ವಿಷಯಕ್ಕೆ ಹೋಗು

ಮಿಥುನ್ ಚಕ್ರವರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mithun Chakraborty

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Gauranga Chakraborty
(1947-06-16) ೧೬ ಜೂನ್ ೧೯೪೭ (ವಯಸ್ಸು ೭೭)
ಕೊಲ್ಕತ್ತ, ಪಶ್ಚಿಮ ಬಂಗಾಳ, India
ಬೇರೆ ಹೆಸರುಗಳು Mithunda
ವೃತ್ತಿ Actor
ವರ್ಷಗಳು ಸಕ್ರಿಯ ೧೯೭೬–present
ಪತಿ/ಪತ್ನಿ Yogeeta Bali (೧೯೮೨-present)

ಮಿಥುನ್ ಚಕ್ರವರ್ತಿ ( ಗೌರಂಗಾ ಚಕ್ರವರ್ತಿ ಎಂಬ ಜನ್ಮನಾಮದೊಂದಿಗೆ ಹುಟ್ಟಿದ್ದು ೧೯೪೭ರ ಜೂನ್‌ ೧೬ರಂದು) ಓರ್ವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-ವಿಜೇತ ಭಾರತದ ಚಲನಚಿತ್ರ ನಟ, ಸಾಮಾಜಿಕ ಕ್ರಿಯಾವಾದಿ ಮತ್ತು ಉದ್ಯಮಿ. ಮೃಗಯಾ (೧೯೭೬) ಎಂಬ ಕಲಾತ್ಮಕ ರೂಪಕ ಚಿತ್ರದೊಂದಿಗೆ ಚಕ್ರವರ್ತಿ ನಟನಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ. ಇದರಲ್ಲಿನ ಅಭಿನಯಕ್ಕಾಗಿ ಆತ ತನ್ನ ಮೊಟ್ಟಮೊದಲ, ಅತ್ಯುತ್ತಮ ನಟನಿಗಾಗಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ.[] ೧೯೮೦ರ ದಶಕದಲ್ಲಿನ ಆತನ ಉಚ್ಛ್ರಾಯದ ದಿನಗಳಲ್ಲಿ ಓರ್ವ ನರ್ತಿಸುವ ತಾರೆ ಯಾಗಿ ಆತ ಒಂದು ಬೃಹತ್ ಅಭಿಮಾನಿಗಳ ಪಡೆಯನ್ನೇ ಹೊಂದಿದ್ದ, ಮತ್ತು ಭಾರತದ ಅತ್ಯಂತ ಜನಪ್ರಿಯ ಹಾಗೂ ಅಗ್ರಗಣ್ಯ ನಟರ ಪೈಕಿ ಒಬ್ಬನನ್ನಾಗಿ ತನ್ನನ್ನು ನೆಲೆಗಾಣಿಸಿಕೊಳ್ಳುತ್ತಾ ಹೋದ. ಅದರಲ್ಲೂ ನ್ದಿಷ್ಟವಾಗಿ ಹೇಳುವುದಾದರೆ, ೧೯೮೨ರಲ್ಲಿ ಬಂದ ಅಭಿಮಾನದ ಭರಪೂರದಲ್ಲಿ ಯಶಸ್ವಿಯಾದ ಡಿಸ್ಕೋ ಡ್ಯಾನ್ಸರ್‌ ಚಿತ್ರದಲ್ಲಿ ಆತ ನಟಿಸಿದ ಜಿಮ್ಮಿ ಎಂಬ ಹಾದಿಬದಿಯ ನೃತ್ಯಪಟುವಿನ ಪಾತ್ರದಿಂದ ಆತ ಹೆಚ್ಚು ಗುರುತಿಸಲ್ಪಟ್ಟ ಎನ್ನಬೇಕು.

ಒಟ್ಟಾರೆಯಾಗಿ ಚಕ್ರವರ್ತಿ ೩೫೦ಕ್ಕೂ ಹೆಚ್ಚಿನ ಬಾಲಿವುಡ್‌ ಚಲನಚಿತ್ರಗಳು, ಅನೇಕ ಬೆಂಗಾಲಿ, ಒರಿಯಾ ಮತ್ತು ಭೋಜ್‌ಪುರಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ಮಿಥುನ್ ಮೊನಾರ್ಕ್‌ ಗ್ರೂಪ್‌‌ ನ ಮಾಲೀಕತ್ವವನ್ನೂ ಹೊಂದಿದ್ದು, ಇದು ಅತಿಥಿ ಸತ್ಕಾರದ ವಲಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.[]

ಜೀವನ ಚರಿತ್ರೆ

[ಬದಲಾಯಿಸಿ]

ವೈಯಕ್ತಿಕ ಜೀವನ

[ಬದಲಾಯಿಸಿ]

ಈಗ ಬಾಂಗ್ಲಾದೇಶದಲ್ಲಿ ಸ್ಥಿತವಾಗಿರುವ ಬರಿಸಾಲ್‌ನಲ್ಲಿ ಆತ ಹುಟ್ಟಿದ ಮತ್ತು ಕೋಲ್ಕತಾದಲ್ಲಿನ ಸುಪ್ರಸಿದ್ಧ ಸ್ಕಾಟಿಷ್‌ ಚರ್ಚ್‌ ಕಾಲೇಜಿನಲ್ಲಿ ಆತನ ವಿದ್ಯಾಭ್ಯಾಸ ನಡೆಯಿತು. ಈ ಶಿಕ್ಷಣ ಸಂಸ್ಥೆಯಿಂದ ಆತ ರಸಾಯನಶಾಸ್ತ್ರದಲ್ಲಿ (BSc) ತನ್ನ ಪದವಿಯನ್ನು ಪಡೆದ. ಅದಾದ ನಂತರ, ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ತರಬೇತಿ ಸಂಸ್ಥೆಯನ್ನು ಸೇರಿದ ಆತ ಅಲ್ಲಿಂದಲೂ ತರಬೇತಿಯ ಪ್ರಮಾಣಪತ್ರವನ್ನು ಪಡೆದ.

ಚಲನಚಿತ್ರೋದ್ಯಮವನ್ನು ಪ್ರವೇಶಿಸುವ ಮೊದಲು ಮಿಥುನ್‌ ಓರ್ವ ಕಟ್ಟಾ ನಕ್ಸಲೈಟ್‌ ಆಗಿದ್ದ ಎಂಬ ವಾಸ್ತವಾಂಶ ಬಹಳ ಜನಕ್ಕೆ ಗೊತ್ತಿಲ್ಲ. ಆದರೆ ಆತನ ಏಕೈಕ ಸೋದರ ಅಸಹಜವಾದ ಅಪಘಾತವೊಂದರಲ್ಲಿ ವಿದ್ಯುದಾಘಾತಕ್ಕೀಡಾಗಿ ಮರಣಹೊಂದಿದಾಗ ಆತನ ಕುಟುಂಬವನ್ನು ದುರಂತವು ಆವರಿಸಿತು. ನಕ್ಸಲೈಟ್‌ ಪಂಥದ ತೆಕ್ಕೆಯಿಂದ ಬಿಡಿಸಿಕೊಂಡು ಬಂದು ತನ್ನ ಕುಟುಂಬಕ್ಕೆ ಮಿಥುನ್‌ ಹಿಂದಿರುಗಿದರೂ ಸಹ, ನಕ್ಸಲೈಟ್‌ಗಳಿಂದ ಆತನ ಸ್ವಂತ ಜೀವನಕ್ಕೆ ಒಂದು ವಿಷಮ ಸ್ವರೂಪದ ಅಪಾಯವಿದ್ದೇ ಇತ್ತು. ಏಕೆಂದರೆ ಇದೊಂದು ಏಕಮುಖ-ರಸ್ತೆಯೆಂದು ಪರಿಗಣಿಸಲ್ಪಟ್ಟಿದ್ದು, ಒಮ್ಮೆ ಆ ವಲಯವನ್ನು ಪ್ರವೇಶಿಸಿದವರು ಮುಖ್ಯವಾಹಿನಿಗೆ ಸುಲಭವಾಗಿ ಹಿಂದಿರುಗುವಂತಿರಲಿಲ್ಲ. ಈ ಅಂಶವೇ ಆತನ ಜೀವನದಲ್ಲಿ ಒಂದು ನಿರ್ಣಾಯಕ ಘಟ್ಟವಾಗಿ ಪರಿಣಮಿಸಿತು ಹಾಗೂ ಆತ ಒಂದು ಮಾದರಿ ಸ್ಥಾನಮಾನವನ್ನು ಗಳಿಸಲು ಇದ್ದ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಯಿತು. ಆತ ಸಮರಕಲೆಗಳಲ್ಲೂ ಪರಿಣಿತ ತರಬೇತಿಯನ್ನು ಪಡೆದಿದ್ದ ಎಂಬ ವಾಸ್ತವಾಂಶವೂ ಬಹಳ ಜನಕ್ಕೆ ತಿಳಿದಿಲ್ಲ.

ಭಾರತೀಯ ಚಿತ್ರನಟಿ ಯೋಗಿತಾ ಬಾಲಿಯನ್ನು ಮಿಥುನ್‌ ಮದುವೆಯಾಗಿದ್ದು, ಅವರಿಬ್ಬರೂ ಮೂವರು ಗಂಡುಮಕ್ಕಳು ಹಾಗೂ ಓರ್ವ ಮಗಳನ್ನು ಹೊಂದಿದ್ದಾರೆ. ಹಿರಿಯ ಮಗನಾದ ಮಿಮೋಹ್‌ ಚಕ್ರವರ್ತಿ ಬಾಲಿವುಡ್‌ನಲ್ಲಿ ಓರ್ವ ನಟನಾಗಿದ್ದು‌, ೨೦೦೮ರಲ್ಲಿ ಬಂದ ಜಿಮ್ಮಿ ಎಂಬ ಚಲನಚಿತ್ರದ ಮೂಲಕ ಚಿತ್ರರಂಗದಲ್ಲಿ ಆತ ತನ್ನ ಪಾದಾರ್ಪಣೆಯನ್ನು ಮಾಡಿದ. ಮಿಥುನ್‌ನ ಎರಡನೆಯ ಮಗನಾದ ರಿಮೋಹ್‌ ಚಕ್ರವರ್ತಿಯು ಫಿರ್‌ ಕಭಿ ಎಂಬ ಚಲನಚಿತ್ರದಲ್ಲಿ ಮಿಥುನ್‌ ಕಿರಿಯ ವಯಸ್ಸಿನವನಾಗಿದ್ದಾಗಿನ ಪಾತ್ರವನ್ನು ಮಾಡುತ್ತಿದ್ದಾನೆ ಮತ್ತು ಮಿಥುನ್‌ನ ಇನ್ನಿಬ್ಬರು ಮಕ್ಕಳಾದ ನಮಾಷಿ ಚಕ್ರವರ್ತಿ ಹಾಗೂ ದಿಶಾನಿ ಚಕ್ರವರ್ತಿ ಇನ್ನೂ ತಮ್ಮ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.

೧೯೮೬ರಿಂದ ೧೯೮೭ರ ಅವಧಿಯವರೆಗೆ ಮಿಥುನ್‌ಗೆ ನಟಿ ಶ್ರೀದೇವಿಯೊಂದಿಗೆ ಸಂಬಂಧವಿತ್ತು, ಹಾಗೂ ತನ್ನ ಮೊದಲ ಪತ್ನಿಯಾದ ಯೋಗಿತಾ ಬಾಲಿಯಿಂದ ಮಿಥುನ್‌ ಇನ್ನೂ ವಿಚ್ಛೇದನವನ್ನು ಪಡೆದುಕೊಂಡಿಲ್ಲ ಎಂದು ಶ್ರೀದೇವಿಗೆ ಗೊತ್ತಾದಾಗ ಆಕೆ ಈ ಸಂಬಂಧವನ್ನು ಅಂತ್ಯಗೊಳಿಸಿದಳು ಎಂದು ಹಲವಾರು ಮೂಲಗಳು ಸಮರ್ಥಿಸುತ್ತವೆ. ಚಕ್ರವರ್ತಿ ಹಾಗೂ ಶ್ರೀದೇವಿ ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದರೂ, ಆ ಸಂಬಂಧವು ನಂತರ ರದ್ದಾಯಿತು ಎಂದು ಹೇಳಲಾಗುತ್ತಿತ್ತು.[]

ಚಿತ್ರರಂಗದ ವೃತ್ತಿಜೀವನ

[ಬದಲಾಯಿಸಿ]

೧೯೭೬ರಲ್ಲಿ ಬಂದ ಮೃಣಾಲ್‌ ಸೇನ್‌ ನಿರ್ದೇಶನದ ಮೃಗಯಾ ಚಲನಚಿತ್ರದ ಮೂಲಕ ಮಿಥುನ್‌ನ ಚಲನಚಿತ್ರರಂಗದ ಪ್ರಥಮ ಪ್ರವೇಶವಾಯಿತು. ಇದಕ್ಕಾಗಿ ಆತ ತಾನು ಬಯಸಿದ ಅತ್ಯುತ್ತಮ ನಟನಿಗಾಗಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡ. ಪ್ರಥಮ ಪ್ರವೇಶವಾದ ನಂತರ, ದೋ ಅಂಜಾನೆ (೧೯೭೬) ಮತ್ತು ಫೂಲ್‌ ಖಿಲೇ ಹೈ ಗುಲ್ಷನ್‌ ಗುಲ್ಷನ್‌ ನಂಥ (೧೯೭೭) ಚಿತ್ರಗಳಲ್ಲಿ ಆತ ಕೆಲವೊಂದು ಪೋಷಕ ಪಾತ್ರಗಳನ್ನು ಮಾಡಿದನಾದರೂ, ಅವು ಅವನಿಗೆ ಯಾವುದೇ ಮಾನ್ಯತೆಯನ್ನು ತಂದುಕೊಡಲಿಲ್ಲ. ೧೯೭೦ರ ದಶಕದ ಅಂತ್ಯದಲ್ಲಿ, ರವಿಕಾಂತ್‌ ನಗಾಯಿಚ್‌ ನಿರ್ದೇಶಿಸಿದ ಸುರಕ್ಷಾ (೧೯೭೯) ಎಂಬ ಕಡಿಮೆ ಬಂಡವಾಳದ ಗೂಢಚಾರಿಕೆಯ ಚಲನಚಿತ್ರದೊಂದಿಗೆ ಹಾಗೂ ೧೯೮೦ರ ದಶಕದ ಆರಂಭದಲ್ಲಿ, ಹಂ ಪಾಂಚ್‌ (೧೯೮೦) ಮತ್ತು ವರದಾತ್‌ ನಂಥ (೧೯೮೧) (ಸುರಕ್ಷಾ ಚಿತ್ರದ ಒಂದು ಉತ್ತರಭಾಗ) ಯಶಸ್ವೀ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ, ಆತ ಪ್ರಸಿದ್ಧಿಗೆ ಬಂದ.

ಆತನ ಅದ್ಭುತ ಪ್ರಗತಿಗೆ ಹಾದಿಮಾಡಿಕೊಟ್ಟ ಪಾತ್ರವು ಅಂತಿಮವಾಗಿ ಸಂಗೀತಮಯ ರೂಪಕ ಚಿತ್ರವಾದ ಡಿಸ್ಕೋ ಡ್ಯಾನ್ಸರ್‌ ನಲ್ಲಿ (೧೯೮೨) ಆತನಿಗೆ ದಕ್ಕಿತು. ಚಿತ್ರದ ಪ್ರಚಂಡ ಯಶಸ್ಸಿಗೆ ಅದರ ಅದ್ಭುತ ಸಂಗೀತ ಕಾರಣವಾಗಿದ್ದೇ ಅಲ್ಲದೇ, ಇಂದಿಗೂ ಸಹ ಅದು ಅಭಿಮಾನಿಗಳ ಅಚ್ಚುಮೆಚ್ಚಿನ ಚಿತ್ರವಾಗಿದೆ. ಈ ಚಲನಚಿತ್ರ ಮತ್ತು ಇತರ ಸಂಗೀತಮಯ ಚಲನಚಿತ್ರಗಳಾದ ಕಸಂ ಪೈದಾ ಕರ್‌ನೆ ವಾಲೆ ಕಿ (೧೯೮೪) ಮತ್ತು ಡಾನ್ಸ್‌ ಡಾನ್ಸ್‌ (೧೯೮೭) ಇವೇ ಮೊದಲಾದವು ಅವನಲ್ಲಿ ಅಡಗಿದ್ದ ಓರ್ವ ಪ್ರತಿಭಾವಂತ ನೃತ್ಯಗಾರನನ್ನು ಆಚಗೆ ಎಳೆದು ತಂದವು.

೧೯೮೦ರ ದಶಕದ ಅವಧಿಯಲ್ಲಿ ಹಲವಾರು ಯಶಸ್ವೀ ಪ್ರಣಯ ಪ್ರಧಾನ ಹಾಗೂ ಕೌಟುಂಬಿಕ ರೂಪಕ ಚಿತ್ರಗಳಲ್ಲೂ ಅವನು ಅಭಿನಯಿಸಿದ. ಅವುಗಳಲ್ಲಿ ಕೆಲವು ಹೀಗಿವೆ: ಮುಝೆ ಇನ್ಸಾಫ್‌ ಚಾಹಿಯೇ (೧೯೮೩), ಪ್ಯಾರ‍್ ಝುಕ್ತಾ ನಹೀ (೧೯೮೫), ಸ್ವರ್ಗ್‌ ಸೇ ಸುಂದರ್‌ (೧೯೮೬), ಮತ್ತು ಪ್ಯಾರ್‌ ಕಾ ಮಂದಿರ್‌ (೧೯೮೮). ಈ ಚಲನಚಿತ್ರಗಳು ಇಂದಿನವರೆಗೂ ಹಣಗಳಿಕೆಯ ದೃಷ್ಟಿಯಿಂದ ಆತನ ಅತ್ಯಂತ ಯಶಸ್ವೀ ಚಲನಚಿತ್ರಗಳೆನಿಸಿಕೊಂಡಿವೆ.[]

ಅನೇಕ ಚಲನಚಿತ್ರಗಳಲ್ಲಿ ಆತ ಓರ್ವ ಸಾಹಸೀ ನಾಯಕನಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾನೆ. ಅಂಥ ಕೆಲವು ಉದಾಹರಣೆಗಳೆಂದರೆ: ವಾಂಟೆಡ್‌ (೧೯೮೩), ಬಾಕ್ಸರ್‌ (೧೯೮೪), ಜಾಗೀರ್‌ (೧೯೮೪), ಜಾಲ್‌ (೧೯೮೬), ವತನ್‌ ಕೀ ರಖವಾಲೆ (೧೯೮೭) ಕಮಾಂಡೋ (೧೯೮೮), ವಕ್ತ್‌ ಕೀ ಆವಾಜ್‌ (೧೯೮೮), ಗುರು (೧೯೮೯), ಮುಜ್ರಿಮ್‌ (೧೯೮೯) ಮತ್ತು ದುಷ್ಮನ್‌ (೧೯೯೦). ೧೯೮೦ರ ದಶಕದ ಮಧ್ಯಭಾಗದಲ್ಲಿ ಆತನನ್ನು ಅಮಿತಾಭ್‌ ಬಚ್ಚನ್‌ನ ಓರ್ವ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಸಮಾಜದ ಅನಿಷ್ಟಗಳು ಹಾಗೂ ಭ್ರಷ್ಟಾಚಾರದ ವಿರುದ್ಧವಾಗಿ ಹೋರಾಡುವ ಸಿಟ್ಟಿನ ಸ್ವಭಾವದ ಯುವಕನ ರೀತಿಯಲ್ಲಿ ಅವನನ್ನು ಜನರ ಮುಂದೆ ಪ್ರಸ್ತುತಪಡಿಸಿದ ಸಾಹಸ ಪ್ರಧಾನ ಹಾಗೂ ನಾಟಕೀಯ ಪ್ರಕಾರದಲ್ಲಿನ ಹಲವಾರು ಚಲನಚಿತ್ರಗಳಲ್ಲಿ ಆತ ಅಭಿನಯಿಸಿದ್ದರಿಂದಾಗಿ ಈ ಅಭಿಪ್ರಾಯವು ಹೊರಹೊಮ್ಮಿತ್ತು. ಈ ತೆರನಾದ ಚಿತ್ರಿಸುವಿಕೆಯು ಬಚ್ಚನ್‌ನ ಪಾತ್ರಗಳ ಸ್ವರೂಪದಂತೆಯೇ ಇತ್ತು. ಇದೇ ರೀತಿಯಲ್ಲಿ, ಆತನ ಕಾಲದಲ್ಲಿದ್ದ ಮತ್ತು ಸಾಧಾರಣವಾಗಿ ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿದ್ದ ಕೆಲವೊಂದು ಅತ್ಯಂತ ದೊಡ್ಡ ನಟಿಯರ ಜೊತೆಗೆ ಆತ ಅಭಿನಯಿಸಿದ್ದಾನೆ. ಅವರುಗಳೆಂದರೆ, ಝೀನತ್‌ ಅಮಾನ್‌, ಪದ್ಮಿನಿ ಕೊಲ್ಹಾಪುರಿ, ರತಿ ಅಗ್ನಿಹೋತ್ರಿ, ರೇಖಾ, ಶ್ರೀದೇವಿ, ಮಾಧುರಿ ದೀಕ್ಷಿತ್‌ ಮತ್ತು ಇನ್ನೂ ಅನೇಕರು.

ಮಿಥುನ್ ಕೇವಲ ಗಲ್ಲಾಪೆಟ್ಟಿಗೆಯ ಯಶಸ್ಸನ್ನು ಮಾತ್ರವೇ ದಾಖಲಿಸದೆ ವಿಮರ್ಶಕರ ಅದ್ಭುತ ಮೆಚ್ಚುಗೆಗಳನ್ನೂ ಪಡೆದುಕೊಂಡಿದ್ದಾನೆ. ಮೃಗಯಾ, ತಹದೇರ‍್ ಕಥಾ , ಸ್ವಾಮಿ ವಿವೇಕಾನಂದ , ಕಾಲ್‌ಪುರುಷ್‌ ಮತ್ತು ತಿತ್ಲೀ ಚಿತ್ರಗಳಲ್ಲಿನ ಆತನ ಪಾತ್ರನಿರ್ವಹಣೆಗಳು ವ್ಯಾಪಕವಾಗಿ ಮೆಚ್ಚುಗೆಯನ್ನು ಗಳಿಸಿದುದೇ ಅಲ್ಲದೇ, ಆತನಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಾಗೂ ನಾಮನಿರ್ದೇಶನಗಳನ್ನು ಗೆದ್ದುಕೊಟ್ಟವು. ಆತ ಎರಡು ಫಿಲ್ಮ್‌ಫೇರ್‌ ಪ್ರಶಸ್ತಿಗಳನ್ನೂ ಗೆದ್ದಿದ್ದಾನೆ: ೧೯೯೦ರಲ್ಲಿ ಬಂದ ಅಗ್ನೀಪಥ್‌ ಚಿತ್ರದಲ್ಲಿನ ತನ್ನ ಅಭಿನಯಕ್ಕೆ ದಕ್ಕಿದ ಫಿಲ್ಮ್‌ಫೇರ್‌ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಹಾಗೂ ಜಲ್ಲಾದ್‌ ಚಿತ್ರದಲ್ಲಿನ ಪಾತ್ರನಿರ್ವಹಣೆಗಾಗಿ ದಕ್ಕಿದ ಫಿಲ್ಮ್‌ಫೇರ್‌ ಅತ್ಯುತ್ತಮ ಖಳನಾಯಕ ಪ್ರಶಸ್ತಿಗಳನ್ನು ಇಲ್ಲಿ ಹೆಸರಿಸಬಹುದು. ಇದನ್ನು ಹೊರತುಪಡಿಸಿ, ಪ್ಯಾರ್‌ ಕಾ ಮಂದಿರ್‌ (೧೯೮೮) ಮತ್ತು ಮುಜ್ರಿಮ್‌ (೧೯೮೯) ಮೊದಲಾದ ಚಿತ್ರಗಳಲ್ಲಿನ ತನ್ನ ಅಭಿನಯಕ್ಕಾಗಿ ಆತ ಮೆಚ್ಚುಗೆಯ ಮಹಾಪೂರವನ್ನೇ ಸ್ವೀಕರಿಸಿದ್ದಾನೆ.

೯೦ರ ದಶಕದ ಮಧ್ಯಭಾಗದಲ್ಲಿ ಮುಂಬಯಿಯಿಂದ ಕೊಂಚ ವಿರಾಮ ಪಡೆದುಕೊಂಡು ಊಟಿಯಲ್ಲಿ ಆತ ಮರುನೆಲೆಯನ್ನು ಕಲ್ಪಿಸಿಕೊಂಡ. ಅಲ್ಲಿ ಆತ ತನ್ನದೇ ಹೊಟೇಲು ಉದ್ಯಮವನ್ನು ಸ್ಥಾಪಿಸಿಕೊಂಡ ಹಾಗೂ ಆತ ಮುಖ್ಯವಾಹಿನಿಯ ಹಿಂದಿ ಚಲನಚಿತ್ರಗಳಿಂದ ಕಡಿಮೆ ಬಜೆಟ್ಟಿನ B-ದರ್ಜೆಯ ಚಲನಚಿತ್ರಗಳಲ್ಲಿ ಅಭಿನಯಿಸುವ ಕಡೆಗೆ ತನ್ನ ಗಮನವನ್ನು ಬದಲಾಯಿಸಿದ್ದರಿಂದಾಗಿ, ೧೦ ವರ್ಷಗಳಿಗೂ ಮೀರಿದ ಅವಧಿಯಲ್ಲಿ ೮೦ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ಅಭಿನಯಿಸಿ, ಒಂದು ದಶಕದವರೆಗೆ ಅಕ್ಷರಶಃ ಆತ ಒಂದು "ಏಕವ್ಯಕ್ತಿ ಉದ್ಯಮ"ವೇ ಆಗಿಹೋದ. ಈಗಲೂ ಮಿಥುನ್‌ನ ಕಟ್ಟಾ ಅಭಿಮಾನಿ ಬಳಗವನ್ನು ಹೊಂದಿರುವ ಮಧ್ಯಪ್ರದೇಶ ಹಾಗೂ ಬಿಹಾರದ ಪ್ರೇಕ್ಷಕ ವೃಂದದ ಮನತಣಿಸುವುದಕ್ಕಾಗಿ ಈ ಚಲನಚಿತ್ರಗಳು ಮುಖ್ಯವಾಗಿ ನಿರ್ಮಿಸಲ್ಪಟ್ಟವು. ೧೯೯೪ ರಿಂದ ೧೯೯೯ರವರೆಗಿನ ಐದು ನಿರಂತರ ವರ್ಷಗಳ ಸರಾಸರಿ ಅವಧಿಯಲ್ಲಿ ಅತ್ಯಂತ ಹೆಚ್ಚಿನ ತೆರಿಗೆಯನ್ನು ಪಾವತಿಸಿದ ಕೀರ್ತಿ ಮಿಥುನ್‌ಗೆ ಸಲ್ಲುತ್ತದೆ.

೨೦೦೫ರಲ್ಲಿ ಎಲಾನ್‌ ಎಂಬ ಚಲನಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಮುಖ್ಯವಾಹಿನಿ ಹಿಂದಿ ಚಲನಚಿತ್ರೋದ್ಯಮಕ್ಕೆ ಆತ ಮರಳಿದನಾದರೂ ಆ ಚಿತ್ರವು ಯಶಸ್ಸು ಕಾಣಲಿಲ್ಲ. ....Lucky: No Time for Love ದಂಥ (೨೦೦೫) ಕೆಲವೊಂದು ಚಲನಚಿತ್ರಗಳಲ್ಲಿ ಒಂದಷ್ಟು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ನಂತರ, ಕಲ್ಪನಾ ಲಾಝ್ಮಿಯ ಚಿಂಗಾರಿ (೨೦೦೫) ಚಲನಚಿತ್ರದಲ್ಲಿನ ತನ್ನ ಅಭಿನಯಕ್ಕಾಗಿ ಆತ ಮೆಚ್ಚುಗೆಯನ್ನು ಗಳಿಸಿದ. ೨೦೦೭ರಲ್ಲಿ ಆತ ಮಣಿರತ್ನಂ ನಿರ್ದೇಶನದ ಗುರು ಎಂಬ ಯಶಸ್ವೀ ಚಲನಚಿತ್ರದಲ್ಲಿ ಕಾಣಿಸಿಕೊಂಡ. ಇದಕ್ಕಾಗಿ ಆತನಿಗೆ ವಿಮರ್ಶಕರ ವಲಯದಿಂದ ಹೆಚ್ಚಿನ ಪ್ರಮಾಣದ ಪ್ರಶಂಸೆ ದಕ್ಕಿತು. ಆತನು ಮುಖ್ಯವಾಹಿನಿಗೆ ಮರಳಿದ ಮೇಲೆ ....Lucky: No Time for Love ಚಿತ್ರದ ನಂತರ ಬಂದ ಗುರು , ಗಲ್ಲಾಪೆಟ್ಟಿಗೆಯಲ್ಲಿ ಅತ್ಯುತ್ತಮ ಯಶಸ್ಸನ್ನು ದಾಖಲಿಸಿದ ಆತನ ಎರಡನೇ ಚಿತ್ರವಾಗಿತ್ತು. ೨೦೦೮ರಲ್ಲಿ ಮಿಥುನ್‌ನ ೯ ಚಿತ್ರಗಳು ಬಿಡುಗಡೆಯಾಗಿದ್ದು, ಅವುಗಳಲ್ಲಿ ಬೆಂಗಾಲಿ ಮತ್ತು ಭೋಜ್‌ಪುರಿ ಚಲನಚಿತ್ರಗಳು ಸೇರಿವೆ. ಆತ ನಟಿಸಿದ ಹೀರೋಸ್‌ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣಕ್ಕಿಂತ ಮೇಲ್ಮಟ್ಟದ ಯಶಸ್ಸನ್ನು ದಾಖಲಿಸಿದರೆ, ಡಾನ್‌ ಮುತ್ತುಸ್ವಾಮಿ ಚಿತ್ರದಲ್ಲಿನ ಆತನ ಹಾಸ್ಯಲೇಪಿತ ಅಭಿನಯವು ಎಲ್ಲರ ಮೆಚ್ಚುಗೆಯನ್ನು ಪಡೆಯಿತು. ೨೦೦೯ರಲ್ಲಿ, ಆತನ ಚಿತ್ರವಾದ ಝೋರ‍್ ಲಗಾ ಕೆ... ಹೈಯಾ! ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿತು.[] . ಸೋಹಂ ಷಾ ನಿರ್ದೇಶನದ ಹಾಗೂ ಸಂಜಯ್‌ ದತ್‌ನೊಂದಿಗೆ ಅಭಿನಯಿಸಿರುವ ಮಿಥುನ್‌ದಾನ ಇತ್ತೀಚಿನ ಚಿತ್ರವಾದ ಸೋಹಂ ಷಾ ಒಂದು ಉತ್ತಮವಾದ ಆರಂಭವನ್ನು ಪಡೆದಿದ್ದು, ಒಂದು ಸರಾಸರಿ ಗಳಿಕೆಯ ಚಿತ್ರವಾಗಿ ನೆಲೆಯೂರಿದೆ [ಸೂಕ್ತ ಉಲ್ಲೇಖನ ಬೇಕು].ಚಲ್‌ ಚಲೇ ಚಿತ್ರವು ತಾನು ಒಳಗೊಂಡಿದ್ದ ದಿಟ್ಟ ವಿಷಯದಿಂದಾಗಿ ವಿಮರ್ಶಕರ ಹೊಗಳಿಕೆಗೆ ಪಾತ್ರವಾಯಿತು. ಆತನ ಇತ್ತೀಚಿನ ಚಿತ್ರವಾದ ಬಾಬರ್‌ , ಉತ್ತರ ಭಾಗದ ಏಕತೆರೆಗಳಲ್ಲಿ ಚೆನ್ನಾಗಿ ಗಳಿಸುತ್ತಿದೆ [ಸೂಕ್ತ ಉಲ್ಲೇಖನ ಬೇಕು]. ಡಿಂಪಲ್‌ ಕಪಾಡಿಯಾಳೊಂದಿಗೆ ಆತ ನಟಿಸಿರುವ ಫಿರ್‌ ಕಭಿ ಚಿತ್ರವು ೨೦೦೯ರ ಸೆಪ್ಟೆಂಬರ್‌ನಲ್ಲಿ ಡೈರೆಕ್ಟ್‌ ಟು ಹೋಮ್‌ (DTH) ಮೂಲಕ ಒಂದು ಅತ್ಯಂತ ಯಶಸ್ವೀ ಪೂರ್ವಪ್ರದರ್ಶನವನ್ನು ಹೊಂದಿತು ಹಾಗೂ ೨೦೦೯ರ ಲಾಸ್‌ ಏಂಜಲೀಸ್‌ ರೀಲ್‌ ಪ್ರಶಸ್ತಿಗಳ ಪೈಕಿ ಆರು ವರ್ಗಗಳಲ್ಲಿ ಆರು ಪ್ರಶಸ್ತಿಗಳನ್ನು ಸಂಪಾದಿಸಿತು. ಆತನ ಮುಂಬರುವ ಚಲನಚಿತ್ರಗಳಲ್ಲಿ ಜಿಂದಗಿ ತೇರೇ ನಾಮ್‌ ಮಾತ್ರವಲ್ಲದೇ, ಸಲ್ಮಾನ್‌ ಖಾನ್‌ ಜೊತೆಯಲ್ಲಿ ನಟಿಸಿರುವ ವೀರ್‌ , ರಾಖ್‌ , ಹಾಗೂ ಕನ್ನಡ ಚಲನಚಿತ್ರ ಮಾಣಿಕ್ಯ ಇವೇ ಮೊದಲಾದವು ಸೇರಿವೆ.

ತನ್ನ ಬಾಲಿವುಡ್‌ ವೃತ್ತಿಜೀವನಕ್ಕೆ ಸಮಾನಾಂತರವಾಗಿ, ತನ್ನ ಸ್ಥಳೀಯ ಬೆಂಗಾಲಿ ಭಾಷೆಯಲ್ಲಿನ ಯಶಸ್ವಿ ಮತ್ತು ಅಂಥಾ ಯಶಸ್ವಿಯಾಗದ ಚಲನಚಿತ್ರಗಳ ಒಂದು ಶ್ರೇಣಿಯನ್ನು ತನ್ನ ಲೆಕ್ಕಕ್ಕೆ ಸೇರಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ವಾಸ್ತವತಾವಾದಿ ಅಥವಾ ಕಲಾತ್ಮಕ ಚಲನಚಿತ್ರಗಳೂ ಸಹ ಇದರಲ್ಲಿ ಸೇರಿದ್ದು, ಅವುಗಳಲ್ಲಿನ ಆತನ ತರಪೇತು ಪಡೆದ ಅಭಿನಯವು ಒಂದಷ್ಟು ಪ್ರಶಸ್ತಿಗಳು ಹಾಗೂ ಗೌರವಗಳನ್ನು ಅವನಿಗೆ ದಕ್ಕಿಸಿಕೊಡುವಲ್ಲಿ ನೆರವಾಗಿವೆ. ದೇಬಶ್ರೀ ರಾಯ್‌ ಮತ್ತು ಅನಿಲ್‌ ಚಟರ್ಜಿಯೊಂದಿಗೆ ಆತ ನಟಿಸಿದ ೧೯೮೨ರಲ್ಲಿ ಬಂದ ತ್ರೊಯೀ ಎಂಬ ಚಿತ್ರವು ಒಂದು ಅದ್ಭುತ ಯಶಸ್ಸನ್ನು ದಾಖಲಿಸಿತು. ಬಾಂಬೆಗೆ ಆತ ವಲಸೆ ಹೋದನಂತರ, ಮತ್ತು ಮುಖ್ಯವಾಹಿನಿ ಹಿಂದಿ ಚಲನಚಿತ್ರಗಳಲ್ಲಿ ಓರ್ವ ತಾರೆಯಾಗಿ ಜನಪ್ರಿಯತೆಯನ್ನು ಗಳಿಸಿದ ನಂತರ, ಮುಖ್ಯವಾಹಿನಿಯ ಬೆಂಗಾಲಿ ಚಲನಚಿತ್ರಗಳಲ್ಲಿನ ಮಿಥುನ್‌ನ ಕಾಣಿಸಿಕೊಳ್ಳುವಿಕೆಗಳಲ್ಲಿ ಒಂದು ನಿಲುಗಡೆ ಉಂಟಾದಂತಾಯಿತು. ಆದರೆ ಆತ ಕಲಾತ್ಮಕ ಚಲನಚಿತ್ರಗಳಲ್ಲಿ ಅಭಿನಯಿಸುವುದನ್ನು ಆತ ಮುಂದುವರೆಸಿದ. ೧೯೯೨ರಲ್ಲಿ ಬಂದ, ಶ್ರೇಷ್ಠ ನಿರ್ದೇಶಕ ಬುದ್ಧದೇಬ್‌ ದಾಸ್‌ಗುಪ್ತಾರ ತಹದೇರ‍್ ಕಥಾ ಎಂಬ ಚಿತ್ರದಲ್ಲಿ ಆತ ಅಭಿನಯಿಸಿದ್ದು ಇದಕ್ಕೊಂದು ಉದಾಹರಣೆ. ಇದು ೧೯೯೩ರಲ್ಲಿ ಆತನಿಗೆ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಮೂರನೇ ರಾಷ್ಟ್ರೀಯ ಪ್ರಶಸ್ತಿಯು ೧೯೯೫ರಲ್ಲಿ ಆತನಿಗೆ ದಕ್ಕಿತು. ಈ ಬಾರಿ G V ಅಯ್ಯರ್‌ ನಿರ್ದೇಶನದ ಸ್ವಾಮಿ ವಿವೇಕಾನಂದ ಚಿತ್ರದಲ್ಲಿ ರಾಮಕೃಷ್ಣ ಪರಮಹಂಸರ ಪಾತ್ರದಲ್ಲಿ ಆತ ನೀಡಿದ ಭಕ್ತಿ-ಗೌರವವನ್ನು ಹುಟ್ಟಿಸುವ ಅಭಿನಯಕ್ಕಾಗಿ ಆತನಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು ದಕ್ಕಿತು. ೧೯೯೯ರಲ್ಲಿ ಬಂದ ಗೌತಮ್‌ ಘೋಷ್‌ರ ಗುಡಿಯಾ ಚಿತ್ರದಲ್ಲಿನ ಅಭಿನಯಕ್ಕೂ ಸಹ ಆತ ಪುರಸ್ಕಾರಗಳನ್ನು ಪಡೆದ. ೨೦೦೨ದಲ್ಲಿ ಬಂದ, ರಿತುಪರ್ಣೋ ಘೋಷ್‌‌ ನಿರ್ದೇಶನದ, ವಿಮರ್ಶಾತ್ಮಕವಾಗಿ ಮೆಚ್ಚುಗೆಯನ್ನು ಪಡೆದ ಹಾಗೂ ಚೆನ್ನಾಗಿ ಹಣಗಳಿಸಿದ ತಿತ್ಲೀ ಎಂಬ ಚಿತ್ರದಲ್ಲೂ ಸಹ ಆತ ಅಭಿನಯಿಸಿದ. ನಿಜಜೀವನದಲ್ಲಿ ತಾಯಿ-ಮಗಳಾಗಿರುವ ಅಪರ್ಣಾ ಸೇನ್‌ ಮತ್ತು ಕೊಂಕಣಾ ಸೇನ್‌ ಶರ್ಮಾರೊಂದಿಗೆ ಆತ ಅಭಿನಯಿಸಿದ್ದು ವಿಶೇಷವಾಗಿತ್ತು. ಇತ್ತೀಚೆಗೆ, ಜನಪ್ರಿಯ ಮನೋರಂಜನೆಗಾರರ ಫಟಾಕೆಶ್ಟೋ ಸರಣಿಗಳು ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಯಶಸ್ಸು ಕಂಡಿವೆ. ೨೦೦೮ರಲ್ಲಿ, ಆತ ದಾಸ್‌ಗುಪ್ತಾರೊಂದಿಗೆ ಮತ್ತೊಮ್ಮೆ ಜತೆಗೂಡಿ, ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದ ಕಾಲ್‌ಪುರುಷ್‌ ಚಿತ್ರದಲ್ಲಿ ಅಭಿನಯಿಸಿದ. ರಾಹುಲ್‌ ಬೋಸ್‌ ಮತ್ತು ಸಮೀರಾ ರೆಡ್ಡಿ ಇವನೊಂದಿಗೆ ನಡಿಸಿದ ಮತ್ತಿಬ್ಬರು ಪ್ರಮುಖ ಕಲಾವಿದರಾಗಿದ್ದರು.

ದೂರದರ್ಶನ ಪ್ರದರ್ಶನಗಳು

[ಬದಲಾಯಿಸಿ]

ಝೀ TVಯಲ್ಲಿ ಬಿತ್ತರವಾಗುವ ಡಾನ್ಸ್‌ ಇಂಡಿಯಾ ಡಾನ್ಸ್‌ ಹಾಗೂ ಡಾನ್ಸ್‌ ಬಾಂಗ್ಲಾ ಡಾನ್ಸ್‌ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಮಿಥುನ್‌ ಮಹಾತೀರ್ಪುಗಾರನಾಗಿದ್ದಾನೆ. ಡಾನ್ಸ್‌ ಇಂಡಿಯಾ ಡಾನ್ಸ್‌ನಲ್ಲಿ ಬರುವ ಮಿಥುನ್‌ದಾ ಎಂದೇ ಆತ ಈಗ ಪ್ರಸಿದ್ಧ.

ಕ್ರೀಡೆ

[ಬದಲಾಯಿಸಿ]

ತನ್ನ ಹುಟ್ಟೂರು ಬಂಗಾಳದಲ್ಲಿ ಫುಟ್‌ಬಾಲ್‌ ಆಟದ ಪ್ರವರ್ತನಾ ಕಾರ್ಯದಲ್ಲೂ ಮಿಥುನ್ ಚಕ್ರವರ್ತಿ ಭಾಗಿಯಾಗಿದ್ದಾನೆ. ಬಂಗಾಳ ಫುಟ್‌ಬಾಲ್‌ ಅಕಾಡೆಮಿ ಯು ಆತನ ಮಿದುಳಿನ ಕೂಸಾಗಿದ್ದು, ಈ ಅಕಾಡೆಮಿಯ ಪ್ರಾರಂಭಕ್ಕಾಗಿ ಮಿಥುನ್‌ ಅಗತ್ಯವಿರುವ ಬಂಡವಾಳವನ್ನು ಸಂಗ್ರಹಿಸಿದ್ದಾನೆ.

ಇಂಡಿಯನ್‌ ಕ್ರಿಕೆಟ್‌ ಲೀಗ್‌‌ನ ಒಂದು ಕ್ರಿಕೆಟ್‌ ತಂಡವಾದ ರಾಯಲ್‌ ಬೆಂಗಾಲ್‌ ಟೈಗರ್ಸ್‌‌ನ ಸಹ-ಮಾಲೀಕನಾಗಿಯೂ ಮಿಥುನ್‌ ಚಕ್ರವರ್ತಿ ಮತ್ತೊಂದು ಅವತಾರವನ್ನು ತೋರಿಸಿದ್ದಾನೆ [].

ಪ್ರಶಸ್ತಿಗಳು

[ಬದಲಾಯಿಸಿ]

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

[ಬದಲಾಯಿಸಿ]

ಫಿಲ್ಮ್‌ಫೇರ್ ಪ್ರಶಸ್ತಿಗಳು

[ಬದಲಾಯಿಸಿ]

ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳು

[ಬದಲಾಯಿಸಿ]

ಸ್ಟಾರ್‌ಡಸ್ಟ್ ಪ್ರಶಸ್ತಿಗಳು‌

[ಬದಲಾಯಿಸಿ]

ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು

[ಬದಲಾಯಿಸಿ]

ಆಯ್ದ ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. https://en.wikipedia.org/wiki/Mrigayaa
  2. ಟೈಮ್ಸ್‌ ಆಫ್ ಇಂಡಿಯಾ ಲೇಖನ
  3. "The Truth About Mithun and Sridevi". Stardust. Stardust International. May 1990.
  4. "boxofficeindia.com". Career's biggest hits. Archived from the original on 20 ಜುಲೈ 2012. Retrieved 7 July 2008.
  5. "Zor Lagaa Ke... Haiya Movie Preview". Archived from the original on 2009-06-19. Retrieved 15 Sept., 2009. {{cite web}}: Check date values in: |accessdate= (help)
  6. "ದಿ ಟೆಲಿಗ್ರಾಫ್‌, ಇಂಡಿಯಾ - ಮಿಥುನ್: ನೋ ಕ್ಲಾಶ್‌ ವಿತ್‌ ಶಾ ರುಖ್‌". Archived from the original on 2010-01-14. Retrieved 2010-02-23.

ಹೊರಗಿನ ಕೊಂಡಿಗಳು

[ಬದಲಾಯಿಸಿ]