ವಿಷಯಕ್ಕೆ ಹೋಗು

ಆಟಿಪಾಯಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಟಿಯ ಪಾಯಸ

ಕೊಡಗಿನಕೊಡಗು ಕಡೆ ಎಲ್ಲರೂ ಮನೆಯಲ್ಲಿ ಆಟಿಯ ಅಥಾವ ಆಷಾಢ ಸೊಪ್ಪಿನ ಪಾಯಸವನ್ನು ಮಾಡುತ್ತಾರೆ. ಆ ಸಮಯದಲ್ಲಿ ಎಲ್ಲಾ ಮನೆಯಲ್ಲೂ ಆಟಿಯ ಪಾಯಸ ಇದ್ದೇ ಇರುತ್ತದೆ, ಅದರ ಪರಿಮಳ ಎಲ್ಲರಿಗೂ ಬಂದೇ ಬರುತ್ತದೆ.[] ಆಟಿ ಅಥಾವ ಆಷಾಢ ತಿಂಗಳಿನ ೧೮ನೇ ದಿನ ಆಟಿ ಸೊಪ್ಪು ಎನ್ನುವ ಔಷಧೀಯ ಗುಣ ಇರುವ ಆ ಸೊಪ್ಪನ್ನು ನೀರಲ್ಲಿ ಕುದಿಸಿದಾಗ ನೀರು ಕಡು ನೀಲಿ ಬಣ್ಣಕ್ಕೆ ತಿರುಗುತ್ತದೆ.ಆಟಿ ಸೊಪ್ಪಿನಿಂದ ಮಾಡಿದ ಈ ಪಾಯಸಕ್ಕೆ ಕಕ್ಕಡ ಪದಿನೆಟ್ಟ್ ಪಾಯ್ಸ ಎಂದು ಕೊಡಗಿನ ಜನರು ಕರೆಯುತ್ತಾರೆ . ಕಕ್ಕಡ ಅಂದರೆ ಆಟಿ /ಆಷಾಢ ತಿಂಗಳು ಅಥಾವ ಕರ್ಕಾಟಕ ಮಾಸ ಅನ್ನುವ ಅರ್ಥ ಕೂಡಾ ಇದೆ .ಆಟಿ ತಿಂಗಳಲ್ಲಿ ಮಾತ್ರ ಈ ಸೊಪ್ಪನ್ನು ಉಪಯೋಗಿಸುತ್ತಾರೆ. ಪುಷ್ಯ ಮಳೆ ಬರುವಾಗ ಈ ಸೊಪ್ಪಿಗೆ ಔಷಧೀಯ ಅಂಶ ಸೇರುತ್ತದೆ. ಆಟಿ/ಆಷಾಢ ತಿಂಗಳಿನ ಪ್ರಾರಂಭದಿಂದ ೧೮ನೇ ದಿನ ತನಕ ಒಂದೊಂದು ಬಗೆಯ ಔಷಧೀಯ ಅಂಶಗಳು ಈ ಸೊಪ್ಪಿಗೆ ಸೇರುತ್ತದೆ . ಹಾಗಾಗಿ ೧೮ನೇ ದಿನದಂದು ಈ ಸೊಪ್ಪನ್ನು ಪುಡಿ ಪುಡಿ ಮಾಡಿದಾಗ ಪರಿಮಳ ಬರುವುದಕ್ಕೆ ಪ್ರಾರಂಭವಾಗುತ್ತದೆ. ಆವಾಗ ಈ ಸೊಪ್ಪಿನಿಂದ ಪಾಯ್ಸ, ಹಲ್ವಾ ಮುಂತಾದ ಉತ್ಪನ್ನಗಳನ್ನು ಮಾಡುತ್ತಾರೆ. ಈ ಸೊಪ್ಪಿನ ರಸದಿಂದ ಶರೀರಕ್ಕೆ ಬೇಕಾದ ಶಕ್ತಿ ಸಿಗುತ್ತದೆ. ಶೀತ, ಜ್ವರ ಮುಂತಾದ ರೋಗಗಳಿಗೆ ಔಷಧೀಯವಾಗಿದೆ.

ಆಟಿ ಪಾಯಸಕ್ಕೆ ಬೇಕಾಗುವ ಸಾಮಾಗ್ರಿಗಳು

[ಬದಲಾಯಿಸಿ]
  • ಆಟಿಯ ಸೊಪ್ಪು
  • ನೀರು
  • ಬಿಳಿ ಅಕ್ಕಿ
  • ಬೆಲ್ಲ
  • ತುಪ್ಪ
  • ಗೇರು ಬೀಜ
  • ಏಲಕ್ಕಿ

ಆಟಿ ಸೊಪ್ಪಿನ ಪಾಯಸ ಮಾಡುವ ವಿಧಾನ

[ಬದಲಾಯಿಸಿ]
ಆಟಿ ಸೊಪ್ಪು

ಮೊದಲಿಗೆ ಪಾತ್ರೆಯಲ್ಲಿ ಅರ್ಧ ನೀರು ಹಾಕಿ ಸೊಪ್ಪನ್ನು ಬೇಯಲು ಇಡಬೇಕು , ಸೊಪ್ಪು ಬೆಂದ ನಂತರ ನೀರು ನೀಲಿ ಬಣ್ಣಕ್ಕೆ ತಿರುಗುತ್ತದೆ. ಆ ನೀರನ್ನು ಸೋಸಿ, ಆ ನೀರಿಗೆ ಬಿಳಿ ಅಕ್ಕಿಯನ್ನು ತೊಳೆದು ಹಾಕಬೇಕು. ರುಚಿಗೆ ತಕ್ಕಸ್ಟು ಉಪ್ಪು ಹಾಕಿ, ಅದಕ್ಕೆ ಬೆಲ್ಲ ಹಾಕಬೇಕು. ಆ ಬಳಿಕ ಅಕ್ಕಿಯನ್ನು ಚೆನ್ನಾಗಿ ಬೇಯಿಸಿ ಅದಕ್ಕೆ, ಒಗ್ಗರಣೆ ಹಾಕುವ ಚಮಚದಲ್ಲಿ ಅದಕ್ಕೆ ೨ ಚಮಚ ತುಪ್ಪ ಹಾಕಿ, ಅದಕ್ಕೆ ಗೇರು ಬೀಜ ಹಾಕಿ, ಬಿಸಿ ಮಾಡಿ ಪಾಯಸಕ್ಕೆ ಹಾಕಬೇಕು. ಅದರ ಮೇಲೆ ತೆಂಗಿನ ಕಾಯಿಯನ್ನು ಹಾಕಿದರೆ ಇನ್ನೂ ಒಳ್ಳೆಯದಾಗುತ್ತದೆ. ಇದಕ್ಕೆ ತುಪ್ಪ, ಜೇನು ಹನಿ ಹಾಕಿ ಚೆನ್ನಾಗಿ ತಿನ್ನಬಹುದು.

ಅಟಿ ಸೊಪ್ಪಿನ ಪಾಯಸ ಮಾಡುವ ಪ್ರದೇಶಗಳು

[ಬದಲಾಯಿಸಿ]

ಕೊಡಗಿನಲ್ಲಿ ಅಂದರೆ ಮಡಿಕೇರಿ, ಸೋಮವಾರಪೇಟೆ ಮತ್ತು ಕುಶಾಲನಗರ ಪ್ರದೇಶಗಳಲ್ಲಿ ಆಟಿ ಸೊಪ್ಪಿನ ಪಾಯಸ ಮಾಡುವುದು ಸರ್ವೇ ಸಾಮಾನ್ಯ. ಆದರೆ ತುಳುನಾಡಿನಲ್ಲೂ ಆಟಿ ಪಾಯಸ ಮಾಡುವ ಕೆಲವು ಪ್ರದೇಶಗಳು ಈ ರೀತಿಯಲ್ಲಿ ಇವೆ. ಸುಳ್ಯ ಪುತ್ತೂರು ಮತ್ತು ಉಬರ್/ಉಪ್ಪಿನಂಗಡಿ

ನಂಬಿಕೆ

[ಬದಲಾಯಿಸಿ]

ಆಟಿಯ ಸೊಪ್ಪಿನ ಪಾಯಸ ಕುಡಿದರೆ ಯಾವ ಕಾಯಿಲೆ ಕೂಡಾ ಬರುದಿಲ್ಲ. ಹಾಗೆಯೇ ೧೮ ಬಗೆಯ ಔಷಧೀಯ ಗುಣಗಳು ಅಟಿ ತಿಂಗಳಿನ ೧೮ ದಿವಸದಲ್ಲಿ ಇರುತ್ತದೆಯಂತೆ.

ಉಲ್ಲೇಖ

[ಬದಲಾಯಿಸಿ]
"https://kn.wikipedia.org/w/index.php?title=ಆಟಿಪಾಯಸ&oldid=1240736" ಇಂದ ಪಡೆಯಲ್ಪಟ್ಟಿದೆ