ವೆನೆಜುವೆಲಾ
ವೆನೆಜುವೆಲಾ ಬೊಲಿವೇರಿಯನ್ ಗಣರಾಜ್ಯ1 República Bolivariana de Venezuela1 | |
---|---|
Flag | |
Motto: ಇಲ್ಲ 2 | |
Anthem: ಗ್ಲೋರಿಯಾ ಅಲ್ ಬ್ರಾವೊ ಪ್ವೆಬ್ಲೊ | |
Capital and largest city | ಕರಾಕಸ್ |
Official languages | ಸ್ಪಾನಿಷ್ 3 |
Government | ಸಂಯುಕ್ತ ಗಣರಾಜ್ಯ |
ಹ್ಯುಗೊ ಚಾವೆಝ್ | |
ಜೋಸೆ ವಿಕೆಂಟೆ ರೇಂಜೆಲ್ | |
ಸ್ವಾತಂತ್ರ್ಯ | |
• ಸ್ಪೇನ್ ಇಂದ | ಜುಲೈ ೫, ೧೮೧೧ |
• ಗರಿಷ್ಠ ಕೊಲಂಬಿಯಾದಿಂದ | ನವೆಂಬರ್ ೨೧, ೧೮೩೧ |
• ಮಾನ್ಯತೆ | ಮಾರ್ಚ್ ೩೦, ೧೮೪೫ |
• Water (%) | 0.3 |
Population | |
• ಜುಲೈ ೨೦೦೫ estimate | ೨,೬೭,೪೯,೦೦೦ (43rd) |
• ೨೦೦೧ census | ೨,೩೦,೫೪,೨೧೦ |
GDP (PPP) | 2005 estimate |
• Total | $163.503 billion (51st) |
• Per capita | $6,186 (95th) |
HDI (2003) | 0.772 high · 75th |
Currency | Venezuelan bolívar (VEB) |
Time zone | UTC-4 (AST) |
• Summer (DST) | None |
Calling code | 58 |
Internet TLD | .ve |
1 ೧೯೯೯ರ ಸಂವಿಧಾನದ ಪ್ರಕಾರ ದೇಶದ ಅಧಿಕೃತ ಹೆಸರಾದ ಇದನ್ನು ಸೈಮನ್ ಬೊಲಿವಾರ್ ಗೌರವ ಸೂಚಕವಾಗಿ ಇಡಲಾಗಿದೆ. 2 ಐತಿಹಾಸಿಕ: Dios y Federación ("ದೇವರು ಮತ್ತು ಒಕ್ಕೂಟ") 3 ಸಂವಿಧಾನವು ದೇಶದ ಎಲ್ಲ ಮೂಲಭಾಷೆಗಳನ್ನು ಗುರುತಿಸುತ್ತದೆ. |
ವೆನೆಜುವೆಲಾ (ಮೂಲ ಉಚ್ಚರಣೆ: ವೆನೆಜ್ವೆಲಾ) ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದಲ್ಲಿರುವ ಕೆರಿಬ್ಬಿಯನ್ ಸಮುದ್ರದ ಕರಾವಳಿ ದೇಶ. ಇದರ ದಕ್ಷಿಣಕ್ಕೆ ಬ್ರೆಜಿಲ್, ಪೂರ್ವಕ್ಕೆ ಗಯಾನ, ಮತ್ತು ಪಶ್ಚಿಮಕ್ಕೆ ಕೊಲಂಬಿಯಾ ದೇಶಗಳಿವೆ.
ಪೂರ್ವದಲ್ಲಿ ಸ್ಪೇನ್ ವಸಾಹತಾದ ವೆನೆಜುವೆಲಾ ಒಂದು ಸಂಯುಕ್ತ ಗಣರಾಜ್ಯ. ಗಯಾನ ಮತ್ತು ಕೊಲಂಬಿಯಾಗಳೊಂದಿಗೆ ಗಡಿವಿವಾದವನ್ನು ಹೊಂದಿರುವ ಇದು ಪೆಟ್ರೋಲಿಯಂ ಉದ್ಯಮ, ಜೀವ ವೈವಿಧ್ಯ, ಮತ್ತು ನೈಸರ್ಗಿಕ ಸೌಂದರ್ಯಗಳಿಗೆ ಹೆಸರಾಗಿದೆ.
ಹೆಸರಿನ ಮೂಲ
[ಬದಲಾಯಿಸಿ]
೧೪೯೯ರಲ್ಲಿ ವೆನೆಜುವೆಲಾದಲ್ಲಿ ಬಂದಿಳಿದ ಅಮೇರಿಗೊ ವೆಸ್ಪುಚಿ ಮತ್ತು ಸಂಗಡಿಗರು ಮೂಲನಿವಾಸಿಗಳು ವಾಸಿಸುತ್ತಿದ್ದ ಪಲಾಫಿಟೊ (ನೀರಿನ ಮೇಲೆ ನಿರ್ಮಿತ ಮರದ ಮನೆಗಳು) ನೋಡಿ ವೆನಿಸ್ (ಇಟಾಲಿಯನ್ ಭಾಷೆಯಲ್ಲಿ "ವೆನೆಜಿಯಾ") ನಗರವನ್ನು ನೆನೆದರು. ಇದೇ ನಂತರ ದೇಶದ ಹೆಸರು "ವೆನೆಜುವೆಲಾ" ಎಂದಾಗಲು ಕಾರಣವೆಂದು ನಂಬಿಕೆ.
ಆದರೆ ಸ್ಪಾನಿಷ್ ಭೌಗೋಳಿಕರೊಬ್ಬರ ಪ್ರಕಾರ "ವೆನೆಜುವೆಲಾ" ಎಂಬುದು ಮೂಲನಿವಾಸಿಗಳಿಟ್ಟ ಹೆಸರಾಗಿತ್ತು. ಇದರ ಹೊರತಾಗಿಯೂ ಮೊದಲ ವಿವರಣೆಯೇ ಜನಜನಿತವಾಗಿದೆ.
ವಸಾಹತುಶಾಹಿ ಇತಿಹಾಸ
[ಬದಲಾಯಿಸಿ]೧೫೨೨ರಲ್ಲಿ ವೆನೆಜುವೆಲಾವನ್ನು ವಸಾಹತಾಗಿ ಆಕ್ರಮಿಸಿದ ಸ್ಪೇನ್ ಇಂದಿನ ಕುಮನಾ ನಗರದಲ್ಲಿ ದಕ್ಷಿಣ ಅಮೇರಿಕದ ಮೊದಲ ಶಾಶ್ವತ ವಸಾಹತನ್ನು ನಿರ್ಮಿಸಿತು. ಹಲವು ವಿಫಲ ಯತ್ನಗಳ ನಂತರ ಕೊನೆಗೆ ಜುಲೈ ೫, ೧೮೧೧ರಂದು ಘೋಷಿಸಿಕೊಂಡಿತಾದರೂ, ವೆನೆಜುವೆಲಾದ ವಿಮೋಚಕನೆಂದು ಗುರುತಿಸಲಾಗುವ ಸೈಮನ್ ಬೊಲಿವಾರ್ ನೇತೃತ್ವದಲ್ಲಿ ಸ್ವಾತಂತ್ರ್ಯ ಕದನವೇರ್ಪಟ್ಟ ನಂತರ ಸಂಪೂರ್ಣ ಸ್ವಾತಂತ್ರ್ಯ ದೊರೆತಿತು. ನಂತರ ಬೊಲಿವಾರ್ ನೇತೃತ್ವದಲ್ಲಿ ಹಲವು ದೇಶಗಳು ಒಗ್ಗೂಡಿ ಸ್ವಾತಂತ್ರ್ಯ ಘೋಷಿಸಿಕೊಂಡವು. ಇಂದಿನ ಕೊಲಂಬಿಯಾ, ಪನಾಮ, ಈಕ್ವೆಡಾರ್, ಮತ್ತು ವೆನೆಜುವೆಲಾ ದೇಶಗಳು ಒಗ್ಗೂಡಿ ಗರಿಷ್ಠ ಕೊಲಂಬಿಯಾ ಸ್ವತಂತ್ರ ದೇಶವಾಯಿತು. ನಂತರ ಸೈನ್ಯವನ್ನು ದಕ್ಷಿಣಕ್ಕೆ ಮುನ್ನಡೆಸಿ ಪೆರು ದೇಶಕ್ಕೆ ಸ್ಪೇನ್ ದೇಶದಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟು ಅವನ ನಾಮಾಂಕಿತ ಬೊಲಿವಿಯಾ ದೇಶವನ್ನು ಹುಟ್ಟುಹಾಕಿದನು. ನಂತರ ೧೮೩೦ರಲ್ಲಿ ಜೋಸೆ ಆಂಟೊನಿಯೊ ಪೇಝ್ ನೇತೃತ್ವದಲ್ಲಿ ದಂಗೆಯೆದ್ದು ವೆನೆಜುವೆಲಾ ಸಾರ್ವಭೌಮ ಗಣರಾಜ್ಯದ ಘೋಷಣೆಯಾಯಿತು. ಪೇಝ್ ದೇಶದ ಮೊದಲನೇ ರಾಷ್ಟ್ರಪತಿಯಾದನು.
ವೆನೆಜುವೆಲಾದ ೧೯ನೇ ಶತಮಾನ ಮತ್ತು ೨೦ನೇ ಶತಮಾನದ ಆರಂಭ ಸರ್ವಾಧಿಕಾರದಿಂದ ತುಂಬಿತ್ತು. ಪ್ರಜಾಪ್ರಭುತ್ವವಾದಿ ಗುಂಪುಗಳು ಕೊನೆಗೂ ಸೇನಾಡಳಿತವನ್ನು ತೆರವುಗೊಳಿಸಿ ೧೯೫೮ರಿಂದ ಪ್ರಜಾಪ್ರಭುತ್ವ ಸ್ಥಾಪಿತವಾಯಿತು.
ಸರಕಾರ ಮತ್ತು ರಾಜಕೀಯ
[ಬದಲಾಯಿಸಿ]ವೆನೆಜುವೆಲಾದ ರಾಷ್ಟ್ರಪತಿಯನ್ನು ದೇಶದ ಜನರು ಚುನಾವಣೆಯ ಮೂಲಕ ನೇರವಾಗಿ ಆರಿಸುತ್ತಾರೆ. ಅಧಿಕಾರದ ಕಾಲಾವಧಿ ಆರು ವರ್ಷಗಳಾಗಿದ್ದು, ಇದರ ನಂತರ ಒಮ್ಮೆ ಮಾತ್ರ ಮರುಚುನಾವಣೆಗೆ ನಿಲ್ಲಬಹುದು. ರಾಷ್ಟ್ರಪತಿಗಳು ಉಪರಾಷ್ಟ್ರಪತಿಯ ಆಯ್ಕೆ ಮತ್ತು ಶಾಸಕಾಂಗದ ನೆರವಿನಿಂದ ಮಂತ್ರಿಮಂಡಳದ ಆಯ್ಕೆಯನ್ನೂ ಮಾಡುತ್ತಾರೆ.
ವೆನೆಜುವೆಲಾದ ಸಂಸತ್ತು ಏಕಶಾಸನಸಭೆಯಾಗಿದ್ದು ಇದನ್ನು "ರಾಷ್ಟ್ರೀಯ ಪರಿಷತ್ತು" ಎಂದು ಕರೆಯಲಾಗುತ್ತದೆ. ಒಟ್ಟು ೧೬೭ ಶಾಸಕರು (ಇದರಲ್ಲಿ ಮೂರು ಮೂಲ ನಿವಾಸಿಗಳ ಪ್ರತಿನಿಧಿಗಳೂ ಸೇರಿದ್ದಾರೆ.) ಐದು ವರ್ಷಗಳ ಕಾಲಾವಧಿ ಅಧಿಕಾರ ನಡೆಸಿದ ನಂತರ ಈ ಪ್ರತಿನಿಧಿಗಳು ಎರಡು ಬಾರಿ ಚುನಾವಣೆಗೆ ನಿಲ್ಲಬಹುದಾಗಿದೆ.
ದೇಶದ ಅತ್ಯುನ್ನತ ನ್ಯಾಯಾಧಿಕಾರವನ್ನು ಹೊಂದಿದ "ಟ್ರೈಬ್ಯುನಲ್ ಸುಪ್ರೀಮೊ ಜಸ್ಟಿಸಿಯಾ" (ಅತ್ಯುಚ್ಚ ನ್ಯಾಯಪೀಠ)ದ ನ್ಯಾಯಾಧೀಶರನ್ನು ೧೨ ವರ್ಷಗಳ ಕಾಲಾವಧಿಗೆ ಸಂಸತ್ಸದಸ್ಯರು ಆರಿಸುತ್ತಾರೆ.
೧೮೬೩ರಲ್ಲಿ ಮರಣ ದಂಡನೆಯನ್ನು ರದ್ದುಗೊಳಿಸಿದ ವೆನೆಜುವೆಲಾ ಈ ಪದ್ಧತಿಯನ್ನು ಅತಿ ಹೆಚ್ಚು ಕಾಲ ರದ್ದುಗೊಳಿಸಿರುವ ದೇಶವಾಗಿದೆ.[೧][೨]
ಹೊಸ ಧ್ವಜ ಮತ್ತು ಲಾಂಛನ
[ಬದಲಾಯಿಸಿ]ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ವೆನೆಜುವೆಲಾದ ಧ್ವಜದಲ್ಲೀಗ ಎಂಟು ನಕ್ಷತ್ರಗಳಿವೆ. ಹೊಸದಾಗಿ ಸೇರಿಸಲಾಗಿರುವ ನಕ್ಷತ್ರವು ವೆನೆಜುವೆಲಾದ ಸ್ವಾತಂತ್ರ್ಯಕ್ಕೆ ಗಯಾನ ದೇಶದ ಕೊಡುಗೆಯನ್ನು ಗುರುತಿಸುತ್ತದೆ. ಲಾಂಛನದಲ್ಲೂ ಬದಲಾವಣೆಯಾಗಿದ್ದು, ಇದರಲ್ಲಿರುವ ಅಶ್ವ ವಾಮಭಾಗಕ್ಕೆ ಮುಖಮಾಡಿದೆ.
ಭೂಗೋಳ
[ಬದಲಾಯಿಸಿ]ವಿವಿಧ ಭೂಭಾಗಗಳ ಆಗರವಾಗಿರುವ ವೆನೆಜುವೆಲಾ ಪ್ರಪಂಚದ ೩೩ನೇ ಅತಿ ದೊಡ್ಡ ದೇಶವಾಗಿದೆ (೯,೧೨,೦೫೦ ಚದರ ಕಿ.ಮಿ. ವಿಸ್ತೀರ್ಣ).
ಆಂಡಿಸ್ ಪರ್ವತ ಶ್ರೇಣಿ ವಾಯವ್ಯ ಭಾಗದಲ್ಲಿ ಹಬ್ಬಿದ್ದು ಉತ್ತರಕ್ಕೆ ಕೆರಿಬಿಯನ್ ಸಮುದ್ರವಿದೆ. ದೇಶದ ಕೇಂದ್ರಸ್ಥಾನವು ವಿಶಾಲವಾದ ಸಮತಟ್ಟು ಪ್ರದೇಶವಾಗಿದ್ದು ಪಶ್ಚಿಮದ ಕೊಲಂಬಿಯಾ ಗಡಿಯಿಂದ ಪೂರ್ವದ ಒರಿನೊಕೊ ನದೀಮುಖಜ ಭೂಮಿಯ ತನಕ ಹಬ್ಬಿದೆ. ದಕ್ಷಿಣದ ಗಯಾನ ಮೇರು ಪ್ರದೇಶದಲ್ಲಿ ಪ್ರಪಂಚದ ಅತಿ ಎತ್ತರದ ಏಂಜೆಲ್ ಜಲಪಾತ ಮತ್ತು ಅಮೆಜಾನ್ ಕಣಿವೆಯ ಉತ್ತರ ಭಾಗವಿದೆ. ಒರಿನೊಕೊ ನದಿ ದೇಶದ ಅತಿ ದೊಡ್ಡ ನದಿಯಾಗಿದ್ದು, ದಕ್ಷಿಣ ಅಮೆರಿಕದ ಅತಿ ದೊಡ್ಡ ಜಲಾನಯನ ಪ್ರದೇಶಗಳಲ್ಲೊಂದಾಗಿದೆ.
ದೇಶವು ಉಷ್ಣ ವಲಯದಲ್ಲಿದ್ದು ಹವಾಮಾನ ಶಾಖಮಯ ಮತ್ತು ?ಶೈತ್ಯವಾಗಿರುತ್ತದೆ (humid) . ರಾಜಧಾನಿಯಾದ ಕರಾಕಸ್ ಅತಿ ದೊಡ್ಡ ನಗರವೂ ಆಗಿದೆ. ದೇಶದ ಪ್ರಾಣಿ ಮತ್ತು ಸಸ್ಯ ಸಂಕುಲದ ವೈವಿಧ್ಯದ ಕಾರಣದಿಂದ ಇದನ್ನು ಪ್ರಪಂಚದ ೧೭ ಬೃಹದ್ವೈವಿಧ್ಯ (megadiverse) ದೇಶಗಳ ಸಾಲಿಗೆ ಸೇರಿಸಲಾಗಿದೆ.
ಅರ್ಥವ್ಯವಸ್ಥೆ
[ಬದಲಾಯಿಸಿ]ವೆನೆಜುವೆಲಾದ ಅರ್ಥವ್ಯವಸ್ಥೆಗೆ ಪೆಟ್ರೋಲಿಯಂ ಉದ್ಯಮ ಅತಿ ಪ್ರಮುಖ ಕೊಡುಗೆ ನೀಡುತ್ತದೆ. ದೇಶದ ಶೇ.೮೦ರಷ್ಟು ರಫ್ತು ಆದಾಯ ಮತ್ತು ಸರಕಾರದ ಅರ್ಧಕ್ಕಿಂತ ಹೆಚ್ಚು ಆದಾಯದ ಮೂಲವಾಗಿದೆ. ಕೃಷಿ ಕ್ಷೇತ್ರ ಕೊಡುಗೆಯೂ ಮಹತ್ವದಾಗಿದ್ದು, ಕಾಫಿ ಹಾಗೂ ಕೊಕೊ ಬೆಳೆಗಳು ಪ್ರಮುಖವಾಗಿವೆ.
ವೆನೆಜುವೆಲಾ ಒಪೆಕ್ ಸಂಸ್ಥೆ(ಪೆಟ್ರೋಲಿಯಂ ರಫ್ತುಗಾರ ದೇಶಗಳ ಸಂಸ್ಥೆ)ಯ ಐದು ಸ್ಥಾಪಕ ಸದಸ್ಯ ದೇಶಗಳಲ್ಲಿ ಒಂದಾಗಿದೆ.
ಜನತೆ ಮತ್ತು ಜನಾಂಗ
[ಬದಲಾಯಿಸಿ]ದೇಶದ ಶೇ.೬೦ರಷ್ಟು ಜನತೆ ಮೆಸ್ತಿಜೊ (ಶ್ವೇತವರ್ಣೀಯ-ಕಪ್ಪುವರ್ಣೀಯ-ಮೂಲನಿವಾಸಿ ಮಿಶ್ರತಳಿ), ಶೇ.೨೯ ಶ್ವೇತವರ್ಣೀಯ, ಶೇ.೮ ಕಪ್ಪುವರ್ಣೀಯ, ಶೇ.೧ ಮೂಲನಿವಾಸಿ ಮತ್ತು ಶೇ.೨ ಏಷ್ಯಾ ಮೂಲದವರಾಗಿದ್ದಾರೆ. ಶೇ.೮೫ರಷ್ಟು ನಿವಾಸಿಗಳು ಉತ್ತರ ಭಾಗದ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ. ದೇಶದ ಬಹು ಭೂಭಾಗ ಒರಿನೊಕೊ ನದಿಯ ದಕ್ಷಿಣಕ್ಕಿದ್ದು ಕೇವಲ ಶೇ.೫ರಷ್ಟು ಜನ ವಾಸಿಸುತ್ತಾರೆ.
ದೇಶದ ಅಧಿಕೃತ ರಾಷ್ಟ್ರೀಯ ಭಾಷೆ ಸ್ಪಾನಿಷ್ ಆದರೂ ೩೧ ಇತರ ಮೂಲ ಭಾಷೆಗಳು ಅಸ್ತಿತ್ವದಲ್ಲಿವೆ. ಶೇ.೯೬ರಷ್ಟು ಜನತೆ ಕ್ಯಾಥೊಲಿಕ್ ಧರ್ಮದವರಾಗಿದ್ದಾರೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ವೆನೆಜುವೆಲಾ ದೇಶದ ನೈಸರ್ಗಿಕ ಸೌಂದರ್ಯದ ಚಿತ್ರಗಳು Archived 2007-09-28 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ರವಾಸಿ ತಾಣ Archived 2005-12-22 ವೇಬ್ಯಾಕ್ ಮೆಷಿನ್ ನಲ್ಲಿ.
- ವೆನೆಜುವೆಲಾ ಸಂಬಂಧವಾಗಿ ಭಾರತ-ಅಮೆರಿಕಗಳ ನಡುವೆ ವಿವಾದ - ಕನ್ನಡ ತಾಣ Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ ಅಂತಾರಾಷ್ಟ್ರೀಯ ಕ್ಷಮಾದಾನ ಸಂಸ್ಥೆಯ ಮರಣ ದಂಡನೆ ರದ್ದು ಮಾಡಿರುವ ಹಾಗೂ ಮಾಡದೇ ಇರುವ ದೇಶಗಳ ಪಟ್ಟಿ [೧] Archived 2007-02-02 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಪ್ರಪಂಚದಾದ್ಯಂತ ಮರಣ ದಂಡನೆ
ದಕ್ಷಿಣ ಅಮೇರಿಕ ಖಂಡದ ದೇಶಗಳು | |
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ |