ಕೆರಿಬ್ಬಿಯನ್ ಸಮುದ್ರ
Jump to navigation
Jump to search
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಕೆರಿಬ್ಬಿಯನ್ ಸಮುದ್ರ ಪಶ್ಚಿಮ ಭೂಗೋಳದ ಉಷ್ಣ ವಲಯದ ಸಮುದ್ರವಾಗಿದೆ. ಅಟ್ಲಾಂಟಿಕ್ ಮಹಾಸಾಗರದ ಭಾಗವಾಗಿರುವ ಇದು ಮೆಕ್ಸಿಕೊ ಕೊಲ್ಲಿಯ ಆಗ್ನೇಯ ಭಾಗದಲ್ಲಿದೆ. ಬಹುತೇಕ ಕೆರಿಬಿಯನ್ ತಟ್ಟೆಯನ್ನು ವ್ಯಾಪಿಸಿರುವ ಈ ಸಮುದ್ರದ ದಕ್ಷಿಣದಲ್ಲಿ ದಕ್ಷಿಣ ಅಮೇರಿಕ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಮಧ್ಯ ಅಮೇರಿಕ, ಹಾಗೂ ಉತ್ತರ ಮತ್ತು ಪೂರ್ವದಲ್ಲಿ ಆಂಟಿಲ್ಲಿಸ್ ದ್ವೀಪಗಳು ಸ್ಥಿತವಾಗಿವೆ. ಕೆರಿಬಿಯನ್ ಸಮುದ್ರದ ಪೂರ್ಣ ಪ್ರದೇಶ, ವೆಸ್ಟ್ ಇಂಡೀಸ್ ದ್ವೀಪಗಳು ಮತ್ತು ಸುತ್ತಲಿನ ಕರಾವಳಿ ಜೊತೆಗೊಂಡು ಕೆರಿಬಿಯನ್ ಎಂದು ಕರೆಯಲ್ಪಡುತ್ತವೆ.
ಕೆರಿಬಿಯನ್ ಸಮುದ್ರ ಅತಿ ದೊಡ್ಡ ಉಪ್ಪಿನ ನೀರಿನ ಸಮುದ್ರಗಳಲ್ಲೊಂದಾಗಿದ್ದು ೨೭,೫೪,೦೦೦ ಚದರ ಕಿ.ಮಿ. ವಿಸ್ತೀರ್ಣ ಹೊಂದಿದೆ. ಕ್ಯೂಬಾ ಮತ್ತು ಜಮೈಕಾಗಳ ನಡುವೆಯಿರುವ ಸಮುದ್ರದ ಅತಿ ಆಳ ಪ್ರದೇಶವಾದ "ಕೇಮನ್ ತೊಟ್ಟಿ" ೭,೬೮೬ ಮಿ. (೨೫,೨೨೦ ಅಡಿ) ಸಮುದ್ರದಾಳದಲ್ಲಿದೆ.
ಕೆರಿಬಿಯನ್ ಸಮುದ್ರದ ಕರಾವಳಿಯುದ್ದಕ್ಕೂ ಅನೇಕ ಕೊಲ್ಲಿಗಳಿವೆ:
- ವೆನೆಜುವೆಲಾ ಕೊಲ್ಲಿ
- ಡೇರಿಯನ್ ಕೊಲ್ಲಿ
- ಗೊಲ್ಫೊ ಡಿ ಲೊಸ್ ಮಸ್ಕಿಟೊಸ್
- ಹೊಂಡುರಾಸ್ ಕೊಲ್ಲಿ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |