪುಟಗಳು: 841, 847, 851, 855

ಉಲ್ಲೇಖಿಸಲ್ಪಟ್ಟ ಕೃತಿಗಳು[ಬದಲಾಯಿಸಿ]

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • ಶುಲ್ಜ್‌ ಆರ್‌ ಮತ್ತು ಎಂ. ಸೈಡೆಲ್ "ಈಜಿಪ್ತ್‌‌: ದಿ ವರ್ಲ್ಡ್ ಆಫ್ ದಿ ಫೇರೋಸ್‌ ". ಕೋನೆಮನ್‌, ಕೊಲೊನ್‌ 1998. ಐಎಸ್‌ಬಿಎನ್ 3-89508-913-3
 • ಬಜ್‌ ಇ.ಎ. ವ್ಯಾಲಿಸ್, "ಈಜಿಪ್ತಿಯನ್ ರಿಲಿಜನ್ : ಈಜಿಪ್ತಿಯನ್ ಐಡಿಯಾಸ್ ಆಫ್‌ ದಿ ಫ್ಯೂಚರ್ ಲೈಫ್‌ (ಲೈಬ್ರರಿ ಆಫ್‌ ದಿ ಮಿಸ್ಟಿಕ್ ಆರ್ಟ್ಸ್)". ಸಿಟಾಡೆಲ್ ಪ್ರೆಸ್. ಆಗಸ್ಟ್‌ 1, 1991. ಐಎಸ್‌ಬಿಎನ್‌ 0-8065-1229-6.
 • ಕ್ಲಾರಿಸ್ಸಿ, ವಿಲ್ಲಿ; ಸ್ಕೂರ್ಸ್, ಅಂಟೂನ್‌; ವಿಲೆಮ್ಸ್, ಹರ್ಕೊ; ಕ್ವೇಗ್‌ಬ್ಯೆರ್‌, ಜಾನ್, "ಈಜಿಪ್ತಿಯನ್ ರಿಲಿಜನ್: ದಿ ಲಾಸ್ಟ್ ಥೌಸಂಡ್ ಈಯರ್ಸ್: ಸ್ಟಡೀಸ್‌ ಡೆಡಿಕೇಟೆಡ್ ಟು ಕ್ವೇಗ್‌ಬ್ಯೆರ್‌", ಪೀಟರ್ಸ್ ಪಬ್ಲಿಶರ್ಸ್, 1998. ಐಎಸ್‌ಬಿಎನ್‌ 9042906693
 • ಹ್ಯಾರಿಸ್, ಗಿರಾಲ್ಡಿನ್, ಜಾನ್ ಸಿಬ್ಬಿಕ್ ಮತ್ತು ಡೇವಿಡ್ ಒ'ಕಾನರ್, "ಗಾಡ್ಸ್‌ ಆಂಡ್ ಫೇರೋಸ್ ಫ್ರಮ್ ಈಜಿಪ್ತಿಯನ್ ಮೈಥಾಲಜಿ ". ಬೆಡ್ರಿಕ್, 1992. ಐಎಸ್‌ಬಿಎನ್‌ 0-87226-907-8
 • ಹಾರ್ಟ್, ಜಾರ್ಜ್‌, "ಈಜಿಪ್ತಿಯನ್ ಮಿಥ್ಸ್ (ಲೆಜೆಂಡರಿ ಪಾಸ್ಟ್‌ ಸೀರೀಸ್)". ಟೆಕ್ಸಾಸ್‌ ವಿ.ವಿ. ಮುದ್ರಣಾಲಯ (1ನೇ ಆವೃತ್ತಿ), 1997. ಐಎಸ್‌ಬಿಎನ್‌ 0-292-72076-9
 • ಓಸ್ಮನ್‌, ಅಹ್ಮದ್‌, ಮೋಸೆಸ್‌ ಆಂಡ್‌ ಅಖೆನಟೆನ್‌. Tದಿ ಸೀಕ್ರೆಟ್‌ ಹಿಸ್ಟರಿ ಆಫ್‌ ಈಜಿಪ್ತ್‌‌ ಅಟ್‌ ದಿ ಟೈಮ್‌ ಆಫ್‌ ದಿ ಎಕ್ಸೋಡಸ್‌ , (ಡಿಸೆಂಬರ್‌ 2002, ಇನ್ನರ್‌ ಟ್ರೆಡಿಶನ್ಸ್ ಇಂಟರ್‌ನ್ಯಾಶನಲ್‌ ಲಿಮಿಟೆಡ್‌) ಐಎಸ್‌ಬಿಎನ್‌ 1-59143-004-6
 • ಬಿಲೊಲೊ, ಮುಬಬಿಂಜ್‌ , ಲೆಸ್‌ ಕಾಸ್ಲೋ-ಥಿಯಾಲಜೀಸ್‌ ಫಿಲಾಸಫಿಕ್ವಿಸ್‌ ಡೀಹೆಲಿಯೊಫಿಲಿಸ್ ಎಟ್ ಡಿಹೆರ್ಮೊಪೊಲಿಸ್ ಎಸೈ ಡೆ ಥೀಮಾಟೈಸೇಶನ್‌ ಎಟ್‌ ಡೆ ಸಿಸ್ಟೆಮಟೈಸೇಶನ್‌ , (ಅಕಾಡೆಮಿ ಆಫ್‌ ಆಫ್ರಿಕನ್ ಥಾಟ್‌ ವಿಭಾಗ. I, ಸಂಪುಟ 2), ಕಿನ್ಷಸ ಮ್ಯುನಿಚ್ 1987; ಹೊಸ ಆವೃತ್ತಿ, ಮ್ಯುನಿಚ್-ಪ್ಯಾರಿಸ್‌ 2004.
 • ಬಿಲೊಲೊ, ಮುಬಬಿಂಜ್‌ , "ಲೆಸ್‌ ಕಾಸ್ಲೋ-ಥಿಯಾಲಜೀಸ್‌ ಫಿಲಾಸಫಿಕ್ವಿಸ್‌ ಡೆ ಐ'ಈಜಿಪ್ತ್‌ ಆಂಟಿಕ್‌. ಪ್ರಾಬ್ಲಮ್ಯಾಟಿಕ್, ಪ್ರಿಮಿಸಸ್‌ ಹೆರ್ಮೆನಿಟಿಕ್ಸ್ ಎಟ್‌ ಪ್ರಾಬ್ಲೆಮ್ಸ್ ಮೇಜರ್ಸ್ , (ಅಕಾಡೆಮಿ ಆಫ್‌ ಆಫ್ರಿಕನ್ ಥಾಟ್‌, ವಿಭಾಗ. I, ಸಂಪುಟ. 1)", ಕಿನ್ಷಸ ಮ್ಯುನಿಚ್ 1986; ಹೊಸ ಆವೃತ್ತಿ, ಮ್ಯುನಿಚ್-ಪ್ಯಾರಿಸ್‌ 2003.
 • ಬಿಲೊಲೊ, ಮುಬಬಿಂಜ್‌ , "ಮೆಟಾಫಿಸಿಕ್ ಫೇರೋನಿಕ್ ಐಲೆಮ್‌ ಮಿಲೆನೈರ್ ಎವಿ. ಜೆ. -ಸಿC. (ಅಕಾಡೆಮಿ ಆಫ್‌ ಆಫ್ರಿಕನ್ ಥಾಟ್‌ & ಸಿ.ಎ. ಡಿಒಪ್-ಸೆಂಟರ್ ಫಾರ್ ಈಜಿಪ್ತಾಲಾಜಿಕಲ್ ಸ್ಟಡೀಸ್‌-ಐಎನ್‌ಎಡಿಇಪಿ, ವಿಭಾಗ I, ಸಂಪುಟ. 4)", ಕಿನ್ಷಸ ಮ್ಯುನಿಚ್ 1995 ; ಹೊಸ ಆವೃತ್ತಿ, ಮ್ಯುನಿಚ್-ಪ್ಯಾರಿಸ್‌ 2003.
 • ಬಿಲೊಲೊ, ಮುಬಬಿಂಜ್‌ , "ಲೆ ಕ್ರಿಯೇಟರ್ ಎಟ್ ಲಾ ಕ್ರಿಯೇಶನ್ ಡಾನ್ಸ್‌ ಲಾ ಪೆನ್ಸೆ ಮಂಫೈಟ್‌ ಎಟ್ ಅಲರ್ನೈನ್ನೆ. ಅಪ್ರೋಚ್‌ ಸಿನೊಟಿಕ್ ಡು ಡಾಕ್ಯುಮೆಂಟ್‌ ಫಿಲಾಸೊಫಿಕ್‌ ಡೆ ಮೆಂಫಿಸ್ ಎಟ್‌ ಡು ಗ್ರಾಂಡ್‌ ಹೈಮ್‌ ಥಿಯೊಲಾಜಿಕ್ ಡಿ'ಎಕ್ನಟನ್ , (ಅಕಾಡೆಮಿ ಆಫ್‌ ಆಫ್ರಿಕನ್ ಥಾಟ್‌, ವಿಭಾಗ. I, ಸಂಪುಟ. 2)", ಕಿನ್ಷಸ ಮ್ಯುನಿಚ್ 1988; ಹೊಸ ಆವೃತ್ತಿ, ಮ್ಯುನಿಚ್-ಪ್ಯಾರಿಸ್‌ 2004.
 • ಪಿಂಚ್‌, ಜಿರಾಲ್ಡಿನ್, "ಈಜಿಪ್ತಿಯನ್ ಮೈಥಾಲಜಿ: ಎ ಗೈಡ್‌ ಡು ದಿ ಗಾಡ್ಸ್‌, ಗಾಡೆಸ್‌ ಆಂಡ್‌ ಟ್ರೆಡಿಶನ್ಸ್‌ ಆಫ್‌ ಏನ್ಷಂಟ್ ಈಜಿಪ್ತ್‌‌ ". ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, 2004. ಐಎಸ್‌ಬಿಎನ್‌ 0-19-517024-5.

ಬಾಹ್ಯ ಕೊಂಡಿಗಳು‌[ಬದಲಾಯಿಸಿ]


ಟೆಂಪ್ಲೇಟು:Ancient Egyptian religion footer