ವಿಷಯಕ್ಕೆ ಹೋಗು

ನಾ. ದಾಮೋದರ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಾಮೋದರ ಶೆಟ್ಟಿ ನಾ
Bornಆಗಸ್ಟ್ ೨, ೧೯೫೧
ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ನಾಯ್ಕಾಪಿನಲ್ಲಿ

ನಾ ದಾಮೋದರ ಶೆಟ್ಟಿ:ಕವಿ,ನಟ, ನಾಟಕಕಾರ, ಸಾಹಿತಿ ನಾ.ದಾಮೋದರ ಶೆಟ್ಟಿಯವರು ಕೇರಳಕಾಸರಗೋಡು ಜಿಲ್ಲೆಯ ಕುಂಬಳೆಯವರು. ನಾದಾ ಎಂದೇ ಹೆಸರಾದ ಅವರು ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ ಹಲವಾರು ನಾಟಕಗಳನ್ನೂ ರಂಗದ ಮೇಲೆ ತಂದು ಪ್ರದರ್ಶಿಸಿದ್ದಾರೆ. ಇವರು ನಿವೃತ್ತ ಪ್ರಾಧ್ಯಾಪಕರಾಗಿದ್ದು,[]

  1. ೧೯೫೧ ರ ಆಗಸ್ಟ್‌ ೨ ರಂದು ಇವರು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ನಾಯ್ಕಾಪಿನಲ್ಲಿ ಹುಟ್ಟಿದರು.
  2. ಇವರ ತಂದೆ ಕುಂಞಕಣ್ಣ ಚೆಟ್ಟಿಯಾರ್, ತಾಯಿ ಕುಂಞಮ್ಮರ ಅಕೇರಿಯ ಮಗ.

ಶಿಕ್ಷಣ

[ಬದಲಾಯಿಸಿ]
  1. ಪ್ರಾರಂಭಿಕ ಶಿಕ್ಷಣ ಕುಂಬಳೆಯಲ್ಲಿ,ಪದವಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಡಾ. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲಿ ‘ಮುದ್ದಣನ ಶಬ್ದ ಪ್ರತಿಭೆ’ ಮಹಾ ಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ.

ಉದ್ಯೋಗ

[ಬದಲಾಯಿಸಿ]
  1. ಕೊಡಗಿನ ನೆಲಜಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದರು.
  2. ೧೯೭೫ ರಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಕನ್ನಡವಿಭಾಗದ ಪ್ರಾಧ್ಯಾಪಕರಾಗಿ ೩೬ ವರ್ಷಗಳ ದೀರ್ಘಸೇವೆಯ ನಂತರ ೨೦೧೧ ರಲ್ಲಿ ನಿವೃತ್ತಿ.


ಪ್ರವೃತ್ತಿ

[ಬದಲಾಯಿಸಿ]
  1. ಎಳೆಯ ವಯಸ್ಸಿನಿಂದಲೇ ನಾಟಕದಲ್ಲಿ ಅಭಿನಯ, ಯಕ್ಷಗಾನಗಳತ್ತ ಬೆಳೆದ ಒಲವು. ಕೇರಳತ್ರಿಶೂರಿನ ಸ್ಕೂಲ್‌ ಆಫ್‌ ಡ್ರಾಮದಲ್ಲಿ ತರಬೇತಿ ಪಡೆದ ನಂತರ ಸಮುದಾಯ ನಾಟಕ ಸಂಸ್ಥೆಯಲ್ಲಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ಭಾಗಿಯಾಗಿದ್ದಾರೆ.
  2. ಮಂಗಳೂರಿನಲ್ಲಿ ಸಮಾನ ಮನಸ್ಕರೊಡನೆ ಸೇರಿ ಕಟ್ಟಿದ ನಾಟಕ ತಂಡವೇ ‘ಭೂಮಿಕಾ’.ಅದರ ಸ್ಥಾಪಕ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಣೆ. ಹಲವಾರು ಕಲಾತ್ಮಕ ಸಿನಿಮಾಗಳಲ್ಲಿ ಹಾಗೂ ಸೀರಿಯಲ್ ಗಳಲ್ಲಿ ಅಭಿನಯ.
  3. ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜು ಕನ್ನಡ ಬೋಧನಾ ವಿಭಾಗಕ್ಕೆ ಸೇರಿದ ನಂತರ ಮಂಗಳೂರಿನ ಕನ್ನಡ ಸಂಘ, ವೇದಿಕಾ ಪ್ರಕಾಶನ, ಭಾವಗಂಗೋತ್ರಿ, ಮಂಗಳಾ ಫಿಲಂ ಸೊಸೈಟಿ, ದರ್ಶನ್‌ ಫಿಲಂ ಸೊಸೈಟಿ, ಅಭಿವ್ಯಕ್ತ, ರಂಗ ಸಂಗಾತಿ, ಮುಂತಾದ ಸಂಘ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತರು.
  4. ಬೆಂಗಳೂರಿನಲ್ಲಿ ಗೆಳೆಯರೊಂದಿಗೆ ಸೇರಿ ಕಟ್ಟಿಕೊಂಡ ಸಂಸ್ಥೆ ತಿಂಮಸೇನೆ.(ತಿಂಗಳಿಗೊಂದು ನೆಯಲ್ಲಿ ಸೇರಲೊಂದು ನೆಪ)
ಹಸೀನ ಚಿತ್ರದಲ್ಲಿ ನಾದಾ ಶೆಟ್ಟಿ
  1. ಸಾಂಸ್ಕೃತಿಕ ರಂಗದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಗೆಳೆಯರೊಡನೆ ಸೇರಿ ಪ್ರಾರಂಭಿಸಿದ ಸಂಸ್ಥೆ ‘ದಾಸಜನ’ ಮಂಗಳೂರಿನಲ್ಲಿ ಕ್ರಿಯಾಶೀಲವಾಗಿತ್ತು. (ದಾಮೋದರ ಶೆಟ್ಟಿ‌ ನಾ., ತ್ಯನಾರಾಯಣ ಮಲ್ಲಿಪಟ್ಟಣ, ವಳಿ ನಾಗರಾಜರಾವ್‌, ರಸಿಂಹ ಮೂರ್ತಿ, ಆರ್)
  2. ಪ್ರಜಾವಾಣಿ ಪತ್ರಿಕೆಗಾಗಿ ಬರೆದ ವಿಶಿಷ್ಟ ಅಂಕಣ ‘ತೆಂಕಣದ ಸುಳಿಗಾಳಿ’ (೧೯೯೫-೨೦೦೦) ಪುಸ್ತಕವಾಗಿ ಪ್ರಕಟವಾಗಿದೆ.
  3. ಕರ್ನಾಟಕ ನಾಟಕ ಅಕಾಡಮಿ, ಕರ್ನಾಟಕ ಗೆಜೆಟಿಯರ್, ಕರ್ನಾಟಕ ನಾಟಕ ರಂಗಾಯಣ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾಸಮಿತಿ,ಕರ್ನಾಟಕ ಸರಕಾರದ ವಿವಿಧ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಸದಸ್ಯರಾಗಿ ಅಧ್ಯಕ್ಷರಾಗಿ ನಿರ್ವಹಿಸಿದ ಕಾರ್ಯಗಳು.
  4. ಸಾಂಸ್ಕೃತಿಕ ಸಂಘಟನೆಗಳ, ಕಾರ್ಯಕ್ರಮಗಳಿಗೆ ನೆರವು ನೀಡಲು ನಮ್ಮ ನಾಡು, ಜಾಗರೂಕ, ಜನದನಿ, ಮನತೆರೆ, ನಾದಭಾವ ಮುಂತಾದವುಗಳಿಗಾಗಿ ಬರೆದು ಸಿದ್ಧಪಡಿಸಿದ ಹಾಡುಗಳ ಸಿಡಿ ಬಿಡುಗಡೆ.
  5. ತೆಂಕುತಿಟ್ಟು ಯಕ್ಷಗಾನ ಕಾಲೇಜಿನ ಯಕ್ಷಗಾನ ತಂಡವನ್ನು ೧೯೮೮ ರಲ್ಲಿ ಇಂಗ್ಲೆಂಡಿಗೆ ಕರೆದೊಯ್ದು ವಿವಿಧ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ.
  6. ೧೯೯೨ ಇಂಗ್ಲೆಂಡ್‌ ಪ್ರವಾಸ ಕೈಗೊಂಡು ಯಕ್ಷಗಾನದ ಜೊತೆ ಭರತನಾಟ್ಯ ತಂಡವನ್ನೂ ಕೊಂಡೊಯ್ದು ಹೆಗ್ಗಳಿಕೆ ಇವರಿಗಿದೆ.
ಸಾಗರದೀಪ ಚಿತ್ರದಲ್ಲಿ ನಾದಾ ಶೆಟ್ಟಿ

ಕೃತಿಗಳು

[ಬದಲಾಯಿಸಿ]

ಸುಮಾರು ಐವತ್ತಕ್ಕೂ ಮೀರಿ ಕೃತಿಗಳನ್ನು ನಾದಾರವರು ಪ್ರಟಿಸಿದ್ದಾರೆ.

ಕಾಲೇಜು ಸೆಮಿನಾರ್ ಉದ್ಘಾಟನೆ

ಕಾವ್ಯ

[ಬದಲಾಯಿಸಿ]
  1. ಒಡೆದ ಮುತ್ತುಗಳು,
  2. ನಮ್ಮನಾಡು,
  3. ಇಂಗ್ಲೆಂಡ್‌ ಕವನಗಳು,
  4. ಹಾಡುಮನವೆ ಹಾಡು,
  5. ತಟ್ಟೆಯೊಳಗಿನ ಜೀವ – ಕವನ ಸಂಕಲನಗಳು;

ಕಾದಂಬರಿ

[ಬದಲಾಯಿಸಿ]
  1. ಸುಳುವಿನೊಳಗೆ
  2. ಪರಿಧಿ

3. ಗೆರೆ

ವ್ಯಕ್ತಿ ಚಿತ್ರಗಳು

[ಬದಲಾಯಿಸಿ]
  1. ಪೇಜಾವರ ಸದಾಶಿವರಾಯರು,
  2. ಕೆ.ಎನ್.ಟೇಲರ್,
  3. ಮುದ್ದಣ: ಬದುಕ-ಬರೆಹ,
  4. ನಾರಾಯಣ ಗುರು,
  5. ಕೆ.ವಿ. ಸುಬ್ಬಣ್ಣ
  6. ಅಮೃತ ಸೋಮೇಶ್ವರ

ಅನುವಾದಿತ ಕೃತಿಗಳು

[ಬದಲಾಯಿಸಿ]
  1. ಭತ್ತದ ಕಾಳುಗಳು ನಾ. : ಮೂಲ: ಪಿಎಎಂ ಹನೀಫ್
  2. ಕರಿಯದೇವರ ಹುಡುಕಿ ನಾ. :ಮೂಲ: ಜಿ.ಶಂಕರ ಪಿಳ್ಳೈ
  3. ಸಾಕ್ಷಾತ್ಕಾರ, ನಾ.  : ಮೂಲ: ಕೆ.ಟಿ.ಮಹಮದ್
  4. ಭರತವಾಕ್ಯ ನಾ. : ಮೂಲ: ಜಿ.ಶಂಕರ ಪಿಳ್ಳೈ
  5. ಅಶ್ವತ್ಥಾಮ ಕಾದಂ. :ಮೂಲ:ಮಾಡಂಬ್ ಕುಂಞುಕುಟ್ಟನ್
  6. ಬಾಲ್ಯದ ನೆನಪುಗಳು, ಕಾದಂ.ಮೂಲ:ಕಮಲಾ ದಾಸ್
  7. ದೇವರ ವಿಕರಾಳಗಳು, ಕಾದಂ.:ಎಂ.ಮುಕುಂದನ್
  8. ಕೊಚ್ಚರೇತ್ತಿ ಕಾದಂ.: ಎಂ.ನಾರಾಯನ್
  9. ಮಹಾಕವಿ ಜಿ. ಶಂಕರ ಕುರುಪ್‌,
  10. ಮೂರುಹೆಜ್ಜೆ ಮೂರುಲೋಕ. ( ನಾಟಕ) ತುಳು:ಡಿ.ಕೆ.ಚೌಟ
  11. ಈ ಪುರಾತನ ಕಿನ್ನರಿ. ಕಾವ್ಯ: ಒಎನ್ ವಿ ಕುರುಪ್
  12. ಕಂಪನ ಮಾಪಕಗಳೇ ವಂದನೆ ಕಾದಂ: ಸಿ.ರಾಧಾಕೃಷ್ಣನ್
  1. ಅರ್ಪಣೆ
  2. ಹೂ ಮನಸು
  3. ಸಿರಿ
  4. ಚಾರು ವಸಂತ
ನಾ. ದಾಮೋದರ ಶೆಟ್ಟಿಯವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ

===ಸಂಪಾದನೆ=== (ಸ್ವತಂತ್ರ ಹಾಗೂ ಇತರರೊಂದಿಗೆ)

  1. ಕರಾವಳಿ ಕಮ್ಮೆನ
  2. ನವಭಾರತದಲ್ಲಿ ಶಿಂಗಣ್ಣ
  3. ಸಿರಿನಿವಾಸ,
  4. ಅಪ್ರಮೇಯ,
  5. ಅಡೇಮನೆ ಅಪ್ರಮೇಯ
  6. ಸಂಕಥನ (ಶ್ರೀನಿವಾಸ ಹಾವನೂರ)
  7. ಪೊಲಿ, ( ದ.ಕ. ಜಿಲ್ಲೆ. ಕೆನರಾ ೨೦೦)
  8. ಸ್ವಾತಂತ್ರ್ಯದ ಸುವರ್ಣ ಹೆಜ್ಜೆ,
  9. ಸಾನ್ನಿಧ್ಯ,
  10. ಅದ್ಭುತ ರಾಮಾಯಣಮ್‌,
  11. ಹೊಂಬಿದಿರು (ಕ ಸಾಪ ಸಮ್ಮೇಳನ
  12. ಸುಗಮ ಸಂಗೀತ ಸಾಧಕಿ [ಬಿ.ಕೆ.ಸುಮಿತ್ರ]
  13. ವೈಕೆಎಂ ಎಪ್ಪತ್ತು
  14. ಹಾಡು ಹಿಡಿದ ಜಾಡು, ವೈಕೆಎಂ-75
  15. ಕನಸುಗಣ್ಣಿನ ಕಪ್ಪಣ್ಣ -75
ನಾ. ದಾಮೋದರ ಶೆಟ್ಟರಿಗೆ ಪ್ರಶಸ್ತಿ ಪ್ರದಾನ ಸಮಾರಂಭ
ನಾ. ದಾಮೋದರ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ

ವಿಮರ್ಶೆ

[ಬದಲಾಯಿಸಿ]
  1. ರಂಗಶೋಧನ,
  2. ತೆಂಕಣದ ಸುಳಿಗಾಳಿ,
  3. ನಾಟಕದ ಅಮೃತ - ವಿಮರ್ಶೆಯ ಗರುಡ
  4. ರಂಗ ನಿಮಿತ್ತ
  5. ಮೇಲೋಗರ
  6. ರಂಗ ಚಿತ್ರ ರಂಗ

ಪ್ರಶಸ್ತಿಗಳು

[ಬದಲಾಯಿಸಿ]
  1. ಎಂ.ನಾರಾಯನ್ ಅವರ 'ಕೊಚ್ಚರೇತ್ತಿ ಕಾದಂಬರಿಯ ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ.
  2. ‘ದೇವರ ವಿಕರಾಳ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಅನುವಾದ ಪ್ರಶಸ್ತಿ ಹಾಗೂ ಭಾರತೀಯ ಭಾಷಾ ಸಂಸ್ಥೆಯ ಭಾಷಾಭಾರತಿ ಸಮ್ಮಾನ್‌
  3. ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ,
  4. ದುಬೈನ ಧ್ವನಿಪ್ರತಿಷ್ಠಾನ ‘ಶ್ರೀರಂಗರಂಗ’ಪ್ರಶಸ್ತಿ[]
  5. ರಂಗೋತ್ರಿಯ ‘ಬುದ್ಧ ಪ್ರಶಸ್ತಿ’
  6. ಬೆಂಗಳೂರಿನ ನಾಡಚೇತನ ಪ್ರಶಸ್ತಿ
  7. ಬಂಟ್ವಾಳದ ಏರ್ಯಬೀಡು ಪ್ರಶಸ್ತಿ
  8. ಆಳ್ವಾಸ್ ಶಿಕ್ಷಕ ಪ್ರಶಸ್ತಿ
  9. ಉಡುಪಿಯ ಬೆಳ್ಳೆ ಉಪಾಧ್ಯಾಯ ಪ್ರಶಸ್ತಿ
  10. ಮಂಗಳೂರಿನಲ್ಲಿ ಫೆಬ್ರವರಿ ೧೧, ೨೦೧೨ರಂದು ನಾದಾಭಿನಂದನೆ[],[]
  11. ಬೈಕಾಡಿ ಪ್ರಶಸ್ತಿ (೨೦೨೪)
ನಾ ದಾಮೋದರ ಶೆಟ್ಟಿ ಪುಸ್ತಕ ಜೋಲಿಗೆ ತಂಡ-ಏರ್ಯ ಲಕ್ಷ್ಮಿನಾರಾಯಣ ಆಳ್ವರ ಮನೆಯಲ್ಲಿ

ಪುಸ್ತಕದ ಜೋಳಿಗೆ

[ಬದಲಾಯಿಸಿ]

ನಾದಾ ಅವರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಪುಸ್ತಕದ ಜೋಳಿಗೆಯೆಂಬ ಹೆಸರಿನಲ್ಲಿ ನಾಡಿನ ಹಲವೆಡೆಗಳಿಂದ ಪುಸ್ತಕಗಳ ಸಂಗ್ರಹದ ಕೆಲಸಗಳನ್ನು ಮಾಡಿದರು. ಇದಕ್ಕಾಗಿ ಒಂದು ವಿದ್ಯಾರ್ಥಿ ತಂಡವನ್ನು ಕಟ್ಟಿ ಹಿರಿಯ ಸಾಹಿತಿಗಳು, ಪುಸ್ತಕ ಆಸಕ್ತರ ಮನೆಗೆ ಹೋಗಿ ಅವರಲ್ಲಿ ಹೆಚ್ಚಿರುವ ಪುಸ್ತಕಗಳನ್ನು ಸಂಗ್ರಹಿಸುವುದು ಈ ಯೋಜನೆಯ ಉದ್ದೇಶ. ಹೀಗೆ ಕನ್ನಡ ವಿಭಾಗದಲ್ಲಿ ಸುಮಾರು ೫,೬೦೦ ದಾನ ಪಡೆದ ಪುಸ್ತಕಗಳನ್ನು ಕೆಟಲಾಗ್ ಮಾಡಿ ಇಡಲಾಗಿದೆ.

ಬಾಹ್ಯ ಸಂಪರ್ಕ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2014-04-03. Retrieved 2021-08-10.
  2. http://gktest.dreamhosters.com/news-41916.html
  3. https://naadaaloka.wordpress.com/
  4. "ಆರ್ಕೈವ್ ನಕಲು". Archived from the original on 2012-02-15. Retrieved 2015-03-17.