ಜಾನ್ ವಾಲಿಸ್
ಜಾನ್ ವಾಲಿಸ್ (1616-1703) ಒಬ್ಬ ಇಂಗ್ಲಿಷ್ ಗಣಿತವಿದ. ಅನುಕಲನಶಾಸ್ತ್ರದ ವಿಕಾಸದಲ್ಲಿ ಮಹತ್ತರ ಕಾಣಿಕೆ ನೀಡಿದವನೆಂದು ಪ್ರಸಿದ್ಧ. 1616 ನವೆಂಬರ್ 22ರಂದು ಜನಿಸಿದ. ಐಸಾಕ್ ನ್ಯೂಟನ್ (1642-1727) ಬರುವ ಅದೇ ಮೊದಲ ರಂಗಪ್ರವೇಶಿಸಿದ ಪ್ರತಿಭಾನ್ವಿತ ಗಣಿತಜ್ಞ. ಅನಂತದ ಪ್ರತೀಕ ‘∞’ಯನ್ನು ಗಣಿತಕ್ಕೆ ತಂದವನೇ ಈತ.[೧]
ಜನನ, ವಿದ್ಯಾಭ್ಯಾಸ
[ಬದಲಾಯಿಸಿ]ಇಂಗ್ಲೆಂಡಿನಲ್ಲಿ ಕೆಂಟ್‌ನ ಅಶ್‌ಫೋರ್ಡ್ ಈತನ ಹುಟ್ಟೂರು. 15ನೆಯ ವಯಸ್ಸಿನಲ್ಲೇ ಲ್ಯಾಟಿನ್, ಗ್ರೀಕ್, ಹೀಬ್ರೂ, ತರ್ಕಶಾಸ್ತ್ರ ಹಾಗೂ ಹಿರಿಯ ಮಟ್ಟದ ಗಣಿತದಲ್ಲಿ ಪ್ರಾವೀಣ್ಯಗಳಿಸಿ ತಾನು ಓದುತ್ತಿದ್ದ ಫೆಲ್‌ಸ್ಟೆಡ್ ಶಾಲೆಯ ಅಧ್ಯಾಪಕರ ಮೆಚ್ಚಿನ ವಿದ್ಯಾರ್ಥಿಯಾದ.[೨] ಈತ ವೈದ್ಯನಾಗಬೇಕೆಂಬುದು ತಂದೆಯ ಆಸೆ. ಈ ಪ್ರಯುಕ್ತ ಮಗನನ್ನು ಕೇಂಬ್ರಿಜ್‌ನ ಎಮ್ಯಾನ್ಯುಯೆಲ್ ಕಾಲೇಜಿಗೆ ಸೇರಿಸಿದ (1632).[೩] ಮಾನವನಲ್ಲಿ ರಕ್ತಪರಿಚಲನಕ್ರಿಯೆ ಬಗ್ಗೆ ಆಗಷ್ಟೆ ಅಧ್ಯಯನ ಆರಂಭವಾಗಿದ್ದ ಕಾಲವದು. ಈ ಓದಿನ ಜೊತೆಗೇ ತನ್ನ ಮನಮೆಚ್ಚಿದ ಗಣಿತದ ಬಗ್ಗೆ ಹೆಚ್ಚಿನ ಒಲವು ಈತನಿಗೆ. ವಿಲಿಯಮ್ ಔಟ್ರೆಡ್ (1575-1660) ಎಂಬಾತನ ‘ಕ್ಲೇವಿಸ್ ಮ್ಯಾತೆಮೆಟಿಕ’ (ಗಣಿತಾಭ್ಯಾಸಕ್ಕೆ ಕೀಲಿಕೈಗಳು) ಕೃತಿಯಿಂದ ಪ್ರಭಾವಿತನಾಗಿ ಗಣಿತ ಲೋಕಕ್ಕೆ ತನ್ನನು ಸಮರ್ಪಿಸಿಕೊಳ್ಳಲು ಆದ್ಯ ಅರ್ಪಣೆ ಎಂದು ನಿರ್ಧರಿಸಿದ.
ವೃತ್ತಿಜೀವನ, ಸಾಧನೆಗಳು
[ಬದಲಾಯಿಸಿ]ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಜ್ಯಾಮಿತಿಯ `ಸವಿಲಿಯನ್ ಪೀಠ’ಕ್ಕೆ ಪ್ರೊಫೆಸರನಾಗಿ ನೇಮಕ (1649). ಧರ್ಮಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ತರ್ಕಶಾಸ್ತ್ರಗಳಲ್ಲಿಯೂ ಇವನಿಗೆ ಅಪಾರ ಆಸಕ್ತಿ. ಕಿವುಡ-ಮೂಕರಿಗೆ ಒಂದು ವಿಶಿಷ್ಟ ಬೋಧನಾ ಸಲಕರಣೆ ಸಿದ್ಧಪಡಿಸಿದ ಮೊದಲಿಗನೀತ.[೪]
ರೆನೆ ಡೇಕಾರ್ಟೇ (1596-1650) ಪ್ರಕಟಿಸಿದ್ದ ವಿಶ್ಲೇಷಣಾತ್ಮಕ ಜ್ಯಾಮಿತಿ (ಅನಲಿಟಿಕಲ್ ಜಾಮೆಟ್ರಿ) ಸಮಕಾಲೀನ ವಿದ್ವಾಂಸರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಈತ ಬರೆದ ಶಂಕು ವೇದಗಳು ಅಥವಾ ಶಂಕುಜಗಳು (ಕಾನಿಕ್ ಸೆಕ್ಷನ್ಸ್) ಪ್ರಬಂಧಗಳು ಡೇಕಾರ್ಟೇಯನ್ನು ಸಾಮಾನ್ಯ ಗಣಿತಜ್ಞರಿಗೆ ಅರ್ಥಮಾಡಿಸುವಲ್ಲಿ ಬಲು ಸಹಕಾರಿಯಾದುವು. ಶಂಕುಜಗಳು ಎರಡು ಆಯಾಮಗಳ ವಕ್ರರೇಖೆಗಳೆಂಬ ವ್ಯಾಖ್ಯೆ ಪಡೆದುವು. ಈತನ ಹೊಸರೀತಿಯ ಮಾರ್ಗ/ಸಾಧನೆಗಳಿಂದ ಶಂಕುಜಗಳು ಈಗ ಬಳಕೆಯಲ್ಲಿರುವಂತೆ ಮಾರ್ಪಾಡುಗೊಂಡುವು.
ಈತನ ಅತಿಪ್ರಮುಖ ಕೃತಿ ‘ಅರಿತ್‌ಮೆಟಿಕ ಇನ್ಫಿನಿಟೋರಮ್’ 1656 ರಲ್ಲಿ ಪ್ರಕಟವಾಯಿತು. ಡೇಕಾರ್ಟೇ ಮತ್ತು ಕವೆಲಿರಿ ಅವರ ವಿಧಾನಗಳನ್ನು ಈತ ವ್ಯವಸ್ಥಿತವಾಗಿ ವಿಶ್ಲೇಷಣೆಮಾಡಿ ವಿಶದೀಕರಿಸಿದ. ಗಣಿತದಲ್ಲಿ ಋಣ ಮತ್ತು ಅಪೂರ್ಣಾಂಕ ಘಾತಗಳ (powers - exponents) (ಉದಾಹರಣೆಗೆ: , ...) ಇತ್ಯಾದಿ ಬಳಕೆಗೆ ಹೊಸ ಅಂಕನವಿಧಾನ ರೂಪಿಸಿದ. ಅವಿಭಾಜ್ಯಗಳ ವಿಧಾನದಿಂದ ವಕ್ರಾಕೃತಿ y=xm ಮತ್ತು x-ಅಕ್ಷ (x-axis) ಮತ್ತು ಊರ್ಧ್ವಾಕ್ಷ (ordinate) x=h ನ ನಡುವಿನ ಸಲೆಯನ್ನು ಲೆಕ್ಕಿಸುವ ವಿಧಾನವನ್ನು ಶೋಧಿಸಿದ. ಇವನ ‘ಮ್ಯಾಥೆಸಿಸ್ ಯೂನಿವರ್ಸಲಿಸ್’ ಕೃತಿಯ ಮೂಲಕ ಬೀಜಗಣಿತ, ಅಂಕಗಣಿತ ಮತ್ತು ಜ್ಯಾಮಿತಿಯ ಇನ್ನೂ ಹಲವಾರು ಅಂಕನಗಳನ್ನು ಪರಿಚಯಿಸಿದ (1657). ಈ ಸಂದರ್ಭದಲ್ಲೇ ಅನಂತದ ಚಿಹ್ನೆ ∞ ಕೂಡ ಬೆಳಕಿಗೆ ಬಂತು. ಈತನ ‘ಅರಿತ್‌ಮೆಟಿಕ ಇನ್ಫಿನಿಟೋರಮ್’ ಕೃತಿಯನ್ನು ನ್ಯೂಟನ್ ತನ್ನ ಶಾಲಾ ಅವಧಿಯಲ್ಲಿ ಶ್ರದ್ಧೆಯಿಂದ ಅಭ್ಯಸಿಸಿದುದನ್ನೂ ಅದು ತನ್ನ ದ್ವಿಪದ ಪ್ರಮೇಯ (ಬೈನಾಮಿಯಲ್ ತೀಯರಮ್) ಮತ್ತು ‘ಅನುಕಲನಶಾಸ್ತ್ರ’ಗಳನ್ನು ರೂಪಿಸಲು ಬಹಳ ಉಪಯೋಗವಾಯಿತೆಂಬುದನ್ನೂ ಉಲ್ಲೇಖಿಸಿದ್ದಾನೆ. ಇದು ಈತನ ಹಿರಿಮೆಗೆ ಸಾಕ್ಷಿ. ಸಂತತ ಅಪೂರ್ಣಾಂಕಗಳ ರಚನೆ ಮತ್ತು ಗುಣಲಕ್ಷಣಗಳ ಬಗ್ಗೆ ಇವನ ವ್ಯಾಖ್ಯೆಗೆ ಮಹತ್ತ್ವದ ಸ್ಥಾನ ಇದೆ.
ಈತ ರಾಯಲ್ ಸೊಸೈಟಿಯಲ್ಲಿ ಮೊತ್ತಮೊದಲಾಗಿ ಅಸಮಗ್ರ ಸ್ಥಿತಿಸ್ಥಾಪಕತ್ವ ಸ್ಥಿತಿಯಲ್ಲಿಯ ‘ಸಂಘಟನೆಯ ತತ್ತ್ವಗಳು’ ವಿಷಯಮಂಡನೆ ಮಾಡಿದ (1668). ವಸ್ತುಗಳ ಗುರುತ್ವ ಕೇಂದ್ರ ಮತ್ತು ಗತಿವಿಜ್ಞಾನ ಕುರಿತು ಸಂವೇಗ ಸಂರಕ್ಷಣೆ (conservation of momentum) ನಿಯಮಗಳ ಬಗ್ಗೆ ಮಹತ್ತ್ವದ ನಿಲವನ್ನು ಮಂಡಿಸಿದ. ಮಿಶ್ರಸಂಖ್ಯೆಗಳ ಪ್ರಾಥಮಿಕ ಪ್ರಸ್ತಾವನೆ ಒಳಗೊಂಡ ಟ್ರೀಟೈಸ್ ಆನ್ ಆಲ್ಜಿಬ್ರ ಗ್ರಂಥವನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದ (1685). ಅನಂತಾಲ್ಪಗಳನ್ನು (ಇನ್ಫಿನಿಟೆಸಿಮಲ್ಸ್) ಒಳಗೊಂಡ ಸಮಸ್ಯೆಗಳಿಗೆ ಸಾಮಾನ್ಯ ಜ್ಯಾಮಿತಿ ವಿಧಾನಗಳಿಂದ ಹೊರತಾದ ಬೀಜಗಣಿತ ವಿಧಾನಗಳ ಬಳಕೆ ಮೂಲಕ ಅವಕಲನ ಮತ್ತು ಅನುಕಲನಗಳ ವಿಧಾನಕ್ಕೆ ಹಾದಿ ಕಡಿದ ಖ್ಯಾತಿ ಈತನದು.
ಮರಣ
[ಬದಲಾಯಿಸಿ]ಈತ 1703 ಅಕ್ಟೋಬರ್ 28ರಂದು ನಿಧನನಾದ.
ಉಲ್ಲೇಖಗಳು
[ಬದಲಾಯಿಸಿ]- ↑ Chisholm, Hugh, ed. (1911). . Encyclopædia Britannica. Vol. 28 (11th ed.). Cambridge University Press. p. 284–285.
{{cite encyclopedia}}
: Cite has empty unknown parameters:|separator=
and|HIDE_PARAMETER=
(help) - ↑ Yule, G. Udny (1939). "John Wallis, D.D., F.R.S.". Notes and Records of the Royal Society of London. 2 (1): 74–82. doi:10.1098/rsnr.1939.0012. JSTOR 3087253.
- ↑ "Wallys, John (WLS632J)". A Cambridge Alumni Database. University of Cambridge.
- ↑ "Find could end 350-year science dispute". BBC. 26 July 2008. Retrieved 5 May 2018.
ಹೊರಗಿನ ಕೊಂಡಿಗಳು
[ಬದಲಾಯಿಸಿ]- The Correspondence of John Wallis in EMLO
- Dictionary of National Biography (in ಇಂಗ್ಲಿಷ್). London: Smith, Elder & Co. 1885–1900. .
- O'Connor, John J.; Robertson, Edmund F., "ಜಾನ್ ವಾಲಿಸ್", MacTutor History of Mathematics archive, University of St Andrews
- Galileo Project page
- "Archival material relating to ಜಾನ್ ವಾಲಿಸ್". UK National Archives.
- Portraits of ಜಾನ್ ವಾಲಿಸ್ at the National Portrait Gallery, London
- Works by ಜಾನ್ ವಾಲಿಸ್ at Post-Reformation Digital Library
- John Wallis (1685) A treatise of algebra Archived 2018-02-03 ವೇಬ್ಯಾಕ್ ಮೆಷಿನ್ ನಲ್ಲಿ. - digital facsimile, Linda Hall Library
- Wallis, John (1685). A Treatise of Algebra, both Historical and Practical. Shewing the Original, Progress, and Advancement thereof, from time to time, and by what Steps it hath attained to the Heighth at which it now is. Oxford: Richard Davis. doi:10.3931/e-rara-8842.
- Hutchinson, John (1892). . Men of Kent and Kentishmen (Subscription ed.). Canterbury: Cross & Jackman. pp. 139–140.
- Pages using duplicate arguments in template calls
- Pages using the JsonConfig extension
- CS1 errors: empty unknown parameters
- 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ
- CS1 ಇಂಗ್ಲಿಷ್-language sources (en)
- Articles incorporating Cite DNB template
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಗಣಿತಜ್ಞರು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ