ವಿಷಯಕ್ಕೆ ಹೋಗು

ಮಾಂಬಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಂಬಾ
ಕರಿ ಮಾಂಬಾ
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ರೆಪ್ಟೀಲಿಯಾ
ಗಣ: ಸ್ಕ್ವಾಮೇಟಾ
ಉಪಗಣ: ಸರ್ಪೆಂಟೀಸ್
ಕುಟುಂಬ: ಎಲ್ಯಾಪಿಡೇ
ಉಪಕುಟುಂಬ: ಎಲ್ಯಾಪಿನೇ
ಕುಲ: ಡೆಂಡ್ರೋಆಸ್ಪಿಸ್
Schlegel, 1848[]
ಪ್ರಜಾತಿಗಳು
  D. polylepis   
  D. angusticeps
  D. viridis

ಮಾಂಬಾಗಳು ವೇಗವಾಗಿ ಚಲಿಸುವ ವಿಷಪೂರಿತ ಹಾವುಗಳು. ಇವುಗಳ ಕುಲ ಡೆಂಡ್ರೋಆಸ್ಪಿಸ್ (ಇದರ ಅಕ್ಷರಶಃ ಅರ್ಥ "ಮರ ಆಸ್ಪ್") ಕುಟುಂಬ ಎಲಾಪಿಡೇ. ಪ್ರಸ್ತುತ ನಾಲ್ಕು ಉಪಲಬ್ಧ ಪ್ರಜಾತಿಗಳು ಇವೆ; ನಾಲ್ಕರಲ್ಲಿ ಮೂರು ಪ್ರಭೇದಗಳು ಮೂಲಭೂತವಾಗಿ ವೃಕ್ಷಗಳ ಮೇಲೆ ವಾಸಿಸುತ್ತವೆ ಮತ್ತು ಹಸಿರು ಬಣ್ಣ ಹೊಂದಿರುತ್ತವೆ, ಆದರೆ ಕಪ್ಪು ಮಾಂಬಾ ಎಂದು ಕರೆಯಲ್ಪಡುವ, ಡೆಂಡ್ರೋಆಸ್ಪಿಸ್ ಪಾಲಿಲೆಪಿಸ್, ಹೆಚ್ಚಾಗಿ ಭೂಮಿಯ ಮೇಲೆ ವಾಸಿಸುತ್ತವೆ ಮತ್ತು ಸಾಮಾನ್ಯವಾಗಿ ಕಂದು ಅಥವಾ ಬೂದು ಬಣ್ಣ ಹೊಂದಿರುತ್ತವೆ. ಎಲ್ಲ ಉಪ-ಸಹಾರಾ ಆಫ್ರಿಕಾದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತವೆ ಮತ್ತು ಎಲ್ಲ ಮಾಂಬಾಗಳ ಬಗ್ಗೆ ಅವುಗಳ ವ್ಯಾಪ್ತಿಯಲ್ಲಿ ಜನರಿಗೆ ಭಯವಿದೆ ವಿಶೇಷವಾಗಿ, ಕಪ್ಪು ಮಾಂಬಾ. ಆಫ್ರಿಕಾದಲ್ಲಿ ಮಾಂಬಾಗಳ ಬಗ್ಗೆ ಅನೇಕ ದಂತಕಥೆಗಳು ಮತ್ತು ಕಥೆಗಳು ಇವೆ.[][][]

ವರ್ತನೆ

[ಬದಲಾಯಿಸಿ]

ಮೂರು ಪ್ರಜಾತಿಯ ಹಸಿರು ಮಾಂಬಾಗಳು ವೃಕ್ಷಗಳ ಮೇಲೆ ವಾಸಿಸುತ್ತವೆ, ಆದರೆ ಕಪ್ಪು ಮಾಂಬಾ ಹೆಚ್ಚಾಗಿ ಭೂಮಿಯ ಮೇಲೆ ಇರುತ್ತದೆ. ಎಲ್ಲ ನಾಲ್ಕು ಪ್ರಜಾತಿಗಳು ಸಕ್ರಿಯ ದೈನಿಕ ಬೇಟೆಗಾರರು. ಹಕ್ಕಿಗಳು, ಮರದ ಮೇಲೆ ವಾಸಿಸುವ ಹಲ್ಲಿಗಳು, ಮತ್ತು ಸಣ್ಣ ಸಸ್ತನಿಗಳನ್ನು ಇವು ಬೇಟೆಯಾಡುತ್ತವೆ. ರಾತ್ರಿ ಸಮಯದಲ್ಲಿ ಕೆಲವು ಜಾತಿಗಳು, ವಿಶೇಷವಾಗಿ ಭೂಮಿಯ ಕಪ್ಪು ಮಾಂಬಾ, ಪೊದೆಗಳಲ್ಲಿ ಆಶ್ರಯ ಪಡೆಯುತ್ತವೆ. ಒಂದು ಮಾಂಬಾ ಅದೇ ಪೊದೆಯನ್ನು ಹಲವು ವರ್ಷಗಳು ಇಟ್ಟುಕೊಳ್ಳಬಹುದು.

ಕಪ್ಪು ಮಾಂಬಾ ಸುಮಾರು ನಾಲ್ಕು ಮೀಟರುಗಳಷ್ಟು ಉದ್ದ ಬೆಳೆಯುವುದು. ಇದು ಆಫ್ರಿಕದ ವಿಷಸರ್ಪಗಳ ಪೈಕಿ ಅತ್ಯಂತ ದೊಡ್ಡದು. ತೆಳ್ಳಗೆ ಉದ್ದವಾಗಿರುವ ಇದಕ್ಕೆ ಕಿರಿದಾದ ತಲೆ, ನಯವಾದ ಫಲಕಗಳು ಇವೆ. ಕಣ್ಣುಗಳು ದೊಡ್ಡವು. ಪಾಪೆ ಗುಂಡಗಿದೆ. ಅಳಿಲು ಮತ್ತು ಮರಗಪ್ಪೆಗಳು ಇದರ ಪ್ರಧಾನ ಆಹಾರ.

ಕ್ಷಣಾರ್ಧದಲ್ಲಿ ಎರಗಿ ಕಚ್ಚುವ ಸ್ವಭಾವ, ತುಂಬ ತೀಕ್ಷ್ಣವಾದ ವಿಷ-ಇವುಗಳಿಂದಾಗಿ ಕರಿಯ ಮಾಂಬ ಬಲು ಅಪಾಯಕಾರಿ. ಜೊತೆಗೆ ಕೆಣಕಿದಾಗ ಆಕ್ರಮಣ ಮಾಡುತ್ತದೆ. ಇದಕ್ಕೆ ನಾಗರಹಾವಿಗಿರುವಂಥ ಹೆಡೆಯಿಲ್ಲವಾದರೂ ಕೋಪಬಂದಾಗ ಕತ್ತನ್ನು ಗಾಳಿಯಿಂದ ಹಿಗ್ಗಿಸಬಲ್ಲುದು. ಕಲ್ಲು ಪೊಟರೆಗಳಲ್ಲಿ ಇದರ ವಾಸ.

ಹಸುರು ಮಾಂಬ ಗಾತ್ರದಲ್ಲಿ ಕರಿಯದಕ್ಕಿಂತ ಚಿಕ್ಕದು.  ಸಾಧಾರಣವಾಗಿ ಒಂದು ಮೀಟರ್ ಉದ್ದ ಇರುತ್ತದೆ.  ಇದರ ಮೈಬಣ್ಣ ಉಜ್ವಲ ಹಸುರು. ಇದು ಸಾಮಾನ್ಯವಾಗಿ ಮರಗಿಡಗಳಲ್ಲಿ ವಾಸಿಸುತ್ತದೆ. ರೆಂಬೆಕೊಂಬೆಗಳನ್ನು ಹತ್ತಲು ಸಹಾಯಕವಾಗುವಂತೆ ಇದರ ಬಾಲಕ್ಕೆ ಸುರುಳಿ ಸುತ್ತಿಕೊಳ್ಳುವ ಸಾಮರ್ಥ್ಯ ಉಂಟು. ಕರಿಯ ಮಾಂಬಕ್ಕೆ ಹೋಲಿಸಿದರೆ ಇದು ಕಡಿಮೆ ಉಗ್ರ ಸ್ವಭಾವದ್ದು.

ಮಾಂಬಾಗಳು ಮತ್ತು ಕೋಬ್ರಾಗಳದ್ದು ಒಂದೇ ಕುಟುಂಬ: ಎಲಾಪಿಡೇ.

ಸಂತಾನೋತ್ಪತ್ತಿ

[ಬದಲಾಯಿಸಿ]

ಹೆಣ್ಣು ಕಪ್ಪು ಮಾಂಬ ಹತ್ತರಿಂದ ಹದಿನೈದು ಅಂಡಾಕಾರದ ಮತ್ತು ಬಿಳಿಬಣ್ಣದ ಮೊಟ್ಟೆಗಳನ್ನು ನೆಲದ ಗುಳಿಗಳಲ್ಲಿ ಅಥವಾ ಮರದ ಪೊಟರೆಗಳಲ್ಲಿ ಇಡುತ್ತದೆ. ಮೊಟ್ಟೆಗಳು ನೂರಿಪ್ಪತ್ತರಿಂದ ನೂರಮೂವತ್ತು ದಿನಗಳಲ್ಲಿ ಒಡೆಯುತ್ತವೆ.

ಜಾತಿಗಳು

[ಬದಲಾಯಿಸಿ]
ಪ್ರಸ್ತುತ ಮಾನ್ಯವಿರುವ ಮಾಂಬಾ ಜಾತಿಗಳಲ್ಲಿ, ಮೂರು ಹಸಿರು ಮತ್ತು ಇನ್ನೊಂದು "ಕಪ್ಪು ಮಾಂಬಾ" ಎಂದು ಕರೆಯಲ್ಪಟ್ಟರೂ, ಬೂದು ಅಥವ ಕಂದು ಬಣ್ಣ ಹೊಂದಿರುತ್ತದೆ.
ಪ್ರಜಾತಿ[] ಪರಿಣತರು[] ಚಿತ್ರ ಉಪಪ್ರ.*[] ಸಾಮಾನ್ಯ

ಹೆಸರು

ಭೌಗೋಳಿಕ ವ್ಯಾಪ್ತಿ
ಡೆಂಡ್ರೋಆಸ್ಪಿಸ್ ಅಂಗುಸ್ಟಿಸ್ಟೆಪ್ಸ್ (ಸ್ಮಿತ್, ೧೮೪೯) 0 ಪೂರ್ವ ಹಸಿರು ಮಾಂಬಾ
ಕಿನ್ಯಾ, ತನ್ಜಾನಿಯಾ, ಮಲಾವಿ, ಮೊಜಾಂಬಿಕ್, , ಸ್ವಾಸಿಲಾಂಡ್, ಪೂರ್ವ ದಕ್ಷಿಣ ಆಫ್ರಿಕಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ದಕ್ಷಿಣ ಸುಡಾನ್, ಸುಡಾನ್, ನೈಜರ್, ಮಧ್ಯ ಆಫ್ರಿಕಾದ ಗಣರಾಜ್ಯ, ಷಾಡ್
ಡೆಂಡ್ರೋಆಸ್ಪಿಸ್ ಜೇಮೆಸೋನಿ (ಟ್ರಾಯಿಲ್, ೧೮೪೩)
ಜೇಮ್ಸನ್ಸ್ ಮಾಂಬಾ
ಮಧ್ಯ ಆಫ್ರಿಕಾ, ಸುಡಾನ್, ಗಬೊನ್, ಅಂಗೋಲ, ಝಾಂಬಿಯಾ, ಕಾಂಗೋ ಗಣರಾಜ್ಯ, ಕ್ಯಾಮರೂನ್, ನೈಜೀರಿಯ, ಕೀನ್ಯಾ, ಉಗಾಂಡ, ರುವಾಂಡ, ಮಧ್ಯ ಆಫ್ರಿಕಾದ ಗಣರಾಜ್ಯ, ಬೆನಿನ್, ಘಾನಾ.
ಡೆಂಡ್ರೋಆಸ್ಪಿಸ್ ಪಾಲಿಲೆಪಿಸ್ ಗುಂಥರ್, 1864 0 ಕಪ್ಪು ಮಾಂಬಾ ಪೂರ್ವ ಆಫ್ರಿಕಾ ಮತ್ತು ದಕ್ಷಿಣ ಆಫ್ರಿಕಾ (ಪ್ರದೇಶ), ಈಶಾನ್ಯ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ನೈಋತ್ಯ ಸುಡಾನ್ ಇಂದ ಇತಿಯೋಪಿಯ, ಎರಿಟ್ರಿಯ, ಸೊಮಾಲಿಯ, ಕೀನ್ಯಾ, ಪೂರ್ವ ಉಗಾಂಡ, ಟಾಂಜಾನಿಯ, ದಕ್ಷಿಣಕ್ಕೆ ಮೊಜಾಂಬಿಕ್, ಸ್ವಾಜಿಲ್ಯಾಂಡ್, ಮಲಾವಿ, ಜ಼ಾಂಬಿಯಾ, ಜಿಂಬಾಬ್ವೆ, ಲೆಸೊಥೊ, ರುವಾಂಡ, ಜಿಬೌಟಿ ಮತ್ತು ಬೋಟ್ಸ್ವಾನಾದಿಂದ ದಕ್ಷಿಣ ಆಫ಼್ರಿಕಾದಲ್ಲಿ ಕ್ವಾಜ಼ೂಲು-ನಟಾಲ್, ಮತ್ತು ನಮೀಬಿಯಾ; ನಂತರ ಅಂಗೋಲ ಮೂಲಕ ಈಶಾನ್ಯ ದಿಕ್ಕಿನಿಂದ ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದ ಆಗ್ನೇಯ ಭಾಗದವರೆಗೆ
ಡೆಂಡ್ರೋಆಸ್ಪಿಸ್ ವಿರಿಡಿಸ್ (ಹಾಲೊವೆಲ್, ೧೮೪೪) 0 ಪಶ್ಚಿಮ ಹಸಿರು ಮಾಂಬಾ
ಪಶ್ಚಿಮ ಆಫ಼್ರಿಕಾದಲ್ಲಿ ಮಾತ್ರ ಕಂಡುಬರುತ್ತದೆ, ದಕ್ಷಿಣ ಸೆನೆಗಲ್, ಗ್ಯಾಂಬಿಯಾ, ಗಿನಿ-ಬಿಸಾವ್, ಗಿನಿ, ಸಿಯೆರಾ ಲಿಯೋನ್, ಲೈಬೀರಿಯಾ, ಕೋಟೆ ಡೆ ಐವೋಯ್ರ್, ಘಾನಾ, ಟೋಗೊ, ಬೆನಿನ್, ಮತ್ತು ನೈಋತ್ಯ ನೈಜೀರಿಯ.

ಉಲ್ಲೇಖಗಳು

[ಬದಲಾಯಿಸಿ]
  1. "Dendroaspis". Integrated Taxonomic Information System.
  2. "National Geographic (Black Mamba, Dendroaspis polylepis)". National Geographic Society. Retrieved 5 July 2013. African myths exaggerate their capabilities to legendary proportions; Black mambas are shy and will almost always seek to escape when confronted.
  3. Jan Knappert (1 January 1985). Myths and Legends of Botswana, Lesotho, and Swaziland. Brill Archive. pp. 53–. ISBN 90-04-07455-4.
  4. Alfred Burdon Ellis (1887). South African Sketches. Chapman and Hall, Limited.
  5. ೫.೦ ೫.೧ ೫.೨ "Dendroaspis". Integrated Taxonomic Information System. Archived from the original on 4 ಜುಲೈ 2022. Retrieved 5 July 2013.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮಾಂಬಾ&oldid=1253533" ಇಂದ ಪಡೆಯಲ್ಪಟ್ಟಿದೆ