ವಿಷಯಕ್ಕೆ ಹೋಗು

ಆಲಮೇಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲಮೇಲ
ಆಲಮೇಲ
village
Population
 (೨೦೧೨)
 • Total೧೫೦೦೦

ಆಲಮೇಲ ಒಂದು ಪಟ್ಟಣ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 80 ಕಿ. ಮಿ. ಇದೆ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ. ಕರ್ನಾಟಕ ಸರ್ಕಾರವು ಮಾರ್ಚ 1, 2019 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಸಿಂದಗಿ ತಾಲ್ಲೂಕಿನ ಆಲಮೇಲ ಪಟ್ಟಣವನ್ನು ಹೊಸ ತಾಲ್ಲೂಕೆಂದು ರಚಿಸಿದೆ.[]

ಚರಿತ್ರೆ

[ಬದಲಾಯಿಸಿ]

ಬಿಜ್ಜಳ ರಾಜ ಕಲಾಚಾರಿಯು 1157-1167ರಲ್ಲಿ ರಾಮಲಿಂಗ ದೇವಾಲಯವನ್ನು ಸ್ಥಾಪಿಸಿದ್ದಾನೆ.

ಭೌಗೋಳಿಕ

[ಬದಲಾಯಿಸಿ]

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

[ಬದಲಾಯಿಸಿ]
  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

[ಬದಲಾಯಿಸಿ]

ಪಟ್ಟಣದಲ್ಲಿ ಜನಸಂಖ್ಯೆ ಸುಮಾರು 18,667 ಇದೆ. ಅದರಲ್ಲಿ 9,454 ಪುರುಷರು ಮತ್ತು 9,213 ಮಹಿಳೆಯರು ಇದ್ದಾರೆ. ಲಿಂಗಾನುಪಾತ ಸರಾಸರಿ ಸುಮಾರು 975(1000 ಪುರುಷರಿಗೆ) ಇದೆ.

ಸಾಂಸ್ಕೃತಿಕ

[ಬದಲಾಯಿಸಿ]

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಪಟ್ಟಣದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ

[ಬದಲಾಯಿಸಿ]
  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ
  • ಶ್ರೀ ರಾಮ ದೇವಾಲಯ
  • ಶ್ರೀ ವಿಶ್ವೇಶ್ವರದೇವಾಲಯ
  • ಹನುಮ ದೇವಾಲಯ

ಮಸೀದಿ

[ಬದಲಾಯಿಸಿ]

ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಪೀರ ಗಾಲಿಬ್ ಸಾಬ್ ದರ್ಗಾ ಇದೆ. ಆಲಮೇಲ ಗ್ರಾಮದಲ್ಲಿ ಸುಮಾರು ೮ ಮಸೀದಿಗಳಿವೆ. ೧) ಅಕ್ಸಾ ಮಸೀದಿ ೨) ಶಾಯಿ ಮಸೀದಿ

ನೀರಾವರಿ

[ಬದಲಾಯಿಸಿ]

ಪಟ್ಟಣದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ

[ಬದಲಾಯಿಸಿ]

ಕೃಷ್ಣಾ ನದಿಯ ನಾರಾಯಣಪುರ ಆಣೆಕಟ್ಟೆಯ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಕೃಷಿ ಮತ್ತು ತೋಟಗಾರಿಕೆ

[ಬದಲಾಯಿಸಿ]

ಪಟ್ಟಣದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

[ಬದಲಾಯಿಸಿ]

ಪಟ್ಟಣದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

[ಬದಲಾಯಿಸಿ]

ಪಟ್ಟಣದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

[ಬದಲಾಯಿಸಿ]

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

[ಬದಲಾಯಿಸಿ]
  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಆಲಮೇಲ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಆಲಮೇಲ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಆಲಮೇಲ
  • ಜಿ.ಎ.ವಿ.ವಿ.ಎಸ್. ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ
  • ಜಿ.ವಿ.ವಿ.ಎಸ್. ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ
  • ಐ.ಕೆ.ರಾಯಲ್ ಇಂಗ್ಲೀಶ್ ಶಾಲೆ, ಆಲಮೇಲ'
  • ಇರ್ಕಾ ಉರ್ದು ಶಾಲೆ, ಆಲಮೇಲ
  • ಬಸವ ಕಿರಿಯ ಪ್ರಾಥಮಿಕ ಶಾಲೆ, ಆಲಮೇಲ
  • ವಿ.ಬಿ.ಬಿ.ಎಸ್. ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ
  • ರವಿ ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ
  • ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ
  • ನಿರ್ಮಾಲಯ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ
  • ನ್ಯಾಶನಲ್ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ
  • ಬಸವ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ
  • ಎ.ಕೆ.ನಂದಿ ಪ್ರೌಡ ಶಾಲೆ, ಆಲಮೇಲ
  • ಡಾ.ಭೀಮರಾವ್ ಪ್ರೌಡ ಶಾಲೆ, ಆಲಮೇಲ
  • ಅಂಜುಮನ್ ಪ್ರೌಡ ಶಾಲೆ, ಆಲಮೇಲ
  • ಜಿ.ವಿ.ವಿ.ಎಸ್. ಪ್ರೌಡ ಶಾಲೆ, ಆಲಮೇಲ
  • ಆರ್.ಎಮ್.ಎಸ್.ಎ. ಪ್ರೌಡ ಶಾಲೆ, ಆಲಮೇಲ
  • ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ಆಲಮೇಲ
  • ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯ, ಆಲಮೇಲ
  • ಸ್ವಾಮಿ ವಿವೇಕಾನಂದ ಪದವಿ ಪೂರ್ವ ಮಹಾವಿದ್ಯಾಲಯ, ಆಲಮೇಲ
  • ಎ.ಕೆ.ನಂದಿ ಪದವಿ ಪೂರ್ವ ಮಹಾವಿದ್ಯಾಲಯ, ಆಲಮೇಲ
  • ಶ್ರೀ ಗುರುಬಸಪ್ಪ ಗುಂದಗಿ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಆಲಮೇಲ
  • ಆಲಮೇಲ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಆಲಮೇಲ
  • ಎಸ್.ವಿ.ಪಾಟೀಲ ಸ್ಮಾರಕ ಕೈಗಾರಿಕಾ ತರಬೇತಿ ಕೇಂದ್ರ, ಆಲಮೇಲ
  • ಶ್ರೀಮತಿ ಹೀರಾಬಾಯಿ ಅಡಿವೆಪ್ಪ ನಂದಿ ಕಲಾ ಮಹಾವಿದ್ಯಾಲಯ, ಆಲಮೇಲ
  • ಶ್ರೀ ಗುರುಬಸಪ್ಪ ಗುಂದಗಿ ಕಲಾ ಮಹಾವಿದ್ಯಾಲಯ, ಆಲಮೇಲ

ರಾಜಕೀಯ

[ಬದಲಾಯಿಸಿ]

ಪಟ್ಟಣವು ಸಿಂದಗಿ ವಿಧಾನಸಭಾ ಕ್ಷೇತ್ರ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಬ್ಯಾಂಕ್

[ಬದಲಾಯಿಸಿ]
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಆಲಮೇಲ
  • ಕೆನರಾ ಬ್ಯಾಂಕ್, ಆಲಮೇಲ
  • ಬ್ಯಾಂಕ್ ಆಫ್ ಬರೋಡ, ಆಲಮೇಲ
  • ಕರ್ನಾಟಕ ಬ್ಯಾಂಕ್, ಆಲಮೇಲ
  • ಆಲಮೇಲ ಪಟ್ಟಣ ಸಹಕಾರಿ ಬ್ಯಾಂಕ್, ಆಲಮೇಲ
  • ಡಿ.ಸಿ.ಸಿ.ಬ್ಯಾಂಕ, ಆಲಮೇಲ

ಪಟ್ಟಣ ಪಂಚಾಯತಿ

[ಬದಲಾಯಿಸಿ]
  • ಪಟ್ಟಣ ಪಂಚಾಯತಿ ಕಾರ್ಯಾಲಯ, ಆಲಮೇಲ

ಆಲಮೇಲ ಪಟ್ಟಣ ಪಂಚಾಯತಿ ಕಾರ್ಯಾಲಯದ ಅಂತರಜಾಲ ತಾಣ Archived 2019-11-13 ವೇಬ್ಯಾಕ್ ಮೆಷಿನ್ ನಲ್ಲಿ.

ದೂರವಾಣಿ ವಿನಿಮಯ ಕೇಂದ್ರ

[ಬದಲಾಯಿಸಿ]
  • ದೂರವಾಣಿ ವಿನಿಮಯ ಕೇಂದ್ರ, ಆಲಮೇಲ

ಅಂಚೆ ಕಚೇರಿ

[ಬದಲಾಯಿಸಿ]
  • ಅಂಚೆ ಕಚೇರಿ, ಆಲಮೇಲ
  • ಆಲಮೇಲ - 586202 (ಗುಂಡಗಿ, ಹಿಕ್ಕನಗುತ್ತಿ, ಹೂವಿನಹಳ್ಳಿ, ಕಡಣಿ, ಕಲಹಳ್ಳಿ, ಕೊರಹಳ್ಳಿ, ಕುರಬತಹಳ್ಳಿ, ಮಾದನಹಳ್ಳಿ(ಮಾದ್ನಳ್ಳಿ), ರಾಂಪುರ ಪಿ.ಎ.)

ನೇಕಾರರ ಸಹಕಾರ ಸಂಘ

[ಬದಲಾಯಿಸಿ]
  • ನೇಕಾರರ ಸಹಕಾರ ಸಂಘ, ಆಲಮೇಲ

ನೀರು ಬಳಕೆದಾರರ ಸಹಕಾರ ಸಂಘ

[ಬದಲಾಯಿಸಿ]
  • ನೀರು ಬಳಕೆದಾರರ ಸಹಕಾರ ಸಂಘ, ಆಲಮೇಲ

ಖಾದಿ ಗ್ರಾಮೋದ್ಯೋಗ

[ಬದಲಾಯಿಸಿ]
  • ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘ, ಆಲಮೇಲ

ಕೃಷಿ ಮಾರುಕಟ್ಟೆ

[ಬದಲಾಯಿಸಿ]
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಆಲಮೇಲ

ವಿದ್ಯುತ್ ಪರಿವರ್ತನಾ ಕೇಂದ್ರ

[ಬದಲಾಯಿಸಿ]
  • 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಆಲಮೇಲ
  • 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಆಲಮೇಲ

ಪೋಲಿಸ್ ಠಾಣೆ

[ಬದಲಾಯಿಸಿ]
  • ಪೋಲಿಸ್ ಠಾಣೆ, ಆಲಮೇಲ

ಕೈಗಾರಿಕೆ

[ಬದಲಾಯಿಸಿ]
  • ಕೆ.ಪಿ.ಆರ್.ಸಕ್ಕರೆ ಕಾರ್ಖಾನೆ, ಆಲಮೇಲ, ತಾ|| ಸಿಂದಗಿ, ಜಿ|| ವಿಜಯಪುರ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

[ಬದಲಾಯಿಸಿ]
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಆಲಮೇಲ

ಹಾಲು ಉತ್ಪಾದಕ ಸಹಕಾರಿ ಸಂಘ

[ಬದಲಾಯಿಸಿ]
  • ಹಾಲು ಉತ್ಪಾದಕ ಸಹಕಾರಿ ಸಂಘ, ಆಲಮೇಲ

ಸಮುದಾಯ ಆರೋಗ್ಯ ಕೇಂದ್ರ

[ಬದಲಾಯಿಸಿ]
  • ಸಮುದಾಯ ಆರೋಗ್ಯ ಕೇಂದ್ರ, ಆಲಮೇಲ

ರೈತ ಸಂಪರ್ಕ ಕೇಂದ್ರ

[ಬದಲಾಯಿಸಿ]
  • ರೈತ ಸಂಪರ್ಕ ಕೇಂದ್ರ, ಆಲಮೇಲ

ಕಂದಾಯ ಕಚೇರಿ

[ಬದಲಾಯಿಸಿ]
  • ಕಂದಾಯ ಕಚೇರಿ, ಆಲಮೇಲ

ನೆಮ್ಮದಿ (ಹೋಬಳಿ) ಕೇಂದ್ರ

[ಬದಲಾಯಿಸಿ]
  • ನೆಮ್ಮದಿ ಕೇಂದ್ರ, ಆಲಮೇಲ

ನಾಡ ಕಚೇರಿ

[ಬದಲಾಯಿಸಿ]
  • ನಾಡ ಕಚೇರಿ, ಆಲಮೇಲ

ಉಚಿತ ಪ್ರಸಾದನಿಲಯ

[ಬದಲಾಯಿಸಿ]
  • ಮೆಟ್ರಿಕ್ ಪುರ್ವ ಬಾಲಕರ ಉಚಿತ ಪ್ರಸಾದನಿಲಯ, ಆಲಮೇಲ

ಪಶು ಆಸ್ಪತ್ರೆ

[ಬದಲಾಯಿಸಿ]
  • ಪಶು ಆಸ್ಪತ್ರೆ ಮತ್ತು ಕೃತಕ ಗರ್ಭಧಾರಣಾ ಕೇಂದ್ರ, ಆಲಮೇಲ

ಹೆದ್ದಾರಿಗಳು

[ಬದಲಾಯಿಸಿ]
  • ರಾಜ್ಯ ಹೆದ್ದಾರಿ - 34 => ಅಫಜಲಪುರ - ಆಲಮೇಲ - ಇಂಡಿ - ವಿಜಯಪುರ - ಜಮಖಂಡಿ - ಮುಧೋಳ - ಲೋಕಾಪುರ - ರಾಮದುರ್ಗ - ಸವದತ್ತಿ - ಧಾರವಾಡ.
  • ರಾಜ್ಯ ಹೆದ್ದಾರಿ - 124 => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.

ಸರಕಾರಿ ವಾಹನ ನಿಲ್ದಾಣ

[ಬದಲಾಯಿಸಿ]
  • ಸರಕಾರಿ ವಾಹನ ನಿಲ್ದಾಣ, ಆಲಮೇಲ

ಉಲ್ಲೇಖನಗಳು

[ಬದಲಾಯಿಸಿ]
  1. https://www.udayavani.com/news-section/state-news/3-new-taluk-announcement
"https://kn.wikipedia.org/w/index.php?title=ಆಲಮೇಲ&oldid=1233870" ಇಂದ ಪಡೆಯಲ್ಪಟ್ಟಿದೆ