ವಿಷಯಕ್ಕೆ ಹೋಗು

ಸೌರಕಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೌರಕಲೆ
  • ಮೇಲೆ: 2014 ಅಕ್ಟೋಬರ್‍ 23 ಮತ್ತು ಸೆಪ್ಟಂಬರ್‍ 2011 ರ ಭಾಗಶಃ ಸೂರ್ಯ ಗ್ರಹಣದಲ್ಲಿ ಕಂಡ ಸೌರಕಲೆ ಪ್ರದೇಶ 2192 []
  • ಮಧ್ಯ: ಬೆಳಕಿನ ಕಿರಣಗಳ ವರ್ಣಪಂಕ್ತಿಯಲ್ಲಿ ಸೌರಕಲೆಯ ಸಮೀಪ ನೋಟ(ಎಡ) ಮತ್ತು ಅತಿ ನೇರಳೆ ಬೆಳಕಲ್ಲಿ(ಬಲ), TRACE ವೀಕ್ಷಣಾಲಯದ ಫೋಟೋ.
  • ಕೆಳಗೆ: 320,000 ಕಿ.ಮೀ.ವರೆಗೆ ಹರಡಿರುವ ಸೌರಕಲೆಗಳ ದೊಡ್ಡ ಸಮೂಹ.

ಸೌರಕಲೆಗಳು ಸೂರ್ಯನ ಉಜ್ವಲ ದ್ಯುತಿಗೋಳದಲ್ಲಿ ( Photosphere) ತಾತ್ಕಾಲಿಕವಾಗಿ ನಡೆಯುವ ಒಂದು ವಿದ್ಯಮಾನ.ಇವುಗಳು ಆಗಾಗ ಒಂಟೊಂಟಿಯಾಗಿ ಅಥವಾ ಭಾರೀ ಗುಂಪು ಗುಂಪಾಗಿ ಚಿತ್ರ ವಿಚಿತ್ರ ಆಕಾರಗಳಲ್ಲಿ ಮೈದಳೆವ ಕಪ್ಪು ಮಚ್ಚೆಗಳು.

ಗುಣಲಕ್ಷಣಗಳು

[ಬದಲಾಯಿಸಿ]

ಸೌರಕಲೆಗಳದು ಕಲ್ಪನಾತೀತ ವಿಸ್ತಾರ. ಇವುಗಳ ವ್ಯಾಸ 16 ಕಿ.ಮೀ.ನಿಂದ [] 1.6 ಲಕ್ಷ ಕಿ.ಮೀ ಗಳವರೆಗಿರುತ್ತದೆ [].ಕೆಲವನ್ನು ದೂರದರ್ಶಕದ ನೆರವಿಲ್ಲದೆ ನೋಡಬಹುದು []. ಸೌರಕಲೆಗಳು ಸ್ಥಿರವೂ ಅಲ್ಲ, ಶಾಶ್ವತವೂ ಅಲ್ಲ. ಉದ್ಭವಿಸಿದ ನೆಲೆಗಳಿಂದ ಪ್ರತಿ ಸೆಕೆಂಡಿಗೆ ಕೆಲ ನೂರು ಮೀಟರ್‍ಗಳ ವೇಗದಲ್ಲಿ ಸೂರ್ಯನ ಮೇಲ್ಮೈಯಲ್ಲಿ ಚಲಿಸುತ್ತಾ ಸಾಗುತ್ತವೆ.ಕೆಲ ದಿನಗಳಿಂದ ಒಂದೆರಡು ತಿಂಗಳುಗಳ ಕಾಲ ಉಳಿದಿರುತ್ತವೆ.ನಂತರ ನಿಧಾನವಾಗಿ ಸಾಯುತ್ತವೆ. ಸೌರಕಲೆಗಳ ಗುಂಪು ಒಂದು ತುದಿಯಿಂದ ಮತ್ತೊಂದು ತುದಿಗೆ 3 ಲಕ್ಷ ಕಿ.ಮೀ.ಗೂ ಅಧಿಕ ಅಗಲ ಹರಡಿ ಮೂಡಿರುವ ದಾಖಲೆಗಳಿವೆ.
ಸೌರಕಲೆಗಳು ವಾಸ್ತವವಾಗಿ ಕಪ್ಪು ಬಣ್ಣದವೇನಲ್ಲ.ಅವು ಸೂರ್ಯನ ಮೇಲ್ಮೈಯಲ್ಲಿ ತಾಪ ಕುಸಿದ ಪ್ರದೇಶಗಳು.ಸೂರ್ಯನ ಮೇಲ್ಮೈ ಸರಾಸರಿ ಉಷ್ಣತೆ 5,500 °C (5,780 K).ಆದರೆ ಕಲೆಗಳು ಮೂಡಿದ ಪ್ರದೇಶದ ಉಷ್ಣತೆ 2,700°C ರಿಂದ 4,200 °C (3,000 K ರಿಂದ 4,500 K). ಈ ತಾಪಾಂತರದಿಂದಾಗಿ ಸೌರಕಲೆಗಳು ಕಪ್ಪಾಗಿರುವಂತೆ ಕಾಣುತ್ತವೆ.

ಜೀವನ ಚಕ್ರ

[ಬದಲಾಯಿಸಿ]

ಸೌರಕಲೆಗಳ ಚಟುವಟಿಕೆಗಳ ಚಕ್ರವು ಪ್ರತಿ 11 ವರ್ಷಗಳಿಗೊಮ್ಮೆ ಪುನರಾವರ್ತನೆಗೊಳ್ಳುತ್ತದೆ.

ಸೂರ್ಯನ ಕಾಂತಕ್ಷೇತ್ರದಲ್ಲಿ ಉಂಟಾಗುವ ಏಳುಬೀಳುಗಳು ಸೌರಕಲೆಗಳು ಮೈದಳೆಯಲು ಕಾರಣ. ಸೂರ್ಯನಲ್ಲಿ ನಿರಂತರ ಕ್ರಿಯಾಶೀಲವಾಗಿರುವ ಬಲಿಷ್ಠ ಕಾಂತೀಯ ಬಲ ರೇಖೆಗಳು ಕೆಲಬಾರಿ ಕೆಲವೆಡೆಗಳಲ್ಲಿ ಇದ್ದಕ್ಕಿದ್ದಂತೆ ಸೂರ್ಯನ ಮೇಲ್ಮೈಯಲ್ಲಿ ಕುದಿ ಕುದಿವ ಅನಿಲಗಳ ಚಲನೆಗೆ ಅಡ್ಡ ನಿಲ್ಲುತ್ತವೆ. ಹಾಗಾದಾಗ ಅಂತಹ ಪ್ರದೇಶಗಳಲ್ಲಿ ಉಷ್ಣತೆ ಕುಸಿಯುತ್ತದೆ.ಹೀಗಾಗಿ ಆ ಪ್ರದೇಶಗಳು ಕಪ್ಪಾದಂತೆ ಗೋಚರಿಸುತ್ತವೆ.

ಆದರೆ ಹಾಗೆ ಉಕ್ಕುವ ಶಕ್ತಿಯ ಅಲೆಗಳನ್ನು ಒತ್ತಿ ಹಿಡಿದಿದ್ದ ಕಾಂತ ಕ್ಷೋಭೆ ಕೈ ಬಿಟ್ಟೊಡನೆ ಆ ವರೆಗೆ ಒತ್ತಡದಲ್ಲಿ ಉಳಿದಿದ್ದ ಶಕ್ತಿಯೆಲ್ಲ ಒಮ್ಮೆಗೇ ಸ್ಫೋಟಿಸಿ ಸೌರದ್ರವ್ಯವನ್ನು ಲಕ್ಷಾಂತರ ಕಿ.ಮಿ. ದೂರಕ್ಕೆ ಚಿಮ್ಮುತ್ತದೆ ಅತ್ಯಂತ ಉಗ್ರವಾದ ಸೌರಜ್ವಾಲೆ, ಕರೋನ(ಪ್ರಭಾವಲಯ)ದ ಮಾಸ್‌ ಇಜೆಕ್ಷನ್‌ ಗಳಂತಹ ವಿದ್ಯಮಾನಗಳನ್ನು ಸೃಜಿಸುತ್ತದೆ.

ಪ್ರತಿ 11 ವರ್ಷಗಳಿಗೊಮ್ಮೆ ಗರಿಷ್ಠ ಸಂಖ್ಯೆಯಲ್ಲಿ ಒಡಮೂಡುವ ಸೌರ ಕಲೆಗಳಿಂದ ಅಂತಹ ಕಾಲಗಳಲ್ಲಿ ಭೂ ವಾಯುಮಂಡಲದಲ್ಲಿ, ಭೂ ಹವಾಮಾನದಲ್ಲಿ ಭಾರೀ ಏರುಪೇರುಗಳು ಸಂಭವಿಸುತ್ತವೆ.

ಸಂಪುಟಗಳು

[ಬದಲಾಯಿಸಿ]

ಚಿತ್ರ ಸಂಪುಟ

[ಬದಲಾಯಿಸಿ]

ವೀಡಿಯೋ ಸಂಪುಟ

[ಬದಲಾಯಿಸಿ]
ಎನ್‍ಒಒಎ (NOAA) 875 ಸೌರಕಲೆ.
ಎನ್‍ಒಒಎ (NOAA) 875 ಸೌರಕಲೆಯ ಒಂದು ಸೌರಜ್ವಾಲೆ.
ಫೆಬ್ರವರಿ 2011 ರ ಪ್ರಾರಂಭವಾಗಿ ಎರಡು ವಾರಗಳವರೆಗೆ ನಿರಂತರ ಸಂಭವಿಸಿದ ಸೌರಕಲೆಗಳ ಗುಂಪಿನ ಹುಟ್ಟು ಮತ್ತು ವಿಕಾಸವನ್ನು ಪ್ರತಿ ಗಂಟೆಗೊಂದು ಚಿತ್ರದಂತೆ ದಾಖಲಿಸಿದ ದೃಶ್ಯಾವಳಿ.ಕ್ಯಾಮರವು ಸೌರ ಚಲನೆಯ ಜಾಡನ್ನು ಸಹ ದಾಖಲಿಸಿದೆ. ಇದರಿಂದ ಸಂವಹನ ಕೋಶಗಳ ಕಡೆಯುವಿಕೆಯಿಂದ ಹೊಳೆಯುವ ಸೂರ್ಯನ ಮೇಲ್ಮೈಯನ್ನು ಕಾಣಬಹುದು.
ಕೆಲವೇ ದಿನಗಳಲ್ಲಿ ಹುಟ್ಟಿ ಸಾಯವ ಸೌರಕಲೆಗಳ ಗುಂಪುಗಳು. ಸೌರ ಚಕ್ರ 24ರ ಆರಂಭದ 13 ದಿನಗಳ ಅವಧಿಯಲ್ಲಿ SDO/HMI ಉಪಕರಣದಿಂದ ತೆಗೆದ ಚಿತ್ರಗಳಿಂದ ಈ ಚಲನಚಿತ್ರವನ್ನು ತಯಾರಿಸಲಾಗಿದೆ.

ಬಾಹ್ಯಕೊಂಡಿಗಳು

[ಬದಲಾಯಿಸಿ]

ಸೌರಕಲೆ ದತ್ತಾಂಶ

[ಬದಲಾಯಿಸಿ]
  • "11,000 ವರ್ಷದ ಸೌರಕಲೆ ಸಂಖ್ಯೆ ಪುನರ್ನಿರ್ಮಾಣ". ಗ್ಲೋಬಲ್ ಚೇಂಜ್ ಮಾಸ್ಟರ್ ಡೈರೆಕ್ಟರಿ.2005 ಮಾರ್ಚ್ 11 ರಂದು ಮರುಸಂಪಾದಿಸಲಾಗಿದೆ. Archived from the original on 2015-11-02. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  • "ಪ್ರಾಚೀನ ಕಾಲದಿಂದ ಇಲ್ಲಿಯವರೆಗಿನ ಸೌರಕಲೆ ಸಂಖ್ಯೆಗಳು - NOAA / NGDC". ಜಾಗತಿಕ ಬದಲಾವಣೆ ಮಾಸ್ಟರ್ ಕೋಶ. ಮಾರ್ಚ್ 2005 11 ರಂದು ಮರುಸಂಪಾದಿಸಲಾಯಿತು. Archived from the original on 2015-09-14. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
    • "ಸೌರಕಲೆ ಸಂಖ್ಯೆಗಳು". NOAA NGDC ಸೌರ ದತ್ತಾಂಶ ಸೇವೆಗಳು. 2010 ರ ಜೂನ್ 21 ರಂದು ಮರುಸಂಪಾದಿಸಲಾಯಿತು.
      • ಅಂತಾರಾಷ್ಟ್ರೀಯ ಸೌರಕಲೆ ಸಂಖ್ಯೆ- ಸೌರಕಲೆಗಳ ಗರಿಷ್ಠ ಮತ್ತು ಕನಿಷ್ಠ ಸಂಖ್ಯೆ ಕ್ರಿ.ಶ.1610-ಪ್ರಸ್ತುತ; ವಾರ್ಷಿಕ ಸಂಖ್ಯೆ ಕ್ರಿ.ಶ. 1700-ಪ್ರಸ್ತುತ; ಮಾಸಿಕ ಸಂಖ್ಯೆ ಕ್ರಿ.ಶ. 1749-ಪ್ರಸ್ತುತ; ದೈನಂದಿನ ಮೌಲ್ಯಗಳು ಕ್ರಿ.ಶ.1818-ಪ್ರಸ್ತುತ; ಮತ್ತು ಉತ್ತರ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಸೌರಕಲೆ ಸಂಖ್ಯೆಗಳು. ಮೆಕ್‍ನಿಶ್-ಲಿಂಕನ್ ಸೌರಕಲೆ ಭವಿಷ್ಯವನ್ನೂ ಸಹ ಸೇರಿಸಲಾಗಿದೆ.
      • ಅಮೆರಿಕನ್ ಸೌರಕಲೆ ಸಂಖ್ಯೆಗಳನ್ನು 1945 ರಿಂದ ಪ್ರಸ್ತುತ.
      • ಪ್ರಾಚೀನ ಸೌರಕಲೆ ದತ್ತಾಂಶ ಕ್ರಿ.ಪೂ.165 ರಿಂದ ಕ್ರಿ.ಶ.1684
      • ಸೌರಕಲೆ ಗುಂಪಿನ ಸಂಖ್ಯೆಗಳು (ಡೌಗ್ ಹಾಯ್ಟ್ ಮರು ಮೌಲ್ಯಮಾಪನ) 1610-1995
  • ವಿಲ್ಸನ್, ರಾಬರ್ಟ್ M. (April 2014). ಸೌರಕಲೆ ಸಂಖ್ಯೆಗಳ ಹೋಲಿಕೆ, ಸೌರಕಲೆ ಗುಂಪುಗಳು ಸಂಖ್ಯೆ, ಮತ್ತು ಸೌರಕಲೆ ಪ್ರದೇಶ 1875-2013 ರ ಪರಿವರ್ತನೆಗಳು. ಹಂಟ್ಸ್ವಿಲ್, AL: ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್, ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್. ಮಾರ್ಚ್ 2015 13 ರಂದು ಮರುಸಂಪಾದಿಸಲಾಗಿದೆ.


ಉಲ್ಲೇಖಗಳು

[ಬದಲಾಯಿಸಿ]
  1. Gentle giant sunspot region 2192
  2. "How Are Magnetic Fields Related To Sunspots?". NASA. Retrieved 22 February 2013.
  3. "Sun". HowStuffWorks. Retrieved 22 February 2013.
  4. harvard.edu


"https://kn.wikipedia.org/w/index.php?title=ಸೌರಕಲೆ&oldid=1226308" ಇಂದ ಪಡೆಯಲ್ಪಟ್ಟಿದೆ