ಸ್ಕಾಚ್ ವಿಸ್ಕಿ
ಪ್ರಕಾರ | Whisky |
---|---|
ಮೂಲ ದೇಶ | Scotland |
Alcohol by volume | 40–94.8% |
ಸ್ಕಾಟ್‌ಲೆಂಡ್‌ನಲ್ಲಿ ತಯಾರಿಸಲಾದ ವಿಸ್ಕಿಯನ್ನು ಸ್ಕಾಚ್ ವಿಸ್ಕಿ ಎಂದು ಕರೆಯುತ್ತಾರೆ. ವಿಸ್ಕಿ ಎಂಬ ಪದವನ್ನು ಪ್ರತ್ಯೇಕವಾಗಿ ಹೇಳದ ಹೊರತು ಸ್ಕಾಚ್ ಎಂಬ ಅರ್ಥದಲ್ಲೇ ಬ್ರಿಟನ್‌ನಲ್ಲಿ ಸಾಧಾರಣವಾಗಿ ಬಳಸಲಾಗುತ್ತದೆ. ಇದನ್ನು ಬಹುತೇಕ "ಸ್ಕಾಚ್" ಎಂದು ಇತರೆ ಆಂಗ್ಲ-ಭಾಷಿಕ ರಾಷ್ಟ್ರಗಳಲ್ಲಿ ಕರೆಯಲಾಗುತ್ತದೆ.
ಸ್ಕಾಚ್ ವಿಸ್ಕಿಯನ್ನು ಐದು ಪ್ರತ್ಯೇಕ ವರ್ಗಗಳಾಗಿ ವಿಂಗಡಿಸಲಾಗಿದೆ: ಅವುಗಳೆಂದರೆ ಏಕ ಮಾಲ್ಟ್ ಸ್ಕಾಚ್ ವಿಸ್ಕಿ, ಸಂಯೋಜಿತ ಮಾಲ್ಟ್ (ಹಿಂದೆ "ತೊಟ್ಟಿಯಲ್ಲಿನ ನೆನೆಸಿದ ಮಾಲ್ಟ್" ಅಥವಾ "ಶುದ್ಧ ಮಾಲ್ಟ್" ಎನ್ನಲಾಗುತ್ತಿತ್ತು), ಸಂಯೋಜಿತ ಸ್ಕಾಚ್ ವಿಸ್ಕಿ, ಸಂಯೋಜಿತ ಧಾನ್ಯ ಸ್ಕಾಚ್ ವಿಸ್ಕಿ ಮತ್ತು ಏಕ ಧಾನ್ಯ ಸ್ಕಾಚ್ ವಿಸ್ಕಿ.[೧]
ಸ್ಕಾಚ್ ವಿಸ್ಕಿಯ ಶೀಶೆ/ಸೀಸೆ/ಬಾಟಲಿಯ ಮೇಲೆ ಅದರ ಪಕ್ವತೆಯ ಬಗ್ಗೆ ಸಂಖ್ಯೆಯ ರೂಪದಲ್ಲಿ ಇರಬೇಕಾದ ನಮೂದನೆಯು, ಕಡ್ಡಾಯವಾಗಿ ಆ ಉತ್ಪನ್ನವನ್ನು ತಯಾರಿಸಲು ಬಳಸಿದ ಎಳೆಯ ಸ್ಕಾಚ್ ವಿಸ್ಕಿಯ ಪಕ್ವತೆಯನ್ನು ಬಿಂಬಿಸಬೇಕಾಗಿರುತ್ತದೆ. ಪಕ್ವತೆಯ ದಾಖಲೆಯೊಂದಿಗಿನ ವಿಸ್ಕಿಯನ್ನು ಖಚಿತ ಪಕ್ವತೆಯ ವಿಸ್ಕಿ ಎನ್ನಲಾಗುತ್ತದೆ.[೨]
1495ನೇ ಇಸವಿಯಲ್ಲಿನ ಸ್ಕಾಟ್‌ಲೆಂಡ್‌ನ ರಾಜಭಂಡಾರದ ದಾಖಲೆಗಳಲ್ಲಿ ಸ್ಕಾಚ್ ವಿಸ್ಕಿಯ ಮೊತ್ತಮೊದಲ ಲಿಖಿತ ಪ್ರಸ್ತಾಪ ಕಂಡುಬಂದಿದೆ. ಜಾನ್ ಕಾರ್ ಎಂಬ ಓರ್ವ ಕ್ರೈಸ್ತಭಿಕ್ಷುವು ಅದರ ಬಟ್ಟಿಕಾರರಾಗಿದ್ದರು.[೩][unreliable source?]
ಕಾನೂನುಸಮ್ಮತ ಲಕ್ಷಣ ನಿರೂಪಣೆ
[ಬದಲಾಯಿಸಿ]2009ರ ಸಾಲಿನ ಸ್ಕಾಚ್ ವಿಸ್ಕಿ ವಿಧೇಯಕವು (SWR) (ನಿರ್ದಿಷ್ಟ ಪರಿವರ್ತನಾತ್ಮಕ ಕಟ್ಟಳೆಗಳಿಗೆ ಒಳಪಟ್ಟು) 23 ನವೆಂಬರ್ 2009ರಂದು ಜಾರಿಗೆ ಬಂದಿತು. ಇದರ ಮೂಲಕ ಅವರು 1988ರ ಸ್ಕಾಚ್ ವಿಸ್ಕಿ ಕಾಯಿದೆ ಮತ್ತು 1990ರ ಸ್ಕಾಚ್ ವಿಸ್ಕಿ ಆದೇಶಗಳಿಗೆ ತಿದ್ದುಪಡಿ ಮಾಡಿದ್ದರು.
SWR ಕಾಯಿದೆಯು ಸ್ಕಾಚ್ ವಿಸ್ಕಿಗಳನ್ನು ಹೇಗೆ ಹೆಸರಿಸಬೇಕು, ಹೇಗೆ ಪ್ಯಾಕ್ ಮಾಡಬೇಕು ಮತ್ತು ಯಾವ ರೀತಿ ಜಾಹಿರಾತು ಪ್ರಚಾರ ಕೈಗೊಳ್ಳಬೇಕು ಎಂಬುದರ ಬಗೆಗೆಲ್ಲಾ ಕಟ್ಟಳೆಗಳನ್ನು ನಿಗದಿಪಡಿಸಿದ್ದರೆ, ಹಿಂದಿನ ಶಾಸನವು ಸ್ಕಾಚ್ ವಿಸ್ಕಿಯನ್ನು ಹೇಗೆ ತಯಾರಿಸಬೇಕು ಎಂಬ ಬಗ್ಗೆ ಮಾತ್ರವೇ ಕಟ್ಟಳೆಗಳನ್ನು ಹೇರಿತ್ತು. ಚಿಲ್ಲರೆ ಮಾರಾಟಕ್ಕೆಂದು ನಿಗದಿಪಡಿಸಿದ ಶೀಶೆ/ಸೀಸೆ/ಬಾಟಲಿಯ ಹೊರತು ಬೇರೆ ರೂಪದಲ್ಲಿ 23 ನವೆಂಬರ್ 2012ರಿಂದ ಏಕ ಮಾಲ್ಟ್ ಸ್ಕಾಚ್ ವಿಸ್ಕಿಯನ್ನು (ಇದು ಸಂಯೋಜನೆಗಳಿಗೆ ಅನ್ವಯಿಸುವುದಿಲ್ಲ) ಸ್ಕಾಟ್‌ಲೆಂಡ್‌ನಿಂದ ಹೊರಗೆ ರಫ್ತು ಮಾಡುವಂತಿಲ್ಲ.
2009ರ ಸ್ಕಾಚ್ ವಿಸ್ಕಿ ವಿಧೇಯಕಗಳು UK ಕಾನೂನು ವ್ಯವಸ್ಥೆಯಲ್ಲಿ ಸ್ಕಾಚ್ ವಿಸ್ಕಿಯ ಬಗ್ಗೆ ಕಟ್ಟಳೆಗಳನ್ನು ವಿಧಿಸುತ್ತದೆ.
ಶಾಸನದ ಪ್ರಕಾರ, ಸ್ಕಾಚ್ ವಿಸ್ಕಿ ಎಂದರೆ ನಿರ್ದಿಷ್ಟ ವಿಸ್ಕಿಯು :
(a) ಮೊಳಕೆ ಕಟ್ಟಿಸಿದ ಜವೆಗೋಧಿ ಮತ್ತು ನೀರನ್ನು ಬಳಸಿ ಸ್ಕಾಟ್‌ಲೆಂಡ್‌ನ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯಲ್ಲಿ ತಯಾರಿಸಲ್ಪಟ್ಟ ವಿಸ್ಕಿಯಾಗಿದ್ದು (ಇತರೆ ಏಕದಳ ಧಾನ್ಯಗಳ ತವಡು ತೆಗೆಯದ ಕಾಳುಗಳನ್ನು ಮಾತ್ರವೇ ಇದಕ್ಕೆ ಸೇರಿಸಬಹುದಾಗಿದೆ) ಇವುಗಳಲ್ಲಿ ಎಲ್ಲವೂ:
(i) ನೆನಸಿಟ್ಟ ಮೊಳಕೆಧಾನ್ಯದೊಂದಿಗೆ ಆಯಾ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯಲ್ಲಿ ಪ್ರಕ್ರಿಯೆಗೊಳಪಟ್ಟಿರಬೇಕು; (ii) ಅದೇ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯಲ್ಲಿ ಕೇವಲ ಅಂತರ್ವರ್ಧಕ ಕಿಣ್ವಗಳ ವ್ಯವಸ್ಥೆಯಿಂದಾಗಿ ಮಾತ್ರವೇ ಹುದುಗುಬರಿಸಬಹುದಾದ ತಲಾಧಾರವಾಗಿ ಪರಿವರ್ತಿಸಿರಬೇಕು ಹಾಗೂ (iii) ಅದೇ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯಲ್ಲಿ ಕೇವಲ ಯೀಸ್ಟ್‌ನ ಸೇರ್ಪಡೆ ಮೂಲಕವೇ ಆಸವಿತ/ಬಟ್ಟಿ ಇಳಿಸಿದುದಾಗಿರಬೇಕು;
(b) 94.8%ಕ್ಕಿಂತ ಕಡಿಮೆ ಪ್ರಮಾಣದ ಮದ್ಯಸಾರವಿರುವಂತೆ ಆಸವಿತ/ಬಟ್ಟಿ ಇಳಿಸಿದ ಆಸವ ಸಾರವು ಬಳಸಿದ ಕಚ್ಚಾ ವಸ್ತುಗಳು ಹಾಗೂ ಉತ್ಪಾದನಾ ವಿಧಾನದಿಂದ ಮೂಡಿದ ಕಂಪು ಮತ್ತು ರುಚಿಯನ್ನು ಹೊಂದಿರಬೇಕು;
(c) ಕನಿಷ್ಟ ಮೂರು ವರ್ಷಗಳಷ್ಟು ಅವಧಿಯಲ್ಲಿ ಪಕ್ವಗೊಂಡಿರುವ ಸ್ಕಾಟ್‌ಲೆಂಡ್‌ನಲ್ಲಿನ ಮದ್ಯಸಾರೀಯ ಗೋದಾಮಿನ 700 ಲೀಟರ್‌ಗಳನ್ನು ಮೀರದ ಸಾಮರ್ಥ್ಯದ ಓಕ್ ಪೀಪಾಯಿಗಳಲ್ಲಿಯೇ ಸಂಪೂರ್ಣವಾಗಿ ಪಕ್ವಗೊಂಡಿರಬೇಕು;
(d) ಬಳಸಿದ ಕಚ್ಚಾ ವಸ್ತುಗಳಿಂದ ಮತ್ತು ತಯಾರಿಕಾ ಹಾಗೂ ಪಕ್ವಗೊಳಿಸಿದ ವಿಧಾನಗಳಿಂದ ಪಡೆದ ಬಣ್ಣ, ಕಂಪು ಮತ್ತು ರುಚಿಯನ್ನು ಉಳಿಸಿಕೊಂಡಿದ್ದು ಇದಕ್ಕೆ ನೀರು ಮತ್ತು ಸಾದಾ ಬಣ್ಣ ಕಟ್ಟುವ ಸಕ್ಕರೆಪಾಕವನ್ನು ಬಿಟ್ಟು ಬೇರೇನನ್ನು ಬೆರೆಸಬಾರದು.
ಸ್ಕಾಚ್ ವಿಸ್ಕಿಗಳ ವಿಧಗಳು
[ಬದಲಾಯಿಸಿ]ಸ್ಕಾಚ್ ವಿಸ್ಕಿಯಲ್ಲಿ ಎರಡು ಮೂಲ ವಿಧಗಳಿದ್ದು, ಅವುಗಳಿಂದಲೇ ಉಳಿದ ಎಲ್ಲಾ ಮಿಶ್ರಣಗಳನ್ನು ತಯಾರಿಸಲಾಗುತ್ತದೆ, ಅವುಗಳೆಂದರೆ ಏಕ ಮಾಲ್ಟ್ ಸ್ಕಾಚ್ ವಿಸ್ಕಿ ಮತ್ತು ಏಕ ಧಾನ್ಯ ಸ್ಕಾಚ್ ವಿಸ್ಕಿ.
- ಕೇವಲ ನೀರು ಮತ್ತು ಮೊಳಕೆ ಕಟ್ಟಿಸಿದ ಜವೆಗೋಧಿಗಳನ್ನು ಬಳಸಿ ಒಂದೇ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯಲ್ಲಿ ಸಮೂಹ ಆಸವನ/ಬಟ್ಟಿ ಇಳಿಸುವಿಕೆಯ ಮೂಲಕ ಮಡಕೆ ಬಟ್ಟಿಗಳಲ್ಲಿ ಉತ್ಪಾದಿಸಿದ್ದ ಸ್ಕಾಚ್ ವಿಸ್ಕಿಯು ಏಕ ಮಾಲ್ಟ್ ಸ್ಕಾಚ್ ವಿಸ್ಕಿಯಾಗಿರುತ್ತದೆ.
- ಒಂದೇ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯಲ್ಲಿ ಆಸವಿತ/ಬಟ್ಟಿ ಇಳಿಸಿದ್ದಾಗಿರುತ್ತದಲ್ಲದೇ ನೀರು ಮತ್ತು ಮೊಳಕೆ ಕಟ್ಟಿಸಿದ ಜವೆಗೋಧಿಗಳೊಂದಿಗೆ ತವಡು ತೆಗೆಯದ ಇತರೆ ಮೊಳಕೆ ಕಟ್ಟಿಸಿದ ಅಥವಾ ಮೊಳಕೆ ಕಟ್ಟಿಸದ ಏಕದಳ ಧಾನ್ಯಗಳನ್ನೂ ಬಳಸಿ ತಯಾರಿಸಬಹುದಾದ ಸ್ಕಾಚ್ ವಿಸ್ಕಿಯು ಏಕ ಧಾನ್ಯ ಸ್ಕಾಚ್ ವಿಸ್ಕಿಯಾಗಿರುತ್ತದೆ. ಏಕ ಮಾಲ್ಟ್ ಸ್ಕಾಚ್ ವಿಸ್ಕಿ ಅಥವಾ ಸಂಯೋಜಿತ ಸ್ಕಾಚ್ ವಿಸ್ಕಿಗಳ ಕಟ್ಟಳೆಗಳಿಗೊಳಪಟ್ಟು ಉತ್ಪಾದನೆಯಾದ ಇತರೆ ಯಾವುದೇ ಮದ್ಯಸಾರವು “ಏಕ ಧಾನ್ಯ ಸ್ಕಾಚ್ ವಿಸ್ಕಿ”ಯ ಲಕ್ಷಣಕ್ಕೆ ಹೊರತಾಗಿದ್ದಿರುತ್ತಿತ್ತು. ಒಂದೇ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯಲ್ಲಿ ಆಸವಿತ/ಬಟ್ಟಿ ಇಳಿಸಿದ, ಏಕ ಮಾಲ್ಟ್(ಗಳು) ಮತ್ತು ಏಕ ಧಾನ್ಯ(ಗಳು)ಗಳಿಂದ ಉತ್ಪಾದಿಸಲ್ಪಟ್ಟ ಸಂಯೋಜಿತ ಸ್ಕಾಚ್ ವಿಸ್ಕಿಯು ಏಕ ಧಾನ್ಯ ಸ್ಕಾಚ್ ವಿಸ್ಕಿಯ ಲಕ್ಷಣಕ್ಕೆ ಒಳಪಟ್ಟಿರುವುದಿಲ್ಲ ಎಂಬುದನ್ನು ಖಚಿತಪಡಿಸಲು ಎರಡನೆಯ ವಿಧವನ್ನು ಹೊರತುಪಡಿಸಲಾಗಿದೆ.
ಸಂಯೋಜಿತ ಸ್ಕಾಚ್ ವಿಸ್ಕಿಯ ಲಕ್ಷಣಗಳು 2009ರ ವಿಧೇಯಕಗಳ ಪ್ರಕಾರ ಅಸ್ತಿತ್ವದಲ್ಲಿದ್ದ ಕಾಯಿದೆಗಿಂತ ಭಿನ್ನವಾಗಿದ್ದರೂ, ಅದು ಸಾಂಪ್ರದಾಯಿಕ ಹಾಗೂ ಪ್ರಸ್ತುತ ಪದ್ಧತಿಗಳನ್ನು ಅನುಸರಿಸಿದೆ.
SWRಗಿಂತ ಮುಂಚೆ, ಉದಾಹರಣೆಗೆ ಏಕ ಮಾಲ್ಟ್ ಸ್ಕಾಚ್ ವಿಸ್ಕಿಗಳ ಸಂಯೋಜನೆಯೊಂದು ಸೇರಿದಂತೆ ಸ್ಕಾಚ್ ವಿಸ್ಕಿಗಳ ಯಾವುದೇ ಸಂಯೋಜನೆಯು ಸಂಯೋಜಿತ ಸ್ಕಾಚ್ ವಿಸ್ಕಿಯ ಲಕ್ಷಣಗಳಿಗೆ ಒಳಪಟ್ಟಿರುತ್ತಿತ್ತು. ಆದಾಗ್ಯೂ, SWRನ ಅಡಿಯಲ್ಲಿ ಸಂಯೋಜಿತ ಸ್ಕಾಚ್ ವಿಸ್ಕಿಯು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಏಕ ಮಾಲ್ಟ್ ಸ್ಕಾಚ್ ವಿಸ್ಕಿಗಳನ್ನು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಏಕ ಧಾನ್ಯ ಸ್ಕಾಚ್ ವಿಸ್ಕಿಗಳೊಂದಿಗೆ ಸಾಂಪ್ರದಾಯಿಕ ಪದ್ಧತಿಗೆ ಒಳಪಟ್ಟ ಹಾಗೆ ಸಂಯೋಜಿಸಿದುದಾಗಿರುತ್ತದೆ.
ಸಂಯೋಜಿತ ಮಾಲ್ಟ್ ಸ್ಕಾಚ್ ವಿಸ್ಕಿ ಎಂದರೆ ಬೇರೆ ಬೇರೆ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳಲ್ಲಿ ತಯಾರಿಸಿದ್ದ ಎರಡು ಅಥವಾ ಹೆಚ್ಚಿನ ಏಕ ಮಾಲ್ಟ್ ಸ್ಕಾಚ್ ವಿಸ್ಕಿಗಳನ್ನು ಸಂಯೋಜಿಸಿ ತಯಾರಿಸಿದ್ದು ಹಾಗೂ
ಸಂಯೋಜಿತ ಧಾನ್ಯ ಸ್ಕಾಚ್ ವಿಸ್ಕಿ ಎಂದರೆ ಬೇರೆ ಬೇರೆ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳಲ್ಲಿ ತಯಾರಿಸಿದ್ದ ಎರಡು ಅಥವಾ ಹೆಚ್ಚಿನ ಏಕ ಧಾನ್ಯ ಸ್ಕಾಚ್ ವಿಸ್ಕಿಗಳನ್ನು ಸಂಯೋಜಿಸಿ ತಯಾರಿಸಿದ್ದು.
ಸ್ಕಾಟ್‌ಲೆಂಡ್‌ನಲ್ಲಿ ಉತ್ಪಾದಿಸಬಹುದಾದ ವಿಸ್ಕಿಯ ಏಕೈಕ ವಿಧವೆಂದರೆ ಸ್ಕಾಚ್ ವಿಸ್ಕಿಯಾಗಿದೆ. 1988ರ ಸ್ಕಾಚ್ ವಿಸ್ಕಿ ಕಾಯಿದೆಯಲ್ಲಿ, 5ನೇ ಕಟ್ಟಳೆಯು ಸ್ಕಾಚ್ ವಿಸ್ಕಿಯು ಸ್ಕಾಟ್‌ಲೆಂಡ್‌ನಲ್ಲಿ ತಯಾರಿಸಬಹುದಾದ ಏಕೈಕ ವಿಸ್ಕಿಯಾಗಿದೆ ಎಂದು ನಿರ್ಬಂಧ ವಿಧಿಸಿತ್ತು.
“ತಯಾರಿಕೆ” ಎಂಬ ಪದದ ನಿರೂಪಣೆಯಲ್ಲಿ ಪಕ್ವಗೊಳಿಸಲೆಂದು ಇಟ್ಟಿರುವುದು; ಮತ್ತು ಸ್ಥಳೀಯ ಬಳಕೆಗೆಂದು ಸ್ಥಳೀಯ ಸಂಯೋಜಿಸಲೆಂದು ಇಟ್ಟಿರುವುದನ್ನು ಹೊರತುಪಡಿಸಿ ಸಂಯೋಜಿಸಲು ಬಳಸುವಿಕೆ ಅಥವಾ ಅದಕ್ಕೆಂದು ಇಟ್ಟಿರುವಿಕೆಯೆಂಬ ಅರ್ಥಗಳು ಒಳಗೊಂಡಿರುತ್ತದೆ;
ಸ್ಕಾಟ್‌ಲೆಂಡ್‌ನಲ್ಲಿ ತಯಾರಿಸಲ್ಪಡುವ, ಒಂದು “ಸ್ಕಾಚ್ ವಿಸ್ಕಿ” ಮತ್ತು ಇನ್ನೊಂದು EC ವಿಧೇಯಕಗಳಡಿ ವಿಸ್ಕಿಯ ಸಾರ್ವತ್ರಿಕ ಮಾನಕಗಳಿಗೊಳಪಟ್ಟ “ಸ್ಕಾಟ್‌ಲೆಂಡ್‌ನ ಉತ್ಪನ್ನವಾದ – ವಿಸ್ಕಿ” ಎಂಬ ವಿಸ್ಕಿಯ ಎರಡು ‘ದರ್ಜೆಗಳು’ ಅಸ್ತಿತ್ವದಲ್ಲಿರುವುದನ್ನು ತಡೆಯುವ ಉದ್ದೇಶವು ಈ ನಿಬಂಧನೆಯ ಹಿಂದಿತ್ತು. ಸ್ಕಾಟ್‌ಲೆಂಡ್‌ನಲ್ಲಿ ತಯಾರಿಸಲಾದ ವಿಸ್ಕಿಯ ಅಂತಹಾ ಎರಡು 'ದರ್ಜೆಗಳ’ ಅಸ್ತಿತ್ವವು ಸ್ಕಾಚ್ ವಿಸ್ಕಿಯನ್ನು ವೈಶಿಷ್ಟ್ಯಸೂಚಕ ಉತ್ಪನ್ನವಾಗಿ ರಕ್ಷಿಸಲು ವಿಪರೀತ ಕಷ್ಟವಾಗಿಸುತ್ತದೆ.
ಸ್ಕಾಟ್‌ಲೆಂಡ್‌ನಲ್ಲಿ ಸ್ಕಾಚ್ ವಿಸ್ಕಿಯನ್ನು ಹೊರತುಪಡಿಸಿ ಇತರೆ ವಿಸ್ಕಿಗಳ ಉತ್ಪಾದನೆಯನ್ನು ನಿಷೇಧಿಸಿರುವುದು ಮಾತ್ರವಲ್ಲದೇ ಸ್ಕಾಟ್‌ಲೆಂಡ್‌ನಲ್ಲಿ ಸ್ಕಾಚ್ ವಿಸ್ಕಿಯನ್ನು ಹೊರತುಪಡಿಸಿ ಇತರೆ ವಿಸ್ಕಿಗಳನ್ನು ಪಕ್ವಗೊಳಿಸುವುದು ಅಥವಾ ಸಂಯೋಜಿಸುವುದನ್ನು ಕೂಡಾ ನಿಷೇಧಿಸಲಾಗಿದೆ. ಸ್ಕಾಚ್ ವಿಸ್ಕಿಯಲ್ಲದ ಇತರೆ ಮದ್ಯಸಾರಗಳ ನಾಮಪಟ್ಟಿಯ ಮೇಲೆ “ಸ್ಕಾಟ್‌ಲೆಂಡ್‌ನಲ್ಲಿ ಪಕ್ವಗೊಂಡ ವಿಸ್ಕಿ” ಅಥವಾ “ಸ್ಕಾಟ್‌ಲೆಂಡ್‌ನಲ್ಲಿ ಸಂಯೋಜಿಸಲ್ಪಟ್ಟ ವಿಸ್ಕಿ” ಎಂಬಂತಹಾ ವಿವರಣೆಗಳ ಬಳಕೆಯನ್ನು ತಡೆಗಟ್ಟಲು ಹೀಗೆ ಮಾಡಲಾಗಿದೆ. “ಸ್ಕಾಚ್ ವಿಸ್ಕಿ”ಯನ್ನು ವೈಶಿಷ್ಟ್ಯಪೂರ್ಣ ಉತ್ಪನ್ನವಾಗಿ ಉಳಿಸಿಕೊಳ್ಳಲು ಮೇಲಿನಂತೆಯೇ, ಇದೂ ಕೂಡಾ ಸಹಾಯ ಮಾಡುತ್ತದೆ.
ಏಕ ಧಾನ್ಯ
[ಬದಲಾಯಿಸಿ]ಸ್ಕಾಟ್‌ಲೆಂಡ್‌ನಲ್ಲಿ ಉತ್ಪಾದನೆಯಾದ ಬಹುಪಾಲು ಧಾನ್ಯ ವಿಸ್ಕಿಯು ಸಂಯೋಜಿತ ಸ್ಕಾಚ್ ವಿಸ್ಕಿಯನ್ನು ತಯಾರಿಸುವುದರಲ್ಲೇ ವಿನಿಯೋಗವಾಗುತ್ತದೆ. ಸರಾಸರಿ ಸಂಯೋಜಿತ ವಿಸ್ಕಿಯಲ್ಲಿ 60%–85%ರಷ್ಟು ಭಾಗ ಧಾನ್ಯ ವಿಸ್ಕಿಯಾಗಿರುತ್ತದೆ. ಒಂದೇ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯ ಉನ್ನತ ಗುಣಮಟ್ಟದ ಧಾನ್ಯ ವಿಸ್ಕಿಯೆಂದರೆ ಶೀಶೆ/ಸೀಸೆ/ಬಾಟಲಿಯಲ್ಲಿ ತುಂಬಿಸಲಾದ ಏಕ ಧಾನ್ಯ ವಿಸ್ಕಿಯಾಗಿದೆ.
ತೊಟ್ಟಿಯಲ್ಲಿನ ನೆನೆಸಿದ/ಸಂಯೋಜಿತ ಮೊಳೆತ ಧಾನ್ಯದ ವಿಸ್ಕಿ
[ಬದಲಾಯಿಸಿ]ಶುದ್ಧ ಮಾಲ್ಟ್ ಎಂದೂ ಕರೆಯಲಾಗುವ ತೊಟ್ಟಿಯಲ್ಲಿನ ನೆನೆಸಿದ ಮಾಲ್ಟ್ ವಿಸ್ಕಿಯು — ಸ್ಕಾಚ್‌ನ ಅಪರೂಪದ ವಿಧಗಳಲ್ಲಿ ಒಂದಾಗಿದೆ: ಇದು ಬೇರೆ ಬೇರೆ ಪಕ್ವತೆಯ ಮಟ್ಟದ ಒಂದಕ್ಕಿಂತ ಹೆಚ್ಚು ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳ ಏಕ ಮಾಲ್ಟ್‌ಗಳ ಸಂಯೋಜನೆಯಾಗಿದೆ. ತೊಟ್ಟಿಯಲ್ಲಿ ನೆನೆಸಿದ ಮಾಲ್ಟ್‌ಗಳು — ಯಾವುದೇ ಧಾನ್ಯ ವಿಸ್ಕಿಗಳಿಲ್ಲದೇ ಕೇವಲ ಮಾಲ್ಟ್ ವಿಸ್ಕಿಗಳನ್ನು ಮಾತ್ರವೇ ಹೊಂದಿರುತ್ತವಲ್ಲದೇ ಸಾಧಾರಣವಾಗಿ ಶೀಶೆ/ಸೀಸೆ/ಬಾಟಲಿಯ ಮೇಲಿನ ನಾಮಪಟ್ಟಿಯಲ್ಲಿರುವ ತಮ್ಮ ಹೆಸರಿನಲ್ಲಿ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯ ಹೆಸರಿರುವುದಿಲ್ಲವಾದುದರಿಂದ ಹಾಗೂ ‘ಮಾಲ್ಟ್ ’ ಪದದ ಮುಂಚೆ ‘ಸಿಂಗಲ್ ’ ಪದವಿರದಿರುವುದರ ಮೂಲಕ ಇತರೆ ವಿಧಗಳ ವಿಸ್ಕಿಗಳಿಂದ ಭಿನ್ನವಾಗಿ ಗುರುತಿಸಲ್ಪಡುತ್ತವೆ. ಮಿಶ್ರಿತ ಏಕ ಮಾಲ್ಟ್ ವಿಸ್ಕಿಗಳನ್ನು 1 ವರ್ಷದ ಕಾಲ ತೊಟ್ಟಿಯಲ್ಲಿ ನೆನೆಸಿದ ಮಾಲ್ಟ್‌ನ ಲಕ್ಷಣ ಪಡೆದುಕೊಳ್ಳಲು ಪಕ್ವಗೊಳಿಸಲಾಗುತ್ತದೆ, ಅದಾದ ನಂತರ ತೊಟ್ಟಿಯಲ್ಲಿ ನೆನೆಸಿದ ಮಾಲ್ಟ್‌ನ ಪಕ್ವತೆಯು ಮೂಲ ವಸ್ತುಗಳಲ್ಲಿ ಕಡಿಮೆ ಅವಧಿಯಷ್ಟಿರುತ್ತದೆ. “8 ವರ್ಷಗಳ ಪಕ್ವತೆ”ಯನ್ನು ಹೊಂದಿದೆ ಎಂದು ಸೂಚಿಸಲಾದ ತೊಟ್ಟಿಯಲ್ಲಿನ ನೆನೆಸಿದ ಮಾಲ್ಟ್ ವಿಸ್ಕಿಯು ಅದಕ್ಕಿಂತ ಹಳೆಯ ವಿಸ್ಕಿಗಳನ್ನು ಹೊಂದಿದ್ದು, ಅವುಗಳಲ್ಲಿ ಕಡಿಮೆ ಅವಧಿಯದ್ದು ತೊಟ್ಟಿಯಲ್ಲಿ ನೆನೆಸುವ ಮುಂಚೆ 8 ವರ್ಷಗಳಷ್ಟು ಪಕ್ವತೆ ಪಡೆದಿರುತ್ತದೆ. ಜಾನಿ ವಾಕರ್ ಗ್ರೀನ್ ವಿಸ್ಕಿಯು ತೊಟ್ಟಿಯಲ್ಲಿನ ನೆನೆಸಿದ ಮಾಲ್ಟ್‌ಗೆ ಒಂದು ಉದಾಹರಣೆಯಾಗಿದೆ. ಯಾವುದೇ ಸ್ಕಾಚ್ ವಿಸ್ಕಿಯನ್ನು ತೊಟ್ಟಿಯಲ್ಲಿನ ನೆನೆಸಿದ ಮಾಲ್ಟ್ ಎಂದು ನವೆಂಬರ್ 2009ರ ಹಾಗೆ ಹೆಸರಿಸುವ ಹಾಗಿಲ್ಲ, ಬದಲಿಗೆ ಅವುಗಳನ್ನು UK ಸರ್ಕಾರದ ನಿರ್ದೇಶಿಕೆಗಳ ಪ್ರಕಾರ ಕಡ್ಡಾಯವಾಗಿ ಸಂಯೋಜಿತ ಮಾಲ್ಟ್ ಎಂದು ಹೆಸರಿಸಬೇಕಾಗಿರುತ್ತದೆ.[೪]
ಸಂಯೋಜಿತವಾದ ವಿಸ್ಕಿ
[ಬದಲಾಯಿಸಿ]ಸ್ಕಾಟ್‌ಲೆಂಡ್‌ನಲ್ಲಿ ಉತ್ಪಾದಿಸಲಾದ ವಿಸ್ಕಿಯ 90%ಕ್ಕೂ ಹೆಚ್ಚಿನ ಪ್ರಮಾಣವು ಸಂಯೋಜಿತ ಸ್ಕಾಚ್ ವಿಸ್ಕಿಯಾಗಿರುತ್ತದೆ.[ಸೂಕ್ತ ಉಲ್ಲೇಖನ ಬೇಕು] ಸಂಯೋಜಿತ ಸ್ಕಾಚ್ ವಿಸ್ಕಿಗಳು ಮಾಲ್ಟ್ ವಿಸ್ಕಿ ಮತ್ತು ಧಾನ್ಯ ವಿಸ್ಕಿಗಳೆರಡನ್ನೂ ಹೊಂದಿರುತ್ತವೆ. ಅವುಗಳನ್ನು ವಿಪರೀತ ಕಟುವೆಂದು ಕೆಲವರಿಂದ ಪರಿಗಣಿಸಲ್ಪಟ್ಟ ಏಕ ಮಾಲ್ಟ್ ವಿಸ್ಕಿಗಳಿಗೆ ಪರ್ಯಾಯವಾಗಿ ಮೊದಲಿಗೆ ಉತ್ಪಾದಿಸಲಾಗುತ್ತಿತ್ತು[ಸೂಕ್ತ ಉಲ್ಲೇಖನ ಬೇಕು]. ಸ್ಥಿರ "ಬ್ರಾಂಡ್ ಶೈಲಿ"ಯನ್ನು ಉತ್ಪಾದಿಸುವಂತೆ ವಿವಿಧ ಮಾಲ್ಟ್‌ಗಳು ಮತ್ತು ಧಾನ್ಯ ವಿಸ್ಕಿಗಳನ್ನು ಕುಶಲ ಸಂಯೋಜಕರು ಸಂಯೋಜಿಸುತ್ತಾರೆ. ಬೆಲ್ಸ್, ಡೇವರ್ಸ್, ಜಾನಿ ವಾಕರ್, ವೈಟ್ ಅಂಡ್ ಮ್ಯಾಕೆ, ಕಟ್ಟಿ ಸಾರ್ಕ್, J&B, ದ ಫೇಮಸ್ ಗ್ರೌಸ್ ಮತ್ತು ಷಿವಾಸ್ ರೀಗಲ್‌ಗಳು ಗಮನಾರ್ಹ ಸಂಯೋಜಿತ ಸ್ಕಾಚ್ ವಿಸ್ಕಿ ಬ್ರಾಂಡ್‌ಗಳಲ್ಲಿ ಸೇರಿವೆ.
ಸ್ವತಂತ್ರ ಶೀಶೆ/ಸೀಸೆ/ಬಾಟಲಿ ತುಂಬುಗ ಕಂಪೆನಿಗಳು
[ಬದಲಾಯಿಸಿ]ಗಮನಾರ್ಹ ಪ್ರಮಾಣದ ವಿಸ್ಕಿಯನ್ನು ಸಂಯೋಜನೆಗಾಗಿ ಹಾಗೂ ಕೆಲವೊಮ್ಮೆ ಖಾಸಗಿ ಖರೀದಿದಾರರಿಗೂ ಕೂಡಾ ಬಹುತೇಕ ಮಾಲ್ಟ್ ತಯಾರಿಕಾ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ಪೀಪಾಯಿಗಳಲ್ಲಿ ಮಾರುತ್ತವೆ. ಕೆಲವೊಮ್ಮೆ ಅಂತಹಾ ಪೀಪಾಯಿಗಳ ವಿಸ್ಕಿಯು ಡಂಕನ್ ಟೇಲರ್, ಮಾಸ್ಟರ್ ಆಫ್ ಮಾಲ್ಟ್, ಗಾರ್ಡನ್ & ಮೆಕ್‌ಫೈಲ್, ಕ್ಯಾಡೆನ್‌ಹೆಡ್ಸ್, ದ ಸ್ಕಾಚ್ ಮಾಲ್ಟ್ ವಿಸ್ಕಿ ಸೊಸೈಟಿ, ಮುರ್ರೆ ಮೆಕ್‌ಡೇವಿಡ್, ಸಿಗ್ನೆಟರಿ, ಡಗ್ಲಾಸ್ ಲೈಂಗ್ ಮತ್ತು ಇತರ ಸ್ವತಂತ್ರ ಸಂಸ್ಥೆಗಳಿಂದ ಏಕ ಮಾಲ್ಟ್ ವಿಸ್ಕಿಯಾಗಿ ಶೀಶೆ/ಸೀಸೆ/ಬಾಟಲಿಯಲ್ಲಿ ತುಂಬಿಸಲಾದುದಾಗಿರುತ್ತದೆ. ಇಂತಹಾ ವಿಸ್ಕಿಗಳಿಗೆ ಸಾಧಾರಣವಾಗಿ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿ'ಯ ವ್ಯಾಪಾರಿ ಮುದ್ರೆಯ ಲೋಗೋಗಳು ಅಥವಾ ಅಂಕಿತಾಕ್ಷರಗಳನ್ನು ಬಳಸದೇ ಆಯಾ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿ'ಯ ಹೆಸರನ್ನು ನಾಮಪಟ್ಟಿಯಲ್ಲಿ ನಮೂದಿಸಿರಲಾಗುತ್ತದೆ. ತುಲನೆಯಲ್ಲಿ "ಅಧಿಕೃತ ಶೀಶೆ/ಸೀಸೆ/ಬಾಟಲಿ ತುಂಬಿಸುವಿಕೆ" (ಅಥವಾ "ಖಾಸಗಿ ಸ್ವಾಮ್ಯದ ಶೀಶೆ/ಸೀಸೆ/ಬಾಟಲಿ ತುಂಬಿಸುವಿಕೆ") ಎಂದರೆ ಆಯಾ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯ (ಅಥವಾ ಅದರ ಮಾಲಿಕರ) ಉತ್ಪನ್ನವಾಗಿರುತ್ತದೆ. ಅನೇಕ ಸ್ವತಂತ್ರ ಶೀಶೆ/ಸೀಸೆ/ಬಾಟಲಿ ತುಂಬುಗ ಕಂಪೆನಿಗಳು ಏಕ ಪೀಪಾಯಿಯವಾಗಿದ್ದು, ಅವುಗಳು ಕೆಲವೊಮ್ಮೆ ಅಧಿಕೃತ ಶೀಶೆ/ಸೀಸೆ/ಬಾಟಲಿ ತುಂಬುಗ ಕಂಪೆನಿಗಳಿಗಿಂತ ಗಮನಾರ್ಹವಾದ ಪ್ರತ್ಯೇಕತೆ ಹೊಂದಿರುತ್ತವೆ.
ಅನೇಕ ಬಾರಿ ಬಟ್ಟಿಕಾರ ಕಂಪೆನಿಗಳು ಸ್ವತಂತ್ರ ಶೀಶೆ/ಸೀಸೆ/ಬಾಟಲಿ ತುಂಬುಗ ಕಂಪೆನಿಗಳನ್ನು ಮಟ್ಟ ಹಾಕಲು ನೋಡಿದ್ದಿದೆ; ಲಾಫ್ರೋಐಗ್ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯ ಮಾಜಿ ಮಾಲಿಕ ಅಲ್ಲಿಯೆಡ್ ಡೊಮೆಕ್‌ರು, ಮುರ್ರೆ ಮೆಕ್‌ಡೇವಿಡ್ ಕಂಪೆನಿಯ ವಿರುದ್ಧ "ಲಾಫ್ರೋಐಗ್ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯಲ್ಲಿ ಆಸವಿತ/ಬಟ್ಟಿ ಇಳಿಸಿದ ಪಾನೀಯ" ಎಂಬ ಶೀರ್ಷಿಕೆಯನ್ನು ಮೇಲ್ಕಂಡ ವಿಸ್ಕಿಯ ತಮ್ಮ ಸ್ವತಂತ್ರ ಶೀಶೆ/ಸೀಸೆ/ಬಾಟಲಿ ತುಂಬಿಸುವಿಕೆಗಳಲ್ಲಿ ಅಳವಡಿಸುವುದನ್ನು ತಡೆಗಟ್ಟಲು ಮಾಡಿದ ಪ್ರಯತ್ನಕ್ಕೆ ಕಾನೂನು ಹೋರಾಟವನ್ನು ಆರಂಭಿಸಿದರು.[೫] ತರುವಾಯ ಮುರ್ರೆ ಮೆಕ್‌ಡೇವಿಡ್ ಸಂಸ್ಥೆಯು ಅಲ್ಲಿಯೆಡ್‌ರು ಹಿಂದೆಗೆಯುವ ಮುನ್ನ ಕೆಲ ಕಾಲ "ಲೀಪ್‌ಫ್ರಾಗ್" ಎಂಬ ಹೆಸರನ್ನು ಬಳಸಿತ್ತು.
ಕೆಲ ಸ್ವತಂತ್ರ ಶೀಶೆ/ಸೀಸೆ/ಬಾಟಲಿ ತುಂಬುಗ ಸಂಸ್ಥೆಗಳು ಸಂಭಾವ್ಯ ಕಠಿಣ ಕಾನೂನು ಸಮಸ್ಯೆಗಳಿಗೆ ಒಳಗಾಗದಿರಲು ವಿಸ್ಕಿಯ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯ ಹೆಸರನ್ನು ಬಳಸದೇ ಬದಲಿಗೆ ತಯಾರಕ ಬ್ರಾಂಡ್‌ನ ಹೆಸರಿನ ಬದಲಿಗೆ ಓಲ್ಡ್ St ಆಂಡ್ರ್ಯೂಸ್‌ನಂತಹಾ ಭೌಗೋಳಿಕ ಹೆಸರುಗಳನ್ನು ಅಥವಾ ಅಂಕಿ ವ್ಯವಸ್ಥೆಗಳನ್ನು ಬಳಸುತ್ತಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]
ಇತಿಹಾಸ
[ಬದಲಾಯಿಸಿ]- “ಟು ಫ್ರಿಯರ್ ಜಾನ್ ಕಾರ್, ಬೈ ಆರ್ಡರ್ ಆಫ್ ದ ಕಿಂಗ್, ಟು ಮೇಕ್ ಆಕ್ವಾ ವಿಟೇ VIII ಬಾಲ್ಸ್ ಆಫ್ ಮಾಲ್ಟ್.” — ಎಕ್ಸ್‌ಛೆಕರ್ ರಾಲ್ಸ್ 1494–95 , vol x, p. 487.[೬]
ಸ್ಕಾಟ್‌ಲೆಂಡ್‌ನಲ್ಲಿ ನೂರಾರು ವರ್ಷಗಳಿಂದ ವಿಸ್ಕಿಯನ್ನು ತಯಾರಿಸಿಕೊಂಡು ಬರಲಾಗಿದೆ. "ಜೀವ ಜಲ" ಎಂಬರ್ಥದ ಗೇಲಿಕ್ ಪದ "ಉಸ್ಕೆಬಾಗ್/ಉಸ್ಕೆಬಾಹ್" ಉಚ್ಚಾರಣಾ ವ್ಯತ್ಯಯಗಳಿಗೆ ಒಳಪಟ್ಟು "ಉಸ್ಕೈ" ಎಂದಾಗಿ ಮಾರ್ಪಟ್ಟು ನಂತರ ಆಂಗ್ಲದಲ್ಲಿ "ವಿಸ್ಕಿ" ಎಂದಾಯಿತು
ಸ್ಕಾಚ್ ವಿಸ್ಕಿ ಅಸೋಸಿಯೇಷನ್ ಸಂಸ್ಥೆಯ ಪ್ರಕಾರ, ಆಸವನ/ಬಟ್ಟಿ ಇಳಿಸುವಿಕೆಯ ಕಲೆಯು ಸ್ಕಾಟ್‌ಲೆಂಡ್‌ನಲ್ಲಿ ನಿರ್ದಿಷ್ಟವಾಗಿ ಎಂದಿನಿಂದ ಬಳಕೆಯಲ್ಲಿತ್ತು ಎಂಬುದು ಯಾರಿಗೂ ತಿಳಿದಿಲ್ಲ ; ಪ್ರಾಚೀನ ಕೆಲ್ಟ್ ಜನರು ಆಸವನ/ಬಟ್ಟಿ ಇಳಿಸುವಿಕೆ[ಸೂಕ್ತ ಉಲ್ಲೇಖನ ಬೇಕು]ಯ ಪದ್ಧತಿಯನ್ನು ಬಳಸುತ್ತಿದ್ದರು, ಅವರು ತಯಾರಿಸುತ್ತಿದ್ದ ಪಾನೀಯವನ್ನು ಪ್ರಾಚೀನ ಗೇಲಿಕ್ ಭಾಷೆಯಲ್ಲಿ ಉಯಿಸ್ಗೆ ಬೀಥಾ ("ಜೀವ ಜಲ") ಎಂದು ಕರೆಯಲಾಗುತ್ತಿತ್ತು — ನಂತರ ಇದು ಸ್ಕಾಚ್ ವಿಸ್ಕಿಯಾಗಿ ವಿಕಸನಗೊಂಡಿತು ಎಂದಷ್ಟು ಮಾತ್ರ ತಿಳಿದುಬಂದಿದೆ.[೭] ಸ್ಕಾಟ್‌ಲೆಂಡ್‌ನ ಆದಿ ಅವಧಿಯ ಕ್ರೈಸ್ತ ಮಠಗಳಲ್ಲಿ ಆಸವನ/ಬಟ್ಟಿ ಇಳಿಸುವಿಕೆಯನ್ನು 11ನೇ ಶತಮಾನದ ವೇಳೆಗೆ ಮಾಡಲಾಗುತ್ತಿತ್ತು.[೮]
ವಿಸ್ಕಿ ಉತ್ಪಾದನೆಯ ಮೇಲಿನ ತೆರಿಗೆಗಳನ್ನು ಮೊತ್ತಮೊದಲಿಗೆ 1644ರಲ್ಲಿ ಹೇರಲಾಗಿತ್ತು, ಇದರ ಪರಿಣಾಮವಾಗಿ ರಾಷ್ಟ್ರದಲ್ಲಿ ಕಾನೂನುಬಾಹಿರ ವಿಸ್ಕಿ ಆಸವನ/ಬಟ್ಟಿ ಇಳಿಸುವಿಕೆಯ ಪ್ರಮಾಣವು ಏರಿಕೆ ಕಂಡಿತು. 1780ರ ಸುಮಾರಿಗೆ, ಸುಮಾರು 8 ಕಾನೂನುಬದ್ಧ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ಮತ್ತು 400 ಕಾನೂನುಬಾಹಿರ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳಿದ್ದವು. "ಸುಂಕ/ಮದ್ಯ ಕಾಯಿದೆ"ಯ ಮೂಲಕ, ಪರವಾನಗಿದಾರ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳ ಮೇಲಿನ ಕಟ್ಟಳೆಗಳನ್ನು ಸಡಿಲಗೊಳಿಸಿ ಕಾನೂನುಬಾಹಿರ ಬಟ್ಟಿಗಳು ಕಾರ್ಯಾಚರಿಸಲು ಮತ್ತಷ್ಟು ಕಠಿಣ ತಡೆಗಳನ್ನು ಒಡ್ಡುವ ಮೂಲಕ, ಸಂಸತ್ತು 1823ರಲ್ಲಿ ಸ್ಕಾಚ್ ಉತ್ಪಾದನೆಯ ಆಧುನಿಕ ಯುಗಕ್ಕೆ ನಾಂದಿ ಹಾಡಿತು. ಎರಡು ಘಟನೆಗಳು ವಿಸ್ಕಿ'ಯ ಜನಪ್ರಿಯತೆಯನ್ನು ಹೆಚ್ಚಿಸಲು ನೆರವಾದವು: ಮೊದಲನೆಯದಾಗಿ, 1831ರಲ್ಲಿ ಕಾಫೆ ಅಥವಾ ಪೇಟೆಂಟ್ ಬಟ್ಟಿ (ಕೆಳಗಿನ ವಿಭಾಗ ನೋಡಿ) ಎಂದು ಕರೆಯಲಾದ ನೂತನ ಉತ್ಪಾದನಾ ಪ್ರಕ್ರಿಯೆಯನ್ನು ಪರಿಚಯಿಸಲಾಯಿತು; ಈ ಪ್ರಕ್ರಿಯೆಯ ಮೂಲಕ ತಯಾರಾದ ವಿಸ್ಕಿಯು ಕಡಿಮೆ ಕಟುತ್ವವನ್ನು ಹೊಂದಿದ್ದು ಸರಳವಾಗಿತ್ತು. ಎರಡನೆಯದಾಗಿ ಫ್ರಾನ್ಸ್‌ನಲ್ಲಿ ಮದ್ಯ ಮತ್ತು ಕಾಗ್ನ್ಯಾ/ನ್ಯಾಕ್‌ಗಳ ಉತ್ಪಾದನೆಯನ್ನು 1880ರಲ್ಲಿ ಫಿಲ್ಲೊಕ್ಸೆರಾ ಕೀಟವು ನಾಶ ಮಾಡಿತ್ತು.
ಉತ್ಪಾದನಾ ವಿಧಾನಗಳು
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(April 2009) |
ವಿಸ್ಕಿಯ ವಿಧಗಳು
[ಬದಲಾಯಿಸಿ]ಕಡ್ಡಾಯವಾಗಿ ಮೊಳಕೆ ಕಟ್ಟಿಸಿದ ಜವೆಗೋಧಿಯನ್ನು ಬಿಟ್ಟು ಬೇರಾವುದೇ ಧಾನ್ಯವನ್ನು ಮಾಲ್ಟ್ ವಿಸ್ಕಿಯು ಹೊಂದಿರಬಾರದಲ್ಲದೇ ಸಾಂಪ್ರದಾಯಿಕವಾಗಿ ಮಡಕೆ ಬಟ್ಟಿಗಳಲ್ಲಿ ಆಸವಿತ/ಬಟ್ಟಿ ಇಳಿಸಿದುದಾಗಿರಬೇಕು. ಧಾನ್ಯ ವಿಸ್ಕಿಯು ಮೊಳಕೆ ಕಟ್ಟಿಸದ ಜವೆಗೋಧಿ ಅಥವಾ ಗೋಧಿ ಮತ್ತು ಮುಸುಕಿನ ಜೋಳ (ಮೆಕ್ಕೆಜೋಳ)ಗಳಂತಹಾ ಇತರೆ ಮೊಳಕೆ ಕಟ್ಟಿಸಿದ ಅಥವಾ ಮೊಳಕೆ ಕಟ್ಟಿಸದ ಧಾನ್ಯಗಳನ್ನು ಹೊಂದಿರಬಹುದಾಗಿದ್ದು ಸಾಧಾರಣವಾಗಿ ಪೇಟೆಂಟ್ ಅಥವಾ 1831ರಲ್ಲಿ ಸಾಲು ಬಟ್ಟಿಯನ್ನು ಪರಿಷ್ಕರಿಸಿದ ಏನಿಯಾಸ್ ಕಾಫೆರ ಹೆಸರಿನ ಕಾಫೆ ಅಸವನ/ಬಟ್ಟಿ ಪಾತ್ರೆಯೆಂದು ಕರೆಯಲಾಗುವ ಅಖಂಡ ಸಾಲುಗಳ ಅಸವನ/ಬಟ್ಟಿ ಪಾತ್ರೆಯಲ್ಲಿ ಅದನ್ನು ಆಸವಿತಗೊಳಿಸ/ಬಟ್ಟಿ ಇಳಿಸಲಾಗುತ್ತದೆ. ಬಹುಸಂಖ್ಯೆಯ ಮಾಲ್ಟ್ ವಿಸ್ಕಿ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳಿದ್ದರೂ, ಕೇವಲ ಏಳು ಧಾನ್ಯ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ಪ್ರಸ್ತುತವಾಗಿ ಅಸ್ತಿತ್ವದಲ್ಲಿದ್ದು[೯], ಅವುಗಳಲ್ಲಿ ಬಹುತೇಕವು ಸ್ಕಾಟಿಷ್ ಲೋಲ್ಯಾಂಡ್ಸ್ ಪ್ರಾಂತ್ಯದಲ್ಲಿವೆ.
ಮೊಳಕೆಗಟ್ಟಿಸುವಿಕೆ
[ಬದಲಾಯಿಸಿ]ಮಾಲ್ಟ್ ವಿಸ್ಕಿ ಉತ್ಪಾದನೆಯನ್ನು ನೀರಿನಲ್ಲಿ ಜವೆಗೋಧಿಯನ್ನು ನೆನೆಹಾಕಿ ಜವೆಗೋಧಿಯನ್ನು ಮೊಳಕೆ ಕಟ್ಟಿಸುವಿಕೆಯ ಮೂಲಕ ಆರಂಭವಾಗುವುದಲ್ಲದೇ, ನಂತರ ಅದನ್ನು ಮೊಳಕೆಯೊಡೆಯುವಿಕೆ/ಮೊಳೆತದ ಹಂತದವರೆಗೆ ಹಾಗೆಯೇ ಇಡಲಾಗುತ್ತದೆ. ಮೊಳಕೆಗಟ್ಟಿಸುವಿಕೆಯು ಧಾನ್ಯದಲ್ಲಿರುವ ಗಂಜಿ/ಪಿಷ್ಟಗಳನ್ನು ಪ್ರತ್ಯೇಕಿಸುವ ಕಿಣ್ವಗಳನ್ನು ಬಿಡುಗಡೆ ಮಾಡುತ್ತದಲ್ಲದೇ ಅವುಗಳನ್ನು ಶರ್ಕರವನ್ನಾಗಿ ಪರಿವರ್ತಿಸಲು ನೆರವಾಗುತ್ತದೆ. ಮೊಳಕೆಯೊಡೆಯುವಿಕೆಯು/ಮೊಳೆತ ಅಗತ್ಯದಷ್ಟು ಹಂತಕ್ಕೆ ಬಂದ ನಂತರ ಮೊಳಕೆ ಕಟ್ಟಿಸಿದ ಜವೆಗೋಧಿಯನ್ನು ಹೊಗೆಯ ಮೂಲಕ ಒಣಗಿಸಲಾಗುತ್ತದೆ. ಮದ್ಯಸಾರಕ್ಕೆ ಮಣ್ಣಿನ ಸಸ್ಯಾಂಗಾರದ ಸ್ವಾದವನ್ನು ನೀಡಲು ಅನೇಕ (ಆದರೆ ಎಲ್ಲರೂ ಅಲ್ಲ) ಬಟ್ಟಿಕಾರರು ಅದರ ಬೆಂಕಿಗೆ ಸಸ್ಯಾಂಗಾರವನ್ನು ಸೇರಿಸುತ್ತಾರೆ.
ತಮ್ಮದೇ ಆದ ಮೊಳಕೆಗಟ್ಟಿಸುವಿಕೆಯ ಸೌಲಭ್ಯಗಳನ್ನು ಇಂದು ಕೇವಲ ಬೆರಳೆಣಿಕೆಯಷ್ಟು ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ಹೊಂದಿವೆ; ಇವುಗಳಲ್ಲಿ ಬಾಲ್ವೆನೀ, ಕಿಲ್‌ಛೋಮನ್, ಹೈಲ್ಯಾಂಡ್ ಪಾರ್ಕ್, ಗ್ಲೆನ್‌ಫಿಡ್ಡಿಚ್, ಗ್ಲೆನ್ ಓರ್ಡ್, ಬೌಮೋರ್, ಲಾಫ್ರೋಐಗ್, ಸ್ಪ್ರಿಂಗ್‌ಬ್ಯಾಂಕ್, ತಂಧು ಮತ್ತು ಎಡ್ರಾಡೌರ್‌ಗಳು ಸೇರಿವೆ. ತಮ್ಮವೇ ಜವೆಗೋಧಿಯನ್ನು ಮೊಳಕೆಗಟ್ಟಿಸುವ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ಕೂಡಾ ಉತ್ಪಾದನೆಗೆ ಅಗತ್ಯವಿರುವ ಮಾಲ್ಟ್‌ನ ಅಲ್ಪ ಪ್ರಮಾಣವನ್ನಷ್ಟೇ ಉತ್ಪಾದಿಸುತ್ತವೆ. ಎಲ್ಲಾ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ಮಾಲ್ಟ್‌ಅನ್ನು ಪರಿಣತಿ ಪಡೆದ ಮಾಲ್ಟ್ ತಯಾರಕರಿಂದಲೇ ತರಿಸುತ್ತವೆ.
ಮಾಲ್ಟ್‌ಅನ್ನು ಅರೆಯುವಿಕೆ ಮತ್ತು ಹುದುಗುಬರಿಸುವಿಕೆ
[ಬದಲಾಯಿಸಿ]ಒಣಗಿಸಿದ ಮಾಲ್ಟ್ (ಹಾಗೂ ಧಾನ್ಯ ವಿಸ್ಕಿಗೆ ಸಂಬಂಧಪಟ್ಟ ಹಾಗೆ, ಇತರೆ ಧಾನ್ಯಗಳು) ಅನ್ನು "ಅರೆದಿಟ್ಟ ಮೊಳಸಿದ ಧಾನ್ಯ"ವೆಂದು ಕರೆಯಲ್ಪಡುವ ಒರಟಾದ ಹಿಟ್ಟಾಗುವ ತನಕ ಅರೆಯಲಾಗುತ್ತದೆ. ಇದನ್ನು ನೆನಸಿಟ್ಟ ಮೊಳಕೆಧಾನ್ಯ ಟನ್ ಎಂದು ಕರೆಯಲ್ಪಡುವ ದೊಡ್ಡ ಪಾತ್ರೆಯೊಂದರಲ್ಲಿ ಬಿಸಿನೀರಿನೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಅರೆದಿಟ್ಟ ಮೊಳಸಿದ ಧಾನ್ಯವನ್ನು ನಂತರ ನೆನೆಯಲು ಬಿಡಲಾಗುತ್ತದೆ.
ಈ ಪ್ರಕ್ರಿಯೆಯನ್ನು "ಮಾಲ್ಟ್‌ಅನ್ನು ಅರೆಯುವಿಕೆ" ಎಂದು ಕರೆಯಲಾಗುತ್ತದಾದರೆ ಮಿಶ್ರಣವನ್ನು "ಬಿಸಿನೀರಲ್ಲಿ ಬೆರೆಸಿಟ್ಟ ಮಾಲ್ಟ್" ಎಂದು ಕರೆಯಲಾಗುತ್ತದೆ. ಮಾಲ್ಟ್‌ಅನ್ನು ಅರೆಯುವಿಕೆಯ ಪ್ರಕ್ರಿಯೆಯಲ್ಲಿ ಮೊಳೆಯಿಸುವ ಪ್ರಕ್ರಿಯೆಯಲ್ಲಿ ಉತ್ಪಾದನೆಯಾದ ಕಿಣ್ವಗಳು ಜವೆಗೋಧಿ ಗಂಜಿ/ಪಿಷ್ಟವನ್ನು ಶರ್ಕರವನ್ನಾಗಿ ಪರಿವರ್ತಿಸಲು ಅನುವು ಮಾಡಿಕೊಡುವುದರಿಂದ "ಮೊಳೆತ ಧಾನ್ಯದ ಕಷಾಯ"ವೆಂದು ಕರೆಯಲಾಗುವ ಸಿಹಿಯಾದ ದ್ರವವನ್ನು ಉತ್ಪಾದಿಸುತ್ತದೆ.
ಮೊಳೆತ ಧಾನ್ಯದ ಕಷಾಯವನ್ನು ನಂತರ ತಂಪಾಗಿಸಲು "ವಾಷ್ ಬ್ಯಾಕ್" ಎಂದು ಕರೆಯಲ್ಪಡುವ ಮತ್ತೊಂದು ದೊಡ್ಡ ಪೀಪಾಯಿಗೆ ಸುರಿಯಲಾಗುತ್ತದೆ. ಆಗ ಕಿಣ್ವವನ್ನು ಸೇರಿಸಿ, ಮೊಳೆತ ಧಾನ್ಯದ ಕಷಾಯವನ್ನು ಹುದುಗು ಬರಿಸುವ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಇದರ ಪರಿಣಾಮವಾಗಿ ಉತ್ಪತ್ತಿಯಾದ ಪ್ರಮಾಣದ 5–7%ರಷ್ಟು ಆಲ್ಕೋಹಾಲ್ ಬೈ ವಾಲ್ಯೂಮ್ "ವಾಷ್/ಕಿಣ್ವನಗೊಳ್ಳುತ್ತಿರುವ ಮಾಲ್ಟ್ " ಎಂದು ಕರೆಯಲಾಗುತ್ತದಲ್ಲದೇ ಅದು ಬಹುತೇಕ ಆದ್ಯಾವಸ್ಥೆಯ ಬೀರ್‌ನಂತಿರುತ್ತದೆ.
ಶುದ್ಧೀಕರಣ/ಬಟ್ಟಿಇಳಿಸುವಿಕೆ
[ಬದಲಾಯಿಸಿ]ಮುಂದಿನ ಹಂತವೆಂದರೆ ಬಟ್ಟಿಯನ್ನು ಬಳಸಿ ವಾಷ್/ಕಿಣ್ವನಗೊಳ್ಳುತ್ತಿರುವ ಮಾಲ್ಟ್ ಅನ್ನು ಅಸವನಗೊಳಿಸು/ಬಟ್ಟಿ ಇಳಿಸುವುದು. ಮದ್ಯಸಾರೀಯ ಅಂಶವನ್ನು ಹೆಚ್ಚಿಸಲು ಹಾಗೂ ಮೆ/ಮಿಥೆನಾಲ್‌ನಂತಹಾ ಬೇಡದ ಅಶುದ್ಧ ವಸ್ತುಗಳನ್ನು ಹೊರಹಾಕಲು ಆಸವನ/ಬಟ್ಟಿ ಇಳಿಸುವಿಕೆಯನ್ನು ಬಳಸಲಾಗುತ್ತದೆ.
ಆಸವನ/ಬಟ್ಟಿ ಇಳಿಸುವಿಕೆಯಲ್ಲಿ ಎರಡು ವಿಧಗಳ ಬಟ್ಟಿಗಳನ್ನು ಬಳಸಲಾಗುತ್ತದೆ : ಅವುಗಳೆಂದರೆ (ಏಕ ಮಾಲ್ಟ್‌ಗಳಿಗೆ) ಮಡಕೆ ಬಟ್ಟಿ ಹಾಗೂ (ಧಾನ್ಯ ವಿಸ್ಕಿಗಳಿಗೆ)ಕಾಫೆ ಬಟ್ಟಿ. ಬಹುತೇಕ ಸ್ಕಾಚ್ ಮಾಲ್ಟ್ ವಿಸ್ಕಿ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ತಮ್ಮ ಉತ್ಪನ್ನವನ್ನು ಎರಡೆರಡು ಬಾರಿ ಬಟ್ಟಿ ಇಳಿಸುತ್ತವೆ; ಮೂರು ಬಾರಿ ಆಸವನ/ಬಟ್ಟಿ ಇಳಿಸುವಿಕೆಯ ಲೋಲ್ಯಾಂಡ್ಸ್‌ನ ಸಂಪ್ರದಾಯವನ್ನು ಕಾಪಿಟ್ಟುಕೊಂಡುಬಂದಿರುವ ಆಛೆಂತೋಷನ್ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿ ಮತ್ತು ಸ್ಪ್ರಿಂಗ್‌ಬ್ಯಾಂಕ್'ನ 'ಹಝೆಲ್‌ಬರ್ನ್' ಬ್ರಾಂಡ್‌ಗಳು ಇವುಗಳಿಗೆ ಹೊರತಾಗಿವೆ.[೧೦] ಮೂರನೆಯ ವಿಧಾನವಾದ ಸ್ಪ್ರಿಂಗ್‌ಬ್ಯಾಂಕ್ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿ'ಯ 'ಸ್ಪ್ರಿಂಗ್‌ಬ್ಯಾಂಕ್' ಬ್ರಾಂಡ್‌ನದೇ ವಿಶಿಷ್ಟ ವಿಧಾನದಲ್ಲಿ "ಎರಡೂವರೆ ಬಾರಿ" ಆಸವಿತ/ಬಟ್ಟಿ ಇಳಿಸಲಾಗುತ್ತದೆ.[೧೧] ಇದನ್ನು (1ನೇ ಆಸವನ/ಬಟ್ಟಿ ಇಳಿಸುವಿಕೆಯ) ಕೆಳಾರ್ಧ ಭಾಗದ ಮದ್ಯವನ್ನು ಎರಡನೇ ಬಾರಿಗೆ ಆಸವನ/ಬಟ್ಟಿ ಇಳಿಸುವಿಕೆಯ ನಂತರ, ಎರಡೂ ಅರ್ಧಭಾಗಗಳನ್ನು ಮತ್ತೆ ಸೇರಿಸಿ ಸಂಪೂರ್ಣ ಪ್ರಮಾಣವನ್ನು ಅಂತಿಮ ಬಾರಿ ಒಟ್ಟಾಗಿ ಆಸವನ/ಬಟ್ಟಿ ಇಳಿಸುವುದರ ಮೂಲಕ ಸಾಧಿಸಲಾಗುತ್ತದೆ.[೧೨]
ಮಾಲ್ಟ್ ವಿಸ್ಕಿಯನ್ನು ತಯಾರಿಸುವಾಗ ವಾಷ್/ಕಿಣ್ವನಗೊಳ್ಳುತ್ತಿರುವ ಮಾಲ್ಟ್ ಅನ್ನು ವಾಷ್/ಕಿಣ್ವನಗೊಳ್ಳುತ್ತಿರುವ ಮಾಲ್ಟ್‌ಗೆಂದಿರುವ ಅಸವನ/ಬಟ್ಟಿ ಪಾತ್ರೆಗೆ ಸುರಿಯಲಾಗುತ್ತದೆ. ನೀರಿನ ಕುದಿಯುವ ಬಿಂದುವಿಗಿಂತ ಕಡಿಮೆ ಕುದಿಯುವ ಬಿಂದುವಿರುವ ಈ ದ್ರವವನ್ನು ಕುದಿಯುವ ಮಟ್ಟಿಗೆ ಕಾಯಿಸಲಾಗುತ್ತದೆ. ಮದ್ಯಸಾರವು ಆವಿಯಾಗಿ ಹೋಗಿ "ಲೈನ್ ತೋಳಿನ" ಮೂಲಕ ಅಸವನ/ಬಟ್ಟಿ ಪಾತ್ರೆಯನ್ನು ತಲುಪಿದ ನಂತರ ಬಾಷ್ಪೀಕಾರಕಕ್ಕೆ ಕಳಿಸಿ ಅದನ್ನು ತಂಪುಗೊಳಿಸಿದಾಗ ಅದು ಮತ್ತೆ ದ್ರವರೂಪಕ್ಕೆ ಮರಳುತ್ತದೆ. ಈ ದ್ರವವು ಸುಮಾರು 20%ರಷ್ಟು ಮದ್ಯಸಾರೀಯ ಅಂಶವನ್ನು ಹೊಂದಿರುತ್ತದಲ್ಲದೇ "ಲೋ ವೈನ್/ಕೆಳಮಟ್ಟದ ಮದ್ಯ" ಎಂದು ಕರೆಸಿಕೊಳ್ಳುತ್ತದೆ.
ಈ ಲೋ ವೈನ್/ಕೆಳಮಟ್ಟದ ಮದ್ಯವನ್ನು ಎರಡನೇ ಬಾರಿಗೆ ಮದ್ಯಸಾರದ ಅಸವನ/ಬಟ್ಟಿ ಪಾತ್ರೆಯಲ್ಲಿ ಆಸವಿತ/ಬಟ್ಟಿ ಇಳಿಸಲಾಗುತ್ತದಲ್ಲದೇ, ಆಸವನ/ಬಟ್ಟಿ ಇಳಿಸುವಿಕೆಯನ್ನು ಮೂರು "ಹಂತಗಳಾಗಿ" ವಿಭಜಿಸಲಾಗುತ್ತದೆ. ಮೊದಲ ದ್ರವ ಅಥವಾ ಹಂತದ ಆಸವನ/ಬಟ್ಟಿ ಇಳಿಸುವಿಕೆಯನ್ನು "ಫೋರ್‌ಷಾಟ್ಸ್ " ಎಂದು ಕರೆಯಲಾಗುತ್ತದಲ್ಲದೇ ಸಾಧಾರಣವಾಗಿ ಅಲ್ಪ ಮಟ್ಟದ ಕುದಿಯುವ ಬಿಂದು ಹೊಂದಿರುವ ಮದ್ಯಸಾರೀಯ ಮೆ/ಮಿಥೆನಾಲ್‌ಅನ್ನು ಹೊಂದಿರುವ ಕಾರಣ ಸಾಕಷ್ಟು ಮಟ್ಟದಲ್ಲಿ ವಿಷಕಾರಿಯಾಗಿರುತ್ತದೆ. ಇವುಗಳನ್ನು ಸಾಧಾರಣವಾಗಿ ಮತ್ತಷ್ಟು ಆಸವನ/ಬಟ್ಟಿ ಇಳಿಸುವಿಕೆಯ ಪ್ರಕ್ರಿಯೆಗಾಗಿ ಉಳಿಸಿರಲಾಗುತ್ತದೆ. ಇದಾದ ನಂತರದ ಹಂತವಾದ "ಮಧ್ಯಂತರ ಹಂತ"ದಲ್ಲಿ ಅಸವನಕಾರರು, ಆಗ ಅವುಗಳನ್ನು ಪಕ್ವಗೊಳಿಸಲು ಪೀಪಾಯಿಗಳಲ್ಲಿ ಹಾಕಿಡಲಾಗುತ್ತದೆ. ಈ ಹಂತದಲ್ಲಿ ಇದನ್ನು "ನ್ಯೂ ಮೇಕ್/ನವ ತಯಾರಿಕೆ" ಎಂದು ಕರೆಯಲಾಗುತ್ತದೆ. ಇದರ ಮದ್ಯಸಾರೀಯ ಪ್ರಮಾಣವು 60%–75%ರೊಳಗಿನ ಯಾವುದೇ ಮಟ್ಟದಲ್ಲಿರಬಹುದು. ಮೂರನೇ ಹಂತವನ್ನು "ಫೇಂಟ್ಸ್" ಎಂದು ಕರೆಯಲಾಗುತ್ತದಲ್ಲದೇ ಸಾಧಾರಣವಾಗಿ ಇದು ದುರ್ಬಲವಾಗಿರುತ್ತದೆ. ಇವುಗಳನ್ನು ಕೂಡಾ ಮತ್ತಷ್ಟು ಆಸವನ/ಬಟ್ಟಿ ಇಳಿಸುವಿಕೆಗಾಗಿ ಕಾದಿಡಲಾಗುತ್ತದೆ.
ಸ್ತಂಭ ಅಸವನ/ಬಟ್ಟಿ ಪಾತ್ರೆಯಲ್ಲಿ ಧಾನ್ಯ ವಿಸ್ಕಿಗಳನ್ನು ಆಸವಿತ/ಬಟ್ಟಿ ಇಳಿಸಲಾಗುತ್ತದೆ, ಇದರಲ್ಲಿ ಒಂದು ಬಾರಿಯ ಆಸವನ/ಬಟ್ಟಿ ಇಳಿಸುವಿಕೆಯೇ ಅಗತ್ಯವಾದ ಮದ್ಯಸಾರೀಯ ಅಂಶವನ್ನು ನೀಡುತ್ತದೆ. ಧಾನ್ಯ ವಿಸ್ಕಿಯನ್ನು ಮಾಲ್ಟ್ ವಿಸ್ಕಿಗೆ ಬಳಸಲಾಗುವ ಸರಳ ಆಸವನ/ಬಟ್ಟಿ ಇಳಿಸುವಿಕೆ ಆಧಾರಿತ ಸಮೂಹ ಪ್ರಕ್ರಿಯೆಯ ಬದಲಿಗೆ ಸತತವಾದ ಆಂಶಿಕ ಆಸವನ/ಬಟ್ಟಿ ಇಳಿಸುವಿಕೆಯ ಪ್ರಕ್ರಿಯೆಯ ಮೂಲಕ ಉತ್ಪಾದಿಸಲಾಗುತ್ತದೆ. ಆದ್ದರಿಂದ ಈ ಪ್ರಕ್ರಿಯೆಯು ನಿರ್ವಹಣೆಯಲ್ಲಿ ಹೆಚ್ಚು ದಕ್ಷವಾಗಿರುವುದಲ್ಲದೇ ಇದರಿಂದ ಉತ್ಪಾದನೆಯಾದ ವಿಸ್ಕಿಯು ಕೂಡಾ ಕಡಿಮೆ ಖರ್ಚಿನದ್ದಾಗಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಪಕ್ವಗೊಳಿಸುವಿಕೆ
[ಬದಲಾಯಿಸಿ]ಒಮ್ಮೆ ಆಸವಿತ/ಬಟ್ಟಿ ಇಳಿಸಿದ ನಂತರ "ನ್ಯೂ ಮೇಕ್/ನವ ತಯಾರಿಕೆ ಮದ್ಯಸಾರ"ವನ್ನು ಪಕ್ವಗೊಳಿಸುವಿಕೆಯ ಪ್ರಕ್ರಿಯೆಗೆಂದು ಓಕ್ ಪೀಪಾಯಿಗಳಲ್ಲಿಡಲಾಗುತ್ತದೆ. ಐತಿಹಾಸಿಕವಾಗಿ ಹಿಂದೆ (ದೊಡ್ಡ ಪೀಪಾಯಿಗಳು ತುಟ್ಟಿಯಾದುದರಿಂದ, ಹಾಗೂ ಬಳಸಿದ ಮಧ್ಯಮ ಗಾತ್ರದ ಷೆರಿ ಮದ್ಯ ಪೀಪಾಯಿಗಳಿಗೆ ಸಾಕಷ್ಟು ಬೇಡಿಕೆ ಇದ್ದುದರಿಂದ) ಷೆರಿ ಮದ್ಯಕ್ಕೆಂದು ಬಳಸುತ್ತಿದ್ದ ಪೀಪಾಯಿಗಳನ್ನು ಬಳಸಲಾಗುತ್ತಿತ್ತು. ಇಂದು ಬಳಕೆಯಾಗುತ್ತಿರುವ ಪೀಪಾಯಿಗಳು ಸಾಧಾರಣವಾಗಿ ಷೆರಿ ಮದ್ಯ ಅಥವಾ ಬರ್ಬನ್ ಪೀಪಾಯಿಗಳದ್ದಾಗಿವೆ. ಕೆಲವೊಮ್ಮೆ ಇತರೆ ವೈವಿಧ್ಯಗಳಾದ ಪೋರ್ಚುಗಲ್ಲಿನ ದ್ರಾಕ್ಷಾಮದ್ಯ, ಕಾಗ್ನ್ಯಾಕ್, ಮಡೇರಾ, ಸೇಬುಬ್ರಾಂದಿ, ಬೀರು ಮತ್ತು ಬಾರ್ಡೋ ಮದ್ಯಗಳನ್ನು ಬಳಸಲಾಗುತ್ತಿತ್ತು. ಪಕ್ವಗೊಳಿಸುವಿಕೆಯಲ್ಲಿ ಹೊಸದಾದ ಆಗ ತಾನೆ ಸುಟ್ಟ ದೊಡ್ಡ ಓಕ್ ಪೀಪಾಯಿಗಳನ್ನು ಮಾತ್ರವೇ ಬಳಸಬೇಕೆಂಬ ಯುನೈಟೆಡ್ ಸ್ಟೇಟ್ಸ್ ನಿಬಂಧನೆಯಿಂದಾಗಿ ಬರ್ಬನ್ ಉತ್ಪಾದನೆಯು ಬಳಸಿದ ದೊಡ್ಡ ಪೀಪಾಯಿಗಳ ಬಹುತೇಕ ಅಕ್ಷಯ ಉತ್ಪಾದಕವಾಗಿತ್ತು.[೧೩]
ಪಕ್ವಗೊಳಿಸುವಿಕೆಯ ಪ್ರಕ್ರಿಯೆಯು ಆವಿಯಾಗುವುದನ್ನೂ ಒಳಗೊಂಡಿರುವುದರಿಂದ ಪೀಪಾಯಿಯಲ್ಲಿರುವ ಪ್ರತಿ ವರ್ಷವೂ ಪ್ರಮಾಣದಲ್ಲಿ ಹಾಗೂ ಮದ್ಯಸಾರೀಯ ಪ್ರಮಾಣದಲ್ಲಿ ನಷ್ಟವನ್ನು ಉಂಟುಮಾಡುತ್ತದೆ. ಪ್ರತಿ ವರ್ಷವೂ ಹೀಗೆ ನಷ್ಟವಾಗುವ 0.5–2.0%ರಷ್ಟು ಭಾಗವನ್ನು ದೇವದೂತರ ಪಾಲು ಎಂದು ಹೆಸರಾಗಿದೆ. ಅನೇಕ ವಿಧಗಳ ವಿಸ್ಕಿಗಳನ್ನು ಪಶ್ಚಿಮ ಕರಾವಳಿಯುದ್ದಕ್ಕೂ ಹಾಗೂ ಹೆಬ್ರೈಡ್ಸ್ ಪ್ರಾಂತ್ಯದಲ್ಲಿ ಉಪ್ಪಿನಂಶವುಳ್ಳ ಸಮುದ್ರದ ಗಾಳಿಯು ಮದ್ಯಸಾರಕ್ಕೆ ತನ್ನ ಸ್ವಾದವನ್ನು ಸೇರಿಸಲನುವಾಗುವಂತೆ ಕರಾವಳಿಯಲ್ಲಿರುವ ತೆರೆದ ಗೋದಾಮುಗಳಲ್ಲಿಡಲಾಗುತ್ತದೆ. "ಕರಾವಳಿ" ವಿಸ್ಕಿಗಳು ಎಂದು ಕರೆಯಲ್ಪಡುವ ಬಹುತೇಕ ವಿಸ್ಕಿಗಳನ್ನು ಸಮುದ್ರದ ಪ್ರಭಾವಕ್ಕೆ ಒಳಗಾಗಲು ಸಾಧ್ಯವಾಗದೇ ಇರುವಷ್ಟು ಸ್ಕಾಟ್‌ಲೆಂಡ್‌ನ ಒಳಭಾಗದಲ್ಲಿರುವ ಕೇಂದ್ರೀಯ ಗೋದಾಮುಗಳಲ್ಲಿಡಲಾಗುತ್ತದೆ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ.[ಸೂಕ್ತ ಉಲ್ಲೇಖನ ಬೇಕು] ಸ್ಕಾಟ್‌ಲೆಂಡ್‌ನಲ್ಲಿ ಸ್ಕಾಚ್ ವಿಸ್ಕಿ ಎಂದು ಕರೆಸಿಕೊಳ್ಳಬೇಕಾದರೆ ಅಸವಿತ ಉತ್ಪನ್ನವು ಕನಿಷ್ಟ ಮೂರು ವರ್ಷಗಳ ಮೇಲೆ ಒಂದು ದಿನದ ಕಾಲ ಪಕ್ವವಾಗಿರಬೇಕು ಎಂದಿದ್ದರೂ ಬಹುತೇಕ ಏಕ ಮಾಲ್ಟ್ ವಿಸ್ಕಿಗಳನ್ನು ಕನಿಷ್ಟ ಎಂಟು ವರ್ಷಗಳ ಪಕ್ವತೆಯನ್ನು ಹೊಂದಿದ ಮೇಲೆಯೇ ಹೊರಬಿಡಲಾಗುತ್ತದೆ. ಕೆಲವರು ಹಳೆಯ ವಿಸ್ಕಿಗಳು ಸ್ವರೂಪನಿಷ್ಠವಾಗಿಯೇ ಉತ್ತಮವಾಗಿರುತ್ತವೆ ಎಂದು ಭಾವಿಸಿದರೆ, ಉಳಿದವರು ಪ್ರಶಸ್ತ ಸ್ವಾದದ ರೂಪುಗೊಳ್ಳುವಿಕೆಗೆ ಹದವಾದ ಪಕ್ವಗೊಳ್ಳುವಿಕೆಯ ಅವಧಿಯು ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯಿಂದ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗೆ ಅಥವಾ ಇನ್ನೂ ಹೇಳಬೇಕೆಂದರೆ ಪೀಪಾಯಿಯಿಂದ ಪೀಪಾಯಿಗೆ ಗಮನಾರ್ಹವಾಗಿ ಭಿನ್ನವಾಗಿರುತ್ತದೆ. ಹಳೆಯ ವಿಸ್ಕಿಗಳು ಅಂತರ್ಭೂತವಾಗಿಯೇ ದುರ್ಲಭವಾದುದರಿಂದ, ಸಾಧಾರಣವಾಗಿ ಗಮನಾರ್ಹವಾಗಿ ಹೆಚ್ಚಿನ ಬೆಲೆಯನ್ನು ಪಡೆದುಕೊಳ್ಳುತ್ತವೆ.
ವಿಸ್ಕಿಯನ್ನು ಪಕ್ವಗೊಳಿಸಲು ಬಳಸಿದ ಪೀಪಾಯಿಯ (ಷೆರಿ ಮದ್ಯ ಅಥವಾ ಬರ್ಬನ್) ವಿಧವನ್ನು ಕೆಲವೊಮ್ಮೆ ಅದರ ಬಣ್ಣವು ಸೂಚಿಸಬಹುದಾದರೂ ತೆಳು ವರ್ಣದ ವಿಸ್ಕಿಯನ್ನು ದಟ್ಟವರ್ಣದ್ದನ್ನಾಗಿಸಲು ಕಾನೂನುಬದ್ಧ "ಮದ್ಯಸಾರ ವರ್ಣಮಯ ಸಕ್ಕರೆ ಪಾಕ"ವನ್ನು ಸೇರಿಸುತ್ತಾರೆ. ಮದ್ಯಸಾರವನ್ನು ಸೇರಿಸಿ ಸಾರ ಹೆಚ್ಚಿಸಿದ ವಿಸ್ಕಿಯು ಸಾಧಾರಣವಾಗಿ ದಟ್ಟ ಇಲ್ಲವೇ ಹಳದಿಕಿತ್ತಲೆ ವರ್ಣದ್ದಾಗಿದ್ದರೆ, ಬರ್ಬನ್‌ಗೆ ಬಳಸಿದ್ದ ಪೀಪಾಯಿಗಳಲ್ಲಿ ಪಕ್ವಗೊಳಿಸಿದ ವಿಸ್ಕಿಗಳು ಸಾಧಾರಣವಾಗಿ ಚಿನ್ನದ ಹಳದಿ/ಜೇನುತುಪ್ಪದ ವರ್ಣವನ್ನು ಹೊಂದಿರುತ್ತವೆ.
"ಒಪ್ಪದ ಮೆರುಗು" ನೀಡಲು ಸಂಪೂರ್ಣವಾಗಿ ಪಕ್ವಗೊಂಡ ವಿಸ್ಕಿಯನ್ನು ಒಂದು ಪೀಪಾಯಿಯಿಂದ ಹಿಂದೆ ಬೇರೆ ವಿಧದ (e.g., ಪೋರ್ಚುಗಲ್ಲಿನ ದ್ರಾಕ್ಷಾಮದ್ಯ, ಮಡೇರಾ, ರಮ್, ಮದ್ಯ/ವೈನ್ etc.) ಮದ್ಯಸಾರವನ್ನು ಪಕ್ವಗೊಳಿಸಲು ಬಳಸಿದ್ದ ಮತ್ತೊಂದಕ್ಕೆ ಸುರಿಯುವ "ಮರದ ಒಪ್ಪಗೊಳಿಸುವಿಕೆಯ" ಶೈಲಿಯನ್ನು ಬಳಸುವ ಪ್ರವೃತ್ತಿ 1990ರ ದಶಕದ ಕೊನೆಯಲ್ಲಿ ಹೆಚ್ಚಾಯಿತು.
ಇದರ ಒಂದು ಗಮನಾರ್ಹ ಉದಾಹರಣೆಯೆಂದರೆ ಕ್ರಮವಾಗಿ ಒಲೋರೊಸೋ ಷೆರಿ ಮದ್ಯವನ್ನು ಪೀಪಾಯಿಗಳಲ್ಲಿ ಪಕ್ವಗೊಂಡ 29, 30, 31 ವರ್ಷಗಳ ನಂತರ 1993, 94 ಮತ್ತು 95ನೇ ಇಸವಿಗಳಲ್ಲಿ ಸಮೂಹವಾಗಿ ಬಿಡುಗಡೆ ಮಾಡಲಾದ "ಬ್ಲ್ಯಾಕ್ ಬೌಮೋರ್". ಇದರ ಹೆಸರು ಮೂಲತಃ ನೀರಿನಷ್ಟು ತಿಳಿಯಾಗಿದ್ದ ಮದ್ಯಸಾರವು 1964ರಲ್ಲಿ ನೈಸರ್ಗಿಕವಾಗಿ ಪಡೆದುಕೊಂಡ ಬಣ್ಣದ ಸಾಂದ್ರತೆ ಹಾಗೂ ಸ್ವಾದವನ್ನು ಸೂಚಿಸುತ್ತದೆ.
ಶೀಶೆ/ಸೀಸೆ/ಬಾಟಲಿ ತುಂಬಿಸುವಿಕೆ
[ಬದಲಾಯಿಸಿ]ಏಕ ಮಾಲ್ಟ್‌ಗಳಲ್ಲಿ ಆಗತಾನೇ ಸೂಕ್ತವಾಗಿ ಪಕ್ವಗೊಂಡ ಮದ್ಯಸಾರಗಳನ್ನು ಒಂದೇ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯಲ್ಲಿ ಉತ್ಪಾದನೆಯಾದ ಇತರೆ ಏಕ ಮಾಲ್ಟ್‌ಗಳೊಂದಿಗೆ (ಕೆಲವೊಮ್ಮೆ ವಿಭಿನ್ನ ಪಕ್ವತೆಗಳದ್ದಿರಬಹುದು) "ತೊಟ್ಟಿಯಲ್ಲಿನ ನೆನೆಸುವಿಕೆ" ಅಥವಾ "ಮ್ಯಾರೀಡ್/ಜೋಡಿಸುವ" ಪ್ರಕ್ರಿಯೆಗಳಿಗೆ ಒಳಪಡಿಸಿರಲಾಗುತ್ತದೆ. ವಿಸ್ಕಿಯನ್ನು ಸಾಧಾರಣವಾಗಿ 40%ರಿಂದ 46%ರವರೆಗಿನ ಶೀಶೆ/ಸೀಸೆ/ಬಾಟಲಿ ತುಂಬಿಸುವ ಸಾಮರ್ಥ್ಯಕ್ಕೆ ತಿಳಿಗೊಳಿಸಲಾಗುತ್ತದೆ.
ಕೆಲವೊಮ್ಮೆ ಬಟ್ಟಿಕಾರರು ತಿಳಿಗೊಳಿಸದ ಹಾಗೂ ಸಾಧಾರಣವಾಗಿ 50–60%ರಷ್ಟು ಮದ್ಯಸಾರವನ್ನು ಹೊಂದಿರುವ "ಪೀಪಾಯಿ ಸಾಮರ್ಥ್ಯ" ಆವೃತ್ತಿಯನ್ನು ಕೂಡಾ ಬಿಡುಗಡೆ ಮಾಡುತ್ತಾರೆ.
ಅನೇಕ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ಇತರೆ ಯಾವುದೇ ಪೀಪಾಯಿಗಳಲ್ಲಿ ತೊಟ್ಟಿಯಲ್ಲಿನ ನೆನೆಸಿದ ಪ್ರಕ್ರಿಯೆಗೆ ಒಳಪಡದ ವಿಸ್ಕಿಯನ್ನು ಹೊಂದಿರುವ ಒಂದೇ ಪೀಪಾಯಿಯ ಉತ್ಪನ್ನವಾಗಿರುವ "ಏಕ ಪೀಪಾಯಿ" ಆವೃತ್ತಿಗಳನ್ನು ಕೂಡಾ ಬಿಡುಗಡೆ ಮಾಡುತ್ತವೆ. ಇಂತಹಾ ಶೀಶೆ/ಸೀಸೆ/ಬಾಟಲಿಗಳು ಸಾಧಾರಣವಾಗಿ ವಿಸ್ಕಿಯನ್ನು ಆಸವಿತ/ಬಟ್ಟಿ ಇಳಿಸಲಾಗಿದ್ದ ದಿನಾಂಕ, ಅದನ್ನು ಶೀಶೆ/ಸೀಸೆ/ಬಾಟಲಿಯಲ್ಲಿ ತುಂಬಿಸಲಾದ ದಿನಾಂಕ, ಉತ್ಪಾದಿಸಿದ ಶೀಶೆ/ಸೀಸೆ/ಬಾಟಲಿಗಳ ಸಂಖ್ಯೆ, ನಿರ್ದಿಷ್ಟ ಶೀಶೆ/ಸೀಸೆ/ಬಾಟಲಿಯ ಸಂಖ್ಯೆ ಮತ್ತು ಶೀಶೆ/ಸೀಸೆ/ಬಾಟಲಿಗಳ ಉತ್ಪಾದನೆಗೆ ಬಳಸಲಾಗಿದ್ದ ಪೀಪಾಯಿಯ ಸಂಖ್ಯೆ ಮತ್ತಿತರ ವಿವರಗಳನ್ನು ತನ್ನ ನಾಮಪಟ್ಟಿಯಲ್ಲಿ ಹೊಂದಿರುತ್ತವೆ.
ಶೀತಲೀಕೃತ ಸೋಸುವಿಕೆ/ಶೋಧಿಸುವಿಕೆ
[ಬದಲಾಯಿಸಿ]ಅನೇಕ ವಿಸ್ಕಿಗಳನ್ನು ಶೀತಲೀಕೃತ ಸೋಸುವಿಕೆ/ಶೋಧಿಸುವಿಕೆಯ ಪ್ರಕ್ರಿಯೆಗೊಳಪಟ್ಟ ನಂತರ ಶೀಶೆ/ಸೀಸೆ/ಬಾಟಲಿಯಲ್ಲಿ ತುಂಬಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವಿಸ್ಕಿಯನ್ನು 0°Cಯ (32 °F) ಸಮೀಪ ಮುಟ್ಟುವಷ್ಟು ಶೀತಲೀಕರಿಸಿದ ನಂತರ ಸೂಕ್ಷ್ಮ ಶೋಧಕದ ಮೂಲಕ ಹಾಯಿಸಲಾಗುತ್ತದೆ. ಇದರ ಪರಿಣಾಮವಾಗಿ ಆಸವನ/ಬಟ್ಟಿ ಇಳಿಸುವಿಕೆಯ ಪ್ರಕ್ರಿಯೆಯಲ್ಲಿ ಉತ್ಪಾದನೆಯಾದ ಇಲ್ಲವೇ ಪಕ್ವಗೊಳಿಸುವಿಕೆಯ ಅವಧಿಯಲ್ಲಿ ಆಹರಿತವಾದ ತೈಲಭರಿತ/ಕೊಬ್ಬಿನಿಂದ ಕೂಡಿದ ಕೆಲ ಸಂಯುಕ್ತ ವಸ್ತುಗಳು ಹೊರಹಾಕಲ್ಪಡುತ್ತವೆ. 46%abvರಷ್ಟಕ್ಕಿಂತ ಕಡಿಮೆ ಮದ್ಯಸಾರೀಯ ಮಟ್ಟದಲ್ಲಿರುವ ವಿಸ್ಕಿಯು ಶೀಶೆ/ಸೀಸೆ/ಬಾಟಲಿಯಲ್ಲಿರುವಾಗ ಅಥವಾ ಅದರಿಂದ ಬಗ್ಗಿಸಿದ್ದ ಸಂದರ್ಭದಲ್ಲಿ ನೀರು ಅಥವಾ ಮಂಜುಗೆಡ್ಡೆಯನ್ನು ಸೇರಿಸಿದಾಗ ಇಲ್ಲವೇ ಶೀತಲೀಕರಿಸಿದಾಗ ಮಂಜುಗಟ್ಟು/ಮಬ್ಬುಮುಸುಕುವುದನ್ನು ತಡೆಗಟ್ಟುತ್ತದೆ.
ಅನೇಕ ವಿಸ್ಕಿ ಸೇವನಾಸಕ್ತರು ಶೀತಲೀಕೃತ ಶೋಧಿಸುವಿಕೆಯು ವಿಸ್ಕಿಯ ಸ್ವಾದ ಮತ್ತು ಸಾರಗಳಲ್ಲಿ ಸ್ವಲ್ಪ ಭಾಗವನ್ನು ಕಳೆಯುತ್ತದೆ ಎಂದು ಭಾವಿಸುತ್ತಾರೆ, ಹಾಗೆಂದೇ ಅನೇಕರು ಶೀತಲೀಕೃತ ಶೋಧಿಸುವಿಕೆಗೆ ಒಳಪಟ್ಟ ವಿಸ್ಕಿಗಳನ್ನು ಕಡಿಮೆ ಗುಣಮಟ್ಟದ್ದೆಂದು ಕೆಲವರು ಪರಿಗಣಿಸುತ್ತಾರೆ.
ಸಾರ್ವತ್ರಿಕವಾಗಿ 46%abvಕ್ಕೂ ಹೆಚ್ಚಿನ ಸತ್ವದಲ್ಲಿರುವ ಶೀಶೆ/ಸೀಸೆ/ಬಾಟಲಿಯಲ್ಲಿ ತುಂಬಿಸಲಾದ ವಿಸ್ಕಿಯು ಆ ಮದ್ಯಸಾರೀಯ ಮಟ್ಟದಲ್ಲಿ ಮದ್ಯಸಾರವು ಸಾಧಾರಣವಾಗಿ ಮಸುಕುಗಟ್ಟದೇ ಉಳಿದುಕೊಳ್ಳುತ್ತದಾದ್ದರಿಂದ ತಾನು ಶೀತಲೀಕೃತ ಶೋಧಿಸುವಿಕೆಗೆ ಒಳಪಟ್ಟಿಲ್ಲ ಅಥವಾ ಶೀತಲೀಕೃತ ಶೋಧಿತವಾದದ್ದಲ್ಲ ಎಂಬುದನ್ನು ಸೂಚಿಸುತ್ತದೆ
ವಿಸ್ಕಿ ವಲಯಗಳು
[ಬದಲಾಯಿಸಿ]ಸಾಂಪ್ರದಾಯಿಕವಾಗಿ ನಾಲ್ಕು ವಲಯಗಳಾಗಿ ಸ್ಕಾಟ್‌ಲೆಂಡ್‌ಅನ್ನು ವಿಭಜಿಸಲಾಗಿದೆ : ಅವುಗಳೆಂದರೆ ಹೈಲ್ಯಾಂಡ್ಸ್, ಲೋಲ್ಯಾಂಡ್, ಐಸ್ಲೇ ಮತ್ತು ಕ್ಯಾಂಪ್‌ಬೆಲ್‌ಟೌನ್.[೧೪]
ಈಶಾನ್ಯ ಸ್ಕಾಟ್‌ಲೆಂಡ್‌ನ ಸ್ಪೇ ನದೀ ಕಣಿವೆಯನ್ನು ಸುತ್ತುವರೆದಿರುವ, ಒಂದು ಕಾಲದಲ್ಲಿ ಹೈಲ್ಯಾಂಡ್ಸ್‌ನ ಭಾಗವಾಗಿದ್ದ ಸ್ಪೇಸೈಡ್ ಪ್ರದೇಶವು ತನ್ನ ಭೌಗೋಳಿಕ ಮಿತಿಯಲ್ಲಿ ಸ್ಕಾಟ್‌ಲೆಂಡ್‌ನಲ್ಲಿರುವ ಒಟ್ಟಾರೆ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳಲ್ಲಿ ಅರ್ಧದಷ್ಟು ಸಂಖ್ಯೆಯ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳನ್ನು ಹೊಂದಿದೆ; ಇದರ ಪರಿಣಾಮವಾಗಿ ಅದು ಸ್ವತಃ ಒಂದು ವಲಯವಾಗಿ ಅಧಿಕೃತವಾಗಿ ಪ್ರಾತಿನಿಧ್ಯತೆಯನ್ನು ಪಡೆದುಕೊಂಡಿದೆ.
ಕ್ಯಾಂಪ್‌ಬೆಲ್‌ಟೌನ್ ವಲಯವನ್ನು ಅನೇಕ ವರ್ಷಗಳಷ್ಟು ಹಿಂದೆಯೇ ತೆಗೆದುಹಾಕಲಾಗಿದ್ದರೂ, ಇತ್ತೀಚೆಗೆ ಅಧಿಕೃತ ಅಂಗೀಕೃತ ಉತ್ಪಾದನಾ ವಲಯವನ್ನಾಗಿ ಮತ್ತೆ ಪುನಃಮಾನ್ಯತೆ ನೀಡಲಾಗಿದೆ.
ಸ್ಕಾಚ್ ವಿಸ್ಕಿ ಅಸೋಸಿಯೇಷನ್ (SWA)[೧೫] ಸಂಸ್ಥೆಯು ಐಲೆಂಡ್ಸ್/ದ್ವೀಪಪ್ರದೇಶಕ್ಕೆ ಒಂದು ವಲಯವನ್ನಾಗಿ ಮಾನ್ಯತೆ ನೀಡಿಲ್ಲ, ಮಾತ್ರವಲ್ಲದೇ ಹೈಲ್ಯಾಂಡ್ಸ್ ವಲಯದ ಭಾಗವೆಂದು ಪರಿಗಣಿಸಲಾಗಿದೆ.
- ಲೋಲ್ಯಾಂಡ್ — ಇಲ್ಲಿ ಕೇವಲ ಮೂರು ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳು ಮಾತ್ರವೇ ಕಾರ್ಯಾಚರಣೆಯನ್ನು ಉಳಿಸಿಕೊಂಡಿವೆ: ಆಛೆಂತೋಷನ್, ಬ್ಲಾಡ್ನಾಚ್ ಮತ್ತು ಗ್ಲೆಂಕಿಂಚೀ.
- ಸ್ಪೇಸೈಡ್ — ಇದು ಅತಿ ಹೆಚ್ಚು ಸಂಖ್ಯೆಯ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳನ್ನು ಹೊಂದಿದ್ದು ಅವುಗಳಲ್ಲಿ : ಅಬೆರ್ಲರ್, ಬಾಲ್ವೆನೀ, ಗ್ಲೆನ್‌ಫಿಡ್ಡಿಚ್, ಸ್ಪೇಬರ್ನ್, ದ ಗ್ಲೆನ್‌ಲಿವೆಟ್, ದ ಗ್ಲೆನ್ರೋಥೆಸ್ ಮತ್ತು ದ ಮೆಕೆಲ್ಲನ್ಗಳು ಸೇರಿವೆ.
- ಹೈಲ್ಯಾಂಡ್ — ಹೈಲ್ಯಾಂಡ್ನಲ್ಲಿರುವ ಕೆಲ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳಲ್ಲಿ : ಅಬೆರ್ಫೆಲ್ಡಿ, ಬಾಲ್ಬ್ಲೈರ್, ಡಾಲ್ಮೋರ್, ಡಾಲ್ವಿನ್ನೀ, ಗ್ಲೆನ್ ಓರ್ಡ್, ಗ್ಲೆನ್ಮೊರಾಂಗೀ, ಓಬನ್ ಮತ್ತು ಓಲ್ಡ್ ಪಲ್ಟೆನೆಗಳು ಸೇರಿವೆ.
- ಮಾನ್ಯತೆ ಪಡೆದಿಲ್ಲದ ಉಪವಲಯವಾದ ಐಲೆಂಡ್ಸ್, ವಿಸ್ಕಿ ಉತ್ಪಾದಿಸುವ ಎಲ್ಲಾ ದ್ವೀಪಗಳನ್ನು ಒಳಗೊಂಡಿದೆ (ಆದರೆ ಐಸ್ಲೇಯನ್ನು ಹೊರತುಪಡಿಸಿ ): ಅರ್ರಾನ್, ಜೂರಾ, ಮುಲ್ಲ್/ಲ್, ಆರ್ಕ್ನೇ ಮತ್ತು ಸ್ಕ್ಯೇ — ಈ ದ್ವೀಪಗಳು ಅನುಕ್ರಮವಾಗಿ ತಮಗೆ ಸಂಬಂಧಪಟ್ಟ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳಾದ : ಅರ್ರಾನ್, ಐಸ್ಲ್ ಆಫ್ ಜೂರಾ, ಟೋಬರ್ಮೊರಿ, ಹೈಲ್ಯಾಂಡ್ ಪಾರ್ಕ್ ಮತ್ತು ಸ್ಕೇಪಾ ಮತ್ತು ಟಲಿಸ್ಕರ್ಗಳನ್ನು ಹೊಂದಿವೆ.
- ಕ್ಯಾಂಪ್‌ಬೆಲ್‌ಟೌನ್, ಒಂದು ಕಾಲದಲ್ಲಿ 30ಕ್ಕೂ ಹೆಚ್ಚು ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳಿಗೆ ನೆಲೆಯಾಗಿದ್ದ ಇದು, ಪ್ರಸ್ತುತ ಗ್ಲೆನ್ ಸ್ಕೋಟಿಯಾ, ಗ್ಲೆನ್ಜಿಲೆ ಮತ್ತು ಸ್ಪ್ರಿಂಗ್‌ಬ್ಯಾಂಕ್ ಎಂಬ ಕೇವಲ ಮೂರು ಕಾರ್ಯಪ್ರವೃತ್ತವಾಗಿರುವ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳನ್ನು ಹೊಂದಿದೆ.
- ಐಸ್ಲೇ (ಉಚ್ಚಾರಣೆ IPA: /ˈaɪlə/) — ಈ ವಲಯವು ಎಂಟು ಕಾರ್ಯಾಚರಣೆಯಲ್ಲಿರುವ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳನ್ನು ಹೊಂದಿವೆ : ಅರ್ಡ್ಬೆಗ್, ಬೌಮೋರ್, ಬ್ರೂಯಿಚ್ಲ್ಯಾಡ್ಡಿಚ್, ಬುಬ್ಬಾಹಾಭೈನ್, ಕಾವೊಲ್ ಇಲಾ, ಕಿಲ್‌ಛೋಮನ್, ಲಾಗಾವುಲಿನ್ ಮತ್ತು ಲಾಫ್ರೋಐಗ್ಗಳು ಅವುಗಳಲ್ಲಿ ಸೇರಿವೆ.
ನಾಮಪಟ್ಟಿಗಳ ವಿವರ
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(April 2009) |
ಸ್ಕಾಚ್ ವಿಸ್ಕಿಯ ನಾಮಪಟ್ಟಿಯು ಕೂಡಾ ಇತರೆ ಅನೇಕ ನಾಮಪಟ್ಟಿಗಳ ಹಾಗೆ, ಕಾನೂನು,[೧೬] ಸಂಪ್ರದಾಯ, ಜಾಹಿರಾತು/ಪ್ರಚಾರ ಮತ್ತು ಲಹರಿ/ಪ್ರವೃತ್ತಿಗಳ ಸಂಯೋಜನೆಯನ್ನು ಹೊಂದಿರುವುದರಿಂದ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಭಾಷೆಯಲ್ಲಿನ ಹಾಗೂ ರಾಷ್ಟ್ರೀಯ ಕಾನೂನುಗಳಲ್ಲಿನ ವ್ಯತ್ಯಾಸಗಳಿಂದಾಗಿ ಕೆಳಕಂಡುದು ಅದರ ಸ್ಥೂಲ ಕೈಪಿಡಿಯಾಗಿದೆ:
ನಾಮಪಟ್ಟಿಯೊಂದು “ಏಕ ಮಾಲ್ಟ್” ಪದಗಳನ್ನು ಹೊಂದಿದ್ದರೆ (ಕೆಲವೊಮ್ಮೆ ಇತರ ಪದಗಳ ಮಧ್ಯೆ ಇರಬಹುದು e.g., “ಏಕ ಹೈಲ್ಯಾಂಡ್ ಮಾಲ್ಟ್”), ಆಯಾ ಶೀಶೆ/ಸೀಸೆ/ಬಾಟಲಿಯು ಏಕ ಮಾಲ್ಟ್ ಸ್ಕಾಚ್ ವಿಸ್ಕಿಯನ್ನು ಹೊಂದಿದೆ ಎಂದರ್ಥ.
"ತೊಟ್ಟಿಯಲ್ಲಿನ ನೆನೆಸಿದ ಮಾಲ್ಟ್", "ಶುದ್ಧ ಮಾಲ್ಟ್" ಅಥವಾ "ಸಂಯೋಜಿತ ಮಾಲ್ಟ್" ಎಂಬ ಪದಗಳು ಏಕ ಮಾಲ್ಟ್ ವಿಸ್ಕಿಗಳ ಸಂಯೋಜನೆಯಾಗಿರುತ್ತವೆ. ಹಳೆಯ ಶೀಶೆ/ಸೀಸೆ/ಬಾಟಲಿ ತುಂಬಿಸುವಿಕೆಗಳಲ್ಲಿ ಶುದ್ಧ ಮಾಲ್ಟ್ ಎಂಬ ಪದವನ್ನು ಸಾಧಾರಣವಾಗಿ ಏಕ ಮಾಲ್ಟ್ (e.g. “ಗ್ಲೆನ್‌ಫಿಡ್ಡಿಚ್ ಶುದ್ಧ ಮಾಲ್ಟ್”) ಅನ್ನು ಸೂಚಿಸಲು ಬಳಸಲಾಗುತ್ತಿತ್ತು.
ನಾಮಪಟ್ಟಿಯು ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯ ಹೆಸರನ್ನು ಪ್ರಧಾನ ಬ್ರಾಂಡ್‌ಅನ್ನಾಗಿ ಅಥವಾ ಉತ್ಪನ್ನದ ವಿವರಣೆಯ ಭಾಗವನ್ನಾಗಿ ಸೂಚಿಸಬಹುದು. ಏಕ ಮಾಲ್ಟ್‌ನ ವಿಚಾರದಲ್ಲಿ ಇದು ಬಹಳ ಸಾಧಾರಣವಾದ ಸಂಗತಿ. ಕೆಲ ಏಕ ಮಾಲ್ಟ್ ವಿಸ್ಕಿಗಳನ್ನು ಬ್ರಾಂಡ್ ಹೆಸರಿಲ್ಲದೇ ಅಥವಾ ಕಲ್ಪಿತ ಬ್ರಾಂಡ್ ಹೆಸರಿನೊಂದಿಗೆ ಮಾರಾಟ ಮಾಡಲಾಗುತ್ತದೆ. ಆಯಾ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯ ಅಥವಾ ಉತ್ಪಾದಕರ ಕೋರಿಕೆ ಮೇರೆಗೆ ಅವರ ಬ್ರಾಂಡ್ ಹೆಸರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಹೀಗೆ ಮಾಡಲಾಗುತ್ತದೆ. ಬಟ್ಟಿಕಾರರುಗಳೊಂದಿಗೆ ಮಾಡಿಕೊಂಡ ಒಪ್ಪಂದದ ಭಾಗವಾಗಿ ಸಂಖ್ಯಾ ವ್ಯವಸ್ಥೆಯನ್ನು ಬಳಸುವ ದ ಸ್ಕಾಚ್ ಮಾಲ್ಟ್ ವಿಸ್ಕಿ ಸೊಸೈಟಿಯಂತಹಾ ಸ್ವತಂತ್ರವಾಗಿ ಶೀಶೆ/ಸೀಸೆ/ಬಾಟಲಿಯಲ್ಲಿ ತುಂಬುಗ ಕಂಪೆನಿಗಳ ಏಕ ಪೀಪಾಯಿ ವಿಸ್ಕಿಗಳು ಇದಕ್ಕೆ ಉದಾಹರಣೆಯಾಗಿವೆ. ಪ್ರತಿಯೊಂದು ಪೀಪಾಯಿಯೂ ತನ್ನದೇ ಆದ ಗುಣಗಳನ್ನು ಮದ್ಯಸಾರದಲ್ಲಿ ಮೂಡಿಸುವುದರ ಪರಿಣಾಮವಾಗಿ ಕ್ರಮಾನುಗತವಾಗಿ ಹೊರಬಂದ ಶೀಶೆ/ಸೀಸೆ/ಬಾಟಲಿಗಳು ಸಂಪೂರ್ಣವಾಗಿ ವಿಭಿನ್ನವಾಗಿರುವುದು ಸಾಧ್ಯವಿರುವುದರಿಂದ ಇದು ಗುಣಮಟ್ಟವನ್ನು ಸೂಚಿಸುವುದಿಲ್ಲ. ಮದ್ಯವು ಯಾವ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಯದು ಎಂದು ಗುರುತಿಸಲು ಇರುವ ಏಕೈಕ ವಿಶ್ವಸನೀಯ ದಾರಿಯೆಂದರೆ ಆಕರಗಳನ್ನು ಕಂಡುಕೊಳ್ಳುವುದು.
ಮದ್ಯಸಾರೀಯ ಪ್ರಮಾಣವನ್ನು ಬಹುತೇಕ ರಾಷ್ಟ್ರಗಳಲ್ಲಿ ನಮೂದಿಸಿರಲಾಗುತ್ತದೆ. ಸಾಧಾರಣವಾಗಿ, ವಿಸ್ಕಿಯು 40%ರಿಂದ 46% abv.ರವರೆಗಿನ ಮದ್ಯಸಾರೀಯ ಪ್ರಮಾಣವನ್ನು ಹೊಂದಿರುತ್ತವೆ. ಮದ್ಯಸಾರದ ಕಡಿಮೆ ಪ್ರಮಾಣವು “ಮಿತದರ”ದ ವಿಸ್ಕಿಯನ್ನು ಅಥವಾ ಸ್ಥಳೀಯ ಕಾನೂನಿನ ನಿಯಮವನ್ನು ಸೂಚಿಸಬಹುದು. ಶೀಶೆ/ಸೀಸೆ/ಬಾಟಲಿಯು 50% abvಗೂ ಹೆಚ್ಚಿನ ಮದ್ಯಸಾರೀಯ ಪ್ರಮಾಣವನ್ನು ಹೊಂದಿದ್ದರೆ ಅದು ಬಹುಶಃ ಪೀಪಾಯಿ ಸಾಮರ್ಥ್ಯದ್ದಾಗಿರಬಹುದು.
ವಿಸ್ಕಿಯೊಂದರ ಪಕ್ವತೆಯನ್ನು ಶೀಶೆ/ಸೀಸೆ/ಬಾಟಲಿಯ ಮೇಲೆ ನಮೂದಿಸಿದ್ದರೆ ಅದು ಬಳಸಿದ ಕನಿಷ್ಟ ಪಕ್ವತೆಯ ವಿಸ್ಕಿಯದ್ದೆಂದು ಖಚಿತಪಡಿಸಿದ್ದಾಗಿರುತ್ತದೆ. ಸಂಖ್ಯೆಯ ರೂಪದಲ್ಲಿ ಶೀಶೆ/ಸೀಸೆ/ಬಾಟಲಿಯ ಮೇಲಿರುವ ಪಕ್ವತೆಯ ನಿರೂಪಣೆಯು ಆ ಉತ್ಪನ್ನವನ್ನು ಉತ್ಪಾದಿಸಲು ಬಳಸಿದ ಕನಿಷ್ಟ ಪಕ್ವತೆಯ ವಿಸ್ಕಿಯದ್ದಾಗಿರಬೇಕು. ಪಕ್ವತೆಯ ನಿರೂಪಣೆಯಿರುವ ವಿಸ್ಕಿಯನ್ನು ಖಚಿತ ಪಕ್ವತೆಯ ವಿಸ್ಕಿ ಎಂದು ಕರೆಯುತ್ತಾರೆ.[೧೭] ಕಾನೂನಿನ ಅನುಸಾರ ಪಕ್ವತೆಯ ನಿರೂಪಣೆಯಿಲ್ಲದ ಸ್ಕಾಚ್ ವಿಸ್ಕಿಯು ಕನಿಷ್ಟ ಮೂರು ವರ್ಷಗಳಷ್ಟು ಪಕ್ವತೆಯನ್ನು ಹೊಂದಿರಬೇಕು.
ಶೀಶೆ/ಸೀಸೆ/ಬಾಟಲಿಯಲ್ಲಿ ನಮೂದಿಸಿರುವ ವರ್ಷವು ಸಾಧಾರಣವಾಗಿ ಆಸವನ/ಬಟ್ಟಿ ಇಳಿಸುವಿಕೆ ನಡೆಸಿದ ವರ್ಷ ಮತ್ತು ಶೀಶೆ/ಸೀಸೆ/ಬಾಟಲಿ ತುಂಬಿಸುವ ಪ್ರಕ್ರಿಯೆಗೆ ಬಳಸಿದ ಪೀಪಾಯಿಯ ವರ್ಷವನ್ನು ಸೂಚಿಸುವುದರಿಂದ, ವಿಸ್ಕಿಯನ್ನು ಶೀಶೆ/ಸೀಸೆ/ಬಾಟಲಿಯಲ್ಲಿ ತುಂಬಿಸುವ ಪ್ರಕ್ರಿಯೆಗೆ ಒಳಪಡಿಸಿದ ವರ್ಷವನ್ನೂ ನಮೂದಿಸಬಹುದಾಗಿರುತ್ತವೆ. ಶೀಶೆ/ಸೀಸೆ/ಬಾಟಲಿಯಲ್ಲಿ ತುಂಬಿಸುವ ಪ್ರಕ್ರಿಯೆಗೆ ಒಳಪಟ್ಟ ನಂತರ ವಿಸ್ಕಿಯು ಪಕ್ವಗೊಳ್ಳುವುದಿಲ್ಲ, ಹಾಗಾಗಿ ಅದರ ಪಕ್ವತೆಯು ಈ ಎರಡು ದಿನಾಂಕಗಳ ನಡುವಿನ ವ್ಯತ್ಯಾಸವಾಗಿರುತ್ತದೆ; ಎರಡೂ ದಿನಾಂಕಗಳನ್ನು ನಮೂದಿಸಿರದಿದ್ದರೆ ಪಕ್ವತೆಯನ್ನು ಕೇವಲ ಶೀಶೆ/ಸೀಸೆ/ಬಾಟಲಿಯೊಂದರಿಂದಲೇ ಪತ್ತೆಹಚ್ಚಲು ಅಸಾಧ್ಯ.
ಜನಪ್ರಿಯ ಸಂಸ್ಕೃತಿ ಹಾಗೂ ಸಾಹಿತ್ಯದಲ್ಲಿ
[ಬದಲಾಯಿಸಿ]- ತಮ್ಮ 1887ರ ಕವನಸಂಗ್ರಹ ಅಂಡರ್ವುಡ್ಸ್ನಲ್ಲಿ ಸೇರಿಸಲಾಗಿದ್ದ "ದ ಸ್ಕಾಟ್ಸ್ಮನ್ಸ್ ರಿಟರ್ನ್ ಫ್ರಂ ಅಬ್ರಾಡ್", ಎಂಬ ತಮ್ಮ ಕವಿತೆಯಲ್ಲಿ ರಾಬರ್ಟ್ ಲೂಯಿಸ್ ಸ್ಟೀವನ್ಸನ್ರು :[೧೮]
- ದ ಕಿಂಗ್ o' ಡ್ರಿಂಕ್ಸ್, ಆಸ್ I ಕನ್ಸೀಸ್ ಇಟ್,
- ಟಲಿಸ್ಕರ್, ಐಸ್ಲೇ ಆರ್ ಗ್ಲೆನ್‌ಲಿವಿಟ್ ಎಂದು ಸ್ಕಾಚ್ ವಿಸ್ಕಿಯನ್ನು ಪ್ರಸ್ತಾಪಿಸುತ್ತಾರೆ
- ಅಮೇರಿಕನ್ TV-ಸರಣಿ ಚಕ್‌ನಲ್ಲಿ, ಅನೇಕ ಸಂದರ್ಭಗಳಲ್ಲಿ ತನ್ನ ಆಯ್ಕೆಯ ಪಾನೀಯವಾಗಿ ಸ್ಕಾಚ್ಅನ್ನು NSA ಗುಪ್ತಚರ ಜಾನ್ ಕೇಸೆ ಆಯ್ಕೆ ಮಾಡುವುದನ್ನು ತೋರಿಸಲಾಗುತ್ತದೆ.
- ರಾ ಸ್ಪಿರಿಟ್ ಎಂಬ ಅಕಲ್ಪಿತ ವಸ್ತು ಕೃತಿಯು ಸ್ಕಾಟಿಷ್ ಲೇಖಕ ಇಯಾನ್/ಇಯೈನ್ ಬ್ಯಾಂಕ್ಸ್'ರ "ಅತ್ಯುತ್ತಮ ಗುಟುಕ"ನ್ನು ಕಂಡುಕೊಳ್ಳಲು ಆತ ನಡೆಸಿದ ಸ್ಕಾಟ್‌ಲೆಂಡ್ ಮತ್ತು ಅಲ್ಲಿನ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳ ಪರ್ಯಟನೆಯನ್ನು ಕುರಿತದ್ದಾಗಿದೆ.
- ಅಲಾನ್ ಷೋರ್ ಮತ್ತು ಡೆನ್ನಿ ಕ್ರೇನ್ ಎಂಬ ಎರಡು ಪ್ರಧಾನ ಪಾತ್ರಗಳು ತಮ್ಮ ವಕೀಲ ಕಛೇರಿಯ ಬಾಲ್ಕನಿಯಲ್ಲಿ ಒಟ್ಟಿಗೆ ಸ್ಕಾಚ್ಅನ್ನು ಕುಡಿದು ಸಿಗಾರ್/ಚುಟ್ಟಗಳನ್ನು ಸೇದುವುದರ ಮೂಲಕ ಅಮೇರಿಕನ್ ಕಿರುತೆರೆ TV-ಸರಣಿ "ಬಾಸ್ಟನ್ ಲೀಗಲ್,"ನ ಪ್ರತಿ ಕಂತು ಮುಕ್ತಾಯಗೊಳ್ಳುತ್ತದೆ.
- 'Anchorman: The Legend of Ron Burgundy'ನಲ್ಲಿ, ಸ್ಕಾಚ್ಅನ್ನು ಹೊಗಳಿ ಒಂದು ಹಾಡನ್ನು ರಾನ್ ಹಾಡುತ್ತಾನೆ.
ಇವನ್ನೂ ಗಮನಿಸಿ
[ಬದಲಾಯಿಸಿ]
|
ಆಕರಗಳು
[ಬದಲಾಯಿಸಿ]ನಿರ್ದಿಷ್ಟವಾದ ಆಕರಗಳು:
- ↑ "Whisky protected against copies". BBC News. 2009-11-22. Retrieved 2010-05-23.
- ↑ "What does a whisky's age really mean?". Archived from the original on 2010-07-03. Retrieved 2010-08-16.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ಫುಡ್ ಹಿಸ್ಟರಿ ಟೈಮ್‌ಲೈನ್ಸ್/ಆಹಾರ ಪದ್ಧತಿಯ ಇತಿಹಾಸದ ಘಟನಾವಳಿ ಪಟ್ಟಿ, 1400ರ ದಶಕ foodreference.comನಿಂದ
- ↑ "Scotch whisky protected against 'inferior' copies". BBC. 2009-11-22. Retrieved 2010-01-16.
- ↑ "ಆರ್ಕೈವ್ ನಕಲು". Archived from the original on 2011-04-04. Retrieved 2010-08-16.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ಇದನ್ನೂ ನೋಡಿ ಲಾರ್ಡ್ ಹೈ ಟ್ರೆಷರರ್ಸ್ ಅಕೌಂಟ್ಸ್ :“Et per liberacionem factam fratri Johanni Cor per perceptum compotorum rotulatoris, ut asserit, de mandato domini regis ad faciendum aquavite infra hoc compotum viij bolle brasii” vol 1, p. 176.
- ↑ "History". Scotch Whisky Association. Archived from the original on 2010-12-03. Retrieved 2009-04-09.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ A ಡಬಲ್ ಸ್ಕಾಚ್: ಹೌ ಷಿವಾಸ್ ರೀಗಲ್ ಅಂಡ್ ದ ಗ್ಲೆನ್‌ಲಿವೆಟ್ ಬಿಕೇಮ್ ಗ್ಲೋಬಲ್ ಐಕನ್ಸ್ F. ಪಾಲ್ ಪಾಕಲ್ಟ್‌ರಿಂದ
- ↑ "ಆರ್ಕೈವ್ ನಕಲು". Archived from the original on 2010-03-14. Retrieved 2010-08-16.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ಹಝೆಲ್‌ಬರ್ನ್ ಆಸವನ/ಬಟ್ಟಿ ಇಳಿಸುವಿಕೆಯ ಪ್ರಕ್ರಿಯೆ, ಅಧಿಕೃತ ಸ್ಪ್ರಿಂಗ್‌ಬ್ಯಾಂಕ್ ಬಟ್ಟಿಕಾರರ ಜಾಲತಾಣ
- ↑ ಸ್ಪ್ರಿಂಗ್‌ಬ್ಯಾಂಕ್ ಬ್ರಾಂಡ್ ಪುಟ, ಅಧಿಕೃತ ಸ್ಪ್ರಿಂಗ್‌ಬ್ಯಾಂಕ್ ಬಟ್ಟಿಕಾರರ ಜಾಲತಾಣ
- ↑ ಸ್ಪ್ರಿಂಗ್‌ಬ್ಯಾಂಕ್ ಆಸವನ/ಬಟ್ಟಿ ಇಳಿಸುವಿಕೆಯ ಪ್ರಕ್ರಿಯೆ, ಅಧಿಕೃತ ಸ್ಪ್ರಿಂಗ್‌ಬ್ಯಾಂಕ್ ಬಟ್ಟಿಕಾರರ ಜಾಲತಾಣ
- ↑ ಆಸವಿತ/ಬಟ್ಟಿ ಇಳಿಸಿದ ಮದ್ಯಸಾರಗಳ ಸ್ವರೂಪನಿರ್ದೇಶದ ಮಾನಕಗಳು: 27 C.F.R. sec 5.22(b)(1)(i) Archived 2012-08-17 ವೇಬ್ಯಾಕ್ ಮೆಷಿನ್ ನಲ್ಲಿ. ಎಲೆಕ್ಟ್ರಾನಿಕ್ ಕೋಡ್ ಆಫ್ ಫೆಡರಲ್ ರೆಗ್ಯುಲೇಷನ್ಸ್‌ನಿಂದ
- ↑ ದ ಸ್ಕಾಚ್ ವಿಸ್ಕಿ ರೆಗ್ಯುಲೇಷನ್ಸ್ 2009 - ಅಧ್ಯಾಯ 8 ವಿಭಾಗ 1
- ↑ "Map of Distilleries". Scotch Whisky Association. Archived from the original on 2007-02-20. Retrieved 2007-08-30.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "What is Scotch Whisky?". Scotch Whisky Association. 2009. Archived from the original on 2011-10-25. Retrieved 2010-01-16.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "What does a whisky's age really mean?". Archived from the original on 2010-07-03. Retrieved 2010-08-16.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑
ಸಾಮಾನ್ಯ ಆಕರಗಳು
This article includes a list of references, but its sources remain unclear because it has insufficient inline citations. (April 2009) |
- ಬ್ರೂಮ್, ಡೇವ್ (1998). ವಿಸ್ಕಿ – A ಕನ್ನೋಯಿಸ್ಸೆಯರ್ಸ್ ಗೈಡ್. ಲಂಡನ್. ಕಾರ್ಲ್ಟನ್ ಬುಕ್ಸ್ ಲಿಮಿಟೆಡ್. ISBN 1-85868-706-3
- ಬ್ರೂಮ್, ಡೇವ್ (2000). ಹ್ಯಾಂಡ್ಬುಕ್ ಆಫ್ ವಿಸ್ಕಿ. ಲಂಡನ್. ಹ್ಯಾಮ್ಲಿನ್. ISBN 0-600-59846-2.
- ಎರ್ಸ್ಕೈನ್, ಕೆವಿನ್ (2006). ದ ಇನ್ಸ್ಟೆಂಟ್ ಎಕ್ಸ್ಪರ್ಟ್ಸ್ ಗೈಡ್ ಟು ಸಿಂಗಲ್ ಮಾಲ್ಟ್ ಸ್ಕಾಚ್ – ಎರಡನೇ ಆವೃತ್ತಿ. ರಿಚ್ಮಂಡ್, VA. ಡೊಕೆಯನ್ ಪ್ರೆಸ್. ISBN 0-9771991-1-8.
- ಮೆಕ್ಲೀನ್, ಚಾರ್ಲ್ಸ್ (2003) ಸ್ಕಾಚ್ ವಿಸ್ಕಿ: A ಲಿಕ್ವಿಡ್ ಹಿಸ್ಟರಿ ಕ್ಯಾಸ್ಸೆಲ್ ಇಲ್ಲಸ್ಟ್ರೇಟೆಡ್. ISBN 1-84403-078-4.
- ವಿಷಾರ್ಟ್, ಡೇವಿಡ್ (2006). ವಿಸ್ಕಿ ಕ್ಲಾಸಿಫೈಡ್ – ಎರಡನೇ ಆವೃತ್ತಿ. ಲಂಡನ್. ಪೆವಿಲಿಯನ್ ಬುಕ್ಸ್. ISBN 1-86205-716-8.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಸ್ಕಾಚ್ ವಿಸ್ಕಿ ಅಸೋಸಿಯೇಷನ್
- ಡಿಸ್ಟಿಲರಿ ಪ್ರೊನನ್ಷಿಯೇಷನ್ ಗೈಡ್
- ಸ್ಕಾಚ್ ವಿಸ್ಕಿ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Pages using the JsonConfig extension
- CS1 errors: redundant parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hRecipes
- Articles with hProducts
- All articles lacking reliable references
- Articles lacking reliable references from August 2009
- Articles with unsourced statements from April 2009
- Articles with unsourced statements from November 2009
- Articles with unsourced statements from August 2009
- Articles needing additional references from April 2009
- All articles needing additional references
- Articles with unsourced statements from February 2007
- Articles lacking in-text citations from April 2009
- All articles lacking in-text citations
- Commons link from Wikidata
- Articles with Open Directory Project links
- ಸ್ಕಾಟಿಷ್ ಸಂಯೋಜಿತ ವಿಸ್ಕಿ
- ಸ್ಕಾಟಿಷ್ ಮಾಲ್ಟ್ ವಿಸ್ಕಿ
- ಸ್ಕಾಟಿಷ್ ಸಮಾಜ
- ಸ್ಕಾಟ್‌ಲೆಂಡ್‌ನ ಆರ್ಥಿಕತೆ
- ಸ್ಕಾಟಿಷ್ ಆಹಾರ/ಅಡಿಗೆ ಪದ್ಧತಿ
- Pages using ISBN magic links