ವಿಷಯಕ್ಕೆ ಹೋಗು

ಅಪೋಕ್ಯಾಲಿಪ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾಟ್ಮೊಸ್‌ನಲ್ಲಿ ಸೇಂ.ಜಾನ್: ಒಂದು ಅಪೋಕ್ಯಾಲಿಪ್ಸ್‌ ದೂರದೃಷ್ಟಿ ಪಡೆಯುತ್ತಿರುವುದು
ಏಳು ತುತ್ತೂರಿ

ಅಪೊಕ್ಯಾಲಿಸ್ಪ್‌ ಎಂದರೆ (ಗ್ರೀಕ್‌:Apokálypsis ; "ತೆರೆ ಸರಿಸುವುದು" ಅಥವಾ "ಬಹಿರಂಗಪಡಿಸುವುದು") ತಪ್ಪುಗ್ರಹಿಕೆ ಅಥವಾ ಅಪನಂಬಿಕೆಯಿಂದ ತುಂಬಿದ ಒಂದು ಕಾಲದಲ್ಲಿ ಬಹಳಷ್ಟು ಜನರಿಂದ ಮುಚ್ಚಿಟ್ಟದ್ದನ್ನು ನಂತರದಲ್ಲಿ ಬಹಿರಂಗಪಡಿಸುವುದು, ಅಂದರೆ ತೆರೆಯನ್ನು ಸರಿಸುವುದು. ಇನ್ನೂ ಸಾಮಾನ್ಯ ಮಾತಿನಲ್ಲಿ ಹೇಳಬೇಕೆಂದರೆ ಈ ಪದವನ್ನು ಯುಗಾಂತೀಯ ಯುದ್ಧ, ಧರ್ಮಯುದ್ಧ, ಮತ್ತು ಸಮಯ ಮುಗಿದ ಕಾರಣ ವಿಶ್ವದ ಅಂತ್ಯವಾಗುವ ಪರಿಕಲ್ಪನೆಗಳೊಂದಿಗೆ ಬಳಸಲಾಗುತ್ತದೆ. ಈ ಗ್ರಹಿಕೆಯು ಅಪೋಕ್ಯಾಲಪ್‌ಸಿಸ್ ಎಸ್ಕಟೋನ್‌(ಯುಗಾಂತ) ಎಂಬ ಮಾತಿಗೆ ಹೆಚ್ಚಾಗಿ ಅನ್ವಯಿಸುತ್ತದೆ, ಇದರ ಅಕ್ಷರಶಃ ಅರ್ಥ "ಕಾಲ ಇಲ್ಲವೇ ಯುಗಾಂತ್ಯದಲ್ಲಿ [ಅಥವಾ ಯುಗಾಂತ್ಯದ] ಬಹಿರಂಗಪಡಿಸುವುದು" ಎಂದು. ಕ್ರೈಸ್ತಧರ್ಮದಲ್ಲಿ ದ ಅಪೊಕ್ಯಾಲಿಪ್ಸ್‌ ಆಫ್‌ ಜಾನ್‌ ಎನ್ನುವುದು ಬಹಿರಂಗಪಡಿಸುವ ಪುಸ್ತಕ, ಬೈಬಲ್‌ನ ಕಡೆಯ ಪುಸ್ತಕ.

ಗುಣಲಕ್ಷಣಗಳು

[ಬದಲಾಯಿಸಿ]

ಕನಸುಗಳು ಅಥವಾ ದರ್ಶನಗಳು

[ಬದಲಾಯಿಸಿ]

ತನ್ನ ಹೆಸರಿನ ಪುಸ್ತಕದಲ್ಲಿ ದಾಖಲಿಸಿರುವಂತೆ ಪ್ರವಾದಿ ಡೇನಿಯಲ್‌ನ ಅನುಭವದ ಪ್ರಕಾರ ‌ಭವಿಷ್ಯದಲ್ಲಾಗುವ ಘಟನೆಗಳನ್ನು ಕನಸುಗಳ ಮೂಲಕ ತೆರೆದಿಡಲಾಗುತ್ತದೆ, ಅಥವಾ ಜಾನ್‌ ದ ಬುಕ್‌ ಆಫ್‌ ರಿವಿಲೇಷನ್‌ನಲ್ಲಿ ದಾಖಲಿಸಿರುವಂತೆ ದರ್ಶನದ ಮೂಲಕ ತೆರೆದಿಡಲಾಗುತ್ತದೆ.[] ಅದಕ್ಕಿಂತ ಮಿಗಿಲಾಗಿ, ಅದನ್ನು ಸ್ವೀಕರಿಸಿದವರು ಯಾವ ರೀತಿಯಲ್ಲಿ ಸ್ವೀಕರಿಸಿದ್ದಾರೋ ಮತ್ತು ಅನುಭವಿಸಿದ್ದಾರೋ ಎನ್ನುವುದೇ ಸಾಮಾನ್ಯವಾಗಿ ಮುಖ್ಯ. ಅದರ ವರದಿಯನ್ನು ಸಾಮಾನ್ಯವಾಗಿ ’ಪ್ರಥಮ ಪುರುಷ’ದಲ್ಲಿ ಕೊಡಲಾಗುತ್ತದೆ. ತೆರೆದಿಡಲಾಗುವ ರಹಸ್ಯದ ಪ್ರಾಮುಖ್ಯತೆಯ ಮೇಲೆ ಮುಂಬರುವ ಸನ್ನಿವೇಶಗಳಲ್ಲಿ ಅದ್ಭುತವಾದದ್ದು ಏನಾದರೂ ಇರುತ್ತದೆ. ಸಾಮಾನ್ಯವಾಗಿ ದರ್ಶನದಲ್ಲಿಯೇ ಪ್ರಮುಖವಾಗುವ ನಿಗೂಢತೆಯ ಅಂಶಗಳು ಮುನ್ಸೂಚನೆಗಳು ಮುಂಚಿನ ಘಟನೆಗಳಲ್ಲಿಯೇ ಕಾಣುತ್ತವೆ. ಅಪೋಕ್ಯಾಲಿಪ್ಸ್‌ ಸಂಪ್ರದಾಯದಲ್ಲಿ ಉಳಿದುಕೊಂಡಿರುವ ಕೆಲವು ಲಕ್ಷಣಗಳು ದರ್ಶನದ ಸನ್ನಿವೇಶ ಮತ್ತು ಪ್ರವಾದಿಯ ವೈಯಕ್ತಿಕ ಅನುಭವಕ್ಕೆ ಸಂಬಂಧಿಸಿದುದಾಗಿದೆ. ಅಪೋಕ್ಯಾಲಿಪ್ಸ್‌ ಸಾಹಿತ್ಯದ ಪ್ರಮುಖ ಉದಾಹರಣೆಯೆಂದರೆ ಬೈಬಲ್‌ನಲ್ಲಿರುವ ಬುಕ್‌ ಆಫ್‌ ಡೇನಿಯಲ್‌. ಬಹುಕಾಲದ ಉಪವಾಸದ ನಂತರ,[] ಡೇನಿಯಲ್‌ ಒಂದು ನದಿಯ ಪಕ್ಕದಲ್ಲಿ ನಿಂತಿದ್ದಾಗ ದೇವಪುರುಷನೊಬ್ಬ ಅವನಿಗೆ ಕಾಣಿಸಿಕೊಂಡ, ಆನಂತರ ದರ್ಶನವು ಉಂಟಾಯಿತು. (ಡೇನಿಯಲ್ 10:2ಎಫ್‌ಎಫ್‌). ಜಾನ್‌, ಹೊಸ ಒಡಂಬಡಿಕೆಯ ರಿವಿಲೇಷನ್‌ನಲ್ಲಿ (1:9ಎಫ್‌ಎಫ್‌), ಇದೇ ರೀತಿಯ ಅನುಭವವನ್ನು ಹೇಳಿದ್ದಾನೆ, ಇದೇ ಪದಗಳನ್ನೂ ಬಳಸಿದ್ದಾನೆ. ಗ್ರೀಕ್‌ ಅಪೋಕ್ಯಾಲಿಪ್ಸ್‌ ಆಫ್‌ ಬರುಷ್‌ ನ ಮೊದಲ ಅಧ್ಯಾಯ; ಮತ್ತು ಸೈರಿಯಾಕ್‌ ಅಪೋಕ್ಯಾಲಿಪ್ಸ್‌ ಆಫ್‌ ಬರುಷ್‌ ಅನ್ನೂ ಹೋಲಿಸಬಹುದು, vi.ಎಲ್‌ಎಫ್‌ಎಫ್‌, xiii.ಎಲ್‌ಎಫ್‌ಎಫ್‌, lv.1-3. ಅಥವಾ, ಪ್ರವಾದಿ ತನ್ನ ಜನಗಳ ಭವಿಷ್ಯದ ಬಗೆಗೆ ಚಿಂತಾಕ್ರಾಂತನಾಗಿ ಹಾಸಿಗೆಯ ಮೇಲೆ ಮಲಗಿಕೊಳ್ಳುತ್ತಿದಂತೆಯೇ, ಒಂದು ರೀತಿಯ ಸುಪ್ತಾವಸ್ಥೆಗೆ ಜಾರುತ್ತಾನೆ, ಮತ್ತು ಅವನ "ತಲೆಯಲ್ಲಾದ ದರ್ಶನಗಳಲ್ಲಿ" ಭವಿಷ್ಯವನ್ನು ತೋರಿಸಲಾಗುತ್ತದೆ. ಇದು ಡೇನಿಯಲ್‌ನ ಪ್ರಸಂಗ 7:ಎಲ್‌ಎಫ್‌ಎಫ್‌; 2 ಎಸ್‌ಡ್ರಸ್‌ 3:1-3; ಮತ್ತು, ಎನೋಶ್‌ನ ಪುಸ್ತಕದಲ್ಲಿ, i.2 ಮತ್ತು ಇದರ ನಂತರದ್ದರಲ್ಲಿ. ಪ್ರವಾದಿಯ ದರ್ಶನದ ಪರಿಣಾಮದ ಬಗೆಗೆ ಬೇಕಾದಲ್ಲಿ, ಇದನ್ನು ನೋಡಿ - ಡೇನಿಯಲ್‌ 8:27; ಎನೋಶ್‌, lಎಕ್ಸ್.3; 2 ಎಸ್‌ಡ್ರಸ್‌ 5:14.

ದೇವದೂತರು

[ಬದಲಾಯಿಸಿ]

ದೇವದೂತರು ಭವಿಷ್ಯವನ್ನು ಬಹಿರಂಗಪಡಿಸುತ್ತಾರೆಂಬುದು ಬದಲಾಗದ ಒಂದು ಲಕ್ಷಣ. ಬೈಬಲ್‌ ಧರ್ಮಗ್ರಂಥಗಳಲ್ಲಿ ಕಡೇ ಪಕ್ಷ ನಾಲ್ಕು ಸ್ತರದ ಅಥವಾ ಬಗೆಯ ದೇವದೂತರನ್ನು ಹೆಸರಿಸಲಾಗಿದೆ: ಪ್ರಧಾನ ದೇವದೂತ, ದೇವದೂತರು, ಸುಂದರವಾದ ಮಗು[][][][][][][] ಮತ್ತು ಅತ್ಯಂತ ಉಚ್ಚವರ್ಗದ ದೇವದೂತರು (ಸೇರಾಫರು).[೧೦] ದೇವರು ಈ ದೇವದೂತರ ಮೂಲಕ ಅಪ್ಪಣೆಗಳನ್ನು ಹೊರಡಿಸಬಹುದು, ಮತ್ತು ಇವರು ಪ್ರವಾದಿಯ ಉಪದೇಶಕರಾಗುತ್ತಾರೆ. ಬುಕ್‌ ಆಫ್‌ ರಿವಿಲೇಷನ್‌ನಲ್ಲಿ ಜೀಸಸ್‌ ಕ್ರಿಸ್ತನ ಮೂಲಕ ತೋರಿಸಿರುವ ಹಾಗೆ ದೇವರು ತಾನೆ ಖುದ್ದು ಭವಿಷ್ಯವನ್ನು ಬಹಿರಂಗಪಡಿಸಬಹುದು. ದಿ ಬುಕ್‌ ಆಫ್‌ ಜಿನಿಸಿಸ್‌ನಲ್ಲಿ ಒಬ್ಬ "ದೇವದೂತ" ಅಪೋಕ್ಯಾಲಿಪ್ಸ್‌ ಅನ್ನು ತರುವುದರ ಬಗ್ಗೆ ಹೇಳಿದೆ.

ಮೃಗ ಅಥವಾ ಕೊನೆಯ ಕಾಲದ ಅಧಿಕಾರ ನಡೆಸುವವನು

[ಬದಲಾಯಿಸಿ]

ಹಳೆ ಮತ್ತು ಹೊಸ ಒಡಂಬಡಿಕೆಗಳಲ್ಲಿ, ಒಬ್ಬ ನಿರ್ದಿಷ್ಟ ವ್ಯಕ್ತಿ ದೇವರ ಕ್ರೋಧದ ಪ್ರತ್ಯೇಕ ಕಾರಣದಿಂದ ಏಕಾಂಗಿಯಾಗುತ್ತಾನೆ. ಆ ವ್ಯಕ್ತಿಯು ಬೈಬಲ್‌ನ ಶಾಸನದ ಮೂಲಕ ಹಲವು ಶೀರ್ಷಿಕೆಗಳಾದ "ಮೃಗ", "ಪುಟ್ಟ ಕೊಂಬು",[೧೧][೧೨] "ಆಗಮಿಸುವ ರಾಜಕುಮಾರ" ಮತ್ತು ಇತರೆ ಶೀರ್ಷಿಕೆಗಳಿಂದ ಪರಿಚಿತನಾಗಿದ್ದಾನೆ. ಒಬ್ಬ ಪುರಾತನ ರಾಜಕುಮಾರನನ್ನು ಧರ್ಮಗ್ರಂಥಗಳಲ್ಲಿ ಪ್ರತ್ಯೇಕ ಗೊಳಿಸಲಾಯಿತು, ಆತ ಟೈಯರ್‌ನ ರಾಜಕುಮಾರ, ಆವನನ್ನು ಕ್ರೈಸ್ತರ ವಿರೋಧಿಯ ಒಂದು ’ವಿಧ’ ಎಂದು ಪರಿಗಣಿಸಬಹುದು.[೧೩] ಟೈಯರ್‌ನ ರಾಜಕುಮಾರನ ತೀರ್ಪಿನ ನಂತರ, ದೇವರು ಪ್ರವಾದಿ ಎಜೆಕಿಯಲ್‌ಗೆ ಟೈಯರ್ ರಾಜನ ಬಗ್ಗೆ ತೀರ್ಪನ್ನು ಬರೆಯಲು ನಿರ್ದೇಶಿಸುತ್ತಾನೆ ಮತ್ತು ಆ ವ್ಯಕ್ತಿಯು ಮಾನವನಲ್ಲ, ಆದರೆ "ಕವರೇಥ್ ಪವಿತ್ರಜಲ ಸಿಂಚಿತ ಜ್ಞಾನಸಂಪನ್ನ ದೇವತೆ (ವರ್ಣಚಿತ್ರದಲ್ಲಿ ರೆಕ್ಕೆಗಳನ್ನು ಹೊಂದಿರುವ ಪುಟ್ಟಮಗುವಿನಂತೆ ಚಿತ್ರಿತವಾದ ದೇವತೆ) " ಎಂದು ಧರ್ಮ ಶಾಸ್ತ್ರದಿಂದ ತಿಳಿದು ಬಂದಿದೆ ಕೆಲವರು ಹೇಳುತ್ತಾರೆ.[೧೪] ಅದು ಅವನ ಅವನತಿಯ ಮುಂಚೆ ದೇವರ ರಾಜಪದವಿಗಿಂತ ಮೊದಲಿನ ಅವನ ಮುಂಚಿನ ಸ್ಥಿತಿ ಇಲ್ಲಿರುವ ಜ್ಞಾನಸಂಪನ್ನ ದೇವತೆ (ವರ್ಣಚಿತ್ರದಲ್ಲಿ ರೆಕ್ಕೆಗಳನ್ನು ಹೊಂದಿರುವ ಪುಟ್ಟಮಗುವಿನಂತೆ ಚಿತ್ರಿತವಾದ ದೇವತೆ) ಸೈತಾನ ಇರಬಹುದು ಎಂದು ಪಠ್ಯದ ಹೆಚ್ಚಿನ ಅಧ್ಯಯನದಿಂದ ತಿಳುದುಬಂದಿದೆ. ಸೈತಾನನನ್ನು ಭವಿಷ್ಯದಲ್ಲಿ ಅಳೆಯಬಹುದಾದ ಒಬ್ಬ ’ರಾಜಕುಮಾರ’ನ ಹಾಗೆ ಸಹ ನೋಡಲಾಗುತ್ತದೆ.[೧೫][೧೬][೧೭] ಆದ್ಯಾಗಿಯೂ, ಈ ವಾಕ್ಯವೃಂದದ ನೇರ ಅಭಿಪ್ರಾಯ ಏನೆಂದರೆ ವ್ಯಕ್ತಿಯು ಟೈಯರ್‌ನ ಮಾನವ ರಾಜಕುಮಾರ. ಒಂದು ಪರ್ಯಾಯ ಅನುವಾದವೆಂದರೆ ಸ್ವತಃ ರಾಜಕುಮಾರ ಕಾರ್ಯನಿರ್ವಹಿಸುವುದರ ಬದಲಿಗೆ ರಾಜಕುಮಾರನ ಅದೇಶದ ಮೇಲೆ ಕಾರ್ಯ ನಿರ್ವಹಿಸುವವನು ಎಂದಾಗುತ್ತದೆ.[೧೮]

ಭವಿಷ್ಯ

[ಬದಲಾಯಿಸಿ]

ಪ್ರವಾದಿಗಳು ಭವಿಷ್ಯದಲ್ಲಿ ದೇವರ ನ್ಯಾಯವು ನಡೆಯುವುದನ್ನು ಬಹಿರಂಗಪಡಿಸಿರುವ ರೀತಿಯೇ ಈ ಗ್ರಂಥಗಳ ರಚನೆಯ ಮೂಲಕ ಅಪೋಕ್ಯಾಲಿಪ್ಸ್‌ ದರ್ಶನಗಳು. ಇದು ಒಂದು ವಿಶಿಷ್ಟ ಧಾರ್ಮಿಕ ಗುರಿಯನ್ನು ಹೊಂದಿದೆ, ದೇವರು ಮಾನವರ ಜೊತೆ ಹೇಗೆ ವ್ಯವಹರಿಸುತ್ತಾನೆ ಮತ್ತು ದೇವರ ಅಂತಿಮ ಕಾರ್ಯಕಾರಣಗಳೇನು ಎಂಬುದನ್ನು ತೋರಿಸುವುದು. ಈ ಬರಹಗಾರರು ಮುಂದಾಗುವ ಘಟನೆಗಳ ಚಿತ್ರಣಗಳನ್ನು ನೀಡುತ್ತಾರೆ, ಇವು ಬಹಳ ನೈಜವಾಗಿರುತ್ತವೆ, ವಿಶೇಷವಾಗಿ ಪ್ರಸ್ತುತ ಯುಗದ ಅಂತ್ಯಕ್ಕೆ ಸಂಬಂಧಿಸಿದ ಚಿತ್ರಣಗಳು. ಇಂತಹ ಕೆಲವೊಂದು ಬರಹಗಳಲ್ಲಿ ವಿಷಯವಸ್ತುವನ್ನು ಅಸ್ಪಷ್ಟವಾಗಿ ಹೀಗೆ ಹೇಳಲಾಗಿದೆ "ಯಾವುದು ಮುಂದಿನ ದಿನಗಳಲ್ಲಿ ನಡೆಯುತ್ತದೆಯೋ ಅದು" (ಡೇನಿಯಲ್ 2:28;[೧೯] 29ನೇ ಮಾತಿಗೆ ಹೋಲಿಸಿ ನೋಡಿ); ಹಾಗೆಯೇ ಡೇನಿಯಲ್‌ 10:14, "ನಿಮಗೆ ಮುಂದಿನ ದಿನಗಳಲ್ಲಿ ನಿಮಗೆ ಏನಾಗುತ್ತದೆಂದು ಅರ್ಥಮಾಡಿಸಲು";[೨೦] ಇನಾಕ್ ಹೋಲಿಸಿ ನೋಡಿ, i.ಎಲ್‌, 2; ಎಕ್ಸ್‌.2ಎಫ್‌ಎಫ್‌‍. ಹಾಗೆಯೇ ರಿವಿಲೇಷನ್‌ 1:1 (ಡೇನಿಯಲ್‌ನ ಸೆಪ್ಚುಯಾಗಿಂಟ್‌ ಭಾಷಾಂತರವನ್ನು ಹೋಲಿಸಿ ನೋಡಿ 2:28ಎಫ್‌ಎಫ್‌), "ರಿವಿಲೇಷನ್‌ ... ಯಾವುದು ಅತಿಶೀಘ್ರದಲ್ಲೇ ನಡೆಯುತ್ತದೆಯೋ." ದೃಷ್ಟಿಪಥವು ಅಗೋಚರವಾಗಿ ಗೊತ್ತಿರುವ ಘಟನೆಗಳಿಂದ ಗೊತ್ತಿಲ್ಲದ ಘಟನೆಗಳತ್ತ ಸಾಗುವುದರಿಂದ, ಸಾಂಪ್ರದಾಯಿಕವಾಗಿ ತನ್ನ ಕಣ್ಣಿಗೆ ಐತಿಹಾಸಿಕ ಚೌಕಟ್ಟನ್ನು ಕೊಡುವ ಮುಂದಿನ ಇತಿಹಾಸವನ್ನು ದರ್ಶನದಲ್ಲಿ ಸೇರಿಸಿಲ್ಲ. ಹಾಗಾಗಿ, ಡೇನಿಯಲ್‌ನ ಹನ್ನೊಂದನೇ ಅಧ್ಯಾಯ, ಪೂರ್ವದಲ್ಲಿನ ಗ್ರೀಕ್‌ ಸಂಸ್ಥಾನದ ಸಂಪೂರ್ಣ ಇತಿಹಾಸ, ಅಲೆಕ್ಸ್ಯಾಂಡರ್‌ನ ದಿಗ್ವಿಜಯದಿಂದ ಆಂಟಿಯೋಖಸ್‌ ಎಪಿಫೇನ್ಸ್‌ನ ರಾಜ್ಯಭಾರದ ಕಡೆಯ ಭಾಗದವರೆಗೆ (3-39ರವರೆಗಿನ ಮಾತುಗಳು, ಎಲ್ಲವನ್ನೂ ಕಣಿಯ ರೂಪದಲ್ಲಿ ನಿರೂಪಿಸಲಾಗಿದೆ), ಇನ್ನೂ ನಡೆಯದ ಆದರೆ ಬರಹಗಾರನು ಮುಂದಾಗಬಹುದೆಂದು ನೀರಿಕ್ಷಿಸಿದ್ದ ಘಟನೆಗಳನ್ನು ಅಪರೂಪಕ್ಕೆ ಕಡಿಮೆ ವಿವರಣಾತ್ಮಕವಾಗಿ ಯಾವುದೇ ಬಿಡುವಿಲ್ಲದೇ ಮುಂದುವರೆಸಲಾಗಿದೆ(40-45ರವರೆಗಿನ ಮಾತುಗಳು): ಆ‍ಯ್‌೦ಟಿಯೋಖಸ್‌ನ ಸಾವಿಗೆ ಮತ್ತು ಅವನ ಸಂಸ್ಥಾನವು ಬಿದ್ದು ಹೋಗುವುದಕ್ಕೆ ಕಾರಣವಾಗುವ ಯುದ್ಧಗಳು. ಆದ್ದರಿಂದ ಆಧುನಿಕ ತಜ್ಞರು ಈ ಬರವಣಿಗೆಯನ್ನು ಸಾಮಾನ್ಯ ಯುಗದ ಪೂರ್ವ 167ಕ್ಕೆ ಸಂಬಂಧಿಸಿದ್ದರಬಹುದೆಂದು ಹೇಳುತ್ತಾರೆ, ಆಂಟಿಯೋಖಸ್‌ ಎಪಿಫೇನ್ಸ್‌ ಜೆರುಸೆಲಮ್‌ ಅನ್ನು ಲೂಟಿಮಾಡಿದ ಮತ್ತು ಪವಿತ್ರ ಸ್ಥಳಗಳನ್ನು ನಾಶ ಮಾಡಿದ ವರ್ಷ. ಇದು ಹನ್ನೆರಡನೇ ಅಧ್ಯಾಯದಲ್ಲಿ ಬರುವ ಯುಗಾಂತ್ಯದ ಬಗೆಗಿನ ಭವಿಷ್ಯನುಡಿಗಳಿಗೆ ಮುನ್ನುಡಿಯಾಗುತ್ತದೆ. ಹಾಗೆಯೇ 2 ಎಸ್‌ಡ್ರಸ್ 11 ಮತ್ತು 12ರಲ್ಲಿ ವಿವರಿಸಿರುವ ಕನಸಿನಲ್ಲಿ, ರೋಮನ್‌ ಸಾಮ್ರಾಜ್ಯವನ್ನು ಪ್ರತಿನಿಧಿಸುವ ಹದ್ದಿನ ಹಿಂದೆ ಸಿಂಹ ಇದೆ. ಇದೇ ಆಯ್ದ ಜನಗಳನ್ನು ಕೊಟ್ಟು ಸದಾಕಾಲ ಬಾಳುವ ಸಂಸ್ಥಾವನ್ನು ಕಟ್ಟುವ ಉದ್ಧಾರಕ. ಇತಿಹಾಸದಿಂದ ಭವಿಷ್ಯ ನುಡಿಗೆ ಬದಲಾಗುವುದನ್ನು xii.28ರಲ್ಲಿ ಕಾಣಬಹುದು, ಇಲ್ಲಿ ಡೊಮಿಷಿಯನ್‌ನ ರಾಜ್ಯಾಡಳಿತದ ಅಂತ್ಯದ ನಿರೀಕ್ಷೆ – ಮತ್ತು ಅದರೊಂದಿಗೆ ವಿಶ್ವದ ಅಂತ್ಯದ – ಎರಡನ್ನೂ ಹೇಳಿದೆ. ಇದೇ ರೀತಿಯ ಮತ್ತೊಂದು ಉದಾಹರಣೆಯೆಂದರೆ ಸೈಬಿಲ್ಲಿನೆಸ್‌, iii.608-623. ಅಸಮ್ಷಿಯೋ ಮೋಸಿಸ್‌ ಗೂ ಹೋಲಿಸಿ ನೋಡಬಹುದು, vii-ix. ಅಪೋಕ್ಯಾಲಿಪ್ಸ್‌ ಬಗೆಗಿನ ಪುಸ್ತಕ ಎಂದು ವಿಂಗಡನೆ ಮಾಡಿದ ಬಹುತೇಕ ಪುಸ್ತಕಗಳಲ್ಲಿ ಯುಗಾಂತ್ಯವೆ ಪ್ರಮುಖತೆಯನ್ನು ಪಡೆದಿದೆ. ಬರುವ ಯುಗದ ಬಗೆಗೆ ಬೆಳೆದ ನಿರೀಕ್ಷೆ ಮತ್ತು ಬೇರೆ ಎಲ್ಲದಕ್ಕಿಂತಲೂ ಆಯ್ದ ಜನಗಳ ನಿರೀಕ್ಷೆ ಅಪೋಕ್ಯಾಲಿಪ್ಸ್‌ ಸಾಹಿತ್ಯವು ಹುಟ್ಟಿ-ಬೆಳೆಯಲು ಕಾರಣವಾಯಿತು.

ಪ್ರತಿಮೆಗಳು

[ಬದಲಾಯಿಸಿ]
ಅಲ್ಬ್ರೆಚ್ಟ್‌ ಡುರೆರ್‌ನ ಮರದ ಪಡಿಯಚ್ಚು, ಅಪೋಕ್ಯಾಲಿಪ್ಸ್‌ನ ನಾಲ್ಕು ಕುದುರೆ ಸವಾರರ ಸೈನ್ಯ

ಪ್ರತಿ ವಿಶಿಷ್ಟ ಅಪೋಕ್ಯಾಲಿಪ್ಸ್‌ನಲ್ಲಿ ರಹಸ್ಯದ ಅಂಶವು, ವಿಷಯ ಮತ್ತು ಬರವಣಿಗೆಯ ವೈಖರಿ ಎರಡರಲ್ಲೂ ಸ್ಪಷ್ಟವಾಗಿ ಒಂದು ಗುರುತಿಸಲಾದ ಲಕ್ಷಣ. ದೂರದೃಷ್ಟಿಗಳ ಮತ್ತು ಕನಸುಗಳ ಸಾಹಿತ್ಯ ಅದರದೇ ಸ್ವಂತಹ ಸಾಂಪ್ರದಾಯಗಳನ್ನು ಹೊಂದಿದ್ದು, ಅವುಗಳನ್ನು ಯೆಹೂದಿ(ಅಥವಾ ಯಹೂದಿ-ಕ್ರಿಶ್ಚಿಯನ್) ಅಪೋಕ್ಯಾಲಿಪ್ಸ್‌ ಬರವಣಿಗೆಯಲ್ಲಿ ಸಮರ್ಪಕವಾಗಿ ವಿವರಿಸಲಾಗಿದೆ. ಈ ಅಪೋಕ್ಯಾಲಿಪ್ಸ್‌ನ ವೈಶಿಷ್ಟ್ಯ ಕಲ್ಪಿತ ಪ್ರತಿಮೆಗಳ ಬಳಕೆಯಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ. ಉತ್ತಮ ಉದಾಹರಣೆಯನ್ನು ವಿಚಿತ್ರ, ಸಜೀವಿ ಜೀವಿಗಳಿಂದ ಒದಗಿಸಲಾಗಿದೆ, ಅವುಗಳು ದೂರದೃಷ್ಟಿಗಳ ಹಲವುಗಳಲ್ಲಿ ಕಾಣಿಸಿಕೊಳ್ಳುತ್ತದೆ - ದಿವ್ಯಜ್ಞಾನ 4[೨೧] ದಲ್ಲಿ ಬರೆದ ಹಾಗೆ "ಮೃಗಗಳು" ಅಥವಾ "ಸಜೀವಿ ಜೀವಿಗಳು", ಅವುಗಳಲ್ಲಿ ಮನುಷ್ಯರ, ಸಸ್ತನಿಗಳ, ಪಕ್ಷಿಗಳ, ಸರೀಸೃಪಗಳ ಗುಣಲಕ್ಷಣಗಳು, ಅಥವಾ ಕೇವಲ ಕಾಲ್ಪನಿಕ ಜೀವಿಗಳನ್ನು ಆಕರ್ಷಕವಾಗಿ ಕಣ್ಣಿಗೆ ಕಟ್ಟುವಂತಹ ಮತ್ತು ಪದೇಪದೇ ವಿಲಕ್ಷಣವಾಗಿರುವ ರೀತಿಯಲ್ಲಿ ಸಂಯೋಜಿಸಲಾಗಿದೆ. ಈ ವಿಶಿಷ್ಟವಾದ ಲಕ್ಷಣವು ಕೆಳಗೆ ಕಂಡುಬರುವ ಅತಿ ಹೆಚ್ಚು ಗಮನರ್ಹವಾದ ವಾಕ್ಯವೃಂದಗಳ ಪಟ್ಟಿಯಲ್ಲಿ ಆ ರೀತಿಯ ಜೀವಿಗಳನ್ನು ಪರಿಚಯಿಸಲಾಗಿದೆ: ಡ್ಯಾನಿಯಲ್ 7:1-8, 8:3-12 (ಅಪೋಕ್ಯಾಲಿಪ್ಸ್‌ನ ಸಾಹಿತ್ಯದ ಇತಿಹಾಸಕ್ಕೆ ಎರಡೂ ಅತಿಹೆಚ್ಚು ಮಹತ್ವದ ವಾಕ್ಯವೃಂದಗಳು); ಇನಾಕ್, lxxxv.-xc.; 2 ಎಸ್‌ಡ್ರಸ್ 11:1-12:3, 11-32; ಗ್ರೀಕ್ ಎಪೋಕ್.ಆಫ್ ಬಾರ್. ii, iii; ಹೆರ್ಬ್ರೆವ್ ಒಡಂಬಡಿಕೆ ನ್ಯಾಪ್ಟಲೈಸ್, iii.; ದಿವ್ಯಜ್ಞಾನ 6:6ff (ಹೋಲಿಸಿ ಬರುಚ್‌ನ ಅಪೋಕ್ಯಾಲಿಪ್ಸ್ [Syr.] li.11), ix.7-10, 17-19, xiii.1-18, xvii.3, 12; the ಶಫರ್ಡ್ ಆಫ್ ಹರ್ಮಾಸ್ , "ದೂರದೃಷ್ಟಿ," iv.1. ಹೀಬ್ರ್ಯೂ ಬೈಬಲ್‌ನಲ್ಲಿ ಕಾಣಿಸಿಕೊಳ್ಳುವ, ಈ ಪುಸ್ತಕಗಳಲ್ಲಿ ಒಂದು ಮಹತ್ವದ ಪಾತ್ರವನ್ನು ಸಹ ವಹಿಸುವ ಕೆಲವು ಪುರಾಣದ ಅಥವಾ ಅರೆ-ಪುರಾಣದ ಜೀವಿಗಳು. ಹಾಗೆ "ಲೆವಿಯಥನ್" ಹಳೆಯ ಒಡಂಬಡಿಕೆಯಲ್ಲಿ ಉಲ್ಲೇಖಿಸಿದ್ದಾನೆ[೨೨][೨೩][೨೪][೨೫] ಮತ್ತು "ಬೆಹೆಮೊಥ್", ಹಳೆಯ ಒಡಂಬಡಿಕೆಯಲ್ಲಿ ಸಹ ಉಲ್ಲೇಖಿಸಿದ್ದಾನೆ,[೨೬] ಹಾಗೆಯೇ (ಇನಾಕ್, lx.7, 8; 2 ಎಸ್‌ಡ್ರಸ್ 6:49-52; ಬರುಚ್‌ನ ಅಪೋಕ್ಯಾಲಿಪ್ಸ್ xxix.4); " ಗೊಗ್ ಮತ್ತು ಮಗೊಗ್" (ಪ್ರವಾದ ರೂಪಕಗಳು, iii.319ff, 512ff; ಹೋಲಿಸಿ ಇನಾಕ್, lvi.5ff;ದಿವ್ಯಜ್ಞಾನ 20:8). ವಿದೇಶಿ ಪುರಾಣಗಳು ಸಹ ಸಂದರ್ಭಾನುಸಾರ ಕೊಡುಗೆಗಳ ಕೆಳಗೆ ಇಡಲಾಗಿದೆ (ಕೆಳಗೆ ನೋಡಿ ).

ಅನುಭಾವಿ ಸಂಕೇತಗಳು

[ಬದಲಾಯಿಸಿ]

ಅನುಭಾವಿ ಸಂಕೇತಗಳು ಅಪೋಕ್ಯಾಲಿಪ್ತಿಕ್ ಬರಹದ ಸಾಮಾನ್ಯ ಲಕ್ಷಣ. ಈ ಲಕ್ಷಣವನ್ನು ಕೆಲವು ಘಟನೆಗಳಲ್ಲಿ ವಿವರಿಸಲಾಗಿದೆ, ಇಲ್ಲಿ ಜಿಮೆಟ್ರಿಯಾ ಬರಹಗಾರರ ಅರ್ಥವನ್ನು ಮಂಕುಗೊಳಿಸುವ ಸಲುವಾಗಿ ಉಪಯೋಗವಾಗುತ್ತಿದೆ ಅಥವಾ ಪ್ರಾಚೀನ ಸಂಸ್ಕೃತಿಯಲ್ಲಿ ಸಂಖ್ಯೆಗಳಂತೆ ಸಹ ಉಪಯೋಗಿಸಿದ ಪದಗಳು ಎಂದು ಇದರ ಅರ್ಥವನ್ನು ಬೆಳೆಸಲು ಉಪಯೋಗಿಸಲಾಗುತ್ತಿದೆ (ಅಂದರೆ ರೋಮನ್ನರು ಅವರ 'ರೋಮನ್ ಅಂಕೆಗಳ'ಉಪಯೋಗದ ಜೊತೆ). ಈ ರೀತಿ, ಅಸ್ಪಷ್ಟ ಹೆಸರು "ಟೆಕ್ಸೊ ", "ಅಸಂಪ್ತೊ ಮೊಸಿಸ್ ", ix. 1; "ನಂಬರ್ ಆಫ್ ದ ಬೀಸ್ಟ್ " 666, ರೆವೆಲೇಶನ್ ನ 13:18;[೨೭] ನಂಬರ್ 888(.....), ಸಿಬಿಲಿನೆಸ್ , i.326-330. ಈ ಚರ್ಚೆಯಂತೆ ಕಾಲಮಾನದ ಭವಿಷ್ಯದ ಮೂಲಕ ಯಾವ ಘಟನೆಗಳನ್ನು ಊಹಿಸಲಾಗಿದೆಯೋ ಅವು ಆಗುತ್ತಿದ್ದವು. ಇದರಂತೆ, "ಟೈಮ್, ಟೈಮ್ಸ್, ಆ‍ಯ್‌೦ಡ್ ಎ ಹಾಫ್," ಡೆನಿಯಲ್ 12:7[೨೮] ಇದು ಡಿಸ್ಪೇ‌ನ್ಶೇಶಿನಲಿಸ್ಟ್‌‍ಸ್‌ರಿಂದ 3 1/2 ವರ್ಷಗಳಲ್ಲಿ ಸಾಮಾನ್ಯವಾಗಿ ಒಪ್ಪಿಗೆ ಪಡೆಯಿತು; ಎನೋಚ್ ನ "ಫಿಫ್ಟಿ ಎಟ್ ಟೈಮ್ಸ್ ", xc.5, "ಅಸಂಪ್ತೊ ಮೊಸಿಸ್ ", x.11; "ವೀಕ್ಸ್" ಅಥವಾ ದಿನಗಳ ಕೆಲವು ಸಂಖ್ಯೆಗಳ ಘೋಷಣೆ, ಇದರ ಪ್ರಾರಂಭ ಡೆನಿಯಲ್ 9:24,25 ನಲ್ಲಿ "ದಿ ಗೊಯಿಂಗ್ ಫೊರ್ಥ್ ಆಫ್ ದಿ ಕಮಾಂಡ್ ಮೆಂಟ್ ಟು ರಿಸ್ಟೊರ್ ಎಂಡ್ ಟೊ ಬಿಲ್ಡ್ ಜೆರುಸಲೆಮ್ ಅಂಟು ದಿ ಮೆಸ್ಸಿಹ್ ದಿ ಪ್ರಿನ್ಸ್ ಶಾಲ್ ಬಿ ಸೆವೆನ್ ವೀಕ್ಸ್ ",[೨೯] ನಮೂದಿಸಲಾದ 1290 ದಿನಗಳ ನಂತರ ಒಪ್ಪಂದ/ತ್ಯಾಗ ಮುರಿದು ಬೀಳುತ್ತದೆ (ಡೆನಿಯಲ್ 12:11),[೩೦] 12; ಇನಾಕ್ xciii.3-10; 2ಸ್ 14:11, 12; ಅಪೋಕ್ಯಾಲಿಪ್ಸ್ ಆಫ್ ಬರುಚ್ xxvi-xxviii; ರೆವೆಲೆಶನ್ 11:3, ಇದು "ಟು ವಿಟ್ನೆಸೆಸ್ " ಗಳನ್ನು ಅಲೌಕಿಕ ಶಕ್ತಿಯಿಂದ ನಮೂದಿಸಿದೆ,[೩೧] 12:6;[೩೨] ಹೋಲಿಕೆ ಅಸಂಪ್ತೋ ಮೊಸಿಸ್ , vii.1. ಸಿಂಬಾಲಿಕ್ ಭಾಷೆಯನ್ನು ಮನುಷ್ಯರು, ವಸ್ತುಗಳು, ಅಥವಾ ಘಟನೆಗಳನ್ನು ನಿರೂಪಿಸಲು ಬಳಸಲಾಗಿದೆ; ಈ ರೀತಿ ಡೆನಿಯಲ್ 7 ಮತ್ತು 8 ರ "ಹಾರ್ನ್ಸ್";[೩೩] ರೆವೆಲೆಶನ್ 17[೩೪] ಮತ್ತು ಕೆಳಗಿನವುಗಳು; 2 ಎಸ್‌ಡ್ರಸ್ xi ನ "ಹೆಡ್ಸ್" ಮತ್ತು "ವಿಂಗ್ಸ್" ಮತ್ತು ಕೆಳಗಿನವುಗಳು; ರೆವೆಲೆಶನ್ 6 ರ ಏಳು ಪ್ರಾಣಿಗಳು,[೩೫] ಆನೆಗಳ ಘೀಳು, ರೆವೆಲೆಶನ್ 8;[೩೬] "ವಿಯಲ್ಸ್ ಆಫ್ ದಿ ವ್ರತ್ ಆಫ್ ಗಾಡ್" ಅಥವಾ "ಬೌಲ್..." ತೀರ್ಮಾನಗಳು, ರೆವೆಲೆಶನ್ 16;[೩೭] ಡ್ರೆಗನ್, ರೆವೆಲೆಶನ್ 12:3-17,[೩೮] ರೆವೆಲೆಶನ್ 20:1-3;[೩೯] ಹದ್ದು, ಅಸಂಪ್ತೋ ಮೊಸಿಸ್ , x.8; ಮತ್ತು ಮುಂತಾದವುಗಳು.

ಈಗಾಗಲೇ ಹೇಳಿ ನಮೂದಿಸಲಾದ ಡೆನಿಯಲ್‌‍ನ 7 ಮತ್ತು 8ನೇ ಅಧ್ಯಾಯಗಳು; ಮತ್ತು 2 ಎಸ್‌ಡ್ರಸ್‌‌ನ 11 ಮತ್ತು 12ನೇ ಅಧ್ಯಾಯಗಳಲ್ಲಿನ ಹೊರತಾಗಿ ಹೆಚ್ಚು ವಿಸ್ತಾರವಾದ ಭವಿಷ್ಯ ಕಥನಗಳು ಮತ್ತು ಸಾಂಕೇತಿಕ ಕಥನಗಳಿಗೆ ಉದಾಹರಣೆಗಳು: ಗೂಳಿಗಳು ಮತ್ತು ಕುರಿಗಳ ದೃಷ್ಟಿ, ಎನೋಚ್, lxxxv ಮತ್ತು ಕೆಳಗಿನವು; ಕಾಡು, ಬಳ್ಳಿ, ಕಾರಂಜಿ, ಮತ್ತು ಸೆದರ್ ಮರ, ಅಪೋಕ್ಯಾಲಿಪ್ಸ್ ಆಫ್ ಬರುಚ್ xxxvi ಮತ್ತು ಕೆಳಗಿನವು; ಶುಭ್ರ ಮತ್ತು ಕಪ್ಪು ನೀರು, ಇಬಿದ್. liii ಮತ್ತು ಕೆಳಗಿನವು; ವಿಲೋಮರ ಮತ್ತು ಅದರ ರೆಂಬೆಗಳು, ಹೆಮಾಸ್‌‌‌ರ, "ಸಿಮಿಲಿತುದೈನ್ಸ್", viii.

ರಷ್ಯಾದ ಸಾಂಪ್ರದಾಯಿಕ ಪ್ರತಿಮೆ ಅಪೋಕ್ಯಾಲಿಪ್ಸ್

ಕಾಲದ ಕೊನೆ

[ಬದಲಾಯಿಸಿ]

ಜಾನ್‌ರ ಅಪೋಕ್ಯಾಲಿಪ್ಸ್‌ನಲ್ಲಿ, ರಿವೆಲೆಶನ್ ಪುಸ್ತಕದಲ್ಲಿ, ಮೆಸ್ಸಿ‍ಹ್‌‌‌‍‌‌‍ನಂತೆ ಜೀಸಸ್ ಕ್ರಿಸ್ತರ "ಪರದೆ ಸರಿಸುವುದು" ಅಥವಾ "ಬಹಿರಂಗಪಡಿಸುವುದು" ಎಂದು ಹೇಳಿದ್ದಾರೆ. ಈ ಪದದ ಅರ್ಥ ಪ್ರಪಂಚದ ಕೊನೆ ಎಂದು ಸಾಮಾನ್ಯ ಬಳಕೆಗೆ ಬಂತು. ಕೊನೆಯ ಕಾಲಾವಧಿಯ ಹಳೆಯ ಒಡಂಬಡಿಕೆಯ ಪುಸ್ತಕದಲ್ಲಿನ ಸರಳವಾದ ಚಿತ್ರಗಳು ದುಷ್ಟರ ಬಗೆಗಿನ ತೀರ್ಪನ್ನು ಚಿತ್ರಿಸುತ್ತಿದ್ದವು. ಅವರು ದೇವರ ಎದುರಲ್ಲಿ ಕೊಟ್ಟ ನ್ಯಾಯವನ್ನೂ ಸಹ ಪುನರುಜ್ಜೀವನಗೊಳಿಸುವುದು ಮತ್ತು ವೈಭವೀಕರಿಸಲಾಗಿತ್ತು. ಸತ್ತವರನ್ನು ಜಾಬ್ ಪುಸ್ತಕದಲ್ಲಿ ಕಾಣಬಹುದು ಮತ್ತು ಕೆಲವು ಪವಿತ್ರ ಗೀತೆಗಳಲ್ಲಿ ಮೃತ್ಯು ಲೋಕದಲ್ಲಿ ಕೊನೆಯ ತೀರ್ಮಾನಕ್ಕೆ ಕಾಯುತ್ತಾ ಇದ್ದಾರೆ. ದುಷ್ಟರು ನಂತರ ಗೆಹಿನೊಮ್‌‌‌‍ನ ಬೆಂಕಿಯಲ್ಲಿ ಅಥವಾ ಬಹಿರಂಗಪಡಿಸುವಿಕೆಯಲ್ಲಿ ಹೇಳಲಾದ ಬೆಂಕಿಯ ಸರೋವರದಲ್ಲಿ ಚಿರವಾದ ಚಿತ್ರ ಹಿಂಸೆಗೆ ಅರ್ಪಿಸಿಕೊಳ್ಳುತ್ತಿದ್ದರು.[೩೭][೪೦][೪೧][೪೨][೪೩]

ಅಪೊಸ್ಟಲ್ ಪೌಲ್ ಅವರಿಂದ ಬರೆಯಲ್ಪಟ್ಟ ಹೊಸ ಒಡಂಬಡಿಕೆಯ ಪತ್ರಗಳು ದುಷ್ಟರ ಬಗೆಗಿನ ತೀರ್ಮಾನದ ವಿಷಯವನ್ನು ವಿಸ್ತರಿಸುತ್ತವೆ, ಇದು ಕ್ರಿಸ್ತ ಅಥವಾ ಮೆಸ್ಸಿಹ್‌‍(ಮುಖಂಡ) ರಿಗೆ ಸೇರಿದವರನ್ನು ವೈಭವೀಕರಿಸುತ್ತದೆ. ಕೊರಿಂಥಿಯನ್ನರು ಮತ್ತು ಥೆಸಲೊನಿಯನ್ನರಿಗೆ ಅವರು ಬರೆದ ಪತ್ರಗಳಲ್ಲಿ ನ್ಯಾಯದ ಅಂತ್ಯದ ಬಗ್ಗೆ ಪೌಲ್ ಮತ್ತೂ ವಿವರವಾಗಿ ಹೇಳಿದ್ದಾರೆ. ಕ್ರಿಸ್ತ (ಅಥವಾ ಮೆಸ್ಸಿಹ್)ನಲ್ಲಿ ಇರುವವರ ಪುನರುಜ್ಜೀವನ ಮತ್ತು ಭಾವಾವೇಶಗಳ ಬಗ್ಗೆ ಇವರು ಹೇಳಿದ್ದಾರೆ. ನ್ಯಾಯದ ವೈಭವೀಕರಣಕ್ಕೆ ಜುದಾಯಿಸಮ್‌‍ನಿಂದ ಹೊರಬಂದ ಸಮಯದಿಂದ ಕ್ರೈಸ್ತ ಧರ್ಮ ಸಹಸ್ರಾರು ನಿರೀಕ್ಷೆಗಳನ್ನು ಹೊಂದಿತ್ತು ಮತ್ತು ಮೊದಲ ಶತಮಾನದಲ್ಲಿ ವಿಶ್ವದ ತುಂಬೆಲ್ಲಾ ಹರಡಿತು. ಹೀಬ್ರ್ಯೂ ಬೈಬಲ್‌‍ನ ಕಾವ್ಯ ಲಕ್ಷಣವುಳ್ಳ ಭವಿಷ್ಯಸೂಚಕ ಗ್ರಂಥ ಇಸೈಯಾನಲ್ಲಿ ಸಹಸ್ರಾರು ಚಿತ್ರಗಳಿದ್ದವು. ಹೊಸ ಒಡಂಬಡಿಕೆಯ ಜಮಾವಣೆ ಪೆನ್ತೆಕಾಸ್ಟ್ (ಯಹೂದ್ಯರ ಸುಗ್ಗಿ ಹಬ್ಬ)ನ ನಂತರ ಈ ವಿಷಯವನ್ನು ತೆಗೆದುಕೊಳ್ಳುತ್ತದೆ. ಪತ್ಮೊಸ್ ದ್ವೀಪದಲ್ಲಿ ರೋಮನ್ನರು ಕಾರಾಗೃಹವಾಸದಲ್ಲಿಟ್ಟ ಸಮಯದಲ್ಲಿ ರಿವೆಲೆಶನ್ ಪುಸ್ತಕ ಬರೆಯುವಾಗ ಜಾನ್ ಅವರು ಅನುಭವಿಸಿದ್ದನ್ನು ವಿವರಿಸಿದ್ದಾರೆ. ಈ ಭೂಮಿಯ ಮೇಲೆ ಕ್ರಿಸ್ತ/ಮೆಸ್ಸಿಹ್ ಗಳ ಸಾವಿರ ವರ್ಷಗಳ ಆಳ್ವಿಕೆಗೆ ರಿವೆಲೆಶನ್ ಪುಸ್ತಕದ ಇಪ್ಪತ್ತನೆ ಅಧ್ಯಾಯದಲ್ಲಿ ಬಹಳ ಉಲ್ಲೇಖಗಳಿವೆ. 18ನೇ ಮತ್ತು 19ನೇ ಶತಮಾನಗಳ ಕ್ರಿಶ್ಚಿಯನ್ ಚಳುವಳಿಗಳು ಮಿಲೆನಿಯಲಿಸಂ ನ ಉನ್ನತಿಯಿಂದ ನಿರೂಪಿತವಾಗಿತ್ತು. ಕ್ರಿಶ್ಚಿಯನ್ ಅಪೋಕ್ಯಾಲಿಪ್ಟಿಕ್ ಅಂತಿಮಗತಿಶಾಸ್ತ್ರ, ಪೂರ್ತಿ ಪವಿತ್ರ ಗ್ರಂಥದಲ್ಲಿ ಹೇಳಲಾದ ಎರಡು ವಿಷಯಗಳಾದ "ಈ ಕಾಲ " ಮತ್ತು "ಮುಂದಿನ ಕಾಲ " ಗಳ ಮುಂದುವರೆದ ಭಾಗವಾಗಿತ್ತು. ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ದೊಡ್ಡ ಅಭಿಮುಖತೆಯ ಬೈಬಲ್‌ಗೆ ಅನುಗುಣವಾದ ಕಾಲಜ್ಞಾನವನ್ನು ಈ ಕಾಲಾವಧಿಯ ಕೊನೆಯಲ್ಲಿ ಇವ್ಯಾನ್‌ಜಲಿಕಲ್‌‍ರವರು ಜನಪ್ರಿಯಗೊಳಿಸಿದರು, ಮುಂದಿನ ಶತಮಾನವು ಅನುಸರಿಸಲು, ಅಂತಿಮವಾಗಿ ದುಷ್ಟರನ್ನು ಶಿಕ್ಷಿಸಿ, ನ್ಯಾಯವನ್ನು ಸನ್ಮಾನಿಸಲಾಯಿತು ಮತ್ತು ಶಾಶ್ವತತೆ ಪ್ರಾರಂಭವಾದಂತೆ ಕಂಡಿತು. ಹೆಚ್ಚು ಇವ್ಯಾನ್‌ಜಲಿಕಲ್‌ರವರು ಮಿಲೆನಿಯಲಿಸಂ ನಿಂದ ಕಲಿಸಲಾಗುವುದನ್ನು ಡಿಸ್‌‍ಪೆನ್ಶೇಶಲಿಸಮ್ ಎನ್ನುವರು, ಇದು ಹತ್ತೊಂಬತ್ತನೇ ಶತಮಾನದಲ್ಲಿ ಹುಟ್ಟಿಕೊಂಡಿದೆ. ಡಿಸ್‌‍ಪೆನ್ಶೇಶಲಿಸಮ್ ಕ್ರಿಶ್ಚಿಯನ್ ಚರ್ಚ್ ಮತ್ತು ಇಸ್ರೇಲ್ ಗಳನ್ನು ಬೇರೆ ಬೇರೆ ದೈವದಿಂದ ನೋಡುತ್ತದೆ. ಚರ್ಚಿನ ತೊಂದರೆ-ಪೂರ್ವದ ಭಾವಾವೇಶದ ಇದರ ಪರಿಕಲ್ಪನೆ ಅತ್ಯಂತ ಜನಪ್ರಿಯವಾಯಿತು. ಇದು ಲೆಫ್ಟ್ ಬಿಹೈಂಡ್ ಪುಸ್ತಕಗಳು ಮತ್ತು ಚಲನಚಿತ್ರಗಳ ಮುಖ್ಯ ವಿಷಯವಾಗಿದೆ. ಮುಂದಿನ ಘಟನೆಗಳ ಬೈಬಲ್‌ಗೆ ಅನುಗುಣವಾದ ಭವಿಷ್ಯವಾಣಿಗಳಲ್ಲಿ ಕಂಡ ಡಿಸ್‌‍ಪೆನ್ಶೇಶಲಿಸ್ಟರ ವ್ಯಾಖ್ಯಾನಗಳು: ಚರ್ಚಿನ ವಿವಿಧ ಕಾಲಗಳು, ಉದಾಹರಣೆಗೆ ಏಳು ಚರ್ಚುಗಳಿಗೆ ಪತ್ರಗಳ ಮೂಲಕ ತೋರಿಸುವುದು; ಸ್ವರ್ಗದಲ್ಲಿ ದೇವರ ಸಿಂಹಾಸನ ಮತ್ತು ಅವರ ವೈಭವ; ಭೂಮಿಯ ಮೇಲೆ ನಿಖರವಾದ ತೀರ್ಮಾನಗಳು ಸಂಭವಿಸುತ್ತವೆ; ಯೇಹೂದ್ಯೇತರ ಶಕ್ತಿಯ ಅಂತಿಮ ರೂಪ; ಹಳೆಯ ಒಡಂಬಡಿಕೆಯಲ್ಲಿ ನಮೂದಿಸಲಾದ ಒಪ್ಪಂದದ ಆಧಾರದ ಮೇಲೆ ಇಸ್ರೇಲ್ ಜನತೆಯ ಜೊತೆ ದೇವರ ಮರು-ಹಂಚಿಕೆ;[೪೪] ಬರುವಂತಹ ಎರಡನೇ ಅನುರೂಪ ಮೆಸ್ಸಿಹ್‌‌‍ಗಳ ಒಂದು ಸಾವಿರ ವರ್ಷಗಳ ಆಳ್ವಿಕೆ; ಸೈತಾನನನ್ನು ಕಳೆದುಕೊಳ್ಳುವುದರ ಮೂಲಕ ಆದರ್ಶ ಸ್ಥಿತಿಯಲ್ಲಿ ಮನುಕುಲದ ತಪ್ಪಿತಸ್ಥ ಮನೋಭಾವದ ಅಂತಿಮಪರೀಕ್ಷೆ, ಅದರ ಜತೆಗೆ ತೀರ್ಪಿನ ಅಗ್ನಿಯು ಸ್ವರ್ಗದಿಂದ ಕೆಳಗೆ ಬರುವುದು; ಭಾರಿ ಬಿಳಿಯ ಸಿಂಹಾಸನದ ತೀರ್ಮಾನ, ಮತ್ತು ಈಗಿನ ಭೂಮಿ ಮತ್ತು ಸ್ವರ್ಗಗಳ ನಾಶ, "ಹೊಸ ಸ್ವರ್ಗ ಮತ್ತು ಹೊಸ ಭೂಮಿ " [೪೫][೪೬][೪೭] ಗಳನ್ನು ಸೃಷ್ಟಿಸುವುದು ಶಾಶ್ವತತೆಯನ್ನು ಪ್ರಾರಂಭಿಸುವುದು. ತೊಂದರೆಯ ನಂತರದ ಭಾವಾವೇಶದಲ್ಲಿ ಬೇರೆ ರೀತಿಯ ವ್ಯಾಖ್ಯಾನ ಕಾಣುತ್ತದೆ. 1766ರಲ್ಲಿ ಆಮ್ ಸ್ಟ್ರಡಾಮ್ ನಲ್ಲಿ ಎರಡು ವಾಲ್ಯೂಮ್‌‌ಗಳಲ್ಲಿ ಮೊದಲು ಪ್ರಕಟಗೊಂಡ ಇಮೆನ್ಯುವಲ್ ಸ್ವೆಡನ್ ಬರ್ಗ್ ಅವರು ಬರೆದ ಅಪೋಕ್ಯಾಲಿಪ್ಸ್ ರಿವೀಲ್ದ್ ಪುಸ್ತಕ ಬುಕ್ ಆಫ್ ರೆವೆಲೆಶನ್‌‌‍ಗೆ ಹೆಚ್ಚು ಸಂಪೂರ್ಣವಾದ ಅರ್ಥವಿರುವ ಪುಸ್ತಕಗಳಲ್ಲಿ ಒಂದು. ಬಹಳ ಇತ್ತೀಚಿನ ಪುಸ್ತಕ, ಹೆನ್ರಿ ಎಂ.ಮಾರಿಸ್ ಅವರು ಬರೆದ "ದಿ ರೆವೆಲೆಶನ್ ರೆಕಾರ್ಡ್" ಅಕ್ಷರಶಃ ಅರ್ಥದ ವ್ಯಾಖ್ಯಾನವನ್ನು ಉಪಯೋಗಿಸುತ್ತಿದೆ.[೪೮]

ಇವನ್ನೂ ಗಮನಿಸಿ

[ಬದಲಾಯಿಸಿ]

ಚಲನಚಿತ್ರ ಮತ್ತು ದೂರದರ್ಶನ

[ಬದಲಾಯಿಸಿ]

ಸಾಹಿತ್ಯ

[ಬದಲಾಯಿಸಿ]

ಸಂಗೀತ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. "Daniel 1 (King James Version)". BibleGateway.com. Retrieved 2007-11-15.
  2. "Daniel 10:1-4 (King James Version)". BibleGateway.com. Retrieved 2007-11-15.
  3. "Genesis 3:24 (King James Version)". BibleGateway.com. Retrieved 2007-11-15.
  4. "2 Kings 19:15 (King James Version)". BibleGateway.com. Retrieved 2007-11-15.
  5. "Psalm 80:1 (King James Version)". BibleGateway.com. Retrieved 2007-11-15.
  6. "Psalm 99:1 (King James Version)". BibleGateway.com. Retrieved 2007-11-15.
  7. "Isaiah 37:16 (King James Version)". BibleGateway.com. Retrieved 2007-11-15. {{cite web}}: Check |url= value (help)
  8. "Ezekiel 10 (King James Version)". BibleGateway.com. Retrieved 2007-11-15.
  9. "Hebrews 9:1-6 (King James Version)". BibleGateway.com. Retrieved 2007-11-15.
  10. "Isaiah 6:1-7 (King James Version)". BibleGateway.com. Retrieved 2007-11-15.
  11. "Daniel 7:1-28 (King James Version)". BibleGateway.com. Retrieved 2007-11-15.
  12. "Daniel 8:1-27 (King James Version)". BibleGateway.com. Retrieved 2007-11-15.
  13. "Ezekiel 28:2-10 (King James Version)". BibleGateway.com. Retrieved 2007-11-15.
  14. "Ezekiel 28:11-19 (King James Version)". BibleGateway.com. Retrieved 2007-11-15.
  15. "John 14:30 (King James Version)". BibleGateway.com. Retrieved 2007-11-15.
  16. "John 16:7-12 (King James Version)". BibleGateway.com. Retrieved 2007-11-15.
  17. "Ephesians 2:2 (King James Version))". BibleGateway.com. Retrieved 2007-11-15.
  18. "Ezekiel 28:14 (Revised Standard Version)". Blueletterbible.org. Retrieved 2009-04-02.
  19. "Daniel 2:28 (King James Version)". BibleGateway.com. Retrieved 2007-11-15.
  20. "Daniel 10:14 (King James Version)". BibleGateway.com. Retrieved 2007-11-15.
  21. "Revelation 4 (Darby Translation)". Bible Gateway.com. Retrieved 2007-12-14.
  22. "Job 41:1 (King James Version)". BibleGateway.com. Retrieved 2007-11-21.
  23. "Psalm 74:14 (King James Version)". BibleGateway.com. Retrieved 2007-11-21.
  24. "Psalm 104:26 (King James Version)". BibleGateway.com. Retrieved 2007-11-21.
  25. "Isaiah 27:1 (King James Version)". BibleGateway.com. Retrieved 2007-11-21.
  26. "Job 40:15 (King James Version)". BibleGateway.com. Retrieved 2007-11-21.
  27. "Revelation 13:16-18 (King James Version)". BibleGateway.com. Retrieved 2007-11-21.
  28. "Daniel 12:7 (King James Version)". BibleGateway.com. Retrieved 2007-11-21.
  29. "Daniel 9:24-25 (King James Version)". BibleGateway.com. Retrieved 2007-11-21.
  30. "Daniel 12:11 (King James Version)". BibleGateway.com. Retrieved 2007-11-21.
  31. "Revelation 11:3 (King James Version)". BibleGateway.com. Retrieved 2007-11-21.
  32. "Revelation 12:6 (King James Version)". BibleGateway.com. Retrieved 2007-11-21.
  33. "Daniel 7; Daniel 8 (King James Version)". BibleGateway.com. Retrieved 2007-11-21.
  34. "Revelation 17 (King James Version)". BibleGateway.com. Retrieved 2007-11-21.
  35. "Revelation 6 (King James Version)". BibleGateway.com. Retrieved 2007-11-21.
  36. "Revelation 8 (King James Version)". BibleGateway.com. Retrieved 2007-11-21.
  37. ೩೭.೦ ೩೭.೧ "Revelation 16 (King James Version)". BibleGateway.com. Retrieved 2007-11-21.
  38. "Revelation 12:3-17 (King James Version)". BibleGateway.com. Retrieved 2007-11-21.
  39. "Revelation 20:1-3 (King James Version)". BibleGateway.com. Retrieved 2007-11-21.
  40. "Revelation 19:20 (King James Version)". BibleGateway.com. Retrieved 2007-11-21.
  41. "Revelation 20:10 (King James Version)". BibleGateway.com. Retrieved 2007-11-21.
  42. "Revelation 20:14-15 (King James Version)". BibleGateway.com. Retrieved 2007-11-21.
  43. "Revelation 21:8 (King James Version)". BibleGateway.com. Retrieved 2007-11-21.
  44. "Isaiah 66:22 (King James Version)". BibleGateway. Retrieved 2007-11-15.
  45. "Isaiah 65:17 (King James Version)". BibleGateway. Retrieved 2007-11-15.
  46. "2 Peter 3:13 (King James Version)". BibleGateway. Retrieved 2007-11-15.
  47. "Revelation 21:1 (King James Version)". BibleGateway. Retrieved 2007-11-15.
  48. Henry M. Morris. "The Revelation Record". Tyndale House Inc. and Creation Life Publishers. {{cite book}}: Unknown parameter |copyright= ignored (help)


Wikisource Chisholm, Hugh, ed. (1911). "Apocalypse" . Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help) Public Domain This article incorporates text from a publication now in the public domainChisholm, Hugh, ed. (1911). Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help); Missing or empty |title= (help)