ವಿಷಯಕ್ಕೆ ಹೋಗು

ವಿಸ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಸ್ಕಿಯ ಒಂದು ಲೋಟ

ವಿಸ್ಕಿ ಅಥವಾ ವಿಸ್ಕೀ ಎಂಬುದು ಹುದುಗುಬರಿಸಿದ [[ನೆನಸಿಟ್ಟ ಮೊಳಕೆಧಾನ್ಯ|ನೆನಸಿಟ್ಟ ಮೊಳಕೆಧಾನ್ಯ]]ವನ್ನು ಆಸವಿತ/ಬಟ್ಟಿ ಇಳಿಸಿ ತಯಾರಿಸಿದ ಮದ್ಯಸಾರೀಯ ಪಾನೀಯದ ಒಂದು ವಿಧ. ಜವೆಗೋಧಿ, ಮೊಳಕೆ ಬರಿಸಿದ ಜವೆಗೋಧಿ, ಚಿಕ್ಕಗೋಧಿ, ಮೊಳಕೆ ಬರಿಸಿದ ಚಿಕ್ಕಗೋಧಿ, ಗೋಧಿ, ಹಾಗೂ ಮೆಕ್ಕೆಜೋಳ (ಮುಸುಕಿನ ಜೋಳ)ಗಳೂ ಸೇರಿದಂತೆ ವಿವಿಧ ಬಗೆಗಳನ್ನು ತಯಾರಿಸಲು ವಿವಿಧ ಧಾನ್ಯಗಳನ್ನು ಬಳಸಲಾಗುತ್ತದೆ. ಕೆಲ ಮುಸುಕಿನ ಜೋಳದ ಮದ್ಯಗಳನ್ನು ಹೊರತುಪಡಿಸಿ ಬಹಳಷ್ಟು ವಿಸ್ಕಿಗಳನ್ನು ಸಾಮಾನ್ಯವಾಗಿ ಓಕ್‌ ಮರದಿಂದ ಮಾಡಿದ ಪೀಪಾಯಿಗಳಲ್ಲಿ ಪಕ್ವಗೊಳಿಸಲಾಗುತ್ತದೆ.

ವಿಸ್ಕಿಯು ಅನೇಕ ವರ್ಗಗಳ ಹಾಗೂ ವಿಧಗಳ ಹಾಗೂ ಮೂಲಗಳ ವಿಚಾರದಲ್ಲಿ ಪೈಪೋಟಿಯನ್ನು ಹೊಂದಿರುವ ವಿಶ್ವದಾದ್ಯಂತ ಕಠಿಣ ನಿಯಂತ್ರಣಕ್ಕೊಳಪಟ್ಟ ಮದ್ಯಾರ್ಕವಾಗಿದೆ. ವಿವಿಧ ವರ್ಗಗಳ ಹಾಗೂ ವಿಧಗಳಲ್ಲಿ ಸಾಮಾನ್ಯವಾದ ವಿಚಾರಗಳೆಂದರೆ ಧಾನ್ಯಗಳ ಹುದುಗುಬರಿಸುವಿಕೆ, ಮದ್ಯಾರ್ಕವನ್ನು ತಯಾರಿಸಲು ಬಳಸಿದ ಧಾನ್ಯದ ಸ್ವಾದವನ್ನು ಉಳಿಸಲು ಹಾಗೂ ಧಾನ್ಯ ತಟಸ್ಥ ಮದ್ಯಾರ್ಕಗಳು ಅಥವಾ ವೋಡ್ಕಾ ಎಂದೆನಿಸದಿರುವಂತೆ ಮಾಡಲು ನೀರನ್ನು ಸೇರಿಸುವ ಮುನ್ನ ಮುಸುಕಿನ ಜೋಳದ ವಿಚಾರದಲ್ಲಿ ಗರಿಷ್ಠ 80%ರವರೆಗೆ ಮದ್ಯಾರ್ಕವನ್ನು ಬಟ್ಟಿ ಇಳಿಸುವುದು ಹಾಗೂ ಇತರೆ ಧಾನ್ಯಗಳಿಗೆ 90%ರಷ್ಟು ಮದ್ಯಾರ್ಕವನ್ನು ಬಟ್ಟಿ ಇಳಿಸುವ ವಿಧಾನಗಳಾಗಿವೆ.[] ವಿಸ್ಕಿ ತನ್ನ 60%ರಷ್ಟನ್ನು ಸ್ವಾದವನ್ನು ಪಕ್ವಗೊಳಿಸುವ ಪ್ರಕ್ರಿಯೆಯಲ್ಲಿ ಬಳಸುವ ಪೀಪಾಯಿಯ ವಿಧದಿಂದ ಪಡೆಯುತ್ತದೆ.[ಸೂಕ್ತ ಉಲ್ಲೇಖನ ಬೇಕು] ಆದ್ದರಿಂದ ಮುಂದಿನ ವರ್ಗೀಕರಣವನ್ನು ಬಳಸಿದ ಮರವನ್ನು ಹಾಗೂ ಮರವನ್ನು ಕರಿಕಾಗಿಸುವ ಅಥವಾ ಸುಟ್ಟ ಪ್ರಮಾಣದ ಮೇಲೆ ಆಧರಿಸಿ ಮಾಡಲಾಗುತ್ತದೆ.[] ಉದಾಹರಣೆಗೆ ಬೌರ್ಬನ್‌ ವಿಸ್ಕಿಯನ್ನು ಕಾನೂನಿನ ಪ್ರಕಾರ ಕರೀಕರಿಸಿದ ಹೊಸ ಓಕ್‌ ಪೀಪಾಯಿಗಳಲ್ಲಿ ಪಕ್ವಗೊಳ್ಳಬೇಕಾಗಿದ್ದರೆ, ಗುಣಮಟ್ಟದ ಸ್ಕಾಚ್‌ ವಿಸ್ಕಿಗಳಲ್ಲಿ ಸಾವಕಾಶವಾದ ಪಕ್ವಗೊಳ್ಳಲು ಬೌರ್ಬನ್‌ ಉತ್ಪಾದನೆಯಲ್ಲಿ ಭಾಗಶಃ ಬಳಸಿದ ಪೀಪಾಯಿಗಳನ್ನು ಉಪಯೋಗಿಸಲಾಗುತ್ತದೆ.[]

ವ್ಯುತ್ಪತ್ತಿ ಶಾಸ್ತ್ರ

[ಬದಲಾಯಿಸಿ]

ವಿಸ್ಕಿ ಎಂಬುದು ಕೆಲ್ಟ್‌ ಭಾಷೆಯಿಂದ (ಐರಿಷ್‌ ಉಯಿಸೆ ಬೀಥಾ ಹಾಗೂ ಸ್ಕಾಟಿಷ್‌ ಉಯಿಸ್ಗೆ ಬೀಥಾ ) ಆಂಗ್ಲವು ಆಮದು ಮಾಡಿಕೊಂಡ ಉಸ್ಕೆಬಾಗ್‌/ಉಸ್ಕೆಬಾಹ್‌ ಪದದ ಸಂಕ್ಷಿಪ್ತ ರೂಪವಾಗಿದೆ. "ನೀರನ್ನು" ಸೂಚಿಸುವ ಹಳೆಯ ಐರಿಷ್‌ ಪದ ಉಯಿಸೆ, ಹಾಗೂ "ಜೀವನದ" ಎಂಬರ್ಥದ ಬೀಥಡ್‌ ಅಕ್ಷರಶಃ "ಜೀವಜಲ" ಎಂಬರ್ಥ ಬರುವ ಪದಗಳಿಂದ ಈ ಸಂಯೋಗವು ವ್ಯುತ್ಪನ್ನವಾಗಿದೆ. 14ನೇ ಶತಮಾನದಷ್ಟು ಹಿಂದಿನಿಂದಲೇ ಆಸವಿತ/ಬಟ್ಟಿ ಇಳಿಸಿದ ಪಾನೀಯಗಳನ್ನು ಹೆಸರಿಸಲು ಬಳಸುತ್ತಿದ್ದ ಲ್ಯಾಟಿನ್‌ ಭಾಷೆಯ ಆಕ್ವಾ ವಿಟೇ ನ ಅರ್ಥವನ್ನೇ ಇದೂ ನೀಡುತ್ತದೆ. ಇತರೆ ಮುಂಚಿನ ಉಚ್ಛಾರಣೆಗಳೆಂದರೆ ಉಸ್ಕೆಬಿಯಾ (1706) ಹಾಗೂ ಇಸ್ಕೀ ಬೇ (1583). 1405ರ ಐರಿಷ್‌ ಭಾಷೆಯ ಆನ್ನಲ್ಸ್‌ ಆಫ್‌ ಕ್ಲಾನ್‌ಮ್ಯಾಕ್‌ನಾಯ್ಸ್‌, ವಿಸ್ಕಿಯ ಮೊದಲ ಲಿಖಿತ ದಾಖಲೆಯು ಕ್ರಿಸ್‌ಮಸ್‌ ಸಂದರ್ಭದಲ್ಲಿ "ಆಕ್ವಾ ವಿಟೇಯ ವಿಪರೀತ ಸೇವನೆಯಿಂದಾದ " ಸರದಾರನ ಸಾವಿನ ಬಗ್ಗೆ ವಿವರಣೆಯಲ್ಲಿದೆ. ಸ್ಕಾಟ್‌ಲೆಂಡ್‌ನಲ್ಲಿ, ವಿಸ್ಕಿ ಉತ್ಪಾನೆಯ ಪ್ರಥಮ ಪುರಾವೆಯು 1494ರಲ್ಲಿ ರಾಜಭಂಡಾರದ ದಾಖಲೆಯಲ್ಲಿ ಮೊಳಕೆ ಧಾನ್ಯವನ್ನು "ಆಕ್ವಾ ವಿಟೇಯನ್ನು ತಯಾರಿಸಲು ರಾಜರ ಆದೇಶದ ಮೇರೆಗೆ ಫ್ರಿಯರ್‌ ಜಾನ್‌ ಕಾರ್‌ಗೆ ಕಳಿಸಿದ್ದು " ಎಂಬ ನಮೂದನೆಯಲ್ಲಿ ದೊರಕುತ್ತದೆ.[]

ಇತಿಹಾಸ

[ಬದಲಾಯಿಸಿ]

ಸೇವಿಸಬಲ್ಲ ಮದ್ಯಾರ್ಕಗಳ ತಯಾರಿಕೆಗೆ ಸಾಕಷ್ಟು ಮುನ್ನವೇ ಸುಗಂಧ ಹಾಗೂ ಅಂಗರಾಗಗಳ ಆಸವಿತ/ಬಟ್ಟಿ ಇಳಿಸುವಿಕೆಯ ಮೂಲಕ ಬ್ಯಾಬಿಲೋನಿಯನ್ನರು ಮೆಸೊಪೊಟೆಮಿಯಾದಲ್ಲಿ (ಈಗಿನ ಇರಾಕ್‌) ಕನಿಷ್ಟ 2ನೇ ಸಹಸ್ರಮಾನ BC[] ಯಷ್ಟು ಹಿಂದೆಯೇ ಆಸವನ/ಬಟ್ಟಿ ಇಳಿಸುವಿಕೆಯ ಕಲೆಯನ್ನು ಆರಂಭಿಸಿದ್ದರು. ಆಸವನ/ಬಟ್ಟಿ ಇಳಿಸುವಿಕೆಯ ಕಲೆಯನ್ನು ಮೆಡಿಟರೇನಿಯನ್‌ ಪ್ರದೇಶಗಳಿಂದ ಐರ್‌ಲೆಂಡ್‌ಗೆ ಐರಿಷ್‌ ಧರ್ಮಪ್ರಚಾರಕರು 6ನೇ ಶತಮಾನದಿಂದ 7ನೇ ಶತಮಾನದ ಅವಧಿಯ ನಡುವೆ ತಂದಿರುವ ಸಾಧ್ಯತೆ ಇದೆ. ಆಸವನ/ಬಟ್ಟಿ ಇಳಿಸುವಿಕೆಯನ್ನು ಆಫ್ರಿಕಾದಿಂದ ಯೂರೋಪ್‌ಗೆ ಮೂರ್‌ ಜನರು ತಂದರಲ್ಲದೇ,[][] ಅದರ ಬಳಕೆಯು ಕ್ರೈಸ್ತಮಠಗಳ ಮೂಲಕ,[] ಬಹುಮಟ್ಟಿಗೆ ಉದರಶೂಲೆ, ಪಕ್ಷವಾತ, ಹಾಗೂ ಸಿಡುಬುಗಳ ಚಿಕಿತ್ಸೆಯಂತಹಾ ವೈದ್ಯಕೀಯ ಉದ್ದೇಶಗಳಿಗಾಗಿ ಎಲ್ಲೆಡೆ ಹಬ್ಬಿತು.[]

1100ರಿಂದ 1300ರ ನಡುವೆ, ಆಸವನ/ಬಟ್ಟಿ ಇಳಿಸುವಿಕೆಯು ಐರ್‌ಲೆಂಡ್‌ನಲ್ಲಿದ್ದ ಕ್ರೈಸ್ತಮಠೀಯ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳ ಮೂಲಕ 12ನೇ ಶತಮಾನದಲ್ಲಿ ಐರ್‌ಲೆಂಡ್‌ ಹಾಗೂ ಸ್ಕಾಟ್‌ಲೆಂಡ್‌ಗಳಿಗೆ,[೧೦] ಹರಡಿತು. ಮದ್ಯ/ಹೆಂಡವನ್ನು ತಯಾರಿಸಬಲ್ಲ ದ್ರಾಕ್ಷಿಯ ಪ್ರಮಾಣವು ಬ್ರಿಟನ್‌ನಲ್ಲಿ ಕಡಿಮೆ ಇದ್ದುದರಿಂದ, ಜವೆಗೋಧಿ ಬೀರು/ಸಾರಾಯಿ ಬಳಕೆಯಿದ್ದುದು, ವಿಸ್ಕಿಯ ತಯಾರಿಕೆಗೆ ದಾರಿಯಾಯಿತು.[] 1494ರಲ್ಲಿ, ಮೇಲೆ ತಿಳಿಸಿದ ಹಾಗೆ ಸ್ಕಾಟ್‌ಲೆಂಡ್‌’ನ ರಾಜಭಂಡಾರವು ಮೊಳಕೆ ಧಾನ್ಯವನ್ನು ಫ್ರಿಯರ್‌ ಜಾನ್‌ ಕಾರ್‌ಗೆ ನೀಡಿತ್ತು; ಆ ಮೊಳಕೆ ಧಾನ್ಯದ ಪ್ರಮಾಣವು ಸುಮಾರು 1500 ಬಾಟಲ್‌/ಸೀಸೆಗಳಷ್ಟು ತಯಾರಿಸಲು ಸಾಕಾಗುವಷ್ಟಿತ್ತು, ಆದ್ದರಿಂದ ಆ ಸಮಯದಲ್ಲಿ ಇದರ ವ್ಯವಹಾರವು ವರ್ಧಿಸುತ್ತಿತ್ತೆಂಬುದು ಸ್ಪಷ್ಟವಾಗುತ್ತದೆ.

ಸ್ಕಾಟ್‌ಲೆಂಡ್‌ನ ಮಹಾರಾಜ ಜೇಮ್ಸ್‌ IV (r. 1488-1513) ಸ್ಕಾಚ್‌ ವಿಸ್ಕಿಯ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದುದರಿಂದ, 1506ರಲ್ಲಿ ಡುಂಡೀ ಪಟ್ಟಣವು ಆ ಸಮಯದಲ್ಲಿ ಉತ್ಪಾದನೆಯಲ್ಲಿ ಏಕಸ್ವಾಮ್ಯ ಹೊಂದಿದ್ದ ತಜ್ಞ ಕೆಲಸಗಾರರ ಸಂಘ/ಗಿಲ್ಡ್‌ ಆಫ್‌ ಸರ್ಜನ್‌ ಬಾರ್ಬರ್ಸ್‌ದಿಂದ, ಅಗಾಧ ಪ್ರಮಾಣದ ಸ್ಕಾಚ್‌ ಮದ್ಯವನ್ನು ಕೊಂಡುಕೊಂಡಿತ್ತು. 1536ರಿಂದ 1541ರ ನಡುವೆ, ಇಂಗ್ಲೆಂಡ್‌ನ ಮಹಾರಾಜ ಹೆನ್ರಿ VIII ಕ್ರೈಸ್ತ ಮಠಗಳನ್ನು ವಿಸರ್ಜಿಸಿ ಅಲ್ಲಿನ ಸನ್ಯಾಸಿಗಳನ್ನು ಸಾರ್ವಜನಿಕರೊಂದಿಗೆ ಸಮ್ಮಿಳಿತಗೊಳಿಸಿದರು. ಆಗತಾನೆ ಸ್ವಾವಲಂಬಿತಗೊಂಡ ಸನ್ಯಾಸಿಗಳು ಆದಾಯವನ್ನು ಹುಡುಕಿಕೊಳ್ಳಬೇಕಾದುದರಿಂದ ವಿಸ್ಕಿ ಉತ್ಪಾದನೆಯು ಮಠೀಯ ವಾತಾವರಣದಿಂದ ಖಾಸಗಿ ಮನೆಗಳಿಗೆ ಹಾಗೂ ಹೊಲಗಳಿಗೆ ಸ್ಥಳಾಂತರಗೊಂಡಿತು.[]

ಆಸವನ/ಬಟ್ಟಿ ಇಳಿಸುವಿಕೆ ಪ್ರಕ್ರಿಯೆಯು ಆ ಸಮಯದಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿತ್ತು; ವಿಸ್ಕಿಯನ್ನು ಪಕ್ವಗೊಳ್ಳುವ ಮುನ್ನವೇ ಸೇವಿಸಲಾಗುತ್ತಿದ್ದುದರಿಂದ ಇಂದಿನ ಆವೃತ್ತಿಗಳಿಗೆ ಹೋಲಿಸಿದರೆ ಕಚ್ಚಾ ಹಾಗೂ ರೂಕ್ಷ ಸ್ವಾದವನ್ನು ಹೊಂದಿರುತ್ತಿತ್ತು. ನವೋದಯ-ಯುಗದ ವಿಸ್ಕಿ ಕೂಡಾ ಹೆಚ್ಚು ಪ್ರಬಲತೆ ಹೊಂದಿದ್ದು ತಿಳಿಯಾಗಿರುತ್ತಿರಲಿಲ್ಲವಾದುದರಿಂದ ಕೆಲವೊಮ್ಮೆ ಅಪಾಯಕಾರಿಯಾಗಿರುತ್ತಿತ್ತು ಕೂಡ. ಕಾಲಾನಂತರದಲ್ಲಿ, ಅನೇಕ ವರ್ಷಗಳ ಕಾಲ ಮರೆತುಬಿಟ್ಟ ಬಾಟಲಿಯ ಮದ್ಯವನ್ನು ಕುಡಿಯಲು ಧೈರ್ಯ ವಹಿಸಿದ ಓರ್ವ ವ್ಯಕ್ತಿಯಿಂದಾದ ಸಂತೋಷದ ಅಪಘಾತದಿಂದಾಗಿ, ವಿಸ್ಕಿ ಮತ್ತಷ್ಟು ಸಹನೀಯ ಪಾನೀಯವಾಗಿ ವಿಕಾಸಗೊಳ್ಳಲು ಕಾರಣವಾಯಿತು.[೧೧]

1707ರಲ್ಲಿ, ಒಕ್ಕೂಟದ ಕಾಯಿದೆಗಳು ಇಂಗ್ಲೆಂಡ್‌ ಹಾಗೂ ಸ್ಕಾಟ್‌ಲೆಂಡ್‌ಗಳೆರಡನ್ನೂ ವಿಲೀನಗೊಳಿಸಿತು, ಹೀಗಾದ ನಂತರ ಇದರ ಮೇಲಿನ ತೆರಿಗೆಗಳು ಹಠಾತ್ತನೇ ಏರಿದವು.[೧೧]

1725ರ,ಇಂಗ್ಲಿಷ್‌ ಮಾಲ್ಟ್‌ ತೆರಿಗೆಯ ನಂತರ ಸ್ಕಾಟ್‌ಲೆಂಡ್‌’ನ ಬಹಳಷ್ಟು ಆಸವನ/ಬಟ್ಟಿ ಇಳಿಸುವಿಕೆಯನ್ನು ನಿಲ್ಲಿಸಲಾಯಿತು ಇಲ್ಲವೇ ಒತ್ತಾಯಪೂರ್ವಕವಾಗಿ ಭೂಗತವಾಗಿ ನಡೆಯತೊಡಗಿತು. ಸರಕಾರದ ಅಬಕಾರಿ ಇಲಾಖೆಯವರಿಂದ ಮರೆಮಾಚಲು ಸ್ಕಾಚ್‌ ವಿಸ್ಕಿಯನ್ನು ಬಲಿಪೀಠದ ಕೆಳಗೆ, ಶವಪೆಟ್ಟಿಗೆಯ ಒಳಗೆ ಹಾಗೂ ಎಲ್ಲೆಲ್ಲಿ ಮುಚ್ಚಿಡಲು ಸಾಧ್ಯವಾಗಬಹುದೋ ಅಲ್ಲೆಲ್ಲಾ ಮುಚ್ಚಿಡತೊಡಗಿದರು.[] ಸ್ಕಾಟಿಷ್‌ ಬಟ್ಟಿಕಾರರು, ಬಟ್ಟಿಯಂತ್ರದಿಂದ ಹೊರಬರುವ ಹೊಗೆಯು ಕತ್ತಲೆಯಲ್ಲಿ ಕಾಣಿಸುತ್ತಿರಲಿಲ್ಲವಾದುದರಿಂದ ತಮ್ಮ ವಿಸ್ಕಿ ತಯಾರಿಕೆಯನ್ನು ರಾತ್ರಿಯಲ್ಲಿ ಮನೆಯಲ್ಲಿ ತಯಾರಿಸಿದ ಬಟ್ಟಿಯಂತ್ರದಲ್ಲಿ ನಡೆಸುತ್ತಿದ್ದರು. ಈ ಕಾರಣದಿಂದ, ಈ ಪಾನೀಯವನ್ನು ಬೆಳದಿಂಗಳು/ಮೂನ್‌ಷೈನ್‌ ಎಂದೇ ಕರೆಯಲಾಗುತ್ತಿತ್ತು.[೧೦] ಒಂದು ಹಂತದಲ್ಲಿ ಸ್ಕಾಟ್‌ಲೆಂಡ್‌’ನ ವಿಸ್ಕಿ ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚು ಕಾನೂನು ಬಾಹಿರವಾಗಿತ್ತು.[೧೧]

ಅಮೇರಿಕಾದಲ್ಲಿ, ಅಮೇರಿಕನ್‌ ಕ್ರಾಂತಿಯ ಸಮಯದಲ್ಲಿ ವಿಸ್ಕಿಯನ್ನು ನಾಣ್ಯಮಾಪಕವಾಗಿ ಬಳಸಲಾಗುತ್ತಿತ್ತು. ಇದೊಂದು ವಿಪರೀತ ತೆರಿಗೆ ಹೇರಿದ ಪದಾರ್ಥವೂ ಆಗಿತ್ತಲ್ಲದೇ, ಹೆಚ್ಚುವರಿ ಅಬಕಾರಿ ಸುಂಕವನ್ನು ಇದರ ಮೇಲೆ ಹೇರಿದ್ದರಿಂದ, 1794ರ ವಿಸ್ಕಿ ದಂಗೆಯು ನಡೆಯಿತು.[೧೦]

1823ರಲ್ಲಿ, UK ಅಬಕಾರಿ ಕಾಯಿದೆಯನ್ನು ಮಂಡಿಸಿ ಆಸವನ/ಬಟ್ಟಿ ಇಳಿಸುವಿಕೆಯನ್ನು (ನಿಗದಿತ ಶುಲ್ಕದೊಂದಿಗೆ) ಕಾನೂನುಬದ್ಧಗೊಳಿಸಿತು, ಸ್ಕಾಟಿಷ್‌ ಬೆಳದಿಂಗಳು ಮದ್ಯದ ಬೃಹತ್‌ ಪ್ರಮಾಣದ ಉತ್ಪಾದನೆಯು ಕ್ರಿಯಾತ್ಮಕ ಕೊನೆಗೊಂಡಿತು.[]

1831ರಲ್ಲಿ, ಏನಿಯಾಸ್‌ ಕಾಫೆ ವಿಸ್ಕಿಯ ಆಸವನ/ಬಟ್ಟಿ ಇಳಿಸುವಿಕೆಯನ್ನು ಮತ್ತಷ್ಟು ಅಗ್ಗಗೊಳಿಸಿ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುವ ಕಾಫೆ ಬಟ್ಟಿಯಂತ್ರವನ್ನು ಆವಿಷ್ಕರಿಸಿದರು. 1850ರಲ್ಲಿ, ಆಂಡ್ರ್ಯೂ ಅಷರ್‌ ಸಾಂಪ್ರದಾಯಿಕ ವಿಸ್ಕಿಯೊಂದಿಗೆ ನವೀನ ಕಾಫೆ ಬಟ್ಟಿಯಂತ್ರದ ವಿಸ್ಕಿಯೊಂದಿಗೆ ಬೆರೆಸಿ ಮೊತ್ತಮೊದಲ ಸ್ಕಾಟಿಷ್‌ ಮಿಶ್ರಿತ ವಿಸ್ಕಿಯನ್ನು ತಯಾರಿಸಿದರು. ಈ ಹೊಸ ಧಾನ್ಯ ವಿಸ್ಕಿಯನ್ನು ತಮ್ಮ ಮೊಳಕೆ ಧಾನ್ಯ ವಿಸ್ಕಿಗೆ ಅಂಟಿಕೊಂಡಿದ್ದ ಐರಿಷ್‌ ಬಟ್ಟಿಕಾರರು ಹೀಗಳೆಯಲು ತೊಡಗಿದರು. ಅನೇಕ ಐರಿಷ್‌ ಜನರು ಹೊಸ ಮಿಶ್ರಣವು ಅಸಲು ವಿಸ್ಕಿಯೇ ಅಲ್ಲ ಎಂದು ವಾದಿಸುತ್ತಿದ್ದರು.[]

1880ರ ದಶಕದ ಹೊತ್ತಿಗೆ, ಫ್ರೆಂಚ್‌ ಬ್ರಾಂದಿ ಉದ್ಯಮವು ಬಹಳಷ್ಟು ದ್ರಾಕ್ಷಿ ಬೆಳೆಯನ್ನು ಧ್ವಂಸಗೊಳಿಸಿದ ಫಿಲೊಕ್ಸೆರಾ ಕೀಟಪೀಡಿತವಾಗಿತ್ತು; ಪರಿಣಾಮವಾಗಿ, ವಿಸ್ಕಿ ಅನೇಕ ಮಾರುಕಟ್ಟೆಗಳಲ್ಲಿ ಪ್ರಮುಖ ಮದ್ಯವಾಯಿತು.[]

ವಿಧಗಳು

[ಬದಲಾಯಿಸಿ]
ಸ್ಕಾಟ್‌ಲೆಂಡ್‌ನ ಆಚೆಂಟೋಷಾನ್‌ ಬಟ್ಟಿಗೃಹದಲ್ಲಿನ ತಾಮ್ರದ ಮಡಕೆ ಬಟ್ಟಿಪಾತ್ರೆಗಳು

ವಿಸ್ಕಿ ಅಥವಾ ವಿಸ್ಕಿ-ಮಾದರಿಯ ಉತ್ಪನ್ನಗಳನ್ನು ಬಹಳಮಟ್ಟಿಗೆ ಧಾನ್ಯ-ಬೆಳೆಯುವ ಪ್ರದೇಶಗಳಲ್ಲಿ ಉತ್ಪಾದಿಸಲಾಗುತ್ತದೆ. ಅವುಗಳ ಮೂಲ ಉತ್ಪನ್ನ, ಮದ್ಯಸಾರೀಯ ಅಂಶ, ಹಾಗೂ ಗುಣಮಟ್ಟಗಳಲ್ಲಿ ವ್ಯತ್ಯಾಸವಿರುತ್ತದೆ.

ಕೆಲ ವಿಸ್ಕಿಗಳ ಪ್ರಮುಖ ಅಂಶ ಮೊಳಕೆ ಬರಿಸಿದ ಜವೆಗೋಧಿ.
  • ಮಾಲ್ಟ್‌ ಎಂಬ ಮೊಳಕೆ ಧಾನ್ಯದ ವಿಸ್ಕಿಯನ್ನು ಸಂಪೂರ್ಣವಾಗಿ ಮೊಳಕೆ ಬರಿಸಿದ ಜವೆಗೋಧಿಯನ್ನು ಈರುಳ್ಳಿ ಆಕೃತಿಯ ಬಟ್ಟಿಪಾತ್ರೆಯಲ್ಲಿ ಆಸವಿತಗೊಳಿಸಿ/ಬಟ್ಟಿ ಇಳಿಸಿ ತಯಾರಿಸಲಾಗುತ್ತದೆ.
  • ಗ್ರೇನ್‌ ಎಂಬ ವಿಸ್ಕಿಯನ್ನು, ಸಾಧಾರಣವಾಗಿ ಉದ್ದಕೊಳವೆಯ "ಮುಕ್ತ ಬಾಯಿಯ" ಅಥವಾ "ಕಾಫೆ" ಬಟ್ಟಿಯಂತ್ರದಲ್ಲಿ ಮೊಳಕೆ ಬರಿಸಿದ ಹಾಗೂ ಮೊಳಕೆ ಬರಿಸದ ಜವೆಗೋಧಿಗಳನ್ನು ಇತರೆ ಧಾನ್ಯಗಳೊಂದಿಗೆ ಸೇರಿಸಿ ತಯಾರಿಸಲಾಗುತ್ತದೆ. ಇತ್ತೀಚಿನವರೆಗೆ ಇದನ್ನು ಮಿಶ್ರಣವಾಗಿ ಮಾತ್ರವೇ ಬಳಸಲಾಗುತ್ತಿದ್ದು, ಈಗ ಕೆಲ ಏಕಧಾನ್ಯ ಸ್ಕಾಚ್‌ಗಳನ್ನೂ ಸಹಾ ಮಾರಲಾಗುತ್ತಿದೆ.

ಮೊಳಕೆ ಧಾನ್ಯಗಳನ್ನು ಹಾಗೂ ಧಾನ್ಯಗಳನ್ನು ಅನೇಕ ರೀತಿಯಲ್ಲಿ ಸಂಯೋಜಿಸಲಾಗುತ್ತದೆ

  • ತೊಟ್ಟಿಯಲ್ಲಿ ನೆನೆಸಿದ ಮಾಲ್ಟ್‌ ವಿಸ್ಕಿಯನ್ನು ಮೊಳಕೆ ಧಾನ್ಯ ವಿಸ್ಕಿಗಳನ್ನು ಸಂಯೋಜಿಸಿ ಅನೇಕ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ತಯಾರಿಸುತ್ತವೆ. ಯಾವುದೇ ವಿಸ್ಕಿಯನ್ನು "ಶುದ್ಧ ಮಾಲ್ಟ್‌ ವಿಸ್ಕಿ" ಅಥವಾ ಕೇವಲ "ಮಾಲ್ಟ್‌ ವಿಸ್ಕಿ"ಯೆಂದೆನಿಸಿಕೊಂಡರೆ ಅದು ಬಹುಮಟ್ಟಿಗೆ ತೊಟ್ಟಿಯಲ್ಲಿ ನೆನೆಸಿದ ವಿಸ್ಕಿಯಾಗಿರುವುದು ಸ್ಪಷ್ಟ. ಇದನ್ನು ಕೆಲವೊಮ್ಮೆ "ಸಂಯೋಜಿತ ಮಾಲ್ಟ್‌" ವಿಸ್ಕಿ ಎಂದು ಕರೆಯಲಾಗುತ್ತದೆ.
  • ಏಕ ಮಾಲ್ಟ್‌ ವಿಸ್ಕಿ ಒಂದೇ ಬಟ್ಟಿಗೃಹದಲ್ಲಿ ತಯಾರಿಸಲಾಗಿರುವ ಮಾಲ್ಟ್‌ ವಿಸ್ಕಿಯಾಗಿರುತ್ತದೆ. ಆದಾಗ್ಯೂ, ಯಾವುದೇ ವಿಸ್ಕಿಯನ್ನು "ಏಕ-ಪೀಪಾಯಿ" ಎಂದು ಹೆಸರಿಸದಿದ್ದಲ್ಲಿ ಸಾಮಾನ್ಯವಾಗಿ ಅನೇಕ ಪೀಪಾಯಿಗಳ, ಹಾಗೂ ಅನೇಕ ವರ್ಷಗಳ ವಿಸ್ಕಿಯನ್ನು ಹೊಂದಿರುತ್ತದೆ, ಸಂಯೋಜಕರು ಇಂಥದೇ ಬಟ್ಟಿಗೃಹದಿಂದ ಬಂದಿದ್ದು ಎಂದು ಗುರುತಿಸಬಲ್ಲಂತೆ ಸ್ವಾದವನ್ನು ಮೂಡಿಸಬಹುದಾಗಿರುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ, ಬಟ್ಟಿಗೃಹವು (ದ ಗ್ಲೆನ್‌ಲಿವೆಟ್‌, ಬುಷ್‌ಮಿಲ್ಸ್‌, ಯೋಯಿಚಿ) ಎಂಬಂತೆ ಒಂದೇ ಮೊಳಕೆ ಧಾನ್ಯದ ಹೆಸರನ್ನು ಪಕ್ವತೆಯ ಹಾಗೂ ಪೋರ್ಚುಗಲ್‌ನ ಮದ್ಯ/ಹೆಂಡ ಪೀಪಾಯಿಯಲ್ಲಿ ಪಕ್ವಗೊಳಿಸಿದಂತಹಾ ಕೆಲ ವಿಶೇಷ ಉಪಚಾರವನ್ನು ಸೂಚಿಸುವಂತಹಾ ಹೆಸರಿನ ಜೊತೆಗೆ ಹೊಂದಿರುತ್ತದೆ.
  • ಶುದ್ಧ ಮಡಕೆಬಟ್ಟಿ ವಿಸ್ಕಿಯೆಂದರೆ ಮಡಕೆ-ಬಟ್ಟಿಯಲ್ಲಿ (ಏಕ ಮಾಲ್ಟ್‌‌ ದಂತೆ) ಮೊಳಕೆ ಬರಿಸಿದ ಹಾಗೂ ಮೊಳಕೆ ಬರಿಸದ ಜವೆಗೋಧಿಯನ್ನು ನೆನೆಸಿಟ್ಟು ಆಸವಿತ/ಬಟ್ಟಿ ಇಳಿಸಿದ ವಿಸ್ಕಿ. ಇದು ಐರ್‌ಲೆಂಡ್‌ನಲ್ಲಿ ಮಾತ್ರ ದೊರಕುವುದು.
  • ಸಂಯೋಜಿತ ವಿಸ್ಕಿಗಳನ್ನು ಮಾಲ್ಟ್‌ ಹಾಗೂ ಧಾನ್ಯ ವಿಸ್ಕಿಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಸ್ಕಾಚ್‌ ವಿಸ್ಕಿ ಅಥವಾ ಐರಿಷ್‌ ವಿಸ್ಕಿ ಎಂದೆನಿಸಿಕೊಳ್ಳುವಂತಹಾ ವಿಸ್ಕಿಯು ಇದೇ ಕಾರಣದಿಂದಲೇ ಸಂಯೋಜಿತವಾದದ್ದಾಗಿರುತ್ತದೆ. ಸಂಯೋಜನೆಯನ್ನು ಬ್ರಾಂಡ್‌ ಹಾಗೂ ಬ್ರಾಂಡ್‌ ಹೆಸರಿಗೆ ಸರಿಯಾಗಿ ಒಂದೇ ರೀತಿಯ ಸ್ವಾದ ಕೊಡುವಂತೆ ಅನೇಕ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳಿಂದ ತಯಾರಿಸುವುದರಿಂದ, ಸಂಯೋಜನೆಯು (e.g., ಷಿವಾಸ್‌ ರೀಗಲ್‌, ಕೆನಡಿಯನ್‌ ಕ್ಲಬ್‌) ಬಟ್ಟಿಗೃಹದ ಹೆಸರನ್ನು ಹೊಂದಿರುವುದಿಲ್ಲ. ಜೇಮ್ಸನ್‌ ಐರಿಷ್‌ ವಿಸ್ಕಿಯು ಕೇವಲ ಒಂದೇ ಬಟ್ಟಿಗೃಹದಿಂದ ಬರುವುದು ಒಂದು ಅಪವಾದವಷ್ಟೇ. ಆದಾಗ್ಯೂ, "ಮಿಶ್ರಣ" ಎಂಬುದು (ಅಲ್ಪ ಪುನರಾವರ್ತನೆಯೊಂದಿಗೆ) ಇತರೆ ಅರ್ಥಗಳನ್ನು ಹೊಂದಿರುವ ಸಾಧ್ಯತೆಯೂ ಇರುತ್ತದೆ. ವಿವಿಧ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳ (ಹೆಚ್ಚು ಸಾಮಾನ್ಯವಾಗಿ ತೊಟ್ಟಿಯಲ್ಲಿ ನೆನೆಸಿದ ಮಾಲ್ಟ್‌ ಎನ್ನಲಾಗುತ್ತದೆ) (ಧಾನ್ಯವಿಲ್ಲದಿರುವ) ಮಾಲ್ಟ್‌ಗಳ ಮಿಶ್ರಣವನ್ನು ಕೆಲವೊಮ್ಮೆ "ಮಿಶ್ರಿತ ಮಾಲ್ಟ್‌" ಎಂದೂ, ಮಾಲ್ಟ್‌ಗಳಿಲ್ಲದ ಧಾನ್ಯ ವಿಸ್ಕಿಗಳ ಮಿಶ್ರಣವನ್ನು "ಮಿಶ್ರಿತ ಗ್ರೇನ್‌" ಎಂದೂ ಕರೆಯಲಾಗುತ್ತದೆ.
  • ಪೀಪಾಯಿ ಸಾಮರ್ಥ್ಯದ ವಿಸ್ಕಿಗಳು ಅಪರೂಪದವಾಗಿದ್ದು ಸಾಮಾನ್ಯವಾಗಿ ಕೇವಲ ಅತ್ಯುತ್ತಮ ವಿಸ್ಕಿಗಳನ್ನು ಮಾತ್ರವೇ ಹೀಗೆ ತುಂಬಿಡಲಾಗುತ್ತದೆ. ಅವುಗಳನ್ನು ಪೀಪಾಯಿಯಿಂದ ತಿಳಿಗೊಳಿಸದೇ ನೇರವಾಗಿ ತುಂಬಿಸಲಾಗುತ್ತದೆ. ತಿಳಿಗೊಳಿಸುವುದರ ಬದಲಿಗೆ, ಬಟ್ಟಿಕಾರನು ಹೆಚ್ಚು ಸ್ವಾದ ಬರುವವರೆಗೆ ತಿಳಿಗೊಳಿಸಲು ಪಾಯಿ/ಪೇಯಗನನ್ನೇ ಆಹ್ವಾನಿಸುತ್ತಾನೆ (ಬಹುಮಟ್ಟಿಗೆ ತಿಳಿಗೊಳಿಸುವಿಕೆಯೇ ಅಗತ್ಯವಿರುವುದಿಲ್ಲ, ಏಕ ಪೀಪಾಯಿ ವಿಸ್ಕಿಗಳ ಗುಣಮಟ್ಟ ಅಂಥಹದಿರುತ್ತದೆ). ಏಕ ಪೀಪಾಯಿ ವಿಸ್ಕಿಗಳನ್ನು ಸಾಮಾನ್ಯವಾಗಿ ಡಂಕನ್‌ ಟೇಲರ್‌‌, ಮಾಸ್ಟರ್‌ ಆಫ್‌ ಮಾಲ್ಟ್‌, ಗಾರ್ಡನ್‌ & ಮೆಕ್‌ಫಾಯಿಲ್‌ ಹಾಗೂ ಕೇಡನ್‌ಹೆಡ್‌ನಂತಹಾ ಇತರ ತಜ್ಞ ಪ್ರತ್ಯೇಕ ಬಾಟಲಿ ತುಂಬುಗ ಸಂಸ್ಥೆಗಳ ಮೂಲಕ ತುಂಬಿಸಲಾಗುತ್ತದೆ.

ವಿಸ್ಕಿಗಳು ಬಾಟಲ್‌ನಲ್ಲಿದ್ದಾಗ ಪಕ್ವಗೊಳ್ಳುವುದಿಲ್ಲ, ಕೇವಲ ಪೀಪಾಯಿಯಲ್ಲಿ ಮಾತ್ರವೇ ಪಕ್ವವಾಗುತ್ತವೆ, ಹೀಗಾಗಿ ವಿಸ್ಕಿಯ "ಪಕ್ವತೆ"ಯು ಆಸವನ/ಬಟ್ಟಿ ಇಳಿಸುವಿಕೆ ಹಾಗೂ ತುಂಬುವಿಕೆಯ ನಡುವಿನ ಅವಧಿಯಾಗಿರುತ್ತದೆ. ಇದು ಪೀಪಾಯಿ ಎಷ್ಟರಮಟ್ಟಿಗೆ ವಿಸ್ಕಿಯ ಮೇಲೆ ಪ್ರಭಾವ ಬೀರಿ ಅದರ ರಾಸಾಯನಿಕ ಲಕ್ಷಣ ಹಾಗೂ ರುಚಿಯನ್ನು ಬದಲಿಸಿದೆ ಎಂಬುದನ್ನು ಸೂಚಿಸುತ್ತದೆ. ಅನೇಕ ವರ್ಷಗಳ ಕಾಲ ಬಾಟಲಿಯಲ್ಲಿದ್ದ ವಿಸ್ಕಿಗಳು ಅಪರೂಪತನದ ಬೆಲೆ ಹೊಂದಿರಬಹುದೇ ಆದರೆ "ಹಳೆಯವಲ್ಲ" ಹಾಗೂ ಅಷ್ಟೇ ಸಮಯ ಪೀಪಾಯಿಯಲ್ಲಿ ಪಕ್ವಗೊಂಡ ಇತ್ತೀಚೆಗೆ ತಯಾರಿಸಿದ ವಿಸ್ಕಿಗಿಂತ ಉತ್ತಮವಾಗಿರುವುದಿಲ್ಲ. ಬಹಳಷ್ಟು ವಿಸ್ಕಿಗಳನ್ನು 40% abvರಷ್ಟು ಅಥವಾ ಅದರ ಸಮೀಪದ ಮದ್ಯಸಾರೀಯ ಸಾಮರ್ಥ್ಯದಲ್ಲಿ ಮಾರಲಾಗುತ್ತದೆ.

ಅಮೇರಿಕನ್‌ ವಿಸ್ಕಿಗಳು

[ಬದಲಾಯಿಸಿ]

ಅಮೇರಿಕನ್‌ ವಿಸ್ಕಿ ಹುದುಗುಬರಿಸಿಟ್ಟ ಏಕದಳ ಮೊಳಕೆಧಾನ್ಯವನ್ನು ಅಸವಿತ/ಬಟ್ಟಿ ಇಳಿಸಿ ತಯಾರಿಸುವ ಪೇಯವಾಗಿದೆ. ರುಚಿ, ವಾಸನೆ, ಹಾಗೂ ಸಾಧಾರಣವಾಗಿ ವಿಸ್ಕಿಯ ಎಲ್ಲಾ ಲಕ್ಷಣಗಳನ್ನೂ ಇದು ಹೊಂದಿರಲೇಬೇಕಾಗುತ್ತದೆ.

ಒಕ್ಕೂಟದ ನಿಯಮ[೧೨] ಗಳ ಪ್ರಕಾರ ಪಟ್ಟಿ ಮಾಡಲಾದ ಬಹಳವೇ ಸಾಧಾರಣ ಲಕ್ಷಣಗಳೆಂದರೆ:

ಅಮೇರಿಕನ್‌ ವಿಸ್ಕಿಯ "ನಾಮಾಂಕಿತ ವಿಧಗಳು" ಆಸವಿತ/ಬಟ್ಟಿ ಇಳಿಸಿದ ಪರಿಮಾಣದ ಪ್ರತಿಶತ 80ಕ್ಕಿಂತ ಮದ್ಯಸಾರ ಹೆಚ್ಚಿರದ ರೀತಿ ಆಸವಿತ/ಬಟ್ಟಿ ಇಳಿಸಿದುದಾಗಿರಲೇಬೇಕು. ಇಷ್ಠೇ ಅಲ್ಲದೇ ನಂತರ ಮುಸುಕಿನ ಜೋಳ ವಿಸ್ಕಿಯನ್ನು ಹೊರತುಪಡಿಸಿ ಇತರೆ "ನಾಮಾಂಕಿತ ವಿಧಗಳು" ಸುಟ್ಟ ಹೊಸ ಓಕ್‌ ಧಾರಕಗಳಲ್ಲಿ ಪಕ್ವಗೊಂಡಿರಬೇಕು. ಮುಸುಕಿನ ಜೋಳ ವಿಸ್ಕಿಯು ಪಕ್ವವಾಗಿರಲೇಬೇಕಿಲ್ಲ, ಆದರೆ ಪಕ್ವವಾಗಿದ್ದರೆ, ಹೊಸ ಸುಡದ ಓಕ್‌ ಪೀಪಾಯಿಗಳು ಅಥವಾ ಬಳಸಿದ ಪೀಪಾಯಿಗಳಲ್ಲಿ ಪಕ್ವಗೊಂಡಿರಬೇಕು. ಮುಸುಕಿನ ಜೋಳ ವಿಸ್ಕಿಯ ಪಕ್ವತೆಯ ಕಾಲ ಸಾಮಾನ್ಯವಾಗಿ ಅಲ್ಪವಾಗಿರುತ್ತದೆ e.g., ಆರು ತಿಂಗಳು.

"ನಾಮಾಂಕಿತ ವಿಧ"ದ ಪಕ್ವತೆಯು 2 ವರ್ಷ ಅಥವಾ ಅದಕ್ಕೂ ಹೆಚ್ಚಿದ್ದರೆ, ವಿಸ್ಕಿಗೆ ಹೆಚ್ಚುವರಿಯಾಗಿ "ನೇರ" ಎಂಬ ವಿಶೇಷಣ ಸೇರಿಸಲಾಗುತ್ತದೆ e.g., "ನೇರ ಚಿಕ್ಕಗೋಧಿ ವಿಸ್ಕಿ". "ನೇರ ವಿಸ್ಕಿ " (ಯಾವುದೇ ಧಾನ್ಯವನ್ನು ಹೆಸರಿಸದಿರುವ) ಎಂಬುದು ಯಾವುದೇ ಧಾನ್ಯವನ್ನು 51%ಗಿಂತ ಕಡಿಮೆ ಬಳಸಿ ಪರಿಮಾಣದ ಪ್ರತಿಶತ 80ಕ್ಕಿಂತ ಮದ್ಯಸಾರ ಹೆಚ್ಚಿರದ ರೀತಿ ಆಸವಿತ/ಬಟ್ಟಿ ಇಳಿಸಿದುದಲ್ಲದೇ ಸುಟ್ಟ ಹೊಸ ಓಕ್‌ ಧಾರಕಗಳಲ್ಲಿ 2 ವರ್ಷಗಳ ಅಥವಾ ಅದಕ್ಕೂ ಹೆಚ್ಚಿನ ಕಾಲ ಪಕ್ವಗೊಳಿಸಿ ತಯಾರಿಸಿದ ವಿಸ್ಕಿಯಾಗಿರುತ್ತದೆ.

ಅಮೇರಿಕನ್‌ ಮಿಶ್ರಿತ ವಿಸ್ಕಿಗಳೆಂದರೆ ನೇರ ವಿಸ್ಕಿಯನ್ನು ಪಕ್ವಗೊಳಿಸದ ವಿಸ್ಕಿ, ಧಾನ್ಯತಟಸ್ಥ ಮದ್ಯಾರ್ಕಗಳು, ಸ್ವಾದ ಹಾಗೂ ವರ್ಣದ್ರವ್ಯಗಳನ್ನು ಮಿಶ್ರಗೊಳಿಸಿ ತಯಾರಿಸಿದ್ದಾಗಿರುತ್ತದೆ.

ಮಾರುಕಟ್ಟೆಯಲ್ಲಿ ಪ್ರಮುಖವಾದುದೆಂದರೆ ಟೆನ್ನೆಸ್ಸೀ ವಿಸ್ಕಿ, ಜ್ಯಾಕ್‌ ಡೇನಿಯಲ್ಸ್‌ ಇದರ ಉತ್ತಮ ಉದಾಹರಣೆ. ಆಸವನ/ಬಟ್ಟಿ ಇಳಿಸುವಿಕೆಯ ಅವಧಿಯಲ್ಲಿ, ಇದು ಬೌರ್ಬನ್‌ ವಿಸ್ಕಿಯಂತೆಯೇ ಉತ್ತರ ಅಮೇರಿಕಾಕ್ಕೆ ವಿಶೇಷವಾದ ನೆನಸಿಟ್ಟ ಮೊಳಕೆಧಾನ್ಯದ ಹುಳಿಬರಿಸುವಿಕೆಯ ಪ್ರಕ್ರಿಯೆಯೂ ಸೇರಿದಂತೆ, ಬಹುತೇಕ ಎಲ್ಲಾ ಪ್ರಮುಖ ವಿಚಾರಗಳಲ್ಲಿ ಇದ್ದರೂ, ಟೆನ್ನೆಸ್ಸೀ ವಿಸ್ಕಿಯನ್ನು ಪೀಪಾಯಿಯಲ್ಲಿ ಪಕ್ವಗೊಳಿಸುವ ಮುನ್ನ ಇದ್ದಿಲಿರದಂತೆ/ಇದ್ದಲಿನಲ್ಲಿ ಶುದ್ಧೀಕರಿಸಲಾಗಿರುತ್ತದೆ. ಟೆನ್ನೆಸ್ಸೀ ವಿಸ್ಕಿ ಸಕ್ಕರೆ ಮೇಪಲ್ಇದ್ದಿಲಿನ ಮೂಲಕ ಶುದ್ಧೀಕರಿಸುವುದರಿಂದ, ಇದಕ್ಕೆ ಪ್ರತ್ಯೇಕ ಸ್ವಾದ ಹಾಗೂ ಕಂಪನ್ನು ನೀಡುವುದು ಇವುಗಳಲ್ಲಿ ಗುರುತಿಸಬಲ್ಲದಾದಂತಹಾ ವ್ಯತ್ಯಾಸಗಳು. ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ಇದರಲ್ಲಿ ಮಾಡುವ ಆದರೆ ಬೌರ್ಬನ್‌ ವಿಸ್ಕಿಯ ಉತ್ಪಾದನೆಯಲ್ಲಿ ಅನುಮತಿಯಿಲ್ಲದ ಪೀಪಾಯಿಗಳ ಮರುಬಳಕೆ. ಶಾಸನ/ನಿಯಮಗಳ ಮೂಲಕ ಅಲ್ಲದೇ ಹೋದರೂ, ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೇರಿಕಾದ ಸರ್ಕಾರ ಅಧಿಕೃತವಾಗಿ ಟೆನ್ನೆಸ್ಸೀ ವಿಸ್ಕಿಗೆ ಪ್ರತ್ಯೇಕ ವಿಧವೆಂದು 1941ರಲ್ಲಿ ಮಾನ್ಯತೆ ನೀಡಿದೆ.

ಕೆನಡಿಯನ್‌ ವಿಸ್ಕಿಗಳು

[ಬದಲಾಯಿಸಿ]
ಅನೇಕ ಕೆನಡಿಯನ್‌ ವಿಸ್ಕಿಗಳು

ಕೆನಡಿಯನ್‌ ವಿಸ್ಕಿಗಳು ಸಾಧಾರಣವಾಗಿ ಇತರೆ ವಿಸ್ಕಿ ವಿಧಗಳಿಗಿಂತ ಲಘು ಹಾಗೂ ನಮ್ಯವಾಗಿರುತ್ತವೆ. ಅನೇಕ ಕೆನಡಿಯನ್‌ ವಿಸ್ಕಿಗಳ ಮತ್ತೊಂದು ಸಾಧಾರಣ ಲಕ್ಷಣವೆಂದರೆ ಪೂರ್ಣ ಸ್ವಾದ ಹಾಗೂ ನಮ್ಯತೆ ನೀಡುವ ಮೊಳಕೆ ಬರಿಸಿದ ಚಿಕ್ಕಗೋಧಿಯ ಬಳಕೆ. ಕೆನಡಾದ ಕಾನೂನಿನ ಪ್ರಕಾರ,[೧೩] ಕೆನಡಿಯನ್‌ ವಿಸ್ಕಿಗಳು ಕೆನಡಾದಲ್ಲೇ ತಯಾರಾಗಿರಬೇಕು, ಹುದುಗುಬರಿಸಿಟ್ಟ ಏಕದಳ ಮೊಳಕೆಧಾನ್ಯವನ್ನು ಆಸವಿತ/ಬಟ್ಟಿ ಇಳಿಸಿ, "3 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ಸಣ್ಣ ಪೀಪಾಯಿಯಲ್ಲಿ ಪಕ್ವಗೊಳಿಸಿರಬೇಕಲ್ಲದೇ", "ಕಂಪು ಹಾಗೂ ರುಚಿ ಹಾಗೂ ಕೆನಡಿಯನ್‌ ವಿಸ್ಕಿಯ ಇತರೆ ಸಾಧಾರಣ ಗುಣಧರ್ಮಗಳನ್ನು ಹೊಂದಿರಬೇಕು". "ಕೆನಡಿಯನ್‌ ವಿಸ್ಕಿ", "ಕೆನಡಿಯನ್‌ ಚಿಕ್ಕಗೋಧಿ ವಿಸ್ಕಿ" ಹಾಗೂ "ಚಿಕ್ಕಗೋಧಿ ವಿಸ್ಕಿ"ಗಳನ್ನು ಕೆನಡಾದಲ್ಲಿ ಕಾನೂನಾತ್ಮಕವಾಗಿ ಪ್ರತ್ಯೇಕವಾಗಿ ಗುರುತಿಸಲಾಗುವುದಿಲ್ಲವಲ್ಲದೇ ಉತ್ಪಾದನೆಯಲ್ಲಿ ಚಿಕ್ಕಗೋಧಿ ಅಥವ ಇತರೇ ಧಾನ್ಯದ ನಿರ್ದಿಷ್ಟ ಪ್ರಮಾಣವನ್ನು ಸೂಚಿಸುವುದಿಲ್ಲ.

ಫಿನ್ನಿಷ್‌/ಫಿನ್‌ಲೆಂಡ್‌ನ ವಿಸ್ಕಿಗಳು

[ಬದಲಾಯಿಸಿ]

ಕಳೆದ ಕೆಲ ವರ್ಷಗಳಲ್ಲಿ ಫಿನ್ನಿಷ್‌/ಫಿನ್‌ಲೆಂಡ್‌ನ ವಿಸ್ಕಿ ಸಂಗೋಪನೆಯು ವಿಕಾಸಗೊಳ್ಳುವ ಪ್ರಕ್ರಿಯೆಯಲ್ಲಿಯೇ ದೃಢವಾಗಿ ಅಭಿವೃದ್ಧಿ ಹೊಂದುತ್ತಲಿದೆ. ಫಿನ್ನಿಷ್‌/ಫಿನ್‌ಲೆಂಡ್‌ನ ವಿಸ್ಕಿ ಸಂಗೋಪನೆಯು ಉತ್ತಮ ಹಾಗೂ ದೃಢ ಬೆಳವಣಿಗೆ ಕಾಣುತ್ತಿರುವುದಲ್ಲದೇ ಜೀವನಮಟ್ಟ ಹಾಗೂ ಸಾಧಾರಣ ಪಾಕಶೈಲಿಯಲ್ಲಿ ಸುಧಾರಣೆ ಕಂಡಿದೆ. ಮಾರಾಟದ ಅಂಕಿಅಂಶಗಳು ಹಾಗೂ ವಿಸ್ಕಿ ಆಸಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಪ್ರಸ್ತುತ ಫಿನ್‌ಲೆಂಡ್‌ನಲ್ಲಿ ಎರಡು ಕಾರ್ಯಪ್ರವೃತ್ತ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳಿದ್ದು ಮೂರನೆಯದು ನಿರ್ಮಾಣ ಹಂತದಲ್ಲಿದೆ. ಫಿನ್‌ಲೆಂಡ್‌ನಲ್ಲಿನ ಮದ್ಯಸಾರ ಸರ್ಕಾರಿ ಏಕಸ್ವಾಮ್ಯ ಸಂಸ್ಥೆ ಆಲ್ಕೋನಿಂದಲೇ ವಿಸ್ಕಿಯ ಚಿಲ್ಲರೆ ಮಾರಾಟವನ್ನು ನಿಯಂತ್ರಿಸಲಾಗುತ್ತಿರುವುದಲ್ಲದೇ ಕಟು ಮದ್ಯಸಾರೀಯ ಪಾನೀಯಗಳ ಜಾಹಿರಾತನ್ನು ನಿಷೇಧಿಸಲಾಗಿದೆ. ಆಲ್ಕೋನ ಏಕಾಧಿಪತ್ಯ ಹಾಗೂ ಜಾಹಿರಾತಿನ ಮೇಲಿನ ನಿಷೇಧಗಳು ವಿಸ್ಕಿಗಳ ಮೇಲೆ ಆಸಕ್ತಿ ಬೆಳೆಸಿಕೊಳ್ಳುವುದನ್ನು ತಡೆದಿಲ್ಲವಾದರೂ, ಅದರ ಬಳಕೆಯನ್ನು ಕಷ್ಟಸಾಧ್ಯವಾಗಿಸಿದೆ.[೧೪]

ಜರ್ಮನ್‌ ವಿಸ್ಕಿಗಳು

[ಬದಲಾಯಿಸಿ]

ಸಾಂಪ್ರದಾಯಿಕವಾಗಿ ವಿಸ್ಕಿಯ ಉತ್ಪಾದನೆಯೊಂದಿಗೆ ತಳಕು ಹಾಕಿಕೊಂಡ ಧಾನ್ಯಗಳಿಂದಲೇ ಜರ್ಮನ್‌ ವಿಸ್ಕಿಯನ್ನು ತಯಾರಿಸಲಾಗುತ್ತದೆ. ಜರ್ಮನ್‌ -ತಯಾರಿತ ವಿಸ್ಕಿಯ ಆಸವನ/ಬಟ್ಟಿ ಇಳಿಸುವಿಕೆಯು ಕಳೆದ 30 ವರ್ಷಗಳಲ್ಲಿ ಆರಂಭವಾದ ಸಾಪೇಕ್ಷವಾಗಿ ಇತ್ತೀಚಿನ ಸಂಗತಿಯಾಗಿದೆ. ಇಲ್ಲಿ ತಯಾರಿಸುವ ವಿಧಗಳು :ಏಕ ಮಾಲ್ಟ್‌ಗಳು, ಮಿಶ್ರಣಗಳು ಹಾಗೂ ಬೌರ್ಬನ್‌ ವಿಧಗಳಂತಹಾ ಐರ್‌ಲೆಂಡ್‌, ಸ್ಕಾಟ್‌ಲೆಂಡ್‌ ಹಾಗೂ ಯುನೈಟೆಡ್‌ ಸ್ಟೇಟ್ಸ್‌ನ ವಿಧಗಳನ್ನು ಹೋಲುತ್ತವೆ. ಜರ್ಮನ್‌ ವಿಸ್ಕಿಗಳಿಗೆ ಯಾವುದೇ ನಿರ್ದಿಷ್ಟ ಪದಬಳಕೆ ಇಲ್ಲ, ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು "whisky" ಹಾಗೂ "whiskey"ಗಳೆರಡನ್ನು ಬಳಸುತ್ತವಲ್ಲದೇ ವಿಸ್ಕಿ ಪದದ ಮೇಲಿನ ನಾಟಕ ಹಾಗೂ ಅದು ಉತ್ಪಾದಿಸಲ್ಪಡುವ ರಾಜ್ಯ ಹೆಸ್ಸೆನ್‌ನ ಜೋಡಿಸಿ ಕರೆಯುವ "whessky/ವ್ಹೆಸ್ಕಿ" ಎಂಬ ಹೆಸರಿನ ವಿಸ್ಕಿಯೂ ಇದೆ. ಪ್ರಸ್ತುತ ವಿಸ್ಕಿಯನ್ನು ಉತ್ಪಾದಿಸುವ ಹತ್ತು ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ಜರ್ಮನಿಯಲ್ಲಿವೆ.[೧೫]

ಭಾರತೀಯ ವಿಸ್ಕಿಗಳು

[ಬದಲಾಯಿಸಿ]

ಭಾರತೀಯ ವಿಸ್ಕಿ ಭಾರತದಲ್ಲಿ "ವಿಸ್ಕಿ" ಎಂದು ಹೆಸರಿಸಲಾದ ಮದ್ಯಸಾರೀಯ ಪೇಯ. ಭಾರತೀಯ ವಿಸ್ಕಿಗಳಲ್ಲಿ ಬಹಳಷ್ಟು ಹುಳಿಬರಿಸಿ ಆಸವಿತ/ಬಟ್ಟಿ ಇಳಿಸಿದ ಪೇಯವಾಗಿರುತ್ತದೆ ಹಾಗೂ ಭಾರತೀಯ ಉಪಖಂಡದ ಹೊರಗೆ ರಂನ ಒಂದು ವಿಧ ಎನಿಸಿಕೊಳ್ಳುತ್ತದೆ.[೧೬] ವಿಸ್ಕಿಯನ್ನು ಮೊಳಕೆ ಧಾನ್ಯ ಹಾಗೂ ಇತರೆ ಧಾನ್ಯಗಳಿಂದ ಅಸವಿತಗೊಳಿಸುವುದನ್ನು ಭಾರತವು ಆರಂಭಿಸಿದ್ದರೂ ಭಾರತದಲ್ಲಿ ಬಳಕೆಯಾಗುವ 90% ರಷ್ಟು "ವಿಸ್ಕಿ"ಯು ಕಾಕಂಬಿ ಮೂಲದ್ದಾಗಿದೆ.[೧೭]

ಕಸೌಲಿ ಬಟ್ಟಿಗೃಹವನ್ನು ಹಿಮಾಲಯದಲ್ಲಿ 1820ರ ದಶಕದ ಕೊನೆಗೆ ಆರಂಭಿಸಲಾಗಿತ್ತು. ಏಕ ಮೊಳಕೆಧಾನ್ಯದ ವಿಸ್ಕಿಯು ಪ್ರಮುಖ "ಸೊಲನ್‌ No. 1" ಎಂದೆನಿಸಿಕೊಳ್ಳುವ ವಿಸ್ಕಿ ಬ್ರಾಂಡ್‌ ಆಗಿದೆ. ಈ ಹೆಸರನ್ನು ಸಮೀಪದ ಸೊಲನ್‌ ಎನ್ನುವ ಪಟ್ಟಣದ ಪರವಾಗಿ ಇಡಲಾಗಿದೆ. ಇತ್ತೀಚಿನವರೆಗೆ ಇದು ಅತಿ ಹೆಚ್ಚು ಮಾರಾಟವಾಗುವ ಭಾರತೀಯ ವಿಸ್ಕಿ ಆಗಿತ್ತು, ಆದರೆ ದೊಡ್ಡ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳ ಕಠಿಣ ಸ್ಪರ್ಧೆಯಿಂದಾಗಿ 1980ರ ದಶಕದ ಮೊದಲಲ್ಲಿ ಕೊನೆಕಂಡಿತು. ಈ ಬಟ್ಟಿಗೃಹ ಉತ್ಪಾದಿಸುವ ಇತರೆ ವಿಸ್ಕಿಗಳೆಂದರೆ ಡಿಪ್ಲೊಮ್ಯಾಟ್‌ ಡೀಲಕ್ಸ್‌, ಕರ್ನಲ್ಸ್‌ ಸ್ಪೆಷಲ್‌, ಬ್ಲಾಕ್‌ ನೈಟ್‌ ಹಾಗೂ ಸಮ್ಮರ್‌ ಹಾಲ್‌.[೧೮]

ಐರಿಷ್‌ ವಿಸ್ಕಿಗಳು

[ಬದಲಾಯಿಸಿ]
ಅನೇಕ ಐರಿಷ್‌ ವಿಸ್ಕಿಗಳು

ಕೆಲ ಅಪವಾದಗಳಿವೆಯಾದರೂ ಬಹಳಷ್ಟು ಐರಿಷ್‌ ವಿಸ್ಕಿಗಳನ್ನು ಮೂರು ಬಾರಿ[೧೯] ಆಸವಿತ/ಬಟ್ಟಿ ಇಳಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಮಡಕೆ ಬಟ್ಟಿಪಾತ್ರೆ ವಿಧಾನದಲ್ಲಿ ಆಸವಿತ/ಬಟ್ಟಿ ಇಳಿಸುವುದಾದರೂ, ಆಧುನಿಕ ಕಾಲದಲ್ಲಿ ಲಂಬ ಬಟ್ಟಿಪಾತ್ರೆಯನ್ನು ಮಿಶ್ರಿತ ವಿಸ್ಕಿಯಲ್ಲಿ ಬಳಸುವ ಧಾನ್ಯ ವಿಸ್ಕಿಯನ್ನು ಉತ್ಪಾದಿಸಲು ಬಳಸಲಾಗುತ್ತದೆ. ಕಾನೂನಿನ ಪ್ರಕಾರ, ಐರಿಷ್‌ ವಿಸ್ಕಿಯನ್ನು ಐರ್‌ಲೆಂಡ್‌ನಲ್ಲಿ ತಯಾರಿಸಿರಬೇಕು ಕನಿಷ್ಟ ಮೂರು ವರ್ಷಗಳಿಗಿಂತ ಹೆಚ್ಚಿನ ಕಾಲ ಮರದ ಪೀಪಾಯಿಗಳಲ್ಲಿ ಪಕ್ವಗೊಳಿಸಿರಬೇಕು, ಸಾಧಾರಣವಾಗಿ ಕಾರ್ಯತಃ ಇದರ ಮೂರು ಅಥವಾ ನಾಲ್ಕು ಪಟ್ಟು ಅವಧಿಗಳಲ್ಲಿ ಪಕ್ವಗೊಳಿಸಲಾಗುತ್ತದೆ.[೨೦] ಸಸ್ಯಾಂಗಾರವಾಗದ ಮೊಳಕೆ ಧಾನ್ಯವನ್ನು ಬಹುಮಟ್ಟಿಗೆ ಬಳಸಲಾಗುವುದಾದರೂ ಇದಕ್ಕೆ ಪ್ರಮುಖ ಅಪವಾದವೆಂದರೆ ಕನ್ನೆಮರ ಸಸ್ಯಾಂಗರಿತ ಮಾಲ್ಟ್‌ ವಿಸ್ಕಿ.

ಐರ್‌ಲೆಂಡ್‌ನಲ್ಲಿ ಬಹುಬಳಕೆಯ ವಿಸ್ಕಿಯ ವಿಧಗಳು ಅನೇಕವಿವೆ : ಅವೆಂದರೆ ಏಕ ಮಾಲ್ಟ್‌‌, ಏಕಧಾನ್ಯ, ಮಿಶ್ರಿತ ವಿಸ್ಕಿ ಹಾಗೂ ಐರ್‌ಲೆಂಡ್‌ನಲ್ಲೇ ವಿಶಿಷ್ಟವಾದ, ಶುದ್ಧ ಮಡಕೆಬಟ್ಟಿ ವಿಸ್ಕಿ. "ಶುದ್ಧಮಡಕೆಬಟ್ಟಿ" ಎಂಬ ವಿಶೇಷಣವನ್ನು ಐರ್‌ಲೆಂಡ್‌ನಲ್ಲಿ ಮಿಶ್ರಿತ ಮೊಳಕೆ ಬರಿಸಿದ ಹಾಗೂ ಮೊಳಕೆ ಬರಿಸದ ಜವೆಗೋಧಿಯನ್ನು 100% ಬಳಸಿ ತಾಮ್ರದ ಮಡಕೆಬಟ್ಟಿಯಲ್ಲಿ ಆಸವಿತ/ಬಟ್ಟಿ ಇಳಿಸಿದ ವಿಸ್ಕಿಗೆ ನೀಡುತ್ತಾರೆ. "ಹಸಿರು" ಮೊಳಕೆ ಬರಿಸದ ಜವೆಗೋಧಿಯು ಸಾಂಪ್ರದಾಯಿಕ ಶುದ್ಧ ಮಡಕೆಬಟ್ಟಿ ವಿಸ್ಕಿಗೆ ಐರಿಷ್‌ ಗುಣಮಟ್ಟಕ್ಕೆ ವಿಶಿಷ್ಟವಾದ ಕಟುಸ್ವಾದವನ್ನು ನೀಡುತ್ತದೆ. ಏಕ ಮಾಲ್ಟ್‌‌ ವಿಸ್ಕಿಯಂತೆ, ಶುದ್ಧ ಮಡಕೆಬಟ್ಟಿಯನ್ನು ಸಹಾ ಹಾಗೆಯೇ ಅಥವಾ ಧಾನ್ಯ ವಿಸ್ಕಿಯೊಡನೆ ಮಿಶ್ರಣ ಮಾಡಿ ಮಾರಲಾಗುತ್ತದೆ. ಸಾಧಾರಣವಾಗಿ ಮಿಶ್ರಿತ ವಿಸ್ಕಿಯನ್ನು ಏಕ ಮಾಲ್ಟ್‌ ಅಥವಾ ಶುದ್ಧ ಮಡಕೆಬಟ್ಟಿಯಿಂದ ತಯಾರಿಸಿದ್ದು ಎಂಬುದಾಗಿ ಹೆಚ್ಚು ಪ್ರತ್ಯೇಕವಾಗಿ ಗಮನಿಸಲಾಗುವುದಿಲ್ಲ.

ಜಪಾನೀ ವಿಸ್ಕಿಗಳು

[ಬದಲಾಯಿಸಿ]

ಜಪಾನೀ ಮಿಶ್ರಿತ ವಿಸ್ಕಿಗಳ ಉದಾಹರಣೆಯಿದ್ದರೂ ಜಪಾನೀ ವಿಸ್ಕಿಗಳಿಗೆ ಮಾದರಿಯೆಂದರೆ ಏಕಮಾಲ್ಟ್‌ ಸ್ಕಾಚ್‌ ಆಗಿದೆ. ಮಡಕೆ ಬಟ್ಟಿಪಾತ್ರೆ ವಿಧಾನದಲ್ಲಿ ಆಸವಿತ/ಬಟ್ಟಿ ಇಳಿಸಿದ ಅಲ್ಪ ಸಸ್ಯಾಂಗಾರದ ಉರಿಯಲ್ಲಿ ಇಟ್ಟಿಗೆಗೂಡಿನಲ್ಲಿ ಸುಟ್ಟ ನೆನಸಿಟ್ಟು ಮೊಳಕೆ ಬರಿಸಿದ ಜವೆಗೋಧಿ ಇದರ ಪ್ರಮುಖ ಅಂಶ (ಸ್ಕಾಟ್‌ಲೆಂಡ್‌ಗಿಂತ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯೇ). ಜಪಾನೀ ವಿಸ್ಕಿಯ ಪಶ್ಚಿಮದ ರಫ್ತುಗಳು ಸ್ಕಾಟ್‌ಲೆಂಡ್‌ನಲ್ಲಿ ಉತ್ಪಾದಿಸದ ಸ್ಕಾಚ್‌ ಶೈಲಿಯ ವಿಸ್ಕಿಯಾದ್ದರಿಂದ ಕಳಪೆ ದರ್ಜೆಯದು ಎಂಬ ಅಭಿಪ್ರಾಯದಿಂದಾಗಿ ಮನ್ನಣೆ ಹೊಂದಿರಲಿಲ್ಲ, ತೀರ ಇತ್ತೀಚಿನವರೆಗೆ ಜಪಾನೀ ವಿಸ್ಕಿಗಳ ಮಾರುಕಟ್ಟೆ ಬಹುಪಾಲು ಸಂಪೂರ್ಣ ದೇಶೀಯವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ, ಜಪಾನೀ ವಿಸ್ಕಿಗಳು ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಹಾಗೂ ಗುಣಮಟ್ಟದ ಉತ್ಪನ್ನಕ್ಕೆ ಅರ್ಹ ಮನ್ನಣೆಯನ್ನು ಗಳಿಸಿವೆ.[೨೧][೨೨]

ಸ್ಕಾಚ್‌ ವಿಸ್ಕಿಗಳು

[ಬದಲಾಯಿಸಿ]
ಅನೇಕ ಸ್ಕಾಚ್‌ ವಿಸ್ಕಿಗಳು

ಸ್ಕಾಚ್‌ ವಿಸ್ಕಿಗಳನ್ನು ಸಾಮಾನ್ಯವಾಗಿ ಎರಡು ಬಾರಿ ಆಸವಿತ/ಬಟ್ಟಿ ಇಳಿಸಲಾಗುತ್ತದೆ, ಕೆಲವನ್ನು ಮೂರನೇ ಬಾರಿ ಆಸವಿತ/ಬಟ್ಟಿ ಇಳಿಸಲಾಗುತ್ತದೆ.[೨೩] ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ "ಸ್ಕಾಚ್‌" ಎಂಬ ಹೆಸರು ಪಡೆದ ಏನನ್ನೇ ಆದರೂ ಇತರೆ ಅನೇಕ ನಿರ್ದಿಷ್ಟತೆಗಳೊಂದಿಗೆ ಸ್ಕಾಟ್‌ಲೆಂಡ್‌ನಲ್ಲಿಯೇ ಆಸವಿತ/ಬಟ್ಟಿ ಇಳಿಸಿ ಕನಿಷ್ಟ ಮೂರು ವರ್ಷಗಳ ಕಾಲ ಪಕ್ವಗೊಂಡಿರಬೇಕು ಹಾಗೂ ಒಂದು ದಿನವಾದರೂ ಓಕ್‌ ಪೀಪಾಯಿಗಳಲ್ಲಿರಬೇಕು.[೨೪] ಸ್ಕಾಚ್‌ ವಿಸ್ಕಿಯು ಒಂದಕ್ಕಿಂತ ಹೆಚ್ಚು ಪೀಪಾಯಿಯಿಂದ ಬಂದಿದ್ದರೆ, ಬಾಟಲ್‌ನ ಮೇಲೆ ಅದರ ಪಕ್ವತೆಯನ್ನು ನಮೂದಿಸಿದ್ದರೆ, ಆ ನಮೂದನೆಯು ಮಿಶ್ರಣದಲ್ಲಿರುವ ಕಡಿಮೆ ಅವಧಿಯ ವಿಸ್ಕಿಯ ಪಕ್ವತೆಯನ್ನು ಸೂಚಿಸಬೇಕು. ಅನೇಕ ಪೀಪಾಯಿ-ಸತ್ವದ ಏಕ ಮಾಲ್ಟ್‌ ವಿಸ್ಕಿಗಳು ಪಕ್ವತೆಯನ್ನು ನಮೂದಿಸದಿರುವ ಕಾರಣವೆಂದರೆ ಸ್ವಾದ ಹಾಗೂ ಪರಿಪಕ್ವತೆಯನ್ನು ಹೆಚ್ಚಿಸಲು ಅಲ್ಪ ಪ್ರಮಾಣದಲ್ಲಿ ಅಲ್ಪ ಪಕ್ವಅವಧಿಯ ಅಂಶಗಳನ್ನು ಬೆರೆಸಿರುವುದು. ಸ್ಕಾಚ್‌ನ ಮೂಲ ವಿಧಗಳೆಂದರೆ ಮಾಲ್ಟ್‌ ಹಾಗೂ ಧಾನ್ಯ, ಇವುಗಳನ್ನು ಸಂಯೋಜಿಸಿ ಮಿಶ್ರಿತ ವೈವಿಧ್ಯಗಳನ್ನು ರಚಿಸಲಾಗುತ್ತದೆ. ಎಲ್ಲವೂ ಅಲ್ಲದೇ ಹೋದರೂ ಕೆಲ ಸ್ಕಾಚ್‌ ವಿಸ್ಕಿಗಳು ತಮ್ಮ ಮಾಲ್ಟ್‌ಅನ್ನು ಉಪಚರಿಸಲು ಸಸ್ಯಾಂಗಾರದ ಧೂಮವನ್ನು ಬಳಸಿ, ಸ್ಕಾಚ್‌ಗೆ ಅದರದೇ ವಿಶಿಷ್ಟ ಧೂಮಸ್ವಾದವನ್ನು ನೀಡುತ್ತವೆ. ಮಿಶ್ರಿತ ಪೇಯಗಳಿಗೆ ಬೇಡಿಕೆಯಿದ್ದರೂ, ಸ್ಕಾಚ್‌ ವಿಸ್ಕಿಗಳಲ್ಲಿ ಏಕ ಮಾಲ್ಟ್‌ ದ ವಿಸ್ಕಿಗಳೇ ಹೆಚ್ಚು ತುಟ್ಟಿಯಾಗಿವೆ. ಸ್ಕಾಚ್‌ ವಿಸ್ಕಿಗಳು ಪ್ರಮುಖವಾಗಿ ಐದು ವಲಯಗಳಾಗಿ ವಿಂಗಡಿತಗೊಂಡಿವೆ : ಹೈಲ್ಯಾಂಡ್‌, ಲೋಲ್ಯಾಂಡ್‌, ಐಸ್ಲೇ, ಸ್ಪೆಸೈಡ್‌ ಹಾಗೂ ಕ್ಯಾಂಪ್‌ಬೆಲ್‌ಟೌನ್‌.

ವೇಲ್ಸ್‌ನ/ವೆಲ್ಷ್‌ ವಿಸ್ಕಿಗಳು

[ಬದಲಾಯಿಸಿ]

2000ನೇ ಇಸವಿಯಲ್ಲಿ, ಪೆಂಡೆರಿನ್‌ ಬಟ್ಟಿಗೃಹವು ಪೆಂಡೆರಿನ್‌ ಏಕ ಮಾಲ್ಟ್‌ ವೇಲ್ಸ್‌ನ/ವೆಲ್ಷ್‌ ವಿಸ್ಕಿಯ ಉತ್ಪಾದನೆಯನ್ನು ವೇಲ್ಸ್‌ನಲ್ಲಿ ಆರಂಭಿಸಿತು, 1894ರಲ್ಲಿ ಉತ್ಪಾದನೆ ಸ್ಥಗಿತಗೊಂಡ ನಂತರದ ಮೊದಲ ವೇಲ್ಸ್‌ನ/ವೆಲ್ಷ್‌ ವಿಸ್ಕಿ ತಯಾರಿಕೆಯಾಗಿತ್ತು. 1 ಮಾರ್ಚ್‌ 2004ರ ಸಂತ ಡೇವಿಡ್‌ರ ದಿನದಂದು, ಮೊದಲ ಬಾಟಲ್‌ಗಳು ಮಾರಾಟವಾದವು, ಪ್ರಸ್ತುತ ಈ ವಿಸ್ಕಿಯನ್ನು ವಿಶ್ವಾದ್ಯಂತ ಮಾರಾಟ ಮಾಡಲಾಗುತ್ತಿದೆ. ಪೆಂಡೆರಿನ್‌ ಬಟ್ಟಿಗೃಹವು ಬ್ರೆಕನ್‌ ಬೀಕನ್ಸ್‌ ನ್ಯಾಷನಲ್‌ ಪಾರ್ಕ್‌ನಲ್ಲಿದ್ದು, ವಿಶ್ವದಲ್ಲೇ ಚಿಕ್ಕದಾದ ಬಟ್ಟಿಗೃಹವೆಂದು ಪರಿಗಣಿತವಾಗಿದೆ.[೨೫]

ಇತರೆ ವಿಸ್ಕಿಗಳು

[ಬದಲಾಯಿಸಿ]

ಫ್ರಾನ್ಸ್‌ನ ಬ್ರಿಟನಿಯಲ್ಲಿ, ಐದು ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು (ಡಿಸ್ಟಿಲ್ಲೆರೀ ಡೆಸ್‌ ಮೆನ್‌ಹಿರ್ಸ್[೨೬], ಗಿಲ್ಲನ್[೨೭], ಗ್ಲಾನ್‌ ಅರ್‌ ಮಾರ್‌[೨೮], ಕೇರಿಲಿಸ್‌[೨೯] ಹಾಗೂ ವಾರೆಂಗ್ಹೆಮ್‌[೩೦]) ಸ್ಕಾಟ್‌ಲೆಂಡ್‌ನಲ್ಲಿ ಬಳಸುವ ತಂತ್ರಜ್ಞಾನ ಬಳಸಿ ವಿಸ್ಕಿಯನ್ನು ಉತ್ಪಾದಿಸುತ್ತಿವೆ.

ಒಂದು ವಿಸ್ಕಿಯನ್ನು ಕಾರ್ಸಿಕಾ ಎಂಬ ಫ್ರೆಂಚ್‌ ದ್ವೀಪದಲ್ಲಿ ಉತ್ಪಾದಿಸಿದರೆ : ಪಿಯೆಟ್ರಾ & ಮವೆಲ್ಲಾ (P&M) ಎಂಬುದು ಪಿಯೆಟ್ರಾ ಸಾರಾಯಿಖಾನೆ ಹಾಗೂ ಮವೆಲ್ಲಾ ಬಟ್ಟಿಗೃಹಗಳ ಸಹಉತ್ಪಾದನೆ. ನೆನಸಿಟ್ಟ ಮೊಳಕೆಧಾನ್ಯ ವಿಸ್ಕಿಗೆ ಚೆಸ್ಟ್‌ನಟ್‌ ಹಿಟ್ಟನ್ನು ಬೆರೆಸಿರಲಾಗುತ್ತದೆ. P&Mಅನ್ನು ಕಸ್ತೂರಿದ್ರಾಕ್ಷಿ ಮರದ ಪೀಪಾಯಿಗಳಲ್ಲಿ ಪಕ್ವಗೊಳಿಸಲಾಗುತ್ತದೆ(ಡೊಮೈನೆ ಜೆಂಟೈಲ್‌).[೩೧][not in citation given]

ಐಸ್‌ಲ್‌ ಆಫ್‌ ಮ್ಯಾನ್‌ ದ್ವೀಪದ ಮ್ಯಾಂಕ್ಸ್‌ ಮದ್ಯಾರ್ಕ ವು ವಾಸ್ತವವಾಗಿ ಬೇರೆಡೆ ಆಸವಿತ/ಬಟ್ಟಿ ಇಳಿಸಿ ನಾಮಸೂಚಕ "ಮೂಲ"ದಲ್ಲಿ ಮರುಆಸವಿತ/ಬಟ್ಟಿ ಇಳಿಸುವ USAನ ವಿರ್ಜಿನಿಯಾ ವಿಸ್ಕಿಗಳ ತರಹದ್ದು.

ಸ್ಪೇನ್‌ನಲ್ಲಿ DYC ಎಂಬ ಹೆಸರಿನ 1948ರಲ್ಲಿ ಆರಂಭವಾದ ಬಟ್ಟಿಗೃಹವಿದೆ. ಅದು 2 ಮಿಶ್ರಿತ, ಹಾಗೂ ಒಂದು ಶುದ್ಧ ಮೊಳಕೆ ಧಾನ್ಯ ವಿಸ್ಕಿ ಸೇರಿದಂತೆ 3 ವಿಧಗಳ ವಿಸ್ಕಿಗಳನ್ನು ತಯಾರಿಸುತ್ತದೆ. 50 ಆನಿವರ್ಸರಿ ಎಂದು ಕರೆಯಲಾಗುವ ನಿಯಮಿತ ಆವೃತ್ತಿಯೊಂದು ಶುದ್ಧ ಮಾಲ್ಟ್‌ ವಿಸ್ಕಿಯಾಗಿದೆ.

ಸ್ವೀಡನ್‌ನಲ್ಲಿ ಹೊಸ ಬಟ್ಟಿಗೃಹವೊಂದು (ಮಕ್ಮಿರಾ[೩೨]), 2006ರಲ್ಲಿ ತನ್ನ ಉತ್ಪನ್ನಗಳನ್ನು ಮಾರಲಾರಂಭಿಸಿತು.

ಇತ್ತೀಚೆಗೆ ಸಾಂಪ್ರದಾಯಿಕ ಬ್ರಾಂದಿ-ಉತ್ಪಾದಕ ಕಾಕಸಸ್‌ ಪ್ರದೇಶದ ಕನಿಷ್ಟ ಎರಡು ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ರಷ್ಯಾದ ದೇಶೀಯ ಮಾರುಕಟ್ಟೆಗೆ ತಮ್ಮ ವಿಸ್ಕಿಗಳೊಂದಿಗೆ ಪ್ರವೇಶಿಸುವ ಉದ್ದೇಶ ವ್ಯಕ್ತಪಡಿಸಿವೆ. ಸ್ಟಾವ್ರೋಪೊಲ್‌-ಮೂಲದ ಪ್ರಾಸ್ಕೊವೆಸ್ಕಿ ಬಟ್ಟಿಗೃಹವು ತನ್ನ ಉತ್ಪಾದನೆಗೆ ಐರಿಷ್‌ ತಂತ್ರಜ್ಞಾನವನ್ನು ಬಳಸಿದರೆ, ಕಿಜ್‌ಲ್ಯಾರ್‌ನಲ್ಲಿ, ಏಕ ಮಾಲ್ಟ್‌ , ಮಿಶ್ರಿತ ಹಾಗೂ ಗೋಧಿ ವೈವಿಧ್ಯತೆಗಳ ಡಾಗೆಸ್ತಾನ್‌ನ "ರಷ್ಯನ್‌ ವಿಸ್ಕಿಯು" ಸ್ಕಾಚ್‌ -ಪ್ರೇರಿತ ಪೇಯವನ್ನು ಘೋಷಿಸಿತ್ತು.[೩೩]

ತೈವಾನ್‌ನಲ್ಲಿ ಕಿಂಗ್‌ ಕಾರ್‌ ಕಂಪೆನಿಯು ವಿಸ್ಕಿ ಬಟ್ಟಿಗೃಹವೊಂದನ್ನು ಯಿಲಾನ್‌ ನಗರದಲ್ಲಿ ಸ್ಥಾಪಿಸಿದುದಲ್ಲದೇ ಇತ್ತೀಚೆಗೆ ಕವಲಾನ್‌ ಏಕ ಮಾಲ್ಟ್‌ ವಿಸ್ಕಿಯ ಜಾಹಿರಾತು ಪ್ರಚಾರವನ್ನು ಆರಂಭಿಸಿದೆ.[೩೪]

ಆಸ್ಟ್ರೇಲಿಯಾವು ನ್ಯೂಸೌತ್‌ವೇಲ್ಸ್‌ನ ಗೆರ್ರಿಂಗಾಂಗ್‌ನಲ್ಲಿನ ಆಸ್ಟ್ರೇಲಿಯನ್‌ ಮದ್ಯಾರ್ಕ ಬಟ್ಟಿಇಳಿಕೆ ಕಂಪೆನಿಯಲ್ಲಿ ಏಕ ಮಾಲ್ಟ್‌ ವಿಸ್ಕಿಯನ್ನು ಉತ್ಪಾದಿಸುತ್ತದೆ. ಇದನ್ನು ಹೊಸ ಅಮೇರಿಕನ್‌ ಓಕ್‌ ಪೀಪಾಯಿಗಳಲ್ಲಿ ಪಕ್ವಗೊಳಿಸಲಾಗುತ್ತದೆ. ಉತ್ಪಾದನೆಯು 2004ರಲ್ಲಿ ಆರಂಭವಾಗಿದೆ. ನವೀನ ಬಟ್ಟಿಗೃಹ ಉಪಕರಣಗಳಿಂದಾಗಿ ಆಸ್ಟ್ರೇಲಿಯನ್‌ ಶೈಲಿಯ "ಸ್ಟಾಕ್‌ಮನ್ಸ್‌ ವಿಸ್ಕಿ " ಹಾಗೂ "ಗನ್‌ ಆಲೆ" ನೆನಸಿಟ್ಟ ಹುಳಿಮೊಳಕೆಧಾನ್ಯ ವಿಸ್ಕಿಗಳ ಉತ್ಪಾದನೆಯನ್ನು ಹೆಚ್ಚಿಸಿವೆ.[೩೫]

ಇಂಗ್ಲೆಂಡ್‌ನ ನಾರ್‌ಫೋಲ್ಕ್‌ನಲ್ಲಿ ವಿಸ್ಕಿಯ ಉತ್ಪಾದನೆ 2006ರ ಅಂತಿಮ ಭಾಗದಲ್ಲಿ ಆರಂಭವಾಯಿತು ಹಾಗೂ ಪ್ರಥಮ ವಿಸ್ಕಿಯನ್ನು (ಮಾಲ್ಟ್‌ ಮದ್ಯಾರ್ಕಕ್ಕೆ ಪ್ರತಿಯಾಗಿ) ನವೆಂಬರ್‌ 2009ರಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಯಿತು. 100 ವರ್ಷಗಳಿಗೂ ಹೆಚ್ಚಿನ ಕಾಲದ ನಂತರದ ಪ್ರಥಮ ಆಂಗ್ಲ ಏಕ ಮಾಲ್ಟ್‌ ವಿಸ್ಕಿಯಾಗಿದೆ. St ಜಾರ್ಜ್'ರ ಬಟ್ಟಿಗೃಹದಲ್ಲಿ ಆಂಗ್ಲ ವಿಸ್ಕಿ ಕಂಪೆನಿಯಲ್ಲಿ ಇದನ್ನು ಉತ್ಪಾದಿಸಲಾಗಿತ್ತು.[೩೬] ಈ ಹಿಂದೆ ಬ್ರಿಸ್ಟಾಲ್‌ ಹಾಗೂ ಲಿವರ್‌ಪೂಲ್‌ಗಳು ಆಂಗ್ಲ ವಿಸ್ಕಿ ಉತ್ಪಾದನಾ ಕೇಂದ್ರಗಳಾಗಿದ್ದವು. ಸ್ಕಾಚ್‌ ವಿಸ್ಕಿಯಲ್ಲಿ ಬಳಕೆಯಾಗುವ ಬಹಳಷ್ಟು ಧಾನ್ಯದ ಮೂಲ ಈಸ್ಟ್‌ ಆಂಗ್ಲಿಯಾ ಆಗಿದೆ.

ಹೆಸರುಗಳು ಹಾಗೂ ಉಚ್ಚಾರಣೆಗಳು

[ಬದಲಾಯಿಸಿ]

12ನೇ ಶತಮಾನದಲ್ಲಿ ಐರ್‌ಲೆಂಡ್‌ಅನ್ನು ಆಕ್ರಮಿಸಿದ ಮಹಾರಾಜ ಹೆನ್ರಿ IIರ ಸೈನಿಕರು "ಜೀವಜಲ" ಎಂಬರ್ಥ ಬರುವ ಸ್ಥಳೀಯ ಐರಿಷ್‌ ಪದಗಳಾದ ಉಯಿಸೆ ಬೀಥಾ ಗಳ [ɪʃkʲə bʲahə] ಉಚ್ಚಾರಣೆ ಕಷ್ಟವಾದ ಕಾರಣ "ವಿಸ್ಕಿ" ಪದ ಬಳಕೆಗೆ ಬಂದಿರಬಹುದು ಎನ್ನಲಾಗಿದೆ. ಕಾಲಾ ನಂತರ, ಉಚ್ಚಾರಣೆಯು "ವ್ಹಿಸ್ಕೀಬಾ"ದಿಂದ ( ಐರಿಷ್‌ ಪದ ಉಚ್ಚಾರಣೆಯ ಅಂದಾಜು ಪದ) "ವಿಸ್ಕಿ"ಗೆ ಬದಲಾಗಿರಬಹುದು. ಕೆಲ್ಟ್‌ ಭಾಷೆಯಲ್ಲಿನ ಅದರ ಹೆಸರನ್ನೇ ಲ್ಯಾಟಿನ್‌ ಪದಪುಂಜ "ಜೀವಜಲ" ಎಂಬರ್ಥ ಬರುವ ಆಕ್ವಾ ವಿಟೇಎರವಲು ಪದವಾಗಿದೆ.[೩೭]

ಒಂದು ಕಾಲದಲ್ಲಿ ,ಎಲ್ಲಾ ವಿಸ್ಕಿಗಳನ್ನು "e"ರಹಿತವಾಗಿ "whisky"ಯಂತೆ ಉಚ್ಚರಿಸಲಾಗುತ್ತಿತ್ತು. 1870ರ ಸುಮಾರಿನಲ್ಲಿ, ಸ್ಕಾಟಿಷ್‌ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ಕಾಫೆ ಬಟ್ಟಿಯಂತ್ರದಿಂದ ಉತ್ಪಾದಿತ ಅಗ್ಗದ ಮದ್ಯಾರ್ಕಗಳ ಸುರಿಮಳೆಯನ್ನೇ ಮಾರುಕಟ್ಟೆಯಲ್ಲಿ ಸುರಿಸಿದ ಕಾರಣ ಸ್ಕಾಟಿಷ್‌ ವಿಸ್ಕಿಯ ಹೆಸರು ಖ್ಯಾತಿ ಹೊಂದಿರಲಿಲ್ಲ. ಐರಿಷ್‌ ಹಾಗೂ ಅಮೇರಿಕನ್‌ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ತಮ್ಮ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪ್ರತ್ಯೇಕಿಸಲು, ಹೆಚ್ಚುವರಿ "e"ಯೊಂದಿಗಿನ "whiskey" ಉಚ್ಚಾರಣೆಯನ್ನು ಅಳವಡಿಸಿಕೊಂಡವು. ಇಂದು, whisky ಎಂಬ ಉಚ್ಚಾರಣೆ (ಬಹುವಚನ ವಿಸ್ಕಿಗಳು )ಯನ್ನು ಸಾಧಾರಣವಾಗಿ ಸ್ಕಾಟ್‌ಲೆಂಡ್‌, ವೇಲ್ಸ್‌ , ಕೆನಡಾ, ಹಾಗೂ ಜಪಾನ್‌ಗಳಲ್ಲಿ, ಆಸವಿತ/ಬಟ್ಟಿ ಇಳಿಸಿದ ವಿಸ್ಕಿಗಳಿಗೆ ಬಳಸಿದರೆ, ಐರ್‌ಲೆಂಡ್‌ ಹಾಗೂ ಅಮೇರಿಕಾಗಳಲ್ಲಿ ಆಸವಿತ/ಬಟ್ಟಿ ಇಳಿಸಿದ ಮದ್ಯಾರ್ಕಗಳಿಗೆ whiskey ಯನ್ನು ಬಳಸಲಾಗುತ್ತದೆ. ಮದ್ಯಸಾರ, ತಂಬಾಕು ಹಾಗೂ ಶಸ್ತ್ರಾಸ್ತ್ರಗಳ ನಿಯಂತ್ರಣಾ ಇಲಾಖೆ1968ರ ನಿರ್ದೇಶನದ ಪ್ರಕಾರ "whisky"ಯು ಅಧಿಕೃತ US ಉಚ್ಚಾರಣೆಯಾಗಿದ್ದು, "ವಿಸ್ಕಿ" ಎಂಬ ವಿಶೇಷಣವನ್ನು ಸಂಪ್ರದಾಯ ಮಾನ್ಯತೆಗಾಗಿ ಬಳಸಲು ಅನುಮತಿ ನೀಡಿದೆಯಾದರೂ, ಬಹಳಷ್ಟು U.S. ಉತ್ಪಾದಕರು ಐತಿಹಾಸಿಕ/ಹಿಂದಿನ ಉಚ್ಚಾರಣೆಯನ್ನೇ ಬಳಸುತ್ತಿದ್ದಾರೆ. ಅರ್ಲಿ ಟೈಮ್ಸ್‌, ಮೇಕರ್ಸ್‌ ಮಾರ್ಕ್‌, ಹಾಗೂ ಜಾರ್ಜ್‌ ಡಿಕೆಲ್‌ನಂತಹಾ ಕೆಲ ಅಪವಾದಗಳು ಸಾಮಾನ್ಯವಾಗಿ ಸ್ಕಾಟಿಷ್‌ ಪರಂಪರೆಯನ್ನು ಸೂಚಿಸುತ್ತವೆ.[]

ವಿಕ್ಟೋರಿಯನ್‌ ಯುಗದ ಉತ್ತರಭಾಗದಲ್ಲಿ, ಐರಿಷ್‌ ವಿಸ್ಕಿಯು ವಿಶ್ವದ ಅತ್ಯಂತ ಜನಪ್ರಿಯ ವಿಸ್ಕಿಯಾಗಿತ್ತು. ಐರಿಷ್‌ ವಿಸ್ಕಿಗಳಲ್ಲಿ, ಡಬ್ಲಿನ್‌ ವಿಸ್ಕಿಗಳನ್ನು ವಿಸ್ಕಿಗಳ ಗ್ರಾಂಡ್ಸ್‌ ಕ್ರುಗಳು ಎಂದು ಪರಿಗಣಿಸಲಾಗಿತ್ತು. ಡಬ್ಲಿನ್‌ ವಿಸ್ಕಿಯನ್ನು ಇತರೆ ವಿಸ್ಕಿಗಳಿಂದ ಪ್ರತ್ಯೇಕಿಸಲು, ಡಬ್ಲಿನ್‌ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು "whiskey" ಉಚ್ಚಾರಣೆಯನ್ನು ಅಳವಡಿಸಿಕೊಂಡವು. ಇತರೆ ಐರಿಷ್‌ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ಅಂತಿಮವಾಗಿ ಇದೇ ಶೈಲಿಯನ್ನು ಅನುಸರಿಸಿದವು. 1966ರಲ್ಲಿ "e"ಅನ್ನು ಅಳವಡಿಸಿಕೊಂಡ ಅಂತಿಮ ಐರಿಷ್‌ "ವಿಸ್ಕಿ"ಯ ಹೆಸರು ಪ್ಯಾಡಿ.[]

"ಸ್ಕಾಚ್‌ " ಎಂಬುದು ಅಂತರರಾಷ್ಟ್ರೀಯವಾಗಿ "ಸ್ಕಾಚ್‌ ವಿಸ್ಕಿ"ಯನ್ನು ಸೂಚಿಸುವ ಪದವಾದರೂ, ಮಿಶ್ರಿತ ವಿಸ್ಕಿಯನ್ನು ಸಾಮಾನ್ಯವಾಗಿ "ವಿಸ್ಕಿ" ಎಂದು ಹಾಗೂ ಏಕ ಅಥವಾ ತೊಟ್ಟಿಯಲ್ಲಿ ನೆನೆಸಿದ ಮಾಲ್ಟ್‌ ವಿಸ್ಕಿಯನ್ನು "ಮಾಲ್ಟ್‌" ಎಂದು ಕರೆಯುವ ಸ್ಕಾಟ್‌ಲೆಂಡ್‌ನಲ್ಲಿ ಇದನ್ನು ಅಪರೂಪವಾಗಿ ಬಳಸಲಾಗುತ್ತದೆ.[೩೮]

ಅನೇಕ ಲ್ಯಾಟಿನ್‌-ಅಮೇರಿಕನ್‌ ರಾಷ್ಟ್ರಗಳಲ್ಲಿ, ವಿಸ್ಕಿ (ವೀ-ಸ್ಕೀ )ಯನ್ನು ಛಾಯಾಗ್ರಾಹಕರ ಮುಗುಳ್ನಗೆಯ ಸೂಚನೆಯಾಗಿ ಆಂಗ್ಲ ಭಾಷೆಯಲ್ಲಿ "ಚೀಸ್‌" ಎನ್ನುವ ಹಾಗೆ ಬಳಸಲಾಗುತ್ತದೆ. ಉರುಗ್ವೆಯ ಚಿತ್ರ ವಿಸ್ಕಿ ಯು ತನ್ನ ಹೆಸರನ್ನು ಇದೇ ಕಾರಣದಿಂದ ಪಡೆದುಕೊಂಡಿದೆ.

ರಸಾಯನಶಾಸ್ತ್ರ

[ಬದಲಾಯಿಸಿ]

ವಿಸ್ಕಿಗಳು ಹಾಗೂ ಕಾಗ್ನಾಕ್‌ ಹಾಗೂ ರಮ್‌ನಂತಹಾ ಇತರೆ ಆಸವಿತ/ಬಟ್ಟಿ ಇಳಿಸಿದ ಪೇಯಗಳು ಸ್ವಾದಕಾರಕಗಳ ಸಾಲನ್ನೇ ಹೊಂದಿರುವ ಸಂಕೀರ್ಣ ಪೇಯಗಳಾಗಿದ್ದು ಅವುಗಳಲ್ಲಿ 200ರಿಂದ 300ಅನ್ನು ಸುಲಭವಾಗಿಯೇ ರಾಸಾಯನಿಕ ವಿಶ್ಲೇಷಣೆಯ ಮೂಲಕ ಪತ್ತೆಹಚ್ಚಬಹುದಾಗಿದೆ. ಸ್ವಾದಕಾರಕ ರಾಸಾಯನಿಕಗಳೆಂದರೆ "ಕಾರ್ಬೋನಿಲ್‌ ಸಂಯುಕ್ತಗಳು, ಮದ್ಯಸಾರಗಳು, ಕಾರ್ಬಾಕ್ಸಿಲ್‌ ಆಮ್ಲಗಳು ಹಾಗೂ ಅವುಗಳ ಈಸ್ಟರ್‌ಗಳು, ಸಾರಜನಕ ಹಾಗೂ ಗಂಧಕ ಹೊಂದಿರುವ ಸಂಯುಕ್ತಗಳು, ಟ್ಯಾನಿನ್‌ಗಳು ಹಾಗೂ ಇತರ ಪಾಲಿಫೆನೊಲಿಕ್‌ ಸಂಯುಕ್ತಗಳು,ಟರ್ಪೀನ್‌ಗಳು, ಹಾಗೂ ಆಮ್ಲಜನಕ- ಹೊಂದಿರುವ ಭಿನ್ನಚಕ್ರೀಯ ಸಂಯುಕ್ತಗಳು " ಹಾಗೂ ಕೊಬ್ಬಿನಂಶದ ಆಮ್ಲಗಳ ಈಸ್ಟರ್‌ಗಳು.[೩೯] ಸಾರಜನಕ ಸಂಯುಕ್ತಗಳೆಂದರೆ ಪೈರಿಡೈನ್‌ಗಳು, ಪಿಕೊಲೈನ್‌ಗಳು ಹಾಗೂ ಪೈರಾಜೈನ್‌ಗಳು.[೪೦]

ಆಸವನ/ಬಟ್ಟಿ ಇಳಿಸುವಿಕೆಯಿಂದೊದಗುವ ಸ್ವಾದಗಳು

[ಬದಲಾಯಿಸಿ]

ವಿಸ್ಕಿಗೆ ಸ್ವಾದ ನೀಡುವಿಕೆಯು ಭಾಗಶಃ ಕಾಂಗನರ್‌ಗಳು ಹಾಗೂ ಫ್ಯೂಸೆಲ್‌ ತೈಲಗಳ ಉಪಸ್ಥಿತಿಯಿಂದಾಗಿ ನಿರ್ಧರಿಸಲ್ಪಡುತ್ತದೆ. ಫ್ಯೂಸೆಲ್‌ ತೈಲಗಳು ಎಥನಾಲ್‌ಗಳಿಗಿಂತ ಉನ್ನತ ಸ್ಥಾಯಿಯ ಮದ್ಯಸಾರವಾಗಿದ್ದು ನಮ್ಯ ವಿಷಕಾರಿಯಾಗಿರುತ್ತವಲ್ಲದೇ ಕಟುವಾದ, ಸಹಿಸಲಸಾಧ್ಯವಾದ ವಾಸನೆ ಹಾಗೂ ರುಚಿಯನ್ನು ಹೊಂದಿರುತ್ತವೆ. ವಿಸ್ಕಿಯಲ್ಲಿನ ಹೆಚ್ಚುವರಿ ಫ್ಯೂಸೆಲ್‌ ತೈಲಗಳ ಉಪಸ್ಥಿತಿಯು ಒಂದು ಲೋಪವೆನಿಸಿಕೊಳ್ಳುತ್ತದೆ. ಬೇಡದ ಫ್ಯೂಸೆಲ್‌ ತೈಲಗಳನ್ನು ಹೊರಹಾಕಲು ಅನೇಕ ವಿಧಾನಗಳನ್ನು ಆಸವನ/ಬಟ್ಟಿ ಇಳಿಸುವಿಕೆಯ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಸಾಂಪ್ರದಾಯಿಕವಾಗಿ, ಅಮೇರಿಕನ್‌ ಬಟ್ಟಿಕಾರರು ಬೇಡದ ಬಟ್ಟಿ ಇಳಿಕೆಯ ಉಪೋತ್ಪನ್ನಗಳನ್ನು ಕಳೆಯಲು ಇದ್ದಿಲು, ಜಲ್ಲಿ, ಮರಳು, ಅಥವಾ ನಾರುಬಟ್ಟೆಗಳ ಮೂಲಕ ಎರಡನೇ ಹಂತದ ಶುದ್ಧೀಕರಣದ ಬಳಕೆಗೆ ಹೆಚ್ಚಿನ ಗಮನ ಕೊಡುತ್ತಿದ್ದರು. ಕೆನಡಾದ ಬಟ್ಟಿಕಾರರು ಸಾಂಪ್ರದಾಯಿಕವಾಗಿ ತಟಸ್ಥಧಾನ್ಯ ಮದ್ಯಾರ್ಕ ಅಥವಾ ಧಾನ್ಯ ತಟಸ್ಥ ಮದ್ಯಾರ್ಕ (GNS) ಎಂದು ಕರೆಯಲಾಗುವ ಬಹುಮಟ್ಟಿಗೆ ಶುದ್ಧ (ಹಾಗೂ ಕಡಿಮೆ ಸ್ವಾದದ) ಎಥನಾಲ್‌ ಉತ್ಪಾದಿತವಾಗುವಂತೆ ನಿಯಂತ್ರಿಸಬಲ್ಲ ಲಂಬ ಬಟ್ಟಿಪಾತ್ರೆಗಳನ್ನು ಬಳಸುತ್ತಾರೆ.[೪೧] ತಟಸ್ಥ ಧಾನ್ಯ ಮದ್ಯಾರ್ಕಗಳನ್ನು ಸ್ವಾದವುಳ್ಳ ವಿಸ್ಕಿಗಳ ಜೊತೆ ಸಂಯೋಜಿಸಿ ಸ್ವಾದವನ್ನು ಮತ್ತೆ ಪಡೆಯುವಂತೆ ಮಾಡಲಾಗುತ್ತದೆ.[೪೨]

ಅಸಿಟಾಲ್‌ಗಳು ಬಲುಬೇಗ ಬಟ್ಟಿ ಇಳಿಕೆಯ ಉಪೋತ್ಪನ್ನಗಳಲ್ಲಿ ರಚಿತವಾಗುತ್ತವಲ್ಲದೇ ಬಹಳಷ್ಟನ್ನು ಆಸವಿತ/ಬಟ್ಟಿ ಇಳಿಸಿದ ಪೇಯಗಳಲ್ಲಿ ಕಾಣಬಹುದಾಗಿದ್ದು, ಅತ್ಯಂತ ಪ್ರಮುಖವಾದುದು ಅಸಿಟಾಲ್‌ಡಿಹೈಡ್‌ ಡೈಈಥೈಲ್‌ ಅಸಿಟಾಲ್‌ (1,1-ಡೈಈಥೋಕ್ಸೈಈಥೇನ್‌). ವಿಸ್ಕಿಗಳಲ್ಲಿ ಹೆಚ್ಚಿನ ಮಾಲ್ಟ್‌ ವಿಸ್ಕಿಯಲ್ಲಿ ಹೆಚ್ಚಿನ ಮಟ್ಟದ ಬೇಡದ ಉತ್ಪನ್ನಗಳಿರುತ್ತವೆ.[೪೩] ಈ ಅಸಿಟಾಲ್‌ ಎಂಬುದು ಷೆರ್ರಿಯ ಪ್ರಮುಖ ಸ್ವಾದಕಾರಕವಾಗಿದ್ದು ಕಂಪಿನಲ್ಲಿ ಹಣ್ಣಿನ ಸುವಾಸನೆಯನ್ನು ನೀಡುತ್ತದೆ.[೪೪]

ಡೈಕೆಟೋನ್‌ ಡಯಾಸೆಟೈಲ್‌ (2,3-ಬ್ಯುಟೇನ್‌ಡಯೋನ್‌) ಕಣಜದ ಕಂಪನ್ನು ಹೊಂದಿದ್ದು ಬಹಳಷ್ಟು ಮಟ್ಟಿಗೆ ಎಲ್ಲಾ ಆಸವಿತ/ಬಟ್ಟಿ ಇಳಿಸಿದ ಪೇಯಗಳಲ್ಲಿರುತ್ತದೆ. ವಿಸ್ಕಿಗಳು ಹಾಗೂ ಕಾಗ್ನಾಕ್‌ಗಳು ಸಾಧಾರಣವಾಗಿ ವೋಡ್ಕಾಗಳಿಗಿಂತ ಹೆಚ್ಚು, ಆದರೆ ರಮ್‌ಗಳು ಅಥವಾ ಬ್ರಾಂಡಿಗಳಿಗಿಂತ ಗಮನಾರ್ಹ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತವೆ.[೪೫]

ಓಕ್‌ನಿಂದೊದಗುವ ಸ್ವಾದಗಳು

[ಬದಲಾಯಿಸಿ]

ವಿಸ್ಕಿ ಲ್ಯಾಕ್ಟೋನ್‌ (3-ಮೈಥೈಲ್‌-4-ಆಕ್ಟಾಲೈಡ್‌) ಓಕ್‌ನ ಎಲ್ಲಾ ವಿಧಗಳಲ್ಲೂ ಕಂಡುಬರುತ್ತದೆ. ಈ ಲ್ಯಾಕ್ಟೋನ್‌ ಪ್ರಬಲ ತೆಂಗಿನಕಾಯಿ ವಾಸನೆಯನ್ನು ಹೊಂದಿರುತ್ತದೆ.[೪೬] ವಿಸ್ಕಿ ಲ್ಯಾಕ್ಟೋನ್‌ಅನ್ನು ಕ್ವೆರ್‌ಕಸ್‌ ಲ್ಯಾಕ್ಟೋನ್‌ ಎಂದೂ ಕರೆಯಲಾಗುತ್ತದೆ.[೪೭]

ವಾಣಿಜ್ಯಿಕವಾಗಿ ಸುಟ್ಟ ಓಕ್‌ಗಳು ಫೆನೋಲಿಕ್‌ ಸಂಯುಕ್ತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಒಂದು ಅಧ್ಯಯನದಲ್ಲಿ 40 ವಿವಿಧ ಫಿನೋಲಿಕ್‌ ಸಂಯುಕ್ತಗಳನ್ನು ಗುರುತಿಸಲಾಯಿತು. ಕೂಮರಿನ್ಸ್ಕೊಪೊಲೆಟಿನ್‌ ವಿಸ್ಕಿಯಲ್ಲಿರುವುದಲ್ಲದೇ, ಬೌರ್ಬನ್‌ ವಿಸ್ಕಿಯಲ್ಲಿ ಹೆಚ್ಚಿನ ಮಟ್ಟದಲ್ಲಿರುತ್ತದೆ.[೪೮]

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2010-03-01. Retrieved 2010-04-06.
  2. "ಆರ್ಕೈವ್ ನಕಲು". Archived from the original on 2009-04-22. Retrieved 2010-04-06.
  3. http://www.whiskeywise.com/whiskey-barrels.html
  4. Ross, James. Whisky. Routledge. p. 158. ISBN 0-7100-6685-6.
  5. ಮಾರ್ಟಿನ್‌ ಲೆವೆ (1956). "ಬೆಬಿಲೋನಿಯನ್‌ ಕೆಮಿಸ್ಟ್ರಿ: ಎ ಸ್ಟಡಿ ಆಫ್‌ ಅರೇಬಿಕ್‌ ಅಂಡ್‌ ಸೆಕಂಡ್‌ ಮಿಲೇನಿಯಂ B.C. ಪರ್ಫ್ಯೂಮರಿ", ಆಸಿರಿಸ್‌ 12 , p. 376-389.
  6. ೬.೦ ೬.೧ ೬.೨ ೬.೩ Magee, Malachy (1980). Irish Whiskey - A 1000 year tradition. O'Brien press. p. 144. ISBN 0862782287.
  7. Russell, Inge (2003). Whisky: technology, production and marketing. Academic Press. p. 14. ISBN 9780126692020. {{cite book}}: More than one of |pages= and |page= specified (help)
  8. "ಆರ್ಕೈವ್ ನಕಲು". Archived from the original on 2010-01-25. Retrieved 2010-04-06.
  9. ೯.೦ ೯.೧ ೯.೨ ೯.೩ ೯.೪ ೯.೫ "History of Scotch Whisky". Retrieved 6 Jan 2010.
  10. ೧೦.೦ ೧೦.೧ ೧೦.೨ homecooking.about.com/od/foodhistory/a/whiskeyhistory.htm
  11. ೧೧.೦ ೧೧.೧ ೧೧.೨ "The History of Whisky". Archived from the original on 2010-01-25. Retrieved 2010-04-06.
  12. "Standards of Identity for Distilled Spirits, Title 27 Code of Federal Regulations, Pt. 5.22" (PDF). Retrieved 2008-10-17.
  13. "Food and Drugs Act, Food and Drug Regulations (C.R.C., c. 870)". Archived from the original on 2011-06-25. Retrieved 2007-01-23.
  14. ""WITH A DASH OF WATER" Finnish Whisky Culture and its Future". Archived from the original on 2011-07-20. Retrieved 2009-07-22.
  15. MaClean, Charles (2008). Whiskey. Dorling Kindersley. pp. 254–265. ISBN 978-0-7566-3349-3.
  16. Paul Peachey (2006-03-03). "Battle for the world's largest whisky market -- India". ದಕ್ಷಿಣ ಆಫ್ರಿಕಾ Mail & Guardian. Archived from the original on 2008-06-01. Retrieved 2007-06-25.
  17. "Amrut Distilleries". Archived from the original on 2004-08-05. Retrieved 2007-06-25.
  18. "Planet Whiskies Lists of Indian Whisky Distilleries". Retrieved 2009-05-19.
  19. http://www.encyclopedia.com/doc/1G1-12549581.html ಸ್ಕಾಚ್‌ ಹಾಗೂ ಐರಿಷ್‌ ವಿಸ್ಕಿಗಳ ನಡುವಿನ ವ್ಯತ್ಯಾಸಗಳು
  20. Government of Ireland. "Irish Whiskey Act, 1980". Archived from the original on 2007-03-22. Retrieved 2007-02-20.
  21. "ನಿಕ್ಕಾ ಯೋಯ್ಚಿ 10 ಏಕ ಪೀಪಾಯಿ ಹೆಚ್ಚಿನ ಶ್ರೇಯಾಂಕ ಗಳಿಸಿತು". Archived from the original on 2009-02-21. Retrieved 2021-08-10.
  22. 2008ರ ವಿಶ್ವ ವಿಸ್ಕಿ ಪ್ರಶಸ್ತಿಗಳು
  23. Jackson, Michael (1994). Michael Jackson's Malt Whisky Companion. Dorling Kindersley. p. 12. ISBN 0-7513-0146-9.
  24. "ASIL Insight: WTO Protections for Food Geographic Indications". Retrieved 2007-08-25.
  25. "Planet Whiskies Welsh Distillery Section". Retrieved 2009-05-19.
  26. (French)ಡಿಸ್ಟಿಲ್ಲೆರೀ ಡೆಸ್‌ ಮೆನ್‌ಹೆರಿಸ್‌
  27. (French)ಗಿಲ್ಲನ್‌
  28. (French)ಗ್ಲಾನ್‌ ಅರ್‌ ಮೊರ್‌ Archived 2010-04-20 ವೇಬ್ಯಾಕ್ ಮೆಷಿನ್ ನಲ್ಲಿ.
  29. (French)ಕೇರಿಲಿಸ್‌ Archived 2010-04-10 ವೇಬ್ಯಾಕ್ ಮೆಷಿನ್ ನಲ್ಲಿ.
  30. (French)ವಾರೆಂಗೆಮ್‌ Archived 2011-02-03 ವೇಬ್ಯಾಕ್ ಮೆಷಿನ್ ನಲ್ಲಿ.
  31. http://www.corsica-isula.com/gastronomy.htm
  32. ಮಕ್ಮಿರಾ
  33. "Lenta.ru report (in Russian)".
  34. "ಕಿಂಗ್‌ ಕಾರ್‌ ವಿಸ್ಕಿ ಬಟ್ಟಿಗೃಹ". Archived from the original on 2010-04-13. Retrieved 2010-04-06.
  35. [೧]
  36. "St ಜಾರ್ಜ್‌'ರ ಬಟ್ಟಿಗೃಹ". Archived from the original on 2015-03-28. Retrieved 2010-04-06.
  37. ಲಾಯ್ಡ್, J & ಮಿಚಿನ್ಸನ್, J: "ದ ಬುಕ್‌ ಆಫ್‌ ಜನರಲ್‌ ಇಗ್ನೋರೆನ್ಸ್‌". ಫೇಬರ್‌ & ಫೇಬರ್‌, 2006.
  38. "Scotch: Definition, Synonyms and Much More from Answers.com". www.answers.com. Retrieved 2008-06-21.
  39. Maarse, H. (1991). Volatile Compounds in Foods and Beverages. CRC Press. p. 548. ISBN 0824783905.
  40. Belitz, Hans-Dieter (2004). Food Chemistry. Springer. p. 936. ISBN 3540408185. {{cite book}}: Unknown parameter |coauthors= ignored (|author= suggested) (help)
  41. "Pure Alcohol (Ethanol)" (PDF). Archived from the original (pdf) on 2007-12-02. Retrieved 2007-12-18.
  42. Robert Hess (2007-08-25). "Canadian Whiskey". The Spirit World. Retrieved 2007-12-18.
  43. Maarse, H. (1991). Volatile Compounds in Foods and Beverages. CRC Press. p. 553. ISBN 0824783905.
  44. "June 2007". The Beer Brewer. Archived from the original on 2007-12-19. Retrieved 2007-12-18.
  45. Maarse, H. (1991). Volatile Compounds in Foods and Beverages. CRC Press. p. 554. ISBN 0824783905.
  46. "Aromas and Flavours". Wine-Pages.com. Archived from the original on 2007-10-18. Retrieved 2007-12-18.
  47. Belitz, Hans-Dieter (2004). Food Chemistry. Springer. p. 383. ISBN 3540408185. {{cite book}}: Unknown parameter |coauthors= ignored (|author= suggested) (help)
  48. Maarse, H. (1991). Volatile Compounds in Foods and Beverages. CRC Press. p. 574. ISBN 0824783905.


ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ವಿಸ್ಕಿ&oldid=1242249" ಇಂದ ಪಡೆಯಲ್ಪಟ್ಟಿದೆ