ವಿಷಯಕ್ಕೆ ಹೋಗು

ಮುಖ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಖದ ಸ್ನಾಯುಗಳನ್ನು ತೋರಿಸುವ ಮುಂಪಾರ್ಶ್ವ ರೂಪ

ಮುಖವು ಇಂದ್ರಿಯ ಶಕ್ತಿಯ ಕೇಂದ್ರ ಶರೀರ ಪ್ರದೇಶವಾಗಿದೆ ಮತ್ತು ಮಾನವರಲ್ಲಿ ಹಾಗೂ ಅಸಂಖ್ಯಾತ ಇತರ ಪ್ರಜಾತಿಗಳಲ್ಲಿ ಭಾವನೆಯ ಅಭಿವ್ಯಕ್ತಿಯಲ್ಲಿಯೂ ಬಹಳ ಮಹತ್ವದ್ದಾಗಿದೆ. ಮುಖವು ಸಾಮಾನ್ಯವಾಗಿ ಪ್ರಾಣಿಗಳ ಅಥವಾ ಮಾನವರ ಶಿರದ ಮುಂಭಾಗದ ಮೇಲ್ಮೈ ಮೇಲೆ ಇರುತ್ತದೆ,[] ಆದರೆ ಎಲ್ಲ ಪ್ರಾಣಿಗಳೂ ಮುಖಗಳನ್ನು ಹೊಂದಿರುವುದಿಲ್ಲ.[] ಮುಖವು ಮಾನವ ಗುರುತಿಗೆ ಮಹತ್ವದ್ದಾಗಿದೆ, ಮತ್ತು ಕಲೆಗಳ ಅಥವಾ ಬೆಳವಣಿಗೆಯ ವಿರೂಪತೆಗಳಂತಹ ಹಾನಿ ಕೇವಲ ದೈಹಿಕ ಅನಾನುಕೂಲವನ್ನು ಮೀರಿದ ಪರಿಣಾಮ ಹೊಂದಿರುತ್ತದೆ.


ಮಾನವ ತಲೆಯ ಮುಂದಿನ ಭಾಗವನ್ನು ಮುಖವೆಂದು ಕರೆಯಲಾಗುತ್ತದೆ. ಇದು ಹಲವಾರು ಪ್ರತ್ಯೇಕ ಪ್ರದೇಶಗಳನ್ನು ಹೊಂದಿರುತ್ತದೆ. ಇವುಗಳ ಮುಖ್ಯ ಗುಣಲಕ್ಷಣಗಳೆಂದರೆ:

  • ಹಣೆಯು ಕೂದಲ ಅಂಚಿನ ಆಚೆಗೆ ಚರ್ಮ, ಪಾರ್ಶ್ವದಲ್ಲಿ ಕಣತಲೆಗಳ ಮತ್ತು ಕೆಳಗೆ ಹುಬ್ಬುಗಳು ಹಾಗೂ ಕಿವಿಗಳನ್ನು ಎಲ್ಲೆಯಾಗಿ ಹೊಂದಿರುತ್ತದೆ.
  • ಕಣ್ಣುರೆಪ್ಪೆಗಳು ಮತ್ತು ರೆಪ್ಪೆಗೂದಲಿನಿಂದ ರಕ್ಷಿತವಾಗಿರುವ ಗೂಡಿನಲ್ಲಿರುವ ಕಣ್ಣುಗಳು.
  • ವಿಶಿಷ್ಟವಾದ ಮೂಗಿನ ಆಕಾರ, ಮೂಗಿನ ಹೊಳ್ಳೆಗಳು ಮತ್ತು ಮೂಗಿನ ವಿಭಾಜಕ ಭಿತ್ತಿ.
  • ದವಡೆ ಎಲುಬು ಮತ್ತು ಕೆಳದವಡೆಯನ್ನು ಆವರಿಸಿರುವ ಕೆನ್ನೆಗಳು, ದರ ತುದಿಯೇ ಗದ್ದ.
  • ಬಾಯಿ, ಜೊತೆಗೆ ಫ಼ಿಲ್ಟ್ರಮ್‍ನಿಂದ ವಿಭಾಜಿತವಾದ ಮೇಲಿನ ತುಟಿ, ಕೆಲವೊಮ್ಮೆ ಹಲ್ಲುಗಳು ಕಾಣಿಸುವಂತೆ ಮಾಡುತ್ತದೆ.

ಮೌಖಿಕ ನೋಟ ಮಾನವನ ಗುರುತಿಸುವಿಕೆ ಮತ್ತು ಸಂವಹನಕ್ಕಾಗಿ ಅತ್ಯಗತ್ಯವಾಗಿದೆ. ಮಾನವರಲ್ಲಿ ಮುಖದ ಸ್ನಾಯುಗಳು ಭಾವನೆಗಳ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಡುತ್ತವೆ.

ಮುಖವು ಸ್ವತಃ ಮಾನವ ಶರೀರದ ಬಹಳ ಸೂಕ್ಷ್ಮವಾದ ಪ್ರದೇಶವಾಗಿದೆ ಮತ್ತು ಮಿದುಳು ಅನೇಕ ಮಾನವ ಇಂದ್ರಿಯಗಳ ಪೈಕಿ ಯಾವುದರಿಂದಾದರೂ ಪ್ರಚೋದಿತವಾದಾಗ ಇದರ ಭಾವ ಬದಲಾಗಬಹುದು. ಉದಾಹರಣೆಗೆ ಸ್ಪರ್ಶ, ತಾಪಮಾನ, ವಾಸನೆ, ರುಚಿ, ಶ್ರವಣಶಕ್ತಿ, ಚಲನೆ, ಹಸಿವು, ಅಥವಾ ದೃಶ್ಯ ಪ್ರಚೋದಕಗಳು.

ಮುಖವು ಒಬ್ಬ ವ್ಯಕ್ತಿಯನ್ನು ಅತ್ಯುತ್ತಮವಾಗಿ ವ್ಯತ್ಯಾಸಮಾಡುವ ಲಕ್ಷಣವಾಗಿದೆ. ಮಿದುಳಿನ ವಿಶೇಷ ಪ್ರದೇಶಗಳು ಮೌಖಿಕ ಗುರುತಿಸುವಿಕೆಯನ್ನು ಸಾಧ್ಯವಾಗಿಸುತ್ತವೆ; ಇವು ಹಾನಿಗೊಂಡಾಗ, ಮುಖಗಳನ್ನು ಗುರುತಿಸುವುದು ಅಸಾಧ್ಯವಾಗಬಹುದು, ನಿಕಟ ಕುಟುಂಬ ಸದಸ್ಯರ ಮುಖಗಳನ್ನು ಕೂಡ.

ಉಲ್ಲೇಖಗಳು

[ಬದಲಾಯಿಸಿ]
  1. Moore, Keith L.; Dalley, Arthur F.; Agur, Anne M. R. (2010). Moore's clinical anatomy. United States of America: Lippincott Williams & Wilkins. pp. 843–980. ISBN 978-1-60547-652-0.
  2. "Year of Discovery, Faceless and Brainless Fish". 2011-12-29. Archived from the original on 2014-10-06. Retrieved December 11, 2013.


"https://kn.wikipedia.org/w/index.php?title=ಮುಖ&oldid=1126403" ಇಂದ ಪಡೆಯಲ್ಪಟ್ಟಿದೆ