ಅರಬಿತಿಟ್ಟು ವನ್ಯಜೀವಿಧಾಮ

Coordinates: 12°11′41″N 76°14′32″E / 12.19461°N 76.24231°E / 12.19461; 76.24231
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರಬಿತಿಟ್ಟು
ವನ್ಯಜೀವಿಧಾಮ
ಅರಣ್ಯ
ಅರಬಿತಿಟ್ಟು is located in Karnataka
ಅರಬಿತಿಟ್ಟು
ಅರಬಿತಿಟ್ಟು
Location in Karnataka, India
Coordinates: 12°11′41″N 76°14′32″E / 12.19461°N 76.24231°E / 12.19461; 76.24231
Country ಭಾರತ
Stateಕರ್ನಾಟಕ
DistrictMysore
Elevation
೭೯೨ m (೨,೫೯೮ ft)
ಭಾಷೆ
 • ಅಧಿಕೃತಕನ್ನಡ
Time zoneUTC+5:30 (IST)
PIN
571 105
Telephone code08222
Websitewww.aranya.gov.in

ಅರಬಿತಿಟ್ಟು ವನ್ಯಜೀವಿಧಾಮವು ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿದೆ ಮತ್ತು ಇದು ರಾಜ್ಯದ ಪ್ರಮುಖ ವನ್ಯಜೀವಿಧಾಮವಾಗಿದೆ.

ಭೌಗೋಳಿಕ ಲಕ್ಷಣ ಮತ್ತು ವಿಸ್ತೀರ್ಣ[ಬದಲಾಯಿಸಿ]

ಅರಬಿತಿಟ್ಟು ವನ್ಯಜೀವಿಧಾಮದ ವಿಸ್ತೀರ್ಣವು ೧೩.೫ ಚ.ಕಿ.ಮೀ ಇದ್ದು ದಕ್ಷಿಣ ಕರ್ನಾಟಕದಲ್ಲಿದೆ, ಇಲ್ಲಿಯ ಮಣ್ಣು ಕಪ್ಪುಮಣ್ಣಾಗಿದ್ದು ಫಲವತ್ತತ್ತೆಯಿಂದ ಕೂಡಿದೆ ಮತ್ತು ಸಮುದ್ರ ಮಟ್ಟದಿಂದ ಸುಮಾರು ೨೭೦೦ ಅಡಿ ಎತ್ತರವಿದೆ.[೧]

ಹವಾಮಾನ[ಬದಲಾಯಿಸಿ]

ಅರಬಿತಿಟ್ಟು ವನ್ಯಜೀವಿಧಾಮ ಮಳೆ ನೆರಳಿನ ಪ್ರದೇಶವಾಗಿರುವುದರಿಂದ ವಾರ್ಷಿಕವಾಗಿ ಸುಮಾರು ೧೦೦-೧೨೦ ಸೆಂ.ಮೀ ಮಳೆಯಾಗುತ್ತದೆ ಮತ್ತು ಸಮಶೀತೋಷ್ಣ ವಲಯವಾಗಿರುದರಿಂದ ವರ್ಷವಿಡಿ ವಾತವರಣವು ಉತ್ತಮವಾಗಿರುತ್ತದೆ.

ಜೀವ ವೈವಿಧ್ಯತೆ[ಬದಲಾಯಿಸಿ]

ಅರಬಿತಿಟ್ಟು ವನ್ಯಜೀವಿಧಾಮದಲ್ಲಿ ಹೆಚ್ಚಾಗಿ ಕಂಡುಬರುವ ಮರಗಳೆಂದರೆ ಹರ್ಕ್ಯೂಲೆಸ್, ನೀಲಗಿರಿ, ತೇಗ, ರಬ್ಬರ್ ಮತ್ತು ಕಂಡುಬರುವ ಇತರ ಮರಗಳೆಂದರೆ ಶ್ರೀಗಂಧ, ಬೀಟೆ, ಮ್ಯಾಂಗ್ರೋವ್(ಆಲ) ಮತ್ತು ಹೊನ್ನೆ. ಈ ಕಾಡಿನಲ್ಲಿ ಕಂಡುಬರುವ ಪ್ರಾಣಿಗಳೆಂದರೆ ಚಿರತೆ, ಮೊಲ, ಜಿಂಕೆ, ನರಿ, ಕಡವೆ ಮತ್ತು ತೋಳ. ಇಲ್ಲಿ ಕಂಡುಬರುವ ಪಕ್ಷಿಗಳೆಂದರೆ ನವಿಲು, ಕೊಕ್ಕರೆ, ಮಿಂಚುಳ್ಳಿ, ಗುಬ್ಬಚ್ಚಿ, ನೀಲಕಂಠ, ಹದ್ದು ಮತ್ತು ಗರುಡ. ಅರಬಿತಿಟ್ಟು ವನ್ಯಜೀವಿಧಾಮದಿಂದ ೪ ಕಿ.ಮೀ ದೂರದಲ್ಲಿ ಲಕ್ಷ್ಮಣತೀರ್ಥ ನದಿಯು ಹರಿಯುತ್ತದೆ.[೨]

ಸಾರಿಗೆ ಸಂಪರ್ಕ[ಬದಲಾಯಿಸಿ]

ಅರಬಿತಿಟ್ಟು ವನ್ಯಜೀವಿಧಾಮಕ್ಕೆ ಬರಲು ನೇರವಾಗಿ ಉತ್ತಮ ಬಸ್ ಸೌಲಭ್ಯವಿಲ್ಲ, ಆದರೆ ಬಿಳಿಕೆರೆ, ಹುಣಸೂರು ಮತ್ತು ಹೊಸರಾಮನಹಳ್ಳಿಯಿಂದ ಉತ್ತಮವಾದ ಬಸ್ ಸೌಲಭ್ಯವಿದೆ. ಬೆಂಗಳೂರು, ಮೈಸೂರಿನಿಂದ ಬರುವವರು ಬಿಳಿಕೆರೆಗೆ ಬಂದು ಅಲ್ಲಿಂದ ಖಾಸಗಿ ವಾಹನದ ಮೂಲಕ ಬರಬಹುದು, ಹಾಸನ, ಚಿಕ್ಕಮಗಳೂರಿನಿಂದ ಬರುವವರು ಹೊಸರಾಮನಹಳ್ಳಿಗೆ ಬಂದು ಅಲ್ಲಿಂದ ಖಾಸಗಿ ವಾಹನದ ಮೂಲಕ ಬರಬಹುದು ಮತ್ತು ಮಂಗಳೂರು, ಹುಬ್ಬಳ್ಳಿಯಿಂದ ಬರುವವರು ಹುಣಸೂರಿಗೆ ಬಂದು ಅಲ್ಲಿಂದ ಖಾಸಗಿ ವಾಹನದ ಮೂಲಕ ಬರಬಹುದು. ಸ್ವಂತ ವಾಹನದ ಮೂಲಕ ಬರುವುದು ಒಳಿತು.
ಅರಬಿತಿಟ್ಟು ಈ ಕೆಳಕಂಡ ಸ್ಥಳಗಳಿಂದ ಇರುವ ದೂರ,

೧.ಮೈಸೂರು - ೩೮ ಕಿ.ಮೀ
೨.ಬೆಂಗಳೂರು - ೧೯೦ ಕಿ.ಮೀ
೩.ಬಿಳಿಕೆರೆ - ೬ ಕಿ.ಮೀ
೪.ಹಾಸನ - ೮೫ ಕಿ.ಮೀ
೫.ಚಿಕ್ಕಮಗಳೂರು - ೧೭೫ ಕಿ.ಮೀ
೬.ಹೊಸರಾಮನಹಳ್ಳಿ - ೭ ಕಿ.ಮೀ
೭.ಮಂಗಳೂರು - ೧೬೦ ಕಿ.ಮೀ
೮.ಹುಣಸೂರು - ೧೬ ಕಿ.ಮೀ
೯.ಕೆ.ಆರ್.ನಗರ - ೧೭ ಕಿ.ಮೀ
೧೦.ಹುಬ್ಬಳ್ಳಿ - ೩೧೦ ಕಿ.ಮೀ

ಹತ್ತಿರದ ವಿಮಾನ ನಿಲ್ದಾಣ - ಮೈಸೂರು
ಹತ್ತಿರದ ರೈಲು ನಿಲ್ದಾಣ - ಕೃಷ್ಣರಾಜನಗರ(ಕೆ.ಆರ್.ನಗರ)
ಹತ್ತಿರದ ರಾಜ್ಯ ಸಾರಿಗೆ ಬಸ್ ನಿಲ್ದಾಣ - ಬಿಳಿಕೆರೆ, ಹುಣಸೂರು ಮತ್ತು ಹೊಸರಾಮನಹಳ್ಳಿ
ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ - ಬೆಂಗಳೂರು (ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು)
ಕರ್ನಾಟಕದ ಇತರೆ ವನ್ಯಜೀವಿಧಾಮಗಳ ಬಗ್ಗೆ ತಿಳಿಯಲು ಈ ಪುಟವನ್ನು ನೋಡಿ - ಕರ್ನಾಟಕದಲ್ಲಿ ವನ್ಯಜೀವಿಧಾಮಗಳು

ಇವನ್ನು ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]