ಭಾರತ ಬಿಟ್ಟು ತೊಲಗಿ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೩೮ ನೇ ಸಾಲು: ೩೮ ನೇ ಸಾಲು:
ಒಂದು ಹೊಸ ಯುವ ಪೀಳಿಗೆಯು ಗಾಂಧೀಜಿಯವರ ಕರೆಗೆ ಓಗೊಟ್ಟಿತ್ತು. ಈ ಚಳುವಳಿಯಲ್ಲಿ ಹೋರಾಡಿದ ಭಾರತೀಯರು ಸ್ವತಂತ್ರ ಭಾರತದ ಪ್ರಥಮ ಪೀಳಿಗೆಯವರಾಗಿ ವಸಾಹತುಶಾಹಿ ಕಾಲದ ನಂತರ ಪ್ರಪಂಚದ ಅತಿ ಗಟ್ಟಿಯಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರು. ಇದನ್ನು ಮಾನವಕುಲದ ದೂರದರ್ಶಿತ್ವದ ಮಹತ್ತರ ಉದಾಹರಣೆಯೆಂದು ಹೇಳಬಹುದು.
ಒಂದು ಹೊಸ ಯುವ ಪೀಳಿಗೆಯು ಗಾಂಧೀಜಿಯವರ ಕರೆಗೆ ಓಗೊಟ್ಟಿತ್ತು. ಈ ಚಳುವಳಿಯಲ್ಲಿ ಹೋರಾಡಿದ ಭಾರತೀಯರು ಸ್ವತಂತ್ರ ಭಾರತದ ಪ್ರಥಮ ಪೀಳಿಗೆಯವರಾಗಿ ವಸಾಹತುಶಾಹಿ ಕಾಲದ ನಂತರ ಪ್ರಪಂಚದ ಅತಿ ಗಟ್ಟಿಯಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರು. ಇದನ್ನು ಮಾನವಕುಲದ ದೂರದರ್ಶಿತ್ವದ ಮಹತ್ತರ ಉದಾಹರಣೆಯೆಂದು ಹೇಳಬಹುದು.


==ಟಿಪ್ಪಣಿ==
==Notes==


<references/>
<references/>
==ಹೊರಗಿನ ಸಂಪರ್ಕಗಳು==
===External links===
*[http://www.ibiblio.org/pha/policy/1942/420427a.html Rejected 'Quit India' resolution drafted by Mohandas K. Gandhi 27April, 1942]
*[http://www.ibiblio.org/pha/policy/1942/420427a.html ಮಹಾತ್ಮಾ ಗಾಂಧಿಯವರ 'ಭಾರತ ಬಿಟ್ಟು ತೊಲಗಿ' ನಿರ್ಣಯ]

* [[Indian Independence Movement]], [[Non-Cooperation Movement]], [[Indian Nationalism]], [[Indian National Army]], [[Government of Azad Hind]],[[Bombay Mutiny|Mutiny of the Royal Indian Navy]]
* [[Mahatma Gandhi]], [[Sardar Vallabhbhai Patel]], [[Jawaharlal Nehru]],[[Subhash Chandra Bose]]


==ಇವನ್ನೂ ನೋಡಿ==
* [[ಭಾರತದ ಸ್ವಾತಂತ್ರ್ಯ ಚಳುವಳಿ]]
* [[ಅಸಹಕಾರ ಚಳುವಳಿ]]
* [[ಮುಂಬಯಿ ದಂಗೆ]]
{{commonscat|Quit India Movement}}
{{commonscat|Quit India Movement}}


{{IndiaFreedom}}
{{IndiaFreedom}}


[[Category:1942 establishments]]
[[Category:Quit India Movement| ]]


[[fr:Quit India]]
[[fr:Quit India]]

೦೪:೦೮, ೪ ಅಕ್ಟೋಬರ್ ೨೦೦೬ ನಂತೆ ಪರಿಷ್ಕರಣೆ

ಭಾರತ ಬಿಟ್ಟು ತೊಲಗಿ ಚಳುವಳಿಯು ಒಂದು ಅಸಹಕಾರ ಚಳುವಳಿಯಾಗಿದ್ದು ಆಗಸ್ಟ್ ೧೯೪೨ರಲ್ಲಿ ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ನಡೆಯಿತು. ಇದರ ಗುರಿ ಬ್ರಿಟಿಷ್ ಸರ್ಕಾರದಿಂದ ಭಾರತದ ಸ್ವಾತಂತ್ರ್ಯ ಪಡೆಯುವುದಾಗಿತ್ತು. ೮ ಆಗಸ್ಟ್ ರಂದು ಮುಂಬಯಿಯ ಗೊವಾಳಿಯ ಮೈದಾನ(ಇಂದಿನ ಹೆಸರು - ಆಗಸ್ಟ್ ಕ್ರಾಂತಿ ಮೈದಾನ)ದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಘೋಷಣೆಯೊಂದಿಗೆ ಪ್ರಾರಂಭವಾಯಿತು. ಆದರೆ ಈ ಘೋಷಣೆಯ ೨೪ ಗಂಟೆಗಳೊಳಗೆ ಬಹುತೇಕ ಕಾಂಗ್ರೆಸ್ ನಾಯಕರು ಬಂಧಿತರಾಗಿ ಆ ವರ್ಷವನ್ನು ಕಾರಾಗೃಹದಲ್ಲಿ ಕಳೆಯಬೇಕಾಯಿತು.

ಬೆಂಗಳೂರಿನಲ್ಲಿ ಚಳುವಳಿಯ ನೋಟ

ಎರಡನೇ ಮಹಾಯುದ್ಧ ಮತ್ತು ಭಾರತದ ಪಾತ್ರ

೧೯೪೨ರ ವೇಳೆಯಲ್ಲಿ ಬ್ರಿಟಿಷರು ಭಾರತದ ನಾಯಕರನ್ನು ಲೆಕ್ಕಿಸದೇ ಭಾರತದ ಸೇನೆಯನ್ನು ಎರಡನೇ ಮಹಾಯುದ್ಧದಲ್ಲಿ ಬಳಸಿಕೊಂಡರು. ಇದರಿಂದ ಕುಪಿತರಾದ ಸುಭಾಸ್ ಚಂದ್ರ ಬೋಸ್ ಭಾರತೀಯ ರಾಷ್ಟ್ರೀಯ ಸೇನೆಯನ್ನು ಜಪಾನೀಯರ ಸಹಾಯದಿಂದ ಒಗ್ಗೂಡಿಸಿದರು. ಈ ಸೇನೆಯು ಅಸ್ಸಾಂ, ಬಂಗಾಳ, ಮತ್ತು ಬರ್ಮಾ ಕಾಡುಗಳಲ್ಲಿ ಛಲದಿಂದ ಹೋರಾಡಿದರೂ ಜಪಾನೀಯರ ಸಹಾಯದ ಕೊರತೆಯಿಂದ ಮತ್ತು ಆಯುಧಗಳ ಕೊರತೆಯಿಂದ ಸೋತುಹೋದರು. ಬೋಸರ ಧೈರ್ಯ-ಸಾಹಸಗಳಿಂದ ಉತ್ತೇಜಿತರಾದ ಹೊಸ ಪೀಳಿಗೆಯ ಭಾರತೀಯರು ಈ ಚಳುವಳಿಯನ್ನು ಸೇರಿದರು.

ಎರಡನೇ ಮಹಾಯುದ್ಧ ಪ್ರಾರಂಭವಾದಾಗ, ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿಯು ಬ್ರಿಟಿಷ್ ಸರ್ಕಾರವನ್ನು ಸಮರ್ಥಿಸುವುದೆಂದೂ, ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಕೆಂದೂ ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿತು[೧]. ಆದರೆ ಸರ್ಕಾರ ಇದಕ್ಕೆ ಬೆಲೆ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದ ಈ ನಿಲುವಿಗೆ ಅಹಿಂಸಾವಾದಿಯಾದ ಗಾಂಧೀಜಿಯ ಬೆಂಬಲವಿರಲಿಲ್ಲ. ಅವರಿಗೆ ಬ್ರಿಟಿಷ್ ಸರ್ಕಾರ, ಧೋರಣೆ, ಮತ್ತು ನಾಯಕತ್ವದ ಮೇಲೆ ಅತೀವ ಶಂಕೆಯಿತ್ತು.

ಶೀಘ್ರ ಸ್ವಾತಂತ್ರ್ಯಕ್ಕಾಗಿ ಗೊತ್ತುವಳಿ

೧೪ ಜುಲೈ, ೧೯೪೨ರಂದು ಕಾಂಗ್ರೆಸ್ ಪಕ್ಷವು ಬ್ರಿಟನ್ನಿನಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಗೊತ್ತುವಳಿ ಹೊರಡಿಸಿತು. ಈ ಬೇಡಿಕೆ ನೆರವೇರದಿದ್ದರೆ, ಅಸಹಾಕಾರ ಚಳುವಳಿಯನ್ನು ನಡೆಸುವುದಾಗಿಯೂ ಘೋಷಿಸಲಾಯಿತು. ಆದರೆ ಪಕ್ಷದಲ್ಲಿಯೇ ಹಲವಾರು ನಾಯಕರು ಇದನ್ನು ವಿರೋಧಿಸಿದರು. ಚಕ್ರವರ್ತಿ ರಾಜಗೋಪಾಲಾಚಾರಿಯವರು ಈ ಕಾರಣದಿಂದ ಹಲವಾರು ಪ್ರಾದೇಶಿಕ ನಾಯಕರುಗಳೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದರು. ಜವಾಹರಲಾಲ್ ನೆಹರು ಮತ್ತು ಮೌಲಾನಾ ಆಜಾದ್ ಈ ಗೊತ್ತುವಳಿಯನ್ನು ಟೀಕಿಸದರೂ ಕೂಡ ತಮ್ಮ ಬೆಂಬಲ ಸೂಚಿಸಿ ಗಾಂಧೀಜಿಯ ನಾಯಕತ್ವದಲ್ಲಿ ವಿಶ್ವಾಸ ಸೂಚಿಸಿದರು. ಸರ್ದಾರ್ ಪಟೇಲ್ ಮತ್ತು ಡಾ. ರಾಜೇಂದ್ರ ಪ್ರಸಾದ್ ಈ ನಿಲುವಳಿಯನ್ನು ಬಹಿರಂಗವಾಗಿ ಬೆಂಬಲಿಸಿದರು.

ಆದರೆ ಬೇರೆ ಪಕ್ಷಗಳು ಇದಕ್ಕೆ ಸಹಮತ ಸೂಚಿಸಲಿಲ್ಲ. ಭಾರತೀಯ ಕಮ್ಯೂನಿಸ್ಟ್ ಪಕ್ಷ ಮತ್ತು ಹಿಂದೂ ಮಹಾಸಭಾ ಇದನ್ನು ವಿರೋಧಿಸಿದವು. ಮೊಹಮ್ಮದ್ ಅಲಿ ಜಿನ್ನಾರ ವಿರೋಧದ ಕಾರಣ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಬ್ರಿಟಿಷರ ಪರವಾಗಿ ನಿಂತರು. ಇದರಿಂದ ಮುಸ್ಲಿಂ ಲೀಗ್ ಪಕ್ಷಕ್ಕೆ ಪ್ರಾಂತೀಯ ಸರ್ಕಾರಗಳಲ್ಲಿ ಅಧಿಕಾರ ದೊರೆಯಿತು.

೮ ಆಗಸ್ಟ್, ೧೯೪೨ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮುಂಬೈ ಅಧಿವೇಶನದಲ್ಲಿ ಭಾರತ ಬಿಟ್ಟು ತೊಲಗಿ ಎಂಬ ಗೊತ್ತುವಳಿಯನ್ನು ಹೊರಡಿಸಲಾಯಿತು. ಗಾಂಧೀಜಿಯವರು ಮುಂಬಯಿಯ ಗೊವಾಲಿಯ ಮೈದಾನದಲ್ಲಿ ಭಾರತೀಯರಿಗೆ ಅಹಿಂಸಾತ್ಮಕ ಅಸಹಾಕಾರ ಮಾಡುವಂತೆ ಕರೆ ಕೊಟ್ಟರು. ಜನರಿಗೆ ಬ್ರಿಟಿಷ ಸರ್ಕಾರವನ್ನು ಅನುಸರಿಸದೇ ಸ್ವತಂತ್ರರಾಗಿ ಬಾಳುವುದಕ್ಕೆ ಕರೆಕೊಟ್ಟರು. ಗಾಂಧೀಜಿಯವರ ಈ ಕರೆಗೆ ಭಾರತೀಯರು ಬೃಹತ್ ಸಂಖ್ಯೆಯಲ್ಲಿ ಓಗೊಟ್ಟರು. ಬೆಂಬಲ ಸೂಚಿಸಿದವರಲ್ಲಿ ಗಾಂಧೀಜಿಯವರ ಅಹಿಂಸಾತ್ಮಕ ತತ್ವದ ವಿರೋಧಿಗಳಾದ ಕ್ರಾಂತಿಕಾರಿಗಳೂ ಸೇರಿದ್ದರು.

ಚಳುವಳಿಯ ನಿಗ್ರಹ

ಬೆಂಗಳೂರು ವೈದ್ಯಕೀಯ ಕಾಲೇಜಿನ ಎದುರು ಧರಣಿ

ಜಪಾನಿ ಸೇನೆಯು ಭಾರತದ ಬರ್ಮಾ ಗಡಿಯ ಬಳಿ ತಲುಪಿದ್ದನ್ನು ಕಂಡ ಬ್ರಿಟಿಷರು ಮರುದಿನವೇ ಗಾಂಧಿಯವರನ್ನು ಬಂಧಿಸಿದರು. ಕಾಂಗ್ರೆಸ್ಸಿನ ಎಲ್ಲ ರಾಷ್ಟ್ರೀಯ ನಾಯಕರನ್ನೂ ಬಂಧಿಸಲಾಯಿತು. ನಂತರ ಕಾಂಗ್ರೆಸ್ ಪಕ್ಷವನ್ನು ನಿಷೇಧಿಸಲಾಯಿತು. ಇದರಿಂದ ಜನರಲ್ಲಿ ವಿರೋಧಿ ಭಾವನೆ ಇನ್ನೂ ಹೆಚ್ಚಾಯಿತು. ಪಕ್ವ ನಾಯಕತ್ವದ ಅಭಾವದ ಹೊರತಾಗಿಯೂ ಬೃಹತ್ ಪ್ರಮಾಣದಲ್ಲಿ ವಿರೋಧ ಪ್ರದರ್ಶನ ಮತ್ತು ಧರಣಿಗಳು ನಡೆದವು. ಆದರೆ ಎಲ್ಲ ವಿರೋಧಗಳು ಅಹಿಂಸಾತ್ಮಕವಾಗೇನೂ ಉಳಿಯಲಿಲ್ಲ. ಬಾಂಬುಗಳನ್ನು ಸ್ಫೋಟಿಸಲಾಯಿತು, ಸರ್ಕಾರೀ ಕಟ್ಟಡಗಳನ್ನು ಸುಡಲಾಯಿತು, ವಿದ್ಯುತ್ತನ್ನು ನಿಲ್ಲಿಸಲಾಯಿತು, ಮತ್ತು ಸಾರಿಗೆ ಮತ್ತು ಸಂಪರ್ಕಗಲನ್ನು ಕಡಿಯಲಾಯಿತು.

ಆದರೆ ಬ್ರಿಟಿಷರು ತ್ವರಿತವಾಗಿ ಪ್ರದರ್ಶನಕಾರರನ್ನು ಬಂಧಿಸಿದರು. ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಂಧಿಸಲಾಯಿತು, ಬೃಹತ್ ಪ್ರಮಾಣದಲ್ಲಿ ದಂಡಗಳನ್ನು ವಿಧಿಸಲಾಯಿತು, ಬಾಂಬುಗಳನ್ನು ವಿರೋಧಿಗಳ ಮೇಲೆ ಬಳಸಲಾಯಿತು, ಮತ್ತು ಪ್ರದರ್ಶನಾಕಾರರನ್ನು ಸಾರ್ವಜನಿಕವಾಗಿ ದಂಡಿಸಲಾಯಿತು. ಬಹಳಷ್ಟು ರಾಷ್ಟ್ರೀಯ ನಾಯಕರು ಭೂಗತರಾಗಿ ರೇಡಿಯೋ ಸ್ಟೇಷನ್ ಗಳಿಂದ ಜನರಿಗೆ ಸಂದೇಶ ಕೊಡುತ್ತಿದ್ದರು. ಬ್ರಿಟಿಷರು ಇದರಿಂದ ಎಷ್ಟು ಕಂಗಾಲಾಗಿದ್ದರೆಂದರೆ, ಗಾಂಧೀಜಿಅ ಮತ್ತು ಇತರ ನಾಯಕರನ್ನು ಬಂಧಿಸಿ ದಕ್ಷಿಣ ಆಫ್ರಿಕಾ ಅಥವಾ ಯೆಮೆನ್ ದೇಶಕ್ಕೆ ಕೊಂಡೊಯ್ಯಲು ಯುದ್ಧನೌಕೆಯನ್ನು ಕರೆಸುವ ಏರ್ಪಾಡು ಮಾಡಲಾಯಿತು. ಆದರೆ ಇದರಿಂದ ಸಂಘರ್ಷಣೆ ಇನ್ನೂ ತೀವ್ರವಾಗುವುದೆಂಬ ಭಯದಿಂದ ಹೀಗೆ ಮಾಡದಿರಲು ನಿರ್ಧಾರ ಮಾಡಲಾಯಿತು. [ಸಾಕ್ಷ್ಯಾಧಾರ ಬೇಕಾಗಿದೆ].

ಕಾಂಗ್ರೆಸ್ ಪಕ್ಷದ ನಾಯಕರು ಇಡೀ ಪ್ರಪಂಚದಿಂದ ಮೂರು ವರ್ಷಗಳ ಕಾಲ ಸಂಪರ್ಕ ಕಳೆದುಕೊಂಡರು. ಗಾಂಧೀಜಿಯವರ ಪತ್ನಿ ಕಸ್ತೂರ್ ಬಾ ಗಾಂಧಿ ಮತ್ತು ಕಾರ್ಯದರ್ಶಿ ಮಹಾದೇವ ದೇಸಾಯಿ ಮರಣದ ನಂತರ ಗಾಂಧಿಯವರ ಆರೋಗ್ಯ ಹದಗೆಟ್ಟಿತು. ಇದರ ಹೊರತಾಗಿಯೂ, ಮಹಾತ್ಮಾ ಗಾಂಧಿಯವರು ೨೧ ದಿನಗಳ ಉಪವಾಸವನ್ನು ಕೈಗೊಂಡು ಚಳುವಳಿಯನ್ನು ಮುಂದುವರೆಸಲು ಅತಿಮಾನುಷ ಪ್ರಯತ್ನ ತೋರಿದರು. ಅವರ ಆರೋಗ್ಯ ಇನ್ನೂ ಹದಗೆಟ್ಟ ಕಾರಣ ಬ್ರಿಟಿಷರು ಗಾಂಧಿಯವರನ್ನಿ ೧೯೪೪ರಲ್ಲಿ ಬಿಡುಗಡೆಗೊಳಿಸಿದರೂ ಕೂಡ, ಅವರು ಕಾಂಗ್ರೆಸ್ ನಾಯಕರ ಬಿಡುಗಡೆಗೆ ಒತ್ತಾಯಿಸಿ ಧರಣಿಯನ್ನು ಮುಂದುವರೆಸಿದರು.

೧೯೪೪ರ ಪ್ರಾರಂಭದಲ್ಲಿ ಭಾರತ ಬಹುತೇಕವಾಗಿ ಶಾಂತವಾಗಿತ್ತು. ಚಳುವಳಿಯು ಸೋತುಹೋಯಿತೆಂಬ ನಂಬಿಕೆ ವ್ಯಾಪಕವಾಯಿತು. ಆದರೆ ಜಿನ್ನಾ ಮತ್ತು ಮುಸ್ಲಿಮ್ ಲೀಗ್ ಹಾಗೂ ಕಾಂಗ್ರೆಸ್ಸಿನ ಇತರ ವಿರೋಧಿಗಳಾದ ಕಮ್ಯೂನಿಸ್ಟರು ಮತ್ತು ಹಿಂದೂ ಕ್ರಾಂತಿಕಾರಿಗಳು ಗಾಂಧೀಜಿ ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ರಾಜಕೀಯ ಲಾಭ ಪಡೆಯಲು ಹವಣಿಸಿದರು.

ಸ್ವಾತಂತ್ರ್ಯಕ್ಕಾಗಿ ಚಳುವಳಿಯ ಕಾಣಿಕೆ

ಕೆಲವು ಚರಿತ್ರೆಕಾರರ ಪ್ರಕಾರ ಈ ಚಳುವಳಿಗೆ ಸೋಲುಂಟಾಯಿತು. ಕಾಂಗ್ರೆಸ್ ಪಕ್ಷವೂ ಕೂಡ ಆಗ ಇದೇ ನಿಲುವನ್ನು ಹೊಂದಿತ್ತು. ಸರ್ಕಾರದ ಕಾರ್ಯವನ್ನು ನಿಲ್ಲಿಸಿವ ಇರಾದೆಯಲ್ಲಿ ಸೋಲುಂಟಾದರೂ, ಸರ್ಕಾರಕ್ಕೆ ಇದರಿಂದ ಸಾಕಷ್ಟು ಮುಜುಗರ ಮತ್ತು ಆತಂಕ ಉಂಟಾದವು. ಶೀಘ್ರವಾಗಿ ಸ್ವಾತಂತ್ರ್ಯ ಪಡೆಯುವುದರಲ್ಲಿ ಇದು ವಿಫಲವಾಯಿತು. ಆರಂಭದ ಐದು ತಿಂಗಳಲ್ಲಿಯೇ ಬಹುತೇಕವಾಗಿ ಸ್ತಬ್ಧವಾಯಿತು. ಇದಕ್ಕಿದ್ದ ಒಂದೇ ಕಾರಣವೆಂದರೆ ಸರ್ಕಾರದ ಪರವಾಗಿ ಸೇನೆಗಿದ್ದ ಸ್ವಾಮಿತ್ವ. ಬ್ರಿಟಿಷ್ ಪ್ರಧಾನಮಂತ್ರಿ ಕ್ಲೆಮೆಂಟ್ ಅಟ್ಲೀ ಪ್ರಕಾರ ಈ ಚಳುವಳಿಯ ಕಾಣಿಕೆ ಅತೀ ಕಡಿಮೆಯದ್ದಾಗಿತ್ತು. ಆದರೆ ಭಾರತೀಯ ವಾಯುಪಡೆಯ ಅತೃಪ್ತಿಯನ್ನು ಮುಖ್ಯವಾಗಿ ಉದಾಹರಿಸುತ್ತಾರೆ.

ರಾಷ್ಟ್ರೀಯ ಮಟ್ಟದಲ್ಲಿ ಚಳುವಳಿಗೆ ಯ್ಶಸ್ಸು ಸಿಗದಿದ್ದರೂ ಸತಾರಾ, ತಲಚೇರ್, ಮತ್ತು ಮಿಡ್ನಾಪುರಗಳಲ್ಲಿ ಬಹು ಯಶಸ್ವಿಯಾಯಿತು. ಮಿಡ್ನಾಪುರದಲ್ಲಿ ಜನರು ಪರ್ಯಾಯ ಸರ್ಕಾರವನ್ನೂ ಸ್ಥಾಪಿಸಿದರು. ನಂತರ ಗಾಂಧೀಜಿಯ ಕರೆಗೆ ಓಗೊಟ್ಟು ಇದನ್ನು ಬಿಟ್ಟುಕೊಟ್ಟರು.

ಕಲ್ಕತ್ತಾ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ಪಿ.ವಿ. ಚಕ್ರಬರ್ತಿಯವರ ಒಂದು ಲೇಖನದ ಪ್ರಕಾರ, "ನಾನುಪಶ್ಚಿಮ ಬಂಗಾಳದ ರಾಜ್ಯಪಾಲನಾಗಿ ೧೯೫೬ರಲ್ಲಿ ನಿಯುಕ್ತನಾಗಿದ್ದಾಗ ಕ್ಲೆಮೆಂಟ್ ಅಟ್ಲೀಯವರನ್ನು ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಪ್ರಮುಖ ಕಾರಣವೇನೆಂದು ಕೇಳಿದಾಗ ದೊರೆತ ಉತ್ತರ: 'ಭಾರತ ಬಿಟ್ಟು ತೊಲಗಿ ಚಳುವಳಿಯು ೧೯೪೭ರ ಎಷ್ಟೋ ಸಮಯದ ಮುಂಚೆಯೇ ಸತ್ತುಹೋಗಿತ್ತು. ಬ್ರಿಟಿಷರು ಭಾರತ ಬಿಟ್ಟು ಹೋಗಲು ಹಲವಾರು ಕಾರಣಗಳಿದ್ದವು, ಆದರೆ ಮುಖ್ಯವಾದವುಗಳೆಂದರೆ, ನೇತಾಜಿ ಸುಭಾಸ್ ಚಂದ್ರ ಬೋಸ್ ರ ಭಾರತೀಯ ರಾಷ್ಟ್ರೀಯ ಸೇನೆಯ ಚಟುವಟಿಕೆಗಳು ಮತ್ತು ಭಾರತ ಸೇನೆಗಳ ಬಂಡಾಯ.' [೨].

ಭಾರತದ ಸ್ವಾತಂತ್ರ್ಯದ ನಿಜವಾದ ಕಾರಣ ಭಾರತೀಯರ ವಿರೋಧವೇ ಅಥವಾ ಸೈನಿಕರ ಬಂಡಾಯವೇ ಎಂಬುದು ವಿವಾದಾತ್ಮಕವಾಗಿದ್ದರೂ ನಿಸ್ಸಂಶಯವಾಗಿ ಹೇಳಬಹುದಾದ ಸಂಗತಿಯೆಂದರೆ ಲಕ್ಷಾಂತರ ಜನರು ಪ್ರೇರಿತರಾಗಿ ಸ್ವಾತಂತ್ರಕ್ಕಾಗಿ ಹೋರಾಡಿದರೆಂಬುದು. ಬ್ರಿಟಿಷರ ಪ್ರತಿಯೋದು ನಡೆಯೂ ಇದನ್ನು ಮತ್ತಷ್ಟು ಪ್ರೇರೇಪಿಸಿತು. ಭಾರತೀಯ ರಾಷ್ಟ್ರೀಯ ಸೇನೆ ಮತ್ತು ಮುಂಬಯಿ ದಂಗೆ ಬ್ರಿಟಿಷ್ ಆಡಳಿತದ ಬುಡವನ್ನು ಅಲುಗಾಡಿಸಿದವು. ೧೯೪೬ರ ವೇಳೆಗೆ ಎಲ್ಲ ಬಂಧಿತ ರಾಜಕೀಯ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಳ್ಳುವ ಬಗ್ಗೆ ಸಾರ್ವಜನಿಕವಾಗಿ ಮಾತುಕತೆಗಳು ನಡೆದವು. ಆಗಸ್ಟ್ ೧೫, ೧೯೪೭ರಂದು ಭಾರತವನ್ನು ಸ್ವತಂತ್ರ ದೇಶವೆಂದು ಘೋಷಿಸಲಾಯಿತು.

ಒಂದು ಹೊಸ ಯುವ ಪೀಳಿಗೆಯು ಗಾಂಧೀಜಿಯವರ ಕರೆಗೆ ಓಗೊಟ್ಟಿತ್ತು. ಈ ಚಳುವಳಿಯಲ್ಲಿ ಹೋರಾಡಿದ ಭಾರತೀಯರು ಸ್ವತಂತ್ರ ಭಾರತದ ಪ್ರಥಮ ಪೀಳಿಗೆಯವರಾಗಿ ವಸಾಹತುಶಾಹಿ ಕಾಲದ ನಂತರ ಪ್ರಪಂಚದ ಅತಿ ಗಟ್ಟಿಯಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರು. ಇದನ್ನು ಮಾನವಕುಲದ ದೂರದರ್ಶಿತ್ವದ ಮಹತ್ತರ ಉದಾಹರಣೆಯೆಂದು ಹೇಳಬಹುದು.

ಟಿಪ್ಪಣಿ

  1. ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ ಸೈಟ್ ನಲ್ಲಿ ಲೇಖನ ಎರಡನೇ ಮಹಾಯುದ್ಧ ಮತ್ತು ಕಾಂಗ್ರೆಸ್ http://www.aicc.org.in/the_congress_and_the_freedom_movement.htm#the.
  2. http://www.tribuneindia.com/2006/20060212/spectrum/main2.htm.URL

ಹೊರಗಿನ ಸಂಪರ್ಕಗಳು

ಇವನ್ನೂ ನೋಡಿ


          ಭಾರತದ ಸ್ವಾತಂತ್ರ್ಯ               
ಚರಿತ್ರೆ: ವಸಾಹತುಶಾಹಿ - ಈಸ್ಟ್ ಇಂಡಿಯಾ ಕಂಪನಿ - ಪ್ಲಾಸೀ ಕದನ - ಬಕ್ಸರ್ ಕದನ
ತತ್ವಗಳು: ರಾಷ್ಟ್ರೀಯತೆ - ಸ್ವರಾಜ್ - ಗಾಂಧಿವಾದ - ಸತ್ಯಾಗ್ರಹ - ಹಿಂದೂ ರಾಷ್ಟ್ರೀಯತೆ - ಸ್ವದೇಶಿ - ಸಮಾಜವಾದ
ಘಟನೆ-ಚಳುವಳಿಗಳು: ೧೮೫೭ರ ದಂಗೆ - ಬಂಗಾಳದ ವಿಭಜನೆ - ಕ್ರಾಂತಿಕಾರಿಗಳು - ಚಂಪಾರಣ ಮತ್ತು ಖೇಡಾ - ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ - ಅಸಹಕಾರ - ಸೈಮನ್ ಆಯೋಗ - ನೆಹರು ವರದಿ - ಉಪ್ಪಿನ ಸತ್ಯಾಗ್ರಹ - ೧೯೩೫ರ ಭಾರತ ಸರ್ಕಾರ ಕಾಯ್ದೆ - ಕ್ರಿಪ್ ಆಯೋಗ - ಭಾರತ ಬಿಟ್ಟು ತೊಲಗಿ - ಮುಂಬೈ ದಂಗೆ
ಸಂಘಟನೆಗಳು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಗದರ್ - ಹೋಂ ರೂಲ್ ಚಳುವಳಿ - ಭಾರತೀಯ ರಾಷ್ಟ್ರೀಯ ಸೇನೆ - ಆಜಾದ್ ಹಿಂದ್ - ಅನುಶೀಲನ ಸಮಿತಿ
ನಾಯಕರು: ಮಂಗಲ ಪಾಂಡೆ - ಝಾನ್ಸಿ ರಾಣಿ ಲಕ್ಷ್ಮೀಬಾಯಿ - ಬಾಲ ಗಂಗಾಧರ ತಿಲಕ್ - ಗೋಪಾಲ ಕೃಷ್ಣ ಗೋಖಲೆ - ಮಹಾತ್ಮಾ ಗಾಂಧಿ - ಸರ್ದಾರ್ ಪಟೇಲ್ - ಸುಭಾಷ್ ಚಂದ್ರ ಬೋಸ್ - ಜವಾಹರಲಾಲ್ ನೆಹರು - ಮೌಲಾನಾ ಆಜಾದ್ - ಚಂದ್ರಶೇಖರ್ ಆಜಾದ್ - ರಾಜಾಜಿ - ಭಗತ್ ಸಿಂಗ್
ಬ್ರಿಟಿಷ್ ಆಡಳಿತ: ರಾಬರ್ಟ್ ಕ್ಲೈವ್ - ಲೂಯಿ ಮೌಂಟ್‌ಬ್ಯಾಟನ್
ಸ್ವಾತಂತ್ರ್ಯ: ಕ್ಯಾಬಿನೆಟ್ ಆಯೋಗ - ಭಾರತದ ಸ್ವಾತಂತ್ರ್ಯ ಕಾಯ್ದೆ - ಭಾರತದ ವಿಭಜನೆ - ಭಾರತದ ರಾಜಕೀಯ ಒಗ್ಗೂಡುವಿಕೆ - ಭಾರತದ ಸಂವಿಧಾನ