ಅಪಟೈಟ್
Apatite group | |
---|---|
General | |
ವರ್ಗ | ಫಾಸ್ಪೇಟ್ ಖನಿಜ |
ರಾಸಾಯನಿಕ ಸೂತ್ರ | Ca5(PO4)3(F,Cl,OH) |
ಸ್ಟ್ರೋಂಝ್ ವರ್ಗೀಕರಣ | 08.BN.05 |
Identification | |
ಬಣ್ಣ | ಅರೆಪಾರದರ್ಶಕ, ಕೆಲವೊಮ್ಮೆ ಪಾರದರ್ಶಕ, ಸಾಮಾನ್ಯವಾಗಿ ಹಸಿರು, ಕೆಲವೊಮ್ಮೆ ಬಣ್ಣರಹಿತ, ಹಳದಿ, ನೀಲಿ ಬಣ್ಣದಿಂದ ನೇರಳೆ, ಗುಲಾಬಿ, ಕಂದು.[೧] |
ಸ್ಫಟಿಕ ಗುಣಲಕ್ಷಣ | Tabular, prismatic crystals, massive, compact or granular |
ಸ್ಫಟಿಕ ಪದ್ಧತಿ | Hexagonal dipyramidal (6/m)[೨] |
ಸೀಳು | [0001] indistinct, [1010] indistinct[೨] |
ಬಿರಿತ | Conchoidal to uneven[೧] |
ಮೋಸ್ ಮಾಪಕ ಗಡಸುತನ | 5[೧] (defining mineral) |
ಹೊಳಪು | Vitreous[೧] to subresinous |
ಪುಡಿಗೆರೆ | White |
ಪಾರದರ್ಶಕತೆ | Transparent to translucent[೨] |
ವಿಶಿಷ್ಟ ಗುರುತ್ವ | 3.16–3.22[೨] |
ಉಜ್ಜುವಿಕೆ ಹೊಳಪು | Vitreous[೧] |
ದ್ಯುತಿ ಗುಣಗಳು | Double refractive, uniaxial negative[೧] |
ವಕ್ರೀಕರಣ ಸೂಚಿ | 1.634–1.638 (+0.012, −0.006)[೧] |
ದ್ವಿವಕ್ರೀಭವನ | 0.002–0.008[೧] |
ಬಹುವರ್ಣಕತೆ | Blue stones – strong, blue and yellow to colorless. Other colors are weak to very weak.[೧] |
ಚದರಿಕೆ | 0.013[೧] |
ನೇರಳಾತೀತ ಪ್ರತಿದೀಪ್ತಿ | Yellow stones – purplish-pink, which is stronger in long wave; blue stones– blue to light-blue in both long and short wave; |
ಅಪಟೈಟ್ ಒಂದು ಖನಿಜ. ರಾಸಾಯನಿಕ ಸಂಯೋಜನೆಯಲ್ಲಿ ಇದು ಮುಖ್ಯವಾಗಿ ಕ್ಯಾಲ್ಸಿಯಂ, ಫ್ಲೋರೀನ್ ಮುಂತಾದ ಧಾತುಗಳಿಂದ ಕೂಡಿದ ಫಾಸ್ಟೇಟ್ ಖನಿಜ. ಹೊರರೂಪಿನಲ್ಲಿ ಷಟ್ಭುಜೀಯ (ಹೆಕ್ಸಾಗೋನಲ್) ವರ್ಗದ ಹರಳುಗಳಾಗಿಯೂ ಮತ್ತು ಕಣಗಳ ಮುದ್ದೆಯಾಗಿಯೂ ಕಂಡುಬರುತ್ತದೆ. ಹಲವುವೇಳೆ ಗುಂಡು ಗುಂಡಾಗಿದ್ದು ದ್ರಾಕ್ಷಿಗೊಂಚಲಿನಂತೆಯೂ ತೋರಿಬರುವುದುಂಟು.
ಲಕ್ಷಣಗಳು
[ಬದಲಾಯಿಸಿ]ಖನಿಜದ ಬಣ್ಣ ಬಹುಮಟ್ಟಿಗೆ ಹಸಿರು ಛಾಯೆಯುಳ್ಳ ನೀಲಿ, ಊದ ಮತ್ತು ಬೂದು. ಕೆಲವುವೇಳೆ ಹಳದಿ ಮತ್ತು ಕೆಂಪು ಛಾಯೆಗಳೂ ತೋರಿಬರುತ್ತವೆ. ಒರೆ ಹಚ್ಚಿದಾಗ, ಯಾವ ಬಣ್ಣವೇ ಇರಲಿ, ಅಚ್ಚನೆಯ ಬಿಳುಪು ಹೊಳಪು ಗಾಜಿನಂತೆ, ಖನಿಜ ಸೀಳದೆ ಒಡೆದು ಛಿದ್ರವಾಗುತ್ತದೆ. ಒಡೆದ ಭಾಗದಲ್ಲಿ ಕಪ್ಪೆಚಿಪ್ಪನ್ನು ಹೋಲುವ ಗುರುತುಗಳುಂಟಾಗುತ್ತವೆ. ಗುರುತು ಅಸ್ಪಷ್ಟವಾಗಿಯೂ ತೋರುವುದುಂಟು. ಕಾಠಿಣ್ಯ: 5, ಚಾಕುವಿನಿಂದ ಖನಿಜವನ್ನು ಗೀರಿ ಗುರುತಿಸಬಹುದು. ಶುದ್ಧ ಹರಳುಗಳು ಉತ್ತಮ ಪಾರದರ್ಶಕತೆಯನ್ನು ಹೊಂದಿವೆ. ಕೆಲವು ಅಪಾರದರ್ಶಕವೂ ಹೌದು. ಇದರ ಸಾಪೇಕ್ಷಸಾಂದ್ರತೆ: 3.17-3.23.
ದೊರೆಯುವಿಕೆ
[ಬದಲಾಯಿಸಿ]ಇದು ಬಹುಮಟ್ಟಿಗೆ ಅಗ್ನಿಶಿಲೆಗಳಲ್ಲೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ರೂಪಾಂತರ ಶಿಲೆಗಳಲ್ಲೂ ದೊರೆಯುತ್ತದೆ. ಅಗ್ನಿಶಿಲಾವರ್ಗದ ಪೆಗ್ಮಟೈಟ್ ಎಂಬ ಒಡ್ಡುಶಿಲೆ (ಡೈಕ್ ರಾಕ್) ಈ ಖನಿಜದ ತವರು. ಉತ್ತಮ ದರ್ಜೆಯ ನಿಕ್ಷೇಪಗಳು ರಷ್ಯದ ಕೋಲಾ ಪ್ರಾಂತ, ಉತ್ತರ ಆಫ್ರಿಕದ ಟ್ಯೂನೀಸಿಯ ಮತ್ತು ಮೊರಾಕೋ, ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಪೆಸಿಫಿಕ್ ಸಾಗರದ ದ್ವೀಪಗಳಲ್ಲಿ ಹರಡಿವೆ.
ಉಪಯೋಗಗಳು
[ಬದಲಾಯಿಸಿ]ರಾಸಾಯನಿಕ ಗೊಬ್ಬರದ ತಯಾರಿಕೆಯಲ್ಲಿ ಇದನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಉತ್ತಮ ಬಣ್ಣದ ಪಾರದರ್ಶಕ ಹರಳುಗಳನ್ನು ಜವಾಹಿರಿಯಲ್ಲಿ ಉಪಯೋಗಿಸುವುದುಂಟು.[೩]
ಉಲ್ಲೇಖಗಳು
[ಬದಲಾಯಿಸಿ]