ಅರ್ನಬ್ ಗೋಸ್ವಾಮಿ
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |
ಅರ್ನಬ್ ಗೋಸ್ವಾಮಿ | |
---|---|
ಜನನ | ೯ ಅಕ್ಟೋಬರ್ ೧೯೭೨ ಅಸ್ಸಾಮ್,ಭಾರತ. |
ವೃತ್ತಿ | ಸುದ್ದಿಕಾರ ಮತ್ತು ಮುಖ್ಯ ಸಂಪಾದಕ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೌಂಟ್ ಸೇಂಟ್ ಮೇರಿ ಶಾಲೆ, ದೆಹಲಿ. ಸಂತ ಅಂಟೋನಿ ಕಾಲೇಜ್, ಆಕ್ಸ್‌ಫರ್ಡ್. |
ಅರ್ನಬ್ ಗೋಸ್ವಾಮಿ ಭಾರತೀಯ ಪತ್ರಕಾರ ಹಾಗು 'ಟೈಮ್ಸ್ ನೌ' ಮತ್ತು 'ಇ.ಟಿ.ನೌ' ವಾರ್ತಾವಾಹಿನಿಗಳ ಮುಖ್ಯ ಸಂಪಾದಕ. ಈ ಎರಡೂ ವಾಹಿನಿಗಳಲ್ಲಿ ಸುದ್ಧಿ ನಿರೂಪಕರಾಗಿಯೂ ಇದ್ದಾರೆ. ಪ್ರತಿದಿನ ರಾತ್ರಿ ೯:೦೦ ಗಂಟೆಗೆ "ನ್ಯೂಸ್ ಅವರ್" ಎಂಬ ವಾಗ್ವಿವಾದವನ್ನು ಇವರು ನಿರೂಪಿಸುತ್ತಾರೆ. ಇದಲ್ಲದೆ "ಫ್ರಾಂಕ್ಲಿ ಸ್ಪೀಕಿಂಗ್" ಎಂಬ ಖಾಸಗಿ ದೂರದರ್ಶನ ಕಾರ್ಯಕ್ರಮವನ್ನೂ ನಿರೂಪಿಸುತ್ತಾರೆ. ಇವರಿಗೆ ಬಹಳಷ್ಟು ಪುರಸ್ಕಾರಗಳು ದೊರಕಿವೆ. ಇವರು "ಕಂಬಾಟಿಂಗ್ ಟೆರರಿಸ್ಮ್ ; ದ ಲೀಗಲ್ ಚಾಲೆಂಜ್" ಎಂಬ ಪುಸ್ತಕವನ್ನು ಬರೆದಿರುವರು.
ಜನನ ಮತ್ತು ಶಿಕ್ಷಣ
[ಬದಲಾಯಿಸಿ]ಗೋಸ್ವಾಮಿ ೯ ಅಕ್ಟೋಬರ್ ೧೯೭೩ರಂದು ಗೌಹಾಟಿ, ಅಸ್ಸಾಮಿನಲ್ಲಿ ವಕೀಲ ಮನೆತನಕ್ಕೆ ಜನಿಸಿದರು. ಇವರ ಅಜ್ಜ ರಜನಿಕಾಂತ ಗೋಸ್ವಾಮಿ ವಕೀಲರೂ, ಸ್ವಾತಂತ್ರ್ಯ ಚಳುವಳಿಯಲ್ಲಿ ಮುಖ್ಯ ಪಾತ್ರ ವಹಿಸಿದ ಕಾಂಗ್ರೆಸ್ಸ್ ನಾಯಕರೂ ಆಗಿದ್ದರು. ಇನ್ನೊಬ್ಬ ಅಜ್ಜ ಗೌರಿಶಂಕರ್ ಭಟ್ಟಾಚಾರ್ಯ ಅಸ್ಸಾಮಿನಲ್ಲಿ ಬಹಳಷ್ಟು ವರುಶಗಳ ಕಾಲ ವಿರೋಧ ಪಕ್ಷದ ನಾಯಕರಾಗಿದ್ದ, ಅಸ್ಸಾಮ್ ಸಾಹಿತ್ಯ ಸಭೆಯ ಪುರಸ್ಕಾರ ಪಡೆದ ಲೇಖಕರು. ಇವರ ತಂದೆ ಕರ್ನಲ್ ಮನೊರಂಜನ್, ತಾಯಿ ಸುಪ್ರಭ. ಮನೊರಂಜನ್ ರವರು ಭಾರತೀಯ ಜನತಾ ಪಕ್ಷದ ಪ್ರಮುಖ ಸದಸ್ಯರು. ೧೯೯೮ರ ಲೋಕ ಸಭೆಯ ಚುನಾವಣೆಯಲ್ಲಿ ಅಸ್ಸಾಮಿನ ಬಿ.ಜೆ.ಪಿ ಅಭ್ಯರ್ಥಿಯಾಗಿದ್ದರು. ದುರಾದೃಷ್ಠವಶಾತ್ ಅವರು ಗೆಲ್ಲಲಿಲ್ಲ. ಸೇನಾಧಿಕಾರಿಯ ಮಗನಾಗಿ ಅರ್ನಬ್ ಬಹಳಶ್ಟು ಪಟ್ಟಣಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ತಮ್ಮ ೧೦ನೇ ತರಗತಿಯ ಶಿಕ್ಷಣವನ್ನು ಮೌಂಟ್ ಸೇಂಟ್ ಮೇರಿ ಶಾಲೆ, ದೆಹಲಿಯಲ್ಲಿ ಮುಗಿಸಿ, ೧೨ನೇ ತರಗತಿಯನ್ನು ಜಬಲ್ಪುರ್ ಕಂಟೋನಮೆಂಟಿನ ಕೇಂದ್ರೀಯ ವಿದ್ಯಾಲಯದಿಂದ ಮುಗಿಸಿದರು. ಹಿಂದು ಕಾಲೇಜಿನಿಂದ ತಮ್ಮ ಪದವಿ ಶಿಕ್ಷಣ ಸಮಾಜಶಾಸ್ತ್ರದಲ್ಲಿ ಮುಗಿಸಿ ಉನ್ನತ ದರ್ಜೆಯ ಶಿಕ್ಷಣವನ್ನು ಅಕ್ಸ್ಫೊರ್ಡ್ ಯುನಿವರ್ಸಿಟಿ ( ಸಂತ ಅಂಟೊನಿ ಕಾಲೀಜು, ೧೯೯೪) ಇಂದ ಮುಗಿಸಿಕೊಂಡರು. ಇವರು ೨೦೦೦ದಲ್ಲಿ ಕೇಂಬ್ರಿಡ್ಜ್ ಯುನಿವರ್ಸಿಟಿ (ಸಿಡ್ನಿ ಸಸ್ಸೆಕ್ಸ್ ಕಾಲೇಜ್) ಯ ಅಂತರರಾಷ್ಟ್ರೀಯ ಘಟನಾ ವಿಭಾಗದಲ್ಲಿ ಹೋಗಿ-ಬರುವ ಪಂಡಿತರಾಗಿದ್ದರು.
ವೃತ್ತಿಜೀವನ
[ಬದಲಾಯಿಸಿ]ಎನ್.ಡಿ.ಟಿ.ವಿಯನ್ನು ಸೇರುವ ಮುನ್ನ ಗೋಸ್ವಾಮಿ ಕಲ್ಕತ್ತಾದ 'ದ ಟೆಲೆಗ್ರಾಫ್' ಪತ್ರಿಕೆಯಲ್ಲಿ ಒಂದು ವರುಷದ ಕಾಲ ಕೆಲಸ ಮಾಡುತ್ತಿದ್ದರು. ೧೯೯೫ನಲ್ಲಿ ಎನ್.ಡಿ.ಟಿ.ಇಯನ್ನು ಸೇರಿ ತಮ್ಮ ದೂರದರ್ಶನದ ಕಾರ್ಯಕಾರವನ್ನು ಪ್ರಾರಂಭಿಸಿದರು. ದಿನನಿತ್ಯದ ಸುದ್ದಿಯನ್ನು, ಹಾಗು ಡಿ.ಡಿ.ಮೆಟ್ರೊವಿನ ರಾತ್ರಿಯ ಸುದ್ದಿ ಕಾರ್ಯಕ್ರಮ 'ನ್ಯೂಸ್ ಟುನೈಟ್' ವನ್ನು ನಡೆಸಿಕೊಡುತ್ತಿದ್ದರು.ನಂತರ, ಸುದ್ದಿ ಸಂಪಾದಕರಾಗಿ ಎನ್.ಡಿ ಟಿ.ವಿಯ ಮೂಲಭೂತ ತಂಡದ ಭಾಗವಾದರು. ಇವರು ಕಾರ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಈ ವಾಹಿನಿ ೨೪/೭ ವರ್ತಾಪ್ರಸಾರ ಪ್ರಾರಂಭಿಸಿತು. ಹಿರಿಯ ಸಂಪಾದಕರಾಗಿದ್ದ ಗೋಸ್ವಾಮಿ ವಾಹಿನಿಯಲ್ಲಿ ತೋರುತ್ತಿದ್ದ ಕಾರ್ಯಕ್ರಮಗಳ ನಡುವಿಕೆಗೆ ಜವಾಬ್ದಾರರಾಗಿದ್ದರು. ಪ್ರತಿ ರಾತ್ರಿ ಇವರು 'ನ್ಯೂಸ್ ಅವರ್'ಅನ್ನು ನಡೆಸುತ್ತಿದ್ದರು. ಇವರು ವಾಹಿನಿಯ ವಿಖ್ಯಾತ ಸುದ್ಧಿವಿಶ್ಲೇಷಣಾ ಕಾರ್ಯಕ್ರಮ "ನ್ಯೂಸ್ ನೈಟ್" ನಡೆಸಿದ್ದಕ್ಕೆ, ಏಶಿಯನ್ ಟೆಲೆವಿಷನ್ ಅವಾರ್ಡ್ಸ್ ೨೦೦೪ನಲ್ಲಿ ಇವರಿಗೆ 'ಬೆಸ್ಟ್ ನ್ಯೂಸ್ ಆಂಕರ್' ಪ್ರಶಸ್ತಿ ನೀಡಿತು. ಗೋಸ್ವಾಮಿ ೨೦೦೬ರಿಂದ 'ಟೈಮ್ಸ್ ನೌ'ನ ಮುಖ್ಯ ಸಂಪಾದಕರು ಹಾಗು ಸುದ್ಧಿನಿರೂಪಕರು ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ "ನ್ಯೂಸ್ ಅವರ್" Archived 25 December 2015[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಪ್ರತಿದಿನ ರಾತ್ರಿ ೯:೦೦ಕ್ಕೆ ನೇರಪ್ರಸಾರವಾಗುತ್ತದೆ. ಇಂದಿನ ವರೆಗು ಈ ಕರ್ಯಕ್ರಮದಲ್ಲಿ ಪರ್ವೇಜ್ ಮುಷಾರಫ಼್ ಹಾಗು ರಾಹುಲ್ ಬಜಾಜ್ ಮೊದಲಾದ ಪ್ರಮುಖ ವ್ಯಕ್ತಿಗಳು ಬಂದು ಮತಾನಡಿರುವರು. ಇವರ ಅತ್ಯುತ್ತಮ ಸಾಧನೆ ಎಂದರೆ, ಮುಂಬೈನ ಮೇಲೆ ಧಾಳಿ ಆಗುತ್ತಿದ್ದಾಗ, ಅಂತರವಿಲ್ಲದೆ ೬೫ ಘಂಟೆಗಳ ಕಾಲ ನೇರಪ್ರಸಾರ ನಡೆಸಿದ್ದು. ಇದಲ್ಲದೆ, ಇವರು ಇನ್ನೊಂದು ಕಾರ್ಯಕ್ರಮವನ್ನು ನಡೆಸುತ್ತಾರೆ - "ಫ಼್ರಾಂಕ್ಲಿ ಸ್ಪೀಕಿಂಗ್ ವಿತ್ ಅರ್ನಬ್". ಈ ಕಾರ್ಯಕ್ರಮದಲ್ಲಿ ಬಹಳ ಪ್ರಮುಖ ವ್ಯಕ್ತಿಗಳೊಡ್ನೆ ಮಾತನಾಡಿದ್ದಾರೆ. ಈದರಲ್ಲಿ ಬಂದ ಕೆಲವರನ್ನು ಹೆಸರಿಸಲು - ಬೆನೆಜ಼ಿರ್ ಭುಟ್ಟೊ, ಯು.ಕೆಯ ಮಾಜಿ ಪ್ರಧಾನ ಮಂತ್ರಿ ಗಾರ್ಡನ್ ಬ್ರೌನ್, ಅಫ಼್ಘಾನಿಸ್ತಾನಿನ ಮಾಜಿ ಪ್ರಧಾನ ಮಂತ್ರಿ ಹಮಿದ್ ಕರ್ಜ಼ೈ, ದಲೈ ಲಾಮ, ಅಮೇರಿಕಾದ ಮಾಜಿ ರಾಜ್ಯಕಾರ್ಯಾದರ್ಶಿ ಹಿಲರಿ ಕ್ಲಿಂಟನ್, ಸಚಿನ್ ತೆಂಡೂಲ್ಕರ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ನರೇಂದ್ರ ಮೋದಿ, ನಿತೀಶ್ ಕುಮಾರ್ ಮುಂತಾದ ಪ್ರಮುಖ ವ್ಯಕ್ತಿಗಳು. ಇವರು ಬರೆದಿರುವ ಪುಸ್ತಕದ ಹೆಸಾರು 'ಕಂಬಾಟಿಂಗ್ ಟೆರರಿಸ್ಮ್ : ದ ಲೀಗಲ್ ಚಾಲೆಂಜ್' (ಭಯೋತ್ಪಾದನೆಯ ವಿರುದ್ಧ ಹೋರಾಟ : ಒಂದು ಕಾನೂನುಬದ್ಧವಾದ ಸವಾಲ್)
"ನ್ಯೂಸ್ ಹೌರ್"ನ ಸ್ವೀಕರಿಕೆ
[ಬದಲಾಯಿಸಿ]ಗೋಸ್ವಾಮಿಯವರ ಚೂಪು ಮಾತುಗಳು ಎಶ್ಟೋ ಜನರ ತೆಗಳಿಕೆಗೆ ಪಾತ್ರವಾಗಿವೆ. ಪ್ರಖ್ಯಾತ ಸಾಪ್ತಾಹಿಕ ಪತ್ರಿಕೆ 'ಔಟ್ಲುಕ್' ಇವರನ್ನು 'ದೂರದರ್ಶನ ಸುದ್ಧಿಯ ಕೊಲೆಗಾರ' ಎಂದು ಕರೆಯಿತು. ಆದರೆ ಅಸ್ಸಾಮ್ ಪತ್ರಿಕೋದ್ಯಮ ವೇದಿಕೆ "ಒಂದು ಮಾಧ್ಯಮದ ಸಂಪಾದಕನನ್ನು ಸುದ್ಧಿಯ ಕೊಲೆಗಾರನೆಂದು ಕರೆಯುವುದು ಅನಾವಶ್ಯಕ", ಎಂದು, "ಭಾರತೀಯ ಪತ್ರಿಕೋದ್ಯಮ ಒಂದು ಅರ್ನಬ್ ಗೋಸ್ವಾಮಿ ಬಂದು ಕೆಡೆಸುವಷ್ಟು ನಿಶ್ಶಕ್ತವೇ?" ಎಂದು ಪ್ರಶ್ನಿಸಿತು. ತಮ್ಮ ಒಂದು ಸಂಭಾಷಣೆಯಲ್ಲಿ ಗೋಸ್ವಾಮಿ "ನಾನು ಅನುಸರಿಸುವ ಪತ್ರಿಕೋದ್ಯಮ ಅನಿಸಿಕೆಯ ಪತ್ರಿಕೋದ್ಯಮ. ನನ್ನ ಕಠೋರ ಮಾತುಗಳಿಂದ ಸಮಾಜದಲ್ಲಿ ಬದಲಾವಣೆ ಬರುವಂತಿದ್ದರೆ, ನಾನು ಅಲಿಪ್ತಿಕೆಯ ಗೋಡೆಯ ಹಿಂದೆ ಅವುತುಕೊಳ್ಳುವುದಿಲ್ಲಾ", ಎಂದು ಹೇಳಿದರು.
ಪ್ರಶಸ್ತಿಗಳು
[ಬದಲಾಯಿಸಿ]- ೨೦೦೩ - ಏಶಿಯನ್ ದೂರದರ್ಶಣ ಪ್ರಶಸ್ತಿಗಳು - ಬೆಸ್ಟ್ ಆಂಕರ್
- ೨೦೦೭ - ಸಾಮಾಜಿಕ ಯುವಸಾಧಕ ಪ್ರಶಸ್ತಿ (ಮಾಧ್ಯಮದಲ್ಲಿ)
- ೨೦೦೮ - ಐ.ಎನ್.ಬಿ.ಎ. ಪ್ರಶಸ್ತಿ - ನವೀನ ಮುಖ್ಯ ಸಂಪಾದಕ
- ೨೦೧೦ - ಅಸ್ಸಾಮೀಸ್ ಅಫ಼್ ದ ಇಯರ್ ಪ್ರಶಸ್ತಿ
- ೨೦೧೦ - ರಾಮನಾಥ ಗೊಎಂಕಾ ಪ್ರಶಸ್ತಿ
- ೨೦೧೨ - ಇ.ಎನ್.ಬಿ.ಎ ಪ್ರಶಸ್ತಿ - ಅತ್ಯುತ್ತಮ ಮುಖ್ಯ ಸಂಪಾದಕ
ಹೊರಗಿನ ಕೊಂಡಿಗಳು
[ಬದಲಾಯಿಸಿ]- http://www.caravanmagazine.in/reportage/fast-and-furious?page=0,10
- http://www.business-standard.com/article/beyond-business/arnab-goswami-ekta-kapoor-of-tv-news-114022100939_1.html