ವಿಷಯಕ್ಕೆ ಹೋಗು

ಸ್ಕೋಡಾ ಆಟೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಕೋಡಾ ಆಟೋ
ಸಂಸ್ಥೆಯ ಪ್ರಕಾರಖಾಸಗಿ ಕಂಪನಿ, ವೋಕ್ಸ್‌ವಾಗನ್ ಗುಂಪಿನ ಅಂಗಸಂಸ್ಥೆ
ಸ್ಥಾಪನೆಲಾರಿನ್ ಆ್ಯಂಡ್ ಕ್ಲೆಮೆಂಟ್ ಆಗಿ 1895ರಲ್ಲಿ
ಸಂಸ್ಥಾಪಕ(ರು)ವಾಟ್‍ಸ್ಲಾವ್ ಲಾರಿನ್ ಮತ್ತು
ವಾಟ್‍ಸ್ಲಾವ್ ಕ್ಲೆಮೆಂಟ್
ಮುಖ್ಯ ಕಾರ್ಯಾಲಯಮ್ಲಾಡಾ ಬೊಲೆಸ್ಲಾವ್, ಚೆಕ್ ಗಣರಾಜ್ಯ
ಕಾರ್ಯಸ್ಥಳಗಳ ಸಂಖ್ಯೆ6 ಕಾರ್ಖಾನೆಗಳು (4 ಯೂರೋಪ್‍ನಲ್ಲಿ, 2 ಭಾರತದಲ್ಲಿ)
ವ್ಯಾಪ್ತಿ ಪ್ರದೇಶಜಾಗತಿಕ
(ಉತ್ತರ ಅಮೇರಿಕಾವನ್ನು ಹೊರತುಪಡಿಸಿ)
ಪ್ರಮುಖ ವ್ಯಕ್ತಿ(ಗಳು)ಬರ್ನ್‌ಹಾರ್ಡ್ ಮಾಯರ್
ನಿರ್ದೇಶಕ ಮಂಡಳಿಯ ಅಧ್ಯಕ್ಷ
ಕ್ರಿಸ್ಚನ್ ಕ್ಲಿಂಗ್ಲರ್
ಮೇಲ್ವಿಚಾರಕ ಮಂಡಳಿಯ ಅಧ್ಯಕ್ಷ
ಉದ್ಯಮಮೋಟರ್ ವಾಹನ
ಉತ್ಪನ್ನಮೋಟಾರು ವಾಹನಗಳು
ಸೇವೆಗಳುವಾಹನ ಹಣಕಾಸು ಸೇವೆಗಳು
ಆದಾಯ 8.5 ಬಿಲಿಯ (2007)
ನಿವ್ವಳ ಆದಾಯ15.94 ಬಿಲಿಯ ಕೊರನಾ/$990 ಮಿಲಿಯ (2008)
ಉದ್ಯೋಗಿಗಳು27,680 (2007)[]
ಪೋಷಕ ಸಂಸ್ಥೆವೋಕ್ಸ್‌ವಾಗನ್ ಗುಂಪು
ಜಾಲತಾಣŠkoda-Auto.com

ಸ್ಕೋಡಾ ಆಟೋ (Czech pronunciation: [ˈʃkoda] ( ))- ಇದನ್ನು ಸಾಮಾನ್ಯವಾಗಿ ಸ್ಕೋಡಾ ಎಂದು ಕರೆಯಲಾಗಿದೆ. ಇದು ಜೆಕ್‌ ಗಣರಾಜ್ಯದಲ್ಲಿರುವ ವಾಹನ ತಯಾರಿಕೆಯ ಉದ್ದಿಮೆ. ಇಸವಿ 1991ರಲ್ಲಿ ಸ್ಕೋಡಾ ವೋಲ್ಕ್ಸ್‌ವ್ಯಾಗನ್ ಗ್ರೂಪ್‌ನ ಅಂಗಸಂಸ್ಥೆಯಾಯಿತು. ಇಸವಿ 2009ರಲ್ಲಿ ಸ್ಕೋಡಾದ ಒಟ್ಟು 684,226 ಕಾರ್‌ಗಳು ಮಾರಾಟವಾಗಿದ್ದವು.

ಇತಿಹಾಸ

[ಬದಲಾಯಿಸಿ]

ಇಸವಿ 1859ರಲ್ಲಿ ಸ್ಕೋಡಾ ವರ್ಕ್ಸ್ ‌ಶಸ್ತ್ರಗಳನ್ನು ತಯಾರಿಸುವ ಉದ್ದಿಮೆಯಾಗಿ ಸ್ಥಾಪನೆಯಾಯಿತು. ಇದು ಆರಂಭದಲ್ಲಿ ವಾಹನಗಳನ್ನು ಅಭಿವೃದ್ಧಿಪಡಿಸಲಿಲ್ಲ.

ಸ್ಕೋಡಾ ಆಟೋ ಉದ್ದಿಮೆ ಹೇಗಾಯಿತೆಂಬ ಮೂಲಗಳಿಗೆ 1890ರ ದಶಕದ ಹಿಂದಕ್ಕೆ ಮರಳಬೇಕು. ಅಂದು ಹಲವು ಸುದೀರ್ಘಕಾಲ ಸ್ಥಾಪಿತವಾದ ಕಾರ್‌ ತಯಾರಕರಂತೆ, ಸೈಕಲ್‌ಗಳ ತಯಾರಿಕೆಯೊಂದಿಗೆ ಕಂಪೆನಿಯೊಂದು ಆರಂಭವಾಯಿತು. ಇಸವಿ 1894ರಲ್ಲಿ ಇಂದಿನ ಜೆಕ್‌ ಗಣರಾಜ್ಯದ, ಅಂದು ಆಸ್ಟ್ರಿಯಾ-ಹಂಗೆರಿಯ ಭಾಗವಾಗಿದ್ದಮ್ಲಾಡ್ಯಾ ಬೊಲೆಸ್ಲಾವ್‌ನಲ್ಲಿ, ಪುಸ್ತಕ ವ್ಯಾಪಾರಿಯಾಗಿದ್ದ 26 ವರ್ಷದ ಯುವಕ ವ್ಯಾಕ್ಲಾವ್‌ ಕ್ಲೆಮೆಂಟ್‌ತನ್ನ ಜರ್ಮನ್ ಬೈಸಿಕಲ್‌ ದುರಸ್ತಿಗೆ ಬಿಡಿಭಾಗಗಳನ್ನು ಪಡೆಯಲು ಅಸಮರ್ಥರಾದರು. ಕ್ಲೆಮೆಂಟ್‌ ತನ್ನ ಸೈಕಲ್‌ನ್ನು ತಯಾರಕರಾದ ಸೀಡೆಲ್‌ ಅಂಡ್‌ ನೌಮನ್‌ ತಯಾರಕರಿಗೆ ವಾಪಸ್ ಮಾಡಿ, ಸೈಕಲ್‌ನ್ನು ದುರಸ್ತಿ ಮಾಡಿಕೊಡಿರೆಂದು ಜೆಕ್‌ ಭಾಷೆಯಲ್ಲಿ ಪತ್ರವನ್ನು ಬರೆದರು. ಜರ್ಮನ್‌ ಭಾಷೆಯಲ್ಲಿ ಅವನಿಗೆ ಉತ್ತರ ಬಂತು 'ನಿಮ್ಮ ವಿಚಾರಣೆಗೆ ಉತ್ತರ ಬೇಕಾಗಿದ್ದಲ್ಲಿ, ನಮಗೆ ಅರ್ಥವಾಗುವಂತಹ ಭಾಷೆಯಲ್ಲಿ ನೀವು ಬರೆಯಲು ಯತ್ನಿಸಬೇಕು'. ಇದರಿಂದ ಬೇಸರಗೊಂಡ ಕ್ಲೆಮೆಂಟ್‌, ಯಾವುದೇ ತಾಂತ್ರಿಕ ಅನುಭವವಿಲ್ಲದೆಯೇ ಸೈಕಲ್ ದುರಸ್ತಿ ಅಂಗಡಿಯನ್ನು ಸ್ಥಾಪಿಸಲು ನಿರ್ಧರಿಸಿದ. ಆತನು ವ್ಯಾಕ್ಲಾವ್ ಲಾರಿನ್‌ನೊಂದಿಗೆ 1895ರಲ್ಲಿ ಮ್ಲಾಡ್ಯಾ ಬೊಲೆಸ್ಲಾವ್‌ನಲ್ಲಿ ಸೈಕಲ್‌ ದುರಸ್ತಿ ಅಂಗಡಿಯನ್ನು ಸ್ಥಾಪಿಸಿದ. ಕ್ಲೆಮೆಂಟ್‌ನೊಂದಿಗೆ ಸೈಕಲ್‌ ಉದ್ದಿಮೆ ಪಾಲುದಾರಿಕೆಯಲ್ಲಿ ತೊಡಗುವ ಮುಂಚೆ ಲಾರಿನ್‌ ಹತ್ತಿರದ ಟರ್ನೊವ್‌ ಪಟ್ಟಣದಲ್ಲಿ ಸೈಕಲ್‌ ತಯಾರಕರಾಗಿ ನೆಲೆ ಕಂಡುಕೊಂಡಿದ್ದರು.

ಜೆಕ್‌ ಗಣರಾಜ್ಯದ ಮ್ಲಾಡ್ಯಾ ಬೊಲೆಸ್ಲಾವ್‌ನಲ್ಲಿರುವ ಸ್ಕೋಡಾ ಆಟೋ ಮ್ಯೂಸಿಯಮ್‌ನಲ್ಲಿ 1905 ಮಾದರಿಯ ಲಾರಿನ್‌ & ಕ್ಲೆಮೆಂಟ್‌

ಇಸವಿ 1898ರಲ್ಲಿ, ಹೊಸದಾಗಿ ನಿರ್ಮಿಸಲಾದ ತಮ್ಮ ಸೈಕಲ್‌ ಕಾರ್ಖಾನೆಗೆ ಸ್ಥಳಾಂತರಗೊಂಡ ನಂತರ, ಫ್ರೆಂಚ್‌ ತಯಾರಕರಾದ ವರ್ನೆರ್‌ ಬ್ರದರ್ಸ್‌ ತಯಾರಿಸಿದ ವರ್ನರ್‌ "ಮೋಟಾರ್‌ಸೈಕ್ಲೆಟ್" [nb ೧]‌ ಒಂದನ್ನು ಈ ಜೋಡಿ ಖರೀದಿಸಿತು. ಮುಂದಿನ ಚಕ್ರಗಳನ್ನು ಚಾಲನೆ ಮಾಡುವ, ಕೈಗಂಬಿಯ ಮೇಲೆ ಕೂಡಿಸಲಾದ ಇಂಜಿನ್‌ ಶಕ್ತಿಯಿಂದ ಲಾರಿನ್‌ & ಕ್ಲೆಮೆಂಟ್‌ರ ಮೊದಲ ಮೋಟಾರ್‌ಸೈಕ್ಲೆಟ್‌ ಕೂಡಿತ್ತು. ಇದು ಅಪಾಯಕಾರಿ ಮತ್ತು ವಿಶ್ವಾಸಾರ್ಹವಲ್ಲ ಎಂದು ಸಾಬೀತಾಯಿತು. ಆ ಸೈಕಲ್ ಮೇಲಿನ ಮುಂಚಿನ ಘಟನೆಯೊಂದರಲ್ಲಿ ಲಾರಿನ್ ಮುಂಭಾಗದ ಹಲ್ಲೊಂದನ್ನು ಕಳೆದುಕೊಂಡಿದ್ದರು. ಅದರ ರಚನೆಯು ಇಂಜಿನ್ ಸುತ್ತ ಇರುವಂತೆ ಸುರಕ್ಷಿತ ವಾಹನವನ್ನು ವಿನ್ಯಾಸಗೊಳಿಸಲು, ಇವರಿಬ್ಬರ ಜೋಡಿಯು ಜರ್ಮನ್ ದೇಶದ ವಾಹನ ಇಗ್ನಿಷನ್‌ ತಜ್ಞ ರಾಬರ್ಟ್‌ ಬಾಷ್‌ರಿಗೆ ಪತ್ರ ಬರೆದು ಭಿನ್ನ ವಿದ್ಯುತ್ಕಾಂತೀಯ ವ್ಯವಸ್ಥೆಯ ಕುರಿತು ಸಲಹೆ ಕೋರಿದರು. ‌ ಇವರಿಬ್ಬರ ಹೊಸ ಸ್ಲಾವಿಯಾ ಮೋಟಾರ್‌ಸೈಕಲ್‌ 1899ರಲ್ಲಿ ಚೊಚ್ಚಲ ಪ್ರವೇಶ ಮಾಡಿತು.

ಇಸವಿ 1900ರಲ್ಲಿ, ಈ ಉದ್ದಿಮೆಯಲ್ಲಿ 32 ಜನ ನೌಕರರಿದ್ದಾಗ, ಸ್ಲಾವಿಯಾ ರಫ್ತುಗಳು ಆರಂಭಗೊಂಡವು. ಲಂಡನ್‌ನ ಹ್ಯೂಟ್‍‌ಸನ್ ಸಂಸ್ಥೆಗಾಗಿ 150 ವಾಹನಗಳನ್ನು ಹಡಗಿನಲ್ಲಿ ರವಾನಿಸಲಾಯಿತು. ಇದಾದ ಸ್ವಲ್ಪಸಮಯದ ನಂತರ, ಪತ್ರಿಕಾ ಮಾಧ್ಯಮವು ವಿಶ್ವದ ಮೊದಲ ಮೋಟಾರ್‌ಸೈಕಲ್‌ ತಯಾರಕರು ಎಂದು ಅವರಿಗೆ ಮನ್ನಣೆ ನೀಡಿತು.[] ಮೊದಲ ಮಾದರಿಯಾದ ವೊಯ್ಟುರೆಟ್‌ A ಯಶಸ್ಸು ಗಳಿಸಿತು. ಹಾಗೂ ಕಂಪೆನಿಯು ಆಸ್ಟ್ರಿಯಾ-ಹಂಗೆರಿ ದೇಶದೊಳಗೆ ಮತ್ತು ಅಂತಾರಾಷ್ಟ್ರೀಯವಾಗಿ ಸ್ಥಾಪಿತವಾಯಿತು. ಇಸವಿ 1905ರಷ್ಟರಲ್ಲಿ ಈ ಉದ್ದಿಮೆಯು ವಾಹನಗಳನ್ನೂ ಸಹ ತಯಾರಿಸುತ್ತಿತ್ತು.

WWI ನಂತರ, ಲಾರಿನ್‌-ಕ್ಲೆಮೆಂಟ್‌ ಕಂಪೆನಿಯು ಟ್ರಕ್ ಗಳನ್ನು ತಯಾರಿಸಲಾರಂಭಿಸಿತು. ಆದರೆ, 1924ರಲ್ಲಿ ಉದ್ದಿಮೆಯು ಸಮಸ್ಯೆಗಳಿಗೆ ಸಿಲುಕಿತು ಹಾಗೂ ಬೆಂಕಿ ಆಕಸ್ಮಿಕಕ್ಕೆ ತುತ್ತಾಯಿತು. ಇದರಿಂದಾಗಿ ಈ ಕಂಪೆನಿಯು ಪಾಲುದಾರಿಕೆಯನ್ನು ಬಯಸಿತು ಹಾಗೂ ಶಸ್ತ್ರಾಸ್ತ್ರಗಳ ತಯಾರಿಕೆ ಉದ್ದಿಮೆ ಸ್ಕೋಡಾ ವರ್ಕ್ಸ್ ಅದನ್ನು ಗಳಿಸಿಕೊಂಡಿತು. ಸ್ಕೋಡಾ ವರ್ಕ್ಸ್ ಬಹು-ಕ್ಷೇತ್ರಗಳ ಉದ್ದಿಮೆ ಹಾಗೂ ಜೆಕೋಸ್ಲೊವಿಕಿಯದಲ್ಲಿ ಅತಿ ದೊಡ್ಡ ಕೈಗಾರಿಕಾ ಸಂಸ್ಥೆಯಾಗಿ ರೂಪುಗೊಂಡಿತ್ತು. ಆನಂತರದ ಉತ್ಪಾದನೆಗಳೆಲ್ಲವೂ ಸ್ಕೋಡಾ ಹೆಸರಿನಡಿ ನಡೆದವು. ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಕುಸಿತ ಕಂಡರೂ ನಂತರ, 1930ರ ದಶಕದ ಕೊನೆಯಲ್ಲಿ ಪಾಪ್ಯುಲರ್‌ ಮುಂತಾದ ವಾಹನ ಮಾದರಿಗಳೊಂದಿಗೆ ಸ್ಕೋಡಾ ಪುನಃ ಯಶಸ್ಸು ಕಂಡಿತು.

ವಿಶ್ವ ಯುದ್ಧ II ರಲ್ಲಿ ಜೆಕೊಸ್ಲೋವಾಕಿಯಾ ದೇಶ ಆಕ್ರಮಣಕ್ಕೆ ಒಳಗಾಯಿತು. ಸ್ಕೋಡಾ ವರ್ಕ್ಸ್‌ ಉದ್ದಿಮೆಯು ಹರ್ಮನ್‌ ಗೊರಿಂಗ್‌ ವರ್ಕ್ ‌ ಅಂಗವಾಯಿತು. ಜರ್ಮನಿ ದೇಶದ ವಿಶ್ವ ಯುದ್ಧ II-ಸಂಬಂಧಿತ ಪ್ರಯತ್ನಕ್ಕೆ ಸೇವೆ ಸಲ್ಲಿಸಿತು.

WWII ನಂತರ

[ಬದಲಾಯಿಸಿ]
ಸ್ಕೋಡಾ 1201 1959
ಸ್ಕೋಡಾ ಆಕ್ಟೇವಿಯಾ 1961
1980 ಇಸವಿ ಮಾದರಿಯ ಸ್ಕೋಡಾ 110R. ಆ ಕಾಲದ ಪಾರ್ಷ್‌ ವಾಹನದಂತಿರುವ ಬಾಹ್ಯಾಕೃತಿ, ಆದರೆ ಹತ್ತನೇ ಒಂದು ಭಾಗದಷ್ಟು ದರದಲ್ಲಿ.

ಮ್ಲಾಡ್ಯಾ ಬೊಲೆಸ್ಲಾವ್‌ ಕಾರ್ಖಾನೆಯನ್ನು ಜುಲೈ 1945ರಲ್ಲಿ ಪುನರ್ನಿರ್ಮಿಸಲಾಯಿತು.WWII (2ನೇ ಮಹಾಯುದ್ಧ)ನಂತರ ಸ್ಕೋಡಾದ ಮೊದಲ ಕಾರಿನ ಮಾದರಿ, 1101 ಸರಣಿಯ ಉತ್ಪಾದನೆ ಆರಂಭವಾಯಿತು. ಇದು WWII ಮುಂಚೆ ತಯಾರಿಸಲಾದ ಸ್ಕೋಡಾ ಪಾಪ್ಯುಲರ್‌ ಮಾದರಿಯ ನವೀಕೃತ ಆವೃತ್ತಿಯಾಗಿತ್ತು. ಇಸವಿ 1945ರ ಶರತ್ಕಾಲದಲ್ಲಿ, ಇತರೆ ಎಲ್ಲಾ ದೊಡ್ಡ ತಯಾರಕರೊಂದಿಗೆ ಸ್ಕೋಡಾ ಸಹ ಯೋಜಿತ ಆರ್ಥಿಕ ಪದ್ಧತಿಯ ಭಾಗವಾಯಿತು. ಇದರ ಅರ್ಥ, ಇದು ಮೂಲ ಸ್ಕೋಡಾ ಉದ್ದಿಮೆಯಿಂದ ಪ್ರತ್ಯೇಕಗೊಂಡಿತು [clarification needed]. ಪ್ರತಿಕೂಲಕರ ರಾಜಕೀಯ ಪರಿಸ್ಥಿತಿ ಹಾಗೂ ಕಮ್ಯೂನಿಸ್ಟೇತರ ದೇಶಗಳಲ್ಲಿನ ತಾಂತ್ರಿಕ ಅಭಿವೃದ್ಧಿಯೊಂದಿಗೆ ಸಂಪರ್ಕ ಕಳೆದುಕೊಂಡರೂ, ಸ್ಕೋಡಾ 1960ರ ದಶಕದ ತನಕ ತನ್ನ ಖ್ಯಾತಿಯನ್ನು ಕಾಯ್ದುಕೊಂಡಿತ್ತು. ಆ ಸಮಯದಲ್ಲಿ ಇದು ಸ್ಕೋಡಾ 440 ಸ್ಪಾರ್ಟಾಕ್‌, 445 ಆಕ್ಟೇವಿಯಾ, ಫೆಲಿಷಿಯಾ ಮತ್ತು ಸ್ಕೋಡಾ 1000 MB ಮಾದರಿಗಳನ್ನು ತಯಾರಿಸಿತು.

1980ರ ದಶಕದ ಅಪರಾರ್ಧದಲ್ಲಿ ಸ್ಕೋಡಾ (ಅಂದು ಆಟೋಮೊಬಿಲೊವೆ ಝ್ಯಾವೊಡಿ ನ್ಯಾರೊಡ್ನಿ ಪಾಡ್ನಿಕ್‌, ಮ್ಲಾಡ್ಯಾ ಬೊಲೆಸ್ಲಾವ್ ಎಂಬ ಹೆಸರಿನಲ್ಲಿ ಚಿರಪರಿಚಿತವಾದ‌) 1960ರ ದಶಕಕ್ಕೆ ಹೊಂದಿಕೊಂಡ ಪರಿಕಲ್ಪನೆಗಳ ಕಾರ್‌ ಮಾದರಿಗಳನ್ನು ಇನ್ನೂ ತಯಾರಿಸುತ್ತಲಿತ್ತು. ಸ್ಕೋಡಾ 105/120, ಎಸ್ಟೆಲ್‌ ಮತ್ತು ರ‌್ಯಾಪಿಡ್‌ನಂತಹ ಹಿಂಬದಿಯ ಎಂಜಿನ್‌ಉಳ್ಳ ಮಾದರಿಗಳು ಸ್ಥಿರ ಮಾರಾಟ ಕಂಡಿತು. ಇಷ್ಟೇ ಅಲ್ಲದೆ, 1970 ಹಾಗೂ 1980ರ ದಶಕಗಳಲ್ಲಿ RAC ರ‌್ಯಾಲಿಯಂತ ರೇಸಿಂಗ್‌ ಸ್ಪರ್ಧೆಗಳಲ್ಲಿನ ಇನ್ನಷ್ಟು ಹೆಚ್ಚು ಆಧುನಿಕ ಮಾದರಿಗಳ ವಿರುದ್ಧ ಚೆನ್ನಾಗಿಯೇ ಕಾರ್ಯನಿರ್ವಹಿಸಿತು. RAC ರ‌್ಯಾಲಿಯಲ್ಲಿ 17 ವರ್ಷಗಳ ಕಾಲ ಈ ಕಾರುಗಳು ಶ್ರೇಷ್ಠತೆಯನ್ನು ಮೆರೆದವು. ಈ ವಾಹನಗಳು 130 brake horsepower (97 kW), 1,289 cubic centimetres (78.7 cu in) ಇಂಜಿನ್‌ ಮೂಲಕ ಚಾಲಿತವಾಗಿದ್ದವು. ಹಳೆಯ ಕಾಲದ್ದು ಎನ್ನುವಂತಹ ಕಲ್ಪನೆ ಮತ್ತು ಲೇವಡಿಗಳಿಗೆ ತುತ್ತಾದರೂ, ಸ್ಕೋಡಾ ವಾಹನಗಳು 1970 ಹಾಗೂ 1980ರ ದಶಕಗಳುದ್ದಕ್ಕೂ UK ಹಾಗು ಪಶ್ಚಿಮ ಯುರೋಪ್‌ನ ರಸ್ತೆಗಳಲ್ಲಿ ಸಾಮಾನ್ಯ ದೃಶ್ಯವಾಗಿ ಕಂಡುಬಂದವು.

"ರ‌್ಯಾಪಿಡ್‌" ಎಂಬ ಆವೃತ್ತಿ ಹೆಸರಿನೊಂದಿಗೆ ಎಸ್ಟೆಲ್‌ ಮತ್ತು ಮುಂಚಿನ ಮಾದರಿಗಳ ಕ್ರೀಡಾ ಆವೃತ್ತಿಗಳನ್ನು ತಯಾರಿಸಲಾಯಿತು. ಮೃದು ಛಾವಣಿಯುಳ್ಳ ಆವೃತ್ತಿಗಳೂ ಸಹ ಲಭ್ಯವಿದ್ದವು. ರ‌್ಯಾಪಿಡ್‌ ಆವೃತ್ತಿಯನ್ನು 'ಬಡವನ ಪಾರ್ಷ್‌' ಎಂದು ಒಮ್ಮೆ ಬಣ್ಣಿಸಲಾಗಿತ್ತು. 1980ರ ದಶಕದಲ್ಲಿ ಇದು UKಯಲ್ಲಿನ ಮಾರಾಟದಲ್ಲಿ ಗಮನಾರ್ಹ ಯಶಸ್ಸು ಕಂಡಿತ್ತು.[]

"ಸ್ಕೋಡಾ ವಾಹನವು ಬ್ರಿಟನ್‌ನ ರಸ್ತೆಗಳಲ್ಲಿ ಸರ್ವತ್ರ ಕಂಡುಬಂದಿದ್ದು, ಹಾಸ್ಯದ ವಸ್ತುವಾಗಲು ಒಂದು ಕಾರಣ. ಉದ್ದಿಮೆಯು ಏನೋ ಒಂದನ್ನು ಸರಿಯಾಗಿ ಮಾಡುತ್ತಿರಬೇಕು." - 1980ರ ದಶಕದಲ್ಲಿ ಸ್ಕೋಡಾ ವಾಹನದ ಮಾರಾಟದ ಕುರಿತು BBC ವರದಿಯಿಂದ ಆಯ್ದ ಅಂಶ.

ಫೇವರಿಟ್‌ ಮಾದರಿಯನ್ನು 1987ರಲ್ಲಿ ಪರಿಚಯಿಸಲಾಯಿತು.

ಇಟಲಿಯನ್‌ ವಿನ್ಯಾಸ ಸಂಸ್ಥೆ ಬರ್ಟೊನ್‌ ಫೇವರಿಟ್‌ರ ರೂಪವನ್ನು ವಿನ್ಯಾಸ ಮಾಡಿತು. ಪಶ್ಚಿಮ ಯುರೋಪ್‌ನಿಂದ ಪರವಾನಗಿಯ ಮೇರೆಗೆ ಕೆಲವು ಮೋಟಾರ್‌ ತಂತ್ರಜ್ಞಾನವನ್ನು ಪಡೆದು, ಸ್ಕೋಡಾ-ವಿನ್ಯಾಸದ 1289 cc ಇಂಜಿನ್‌ನನ್ನು ಇನ್ನೂ ಬಳಸಿಕೊಂಡು, ಪಾಶ್ಚಾತ್ಯ ಉತ್ಪಾದನೆಗೆ ಸರಿಸಾಟಿಯಾದ ಕಾರನ್ನು ಸ್ಕೋಡಾ ತಂತ್ರಜ್ಞಾನಿಗಳು ವಿನ್ಯಾಸ ಮಾಡಿದರು. ತಂತ್ರಜ್ಞಾನದ ಅಂತರವು ಇನ್ನೂ ಉಳಿದಿತ್ತು, ಆದರೆ ಅಂತರವು ತ್ವರಿತವಾಗಿ ಮುಚ್ಚುತ್ತಲಿತ್ತು. ಜೆಕೊಸ್ಲೋವಾಕಿಯಾ ಮತ್ತು ಇತರೆ ಈಸ್ಟರ್ನ್ ಬ್ಲಾಕ್ ಯ ದೇಶಗಳಲ್ಲಿ ಫೇವರಿಟ್ಸ್‌ ಬಹಳ ಜನಪ್ರಿಯವಾಗಿತ್ತು. ಪಶ್ಚಿಮ ಯುರೋಪ್‌ನಲ್ಲಿ, ವಿಶೇಷವಾಗಿ UK ಮತ್ತು ಡೆನ್ಮಾರ್ಕ್‌ನಲ್ಲಿ ಸಹ ಈ ವಾಹನಗಳು ಚೆನ್ನಾಗಿ ಮಾರಾಟವಾದವು. ಈ ಕಾರುಗಳು ದೃಢ, ವಿಶ್ವಾಸಾರ್ಹ ಮತ್ತು ಒಳ್ಳೆಯ ಮೌಲ್ಯದ್ದು ಎಂದು ಪರಿಗಣಿಸಲಾಯಿತು. ಇಸವಿ 1994ರಲ್ಲಿ ಫೆಲಿಷಿಯಾ ಮಾರುಕಟ್ಟೆಗೆ ಪ್ರವೇಶಿಸುವ ತನಕ ಈ ವಾಹನಗಳ ಟ್ರಿಮ್ ಲೆವೆಲ್‌ಗಳು(ವಾಹನದ ವಿನ್ಯಾಸದ ಮಟ್ಟ)ಉತ್ತಮವಾಗುತ್ತಾ ಹೋದವು.

ವೋಲ್ಕ್ಸ್‌ವ್ಯಾಗನ್‌ ಗ್ರೂಪ್‌ನ ಅಂಗಸಂಸ್ಥೆ

[ಬದಲಾಯಿಸಿ]

ಕಮ್ಯೂನಿಸಮ್‌ನ ಕುಸಿತ ಹಾಗೂ ವೆಲ್ವೆಟ್‌ ಕ್ರಾಂತಿಯು ಜೆಕೊಸ್ಲೋವಾಕಿಯಾದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದವು. ಹಲವು ಉದ್ದಿಮೆಗಳನ್ನು ಖಾಸಗೀಕರಣಗೊಳಿಸಲಾಯಿತು. ಸ್ಕೋಡಾ ಆಟೋಮೊಬೈಲ್‌ ವಿಚಾರದಲ್ಲಿ, ಸರ್ಕಾರವು ಸದೃಢವಾದ ವಿದೇಶೀ ಪಾಲುದಾರಿಕೆ ಉದ್ದಿಮೆಯನ್ನು ಕರೆತಂದಿತು. ಇಸವಿ 1990ರಲ್ಲಿ ವೋಲ್ಕ್ಸ್‌ವ್ಯಾಗನ್‌ ಉದ್ದಿಮೆಯನ್ನು ಆಯ್ಕೆ ಮಾಡಲಾಯಿತು. ಏಪ್ರಿಲ್‌ 1991ರಲ್ಲಿ ಸ್ಕೋಡಾ ವೋಲ್ಕ್ಸ್ ವ್ಯಾಗನ್‌ ಗ್ರೂಪ್‌ನ ನಾಲ್ಕನೆಯ ಬ್ರ್ಯಾಂಡ್‌ ಆಯಿತು.

ವೋಲ್ಕ್ಸ್‌ವ್ಯಾಗನ್‌ನನ್ನು ಫ್ರೆಂಚ್‌ ಕಾರ್‌ ತಯಾರಕ ರೆನಾಲ್ಟ್ ವಿರುದ್ಧ ಪೈಪೋಟಿಗೆ ಬಿಡಲಾಯಿತು. ಜೆಕ್‌ ಕಾರ್ಖಾನೆಗಳಲ್ಲಿ ಹೆಚ್ಚಿನ ಮೌಲ್ಯದ ವಾಹನ ಮಾದರಿಗಳ ತಯಾರಿಕೆಯು ರೆನಾಲ್ಟ್ ಕಾರ್ಯವಿಧಾನದ ಯೋಜನೆಯಲ್ಲಿ ಸೇರಿಲ್ಲದಿದ್ದರಿಂದ ಅದು ಸೋಲಪ್ಪಿತು. ಸ್ಕೋಡಾ ಕಾರ್ಖಾನೆಗಳಲ್ಲಿ ರೆನಾಲ್ಟ್‌ ಟ್ವಿಂಗೊ ಸಿಟಿ ಕಾರ್‌ ಮಾದರಿಯನ್ನು ತಯಾರಿಸಲು ಅದಕ್ಕೆ ಪ್ರಸ್ತಾಪ ಮಂಡಿಸಲಾಯಿತು.

ನಿರ್ಧಾರ ತೆಗೆದುಕೊಂಡಾಗ, ಜರ್ಮನ್‌ ಉದ್ದಿಮೆಯೊಂದಕ್ಕೆ ಖಾಸಗೀಕರಣ ಮಾಡಿದ ಕ್ರಮವು ವಿವಾದಾಸ್ಪದವಾಯಿತು. ಲಾಡಾ-AutoVAZ (ಆಟೋವಾಜ್‌) ಮತ್ತು ಸ್ವತಃ ಸ್ಕೋಡಾ ವರ್ಕ್ಸ್‌ (ಒಂದೊಮ್ಮೆ ಸ್ಕೋಡಾ ಆಟೋ ಉದ್ದಿಮೆಯ ಮಾತೃ ಸಂಸ್ಥೆ) ಸೇರಿದಂತೆ ಇತರೆ ಈಸ್ಟರ್ನ್-ಬ್ಲಾಕ್ ವಾಹನ ತಯಾರಕರ ತರುವಾಯದ ಏಳಿಗೆಗಳನ್ನು ಆಧರಿಸಿ, ಇದು ತಪ್ಪು ನಿರ್ಧಾರವಲ್ಲ ಎಂದು ವಾದಿಸಬಹುದಾಗಿದೆ. [ಸೂಕ್ತ ಉಲ್ಲೇಖನ ಬೇಕು].

ವೋಲ್ಕ್ಸ್‌ವ್ಯಾಗನ್‌ ಗ್ರೂಪ್‌ ಉದ್ದಿಮೆಯ ಪರಿಣತಿ ಮತ್ತು ಹೂಡಿಕೆಗಳ ಬೆಂಬಲದೊಂದಿಗೆ, ವಾಹನದ ಶೈಲಿ ಮತ್ತು ತಾಂತ್ರಿಕತೆ- ಎರಡೂ ಬಹಳಷ್ಟು ಸುಧಾರಿಸಿದವು. ಇಸವಿ 1994ರ ಮಾದರಿಯಾದ ಫೆಲಿಷಿಯಾ ಇನ್ನೂ ಫೇವರಿಟ್‌ ಮಾದರಿಯ ಫ್ಲೋರ್‌ಪ್ಯಾನ್‌ ಆಧರಿಸಿತ್ತು. ಆದರೆ ಗುಣಮಟ್ಟದಲ್ಲಿ ಸುಧಾರಣೆ ನೆರವಾಗಿ,ಈ ವಾಹನವು ಜೆಕ್‌ ಗಣರಾಜ್ಯದಲ್ಲಿ ಹಣಕ್ಕೆ ಒಳ್ಳೆಯ ಮೌಲ್ಯದ ವಸ್ತುವಾಯಿತು ಹಾಗೂ ಜನಪ್ರಿಯತೆ ಗಳಿಸಿತು. ವೋಲ್ಕ್ಸ್‌ವ್ಯಾಗನ್ AG ಉದ್ದಿಮೆಯ ಮುಖ್ಯಸ್ಥ ಫರ್ಡಿನಂಡ್‌ ಪೀಚ್‌ ತಾವೇ ವೈಯಕ್ತಿಕವಾಗಿ ಆಸಕ್ತಿ ವಹಿಸಿ, ಡಿರ್ಕ್‌ ವಾನ್‌ ಬ್ರೇಕಲ್‌ರನ್ನು ವಿನ್ಯಾಸದ ತಂಡದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿಕೊಂಡರು. ಆನಂತರ ತಯಾರಾದ ಆಕ್ಟೇವಿಯಾ ಮತ್ತು ಫೇಬಿಯಾ ಮಾದರಿಗಳು ಬಹಳ ಬೇಡಿಕೆಯುಳ್ಳ ಯುರೋಪಿಯನ್‌ ಒಕ್ಕೂಟ ಮಾರುಕಟ್ಟೆಗಳಲ್ಲಿ ಪ್ರವೇಶ ಮಾಡಿದವು.

ಅವುಗಳನ್ನು ಒಂದೇ ರೀತಿಯ ವೋಲ್ಕ್ಸ್‌ವ್ಯಾಗನ್ ಗ್ರೂಪ್‌ ಫ್ಲೋರ್‌ಪ್ಯಾನ್‌ಗಳ ಮೇಲೆ ನಿರ್ಮಿಸಲಾಗಿವೆ. ಇತ್ತೀಚೆಗಿನ ಆಕ್ಟೇವಿಯಾ ಮಾದರಿಯು ಗಾಲ್ಫ್‌ Mk5 ಹಾಗೂ ಫೇಬಿಯಾ ಮಾದರಿಯು A0 ಫ್ಲೋರ್‌ಪ್ಯಾನ್‌ ಮಾದರಿಯನ್ನು ಆಧರಿಸಿದೆ. ಫೇಬಿಯಾ ಮಾದರಿಯು ಗಾಲ್ಫ್‌ Mk5 ಫ್ಲೋರ್‌ಪ್ಯಾನ್‌ನ್ನು ಆಧರಿಸಿದೆ. ಆದರೂ, ಈ ಫ್ಲೋರ್‌ಪ್ಯಾನ್‌ ಆಧರಿಸಿ ಫೋಕ್ಸ್‌ವ್ಯಾಗನ್ ತನ್ನ ಹೊಸ ಪೊಲೊ ಮಾದರಿಯನ್ನು ಬಿಡುಗಡೆಗೊಳಿಸುವುದಕ್ಕೆ ಒಂದು ವರ್ಷದ ಮುಂಚೆಯೇ‌ ಫೇಬಿಯಾವನ್ನು ಬಿಡುಗಡೆಗೊಳಿಸಲಾಯಿತು.

1980ರ ದಶಕದುದ್ದಕ್ಕೂ ಅದರ ಖ್ಯಾತಿಯ ಸುಸ್ಪಷ್ಟ ಹೋಲಿಕೆ ಮಾಡಿದಾಗ, (VW) [] ಉದ್ದಿಮೆಯು ಸ್ಕೋಡಾವನ್ನು ತಮ್ಮ ಸ್ವಾಮ್ಯಕ್ಕೆ ತೆಗೆದುಕೊಂಡಾಗಿನಿಂದ, ಪಶ್ಚಿಮ ಯುರೋಪ್‌ನಲ್ಲಿ ಈ ವಾಹನದ ಬಗ್ಗೆ ಪರಿಕಲ್ಪನೆ ಸಂಪೂರ್ಣವಾಗಿ ಬದಲಾಗಿವೆ- ವಾಹನ ಪ್ರಪಂಚದಿಂದ 'ಅವಹಾಸ್ಯದ ವಸ್ತು 'ಎಂದು ಸಾಮಾನ್ಯವಾಗಿ ಅದು ಬಣ್ಣಿತವಾಗಿತ್ತು.[][][] ತಾಂತ್ರಿಕ ಅಭಿವೃದ್ಧಿ ಮುಂದುವರೆದು, ನೂತನ, ಆಕರ್ಷಕ ಮಾದರಿಗಳನ್ನು ಮಾರುಕಟ್ಟೆಗೆ ಲಗ್ಗೆ ಇಟ್ಟಾಗ, ಸ್ಕೋಡಾ ವಾಹನದ ವರ್ಚಸ್ಸು ಸುಧಾರಣೆ ಆರಂಭದಲ್ಲಿ ನಿಧಾನವಾಯಿತು. 2000ರ ದಶಕದಲ್ಲಿ ಆರಂಭವಾದ ಸ್ಕೋಡಾದ "ಇಟ್ ಈಸ್ ಎ ಸ್ಕೋಡಾ, ಹಾನೆಸ್ಟ್" ಜಾಹೀರಾತು ಅಭಿಯಾನವು UKಯಲ್ಲಿ ಆ ವಾಹನಕ್ಕೆ ಮಹತ್ವದ ತಿರುವು ನೀಡಿತು. ಬ್ರಿಟಿಷ್‌ ದೂರದರ್ಶನದಲ್ಲಿ ಪ್ರಸಾರವಾದ 2003ರ ಜಾಹೀರಾತಿನಲ್ಲಿ, ಉತ್ಪಾದನಾ ಘಟಕದಲ್ಲಿ ಒಬ್ಬ ಹೊಸ ನೌಕರ ಕಾರುಗಳ ಬೊನೆಟ್‌ ಮೇಲೆ ಸ್ಕೋಡಾ ಬ್ಯಾಡ್ಜ್‌ಗಳನ್ನು ಅಳವಡಿಸುತ್ತಿದ್ದರು. ಕೆಲವು ಆಕರ್ಷಕವಾಗಿ ಕಾಣುವ ಕಾರುಗಳು ಬಂದಾಗ, ಈ ಕಾರುಗಳು ಬಹಳ ಆಕರ್ಷಕವಾಗಿವೆ, ಇವು ಸ್ಕೋಡಾ ವಾಹನವಾಗಲು ಸಾಧ್ಯವೇ ಇಲ್ಲ ಎಂದು ಈ ನೌಕರ ಆ ಕಾರುಗಳಿಗೆ ಬ್ಯಾಡ್ಜ್‌ ಅಳವಡಿಸುವುದಿಲ್ಲ.[] ಸ್ಕೋಡಾದ ವರ್ಚಸ್ಸಿನ ಸಮಸ್ಯೆಯನ್ನು ಮುಖಾಮುಖಿಯಾಗಿ ಎದುರಿಸುವ ಮೂಲಕ ಈ ಮಾರುಕಟ್ಟೆ ಅಭಿಯಾನವು ಕೆಲಸ ಮಾಡಿತು.-ಈ ತಂತ್ರವನ್ನು ಮಾರುಕಟ್ಟೆ ವೃತ್ತಿಪರರು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಿದ್ದರು. ಜಾಹೀರಾತು ಅಭಿಯಾನಕ್ಕೆ ಮುಂಚೆ, ಬ್ರಾಟಿಸ್ಲಾವಾದಲ್ಲಿನ ಪ್ರವಾಸ ಮಾರ್ಗದರ್ಶಕರು ಸ್ಕೋಡಾ ವಾಹನ ಕುರಿತು ಲೇವಡಿ ಮಾಡುವುದನ್ನು ಕೇಳುವುದು ಸಾಮಾನ್ಯ ಸಂಗತಿಯಾಗಿತ್ತು, [ಸೂಕ್ತ ಉಲ್ಲೇಖನ ಬೇಕು] 'ಸ್ಕೋಡಾದ ಬೆಲೆಯನ್ನು ಹೇಗೆ ದ್ವಿಗುಣಗುಳಿಸುತ್ತೀರ? ಇಂಧನ ಟ್ಯಾಂಕ್ ತುಂಬಿಸಿಬಿಡಿ!' ಎನ್ನುತ್ತಿದ್ದರು. ಫೇಬಿಯಾ ಮತ್ತು ಆಕ್ಟೇವಿಯಾ ಅತ್ಯುತ್ತಮ ಕಾರುಗಳಾಗಿರದಿದ್ದರೆ, ಈ ಅಭಿಯಾನವು ಕೆಟ್ಟದಾಗಿ ವಿರುದ್ಧ ಪರಿಣಾಮ ಬೀರುತ್ತಿತ್ತು. ಇಸವಿ 2005ರೊಳಗೆ ಸ್ಕೋಡಾ UKದಲ್ಲಿ ಪ್ರತಿ ವರ್ಷವೂ ಸುಮಾರು 30,000 ಕಾರುಗಳನ್ನು ಮಾರಾಟ ಮಾಡಿತ್ತು. ಇದು ಮಾರುಕಟ್ಟೆಯ 1%ಕ್ಕಿಂತಲೂ ಹೆಚ್ಚು ಪಾಲನ್ನು ಹೊಂದಿತ್ತು. UKಯ ಇತಿಹಾಸದಲ್ಲಿ ಮೊದಲ ಬಾರಿಗೆ, ಸ್ಕೋಡಾ ವಾಹನಗಳ ಸರಬರಾಜುಗಳಿಗೆ 'ವೇಯ್ಟಿಂಗ್‌ ಲಿಸ್ಟ್‌'(ಕಾದಿರಿಸುವ ಪಟ್ಟಿ)ನ್ನು ತಯಾರಿಸಲಾಯಿತು. 2000ದ ದಶಕದಲ್ಲಿ J.D. ಪವರ್‌ ಗ್ರಾಹಕ ತೃಪ್ತಿ ಸಮೀಕ್ಷೆಯ ಪ್ರಕಾರ, UKಯ ಸ್ಕೋಡಾ ಮಾಲೀಕರು ತಮ್ಮ ವಾಹನವನ್ನು ಅತ್ಯುತ್ತಮ ಅಥವಾ ಅದಕ್ಕೆ ಹತ್ತಿರ ಎಂಬ ಸ್ಥಾನ ನೀಡಿದ್ದಾರೆ.

As of 2010[[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]] ಬೊಸ್ನಿಯಾ ಮತ್ತು ಹರ್ಜೆಗೊವಿನಾದ ರಾಜಧಾನಿ ಸರಾಜೆವೊ ಸೇರಿದಂತೆ, ಸ್ಕೋಡಾದ ತಯಾರಿಕೆ ಮತ್ತು ಜೋಡಣೆಯ ಘಟಕಗಳು ಹಲವೆಡೆ ಇವೆ. ಪಶ್ಚಿಮಭಾರತದ ರಾಜ್ಯ ಮಹಾರಾಷ್ಟ್ರಔರಂಗಬಾದ್‌ನಗರದಲ್ಲಿ ಸ್ಕೋಡಾ ಜೋಡಣೆ ಘಟಕವನ್ನು ಹೊಂದಿದೆ. ಇದು 2001ರಲ್ಲಿ ಸ್ಕೋಡಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು.

ಇಸವಿ 2006ರಲ್ಲಿ ಸ್ಕೋಡಾ ತನ್ನ ಹೊಚ್ಚಹೊಸ ಮಾದರಿ ರೂಮ್‌ಸ್ಟರ್‌ನ್ನು ಪ್ರಸ್ತುತಪಡಿಸಿತು. ಇದು 2007ಲ್ಲಿ ಸಣ್ಣಪ್ರಮಾಣದ ಫೇಬಿಯಾ ಆಗಿತ್ತು.

ಆನಂತರ, 2008ರಲ್ಲಿ ಸ್ಕೋಡಾ, ಹೊಸ ಹೆಡ್‌ಲೈಟ್‌ಗಳು, ಮುಂದಿನ ಗ್ರಿಲ್ ಮತ್ತು ಬಂಪರ್‌ ಹಾಗೂ ಹಿಂಭಾಗ ಮತ್ತು ಒಳಭಾಗಗಳನ್ನು ಸ್ವಲ್ಪ ಮರುವಿನ್ಯಾಸ ಮಾಡಿದ ನವೀಕೃತ ಆಕ್ಟಾವಿಯದ ಮೊದಲ ಚಿತ್ರಗಳನ್ನು ಬಿಡುಗಡೆಗೊಳಿಸಿತು. ಪುನರ್ವಿನ್ಯಾಸಿತ ಕಾರ್‌ನಲ್ಲಿ 1.4 TFSI ಹಾಗೂ ಹೊಸ ಕಾಮನ್‌ ರೇಲ್ಡೀಸೆಲ್‌ ಇಂಜಿನ್‌ ಸೇರಿದಂತೆ ಹೊಸದಾಗಿ ಆಯ್ಕೆ ಮಾಡಿದ ಇಂಜಿನ್‌ಗಳಿವೆ.

ಸೆಪ್ಟೆಂಬರ್‌ 2006ರಲ್ಲಿ ನಡೆದ ಪ್ಯಾರಿಸ್‌ ಆಟೋ ಷೋದಲ್ಲಿ ಹೊಸ ಪರಿಕಲ್ಪನೆಯ ಕಾರ‌ನ್ನು ಪ್ರದರ್ಶಿಸಲಾಯಿತು. ಈ ಪರಿಕಲ್ಪನೆಯನ್ನು ಜಾಯ್ಸ್ಟರ್‌ ಎಂದು ಕರೆಯಲಾಯಿತು-ಯುವಜನರ ಅಭಿರುಚಿಗೆ ತಕ್ಕಂತೆ ತಯಾರಿಸಲಾದ ಮೂರು ಬಾಗಿಲುಗಳ ಕಾಂಪ್ಯಾಕ್ಟ್ ಕಾರು ಇದಾಗಿತ್ತು.

ವೋಲ್ಕ್ಸ್‌ವ್ಯಾಗನ್ ಗ್ರೂಪ್‌ನ ಅಸ್ಟ್ರೇಲಿಯಾ ಘಟಕ ವೋಲ್ಕ್ಸ್‌ವ್ಯಾಗನ್ ಗ್ರೂಪ್‌ ಆಸ್ಟ್ರೇಲಿಯಾ (VGA), ಕೊನೆಯ ಬಾರಿ 1983ರಲ್ಲಿ ಆಸ್ಟ್ರೇಲಿಯಾದಲ್ಲಿ ಮಾರಾಟವಾದ ಸ್ಕೋಡಾವನ್ನು ಪುನಃ ಅಕ್ಟೋಬರ್‌ 2007ರಲ್ಲಿ ಆಸ್ಟ್ರೇಲಿಯನ್‌ ಮಾರುಕಟ್ಟೆಗೆ ತರುವ ಇಂಗಿತವನ್ನು ಇತ್ತೀಚೆಗೆ ಘೋಷಿಸಿತು. As of 2010[[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]] ಆಕ್ಟೇವಿಯಾ, ರೂಮ್ಸ್ಟರ್‌ ಮತ್ತು ಸುಪರ್ಬ್‌ ಮಾದರಿಗಳು ಆಸ್ಟ್ರೇಲಿಯಾದಲ್ಲಿ ಲಭ್ಯವಿವೆ. ಫೇಬಿಯಾದ ಬೆಲೆಯನ್ನು ವೋಲ್ಕ್ಸ್‌ವ್ಯಾಗನ್ ಪೊಲೊದಕ್ಕಿಂತಲೂ ಕಡಿಮೆ ಇರಿಸಲು ಸಮರ್ಥರಾದರೆ ಮಾತ್ರ ಅದನ್ನು ಆಸ್ಟ್ರೇಲಿಯಾದ ಮಾರುಕಟ್ಟೆಗೆ ತರುತ್ತೇವೆ ಎಂದು VGA ಹೇಳಿಕೆ ನೀಡಿತು.

ಅಗ್ಗದ ಬೆಲೆಯ ಉಪ-ಕಾಂಪ್ಯಾಕ್ಟ್‌ ಬ್ರೆಜಿಲಿಯನ್‌ ವೋಲ್ಕ್ಸ್‌ವ್ಯಾಗನ್ ಗೋಲ್‌ NFನ ಆವೃತ್ತಿಯು ಯುರೋಪ್‌ನಲ್ಲಿ ಸ್ಕೋಡಾಗಾಗಿ ಹೊಸ ಮೂಲ ಮಾದರಿಯಾಗಲಿದೆಯೆಂಬ ವದಂತಿಗಳಿವೆ. [ಸೂಕ್ತ ಉಲ್ಲೇಖನ ಬೇಕು]

ಇಸವಿ 2006ರಲ್ಲಿ ಸ್ಕೋಡಾ ಚೀನಾದಲ್ಲಿ ಉತ್ಪಾದನೆ ಆರಂಭಿಸಿತು. ಚೀನಾ ದೇಶದಲ್ಲಿ ಇಸವಿ 2009ರಲ್ಲಿ ಕಾರುಗಳ ಮಾರಾಟ ಪ್ರಮಾಣವು 2008ರಲ್ಲಿ ಮಾರಾಟವಾದ ಪ್ರಮಾಣಕ್ಕಿಂತ ಎರಡರಷ್ಟಾಗಿ 123,000 ವಾಹನಗಳನ್ನು ಮುಟ್ಟಿತು. ಇಸವಿ 2011ರಲ್ಲಿ ಷಾಂಘೈ ವೋಲ್ಕ್ಸ್‌ವ್ಯಾಗನ್ ಯೆಟಿ SUVಯನ್ನು ತಯಾರಿಸಲು ಯೋಜಿಸಿದೆ.[]

ಮಾರಾಟದ ಇತಿಹಾಸ

[ಬದಲಾಯಿಸಿ]
ಮಾದರಿ 1997 1998 1999 2000 2001 2002 2003 2004 2005 2006 2007 2008 2009 2010
ಸ್ಕೋಡಾ ಫೆಲಿಷಿಯಾ 288,458 261,127 241,256 148,028 44,963
ಸ್ಕೋಡಾ ಫೇಬಿಯಾ 823 128,872 250,978 264,641 260,988 247,600 236,698 243,982 232,890 246,561 264,173
ಸ್ಕೋಡಾ ಆಕ್ಟೇವಿಯಾ 47,876 102,373 143,251 158,503 164,134 164,017 165,635 181,683 233,322 270,274 309,951 344,857 317,335
ಸ್ಕೋಡಾ ಸುಪರ್ಬ್‌ 177 16,867 23,135 22,392 22,091 20,989 20,530 25,645 44,548
ಸ್ಕೋಡಾ ರೂಮ್‌ಸ್ಟರ್‌ 14,422 66,661 57,467 47,152
ಸ್ಕೋಡಾ ಯೆತಿ 11,018
ವರ್ಷದ ಒಟ್ಟುಕಾರುಗಳು 336,334 363,500 385,330 435,403 460,252 445,525 449,758 451,675 492,111 549,667 630,032 674,530 684,226

ಮೋಟರ್‌ಸ್ಪೋರ್ಟ್

[ಬದಲಾಯಿಸಿ]
2004 ರ‌್ಯಾಲ್ಲಿ ಫಿನ್ಲೆಂಡ್‌ನಲ್ಲಿ ಫೇಬಿಯಾ WRC.
ಫೇಬಿಯಾ S2000 (2009)

ಕೆಳಮಟ್ಟದ ಕಾರು ರೇಸ್‌ ಸ್ಪರ್ಧೆಗಳಲ್ಲಿ ಅತ್ಯುತ್ತಮ ಜಯಗಳನ್ನು ಗಳಿಸಿದ ಸುದೀರ್ಘ ಇತಿಹಾಸದೊಂದಿಗೆ, ಸ್ಕೋಡಾ 1999 ಋತುವಿನಲ್ಲಿ ನಡೆದ FIA ವರ್ಲ್ಡ್‌ ರ‌್ಯಾಲಿ ಚಾಂಪಿಯನ್‌ಷಿಪ್‌ ಸ್ಪರ್ಧೆಯಲ್ಲಿ ಭಾಗವಹಿಸಿತು. ಇದಕ್ಕಾಗಿ ಸ್ಕೋಡಾ ಆಕ್ಟೇವಿಯಾದ ತನ್ನ ವರ್ಲ್ಡ್‌ ರಾಲಿ ಕಾರ್‌ ಮಾದರಿಯನ್ನು ಬಳಸಿತು. ಇಸವಿ 2001ರಲ್ಲಿ ನಡೆದ ಸಫಾರಿ ರ‌್ಯಾಲಿಯಲ್ಲಿ ಆರ್ಮಿನ್‌ ಷ್ವಾರ್ಜ್‌ ಮೂರನೆಯ ಸ್ಥಾನ ಗಳಿಸಿದ್ದು ಆಕ್ಟೇವಿಯಾ WRC ಜತೆಯಲ್ಲಿ ಸ್ಕೋಡಾದ ಅತ್ಯುತ್ತಮ ಪ್ರದರ್ಶನವಾಗಿದೆ. ಇಸವಿ 2003ರ ಮಧ್ಯದಿಂದ, ಆಕ್ಟೇವಿಯಾದ ಸ್ಥಾನದಲ್ಲಿ ಚಿಕ್ಕ ಗಾತ್ರದ ಸ್ಕೋಡಾ ಫೇಬಿಯಾವನ್ನು ಪರಿಚಯಿಸಲಾಯಿತು. ಇಸವಿ 2004 ಋತುವನ್ನು ಸ್ಕೋಡಾ ಈ ಮಾದರಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಬಳಸಿಕೊಂಡಿತು. ಆದರೆ ನಂತರದ ಋತುವಿನಲ್ಲಿ ಅಷ್ಟು ಯಶಸ್ಸು ಕಾಣಲಿಲ್ಲ. ಆದರೆ, ಋತುವಿನ ಅಂತ್ಯದಲ್ಲಿ ನಡೆದ ರಾಲಿ ಆಸ್ಟ್ರೇಲಿಯಾ ಸ್ಪರ್ಧೆಯಲ್ಲಿ, 1995ರ ವಿಶ್ವ ಚಾಂಪಿಯನ್‌ ಕೊಲಿನ್‌ ಮೆಕ್ರೇನಿವೃತ್ತಿಯಾಗುವುದಕ್ಕೆ ಮುಂಚೆ ಎರಡನೆಯ ಸ್ಥಾನದಲ್ಲಿದ್ದರು. ಈ ಸರಣಿಯಿಂದ ಸ್ಕೋಡಾ ಹಿಂದೆ ಸರಿಯಿತು. 2006 ಋತುವಿನಲ್ಲಿ ಸ್ಕೋಡಾವನ್ನು ಅರೆ-ಖಾಸಗಿ ರೆಡ್ ಬುಲ್ ಸ್ಕೋಡಾ ತಂಡದಿಂದ ಪ್ರತಿನಿಧಿಸಲಾಗಿತ್ತು. ರಾಲಿ ಕ್ಯಾಟಲುನ್ಯಾದಲ್ಲಿಜ್ಯಾನ್‌ ಕೊಪೆಕಿ ಫೇಬಿಯಾ WRC ಕಾರ್‌ನ್ನು ಚಲಾಯಿಸಿ ಐದನೆಯ ಸ್ಥಾನ ಗಳಿಸಿದರು. ಹಾಗೂ ಇತ್ತೀಚೆಗಿನ 2007 ರಾಲಿ ಡಾಯಿಚ್ಲೆಂಡ್‌ನಲ್ಲಿ ಪುನಃ ಕೊಪೆಕಿ ಕೈಯಲ್ಲಿ ಫ್ಯಾಬಿಯ ಮತ್ತೆ 5 ಸ್ಥಾನದ ಫಲಿತಾಂಶವನ್ನು ಸಾಧಿಸಿತು. ಮಾಜಿ ಫೋರ್ಡ್‌ ಮತ್ತು ಸಿಟ್ರೊಯೆನ್‌ ಚಾಲಕ ಫ್ರಾಂಕೊಯ್‌ ಡುವಾಲ್‌ ಸಹ 2006ರಲ್ಲಿ ಖಾಸಗಿ ಫಸ್ಟ್‌‌ ಮೊಟೊರ್ಸ್ಪೋರ್ಟ್‌ ಟೀಮ್‌ಗಾಗಿ ಫೇಬಿಯಾ WRCಯನ್ನು ಚಲಾಯಿಸಿ, ರಾಲಿ ಕ್ಯಾಟಲೂನ್ಯಾದಲ್ಲಿ ಆರನೆಯ ಸ್ಥಾನ ಗಳಿಸಿದರು.

ಇಂಟರ್ಕಾಂಟಿನೆಂಟಲ್‌ ರಾಲಿ ಚಾಲೆಂಜ್‌

[ಬದಲಾಯಿಸಿ]

ಇಸವಿ 2009ರಲ್ಲಿ, ಫೇಬಿಯಾ S2000ನ್ನು ಬಳಸಿದ ಸ್ಕೋಡಾ ಮೊದಲ ಬಾರಿಗೆ ಇಂಟರ್ಕಾಂಟಿನೆಂಟಲ್‌ ರಾಲಿ ಚಾಲೆಂಜ್‌ನಲ್ಲಿ ಭಾಗವಹಿಸಿತು. ಈ ಋತುವಿನಲ್ಲೂ ಸಹ ತಂಡವು ಅತ್ಯುತ್ತಮ ಪ್ರದರ್ಶನ ನೀಡಿತು. ಬ್ರೆಜಿಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಕೋಡಾ UK ತಂಡಕ್ಕಾಗಿ ಗಯ್ ವಿಲ್ಕ್ಸ್‌ ಎರಡನೆಯ ಸ್ಥಾನ ಗಳಿಸಿದರು.

ಮಾದರಿಗಳು

[ಬದಲಾಯಿಸಿ]

ಪ್ರಸ್ತುತ ಮಾದರಿಗಳು

[ಬದಲಾಯಿಸಿ]
ಸುಪರ್ಬ್‌ನ ಪ್ರಸ್ತುತ ಮಾದರಿ

ಕಾನ್ಸೆಪ್ಟ್ ಕಾರುಗಳು

[ಬದಲಾಯಿಸಿ]
2006 ಸ್ಕೋಡಾ ಯತಿ ಕಾನ್ಸೆಪ್ಟ್‌

ಮುಂಚಿನ ಮಾದರಿಗಳು

[ಬದಲಾಯಿಸಿ]
  • ಲಾರಿನ್‌ & ಕ್ಲೆಮೆಂಟ್‌ A (1905–1907)
  • ಲಾರಿನ್‌ & ಕ್ಲೆಮೆಂಟ್‌ B (1906–1908)
  • ಲಾರಿನ್‌ & ಕ್ಲೆಮೆಂಟ್‌ C (1906–1908)
  • ಲಾರಿನ್‌ & ಕ್ಲೆಮೆಂಟ್‌ D (1906–1907)
  • ಲಾರಿನ್‌ & ಕ್ಲೆಮೆಂಟ್‌ E (1906–1909)
  • ಲಾರಿನ್‌ & ಕ್ಲೆಮೆಂಟ್‌ B2 (1907–1908)
  • ಲಾರಿನ್‌ & ಕ್ಲೆಮೆಂಟ್‌ C2 (1907–1908)
  • ಲಾರಿನ್‌ & ಕ್ಲೆಮೆಂಟ್‌ F (1907–1909)
  • ಲಾರಿನ್‌ & ಕ್ಲೆಮೆಂಟ್‌ FF (1907)
  • ಲಾರಿನ್‌ & ಕ್ಲೆಮೆಂಟ್‌ FC (1907–1909)
  • ಲಾರಿನ್‌ & ಕ್ಲೆಮೆಂಟ್‌ HO/ HL/HLb (1907–1913)
  • ಲಾರಿನ್‌ & ಕ್ಲೆಮೆಂಟ್‌ BS (1908–1909)
  • ಲಾರಿನ್‌ & ಕ್ಲೆಮೆಂಟ್‌ FCS (1908–1909)
  • ಲಾರಿನ್‌ & ಕ್ಲೆಮೆಂಟ್‌ G (1908–1911)
  • ಲಾರಿನ್‌ & ಕ್ಲೆಮೆಂಟ್‌ DO/DL (1909–1912)
  • ಲಾರಿನ್‌ & ಕ್ಲೆಮೆಂಟ್‌ FDO/FDL (1909–1915)
  • ಲಾರಿನ್‌ & ಕ್ಲೆಮೆಂಟ್‌ EN (1909–1910)
  • ಲಾರಿನ್‌ & ಕ್ಲೆಮೆಂಟ್‌ FN/GDV/RC (1909–1913)
  • ಲಾರಿನ್‌ & ಕ್ಲೆಮೆಂಟ್‌ FCR (1909)
  • ಲಾರಿನ್‌ & ಕ್ಲೆಮೆಂಟ್‌ L/LO (1909–1911)
  • ಲಾರಿನ್‌ & ಕ್ಲೆಮೆಂಟ್‌ ENS (1910–1911)
  • ಲಾರಿನ್‌ & ಕ್ಲೆಮೆಂಟ್‌ K/Kb/LOKb (1911–1915)
  • ಲಾರಿನ್‌ & ಕ್ಲೆಮೆಂಟ್‌ LK (1911–1912)
  • ಲಾರಿನ್‌ & ಕ್ಲೆಮೆಂಟ್‌ S/Sa (1911–1916)
  • ಲಾರಿನ್‌ & ಕ್ಲೆಮೆಂಟ್‌ DN (1912–1915)
  • ಲಾರಿನ್‌ & ಕ್ಲೆಮೆಂಟ್‌ RK (1912–1916)
  • ಲಾರಿನ್‌ & ಕ್ಲೆಮೆಂಟ್‌ Sb/Sc (1912–1915)
  • ಲಾರಿನ್‌ & ಕ್ಲೆಮೆಂಟ್‌ M/Mb/MO (1913–1915)
  • ಲಾರಿನ್‌ & ಕ್ಲೆಮೆಂಟ್‌ MK/400 (1913–1924)
  • ಲಾರಿನ್‌ & ಕ್ಲೆಮೆಂಟ್‌ O/OK (1913–1916)
  • ಲಾರಿನ್‌ & ಕ್ಲೆಮೆಂಟ್‌ Sd/Se/Sg/Sk (1913–1917)
  • ಲಾರಿನ್‌ & ಕ್ಲೆಮೆಂಟ್‌ Ms (1914–1920)
  • ಲಾರಿನ್‌ & ಕ್ಲೆಮೆಂಟ್‌ Sh/Sk (1914–1917)
  • ಲಾರಿನ್‌ & ಕ್ಲೆಮೆಂಟ್‌ T/Ta (1914–1921)
  • ಲಾರಿನ್‌ & ಕ್ಲೆಮೆಂಟ್‌ Si/Sl/Sm/So/200/205 (1916–1924)
  • ಲಾರಿನ್‌ & ಕ್ಲೆಮೆಂಟ್‌ Md/Me/Mf/Mg/Mh/Mi/Ml/300/305 (1917–1923)
  • ಲಾರಿನ್‌ & ಕ್ಲೆಮೆಂಟ್‌ MS/540/545 (1920–1923)
  • ಲಾರಿನ್‌ & ಕ್ಲೆಮೆಂಟ್‌ – ಸ್ಕೋಡಾ 545 (1924–1927)
  • ಸ್ಕೋಡಾ 422 (1929)
  • ಸ್ಕೋಡಾ 633 (1931)
  • ಸ್ಕೋಡಾ ಪಾಪ್ಯುಲರ್‌ (1934)
  • ಸ್ಕೋಡಾ ರ‌್ಯಾಪಿಡ್‌ (1934)
  • ಸ್ಕೋಡಾ ಟ್ಯೂಡರ್‌ (1946–1952)
  • ಸ್ಕೋಡಾ ಸುಪರ್ಬ್‌ 4000 (1939–1940)

1950ರ ದಶಕಗಳಲ್ಲಿ

[ಬದಲಾಯಿಸಿ]

1960ರ ದಶಕ

[ಬದಲಾಯಿಸಿ]

1970ರ ದಶಕದಲ್ಲಿ

[ಬದಲಾಯಿಸಿ]

1980ರ ದಶಕ

[ಬದಲಾಯಿಸಿ]

1990ರ ದಶಕ

[ಬದಲಾಯಿಸಿ]

2000ದ ದಶಕ

[ಬದಲಾಯಿಸಿ]
ಸ್ಕೋಡಾ ಫೆಲಿಷಿಯಾ ಎಸ್ಟೇಟ್‌ ಮಾದರಿ ಸಹ ಇದೆ.

ಚಿತ್ರ ಸಂಪುಟ

[ಬದಲಾಯಿಸಿ]

ತಯಾರಿಕೆ ಸ್ಥಗಿತಗೊಳಿಸಲಾದ ಮಾದರಿಗಳು

[ಬದಲಾಯಿಸಿ]

ಸದ್ಯ ತಯಾರಿಕೆಯಲ್ಲಿರುವ ಮಾದರಿಗಳು

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]

ಗ್ರಂಥಸೂಚಿ

[ಬದಲಾಯಿಸಿ]
  • Margolius, Ivan and Meisl, Charles (1992). Škoda Laurin & Klement. London: Osprey. ISBN 1855322374.{{cite book}}: CS1 maint: multiple names: authors list (link)

ಆಕರಗಳು

[ಬದಲಾಯಿಸಿ]
  1. "Skoda Auto and unions agree pay and conditions deal". business.maktoob.com. Retrieved 7 June 2008.
  2. "Skoda Company History". carautoportal.com. Archived from the original on 21 ಡಿಸೆಂಬರ್ 2010. Retrieved 10 August 2009.
  3. BBC ವರದಿ :ಸ್ಕೋಡಾ ರ‌್ಯಾಪಿಡ್‌ - 'ಪೂರ್ ಮ್ಯಾನ್`ಸ್ ಪಾರ್ಷ್‌'
  4. ಕಾರ್‌ಪೇಜಸ್‌, ಡಿಸೆಂಬರ್‌ 2002 :ಸ್ಕೋಡಾಸ್‌ ಮಾರ್ಕೆಟಿಂಗ್‌ ಸಕ್ಸಸ್‌
  5. Massy, Kevin (28 January 2008). "Skoda flagship to get VW's premium nav system | The Car Tech blog - CNET Reviews". Reviews.cnet.com. Archived from the original on 5 ಜೂನ್ 2011. Retrieved 6 February 2010. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  6. "Å koda Octavia: first drive of the 'budget' VW - Å koda Reviews and Awards". Skoda.com.au. Archived from the original on 8 ಅಕ್ಟೋಬರ್ 2009. Retrieved 6 February 2010. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  7. Steve Kealy. "Skoda Octavia Scout 4x4 â€" Car Reviews, News & Advice". Carsales.com.au. Archived from the original on 26 ಫೆಬ್ರವರಿ 2015. Retrieved 6 February 2010. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  8. ಮಾಧ್ಯಮ ಲೇಖನ :ಸೀ ಪೇಜಸ್ 23 ಎಂಡ್ 24 Archived 2008-10-29 ವೇಬ್ಯಾಕ್ ಮೆಷಿನ್ ನಲ್ಲಿ.
  9. "Shanghai Volkswagen Plans for Skoda Yeti Production in 2011". ChinaAutoWeb.com. 22 May 2010.
  1. ವರ್ನರ್‌ ಮೋಟಾರ್‌ಬೈಸಿಕಲ್‌ಗಳ ಕುರಿತು ಇನ್ನಷ್ಟು ಮಾಹಿತಿ: Twycross, Tony (April 2005). "Auto Cycling, 1890's Style". The Moped Archive. Retrieved 13 August 2008.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಅಧಿಕೃತ ಅಂತರಜಾಲತಾಣಗಳು

[ಬದಲಾಯಿಸಿ]

ಯಾವುದಕ್ಕೂ ಸೇರಿರದ ಅಂತರಜಾಲತಾಣಗಳು

[ಬದಲಾಯಿಸಿ]
  • BRISKODA.net ಸ್ಕೋಡಾ ವೇದಿಕೆ ಮತ್ತು ಸಮುದಾಯ