ಮೋಡಿಲಿಪಿ

ವಿಕಿಪೀಡಿಯ ಇಂದ
Jump to navigation Jump to searchಮೋಡಿಲಿಪಿಯು ಬರೆಯುವಾಗ ಲೇಖನಿಯನ್ನು ಮೇಲಕ್ಕೆ ಎತ್ತದೆ ಬರೆಯಲಾಗುತ್ತಿದ್ದ ಲಿಪಿಯಾಗಿದೆ. ಇದರಲ್ಲಿ ಪೂರ್ಣ ವಿರಾಮ ಇಲ್ಲ. ಅಕ್ಷರಗಳು ಮೋಡಿ ಮಾಡುವಂತೆ ಇರುತ್ತವೆ. ಕೆಲ ಶತಮಾನಗಳ ಹಿಂದೆ ಈ ಲಿಪಿ ಬಳಕೆಯಲ್ಲಿತ್ತು. ಮರಾಠಿ , ಕನ್ನಡ,ಗುಜರಾತಿ,ಉರ್ದು ,ಹಿಂದಿ,ತಮಿಳು ಭಾಷೆಗಳನ್ನೂ ಈ ಲಿಪಿಯಲ್ಲಿ ಬರೆಯುತ್ತಿದ್ದರು. ಲೆಕ್ಕ ಪತ್ರಗಳನ್ನು, ರಹಸ್ಯ ಮಾಹಿತಿಗಳನ್ನು ಮತ್ತು ಕೆಲ ಮುಖ್ಯ ಘಟನೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಈ ಲಿಪಿಯಲ್ಲಿ ದಾಖಲಿಸಲಾಗುತ್ತಿತ್ತು.


ಇನ್ನಷ್ಟು ಮಾಹಿತಿ[ಬದಲಾಯಿಸಿ]

ಮೋಡಿಲಿಪಿಯಲ್ಲಿ ಬರೆಯಲಾದ ತಾಳೆಗರಿ ಮತ್ತು ಹಳೆಯ ಕಾಗದದ ದಾಖಲೆಗಳು ಲಭ್ಯ ಇವೆ.

ಈ ಲಿಪಿಯನ್ನು ಸಲೀಸಾಗಿ ಓದುವವರು ವಿರಳ. ಹೆಳವರು ‘ಮೋಡಿಲಿಪಿ’ಯಲ್ಲಿನ ಮಾಹಿತಿಯನ್ನು ತಮ್ಮ ಹಿರಿಯರಿಂದ ಕನ್ನಡಕ್ಕೆ ಅನುವಾದಿಸಿಕೊಂಡು ಓದುತ್ತಾರೆ.

ಇದು ಮಧ್ಯಕಾಲದ ಲಿಪಿ. ಮರಾಠಿ, ಪರ್ಶಿಯನ್, ಅರೇಬಿಕ್ ಪದಗಳಲ್ಲದೇ ಕನ್ನಡ ಶಬ್ದಗಳು ಈ ಲಿಪಿಯಲ್ಲಿ ಬಳಕೆಯಾಗಿವೆ.

ಮೋಡಿಲಿಪಿ 13 ನೇ ಶತಮಾನದಿಂದ 20 ನೇ ಶತಮಾನದ ಕೊನೆವರೆಗೂ ಬಳಕೆಯಲ್ಲಿತ್ತು. ದೇವಗಿರಿಯ ಯಾದವರ ಕಾಲದಲ್ಲಿ ಪ್ರಾರಂಭವಾಗಿ ಮರಾಠರು ಹಾಗೂ ಪೇಶ್ವೆಗಳ ಕಾಲದಲ್ಲಿ ಹೆಚ್ಚು ಬಳಕೆಯಾಯಿತು. ಗುಪ್ತ ವಿಷಯಗಳನ್ನು ಕಾಪಾಡುವ ಸಲುವಾಗಿ ಮತ್ತು ವೈರಿಗಳಿಗೆ ಗೊತ್ತಾಗದ ಹಾಗೇ ವಿಷಯಗಳನ್ನು ತಿಳಿಸಲು ಈ ಲಿಪಿಯನ್ನು ಬಳಸಲಾಗುತ್ತಿತ್ತು.

ಭಾರತಕ್ಕೆ ವ್ಯಾಪಾರಕ್ಕೆ ಬಂದ ಬ್ರಿಟಿಷರಿಗೂ ಈ ಲಿಪಿಯ ಪರಿಚಯವಿತ್ತು ಎನ್ನಲಾಗಿದೆ. ಧಾರವಾಡ, ಬೆಳಗಾವಿ, ಹಾವೇರಿ ಶಾಲೆಗಳಲ್ಲಿ ಈ ಲಿಪಿಯನ್ನು ಮಕ್ಕಳಿಗೆ ಕಲಿಸಲಾಗುತ್ತಿತ್ತು. ಮೈಸೂರಿನ ಸರ್ಕಾರಿ ಕಚೇರಿಗಳಲ್ಲೂ ಈ ಲಿಪಿ ಬಳಕೆಯಾಗಿದೆ. ಪುಣೆಯ ಸಂಶೋಧನಾ ಕೇಂದ್ರದಲ್ಲಿ ಮೋಡಿಲಿಪಿಗಳ ದಾಖಲೆಗಳ ಸಂಗ್ರಹವಿದೆ.

ಉತ್ತರ ಕರ್ನಾಟಕದ ಕೆಲವೆಡೆ ಭೂಮಿಗೆ ಸಂಬಂಧಿಸಿದ ದಾಖಲೆಗಳು ಇದೇ ಲಿಪಿಯಲ್ಲಿವೆ. ಇವುಗಳ ಮಾಹಿತಿಗಳನ್ನು ಕನ್ನಡಕ್ಕೆ ಅನುವಾದಿಸಬಲ್ಲ ಲಿಪಿ ತಜ್ಞರು ವಿರಳ.

ಕರ್ನಾಟಕದಲ್ಲಿ ಮರಾಠರ ಪ್ರವೇಶದ ಬಗೆಗಿನ ಮಾಹಿತಿಗಳು, ಜಮಖಂಡಿ, ಮುಧೋಳ, ರಾಮದುರ್ಗ, ವಿಜಯಪುರ ಮತ್ತು ಸವಣೂರಗಳಲ್ಲಿ ಪೇಶ್ವೆಗಳ ಆಡಳಿತದ ಬಗೆಗಿನ ಮಾಹಿತಿಗಳು ಮೋಡಿಲಿಪಿಯಲ್ಲಿವೆ.

ಉತ್ತರ ಕರ್ನಾಟಕದ ದೇಸಾಯಿಗಳು, ಗೌಡರು ಮತ್ತು ಕುಲಕರ್ಣಿಗಳ ಮನೆಯಲ್ಲಿರುವ ತಾಳೆಗರಿಗಳು ಮತ್ತು ಕಾಗದಗಳು ದೇವರ ಮನೆಯ ಜಗುಲಿಗಳಲ್ಲಿ ಪೂಜಿಸಲಾಗುತ್ತಿವೆ.

ಹದಿಮೂರನೆಯ ಶತಮಾನದಿಂದ 1950 ರವರೆಗೆ, ಮರಾಠಿ ಭಾಷೆಯನ್ನು ಮೋಡಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ೧೯೬೦ರ ದಶಕದವರೆಗೂ ಮಹಾರಾಷ್ಟ್ರದ ಶಾಲೆಗಳಲ್ಲಿ ಇದನ್ನು ಕಲಿಸುತ್ತಿದರು.


ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಮೋಡಿಲಿಪಿ&oldid=804173" ಇಂದ ಪಡೆಯಲ್ಪಟ್ಟಿದೆ