ಮುಂಬೈ ಷೇರುಪೇಟೆ
ವಿಕಿಪೀಡಿಯ ಇಂದ
(ಮುಂಬೈ ಶೇರು ಬಜಾರ್ ಇಂದ ಪುನರ್ನಿರ್ದೇಶಿತ)
ಮುಂಬೈ ಷೇರುಪೇಟೆ ನಿಯಮಿತವು (ಮುಂಚೆ, ಬಂಡವಾಳಪತ್ರ ವಿನಿಮಯ ಕೇಂದ್ರ, ಮುಂಬೈ; ಜನಜನಿತವಾಗಿ ಬಿಎಸ್ಇ ಎಂದು ಕರೆಯಲಾದ) ವಿಶ್ವದಲ್ಲಿ ಅತ್ಯಧಿಕ ಸಂಖ್ಯೆಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳನ್ನು (ಲಿಸ್ಟಡ್ ಕಂಪನಿ) ಹೊಂದಿದೆ, ಆಗಸ್ಟ್ ೨೦೦೭ರ ವೇಳೆ ಈ ಸಂಖ್ಯೆ ೪೭೦೦ರಷ್ಟಿತ್ತು. ಇದು ಭಾರತದ ಮುಂಬೈಯ ದಲಾಲ್ ಸ್ಟ್ರೀಟ್‌ನಲ್ಲಿ ನೆಲೆಗೊಂಡಿದೆ. ೩೧ ಡಿಸೆಂಬರ್ ೨೦೦೭ರಂದು, ಬಿಎಸ್ಇಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳ ಷೇರುಗಳ ಆಧಾರದ ಮೇಲೆ ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯವು (ಮಾರ್ಕೆಟ್ ಕ್ಯಾಪಿಟಲೈಜೇಶನ್) ೧೭೯೦೦೦ ಕೋಟಿ ಡಾಲರ್‌ಗಳಷ್ಟಿತ್ತು, ಹಾಗಾಗಿ ಅದು ದಕ್ಷಿಣ ಏಷ್ಯಾದ ಅತಿ ದೊಡ್ಡ ಮತ್ತು ವಿಶ್ವದ ೧೨ನೇ ಅತಿ ದೊಡ್ಡ ಷೇರುಪೇಟೆಯೆಂಬ ಹೆಗ್ಗಳಿಕೆ ಪಡೆಯಿತು. ಮುಂಬೈ ಷೇರುಪೇಟೆ ಬೆಳಿಗ್ಗೆ ೯.೦೦ ಘಂಟೆಯಿಂದ ಮಧ್ಯಾನ್ಹ ೩.೩೦ ರ ವರೆಗೆ ವಾರದಲ್ಲಿ ಐದು ದಿನ (ಶನಿವಾರ,ರವಿವಾರ ಹೊರತುಪಡಿಸಿ) ಕಾರ್ಯ ನಿರ್ವಹಿಸುತ್ತದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |