ರೋಸಾಲಿಂಡ್ ಫ್ರಾಂಕ್ಲಿನ್
ರೋಸಾಲಿಂಡ್ ಫ್ರಾಂಕ್ಲಿನ್ | |
---|---|
Born | ರೋಸಾಲಿಂಡ್ ಫ್ರಾಂಕ್ಲಿನ್ ೨೫-೦೭-೧೯೨೦ |
Died | ೧೬-೦೪-೧೯೬೮ |
Cause of death | ಅಂಡಾಶಯ ಕ್ಯಾನ್ಸರ್ |
Nationality | ಬ್ರಿಟಿಷ್ |
Occupation | ಕ್ಷ-ಕಿರಣ ಸ್ಫಟಿಕ ವಿಜ್ಞಾನಿ |
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |
ರೋಸಾಲಿಂಡ್ ಎಲ್ಸೀ ಫ್ರಾಂಕ್ಲಿನ್ (೨೫ ಜುಲೈ ೧೯೨೦-೧೬ ಎಪ್ರಿಲ್ ೧೯೬೮) ಒಬ್ಬ ಪ್ರಖ್ಯಾತ ಆಂಗ್ಲ ರಸಾಯನತಜ್ಞೆ ಮತ್ತು ಕ್ಷ-ಕಿರಣ ಸ್ಫಟಿಕ ವಿಜ್ಞಾನಿ[೧].ಡಿ.ಎನ್.ಎ (ಡಿ ಆಕ್ಸಿ ರೈಬೊನ್ಯುಕ್ಲಿಕ್ ಆಸಿಡ್) ,ಆರ್.ಎನ್.ಎ(ರೈಬೊನ್ಯುಕ್ಲಿಕ್ ಆಸಿಡ್) ,ವೈರಾಣು,ಕಲ್ಲಿದ್ದಲು ಮತ್ತು ಗ್ರಾಫೈಟ್ ಗಳ ಆಣ್ವಿಕ ರಚನೆಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ಇವರ ಕೊಡುಗೆಗಳು ಅಪಾರ.ಕಲ್ಲಿದ್ದಲು ಮತ್ತು ವೈರಾಣುಗಳ ಮೇಲಿನ ಇವರ ಕೃತಿಗಳು ಅವರ ಜೀವಿತಾವಧಿಯಲ್ಲಿ ಮೆಚ್ಚುಗೆ ಪಡೆದಿತ್ತಾದರೂ,ಇವರು ಡಿ.ಎನ್.ಎ ಸಂಶೋಧನೆಗೆ ನೀಡಿದ ಕೊಡುಗೆಗಳನ್ನು ಹೆಚ್ಚಾಗಿ ಮರಣೋತ್ತರವಾಗಿ ಗುರುತಿಸಲಾಯಿತು.ರೊಸಾಲಿಂಡ್ ಫ್ರಾಂಕ್ಲಿನ್ ನಂತೆ ತನ್ನ ಬದುಕು ಮತ್ತು ಕೃತಿಗಳ ವಿಚಾರವಾಗಿ ಹೆಚ್ಚು ವಿವಾದಕ್ಕೀಡಾದ ಯಾವುದೇ ಇತರ ಮಹಿಳಾ ವಿಜ್ಞಾನಿ ಬಹುಶಃ ಇಲ್ಲ[೨].
ಕುಟುಂಬದ ಹಿನ್ನೆಲೆ
[ಬದಲಾಯಿಸಿ]ರೋಸಾಲಿಂಡ್ ಫ್ರಾಂಕ್ಲಿನ್ ೧೯೨೦ ಜುಲೈ೨೦ರಂದು ಇಂಗ್ಲೆಂಡಿನ ಲಂಡನ್ ನಗರದಲ್ಲಿ ಶ್ರೀಮಂತ ಮತ್ತು ಪ್ರಭಾವಿ ಬ್ರಿಟಿಷ್ ಯೆಹೂದಿ ಕುಟುಂಬದಲ್ಲಿ ಜನಿಸಿದರು.ಇವರ ತಂದೆ ಎಲ್ಲಿಸ್ ಆರ್ಥರ್ ಫ್ರಾಂಕ್ಲಿನ್ ರಾಜಕೀಯವಾಗಿ ಉದಾತ್ತ ಲಂಡನ್ ವ್ಯಾಪಾರಿಯಾಗಿದ್ದು ನಗರದ ವರ್ಕಿಂಗ್ ಮೆನ್ಸ್ ಕಾಲೇಜಿನಲ್ಲಿ ಕಲಿಸುತ್ತಿದ್ದರು ಮತ್ತು ಇವರ ತಾಯಿಯ ಹೆಸರು ಮ್ಯುರಿಯೆಲ್ ಫ್ರಾನ್ಸಿಸ್ ವಲೆಯ್.ರೊಸಾಲಿಂಡ್ ಹಿರಿಯ ಮಗಳಾಗಿದ್ದರು ಮತ್ತು ಐದು ಮಕ್ಕಳ ಕುಟುಂಬದಲ್ಲಿ ಎರಡನೆಯವಳಾಗಿದ್ದರು.ಇವರ ಕುಟುಂಬ ಸಕ್ರಿಯವಾಗಿ ವರ್ಕಿಂಗ್ ಮೆನ್ಸ್ ಕಾಲೇಜಿನಲ್ಲಿ ತೊಡಗಿಸಿಕೊಂಡಿತ್ತು.ಅಲ್ಲಿ ಇವರ ತಂದೆ ಸಂಜೆ ವಿದ್ಯುಚ್ಛಕ್ತಿ,ಕಾಂತೀಯತೆ,ಮತ್ತು ಗ್ರೇಟ್ ವಾರ್ ಇತಿಹಾಸದ ವಿಷಯಗಳನು ಕಲಿಸುತ್ತಿದ್ದರು ಹಾಗೂ ನಂತರ ಅಲ್ಲಿಯೇ ಉಪ ಪ್ರಾಂಶುಪಾಲರಾಗಿ ಮುಂದುವರೆದರು.ಫ್ರಾಂಕ್ಲಿನ್ ರ ಪೋಷಕರು ನಾಜಿಗಳಿಂದ ಪರಾರಿಯಾಗಿದ್ದ ಯೆಹೂದಿ ನಿರಾಶ್ರಿತರು ನೆಲೆಗೊಳ್ಳಲು ನೆರವಾಗುತ್ತಿದ್ದರು.
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಬಾಲ್ಯದಲ್ಲಿ ಫ್ರಾಂಕ್ಲಿನ್ ಅಸಾಧಾರಣ ತಾರ್ಕಿಕ ಸಾಮರ್ಥ್ಯವನ್ನು ತೋರಿಸಿದರು.ಆರನೆಯ ವಯಸ್ಸಿನಲ್ಲಿಯೇ ಅವರು ನೊರ್ಲಾಂಡ್ ಪ್ಲೇಸ್ ಸ್ಕೂಲ್,ಹಾಲೆಂಡ್ ಪಾರ್ಕ್ ಅವೆನ್ಯೂ,ಪಶ್ಚಿಮ ಲಂಡನ್ನಿನ ಖಾಸಗಿ ಶಾಲೆಯಲ್ಲಿ ತನ್ನ ಸಹೋದರನ ಜೊತೆ ಸೇರಿದರು.ಅವರು ಆರಂಭದಲ್ಲೇ ಕ್ರಿಕೆಟ್ ಮತ್ತು ಹಾಕಿಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು.ಒಂಭತ್ತು ವರ್ಷದವರಿದ್ದಾಗ ಇವರು ಸಸೆಕ್ಸ್ ನಲ್ಲಿರುವ ಲಿಂಡೋರ್ಸ್ ಸ್ಕೂಲ್ ಫಾರ್ ಯಂಗ್ ಲೇಡೀಸ್ ಎಂಬ ವಸತಿ ಶಾಲೆಯನ್ನು ಪ್ರವೇಶಿಸಿದರು.ಇವರು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಮಹಾನ್ ಪ್ರತಿಭೆಯನ್ನು ಸೇಂಟ್ ಪಾಲ್ಸ್ ಗರ್ಲ್ಸ್ ಸ್ಕೂಲ್,ಲಂಡನ್ನಿನಲ್ಲಿ ಪ್ರದರ್ಶಿಸಿದರು.ಫ್ರಾಂಕ್ಲಿನ್ ವಿಜ್ಞಾನವನ್ನು ಅತ್ಯಂತ ಉತ್ತಮವಾಗಿ ಅರಿತರು ಹಾಗೂ ನಂತರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಅಭ್ಯಸಿಸಿದರು.ಇವರು ಜರ್ಮನ್ ಮತ್ತು ಫ್ರೆಂಚ್ ಭಾಷೆಯನ್ನು ಸರಾಗವಾಗಿ ಕಲಿತರು,ನಂತರ ಇದು ಅವರ ವೃತ್ತಿಜೀವನದಲ್ಲಿ ಉಪಯುಕ್ತವಾಯಿತು.ಇವರು ೧೫ ವರ್ಷದವರಾಗಿದ್ದಾಗ ವಿಜ್ಞಾನಿಯಾಗಲು ನಿರ್ಧರಿಸಿದರು.ಇವರು ೧೯೩೮ರಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಪಾಸು ಮಾಡಿದರು.ಅಲ್ಲಿಂದ ಅವರು ೧೯೩೮ರಲ್ಲಿ ನ್ಯೂ ಹ್ಯಾಮ್ ಕಾಲೇಜ್, ಕೇಂಬ್ರಿಜ್ ನಲ್ಲಿ ಸೇರಿಕೊಂಡರು.೧೯೪೧ರಲ್ಲಿ ಪದವಿ ಪಡೆದ ನಂತರ,ಅವರಿಗೆ ಅನಿಲ ವರ್ಣರೇಖನದ ಮೇಲೆ ಕೆಲಸ ಮಾಡಲು ಸಂಶೋಧನಾ ವಿದ್ಯಾರ್ಥಿವೇತನ ನೀಡಲಾಯಿತು.ಆದರೆ ೧೯೪೨ರಲ್ಲಿ ಅದನ್ನು ಬಿಟ್ಟು ಬ್ರಿಟಿಷ್ ಕೋಲ್ ಯೂಟಿಲೈಸೇಷನ್ ರಿಸರ್ಚ್ ಅಸೋಸಿಯೇಷನ್ ನಲ್ಲಿ ಇವರು ಕೋಕ್ ನ ಸೂಕ್ಷ್ಮರಚನೆಯ ಮೇಲೆ ಕೆಲಸ ಮಾಡಿದರು.ತನ್ನ ಸಂಶೋಧನೆಯ ಪರಿಣಾಮವಾಗಿ,ಇವರು ೧೯೪೫ರಲ್ಲಿ ತಮ್ಮ ಡಾಕ್ಟರ್ ಆಫ್ ಫಿಲೋಸಫಿ (ಪಿ.ಹೆಚ್.ಡಿ) ಪದವಿಯನ್ನು ಕೇಂಬ್ರಿಡ್ಜ್ ನಿಂದ ಪಡೆದರು. thumbnail|right|ರೋಸಾಲಿಂಡ್ ಫ್ರಾಂಕ್ಲಿನ್ ಮತ್ತು ಆರ್.ಜಿ.ಗೋಸ್ಲಿಂಗ್ ಅವರಿಂದ ತೆಗೆದ ಡಿ.ಎನ್.ಎ ಯ 'ಬಿ' ರೂಪದ ಕ್ಷ-ಕಿರಣ ಸ್ಫಟಿಕಶಾಸ್ತ್ರದ ಸ್ವರೂಪದ ಛಾಯಾಚಿತ್ರ ಫೋಟೊ ೫೧
ಕೊಡುಗೆಗಳು ಮತ್ತು ಸಾಧನೆಗಳು
[ಬದಲಾಯಿಸಿ]ಫ್ರಾಂಕ್ಲಿನ್ ರವರನ್ನು ಸಂಶೋಧನಾ ಗುಂಪಿಗೆ ಸೇರಿಕೊಳ್ಳಲು ಜಾನ್ ರಾಂಡಾಲ್ ಅವರು ಕೇಳಿದ್ದರು.ಇವರನ್ನು ಕ್ಷ-ಕಿರಣ ಸ್ಫಟಿಕಶಾಸ್ತ್ರದ ಬಳಸಿಕೊಂಡು ಡಿ.ಎನ್.ಎ ಫೈಬರ್ ಅಧ್ಯಯಕ್ಕಾಗಿ ಒಂದು ಪ್ರಯೋಗಾಲಯ ಸ್ಥಾಪಿಸಿಕೊಡಲು ಕೇಳಲಾಗಿತ್ತು.ಇವರು ಡಿ.ಎನ್.ಎ ರಚನೆಯನ್ನು ನಿರ್ಧರಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದರು.ಫ್ರಾಂಕ್ಲಿನ್ ತಮ್ಮ ಭೌತರಸಾಯನವಿಜ್ಞಾನದ ಜ್ಞಾನವನ್ನು ಉಪಯೋಗಿಸಿ,ಕ್ಷ-ಕಿರಣ ಸ್ವರೂಪಗಳನ್ನು ಸುಲಭವಾಗಿ ಮತ್ತು ನಿಖರವಾಗಿ ವಿವರಿಸುವ ಸಲುವಾಗಿ ಅತ್ಯಂತ ತೆಳುವಾದ ಫೈಬರ್ ಗಳನ್ನು ತಯಾರಿಸಿದರು.ಇವರು ಡಿ.ಎನ್.ಎ ಯ 'ಎ' ಮತ್ತು 'ಬಿ' ರೂಪಗಳನ್ನು ಆವಿಷ್ಕರಿಸಿದರು.ಆದರೆ ತಮ್ಮ ಸಂಶೋಧನೆಯನ್ನು 'ಎ' ರೋಪದ ಮೇಲೆ ಕೇಂದ್ರೀಕರಿಸಿದರು.ಈ ರೂಪ ಸುರುಳಿಯಾಕಾರದ ರಚನೆಯನ್ನು ಹೊಂದಿರುವುದಿಲ್ಲ.ತಾನು ತನ್ನ ಚಿಂತನೆಯನ್ನು ಮೂರು ಆಯಾಮದ ಹೆಲಿಕ್ಸ್ ಎಂದು ಪರಿಷ್ಕರಿಸಿದೆನೆಂದು ಎಂದು ೨೪ನೇ ಫೆಬ್ರವರಿ ೧೯೫೩ರಂದು ತನ್ನ ಪ್ರಯೋಗಾಲಯದ ಪುಸ್ತಕದಲ್ಲಿ ದಾಖಲೆ ಮಾಡಿದರು.ಈ ವಾಸ್ತವದ ಇಪ್ಪತ್ತೈದು ವರ್ಷಗಳ ನಂತರ,ಫ್ರಾಂಕ್ಲಿನ್ ರ ಕೊಡುಗೆಯ ಮೊದಲ ಸ್ಪಷ್ಟ ವಾಚನ ಕಾಣಿಸಿಕೊಂಡಿತು.'ಡಬಲ್ ಹೆಲಿಕ್ಸ್'ನ ಪರಿಕಲ್ಪನೆ ಆರೋಪಗಳಡಿ ಸಮಾಧಿಯಾದರೂ,ಫ್ರಾಂಕ್ಲಿನ್ ಗೆ ಹೇಗೆ ತನ್ನ ಡೇಟಾವನ್ನು ವಿವರಿಸುವುದೆಂದು ಗೊತ್ತಿರಲಿಲ್ಲ.ಆದರೆ 'ನೇಚರ್' ಸಂಚಿಕೆಯಲ್ಲಿನ ಇವರ ಸ್ವಂತ ಪ್ರಕಟಣೆಯು ಡಿ.ಎನ್.ಎಯ ಕ್ಷ-ಕಿರಣ ಚಿತ್ರದ ಬಗ್ಗೆ ಹೆಚ್ಚು ಸ್ಪಷ್ಟಪಡಿಸಿದ ಮೊದಲ ಪ್ರಕಟಣೆಯಾಗಿತ್ತು.'ಡಬಲ್ ಹೆಲಿಕ್ಸ್' ಡಿ.ಎನ್.ಎ ಇತಿಹಾಸವನ್ನು ತನಿಖೆ ಮಾಡಲು ಹಲವಾರು ಜನರಿಗೆ ಸ್ಫೂರ್ತಿಯಾಯಿತು ಮತ್ತು ಫ್ರಾಂಕ್ಲಿನ್ ರ ಕೊಡುಗೆ ಅಲ್ಲಿಂದಾಚೆಗೆ ಡಬಲ್ ಹೆಲಿಕ್ಸ್ ಮಾರ್ಗವನ್ನು ಅನುಸರಿಸಿದವರಿಗೆ ಮೂಲ ವಸ್ತುಗಳ ಬಗ್ಗೆ ಮಾಹಿತಿಯನ್ನು ಒದಗಿಸಿತು.ಡಿ.ಎನ್.ಎ ಕೆಲಸದ ಭಾಗವನ್ನು ಮುಗಿಸಿದ ನಂತರ,ಫ್ರಾಂಕ್ಲಿನ್ ಟೊಬ್ಯಾಕೊ ಮೊಸಾಯಿಕ್ ಮತ್ತು ಪೋಲಿಯೊ ವೈರಸ್ ಗಳ ಮೇಲೆ ಪ್ರಥಮಾನ್ವೇಷಕನ ಕೆಲಸಕ್ಕೆ ಮುಂದಾದರು[೧].೧೯೫೧ರ ಸೆಮಿನಾರ್ ನಲ್ಲಿ ಫ್ರಾಂಕ್ಲಿನ್ ತಮ್ಮ ಉಪನ್ಯಾಸದಲ್ಲಿ ಡಿ.ಎನ್.ಎ ಅಣುವಿನ ಎರಡು ರೂಪಗಳನ್ನು ಮಂಡಿಸಿದರು ಮತ್ತು ಫಾಸ್ಫೇಟ್ ಘಟಕಗಳು ಅಣುವಿನ ಬಾಹ್ಯ ಭಾಗದಲ್ಲಿ ಇದೆ ಮತ್ತು ಅಣುವಿನ ಸ್ಥಿರತೆ ವಿಷಯದಲ್ಲಿ ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿರುವ ನೀರು ಅಣುವಿನಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿದೆ ಎಂಬ ವಿಷಯಗಳನ್ನು ತಿಳಿಸಿದರು.ವಾಸ್ತವವಾಗಿ,ಅಣುವಿನ ಒಂದು ಮಾದರಿ ನಿರ್ಮಿಸಲು ಎಲ್ಲಾ ನಂತರದ ಪ್ರಯತ್ನಗಳಿಗೆ ಆಧಾರವಾದ ಈ ಸತ್ಯಗಳನ್ನು ಸೂತ್ರೀಕರಿಸಿದವರಲ್ಲಿ ಮೊದಲಿಗರು ಫ್ರಾಂಕ್ಲಿನ್.ಇದರಿಂದಾಗಿ ಫ್ರಾಂಕ್ಲಿನ್ ಕ್ರಿಕ್ ಮತ್ತು ವ್ಯಾಟ್ಸನ್ ಮಾದರಿಗೆ ನಿರ್ಣಾಯಕ ಕೊಡುಗೆಗಳನ್ನು ನೀಡಿದರು[೨].ನೊಬೆಲ್ ಪ್ರಶಸ್ತಿ ನಿಯಮಗಳು ಮರಣೋತ್ತರ ನಾಮನಿರ್ದೇಶನಗಳನ್ನು ನಿಷೇಧಿಸುತ್ತವೆ ಮತ್ತು ರೋಸಾಲಿಂಡ್ ಫ್ರಾಂಕ್ಲಿನ್ ೧೯೫೮ರಲ್ಲಿ ಮೃತಪಟ್ಟಿದ್ದರಿಂದ ಅವರು ಪ್ರಶಸ್ತಿಯ ನಾಮನಿರ್ದೇಶನಕ್ಕೆ ಅರ್ಹರಿರಲಿಲ್ಲ,ತರುವಾಯ ಕ್ರಿಕ್,ವ್ಯಾಟ್ಸನ್ ಹಾಗೂ ವಿಲ್ಕಿನ್ಸ್ ನೊಬೆಲ್ ಪುರಸ್ಕಾರಕ್ಕೆ ಭಾಜನರಾದರು[೩].
ವೈಯಕ್ತಿಕ ಜೀವನ
[ಬದಲಾಯಿಸಿ]ಫ್ರಾಂಕ್ಲಿನ್ ರನ್ನು ಒಬ್ಬ ಉತ್ತಮ ಆಜ್ಞೇಯತಾವಾದಿಯೆಂದು ವರ್ಣಿಸಲಾಗುತ್ತದೆ.ಇವರ ಧಾರ್ಮಿಕ ನಂಬಿಕೆಯ ಕೊರತೆಯು ಯಾರ ಪ್ರಭಾವದಿಂದಲೂ ಹುಟ್ಟಿಕೊಳ್ಳಲಿಲ್ಲ,ಬದಲಿಗೆ ತನ್ನ ಜಿಜ್ಞಾಸೆಯ ಮನಸ್ಸಿನಿಂದ ಹುಟ್ಟಿಕೊಂಡಿತು.ಇವರು ದೇವರ ಅಸ್ತಿತ್ವದ ನಂಬಿಕೆಯನ್ನು ನಿರಾಕರಿಸುತ್ತಿದ್ದರು ಎಂದು ಅವರ ತಾಯಿ ನೆನಪಿಸಿಕೊಳ್ಳುತ್ತಾರೆ.ಫ್ರಾಂಕ್ಲಿನ್ ವಿಶೇಷವಾಗಿ ವಿದೇಶ ಪ್ರಯಾಣ ಮತ್ತು ಟ್ರೆಕಿಂಗ್ ಇಷ್ಟಪಡುತ್ತಿದ್ದರು.ಇವರು ಅಮೇರಿಕಾಕ್ಕೆ ಅನೇಕ ವೃತ್ತಿಪರ ಪ್ರವಾಸವನ್ನು ಕೈಗೊಂಡರು.ಕುಟುಂಬದಲ್ಲಿ ಇವರು 'ರೋಸ್' ಎಂದು ಕರೆಯಲ್ಪಡುತ್ತಿದ್ದರು.ಇವರು ಸಾಮಾನ್ಯವಾಗಿ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು.ಇವರು ಯಾರೊಂದಿಗೂ ಆಳವಾದ ಸಂಬಂಧವನ್ನು ಹೊಂದಿರಲಿಲ್ಲವೆಂದು ತೋರುತ್ತದೆ.
ಅನಾರೋಗ್ಯ ಮತ್ತು ಸಾವು
[ಬದಲಾಯಿಸಿ]ಮಧ್ಯ ೧೯೫೬ರಲ್ಲಿ,ಅಂದರೆ ಅಮೇರಿಕಾದ ಕೆಲಸಕ್ಕೆ ಸಂಬಂಧಿಸಿದ ಪ್ರವಾಸದ ಸಂದರ್ಭದಲ್ಲಿ ಫ್ರಾಂಕ್ಲಿನ್ ಮೊದಲ ಬಾರಿಗೆ ಆರೋಗ್ಯ ಸಮಸ್ಯೆಯಿದೆಯೆಂದು ಶಂಕಿಸಲು ಪ್ರಾರಂಭಿಸಿದರು.ಅದೇ ವರ್ಷದ ಸೆಪ್ಟೆಂಬರ್ ೪ರಂದು ನಡೆದ ಶಸ್ತ್ರಚಿಕಿತ್ಸೆ ಅವರ ಹೊಟ್ಟೆಯಲ್ಲಿದ್ದ ಎರಡು ಗಡ್ಡೆಗಳನ್ನು ಬಹಿರಂಗಗೊಳಿಸಿತು.ಈ ಅವದಿಯ ಮತ್ತು ಮುಂದಿನ ಆಸ್ಪತ್ರೆಯ ಅವಧಿಗಳಲ್ಲಿ ಫ್ರಾಂಕ್ಲಿನ್ ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಜೊತೆ ಉತ್ತಮ ಸಮಯವನ್ನು ಕಳೆದರು.ತನ್ನ ತಾಯಿಯ ನಿಯಂತ್ರಿಸಲಾಗದ ದುಃಖ ಮತ್ತು ಅಳುವುದು ಅವರನ್ನು ತುಂಬಾ ಅಸಮಾಧಾನಗೊಳಿಸುತ್ತಿದ್ದರಿಂದ ಫ್ರಾಂಕ್ಲಿನ್ ತನ್ನ ತಂದೆ ತಾಯಿಯ ಜೊತೆಗೆ ಉಳಿಯದಿರಲು ನಿರ್ಧರಿಸಿದಳು. ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ಸಮಯದಲ್ಲೂ ಫ್ರಾಂಕ್ಲಿನ್ ತನ್ನ ಕೆಲಸವನ್ನು ಮುಂದುವರೆಸಿದರು,ಮತ್ತು ಅವರ ಗುಂಪು ೧೯೫೬ರಲ್ಲಿ ಏಳು ಪತ್ರಿಕೆಗಳು ಮತ್ತು ೧೯೫೭ರಲ್ಲಿ ಆರು ಪತ್ರಿಕೆಗಳನ್ನು ಪ್ರಕಟಿಸಿತು.ನಂತರ ೧೯೫೭ರಲ್ಲಿ,ಫ್ರಾಂಕ್ಲಿನ್ ಮತ್ತೆ ಅನಾರೋಗ್ಯ ಪೀಡಿತರಾಗಿ ರಾಯಲ್ ಮಾರ್ಸ್ ಆಸ್ಪತ್ರೆಗೆ ದಾಖಲಾದರು.ಡಿಸೆಂಬರ್ ೨ರಂದು ತನ್ನ ಉಯಿಲನ್ನೂ ಸಹ ಬರೆದಿಟ್ಟರು.ಅವರು ಜನವರಿ ೧೯೫೮ರಲ್ಲಿ ಕೆಲಸಕ್ಕೆ ಮರಳಿದರು ಹಾಗೂ ಫೆಬ್ರುವರಿ ೨೫ರಂದು ಜೀವಭೌತವಿವಿಜ್ಞಾನದಲ್ಲಿ ಸಹಾಯಕ ಸಂಶೋಧಕರಾಗಿ ಭಡ್ತಿ ಪಡೆದರು.ಮತ್ತೆ ಮಾರ್ಚ್ ೩೦ರಂದು ಅನಾರೋಗ್ಯಕ್ಕೆ ತುತ್ತಾದರು.ಅವರು ೧೬ ಏಪ್ರಿಲ್ ೧೯೫೮ರಂದು ಲಂಡನ್ನಿನ ಚೆಲ್ಸಿಯಾದಲ್ಲಿ ಬ್ರಾಂಕೋನ್ಯುಮೋನಿಯಾ, ದ್ವಿತೀಯ ಕಾರ್ಸಿನೊಮ್ಯಾಟೋಸಿಸ್,ಮತ್ತು ಅಂಡಾಶಯದ ಕ್ಯಾನ್ಸರ್ ನಿಂದ ನಿಧನರಾದರು.ಕ್ಷ-ಕಿರಣ ವಿಕಿರಣಗಳ ಜೊತೆಗಿನ ಅವರ ಕೆಲಸವೇ ಅನಾರೋಗ್ಯದ ಸಂಭವನೀಯ ಅಂಶವೆಂದು ಪರಿಗಣಿಸಲಾಗಿದೆ.ಕುಟುಂಬದ ಇತರ ಸದಸ್ಯರೂ ಸಹ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ.
ಮರಣೋತ್ತರ ಮನ್ನಣೆಗಳು
[ಬದಲಾಯಿಸಿ]- ೧೯೮೨, ಐಯೊಟಾ ಸಿಗ್ಮಾ ಪೈ ಫ್ರಾಂಕ್ಲಿನ್ ರನ್ನು ರಾಷ್ಟ್ರೀಯ ಗೌರವ ಸದಸ್ಯರಾಗಿ ಗೊತ್ತುಪಡಿಸಿತು.
- ೧೯೯೩,ಕಿಂಗ್ಸ್ ಲಂಡನ್ ಕಾಲೇಜು ಹ್ಯಾಂಪ್ಸ್ಟೆಡ್ನಲ್ಲಿ ಕ್ಯಾಂಪಸ್ನಲ್ಲಿರುವ ಆರ್ಚರ್ಡ್ ನಿವಾಸಕ್ಕೆ ರೋಸಾಲಿಂಡ್ ಫ್ರಾಂಕ್ಲಿನ್ ಹಾಲ್ ಎಂದು ಮರುನಾಮಕರಣ ಮಾಡಿತು.
- ೧೯೯೫,ನ್ಯೂ ಹ್ಯಾಮ್ ಕಾಲೇಜು ರೋಸಾಲಿಂಡ್ ಫ್ರಾಂಕ್ಲಿನ್ ಕಟ್ಟಡವೆಂಬ ಪದವಿ ನಿವಾಸವನ್ನು ಕಟ್ಟಿಸಿ ಅದರ ಉದ್ಯಾನವನದಲ್ಲಿ ಅವರ ಪುತ್ಥಳಿಯನ್ನು ಸ್ಥಾಪಿಸಿತು.
- ೧೯೯೭,ಲಂಡನ್ ಸ್ಕೂಲ್ ಆಫ್ ಕ್ರಿಸ್ಟಲೋಗ್ರಾಫಿ ರೋಸಾಲಿಂಡ್ ಫ್ರಾಂಕ್ಲಿನ್ ಪ್ರಯೋಗಾಲಯವನ್ನು ತೆರೆಯಿತು.
- ೧೯೯೭,೧೯೯೭ರಲ್ಲಿ ಪತ್ತೆ ಆದ ಕ್ಷುದ್ರಗ್ರಹವನ್ನು ರೋಸ್ ಫ್ರಾಂಕ್ಲಿನ್ ಎಂದು ಹೆಸರಿಡಲಾಯಿತು.
- ೨೦೦೧,ಅಮೇರಿಕನ್ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಕ್ಯಾನ್ಸರ್ ಸಂಶೋಧನೆಯಲ್ಲಿ ಮಹಿಳೆಯರಿಗೆ ರೋಸಾಲಿಂಡ್ ಇ. ಫ್ರಾಂಕ್ಲಿನ್ ಅವಾರ್ಡ್ ಸ್ಥಾಪಿಸಲಾಯಿತು.
- ೨೦೦೩,ರಾಯಲ್ ಸೊಸೈಟಿ ನೈಸರ್ಗಿಕ ವಿಜ್ಞಾನ, ಎಂಜಿನಿಯರಿಂಗ್ ಅಥವಾ ತಾಂತ್ರಿಕತೆಗಳ ಇನ್ನಾವುದೇ ಕ್ಷೇತ್ರದಲ್ಲಿನ ಮಹೋನ್ನತ ಕೊಡುಗೆಗಾಗಿ ರೋಸಾಲಿಂಡ್ ಫ್ರಾಂಕ್ಲಿನ್ ಪ್ರಶಸ್ತಿ ಸ್ಥಾಪಿಸಲಾಯಿತು.
- ೨೦೦೬,ಜೀವವಿಜ್ಞಾನ ಮತ್ತು ಸಂಯೋಜಿತ ವಿಭಾಗಗಳಲ್ಲಿ ಮಹಿಳೆಯರು ಪ್ರಮುಖ ಕೊಡುಗೆಗಳನ್ನು ಗುರುತಿಸಲು ರೋಸಾಲಿಂಡ್ ಫ್ರಾಂಕ್ಲಿನ್ ಸೊಸೈಟಿಯನ್ನು ನ್ಯೂಯಾರ್ಕ್ ನಲ್ಲಿ ಸ್ಥಾಪಿಸಲಾಯಿತು.
- ಸೇಂಟ್ ಪಾಲ್ಸ್ ಗರ್ಲ್ಸ್ ಸ್ಕೂಲ್ ರೋಸಾಲಿಂಡ್ ಫ್ರಾಂಕ್ಲಿನ್ ತಂತ್ರಜ್ಞಾನ ಕೇಂದ್ರ ಸ್ಥಾಪಿಸಿದೆ.
- ೨೦೧೪,ವೂಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾನಿಲಯ ರೋಸಾಲಿಂಡ್ ಫ್ರಾಂಕ್ಲಿನ್ ವಿಜ್ಞಾನ ಕಟ್ಟಡ ಎಂಬ ಹೊಸ ಪ್ರಯೋಗಾಲಯ ಕಟ್ಟಡವನ್ನು ತೆರೆಯಿತು.
- ೨೦೧೫,ನ್ಯೂ ಹ್ಯಾಮ್ ಕಾಲೇಜ್ ಬೋಟ್ ಕ್ಲಬ್ ಹೊಸ ರೇಸಿಂಗ್ ೮ ಬಿಡುಗಡೆ ಮಾಡಿ ಅದಕ್ಕೆ ರೋಸಾಲಿಂಡ್ ಫ್ರಾಂಕ್ಲಿನ್ ಹೆಸರಿರಿಸಿತು,
ಛಾಯಾಚಿತ್ರಗಳು
[ಬದಲಾಯಿಸಿ]
|
ಉಲ್ಲೇಖಗಳು
[ಬದಲಾಯಿಸಿ]- ↑ https://www.dnalc.org/view/15014-Franklin-s-X-ray-diffraction-explanation-of-X-ray-pattern-.html
- ↑ http://www.livescience.com/39804-rosalind-franklin.html
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- http://www.famousscientists.org/rosalind-franklin/
- https://profiles.nlm.nih.gov/ps/retrieve/Narrative/KR/p-nid/183/
- http://www.dnaftb.org/19/bio-3.html/
- http://www.nature.com/scitable/topicpage/rosalind-franklin-a-crucial-contribution-6538012/
- http://www.biography.com/people/rosalind-franklin-9301344#illness-and-death/