ಅಮೇರಿಗೊ ವೆಸ್ಪುಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಟಲಿಫ್ಲಾರೆನ್ಸ್ ನಗರದಲ್ಲಿರುವ ವೆಸ್ಪುಚಿಯ ಪ್ರತಿಮೆ

ಅಮೇರಿಗೊ ವೆಸ್ಪುಚಿ (ಮಾರ್ಚ್ ೯, ೧೪೫೧ - ಫೆಬ್ರುವರಿ ೨೨, ೧೫೧೨) ಇಟಲಿ ದೇಶದ ವ್ಯಾಪಾರಿ, ಶೋಧಕ, ಮತ್ತು ನಕ್ಷಾಕಾರನಾಗಿದ್ದನು. ೧೪೯೯ ಮತ್ತು ೧೫೦೨ರಲ್ಲಿ ದಕ್ಷಿಣ ಅಮೇರಿಕ ಖಂಡದ ಪೂರ್ವ ಕರಾವಳಿಯಲ್ಲಿ ನಡೆಸಲಾದ ಎರಡು ನೌಕಾಶೋಧನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ಈ ಎರಡನೇ ಯಾನದಲ್ಲಿ ದಕ್ಷಿಣ ಅಮೇರಿಕ ಈ ಹಿಂದೆ ಯೂರೋಪಿಯನ್ನರು ನಂಬಿದ್ದಕ್ಕಿಂತ ಹೆಚ್ಚು ದಕ್ಷಿಣಕ್ಕೆ ಚಾಚಿದೆಯೆಂಬುದನ್ನು ತೋರಿಸಿಕೊಟ್ಟವನು. ಯೂರೋಪಿಯನ್ ನಾವಿಕರು ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿ ಏಷ್ಯಾಕ್ಕೆ ಮುಟ್ಟುತ್ತಿದ್ದರೆಂದು ನಂಬುತ್ತಿದ್ದ ಕಾಲದಲ್ಲಿ ಅದೊಂದು ಹೊಸ ಖಂಡದ ಭಾಗವೆಂದು ಸಾಧಿಸಿದವನು. ೧೫೦೨ ಮತ್ತು ೧೫೦೪ರ ನಡುವೆ ರಚಿಸಲಾದ ಎರಡು ಕೃತಿಗಳ ಪ್ರಭಾವದಿಂದ ವೆಸ್ಪುಚಿಯ ನೌಕಾಯಾನಗಳು ಸರ್ವವಿದಿತವಾದವು[೧] ೧೫೦೭ ರಲ್ಲಿ ಮಾರ್ಟಿನ್ ವಾಲ್ಡ್‌ಸೀಮುಲ್ಲರ್ ಪ್ರಪಂಚದ ಭೂಪಟವನ್ನು ತಯಾರಿಸಿದಾಗ ಅದರ ಒಂದು ಖಂಡವನ್ನು ವೆಸ್ಪುಚಿಯ ಮೊದಲನೇ ಹೆಸರನ್ನು ಆಧರಿಸಿ "ಅಮೇರಿಕಾ" ಎಂದು ನಾಮಕರಣ ಮಾಡಿದನು.

ಜೀವನ[ಬದಲಾಯಿಸಿ]

ವೆಸ್ಪುಚಿಯ ಜನನ ಇಟಲಿ ದೇಶದ ಫ್ಲಾರೆನ್ಸ್ ನಗರದಲ್ಲಿ ಗೌರವಾನ್ವಿತ ಕುಟುಂಬದಲ್ಲಾಯಿತು. ತಂದೆ ನೋಟರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮರಣ ಸ್ಪೇನ್ ದೇಶದ ಸೆವಿಲ್ ನಗರದಲ್ಲಿ.

ಉಲ್ಲೇಖಗಳು[ಬದಲಾಯಿಸಿ]

  1. Formisano, Luciano (Ed.) (1992). Letters from a New World: Amerigo Vespucci's Discovery of America. New York: Marsilio. ISBN 0-941419-62-2. Pp. xix-xxvi.