ವಿಷಯಕ್ಕೆ ಹೋಗು

ಆಪ್ತಮಿತ್ರ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಪ್ತಮಿತ್ರ (ಚಲನಚಿತ್ರ)
ಆಪ್ತಮಿತ್ರ
ನಿರ್ದೇಶನಪಿ. ವಾಸು
ನಿರ್ಮಾಪಕದ್ವಾರಕೀಶ್
ಪಾತ್ರವರ್ಗವಿಷ್ಣುವರ್ಧನ್, ರಮೇಶ್ ಸೌಂದರ್ಯಾ, ಪ್ರೇಮಾ ಅವಿನಾಶ್, ದ್ವಾರಕೀಶ್, ಶಿವರಾಂ, ಪ್ರಮಿಳಾ ಜೋಷಾಯ್
ಛಾಯಾಗ್ರಹಣಕೃಷ್ಣಕುಮಾರ್
ಬಿಡುಗಡೆಯಾಗಿದ್ದು೨೦೦೪
ಪ್ರಶಸ್ತಿಗಳು'ಅತ್ಯುತ್ತಮ ಚಿತ್ರ' - ಫಿಲ್ಮ್‍ಫೇರ್ ಪ್ರಶಸ್ತಿ
ಚಿತ್ರ ನಿರ್ಮಾಣ ಸಂಸ್ಥೆದ್ವಾರಕೀಶ್ ಚಿತ್ರ
ಸಾಹಿತ್ಯಚಿ. ಉದಯಶಂಕರ್, ವಿ. ಮನೋಹರ್, ಗೋಟೂರಿ, ಕವಿರಾಜ್, ವಿ. ನಾಗೇಂದ್ರಪ್ರಸಾದ್
ಹಿನ್ನೆಲೆ ಗಾಯನಎಸ್.ಪಿ. ಬಾಲಸುಬ್ರಹ್ಮಣ್ಯಂ, ಹರಿಹರನ್, ಗುರುಕಿರಣ್, ಮಧು ಬಾಲಕೃಷ್ಣ, ರಾಜೇಶ್, ಉದಿತ್ ನಾರಾಯಣ್, ನಂದಿತಾ, ಚಿತ್ರ
ಇತರೆ ಮಾಹಿತಿಒಂದು ವರ್ಷ ಸತತವಾಗಿ ತೆರೆಕಂಡ ಹೆಗ್ಗಳಿಕೆ

'ಆಪ್ತಮಿತ್ರ' - ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರಗಳಲ್ಲೊಂದು. ಸಿನಿಮಾ ವಿಮರ್ಶಕರ ಪ್ರಕಾರ ಇತ್ತೀಚಿನ ಎಲ್ಲಾ ದಾಖಲೆಗಳನ್ನೂ ಮುರಿದು ಒಂದು ವರ್ಷದ ಸತತ ಪ್ರದರ್ಶನ ಪೂರೈಸಿದೆ. ಚಿತ್ರದ ನಿರ್ಮಾಪಕರು 'ಕನ್ನಡ ಚಿತ್ರರಂಗದ ಕುಳ್ಳ' ಎಂದೇ ಪ್ರಖ್ಯಾತರಾಗಿರುವ ದ್ವಾರಕೀಶ್.

ರಾಜ್ಯದ ಹಲವಾರು ಕಡೆ ಶತ ದಿನೊತ್ಸವ, ರಜತೋತ್ಸವ ಆಚರಿಸಿದ ಈ ಚಿತ್ರ ಒಂದು ವರ್ಷ ತೆರೆಕಂಡ ಸಾಧನೆ ಮಾಡಿದೆ. ಈ ಚಿತ್ರದ "ಪಟ ಪಟ", "ರಾ ರಾ", "ಕಣ ಕಣದೀ ಶಾರದೆ", "ಅಂಕು ಡೊಂಕು" ಹಾಡುಗಳು ಭಾರೀ ಜನಪ್ರಿಯತೆ ಗಳಿಸಿವೆ. ವಿಷ್ಣುವರ್ಧನ್ ರವರ ಮನೋವೈದ್ಯನ ಪಾತ್ರ ಅಮೋಘವೆಂದು ವಿಮರ್ಶಕರ ಅಭಿಪ್ರಾಯ. ನಟಿ ಸೌಂದರ್ಯ ಅವರ ನಾಗವಲ್ಲಿ ಪಾತ್ರ ಪ್ರೇಕ್ಷಕರ ಮನದಲ್ಲಿ ಮನೆಮಾಡುವಂತದ್ದೆಂದು ವಿಮರ್ಶಕರು ಬಣ್ಣಿಸುತ್ತಾರೆ. ಅಮೇರಿಕಾದಲ್ಲೂ ಪ್ರದರ್ಶನ ಕಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಚಿತ್ರ ತಮಿಳಿನಲ್ಲಿ "ಚಂದ್ರಮುಖಿ" ಯಾಗಿ ಬಿಡುಗಡೆಯಾಗಿದೆ. ರಜನೀಕಾಂತ್, ಜ್ಯೋತಿಕಾ, ಪ್ರಭು ಚಂದ್ರಮುಖಿ ಚಿತ್ರದ ಪಾತ್ರವರ್ಗದಲ್ಲಿದ್ದಾರೆ."ಚಂದ್ರಮುಖಿ" ಚಿತ್ರವನ್ನೇ ತೆಲುಗು ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು.ಹಿಂದಿ ಭಾಷೆಯಲ್ಲಿ "ಭೂಲ್ ಭುಲಯ್ಯಾ" ಎಂದು ಬಿಡುಗಡೆಯಾಯಿತು. ಅಕ್ಷಯ್ ಕುಮಾರ್,ಶೈನಿ ಅಹೂಜಾ,ವಿದ್ಯಾ ಬಾಲನ್,ಅಮೀಷಾ ಪಟೇಲ್, ಚಿತ್ರದ ಪಾತ್ರವರ್ಗದಲ್ಲಿದ್ದರು.ಬೆಂಗಾಲಿ ಭಾಷೆಯಲ್ಲಿ "ರಾಜ್ ಮಹಲ್" ಎಂದು ಚಿತ್ರ ತಯಾರಾಯಿತು. ಪ್ರೋಸೇನ್ ಜಿತ್ ಚಟರ್ಜಿ,ಅಭಿಷೇಕ್ ಚತರ್ಜಿ,ಅನು ಚೌಧರಿ,ರಚನಾ ಬ್ಯಾನರ್ಜಿ ಚಿತ್ರದ ತಾರಾಬಳಗದಲ್ಲಿದ್ದವರು.ಇವೆಲ್ಲವಕ್ಕೂ ಮೂಲ ಚಿತ್ರ ಮಲಯಾಳಂ ಭಾಷೆಯಲ್ಲಿ ಬಂದ "ಮಣಿಚಿತ್ರತಾಳ್", ಮೋಹನ್ ಲಾಲ್,ಸುರೇಶ್ ಗೋಪಿ,ಶೋಭನಾ,ವಿನಯ ಪ್ರಕಾಶ್ ಮುಂತಾದವರು ನಟವರ್ಗದಲ್ಲಿದ್ದವರು.