ಹೊಯ್ಸಳ ಕಾಲದ ಸಾಹಿತ್ಯ
ಹೊಯ್ಸಳ ಸಾಮ್ರಾಜ್ಯ | |
---|---|
ಹೊಯ್ಸಳ ಕಾಲದ ಸಾಹಿತ್ಯ : ಹೊಯ್ಸಳ ಸಾಹಿತ್ಯವು ಹೊಯ್ಸಳರು ನಿರ್ಮಿಸಿದಕನ್ನಡ ಮತ್ತು ಸಂಸ್ಕೃತ ಭಾಷೆಗಳ ಬೃಹತ್ ಸಂಗ್ರಹವಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ನೃಪ ಕಾಮ-೨ ಸ್ಥಾಪಿಸಿದನು. ಹೊಯ್ಸಳ ಸಾಮ್ರಾಜ್ಯದ ಆಳ್ವಿಕೆಯು, ರಾಜ ವಿಷ್ಣುವರ್ಧನ ಆಳ್ವಿಕೆಯ ಕಾಲದಲ್ಲಿ (ಕ್ರಿ.ಶ.೧೧೦೮-೧೧೫೨) ಪ್ರಾಮುಖ್ಯತೆಯನ್ನು ಪಡೆಯಿತು. ನಂತರ, ಕ್ರಿ.ಶ.೧೩೧೧ರಲ್ಲಿ ಖಿಲ್ಜಿ ಸಾಮ್ರಾಜ್ಯದ ದಾಳಿಯಿಂದಾಗಿ ನಿದಾನವಾಗಿ ಕ್ಷೀಣಿಸಿತು. ಈ ಅವಧಿಯಲ್ಲಿ ಜೈನ ಮತ್ತು ವೀರಶೈವ ಧರ್ಮಗಳ ಸಾಮಾಜಿಕ ಹಾಗು ಧಾರ್ಮಿಕ ಬೆಳವಣಿಗೆಗೆ ಸಂಬಂಧಿಸಿದ ಬರವಣಿಗೆಯು ಕಡಿಮೆಯಾಯಿತು. ಪ್ರಾಚೀನ ಕನ್ನಡ ಭಾಷೆಯಲ್ಲಿನ ಪ್ರಸಿದ್ಧ ಬ್ರಾಹ್ಮಣವರ್ಗದ ಬರಹಗಾರರು ಹೊಯ್ಸಳ ಆಸ್ಥಾನಕ್ಕೆ ಸೇರಿದವರು. ಆಸ್ಥಾನದ ಆಡಳಿತಭಾಷೆ ಕನ್ನಡವಾಗಿತ್ತು.ವೈಷ್ಣವ ಸಾಹಿತ್ಯದ ಪ್ರಮುಖ ತತ್ವಶಾಸ್ತ್ರವನ್ನು, ಸಂಸ್ಕೃತದಲ್ಲಿ ಖ್ಯಾತ ತತ್ವಜ್ಞಾನಿಯಾದ, ಮಧ್ವಾಚಾರ್ಯರು ಬರೆದಿದ್ದಾರೆ. ಕನ್ನಡದಲ್ಲಿ ಸಾಹಿತ್ಯ ಬರವಣಿಗೆಯನ್ನು ಪ್ರಸಿದ್ಧಗೊಳಿಸಿದವರು ಆಸ್ಥಾನದ ಪಂಡಿತರು. ಈ ರಚನೆಗಳನ್ನು ವಾದ್ಯಗಳೊಡನೆ ಹಾಡಲಾಗುತ್ತಿತ್ತು. ಈ ರಚನೆಗಳನ್ನು, ತ್ರಿಪದಿ, ಶಟ್ಪದಿ ಮತ್ತು ರಗಳೆ ಎಂಬ ಪ್ರಾಕಾರದಲ್ಲಿ ಬರೆಯಲಾಗಿತು. ಪ್ರಮುಖ ಸಾಹಿತ್ಯಕ್ಕೆ ಕೊಡುಗೆಯನ್ನು ಆಸ್ಥಾನದ ಕವಿಗಳಿಂದಲ್ಲದೆ, ಕುಲೀನರು, ದಂಡನಾಯಕರು, ಮಂತ್ರಿಗಳು,ಯತಿಗಳು ಮತ್ತು ಮಠಾಧೀಶರೂ ಸಹ ನೀಡೀದ್ದಾರೆ .[೧]
ಕನ್ನಡ ಬರವಣಿಗೆ
[ಬದಲಾಯಿಸಿ]ಪ್ರಮುಖ ಸಾಮಾಜಿಕ ರಾಜಕೀಯ ಬದಲಾವಣೆಗಳು ೧೨ನೆಯ ಶತಮಾನದಲ್ಲಿ ಕೃಷ್ಣಾ ನದಿಯ ದಕ್ಷಿಣ ಭಾಗದಿಂದ ಆರಂಭಗೊಂಡಿತು. ಹೊಯ್ಸಳರ ಅವಧಿಯಲ್ಲಿ, ಮಲೆನಾಡು ಪ್ರದೇಶದ ಸ್ಥಳೀಯ ಕನ್ನಡಿಗರು ರಾಜಕೀಯ ಬಲದಿಂದ ಮೇಲೆ ಬಂದರು. ಕ್ರಿ.ಶ.೧೧೧೬ದಲ್ಲಿ, ಹೊಯ್ಸಳ ರಾಜ ವಿಷ್ಣುವರ್ಧನನು ತಂಜಾವೂರು ಚೋಳರನ್ನು ಸೋಲಿಸಿ ಸ್ಥಳಿಯ ಆಳ್ವಿಕೆಯನ್ನು ಮತ್ತೆ ವಶಪಡಿಸಿಕೊಂಡನು.[೨] ಚಾಲುಕ್ಯರ ಆಡಳಿತವು ಕುಸಿಯಿತ್ತಿದ್ದ ಕಾಲದಲ್ಲಿ, ಹೊಯ್ಸಳ ಸಾಮ್ರಾಜ್ಯ ದಕ್ಷಿಣ ಭಾರತದ ಅತ್ಯಂತ ಪ್ರಭಲ ಸ್ವತಂತ್ರ್ಯ ಸಾಮ್ರಾಜ್ಯವಾಗಿ ಬೆಳೆಯಿತು. ಅದರ ಪರಿಣಾಮವಾಗಿ ಕನ್ನಡ ಸಾಹಿತ್ಯ ಹೊಯ್ಸಳರ ಕಾಲದಲ್ಲಿ ಏಳಿಗೆಯನ್ನು ಕಂಡಿತು.
ಅ) ಜೈನ ಮಹಾಕಾವ್ಯಗಳು
ಹೊಯ್ಸಳರ ೧೨ನೇ ಶತಮಾನದ ಪ್ರಾಭಲ್ಯ ಸಂದರ್ಭದಲ್ಲಿ, ರಾಜವಂಶದ ರಾಜರು ಸಾಮ್ರಾಜ್ಯಶಾಹಿ ಗುರಿಗಳನ್ನು ಹೊಂದಿದ್ದರು. ವಿಷ್ಣುವರ್ಧನ ರಾಜನು ಸೈನ್ಯಾಧಿಕಾರದ ವೈಖರಿ, ವಾಸ್ತು ಶಿಲ್ಪದ ಸಾಧನೆಗಳು ಮತ್ತು ವೈಧಿಕ ವಿಧಿಗಳನ್ನು ನಿರ್ವಹಿಸುವುದರಲ್ಲಿಯೂ ಚಾಲುಕ್ಯರಿಗಿಂತ ಭಿನ್ನವಾಗಿರಲು ಬಯಸಿದ್ದನು, ಇದಕ್ಕಾಗಿ ಅವನು ಜೈನ ಧರ್ಮದಿಂದ ವೈಷ್ಣವ ಧರ್ಮಕ್ಕೆ ಬದಲಾವಣೆ ಮಾಡಿಕೊಂಡರು. ಅದೇ ಸಮಯದಲ್ಲಿ, ಪ್ರಮುಖ ತತ್ವಜ್ಞಾನಿಯಾದ ರಾಮಾನುಜಾಚಾರ್ಯರು ಹೊಯ್ಸಳ ಪ್ರದೇಶದಲ್ಲಿದ್ದ ಚೋಳರ ಆಶ್ರೆಯ ಪಡೆದರು. ಅಲ್ಲಿ ಅವರು ವೈಷ್ಣವರ ನಂಬಿಕೆಯನ್ನು ಜನಪ್ರಿಯಗೊಳಿಸಿದರು. ಈ ಸಾಮಾಜಿಕ ಬದಲಾವಣೆಗಳು ಮುಂದೆ ಜೈನರ ಸಾಹಿತ್ಯದ ಕುಸಿತಕ್ಕೆ ಕಾರಣವಾಯಿತು.
ಹೊಯ್ಸಳ ಲಾಂಛನ | |
---|---|
ಆ)ಹರಿಹರನ ಕಾಲ
ಹರಿಹರ ಹಂಪಿಯ ಒಂದು ಕರಣಿಕರ ಕುಟುಂಬದಲ್ಲಿ ಹುಟ್ಟಿದವನು. ಅವನು ವೀರಶೈವ ಬರಹಗಾರರಲ್ಲಿ ಒಬ್ಬನು. ಅವನು ಹೊಯ್ಸಳರಕಾಲದ ಅತ್ಯಂತ ಪ್ರಭಾವಿ ಕನ್ನಡ ಕವಿ ಎಂದೇ ಹೆಸರುಪಡೆದವನು. ಅವನನ್ನು "ಕವಿಗಳ ಕವಿ" ಹಾಗು "ಜನಸಾಮಾನ್ಯರ ಕವಿ" ಎಂದು ಕರೆಯಲಾಗುತ್ತಿತ್ತು. ಇವನ ಪ್ರಯತ್ನದಿಂದ ಕನ್ನಡ ಸಾಹಿತ್ಯದಲ್ಲಿ ಬದಲಾವಣೆಗೆ ದಾರಿಮಾಡಿದೆ. ತನ್ನ ನಂತರದ ಕವಿಗಳಿಗೆ ಅವನು ಸ್ಪೂರ್ತಿಯಾದನು. ಅವನ ಆರಂಭಿಕ ಬರಹಗಳನ್ನು ಮೆಚ್ಚಿದ ನರಸಿಂಹ ರಾಜನು, ಆಸ್ಥಾನದ ಕವಿ, ಅವನನ್ನು ರಾಜನಿಗೆ ಪರಿಚಯಿಸಿದನು. ನಂತರ ನರಸಿಂಹ ರಾಜನು ಅವನ ಪೋಷಕನಾದನು. ಹರಿಹರನು ಕಾಳಿದಾಸ ಸಂಪ್ರದಾಯದಲ್ಲಿ "ಗಿರಿಜಾಕಲ್ಯಾಣ"ವನ್ನು ಬರೆದನು. ಸ್ಥಳೀಯ ರಗಳೆಯ ಅಭಿವೃದ್ಧಿಯ ಕೀರ್ತಿಯು ಹರಿಹರನಿಗೆ ಸಲ್ಲುತ್ತದೆ. ಅವನು "ಬಸವರಾಜದೇವರ ರಗಳೆ" ಎಂಬ ಬಸವಣ್ಣನವರ ಜೀವನ ಚರಿತ್ರೆಯನ್ನು ಬರೆದಿದ್ದಾನೆ. ಕನ್ನಡ ಭಾಷೆಯಲ್ಲಿ ಜೀವನ ಚರಿತ್ರೆಯನ್ನು ಮೊದಲು ಬರೆದ ಕವಿಗಳಲ್ಲಿ ಅವನೂ ಒಬ್ಬನು.
ಇ) ವ್ಯಾಕರಣದ ಬಲವರ್ಧನೆ
ಕೇಶಿರಾಜನು ೧೩ನೇ ಶತಮಾನದ ಗಮನಾರ್ಹ ಬರಹಗಾರ ಮತ್ತು ವ್ಯಾಕರಣಜ್ಞನು. ಅವನು ಪ್ರಸಿದ್ಧ ಬರಹಗಾರರ ಕುಟುಂಬದಿಂದ ಬಂದವನು. ಕೇಶೀರಾಜನ ಹಲವಾರು ಬರಹಗಳು ಸಿಗದೇ ಇದ್ದರೂ, ಅವನು ಕನ್ನಡ ವ್ಯಾಕರಣದ ಬಗ್ಗೆ ಬರೆದ "ಶಬ್ದಮಣಿದರ್ಪಣ" ಎಂಬ ಅತ್ಯಂತ ಪ್ರಸಿದ್ಧ ಬರಹ ಲಭ್ಯವಾಗಿದೆ. ಈ ಶಬ್ದಮಣಿದರ್ಪಣ ಇಂದಿಗೂ ಜನಪ್ರಿಯವಾಗಿದೆ ಮತ್ತು ಹಳೆಯ ಕನ್ನಡ ವ್ಯಾಕರಣದ ಮೇಲೆ ಪ್ರಮಾಣಿತ ಪ್ರಾಧಿಕಾರಹೊಂದಿದೆ ಎಂದು ಕಂಡುಬಂದಿದೆ. ಇದನ್ನು ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಪಠ್ಯಪುಸ್ತಕವಾಗಿ ಉಪಯೋಗಿಸುತ್ತಿದ್ದಾರೆ. ಕೇಶೀರಾಜನ ಕನ್ನಡ ವ್ಯಾಕರಣದ ಬಗೆಗಿನ ಪುಸ್ತಕದ ಮೇಲೆ ಪ್ರಾಚೀನ ಬರಹಗಳ ವ್ಯಾಕರಣ ಮಾದರಿಯ ಅನುಕರಣೆ ಇದ್ದರೂ, ಅದು ಅವನದೇ ಆದ ಬರವಣಿಗೆ ಸ್ವಂತಿಕೆಯನ್ನೂ ಹೊಂದಿದೆ. ಕೇಶೀರಾಜನ ಕಳೆದುಹೋಗಿರುವ ಬರಹಗಳು ಚೋಳಪಳಕ ಚರಿತಮ್, ಶ್ರೀ ಚಿತ್ರಮಾಲೆ, ಶುಭದ್ರಹರಣ, ಪ್ರಬೊಧಚಂದ್ರ ಮತ್ತು ಕಿರಾತಮ್. ಕೇಶೀರಾಜನ ಕಾಲದ ಇತರ ಯೋಗ್ಯ ಬರಹಗಾರರೆಂದರೆ ಮಹಾಬಲ ಕವಿ, ಕುಮುದೆಂದು, ಕುಮಾರಪದ್ಮರಸ, ರಟ್ಟ ಕವಿ ಮುಂತಾದವರು.
ಸಂಸ್ಕ್ರುತ ಬರವಣಿಗೆ
[ಬದಲಾಯಿಸಿ]ತತ್ವಜ್ಞಾನಿ ರಾಮಾನುಜಾಚಾರ್ಯರ ಆಗಮನದ ನಂತರ ಕನ್ನಡ ಮಾತನಾಡುವ ಪ್ರದೇಶದಲ್ಲಿ ವೈಷ್ಣವ ಚಳುವಳಿ ಆವೇಗ ಕಂಡಿತು. ಚೋಳರಾಜನ ಶೋಷಣೆಯಿಂದ ತಪ್ಪಿಸಿಕೊಳ್ಳಲು ರಾಮಾನುಜಾಚಾರ್ಯರು ಆರಂಭದಲ್ಲಿ ತೊಂಡನೂರಿನಲ್ಲಿ ಆಶ್ರಯ ಪಡೆದು ನಂತರ ಮೇಲುಕೋಟೆಗೆ ತೆರಳಿದರು. ಆದರೆ, ಈ ಘಟನೆಯಿಂದ ಹೊಯ್ಸಳ ಪ್ರದೇಶದ ವೈಷ್ಣವ ಸಾಹಿತ್ಯಕ್ಕೆ ಯಾವುದೇ ಪ್ರಭಾವ ಆಗಲಿಲ್ಲ. ಅದೇ ಸಮಯದಲ್ಲಿ,ಮಧ್ವಾಚಾರ್ಯರ ಬೋಧನೆಗಳು ವೈಷ್ಣವ ಸಾಹಿತ್ಯದ ಕನ್ನಡ ಮತ್ತು ಸಂಸ್ಕೃತ ಭಾಷೆಗಳಿಗೆ ನೇರ ಪ್ರಭಾವ ಬೀರಿತು. ಈ ಪ್ರಕಾರದ ಲೇಖನಕ್ಕೆ ಹರಿದಾಸ ಸಾಹಿತ್ಯ ಎಂದು ಕರೆಯಲಾಗಿದೆ. ಮಧ್ವಾಚಾರ್ಯರು, ಜನಗಳಿಗೆ ಭಕ್ತಿಮಾರ್ಗವನ್ನು, ಜ್ಞಾನಮಾರ್ಗವನ್ನು ಮತ್ತು ಮೋಕ್ಷ ಸಾಧನೆಯ ಪಥವನ್ನು ಸಾರಿದರು. ಅವರು ಸಂಸ್ಕೃತದಲ್ಲಿ, ೩೭ ಕೃತಿಗಳನ್ನು ಬರೆದಿದ್ದಾರೆ. ಅವರ ಬೋಧನೆಗಳನ್ನು ಪ್ರಸಾರ ಮಾಡಲು ಉಡುಪಿ, ಮಂತ್ರಾಲಯ ಮತ್ತು ನಂಜನಗೂಡಿನಲ್ಲಿ ಮಠಗಳನ್ನು ಸ್ಥಾಪಿಸಲಾಯಿತು. [೩]
ಹೊಯ್ಸಳ ನಂತರದ ಸಾಹಿತ್ಯ
[ಬದಲಾಯಿಸಿ]ಹೊಯ್ಸಳ ಕಾಲದ ಸಾಹಿತ್ಯದ ಬೆಳವಣಿಗೆ ನಂತರದ ಶತಮಾನಗಳಲ್ಲಿ ಕನ್ನಡ ಸಾಹಿತ್ಯದ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಿತು. ಜೈನ ಸಾಹಿತ್ಯ ಕ್ಷೀಣಿಸಿದಾಗ ವೀರಶೈವ ಮತ್ತು ವೈಷ್ಣವ ಬರಹಗಾರರ ನಡುವೆ ಜಟಾಪಟಿ ಆರಂಭವಾಯಿತು. ವೀರಶೈವ ಬರಹಗಾರ ಚಾಮರಸ ಮತ್ತು ವೈಷ್ಣವ ಪ್ರತಿಸ್ಪರ್ಧಿ ಕುಮಾರವ್ಯಾಸ ಷಟ್ಪದಿ ಸಂಪ್ರದಾಯವನ್ನು ಜನಪ್ರಿಯಗೊಳಿಸಿದರು.
ಹೊರಗಿನ ಸಂಪರ್ಕ
[ಬದಲಾಯಿಸಿ]- http://www.kamat.com/kalranga/kar/literature/history1.htm* Archived 2021-06-16 ವೇಬ್ಯಾಕ್ ಮೆಷಿನ್ ನಲ್ಲಿ.
- http://jakegyllenhaal.ga/Hoysala_literature*
- http://www.snipview.com/q/Hoysala_literature*
ಉಲ್ಲೇಖಗಳು
[ಬದಲಾಯಿಸಿ]- ↑ ಕನ್ನಡ ಸಾಹಿತ್ಯದ ಇತಿಹಾಸ http://www.kamat.com/kalranga/kar/literature/history1.htm
- ↑ ಕರ್ನಾಟಕದ ಇತಿಹಾಸ https://books.google.co.in/books?id=2fhCH-NRatUC&printsec=frontcover&source=gbs_ge_summary_r&cad=0#v=onepage&q&f=false
- ↑ ಕನ್ನಡ ಸಾಹಿತ್ಯ ಸಂಸ್ಕೃತಿಯ ಇತಿಹಾಸದ ಗಂಭೀರ ಆತಂಕಗಳು https://books.google.co.in/books?id=xowUxYhv0QgC&pg=PA323&dq=critical+tensions+in+history+kannada+literary+culture&redir_esc=y#v=onepage&q=critical%20tensions%20in%20history%20kannada%20literary%20culture&f=false