ಮಧು ನಟರಾಜ್
ಮಧು ನಟರಾಜ್ | |
---|---|
ಜನನ | |
ವೃತ್ತಿ(ಗಳು) | ನರ್ತಕಿ, ನೃತ್ಯ ಸಂಯೋಜಕಿ, ಕಲಾ ಉದ್ಯಮಿ |
ಸಕ್ರಿಯ ವರ್ಷಗಳು | ೧೯೯೧ ರಿಂದ ಇಂದಿನವರೆಗೆ |
Current group | ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಹಾಗೂ ಕೊರಿಯೋಗ್ರಫಿ ಸ್ಟೆಮ್ ಡ್ಯಾನ್ಸ್ ಕಂಪನಿ |
Dances | ಕಥಕ್ ಭಾರತೀಯ ಸಮಕಾಲೀನ ನೃತ್ಯ |
ಜಾಲತಾಣ | www.stemdancekampni.in |
ಮಧು ನಟರಾಜ್ ರವರು ಒಬ್ಬ ಭಾರತೀಯ ಶಾಸ್ತ್ರೀಯ, ಸಮಕಾಲೀನ ನರ್ತಕಿ ಮತ್ತು ನೃತ್ಯ ಸಂಯೋಜಕಿ.[೧]
ಜನನ
[ಬದಲಾಯಿಸಿ]ಮಧು ನಟರಾಜ್ ಅವರು ಫೆಬ್ರವರಿ ೨೪,೧೯೭೧ ರಂದು ಬೆಂಗಳೂರಿನಲ್ಲಿ ಎಂ.ಎಸ್.ನಟರಾಜನ್ ಮತ್ತು ಭಾರತೀಯ ಶಾಸ್ತ್ರೀಯ ನರ್ತಕಿ ಮಾಯಾ ರಾವ್ ದಂಪತಿಗೆ ಜನಿಸಿದರು.[೨]
ಶಿಕ್ಷಣ
[ಬದಲಾಯಿಸಿ]ಮಧು ನಟರಾಜ್ ರವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿ.ಕಾಂ ಶಿಕ್ಷಣವನ್ನು ಪಡೆದುಕೊಂಡರು.ಅವರು ಬೆಂಗಳೂರಿನ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಹಾಗೂ ಕೊರಿಯೋಗ್ರಫಿಯಲ್ಲಿ ನೃತ್ಯವನ್ನು ಕಲಿತರು.ನಂತರ ಭಾರತೀಯ ವಿದ್ಯಾ ಭವನದಲ್ಲಿ ಪತ್ರಿಕೋದ್ಯಮ ಕೋರ್ಸ್ ಗೆ ಸೇರಿಕೊಂಡರು.ಇಂದಿರಾ ಗಾಂಧಿ ಓಪನ್ ಯೂನಿವರ್ಸಿಟಿಯಿಂದ ಮಾನವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡಿದ್ದಾರೆ. ಮಧು ಅವರು ಕಥಕ್ ನಲ್ಲಿ ತಮ್ಮ ನೃತ್ಯ ತರಬೇತಿಯನ್ನು ತಾಯಿ ಮಾಯಾ ರಾವ್, ಚಿಕ್ಕಮ್ಮ ಚಿತ್ರ ವೇಣುಗೋಪಾಲ್ ಮತ್ತು ಮುನ್ನಾ ಶುಕ್ಲಾರವರ ಬಳಿ ಪಡೆದರು.[೩] ನ್ಯೂಯಾರ್ಕ್ ನ ಜೋಸ್ ಲಿಮನ್ ಕೇಂದ್ರದಲ್ಲಿ, ಮಧುರವರು ಕರೆಣ್ ಪಾಟರ್ ರವರಿಂದ ಸಮಕಾಲೀನ ನೃತ್ಯದಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ.ಭಾರತದ ಜಾನಪದ ಮತ್ತು ಸಮರ ನೃತ್ಯಗಳಲ್ಲಿ ತರಬೇತಿ ಪಡೆದ ಮಧುರವರು ಯೋಗ ಅಧ್ಯಯನವನ್ನೂ ಮಾಡಿದ್ದಾರೆ.
ವೃತ್ತಿ
[ಬದಲಾಯಿಸಿ]೧೯೯೫ ರಲ್ಲಿ ಮಧು ನಟರಾಜ್ ರವರು ಸ್ಟೆಮ್ (ಸ್ಪೇಸ್.ಟೈಮ್.ಎನರ್ಜಿ.ಮೂವ್ಮೆಂಟ್) ಡ್ಯಾನ್ಸ್ ಕಂಪನಿಯನ್ನು ಸ್ಥಾಪಿಸಿದರು.ಇದು ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಹಾಗೂ ಕೊರಿಯೋಗ್ರಫಿಯ ಪ್ರದರ್ಶನ ವಿಭಾಗವಾಗಿದೆ.[೪]ಮಧು ನಟರಾಜ್ ರವರು ಖಜುರಾಹೊ ಉತ್ಸವ, ಖಜುರಾಹೊ; ಪುರಾಣ ಕ್ವಿಲಾ ಉತ್ಸವ, ದೆಹಲಿ; ಅಹಮದಾಬಾದ್ ನ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ ನೃತ್ಯ ಕೃತಿ; ಬ್ಯಾಬಿಲೋನ್ ಹಬ್ಬ; ಕಥಕ್ ಮಹೋತ್ಸವ, ದೆಹಲಿ, ಲಕ್ನೋ ಹಾಗೂ ಕೆನಡಾ ಮತ್ತು ಕಲಾನಿಧಿ ಅಂತರಾಷ್ಟ್ರೀಯ ನೃತ್ಯ ಉತ್ಸವ, ಟೊರಾಂಟೊ ಮುಂತಾದ ವಿವಿಧ ನೃತ್ಯ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]ಸೃಜನಶೀಲ ಮತ್ತು ಪ್ರಾಯೋಗಿಕ ನೃತ್ಯ ಕ್ಷೇತ್ರದಲ್ಲಿನ ಪ್ರತಿಭೆಗಾಗಿ ೨೦೧೦ ರಲ್ಲಿ ಮಧು ನಟರಾಜ್ ಅವರಿಗೆ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ ಪ್ರಶಸ್ತಿಯನ್ನು ನೀಡಲಾಯಿತು.ಇಂಡಿಯಾ ಟುಡೆಯ, ಭಾರತದ ೫೦ ಯುವ ಸಾಧಕರಲ್ಲಿ ಒಬ್ಬರಾಗಿ ಮಧುರವರೂ ಆಯ್ಕೆಯಾಗಿದ್ದರು. [೫]ಅಲ್ಲದೇ ಮಧುರವರು ೨೦೧೧ ರಲ್ಲಿ ಮೋಹನ್ ಖೋಕರ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
ಇತರ ಆಸಕ್ತಿಗಳು
[ಬದಲಾಯಿಸಿ]ಮಧು ನಟರಾಜ್ ಓದುವುದರಲ್ಲಿ ಆಸಕ್ತಿ ಹೊಂದಿದ್ದಾರೆ.ಅವರು ನೃತ್ಯದಿಂದ ಹಿಡಿದು ಮಹಿಳೆಯರ ಸಮಸ್ಯೆಗಳವರೆಗೆ ವಿವಿಧ ವಿಷಯಗಳ ಕುರಿತು ಬರೆಯುತ್ತಾರೆ.[೬]
ಉಲ್ಲೇಖಗಳು
[ಬದಲಾಯಿಸಿ]- ↑ https://www.deccanchronicle.com/lifestyle/viral-and-trending/050416/kathak-with-a-big-twist.html
- ↑ http://www.mumsandstories.com/2016/01/22/madhu-nataraj-kiran-on-her-mother-the-iconic-maya-rao/
- ↑ "ಆರ್ಕೈವ್ ನಕಲು". Archived from the original on 2020-05-14. Retrieved 2020-07-04.
- ↑ https://web.archive.org/web/20181018150906/http://www.stemdancekampni.in/index1.html
- ↑ https://agln.aspeninstitute.org/profile/4657
- ↑ https://economictimes.indiatimes.com/magazines/panache/how-poetry-of-12th-century-women-mystics-impacted-madhu-natraj/articleshow/62724980.cms