ವಿಷಯಕ್ಕೆ ಹೋಗು

ಮಮ್ಮುಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಮ್ಮುಟ್ಟಿ
Born
ಮುಹಮ್ಮದ್ ಕುಟ್ಟಿ

(1953-09-07) ೭ ಸೆಪ್ಟೆಂಬರ್ ೧೯೫೩ (ವಯಸ್ಸು ೭೧)[]
Other namesಮಮ್ಮುಕ್ಕಾ, ಮಮ್ಮೂಸ್, ಮೆಗಾಸ್ಟಾರ್
Occupation(s)ನಟ, ಚಿತ್ರ ನಿರ್ಮಾಪಕ, ವಿತರಕ, ಸಾಮಾಜಿಕ ಕಾರ್ಯಕರ್ತ
Years active೧೯೭೧ರ ಸುಮಾರು - ಪ್ರಸ್ತುತ
Spouseಜುಲ್ಫಾತ್ (ವಿವಾಹ: ೧೯೮೧)
Childrenದುಲ್ಕರ್ ಸಲ್ಮಾನ್ (ಮಗ),
ಕುಟ್ಟಿ ಸುರುಮಿ (ಮಗಳು)
Websitehttp://www.mammootty.com

ಮಮ್ಮುಟ್ಟಿ' (ಮಲಯಾಳಂ:മമ്മൂട്ടി) (ಜನನ ಮುಹಮ್ಮದ್ ಕುಟ್ಟಿ' 1953 ಸೆಪ್ಟೆಂಬರ್ 7ರಂದು)[][][] ಭಾರತದ ನಟ ಮತ್ತು ನಿರ್ಮಾಪಕರಾಗಿದ್ದು, ಮುಖ್ಯವಾಗಿ ಮಲೆಯಾಳಂ ಸಿನೆಮಾ ದಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೆಲವು ತಮಿಳು, ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚಿನ ಕಾಲದ ಅವರ ವೃತ್ತಿಜೀವನದಲ್ಲಿ ಅವರು 300ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ."ಶಿಕಾರಿ" ಹೆಸರಿನ ಕನ್ನಡ ಚಿತ್ರ ಇವರ ಮೊದಲ ಕನ್ನಡ ಚಲನಚಿತ್ರ .[][]

ಮಮ್ಮುಟ್ಟಿ ತಮ್ಮ ಸಾಧನೆಗಳಿಗಾಗಿ ಅನೇಕ ಪ್ರಮುಖ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಇವುಗಳಲ್ಲಿ ಮೂರು ರಾಷ್ಟ್ರೀಯ ಪ್ರಶಸ್ತಿಗಳು, ಏಳು ರಾಜ್ಯ ಪ್ರಶಸ್ತಿಗಳು ಮತ್ತು ಹತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಒಳಗೊಂಡಿವೆ. 1988ರಲ್ಲಿ ಭಾರತ ಸರ್ಕಾರವು ಭಾರತದ ಸಿನೆಮಾಕ್ಕೆ ಅವರು ನೀಡಿದ ಗಣನೀಯ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.

ಮಮ್ಮುಟ್ಟಿ ಮಲಯಾಳಂ ಕಮ್ಯುನಿಕೇಷನ್ಸ್ ಅಧ್ಯಕ್ಷರು ಕೂಡ ಆಗಿದ್ದಾರೆ. ಇದು ಮಲಯಾಳಂ TV ಚಾನಲ್‌ಗಳಾದ ಕೈರಾಲಿ TV, ಪೀಪಲ್ TV and WE TV.[] ಯನ್ನು ನಡೆಸುತ್ತಿದೆ.[] ಓದುಗರ ನಡುವೆ ನಡೆಸಿದ ಸಮೀಕ್ಷೆಯಲ್ಲಿ ವನಿತಾ ನಿಯತಕಾಲಿಕೆ ಮಮ್ಮುಟ್ಟಿಯನ್ನು ಕೇರಳದಲ್ಲಿ ಅತೀ ಲೈಂಗಿಕ ಆಕರ್ಷಣೆಯ ನಟ ಎಂದು ಆಯ್ಕೆ ಮಾಡಿದೆ.[] ಮಮ್ಮುಟ್ಟಿ ಅಕ್ಷಯ ಯೋಜನೆಯ ಸದ್ಭಾವನೆಯ ರಾಯಭಾರಿ[]

ಕುಟುಂಬ ಮತ್ತು ಆರಂಭಿಕ ಜೀವನ

[ಬದಲಾಯಿಸಿ]

ಮಮ್ಮುಟ್ಟಿ ಅವರು ಭಾರತಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ವೈಕೋಮ್ ಬಳಿಯ ಚೆಂಪುವಿನಲ್ಲಿ ಹುಟ್ಟಿ ಬೆಳೆದರು. ಮಧ್ಯಮ ವರ್ಗದ ಮುಸ್ಲಿಂ ಕುಟುಂಬದಲ್ಲಿ ಅವರು ಹುಟ್ಟಿದರು. ಅವರು ಕುಟುಂಬದ ಹಿರಿಯ ಪುತ್ರರಾಗಿದ್ದರು. ಅವರ ತಂದೆ ಇಸ್ಮೇಲ್ ಕೃಷಿಕರಾಗಿದ್ದು ಅವರ ತಾಯಿ ಫಾತಿಮಾ ಗೃಹಿಣಿಯಾಗಿದ್ದಾರೆ. ಅವರು ಪ್ರೌಢಶಾಲೆ(ಪದವಿ-ಪೂರ್ವ)ಯ ಶಿಕ್ಷಣವನ್ನು ಕೊಚ್ಚಿಯ ಮಹಾರಾಜ ಕಾಲೇಜಿನಲ್ಲಿ ಮುಗಿಸಿದರು. ನಂತರ ಅವರು ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣವನ್ನು ಅಧ್ಯಯನ ಮಾಡಿದರು. ಮಂಜೇರಿಯಲ್ಲಿ ಅವರು ಎರಡು ವರ್ಷಗಳ ಕಾಲ ಕಾನೂನು ಅಭ್ಯಾಸ ಮಾಡಿದರು. ಅವರು 1980ರಲ್ಲಿ ಸುಲ್ಫಾತ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಪುತ್ರಿ ಸುರುಮಿ(ಜನನ 1982 )ಮತ್ತು ಪುತ್ರ ದುಲ್ಖಾರ್ ಸಲ್ಮಾನ್(ಜನನ 1986[] ಇದ್ದಾರೆ.

ನಟನಾ ವೃತ್ತಿ ಬದುಕು

[ಬದಲಾಯಿಸಿ]

ಆರಂಭಿಕ ವೃತ್ತಿಜೀವನದ ಹಾದಿ (1971–1980)

[ಬದಲಾಯಿಸಿ]

ಮಮ್ಮುಟ್ಟಿ ಅವರ ಪ್ರಥಮ ತೆರೆಯ ಮೇಲಿನ ಅಭಿನಯವು ಹೆಚ್ಚು ಮನ್ನಣೆ ಪಡೆಯದ 1971ರ ಚಿತ್ರ ಅನುಭವಾಂಗಳ್ ಪಾಲಿಚಕಲ್‌ ನ ಅಭಿನಯವಾಗಿದೆ. ಇದನ್ನು ಕೆ.ಎಸ್. ಸೇತುಮಾಧವನ್ ನಿರ್ದೇಶಿಸಿದ್ದರು.[] ಆಗ ಅವರು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. 1973ರಲ್ಲಿ ಅವರು ಕಾಲಚಕ್ರಂ ನಲ್ಲಿ ಇನ್ನೊಂದು ಪಾತ್ರವನ್ನು ನಿರ್ವಹಿಸಿದರು. ಇದು ಕೆ.ನಾರಾಯಣನ್ ಅವರು ನಿರ್ದೇಶಿಸಿದ ಪ್ರೇಮ್ ನಜೀರ್ ಚಿತ್ರವಾಗಿದೆ. ತೆರೆಯ ಹೆಸರಾದ ಸಜಿನ್ ಎಂಬ ಹೆಸರಿನೊಂದಿಗೆ ಅವರು ನಟಿಸಿದರು. ನಂತರ ಆ ಹೆಸರನ್ನು ಕೈಬಿಟ್ಟರು.[ಸೂಕ್ತ ಉಲ್ಲೇಖನ ಬೇಕು]

ಅವರ ಪ್ರಥಮ ಮುಖ್ಯ ಪಾತ್ರವನ್ನು 1979ರಲ್ಲಿ ದೇವಲೋಕಂ ನಲ್ಲಿ ವಹಿಸಿದಾಗ, ವೃತ್ತಿಪರ ಚಲನಚಿತ್ರ ಜೀವನವು ಆರಂಭವಾಯಿತು.[] ಇದನ್ನು ಹಿರಿಯ ನಿರ್ದೇಶಕ ಎಂ.ಟಿ. ವಾಸುದೇವನ್ ನಾಯರ್ ನಿರ್ದೇಶಿಸಿದ್ದರು. ಆದಾಗ್ಯೂ ಈ ಚಲನಚಿತ್ರವು ಬಿಡುಗಡೆಯನ್ನು ಕಾಣಲಿಲ್ಲ.

1980ರ ದಶಕ

[ಬದಲಾಯಿಸಿ]

ಎಂ.ಆಜಾದ್ ನಿರ್ದೇಶನದ ಎಂ.ಟಿ.ವಾಸುದೇವನ್ ನಾಯರ್ ಚಿತ್ರಕಥೆ ಬರೆದ ವಿಲ್ಕಾನುಂಡು ಸ್ವಪ್ನಂಗಳ್ ಮಮ್ಮುಟ್ಟಿಯ ಬಿಡುಗಡೆಯಾದ ಪ್ರಥಮ ಚಿತ್ರ.[೧೦] ಕೆ.ಜಿ.ಜಾರ್ಜ್ ಅವರು ನಿರ್ದೇಶಿಸಿದ ಮೇಳಾ ಚಿತ್ರದಲ್ಲಿ ಸರ್ಕಸ್ ಕಲಾವಿದನ ಅವರ ಪಾತ್ರ ಮತ್ತು ಐ.ವಿ.ಶಶಿ ನಿರ್ದೇಶನದ ತ್ರಿಷ್ಣಾ ದಲ್ಲಿನ ಅವರ ಪಾತ್ರಗಳು ನಾಯಕನಟರಾಗಿ ಗಮನಸೆಳೆಯಿತು.[][]

1982ರಲ್ಲಿ ಅವರು ಕೆ.ಜಿ. ಜಾರ್ಜ್ ನಿರ್ದೇಶನದ ಪತ್ತೇದಾರಿ ರೋಮಾಂಚಕಾರಿ ಕಥೆ ಯವನಿಕಾ (1982 )ದಲ್ಲಿ ಪೊಲೀಸ್ ಅಧಿಕಾರಿಯ ಅವರ ಪಾತ್ರ ನಿರ್ವಹಣೆಯಿಂದ ಮಮ್ಮುಟ್ಟಿ ಕಠಿಣ ಪೊಲೀಸ್ ಅಧಿಕಾರಿಯ ಪಾತ್ರವಹಿಸುವ ಪರಂಪರೆ ಆರಂಭಕ್ಕೆ ದಾರಿಕಲ್ಪಿಸಿತು. ಮುಂಬರುವ ವರ್ಷಗಳಲ್ಲಿ ಅವರು ಅನೇಕ ಸಾಹಸ ಮತ್ತು ಪತ್ತೇದಾರಿ ರೋಮಾಂಚಕಾರಿ ಚಿತ್ರಗಳಲ್ಲಿ ಈ ಪಾತ್ರವನ್ನು ಅಭಿನಯಿಸಿದರು.[೧೧]

1981ರಲ್ಲಿ ಅವರು ಅಹಿಂಸಾ ದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ತಮ್ಮ ಪ್ರಥಮ ರಾಜ್ಯ ಪ್ರಶಸ್ತಿಯನ್ನು ಗಳಿಸಿದರು.[೧೨]

1980ರ ದಶಕದ ಮಧ್ಯಾವಧಿಯಲ್ಲಿ ಅವರು ಪದ್ಮರಾಜನ್‌ರವರ ಕೂಡೆವಿಡೆ ಮತ್ತು ಜೋಷಿಯವರ ಆ ರಾತ್ರಿ ಚಿತ್ರಗಳಲ್ಲಿ ಅಭಿನಯಿಸಿದರು. ಎಂ.ಟಿ.ವಾಸುದೇವನ್ ನಾಯರ್ ಚಿತ್ರಕಥೆ ಬರೆದ ಆಲ್‌ಕೂತತಿಲ್ ತನಿಯೆ ಮತ್ತು ಆದಿಯೋಳುಕ್ಕುಕಳ್ ಚಿತ್ರಗಳಲ್ಲಿ ಅವರ ಅಭಿನಯವು ಗುಣಮಟ್ಟದ ನಟರಾಗಿ ಅವರನ್ನು ಸ್ಥಿರಗೊಳಿಸಿತು.[೧೩]

1982ರಿಂದ 1986ರವರೆಗಿನ ಅವರ ಐದು ವರ್ಷಗಳ ಕಾಲದಲ್ಲಿ ಅವರು ನಾಯಕನಟರಾಗಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.[೧೦]

ಎಂ.ಟಿ.ವಾಸುದೇವನ್ ನಾಯರ್ ಚಿತ್ರಕತೆ ಮತ್ತು ಐ.ವಿ.ಶಶಿ ನಿರ್ದೇಶನದ ಆದಿಯೋಳುಕ್ಕುಕಳ್‌ ನಲ್ಲಿನ ಕರುಣನ್ ಪಾತ್ರದಿಂದ ಅತ್ಯುತ್ತಮ ನಟ ವಿಭಾಗದಲ್ಲಿ ಅವರಿಗೆ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಮಮ್ಮುಟ್ಟಿ ಅವರು ಬಾಲು ಮಹೇಂದ್ರ ನಿರ್ದೇಶಿಸಿದ ಯಾತ್ರಾ ಚಿತ್ರಕ್ಕಾಗಿ ರಾಜ್ಯ ವಿಶೇಷ ತೀರ್ಪುಗಾರ ಪ್ರಶಸ್ತಿ ಮತ್ತು ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅದರಲ್ಲಿ ಅವರು ಅರಣ್ಯಾಧಿಕಾರಿಯ ಪಾತ್ರವನ್ನು ವಹಿಸಿದ್ದರು. 80ರ ದಶಕದ ಇತರೆ ಚಲನಚಿತ್ರಗಳು ನಿರಾಕ್ಕೂಟ್ಟು (1985 ), ನಿವ್ ಡೆಲ್ಲಿ(1987 ) ಮತ್ತು ತನಿವರತನಂ(1987 ).

1980 ಮತ್ತು 1990ರ ದಶಕದ ಕೊನೆ

[ಬದಲಾಯಿಸಿ]

1988ರಲ್ಲಿ ಮಮ್ಮುಟ್ಟಿ ಒರು CBI ಡೈರಿ ಕುರಿಪ್ಪು ವಿನಲ್ಲಿ ಕಾಣಿಸಿಕೊಂಡರು. ಅದರ ಹಿಂದೆಯೇ ಇನ್ನೂ ಮೂರು ಹತ್ಯೆ ನಿಗೂಢತೆಯ ಉತ್ತರಭಾಗಗಳನ್ನು ಅದೇ ಪಾತ್ರಗಳೊಂದಿಗೆ ನಿರ್ಮಿಸಲಾಯಿತು: ಜಾಗೃತಾ (1989), ಸೇತುರಾಂ ಐಯರ್ CBI (2004) ಮತ್ತು ನೆರಾರಿಯನ್ C.B.I (2005). ಎಲ್ಲಾ ಚಿತ್ರಗಳನ್ನು ಕೆ.ಮಧು ನಿರ್ದೇಶಿಸಿದರು. ಎಸ್.ಎನ್.ಸ್ವಾಮಿ ಚಿತ್ರಕಥೆ ಬರೆದಿದ್ದು, ಮಮ್ಮುಟ್ಟಿ ಸೇತುರಾಂ ಐಯರ್ ಪಾತ್ರವನ್ನು ನಿರ್ವಹಿಸಿದರು. ಎಂ.ಟಿ.ವಾಸುದೇವನ್ ನಾಯರ್ ಅವರ ಎರಡು ಚಿತ್ರಗಳಲ್ಲಿ ಮಮ್ಮುಟ್ಟಿ ನಟಿಸಿದ್ದಾರೆ. ಒಂದು ಚಿತ್ರ ಅಕ್ಷರಾಂಗಳ್ ನ್ನು I. V. ಶಶಿನಿರ್ದೇಶಿಸಿದರು. ಇನ್ನೊಂದು ಚಿತ್ರವು ಸುಕೃತಂ ಹರಿಕುಮಾರ್ ನಿರ್ದೇಶಿಸಿದರು.

ಮಮ್ಮುಟ್ಟಿ ಚಿತ್ರ ಒರು ವಡಕ್ಕನ್ ವೀರಗಥಾ ದಲ್ಲಿ ಅಭಿನಯಿಸಿದರು. ಇದನ್ನು ಟಿ. ಹರಿಹರನ್ ನಿರ್ದೇಶಿಸಿದ್ದು, ಎಂ. ಟಿ. ವಾಸುದೇವನ್ ನಾಯರ್ಚಿತ್ರಕಥೆ ಬರೆದಿದ್ದಾರೆ. ಅವರ ವಿಶಿಷ್ಟ ಪರಾಕ್ರಮದಿಂದ ಕೂಡಿರುವ, ಆದರೆ ಸಂದರ್ಭಗಳ ಸುಳಿಗೆ ಸಿಕ್ಕಿ ಹೆಸರು ಕೆಡಿಸಿಕೊಂಡ ಚೆಕಾವರ್ (ಬಾಡಿಗೆ ಹೋರಾಟಗಾರ) ಚಿತ್ರಣವು ಅತ್ಯುತ್ತಮ ನಟನಿಗಿರುವ ರಾಷ್ಟ್ರೀಯ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು. ಅಡೂರ್ ಗೋಪಾಲಕೃಷ್ಣ ನಿರ್ದೇಶನದ ಮಥಿಲುಕಾಲ್‌ ನಲ್ಲಿ ಮಮ್ಮುಟ್ಟಿ ಅಭಿನಯವನ್ನು ಕೂಡ ಪ್ರಶಸ್ತಿಗಾಗಿ ಪರಿಗಣಿಸಲಾಗಿತ್ತು. ಐ. ವಿ. ಶಶಿ ನಿರ್ದೇಶನದ ಮೃಗಯಾ ದಲ್ಲಿ ಬೇಟೆಗಾರ ವರುಣ್ಣಿ ಪಾತ್ರ ಮತ್ತು ಇನ್ನೊಂದು ಚಿತ್ರ ಮಹಾಯಾನಂ ಕೂಡ ರಾಜ್ಯ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಮಮ್ಮುಟ್ಟಿ ಅಮರಮ್‌ ನ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿಯನ್ನು ಗೆದ್ದಿದ್ದು, ಇದನ್ನು ಭರತನ್ ನಿರ್ದೇಶಿಸಿದ್ದಾರೆ.[೧೪]

ಮಮ್ಮುಟ್ಟಿ ತಮ್ಮ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಅಡೂರ್ ಗೋಪಾಲಕೃಷ್ಣನ್ರವರ ವಿಧೇಯನ್ ಮತ್ತು ಟಿವಿ ಚಂದ್ರನ್ಅವರ ಪೊಂಥನ್ ಮಾದಾ ಅಭಿನಯಗಳಿಗಾಗಿ ಸ್ವೀಕರಿಸಿದರು. ಎರಡೂ ಚಿತ್ರಗಳ ಪಾತ್ರಗಳಿಗಾಗಿ ಅವರು ರಾಜ್ಯ ಪ್ರಶಸ್ತಿಯನ್ನು ಕೂಡ ಸ್ವೀಕರಿಸಿದರು. ಕೊಚಿನ್ ಹನೀಫಾ ನಿರ್ದೇಶನದ ವಾತ್ಸಲ್ಯಂ ನಲ್ಲಿ ಅವರ ಅಭಿನಯವನ್ನು ಕೂಡ ರಾಜ್ಯ ಪ್ರಶಸ್ತಿಗಾಗಿ ಪರಿಗಣಿಸಲಾಗಿತ್ತು.[೧೪]

1999ರಲ್ಲಿ ಮಮ್ಮುಟ್ಟಿ ತಮ್ಮ ಮೂರನೇ ರಾಷ್ಟ್ರೀಯ ಪ್ರಶಸ್ತಿಯನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ಇಂಗ್ಲೀಷ್ ಭಾಷೆಯ ಚಲನಚಿತ್ರಕ್ಕಾಗಿ ಗೆದ್ದುಕೊಂಡರು. ಇದು ಅಂಬೇಡ್ಕರ್, ಜೀವನಚರಿತ್ರೆಯನ್ನು ಒಳಗೊಂಡಿದ್ದು, ಜಬ್ಬಾರ್ ಪಟೇಲ್ನಿರ್ದೇಶಿಸಿದ್ದಾರೆ.[೧೫] ಚಲನಚಿತ್ರವನ್ನು ಭಾರತದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಸಾಮಾಜಿಕ ನ್ಯಾಯ ಸಚಿವಾಲಯಯವು ಪ್ರಾಯೋಜಿಸಿದೆ.

ಪ್ರಸಕ್ತ ಯುಗ, 2000–ಇಂದಿನವರೆಗೆ

[ಬದಲಾಯಿಸಿ]

2000ದ ಪೂರ್ವದಲ್ಲಿ, ಮಮ್ಮುಟ್ಟಿ ಸಿದ್ಧಿಖಿಯವರ ಕ್ರೋನಿಕ್ ಬ್ಯಾಚೆಲರ್ , ಕೆ.ಮಧುರವರ ಸೇತುರಾಮ ಅಯ್ಯರ್ CBI ಮತ್ತು ಬ್ಲೆಸ್ಸಿಯವರಕಾಜ್‌ಚಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2004ರಲ್ಲಿ ಅವರು ರಾಜ್ಯ ಪ್ರಶಸ್ತಿಯನ್ನು ಕಾಜ್‌ಚಾ ದಲ್ಲಿ ನಿರ್ವಾಹಕ ಮಾಧವನ್ ಚಿತ್ರಣಕ್ಕಾಗಿ ಗೆದ್ದಿದ್ದಾರೆ. ಎರಡು ಪ್ರಮುಖ ಗಲ್ಲಾಪೆಟ್ಟಿಗೆ ಯಶಸ್ವಿ ಚಿತ್ರಗಳಾದ ತೊಮ್ಮನುಂ ಮಕ್ಕಳುಂ ಮತ್ತು ರಾಜಾಮಾಣಿಕ್ಯಂ ನೊಂದಿಗೆ ವರ್ಷ 2005 ಅವರ ಪಾಲಿಗೆ ಅತ್ಯಂತ ಯಶಸ್ವಿಯೆಂದು ಸಾಬೀತಾಯಿತು. ಅನ್ವರ್ ರಷೀದ್ ಚೊಚ್ಚಲ ನಿರ್ದೇಶನದ ರಾಜಾ ಮಾಣಿಕ್ಯಂ ಆ ಕಾಲದ ಮಲಯಾಳಂ ಸಿನೆಮಾದ ಅತ್ಯಂತ ಯಶಸ್ವಿ ಚಿತ್ರವಾಯಿತು.[೧೬]

2000ಮಧ್ಯಾವಧಿಯ ಇತರೆ ಚಿತ್ರಗಳು ಜಾನಿ ಆಂಟೋನಿಯವರ ಥುರುಪ್ಪು ಗುಲಾನ್ (2006), ಶಫಿಯವರ ಮಾಯಾವಿ (2007), ಅಮುಲ್ ನೀರದ್ರವರ ಬಿಗ್ B (2007), ಅನ್ವರ್ ರಷೀದ್ಅವರ ಅಣ್ಣನ್ ತಂಬಿ (2008)ಮತ್ತು ಜಯರಾಜ್ರವರ ಲೌಡ್‌ಸ್ಪೀಕರ್ (2009).

2009 ಅಕ್ಟೋಬರ್‌ನಲ್ಲಿ ಪಜಸಿ ರಾಜಾ , Tಹರಿಹರನ್ ನಿರ್ದೇಶನದಲ್ಲಿ ಮತ್ತು ಎಂ. ಟಿ. ವಾಸುದೇವನ್ ನಾಯರ್ ಚಿತ್ರಕಥೆಯೊಂದಿಗೆ ಬಿಡುಗಡೆಯಾಯಿತು. ಮಲೆಯಾಳಂ ಸಿನೆಮಾ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಗಳಿಕೆಯ ಚಲನಚಿತ್ರ ಎಂದು ಇದು ಹೆಸರಾಗಿದೆ.[೧೭]

2009ರಲ್ಲಿ ಅವರು ತಮ್ಮ ಐದನೇ ಅತ್ಯುತ್ತಮ ನಟನೆಗೆ ರಾಜ್ಯ ಪ್ರಶಸ್ತಿಯನ್ನು ಪಾಲೇರಿ ಮಾಣಿಕ್ಯಂ ಅಭಿನಯಕ್ಕಾಗಿ ಗೆದ್ದುಕೊಂಡರು.

ಮಮ್ಮುಟ್ಟಿಯವರನ್ನು 2009ರಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಆದರೆ ಅವರು ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಪ್ರಶಸ್ತಿಯನ್ನು ಕಳೆದುಕೊಂಡರು. ಬಚ್ಚನ್ ಅವರಿಗೆ ಪ್ರಶಸ್ತಿ ನೀಡುವ ತೀರ್ಪುಗಾರರ ನಿರ್ಧಾರವನ್ನು ಕುಟ್ಟಿ ಶ್ರಾಂಕ್ (2009ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ವಿಜೇತ)ನ ನಿರ್ದೇಶಕ ಶಾಜಿ ಎನ್.ಕರುಣ್ ಮತ್ತು ಪಾಲೇರಿ ಮಾಣಿಕ್ಯಂ ನಿರ್ದೇಶಕ ರಂಜಿತ್ ಟೀಕಿಸಿದ್ದಾರೆ.[೧೮]

ಅವರ ಇತ್ತೀಚಿನ ಬಿಡುಗಡೆ ಪ್ರಾಂಚಿಯೇತನ್ ಎಂಡ್ ದಿ ಸೇಂಟ್ ಚಿತ್ರವನ್ನು ರಂಜಿತ್ನಿರ್ದೇಶಿಸಿದ್ದಾರೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ವಿಯಾಯಿತು .[೧೯]

ಇತರ ಭಾಷೆಗಳ ಚಿತ್ರಗಳು

[ಬದಲಾಯಿಸಿ]

ಮಮ್ಮುಟ್ಟಿ ಅವರು ಕೆಲವು ಮಲೆಯಾಳಂಯೇತರ ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತುಇಂಗ್ಲೀಷ್ಚಿತ್ರಗಳು ಸೇರಿವೆ. 1989ರಲ್ಲಿ ಮೌನಮ್ ಸಮ್ಮತಂ ಮೂಲಕ ತಮಿಳಿಗೆ ಚೊಚ್ಚಲ ಪ್ರವೇಶ ಮಾಡಿದರು. ಇದನ್ನು ಕೆ. ಮಧು ನಿರ್ದೇಶಿಸಿದ್ದಾರೆ. ಅವರು ಕೆ. ಬಾಲಚಂದರ್ (ಅಳಗನ್ ), ಮಣಿ ರತ್ನಂ (ತಲಪಥಿ ), ಮತ್ತು ರಾಜೀವ್ ಮೆನನ್ (' ಕಂಡುಕೊಂಡೈನ್ ಕಂಡುಕೊಂಡೈನ್/4}) ನಿರ್ದೇಶಕರು ಒಳಗೊಂಡ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಿಲಿಪೇಚ್ಚು ಕೆಕ್ಕಾವ (1993),ಫಾಜಿಲ್‌ ನಿರ್ದೇಶಿಸಿದ್ದು, ಮಮ್ಮುಟ್ಟಿ ಸಾಹಸಪ್ರಣಯ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೆ. ವಿಶ್ವನಾಥ್ಅವರ ತೆಲುಗು ಚಿತ್ರ ಸ್ವಾತಿ ಕಿರಣಂ (1992)ನಲ್ಲಿ ಅನಂತ ಶರ್ಮಾ ಪಾತ್ರವನ್ನು ನಿರ್ವಹಿಸಿದ್ದಾರೆ.

ಅವರು 2012ರಲ್ಲಿ ಕನ್ನಡ ಚಿತ್ರ ಶಿಕಾರಿ ಯಲ್ಲಿ ಅಭಿನಯಿಸಿದ್ದಾರೆ

ಅವರು 1989ರಲ್ಲಿ ಬಿಡುಗಡೆಯಾದ ತ್ರಿಯಾತ್ರಿ ಮೂಲಕ ಹಿಂದಿ ಚಲನಚಿತ್ರಗಳಿಗೆ ಚೊಚ್ಚಲ ಪ್ರವೇಶ ಮಾಡಿದರು. ಆದರೆ ನಾಯಕನ ಪಾತ್ರದಲ್ಲಿ ಅವರ ಪ್ರಥಮ ಚಿತ್ರವು ದರ್ತಿಪುತ್ರ ಆಗಿತ್ತು. ಅವರು ಜೀವನಚರಿತ್ರೆಯ ಚಿತ್ರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಲ್ಲಿ ನಟಿಸಿದರು. ಇಂಗ್ಲೀಷ್ ಭಾಷೆಯಲ್ಲಿರುವ ಇದನ್ನು ಜಬ್ಬಾರ್ ಪಟೇಲ್ ನಿರ್ದೇಶಿಸಿದರು. ಅವರು ಸೌವ್ ಜೂಟ್ ಏಕ್ ಸಚ್ (2004) ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ.

ದುಬೈನಲ್ಲಿ ನಡೆದ 2006ನೇ IIFA ಪ್ರಶಸ್ತಿಗಳ ಸಮಾರಂಭದಲ್ಲಿ,IIFA ಪ್ರಶಸ್ತಿಗಳ ಸಂಘಟಕರು ದಕ್ಷಿಣ ಭಾರತ ಚಲನಚಿತ್ರವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆಂದು ಬಹಿರಂಗವಾಗಿ ಟೀಕಿಸಿದರು.ಬಾಲಿವುಡ್ ಚಿತ್ರೋದ್ಯಮವು ತನ್ನನ್ನು ಅಂತಾರಾಷ್ಟ್ರೀಯ ಮಟ್ಟದ್ದು ಎಂದು ಕರೆದುಕೊಳ್ಳುವುದಕ್ಕೆ ಮುಂಚಿತವಾಗಿ ದಕ್ಷಿಣ ಭಾರತ ಚಲನಚಿತ್ರೋದ್ಯಮದ ಸ್ಪರ್ಧೆಯನ್ನು ಎದುರಿಸಬೇಕು ಎಂದು ಅವರು ಹೇಳಿದರು.[೨೦]

ಮಾನವೀಯತೆಯ ಕಾರ್ಯಗಳು

[ಬದಲಾಯಿಸಿ]

ಮಮ್ಮುಟ್ಟಿ ಅವರು ಅರ್ಧ ಡಜನ್‌ಗೂ ಹೆಚ್ಚು ಜನೋಪಕಾರಿ ಯೋಜನೆಗಳಲ್ಲಿ ಒಳಗೊಂಡಿದ್ದು, ಅಗತ್ಯವಾದ ಜನರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿವೆ.[೨೧]

ನೋವು ಮತ್ತು ಉಪಶಮನ ಕೇಂದ್ರ

[ಬದಲಾಯಿಸಿ]

ಮಮ್ಮುಟ್ಟಿ ನೋವು ಮತ್ತು ಉಪಶಮನ ಆರೈಕೆ ಸೊಸೈಟಿಯ ಆಶ್ರಯದಾತರಾಗಿದ್ದಾರೆ.[೨೨] ಇದು ಕೇರಳದ ಧರ್ಮದತ್ತಿ ಸಂಸ್ಥೆ ಯಾಗಿದೆ. ವಿಷಮಾವಸ್ಥೆಯ ಕ್ಯಾನ್ಸರ್‌ಪೀಡಿತ ರೋಗಿಗಳ ಜೀವನ ಮಟ್ಟವನ್ನು ಸುಧಾರಿಸುವ ಗುರಿಯೊಂದಿಗೆ ಇದನ್ನು ಸ್ಥಾಪಿಸಲಾಗಿದೆ. ಭಾರತದ ಕೋಳಿಕೋಡ್‌ನಲ್ಲಿ ನೆಲೆಗೊಂಡಿರುವ ನೋವು ಮತ್ತು ಉಪಶಮನ ಆರೈಕೆ ಕೇಂದ್ರದ ಇಂಧನ ಮತ್ತು ಎಂಜಿನ್ ಅವರಾಗಿದ್ದಾರೆ.[೨೩] ಕೇರಳದಾದ್ಯಂತ ಕ್ಯಾನ್ಸರ್‌ನಿಂದ ನರಳುವ ಜನರಿಗೆ ನೋವು ಮತ್ತು ಉಪಶಮನದ ಆರೈಕೆ ನೀಡುವ ವಿನೂತನ ಯೋಜನೆಯನ್ನು ಮಮ್ಮುಟಿ ಮಂಡಿಸಿದ್ದಾರೆ.[೨೪]

ಜೀವನ್ ಜ್ಯೋತಿ

[ಬದಲಾಯಿಸಿ]

ಮಮ್ಮುಟ್ಟಿ ಅವರು ಸಾಮಾಜಿಕ ಕಾರ್ಯದ ಯೋಜನೆ ಜೀವನ್ ಜ್ಯೋತಿಯ ರಾಯಭಾರಿಯಾಗಿದ್ದಾರೆ. ಯಾವುದೇ ನೇತ್ರ ರೋಗಗಳಿಗೆ ಹೃದಯಸಂಬಂಧಿ ರೋಗಗಳಿಗೆ, ಅಸ್ಥಿಚಿಕಿತ್ಸೆ ಸಂಬಂಧಿ ರೋಗಗಳಿಗೆ ಪಿತ್ತಜನಕಾಂಗ ರೋಗಗಳು, ಮೂತ್ರಪಿಂಡ ವೈಫಲ್ಯಗಳು, ಹೇಮೋಫಿಲಿಯ ರೋಗಗಳು ಅಥವಾ ENT ಸಮಸ್ಯೆ[ಸೂಕ್ತ ಉಲ್ಲೇಖನ ಬೇಕು]ಗಳಿಗೆ ಚಿಕಿತ್ಸೆ ಅರಸುವ ಜನರಿಗೆ ನೆರವಾಗುವ ಗುರಿಯನ್ನು ಹೊಂದಿದೆ.

ಸ್ಟ್ರೀಟ್ ಇಂಡಿಯ ಮೂವ್‌ಮೆಂಟ್

[ಬದಲಾಯಿಸಿ]

ಮಮ್ಮುಟ್ಟಿ ಅವರು ಧರ್ಮದತ್ತಿ ಯೋಜನೆ "ಸ್ಟ್ರೀಟ್ ಇಂಡಿಯ ಮೂವ್‌ಮೆಂಟ್" ಸದ್ಭಾವನೆ ರಾಯಭಾರಿಯಾಗಿದ್ದು, ಮಕ್ಕಳ ಭಿಕ್ಷಾಟನೆ ಮತ್ತು ಮಕ್ಕಳ ದುಡಿಮೆಯ ನಿರ್ಮೂಲನದ ಗುರಿಯನ್ನು ಹೊಂದಿದೆ. ಅವರು ಈ ಅಭಿಯಾನದ ಚಟುವಟಿಕೆಗಳನ್ನು ಉತ್ತೇಜಿಸಿದ್ದು, ಇದು ಮಕ್ಕಳನ್ನು ನೋಡಿಕೊಳ್ಳುವ ಅನಾಥಾಲಯಗಳು ಮತ್ತು ಸಂಸ್ಥೆಗಳ ಜತೆ ಜಾಲಗಳನ್ನು ಹೊಂದಿದೆ.[೨೫]

ಕಾಜ್‌ಚಾ- ಉಚಿತ ಕಣ್ಣಿನ ಆರೈಕೆ ಮತ್ತು ಚಿಕಿತ್ಸೆ

[ಬದಲಾಯಿಸಿ]

ಕಾಜ್‌ಚಾ ಉಚಿತ ಕಣ್ಣಿನ ಆರೈಕೆ ಮತ್ತು ಚಿಕಿತ್ಸೆ ನೀಡಲು ಮಮ್ಮುಟ್ಟಿ ಅಭಿಮಾನಿಗಳ ಕಲ್ಯಾಣ ಸಂಘ ಮತ್ತು ಮಮ್ಮುಟ್ಟಿ ಟೈಮ್ಸ್ ಸಂಘಟಿಸಿದ ಸಾಹಸವಾಗಿದೆ. ಲಿಟರ್ ಫ್ಲವರ್ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಮತ್ತು ಕೇರಳದ ಕಣ್ಣಿನ ಬ್ಯಾಂಕ್ ಅಸೋಸಿಯೇಷನ್ ಸಹಯೋಗದೊಂದಿಗೆ ಇದನ್ನು ಸಂಘಟಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಮುಖ ಚಟುವಟಿಕೆಯು ಮಕ್ಕಳಿಗೆ ಉಚಿತ ಕನ್ನಡಕಗಳ ವಿತರಣೆ ಮಾಡುವುದಾಗಿದೆ. ಈ ಉದ್ದೇಶಕ್ಕೆ ಭಾರತದ ರಾಷ್ಟ್ರಪತಿ ಕಚೇರಿಯಿಂದ ಸ್ವೀಕರಿಸಿದ ವಿಶೇಷ ನಿಧಿಯನ್ನು ಬಳಸಲಾಗುವುದು. ಈ ಯೋಜನೆಗೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರಗಳನ್ನು ನಡೆಸಲಾಯಿತು.[೨೬]

ಆಹಾರ ಮತ್ತು ಸಾಮಗ್ರಿಗಳ ದಾನ

[ಬದಲಾಯಿಸಿ]

2007ರ ಓಣಂ ಸಂದರ್ಭದಲ್ಲಿ, ಮಮ್ಮುಟ್ಟಿ ಕೊಟ್ಟಾಯಂ ಜಿಲ್ಲೆಯ ಕಾಂಜಿರಪಲ್ಲಿ ಬಳಿಯ ಪರತ್ತೋಡುನ ಸಾವಿರಾರು ಕುಟುಂಬಗಳಿಗೆ ಆಹಾರಪದಾರ್ಥಗಳನ್ನು ಉಚಿತವಾಗಿ ಹಂಚಿದರು. ಕೇರಳದ ಈ ಗ್ರಾಮವು ಚಿಕನ್‌ಗುನ್ಯಾದಿಂದ ಪೀಡಿತವಾಗಿತ್ತು. ರಾಜ್ಯದಲ್ಲಿ ಹೆಚ್ಚಿನ ಜೀವಗಳನ್ನು ಬಲಿತೆಗೆದುಕೊಂಡ ಈ ಗ್ರಾಮವು ರೋಗದಿಂದ ತೀವ್ರ ಪೀಡಿತವಾಗಿತ್ತು.[೨೭] ಪತ್ರಿಕಾಗೋಷ್ಠಿಯೊಂದರಲ್ಲಿ ಮಮ್ಮುಟ್ಟಿ ಅದಕ್ಕೆ ಪ್ರೇರಣೆಗಳನ್ನು ವಿವರಿಸಿದರು.

I decided to do this because the village has lost the maximum number of people to chikunguniya in the state this year. And this is not a publicity event and I would not be going there to distribute it either. This is done to see that others also come to extend a helping hand to those who are suffering.

ಅಕ್ಷಯ: ಮಾಹಿತಿ ತಂತ್ರಜ್ಞಾನ ಪ್ರಸಾರ

[ಬದಲಾಯಿಸಿ]

ಕೇರಳ ಸರ್ಕಾರದ ಮಾಹಿತಿ ತಂತ್ರಜ್ಞಾನ ಪ್ರಸಾರ ಯೋಜನೆಯಾದ ಅಕ್ಷಯಕ್ಕೆ ಮಮ್ಮುಟ್ಟಿ ಸದ್ಭಾವನೆ ರಾಯಭಾರಿಯಾಗಿದ್ದರು.[೨೮][೨೯] ಅವರು 2006ರ ಫೆಬ್ರವರಿ 26ರಂದು ವಿಡಿಯೊ ಜಾಲದ ಕಾರ್ಯಕ್ರಮದ ಮೂಲಕ ಔಪಚಾರಿಕವಾಗಿ ಈ ಪಾತ್ರ ವಹಿಸಿದರು. ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲಾ ಮುಖ್ಯಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು.[] ಮಮ್ಮುಟ್ಟಿ ಮುದ್ರಣ ಮತ್ತು ದೃಶ್ಯ ಮಾಧ್ಯಮದ ಜಾಹೀರಾತುಗಳಲ್ಲಿ ಮತ್ತು ಇತರೆ ಸಾರ್ವಜನಿಕ ವಸ್ತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ಅಭಿಯಾನದ ನೇತೃತ್ವ ವಹಿಸಿದರು. ಅದು ಅಕ್ಷಯ ಯೋಜನೆಯನ್ನು ಜನಸಾಮಾನ್ಯರಿಗೆ ತಲುಪಿಸಿತು. ಅವರು ವಿವರಿಸಿದ್ದು,

I am really happy to be associated with this unique project that promises to ring in wholesome change to the perceptions about Kerala as it seeks to make its presence felt in the digital era... If we manage to reach the benefits of information technology to the entire population, we would be able to raise ourselves to the levels of a developed society. I understand that the Akshaya project has been launched with this objective. I am sure this unique project will go to make the State a fully empowered knowledge society.[೩೦]

ದೂರದರ್ಶನದ ವೃತ್ತಿಜೀವನ

[ಬದಲಾಯಿಸಿ]
2007ರಲ್ಲಿ ಮಮ್ಮುಟ್ಟಿ

2010ರಲ್ಲಿ ಮಮ್ಮುಟ್ಟಿ ಮಲಯಾಳಂ ಕಮ್ಯುನಿಕೇಷನ್ಸ್ ಅಧ್ಯಕ್ಷರಾಗಿದ್ದು,[೩೧] ಅದು ಕೈರಾಲಿ TV, ಪೀಪಲ್ TV ಮತ್ತು ಚಾನಲ್ ವಿಮುಂತಾದ ಮಲಯಾಳಂ TV ಚಾನಲ್‌ಗಳನ್ನು ನಡೆಸುತ್ತಿದೆ.

ಅವರು ಟೆಲಿವಿಷನ್ ನಿರ್ಮಾಣ ಕಂಪೆನಿ ಮೆಗಾಬೈಟ್ಸ್‌ನ್ನು ರಚಿಸಿದರು. ಅದು ಕೆಲವು ಟೆಲಿವಿಷನ್ ಸರಣಿಗಳನ್ನು ನಿರ್ಮಿಸಿದೆ. ಅದರಲ್ಲಿ ಮೊದಲನೆಯದು 1990ರ ದಶಕದ ಕೊನೆಯ ಜ್ವಲಾಯಯ್ . ನಿರ್ಮಾಪಕರಾಗಿ ಇದು ಅವರ ಪ್ರಥಮ ಯೋಜನೆಯಾಗಿದೆ.[೩೨] ಜ್ವಲಾಯಯ್ ಮಲೆಯಾಳಂ ಟೆಲಿವಿಷನ್‌ನಲ್ಲಿ ಇತಿಹಾಸವನ್ನು ನಿರ್ಮಿಸಿತು.[೩೩] ಅವರು ಮಮ್ಮುಟ್ಟಿ ಟೆಕ್ನೊಟೈನ್‌ಮೆಂಟ್ ಎಂಬ ಹೆಸರಿನ ಚಲನಚಿತ್ರ ಹಂಚಿಕೆ ಕಂಪೆನಿಯನ್ನು ಕೂಡ ಆರಂಭಿಸಿದರು.[೩೪] ಅದು ಕೇರಳದಲ್ಲಿ ಕಾರ್ಮೆಘಮ್‌ ತಮಿಳು ಚಿತ್ರವನ್ನು ಹಂಚಿಕೆ ಮಾಡಿದೆ. ಹಂಚಿಕೆ ಹಕ್ಕುಗಳಿಂದ ಅದು ತನ್ನ ಪ್ರಥಮ ಪಾಲನ್ನು ಪಡೆಯಿತು.

ಇತರೆ ಚಟುವಟಿಕೆಗಳು

[ಬದಲಾಯಿಸಿ]

ಮಮ್ಮುಟ್ಟಿ 2006ರ ಅಕ್ಟೋಬರ್ 16ರಂದು ಕೇರಳ ಮೂಲದ ಸೌತ್ ಇಂಡಿಯನ್ ಬ್ಯಾಂಕ್‌ನ ಬ್ರಾಂಡ್ ರಾಯಭಾರಿಯಾದರು.[೩೫][೩೬] ಅವರು ಕೇರಳ ವಾಲಿಬಾಲ್ ಲೀಗ್‌ನ ಬ್ರಾಂಡ್ ರಾಯಭಾರಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.[೩೭]

ಮಮ್ಮುಟ್ಟಿ ಮತ್ತು ದುಬೈ ಮೂಲದ ಉದ್ಯಮಿ MA ಯೂಸುಫ್ ಅಲಿ ದುಬೈ ಇಂಟರ್‌ನೆಟ್ ಸಿಟಿ (DIC) ಅಧಿಕಾರಿಗಳನ್ನು ಭೇಟಿ ಮಾಡಿ ಕೊಚ್ಚಿಯಲ್ಲಿ ಉದ್ದೇಶಿತ ಸ್ಮಾರ್ಟ್ ಸಿಟಿ ಯೋಜನೆಗೆ ಲಾಬಿ ಮಾಡಿದರು,.[೩೮]

ಮಮ್ಮುಟ್ಟಿ ತಮ್ಮ ಪ್ರಥಮ ಪುಸ್ತಕ ಕಾ‌ಜ್‌ಚಾಪಾಡುನಲ್ಲಿ(ಬಹುಮಟ್ಟಿಗೆ "ದೃಷ್ಟಿಕೋನ" ಎಂದು ಅನುವಾದ),ವರ್ಷಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಅವರು ಬರೆದ ಸಣ್ಣ ಪ್ರಬಂಧಗಳ ಸಂಗ್ರಹವಾಗಿದೆ.[೩೯][೪೦]

ಪ್ರಶಸ್ತಿಗಳು, ಗೌರವಗಳು ಮತ್ತು ಮನ್ನಣೆಗಳು

[ಬದಲಾಯಿಸಿ]

ನಾಗರಿಕ ಗೌರವಗಳು

[ಬದಲಾಯಿಸಿ]
ಸಂಖ್ಯೆ ವರ್ಷ ಪ್ರಶಸ್ತಿ ವಿಭಾಗ ಪ್ರಶಸ್ತಿ ನೀಡಿದವರು ಟಿಪ್ಪಣಿಗಳು
001 1998 ಪದ್ಮಶ್ರೀ ಕಲೆ, ಸಿನೆಮಾ ಭಾರತ ಸರ್ಕಾರ
More
In January 1998, the Government of India honoured Mammootty with the civilian award, Padma Shri, awarded for his national service, including his contributions to the Indian film industry.

ಗೌರವ ಪದವಿಗಳು

[ಬದಲಾಯಿಸಿ]
ಸಂಖ್ಯೆ ವರ್ಷ ಪ್ರಶಸ್ತಿ ವಿಭಾಗ ಪ್ರಶಸ್ತಿ ನೀಡಿದವರು ಟಿಪ್ಪಣಿಗಳು
002 2010 D.ಲಿಟ್. ಕಲೆ, ಸಿನೆಮಾ ಕೇರಳ ವಿಶ್ವವಿದ್ಯಾನಿಲಯ
More
In January 2010, the University of Kerala honoured Mammootty with a Doctorate of Letters (D.Litt.), awarded for his national service, including his contributions to the Indian film industry.
001 2010 D.ಲಿಟ್ ಕಲೆ, ಸಿನೆಮಾ ಕಲ್ಲಿಕೋಟೆ ವಿಶ್ವವಿದ್ಯಾನಿಲಯ
More
In December 2010, the University of Calicut honoured Mammootty with a Doctorate of Letters (D.Litt.), awarded for his national service, including his contributions to the Indian film industry.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

[ಬದಲಾಯಿಸಿ]
ಸಂಖ್ಯೆ ವರ್ಷ ವಿಭಾಗ ಭಾಷೆ ಚಿತ್ರ(ಗಳು) ಪಾತ್ರ (ಗಳು)
003 1998 ಅತ್ಯುತ್ತಮ ನಟ ಇಂಗ್ಲೀಷ್ Dr. ಬಾಬಾಸಾಹೇಬ್ ಅಂಬೇಡ್ಕರ್ Dr. B. R. ಅಂಬೇಡ್ಕರ್
002 1993 ಅತ್ಯುತ್ತಮ ನಟ ಮಲಯಾಳಂ ವಿಧೇಯನ್
ಪೊಂಥಾನ್ ಮಾದಾ
ಭಾಸ್ಕರ್ ಪಟೇಲಾರ್
ಮಾದಾ
001 1989 ಅತ್ಯುತ್ತಮ ನಟ ಮಲಯಾಳಂ ಒರು ವಡಕ್ಕನ್ ವೀರಗಥಾ
ಮಥಿಲುಕಾಲ್
ಚಂತು ಚೆಕಾವರ್ ವೈಕೋಂ ಮೊಹಮ್ಮದ್ ಬಷೀರ್

ಕೇರಳ ರಾಜ್ಯದ ಚಲನಚಿತ್ರ ಪ್ರಶಸ್ತಿಗಳು

[ಬದಲಾಯಿಸಿ]
ಸಂಖ್ಯೆ ವರ್ಷ ವಿಭಾಗ ಭಾಷೆ ಚಿತ್ರ(ಗಳು) ಪಾತ್ರ(ಗಳು)
007 2009 ಅತ್ಯುತ್ತಮ ನಟ ಮಲಯಾಳಂ ಪಾಲೇರಿ ಮಾಣಿಕ್ಯಂ ಮುರಿಕ್ಕುಂ ಕುಣ್ಣಥು ಅಹ್ಮದ್ ಹಾಜಿ, ಹರಿದಾಸ್ ಮತ್ತು ಖಾಲಿದ್ ಅಹ್ಮದ್
006 2004 ಅತ್ಯುತ್ತಮ ನಟ ಮಲಯಾಳಂ ಕಾಜ್‌ಚಾ ಮಾಧವನ್
005 1993 ಅತ್ಯುತ್ತಮ ನಟ ಮಲಯಾಳಂ ವಿಧೇಯನ್
ಪೊಂಥಾನ್ ಮಾದಾ
ವಾತ್ಸಲ್ಯಂ
ಭಾಸ್ಕರ್ ಪಟೇಲರ್
ಮಾದಾ
ರಾಘವನ್ ನಾಯರ್
004 1989 ಅತ್ಯುತ್ತಮ ನಟ ಮಲಯಾಳಂ ಒರು ವಡಕ್ಕನ್ ವೀರಗಥಾ
ಮೃಗಯಾ
ಮಹಾಯಾನಂ
ಚಾಂತು ಚೆಕಾವರ್
ವಾರುಣ್ಣಿ
ಚಂದ್ರು
003 1985 ವಿಶೇಷ ತೀರ್ಪುಗಾರ ಪ್ರಶಸ್ತಿ ಮಲಯಾಳಂ ಯಾತ್ರಾ
ನಿರಕ್ಕೂಟ್ಟು
ಉನ್ನಿಕೃಷ್ಣನ್
ರವಿ ವರ್ಮಾ
002 1984 ಅತ್ಯುತ್ತಮ ನಟ ಮಲಯಾಳಂ ಅದಿಯೋಜುಕ್ಕುಕಲ್ ಕರುಣನ್
001 1981 ಅತ್ಯುತ್ತಮ ಪೋಷಕ ನಟ ಮಲಯಾಳಂ ಅಹಿಂಸಾ ವಾಸು

ಫಿಲ್ಮ್‌ಫೇರ್ ಪ್ರಶಸ್ತಿಗಳು

[ಬದಲಾಯಿಸಿ]
ಸಂಖ್ಯೆ ವರ್ಷ ವಿಭಾಗ ಭಾಷೆ ಚಿತ್ರ(ಗಳು) ಪಾತ್ರ(ಗಳು)
009 2009 ಅತ್ಯುತ್ತಮ ನಟ ಮಲಯಾಳಂ ಪಾಲೇರಿ ಮಾಣಿಕ್ಯಂ ಅಹ್ಮದ್ ಹಾಜಿ
008 2006 ಅತ್ಯುತ್ತಮ ನಟ ಮಲಯಾಳಂ ಕರುಥ ಪಕ್ಷಿಕಳ್ ಮುರುಗನ್
007 2004 ಅತ್ಯುತ್ತಮ ನಟ ಮಲಯಾಳಂ ಕಾಜ್‌ಚಾ ಮಾಧವನ್
006 2000 ಅತ್ಯುತ್ತಮ ನಟ ಮಲಯಾಳಂ ಆರಯಂಗಲುಡೆ ವೀಡು ರವೀಂದ್ರನಾಥ್
005 1997 ಅತ್ಯುತ್ತಮ ನಟ ಮಲಯಾಳಂ ಭೂತಕನ್ನಡಿ ವಿದ್ಯಾದರನ್
004 1991 ಅತ್ಯುತ್ತಮ ನಟ ಮಲಯಾಳಂ ಅಮರಮ್ ಅಚ್ಚುತನ್ ಕುಟ್ಟಿ
003 1989 ಅತ್ಯುತ್ತಮ ನಟ ಮಲಯಾಳಂ ಮಥಿಲುಕಲ್ ವೈಕೋಂ ಬಷೀರ್
002 1985 ಅತ್ಯುತ್ತಮ ನಟ ಮಲಯಾಳಂ ಯಾತ್ರಾ ಉನ್ನಿಕೃಷ್ಣನ್
001 1984 ಅತ್ಯುತ್ತಮ ನಟ ಮಲಯಾಳಂ ಅದಿಯೋಳುಕ್ಕುರಲ್ ಕರುಣನ್

ಚಿತ್ರ ವಿಮರ್ಶಕರ ಪ್ರಶಸ್ತಿಗಳು

[ಬದಲಾಯಿಸಿ]
ಸಂಖ್ಯೆ ವರ್ಷ ವಿಭಾಗ ಭಾಷೆ ಚಿತ್ರ(ಗಳು) ಪಾತ್ರ(ಗಳು)
009 2006 ಅತ್ಯುತ್ತಮ ನಟ ಮಲಯಾಳಂ ಕರುಥ ಪಕ್ಷಿಕಳ್
ಪಾಲಂಕು
ಮುರುಗನ್
ಮೋನಿಚನ್
008 1997 ವಿಶೇಷ ಪ್ರಶಸ್ತಿಗಳು ಮಲಯಾಳಂ ಭೂತಕನ್ನಡಿ ವಿದ್ಯಾದರನ್
007 1994 ಅತ್ಯುತ್ತಮ ನಟ ಮಲಯಾಳಂ ಸುಕೃತಂ ರವಿ ಶಂಕರ್
006 1992 ಅತ್ಯುತ್ತಮ ನಟ ಮಲಯಾಳಂ ಸೂರ್ಯಮಾನಸಂ
ಆಯಿರಪ್ಪಾರಾ
ಪಾಪಯುಡೆ ಸ್ವಾಂತಂ ಅಪ್ಪೂಸ್
ಪುಟ್ಟುರುಮೀಸ್
ಶೌರಿ
ಬಾಲಚಂದ್ರನ್
005 1989 ಅತ್ಯುತ್ತಮ ನಟ ಮಲಯಾಳಂ ಒರು ವಡಕ್ಕನ್ ವೀರಗಥಾ
ಮಥಿಲುಕಲ್
ಮೃಗಯಾ
ಚಂತು ಚೆಕಾವರ್
ವೈಕೋಂ ಬಷೀರ್
ವಾರುಣ್ಣಿ
004 1987 ಅತ್ಯುತ್ತಮ ನಟ ಮಲಯಾಳಂ ಥನಿಯವರ್ದನಂ
ನವ ದೆಹಲಿ
ಬಾಲ ಗೋಪಾಲನ್
ಜಿ.ಕೃಷ್ಣಮೂರ್ತಿ
003 1985 ಅತ್ಯುತ್ತಮ ನಟ ಮಲಯಾಳಂ ಯಾತ್ರಾ
ನಿರಾಕ್ಕೂಟ್ಟು
ಉನ್ನಿಕೃಷ್ಣನ್
ರವಿ ವರ್ಮಾ
002 1984 ಅತ್ಯುತ್ತಮ ನಟ ಮಲಯಾಳಂ ಅಕ್ಷರಾಂಗಳ್
ಕಣಮರಾಯದು
ಜಯದೇವನ್
ರಾಯ್ ವರ್ಘೀಸ್
001 1982 ಅತ್ಯುತ್ತಮ ಪೋಷಕ ನಟ ಮಲಯಾಳಂ ಯವನಿಕಾ ಜಾಕೋಬ್ ಎರಾಲಿ

ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು

[ಬದಲಾಯಿಸಿ]
ಸಂಖ್ಯೆ ವರ್ಷ ವಿಭಾಗ ಭಾಷೆ ಚಿತ್ರ(ಗಳು) ಪಾತ್ರ(ಗಳು)
005 2009 ಮಿಲ್ಲೆನಿಯಂ ಆಕ್ಟರ್ ಪ್ರಶಸ್ತಿ ಮಲಯಾಳಂ ಪಜಸಿ ರಾಜಾ , ಪಾಲೇರಿ ಮಾಣಿಕ್ಯಂ , ಲೌಡ್‌ಸ್ಪೀಕರ್ ಪಜಾಸಿ ರಾಜಾ, ಮುರಿಕ್ಕುಂ ಕುನ್ನತು ಅಹ್ಮದ್ ಹಾಜಿ/ಹರಿದಾಸ್ ಅಹ್ಮದ್/ಖಾಲಿದ್ ಅಹ್ಮದ್, ಮೈಕ್
004 2007

ಅತ್ಯುತ್ತಮ ನಟ ಪ್ರಶಸ್ತಿ

ಮಲಯಾಳಂ ಒರೆ ಕಡಲ್ , ಬಿಗ್ ಬಿ , ಕಧ ಪರಯುಮ್ಬೋಲ್ ಡಾ. ಎಸ್.ಆರ್. ನಾಥನ್, ಬಿಲಾಲ್ ಜಾನ್ ಕುರಿಶಿನ್ಕಲ್, ಅಶೋಕ್ ರಾಜ್
003 2006 ಅತ್ಯುತ್ತಮ ನಟ ಪ್ರಶಸ್ತಿ ಮಲಯಾಳಂ ಕರುಥ ಪಕ್ಷಿಕಳ್ ಮುರುಕನ್
002 2004 ಅತ್ಯುತ್ತಮ ನಟ ಪ್ರಶಸ್ತಿ ಮಲಯಾಳಂ ಕಾಜ್‌‍ಚಾ , ವೇಷಂ ಮಾಧವನ್,ಅಪ್ಪು
001 2000 ಅತ್ಯುತ್ತಮ ನಟ ಪ್ರಶಸ್ತಿ ಮಲಯಾಳಂ ಅರಯಾಂಗಲುಡೆ ವೀಡು ರವೀಂದ್ರನಾಥ್

ವನಿತಾ ಪ್ರಶಸ್ತಿಗಳು

[ಬದಲಾಯಿಸಿ]
No. ವರ್ಷ ವಿಭಾಗ ಭಾಷೆ ಚಿತ್ರ(ಗಳು) ಪಾತ್ರ(ಗಳು)
004 2009 ಅತ್ಯುತ್ತಮ ನಟ ಮಲಯಾಳಂ ಪಜಾಸಿ ರಾಜಾ , ಲೌಡ್‌ಸ್ಪೀಕರ್ , ಪಾಲೇರಿ ಮಾಣಿಕ್ಯಂ ಪಜಾಸಿ ರಾಜಾ, ಮೈಕ್, ಮುರಿಕ್ಕುಂ ಕುನ್ನತು ಅಹ್ಮದ್ ಹಾಜಿ & ಹರಿದಾಸ್ & ಖಾಲಿದ್ ಅಹ್ಮದ್
003 2007 ಅತ್ಯುತ್ತಮ ನಟ ಮಲಯಾಳಂ ಓರೆ ಕಡಲ್ Dr. S.R. ನಾಥನ್
002 2006 ಅತ್ಯುತ್ತಮ ನಟ ಮಲಯಾಳಂ ಕರುಥ ಪಕ್ಷಿಕಳ್
ಕಾಯೋಪ್ಪು
ಮುರುಗನ್
ಬಾಲಚಂದ್ರನ್
001 2004 ಅತ್ಯುತ್ತಮ ನಟ ಮಲಯಾಳಂ ಕಾಜ್‌ಚಾ ಮಾಧವನ್

ಇತರ ಪ್ರಮುಖ ಗೌರವಗಳು ಮತ್ತು ಮನ್ನಣೆಗಳು

[ಬದಲಾಯಿಸಿ]
ಸಂಖ್ಯೆ ವರ್ಷ ಪ್ರಶಸ್ತಿ ಪ್ರಶಸ್ತಿ ನೀಡಿದವರು ಟಿಪ್ಪಣಿಗಳು
001 2010 ಅತೀ ಪ್ರಖ್ಯಾತ ಕೇರಳಿಗ[೪೧] ಏಷ್ಯಾವಿಷನ್ ಮತ್ತು ರೇಡಿಯೊ ಏಷ್ಯಾ
More
Asiavision TV and Radio Asia survey results. The awards ceremony will take place on May 14, 2010.
002 2010 ಮಿಲೇನಿಯಂ ನಟ ಪ್ರಶಸ್ತಿ ಏಷ್ಯಾನೆಟ್
More
Kamal Hasan presented the Asianet ‘Millennium Actor’ award to Mammootty for his outstanding contributions to the Indian film industry.
003 2007 ಪ್ರಸಿದ್ಧ ನಟ ಪ್ರಶಸ್ತಿ ಫಿಲ್ಮ್‌ಫೇರ್
More
Amitabh Bachchan presented the Filmfare ‘Legendary Actor’ award to Mammootty for his outstanding contributions to the Indian film industry.
004 2006 ಅತ್ಯುತ್ತಮ ನಟ ಎವರೆಸ್ಟ್ ಪ್ರಶಸ್ತಿ ಎಟಿಸಲಾಟ್
More
He won the Etisalat Everest Award for Best Actor, selected through a poll. It was an award for all-time best actor in Malayalam cinema.
005 2005 ದಿ ಬಾಕ್ ಬಾಕ್ಸ್‌ಆಫೀಸ್ ಹೀರೊ ವನಿತಾ
More
In 2005, Mammootty was awarded the "Box Office Hero of Malayalam" by Vanitha, a leading Indian magazine. His Rajamanikyam, released during Ramzan 2005, became an unprecedented hit. It broke all collection records and became the biggest hit of 2005. It was also touted as the biggest hit ever produced in the Malayalam movie industry.
006 2004 ಚಲಚಿತ್ರ ರತ್ನಂ ಚಿತ್ರ ವಿಮರ್ಶೆಗಳು
More
In 2004, he was awarded the "Chalachitra Ratna" award by the Film Critics Association of Kerala.
007 2004 ಕೇರಳದ ಪುರುಷ ಲೈಂಗಿಕ ಸಂಕೇತ ವನಿತಾ
More
After a survey among its readers, the magazine Vanitha selected Mammootty as the actor with the most sex appeal.

ಇತರೆ ಪ್ರಶಸ್ತಿಗಳು

[ಬದಲಾಯಿಸಿ]
ಸಂಖ್ಯೆ ವರ್ಷ ಪ್ರಶಸ್ತಿ ನೀಡಿದವರು ಟಿಪ್ಪಣಿಗಳು
001 2004 ಏಷ್ಯ ಪೆಸಿಫಿಕ್ ಮೆರ್ಲಿಯನ್ ಪ್ರಶಸ್ತಿ ಸಿಂಗಪುರ್ ಮಲೆಯಾಳಿ ಸಂಘ (SMA)ಪುರಸ್ಕೃತ ಸಿಂಗಪುರದಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಮಲೆಯಾಳಿ ಸಮಾವೇಶದ ಜತೆಯಲ್ಲಿ
002 2004 FOCCANA ಪ್ರಶಸ್ತಿ FOCCANA (USA)
003 ವಿವಿಧ ಸಿನೆಮಾ ಎಕ್ಸ್‌ಪ್ರೆಸ್ ಪ್ರಶಸ್ತಿಗಳು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌
More
He has won Cinema Express Awards for Best Actor several times.
005 ವಿವಿಧ ಮಾತೃಭೂಮಿ ಪ್ರಶಸ್ತಿಗಳು ಮಾತೃಭೂಮಿ
006 ವಿವಿಧ ಕಲಾ ಕೇರಳಂ ಪ್ರಶಸ್ತಿ ಕಲಾ ಕೇರಳಂ
007 2004 ಅಮೃತ ಪ್ರಶಸ್ತಿ : ಅತ್ಯುತ್ತಮ ನಟ ಅಮೃತಾ
008 1998 ವಿ. ಶಾಂತಾರಾಮ್‌ ಪ್ರಶಸ್ತಿ V. ಶಾಂತಾರಾಂ ಪ್ರತಿಷ್ಠಾನ
More
He won the V. Shantaram Award for his performance in Dr. Ambedkar.
010 style="text-align:center;"|— ರಾಮು ಕಾರಿಯಟ್ ಪ್ರಶಸ್ತಿ ರಾಮು ಕಾರಿಯಟ್ ಪ್ರತಿಷ್ಠಾನ
011 style="text-align:center;"|— ಜಿಯಾಸ್ಸಿ ಪ್ರಶಸ್ತಿ ಜಿಯಾಸ್ಸಿ ಪ್ರತಿಷ್ಠಾನ
012 style="text-align:center;"|— ಚಲನಚಿತ್ರ ಪ್ರೇಕ್ಷಕರ ಪ್ರಶಸ್ತಿ ಚಲನಚಿತ್ರ ಪ್ರೇಕ್ಷಕರು
013 style="text-align:center;"|— ನಾನಾ ಪ್ರಶಸ್ತಿ : ಅತ್ಯುತ್ತಮ ನಟ ನಾನಾ ನಿಯತಕಾಲಿಕೆ

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ "'Mammootty Bio'". Movies.deepthi.com. 1953-09-17. Retrieved 2010-04-22.
  2. ೨.೦ ೨.೧ 'ಮಮ್ಮುಟ್ಟಿ ಬಿಯೊ'
  3. ೩.೦ ೩.೧ "'ಮಮ್ಮುಟ್ಟಿ ಬಯೋಗ್ರಫಿ'". Archived from the original on 2014-03-16. Retrieved 2022-10-22.
  4. "ಐ ವಾಂಟ್ ಟು ಪ್ಲೇ ಲೀಡ್ ರೋಲ್ಸ್" Archived 2011-01-15 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಹಿಂದು ಶುಕ್ರವಾರ, ಜುಲೈ 22, 2005.
  5. ೫.೦ ೫.೧ ಮಲಯಾಳಂ ಕಮ್ಯುನಿಕೇಷನ್ಸ್ ಬೋರ್ಡ್ ಆಫ್ ಡೈರೆಕ್ಟರ್ಸ್ Archived 2010-12-15 ವೇಬ್ಯಾಕ್ ಮೆಷಿನ್ ನಲ್ಲಿ.. “kairalitv.in. 1 ನವೆಂಬರ್ 2004. (30 ಅಕ್ಟೋಬರ್ 2007ರಂದು ಮರುಸಂಪಾದಿಸಲಾಯಿತು)
  6. "'ವನಿತ ಸರ್ವೆ ಚೂಸಸ್ ಮಮ್ಮುಟ್ಟಿ ಆಸ್ ದಿ ಸೆಕ್ಸಿಯಸ್ಟ್ ಆಕ್ಟರ್'". Archived from the original on 2012-11-02. Retrieved 2011-01-13.
  7. ೭.೦ ೭.೧ ಮಮ್ಮುಟ್ಟಿ ಎನ್‌ಲೈವನ್ಸ್ ಅಕ್ಷಯ ನೆಟ್‌ವರ್ಕ್. .ದಿ ಹಿಂದು ಬಿಸಿನೆಸ್‌ಲೈನ್. 26 ಫೆಬ್ರುವರಿ 2006 2007 ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.
  8. "'Mammootty filmography'". Chakpak.com. Archived from the original on 2009-03-16. Retrieved 2010-04-22.
  9. ದಿ ವೆಟರನ್ ಹೀರೋ ಆಫ್ ಮಲಯಾಳಂ ಇಂಡಸ್ಟ್ರಿ Archived 2007-10-19 ವೇಬ್ಯಾಕ್ ಮೆಷಿನ್ ನಲ್ಲಿ.. oneindia.in . 6 ಸೆಪ್ಟೆಂಬರ್ 2007 2007 ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.
  10. ೧೦.೦ ೧೦.೧ ಮಮ್ಮುಟ್ಟಿ ಕಂಪ್ಲೀಟ್ಸ್ ಹಿಸ್ 300
  11. ಮಮ್ಮುಟ್ಟಿ ಟು ಪ್ಲೇ ಎ ಕಾಪ್ ಫಾರ್ ದಿ 25thಟೈಮ್ Archived 2008-12-23 ವೇಬ್ಯಾಕ್ ಮೆಷಿನ್ ನಲ್ಲಿ.. ಹಿಂದೂಸ್ತಾನ್‌ಟೈಮ್ಸ್. 2007 ಸೆಪ್ಟೆಂಬರ್ 6 2007 ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.
  12. ಮಮ್ಮುಟ್ಟಿ ಪ್ರಶಸ್ತಿಗಳು
  13. ಟ್ರಿಬ್ಯೂಟ್ ಟು ಪಜಾಸಿ ರಾಜಾ Archived 2013-09-16 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಹಿಂದು 19 ಜನವರಿ 2007. 2007ರ ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.
  14. ೧೪.೦ ೧೪.೧ "ಪ್ರಶಸ್ತಿಗಳು ಮತ್ತು ಮನ್ನಣೆಗಳು". Archived from the original on 2010-08-12. Retrieved 2011-01-13.
  15. ಡಾ. ಬಾಬಾಸಾಹೇಬ್ ಅಂಬೇಡ್ಕರ್-ಮೂವಿ ಪ್ರಿವಿವ್. ambedkar.org . 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.
  16. ರಾಜಾಮಾಣಿಕ್ಯಂ ಲೀಪಿಂಗ್ ಟುವಾರ್ಡ್ಸ್ ದಿ 'ಬಿಗ್ಗೆಸ್ಟ್-ಎವರ್ ಗ್ರೋಸ್ಸೇರ್' ಸ್ಟೇಟಸ್ Archived 2007-11-13 ವೇಬ್ಯಾಕ್ ಮೆಷಿನ್ ನಲ್ಲಿ.. My-Kerala.com News . 14 ಏಪ್ರಿಲ್ 2007. 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.
  17. ಕೇರಳ ಬಾಕ್ಸ್ ಆಫೀಸ್ – ಸೆಪ್ 28 ಟು ಅಕ್ಟೊ 20. ಸಿಫಿ . 21 ಅಕ್ಟೋಬರ‍್ 2009 2009 ಜನವರಿ 4ರಂದು ಮರುಸಂಪಾದಿಸಲಾಗಿದೆ.
  18. "'ನ್ಯಾಷನಲ್ ಅವಾರ್ಡ್ ಕ್ರಿಯೇಟ್ಸ್ ಕಂಟ್ರೋವರ್ಸಿ'". Archived from the original on 2010-09-18. Retrieved 2011-01-13.
  19. "Pranchiyettan And The Saint Turns Out A Safe Hit". Topnews.in. 29 September 2010.
  20. ಸೌತ್-ಪಾವ್ಡ್!! Archived 2011-01-20 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಹಿಂದು ಶುಕ್ರವಾರ, 7 ಜುಲೈ 2006 2009 ಜೂನ್ 19ರಂದು ಮರುಸಂಪಾದಿಸಲಾಗಿದೆ.
  21. ಮಮ್ಮುಟ್ಟಿ ಆಸ್ ಸೋಷಿಯಲ್ ಆಕ್ಟರ್ Archived 2007-03-07 ವೇಬ್ಯಾಕ್ ಮೆಷಿನ್ ನಲ್ಲಿ.. Mammoottylive.com . 25 ಫೆಬ್ರವರಿ ೨೦೦೭, 2007 ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.
  22. ಪೇನ್ ಎಂಡ್ ಪ್ಯಾಲಿಯೇಟಿವ್ ಕೇರ್ ಸೊಸೈಟಿ ಪ್ಯಾಟ್ರನ್ಸ್ Archived 2016-03-11 ವೇಬ್ಯಾಕ್ ಮೆಷಿನ್ ನಲ್ಲಿ.. painandpalliativecare.org . ಜುಲೈ 2007 2007ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.
  23. ರೆಲೆವನ್ಸ್ ಆಫ್ ದಿ ಪೇನ್ ಎಂಡ್ ಪ್ಯಾಲಿಯೇಟಿವ್ ಕೇರ್ ಸೊಸೈಟಿ. Archived 2016-03-09 ವೇಬ್ಯಾಕ್ ಮೆಷಿನ್ ನಲ್ಲಿ.. painandpalliativecare.org . ಅಕ್ಟೋಬರ್, 2006 ಮರುಸಂಪಾದನೆ 30 ಅಕ್ಟೋಬರ್ 2007.
  24. ಫಾರಂ ಆಫ್ ಕೇರಳ Archived 2020-03-18 ವೇಬ್ಯಾಕ್ ಮೆಷಿನ್ ನಲ್ಲಿ. amazon news .
  25. ಮಮ್ಮುಟ್ಟಿ ಫಾರ್ ಎ ಕಾಸ್ Archived 2013-09-27 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದು ಶುಕ್ರವಾರ, 14 ಜುಲೈ 2006 2009 ಜೂನ್ 19ರಂದು ಮರುಸಂಪಾದಿಸಲಾಗಿದೆ.
  26. ಕಾಜಚಾ 06-07 –ಫ್ರೀ ಐ ಕೇರ್ ಎಂಡ್ ಟ್ರೀಟ್‌ಮೆಂಟ್ Archived 2008-12-17 ವೇಬ್ಯಾಕ್ ಮೆಷಿನ್ ನಲ್ಲಿ.. Mammootty.com. 13 ಜುಲೈ 2006 ಮರುಸಂಪಾದಿಸಿದೆ 30ಅಕ್ಟೋಬರ್ 2007.
  27. "Mammootty to donate food to chikunguniya-hit village". Monstersandcritics.com. 2007-08-17. Archived from the original on 2012-12-08. Retrieved 2010-04-22.
  28. ಸ್ಟಾರ್ ಶೈನ್ಸ್ ಆನ್ ಪ್ರಾಜೆಕ್ಟ್ ಅಕ್ಷಯ Archived 2012-02-24 ವೇಬ್ಯಾಕ್ ಮೆಷಿನ್ ನಲ್ಲಿ. KeralaITmission.org 25 ಫೆಬ್ರವರಿ 2006. 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.
  29. ಮಮ್ಮುಟ್ಟಿ ಎಸ್ ಬ್ರಾಂಡ್ ಅಂಬಾಸಿಡರ್ ಹ್ಯಾಸ್ ಹೆಲ್ಪಡ್ ಅಕ್ಷಯ ಗೇನ್ ಪಬ್ಲಿಸಿಟಿ Archived 2014-01-10 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಹಿಂದು 3 ನವೆಂಬರ್ 2006. 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.
  30. Mammootty is goodwill ambassador for Akshaya. The Hindu Business Line. 21 February 2006. Retrieved 30 October 2007.
  31. ಮಲಯಾಳಂ ಕಮ್ಯುನಿಕೇಷನ್ಸ್ ಬೋರ್ಡ್ ಆಫ್ ಡೈರೆಕ್ಟರ್ಸ್ Archived 2015-09-26 ವೇಬ್ಯಾಕ್ ಮೆಷಿನ್ ನಲ್ಲಿ.. “kairalitv.in. 1 ನವೆಂಬರ್ 2004. 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.
  32. "ವೈ ಶುಡ್ ದೆ? ಎಸ್ಪೆಶಲಿ ವೆನ್ ಥೆಯ್ ಆರ್ ಬ್ಯುಸಿ ಪ್ರೋಡ್ಯುಸಿಂಗ್ ಎ ಸೂಪರ್‌ಹಿಟ್ ಟೆಲಿವಿಷನ್ ಸೋಪ್". rediff.com. 21 ಡಿಸೆಂಬರ್‌ 1998 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.
  33. ಮೇಗ ಸೀರಿಯಲ್ಸ್ ಮೇಗಾ ಹಿಟ್ಸ್ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.. rediff.com. 28 ಅಕ್ಟೋಬರ‍್ 2006 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.
  34. ಮಮ್ಮುಟ್ಟಿ ಇನ್ ವೈಸ್ ಟೆಕ್ನೋಟೈನ್‌ಮೆಂಟ್ ಟ್ರಿಕ್ Archived 2007-08-25 ವೇಬ್ಯಾಕ್ ಮೆಷಿನ್ ನಲ್ಲಿ. Indiainfo.com ಮಾರ್ಚ್ 2002. 2009ರ ಜೂನ್‌ 19ರಂದು ಮರುಸಂಪಾದಿಸಲಾಯಿತು.
  35. ಸೌತ್ ಇಂಡಿಯನ್ ಬ್ಯಾಂಕ್ ಅನೌನ್ಸಸ್ ಮಮ್ಮುಟ್ಟಿ ಆಸ್ ಬ್ರಾಂಡ್ ಅಂಬಾಸಿಡರ್. SouthIndianBank.com . 16 ಅಕ್ಟೋಬರ್ 2006 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.
  36. ಸೌತ್ ಇಂಡಿಯನ್ ಬ್ಯಾಂಕ್ ಹ್ಯಾಸ್ ಅಪಾಯಿಂಟೆಡ್ ಪದ್ಮಶ್ರೀ ಭಾರತ್ ಮಮ್ಮುಟ್ಟಿ ಆಸ್ ಬ್ರಾಂಡ್ ಅಂಬಾಸಿಡರ್ Archived 2016-01-22 ವೇಬ್ಯಾಕ್ ಮೆಷಿನ್ ನಲ್ಲಿ.. moneycontrol.com . 16 ಅಕ್ಟೋಬರ್ 2006 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.
  37. ಕೇರಳ ವಾಲಿಬಾಲ್ ಲೀಗ್ ಫಾರ್ಮಡ್ – ಮಮ್ಮುಟ್ಟಿ ಆಸ್ ಬ್ರಾಂಡ್ ಅಂಬಾಸಿಡರ್. ಹಿಂದು ಬಿಸಿನೆಸ್ ಲೈನ್ . ನವೆಂಬರ್ 04, 2009.
  38. ಮಮ್ಮುಟ್ಟಿ ಬ್ರಿಂಗ್ಸ್ IT ಪಾರ್ಕ್ ಟು ಕೇರಳ Archived 2008-05-12 ವೇಬ್ಯಾಕ್ ಮೆಷಿನ್ ನಲ್ಲಿ.. ibnlive.com, IANS . 14 ಏಪ್ರಿಲ್ 2007, 2007 ಅಕ್ಟೋಬರ್ 30ರಂದು ಮರುಸಂಪಾದಿಸಲಾಗಿದೆ.
  39. ಮೀಟ್ ಮಮ್ಮುಟ್ಟಿ, ದಿ ರೈಟರ್. “rediff.com. 16 ಆಗಸ್ಟ್ 2006. 30 ಅಕ್ಟೋಬರ್,2007ರಂದು ಮರುಸಂಪಾದಿಸಲಾಗಿದೆ.
  40. rahees says: (2010-04-06). "Mammootty won the best actor award for Kerala State Film awards 2009". Winkerala.com. Archived from the original on 2010-04-09. Retrieved 2010-04-22.{{cite web}}: CS1 maint: extra punctuation (link)
  41. http://gulf.manoramaonline.com/cgi-bin/MMOnline.dll/portal/ep/gulfContentView.do?contentId=7154635


ಬಾಹ್ಯ ಕೊಂಡಿಗಳು

[ಬದಲಾಯಿಸಿ]