ರಣಜಿ ಟ್ರೋಫಿ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಕೊಂಡಿಗಳು, ಉಲ್ಲೇಖಗಳು ಬೇಕು. |
ರಣಜಿ ಟ್ರೋಫಿ | |
---|---|
ಚಿತ್ರ:Ranji Trophy logo.png | |
ರಣಜಿ ಟ್ರೋಫಿ ಇಂಗ್ಲೆಂಡ್‍ನ ಕೌಂಟಿ ಚಾಂಪಿಯನ್ಶಿಪ್ ಮತ್ತು ಆಸ್ಟ್ರೇಲಿಯಾದ ಶೆಫೀಲ್ಡ್ ಶೀಲ್ಡ್‌ಗೆ ಸಮಾನವಾದ ಪ್ರಾದೇಶಿಕ ಕ್ರಿಕೆಟ್ ಸಂಘಗಳ ತಂಡಗಳ ನಡುವೆ ಭಾರತದಲ್ಲಿ ಆಡಲಾಗುವ ಒಂದು ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ ಚಾಂಪಿಯನ್ಶಿಪ್. ಸ್ಪರ್ಧೆಗೆ ಇಂಗ್ಲೆಂಡ್ ಮತ್ತು ಸಸೆಕ್ಸ್ ಪರ ಕ್ರಿಕೆಟ್ ಆಡಿದ ಕುಮಾರ್ ಶ್ರೀ ರಂಜಿತ್‍ಸಿಂಗ್‍ಜಿ ಹೆಸರಿಡಲಾಗಿದೆ.
ಇತಿಹಾಸ
[ಬದಲಾಯಿಸಿ]ಜುಲೈ ೧೯೩೪ ರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸಭೆ ನಂತರ "ಭಾರತದ ಕ್ರಿಕೆಟ್ ಚಾಂಪಿಯನ್ಷಿಪ್" ಬಿಡುಗಡೆ ಮಾಡಲಾಯಿತು. ಸ್ಪರ್ಧೆಯ ಮೊದಲ ಪಂದ್ಯಗಳು ೧೯೩೪-೩೫ರಲ್ಲಿ ನಡೆದವು. ಟ್ರೋಫಿಯನ್ನು ಪಟಿಯಾಲದ ಮಹಾರಾಜ ಭುಪಿಂದರ್ ಸಿಂಗ್ ದಾನ ಮಾಡಿದರು. ಫೈನಲ್ನಲ್ಲಿ ಉತ್ತರ ಭಾರತವನ್ನು ಸೋಲಿಸಿದ ನಂತರ ಮೊದಲ ರಣಜಿ ಟ್ರೋಫಿ ಚಾಂಪಿಯನ್ಷಿಪ್ಅನ್ನು ಬಾಂಬೆ ಗೆದ್ದುಕೊಂಡಿತು.
ಭಾಗವಹಿಸುವವರು
[ಬದಲಾಯಿಸಿ]ರಾಜ್ಯ ತಂಡಗಳು ಮತ್ತು ಪ್ರಥಮ ದರ್ಜೆ ಸ್ಥಾನಮಾನದ ಕ್ರಿಕೆಟ್ ಸಂಘಗಳು ಮತ್ತು ಕ್ಲಬ್‍ಗಳು ರಣಜಿ ಟ್ರೋಫಿಯಲ್ಲಿ ಆಡಲು ಅರ್ಹರಾಗಿದ್ದಾರೆ. ಬಹುತೇಕ ಅಸೋಸಿಯೇಷನ್‍ಗಳು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಮತ್ತು ಮುಂಬಯಿ ಕ್ರಿಕೆಟ್ ಅಸೋಸಿಯೇಷನ್‍ನಂತೆ ಪ್ರಾದೇಶಿಕವಾಗಿವೆಯಾದರೂ, ಕೆಲವು ಅಖಿಲ ಭಾರತೀಯವಾಗಿವೆ ಉದಾ. ರೈಲ್ವೆ ಮತ್ತು ಸರ್ವಿಸಸ್.
ಈ ಕೆಳಗಿನ 37 ತಂಡಗಳು ರಣಜಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತವೆ.
- ಆಂಧ್ರ ಪ್ರದೇಶ
- ಅರುಣಾಚಲ ಪ್ರದೇಶ
- ಅಸ್ಸಾಂ
- ಬರೋಡಾ
- ಬೆಂಗಾಲ್
- ಬಿಹಾರ್
- ಛತ್ತೀಸಗಢ್
- ದೆಹಲಿ
- ಗೋವಾ
- ಗುಜರಾತ್
- ಹರ್ಯಾಣಾ
- ಹಿಮಾಚಲ್ ಪ್ರದೇಶ್
- ಹೈದರಾಬಾದ್
- ಜಮ್ಮು ಮತ್ತು ಕಾಶ್ಮೀರ
- ಝಾರ್ಖಂಡ್
- ಕರ್ನಾಟಕ
- ಕೇರಳ
- ಮಧ್ಯ ಪ್ರದೇಶ್
- ಮಹಾರಾಷ್ಟ್ರ
- ಮಣಿಪುರ
- ಮೇಘಾಲಯ
- ಮಿಝೋರಾಂ
- ಮುಂಬಯಿ
- ನಾಗಾಲ್ಯಾಂಡ್
- ಒಡಿಷಾ
- ಪುದುಚೇರಿ
- ಪಂಜಾಬ್
- ರೇಲ್ವೇಸ್
- ರಾಜಸ್ಥಾನ
- ಸೌರಾಷ್ಟ್ರ
- ಸಿಕ್ಕಿಂ
- ಸರ್ವಿಸಸ್
- ತಮಿಳು ನಾಡು
- ತ್ರಿಪುರ
- ಉತ್ತರ ಪ್ರದೇಶ್
- ಉತ್ತರಾಖಂಡ
- ವಿದರ್ಭ
ಸರಣಿಯ ಶೈಲಿ
[ಬದಲಾಯಿಸಿ]ಪ್ರಾರಂಭವಾದಾಗಿನಿಂದ ೨೦೦೧-೦೨ ಋತುವಿನ ತನಕ, ತಂಡಗಳನ್ನು ನಾಲ್ಕು ಅಥವಾ ಐದು ವಲಯಗಳಾಗಿ - ಉತ್ತರ, ಪಶ್ಚಿಮ, ಪೂರ್ವ, ಮತ್ತು ದಕ್ಷಿಣ - ಭೌಗೋಳಿಕವಾಗಿ ಗುಂಪು ಮಾಡಲಾಗಿತ್ತು. ಕೇಂದ್ರ ವಲಯವನ್ನು ೧೯೫೨-೫೩ ರಲ್ಲಿ ಸೇರಿಸಲಾಯಿತು. ೧೯೫೬-೫೭ ರವರೆಗೆ ಆರಂಭಿಕ ಪಂದ್ಯಗಳನ್ನು ನಾಕೌಟ್ ಆಧಾರದ ಮೇಲೆ ವಲಯಗಳೊಳಗೆ ಆಡಲಾಗುತ್ತಿತ್ತು, ಮತ್ತು ನಂತರ ಒಂದು ಲೀಗ್ ಆಧಾರದ ಮೇಲೆ, ವಿಜೇತ ತಂಡವನ್ನು ನಿರ್ಧರಿಸಲು ಆಡಲಾಗುತ್ತಿದೆ. ನಂತರ, ಪ್ರತ್ಯೇಕ ವಲಯ ವಿಜೇತರು ನಾಕ್ಔಟ್ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿದ್ದರು. ನಂತರ ರಣಜಿ ಟ್ರೋಫಿ ವಿಜೇತರನ್ನು ನಿರ್ಧರಿಸುವ ಫೈನಲ್ ಪಂದ್ಯವನ್ನು ಆಡಲಾಗುತ್ತಿತ್ತು. ೧೯೭೦-೭೧ ಋತುವಿನಿಂದ, ನಾಕೌಟ್ ಹಂತವನ್ನು ಪ್ರತಿ ವಲಯದ ಎರಡು ಅಗ್ರ ತಂಡಗಳು, ಒಟ್ಟು ಹತ್ತು ಅರ್ಹತಾ ತಂಡಗಳಿಗೆ ವಿಸ್ತರಿಸಲಾಯಿತು. ಇದನ್ನು ೧೯೯೨-೯೩ ರಲ್ಲಿ ಪ್ರತಿ ವಲಯಕ್ಕೆ ಮೂರು ತಂಡಗಳು, ಒಟ್ಟು ಹದಿನೈದು ಅರ್ಹತಾ ತಂಡಗಳಿಗೆ ಮತ್ತೆ ವಿಸ್ತರಿಸಲಾಯಿತು; ೧೯೯೬-೯೭ ಮತ್ತು ೧೯೯೯-೨೦೦೦ರ ನಡುವೆ, ಹದಿನೈದು ಅರ್ಹತಾ ತಂಡಗಳು ಐದು ತಂಡಗಳ ಮೂರು ಗುಂಪುಗಳಲ್ಲಿ, ದ್ವಿತೀಯ ಗುಂಪು ಹಂತದಲ್ಲಿ ಪೈಪೋಟಿ ನಡೆಸುತ್ತಿದ್ದವು, ಮತ್ತು ಪ್ರತಿಯೊಂದು ಗುಂಪಿನಲ್ಲಿ ಎರಡು ಅಗ್ರ ತಂಡಗಳು ನಾಕೌಟ್ ಹಂತದಲ್ಲಿ ಅರ್ಹತೆ ಪಡೆಯುತ್ತಿದ್ದವು. ಎಲ್ಲಾ ಇತರ ವರ್ಷಗಳಲ್ಲಿ, ಪೂರ್ಣ ಹದಿನೈದು ತಂಡದ ನಾಕೌಟ್ ಪಂದ್ಯಾವಳಿ ನಡೆದಿದೆ.
ವಲಯ ಪದ್ಧತಿಯನ್ನು ೨೦೦೨-೦೩ ಋತುವಿನಲ್ಲಿ ಕೈಬಿಟ್ಟು ಫಾರ್ಮ್ಯಾಟ್ ಅನ್ನು ಬದಲಾಯಿಸಲಾಯಿತು ಮತ್ತು ಎರಡು ವಿಭಾಗದ ರಚನೆಯನ್ನು ಅಳವಡಿಸಿಕೊಳ್ಳಲಾಯಿತು - ಹದಿನೈದು ತಂಡಗಳ ಎಲೈಟ್ ಗ್ರೂಪ್, ಮತ್ತು ಉಳಿದ ತಂಡಗಳನ್ನು ಹೊಂದಿರುವ ಪ್ಲೇಟ್ ಗ್ರೂಪ್. ಪ್ರತಿ ಗುಂಪು ಎರಡು ಉಪ ಗುಂಪುಗಳನ್ನು ಹೊಂದಿತ್ತು, ಇದರಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಾಗುತ್ತಿತ್ತು. ಪ್ರತಿ ಉಪ ಗುಂಪಿನಲ್ಲಿ ಮೊದಲ ಎರಡು ತಂಡಗಳು ವಿಜೇತರನ್ನು ನಿರ್ಣಯಿಸಲು ನಾಕ್ಔಟ್ ಟೂರ್ನಮೆಂಟ್‍ನಲ್ಲಿ ಸ್ಪರ್ಧಿಸುತ್ತಿದ್ದವು. ಪ್ರತಿ ಎಲೈಟ್ ಉಪ ಗುಂಪಿನಲ್ಲಿ ಕೊನೆಯದಾಗಿ ಬಂದ ತಂಡ ಕೆಳಮಟ್ಟಕ್ಕೆ ವರ್ಗಾವಣೆಗೊಳ್ಳುತ್ತದೆ, ಮತ್ತು ಎರಡೂ ಪ್ಲೇಟ್ ಗ್ರೂಪ್ ಫೈನಲ್ ತಂಡಗಳು ಮುಂದಿನ ಋತುವಿನಲ್ಲಿ ಬಡ್ತಿ ಹೊಂದುತ್ತಿದ್ದವು. ೨೦೦೬-೦೭ ಋತುವಿನಲ್ಲಿ, ವಿಭಾಗಗಳನ್ನು ಸೂಪರ್ ಲೀಗ್ ಮತ್ತು ಪ್ಲೇಟ್ ಲೀಗ್ ಎಂದು ವರ್ಗೀಕರಿಸಲಾಯಿತು.
2018-19 ರ ಋತುವಿನಿಂದ ನೈರುತ್ಯ ಭಾರತದ ತಂಡಗಳಿಗೆ ರಣಜಿ ಪಂದ್ಯಾವಳಿಯಲ್ಲಿ ಆಡಲು ಅನುಮತಿ ನೀಡಲಾಯಿತು. ಆ ಕಾರಣ, ಪಂದ್ಯಾವಳಿಯಲ್ಲಿ, ಕೆಲವು ಬದಲಾವಣೆಗಳನ್ನು ಮಾಡಲಾಯಿತು. ತಂಡಗಳನ್ನು 4 ಗುಂಪುಗಳಲ್ಲಿ ವಿಭಜಿಸಲಾಯಿತು, ಆ ಗುಂಪುಗಳೆಂದರೆ: ಏ, ಬಿ, ಸಿ ಮತ್ತು ಪ್ಲೇಟ್. ಈ ನಾಲ್ಕು ಗುಂಪುಗಳಿಂದ 8 ತಂಡಗಳು ಮುಂದಿನ ಹಂತವಾದ ಉಪಾಂತ್ಯ ಪೂರ್ವ ಹಂತಕ್ಕೆ ಆಯ್ಕೆಯಾಗುತ್ತವೆ. ಏ ಮತ್ತು ಬಿ ಗುಂಪು ಸೇರಿ 5 ತಂಡಗಳು, ಸಿ ಇಂದ 2 ತಂಡಗಳು ಮತ್ತು ಪ್ಲೇಟ್ ಇಂದ 1 ತಂಡ. ಜನವರಿ 15, 2019 ರಿಂದ ಉಪಾಂತ್ಯ ಪೂರ್ವ ಪಂದ್ಯಗಳು ನಡೆಯಲಿವೆ. ಎ ಗುಂಪಿನಿಂದ ವಿದರ್ಭ, ಸೌರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್, ಬಿಯಿಂದ ಕೇರಳ, ಸಿಯಿಂದ ರಾಜಸ್ಥಾನ ಮತ್ತು ಉತ್ತರ ಪ್ರದೇಶ್ ಹಾಗೂ ಪ್ಲೇಟ್ ಗುಂಪಿನಿಂದ ಉತ್ತರಾಖಂಡ್ ತಂಡಗಳು ಅರ್ಹತೆಯನ್ನು ಪಡೆದಿವೆ.