ಕಪ್ಪೆಚಿಪ್ಪು
Jump to navigation
Jump to search
ಕಪ್ಪೆಚಿಪ್ಪು (ಸರಳವಾಗಿ ಚಿಪ್ಪು ಎಂದೂ ಕರೆಯಲಾಗುತ್ತದೆ) ಸಮುದ್ರದಲ್ಲಿ ವಾಸಿಸುವ ಪ್ರಾಣಿಯಿಂದ ಸೃಷ್ಟಿಸಲ್ಪಟ್ಟ ಗಟ್ಟಿಯಾದ ರಕ್ಷಣಾತ್ಮಕ ಹೊರಕವಚ. ಚಿಪ್ಪು ಪ್ರಾಣಿಯ ಶರೀರದ ಭಾಗವಾಗಿದೆ. ಬರಿದಾದ ಕಪ್ಪೆಚಿಪ್ಪುಗಳು ಹಲವುವೇಳೆ ಕಡಲತೀರಗಳ ಮೇಲೆ ತೇಲಿಕೊಂಡು ಬಂದಿರುವುದು ಕಂಡುಬರುತ್ತದೆ. ಪ್ರಾಣಿಯು ಸತ್ತುಹೋಗಿರುವುದರಿಂದ ಮತ್ತು ಮೃದು ಭಾಗಗಳನ್ನು ಮತ್ತೊಂದು ಪ್ರಾಣಿಯು ತಿಂದಿರುವುದರಿಂದ ಅಥವಾ ಅವು ಕೊಳೆತಿರುವುದರಿಂದ ಚಿಪ್ಪುಗಳು ಬರಿದಾಗಿರುತ್ತವೆ.
ಕಪ್ಪೆಚಿಪ್ಪು ಸಾಮಾನ್ಯವಾಗಿ ಒಂದು ಅಕಶೇರುಕದ ಬಾಹ್ಯಕವಚವಾಗಿರುತ್ತದೆ, ಮತ್ತು ಸಾಮಾನ್ಯವಾಗಿ ಕ್ಯಾಲ್ಷಿಯಂ ಕಾರ್ಬೊನೇಟ್ ಅಥವಾ ಕೈಟಿನ್‍ನಿಂದ ರೂಪಗೊಂಡಿರುತ್ತದೆ. ಕಡಲತೀರಗಳ ಮೇಲೆ ಕಂಡುಬರುವ ಬಹುತೇಕ ಚಿಪ್ಪುಗಳು ಭಾಗಶಃ ಕಡಲ ದ್ವಂಗಿಗಳ ಚಿಪ್ಪಾಗಿರುತ್ತವೆ. ಈ ಚಿಪ್ಪುಗಳು ಸಾಮಾನ್ಯವಾಗಿ ಕ್ಯಾಲ್ಷಿಯಂ ಕಾರ್ಬೊನೇಟ್‍ನಿಂದ ರಚಿತವಾಗಿರುತ್ತವೆ, ಮತ್ತು ಕೈಟಿನ್‍ನಿಂದ ರೂಪಗೊಂಡ ಚಿಪ್ಪುಗಳಿಗಿಂತ ಹೆಚ್ಚು ಉತ್ತಮವಾಗಿ ತಾಳಿಕೊಳ್ಳುತ್ತವೆ.