ಮಾನವ ಮೂಗು
ಗೋಚರ
ಮಾನವ ಮೂಗಿನ ಗೋಚರವಾಗುವ ಭಾಗವು ಹೊಳ್ಳೆಗಳನ್ನು ಹೊಂದಿರುವ ಮುಖದ ಚಾಚಿಕೊಂಡಿರುವ ಭಾಗವಾಗಿದೆ. ಮೂಗಿನ ಆಕಾರವು ಬಹುತೇಕ ಮೃದ್ವಸ್ಥಿಯನ್ನು ಹೊಂದಿರುವ ಮತ್ತು ಹೊಳ್ಳೆಗಳನ್ನು ಪ್ರತ್ಯೇಕಿಸುವ ಒಂದರಿ ಮೂಳೆ ಮತ್ತು ನಾಸಿಕ ಪೊರೆಗೋಡೆಯಿಂದ ನಿರ್ಧರಿಸಲ್ಪಡುತ್ತದೆ. ಸರಾಸರಿಯಾಗಿ ಗಂಡಿನ ಮೂಗು ಹೆಣ್ಣಿನ ಮೂಗಿಗಿಂತ ದೊಡ್ಡದಾಗಿರುತ್ತದೆ.ಸಾಮಾನ್ಯವಾಗಿ ಪುರುಷರ ಮೂಗು ಸ್ತ್ರೀಯರ ಮೂಗಿಗಿಂತ ಉದ್ದವಾಗಿರುತ್ತದೆ.ಮ್ಮೂಗಿನ ಕಾರ್ಟಿಲೆಜ್ ಮತ್ತು ಮೂಗಿನ ಮೂಳೆಗಳು ,ಮೂಗಿನ ಆಕಾರವನ್ನು ನಿರ್ಧರಿಸುತ್ತದೆ. ಮೂಗಿನ ಹೊಳ್ಳೆಗಳನ್ನು ಸೆಪ್ಟಲ್ ಕಾರ್ಟಿಲೆಜ್ ಬೇರ್ಪಡಿಸುತ್ತದೆ.ಮೂಗು ದೇಹದ ಘ್ರಾಣ ಸಂಬಂಧಿ ವ್ಯವಸ್ತೆಯ ಒನೆ ಭಾಗ.ಮೂಗಿನಲ್ಲಿರುವ ಮೂಗಿನ ಲೋಳೆಗೆ ಧೂಲಿನಿಂದ ಕಿರಿಕಿರಿಯುಂಟಾದಾಗ ನಾವು ಸೀನುತ್ತೇವೆ.ಸೀನುವುದರಿಂದ ನಮ್ಮ ಪಕ್ಕದಲ್ಲಿರುವವರಿಗೆ ಹಲವಾರು ಕಾಯಿಲೆ ಹರಡಬಹುದು.ಏಕೆಂದರೆ ನಾವು ಸೀನಿದಾಗ ಏರೋಸಾಲ್ ಗಳು ನಮ್ಮ ವಾತಾವರಣದಲ್ಲಿ ಹರಡಿ ಕ್ರಿಮಿ ಕೀಟಾಣುಗಳನ್ನು ಆಕರ್ಷಿಸುತ್ತದೆ.