ಬ್ರಾಹ್ಮೀಯ ಲಿಪಿಗಳು
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
This article contains Indic text. Without proper rendering support, you may see question marks or boxes, misplaced vowels or missing conjuncts instead of Indic text. |
ಬ್ರಾಹ್ಮೀಯ ಲಿಪಿಗಳು ಅಬುಗಿಡ (ಧ್ವನ್ಯಾತ್ಮಕ) ವರ್ಣಮಾಲೆ ಬರೆಯಲು ಬಳಸುವ ವ್ಯವಸ್ಥೆಗಳು. ಬ್ರಾಹ್ಮೀಯ ಲಿಪಿಗಳನ್ನು ಭಾರತೀಯ ಉಪಖಂಡ, ಆಗ್ನೇಯ ಏಷ್ಯಾ ಮತ್ತು ಪೂರ್ವ ಏಷ್ಯಾದ ಕೆಲ ಭಾಗಗಳಲ್ಲಿ ಪ್ರಮುಖವಾಗಿ ಬಳಸುತ್ತಿದ್ದು, ಹಿಂದೊಮ್ಮೆ ಜಪಾನ್ನಲ್ಲಿಯೂ ಪ್ರಾಚೀನ ಭಾರತದ ಬ್ರಾಹ್ಮೀ ಲಿಪಿಯನ್ನು ಬಳಸಲಾಗುತ್ತಿತ್ತೆಂದು ಭಾವಿಸಲಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ]ಬ್ರಾಹ್ಮೀಯ ಲಿಪಿಗಳನ್ನು ಇಂಡೋ-ಯುರೋಪಿಯನ್, ದ್ರಾವಿಡ, ಟಿಬೆಟೋ-ಬರ್ಮನ್, ಮಂಗೋಲಿಕ್, ಆಸ್ಟ್ರೋ-ಏಷ್ಯಾಟಿಕ್, ಆಸ್ಟ್ರೋನೇಷ್ಯನ್, ಮತ್ತು ಥಾಯ್ ಭಾಷಾಕುಟುಂಬದ ಬಹುತೇಕ ಭಾಷೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ, ಬ್ರಾಹ್ಮೀಯ ಲಿಪಿಗಳ ಆಧಾರದ ಮೇಲೆ ಜಪಾನಿನ ಕಾನಾ ಭಾಷೆಯ ನಿಘಂಟನ್ನು ಕ್ರಮವಾಗಿ ಜೋಡಿಸಿದ್ದಾರೆ.[೧]
ಇತಿಹಾಸ
[ಬದಲಾಯಿಸಿ]ಬ್ರಾಹ್ಮೀಯ ಲಿಪಿಗಳ ಮೂಲ ಆಕರ ಬ್ರಾಹ್ಮಿ ಲಿಪಿಯಾಗಿದೆ. ಅಶೋಕನ ಸಾರ್ವಭೌಮತ್ವದ ಹಲವಾರು ಶಾಸನಗಳು ದೊರೆತಿದ್ದು, ಬ್ರಾಹ್ಮಿ ಲಿಪಿಯ ಬಳಕೆಯನ್ನು ಅಶೋಕನ ಆಳ್ವಿಕೆಯ ಸಂದರ್ಭ (ಕ್ರಿ.ಪೂ.೩ನೇ ಶತಮಾನ) ಎಂದು ಸ್ಪಷ್ಟವಾಗಿ ದೃಧಪಡಿಸಬಹುದಾಗಿದೆ. ಹಾಗಿದ್ದೂ, ದಕ್ಷಿಣ ಭಾರತ ಹಾಗೂ ಶ್ರೀಲಂಕಾಗಳ ಕೆಲವು ಕುಂಬಾರಿಕೆಗಳಲ್ಲಿ ದೊರೆತಿರುವ ಶಾಸನಗಳನ್ನಾಧರಿಸಿ ಕೆಲ ಪ್ರಾಚೀನಶಾಸ್ತ್ರಜ್ಞರು ಇದಕ್ಕೂ ಮುಂಚಿನಿಂದಲೇ ಲಿಪಿಯ ಬಳಕೆಯಿದ್ದಿರಬಹುದೆಂದು ಭಾವಿಸುತ್ತಾರೆ. ಇದರಲ್ಲಿ ಅತ್ಯಂತ ವಿಶ್ವಾಸಾರ್ಹವಾದ ಕುರುಹೆಂದರೆ ಕೊನಿಂಗ್‍ಹಾಮ್ ಮತ್ತಿತರರು[೨] ಪ್ರಕಾಶಿಸಿರುವ ಸುಮಾರು ಕ್ರಿ.ಪೂ.೪ನೇ ಶತಮಾನದ ಕೆಲ ಬ್ರಾಹ್ಮಿ ಲಿಪಿಯಲ್ಲಿನ ಶಾಸನಗಳು. ಇಲ್ಲೂ ಕೆಲ ಭಿನ್ನಾಭಿಪ್ರಾಯಗಳಿದ್ದು, ಕೆಲವರು ಲಿಪಿಯನ್ನು ಕ್ರಿ.ಪೂ.೬ನೇ ಶತಮಾನದಷ್ಟು ಹಿಂದಿನದೆಂದೂ, ಬಹಳವಾಗಿ ತಮಿಳುಬ್ರಾಹ್ಮಿ ಲಿಪಿಯನ್ನು ಹೋಲುತ್ತದೆಂದೂ ದೃಢವಾಗಿ ನಂಬುತ್ತಾರಾದರು, ಇದನ್ನು ಪುಷ್ಠೀಕರಿಸುವಂಥಹ ಯಾವುದೇ ಸಂಶೋಧನೆಗಳಾಗಲೀ, ಶೈಕ್ಷಣಿಕ ಪುರಾವೆಗಳಾಗಲಿ ಲಭ್ಯವಿಲ್ಲ.
ಉತ್ತರ ಬ್ರಾಹ್ಮಿ ಲಿಪಿಯು ಗುಪ್ತರ ಕಾಲದ ಗುಪ್ತರ ಲಿಪಿಯ ಉಗಮಕ್ಕೆ ಆಕರವಾಯಿತು. ಮಧ್ಯಯುಗದಲ್ಲಿ ಈ ಲಿಪಿಯು ಸಿದ್ಧಮ್, ಶಾರದಾ ಮತ್ತು ನಾಗರೀ ಲಿಪಿಗಳೂ ಸೇರಿದಂತೆ ಹತ್ತುಹಲವಾರು ವಿವಿಧ ಕೂಡುಲಿಪಿಗಳ ಉಗಮಕ್ಕೆ ಮಾರ್ಗವಾಯಿತು. ಬೌದ್ಧಧರ್ಮದ ಹಲವಾರು ಸೂತ್ರಗಳನ್ನು ಸಿದ್ಧಮ್ ಲಿಪಿಯಲ್ಲಿ ರಚಿಸಿರುವುದರಿಂದ ಇದು ಇಂದಿಗೂ ಬೌದ್ಧಧರ್ಮದಲ್ಲಿ ಪ್ರಾಮುಖ್ಯತೆ ಹೊಂದಿದೆ. ಜಪಾನಿನಲ್ಲಿ ಇಂದಿಗೂ ಸಿದ್ಧಮ್ ಲಿಪಿಯಲ್ಲಿ ಸುಲೇಖಗಳು (ಕ್ಯಾಲಿಗ್ರಫಿ) ಉಳಿದಿರುವುದನ್ನು ಗಮನಿಸಬಹುದು.
ದಕ್ಷಿಣ ಬ್ರಾಹ್ಮಿಯು ಹಳಗನ್ನಡ, ಪಲ್ಲವ ಹಾಗೂ ವತ್ತೆೞುತ್ತುಗಳಾಗಿ ವಿಕಸನಗೊಂಡವು. ಈ ಲಿಪಿಗಳು ಮುಂದೆ ದಕ್ಷಿಣ ಭಾರತ ಹಾಗೂ ಆಗ್ನೇಯ ಏಷಿಯಾದ ಹಲವು ಪ್ರಮುಖ ಲಿಪಿಗಳಿಗೆ ಎಡೆಮಾಡಿಕೊಟ್ಟವು.
ಕ್ರಿ.ಪೂ.೩ನೇ ಶತಮಾನದಲ್ಲಿ ಈಗಿನ ಆಂಧ್ರಪ್ರದೇಶದ ಭಟ್ಟಿಪ್ರೋಲು ಬೌದ್ಧಧರ್ಮದ ಕೇಂದ್ರ ಬಿಂದುವಾಗಿತ್ತು ಮತ್ತು ಈ ಪ್ರದೇಶದಿಂದಲೇ ಏಶ್ಯಾದ ಇತರ ರಾಷ್ಟ್ರಗಳಿಗೆ ಬೌದ್ಧಧರ್ಮ ಪ್ರಚಾರಗೊಂಡಿತು. ಪ್ರಸ್ತುತ ತೆಲುಗು ಲಿಪಿಯು ಭಟ್ಟಿಪ್ರೋಲು ಲಿಪಿ ಅಥವಾ ಕನ್ನಡ-ತೆಲುಗು ಲಿಪಿ ಅಥವಾ ಕದಂಬ ಲಿಪಿ ಇಂದ ವಿಕಸಿತಗೊಂಡಿದೆ.[೩][೪]
ಹೋಲಿಕೆ
[ಬದಲಾಯಿಸಿ]ಇಲ್ಲಿ ಪ್ರಮುಖ ಭಾರತೀಯ ಲಿಪಿಗಳ ಹಲವಾರು ಹೋಲಿಕೆ ಪಟ್ಟಿಗಳನ್ನು ನೀಡಲಾಗಿದ್ದು, ಬ್ರಾಹ್ಮಿ ಅಕ್ಷರಗಳನ್ನಾಧರಿಸಿ ಮತ್ತವು ಉಗಮಗೊಂಡ ತತ್ವಗಳ ಆಧಾರದ ಮೇಲೆ ಆಯೋಜಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ:
- ಯಾವುದೇ ಅಕ್ಷರವು ಬ್ರಾಹ್ಮಿ ಲಿಪಿಯಲ್ಲಿನ ಅಕ್ಷರದಿಂದ ಉಗಮವಾಗದಿದ್ದು, ನಂತರದಲ್ಲಿ ಅನ್ವೇಷಣೆಗೊಂಡಿದ್ದರೆ, ಅಂಥಹ ಅಕ್ಷರಗಳನ್ನು ಈ ಪಟ್ಟಿ ಪ್ರತಿನಿಧಿಸುವುದಿಲ್ಲ. ಹಾಗಾಗಿ, ಈ ಪಟ್ಟಿಯನ್ನು ಸಮಗ್ರವಾದುದೆಂದು ಪರಿಗಣಿಸುವಂತಿಲ್ಲ.
- ಒಂದೇ ಅಂಕಣದಲ್ಲಿರು ಅಕ್ಷರಗಳ ಉಚ್ಛಾರಣೆಗಳು ಏಕರೀತಿಯಲ್ಲಿರುತ್ತವೆಂದು ಹೇಳಲಾಗುವುದಿಲ್ಲ; ಉಚ್ಛಾರಣೆಯ ಸಾಲು ಪ್ರಾತಿನಿಧಿಕ ಮಾತ್ರ. ಸಾಧ್ಯವಾದಷ್ಟು ಕಡೆಗಳಲ್ಲಿ ಅಂತರಾಷ್ಟ್ರೀಯ ಫೊನೆಟಿಕ್ ಅಕ್ಷರಳನ್ನು (ಐಪಿಎ) ಸಂಸ್ಕೃತದ ಅಕ್ಷರಗಳಿಗೆ ನೀಡಲಾಗಿದೆ, ಅಗತ್ಯವಿರುವೆಡೆಗಳಲ್ಲಿ ಬೇರೆ ಭಾಷೆಗಳಲ್ಲಿ ನೀಡಲಾಗಿದೆ.
ಈ ಲಿಪ್ಯಂತರಣಗಳನ್ನು ISO 15919ರಲ್ಲಿ ಸೂಚಿಸಲಾಗಿದೆ.
ವ್ಯಂಜನಗಳು
[ಬದಲಾಯಿಸಿ]ಸ್ವರಾಕ್ಷರಗಳು
[ಬದಲಾಯಿಸಿ]ಐಎಸ್‍ಓ | a | ā | æ | ɒ | i | ī | u | ū | e | ē | ai | o | ō | au | r̥ | r̥̄ | l̥ | l̥̄ | ṁ | ḥ | |||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
a | ka | ā | kā | æ | kæ | ɒ | kɒ | i | ki | ī | kī | u | ku | ū | kū | e | ke | ē | kē | ai | kai | ko | kō | au | kau | r̥ | kr̥ | r̥̄ | kr̥̄ | l̥ | kl̥ | l̥̄ | kl̥̄ | ṁ | kṁ | ḥ | kḥ | k | |||
ಓಡಿಯಾ | ଅ | କ | ଆ | କା | ଅଽ | କଽ | ଇ | କି | ଈ | କୀ | ଉ | କୁ | ଊ | କୂ | ଏ | କେ | ଐ | କୈ | ଓ | କୋ | ଔ | କୌ | ଋ | କୃ | ୠ | କୃ୍ | ଌ | କ୍ଲୃ | ୡ | କ୍ଳୃ | ଂ | କଂ | ଃ | କଃ | କ୍ | ||||||
ಅಸ್ಸಾಮಿ | অ | ক | আ | কা | অ্যা | ক্যা | ই | কি | ঈ | কী | উ | কু | ঊ | কূ | এ | কে | ঐ | কৈ | ও | কো | ঔ | কৌ | ঋ | কৃ | ৠ | কৄ | ঌ | কৢ | ৡ | কৣ | |||||||||||
ಬೆಂಗಾಳಿ | অ | ক | আ | কা | অ্যা | ক্যা | ই | কি | ঈ | কী | উ | কু | ঊ | কূ | এ | কে | ঐ | কৈ | অ | ক | ও | কো | ঔ | কৌ | ঋ | কৃ | ৠ | কৄ | ঌ | কৢ | ৡ | কৣ | |||||||||
ದೇವನಾಗರಿ | अ | क | आ | का | अॅ | कॅ | ऑ | कॉ | इ | कि | ई | की | उ | कु | ऊ | कू | ऎ | कॆ | ए | के | ऐ | कै | ऒ | कॊ | ओ | को | औ | कौ | ऋ | कृ | ॠ | कॄ | ऌ | कॢ | ॡ | कॣ | अं | कं | अः | कः | क् |
ಗುಜರಾತಿ | અ | ક | આ | કા | ઇ | કિ | ઈ | કી | ઉ | કુ | ઊ | કૂ | એ | કે | ઐ | કૈ | ઓ | કો | ઔ | કૌ | ઋ | કૃ | ૠ | કૄ | ઌ | કૢ | ૡ | કૣ | |||||||||||||
ಗುರುಮುಖಿ | ਅ | ਕ | ਆ | ਕਾ | ਇ | ਕਿ | ਈ | ਕੀ | ਉ | ਕੁ | ਊ | ਕੂ | ਏ | ਕੇ | ਐ | ਕੈ | ਓ | ਕੋ | ਔ | ਕੌ | |||||||||||||||||||||
ಟಿಬೇಟಿ | ཨ | ཀ | ཨཱ | ཀཱ | ཨི | ཀི | ཨཱི | ཀཱི | ཨུ | ཀུ | ཨཱུ | ཀཱུ | ཨེ | ཀེ | ཨཻ | ཀཻ | ཨོ | ཀོ | ཨཽ | ཀཽ | རྀ | ཀྲྀ | རཱྀ | ཀཷ | ལྀ | ཀླྀ | ལཱྀ | ཀླཱྀ | |||||||||||||
ಬ್ರಾಹ್ಮಿ | 𑀅 | 𑀓 | 𑀆 | 𑀓𑀸 | 𑀇 | 𑀓𑀺 | 𑀈 | 𑀓𑀻 | 𑀉 | 𑀓𑀼 | 𑀊 | 𑀓𑀽 | 𑀏 | 𑀓𑁂 | 𑀐 | 𑀓𑁃 | 𑀑 | 𑀓𑁄 | 𑀒 | 𑀓𑁅 | 𑀋 | 𑀓𑀾 | 𑀌 | 𑀓𑀿 | 𑀍 | 𑀓𑁀 | 𑀎 | 𑀓𑁁 | |||||||||||||
ತೆಲುಗು | అ | క | ఆ | కా | ఇ | కి | ఈ | కీ | ఉ | కు | ఊ | కూ | ఎ | కె | ఏ | కే | ఐ | కై | ఒ | కొ | ఓ | కో | ఔ | కౌ | ఋ | కృ | ౠ | కౄ | ఌ | కౢ | ౡ | కౣ | అం | కం | అః | కః | |||||
ಕನ್ನಡ | ಅ | ಕ | ಆ | ಕಾ | ಇ | ಕಿ | ಈ | ಕೀ | ಉ | ಕು | ಊ | ಕೂ | ಎ | ಕೆ | ಏ | ಕೇ | ಐ | ಕೈ | ಒ | ಕೊ | ಓ | ಕೋ | ಔ | ಕೌ | ಋ | ಕೃ | ೠ | ಕೄ | ಌ | ಕೢ | ೡ | ಕೣ | అం | ಕಂ | అః | ಕಃ | |||||
ಸಿಂಹಳ | අ | ක | ආ | කා | ඇ | කැ | ඈ | කෑ | ඉ | කි | ඊ | කී | උ | කු | ඌ | කූ | එ | කෙ | ඒ | කේ | ඓ | කෛ | ඔ | කො | ඕ | කෝ | ඖ | කෞ | සෘ | කෘ | සෲ | කෲ | ඏ | කෟ | ඐ | කෳ | අං | කං | අඃ | කඃ | ක් |
ಮಲಯಾಳಮ್ | അ | ക | ആ | കാ | ഇ | കി | ഈ | കീ | ഉ | കു | ഊ | കൂ | എ | കെ | ഏ | കേ | ഐ | കൈ | ഒ | കൊ | ഓ | കോ | ഔ | കൗ | ഋ | കൃ | ൠ | കൄ | ഌ | കൢ | ൡ | കൣ | അം | കം | അഃ | കഃ | |||||
ತಮಿಳು | அ | க | ஆ | கா | இ | கி | ஈ | கீ | உ | கு | ஊ | கூ | எ | கெ | ஏ | கே | ஐ | கை | ஒ | கொ | ஓ | கோ | ஔ | கௌ | க் | ||||||||||||||||
ಬರ್ಮೀಯ | အအ | ကက | အာအာ | ကာကာ | ဣဣ | ကိကိ | ဤဤ | ကီကီ | ဥဥ | ကုကု | ဦဦ | ကူကူ | ဧဧ | ကေကေ | အေးအေး | ကေးကေး | ဩဩ | ကောကော | ဪဪ | ကော်ကော် | ၒၒ | ကၖကၖ | ၓၓ | ကၗကၗ | ၔၔ | ကၘကၘ | ၕၕ | ကၙကၙ | |||||||||||||
ಖೇಮರ್ | ឣ | ក | ឤ | កា | ឥ | កិ | ឦ | កី | ឧ | កុ | ឩ | កូ | ឯ | កេ | ឰ | កៃ | ឱ | កោ | ឳ | កៅ | ឫ | ក្ឫ | ឬ | ក្ឬ | ឭ | ក្ឭ | ឮ | ក្ឮ | |||||||||||||
ಥಾಯ್ | ะ | กะ | า | กา | ิ | กิ | ี | กี | ุ | กุ | ู | กู | เ◌ะ | เกะ | เ | เก | ไ | ไก | โ◌ะ | โกะ | โ | โก | เ◌า | เกา | ฤ | กฤ | ฤๅ | กฤๅ | ฦ | กฦ | ฦๅ | กฦๅ | |||||||||
ಲಾವೋ | ກັ | ກາ | ກິ | ກີ | ກຸ | ກູ | ເກ | ໄກ/ໃກ | ໂກ | ເກົາ/ກາວ | |||||||||||||||||||||||||||||||
ಬಾಲೀ | ᬅ | ᬓ | ᬆ | ᬓᬵ | ᬇ | ᬓᬶ | ᬈ | ᬓᬷ | ᬉ | ᬓᬸ | ᬊ | ᬓᬹ | ᬏ | ᬓᬾ | ᬐ | ᬓᬿ | ᬑ | ᬓᭀ | ᬒ | ᬓᭁ | ᬋ | ᬓᬺ | ᬌ | ᬓᬻ | ᬍ | ᬓᬼ | ᬎ | ᬓᬽ | |||||||||||||
ಜಾವಾ | ꦄ | ꦏ | ꦄꦴ | ꦏꦴ | ꦆ | ꦏꦶ | ꦇ | ꦏꦷ | ꦈ | ꦏꦸ | ꦈꦴ | ꦏꦹ | ꦌ | ꦏꦺ | ꦍ | ꦏꦻ | ꦎ | ꦏꦺꦴ | ꦎꦴ | ꦏꦻꦴ | ꦉ | ꦏꦽ | ꦉꦴ | ꦏꦽꦴ | ꦊ | ꦋ | |||||||||||||||
ಸುಡಾನೀ | ᮃ | ᮊ | ᮄ | ᮊᮤ | ᮅ | ᮊᮥ | ᮈ | ᮊᮦ | ᮇ | ᮊᮧ | |||||||||||||||||||||||||||||||
ಬಗೀನೀ | ᨕ | ᨕᨗ | ᨕᨘ | ᨕᨙ | ᨕᨚ | ||||||||||||||||||||||||||||||||||||
ಬಟಕೀ | ᯀ | ᯂ | ᯤ | ᯂᯪ | ᯥ | ᯂᯮ | ᯂᯩ | ᯂᯬ |
ಸಂಖ್ಯೆಗಳು
[ಬದಲಾಯಿಸಿ]ಹಿಂದೂ-ಅರೇಬಿಕ್ | 0 | 1 | 2 | 3 | 4 | 5 | 6 | 7 | 8 | 9 |
---|---|---|---|---|---|---|---|---|---|---|
ಓಡಿಯಾ | ୦ | ୧ | ୨ | ୩ | ୪ | ୫ | ୬ | ୭ | ୮ | ୯ |
ಅಸ್ಸಾಮಿ | ০ | ১ | ২ | ৩ | ৪ | ৫ | ৬ | ৭ | ৮ | ৯ |
ಬೆಂಗಾಳಿ | ০ | ১ | ২ | ৩ | ৪ | ৫ | ৬ | ৭ | ৮ | ৯ |
ದೇವನಾಗರಿ | ० | १ | २ | ३ | ४ | ५ | ६ | ७ | ८ | ९ |
ಗುಜರಾತಿ | ૦ | ૧ | ૨ | ૩ | ૪ | ૫ | ૬ | ૭ | ૮ | ૯ |
ಗುರುಮುಖಿ | ੦ | ੧ | ੨ | ੩ | ੪ | ੫ | ੬ | ੭ | ੮ | ੯ |
ಟಿಬೇಟಿ | ༠ | ༡ | ༢ | ༣ | ༤ | ༥ | ༦ | ༧ | ༨ | ༩ |
ಉ. ಬ್ರಾಹ್ಮಿ | 𑁒 | 𑁓 | 𑁔 | 𑁕 | 𑁖 | 𑁗 | 𑁘 | 𑁙 | 𑁚 | |
ದ. ಬ್ರಾಹ್ಮಿ | 𑁦 | 𑁧 | 𑁨 | 𑁩 | 𑁪 | 𑁫 | 𑁬 | 𑁭 | 𑁮 | 𑁯 |
ತೆಲುಗು | ౦ | ౧ | ౨ | ౩ | ౪ | ౫ | ౬ | ౭ | ౮ | ౯ |
ಕನ್ನಡ | ೦ | ೧ | ೨ | ೩ | ೪ | ೫ | ೬ | ೭ | ೮ | ೯ |
ಮಲಯಾಳಮ್ | ൦ | ൧ | ൨ | ൩ | ൪ | ൫ | ൬ | ൭ | ൮ | ൯ |
ತಮಿಳು | ೦ | ௧ | ௨ | ௩ | ௪ | ௫ | ௬ | ௭ | ௮ | ௯ |
ಬರ್ಮೀಯ | ၀၀ | ၁၁ | ၂၂ | ၃၃ | ၄၄ | ၅၅ | ၆၆ | ၇၇ | ၈၈ | ၉၉ |
ಖೇಮರ್ | ០ | ១ | ២ | ៣ | ៤ | ៥ | ៦ | ៧ | ៨ | ៩ |
ಥಾಯ್ | ๐ | ๑ | ๒ | ๓ | ๔ | ๕ | ๖ | ๗ | ๘ | ๙ |
ಲಾವೋ | ໐ | ໑ | ໒ | ໓ | ໔ | ໕ | ໖ | ໗ | ໘ | ໙ |
ಬಾಲೀ | ᭐ | ᭑ | ᭒ | ᭓ | ᭔ | ᭕ | ᭖ | ᭗ | ᭘ | ᭙ |
ಜಾವಾ | ꧐ | ꧑ | ꧒ | ꧓ | ꧔ | ꧕ | ꧖ | ꧗ | ꧘ | ꧙ |
ಸುಡಾನೀ | ᮰ | ᮱ | ᮲ | ᮳ | ᮴ | ᮵ | ᮶ | ᮷ | ᮸ | ᮹ |
ಬ್ರಾಹ್ಮೀಯ ಲಿಪಿಗಳ ಪಟ್ಟಿ
[ಬದಲಾಯಿಸಿ]ಬ್ರಾಹ್ಮಿಲಿಪಿಯಿಂದ ಉಗಮವಾದ ಲಿಪಿಗಳು.
ಐತಿಹಾಸಿಕ
[ಬದಲಾಯಿಸಿ]ಬ್ರಾಹ್ಮಿ ಲಿಪಿಯು ಕ್ರಿ.ಪೂ. ೩ನೇ ಶತಮಾನದ ಹೊತ್ತಿಗೆ ಸಾಕಷ್ಟು ಸ್ಥಳಿಯ ಪ್ರಭಾವಗಳಿಗೊಳಪಟ್ಟಿತ್ತು. ಕ್ರಿ.ಶ. ೫ನೇ ಶತಮಾನದಷ್ಟರಲ್ಲಿ ಹಲವಾರು ಕೂಡಿ/ಓರೆಯಾಗಿ ಬರೆಬಲ್ಲ ಲಿಪಿಗಳು ಉಗಮವಾಗಲಾರಂಭಿಸಿದುವಲ್ಲದೆ, ಮಧ್ಯಯುಗದವರೆಗೂ ಇನ್ನೂ ಸಾಕಷ್ಟು ಲಿಪಿಗಳ ಉಗಮಕ್ಕೆ ನಾಂದಿಮಾಡಿಕೊಟ್ಟವು. ಈ ಪ್ರಾಚೀನ ವೈವಿಧ್ಯತೆಯನ್ನು ಉತ್ತರ ಮತ್ತು ದಕ್ಷಿಣ ಬ್ರಾಹ್ಮೀಯ ಲಿಪಿಗಳಲ್ಲಿ ಹೆಚ್ಚಾಗಿ ಕಾಣಬಹುದು. ಉತ್ತರದಲ್ಲಿ ಗುಪ್ತರ ಲಿಪಿಯು ಬಹಳ ಪ್ರಚಲಿತದಲ್ಲಿದ್ದು, ದಕ್ಷಿಣದಲ್ಲಿ ವತ್ತೆೞುತ್ತು ಹಾಗೂ ಹಳಗನ್ನಡ/ಪಲ್ಲವ ಲಿಪಿಗಳು ಪ್ರಚಲಿತದಲ್ಲಿದ್ದವು. ನಂತರದಲ್ಲಿ ಬೌದ್ಧಧರ್ಮದ ಪ್ರಚಾರದಿಂದಾಗಿ ಆಗ್ನೇಯ ಏಷ್ಯಾದ ಬಹುತೇಕ ರಾಷ್ಟ್ರಗಳಲ್ಲಿ ಬ್ರಾಹ್ಮೀಯ ಲಿಪಿಗಳು ಹರಡಲು ಸಾಧ್ಯವಾಯಿತು.
ಉತ್ತರ ಬ್ರಾಹ್ಮೀಯ ಲಿಪಿಗಳು
[ಬದಲಾಯಿಸಿ]- ಗುಪ್ತ ಲಿಪಿ, ೫ನೇ ಶತಮಾನ
- ಶಾರದಾ ಲಿಪಿ, ೮ನೇ ಶತಮಾನ
- ಲಾಂಡಾ, ೧೦ನೇ ಶತಮಾನ
- ಗುರುಮುಖಿ, ೧೪ನೇ ಶತಮಾನ
- ಖೋಜ್ಕೀ, ೧೬ನೇ ಶತಮಾನ
- ಖುದವಾಡಿ, ೧೫೫೦ರ ಆಸುಪಾಸು
- ಮಹಾಜನೀ
- ಮುಲ್ತಾನಿ
- ತಕ್ರಿ
- ಲಾಂಡಾ, ೧೦ನೇ ಶತಮಾನ
- ಸಿದ್ಧಮ್, ೭ನೇ ಶತಮಾನ
- ಅಸ್ಸಾಮಿ ಲಿಪಿ, ೧೩ನೇ ಶತಮಾನ
- ಬೆಂಗಾಳಿ ಲಿಪಿ, ೧೧ನೇ ಶತಮಾನ
- ಟಿಬೇಟೀಯ ಲಿಪಿ, ೭ನೇ ಶತಮಾನ
- ಫಾಗ್ಸ್‍ಪಾ, ೧೩ನೇ ಶತಮಾನ
- ತಿರ್ಹೂತ
- ಶಾರದಾ ಲಿಪಿ, ೮ನೇ ಶತಮಾನ
- ಕಳಿಂಗ ಲಿಪಿ
- ಓಡಿಯಾ, ೧೦ನೇ ಶತಮಾನ
- ನಾಗರೀ, ೮ನೇ ಶತಮಾನ
- ದೇವನಾಗರೀ, ೧೩ನೇ ಶತಮಾನ
- ಗುಜರಾತಿ, ೧೬ನೇ ಶತಮಾನ
- ಮೋಡಿ, ೧೭ನೇ ಶತಮಾನ
- ಖೈತಿ, ೧೬ನೇ ಶತಮಾನ
- ಸಿಲ್ಹೋಟಿ ನಾಗರೀ, ೧೬ನೇ ಶತಮಾನ
- ದೇವನಾಗರೀ, ೧೩ನೇ ಶತಮಾನ
- ಭೈಕ್‍ಸೂಕಿ
- ನೇಪಾಳಿ
- ಭುಜಿಮೋಳಿ, ೬ನೇ ಶತಮಾನ
- ರಂಜನಾ, ೧೨ನೇ ಶತಮಾನ
- ಸೋಯೋಂಬೋ, ೧೭ನೇ ಶತಮಾನ
- ಪ್ರಚಲಿತ್
- ಅಂಗಲಿಪಿ, ೭೨೦
- ಮಿಥಿಲಾಕ್ಷರ, ೧೫ನೇ ಶತಮಾನ
ದಕ್ಷಿಣ ಬ್ರಾಹ್ಮೀಯ ಲಿಪಿಗಳು
[ಬದಲಾಯಿಸಿ]- ಮೂಲ ಕನ್ನಡ
- ಕದಂಬ ಅಥವಾ ಹಳಗನ್ನಡ, ೫ನೇ ಶತಮಾನ
- ಪಲ್ಲವ, ೬ನೇ ಶತಮಾನ
- ಕವೀ ಲಿಪಿ, ೮ನೇ ಶತಮಾನ
- ಜಾವಾ ಲಿಪಿ
- ಮಾನ್ ಲಿಪಿ
- ಬರ್ಮೀಯ ಲಿಪಿ
- ಅಹೋಮ್, ೧೩ನೇ ಶತಮಾನ
- ಟಾಯ್‍ಥಾಮ್ (ಲಾನ್ನಾ), ೧೪ನೇ ಶತಮಾನ
- ಕವೀ ಲಿಪಿ, ೮ನೇ ಶತಮಾನ
- ಬಟಕ್, ೧೪ನೇ ಶತಮಾನ
- ಛಕ್ಮಾ, ೮ನೇ ಶತಮಾನ
- ವತ್ತೆೞುತ್ತು
- ತಮಿಳು ಲಿಪಿ
- ಗ್ರಂಥ, ೬ನೇ ಶತಮಾನ
- ಧಿವೀಸ್ ಆಕುರು
- ಮಲಯಾಳ ಲಿಪಿ
- ತುಳು ಲಿಪಿ
- ತೊಖಾರಿಯನ್ (ಓರೆಬ್ರಾಹ್ಮಿ) ಲಿಪಿ, ೭ನೇ ಶತಮಾನ
- ಮೀಟೈ ಮಾಯೆಕ್
ಟಿಪ್ಪಣಿಗಳು
[ಬದಲಾಯಿಸಿ]- ↑ Trautmann, Thomas R. (2006). Languages and Nations: The Dravidian Proof in Colonial Madras. University of California Press. pp. 65–66.
- ↑ Coningham, R.A.E.; Allchin, F.R.; Batt, C.M.; Lucy, D. (1996), "Passage to India? Anuradhapura and the Early Use of the Brahmi Script", Cambridge Archaeological Journal, 6 (1): 73–97, doi:10.1017/S0959774300001608
- ↑ "Telugu is 2,400 years old, says ASI". The Hindu. 2007-12-20. Archived from the original on 2012-05-30. Retrieved 2017-03-24.
- ↑ "Evolution of Telugu Character Graphs". Engr.mun.ca. Archived from the original on 2009-09-23. Retrieved 2017-03-24.