ಅಕುಲ್ ಬಾಲಾಜಿ

ವಿಕಿಪೀಡಿಯ ಇಂದ
Jump to navigation Jump to search

ಅಕುಲ್ ಬಾಲಾಜಿ ಅವರು ಒಬ್ಬ ಭಾರತೀಯ ಚಲನಚಿತ್ರ ನಟ ಹಾಗು ದೂರದರ್ಶನದ ನಿರೂಪಕ. ಅವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಫೆಬ್ರವರಿ ೨೩ ೧೯೭೯ ರೈಲ್ವೆ ಕೊಡುರು,ಆಂಧ್ರಪ್ರದೇಶದಲ್ಲಿ ಜನಿಸಿದರು.[೧]

ಬಾಲ್ಯ ಜೀವನ[ಬದಲಾಯಿಸಿ]

ಅಕುಲ್ ಬಾಲಾಜಿ ಅವರು ಮೂಲತಃ ಆಂಧ್ರಪ್ರದೇಶದವರು.ಅವರು ತಮ್ಮ ೧೬ ನೇ ವಯಸ್ಸಿನಲ್ಲಿ ಬೆಂಗಳೂರಿಗೆ ತೆರಳಿದರು. ಶ್ರೀಮತಿ ಉಷಾ ದಾತಾರ್ ಅವರಿಂದ ಭರತನಾಟ್ಯ ತರಬೇತಿ ಪಡೆದರು. ನಂತರ ಮಧು ನಟರಾಜ್ ನೇತೃತ್ವದ "ನಾಟ್ಯ ಎಸ್ಟಿಮ್ ಡ್ಯಾನ್ಸ್ ಕಂಪೆನಿ" ಯನ್ನು ಸೇರಿ ಶ್ರೀಮತಿ ಮಯಾ ರಾವ್ ಅವರಿಂದ ಕತಕ್ ಕಲಿತರು. ಅವರು ಮಹೇಶ್ ದತ್ತಾಣಿಯವರಿಂದ ನಟನೆಯಲ್ಲಿ ತರಬೇತಿ ಹೊಂದಿದ್ದಾರೆ. ಅವರು ೨೦೦೮ ರಲ್ಲಿ ಮದುವೆಯಾದರು. ದಂಪತಿಗೆ ಓರ್ವ ಮಗನಿದ್ದಾನೆ(ಕೃಶಾನ್ ನಾಗ್).[೨]

ವೃತ್ತಿ ಜೀವನ[ಬದಲಾಯಿಸಿ]

ಅಕುಲ್ ಬಾಲಾಜಿಯವರು ದೂರದರ್ಶನ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ತಮ್ಮ ವೃತ್ತಿರಂಗವನ್ನು ಪ್ರಾರಂಭಿಸಿದರು. ಅವರು ನಟ ಸುದೀಪ್ ಅವರೊಂದಗೆ ಸಹ-ನಿರೂಪಕನಾಗಿ ಏಷ್ಯನ್ನೆಟ್ ಸುವರ್ಣ ಚಾನ್ನೆಲ್ನಲ್ಲಿ "ಪ್ಯಾಟೆ ಹುಡುಗೀರ್ ಹಳ್ಳಿ ಲೈಫು"[೩] ಎಂಬ ಜನಪ್ರಿಯ ರಿಯಾಲಿಟಿ ಶೋ ಅನ್ನು ಖ್ಯಾತಿ ಗಳಿಸಿದರು. ಹಾಗೆ ನಿರೂಪಕನಾಗಿ ಏಷ್ಯನ್ನೆಟ್ ಸುವರ್ಣದಲ್ಲಿ ಪ್ರಸಾರವಾಗಿರುವ ರಿಯಾಲಿಟಿ ಶೋಗಳಾದ "ಹಳ್ಳಿ ಹೈದ ಪ್ಯಾಟೆಗ್ ಬಂದ" "ಪ್ಯಾಟೆ ಮಂದಿ ಕಾಡಿಗ್ ಬಂದ್ರು"[೪] "ನೋಡಿ ಸ್ವಾಮಿ ನಾವಿರೋದೇ ಹೀಗೆ" ಯಲ್ಲಿ ಕೆಲಸ ಮಾಡಿದ್ದಾರೆ. ಅವರು ಅಗಥ(ಉದಯ ಟಿವಿ,೨೦೦೨), ಗುಪ್ತಾ ಗಾಮಿನಿ(ಈ-ಟಿವಿ ಕನ್ನಡ), ಯಾವ ಜನುಮದ ಮೈತ್ರಿ(ಈ-ಟಿವಿ ಕನ್ನಡ), ಜಗಳಗಂಟಿಯರು(ಉದಯ ಟಿವಿ), ಪೆಲ್ಲಿನತಿ ಪ್ರಮನಲು(ಝಿ ತೆಲುಗು,೨೦೧೨) ದಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಟಿವಿ ಉದ್ಯೋಗ[ಬದಲಾಯಿಸಿ]

 1. ೨೦೦೭-ಕುಣಿಯೊಣು ಬಾರಾ[೫]
 2. ೨೦೦೮-ಕಾಮಿಡಿ ಕಿಲಾಡಿಗಳು
 3. ೨೦೦೯-ಕುಣಿಯೊಣು ಬಾರಾ
 4. ೨೦೧೦-ಪ್ಯಾಟೆ ಹುಡುಗಿರ್ ಹಳ್ಳಿ ಲೈಫು(೧)
 5. ೨೦೧೦-ಹಳ್ಳಿ ಹೈದ ಪ್ಯಾಟೆಗ್ ಬಂದ
 6. ೨೦೧೦-ಪ್ಯಾಟೆ ಮಂದಿ ಕಾಡಿಗೆ ಬಂದ್ರು(೧)
 7. ೨೦೧೧-ಪ್ಯಾಟೆ ಹುಡುಗಿರ್ ಹಳ್ಳಿ ಲೈಫು(೨)
 8. ೨೦೧೧-ಹೊಸ ಲವ್ ಸ್ಟೋರಿ
 9. ೨೦೧೧-ಪ್ಯಾಟೆ ಮಂದಿ ಕಾಡಿಗೆ ಬಂದ್ರು(೨)
 10. ೨೦೧೨-ನೋಡಿ ಸ್ವಾಮಿ ನಾವಿರೋದೇ ಹೀಗೆ
 11. ೨೦೧೩-ಮನೆ ಮುಂದೆ ಮಹಾಲಕ್ಷ್ಮಿ[೬]
 12. ೨೦೧೩-ಸೈ ಅಂತೆ ಸೈ(ತೆಲುಗು)
 13. ೨೦೧೩-ಇಂಡಿಯನ್
 14. ೨೦೧೪-ತಕ ದಿಮಿ ತಾ ಡ್ಯಾನ್ಸಿಂಗ್ ಸ್ಟಾರ್[೭]
 15. ೨೦೧೪-ಪ್ಯಾಟೆ ಹುಡುಗಿರ್ ಹಳ್ಳಿ ಲೈಫು(೩)
 16. ೨೦೧೫-ಡ್ಯಾನ್ಸಿಂಗ್ ಸ್ಟಾರ್(೨)
 17. ೨೦೧೫-ಝಿ ತೆಲುಗು ೩.೨.೧. ಗೋ
 18. ೨೦೧೫-ಕಲರ್ಸ್ ಕನ್ನಡ ಡ್ಯಾನ್ಸಿಂಗ್ ಸ್ಟಾರ್ ಜುನಿಯರ್
 19. ೨೦೧೫-ಸೂಪರ್ ಜೋಡಿ
 20. ೨೦೧೫-ಝಿ ತೆಲುಗು ೧೩-ಪಿಯರ್ ಇಸ್ ರಿಯಲ್
 21. ೨೦೧೬-ಸ್ಟಾರ್ ಸುವರ್ಣ ಡ್ಯಾನ್ಸ್ ಡ್ಯಾನ್ಸ್
 22. ೨೦೧೬-ಕಿಕ್
 23. ೨೦೧೭-ಸೂಪರ್ ಜೋಡಿ (೨)
 24. ೨೦೧೭-ದೇಶಮುದ್ರುಲು(ಮಾ ಟಿವಿ)
 25. ೨೦೧೭-ಸೂಪರ್ ಟಾಕ್ ಟೈಮ್(ಕಲರ್ಸ್ ಸೂಪರ್)
 26. ೨೦೧೮-ಮಾಸ್ಟರ್ ಡ್ಯಾನ್ಸರ್
 27. ೨೦೧೮-ಪ್ಯಾಟೆ ಹುಡುಗಿರ್ ಹಳ್ಳಿ ಲೈಫು(೪)
 28. ೨೦೧೮-ಸಿಕ್ಸ್ತ್ ಸೆನ್ಸ್
 29. ೨೦೧೮- ಹಳ್ಳಿ ಹೈದ ಪ್ಯಾಟೆಗ್ ಬಂದ(೪)

ಚಲನಚಿತ್ರ[ಬದಲಾಯಿಸಿ]

 1. ೨೦೦೭-ಮಿಲನ(ಕನ್ನಡ)
 2. ೨೦೦೮-ಆತ್ಮೀಯ(ಕನ್ನಡ)
 3. ೨೦೦೮-ವಾಸ್ತವ(ಕನ್ನಡ)
 4. ೨೦೦೯-ನೆರಮು ಶಿಕ್ಷ(ತೆಲುಗು)
 5. ೨೦೧೦-ಬನ್ನಿ(ಕನ್ನಡ)
 6. ೨೦೧೩-ಮೈನ(ಕನ್ನಡ)
 7. ೨೦೧೩-ಪ್ಯಾರ್ಗೆ ಆಗ್ಬಿಟೈತ್ತೆ(ಕನ್ನಡ)
 8. ೨೦೧೩-ಲೂಸ್ಗಳು(ಕನ್ನಡ)
 9. ೨೦೧೪-ಕ್ರೇಜಿ ಸ್ಟಾರ್(ಕನ್ನಡ)[೮]

ಪ್ರಶಸ್ತಿಗಳು[ಬದಲಾಯಿಸಿ]

 • ೨೦೧೦: ಬಿಗ್ ಎಫ್ಎಮ್ ಬಿಗ್ ಟಿವಿ "ಅತ್ಯಂತ ಜನಪ್ರೀಯ ಆಂಕರ್"[೯]
 • ೨೦೧೪: ಬಿಗ್ ಬಾಸ್ ಕನ್ನಡ ೨ನೇ ಅವೃತ್ತಿ ವಿಜೇತ

ಉಲ್ಲೇಖ[ಬದಲಾಯಿಸಿ]

 1. https://timesofindia.indiatimes.com/entertainment/regional/kannada/news-interviews/Kannada-reality-show-star-Akul-Balaji-heads-to-Tollywood/articleshow/20573331.cms?referral=PM
 2. https://kannada.filmibeat.com/celebs/akul-balaji/biography.html
 3. http://www.exchange4media.com/news/story.aspx?Section_id=35&News_id=38089
 4. http://mediaworldasia.dk/index.php/media-articles/773-suvarna-takes-second-season-of-reality-show-to-andaman-islands
 5. http://www.zeekannadatv.com/contest-kb-boysvsgirls.aspx
 6. https://kannada.filmibeat.com/tv/mane-munde-mahalakshmi-on-etv-kannada-070550.html
 7. https://www.indiaglitz.com/kannada
 8. https://www.filmibeat.com/celebs/akul-balaji/filmography.html
 9. http://businessofcinema.com/tele/breaking-bigg-boss-8-kanada-winner-akul-balaji/176169