ಗಿಮಿಕ್ (ಚಲನಚಿತ್ರ)
ಗಿಮಿಕ್ ೨೦೧೯ ರ ಕನ್ನಡ ಭಾಷೆಯ ಹಾಸ್ಯ-ಭಯಾನಕ ಚಲನಚಿತ್ರವಾಗಿದ್ದು, ಇದನ್ನು ನಾಗಣ್ಣ ನಿರ್ದೇಶಿಸಿದ್ದಾರೆ ಮತ್ತು ಸ್ಯಾಮಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ದೀಪಕ್ ಸಮಿದುರೈ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಗಣೇಶ್, ರೋನಿಕಾ ಸಿಂಗ್, ಚಿ. ಗುರುದತ್, ಶೋಬರಾಜ್, ರವಿಶಂಕರ್ ಗೌಡ ಮತ್ತು ಸುಂದರ್ ರಾಜ್ ೨೦೧೬ ರ ತಮಿಳು ಚಿತ್ರ ದಿಲ್ಲುಕು ದುಡ್ಡು ಚಿತ್ರದ ರಿಮೇಕ್ ಆಗಿದೆ . ಈ ಚಿತ್ರದ ಮೂಲಕ ರೋನಿಕಾ ಸಿಂಗ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. [೧] ಚಲನಚಿತ್ರವು ೧೫ ಆಗಸ್ಟ್ ೨೦೧೯ ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. [೨]
ಚಿತ್ರದ ಕಥೆಯಲ್ಲಿ ಬಡ ಹುಡುಗ ಗಣಿ (ಗಣೇಶ್ ನಿರ್ವಹಿಸಿದ್ದಾರೆ) ಮತ್ತು ಶ್ರೀಮಂತ ತಂದೆಯ ಮಗಳು,ಕುಸ್ತಿಪಟು ರಾಣಿ (ರೋನಿಕಾ ಸಿಂಗ್ ನಿರ್ವಹಿಸಿದ್ದಾರೆ) ಅವರನ್ನು ಬೇರ್ಪಡಿಸಲು ಪ್ರಯತ್ನಿಸುವ ತಂದೆಯ ಕುರಿತಾಗಿದೆ.
ಪಾತ್ರವರ್ಗ
[ಬದಲಾಯಿಸಿ]- ಗಣಿ ಪಾತ್ರದಲ್ಲಿ ಗಣೇಶ್
- ರಾಣಿ ಪಾತ್ರದಲ್ಲಿ ರೋನಿಕಾ ಸಿಂಗ್
- ಚಿ. ಗುರು ದತ್ ರಾಣಿಯ ಶೇಟ್ ತಂದೆಯಾಗಿ
- ಪ್ರತಾವ್ ಆಗಿ ರವಿಶಂಕರ್ ಗೌಡ
- ಶೋಬರಾಜ್
- ಮಂಡ್ಯ ರಮೇಶ್ ಹುಚ್ಚನಾಗಿ
- ಪುಲ್ಟಿ ಸುಂದರ್ ರಾಜ್ ಆಗಿ ಸುಂದರ್ ರಾಜ್
- ವಿಜಯ್ ಚೆಂಡೂರ್
ನಿರ್ಮಾಣ
[ಬದಲಾಯಿಸಿ]ಚಿತ್ರದ ನಿರ್ದೇಶಕ ನಾಗಣ್ಣ ಅವರು ಗಣೇಶ್ ಅವರೊಂದಿಗೆ ಈ ಹಾರರ್ ಕಾಮಿಡಿಯನ್ನು ಪ್ರಾರಂಭಿಸಿದರು, ಇದನ್ನು ಶ್ರೀಲಂಕಾ, ಮೈಸೂರು ಮತ್ತು ಬೆಂಗಳೂರಿನ ಮನೆಯೊಂದರಲ್ಲಿ ಚಿತ್ರೀಕರಿಸಲಾಗಿದೆ . ಗಿಮಿಕ್ ಪಾತ್ರದಲ್ಲಿ ರವಿಶಂಕರ್ ಗೌಡ, ಸಾಧು ಕೋಕಿಲ, ಶೋಭರಾಜ್ ಮತ್ತು ಸುಂದರ್ ರಾಜ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ದೀಪಕ್ ಸಾಮಿ ಅವರು ತಮ್ಮ ಬ್ಯಾನರ್ ಸಾಮಿ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಈ ಚಿತ್ರದ ಮೂಲಕ ರೋನಿಕಾ ಸಿಂಗ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಜನವರಿಯಲ್ಲಿ ಚಿತ್ರೀಕರಣ ಮುಗಿದಿತ್ತು. [೩]
ಸಂಗೀತ
[ಬದಲಾಯಿಸಿ]ಚಿತ್ರದ ಸವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ ಮತ್ತು ಕವಿರಾಜ್ ಸಾಹಿತ್ಯವನ್ನು ರಚಿಸಿದ್ದಾರೆ.
ಎಲ್ಲ ಹಾಡುಗಳು ಕವಿರಾಜ್ ಅವರಿಂದ ರಚಿತ
ಹಾಡುಗಳ ಪಟ್ಟಿ | |||
---|---|---|---|
ಸಂ. | ಹಾಡು | ಹಾಡುಗಾರರು | ಸಮಯ |
1. | "ಹುಡುಗಿ ಹುಡುಗಿ" | ವ್ಯಾಸರಾಜ್, ಮಾನಸ ಹೊಳ್ಳ, ಸುನಿಲ್ ಗುಜಗೊಂಡ, ಚಂದನ್ ಗುಪ್ತ | ೩:೧೧ |
2. | "ಲಚ್ಮಿ ಲಚ್ಮಿ" | ಸಂಜಿತ್ ಹೆಗ್ಡೆ, ಇಂಪನಾ ಜಯರಾಜ್ | ೩:೩೫ |
3. | "ಶಂಕರಿ ಬನಶಂಕರಿ" | ವ್ಯಾಸರಾಜ್ ಸೋಸಲೆ ಮತ್ತು ಕೋರಸ್ | ೪:೪೩ |
ಒಟ್ಟು ಸಮಯ: | ೧೧:೨೯ |
ಮಾರ್ಕೆಟಿಂಗ್ ಮತ್ತು ಬಿಡುಗಡೆ
[ಬದಲಾಯಿಸಿ]ಚಿತ್ರದ ಅಧಿಕೃತ ಟ್ರೈಲರ್ ಅನ್ನು ಮೇ ೧೮,೨೦೧೯ ರಂದು ಬಿಡುಗಡೆಗೊಳಿಸಲಾಯಿತು [೪] ಚಿತ್ರದ ಅಧಿಕೃತ ಸ್ನೀಕ್ ಪೀಕ್ ಅನ್ನು ಮೇ ೨೫,೨೦೧೯ ರಂದು ಅನಾವರಣಗೊಳಿಸಲಾಯಿತು [೫]
ಚಿತ್ರವು ೧೫ ಆಗಸ್ಟ್ ೨೦೧೯ ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು.
ವಿಮರ್ಶೆಗಳು
[ಬದಲಾಯಿಸಿ]ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಯೋಜನೆ ಚಿತ್ರದ ಮೂಡ್‌ಗೆ ಸರಿಹೊಂದುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಶಾರದಾ ಅಭಿಪ್ರಾಯಪಟ್ಟಿದ್ದಾರೆ. ವಿಘ್ನೇಶ್ ವಾಸು ಅವರ ಛಾಯಾಗ್ರಹಣವನ್ನು ಶ್ಲಾಘಿಸಿದ ಶಾರದಾ, "ದೆವ್ವಗಳ ಸಹವಾಸದಲ್ಲಿ, ಹಾಸ್ಯಮಯ ತಿರುವುಗಳನ್ನು ಹೊಂದಿರುವ ಭಯಾನಕ ಚಿತ್ರವು ಒಂದು ಬಾರಿ ನೋಡುವಂತೆ ಇದೆ" ಎಂದು ಮುಕ್ತಾಯಗೊಳಿಸಿದರು. [೬] ಟೈಮ್ಸ್ ಆಫ್ ಇಂಡಿಯಾದ ವಿನಯ್ ಲೋಕೇಶ್ ಐದರಲ್ಲಿ ಮೂರು ನಕ್ಷತ್ರಗಳನ್ನು ನೀಡಿದರು ಮತ್ತು ಕಥೆಯು ಶುರು ಆಗಲು ಸಮಯ ತೆಗೆದುಕೊಂಡಿತು ಎಂದು ಗಮನಿಸಿದರು, ಆದರೆ ಅದರ ನಂತರ ಕೊನೆಯವರೆಗೂ 'ಸೀಟಿನ ಅಂಚಿನ ಕ್ಷಣಗಳು' ಇದ್ದವು. ಈ ಹಾರರ್-ಕಾಮಿಡಿಯಲ್ಲಿ ನಟ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ ಎಂದು ಲೋಕೇಶ್ ಮಾತು ಮುಗಿಸಿದರು. ನೀವು ಮೂಲವನ್ನು ವೀಕ್ಷಿಸದಿದ್ದರೆ, ಗಿಮಿಕ್ ಮನರಂಜನೆ ನೀಡುವುದು ಖಚಿತ. [೭]
ಉಲ್ಲೇಖಗಳು
[ಬದಲಾಯಿಸಿ]- ↑ Sharadhaa, A (17 August 2019). "'Gimmick' movie review: Horror tricks with comical twists". The New Indian Express. Retrieved 17 August 2019.
- ↑ "Gimmick Movie Review". Times of India. 15 August 2019. Retrieved 15 August 2019.
- ↑ "Ganesh to begin new year with horror comedy flick 'Gimmick". The News Minute. 7 January 2019.
- ↑ "Gimmick – Kannada New 2K Trailer – Ganesh – Ronica Singh – Arjun Janya – Naganna – Samy Pictures". YouTube. Anand Audio. 18 May 2019.
- ↑ "GIMMICK – Sneak Peek – HD Video – Ganesh – Ronica Singh – Arjun Janya – Naganna – Samy Pictures". YouTube. Anand Audio. 25 May 2019.
- ↑ "'Gimmick' movie review: Horror tricks with comical twists". The New Indian Express.
- ↑ "Gimmick Movie Review {3.0/5}: Critic Review of Gimmick by Times of India".