ಅಭಿನವ್ ಬಿಂದ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಭಿನವ್ ಬಿಂದ್ರಾ
ಅಭಿನವ್ ಬಿಂದ್ರಾ
ಜನನಸೆಪ್ಟೆಂಬರ್ ೨೮, ೧೯೮೨
ಉತ್ತರಾಖಂಡ ರಾಜ್ಯದ  ಡೆಹ್ರಾಡೂನ್
ವೃತ್ತಿಶೂಟಿಂಗ್ ಕ್ರೀಡಾಪಟು, ಉದ್ಯಮಿ
ರಾಷ್ಟ್ರೀಯತೆಭಾರತೀಯ
ಪ್ರಮುಖ ಪ್ರಶಸ್ತಿ(ಗಳು)ಪದ್ಮ ವಿಭೂಷಣ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ


ಅಭಿನವ್ ಬಿಂದ್ರಾ, (ಹುಟ್ಟಿದ್ದು: ಸೆಪ್ಟೆಂಬರ್ ೨೮, ೧೯೮೨,  ಉತ್ತರಾಖಂಡ ರಾಜ್ಯದ  ಡೆಹ್ರಾಡೂನಿನಲ್ಲಿ)  ಭಾರತದ ಒಬ್ಬ ಪ್ರಸಿದ್ಧ ಉದ್ಯಮಿ ಮತ್ತು ಪ್ರಖ್ಯಾತ ಶೂಟಿಂಗ್ ಕ್ರೀಡಾಪಟು. ೧೦ ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮಾಜಿ ವರ್ಲ್ಡ್ ಚಾಂಪಿಯನ್ ಆಗಿದ್ದರು.[೧]೨೦೦೮ರ ಬೀಜಿಂಗ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದು, ಇಡೀ ಭಾರತಕ್ಕೆ ಮೊದಲ ಒಬ್ಬಂಟಿ ಚಿನ್ನವನ್ನು ಗೆದ್ದವರಾದರು.[೨] ೧೯೮೦ರಲ್ಲಿ ಪುರುಷರ ಹಾಕಿ ತಂಡ ಚಿನ್ನ ಗೆದ್ದ ಮೇಲಿನಿಂದ ಇದು ಭಾರತದ ಮೊದಲನೆಯ ಒಲಂಪಿಕ್ ಚಿನ್ನದ ಪದಕವಾಗಿತ್ತು. ಬಿಂದ್ರಾ, ೨೦೦೬ರಲ್ಲಿನ  ಐ.ಎಸ್.ಎಸ್.ಎಫ್  ವರ್ಲ್ಡ್ ಶೂಟಿಂಗ್ ಪಂದ್ಯದಲ್ಲಿ ಚಿನ್ನ ಗೆದ್ದ ನಂತರ ೨೦೦೮ನ ಒಲಂಪಿಕ್ ಚಿನ್ನವನ್ನೂ ಸಹ ಗೆದ್ದು, ವರ್ಲ್ಡ್ ಚಾಂಪಿಯನ್ ಮತ್ತು ಒಲಂಪಿಕ್ ಚಾಂಪಿಯನ್ನಿನ ಗೌರವಗಳನ್ನು ಒಂದೇ ಸಮಯದಲ್ಲಿ ಪಡೆದ ಮೊದಲ ಭಾರತೀಯರಾದರು. ಗ್ಲಾಸ್ಗೌನಲ್ಲಿ ನಡೆದ ೨೦೧೪ರಲ್ಲಿನ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕವನ್ನು ಪಡೆದರು.

೨೦೧೪ರಲ್ಲಿ, ಬೆಂಗಳೂರಿನ [೩] ಸಂಸ್ಥೆಯ ಮುಖ್ಯ ಸಲಹೆಗಾರನಾಗಿ ಅಭಿನವ್ ಬಿಂದ್ರಾ ಸೇರಿದರು. 'ಗೋ ಸ್ಪೋರ್ಟ್ಸ್ ಫೌಂಡೇಶನ್' ಜೊತೆಗೆ ಸೇರಿ, "ಅಭಿನವ್ ಬಿಂದ್ರಾ ಶೂಟಿಂಗ್ ಡೆವಲಪ್ಮೆಂಟ್ ಪ್ರೋಗ್ರಾಮ್"ನ ಮುಖಾಂತರ ಭಾರತದ ಹಲವಾರು ಪ್ರತಿಭಾನ್ವಿತ ಶೂಟಿಂಗ್ ಕ್ರೀಡಾಪಟುಗಳಿಗೆ ಸಹಾಯ ನೀಡಿರುವರು.

ಭಾರತದ ಒಲಂಪಿಕ್ಸ್ ಅಸೋಸಿಯೇಷನ್, ೨೦೧೬ರಲ್ಲಿನ ರಿಯೋ ಒಲಂಪಿಕ್ಸ್ ಕ್ರೀಡೆಗೆ ಭಾರತದ 'ಗುಡ್ ವಿಲ್ ಅಂಬಾಸೆಡರ್' ಆಗಿ ಅಭಿನವ್ ಬಿಂದ್ರಾನನ್ನು ನೇಮಿಸಿತ್ತು.

೨೦೧೬ರಲ್ಲಿನ ರಿಯೋ ಒಲಂಪಿಕ್ಸ್ ಕ್ರೀಡೆಯ ೧೦ ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ನಾಲ್ಕನೆಯ ಸ್ಥಾನವನ್ನು ಬಿಂದ್ರಾ ಪಡೆದರು. ಸೆಪ್ಟೆಂಬರ್ ೫, ೨೦೧೬ರಂದು, ಅಭಿನವ್ ಬಿಂದ್ರಾ ತಮ್ಮ ಕ್ರೀಡಾ  ನಿವೃತ್ತಿ ಘೋಷಿಸಿದರು.

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಜೊತೆ ಅಭಿನವ್ ಬಿಂದ್ರಾ

ವೃತ್ತಿ[ಬದಲಾಯಿಸಿ]

ಪ್ರಾರಂಭದ ವರ್ಷಗಳು[ಬದಲಾಯಿಸಿ]

ಅಭಿನವ್ ಬಿಂದ್ರಾ ಹುಟ್ಟಿದ್ದು ಒಂದು ಪಂಜಾಬಿ ಕುಟುಂಬದಲ್ಲಿ. ಚಂಡೀಗರಿನ ಸಂತ ಸ್ಟೀಫೆನ್ ಶಾಲೆಯಲ್ಲಿ ಓದುವ ಮೊದಲು, ಎರಡು ವರ್ಷ ಡೂನ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. ಕೊಲ್ಕತ್ತಾದ ಸಾಹಿತ್ಯಿಕ ಮೇಳದಲ್ಲಿ, ಒಂದು ಕ್ರೀಡೆಗೆ ಸೇರಲೇಬೇಕಾದ ಸಂದರ್ಭ ಬಂದಾಗ ಅವರು ಶೂಟಿಂಗ್ ಅನ್ನು ಆಯ್ದುಕೊಂಡರು. ನಂತರ ಶೂಟಿಂಗ್ ಮೇಲೆ ಪ್ರೀತಿ ಹುಟ್ಟಿತು. ಅವರು ಪಟಿಯಾಲದಲ್ಲಿ ಇದ್ದಾಗ, ಮನೆಯಲ್ಲೇ ಶೂಟಿಂಗ್ ರೇಂಜ್ ತರಿಸಿ ಅಭ್ಯಾಸ ಮಾಡುತ್ತಿದ್ದರು. ವೃತ್ತಿಯ ಪ್ರಾರಂಭದಿಂದ ಗುರುಗಳಾದ ಡಾ.ಅಮಿತ್ ಭಟ್ಟಾಚಾರ್ಜಿ ಅವರೊಂದಿಗೆ ಕಲಿಯುತ್ತಿದ್ದರು. ೨೦೦೦ದ ಒಲಂಪಿಕ್ ಕ್ರೀಡೆಗಳಲ್ಲಿ ಭಾರತದ ಅತಿ ಕಿರಿಯ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸ್ವಿಟ್ಜರ್ಲ್ಯಾಂಡ್‍ನ  ಬಾಸೆಲ್ ನಗರದ ಐದು ಬಾರಿ ಒಲಂಪಿಕ್ ಶೂಟರ್ ಆದ ಗ್ಯಾಬ್ರಿಯೆಲ್ ಬಹಲ್ಮ್ಯಾನ್ ಅವರ ಹತ್ತಿರ ಪ್ರಸ್ತುತ ಅಭ್ಯಾಸಿಸುತ್ತಿದ್ದರೆ.

೨೦೦೦ದ ಒಲಂಪಿಕ್ಸ್ ಕ್ರೀಡೆಯಲ್ಲಿ, ಹದಿನೇಳು ವರ್ಷದ ಅಭಿನವ್ ಬಿಂದ್ರಾ ಕ್ವಾಲಿಫಿಕೇಷನ್ ಸುತ್ತಿನಲ್ಲಿ ೫೯೦ ಅಂಕಗಳನ್ನು ಗಳಿಸಿದರು.

ಅಂತರರಾಷ್ಟ್ರೀಯ ಸಾಧನೆ[ಬದಲಾಯಿಸಿ]

ಹದಿನೈದು ವರ್ಷಗಳ ಪ್ರಾಯದ ಅಭಿನವ್ ಬಿಂದ್ರಾ , ೧೯೯೮ರ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಭಾರತ ತಂಡದ ಅತ್ಯಂತ ಕಿರಿಯ ಕ್ರೀಡಾಪಟುವಾಗಿದ್ದರು. ೨೦೦೧ರ ಮ್ಯುನಿಕ್ ವರ್ಲ್ಡ್ ಕಪ್ ನಲ್ಲಿ ೫೯೭/೬೦೦ ಅಂಕಗಳನ್ನು ಗಳಿಸಿ ಕಂಚಿನ ಪದಕ ಪಡೆದು, ಜೂನಿಯರ್ ವರ್ಲ್ಡ್ ರೆಕಾರ್ಡ್ ಮಾಡಿದರು. ೨೦೦೦ನೇ ವರ್ಷದ ಒಲಂಪಿಕ್ ಕ್ರೀಡೆಗಳಲ್ಲಿಯೂ ಭಾರತದ ಅತ್ಯಂತ ಕಿರಿಯ ಕ್ರೀಡಾಪಟು ಬಿಂದ್ರಾ ಆಗಿದ್ದರು.  

೨೦೦೧ರ ಹಲವಾರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಗೆದ್ದು ೬ ಚಿನ್ನಗಳನ್ನು ಪಡೆದರು. ಭಾರತ ಸರ್ಕಾರದಿಂದ ೨೦೦೦ರಲ್ಲಿ ಅರ್ಜುನ ಪ್ರಶಸ್ತಿ ಮತ್ತು ೨೦೦೨ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದರು.

೨೦೦೨ನೇ ವರ್ಷದ, ಮ್ಯಾಂಚೆಸ್ಟರ್‌ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡೆಯ ಜೋಡಿ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಒಬ್ಬಂಟಿ ಸ್ಪರ್ಧೆಯಲ್ಲಿ ಬೆಳ್ಳಿಯನ್ನು ಪಡೆದರು.

೨೦೦೪ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ, ವರ್ಲ್ಡ್ ರೆಕಾರ್ಡ್ ಮಾಡಿದರೂ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ೫೯೭ ಅಂಕಗಳೊಂದಿಗೆ ಕ್ವಾಲಿಫಿಕೇಷನ್ ಸುತ್ತಿನಲ್ಲಿ ಮೂರನೇಯ ಸ್ಥಾನ ಪಡೆದರು. ಅಂತಿಮ ಸುತ್ತಿನಲ್ಲಿ ೧೦೦ರಕ್ಕೆ ಶೇಕಡ ೯೭.೬ ಅಂಕಗಳನ್ನು ಗಳಿಸಿದರು.

ಜಾಗ್ರೆಬ್ ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‍ಷಿಪ್‍ನಲ್ಲಿ ವಿಜಯ ಗಳಿಸಿ ಭಾರತಕ್ಕೆ ಮೊದಲ ಶೂಟಿಂಗ್ ಚಿನ್ನದ ಪದಕವನ್ನು ಗೆದ್ದವರಾದರು. ಡಾ. ಕರ್ಣಿ ಸಿಂಗ್‍ರವರ ೧೯೬೨ನ ಬೆಳ್ಳಿಯ ಪದಕದ ಮೇಲೆ ಭಾರತವನ್ನು ವರ್ಲ್ಡ್ ಚಾಂಪಿಯನ್‍ಷಿಪ್‍ನಲ್ಲಿ ಪ್ರತಿನಿಧಿಸಿದ ಶೂಟಿಂಗ್ ಕ್ರೀಡಾಪಟು ಬಿಂದ್ರಾ.

೨೦೦೬ರ ಮೆಲ್ಬರ್ನ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಜೋಡಿಪಂದ್ಯದಲ್ಲಿ ಚಿನ್ನ ಮತ್ತು ಒಬ್ಬಂಟಿ ಪಂದ್ಯದಲ್ಲಿ ಕಂಚಿನ ಪದಕ ಗೆದ್ದರು. ದೊಹಾದ ೨೦೦೬ರ ಏಶಿಯನ್ ಗೇಮ್ಸ್‌ನಲ್ಲಿ ಆರೋಗ್ಯದ ಕಾರಣದಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ.

ಬೆನ್ನಿನ ಗಾಯದಿಂದ ರೈಫಲ್ ಎತ್ತಲೂ ಸಹ ಒಂದು ವರ್ಷದವರೆಗೂ ಕಷ್ಟವಾಗುತ್ತಿತ್ತು. ಆದರೂ ಸತತ ಶ್ರಮದಿಂದ ೨೦೦೬ನ  ಐ.ಎಸ್.ಎಸ್.ಎಫ್ ವರ್ಲ್ಡ್ ಶೂಟಿಂಗ್ ಪಂದ್ಯದಲ್ಲಿ ೬೯೯.೧ ಅಂಕಗಳನ್ನು ಗಳಿಸಿ ಚಿನ್ನ ಗೆದ್ದರು.

೨೦೦೮ರ ಬೀಜಿಂಗ್ ಒಲಂಪಿಕ್ಸ್‌ನಲ್ಲಿ೭೦೦.೫ ಅಂಕಗಳೊಂದಿಗೆ ಪುರುಷರ ೧೦ ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಪುರುಷರ ಹಾಕಿ ತಂಡ ಒಲಂಪಿಕ್ ಚಿನ್ನ ಗೆದ್ದ ೨೮ ವರ್ಷಗಳ ನಂತರ ಭಾರತಕ್ಕೆ ಮೊದಲನೆಯ ಚಿನ್ನದ ಪದಕ ಅಭಿನವ್ ಬಿಂದ್ರಾ ತಂದು ಕೊಟ್ಟರು. ಹಲವಾರು ರಾಷ್ಟೀಯ ಸಂಸ್ಥೆಗಳು ಈ ಸಾಧನೆಗೆ ಅಭಿನವ್ ಬಿಂದ್ರಾರವರನ್ನು ಗೌರವಿಸಿದರು.

೨೦೧೦ರ ದಿಲ್ಲಿಯಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ  ಧ್ವಜವನ್ನು ಹಿಡಿದು ಭಾರತ ತಂಡದ ನೇತೃತ್ವ ಮಾಡಿದರು. ಗಗನ್ ನಾರಂಗ್ ಜೊತೆಗೂಡಿ ೧೦ ಮೀಟರ್ ಪುರುಷರ ಏರ್ ರೈಫಲ್ ಜೋಡಿ ಸ್ಪರ್ಧೆಯಲ್ಲಿ ಚಿನ್ನವನ್ನು ಗೆದ್ದರು. ಒಬ್ಬಂಟಿ ಸ್ಪರ್ಧೆಯಲ್ಲಿ ಗಗನ್ ನಾರಂಗ್ ಚಿನ್ನವನ್ನು ಮತ್ತು ಬಿಂದ್ರಾ ಬೆಳ್ಳಿಯನ್ನು ಪಡೆದರು.

ದೋಹಾನಲ್ಲಿ ನಡೆದ ೧೨ನೇಯ ಏಶಿಯನ್ ಶೂಟಿಂಗ್ ಪಂದ್ಯದಲ್ಲಿ ೧೦ ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಮತ್ತೊಮ್ಮೆ ಚಿನ್ನದ ಪದಕವನ್ನು ಪಡೆದರು. ೨೦೧೨ರ ಲಂಡನ್ ಒಲಂಪಿಕ್ಸ್‌ನ ಕ್ವಾಲಿಫಿಕೇಷನ್ ಸುತ್ತಿನಲ್ಲಿ ವಿಜಯ ಗಳಿಸಲು ಸಾಧ್ಯವಾಗದ ಅಭಿನವ್ ಬಿಂದ್ರಾ  ೨೦೧೪ರ ಗ್ಲ್ಯಾಸ್ಗೋ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಪಡೆದರು. ೨೦೧೬ರ ರಿಯೋ ಒಲಂಪಿಕ್ಸ್‌ನಲ್ಲಿ ನಾಲ್ಕನೆಯ ಸ್ಥಾನ ಪಡೆದರು.

ಉದ್ಯೋಗ[ಬದಲಾಯಿಸಿ]

ಬಿಂದ್ರಾ, ಯು.ಎಸ.ನ ಕೊಲೊರಾಡೊ ವಿಶ್ವವಿದ್ಯಾಲಯದಿಂದ ಬಿ.ಬಿ.ಏ ಪದವಿಧಾರನಾಗಿದ್ದು ಅಭಿನವ್ ಫ್ಯೂಟುರಿಸ್ಟಿಕ್ಸ್‌ನ ಸಿ.ಈ.ಓ. ಆಗಿರುವರು. ಇವರು ಸಾಂಸಂಗ್, ಬಿ.ಎಸ.ಏನ್.ಎಲ್., ಮತ್ತು ಸಹಾರ ಗ್ರೂಪ್ ಜೊತೆ ಸ್ಪೋನ್ಸೋರ್ಷಿಪ್ ಮಾಡಿರುವರು. ರಾಜ್ಯದ ಕೆಳಗಿರುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಬ್ರಾಂಡ್ ಅಂಬಾಸೆಡರ್ ಮತ್ತು ೨೦೧೦ರಿಂದ ಎಫ್.ಐ.ಸಿ.ಸಿ.ಐ. ಕ್ರೀಡಾ ಸಮಿತಿಯ ಸದಸ್ಯರಾಗಿರುವರು.

ವೈಯಕ್ತಿಕ ಜೀವನ[ಬದಲಾಯಿಸಿ]

ಹಾರ್ಪರ್ಸ್ಪೋರ್ಟ್ಸ್ ಪಬ್ಲಿಕೇಷನ್ಸ್ ಮುಖಾಂತರ ಅಭಿನವ್ ಬಿಂದ್ರಾರವರು ತಮ್ಮ ಆತ್ಮಚರಿತ್ರೆ "ಅ ಶಾಟ್ ಅಟ್ ಹಿಸ್ಟರಿ: ಮೈ ಒಬ್ಸೆಸ್ಸಿವ್ ಜರ್ನಿ ಟು ಒಲಂಪಿಕ್ ಗೋಲ್ಡ್" ಅನ್ನು ರೋಹಿತ್ ಬ್ರಿಜನಾಥ್ನ ಜೊತೆಗೆ ಅಕ್ಟೋಬರ್ ೨೦೧೧ನಲ್ಲಿ ಆಗಿನ ಕ್ರೀಡಾ ಮಂತ್ರಿ, ಅಜಯ್ ಮಕೇನರ ಮೂಲಕ ಪ್ರಕಟಿಸಿದರು.

ಬಿಂದ್ರಾ ವಿನಮ್ರತೆಯಿಂದ ಗುರಿ ಸಾಧನೆಗೆ ಕಷ್ಟಪಡುವುದೇ ಯಶಸ್ಸಿಗೆ ದಾರಿ ಎಂದು ನಂಬುವರು. ಮೊದಲಿಂದಲೂ ರಾಜ್ಯ ಮಟ್ಟದಲ್ಲಿ ಚಿನ್ನ ಗೆಲ್ಲಬೇಕೆಂಬ ಆಸೆ ಇತ್ತು. ಸತತ ಪರಿಶ್ರಮದಿಂದ ಒಲಂಪಿಕ್ ಕನಸನ್ನು ನನಸು ಮಾಡಿದರು. ಭಾರತದಲ್ಲಿ ಕ್ರೀಡೆಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಲು ಹೆಚ್ಚು ಪ್ರೋತ್ಸಾಹ ಬೇಕೆಂದು ಆ ಗುರಿಯಲ್ಲಿ ಯಾವಾಗಲು ತೊಡಗಿರುವರು.

ಪ್ರಶಸ್ತಿ ಮತ್ತು ಗೌರವಗಳು[ಬದಲಾಯಿಸಿ]

೨೦೦೮ರ ಒಲಂಪಿಕ್ ಚಿನ್ನದ ಪ್ರಶಸ್ತಿಗಳು[ಬದಲಾಯಿಸಿ]

  • ಮಿತ್ತಲ್ ಚಾಂಪಿಯನ್ಸ್ ಟ್ರಸ್ಟಿನಿಂದ ೧೫ ಮಿಲಿಯನ್ ರೂ.ಗಳು
  • ಕೇಂದ್ರ ಸರ್ಕಾರದಿಂದ ೫ ಮಿಲಿಯನ್ ರೂ.ಗಳು
  • ಹರಿಯಾಣ ರಾಜ್ಯ ಸರ್ಕಾರದಿಂದ ೨.೫ ಮಿಲಿಯನ್ ರೂ.ಗಳು
  • ಬೋರ್ಡ್ ಅಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಅವರಿಂದ ೨.೫ ಮಿಲಿಯನ್ ರೂ.ಗಳು
  • ಸ್ಟೀಲ್ ಮಿನಿಸ್ಟ್ರಿ ಇಂದ ೧.೫ ಮಿಲಿಯನ್ ರೂ.ಗಳು
  • ಬಿಹಾರ್ ರಾಜ್ಯ ಸರ್ಕಾರದಿಂದ ೧.೧ ಮಿಲಿಯನ್ ರೂ.ಗಳು
  • ಕರ್ನಾಟಕ ರಾಜ್ಯ ಸರ್ಕಾರ ದಿಂದ ೧ ಮಿಲಿಯನ್ ರೂ.ಗಳು[೫]
  • ೧ ಮಿಲಿಯನ್ ರೂ.ಗಳು ಎಸ.ಅಮೋಲಾಕ್ ಸಿಂಗ್ ಘಾಖಾಲ್, ಅಧ್ಯಕ್ಷರು, ಗೋಲ್ಡ್ಸ್ ಜಿಮ್ ಅವರಿಂದ
  • ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಅವರಿಂದ ೧ ಮಿಲಿಯನ್ ರೂ.ಗಳು
  • ಒರಿಸ್ಸಾ ರಾಜ್ಯ ಸರ್ಕಾರದಿಂದ ೫೦೦,೦೦೦ ರೂ.ಗಳು
  • ತಮಿಳ್ ನಾಡು ರಾಜ್ಯದಿಂದ ೫೦೦,೦೦೦ ರೂ.ಗಳು
  • ಛತ್ತೀಸ್ಗಡ್ ರಾಜ್ಯದಿಂದ ೧೦೦,೦೦೦ ರೂ.ಗಳು
  • ಮಧ್ಯ ಪ್ರದೇಶ ರಾಜ್ಯದಿಂದ ೧೦೦,೦೦೦ ರೂ.ಗಳು
  • ಕೇರಳ ರಾಜ್ಯದಿಂದ ಚಿನ್ನದ ಪದಕ
  • ಪುಣೆ ಮುನಿಸಿಪಲ್ ಕಾರ್ಪೋರೇಶನ್ ಇಂದ ೧.೫ ಮಿಲಿಯನ್ ರೂ.ಗಳು
  • ಭಾರತೀಯ ರೈಲ್ವೇಸ್ನಿಂದ ಉಚಿತ ಜೀವಮಾನದ ಪ್ರಯಾಣ

ಉಲ್ಲೇಖಗಳು[ಬದಲಾಯಿಸಿ]

  1. "ಕ್ರೀಡಾಪಟು ಚರಿತ್ರೆ: ಅಭಿನವ್ ಬಿಂದ್ರಾ". Archived from the original on 2009-03-18. Retrieved 2018-10-28.{{cite web}}: CS1 maint: bot: original URL status unknown (link)
  2. "ಭಾರತದ ಅತ್ಯುತ್ತಮ ೨೧". Archived from the original on 2017-08-30. Retrieved 2018-10-28.
  3. "ಗೋ ಸ್ಪೋರ್ಟ್ಸ್ ಫೌಂಡೇಶನ್".
  4. "ಪದ್ಮ ಪ್ರಶಸ್ತಿಗಳು".
  5. "ಕರ್ನಾಟಕ ರಾಜ್ಯ ಸರ್ಕಾರ ದಿಂದ ಬಹುಮಾನ". Archived from the original on 2008-08-22. Retrieved 2018-10-28.