ವಿಷಯಕ್ಕೆ ಹೋಗು

ಸದಸ್ಯ:Deepikachrist

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ 

[ಬದಲಾಯಿಸಿ]
ಕ್ರೈಸ್ಟ್  ಯೂನಿವರ್ಸಿಟಿ 

ನನ್ನ ಹೆಸರು ದೀಪಿಕಾ ಹೆಚ್ ಆರ್.ನಾನು ಬೆಂಗಳೂರಿನಲ್ಲಿ ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿ.ಎಸ್ಸಿ ಪಧವಿಯನ್ನು ಪಡೆಯುತ್ತಿದ್ದೇನೆ.ಮೂಲತಃ ನಾನು ಬೆಂಗಳೂರಿನವಳೇ.ನನಗೆ ಗಣಿತಶಾಸ್ತ್ರದ ಬಹಳ ಆಸಕ್ತಿ.ಆದ್ದರಿಂದ ನಾನು ನನ್ನ ಮುಂದಿನ ವ್ಯಾಸಾಂಗವನ್ನು ಗಣಿತಶಾಸ್ತ್ರದ ಮುಂದುವರಿಸಲು ನಿರ್ಧರಿಸದ್ದೇನೆ.ಈಗ ನಾನು ಗಣಿತಶಾಸ್ತ್ರದ ಜೊತೆಗೆ ಭೌತಶಾಸ್ತ್ರ ಹಾಗು ರಾಸಾಯನಶಾಸ್ತ್ರದ ಅಧ್ಯಯನ ಮಾಡುತ್ತಿದ್ದೇನೆ.ಇದರ ಹೊರತು ನನಗೆ ಚಿಕ್ಕವಳಿದ್ದಾಗಿನಿಂದಲೂ ಪತ್ರಕರ್ತೆಯಾಗಬೇಕೆಂಬ ಆಸೆಯಿತ್ತು.ಆದರೆ ನಾನು ನನ್ನ ಉಜ್ವಲ ಭವಿಷ್ಯವನ್ನು ಗಣಿತಶಾಸ್ತ್ರದಲ್ಲಿ ಕಂಡೆ.ನನಗೆ ಪುಸ್ತಕ ಓದುವ ಹುಚ್ಚೂ ಉಂಟು.ಅದರಲ್ಲೂ ವಿಜ್ಞಾನದಲ್ಲಿನ ಸಂಶೋಧನೆಯ ಬಗ್ಗೆ ಹೆಚ್ಚು ಪುಸ್ತಕಗಳನ್ನು ಓದುತ್ತೇನೆ.ಇದು ನನ್ನ ವ್ಯಾಸಾಂಗದಲ್ಲಿ ಉಪಯೋಗಪಡುತ್ತದೆ.ನಾನು ನನ್ನ ಶಾಲೆಯಲ್ಲಿ ಹಲವು ವಿಜ್ಞಾನ ಸಂಬಂಧಿತ ಪುರಸ್ಕಾರಗಳನ್ನು ಗೆದ್ದಿದ್ದೇನೆ, ಅಲ್ಲದೆ ನನ್ನ ಶಾಲೆಯಲ್ಲಿ ಅಥಂಯುತ್ತ್ತಮ ವಿದ್ಯಾರ್ಥಿ ಎಂಬ ಬಿರುದನ್ನೂ ಹಲವು ವರ್ಷಗಳಲ್ಲಿ ಸತತವಾಗಿ ಪಡೆದೆದ್ದೇನೆ.

ಅಬ್ದುಲ್ ಕಲಾಂ 

ಆಸಕ್ತಿಗಳು 

[ಬದಲಾಯಿಸಿ]
ಮಹಾತ್ಮಾ ಗಾಂಧಿ 

ನನಗೆ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಅಲ್ಲಿನ ಜೀವನಶೈಲಿ ತಿಳಿದುಕೊಳ್ಳಲು ಬಹಳ ಕಾತುರ.ಆದ್ದರಿಂದ ನಾನು ಆಗಾಗ ಬಿಡುವಾದಾಗ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸಂಸ್ಕೃತಿ ಹಾಗು ಜನರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ.ಇದು ನನ್ನ ಸಾಮಾಜಿಕ ಜ್ಞಾನವನ್ನು ಹೆಚ್ಚಿಸುತ್ತದೆ ಎಂಬುದು ನನ್ನ ನಂಬಿಕೆ. ನಾನು ತುಂಬಾ ಜ್ಞಾನಾನವನ್ನು ಸಂಪಾದಿಸುವ ಮೂಲಗಳನ್ನು ಹುಡುಕುತ್ತೇನೆ.ಅವು ಯಾವುದೇ ಮೂಲದಲ್ಲಿ ಬಂದರೂ ಸರಿಯೇ.ಸದಾ ಅವಕಾಶಗಳನ್ನು ಹುಡುಕುತ್ತಿರಬೇಕೆಂಬುದು ನನ್ನ ಉದ್ದೇಶ.ಅಬ್ದುಲ್ ಕಲಾಂ, ಮಹಾತ್ಮಾ ಗಾಂಧಿ ಮುಂತಾದ ಮಹಾನುಭಾವಿಗಳ ಜೀವನ ಮೌಲ್ಯಗಳು ನನ್ನನು ಬಹಳ ಪ್ರೇರೇಪಿಸುತ್ತವೆ.ಜೀವನದಲ್ಲಿ ಏನಾದರೂ ಒಂದು ಸಾಧಿಸಬೇಕು ಎಂಬ ಉತ್ಸಾಹ ಮೂಡುತ್ತ್ತದೆ.ನನಗೆ ಮಾನವ ಮನಃಶಾಸ್ತ್ರದಲ್ಲಿ ಬಹಳ ಆಸಕ್ತಿ.ನಮ್ಮ ನಡವಳಿಕೆಗಳನ್ನು ಅರ್ಥಿಸಿಕೊಳ್ಳುವುದರ  ಬಗ್ಗೆ ನನಗೆ ಪರಿಚಯವಿದೆ.ಇದನ್ನು ನಾನು ನನ್ನ ವಿದ್ಯಾಭ್ಯಾಸ  ಜೊತೆಗೆ ಕಲಿಯುತ್ತಿದ್ದೇನೆ.ನನ್ನ ವಿರಾಮದ  ಸಮಯದಲ್ಲಿ ಹಾಡು ಕೇಳಿ ನನ್ನ ಮನಸ್ಸಿಗೆ ವಿಶ್ರಾಂತಿ ಕಲಾಗಿಸುತ್ತೇನೆ .ಅದರಲ್ಲೂ ನನಗೆ ಪಂಜಾಬಿ ಹಾಡುಗಳ್ಳಲ್ಲಿ ವಿಶೇಷ ಅಭಿರುಚಿ.ಇನ್ನು ಕೆಲವೊಮ್ಮೆ ಕಾರ್ಟೂನ್ಗಳನ್ನು ನೋಡಿ ಸಮಯ ಕಳೆಯುತ್ತೇನೆ.ಶಿನ್ ಚಾನ್ ನನ್ನ ನೆಚ್ಚಿನ ಕಾರ್ಟೂನ್.ಬೆಂಗಳೂರಿನ ಉದ್ಯಾನವನಗಳಲ್ಲಿ ಪ್ರಕೃತಿಯ ಜೊತೆಗೆ ಕಾಲ ಕಳೆಯುವುದು ನನಗೆ ಬಹಳ ಇಷ್ಟ.ಪರಿಸರದೊಂದಿಗೆ ಬೆರೆತು ಅದರಲ್ಲೇ ಮುಳುಗಿಹೋಗುವ ಭಾವನೆ ಅತ್ಯದ್ಭುತ .

ಬೆಗಳೂರಿನಲ್ಲಿರುವ ಲಾಲ್ಬಾಗ್ ಉದ್ಯಾನವನ 

ಮುಂದಿನ  ಜೀವನ 

[ಬದಲಾಯಿಸಿ]

ನಾನು ಭವಿಷ್ಯದಲ್ಲಿ ಗಣಿತಶಾಸ್ತ್ರ ವಿಭಾಗದಲ್ಲಿ ಕಾಲೇಜು ಶಿಕ್ಷಕಿಯಾಗಬೇಕೆಂಬ ಆಸೆ ನನ್ನದು.ನನ್ನ ಪರಿಶ್ರಮದಿಂದ ಒಂದು ಒಳ್ಳೆ ಕಾಲೇಜಿನಲ್ಲಿ ಮುಂದಿನ ವ್ಯಾಸಾಂಗ ಮಾಡಲು ಸೀಟು ದೊರೆತರೆ ನನ್ನ ಪರಿಶ್ರಮ ಫಲಿಸಿದಂತೆ.ಗಣಿತಶಾಸ್ತ್ರದಲ್ಲಿ ಸಂಶೋಧನೆಯನ್ನು ಮುಂದುವರಿಸಿ ವಿವಿಧ ಪತ್ರಿಕೆಗಳಲ್ಲಿ ನನ್ನ ಲೇಖನವನ್ನು ಪ್ರಕಟಿಸಲು ಪ್ರಯತ್ನಿಸುತ್ತೇನೆ.ಒಳ್ಳೆಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆಯಬೇಕೆಂಬುದು ನನ್ನ ಮಹದಾಸೆ.