ರಚನಾ ಬ್ಯಾನರ್ಜಿ
ರಚನಾ ಬ್ಯಾನರ್ಜಿ | |
---|---|
ಜನನ | 2nd October 1974 ಕೋಲ್ಕತ್ತ, ಪಶ್ಚಿಮ ಬಂಗಾಳ, ಭಾರತ |
ರಾಷ್ಟ್ರೀಯತೆ | ಭರತೀಯ |
ವೃತ್ತಿ(ಗಳು) | ನಟಿ, ಮಾಡೆಲ್ ಆಂಕರ್ |
ಸಕ್ರಿಯ ವರ್ಷಗಳು | ೧೯೯೪-ಪ್ರಸಕ್ತ |
ಸಂಗಾತಿ(s) | ಸಿದ್ಧಾಂತ ಮಹಾಪಾತ್ರ (೧೯೯೪ರಲ್ಲಿ ವಿಚ್ಚೇದನ) ಪ್ರೋಬಲ್ ಬಸು (m. ೨೦೦೭) |
ಮಕ್ಕಳು | ಪ್ರೋನಿಲ ಬಸು |
ಓಡಿಯಾ ಮತ್ತು ಬಂಗಾಳಿ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಭಾರತೀಯ ಚಲನಚಿತ್ರ ನಟಿ. ಅವರು ೧೯೯೪ ರ ಮಿಸ್ ಕೋಲ್ಕತಾ ಆಗಿ ಆಯ್ಕೆಯಾದರು. ರಚನಾ ಅವರು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ ಬ್ಯೂಟಿಫುಲ್ ಸ್ಮೈಲ್ ಅನ್ನು ಗೆದ್ದ ನಂತರ ಚಲನಚಿತ್ರ ರಂಗಕೆ ಅಡಿ ಇಟ್ಟರು. ಅವರು ಕನ್ನಡ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. [೧]
ಆರಂಭಿಕ ಜೀವನ
[ಬದಲಾಯಿಸಿ]೧೯೭೪ ರ ಅಕ್ಟೋಬರ್ ೨ ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಜನಿಸಿದರು. ಆಕೆ ತನ್ನ ಹೆತ್ತವರ ಏಕೈಕ ಮಗು. ಅವರ ಮೂಲ ಹೆಸರು ಝುಮ್ಜುಮ್ ಬ್ಯಾನರ್ಜಿ. ನಿರ್ದೇಶಕ ಪ್ರೊವತ್ ರಾಯ್ ತಮ್ಮ ಮೊದಲ ಚಿತ್ರವಾದ ದುರಾಂತ ಪ್ರೇಮ್ (೧೯೯೩) ಎಂಬ ಹೆಸರಿನಲ್ಲಿ ಮರುನಾಮಕರಣ ಮಾಡಿದರು.
ವೃತ್ತಿಜೀವನ
[ಬದಲಾಯಿಸಿ]ಪ್ರೊಸೇನ್ ಜಿತ್ ಚಟರ್ಜಿಯೊಂದಿಗೆ ಸುಮಾರು ೩೫ ಚಲನಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಬಹುತೇಕ ಅವೆಲ್ಲಾ ಹಿಟ್ ಚಿತ್ರಗಳಾಗಿವೆ.
[೩]
ಅವರು ತಮ್ಮ ಮೊದಲ ಪತಿ ಹೆಚ್ಚಾಗಿ ಸಿದ್ಧಾಂತ ಮಹಾಪಾತ್ರರೊಂದಿಗೆ ಹಲವು ಓಡಿಯಾ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ರಚನಾ ಅಮಿತಾಭ್ ಬಚ್ಚನ್ ಅವರೊಂದಿಗೆ ಹಿಂದಿ ಚಿತ್ರ ಸೂರ್ಯವಂಶಂನಲ್ಲಿದ್ದರು.
ನಟನೆಗೆ ಪ್ರಾಮುಖ್ಯತೆ ಇರುವ ಹಲವು ಬಂಗಾಳಿ ರೇಮೇಕ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡದ್ದು ರಚನಾರ ಹೆಗ್ಗಳಿಕೆ.
ಮೀನಾಕ್ಷಿ ಶೇಷಾದ್ರಿ ಹಿಂದಿಯಲ್ಲಿ ನಟಿಸಿದ ದಾಮಿನಿ ಚಿತ್ರದ ಬಂಗಾಳಿ ರೀಮೇಕ್ ಚಿತ್ರ ಬಿದ್ರೋಹಿನಿ ನಾರಿ, ಆಪ್ತಮಿತ್ರ ಚಿತ್ರದ ಬಂಗಾಳಿ ರೀಮೇಕ್ ರಾಜ್ ಮಹಲ್ ಹೀಗೆ ಹಲವು ಪಾತ್ರಗಳನ್ನು ನಟಿಸಿದ ಹಿರಿಮೆ ರಚನಾರದ್ದು.
ತೆಲುಗು ಚಿತ್ರರಂಗದಲ್ಲಿ ರಾಯುಡು, ಉಪೇಂದ್ರರೊಂದಿಗೆ ರಾ, ಸುಮನ್ ರೊಂದಿಗೆ ಪೆದ್ದ ಮನುಶುಲು, ಲಾಹಿರಿ ಲಾಹಿರಿ ಲಾಹಿರಿಲೋ ಹೀಗೆ ಹಲವು ನಟರ ಜೊತೆ ನಟಿಸಿದ್ದ ರಚನಾರ ಪ್ರಸಿದ್ದ ಚಿತ್ರ ಚಿರ್ಂಜೀವಿಯವರ ಜೊತೆ ನಟಿಸಿದ ಬಾವಗಾರು ಬಾಗುನ್ನಾರಾ.
ನಟನೆಯನ್ನು ಹೊರತುಪಡಿಸಿ, ಜನಪ್ರಿಯ ಬೆಂಗಾಲಿ ಬರವಣಿಗೆಯ ಟಿವಿ ಪ್ರದರ್ಶನವಾದ ದಿದಿ ನಂ. 1 ಅನ್ನು ಬ್ಯಾನರ್ಜಿ ಆಂಕರ್ ಆಗಿ ಕಾರ್ಯ್ ನಿರ್ವಹಿಸಿದ್ದರು, ಇದು ವಾರದ ದಿನಗಳಲ್ಲಿ ಜೀ ಬಾಂಗ್ಲಾದಲ್ಲಿ ಪ್ರಸಾರವಾಗುತ್ತದೆ. ೫ ಏಪ್ರಿಲ್ ೨೦೧೩ ರಂದು ಸ್ಟುಡಿಯೊದಲ್ಲಿ ಟೋಲ್ಲಿಗಂಜ್ನಲ್ಲಿ ಬೆಂಕಿ ಅನಾಹುತ ಸಂಭವಿಸಿತು. ಆ ಅವಘದದಲ್ಲಿ ರಚನಾ ಅಸ್ವಸ್ಥರಾದರು. ಕೋಲ್ಕತ್ತಾ ನಗರದ ಆಸ್ಪತ್ರೆಗೆ (ಅರಬಿಂದೋ ಸೇವಾ ಸದಾನ್) ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಕಿರುತೆರೆಯಲ್ಲಿ ಷೂಟಿಂಗ್ ನಡೆವ ವೇಳೆ ನಡೆದ ಬಹು ದೊಡ್ಡ ಅವಘಡಗಳಲ್ಲಿ ಇದೂ ಸಹ ಒಂದು. [೪]
ವೈಯಕ್ತಿಕ ಜೀವನ
[ಬದಲಾಯಿಸಿ]ಓಡಿಯಾ ಸೂಪರ್ ಸ್ಟಾರ್ ನಟ ಮತ್ತು ಸಂಸದ ಸಿದ್ಧಾಂತ ಮಹಾಪಾತ್ರರನ್ನು ವರಿಸಿದ ರಚನಾ, ಆರು ವರ್ಷದ ಸಂಸಾರ ನಡೆಸಿದರು. ಜೀವನದ ನಂತರ ೨೦೦೪ ರಲ್ಲಿ ಕಟಕ್ ನಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದರು. ಅವರು ಓಡಿಯಾ ಚಲನಚಿತ್ರ ಉದ್ಯಮವನ್ನು ತೊರೆದರು. ಸಿದ್ಧಾಂತ ಮಹಾಪಾತ್ರ ರಚನಾರ ವಿಚ್ಚೇದನದ ನಂತರ ಮರುಮದುವೆಯಾಗಿ ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಬಿಜು ಜನತಾ ದಳ ಪಕ್ಷದಿಂದ ಬೆಹ್ರಾಂಪುರ ಕ್ಷೇತ್ರದಿಂದ ಆಯ್ಕೆಯಾದರು. [೫]
ಹಲವು ಸಂದರ್ಶನಗಳಲ್ಲಿ, ತಾವು ರಚನಾರೊಂದಿಗೆ ಇಂದಿಗೂ ನಟಿಸಲು ಸಿದ್ಧ ಎಂದು ಮುಕ್ತ ಮನಸ್ಸಿನಿಂದ ಹೇಳಿಕೊಂಡಿದ್ದರು. ರಚನಾ ಅವರು ೨೦೦೭ರಲ್ಲಿ ಪ್ರೊಬಲ್ ಬಸು ಅವರನ್ನು ಮದುವೆಯಾದರು ಮತ್ತು ಅವರ ಮಗನನ್ನು ಪ್ರೋನಿಲ್ ಬಸು ಎಂದು ಹೆಸರಿಸಿದ್ದಾರೆ. [೬]
ಇತ್ತೀಚಿನ ವರದಿಗಳ ಪ್ರಕಾರ ರಚನಾ ಬ್ಯಾನರ್ಜಿ ಪ್ರೊಬಲ ಬಸುರೊಂದಿಗೆ ವಾಸವಿಲ್ಲ. [೭]
ಪ್ರಶಸ್ತಿಗಳು
[ಬದಲಾಯಿಸಿ]- ಕಲಾಕಾರ್ ಪ್ರಶಸ್ತಿ
- ಭಾರತ್ ನಿರ್ಮಾಣ್ ಸಂಸ್ಥೆಯ ಪ್ರಶಸ್ತಿ
- ಒಡಿಯಾ ರಾಜ್ಯ ಪ್ರಶಸ್ತಿ
- ಬಂಗಾಳ ಸರ್ಕಾರದ ರಾಜ್ಯ ಪ್ರಶಸ್ತಿ (ವಿಶೇಷ ಚಿತ್ರ ಪ್ರಶಸ್ತಿ)
"Kalakar award winners" (PDF). Kalakar website. Archived from the original (PDF) on 25 April 2012. Retrieved 16 October 2012. {{cite web}}
: Unknown parameter |deadurl=
ignored (help)</ref>
ಉಲ್ಲೇಖಗಳು
[ಬದಲಾಯಿಸಿ]- ↑ Sandeep Mishra (11 April 2009). "Sidhant runs into Rachana". The Times Of India. Retrieved 2015-04-27.
- ↑ "ಸಿದ್ಧಾಂತ ಮಹಾಪಾತ್ರ". indiablooms. 10 June 2012. Archived from the original on 11 ಏಪ್ರಿಲ್ 2016. Retrieved 23 April 2016.
- ↑ "ಪ್ರೊಸೇನ್ ಜಿತ್ ಚಟರ್ಜಿಯೊಂದಿಗೆ ಸುಮಾರು ೩೫ ಚಲನಚಿತ್ರ". indiablooms. 10 June 2012. Retrieved 23 April 2016.
- ↑ "Three injured in fire at reality show set". Times Of India. Archived from the original on 2014-12-04. Retrieved 2015-04-27.
- ↑ "Rachna & I knew each other inside out". The Telegraph. Archived from the original on 2017-01-18. Retrieved 2018-05-20.
- ↑ Priyanka Dasgupta (10 June 2012). "I'll love to work with Sidhant: Rachna Banerjee". The Times of India. Retrieved 23 April 2016.
- ↑ test. "Actress Rachana". updateodisha.