ಏಕೀಶ್ವರವಾದ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಏಕೀಶ್ವರವಾದವು ಕೇವಲ ಒಂದೇ ದೇವ ಇರುವುದೆಂದು ಅಥವ ದೇವರುಗಳೆಲ್ಲಾ ಒಂದೇ ಎಂಬ ನಂಬಿಕೆ ಹೊಂದಿರುವುದು.

ಇಸ್ಲಾಂ ಧರ್ಮದಲ್ಲಿ ಏಕೀಶ್ವರವಾದ[ಬದಲಾಯಿಸಿ]

ಇಸ್ಲಾಂ ಧರ್ಮದ ಪ್ರಮುಖ ವಿಶ್ವಾಸಗಳಲ್ಲಿ ಏಕೀಶ್ವರವಾದವು ಒಂದು. ಅದನ್ನು ಏಕದೇವತ್ವ ಕಲ್ಪನೆ ಎಂದೂ ಸಹ ಕರೆಯಲಾಗುತ್ತದೆ. 'ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ ರಸೂಲುಲ್ಲಾಹ್' ಎನ್ನುವುದು ಈ ವಿಶ್ವಾಸದ ತಳಹದಿ. ಅಂದರೆ 'ಅಲ್ಲಾಹ್'ನಲ್ಲದೇ ಬೇರೊಬ್ಬ ದೇವನಿಲ್ಲ ಮುಹಮ್ಮದ್ (ಸ) ರವರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದರ್ಥ. ಇಸ್ಲಾಂ ಧರ್ಮದ ಪ್ರಕಾರ ಸರ್ವ ಲೋಕದ ಸೃಷ್ಟಿಕರ್ತ ಅಲ್ಲಾಹ್ ಮಾತ್ರ. ಹಾಗಾಗಿ ಅವನಿಗಲ್ಲದೇ ಮಾನವರ ಆರಾಧನೆ, ದಾಸ್ಯ,ಭಕ್ತಿಗಳು ಈ ಲೋಕದಲ್ಲಿರುವ ಯಾವುದೇ ನದಿ,ಸಾಗರ, ಪೃಕೃತಿಗಳಾಗಲಿ ಅಥವ ಪ್ರಾಣಿ, ಮನುಷ್ಯರಿಗಾಗಲಿ ಸಲ್ಲತಕ್ಕದ್ದಲ್ಲ. ಮಾನವರ ಪಾಲಿನ ದೇವನೆಂದು ಅವನನ್ನಲ್ಲದೇ ಬೇರಾರನ್ನು ಕರೆದು ಪ್ರಾರ್ಥಿಸುವುದು,ಬೇಡುವುದು ಮಹಾ ಪಾಪವಾಗಿದೆ.