ಇನ್ಫೋಸಿಸ್
| ಪ್ರಕಾರ | ಸಾರ್ವಜನಿಕ ಬಿಎಸ್‌ಇ: 500209 ಟೆಂಪ್ಲೇಟು:Nasdaq |
|---|---|
| ಸ್ಥಾಪನೆ | ಜುಲೈ ೨, ೧೯೮೧ |
| ಮುಖ್ಯ ಕಾರ್ಯಾಲಯ | ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ |
| ಪ್ರಮುಖ ವ್ಯಕ್ತಿ(ಗಳು) | ಎನ್ ಆರ್ ನಾರಾಯಣಮೂರ್ತಿ (ಗೌರವ ಮಾರ್ಗದರ್ಶಿ) ಕೆ ವಿ ಕಾಮತ್ (ಅದ್ಯಕ್ಷ) ಕ್ರಿಸ್ ಗೋಪಾಲಕ್ರಿಶ್ನನ್ (ಸಹ-ಅದ್ಯಕ್ಷ) ಎಸ್. ಡಿ. ಶಿಬುಲಾಲ್ (ಕಾರ್ಯಕಾರಿ ನಿರ್ವಾಹಕ) |
| ಉದ್ಯಮ | ತಂತ್ರಾಂಶ ಸೇವೆಗಳು |
| ಉತ್ಪನ | ಫಿನಾಕಲ್ (ಸಾರ್ವತ್ರಿಕ ಬ್ಯಾಂಕಿಂಗ್ ಉತ್ಪನ್ನ) |
| ಸೇವೆಗಳು | ಮಾಹಿತಿ ತಂತ್ರಜ್ಞಾನ ಸಮಾಲೋಚನೆ ಸೇವೆಗಳು |
| ಆದಾಯ | ರೂ. 21,693 ಕೋಟಿ ($4.66 ಶತಕೋಟಿ) (ವಿತ್ತವರ್ಷ 2008-09)[೧] |
| ನಿವ್ವಳ ಆದಾಯ | |
| ಉದ್ಯೋಗಿಗಳು | ೧೦೪,೮೫೦[೨] |
| ಉಪಾಂಗ ಸಂಸ್ಥೆಗಳು | ಇನ್ಫೋಸಿಸ್ ಬಿಪಿಒ ಇನ್ಫೋಸಿಸ್ ಕನ್ಸಲ್ಟಿಂಗ್ ಇನ್ಫೋಸಿಸ್ ಆಸ್ಟ್ರೇಲಿಯ ಇನ್ಫೋಸಿಸ್ ಚೀನ ಇನ್ಫೋಸಿಸ್ ಮೆಕ್ಸಿಕೊ ಇನ್ಫೋಸಿಸ್ ಸ್ವೀಡನ್ |
| ಅಂತರಜಾಲ ತಾಣ | www.infosys.com |
ಆಂಗ್ಲ ಹೆಸರು - Infosys Limited (INFY)
ಇನ್ಫೋಸಿಸ್ ಭಾರತದ ಬೆಂಗಳೂರು ನಗರದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, ೧,೪೫,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಭಾರತದಲ್ಲಿ ಒಂಬತ್ತು ತಂತ್ರಾಂಶ ಅಭಿವೃದ್ಧಿ ಕೇಂದ್ರ ಮತ್ತು ಪ್ರಪಂಚದಾದ್ಯಂತ ೨೯ ಕಛೇರಿಗಳನ್ನು ಭಾರತ, ಯುಸ್‌ಎ, ಚೀನಾ, ಆಸ್ಟ್ರೇಲಿಯಾ, ಯುಕೆ, ಕೆನಡ, ಜಪಾನ್ ಹಾಗೂ ಇನ್ನಿತರೆ ರಾಷ್ಟ್ರಗಳಲ್ಲಿದೆ. ಇನ್ಫೋಸಿಸ್‌ವು ೩೦ಕ್ಕೂ ಹೆಚ್ಚು ದೇಶದ ಕಂಪನಿಗಳಿಗೆ ವಾಣಿಜ್ಯ ವ್ಯವಹಾರ, ತಾಂತ್ರಿಕ, ಯಾಂತ್ರಿಕ, ಬಾಹ್ಯಾಧಾರ ಸೇವೆಗಳನ್ನು ಒದಗಿಸುತ್ತಿದೆ. ೨೦೦೭-೨೦೦೮ ರ ಸಾಲಿನಲ್ಲಿ ಈ ಸಂಸ್ಥೆ ರೂ. ೪೦೦ ಕೋಟಿಗೂ ಹೆಚ್ಚು ಆದಾಯ ಪಡೆಯಿತು.
ಪರಿವಿಡಿ |
ಇತಿಹಾಸ [ಬದಲಾಯಿಸಿ]
ಇನ್ಫೋಸಿಸ್‌ವು ೧೯೮೧ರಲ್ಲಿ ಎನ್ ಆರ್ ನಾರಾಯಣಮೂರ್ತಿ, ನಂದನ್ ನಿಲಕೇನಿ, ಎನ್ ಎಸ್ ರಾಘವನ್, ಎಸ್ ಗೋಪಾಲಕ್ರಿಷ್ಣ, ಎಸ್ ಡಿ ಶಿಬುಲಾಲ್, ಕೆ ದಿನೇಶ್ ಹಾಗೂ ಅಶೋಕ ಅರೋರ ಅವರಿಂದ ಸ್ಥಾಪಿಸಲಾಗಿದೆ.
ಇನ್ಫೋಸಿಸ್‌ವು ೨೦೧೨ ೩ನೇ ತ್ರಿಮಾಸಿಕದಂತೆ ೬.೮೨೫ $(US)[೩] ಆದಾಯಹೊಂದಿದೆ. ಇನ್ಫೋಸಿಸ್‌ವು ಫೋರ್ಬಸ್ ಸರ್ವೆಯಲ್ಲಿ,[೪]ಮೆಲ್ದರ್ಜೆ ಹೊಸ ಶೋಧನೆ ಕಂಪನಿಗಳಲ್ಲಿ, ಬೊಸ್ಟನ್ ಕಂಸಲ್ಟಿಂಗ್ ಕಂಪನಿ ಪ್ರಕಾರ [೫] ವರದಿ ತಾಂತ್ರಿಕ ಕಂಪನಿಗಳಲ್ಲಿ ಅಗ್ರಸ್ಥಾನ ಹಾಗೂ ನಿವ್ಸವೀಕ ಗ್ರೀನ್ ರಾಂಕಿಂಗ್ [೬] ಪ್ರಕಾರ ಮೊದಲ ಹತ್ತು ಹಸಿರು ಕಂಪನಿಗಳೊಂದಗಿದೆ. ಇನ್ಫೋಸಿಸ್‌ವು ೨೦೦೦ದಿಂದ ಪ್ರತಿ ವರ್ಷ್, ಭಾರತದ ಬಹಳ ಹೊಗಳಲ್ಪಟ್ಟ ಅನುಮೋದಿತ ಕಂಪನಿಯಾಗಿದೆಯೆಂದು ವಾಲ್ ಸ್ಟ್ರೀಟ್ ಜರ್ನ್‌ಲ್ ಎಸಿಯಾ ೨೦೦ ನಲ್ಲಿ [೭] ಹೇಳಿದೆ. ೨೦೦೧ರಲ್ಲಿ ಬಿಜ್‌ನೆಸ್ ಟುಡೆ.[೮] ಹಾಗೂ ೨೦೦೦, ೨೦೦೧ ಮತ್ತು ೨೦೦೨ ರಲ್ಲಿ ಹೆವಿಟ್ಟ್ ಅಸ್ಸೊಸ್ಸಿಯೆಟೆಡ್‌ನಲ್ಲಿ ಕೆಲಸಕ್ಕೆ ಅತ್ಯುತ್ತಮ ಕಂಪನಿಯೆಂದು ಹೊಗಳಲ್ಪಟ್ಟಿದೆ. ಇನ್ಫೋಸಿಸ್‌ವು ೧೩ ಲಕ್ಷಕ್ಕೂ ಹೆಚ್ಚು ಉದ್ಯೊಗಿಕ ಅರ್ಜಿಪಡೆದು, ೩%ಕ್ಕಿಂತ ಕಡಿಮೆ ಅರ್ಜಿದಾರರನ್ನು ಕೆಲಸಕ್ಕೆ ತೆಗೆದುಕೊಂಡಿದೆಯೆಂದು [೯] ಹೇಳಿಕೊಂಡಿದೆ. ಇನ್ಫೋಸಿಸ್‌ವು ೨೦೦೩, ೨೦೦೪ ಹಾಗೂ ೨೦೦೫ ರಲ್ಲಿ ಗ್ಲೋಬಲ್ MAKE (Most Admired Knowledge Enterprises) ಪ್ರಶಸ್ತಿ ಗೆದ್ದುಕೊಂಡಿದ್ದು, ಗ್ಲೋಬಲ್ ಹಾಲ್ ಆಫ್ ಫೇಮ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. [೧೦][೧೧]
ಇನ್ಫೋಸಿಸ್‌ವು ೨೦೦೧ರಲ್ಲಿ ಭಾರತದ ೧೫ನೇ ನಂಬಿಕೆಯುಳ್ಳ ಕಂಪನಿಯೆಂದೂ ಪ್ರಖ್ಯಾತಿಹೊಂದಿತ್ತು. [೧೨]
ಶೇರು ವಿವರ [ಬದಲಾಯಿಸಿ]
ಡಿಸೆಂಬರ್ ೨೦೧೧ರಲ್ಲಿ, ಲೈಫ್ ಇನ್ಸುರನ್ಸ್ ಆಫ್ ಇಂಡಿಯಾ ೫.೭%, ಅಬು ಧಾಭಿ ಇನ್ವೆಶ್ಟಮೆಂಟ್ ಅಥೊರಿಟಿ ಮತ್ತು ಸಿಂಗಾಪೂರ್ ಗೊವರ್ನ್ಮೆಂಟ್ ಕೂಡ ಪ್ರಮುಖ ಶೇರುಗಳನ್ನು ಹೊಂದಿವೆ. ಉಳಿದ ಶೇರುಗಳನ್ನು ಸಾರ್ವಜನಿಕ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳು ಹೊಂದಿವೆ. [೧೩]
ಅಭಿವೃಧ್ಧಿ ಕಾರ್ಯಾಲಯಗಳು [ಬದಲಾಯಿಸಿ]
೧.ಬೆಂಗಳೂರು ೨.ಪುಣೆ ೩.ಚೆನ್ನೈ ೪.ಹೈದರಾಬಾದ ೫.ಮೈಸೂರು ೬.ಮಂಗಳೂರು ೭.ಚಂಡೀಗಡ ೮.ಭುವನೇಶ್ವರ
ಮೊದಲ ಹೆಜ್ಜೆಗಳು [ಬದಲಾಯಿಸಿ]
ಇನ್ಫೊಸಿಸ್ ಫೌಂಡೇಶನ್ [ಬದಲಾಯಿಸಿ]
೧೯೯೬ರಲ್ಲಿ ಇನ್ಫೊಸಿಸ್‌ವು ಇನ್ಫೊಸಿಸ್ ಫೌಂಡೇಶನ್ ಸ್ಥಾಪಿಸಿ, ಆರೊಗ್ಯ, ಶಿಕ್ಷಣ, ಸಾಮಾಜಿಕ, ಕಲೆ, ಸಂಸ್ಕೃತಿ ಮತ್ತು ಹಳ್ಳಿಗಳ ಅಭಿವೃಧ್ಧಿ ಯೋಜನೆಗಳನ್ನು ಹಾಕಿಕೊಂಡಿದೆ. ಅಂದಿನಿಂದ ಈ ಪ್ರತಿಷ್ಠಾನವು, ತನ್ನ ಕಾರ್ಯಗಳನ್ನು ಕರ್ಣಾಟಕ ಮುಖ್ಯಕೇಂದ್ರದಿಂದ ಭಾರತದ ಇತರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ, ಒರಿಸ್ಸ ಹಾಗೂ ಪಂಜಾಬಗಳಲ್ಲಿ ಹರಡಿಕೊಂಡಿದೆ. [೧೫]
ಬಾಹ್ಯ ಸಂಪರ್ಕಗಳು [ಬದಲಾಯಿಸಿ]
ಉಲ್ಲೇಖಗಳು [ಬದಲಾಯಿಸಿ]
- ↑ ೧.೦ ೧.೧ http://www.infosys.com/investors/reports-filings/quarterly-results/2008-2009/Q4/Q4-2008-AD.pdf
- ↑ http://www.infosys.com/investors/reports-filings/quarterly-results/2008-2009/Q4/IndianGAAP-press-release.pdf
- ↑ Infosys About us.
- ↑ Forbes Most Innovative Companies.
- ↑ BCG documents.
- ↑ Newsweek Green Rankings.
- ↑ WSJ Asia 200 Article.
- ↑ R. Sukumar. India's Best Employers: The Top 5. A BT-Hewitt study. Business Today. Archived from the original on 1 July 2006. ಮರುಕಳಿಸಿದ ದಿನಾಂಕ 10 October 2006.
- ↑ INFY 2007 20-F, Item 6. Sec.gov. ಮರುಕಳಿಸಿದ ದಿನಾಂಕ 7 September 2010.
- ↑ Infosys recognized as a Globally Most Admired Knowledge Enterprise for 2004 (PDF). A Teleos study. Infosys Media. ಮರುಕಳಿಸಿದ ದಿನಾಂಕ 1 December 2004.
- ↑ Infosys in the Global Hall of Fame.[ಜಡ ಸಂಪರ್ಕ]
- ↑ Components of trust that brands can focus on. thehindubusinessline.com (2011-05-18).
- ↑ http://www.infosys.com/investors/reports-filings/quarterly-results/Documents/Share-Holding/clause35-december31-2011.pdf
- ↑ Infosys Technologies Limited. Sustainability. Infosys. ಮರುಕಳಿಸಿದ ದಿನಾಂಕ 27 July 2010.[ಜಡ ಸಂಪರ್ಕ]
- ↑ http://www.infosys.com/infosys_foundation/default.asp
